Tag: celebration

  • ಭೂಮಿ ತಾಯಿಗೆ ಪೂಜೆ ಸಲ್ಲಿಸುವ ಎಳ್ಳ ಅಮಾವಾಸ್ಯೆ ಆಚರಣೆ

    ಭೂಮಿ ತಾಯಿಗೆ ಪೂಜೆ ಸಲ್ಲಿಸುವ ಎಳ್ಳ ಅಮಾವಾಸ್ಯೆ ಆಚರಣೆ

    ಬೆಳಗಾವಿ: ಚಿಕ್ಕೋಡಿ ಭಾಗದ ರೈತರು ಇಂದು ಎಳ್ಳ ಅಮವಾಸ್ಯೆ ಆಚರಿಸಿ ಭೂಮಿ ತಾಯಿಗೆ ಪೂಜೆ ಸಲ್ಲಿಸಿದ್ದಾರೆ. ಅತಿವೃಷ್ಟಿಯ ಬಾಧೆಯ ನಡುವೆಯೂ ಆರ್ಥಿಕ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳಿದ್ದರೂ, ರೈತರ ಸಂಪ್ರದಾಯಕ್ಕೆ ಯಾವಾಗಲೂ ಬರವಿಲ್ಲ ಎಂಬಂತೆ ಸಡಗರವಿಲ್ಲದಿದ್ದರೂ ಸರಳವಾಗಿ ಹಬ್ಬವನ್ನ ಆಚರಿಸಿದ್ದಾರೆ.

    ಭೂಮಿ ತಾಯಿಗೆ ಅನ್ನ ಪ್ರಸಾದ ಹಾಗೂ ನೀರನ್ನು ಅರ್ಪಿಸುವ ಮೂಲಕ ಸಂತೃಪ್ತಗೊಳಿಸುವ ಸಂಭ್ರಮದ ಎಳ್ಳ ಅಮವಾಸ್ಯೆಯನ್ನು ಆಚರಿಸಲಾಯಿತು. ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ತೆಲಸಂಗ ಗ್ರಾಮದಲ್ಲಿ ಅನ್ನದಾತರಾದ ರೈತರ ಜೀವನ ಸುಖಮವಾಗಬೇಕೆಂದು ಮಹಿಳೆಯರು, ಮಕ್ಕಳು ಭೂಮಾತೆಗೆ ಪೂಜೆ ಸಲ್ಲಿಸಿದರು.

    ಮಾರ್ಗಶಿರ ಮಾಸದಲ್ಲಿ ಬರುವ ಎಳ್ಳ ಅಮವಾಸ್ಯೆಯ ದಿನದಂದು ಉತ್ತರ ಕರ್ನಾಟಕದ ರೈತರು ತಮ್ಮ ತಮ್ಮ ಹೊಲಗಳಿಗೆ ಕುಟುಂಬ ಸಮೇತ ಹೋಗಿ, ತಮ್ಮ ಹೊಲದಲ್ಲಿ ಹಸಿರಿನಿಂದ ಕಂಗೊಳಿಸುವ ಭೂ ತಾಯಿಗೆ ವಿಶೇಷವಾದ ಪೂಜೆಯನ್ನು ಸಲ್ಲಿಸುವ ವಾಡಿಕೆ. ಹಾಗೆಯೇ ಜೋಳದ ಕಡಬು, ರೊಟ್ಟಿಯ ಮಿಶ್ರಣದಿಂದ ಮಾಡಿದ ಚರಗವನ್ನು ಹೊಲದ ತುಂಬಾ ಚೆಲ್ಲುವ ಮೂಲಕ ಈ ಸುಗ್ಗಿ ಸಮೃದ್ಧಿಯಾಗುವಂತೆ ಮಾಡು ತಾಯಿ ಎಂದು ಭೂ ತಾಯಿಗೆ ಬೇಡಿಕೊಂಡರು.

    ರೈತ ಮಹಿಳೆಯರು ಜಮೀನಿಗೆ ತೆರಳುವ ಮುನ್ನ ಮನೆಯಲ್ಲಿ ವಿವಿಧ ರೀತಿಯ ಭೋಜನವನ್ನು ತಯಾರಿಸುತ್ತಾರೆ. ಅದರಲ್ಲೂ ಶೇಂಗಾ ಹೋಳಿಗೆ, ರೊಟ್ಟಿ, ಶೇಂಗಾ ಚಟ್ನಿ, ಪುಂಡಿಫಲ್ಲಿ, ಬಜ್ಜಿ, ಕಡಬು ಸೇರಿದಂತೆ ಹತ್ತಾರು ರೀತಿಯ ಅಡುಗೆಯನ್ನು ಮಾಡಿಕೊಳ್ಳುತ್ತಾರೆ. ತಮ್ಮ ತಮ್ಮ ಹೊಲಗಳಲ್ಲಿ ಹಸಿರನ್ನುಟ್ಟು ಕಂಗೊಳಿಸುತ್ತಿರುವ ಭೂ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ನಂತರ ಕುಟುಂಬದ ಎಲ್ಲ ಜನರು ಸೇರಿ ಭರ್ಜರಿ ಭೋಜನವನ್ನು ಸವಿದು ಹಬ್ಬದ ಸಂಭ್ರಮ ಸವಿದರು.

  • ದುಬೈ ರಸ್ತೆ ಅಪಘಾತದಲ್ಲಿ  ಇಬ್ಬರು ಭಾರತೀಯ ವಿದ್ಯಾರ್ಥಿಗಳು ಸಾವು

    ದುಬೈ ರಸ್ತೆ ಅಪಘಾತದಲ್ಲಿ ಇಬ್ಬರು ಭಾರತೀಯ ವಿದ್ಯಾರ್ಥಿಗಳು ಸಾವು

    ಅಬುಧಾಬಿ: ರಸ್ತೆ ಅಪಘಾತದಲ್ಲಿ ಇಬ್ಬರು ಭಾರತೀಯ ವಿದ್ಯಾರ್ಥಿಗಳು ಮೃತಪಟ್ಟ ಘಟನೆ ಬುಧವಾರ ಬೆಳಗ್ಗೆ ನಡೆದಿದೆ.

    ರೋಹಿತ್ ಕೃಷ್ಣಕುಮಾರ್(19) ಹಾಗೂ ಶರತ್ ಕುಮಾರ್ (21) ಮೃತಪಟ್ಟ ವಿದ್ಯಾರ್ಥಿಗಳು. ರೋಹಿತ್ ಹಾಗೂ ಶರತ್ ಮೂಲತಃ ಕೇರಳದವರಾಗಿದ್ದು, ಕ್ರಿಸ್ಮಸ್ ಪಾರ್ಟಿಯಲ್ಲಿ ಭಾಗಿಯಾಗಲು ಹೋಗಿದ್ದರು.

    ಕ್ರಿಸ್ಮಸ್ ಪಾರ್ಟಿಯಲ್ಲಿ ಭಾಗಿಯಾದ ನಂತರ ಶರತ್ ಬುಧವಾರ ನಸುಕಿನ ಜಾವದಲ್ಲಿ ರೋಹಿತ್‍ನನ್ನು ಮನೆಗೆ ಡ್ರಾಪ್ ಮಾಡಲು ಹೋಗುತ್ತಿದ್ದರು. ಈ ವೇಳೆ ಕಾರು ಅಪಘಾತ ಸಂಭವಿಸಿದ್ದು, ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

    ಶರತ್ ಕುಮಾರ್ ತನ್ನ ಉನ್ನತ ಶಿಕ್ಷಣಕ್ಕಾಗಿ ಅಮೆರಿಕಗೆ ತೆರಳಿದ್ದನು. ಇತ್ತ ರೋಹಿತ್ ಕೃಷ್ಣಕುಮಾರ್ ತನ್ನ ಉನ್ನತ ಶಿಕ್ಷಣಕ್ಕಾಗಿ ಲಂಡನ್‍ಗೆ ತೆರಳಿದ್ದನು. ಕ್ರಿಸ್ಮಸ್ ಹಬ್ಬವನ್ನು ಆಚರಿಸಲು ಇಬ್ಬರು ಮಂಗಳವಾರ ರಾತ್ರಿ ದುಬೈಯಲ್ಲಿ ಭೇಟಿ ಆಗಿದ್ದರು.

  • ತೂಗುದೀಪ ನಿಲಯದಲ್ಲಿ ಕ್ರಿಸ್ಮಸ್ ಆಚರಣೆ

    ತೂಗುದೀಪ ನಿಲಯದಲ್ಲಿ ಕ್ರಿಸ್ಮಸ್ ಆಚರಣೆ

    ಬೆಂಗಳುರು: ಕ್ರಿಸ್‍ಮಸ್ ಹಬ್ಬದ ಪ್ರಯುಕ್ತ ‘ರಾಬರ್ಟ್’ ಸಿನಿಮಾದ ಫಸ್ಟ್‌ಲುಕ್‌ ಮೋಷನ್ ಪೋಸ್ಟರ್ ರಿಲೀಸ್ ಆಗಿದೆ. ಜೊತೆಗೆ ಕ್ರಿಸ್‍ಮಸ್ ಹಬ್ಬವನ್ನು ಕೂಡ ಅದ್ಧೂರಿಯಾಗಿ ಆಚರಣೆ ಮಾಡಲಾಗಿದೆ.

    ದರ್ಶನ್ ಮತ್ತು ತರುಣ್ ಸುಧೀರ್ ಕಾಂಬಿನೇಷನ್‍ನಲ್ಲಿ ‘ರಾಬರ್ಟ್’ ಸಿನಿಮಾ ಮೂಡಿ ಬರುತ್ತಿದೆ. ಈಗಾಗಲೇ ದರ್ಶನ್ ಅವರ ಫಸ್ಟ್‌ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದು, ಯೂಟ್ಯೂಬ್‍ನಲ್ಲಿ ಧೂಳೆಬ್ಬಿಸುತ್ತಿದೆ. ಇದೇ ಖುಷಿಯಲ್ಲಿ ಚಿತ್ರತಂಡ ತೂಗುದೀಪ ನಿಲಯದಲ್ಲಿ ಕ್ರಿಸ್‍ಮಸ್ ಹಬ್ಬವನ್ನು ಆಚರಣೆ ಮಾಡಿದೆ.

    ದರ್ಶನ್ ಅಭಿಮಾನಿಗಳು ಟ್ವಿಟ್ಟರ್ ಖಾತೆಯಲ್ಲಿ ಕ್ರಿಸ್‍ಮಸ್ ಆಚರಣೆ ಮಾಡುತ್ತಿರುವ ಫೋಟೋವನ್ನು ಶೇರ್ ಮಾಡಿಕೊಂಡಿದೆ. ಅದರಲ್ಲಿ ತರುಣ್ ಸುಧೀರ್, ದರ್ಶನ್ ಸೇರಿದಂತೆ ಚಿತ್ರತಂಡದವರು ಕೇಕ್ ಕಟ್ ಮಾಡಿ, ಪರಸ್ಪರ ತಿನ್ನಿಸುವ ಮೂಲಕ ಸಂಭ್ರಮದಿಂದ ಆಚರಣೆ ಮಾಡಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ‘ರಾಬರ್ಟ್’ ಮೋಷನ್ ಪೋಸ್ಟರ್ ಯೂಟ್ಯೂಬ್‍ನಲ್ಲಿ 4.5 ಲಕ್ಷಕ್ಕೂ ಅಧಿಕ ವೀವ್ಸ್ ಕಂಡಿದೆ.

    ಮೋಷನ್ ಪೋಸ್ಟರಿನಲ್ಲಿ ದರ್ಶನ್ ಖಡಕ್ ಆದ ರಗಡ್ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಪೋಸ್ಟರ್ ಬ್ಲಾಕ್ ಬಣ್ಣದಿಂದ ಮೂಡಿ ಬಂದಿದ್ದು, ಕಪ್ಪು ಬಣ್ಣದ ಜಾಕೆಟ್, ಕತ್ತಿನಲ್ಲಿ ಶಿಲುಬೆಯ ಚೈನ್, ಗಡ್ಡಧಾರಿಯಾಗಿ ಕೈಯಲ್ಲಿ ಗನ್ ಹಿಡಿದುಕೊಂಡು ದರ್ಶನ್ ರಗಡ್ ಪೋಸ್ ಕೊಟ್ಟಿದ್ದಾರೆ. ಪೋಸ್ಟರಿನಲ್ಲಿ ಲಾಂಗ್ ಹೇರಿನಲ್ಲಿ ಕಾಣಿಸಿಕೊಂಡಿದ್ದಾರೆ.

    ‘ರಾಬರ್ಟ್’ ಸಿನಿಮಾವನ್ನು ನಿರ್ದೇಶಕ ತರುಣ್ ಸುಧೀರ್ ನಿರ್ದೇಶನ ಮಾಡುತ್ತಿದ್ದು, ಇತ್ತೀಚೆಗಷ್ಟೆ ಚಿತ್ರದ ಶೂಟಿಂಗ್ ಕೂಡ ಕಂಪ್ಲೀಟ್ ಆಗಿದೆ. ಚಿತ್ರದಲ್ಲಿ ದರ್ಶನ್ ಅವರಿಗೆ ನಟಿ ಆಶಾ ಭಟ್ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ.

  • ರೇಷ್ಮೆನಗರಿ ರೈತರ ದಿನಾಚರಣೆ – ಮುಂದಿನ ವರ್ಷ ಸರ್ಕಾರದಿಂದ ಆಚರಿಸುವಂತೆ ರೈತರ ಆಗ್ರಹ

    ರೇಷ್ಮೆನಗರಿ ರೈತರ ದಿನಾಚರಣೆ – ಮುಂದಿನ ವರ್ಷ ಸರ್ಕಾರದಿಂದ ಆಚರಿಸುವಂತೆ ರೈತರ ಆಗ್ರಹ

    ರಾಮನಗರ: ರಾಜ್ಯದಲ್ಲಿ ಜಾತಿಗೊಂದು ಜಯಂತಿಯನ್ನು ಆಚರಿಸಲಾಗುತ್ತಿದೆ. ಆದರೆ ವರ್ಷಕೊಮ್ಮೆಯಾದರೂ ಅನ್ನದಾತರನ್ನ ನೆನೆಯುವ ಕಾಯಕವನ್ನ ಸರ್ಕಾರ ಮಾಡುತ್ತಿಲ್ಲ. ಹೀಗಾಗಿ ಸರ್ಕಾರ ಮುಂದಿನ ವರ್ಷದಿಂದ ರೈತ ದಿನವನ್ನು ಆಚರಿಸಬೇಕು ಎಂದು ರಾಮನಗರದ ರೈತ ಮುಖಂಡರು ಆಗ್ರಹಿಸಿದ್ದಾರೆ.

    ರೈತರ ದಿನಾಚರಣೆಯನ್ನ ಜಿಲ್ಲೆಯ ಹಲವೆಡೆ ಸಂಭ್ರಮದಿಂದ ರೈತರು ಆಚರಿಸಿದ್ರು. ರಾಮನಗರದ ಎಪಿಎಂಸಿ ಮಾರುಕಟ್ಟೆ, ರೇಷ್ಮೆಗೂಡು ಮಾರುಕಟ್ಟೆ, ಮಾಗಡಿಯ ಕೆಂಪೇಗೌಡ ಕೋಟೆ ಆವರಣ, ಹಾರೋಹಳ್ಳಿ ಸೇರಿದಂತೆ ಹಲವೆಡೆ ಕರ್ನಾಟಕ ಪ್ರಾಂತ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಆಚರಿಸಿದರು.

    ರೇಷ್ಮೆ ಗೂಡು ಮಾರುಕಟ್ಟೆ ಆವರಣದಲ್ಲಿ ಜಿಲ್ಲಾ ರೇಷ್ಮೆ ಬೆಳೆಗಾರರ ಹಿತ ರಕ್ಷಣಾ ಸಮಿತಿ ಹಾಗೂ ಜಯ ಕರ್ನಾಟಕ ಸಂಘಟನೆಯ ಸಹಯೋಗದಲ್ಲಿ ಸೋಮವಾರ ಆಯೋಜಿಸಲಾಗಿತ್ತು. ರೈತ ದಿನಾಚರಣೆಯಲ್ಲಿ ರೈತ ಮುಖಂಡ ಲಕ್ಷ್ಮಣ ಸ್ವಾಮಿ ಅವರು ಮಾತನಾಡಿ, ವಿಶ್ವದಲ್ಲಿ ಬೇರೆಲ್ಲಾ ದಿನಾಚರಣೆಗಳಿಗಿಂತ ರೈತ ದಿನಾಚರಣೆಗೆ ಎಲ್ಲರೂ ಹೆಚ್ಚಿನ ಮಹತ್ವ ನೀಡಬೇಕಿದೆ. ರೈತ ದೇಶ ಮಾತ್ರವಲ್ಲ, ಮನುಕುಲದ ಬೆನ್ನೆಲುಬು. ಇದೇ ಕಾರಣಕ್ಕೆ ರೈತ ಬಿತ್ತದಿದ್ದರೆ ಬಿಕ್ಕುವುದು ಜಗವೆಲ್ಲಾ ಎಂಬ ನಾಣ್ಣುಡಿ ಬಂದಿದೆ. ಆತನ ಶ್ರಮದಿಂದಲೇ ನಾವೆಲ್ಲಾ ಇಂದು ನಿರಂತರವಾಗಿ ಆಹಾರ ದಕ್ಕಿಸಿಕೊಳ್ಳುತ್ತಿದ್ದೇವೆ. ಬೆಳೆ ಬೆಳೆಯುವ ರೈತರನ್ನು ಹಾಗೂ ಅವರ ಕುಟುಂಬವನ್ನು ಗೌರವ ಭಾವದಿಂದ ಕಾಣಬೇಕು. ಕೃಷಿಕರ ನೆರವಿಗೆ ವಿಶಿಷ್ಟ ಯೋಜನೆ ರೂಪಿಸಿ ನೆರವಾಗಬೇಕು. ಸಾಲಮನ್ನಾ ಮಾಡಿ, ಕಡಿಮೆ ಬಡ್ಡಿ ದರದಲ್ಲಿ ಹೊಸ ಸಾಲ ವಿತರಿಸಬೇಕು. ಮಾರುಕಟ್ಟೆಯಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸಬೇಕು. ರೈತರ ಏಳಿಗೆಗೆ ಬ್ಯಾಂಕ್‍ಗಳು ಕೈಜೋಡಿಸಬೇಕು ಎಂದರು.

    ಬೆಂಗಳೂರು ವಲಯ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕುಮಾರ್ ಅವರು ಮಾತನಾಡಿ, ಸಮಗ್ರ ಕೃಷಿಯಲ್ಲಿ ತಾಂತ್ರಿಕ ಅಂಶಗಳನ್ನು ಅಳವಡಿಸಿಕೊಳ್ಳಲು ರೈತರೇ ವಿಜ್ಞಾನಿಗಳಾಬೇಕು. ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಅಂತರ್ಜಲ ಎರಡು ಸಾವಿರ ಅಡಿ ತಲುಪಿದರೂ ರೇಷ್ಮೆ ಮತ್ತು ಮಾವು ಬೆಳೆಯಲ್ಲಿ ರಾಜ್ಯದಲ್ಲೇ ನಂಬರ್ 1 ಸ್ಥಾನ ಪಡೆದುಕೊಂಡಿದೆ ಎಂದು ಹೇಳಿದರು.

    ರಾಮನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ರೈತರಿಗೆ ಕುಮಾರಣ್ಣ ಅಭಿಮಾನಿಗಳ ಬಳಗದಿಂದ ತೆಂಗಿನ ಸಸಿಗಳನ್ನು ವಿತರಣೆ ಮಾಡುವ ಮೂಲಕ ರೈತರಿಗೆ ಶುಭಾಶಯ ಕೋರಿ, ಮಾರುಕಟ್ಟೆಯ ಜೊತೆ ಉತ್ತಮ ಒಡನಾಟ ಇಟ್ಟುಕೊಂಡಿರುವ ರೈತರ ನೆರವಿಗೆ ನಿಲ್ಲುವ ರೈತ ಮುಖಂಡರು ಹಾಗೂ ಮಾದರಿ ರೈತರನ್ನು ಸನ್ಮಾನಿಸಲಾಯಿತು.

    ಮಾಗಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಚ್.ಸಿ ಬಾಲಕೃಷ್ಣ, ಹಾಲಿ ಶಾಸಕ ಎ.ಮಂಜುನಾಥ್ ಸಹ ಭಾಗಿಯಾಗಿ, ಪ್ರಗತಿಪರ ರೇಷ್ಮೆ ಬೆಳೆಗಾರರನ್ನು, ರೈತ ಮುಖಂಡರನ್ನ, ಉದೋನ್ಮುಖ ರೈತರು, ಮಾದರಿ ರೈತರನ್ನ ಸನ್ಮಾನಿಸಿದರು.

  • ಕುಸ್ತಿಯಲ್ಲಿ ನಿರಂತರ ಸಾಧನೆ – ಯುವಕನ ಪ್ರಶಸ್ತಿ ಬೇಟೆಗೆ ಜನರಿಂದ ಸಂಭ್ರಮಾಚರಣೆ

    ಕುಸ್ತಿಯಲ್ಲಿ ನಿರಂತರ ಸಾಧನೆ – ಯುವಕನ ಪ್ರಶಸ್ತಿ ಬೇಟೆಗೆ ಜನರಿಂದ ಸಂಭ್ರಮಾಚರಣೆ

    ನೆಲಮಂಗಲ: ತನ್ನ ಮಗ-ಮಗಳು ಪರೀಕ್ಷೆಗಳಲ್ಲಿ ಪಾಸ್ ಆದರೆ ಅಥವಾ ಒಳ್ಳೆಯ ಉದ್ಯೋಗ ಸಿಕ್ಕರೆ, ಏನಾದರೂ ಸಾಧನೆ ಮಾಡಿದರೆ ಪೋಷಕರು ಸಂಭ್ರಮಿಸುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಗ್ರಾಮೀಣ ಪ್ರತಿಭೆಯ ಕುಸ್ತಿಯಲ್ಲಿನ ಸಾಧನೆಗೆ ಊರಿಗೆ ಊರೇ ಖುಷಿ ಪಟ್ಟು, ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದ್ದಾರೆ.

    ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಭಟ್ಟರಹಳ್ಳಿ ಗ್ರಾಮದ ಯುವ ಕುಸ್ತಿಪಟು ಹೇಮಂತ್ ಕುಮಾರ್, ಎರಡು ವರ್ಷಗಳಿಂದ ಕುಸ್ತಿ ಅಭ್ಯಾಸವನ್ನು ಮಾಡಿ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುತ್ತಿದ್ದಾನೆ. ಗ್ರಾಮೀಣ ಪ್ರದೇಶದ ಯುವ ಕುಸ್ತಿ ಪ್ರತಿಭೆಯನ್ನು ಗ್ರಾಮಸ್ಥರು ಗುರುತಿಸಿ, ಗ್ರಾಮದ ಹಬ್ಬವನ್ನಾಗಿ ಕುಸ್ತಿ ಪಟುವನ್ನು ಸನ್ಮಾನಿಸಿದ್ದಾರೆ. ಜೊತೆಗೆ ಮಾರಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

    ನೆಲಮಂಗಲ ಪಟ್ಟಣದ ಮಾರುತಿ ವ್ಯಾಯಾಮ ಶಾಲೆಯಲ್ಲಿ, ತರಬೇತುದಾರರಾದ ಪರಮೇಶ್ ಪಾಳೇಗಾರ್ ಬಳಿ ವಿದ್ಯೆ ಕಲಿತು, ರಾಜ್ಯ, ರಾಷ್ಟ್ರೀಯ ಮಟ್ಟದ ಪಂದ್ಯಾವಳಿಗಳಲ್ಲಿ ಪದಕಗಳನ್ನು ಬೇಟೆಯಾಡುತ್ತಿದ್ದಾನೆ. ಇನ್ನೂ ರಾಜ್ಯದ ಮೂಲೆ ಮೂಲೆಗಳಲ್ಲಿ 41 ಕೆ.ಜಿ. ವಿಭಾಗದಿಂದ ಪ್ರಾರಂಭ ಮಾಡಿ 57 ಕೆ.ಜಿ ವಿಭಾಗದವರೆಗಿನ ಸ್ಪರ್ಧೆಯಲ್ಲಿ ತಮ್ಮದೇ ಆದ ಸಾಧನೆ ಮಾಡಿದ್ದಾನೆ.

    ಹರಿಯಾಣದಲ್ಲಿ 57 ಕೆಜಿ ವಿಭಾಗದ ಕುಸ್ತಿಯಲ್ಲಿ ಸಾಧನೆ ಮಾಡಿ ಹಲವಾರು ಬಹುಮಾನ ಪಡೆದಿದ್ದಾನೆ. ಜೊತೆಗೆ ಬಿಎ ಪದವಿಯನ್ನು ಪಡೆದಿರುವ ಹೇಮಂತ್ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದಾನೆ.

  • ಗ್ರೇಟರ್ ನೆಲಮಂಗಲ ಇಂಡಸ್ಟ್ರೀಸ್ ಅಸೋಸಿಯೇಷನ್ ವತಿಯಿಂದ ಕನ್ನಡ ಹಬ್ಬ ಆಚರಣೆ

    ಗ್ರೇಟರ್ ನೆಲಮಂಗಲ ಇಂಡಸ್ಟ್ರೀಸ್ ಅಸೋಸಿಯೇಷನ್ ವತಿಯಿಂದ ಕನ್ನಡ ಹಬ್ಬ ಆಚರಣೆ

    ಬೆಂಗಳೂರು: 64ನೇ ಕನ್ನಡ ರಾಜ್ಯೋತ್ಸವವನ್ನು ಸಡಗರ ಸಂಭ್ರಮದಿಂದ ಗ್ರೇಟರ್ ನೆಲಮಂಗಲ ಇಂಡಸ್ಟ್ರೀಸ್ ಅಸೋಸಿಯೇಷನ್ ವತಿಯಿಂದ ಆಚರಿಸಲಾಯಿತು.

    ಬೆಂಗಳೂರು ಹೊರವಲಯ ನೆಲಮಂಗಲ ಪಟ್ಟಣದ ಖಾಸಗಿ ಹೋಟೆಲಿನಲ್ಲಿ ನೂರಾರು ಉದ್ಯಮಿಗಳು ಸೇರಿದಂತೆ ಕಾರ್ಮಿಕರು ಸೇರಿ ಗ್ರೇಟರ್ ನೆಲಮಂಗಲ ಇಂಡಸ್ಟ್ರೀಸ್ ಅಸೋಸಿಯೇಷನ್ ನಿರ್ಮಿಸಿಕೊಂಡು ನಾನಾ ಯೋಜನೆ, ಹೊಸ ಹೊಸ ತಂತ್ರಜ್ಞಾನ, ಕಾರ್ಮಿಕರ ಕೌಶಲ್ಯದ ಬಗ್ಗೆ ಚಿಂತಿಸಲಾಯಿತು.

    ಇದೇ ವೇಳೆ ಗ್ರೇಟರ್ ನೆಲಮಂಗಲ ಇಂಡಸ್ಟ್ರೀಸ್ ಅಸೋಸಿಯೇಷನ್ 8ನೇ ವರ್ಷದ ಸಂಭ್ರಮಾಚರಣೆಗೆ ಸಾಕ್ಷಿಯಾಗಿದ್ದು, ವಿವಿಧ ಗಣ್ಯರು ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗುವ ಮೂಲಕ ಕನ್ನಡ ಹಬ್ಬಕ್ಕೆ ಚಾಲನೆ ನೀಡಲಾಯಿತು.

    ಈ ವೇಳೆ ಗ್ರೇಟರ್ ನೆಲಮಂಗಲ ಇಂಡಸ್ಟ್ರೀಸ್ ಅಸೋಸಿಯೇಷನ್ ಅಧ್ಯಕ್ಷ ಇ.ಟಿ.ಕೆ ರಾಜು ಮಾತನಾಡಿ, ಜಾಗತಿಕ ಮಟ್ಟದಲ್ಲಿ ನಮ್ಮ ಇಂಡಸ್ಟ್ರೀಸ್ ಗಳು ಪೈಪೋಟಿ ನಡೆಸುತ್ತಿದ್ದು, ಉತ್ತಮವಾದ ರೀತಿಯಲ್ಲಿ ಗ್ರಾಹಕರಿಗೆ ತಲುಪುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ. ಅಲ್ಲದೆ ಸದ್ಯದ ಹಣಕಾಸು ವಿಚಾರದಲ್ಲಿ ಸಾಕಷ್ಟು ಕಂಪನಿಗಳು ನಷ್ಟ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ, ಮಾಲೀಕರು ಹಾಗೂ ನೌಕರರು ಸಾಕಷ್ಟು ಪ್ರಮಾಣದಲ್ಲಿ ಸಂಕಷ್ಟ ಅನುಭವಿಸುತ್ತಿದ್ದಾರೆ.

    ಹೀಗಾಗಿ ಕೂಡಲೇ ರಾಜ್ಯ ಹಾಗೂ ಕೇಂದ್ರ ಸರ್ಕಾರ ಮಾಲೀಕರು ಹಾಗೂ ನೌಕರರ ಹಿತಾಸಕ್ತಿಗಳನ್ನು ಪರಿಗಣಿಸಿ ಆರ್ಥಿಕವಾಗಿ ಕಂಪನಿಗಳನ್ನು ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ ಎಂದು ಸರ್ಕಾರಕ್ಕೆ ಮನವಿ ಮಾಡಿದರು. ಇಲ್ಲದಿದ್ದರೆ ಮುಂದಿನ ದಿನನದಲ್ಲಿ ಹೀಗೆ ನಡೆದರೆ ಮಾಲೀಕರು ಹಾಗೂ ಕಾರ್ಮಿಕರು ಬೀದಿಗೆ ಬರುವಂತಹ ಪರಿಸ್ಥಿತಿ ನಿರ್ಮಾಣವಾಗಲಿದ್ದು ದೇಶದ ಸರ್ವೋತ್ತಮ ಬೆಳವಣಿಗೆಯಲ್ಲಿ ಕುಂಟಿತವಾಗಲಿದ್ದು ಸರ್ಕಾರಗಳು ಗಮನವರಿಸಬೇಕೆಂದು ಇ.ಟಿ.ಕೆ.ರಾಜು ಅಭಿಪ್ರಾಯ ಪಟ್ಟು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

  • ಹೊಸ ವರ್ಷ ಆಚರಿಸದ ಕಾರಣ ಬಿಚ್ಚಿಟ್ಟ ದರ್ಶನ್

    ಹೊಸ ವರ್ಷ ಆಚರಿಸದ ಕಾರಣ ಬಿಚ್ಚಿಟ್ಟ ದರ್ಶನ್

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಹೊಸ ವರ್ಷ ಏಕೆ ಆಚರಿಸಲ್ಲ ಎಂಬುದನ್ನು ರಿವೀಲ್ ಮಾಡಿದ್ದಾರೆ.

    ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ದರ್ಶನ್ ಅವರು, “ಹೊಸ ವರ್ಷದ ಆಚರಣೆಯಿಂದ ನಾನು ಯಾವಾಗಲೂ ದೂರವಿರುತ್ತೇನೆ. ಏಕೆಂದರೆ ನಾನು ಇಡೀ ವರ್ಷ ಪಾರ್ಟಿ ಮಾಡುತ್ತಿರುತ್ತೇನೆ. ಡಿಸೆಂಬರ್ 31ನೇಯ ರಾತ್ರಿ ನನಗೆ ವಿಶೇಷ ಎಂದು ಅನಿಸುವುದಿಲ್ಲ. ಜನವರಿ 1ರಂದು ಕೆಲಸ ಮಾಡುತ್ತೇನೆ. ಆ ದಿನ ನಾನು ಬೆಳಗ್ಗೆ ಬೇಗ ಎದ್ದು ದಿನವಿಡೀ ಕೆಲಸ ಮಾಡುತ್ತೇನೆ” ಎಂದು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ನಟಿ ಊರ್ವಶಿ ವಿರುದ್ಧ ಅಸಮಾಧಾನ ಹೊರಹಾಕಿದ ದರ್ಶನ್

    ಇದೇ ವೇಳೆ ಅಪಘಾತದಲ್ಲಿ ಗಾಯಗೊಂಡ ಕೈ ಇನ್ನು ನೋವಿದೆ ಎಂಬುದನ್ನು ತಿಳಿಸಿದ್ದಾರೆ. ನೋವು ಎಷ್ಟೇ ಇದ್ದರೂ ಕೆಲಸ ಮಾಡಲೇಬೇಕು. ನನಗೆ ಒಳ್ಳೆಯ ವೈದ್ಯ ಡಾ. ಅಜಯ್ ಹೆಗಡೆ ಎಂಬವರು ಸಿಕ್ಕಿದ್ದಾರೆ. ಅವರ ನನಗೆ ಸಲಹೆ ನೀಡುತ್ತಿರುತ್ತಾರೆ. ಅಜಯ್ ಹೆಗಡೆ ಅವರು ಮೊದಲು ಬಾಡಿ ಬಿಲ್ಡರ್ ಆಗಿದ್ದು, ಮಿ. ಕರ್ನಾಟಕ ಆಗಿದ್ದವರು. ಫಿಟ್ನೆಸ್ ಬಗ್ಗೆ ಅವರು ನನಗೆ ಸಲಹೆ ನೀಡುತ್ತಿರುತ್ತಾರೆ ಎಂದು ದರ್ಶನ್ ಹೇಳಿದ್ದಾರೆ. ಇದನ್ನೂ ಓದಿ: ಎಲ್ಲವನ್ನು ಬಾಚಿಕೊಳ್ಳಬೇಕು ಎಂಬ ದುರಾಸೆ ನನಗಿಲ್ಲ: ದರ್ಶನ್

    ದರ್ಶನ್ ಅಭಿನಯದ `ಒಡೆಯ’ ಸಿನಿಮಾ ಇಂದು ರಾಜ್ಯಾದ್ಯಂತ ರಿಲೀಸ್ ಆಗಿದ್ದು, ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದೆ. ಸಿನಿಮಾದಲ್ಲಿ ದರ್ಶನ್ ಗಜೇಂದ್ರ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಜೋಡಿಯಾಗಿ ನಟಿ ಸನಾ ತಿಮ್ಮಯ್ಯ ಕಾಣಿಸಿಕೊಂಡಿದ್ದಾರೆ. ಇದೊಂದು ಅಣ್ಣ-ತಮ್ಮಂದಿರ ಚಿತ್ರವಾಗಿದ್ದು, ಬಹುದೊಡ್ಡ ತಾರಾಬಳಗವೇ ಸಿನಿಮಾದಲ್ಲಿದೆ.

  • ಕಾಂಗ್ರೆಸ್ ಮುಖಂಡನ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ

    ಕಾಂಗ್ರೆಸ್ ಮುಖಂಡನ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ

    ಬೆಂಗಳೂರು: ಕಾಂಗ್ರೆಸ್ ಮುಖಂಡ ಮೇಲೆ ದುಷ್ಕರ್ಮಿಗಳ ಗ್ಯಾಂಗ್ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿರುವ ಘಟನೆ ಸೋಮೇಶ್ವರ ನಗರದಲ್ಲಿ ನಡೆದಿದೆ.

    ಸಿದ್ದಾಪುರ ನಿವಾಸಿ ಆಗಿರುವ ಸಯ್ಯದ್ ರಿಯಾಜ್ ಚಿಕ್ಕಪೇಟೆ ಕಾಂಗ್ರೆಸ್ ಕಮಿಟಿ ಕಾಯದರ್ಶಿಯಾಗಿದ್ದಾರೆ. ರಿಯಾಜ್ ಉಪಚುನಾವಣೆಯಲ್ಲಿ ಶಿವಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ರಿಜ್ವಾನ್ ಪರ ಕೆಲಸ ಮಾಡಿ ಫಲಿತಾಂಶದ ಬಳಿಕ ಸಿದ್ದಾಪುರದ ಕಚೇರಿಗೆ ಬಂದಿದ್ದರು.

    ರಿಜ್ವಾನ್ ಜಯದ ಸಂಭ್ರಮಾಚರಣೆ ಹುಡುಗರ ಬಳಿ ಹಂಚಿಕೊಳ್ಳಲು ರಿಯಾಜ್ ಸಿದ್ಧತೆ ಮಾಡಿಕೊಳ್ಳಲು ಮುಂದಾಗಿದ್ದರು. ಈ ವೇಳೆ ಡಿಯೋ ಬೈಕ್‍ನಲ್ಲಿ ಬಂದ ದುಷ್ಕರ್ಮಿಗಳು ರಿಯಾಜ್ ಮೇಲೆ ಮಚ್ಚು-ಲಾಂಗುಗಳಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.

    ಈ ಘಟನೆಯಲ್ಲಿ ತಲೆಯ ಭಾಗಕ್ಕೆ ಗಂಭೀರವಾಗಿ ಗಾಯಗೊಂಡಿರುವ ರಿಯಾಜ್ ಸೋಮೇಶ್ವರ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಘಟನೆ ಸಂಬಂಧ ಪ್ರಕರಣ ದಾಖಲಿಸಿರುವ ಸಿದ್ದಾಪುರ ಪೊಲೀಸರು ಆರೋಪಿಗಳಿಗಾಗಿ ಪತ್ತೆ ಕಾರ್ಯ ನಡೆಸಿದ್ದಾರೆ.

  • ಶಿವರಾಂ ಹೆಬ್ಬಾರ್ ಭರ್ಜರಿ ವಿಜಯೋತ್ಸವ – 2 ಕ್ವಿಂಟಾಲ್ ಸೇಬಿನ ಹಾರ ಸಮರ್ಪಣೆ

    ಶಿವರಾಂ ಹೆಬ್ಬಾರ್ ಭರ್ಜರಿ ವಿಜಯೋತ್ಸವ – 2 ಕ್ವಿಂಟಾಲ್ ಸೇಬಿನ ಹಾರ ಸಮರ್ಪಣೆ

    ಕಾರವಾರ: ಉಪಚುನಾವಣಾ ಫಲಿತಾಂಶದ ಬಳಿಕ ಬಿಜೆಪಿ ಅಭ್ಯರ್ಥಿ ಶಿವರಾಂ ಹೆಬ್ಬಾರ್ ಭರ್ಜರಿ ವಿಜಯೋತ್ಸವ ಆಚರಿಸಿದರು.

    ವಾಹನದಲ್ಲಿ ಶಿರಸಿಯಾದ್ಯಂತ ಶಿವರಾಂ ಹೆಬ್ಬಾರ್ ಅವರಿಗೆ ಭರ್ಜರಿ ಮೆರವಣಿಗೆ ಮಾಡಲಾಯಿತು. ಪಟಾಕಿ ಹೊಡೆದು, ಕ್ರೇನ್ ಮೂಲಕ ಬೃಹತ್ ಸೇಬಿನ ಹಾರ ಹಾಕಿ ಅಭಿಮಾನಿಗಳಿಂದ ಸ್ವಾಗತಿಸಿ ಸಂಭ್ರಮಿಸಿದರು.

    2 ಕ್ವಿಂಟಾಲ್ ಭಾರದ ಈ ಮಾಲೆಗೆ 1500ಕ್ಕೂ ಅಧಿಕ ಸೇಬು ಹಣ್ಣನ್ನು ಬಳಸಲಾಗಿದೆ. ಈ ಸಂದರ್ಭದಲ್ಲಿ ಸೇಬಿಗಾಗಿ ಅಭಿಮಾನಿಗಳು ಮುಗಿಬಿದ್ದು ಹಣ್ಣುಗಳನ್ನು ಕಿತ್ತುಕೊಂಡರು. ನಗರದ ಪ್ರಮುಖ ಬೀದಿಯಲ್ಲಿ ಮೆರವಣಿಗೆಯಲ್ಲಿ ಆಗಮಿಸಿದ ಶಿವರಾಂ ಅವರು ಶಿರಸಿ ಮಾರಿಕಾಂಬಾ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

    ಯಲ್ಲಾಪುರ- ಮುಂಡಗೋಡ ವಿಧಾನಸಭಾ ಕ್ಷೇತ್ರದ ಶಿವರಾಂ ಹೆಬ್ಬಾರ್ ಅವರು 80,440 ಮತಗಳನ್ನು ಪಡೆದು ಭರ್ಜರಿ ಗೆಲುವು ದಾಖಲಿಸಿದರು. ಸಮೀಪದ ಸ್ಪರ್ಧಿ ಕಾಂಗ್ರೆಸ್ ಪಕ್ಷದ ಭೀಮಣ್ಣ ನಾಯ್ಕ ಅವರನ್ನು 31,406 ಮತಗಳ ಅಂತರದಿಂದ ಸೋಲಿಸಿದ್ದಾರೆ.

    ಕಾಂಗ್ರೆಸ್‍ನಿಂದ ಗೆದ್ದು ಶಾಸಕರಾಗಿದ್ದ ಶಿವರಾಂ ಹೆಬ್ಬಾರ್ ಅವರ ರಾಜೀನಾಮೆ ಹಾಗೂ ಅನರ್ಹತೆಯಿಂದಾಗಿ ಕ್ಷೇತ್ರಕ್ಕೆ ಡಿ. 5ರಂದು ಉಪಚುನಾವಣೆಯ ಮತದಾನ ನಡೆದಿತ್ತು. 1.72 ಲಕ್ಷ ಮತದಾರರಿದ್ದ ಕ್ಷೇತ್ರದಲ್ಲಿ ಶೇ. 77.52 ಮತದಾನವಾಗಿತ್ತು. 65,381 ಪುರುಷ ಹಾಗೂ 68,182 ಮಹಿಳೆಯರು ಸೇರಿ ಒಟ್ಟು 1,33,564 ಮಂದಿಯಿಂದ ಮತದಾನವಾಗಿತ್ತು.

  • ಅತ್ಯಾಚಾರಿಗಳ ಎನ್‍ಕೌಂಟರ್ ಸಂಭ್ರಮಾಚರಣೆಯಲ್ಲೂ ಕಾಮುಕನ ಕಳ್ಳಾಟ

    ಅತ್ಯಾಚಾರಿಗಳ ಎನ್‍ಕೌಂಟರ್ ಸಂಭ್ರಮಾಚರಣೆಯಲ್ಲೂ ಕಾಮುಕನ ಕಳ್ಳಾಟ

    ತುಮಕೂರು: ಹೈದರಾಬಾದ್ ದಿಶಾ ಪ್ರಕರಣ ಅತ್ಯಾಚಾರಿಗಳನ್ನು ಸೈಬರಾಬಾದ್ ಪೊಲೀಸ್ ಆಯುಕ್ತ ವಿಶ್ವನಾಥ್ ಸಜ್ಜನರ್ ನೇತೃತ್ವದ ತಂಡ ಎನ್‍ಕೌಂಟರ್ ಮಾಡಿರುವ ಹಿನ್ನೆಲೆ ಸಂಭ್ರಮಾಚರಣೆ ವೇಳೆ ಕಳ್ಳಾಟವಾಡಿದ ಕಾಮುಕನಿಗೆ ಸಖತ್ ಗೂಸ ಬಿದ್ದಿದೆ.

    ಇಡೀ ದೇಶವೇ ಹೈದರಾಬಾದ್ ಪೊಲೀಸರ ಕಾರ್ಯವನ್ನು ಶ್ಲಾಘಿಸಿದೆ. ಅತ್ಯಚಾರಿಗಳನ್ನು ಎನ್‍ಕೌಂಟರ್ ಮಾಡಿದ ಖುಷಿಯಲ್ಲಿ ತುಮಕೂರಿನಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರು ಸಂಭ್ರಮಾಚರಣೆ ಮಾಡಿದ್ದಾರೆ. ತಿಪಟೂರು ನಗರದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ಬಳಿ ವಿದ್ಯಾರ್ಥಿನಿಯರು, ಸಾರ್ವಜನಿಕರು ಸಿಹಿ ಹಂಚಿ ಸಂತೋಷಪಟ್ಟಿದ್ದಾರೆ. ಈ ನಡುವೆ ಹುಡಿಗಿಯರನ್ನ ಚುಡಾಯಿಸಿದ ವ್ಯಕ್ತಿಗೆ ವಿದ್ಯಾರ್ಥಿನಿಯರು ಹಾಗೂ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿದ್ದಾರೆ.

    ಕಾಮುಕರಿಗೆ ಪೊಲೀಸರು ಎನ್‍ಕೌಂಟರ್ ಮಾಡಿ ತಕ್ಕಶಾಸ್ತಿ ಮಾಡಿದ್ದಾರೆ ಎಂದು ಜನರು ಖುಷಿಪಟ್ಟು ಸಂಭ್ರಮಿಸುತ್ತಿದ್ದಾಗಲೇ ಈ ಘಟನೆ ನಡೆದಿರುವುದು ವಿರ್ಪಯಾಸ ಎಂದು ಸಾರ್ವಜನಿಕರು ಬೇಸರ ವ್ಯಕಪಡಿಸಿದ್ದಾರೆ.

    ಹೈದರಾಬಾದ್-ಬೆಂಗಳೂರು ಹೈವೇ 44ರಲ್ಲಿ ಪೊಲೀಸರು ಅತ್ಯಾಚಾರಿಗಳನ್ನು ಎನ್‍ಕೌಂಟರ್ ಮಾಡಿದ್ದಾರೆ. ಕಾಮುಕರು ಪಶುವೈದ್ಯೆಯನ್ನು ಬೆಂಕಿ ಹಚ್ಚಿ ಸುಟ್ಟ ಸ್ಥಳದಲ್ಲೇ ಪೊಲೀಸರು ಅತ್ಯಾಚಾರಿಗಳ ಮೇಲೆ ಫೈರಿಂಗ್ ಮಾಡಿ ಹತ್ಯೆ ಮಾಡಿದ್ದಾರೆ. ಪಶುವೈದ್ಯೆಯನ್ನು ಸುಟ್ಟ ಘಟನಾ ಸ್ಥಳ ಮಹಜರು ವೇಳೆ ಆರೋಪಿಗಳು ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಈ ವೇಳೆ ಪೊಲೀಸರು ನಾಲ್ವರು ಅತ್ಯಾಚಾರಿಗಳ ಮೇಲೆ ಎನ್‍ಕೌಂಟರ್ ಮಾಡಿದ್ದಾರೆ.