Tag: celebration

  • ಜುಲೈ 12ರಂದು ಹುಟ್ಟುಹಬ್ಬ ಆಚರಿಸ್ತಿಲ್ಲ ಶಿವಣ್ಣ

    ಜುಲೈ 12ರಂದು ಹುಟ್ಟುಹಬ್ಬ ಆಚರಿಸ್ತಿಲ್ಲ ಶಿವಣ್ಣ

    ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಅವರು ಈ ವರ್ಷ ಅಂದರೆ ಜುಲೈ 12ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ.

    ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಶಿವರಾಜ್‍ಕುಮಾರ್ ಅವರು, ಹುಟ್ಟುಹಬ್ಬ ಮಾಡುತ್ತಿಲ್ಲ ಎಂದು ಅಲ್ಲ. ಆ ದಿನ ನನ್ನ ಶಸ್ತ್ರಚಿಕಿತ್ಸೆ ಇದೆ. ನನಗೆ ಭುಜದ ನೋವು ಆಗಾಗ ಕಾಣಿಸುತ್ತಿದೆ. ಹಾಗಾಗಿ ನಾನು ಶಸ್ತ್ರಚಿಕಿತ್ಸೆಗೆ ಹೋಗಬೇಕಾಗುತ್ತೆ. ಹುಟ್ಟುಹಬ್ಬ ನಂತರ ಹೋಗೋಣ ಎಂದುಕೊಂಡೆ. ಆದರೆ ನನಗೆ ಬೇರೆ ದಿನ ಅಪಾಯಿಂಟ್‍ಮೆಂಟ್ ಸಿಗಲಿಲ್ಲ. ಇದನ್ನು ಮಿಸ್ ಮಾಡಿದ್ರೆ ಅಗಸ್ಟ್ ವರೆಗೂ ಕಾಯಬೇಕು. ಹಾಗಾಗಿ ನಾನು ಲಂಡನ್‍ಗೆ ಹೋಗಲೇಬೇಕು ಎಂದರು.

    ಅಗಸ್ಟ್ ವರೆಗೂ ಕಾಯಬೇಕೆಂದರೆ ನೋವು ಜಾಸ್ತಿ ಆಗುತ್ತೆ. ಆಗ ನನ್ನ ಸಮಸ್ಯೆ ಜಾಸ್ತಿ ಆಗುತ್ತದೆ. ಅಭಿಮಾನಿಗಳಿಗೆ ಈ ಬಗ್ಗೆ ಗೊತ್ತು. ಅವರು ಕೂಡ ಆರೋಗ್ಯ ಮುಖ್ಯ ಹೋಗಿ ಬನ್ನಿ ಎಂದು ಹೇಳಿದ್ದಾರೆ. ನಾನು ಕೂಡ ನನ್ನ ಹುಟ್ಟುಹಬ್ಬವನ್ನು ಮಿಸ್ ಮಾಡಿಕೊಳ್ಳುತ್ತೇನೆ. ಏಕೆಂದರೆ ಅವರು ನನ್ನ ಹುಟ್ಟುಹಬ್ಬವನ್ನು ಹೇಗೆ ಸಂಭ್ರಮದಿಂದ ಆಚರಿಸುತ್ತಾರೋ, ನನಗೂ ಹಾಗೇ ಅವರ ಹುಟ್ಟುಹಬ್ಬ ಆಚರಿಸುವುದು ಸಂಭ್ರಮನೇ. ಅವರು ಮಿಸ್ ಮಾಡಿಕೊಂಡರೆ ನಾನು ಡಬಲ್ ಮಿಸ್ ಮಾಡಿಕೊಳ್ಳುತ್ತೇನೆ ಎಂದು ಹೇಳಿದರು.

    ನನ್ನ ಹುಟ್ಟುಹಬ್ಬಕ್ಕೆ ಸ್ವಲ್ಪ ರೇಗಾಟ, ಪ್ರೀತಿ, ಊಟ ಇರುತ್ತೆ. ಎಲ್ಲರೂ ಹಾಗೂ ಚಿತ್ರರಂಗದ ಸದಸ್ಯರು ಬಂದು ಶುಭಾಶಯ ತಿಳಿಸುತ್ತಾರೆ. ನಾನು ಇಲ್ಲಿ ಇಲ್ಲ ಎಂದರು ಅಭಿಮಾನಿಗಳು ಹುಟ್ಟುಹಬ್ಬವನ್ನು ಆಚರಿಸುತ್ತಾರೆ. ಹಾಗಾಗಿ ನಾನು ಲಂಡನ್‍ನಿಂದ ಹಿಂತಿರುಗಿ ಬಂದ ನಂತರ ಒಂದು ಗೆಟ್- ಟು-ಗೆದರ್ ಮಾಡುತ್ತೇನೆ ಎಂದು ನಟ ಶಿವರಾಜ್‍ಕುಮಾರ್ ತಿಳಿಸಿದರು.

    ನನಗೆ ಭುಜದ ನೋವಿದೆ. ನನಗೆ ಚಿಕಿತ್ಸೆ ನೀಡಿದ್ದ ವೈದ್ಯರೇ ಶಾರೂಕ್ ಖಾನ್ ಹಾಗೂ ಎಸ್. ಎಂ ಕೃಷ್ಣ ಅವರಿಗೂ ಚಿಕಿತ್ಸೆ ನೀಡುತ್ತಿದ್ದಾರೆ. ಸರ್ಜರಿ ಮಾಡಿದ ಬಳಿಕ ನಾಲ್ಕು ತಿಂಗಳು ಆ್ಯಕ್ಷನ್ ಸೀನ್ ಮಾಡಬಾರದು. ನಾಲ್ಕು ತಿಂಗಳ ಮೇಲೆಯೇ ಆ್ಯಕ್ಷನ್ ಸೀನ್ ಮಾಡಲಿದ್ದೇನೆ. ಚಿಕ್ಕ ಪುಟ್ಟ ಆ್ಯಕ್ಷನ್ ಸೀನ್ ಮಾಡಬಹುದು. ಬಳಿಕ ‘ಭಜರಂಗಿ- 2’ ಚಿತ್ರದಲ್ಲಿ ಸಾಕಷ್ಟು ಆ್ಯಕ್ಷನ್ ಸೀನ್ ಇದೆ. ಆ ಚಿತ್ರೀಕರಣದಲ್ಲಿ ತೊಡಗಿಕೊಳ್ಳುತ್ತೇನೆ ಎಂದು ಶಿವರಾಜ್‍ಕುಮಾರ್ ಹೇಳಿದರು.

  • ಕಾಡು ಮನುಷ್ಯರ ವೇಷದಲ್ಲಿ ಬರ್ತ್ ಡೇ ಆಚರಿಸಿಕೊಂಡ ಯುವಕ

    ಕಾಡು ಮನುಷ್ಯರ ವೇಷದಲ್ಲಿ ಬರ್ತ್ ಡೇ ಆಚರಿಸಿಕೊಂಡ ಯುವಕ

    ಕಾರವಾರ: ಹಲವು ಜನರಿಗೆ ತಮ್ಮ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿಕೊಳ್ಳಬೇಕು ಅನ್ನುವ ಆಸೆ ಇರುತ್ತದೆ. ಕೆಲವರು ಗೆಳೆಯರ ಜೊತೆ ಸೇರಿ ಭರ್ಜರಿ ಗುಂಡು-ತುಂಡಿನ ಪಾರ್ಟಿ ಮಾಡಿ ಆಚರಿಸಿಕೊಳ್ಳುತ್ತಾರೆ. ಆದರೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಯುವಕನೊಬ್ಬ ಕಾಡು ಮನುಷ್ಯರ ವೇಷದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾನೆ.

    ಕಾರವಾರದ ದೇವಲಿವಾಡದ ವಿಘ್ನೇಶ್ ಪೆಡ್ನೇಕರ್ ವಿಶೇಷವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾನೆ. ವಿಘ್ನೇಶ್ ತಮ್ಮ ಜಿಲ್ಲೆಯ ಹೆಮ್ಮೆಯ ಸಿದ್ದಿ ಜನಾಂಗದ ಸಾಂಪ್ರದಾಯಿಕ ಕಾಡು ಜನರ ಉಡುಗೆ ತೊಟ್ಟು ತನ್ನ 18ನೇ ವಯಸ್ಸಿನ ಜನ್ಮದಿನವನ್ನು ತನ್ನ ಗೆಳೆಯರೊಂದಿಗೆ ಆಚರಿಸಿಕೊಂಡಿದ್ದಾನೆ.

    ವಿಘ್ನೇಶ್ ಪೆಡ್ನೇಕರ್ ಪ್ರತಿ ವರ್ಷ ಬರುವ ಸುಗ್ಗಿ ಹಬ್ಬದಲ್ಲಿ ಹೆಣ್ಣಿನ ವೇಷ ತೊಟ್ಟು ಸುಗ್ಗಿ ಕುಣಿತ ಮಾಡುತ್ತಾನೆ. ಈತನಿಗೆ ತನ್ನ ಜನುಮ ದಿನದಂದು ತಮ್ಮ ಊರಿನ ಕಾಡು ಜನರ (ಸಿದ್ದಿ ಜನಾಂಗ) ವೇಷ ತೊಟ್ಟು ವಿಶಿಷ್ಟವಾಗಿ ಜನುಮದಿನ ಆಚರಿಸುವ ಹಂಬಲವಿತ್ತು.

    ಹೀಗಾಗಿ ತನ್ನ 18ನೇ ವರ್ಷದ ಹುಟ್ಟುಹಬ್ಬಕ್ಕಾಗಿ ಈ ವಿಶಿಷ್ಟ ಉಡುಪನ್ನು ಧರಿಸಿ ನೃತ್ಯ ಮಾಡುವ ಮೂಲಕ ಗೆಳೆಯರೊಂದಿಗೆ ತನ್ನ ಜನುಮದಿನವನ್ನು ಸಂಭ್ರಮಿಸಿದ್ದಾನೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಮುಂಗಾರು ಸಾಂಸ್ಕೃತಿಕ ಹಬ್ಬಕ್ಕೆ ಅದ್ಧೂರಿ ಚಾಲನೆ ಕೊಟ್ಟ ರಾಯಚೂರು ಮಂದಿ

    ಮುಂಗಾರು ಸಾಂಸ್ಕೃತಿಕ ಹಬ್ಬಕ್ಕೆ ಅದ್ಧೂರಿ ಚಾಲನೆ ಕೊಟ್ಟ ರಾಯಚೂರು ಮಂದಿ

    ರಾಯಚೂರು: ಕಳೆದ 19 ವರ್ಷಗಳಿಂದ ಕಾರಹುಣ್ಣಿಮೆ ಹಿನ್ನೆಲೆ ಪ್ರತೀವರ್ಷ ರಾಯಚೂರಿನಲ್ಲಿ ವಿಜೃಂಭಣೆಯಿಂದ ಮುಂಗಾರು ಸಾಂಸ್ಕೃತಿಕ ಹಬ್ಬ ಆಚರಿಸಿಕೊಂಡು ಬರಲಾಗುತ್ತಿದೆ. ಅದರಂತೆ ಈ ಬಾರಿ ಕೂಡ ಮುಂಗಾರು ಹಬ್ಬಕ್ಕೆ ರಾಯಚೂರು ಮಂದಿ ಅದ್ಧೂರಿ ಚಾಲನೆ ಕೊಟ್ಟು ಆಚರಿಸುತ್ತಿದ್ದಾರೆ.

    ನಗರದ ರಾಜೇಂದ್ರ ಗಂಜ್ ನಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಮುಂಗಾರು ಸಾಂಸ್ಕೃತಿಕ ಹಬ್ಬ ನಡೆಯಲಿದೆ. ಈ ವಿಶೇಷ ಹಬ್ಬಕ್ಕೆ ಸೋಮವಾರಪೇಟೆ ಮಠದ ಶ್ರೀಗಳು ಹಾಗೂ ರಾಯಚೂರು ಸಂಸದ ಅಮರೇಶ್ವರ್ ನಾಯಕ್ ಚಾಲನೆ ನೀಡಿದರು.

    300 ಕಾಪು ಸಮಾಜದವರು ಹಬ್ಬವನ್ನ ಆಯೋಜನೆ ಮಾಡುತ್ತಿದ್ದು, ಅವರ ಕುಲದೇವತೆ ಲಕ್ಷ್ಮಮ್ಮ ದೇವಿ ಮೆರವಣಿಗೆಯನ್ನ ನಾಳೆ ನಗರದಲ್ಲಿ ಅದ್ಧೂರಿಯಾಗಿ ನಡೆಸಲಿದ್ದಾರೆ. ಕಾರಹಣ್ಣಿಮೆ ಹಿನ್ನೆಲೆ ಮುಂಗಾರು ಹೊಸ್ತಿಲಲ್ಲಿ ರೈತರಲ್ಲಿ ಕೃಷಿ ಚಟುವಟಿಕೆಗೆ ಪ್ರೋತ್ಸಾಹ ನೀಡಲು ಈ ಸಾಂಸ್ಕೃತಿಕ ಹಬ್ಬವನ್ನ ಆಚರಿಸಲಾಗುತ್ತಿದೆ.

    ಅಲ್ಲದೆ ವಿವಿಧ ರಾಜ್ಯಗಳಿಂದ ಆಗಮಿಸಿದ ಬೃಹದಾಕಾರದ ಜೋಡಿ ಎತ್ತುಗಳ ಭಾರ ಎಳೆಯುವ ಸ್ಪರ್ಧೆ, ಕುಸ್ತಿ, ಕಲ್ಲು ಎತ್ತುವ ಸ್ಪರ್ಧೆ ಸೇರಿದಂತೆ ವಿವಿಧ ಜಾನಪದ ಕ್ರೀಡೆಗಳು ಮುಂಗಾರು ಹಬ್ಬದಲ್ಲಿ ನಡೆಯಲಿದ್ದು, ಈ ಸ್ಪರ್ಧೆಗಳು ಹಬ್ಬದ ಪ್ರಮುಖ ಆಕರ್ಷಣೆಯಾಗಿದೆ. ಹಾಗೆಯೇ ಹಬ್ಬ ನಡೆಯುವ ಮೂರು ದಿನಗಳು ಕೂಡ ಸಂಜೆ ವಿವಿಧ ರಾಜ್ಯಗಳ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರನ್ನು ಮನರಂಜಿಸಲಿದೆ.

    ಅಷೇ ಅಲ್ಲದೆ ಈ ವಿಶೇಷ ಹಬ್ಬದಲ್ಲಿ ರಾಯಚೂರು ಸಂಸದ ಅಮರೇಶ್ವರ್ ನಾಯಕ್ ಅವರ ಜನ್ಮದಿನ ಇದ್ದಿದ್ದರಿಂದ ಕಾರ್ಯಕ್ರಮ ಆಯೋಜಕರು ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿ ಸಂಭ್ರಮಿಸಿದರು.

  • ದಾವಣಗೆರೆಯ ಚಿತ್ರಮಂದಿರದಲ್ಲಿ ಡಿ-ಬಾಸ್ ಅಭಿಮಾನಿಗಳಿಂದ ಸಂಭ್ರಮಾಚರಣೆ

    ದಾವಣಗೆರೆಯ ಚಿತ್ರಮಂದಿರದಲ್ಲಿ ಡಿ-ಬಾಸ್ ಅಭಿಮಾನಿಗಳಿಂದ ಸಂಭ್ರಮಾಚರಣೆ

    ದಾವಣಗೆರೆ: ಚಾಲೆಂಜಿಂಗ್ ಸ್ಟಾರ್ ದರ್ಶನ ಅಭಿನಯದ ‘ಯಜಮಾನ’ ಚಿತ್ರ 100 ದಿನಗಳ ಪೂರೈಸಿದ್ದು, ದಾವಣಗೆರೆಯ ಗೀತಾಂಜಲಿ ಚಿತ್ರಮಂದಿರದಲ್ಲಿ ಅಭಿಮಾನಿಗಳು ಕೇಕ್ ಕತ್ತರಿಸಿ ಸಿಹಿ ಹಂಚುವ ಮೂಲಕ ಸಂಭ್ರಮಾಚರಣೆ ಮಾಡಿದ್ದಾರೆ.

    ಜಿಲ್ಲಾ ದರ್ಶನ್ ಅಭಿಮಾನಿ ಸಂಘ ಈ ಆಚರಣೆ ಮಾಡಿ ಡಿ-ಬಾಸ್ ಗೆ ಜೈಕಾರ ಹಾಕಿದರು. ದರ್ಶನ್ ಅಭಿನಯದ ಯಜಮಾನ ಚಿತ್ರ ರಾಜ್ಯದಲ್ಲಿ ಯಶಸ್ವಿ ಪ್ರದರ್ಶನವಾಗಿದ್ದು, ಹತ್ತಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ನೂರು ದಿನ ಪೂರೈಸಿದೆ. ಕನ್ನಡ ಚಿತ್ರ ನೂರು ದಿನ ಪೂರೈಸುವುದೇ ಕಷ್ಟವಾಗಿದ್ದು, ಅಂತಹದರಲ್ಲಿ ಯಜಮಾನ 100 ದಿನ ಪೂರೈಸಿದೆ ಎಂದು ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದರು.

    ಯಜಮಾನ ಚಿತ್ರ ಮಾರ್ಚ್ 1ರಂದು ವಿಶ್ವಾದ್ಯಂತ ಬಿಡುಗಡೆಯಾಗಿತ್ತು. ಈ ಚಿತ್ರ ಬಿಡುಗಡೆಯಾಗುವಾಗ ದರ್ಶನ್ ಅವರ 80 ಅಡಿ ಎತ್ತರದ ಕಟೌಟ್‍ಗೆ ಅಭಿಮಾನಿಗಳು ಹಾಲಿನ ಅಭಿಷೇಕ ಮಾಡಿದ್ದರು. ಕಟೌಟ್ ಜೊತೆಗೆ ಮೊದಲ ಬಾರಿಗೆ ದರ್ಶನ್ ಪುತ್ರ ವಿನೀಶ್‍ನ 30 ಅಡಿ ಕಟೌಟನ್ನು ಕೂಡ ಹಾಕಲಾಗಿತ್ತು. ದರ್ಶನ್ ಅವರ ಯಜಮಾನ ಚಿತ್ರದಲ್ಲಿ ಅವರ ಮಗ ವಿನೀಶ್ ಅವರು ಒಂದು ವಿಶೇಷ ಹಾಡಿನಲ್ಲಿ ನಟಿಸಿದ್ದಾನೆ.

    ಈ ಚಿತ್ರದ ಟ್ರೈಲರ್ ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಅಲ್ಲದೇ ಯೂಟ್ಯೂಬ್ ಸಂಸ್ಥೆ ತನ್ನ ಟ್ವಿಟ್ಟರ್ ಖಾತೆಯಲ್ಲಿ, “ಈ ಅತಿಥಿ ಯಾವಾಗಲೂ ಗ್ರ್ಯಾಂಡ್ ಎಂಟ್ರಿ ಪಡೆಯುತ್ತಾರೆ. ಈ ಟ್ರೈಲರ್ ನೋಡಿದ್ದಾಗ ನಿಮಗೆ ಗೊತ್ತಾಗುತ್ತೆ” ಎಂದು ಚಿತ್ರದ ಫೋಟೋಗಳನ್ನು ಹಾಗೂ ಟ್ರೈಲರ್ ಲಿಂಕ್ ಹಾಕಿ ಟ್ವೀಟ್ ಮಾಡಿತ್ತು.

    ಯಜಮಾನ ಚಿತ್ರದಲ್ಲಿ ದರ್ಶನ್‍ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ಹಾಗೂ ತಾನ್ಯ ಹೋಪ್ ಮಿಂಚಿದ್ದರು. ಡೈನಾಮಿಕ್ ಸ್ಟಾರ್ ದೇವರಾಜ್, ರವಿಶಂಕರ್, ಡಾಲಿ ಧನಂಜಯ್, ದತ್ತಣ್ಣ, ಶಿವರಾಜ್. ಕೆ.ಆರ್ ಪೇಟೆ, ಸಾಧುಕೋಕಿಲ ಸೇರಿದಂತೆ ಅತಿ ದೊಡ್ಡ ತಾರಾಬಳಗವೇ ಈ ಚಿತ್ರದಲ್ಲಿ ಇತ್ತು.

    ಈ ಚಿತ್ರವನ್ನು ಪೋನ್‍ಕುಮಾರ್ ಹಾಗೂ ವಿ. ಹರಿಕೃಷ್ಣ ಜಂಟಿಯಾಗಿ ನಿರ್ದೇಶಿಸಿದ್ದರು. ಸಂಗೀತ ನಿರ್ದೇಶಕರಾಗಿ ಬಜಾರ್ ನಲ್ಲಿ ಮಿನುಗುತ್ತಿರುವ ಹರಿಕೃಷ್ಣ, ಯಜಮಾನನಿಗಾಗಿ ಡೈರೆಕ್ಟರ್ ಕ್ಯಾಪ್ ತೊಟ್ಟು ನಿರ್ದೇಶಕರಾಗಿದ್ದರು. ಈ ಚಿತ್ರವನ್ನು ಶೈಲಜಾ ನಾಗ್ ಹಾಗೂ ಬಿ. ಸುರೇಶ್ ನಿರ್ಮಿಸಿದ್ದಾರೆ.

  • ಎಕ್ಸಾಂ ಮುಗಿದಿದ್ದಕ್ಕೆ ಬಣ್ಣ ಎರಚಿ ಡಾನ್ಸ್ ಮಾಡಿ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಸಂಭ್ರಮ

    ಎಕ್ಸಾಂ ಮುಗಿದಿದ್ದಕ್ಕೆ ಬಣ್ಣ ಎರಚಿ ಡಾನ್ಸ್ ಮಾಡಿ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಸಂಭ್ರಮ

    ಬೆಳಗಾವಿ(ಚಿಕ್ಕೋಡಿ): ಎಂಜಿನಿಯರಿಂಗ್ ಕೊನೆಯ ಪರೀಕ್ಷೆ ಮುಗಿದಿದ್ದಕ್ಕೆ ವಿದ್ಯಾರ್ಥಿಗಳು ಹರ್ಷೋದ್ಘಾರ ವ್ಯಕ್ತಪಡಿಸಿದ ದೃಶ್ಯ ಬೆಳಗಾವಿಯಲ್ಲಿ ಕಂಡು ಬಂದಿದೆ.

    ಜಿಲ್ಲೆಯ ಹುಕ್ಕೇರಿ ತಾಲೂಕಿನ ನಿಡಸೋಶಿ ಗ್ರಾಮದಲ್ಲಿರುವ ಹೀರಾಶುಗರ್ ಇನಿಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ಈ ದೃಶ್ಯ ಕಂಡು ಬಂದಿದೆ. ಬಿಇ ಕೊನೆಯ ಎಕ್ಸಾಂ ಮುಗಿದಿದ್ದಕ್ಕೆ ವಿದ್ಯಾರ್ಥಿಗಳು ಹೋಳಿ ಹಬ್ಬದಂತೆ ಬಣ್ಣ ಎರಚಿ ಖುಷಿಪಟ್ಟಿದ್ದಾರೆ.

    ಬಣ್ಣ ಎರಚಿ ಕಾಯಿ ಒಡೆದು ಡಾನ್ಸ್ ಮಾಡಿ ಕುಣಿದು ಕುಪ್ಪಳಿಸಿದ್ದಾರೆ. ಬಳಿಕ ಕಾಲೇಜು ಗೇಟಿಗೆ ಕರ್ಪೂರದಿಂದ ಪೂಜೆ ಮಾಡಿ ವಿದ್ಯಾರ್ಥಿಗಳು ಈಡುಗಾಯಿ ಒಡೆದಿದ್ದಾರೆ.

    ಮೇ 28ರಂದು ಬಿಇ ಪರೀಕ್ಷೆ ಶುರುವಾಗಿದ್ದು, ಮಂಗಳವಾರ ಅಂತ್ಯಗೊಂಡಿದೆ. ಈ ಖುಷಿಗಾಗಿ ವಿದ್ಯಾರ್ಥಿಗಳು ಕಾಲೇಜು ಮುಂಭಾಗದಲ್ಲೇ ಸಂಭ್ರಮಿಸಿದ್ದಾರೆ.

  • ಟೀಂ ಇಂಡಿಯಾ ಜೆರ್ಸಿ ಧರಿಸಿ ಅಭಿಮಾನಿಗಳಿಂದ ಪಾಕ್ ಸೋಲು ಸಂಭ್ರಮ

    ಟೀಂ ಇಂಡಿಯಾ ಜೆರ್ಸಿ ಧರಿಸಿ ಅಭಿಮಾನಿಗಳಿಂದ ಪಾಕ್ ಸೋಲು ಸಂಭ್ರಮ

    ನಾಟಿಂಗ್‍ಹ್ಯಾಮ್: ಭಾರತದ ಅಭಿಮಾನಿಗಳು ಟೀಂ ಇಂಡಿಯಾ ಜೆರ್ಸಿ ಧರಿಸಿ ಮೈದಾನದಲ್ಲಿಯೇ ಪಾಕಿಸ್ತಾನದ ಸೋಲನ್ನು ಸಂಭ್ರಮಿಸಿದ್ದಾರೆ.

    ಪಾಕಿಸ್ತಾನ ಕ್ರಿಕೆಟ್ ತಂಡ, ವಿಶ್ವಕಪ್‍ನಲ್ಲಿ ಸೋಲಿನ ಮೂಲಕ ಅಭಿಯಾನವನ್ನು ಆರಂಭಿಸಿದೆ. ಪಂದ್ಯದಲ್ಲಿ 105 ರನ್ ಗಳಿಗೆ ಪಾಕ್ ತಂಡವನ್ನು ಕಟ್ಟಿ ಹಾಕಿದ್ದ ವಿಂಡೀಸ್ 13.4 ಓವರ್ ಗಳಲ್ಲಿ ಗುರಿ ತಲುಪಿ 7 ವಿಕೆಟ್‍ಗಳ ಭರ್ಜರಿ ಜಯಗಳಿಸಿದೆ.

    ಶುಕ್ರವಾರ ಪಾಕಿಸ್ತಾನ ಪಂದ್ಯದಲ್ಲಿ ಸೋಲನ್ನು ಕಂಡ ನಂತರ ಜನರು ಟ್ರೋಲ್ ಹಾಗೂ ಮೀಮ್ಸಿ ಮಾಡಲು ಶುರು ಮಾಡಿದ್ದಾರೆ. ಅಲ್ಲದೆ ಭಾರತದ ಅಭಿಮಾನಿಗಳು ಮೈದಾನದಲ್ಲೇ ಟೀಂ ಇಂಡಿಯಾ ಜೆರ್ಸಿ ಧರಿಸಿ ಪಾಕಿಸ್ತಾನದ ಸೋಲು ಸಂಭ್ರಮಿಸುತ್ತಿರುವ ಫೋಟೋಗಳು ವೈರಲ್ ಆಗುತ್ತಿದೆ.

    https://twitter.com/anoushkaax/status/1134443411824623616?ref_src=twsrc%5Etfw%7Ctwcamp%5Etweetembed%7Ctwterm%5E1134443411824623616&ref_url=https%3A%2F%2Fzeenews.india.com%2Fmarathi%2Fsports%2Fworld-cup-2019-viral-video-team-india-fans-celebrate-pakistan-defeat%2F475699

    ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲೇ ಅಲ್ಪ ಮೊತ್ತಕ್ಕೆ ಪಾಕ್ ಆಲೌಟ್ ಆಗುತ್ತಿದಂತೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‍ಗೆ ಒಳಗಾಗಿದೆ. ವಿಶ್ವಕಪ್‍ನಂತಹ ದೊಡ್ಡ ಟೂರ್ನಿಗಳಲ್ಲಿ ತಮ್ಮ ತಂಡ ಹೀಗೆ ಅಲ್ಪ ಮೊತ್ತಕ್ಕೆ ಆಲೌಟ್ ಆಗಿದ್ದನ್ನು ಕಂಡ ಪಾಕ್ ಕ್ರಿಕೆಟ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    https://twitter.com/RoshanKrRai/status/1134448991758737408

    ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ 106 ಗುರಿ ನೀಡಿತ್ತು. 106 ರನ್‍ಗಳ ಅಲ್ಪ ರನ್ ಗುರಿ ಬೆನ್ನಟ್ಟಿದ ವೆಸ್ಟ್ ಇಂಡೀಸ್ ಕೇವಲ 13.4 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 108 ರನ್ ಗಳಿಸಿ ಟೂರ್ನಿಯಲ್ಲಿ ಮೊದಲ ಗೆಲುವು ಪಡೆಯಿತು.

  • ಕಿಡಿಗೇಡಿಗಳಿಂದ ರಾಸಾಯನಿಕ ಮಿಶ್ರಣ – ಸಂಭ್ರಮಿಸುತ್ತಿದ್ದ ಬಿಜೆಪಿ ಕಾರ್ಯಕರ್ತರು ಆಸ್ಪತ್ರೆಗೆ ದಾಖಲು

    ಕಿಡಿಗೇಡಿಗಳಿಂದ ರಾಸಾಯನಿಕ ಮಿಶ್ರಣ – ಸಂಭ್ರಮಿಸುತ್ತಿದ್ದ ಬಿಜೆಪಿ ಕಾರ್ಯಕರ್ತರು ಆಸ್ಪತ್ರೆಗೆ ದಾಖಲು

    ಹಾವೇರಿ: ಬ್ಯಾಡಗಿ ಪುರಸಭೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಗೆದ್ದ ಹಿನ್ನೆಲೆಯಲ್ಲಿ ಸಂಭ್ರಮಿಸುತ್ತಿದ್ದ 16 ಬಿಜೆಪಿ ಕಾರ್ಯಕರ್ತರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಬ್ಯಾಡಗಿ ಪಟ್ಟಣದ 15 ಮತ್ತು 16ನೇ ವಾರ್ಡಿನಲ್ಲಿ ಸ್ಪರ್ಧಿಸಿದ್ದ ಹನುಮಂತಪ್ಪ ಮತ್ತು ಸುಭಾಶ್ ಜಯಗಳಿಸಿದ್ದರು. ಈ ವೇಳೆ ಅಭಿಮಾನಿಗಳು ಬಣ್ಣದ ನೀರನ್ನು ಎಸೆದು ಸಂಭ್ರಮಿಸಿದ್ದಾರೆ. ಬಣ್ಣದ ನೀರಿಗೆ ಯಾರೋ ಕಿಡಿಗೇಡಿಗಳು ರಾಸಾಯನಿಕ ಮಿಶ್ರಣ ಮಾಡಿದ್ದರಿಂದ ಬಿಜೆಪಿ ಕಾರ್ಯಕರ್ತರು ಅಸ್ವಸ್ಥರಾಗಿದ್ದಾರೆ.

    16 ಮಂದಿ ಕಾರ್ಯಕರ್ತರು ಅಲರ್ಜಿ, ಮೈ ಕೆರೆತದಿಂದ ಬಳಲುತ್ತಿದ್ದು ಅಸ್ವಸ್ಥರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ. ಸ್ಥಳಕ್ಕೆ ಬ್ಯಾಡಗಿ ಪೊಲೀಸರು ಹಾಗೂ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಭೇಟಿ ನೀಡಿ ಆರೋಗ್ಯ ವಿಚಾರಣೆ ನಡೆಸಿದ್ದಾರೆ.

    ಈ ಸಂಬಂಧ ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ‘ರಾಬರ್ಟ್’ ಸೆಟ್‍ನಲ್ಲಿ ಸುಮಲತಾ ಗೆಲುವಿನ ಸಂಭ್ರಮ

    ‘ರಾಬರ್ಟ್’ ಸೆಟ್‍ನಲ್ಲಿ ಸುಮಲತಾ ಗೆಲುವಿನ ಸಂಭ್ರಮ

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ‘ರಾಬರ್ಟ್’ ಸೆಟ್‍ನಲ್ಲಿ ಸುಮಲತಾ ಅವರ ಗೆಲುವನ್ನು ಕೇಕ್ ಕತ್ತರಿಸುವ ಮೂಲಕ ಸಂಭ್ರಮಿಸಿದ್ದಾರೆ.

    ರಾಬರ್ಟ್ ಸಿನಿಮಾ ಸೆಟ್‍ನಲ್ಲಿ ದರ್ಶನ್ ಅವರು ಕೇಕ್ ಕಟ್ ಮಾಡುವ ಮೂಲಕ ಸುಮಲತಾ ಅವರ ಗೆಲುವನ್ನು ಸಂಭ್ರಮಿಸಿದ್ದಾರೆ. ದರ್ಶನ್ ಕೇಕ್ ಕಟ್ ಮಾಡಿದ ಫೋಟೋವನ್ನು ಚಿತ್ರದ ನಿರ್ದೇಶಕ ತರುಣ್ ಸುಧೀರ್ ಅವರು ತಮ್ಮ ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದಾರೆ.

    ತರುಣ್ ಸುಧೀರ್ ತಮ್ಮ ಟ್ವಿಟ್ಟರಿನಲ್ಲಿ, “ಮಂಡ್ಯ ಜನತೆಗೆ ಗೊತ್ತು, ಯಾವುದು ಸರಿ ಯಾವುದು ತಪ್ಪು. ಸ್ವಾಭಿಮಾನಕ್ಕೆ ಇದೆ ತಾಕತ್ತು. ಅದಕ್ಕೆ ಗೆದ್ದು ಬಂತು ಜೋಡೆತ್ತು. ಶುಭಾಶಯಗಳು ಸುಮಲತಾ ಅಮ್ಮ. ನಿಮ್ಮ ಗೆಲುವು ಚಿತ್ರರಂಗದ ಹೆಮ್ಮೆ” ಎಂದು ಬರೆದು ಟ್ವೀಟ್ ಮಾಡಿದ್ದಾರೆ.

    ಫಲಿತಾಂಶ ಹೊರಬಂದ ಮಂಡ್ಯ ಜನತೆಗೆ ಧನ್ಯವಾದ ತಿಳಿಸಿ ವಿಡಿಯೋ ಟ್ವೀಟ್ ಮಾಡಿರುವ ದರ್ಶನ್, ಮಂಡ್ಯ ಲೋಕಸಭಾ ಜನತೆ ತೋರಿಸುವ ಜನತೆಯ ಪ್ರೀತಿಗೆ ಸದಾ ಚಿರಋಣಿಯಾಗಿರುತ್ತೇನೆ. ಅಂದು ಒಂದೇ ಮಾತು ಹೇಳಿದ್ದು, ಈಗಲೂ ಅದನ್ನೇ ಹೇಳುತ್ತೇನೆ. ಸಾವಯುವವರೆಗೂ ನಿಮ್ಮ ಋಣದಲ್ಲಿ ಇರುತ್ತೇವೆ ಎಂದಿದ್ದರು.

    ಮಂಡ್ಯದಲ್ಲಿ ನಡೆದ ಸ್ವಾಭಿಮಾನಿ ವರ್ಸಸ್ ಸರ್ಕಾರದ ನಡುವಿನ ಸಮರದಲ್ಲಿ ಸುಮಲತಾ ಅವರು ಭರ್ಜರಿ ಗೆಲುವು ಪಡೆದಿದ್ದಾರೆ. ಚುನಾವಣೆಯಲ್ಲಿ ನಿಖಿಲ್ ಅವರಿಗೆ 5,71,777 ಮತ ಲಭಿಸಿದ್ದರೆ, ಸುಮಲತಾ ಅವರಿಗೆ 6,98,213 ಮತ ಲಭಿಸಿದೆ. ಆ ಮೂಲಕ ಸುಮಲತಾ ಅವರು ಬರೋಬ್ಬರಿ 1,26,436 ಮತಗಳ ಅಂತರದಿಂದ ಗೆಲುವು ಪಡೆದಿದ್ದಾರೆ.

  • 39 ವರ್ಷಗಳ ಬಳಿಕ ಗ್ರಾಮದಲ್ಲಿ ದ್ಯಾಮಮ್ಮ ದೇವಿ ಜಾತ್ರೆ

    39 ವರ್ಷಗಳ ಬಳಿಕ ಗ್ರಾಮದಲ್ಲಿ ದ್ಯಾಮಮ್ಮ ದೇವಿ ಜಾತ್ರೆ

    ಕೊಪ್ಪಳ: ಜಿಲ್ಲೆಯ ಈ ಗ್ರಾಮದಲ್ಲಿ ಕಳೆದ 39 ವರ್ಷಗಳಿಂದ ಜಾತ್ರೆ ಆಗಿರಲಿಲ್ಲ. ದೇವಿ ಪ್ರಸಾದ (ವರ) ಕೊಟ್ಟಿರಲಿಲ್ಲ ಎನ್ನುವ ಕಾರಣಕ್ಕೆ 39 ವರ್ಷಗಳಿಂದ ಜಾತ್ರೆ ಎನ್ನುವುದೇ ಮರೆತು ಹೋಗಿತ್ತು. ಆದರೆ ದೇವಿ ಈ ಬಾರಿ ಪ್ರಸಾದ ಕೊಟ್ಟ ಕಾರಣ ಈ ಬಾರಿ ಅತ್ಯಂತ ಸಂಭ್ರಮದಿಂದ ರಥೋತ್ಸವ ಜರುಗಿತು.

    ಕೊಪ್ಪಳ ತಾಲೂಕಿನ ಹಲಗೇರಿ ಗ್ರಾಮದ ದ್ಯಾಮಮ್ಮ ದೇವಿಯ ಜಾತ್ರೆ 39 ವರ್ಷಗಳಿಂದ ಬಳಿಕ ಬುಧವಾರ ಅದ್ಧೂರಿಯಾಗಿ ರಥೋತ್ಸವ ನಡೆಯಿತು. ಹಲಗೇರಿ ಗ್ರಾಮದಲ್ಲಿ ಕಳೆದ 39 ವರ್ಷದಿಂದ ಜಾತ್ರೆ ನಡೆದಿರಲಿಲ್ಲ, ದ್ಯಾಮಮ್ಮ ದೇವಿ ವರ ಕೊಟ್ಟಿಲ್ಲ ಎನ್ನುವ ಕಾರಣಕ್ಕೆ ದೇವಿಯ ಜಾತ್ರೆಯನ್ನು ಮಾಡಲು ಗ್ರಾಮಸ್ಥರು ಹಿಂದೇಟು ಹಾಕಿದ್ದರು.

    ಈ ಬಾರಿ ದ್ಯಾಮಮ್ಮ ದೇವಿ ವರ ಕೊಟ್ಟ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಬುಧವಾರ ಜಾತ್ರೆ ಆಚರಣೆ ಮಾಡಲಾಯಿತು. ಕಳೆದ 9 ದಿನಗಳಿಂದ ಗ್ರಾಮದಲ್ಲಿ ದ್ಯಾಮಮ್ಮ ದೇವಿಯ ಜಾತ್ರೆ ಕಾರ್ಯಕ್ರಮಗಳು ಚಾಲನೆಯಲ್ಲಿದ್ದವು, ಬುಧವಾರ ದ್ಯಾಮಮ್ಮ ದೇವಿಯ ಮಾಹಾರಥೋತ್ಸವ ಜರುಗಿದ್ದು, 39 ವರ್ಷಗಳ ಬಳಿಕ ಗ್ರಾಮದಲ್ಲಿ ಜಾತ್ರೆ ಕಂಡು ಗ್ರಾಮಸ್ಥರು ಫುಲ್ ಖುಷಿ ಆಗಿದ್ದರು. ಈ ಬಾರಿ ದೇವಿ ವರ ಕೊಟ್ಟ ಕಾರಣ ಗ್ರಾಮಸ್ಥರು ದೇವಿಗೆ ನೂತನ ರಥ ಮಾಡಸಿದ್ದರು. ಕಳೆದ 9 ದಿನಗಳಿಂದ ಗ್ರಾಮದಲ್ಲಿ ಹಲವು ಕಟ್ಟು ಪಾಡುಗಳನ್ನು ಹಾಕಲಾಗಿತ್ತು. ಜಾತ್ರೆಯ ಹಿನ್ನೆಲೆಯಲ್ಲಿ ಯಾರೂ ಚಪ್ಪಲಿ ಧರಿಸುವಂತಿಲ್ಲ ಹಾಗೂ ಯಾರೇ ಗ್ರಾಮದಿಂದ ಹೊರಹೋದರು ಸಂಜೆ ಗ್ರಾಮಕ್ಕೆ ಬರಬೇಕು ಎಂದು ನಿಯಮಗಳನ್ನು ಹಾಕಲಾಗಿತ್ತು.

    ಈ ಎಲ್ಲ ಕಟ್ಟು ಪಾಡುಗಳ ಮಧ್ಯೆ ಬುಧವಾರ ದ್ಯಾಮಮ್ಮ ದೇವಿ ಜಾತ್ರೆ ಅದ್ಧೂರಿಯಾಗಿ ನಡೆಯಿತು. ರಥೋತ್ಸವಕ್ಕೆ ಅಭಿನವ ಗವಿ ಸಿದ್ದೇಶ್ವರ ಮಾಹಸ್ವಾಮಿಗಳು ಚಾಲನೆ ನೀಡಿದ್ದರು. ದ್ಯಾಮಮ್ಮ ದೇವಿ ಜಾತ್ರೋತ್ಸವದಲ್ಲಿ ಸಾವಿರಾರು ಜನ ಭಾಗಿಯಾಗಿದ್ದರು. ಹಲಗೇರಿ ಗ್ರಾಮ ಸೇರಿದಂತೆ ಜಿಲ್ಲೆಯ ನಾನಾ ಭಾಗದ ದ್ಯಾಮಮ್ಮ ಭಕ್ತರು ರಥೋತ್ಸವದಲ್ಲಿ ಭಾಗಿಯಾಗಿ ದೇವಿ ದರ್ಶನ ಪಡೆದರು. 39 ವರ್ಷಗಳ ಬಳಿಕ ಗ್ರಾಮದಲ್ಲಿ ನಡೆದ ಜಾತ್ರೆ ಹಾಗೂ ನಿಯಮ ಪಾಲಿಸಿದ ಗ್ರಾಮಸ್ಥರ ಬಗ್ಗೆ ಗವಿ ಮಠದ ಸ್ವಾಮೀಜಿಗಳು ಕೊಂಡಾಡಿದ್ದರು.

  • ತಾಯಂದಿರ ದಿನವನ್ನು ಏಕೆ ಆಚರಿಸುತ್ತಾರೆ? ಮಹತ್ವ, ಹಿನ್ನೆಲೆ ಏನು?

    ತಾಯಂದಿರ ದಿನವನ್ನು ಏಕೆ ಆಚರಿಸುತ್ತಾರೆ? ಮಹತ್ವ, ಹಿನ್ನೆಲೆ ಏನು?

    ತಾಯಿಯ ಪ್ರೀತಿಯನ್ನು ಎಂದಿಗೂ ಮರಳಿಸಲು ಸಾಧ್ಯವಿಲ್ಲ. ತಾಯಿಯ ಪ್ರೀತಿ, ತ್ಯಾಗಕ್ಕೆ ನಾವು ಏನೇ ಮಾಡಿದರೂ ಅದು ಕಡಿಮೆ ಆಗುತ್ತದೆ. ನಮ್ಮನ್ನು ಈ ಜಗತ್ತಿಗೆ ತರುವ ತಾಯಿಗೆ ಗೌರವ ಹಾಗೂ ಪ್ರೀತಿಯನ್ನು ತೋರಿಸಲು ನಮಗೆ ಯಾವುದೇ ವಿಶೇಷ ದಿನ ಅಗತ್ಯವಿಲ್ಲ. ಆದರೆ ತಾಯಂದಿರ ದಿನ ನಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಒಂದು ಅವಕಾಶ ನೀಡುತ್ತದೆ. ಹಾಗಾಗಿ ಪ್ರತಿ ವರ್ಷ ಮೇ ತಿಂಗಳ ಎರಡನೇ ಭಾನುವಾರವನ್ನು ವಿಶ್ವ ತಾಯಂದಿರ ದಿನ ಎಂದು ಆಚರಿಸಲಾಗುತ್ತದೆ.

    ತಾಯಂದಿರ ದಿನ ಶುರುವಾಗಿದ್ದು ಹೇಗೆ?
    ತಾಯಂದಿರ ದಿನ 1908ರಲ್ಲಿ ಅಮೆರಿಕದಲ್ಲಿ ಶುರುವಾಗಿತ್ತು. ಅಮೆರಿಕದ ಶಾಂತಿ ಕಾರ್ಯಕರ್ತೆ ಆಗಿದ್ದ ಅನಾ ಜಾರ್ವಿಸ್ ತನ್ನ ತಾಯಿಯನ್ನು ತುಂಬಾ ಪ್ರೀತಿಸುತ್ತಿದ್ದರು. ಅನಾ ಜಾರ್ವಿಸ್ ಮದುವೆ ಆಗಿರಲಿಲ್ಲ. 1905ರಲ್ಲಿ ಅನಾ ತಾಯಿ ಮರಣ ಹೊಂದಿದ್ದರು. ತನ್ನ ತಾಯಿಯ ಮೇಲಿದ್ದ ಪ್ರೀತಿಯನ್ನು ವ್ಯಕ್ತಪಡಿಸಲು ಅನಾ ಈ ದಿನ ಆಯ್ಕೆ ಮಾಡಿಕೊಂಡಿದ್ದರು. ಬಳಿಕ ಈ ದಿನವನ್ನು ತಾಯಂದಿರ ದಿನವಾಗಿ ಆಚರಿಸಲು ಶುರು ಮಾಡಿದ್ದರು.

    2ನೇ ಭಾನುವಾರ ತಾಯಂದಿರ ದಿನ ಏಕೆ ಆಚರಿಸುತ್ತಾರೆ?
    ಮೇ 9, 1914ರಂದು ಅಮೆರಿಕದ ರಾಷ್ಟ್ರಪತಿ ಆಗಿದ್ದ ವುಡ್ರೋ ವಿಲ್ಸನ್ ಪ್ರತಿ ವರ್ಷ ಮೇ 2ನೇ ಭಾನುವಾರದಂದು ತಾಯಂದಿರ ದಿನ ಎಂದು ಆಚರಿಸಲಾಗುತ್ತದೆ ಎಂದು ಕಾನೂನನ್ನು ಜಾರಿಗೊಳಿಸಿದರು. ಈ ಕಾನೂನು ಜಾರಿ ಮಾಡಿದ ನಂತರ ಅಮೆರಿಕ, ಭಾರತ ಹಾಗೂ ಹಲವು ದೇಶಗಳಲ್ಲಿ ಮೇ ತಿಂಗಳ 2ನೇ ಭಾನುವಾರದಂದು ತಾಯಂದಿರ ದಿನವನ್ನಾಗಿ ಆಚರಿಸಲಾಗುತ್ತದೆ.

    ತಾಯಂದಿರ ದಿನ ಏಕೆ ಆಚರಿಸುತ್ತಾರೆ?
    ತಾಯಿಗಾಗಿ ಪ್ರೀತಿ ಹಾಗೂ ಉಡುಗೊರೆ ನೀಡಲು ಯಾವುದೇ ವಿಶೇಷ ದಿನದ ಅಗತ್ಯ ಇಲ್ಲ. ಆದರೂ ಸಹ ತಾಯಂದಿರ ದಿನದಂದು ತಾಯಿಗೆ ಮತ್ತಷ್ಟು ಗೌರವ ನೀಡಲಾಗುತ್ತದೆ. ಈ ದಿನದಂದು ತಾಯಿಗೆ ಸಿಹಿ ಜೊತೆ ಉಡುಗೊರೆ ನೀಡಲಾಗುತ್ತದೆ.

    ಲಂಡನ್‍ನಲ್ಲಿ ತಾಯಂದಿರ ದಿನವನ್ನು ಮಾರ್ಚ್ ತಿಂಗಳ ನಾಲ್ಕನೇ ಭಾನುವಾರದಂದು ಆಚರಿಸಲಾಗುತ್ತದೆ. ಗ್ರೀಸ್ ದೇಶದಲ್ಲಿ ಫೆಬ್ರವರಿ 2ರಂದು ಆಚರಿಸಲಾಗುತ್ತದೆ. ಭಾರತ ಸೇರಿ ಹಲವಾರು ದೇಶಗಳಲ್ಲಿ ಪ್ರತಿ ವರ್ಷ ಮೇ ತಿಂಗಳ 2ನೇ ಭಾನುವಾರದಂದು ತಾಯಂದಿರ ದಿನ ಆಚರಿಸಲಾಗುತ್ತದೆ. ಈ ವರ್ಷ ಮೇ 12ರಂದು ತಾಯಂದಿರ ದಿನ ಆಚರಿಸಲಾಗುತ್ತದೆ.