Tag: Celebrities

  • ಆಪರೇಷನ್ ಸಿಂಧೂರದ ಬಗ್ಗೆ ಸೆಲೆಬ್ರಿಟಿಗಳು ಮಾತಾಡ್ತಿಲ್ಲ: ಪವನ್ ಕಲ್ಯಾಣ್ ಅಸಮಾಧಾನ

    ಆಪರೇಷನ್ ಸಿಂಧೂರದ ಬಗ್ಗೆ ಸೆಲೆಬ್ರಿಟಿಗಳು ಮಾತಾಡ್ತಿಲ್ಲ: ಪವನ್ ಕಲ್ಯಾಣ್ ಅಸಮಾಧಾನ

    – ಸೆಲೆಬ್ರಿಟಿಗಳಿಂದ ದೇಶಭಕ್ತಿ ನಿರೀಕ್ಷಿಸಬೇಡಿ ಎಂದ ಆಂಧ್ರ ಡಿಸಿಎಂ

    ಪರೇಷನ್ ಸಿಂಧೂರದ (Operation Sindoor) ಬಗ್ಗೆ ನಟರು, ಸೆಲೆಬ್ರಿಟಿಗಳು ಮಾತನಾಡುತ್ತಿಲ್ಲ ಎಂದು ಆಂಧ್ರಪ್ರದೇಶ ಡಿಸಿಎಂ, ನಟ ಪವನ್ ಕಲ್ಯಾಣ್ (Pawan Kalyan) ಅಸಮಾಧಾನ ಹೊರಹಾಕಿದ್ದಾರೆ.

    ಕಾರ್ಯಕ್ರಮವೊಂದರಲ್ಲಿ ಈ ಬಗ್ಗೆ ಮಾತನಾಡಿದ ಅವರು, ಸೆಲೆಬ್ರಿಟಿಗಳು (Celebrities) ಮಾತಾನಾಡುತ್ತಿಲ್ಲ, ಹೀರೋಗಳು ಮಾತಾನಾಡುತ್ತಿಲ್ಲ. ಬಾಲಿವುಡ್ ಹೀರೋಗಳು ಮಾತಾನಾಡುತ್ತಿಲ್ಲ ಅಂದರೆ ಅವರು ಮನರಂಜನೆ ಕೊಡುವವರು, ಒಳ್ಳೆಯ ಪ್ರದರ್ಶನ ಕೊಡುವವರು ಅಷ್ಟೇ. ಅರ‍್ಯಾರು ದೇಶವನ್ನು ನಡೆಸುವ ವ್ಯಕ್ತಿಗಳಲ್ಲ. ಸೆಲೆಬ್ರಿಟಿಗಳಿಂದ ದೇಶಭಕ್ತಿ ನಿರೀಕ್ಷಿಸಬೇಡಿ ಎಂದರು. ಇದನ್ನೂ ಓದಿ: ಇಂದು RCB vs KKR ಪಂದ್ಯ – ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಮುತ್ತ ಬಾಂಬ್ ಸ್ಕ್ವಾಡ್‌ ಪರಿಶೀಲನೆ

    ದೇಶಭಕ್ತಿ ಎಂದರೆ ಮುರಳಿ ನಾಯ್ಕ್‌ನಂಥವರು. ಮುರಳಿ ನಾಯ್ಕ್ 24 ವರ್ಷದ ಯುವಕ. ದೇಶಕ್ಕೋಸ್ಕರ ಸಿನಿಮಾ ನೋಡಲಿಲ್ಲ, ಸಿನಿಮಾ ಬಗ್ಗೆ ಹೇಳಲಿಲ್ಲ. ಆದರೆ ಭಾರತ್ ಮಾತಾ ಕೀ ಜೈ ಹೇಳಿದ. ಯಾವಾಗ ಭಾರತ ಮಾತೆಯನ್ನು ಪ್ರೀತಿಸುತ್ತಾರೋ ಅವರು ನಿಜವಾದ ದೇಶ ಪ್ರಜೆಗಳು. ಸಿನಿಮಾ ಬರಬಹುದು, ಹೋಗಬಹುದು ಎಂದು ಯೋಧ ಮುರಳಿ ಶೌರ್ಯಕ್ಕೆ ಸೆಲ್ಯೂಟ್ ಹೊಡೆದರು. ಇದನ್ನೂ ಓದಿ: ಆಪರೇಷನ್‌ ಸಿಂಧೂರದ ಬಗ್ಗೆ ಪಾಕ್‌ಗೆ ಮಾಹಿತಿ ನೀಡುತ್ತಿದ್ದ ಹರಿಯಾಣದ ಯುವಕ ಅರೆಸ್ಟ್

  • ‘ಸೆಲೆಬ್ರಿಟಿಸ್’ಗೆ ಧನ್ಯವಾದ ತಿಳಿಸಿದ ದರ್ಶನ್

    ‘ಸೆಲೆಬ್ರಿಟಿಸ್’ಗೆ ಧನ್ಯವಾದ ತಿಳಿಸಿದ ದರ್ಶನ್

    ರಾಜ್ಯಾದ್ಯಂತ ಕಾಟೇರ ಸಿನಿಮಾದ ಅಬ್ಬರ ಜೋರಾಗಿದೆ. ಸಿನಿಮಾ, ನಟನೆ, ಸಂಭಾಷಣೆ, ನಿರ್ದೇಶನ ಹೀಗೆ ಎಲ್ಲದರಲ್ಲೂ ಸಿನಿಮಾ ಪಾಸ್ ಅನಿಸಿಕೊಂಡಿದೆ. ಅದರಲ್ಲೂ ದರ್ಶನ್ ಅಭಿಮಾನಿಗಳು ಚಿತ್ರವನ್ನು ತಲೆಮೇಲೆ ಹೊತ್ತುಕೊಂಡು ಮೆರೆಸುತ್ತಿದ್ದಾರೆ. ಹಾಗಾಗಿ ತಮ್ಮ ಅಭಿಮಾನಿಗಳನ್ನು ಸೆಲೆಬ್ರಿಟಿಸ್ (Celebrities)ಎಂದು ಕರೆಯುವ ದರ್ಶನ್ ಸೋಷಿಯಲ್ ಮೀಡಿಯಾ ಮೂಲಕ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

    ಏನೆಂದು ನಾ ಹೇಳಲಿ, ನಿಮ್ಮಯ ಪ್ರೀತಿ ಆಶೀರ್ವಾದಕ್ಕೆ ಕೊನೆಯೆಲ್ಲಿ. ಧನೋಸ್ಮಿ ಸೆಲೆಬ್ರಿಟಿಸ್. ಹೃದಯಪೂರ್ವಕ ಧನ್ಯವಾದಗಳು ಕರ್ನಾಟಕ ಎಂದು ದರ್ಶನ್ ಬರೆದುಕೊಂಡಿದ್ದಾರೆ. ಜೊತೆಗೆ ಸಿನಿಮಾದ ಜೀವಾಳದಂತಿರುವ ಅವರ ಮತ್ತೊಂದು ಗೆಟಪ್ ಫೋಟೋವನ್ನು ಹಂಚಿಕೊಂಡಿದ್ದಾರೆ.

    ಕೋಟಿ ಕೋಟಿ ಗಳಿಕೆ

    ಕಾಟೇರ ಸಿನಿಮಾ ರಿಲೀಸ್ ಆಗಿ ಒಂದೇ ದಿನಕ್ಕೆ ಕೋಟಿ ಕೋಟಿ ರೂಪಾಯಿ ಬಾಕ್ಸ್ ಆಫೀಸಿಗೆ (Box Office) ಹರಿದು ಬಂದಿದೆ. ಕಾಟೇರ ಸಿನಿಮಾದ ಮೊದಲ ದಿನದ ಗಳಿಕೆ ಅಂದಾಜು 19.79 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ. ಹಾಗಾಗಿ ಸಹಜವಾಗಿಯೇ ಚಿತ್ರತಂಡ ಮತ್ತು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.

    ದರ್ಶನ್ ಅಭಿನಯದ ಬಹುನಿರೀಕ್ಷಿತ ಕಾಟೇರ ಸಿನಿಮಾ (Kaatera Cinema) ರಾಜ್ಯಾದ್ಯಂತ ರಿಲೀಸ್ ಆಗಿದ್ದು, ಚಕ್ರವರ್ತಿಯ ಅಬ್ಬರ ಜೋರಾಗಿದೆ. ನಿನ್ನೆಯಿಂದ ಸಿನಿಮಾ ಥಿಯೇಟರ್, ಮಾಲ್‌ಗಳ ಮುಂದೆ ಕಿಕ್ಕಿರಿದು ನಿಂತಿರುವ ಅಭಿಮಾನಿಗಳು (Darshan Fans) ದರ್ಶನ್‌ ಕಟೌಟ್‌ಗೆ ಹಾರ ಹಾಕಿ, ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದಾರೆ. ಡಿಬಾಸ್‌ ಡಿಬಾಸ್‌ ಎಂದು ಜಯಘೋಷ ಹಾಕುತ್ತಾ ಹುಚ್ಚೆದ್ದು ಕುಣಿಯುತ್ತಿದ್ದಾರೆ.

    ಬೆಂಗಳೂರಿನ ಜೆ.ಪಿ.ನಗರದ ಸಿದ್ದೇಶ್ವರ ಚಿತ್ರಮಂದಿರದಲ್ಲಿ ಅಭಿಮಾನಿಗಳಿಗಾಗಿ ಫ್ಯಾನ್ಸ್ ಶೋ ಆಯೋಜನೆ ಮಾಡಲಾಗಿತ್ತು. ಸಿನಿಮಾ ನೋಡಿ ಹೊರ ಬಂದ ಅಭಿಮಾನಿಗಳು ಸಾರಥಿಗೆ ಜೈಕಾರ ಕೂಗತೊಡಗಿದ್ದಾರೆ. ಈ ನಡುವೆ ಕಾಟೇರಮ್ಮನ ಗುಡಿ ಮಾಡಿ ದೇವಿ ಪ್ರತಿಮೆ ಸ್ಥಾಪಿಸಿರುವ ದೃಶ್ಯಗಳು ಕಂಡುಬಂದಿವೆ.

    ದರ್ಶನ್‌ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದ್ದ ಕಾಟೇರ ದರ್ಬಾರ್‌ ನಿನ್ನೆ ಮಧ್ಯರಾತ್ರಿಯಿಂದಲೇ ಶುರುವಾಗಿದೆ. ಮೊದಲ ದಿನ ರಾಜ್ಯದ 21 ಕಡೆ ಮಧ್ಯರಾತ್ರಿ 12 ಗಂಟೆಯಿಂದಲೇ ಶೋ ಆರಂಭಿಸಲಾಗಿತ್ತು. 43 ಥಿಯೇಟರ್‌ಗಳಲ್ಲಿ ಮುಂಜಾನೆ 3 ಗಂಟೆಯಿಂದ, 77 ಥಿಯೇಟರ್‌ಗಳಲ್ಲಿ ಬೆಳಗಿನ ಜಾವ 4 ಗಂಟೆಯಿಂದ ಶೋ ಆರಂಭವಾಗಿತ್ತು. ಸೂರ್ಯೋದಯವಾಗುವುದಕ್ಕೂ ಮುನ್ನವೇ ಕಾಟೇರ 335 ಶೋಗಳಲ್ಲಿ ಅಬ್ಬರಿಸಿದ್ದು, ಅಭಿಮಾನಿಗಳ ಮನಗೆದ್ದಿದೆ. ಮೊದಲ ದಿನ 1,600 ಶೋಗಳ ಪ್ರದರ್ಶನಕ್ಕೆ ಸಜ್ಜಾಗಿತ್ತು.

     

    ‘ಕಾಟೇರ’ ಸಿನಿಮಾದ ಕಥೆ ನಡೆಯುವುದು 1974ರ ಕಾಲಘಟ್ಟದಲ್ಲಿ. ಭೀಮನಹಳ್ಳಿ ಎಂಬ ಊರಿನಲ್ಲಿ ಕುಲುಮೆ ಕೆಲಸ ಮಾಡುತ್ತಿರುವ ಯುವಕ ಕಾಟೇರ (ದರ್ಶನ್). ದುಡಿಮೆನೇ ದೇವ್ರು ಅಂತ ನಂಬಿರುವ ವ್ಯಕ್ತಿ. ಆದರೆ ಇದೇ ಊರಿನಲ್ಲಿ ಜಮಿನ್ದಾರನ ದಬ್ಬಾಳಿಕೆ ಇರುತ್ತದೆ, ಗೇಣಿದಾರರಿಗೆ ಅನ್ಯಾಯವಾಗುತ್ತಿರುತ್ತದೆ, ಭತ್ತ ಬೆಳೆಯುವ ರೈತನಿಗೆ ಬದುಕೋದೇ ಕಷ್ಟವಾಗಿರುತ್ತದೆ. ಅಷ್ಟಕ್ಕೂ ಆ ಊರಿನಲ್ಲಿ ಅಂಥದ್ದು ಏನಾಗುತ್ತಿರುತ್ತದೆ? ತನ್ನವರ ಮೇಲಿನ ದಬ್ಬಾಳಿಕೆಗೆ ಕಾಟೇರ ಯಾವ ರೀತಿ ಉತ್ತರ ಕೊಡುತ್ತಾನೆ ಎಂಬ ಕುತೂಹಲದೊಂದಿಗೆ ಸಿನಿಮಾ ಸಾಗುತ್ತದೆ.

  • ಯಾರು, ಎಲ್ಲಿ ಮತದಾನ ಮಾಡಲಿದ್ದಾರೆ ಸ್ಯಾಂಡಲ್‌ವುಡ್‌ ಸೆಲೆಬ್ರಿಟಿಗಳು

    ಯಾರು, ಎಲ್ಲಿ ಮತದಾನ ಮಾಡಲಿದ್ದಾರೆ ಸ್ಯಾಂಡಲ್‌ವುಡ್‌ ಸೆಲೆಬ್ರಿಟಿಗಳು

    ನಾಳೆ ಬೆಳಗ್ಗೆ 7 ಗಂಟೆಯಿಂದಲೇ ಕರ್ನಾಟಕ ವಿಧಾನಸಭೆ (Assembly) ಮತದಾನ ಪ್ರಕ್ರಿಯೆ ಶುರುವಾಗಲಿದೆ. ಮತದಾನ ಹೆಚ್ಚಿನ ಪ್ರಮಾಣದಲ್ಲಿ ಆಗಬೇಕು ಎನ್ನುವ ಉದ್ದೇಶದಿಂದ ಚುನಾವಣೆ ಆಯೋಗವು ನಾನಾ ತಂತ್ರಗಳು ಹೆಣೆದಿದೆ. ಮತದಾರರ ಜಾಗೃತಿಗಾಗಿ ಸ್ಯಾಂಡಲ್ ವುಡ್ (Sandalwood) ನಟ ನಟಿಯರನ್ನು ಚುನಾವಣಾ ಪ್ರಚಾರ ರಾಯಭಾರಿಗಳನ್ನಾಗಿ ನೇಮಕ ಮಾಡಿದೆ. ಅಲ್ಲದೇ, ನೇರವಾಗಿಯೇ ಕೆಲ ಸಿಲೆಬ್ರಿಟಿಗಳು (Celebrities) ಚುನಾವಣೆ ಅಖಾಡಕ್ಕೂ ಇಳಿದಿದ್ದಾರೆ. ಹೀಗಾಗಿ ಚುನಾವಣೆ ಕಣದಲ್ಲಿ ಸ್ಯಾಂಡಲ್ ವುಡ್ ನಟ (Actors), ನಟಿಯರ (Actresses) ಹವಾ ಕೂಡ ಜೋರಾಗಿದೆ.

    ಕನ್ನಡ ಚಿತ್ರೋದ್ಯಮದ ಬಹುತೇಕ ನಟ, ನಟಿಯರು ಹಾಗೂ ತಂತ್ರಜ್ಞರು ಬೆಂಗಳೂರಿನಲ್ಲೇ ವಾಸವಾಗಿದ್ದರಿಂದ ಯಾರು, ಯಾವ ಕ್ಷೇತ್ರದಲ್ಲಿ ಮತದಾನ (Voting) ಮಾಡಲಿದ್ದಾರೆ ಎನ್ನುವ ಕುತೂಹಲ ಅವರ ಅಭಿಮಾನಿಗಳದ್ದು. ಯಾರು, ಯಾವ ಕ್ಷೇತ್ರದಲ್ಲಿ ಇದ್ದಾರೆ ಎನ್ನುವುದು ಕೆಲವರಿಗೆ ಮಾತ್ರ ಗೊತ್ತಿದ್ದರೆ, ಇನ್ನೂ ಕೆಲವರಿಗೆ ಆ ಕುರಿತು ಕುತೂಹಲವೂ ಇದ್ದೇ ಇದೆ. ಇದನ್ನೂ ಓದಿ:ಮಗು ಬಡಿದ ಪ್ರಕರಣ : ಪತಿಯ ವಿರುದ್ಧ ದೂರು ನೀಡಿದ ಕಿರುತೆರೆ ನಟಿ

    ನಟ ಯಶ್ ಕತ್ರಿಗುಪ್ಪೆಯಲ್ಲಿ ಮತದಾನ ಮಾಡಿದರೆ, ಸುದೀಪ್ ಪುಟ್ಟೇನಹಳ್ಳಿ, ಶಿವರಾಜ್ ಕುಮಾರ್ ಬ್ಯಾಟರಾಯನ ಪುರ (ರಾಚೇನಹಳ್ಳಿ), ರವಿಚಂದ್ರನ್ ರಾಜಾಜಿನಗರ, ಉಪೇಂದ್ರ ಕತ್ರಿಗುಪ್ಪೆ, ಧ್ರುವ ಸರ್ಜಾ ತ್ಯಾಗರಾಜನಗರ(ಶಾಸ್ರ್ತಿ ನಗರ), ರಾಘವೇಂದ್ರ ರಾಜ್ ಕುಮಾರ್  ಸದಾಶಿವನಗರ, ಅಶ್ವಿನಿ ಪುನೀತ್ ರಾಜ್ ಕುಮಾರ್ ಸದಾಶಿವನಗರ, ರಾಧಿಕ ಪಂಡಿತ್ ದೇವಯ್ಯ ಪಾರ್ಕ್, ಸುಧಾರಾಣಿ ಮಲ್ಲೇಶ್ವರಂ, ರಕ್ಷಿತಾ ಪ್ರೇಮ್ ಚಂದ್ರ ಲೇಔಟ್ ಪ್ರೇಮ್ ಚಂದ್ರ ಲೇಔಟ್ ನಲ್ಲಿ ತಮ್ಮ ಮತದಾನ ಮಾಡಲಿದ್ದಾರೆ.

    ಅಮೂಲ್ಯ ಆರ್ ಆರ್ ನಗರದಲ್ಲಿ ಮತದಾನ ಮಾಡಿದರೆ, ನೆನಪಿರಲಿ ಪ್ರೇಮ್ ಆರ್ ಆರ್ ನಗರ,  ರಚಿತಾ ರಾಮ್ ಆರ್ ಆರ್ ನಗರ, ಮೇಘನಾ ಸರ್ಜಾ ಜೆಪಿ ನಗರ, ತಾರಾ ಜೆ ಪಿ ನಗರ, ದ್ವಾರಕೀಶ್ ಬೊಮ್ಮನಹಳ್ಳಿ, ಸೃಜನ್ ಲೋಕೇಶ್  ಕತ್ರಿಗುಪ್ಪೆ, ಅಜಯ್ ರಾವ್ ರಾಜಾಜಿನಗರ, ಬಿ.ಸರೋಜದೇವಿ ಮಲ್ಲೇಶ್ವರಂ, ಹರ್ಷಿಕಾ ಪೂಣಚ್ಚ ಕೆ ಆರ್ ಪುರ, ಪೂಜಾ ಗಾಂಧಿ  ಕತ್ರಿಗುಪ್ಪೆ, ಯೋಗರಾಜ್ ಭಟ್ ಗಿರಿ ನಗರ, ಅನಂತ್ ನಾಗ್  ಮಲ್ಲೇಶ್ವರಂ ಮತ ಕೇಂದ್ರಗಳಲ್ಲಿ ತಮ್ಮ ಮತದಾನ ಮಾಡಲಿದ್ದಾರೆ.

    ಚಂದನ್ ಶೆಟ್ಟಿ ನಾಗರಭಾವಿಯಲ್ಲಿ ಮತದಾನ ಮಾಡಿದರೆ, ಕಾರುಣ್ಯ ರಾಮ್ ಆರ್ ಆರ್ ನಗರ, ಅವಿನಾಶ್  ಆರ್ ಆರ್ ನಗರ, ಜಗ್ಗೇಶ್ ಮಲ್ಲೇಶ್ವರಂ, ಶರಣ್ ಹೊಸಕೆರೆಹಳ್ಳಿ, ದುನಿಯಾ ವಿಜಯ್ ಕತ್ತಿಗುಪ್ಪೆ,  ಸಾಧು ಕೋಕಿಲ ನಾಗರಭಾವಿ, ಅರ್ಜುನ್ ಜನ್ಯ ಹೆಬ್ಬಾಳ, ಶ್ರೀಮುರುಳಿ ವಸಂತನಗರ, ವಿಜಯ್ ರಾಘವೇಂದ್ರ ಯಲಹಂಕ, ಸಪ್ತಮಿಗೌಡ ಜೆ ಪಿ ನಗರ, ರಮೇಶ್ ಅರವಿಂದ್ ಪದ್ಮನಾಭ ನಗರ, ಮಾಲಾಶ್ರೀ ಶಿವಾಜಿನಗರದಲ್ಲಿ ಮತ ಚಲಾವಣೆ ಮಾಡಲಿದ್ದಾರೆ.

    ವಶಿಷ್ಠ ಸಿಂಹ ಹಾಗೂ ಹರಿಪ್ರಿಯಾ ಆರ್ ಆರ್ ನಗರದಲ್ಲಿ ಮತದಾನ ಮಾಡಿದರೆ, ಶ್ರುತಿ ಹೊಸಕೆರೆ ಹಳ್ಳಿ,  ಭಾರತಿ ಜಯನಗರ, ಅನಿರುದ್ದ್ ಜಯನಗರ, ಅಭಿಷೇಕ್ ಅಂಬರೀಶ್ ಹಾಗೂ ಸುಮಲತಾ ಅಂಬರೀಶ್ ಜೆ ಪಿ ನಗರ, ಪ್ರಶಾಂತ್ ನೀಲ್ ವಸಂತನಗರದಲ್ಲಿ ತಮ್ಮ ಮತದಾನದ ಹಕ್ಕುಗಳನ್ನು ಚಲಾಯಿಸಲಿದ್ದಾರೆ.

    ಇತರ ಜಿಲ್ಲೆಗಳಲ್ಲಿ ಮತದಾನ ಮಾಡುವ ಸಿನಿ ಗಣ್ಯರು

    ರಿಷಬ್ ಶೆಟ್ಟಿ ಕೆರಾಡಿ, ಕುಂದಾಪುರ, ರಕ್ಷಿತ್ ಶೆಟ್ಟಿ ಉಡುಪಿ, ರಾಜ್ ಬಿ ಶೆಟ್ಟಿ ಉಡುಪಿ, ನಿಖಿಲ್ ಕುಮಾರಸ್ವಾಮಿ ಕೇತಗನಹಳ್ಳಿ (ಬಿಡದಿ), ಡಾಲಿ ಧನಂಜಯ ಅರಸೀಕೆರೆ, ಅಶಿಕಾ ರಂಗನಾಥ್ ತುಮಕೂರು, ಚಿಕ್ಕಣ್ಣ ಮೈಸೂರು, ಲೀಲಾವತಿ ಸೋಲದೇವನಹಳ್ಳಿ, ವಿನೋದ್ ರಾಜ್ ಸೋಲದೇವನ ಹಳ್ಳಿ, ದೊಡ್ಡಣ್ಣ ಬಿದರುಕಲ್ಲು ಮತದಾನ ಮಾಡಲಿದ್ದಾರೆ.

  • ನಿರ್ಭಯಾ ದಳ: ಮಹಿಳೆಯರ ರಕ್ಷಣೆಗಾಗಿ ಮುಂಬೈ ಪೊಲೀಸರ ಕಾರ್ಯಕ್ಕೆ ಬಿಟೌನ್ ಮಂದಿ ಮೆಚ್ಚುಗೆ

    ನಿರ್ಭಯಾ ದಳ: ಮಹಿಳೆಯರ ರಕ್ಷಣೆಗಾಗಿ ಮುಂಬೈ ಪೊಲೀಸರ ಕಾರ್ಯಕ್ಕೆ ಬಿಟೌನ್ ಮಂದಿ ಮೆಚ್ಚುಗೆ

    ಮುಂಬೈ: ಮಹಿಳೆಯರ ರಕ್ಷಣೆಗಾಗಿ ನಿರ್ಭಯಾ ದಳ ರಚಿಸಿರುವ ಮುಂಬೈ ಪೊಲೀಸರ ಕಾರ್ಯಕ್ಕೆ ಬಾಲಿವುಡ್ ನಟ ಸಲ್ಮಾನ್ ಖಾನ್, ಶಾಹಿದ್ ಕಪೂರ್, ಕತ್ರಿನಾ ಕೈಫ್ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಮುಂಬೈನಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಎಚ್ಚೆತ್ತುಕೊಂಡ ಪೊಲೀಸರು ಮಹಿಳೆಯರ ರಕ್ಷಣೆಗಾಗಿ ನಿರ್ಭಯಾ ದಳ ರಚಿಸಲಾಗಿದ್ದು, ಅಧಿಕೃತವಾಗಿ ಸಹಾಯವಾಣಿ ಸಂಖ್ಯೆಯನ್ನು ನೀಡಲಾಗಿದೆ. ಸದ್ಯ ಈ ಕುರಿತ ಸಣ್ಣ ವೀಡಿಯೋ ಬಿಡುಗಡೆ ಮಾಡುವ ಮೂಲಕ ಮುಂಬೈ ಪೊಲೀಸರು ಮಹಿಳೆಯರಲ್ಲಿ ಜಾಗೃತಿ ಮೂಡಿಸುತ್ತಿದ್ದು, ಈ ವೀಡಿಯೋಗೆ ಬಿಟೌನ್ ಮಂದಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಭ್ರಷ್ಟಾಚಾರದಲ್ಲೇ ಬಿಜೆಪಿ ಸರ್ಕಾರ ಕಾಲ ಕಳೆಯುತ್ತಿದೆ: ಪ್ರಿಯಾಂಕ್ ಖರ್ಗೆ

     

    View this post on Instagram

     

    A post shared by Katrina Kaif (@katrinakaif)

    ಈ ಕುರಿತಂತೆ ಟ್ವೀಟ್ ಮಾಡಿರುವ ಸಲ್ಮಾನ್ ಖಾನ್, ಮಹಿಳೆಯರ ಸುರಕ್ಷತೆಗಾಗಿ ನಿರ್ಭಯಾ ದಳವನ್ನು ಆರಂಭಿಸಿದ ಮುಂಬೈ ಪೊಲೀಸರಿಗೆ ನಿಜವಾಗಿಯೂ ಧನ್ಯವಾದ ತಿಳಿಸಬೇಕು. ಈ ಕಾರ್ಯದಿಂದ ಮಹಿಳೆಯರು, ಹಿರಿಯ ನಾಗರಿಕರು, ಮಕ್ಕಳಿಗೆ ತುಂಬಾ ಸಹಾಯಕವಾಗಿದೆ ಎಂದು ತಿಳಿಸಿದ್ದಾರೆ.

    ನಟ ಶಾಹಿದ್ ಕಪೂರ್ ಅವರು ಕೂಡ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ವೀಡಿಯೋವೊಂದನ್ನು ಹಂಚಿಕೊಂಡಿದ್ದು, ನಿರ್ಭಯಾ ದಳವನ್ನು ಆರಂಭಿಸಿದ ಮುಂಬೈ ಪೊಲೀಸರಿಗೆ ಧನ್ಯವಾದಗಳು. ಮಹಿಳೆಯರ ಸುರಕ್ಷತೆ ಮತ್ತು ಮಹಿಳೆಯರಿಗೆ ಸಂಬಂಧಿಸಿದ ಅಪರಾಧಗಳನ್ನು ತಡೆಗಟ್ಟಲು ನಿರ್ಭಯಾ ದಳ ರಚಿಸಲಾಗಿದ್ದು, ಬಿಕ್ಕಟ್ಟಿನ ಸಮಯದಲ್ಲಿರುವ ಮಹಿಳೆಯರು 103 ಸಹಾಯವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮೌನಿರಾಯ್

     

    View this post on Instagram

     

    A post shared by Shahid Kapoor (@shahidkapoor)

    ನಟಿ ಕತ್ರಿನಾ ಕೈಫ್ ಕೂಡ ನಿರ್ಭಯಾ ದಳ ಮಹಿಳೆಯರಿಗಾಗಿ ರಚಿಸಲಾಗಿರುವ ತಂಡವಾಗಿದ್ದು, ಮಹಿಳೆಯರು ಸಂಕಷ್ಟದಲ್ಲಿದ್ದಾಗ 103 ಸಹಾಯವಾಣಿಗೆ ಕರೆ ಮಾಡಬಹುದಾಗಿದೆ. ಮುಂಬೈನಲ್ಲಿ ಮಹಿಳೆಯರ ರಕ್ಷಣೆಗಾಗಿ ನಿರ್ಭಯಾ ದಳ ರಚಿಸಿದ್ದಕ್ಕಾಗಿ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ.

  • ಗಣೇಶನ ಮೂರ್ತಿಯನ್ನು ಬರಮಾಡಿಕೊಂಡ ಸ್ಯಾಂಡಲ್‍ವುಡ್ ಸೆಲೆಬ್ರಿಟಿಗಳು

    ಗಣೇಶನ ಮೂರ್ತಿಯನ್ನು ಬರಮಾಡಿಕೊಂಡ ಸ್ಯಾಂಡಲ್‍ವುಡ್ ಸೆಲೆಬ್ರಿಟಿಗಳು

    ಬೆಂಗಳೂರು: ಇಂದು ದೇಶಾದ್ಯಂತ ಗಣೇಶ ಹಬ್ಬವನ್ನು ಜನರು ಸಡಗರದಿಂದ ಆಚರಿಸುತ್ತಿದ್ದಾರೆ. ಈ ಮಧ್ಯೆ ಸ್ಯಾಂಡಲ್‍ವುಡ್ ಕಲಾವಿದರು ಗಣೇಶನ ಮೂರ್ತಿ ಜೊತೆಗೆ ಫೋಟೋವನ್ನು ಕ್ಲಿಕ್ಕಿಸಿಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

    ಮುಂಜಾನೆ ಗೌರಿ, ಗಣೇಶ ವಿಗ್ರಹವನ್ನು ಮನೆಗೆ ತಂದು ಪೂಜೆ ಸಲ್ಲಿಸಿ ಹಬ್ಬ ಆಚರಿಸುತ್ತಿವುದರಲ್ಲಿ ಬ್ಯುಸಿಯಾಗಿರುವ ಸ್ಯಾಂಡಲ್‍ವುಡ್ ತಾರೆಯರು, ಸಂಪ್ರದಾಯಿಕ ಉಡುಗೆಯಲ್ಲಿ ಬಣ್ಣ-ಬಣ್ಣದ ಗಣೇಶನ ಮೂರ್ತಿಯೊಂದಿಗೆ ಕಾಣಿಸಿಕೊಂಡಿದ್ದಾರೆ. ಜೊತೆಗೆ ಅಭಿಮಾನಿಗಳಿಗೆ ಶುಭಾಶಯ ತಿಳಿಸಿದ್ದಾರೆ.  ಇದನ್ನೂ ಓದಿ: ಕುಡಿದ ಅಮಲಿನಲ್ಲಿ ಸೇನಾ ವಾಹನಕ್ಕೆ ಒದ್ದು ಯುವತಿ ರಂಪಾಟ – ವೀಡಿಯೋ ವೈರಲ್

     

    View this post on Instagram

     

    A post shared by Karthik Jayaram (@karthik.jayaram)

    ಸ್ಯಾಂಡಲ್‍ವುಡ್ ನಟ ರಿಯಲ್ ಸ್ಟಾರ್ ಉಪೇಂದ್ರ ಅವರ ಮನೆಯಲ್ಲಿ ಗಣೇಶ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದ್ದು, ಉಪೇಂದ್ರರವರು ಪತ್ನಿಯೊಂದಿಗೆ ಕುಳಿತುಕೊಂಡು ಪೂಜೆ ಸಲ್ಲಿಸುತ್ತಿರುವ ವೀಡಿಯೋವನ್ನು ಪ್ರಿಯಾಂಕ ಉಪೇಂದ್ರವರು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ.

     

    View this post on Instagram

     

    A post shared by priyanka upendra (@priyanka_upendra)

    ಶ್ಯಾನೆ ಟಾಪ್ ಆಗವ್ಳೆ.. ಹುಡುಗಿ ನಟಿ ಅದಿತಿ ಪ್ರಭುದೇವ ಅವರು ನೀಲಿ ಬಣ್ಣದ ಬಟ್ಟೆ ತೊಟ್ಟು, ಮೂರು ಪುಟ್ಟ, ಪುಟ್ಟ ಗಣೇಶನ ವಿಗ್ರಹದ ಜೊತೆ ಫೋಟೋಗೆ ಪೋಸ್ ನೀಡಿದ್ದಾರೆ. ಇದನ್ನೂ ಓದಿ: ನೂರಾರು ಕೋಟಿ ಟೆಂಡರ್ ವಂಚನೆ ಪ್ರಕರಣ- ಐಷಾರಾಮಿ ಹೋಟೆಲ್ ನಲ್ಲಿ ಸಿಕ್ಕಿಬಿದ್ದ ಮಾಲೀಕ

     

    View this post on Instagram

     

    A post shared by ADITI PRABHUDEVA (@aditiprabhudeva)

    ನಟಿ ಆಶಿಕಾ ರಂಗನಾಥ್ ಗುಲಾಬಿ ಬಣ್ಣದ ಸೀರೆಯುಟ್ಟು, ಮಣ್ಣಿನಿಂದ ತಯಾರಿಸಿರುವ ಗಣೇಶನ ಮೂರ್ತಿಗೆ ಹೂವಿನಿಂದ ಅಲಂಕಾರ ಮಾಡುತ್ತಿರುವ ಫೋಟೋವನ್ನು ಹಂಚಿಕೊಳ್ಳುವುದರ ಮೂಲಕ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: 10 ವರ್ಷದಲ್ಲಿ 25 ಬಾರಿ ಅನ್ಯ ಪುರುಷರೊಂದಿಗೆ ಓಡಿಹೋದಳು – ಗಂಡನಿಗೆ ಮಾತ್ರ ಅವಳೇ ಬೇಕಂತೆ

    ನವರಸ ನಾಯಕ ಜಗ್ಗೇಶ್‍ರವರು ಗರಿಕೆ ಮತ್ತು ಹೂವಿನಿಂದ ಅಲಂಕರಿಸಿರುವ ಗಣೇಶನ ಮೂರ್ತಿಯ ಫೋಟೋವನ್ನು ಶೇರ್ ಮಾಡಿಕೊಂಡಿದ್ದು, ಸಣ್ಣ ಕಥೆಯನ್ನು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಈ ಗಣಪನಿಗೆ 34 ವರ್ಷ. 1987ರಲ್ಲಿ ಬಿಡಿಗಾಸಿಲ್ಲದ ದಿನಗಳು. ರವಿಚಂದ್ರನ್ ರವರ ರಣಧೀರ ಚಿತ್ರಿಕರಣ ಸಮಯ. ಅವರ ಸಂಸ್ಥೆಯಲ್ಲಿ 500ರೂ ಸಂಬಳ ಪಡೆದು ನಾನು ಪರಿಮಳ ಮಲ್ಲೇಶ್ವರ 10ನೇ ಕ್ರಾಸ್ ಜೀರಿಗೆ ವ್ಯಾಯಾಮ ಶಾಲೆ ಬಳಿ 20ರೂ.ಗೆ ಈ ಗಣಪನನ್ನು ಕೊಂಡು ಮನೆಯಲ್ಲಿ ಇಟ್ಟು ಚಿತ್ರಿಕರಣಕ್ಕೆ 8ನೇ ಮೈಲಿ ಸ್ಟೋನ್ ಮೆಡೋ ಮನೆಗೆ ಓಡಿದೆ. ನನ್ನ ಗ್ರಹಚಾರಕ್ಕೆ ಅಂದು ರಾತ್ರಿ 2 ಗಂಟೆಗೆ ಮುಗಿಯಿತು. ಪಾಪ ಪರಿಮಳ ನನಗಾಗಿ ನಿದ್ರೆ ಮಾಡದೇ ಕಾಯುತ್ತಿದ್ದಳು. ಆಗ ಮನೆಗೆ ಬಂದು ಸ್ನಾನ ಮಾಡಿ ಗಣಪತಿ ವ್ರತ ಶುರು ಮಾಡಿ ಬೆಳಗಿನ ಜಾವ 5ಕ್ಕೆ ಪೂಜೆ ಮುಗಿಸಿ ಗಣಪನಿಗೆ ಪ್ರಾರ್ಥಿಸಿದೆ.

    ಗಣಪ ಎಲ್ಲರು ಪೂಜೆ ನಂತರ ನಿನ್ನ ವಿಸರ್ಜನೆ ಮಾಡಿ ಬಿಡುತ್ತಾರೆ. ನಾನು ಮಾತ್ರ ನಿನ್ನ ನನ್ನ ಕೊನೆ ಉಸಿರಿನವರೆಗೂ ಇಟ್ಟುಕೊಳ್ಳುವೆ ಎಂದು ಸಂಕಲ್ಪ ಮಾಡಿದೆ. ಅದರಂತೆ ಇಂದಿಗೂ ಈ ಗಣಪನೇ ನನ್ನ ಆತ್ಮೀಯ ಬಂಧು. ಇಂದು ಇವನಿಗೆ ಪೂಜೆ ಮಾಡುವಾಗ ನನ್ನ ಬೆಳವಣಿಗೆ ನೆನೆದು ಆಶ್ಚರ್ಯ ಅನುಭವ ಆಯಿತು.  ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿದ ಮಾತು ‘ಶ್ರದ್ಧಾವಾನ್ ಲಭತೆ ಜ್ಞಾನಂ’ ಶ್ರದ್ಧೆ ಇದ್ದ ಜಾಗದಲ್ಲಿ ಸರ್ವ ಜ್ಞಾನ ನೀಡುವೆ ಎಂದು ಧನ್ಯೋಸ್ಮಿ. ಈ ಗಣಪನಿಗೆ ನನ್ನ ಹಿರಿಮಗ ಗುರು ರಾಜನಿಗೆ ಒಂದೇ ವಯಸ್ಸು 34 ವರ್ಷಗಳು. ನಂಬಿಕೆಗೆ ಕೆಡುಕಿಲ್ಲಾ ಗೆದ್ದೆ ಗೆಲ್ಲುವ. ಅದಕ್ಕೆ 4 ಬಾರಿ ತೀರ್ಪು ಎಂದರು ತಮಿಳುಕವಿ ಭಾರತೀಯಾರ್ ಸರ್ವರಿಗೂ ಗಣಪನ ಹಬ್ಬದ ಶುಭಾಶಯ. ಶುಭಮಸ್ತು ಎಂದು ಶುಭಾಶಯ ತಿಳಿಸಿದ್ದಾರೆ.

    ಗಂಡ-ಹೆಂಡತಿ ಸಿನಿಮಾ ಖ್ಯಾತಿಯ ನಟಿ ಸಂಜನಾ ಗಲ್ರಾನಿ ಕೂಡ ಗಣೇಶನ ವಿಗ್ರದ ಮುಂದೆ ಕುಳಿತು ಬೇಡುತ್ತಿರುವ ವೀಡಿಯೋಗೆ ಸಾಂಗ್ ಸೆಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಬಿಗ್‍ಬಾಸ್ ಸೀಸನ್-8 ಸ್ಪರ್ಧಿಯಾಗಿದ್ದ ದಿವ್ಯಾ ಉರುಡುಗ ಗಣೇಶನ ಮೂರ್ತಿಯನ್ನು ತಬ್ಬಿಕೊಂಡಿರುವ ಫೋಟೋವನ್ನು ಹಂಚಿಕೊಂಡು ಹಬ್ಬಕ್ಕೆ ಶುಭಾಶಯ ತಿಳಿಸಿದ್ದಾರೆ.

    ಕನ್ನಡ ಕಿರುತೆರೆ ನಟಿ ಅಮೃತಾ ರಾಮ್ ಮೂರ್ತಿ ಗರ್ಭಿಣಿಯಾಗಿರುವ ವಿಚಾರ ಎಲ್ಲರಿಗೂ ತಿಳಿದಿದೆ. ಹೀಗಿದ್ದರೂ ಅಮೃತಾ ಬೆಳ್ಳಿ ಗಣೇಶನ ವಿಗ್ರಹವನ್ನಿಟ್ಟು ದೇವರಿಗೆ ಪುಷ್ಪ ಅರ್ಪಿಸುತ್ತಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೇ ನಟಿ ದೀಪಿಕಾ ದಾಸ್, ನಟ ಕಾರ್ತಿಕ್ ಜಯರಾಮ್ ಸೇರಿದಂತೆ ಹಲವು ಕಲಾವಿದರು ಗಣೇಶನ ಜೊತೆ ಫೋಟೋ  ಕ್ಲಿಕ್ಕಿಸಿಕೊಂಡಿದ್ದಾರೆ.

     

  • ಮಾಲ್ಡಿವ್ಸ್‌ನಲ್ಲಿ ನಟಿ ಮಣಿಯರು ಮಸ್ತ್ ಮಜಾ- ಹೋಟೆಲ್ ದರ ಎಷ್ಟು ಗೊತ್ತಾ!

    ಮಾಲ್ಡಿವ್ಸ್‌ನಲ್ಲಿ ನಟಿ ಮಣಿಯರು ಮಸ್ತ್ ಮಜಾ- ಹೋಟೆಲ್ ದರ ಎಷ್ಟು ಗೊತ್ತಾ!

    ಬೆಂಗಳೂರು: ಕೊರೊನಾ ಬಳಿಕ ನಟಿಮಣಿಯರಿಗೆ ಮಾಲ್ಡಿವ್ಸ್ ಫೇವರಿಟ್ ಪ್ಲೇಸ್ ಎನ್ನುವಂತಾಗಿದ್ದು, ಸ್ಯಾಂಡಲ್‍ವುಡ್, ಬಾಲಿವುಡ್ ಮಾತ್ರವಲ್ಲದೆ ಇದೀಗ ಟಾಲಿವುಡ್‍ನ ಸಮಂತಾ ಸಹ ಮಾಲ್ಡಿವ್ಸ್‌ನಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ಹತ್ತಾರು ನಟಿಯರು ಐಲ್ಯಾಂಡ್‍ಗಳಲ್ಲಿ ಮೊಕ್ಕಾಂ ಹೂಡಿದ್ದು, ಕಡಲ ಕಿನಾರೆಗಳಲ್ಲಿ ಕಾಲ ಕಳೆಯುತ್ತಿದ್ದಾರೆ. ಹೀಗೆ ತಂಡೋಪತಂಡವಾಗಿ ನಟಿಮಣಿಯರು ಮಾಲ್ಡಿವ್ಸ್ ಗೆ ಭೇಟಿ ನೀಡಲು ಕಾರಣವೇನು, ಇದ್ದಕ್ಕಿದ್ದಂತೆ ಹೋಗಿದ್ದೇಕೆ, ಅಲ್ಲಿನ ಹೋಟೆಲ್ ಹೇಗಿವೆ, ಒಂದು ರಾತ್ರಿ ಹೋಟೆಲ್‍ಗಳಲ್ಲಿ ಕಾಲ ಕಳೆಯಲು ದರ ಎಷ್ಟು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

     

    View this post on Instagram

     

    A post shared by Shanvi sri (@shanvisri)

    ಕೊರೊನಾ ಲಾಕ್‍ಡೌನ್‍ನಿಂದಾಗಿ ಮನೆಯಲ್ಲೇ ಕಾಲ ಕಳೆಯುತ್ತಿದ್ದ ಸೆಲೆಬ್ರಿಟಿಗಳು ಇದೀಗ ಗೂಡಿನಿಂದ ಹಾರಿದ ಹಕ್ಕಿಗಳಂತಾಗಿದ್ದು, ತನಮ್ಮ ನೆಚ್ಚಿನ ಸ್ಥಳಗಳಿಗೆ ತೆರಳಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ನಟಿಮಣಿಯರಿಗೆ ಬೀಚ್, ನೀರು ಎಂದರೆ ಎಲ್ಲಿಲ್ಲದ ಪ್ರೀತಿ ಹೀಗಾಗಿ ಸ್ಯಾಂಡಲ್‍ವುಡ್, ಬಾಲಿವುಡ್ ಹಾಗೂ ಟಾಲಿವುಡ್‍ನ ಬೆಡಗಿಯರು ಮಾಲ್ಡಿವ್ಸ್‍ನ್ನು ತಮ್ಮ ಪ್ರವಾಸದ ಡೆಸ್ಟಿನೇಶನ್ ಮಾಡಿಕೊಂಡಿದ್ದಾರೆ. ಹತ್ತಾರು ನಟಿಯರು ಮತ್ಸ್ಯ ಕನ್ಯೆಯರಂತೆ ಸಮುದ್ರ ವಿಹಾರಿಗಳಾಗಿದ್ದಾರೆ.

    ಕನ್ನಡದ ಪ್ರಣೀತಾ, ಅವನೇ ಶ್ರೀಮನ್ನಾರಾಯಣ ಬೆಡಗಿ ಶಾನ್ವಿ ಶ್ರೀವಾಸ್ತವ್, ತೆಲುಗಿನ ಸಮಂತಾ ಅಕ್ಕಿನೇನಿ, ಕಾಜಲ್ ಅಗರ್ವಾಲ್ ದಂಪತಿ, ಬಾಲಿವುಡ್‍ನ ರಕುಲ್ ಪ್ರೀತ್ ಸಿಂಗ್, ದಿಶಾ ಪಟಾಣಿ, ಕತ್ರಿನಾ ಕೈಫ್, ಸೋನಾಕ್ಷಿ ಸಿನ್ಹಾ, ವರುಣ್ ಧವನ್, ಟೈಗರ್ ಶ್ರಫ್, ಮೌನಿ ರಾಯ್, ನೇಹಾ ಧುಪಿಯಾ ಸೇರಿದಂತೆ ಹತ್ತು ಹಲವು ನಟಿಯರು ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಹೀಗೆ ತಂಡೋಪತಂಡವಾಗಿ ಒಮ್ಮೆಲೆ ನಟಿಮಣಿಯರು ಮಾಲ್ಡಿವ್ಸ್ ಗೆ ತೆರಳಿದ್ದಾರೆ.

     

    View this post on Instagram

     

    A post shared by Tiger Shroff (@tigerjackieshroff)

    ಸಮುದ್ರ ಪ್ರಿಯರಿಗೆ ಮಾಲ್ಡಿವ್ಸ್ ಹೇಳಿ ಮಾಡಿಸಿದ ಸ್ಥಳ. ತುಂಬಾ ಜನ ಮಾಲ್ಡಿವ್ಸ್ ಭೇಟಿ ನೀಡಲು ಪ್ರಮುಖ ಕಾರಣ ಅಲ್ಲಿನ ಹವಾಮಾನ. ಅದರಲ್ಲೂ ನವೆಂಬರ್ ನಿಂದ ಏಪ್ರಿಲ್ ವರೆಗೆ ಈ ದ್ವೀಪ ದೇಶಕ್ಕೆ ಭೇಟಿ ನೀಡಲು ಸೂಕ್ತ ಸಮಯವಾಗಿದೆ. ಈ ವೇಳೆ ಅಲ್ಲಿನ ತಾಪಮಾನ ಸರಾಸರಿ 29 ಡಿಗ್ರಿ ಸೆಲ್ಸಿಯಸ್‍ನಿಂದ 31 ಡಿಗ್ರಿ ಸೆಲ್ಸಿಯಸ್‍ವರೆಗೆ ಇರುತ್ತದೆ. ಈ ಸಮಯದಲ್ಲಿ ಮಳೆ ಹಾಗೂ ಬಿಸಿಲು ತುಂಬಾ ಕಡಿಮೆ ಹೀಗಾಗಿ ಹೆಚ್ಚು ಜನ ಭೇಟಿ ನೀಡುತ್ತಾರೆ.

    ಮಾಲ್ಡಿವ್ಸ್ ಯಾಕೆ ಇಷ್ಟ?
    ಮಾಲ್ಡಿವ್ಸ್ ದ್ವೀಪಗಳ ಸಮೂಹವಾಗಿದ್ದು, ಬರೋಬ್ಬರಿ 1,190ಕ್ಕೂ ಹೆಚ್ಚು ಹವಳ ದ್ವೀಪಗಳನ್ನು ಹೊಂದಿದೆ. ಇನ್ನೂ ವಿಶೇಷ ಎಂಬಂತೆ ಈ ದೇಶಕ್ಕೆ ಪ್ರಯಾಣಿಸುವವರಿಗಾಗಿ ನೈಸರ್ಗಿಕ ಪ್ರತ್ಯೇಕತೆಯನ್ನು ನೀಡಲಾಗುತ್ತದೆ. ಇಲ್ಲಿನ ರೆಸಾರ್ಟ್ ಹಾಗೂ ಪ್ರವಾಸೋದ್ಯಮ ಸಂಸ್ಥೆಗಳು ಪ್ರವಾಸೋದ್ಯಮ ಸಚಿವಾಲಯದ ಮಾರ್ಗಸೂಚಿಗಳನ್ನು ಚಾಚೂತಪ್ಪದೇ ಪಾಲಿಸುತ್ತವೆ. ಇದರಿಂದಾಗಿ ಸುರಕ್ಷತೆ ಹಾಗೂ ನೈರ್ಮಲ್ಯದ ಗುಣಮಟ್ಟವನ್ನು ಕಾಪಾಡಿಕೊಳ್ಳುತ್ತವೆ.

     

    View this post on Instagram

     

    A post shared by Rakul Singh (@rakulpreet)

    ಇಲ್ಲಿ ‘ಒಂದು ದ್ವೀಪ ಒಂದು ರೆಸಾರ್ಟ್’ ಪರಿಕಲ್ಪನೆಯನ್ನು ಅನುಸರಿಸಲಾಗುತ್ತದೆ. ಇದರಿಂದ ಮಾಲ್ಡಿವ್ಸ್ ಗೆ ಭೇಟಿ ನೀಡುವ ಪ್ರಯಾಣಿಕರು ತಾವು ಉಳಿದುಕೊಂಡ ರೆಸಾರ್ಟ್‍ಗೆ ಸೀಮಿತವಾಗುತ್ತಾರೆ. ಹೀಗಾಗಿ ಇತರ ಸ್ಥಳಗಳಿಗೆ ಹೋಲಿಸಿದರೆ ಇದು ಸುರಕ್ಷಿತ ಎನ್ನಿಸುತ್ತದೆ. ಅಲ್ಲದೆ ಮಾಲ್ಡಿವ್ಸ್ ಗೆ ಭೇಟಿ ನೀಡದ ಬಳಿಕ ಕ್ವಾರಂಟೈನ್ ಆಗುವ ಅಗತ್ಯವಿಲ್ಲ. ಮಾತ್ರವಲ್ಲದೆ ಪಾಸ್‍ಪೋರ್ಟ್ ಹೊಂದಿದ ಭಾರತೀಯರಿಗೆ 30 ದಿನಗಳ ಉಚಿತ ವೀಸಾವನ್ನು ಸಹ ನೀಡಲಾಗುತ್ತದೆ. ಹೀಗಾಗಿ ಯಾವುದೇ ಸಮಸ್ಯೆ ಇಲ್ಲದೆ ಆರಾಮವಾಗಿ ಮಾಲ್ಡಿವ್ಸ್ ಗೆ ಭೇಟಿ ನೀಡಬಹುದಾಗಿದೆ.

     

    View this post on Instagram

     

    A post shared by Shanvi sri (@shanvisri)

    ರೆಸಾರ್ಟ್ ದರವೆಷ್ಟು?
    ಮಾಲ್ಡಿವ್ಸ್ ನಲ್ಲಿ ಪ್ರತಿ ದ್ವೀಪಕ್ಕೊಂದು ರೆಸಾರ್ಟ್ ಇದ್ದು, ಸಾವಿರಕ್ಕೂ ಅಧಿಕ ರೆಸಾರ್ಟ್‍ಗಳಿವೆ. ಸಾವಿರದಿಂದ ಲಕ್ಷಾಂತರ ರೂ. ದರದ ರೆಸಾರ್ಟ್‍ಗಳಿದ್ದು, ಸಾಮರ್ಥ್ಯಕ್ಕನುಸಾರ ಬುಕ್ ಮಾಡಿಕೊಳ್ಳಬಹುದು. ಅಲ್ಲದೆ ಟ್ರಾವೆಲ್ ಏಜೆನ್ಸಿಗಳ ಮೂಲಕ ಸಹ ತೆರಳಬಹುದಾಗಿದೆ. ಸದ್ಯ ಟಾಲಿವುಡ್ ನಟಿ ಸಮಂತಾ ಅವರು ತಂಗಿರುವ ಜೋಲಿ ಮಾಲ್ಡಿವ್ಸ್ ರೆಸಾರ್ಟ್ ನಲ್ಲಿ ಒಂದು ದಿನಕ್ಕೆ ರೂಂ ಬಾಡಿಗೆ ಬರೋಬ್ಬರಿ 1.5 ಲಕ್ಷ ರೂ.ಗಳಾಗಿವೆ.

     

    View this post on Instagram

     

    A post shared by Sonakshi Sinha (@aslisona)

    ಇತ್ತೀಚೆಗೆ ನಟಿ ಕಾಜಲ್ ಅಗರ್ವಾಲ್ ಹಾಗೂ ಗೌತಮ್ ಕಿಚ್ಲು ಜೋಡಿ ಸಹ ಹನಿಮೂನ್‍ಗಾಗಿ ಮಾಲ್ಡಿವ್ಸ್ ಗೆ ತೆರಳಿದ್ದರು. ಇವರು ಅಂಡರ್ ವಾಟರ್ ಹೋಟೆಲ್‍ನಲ್ಲಿ ತಂಗಿದ್ದರು. ಇದು ವಿಶ್ವದ ಮೊದಲ ಸಬ್‍ಮರ್ಜಡ್ ಹೋಟೆಲ್ ಆಗಿದ್ದು, ಹಿಂದೂ ಮಹಾಸಾಗರದ ಮೇಲ್ಮೈಗಿಂತ 16 ಅಡಿ ಆಳದಲ್ಲಿರುವ ವಿಶ್ವದ ಮೊದಲ ಹೋಟೆಲ್ ಆಗಿದೆ. ಕಾಜಲ್ ದಂಪತಿ ಮುರಾಕಾ ಹೋಟೆಲ್‍ನಲ್ಲಿ ತಂಗಿದ್ದು, ಇದರ ಒಂದು ದಿನದ ಬಾಡಿಗೆ ಅಂದಾಜು 37.33 ಲಕ್ಷ ರೂ.ಗಳಾಗಿವೆ. ಇತ್ತೀಚೆಗೆ ಕಾಜಲ್ ಅವರು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಫೋಟೋ ಹಂಚಿಕೊಂಡಿದ್ದು, ಸಮುದ್ರದ ಆಳದಲ್ಲಿರುವ ಗಾಜಿನ ರೂಮ್‍ನಲ್ಲಿ ಕುಳಿತಿರುವ ಚಿತ್ರವನ್ನು ಅವರು ಪೋಸ್ಟ್ ಮಾಡಿದ್ದರು. ಈ ಮೂಲಕ ಅಂಡರ್ ವಾಟರ್ ವೇವ್ ತೋರಿಸಿದ್ದರು.

    ರೆಸಾರ್ಟ್‍ಗಳಲ್ಲಿ ಪ್ರೈವೆಸಿ ಹಾಗೂ ಉತ್ತಮ ವಾತಾವರಣ, ಯಾವುದೇ ಕಿರಿಕಿರಿ ಇಲ್ಲದ್ದರಿಂದ ಬಹುತೇಕ ನಟ, ನಟಿಯರು ಮಾಲ್ಡಿವ್ಸ್ ಗೆ ತೆರಳಲು ಇಷ್ಟಪಡುತ್ತಾರೆ. ಹೀಗಾಗಿಯೇ ಇದೀಗ ತಂಡೋಪ ತಂಡವಾಗಿ ತೆರಳಿದ್ದಾರೆ.

  • ಡ್ರಗ್ಸ್ ನಶೆ- ನಟಿ ಸಂಜನಾ ಗಲ್ರಾನಿ ಆಪ್ತ ರಾಹುಲ್ ಸಿಸಿಬಿ ವಶಕ್ಕೆ

    ಡ್ರಗ್ಸ್ ನಶೆ- ನಟಿ ಸಂಜನಾ ಗಲ್ರಾನಿ ಆಪ್ತ ರಾಹುಲ್ ಸಿಸಿಬಿ ವಶಕ್ಕೆ

    ಬೆಂಗಳೂರು: ನಟಿ, ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಆಪ್ತ ರವಿ ಶಂಕರ್ ಬಳಿಕ ಮತ್ತೊಬ್ಬ ನಟಿ ಸಂಜನಾ ಗಲ್ರಾನಿಯ ಆಪ್ತ ರಾಹುಲ್‍ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ವಿಡಿಯೋ ಸಾಕ್ಷ್ಯ ಸೇರಿ ಹಲವು ಪ್ರಮುಖ ಮಾಹಿತಿ ಲಭ್ಯವಾಗಿದೆ ಎಂದು ಮೂಲಗಳು ತಿಳಿಸಿವೆ.

    ಈ ಮೂಲಕ ಸಿಸಿಬಿ ಪೊಲೀಸರು ನಟಿ ರಾಗಿಣಿ ಆಪ್ತ ರವಿಶಂಕರ್ ಹಾಗೂ ಸಂಜನಾ ಗಲ್ರಾನಿ ಆಪ್ತ ರಾಹುಲ್‍ನನ್ನು ವಶಕ್ಕೆ ಪಡೆದಂತಾಗಿದ್ದು, ತೀವ್ರ ವಿಚಾರಣೆ ನಡೆಸಿದ್ದಾರೆ. ಈ ಕುರಿತು ಮಧ್ಯಾಹ್ನದ ವೇಳೆಗೆ ಹೆಚ್ಚಿನ ಬೆಳವಣಿಗೆಯಾಗುವ ಸಾಧ್ಯತೆ ಇದೆ. ಕಾರಿನ ಸಮೇತ ರಾತ್ರಿ ರಾಹುಲ್ ನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಈ ಮೂಲಕ ಸೆಲೆಬ್ರಿಟಿಗಳ ಪಾರ್ಟಿಗೆ ಡ್ರಗ್ ಸಪ್ಲೈ ಮಾಡುತಿದ್ದನಾ ರಾಹುಲ್ ಎಂಬ ಪ್ರಶ್ನೆ ಇದೀಗ ಮೂಡಿದೆ. ರಾಹುಲ್ ಡ್ರಗ್ ಪೆಡ್ಲರ್ ಆಗಿರುವ ಶಂಕೆ ಹಿನ್ನೆಲೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಿನ್ನೆ ರಾತ್ರಿಯೇ ರಾಹುಲ್ ನನ್ನು ಸಿಸಿಬಿ ಕಚೇರಿಗೆ ಕರೆತರಲಾಗಿದ್ದು, ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಸಿಸಿಬಿ ಉನ್ನತ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭ್ಯವಾಗಿದೆ.

    ರವಿ ಶಂಕರ್‍ನನ್ನು ವಶಕ್ಕೆ ಪಡೆಯುತ್ತಿದ್ದಂತೆ ನಟಿ ರಾಗಿಣಿ ವಕೀಲರ ಮೊರೆ ಹೋಗಿದ್ದು, ವಿಚಾರಣೆ ಎದುರಿಸುವ ಕುರಿತು ಸಲಹೆಗಳನ್ನು ಪಡೆಯುತ್ತಿದ್ದಾರೆ ಎನ್ನಲಾಗಿದೆ. ಇತ್ತ ರಾಹುಲ್ ಪೊಲೀಸರ ಬಲೆಗೆ ಬೀಳುತ್ತಿದ್ದಂತೆ ಸಂಜನಾ ಗಲ್ರಾನಿ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಈವರೆಗೆ ಅವರು ಎಲ್ಲಿದ್ದಾರೆ ಎಂಬ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಸಿಸಿಬಿ ಅಧಿಕಾರಿಗಳು ವಿಚಾರಣೆಗೆ ಕರೆಯಬಹುದು ಎಂಬ ಉದ್ದೇಶದಿಂದ ಸಂಜನಾ ಅಜ್ಞಾತ ಸ್ಥಳದಲ್ಲಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

  • ನಾವೂ ಪಾರ್ಟಿಗಳಿಗೆ ಹೋಗುತ್ತೇವೆ, ಡ್ರಗ್ಸ್ ಎಲ್ಲ ನನಗೆ ಗೊತ್ತಿಲ್ಲ- ಉಪೇಂದ್ರ

    ನಾವೂ ಪಾರ್ಟಿಗಳಿಗೆ ಹೋಗುತ್ತೇವೆ, ಡ್ರಗ್ಸ್ ಎಲ್ಲ ನನಗೆ ಗೊತ್ತಿಲ್ಲ- ಉಪೇಂದ್ರ

    – ಇಂಡಸ್ಟ್ರಿಯಲ್ಲಿ ಯಾರ ಹೆಸರು ಹೇಳಿದರೂ ನನಗೆ ಆಶ್ಚರ್ಯ

    ಬೆಂಗಳೂರು: ನಾವೂ ಪಾರ್ಟಿಗಳಿಗೆ ಹೋಗುತ್ತೇವೆ ಆದರೆ ಡ್ರಗ್ಸ್ ದಂಧೆ ಎಲ್ಲ ನನಗೆ ಗೊತ್ತಿಲ್ಲ ಎಂದು ನಟ ಉಪೇಂದ್ರ ತಿಳಿಸಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು, ಡ್ರಗ್ಸ್ ಎಲ್ಲಿಂದ ಬರುತ್ತೆ, ಹೇಗೆ ಬರುತ್ತೆ ಎಂದು ಗೊತ್ತಿಲ್ಲ. ಆ ಪ್ರಪಂಚವೇ ನಮಗೆ ಗೊತ್ತಿಲ್ಲ. ಚಿತ್ರರಂಗದಲ್ಲಿ ಡ್ರಗ್ಸ್ ವಿಚಾರದ ಬಗ್ಗೆ ಕೇಳಿ ದಿಗ್ಬ್ರಮೆಯಾಯಿತು. ಸರಿಯಾಗಿ ಮಾಹಿತಿ ಸಿಗುವವರೆಗೂ ಮಾತನಾಡೋದು ಸರಿಯಲ್ಲ. ಸಿನಿಮಾ ಇಂಡಸ್ಟ್ರಿಯಲ್ಲಿ ನಾವೂ ಸಹ ಹಲವು ಪಾರ್ಟಿಗಳಿಗೆ ಹೋಗಿದ್ದೇವೆ. ಆದರೆ ಯಾರು ಹೇಗೆ ತೆಗೆದುಕೊಳ್ಳುತ್ತಾರೆ ಎಂಬುದು ತಿಳಿದಿಲ್ಲ ಎಂದರು. ಇದನ್ನೂ ಓದಿ: ಫನ್‍ಗೋಸ್ಕರ ಚಟದ ಹಿಂದೆ ಬೀಳಬಾರದು: ಶಿವರಾಜ್‍ಕುಮಾರ್

    ಪಾರ್ಟಿಗಳಲ್ಲಿ ಡ್ರಗ್ಸ್ ಹೇಗೆ ತಗೋತ್ತಾರೆ ಅನ್ನೋದು ನಮಗೆ ಗೊತ್ತೇ ಇಲ್ಲ. ನಾನು ಯಾವತ್ತೂ ನೋಡಿಲ್ಲ. ಸರಿಯಾದ ಮೂಲಗಳಿಂದ ಮಾಹಿತಿ ಬಂದ ಮೇಲೆ ಗೊತ್ತಾಗುತ್ತೆ. ನನಗೆ ಇದರ ಬಗ್ಗೆ ಸತ್ಯವಾಗಿ ಏನು ಗೊತ್ತಿಲ್ಲ, ಏನನ್ನೂ ನೋಡಿಲ್ಲ. ಯಾರು ಆರೋಪ ಮಾಡುತ್ತಿದ್ದಾರೆ ಅವರನ್ನೇ ಕೇಳಬೇಕು. ಇಂಡಸ್ಟ್ರಿಯಲ್ಲಿ ಇವರು ಡ್ರಗ್ಸ್ ತೆಗೆದುಕೊಳ್ಳುತ್ತಿದ್ದಾರೆ ಎಂದರೂ ನನಗೆ ಆಶ್ಚರ್ಯವಾಗುತ್ತೆ. ಯಾವುದರ ಬಗ್ಗೆಯೂ ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.

    ಯುವ ಜನತೆಯಲ್ಲಿ ನಾನು ಮನವಿ ಮಾಡುತ್ತೇನೆ, ದಯವಿಟ್ಟು ಯುವ ಜನತೆ ಇದರಿಂದ ದೂರ ಇರಿ. ನಶೆಯ ಗುಂಗು ಶಾಶ್ವತ ಅಲ್ಲ, ಯುವಕರು ಇಂತಹ ವಿಷಯಕ್ಕೆ ಕೈ ಹಾಕಬೇಡಿ. ಇದನ್ನು ಸೇವಿಸುವವರು ಸಹ ಇದರಿಂದ ಹೊರಗೆ ಬನ್ನಿ ಎಂದು ಮನವಿ ಮಾಡಿದ್ದಾರೆ.

  • ಟ್ರೆಂಡ್ ಆಯ್ತು ಪಿಲ್ಲೋ ಚಾಲೆಂಜ್ – ಬೆತ್ತಲ ಮೈಗೆ ದಿಂಬು ಕಟ್ಟಿ ಸೆಲೆಬ್ರಿಟಿ ಫೋಟೋ ಪೋಸ್ಟ್

    ಟ್ರೆಂಡ್ ಆಯ್ತು ಪಿಲ್ಲೋ ಚಾಲೆಂಜ್ – ಬೆತ್ತಲ ಮೈಗೆ ದಿಂಬು ಕಟ್ಟಿ ಸೆಲೆಬ್ರಿಟಿ ಫೋಟೋ ಪೋಸ್ಟ್

    ಮುಂಬೈ: ಸಾಮಾಜಿಕ ಜಾಲತಾಣಗಳಲ್ಲಿ ವಿಚಿತ್ರವಾದ ಹೊಸ ಹೊಸ ಚಾಲೆಂಜ್‍ಗಳು ಟ್ರೆಂಡ್ ಆಗುತ್ತಲೇ ಇರುತ್ತೆ. ಕೆಲವೊಂದು ಚಾಲೆಂಜ್‍ಗಳು ಸಿಕ್ಕಾಪಟ್ಟೆ ವೈರಲ್ ಆಗಿಬಿಡುತ್ತದೆ. ಆದೇ ಪಟ್ಟಿಗೆ ಈಗ ಪಿಲ್ಲೋ ಚಾಲೆಂಜ್ ಕೂಡ ಸೇರಿಕೊಂಡಿದೆ.

    ಸದ್ಯ ಲಾಕ್‍ಡೌನ್ ಅಲ್ಲಿ ‘ಬಿ ದ ರಿಯಲ್ ಮ್ಯಾನ್ ಚಾಲೆಂಜ್’, ‘ಡಾಲ್ಗೊನಾ ಕಾಫಿ ಚಾಲೆಂಜ್’, ‘ಹೋಂ ಗಾರ್ಡನ್ ಚ್ಯಾಲೆಂಜ್’ ಹೀಗೆ ಅನೇಕ ಚಾಲೆಂಜ್‍ಗಳು ಟ್ರೆಂಡ್ ಆಗುತ್ತಿದೆ. ಈ ಮಧ್ಯೆ ಸಿಕ್ಕಾಪಟ್ಟೆ ವೈರಲ್ ಆಗಿರೋದು ಪಿಲ್ಲೋ ಚಾಲೆಂಜ್. ಈ ಚಾಲೆಂಜ್‍ಗೆ ಕೇವಲ ಯುವಕ, ಯುವತಿಯರು, ಮಹಿಳೆಯರು ಮಾತ್ರವಲ್ಲಿ ಸೆಲೆಬ್ರಿಟಿಗಳು, ಪುರುಷರು ಹಾಗೂ ಮಕ್ಕಳು ಕೂಡ ಫಿದಾ ಆಗಿದ್ದಾರೆ. ಇವರೆಲ್ಲಾ ಪಿಲ್ಲೋ ಚಾಲೆಂಜ್ ಸ್ವೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋವನ್ನು ಹಂಚಿಕೊಳ್ಳುತ್ತಿದ್ದಾರೆ.

    https://www.instagram.com/p/B_ML5iTj-sx/

    ಹಾಲಿವುಡ್ ನಟಿಯರು ಕೂಡ ಈ ಚಾಲೆಂಜ್ ಸ್ವೀಕರಿಸಿದ್ದಾರೆ. ಅಷ್ಟೇ ಅಲ್ಲದೇ ಟಾಲಿವುಡ್ ನಟಿ ಪಾಯಲ್ ರಾಜ್‍ಪೂತ್, ಬಾಲಿವುಡ್ ಗಾಯಕಿ ನೇಹಾ ಕಕ್ಕರ್ ಕೂಡ ಈ ಚಾಲೆಂಜ್ ಸ್ವೀಕರಿಸಿ, ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.

    https://www.instagram.com/p/B_CfrgdnUMQ/

    ಬಣ್ಣದ ಬಣ್ಣದ ದಿಂಬುಗಳನ್ನೇ ಬಟ್ಟೆಯಂತೆ ಬರೀ ಮೈಗೆ ಅಡ್ಡವಿಟ್ಟುಕೊಂಡು, ಸೊಂಟಕ್ಕೆ ದಿಂಬಿಗೆ ಸೇರಿಸಿ ಒಂದು ಬೆಲ್ಟ್ ಹಾಕಿಕೊಂಡು ಫೋಟೋಗೆ ಪೋಸ್ ಕೊಟ್ಟು ಸಾಮಾಜಿಕ ಜಾಲತಾಣಗಳಲ್ಲಿ ಅದನ್ನು ಹಂಚಿಕೊಳ್ಳುವುದಕ್ಕೇ ಪಿಲ್ಲೋ ಚಾಲೆಂಜ್ ಎನ್ನುತ್ತಾರೆ. ಮೊದ ಮೊದಲು ಈ ಚಾಲೆಂಜ್ ಅನ್ನು ಹೆಣ್ಣು ಮಕ್ಕಳು ಮಾಡುತ್ತಿದ್ದರು, ಆದರೆ ಲಾಕ್‍ಡೌನ್ ಎಫೆಕ್ಟ್ ನಿಂದ ಮನೆಯಲ್ಲೇ ಕೂತು ಬೋರ್ ಆಗಿರುವ ಪುರುಷರೂ ಕೂಡ ಚಾಲೆಂಜ್ ಸ್ವೀಕರಿಸಿ ನಾವೂ ಯಾರಿಗೂ ಕಮ್ಮಿ ಇಲ್ಲ ಎನ್ನುತ್ತಿದ್ದಾರೆ. ಈ ಪಿಲ್ಲೋ ಚಾಲೆಂಜ್ ಫೋಟೋವನ್ನು ಇನ್‍ಸ್ಟಾಗ್ರಾಮ್, ಟ್ವಿಟ್ಟರ್, ಫೇಸ್‍ಬುಕ್‍ನಲ್ಲಿ ಹಂಚಿಕೊಂಡು ಎಂಜಾಯ್ ಮಾಡುತ್ತಿದ್ದಾರೆ.

    ಬರೀ ಮೈಗೆ ಅಡ್ಡ ದಿಂಬು ಕಟ್ಟಿಕೊಂಡು ಅದಕ್ಕೆ ಸನ್ ಗ್ಲಾಸ್, ಪರ್ಸ್, ಹೈ ಹೀಲ್ಸ್ ಧರಿಸಿ, ನಾಯಿ ಮರಿ, ಬೆಕ್ಕು, ಗಿಡಗಳ ಜೊತೆ ಫೋಟೋ ತೆಗೆದು ಶೇರ್ ಮಾಡುತ್ತಿದ್ದಾರೆ. ಕೆಲವು ಪುರುಷರು ಕೂಡ ಮಹಿಳೆಯರಂತೆ ಪಿಲ್ಲೋ ಜೊತೆಗೆ ಸನ್ ಗ್ಲಾಸ್, ಪರ್ಸ್, ಹೈ ಹೀಲ್ಸ್ ಧರಿಸಿ ಫೋಟೋಗಳನ್ನು ಶೇರ್ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ಈ ಫೋಟೋಗಳಿಗೆ ನೆಟ್ಟುಗರು ಲೈಕ್ಸ್, ಕಮೆಂಟ್‍ಗಳ ಸುರಿಮಳೆಯೇ ಸುರಿಸುತ್ತಿದ್ದಾರೆ.

  • ದೊಡ್ಡವರನ್ನು ಬಿಡದ ಕೊರೊನಾ – ಪ್ರಸಿದ್ಧ ವ್ಯಕ್ತಿಗಳಿಗೂ ಬಂದಿದೆ ಸೋಂಕು

    ದೊಡ್ಡವರನ್ನು ಬಿಡದ ಕೊರೊನಾ – ಪ್ರಸಿದ್ಧ ವ್ಯಕ್ತಿಗಳಿಗೂ ಬಂದಿದೆ ಸೋಂಕು

    ನವದೆಹಲಿ: ಜಗತ್ತಿನೆಲ್ಲೆಡೆ ಕೊರೊನಾ ವೈರಸ್ ತಾಂಡವಾಡುತ್ತಿದೆ. ಮೊದಲಿಗೆ ಚೀನಾದಲ್ಲಿ ಕಾಣಿಸಿಕೊಂಡು ಈ ಭಯಾನಕ ವೈರಸ್ ಇಂದು ಇಡೀ ವಿಶ್ವಕ್ಕೆ ದೊಡ್ಡ ತಲೆನೋವಾಗಿದೆ. ದಿನದಿಂದ ದಿನಕ್ಕೆ ತನ್ನ ವ್ಯಾಪ್ತಿಯನ್ನು ಜಾಸ್ತಿ ಮಾಡಿಕೊಳ್ಳುತ್ತಿರುವ ಈ ಮಹಾಮಾರಿ ಸೋಂಕು ಜನಸಾಮಾನ್ಯರಿಂದ ಹಿಡಿದು ವಿಐಪಿ ವ್ಯಕ್ತಿಗಳಿಗೆ ಬಂದಿದೆ.

    ಒಟ್ಟು 127 ರಾಷ್ಟ್ರ ಹಾಗೂ ಪ್ರಾಂತ್ಯಗಳಲ್ಲಿ ಕೊರೊನಾ ವೈರಸ್ ಹರಡಿದ್ದು, ಈವರೆಗೆ ಸುಮಾರು 1,34,769 ಮಂದಿಗೆ ಸೋಂಕು ತಗುಲಿದೆ ಎಂದು ವರದಿಯಾಗಿದೆ. ಅಲ್ಲದೇ ಚೀನಾದಲ್ಲಿ 3,117 ಮಂದಿ ಸೇರಿದಂತೆ ವಿಶ್ವದೆಲ್ಲೆಡೆ ಒಟ್ಟು 4,983 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಸುಮಾರು 70,388 ಮಂದಿ ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

    ಯಾರಿಗೆಲ್ಲ ಬಂದಿದೆ?
    ಕೆನಡಾ ದೇಶದ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಪತ್ನಿ ಸೋಫಿ ಗ್ರೆಗೊಯಿರ್-ಟ್ರುಡೊ, ಅವರಿಗೂ ಕೂಡ ಕೊರೊನಾ ವೈರಸ್ ಪಾಸಿಟಿವ್ ಕಾಣಿಸಿಕೊಂಡಿದೆ. ಆದರೆ ಪತ್ನಿಗೆ ಕಾಣಿಸಿಕೊಂಡರೂ ಕೆನಡಾ ಪ್ರಧಾನಿ ಟ್ರುಡೊ ಅವರಿಗೆ ಸೋಂಕಿನ ಯಾವುದೇ ಲಕ್ಷಣ ಕಾಣಿಸಿಕೊಂಡಿಲ್ಲ. ಅವರು ಆರೋಗ್ಯವಾಗಿಯೇ ಇದ್ದಾರೆ. ಇದನ್ನು ಓದಿ: 127 ರಾಷ್ಟ್ರ, ಪ್ರಾಂತ್ಯಗಳ ಮೇಲೆ ಕೊರೊನಾ ಕರಿ ನೆರಳು – ಸೋಂಕಿಗೆ ಬಲಿಯಾದವರೆಷ್ಟು? ಚೇತರಿಸಿಕೊಂಡವರೆಷ್ಟು?

    ಆಸ್ಟ್ರೇಲಿಯಾದ ವೇಗದ ಬೌಲರ್ ಕೇನ್ ರಿಚರ್ಡ್ಸನ್ ಸಾಂಕ್ರಾಮಿಕ ಕಾಯಿಲೆಯಿಂದ ಬಳಲುತ್ತಿದ್ದಾರೆ. ಸೌತ್ ಆಫ್ರಿಕಾದಿಂದ ಬಂದ ರಿಚರ್ಡ್ಸನ್ ತೀವ್ರತರವಾದ ಗಂಟಲು ನೋವು ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರನ್ನು ಕೂಡ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದ್ದು, ರಿಪೋರ್ಟ್‍ಗಾಗಿ ಕಾಯುತ್ತಿದ್ದಾರೆ.

    ದೇಶದ ಜನತೆಗೆ ಕೊರೊನಾ ಬಗ್ಗೆ ಅರಿವು ಮೂಡಿಸುತ್ತಿದ್ದ ಇಂಗ್ಲೆಂಡ್ ಆರೋಗ್ಯ ಸಚಿವೆಗೂ ಕೊರೊನಾ ವೈರಸ್ ಬಂದಿರುವುದು ಹೆಲ್ತ್ ಚೆಕಪ್ ವೇಳೆ ದೃಢಪಟ್ಟಿತ್ತು. ಇಂಗ್ಲೆಂಡ್‍ನ ಆರೋಗ್ಯ ಸಚಿವೆ ನಾಡಿನ್ ಡೋರಿಸ್‍ಗೆ ಕೊರೊನಾ ವೈರಸ್ ಇರುವುದು ದೃಢಪಟ್ಟಿದೆ. ವಿಷಯ ತಿಳಿದು ಬಂದ ಕೂಡಲೇ ಸ್ವತಃ ನಾಡಿನ್ ಡೋರಿಸ್ ಅವರೇ ಮನೆಯಿಂದ ಹೊರಗೆ ಬಾರದೇ ಗೃಹ ಬಂಧನದಲ್ಲಿದ್ದಾರೆ.

    ಸ್ಪೇನ್ ಸಮಾನತೆ ಸಚಿವ ಐರೀನ್ ಮೊಂಟೆರೊ ಅವರು ಕೊರೊನಾ ವೈರಸ್ ಪರೀಕ್ಷೆ ಮಾಡಿದಾಗ ಪಾಸಿಟಿವ್ ಬಂದಿತ್ತು. ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಸ್ಪೇನ್ ಅಧಿಕಾರಿಗಳು ಇಡೀ ಕ್ಯಾಬಿನೆಟ್ ಮತ್ತು ರಾಜಮನೆತನವನ್ನು ಪರೀಕ್ಷೆಗೆ ಒಳಪಡಿಸಿದ್ದರು. ಜೊತೆಗೆ ಆಸ್ಕರ್ ಪ್ರಶಸ್ತಿ ವಿಜೇತ ನಟ ಟಾಮ್ ಹ್ಯಾಂಕ್ಸ್ ಮತ್ತು ಅವರ ಪತ್ನಿ ರೀಟಾ ವಿಲ್ಸನ್ ಆಸ್ಟ್ರೇಲಿಯಾದಲ್ಲಿ ಕೊರೊನಾ ವೈರಸ್ ಪರೀಕ್ಷೆಗೆ ಒಳಪಡಿಸಿದಾಗ ಪಾಸಿಟಿವ್ ಬಂದಿದೆ ಖಚಿತಪಡಿಸಿದ್ದಾರೆ. ಇದನ್ನು ಓದಿ: 1 ವಾರ ಕರ್ನಾಟಕ ಲಾಕ್ ಡೌನ್- ಮಾಲ್, ಕಾಲೇಜುಗಳಿಗೆ ರಜೆ, ಜಾತ್ರೆ ರದ್ದು

    ಇರಾನ್‍ನ ಹಿರಿಯ ಉಪಾಧ್ಯಕ್ಷ ಇಶಾಕ್ ಜಹಾಂಗೇರಿ, ಸಾಂಸ್ಕೃತಿಕ ಪರಂಪರೆಯ ಸಚಿವ ಅಲಿ ಅಸ್ಗರ್ ಮತ್ತು ಕೈಗಾರಿಕಾ, ಗಣಿ ಮತ್ತು ವ್ಯವಹಾರ ಸಚಿವ ಮೌನೇಸನ್ ರೆಜಾ ರಹಮಾನ್ ಅವರಿಗೆ ಕೊರೊನ ವೈರಸ್ ಇರುವುದು ಪತ್ತೆಯಾಗಿದೆ.

    ಭಾರತದಲ್ಲಿ ಈವರೆಗೂ ಯಾವುದೇ ಪ್ರಸಿದ್ಧ ವ್ಯಕ್ತಿಗಳಲ್ಲಿ ಕೊರೊನಾ ವೈರಸ್ ಇರುವುದು ತಿಳಿದು ಬಂದಿಲ್ಲ.