Tag: celebration

  • ಸಾಂಸ್ಕೃತಿಕ ನಗರದಲ್ಲಿ ದೊಡ್ಮನೆ ಮನೆಯ ಅದ್ಧೂರಿ ನಿಶ್ಚಿತಾರ್ಥ ಸಂಭ್ರಮ!

    ಸಾಂಸ್ಕೃತಿಕ ನಗರದಲ್ಲಿ ದೊಡ್ಮನೆ ಮನೆಯ ಅದ್ಧೂರಿ ನಿಶ್ಚಿತಾರ್ಥ ಸಂಭ್ರಮ!

    ಮೈಸೂರು: ಸ್ಯಾಂಡಲ್‍ವುಡ್ ದೊಡ್ಮನೆ ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿದ್ದು, ಸಾಂಸ್ಕೃತಿಕ ನಗರದಲ್ಲಿ ರಾಘವೇಂದ್ರ ರಾಜ್‍ಕುಮಾರ್ ಪುತ್ರ ನಿಶ್ಚಿತಾರ್ಥ ನಡೆದಿದೆ.

    ಯುವರಾಜ್‍ಕುಮಾರ್ ಹಾಗೂ ಶ್ರೀದೇವಿ ಉಂಗುರ ಬದಲಾಯಿಸಿಕೊಂಡಿದ್ದಾರೆ. ಖಾಸಗಿ ಹೊಟೇಲ್‍ನಲ್ಲಿ ನಡೆದ ಸಮಾರಂಭದಲ್ಲಿ ಈ ಜೋಡಿ ಎಂಗೇಜ್ ಆಗಿದ್ದಾರೆ. ಯುವ ಹಾಗೂ ಶ್ರೀದೇವಿ ಉಂಗುರ ಬದಲಾವಣೆ ವೇಳೆ ರಾಜ್ ಕುಟುಂಬ ಸದಸ್ಯರು ಹಾಜರಾಗಿದ್ದು, ಕುಟುಂಬಸ್ಥರು ನವ ಜೋಡಿಗೆ ಶುಭ ಹಾರೈಸಿದರು.

    ಇಂದು ಬೆಳಗ್ಗೆ 11 ಗಂಟೆಗೆ ಸಂಪ್ರದಾಯದ ಪ್ರಕಾರ ಕಾರ್ಯಕ್ರಮ ನೇರವೇರಿದೆ. ಈ ಕಾರ್ಯಕ್ರಮಕ್ಕೆ ರಾಜ್ ಕುಟುಂಬಸ್ಥರು ಕೇವಲ ಆಪ್ತರಿಗಷ್ಟೆ ಆಹ್ವಾನ ನೀಡಲಾಗಿತ್ತು. ಇನ್ನೂ ಈ ಕಾರ್ಯಕ್ರಮದಲ್ಲಿ ನಲಪಾಡ್ ದಾಳಿಯಿಂದ ಹಲ್ಲೆಗೊಳಗಾಗಿದ್ದ ವಿದ್ವತ್ ಕೂಡ ಕಾಣಿಸಿಕೊಂಡಿದ್ದರು. ಹಲ್ಲೆಗೊಳಗಾಗಿದ್ದ ವಿದ್ವತ್ ಈಗ ಸಂಪೂರ್ಣವಾಗಿ ಗುಣಮುಖರಾಗಿದ್ದು, ತನ್ನ ಬಾಲ್ಯ ಸ್ನೇಹಿತನ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

    ಈ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ನಟ ಶಿವರಾಜ್‍ಕುಮಾರ್ ಹಾಗೂ ಪುನೀತ್‍ರಾಜ್‍ಕುಮಾರ್ ಭಾಗಿಯಾಗಿದ್ದರು. ಈ ಸಮಾರಂಭಕ್ಕೆ ಅದ್ಧೂರಿ ವೇದಿಕೆ ಹಾಗೂ ಭಾರೀ ಭೋಜನವನ್ನು ಸಿದ್ಧಪಡಿಸಲಾಗಿತ್ತು.

    ಶಿವರಾಜ್‍ಕುಮಾರ್ ಮಾತನಾಡಿ, ಕುಟುಂಬದಲ್ಲಿ ಕಾರ್ಯಕ್ರಮ ನೆರವೇರಿದರೆ ಯಾವಾಗಲೂ ಸಂತೋಷವೇ ಆಗುತ್ತದೆ. ಮೈಸೂರಿನ ಮಗಳು ನಮ್ಮ ಮನೆ ಸೇರಿಕೊಳ್ಳುತ್ತಿರುವುದಕ್ಕೆ ಖುಷಿ ಇದೆ. ಶ್ರೀದೇವಿ ಹಾಗೂ ಯುವನಿಗೆ ಒಳ್ಳೆಯದಾಗಲಿ ಎಂದು ಹೇಳಿದ್ದಾರೆ.

    ಮೈಸೂರಿಗೆ ಯುವರಾಜ್‍ಕುಮಾರ್, ರಾಜ್ ಕುಟುಂಬದ ಎರಡನೇ ಅಳಿಯ. ಹಾಗಾಗಿ ಮೈಸೂರಿಗೆ ಬರೋದಂದ್ರೆ ನಮಗೆಲ್ಲ ಖುಷಿ ಇದೆ. ನಮ್ಮ ಸಿನಿಮಾಗಳು ಹಾಗೂ ಅಪ್ಪಾಜಿ ಸಿನಿಮಾಗಳು ಇಲ್ಲೆ ಶೂಟಿಂಗ್ ಆಗುತ್ತಿದ್ದವು. ಜೊತೆಗೆ ನಮಗೆ ದಸರಾ ನೋಡಲು ತುಂಬಾ ಖುಷಿಯಾಗುತ್ತೆ. ಇದೀಗ ಮೈಸೂರಿನ ಮಗಳು ನಮ್ಮ ಮನೆಗೆ ಬರ್ತಿದ್ದಾರೆ ಇದು ಕೂಡ ಖುಷಿ ವಿಷಯ. ಇನ್ನಷ್ಟು ಸಂಬಂಧಗಳು ಮೈಸೂರಿನಿಂದ ಬೆಳೆಯಲಿ. ಇಂದು ಬೇರೆ ಏನೂ ವಿಶೇಷ ಇಲ್ಲ. ಜಸ್ಟ್ ಉಂಗುರ ಬದಲಾಯಿಸಿಕೊಂಡಿದ್ದಾರೆ. ಯುವ ಹಾಗೂ ಶ್ರೀದೇವಿಗೆ ನಟ ಶಿವರಾಜ್‍ಕುಮಾರ್ ಕಂಗ್ರಾಟ್ಸ್ ಎಂದರು.

    ಡಾ. ರಾಜ್ ಸಮಾಧಿ ಬಳಿ ಯೋಗ ಕೇಂದ್ರ ನಿರ್ಮಾಣ ವಿಚಾರದ ಬಗ್ಗೆಯೂ ಮಾತನಾಡಿ, ನಾನು ನಮ್ಮ ಮನೆಯ ಕಾರ್ಯಕ್ರಮದಲ್ಲಿ ಬ್ಯೂಸಿಯಾಗಿದ್ದೆ. ಈ ಘೋಷಣೆ ಬಗ್ಗೆ ನನಗೆ ಮಾಹಿತಿ ಇಲ್ಲ. ಮಾಹಿತಿ ತಿಳಿದುಕೊಳ್ಳದೆ ಮಾತನಾಡಬಾರದು. ಆ ಬಗ್ಗೆ ತಿಳಿದುಕೊಂಡು ಮಾತನಾಡುತ್ತೇನೆ. ಯಾವುದೇ ಸರ್ಕಾರ ಇರಲಿ ಒಳ್ಳೆದು ಮಾಡಿದ್ರೆ ಸಾಕು. ರೈತರ ಸಮಸ್ಯೆಗಳು ಏನಿದೆ ಅದನ್ನ ಬಗೆಹರಿಸಿದ್ರೆ ಸಾಕು. ಎಲ್ಲರಿಗೂ ಒಳ್ಳೆದು ಆದ್ರೆ ನಮಗೆ ಖುಷಿ ಎಂದರು.

    ಈ ಹಿಂದೆ ಯುವ ಅವರ ಹೆಸರು ಗುರು ರಾಜ್‍ಕುಮಾರ್ ಆಗಿದ್ದು, ಈಗ ಯುವ ರಾಜ್‍ಕುಮಾರ್ ಎಂದು ಹೆಸರು ಬದಲಾಯಿಸಿಕೊಂಡಿದ್ದಾರೆ. ಯುವ ರಾಜ್‍ಕುಮಾರ್ ಇದುವರೆಗೂ ಯಾವ ಸಿನಿಮಾದಲ್ಲೂ ಹೀರೋ ಆಗಿ ಕಾಣಿಸಿಕೊಂಡಿಲ್ಲ. ಆದರೆ ತಮ್ಮ ಹೋಮ್ ಬ್ಯಾನರ್‍ನಲ್ಲಿ ಬರುವ ಚಿತ್ರಗಳ ತೆರೆ ಹಿಂದೆ ಕೆಲಸ ಮಾಡಿದ್ದಾರೆ. ಸದ್ಯ ಯುವ ಮದುವೆ ಆದ ನಂತರ ಹೀರೋ ಆಗಿ ಕಾಣಿಸಿಕೊಳ್ಳಿದ್ದಾರೆ ಎಂದು ಹೇಳಲಾಗಿದೆ.

  • ದೊಡ್ಮನೆಯಲ್ಲಿ ಮತ್ತೆ ಶುರುವಾಯ್ತು ಮದುವೆಯ ಸಂಭ್ರಮ!

    ದೊಡ್ಮನೆಯಲ್ಲಿ ಮತ್ತೆ ಶುರುವಾಯ್ತು ಮದುವೆಯ ಸಂಭ್ರಮ!

    ಬೆಂಗಳೂರು: ಸ್ಯಾಂಡಲ್‍ವುಡ್ ದೊಡ್ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿದೆ. ರಾಜ್‍ಕುಮಾರ್ ಅವರ ಮೊಮ್ಮಗ ಹಾಗೂ ನಟ ರಾಘವೇಂದ್ರ ರಾಜ್‍ಕುಮಾರ್ ಅವರ ಎರಡನೇ ಪುತ್ರ ಯುವ ರಾಜ್‍ಕುಮಾರ್ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದಾರೆ.

    ಯುವ ರಾಜ್‍ಕುಮಾರ್ ಅವರ ನಿಶ್ಚಿತಾರ್ಥ ಗುರುವಾರ ಜರುಗಲಿದೆ. ಮೈಸೂರು ಮೂಲದ ಶ್ರೀದೇವಿ ಭೈರಪ್ಪ ಅವರ ಜೊತೆ ಯುವ ರಾಜ್‍ಕುಮಾರ್ ನಿಶ್ಚಿತಾರ್ಥ ಮೈಸೂರಿನ ಹೋಟಲ್ ವೊಂದರಲ್ಲಿ ನಡೆಯಲಿದೆ. ಈ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಕುಟುಂಬಸ್ಥರು ಮತ್ತು ಆಪ್ತ ಬಂಧುಗಳು ಮಾತ್ರ ಭಾಗಿಯಾಗಲಿದ್ದಾರೆ.

    ಯುವ ರಾಜ್‍ಕುಮಾರ್ ಹಾಗೂ ಶ್ರೀದೇವಿ ಭೈರಪ್ಪ ಇಬ್ಬರು ಹಲವು ವರ್ಷಗಳಿಂದ ಸ್ನೇಹಿತರಾಗಿದ್ದರು. ಇವರ ಸ್ನೇಹ ಈಗ ಪ್ರೀತಿಗೆ ತಿರುಗಿದೆ. ಈಗ ಇಬ್ಬರ ಕುಟುಂಬದ ಸಮ್ಮುಖದಲ್ಲಿ ಈ ಜೋಡಿ ಈಗ ನಿಶ್ಚಿತಾರ್ಥ ನೆರವೇರಲಿದೆ.

    ಈ ಹಿಂದೆ ಯುವ ಅವರ ಹೆಸರು ಗುರು ರಾಜ್‍ಕುಮಾರ್ ಆಗಿದ್ದು, ಈಗ ಯುವ ರಾಜ್‍ಕುಮಾರ್ ಎಂದು ಹೆಸರು ಬದಲಾಯಿಸಿಕೊಂಡಿದ್ದಾರೆ. ಯುವ ರಾಜ್‍ಕುಮಾರ್ ಇದುವರೆಗೂ ಯಾವ ಸಿನಿಮಾದಲ್ಲೂ ಹೀರೋ ಆಗಿ ಕಾಣಿಸಿಕೊಳ್ಳಲಿಲ್ಲ. ಆದರೆ ತಮ್ಮ ಹೋಮ್ ಬ್ಯಾನರ್‍ನಲ್ಲಿ ಬರುವ ಚಿತ್ರಗಳ ತೆರೆ ಹಿಂದೆ ಕೆಲಸ ಮಾಡಿದ್ದಾರೆ. ಸದ್ಯ ಯುವ ಮದುವೆ ಆದ ನಂತರ ಹೀರೋ ಆಗಿ ಕಾಣಿಸಿಕೊಳ್ಳಿದ್ದಾರೆ ಎಂದು ಹೇಳಲಾಗಿದೆ.

  • ನಂಜನಗೂಡಿನಲ್ಲಿ ಗಿರಿಜಾ ಕಲ್ಯಾಣೋತ್ಸವ ಸಂಭ್ರಮ

    ನಂಜನಗೂಡಿನಲ್ಲಿ ಗಿರಿಜಾ ಕಲ್ಯಾಣೋತ್ಸವ ಸಂಭ್ರಮ

    ಮೈಸೂರು: ನಂಜನಗೂಡಿನಲ್ಲಿ ಸಂಭ್ರಮದಿಂದ ಗಿರಿಜಾ ಕಲ್ಯಾಣೋತ್ಸವ ನಡೆಯಿತು. ಗಿರಿಜಾ ಕಲ್ಯಾಣೋತ್ಸವದ ಹಿನ್ನೆಲೆಯಲ್ಲಿ 8 ದಿನಗಳ ಕಾಲ ವಿವಿಧ ಕಾರ್ಯಕ್ರಮಗಳನ್ನ ದೇಗುಲದ ಆಡಳಿತ ಮಂಡಳಿ ಆಯೋಜಿಸಿದೆ

    ಬೆಳ್ಳಿ ಪಲ್ಲಕ್ಕಿಯಲ್ಲಿ ಶ್ರೀಕಂಠೇಶ್ವರ ಸ್ವಾಮಿಯ ವಿವಾಹ ಮಹೋತ್ಸವ ಭಾನುವಾರ ನಡೆಯಿತು. ಇದರ ಮುಂದುವರಿದ ಭಾಗವಾಗಿ ಇವತ್ತು ನಂಜನಗೂಡಿನಲ್ಲಿ ಅದ್ಧೂರಿ ಮೆರವಣಿಗೆ ನಡೆಯಿತು.

    ಸಾಂಸ್ಕೃತಿಕ ಕಲಾ ತಂಡಗಳ ಈ ಮೆರವಣಿಗೆಗೆ ಮೆರುಗು ತುಂಬಿದವು. ವೀರಗಾಸೆ, ಡೊಳ್ಳುಕುಣಿತ ಸೇರಿ ಹಲವು ಕಲಾ ತಂಡಗಳು ಭಾಗಿಯಾಗಿದ್ದವು. ಸಾವಿರಾರು ಭಕ್ತರು ಕಲ್ಯಾಣೋತ್ಸವವನ್ನು ಕಣ್ತುಂಬಿ ಕೊಂಡರು. ಗಿರಿಜಾಕಲ್ಯಾಣ ಮಹೋತ್ಸವದ ಪ್ರಯುಕ್ತ ದೇವಾಲಯದ ಒಳಾವರಣದಲ್ಲಿ ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ದೇವರನಾಮ, ಭಕ್ತಿಗೀತೆ, ತತ್ವಪದ ಹಾಗೂ ಸುಗಮ ಸಂಗೀತ ಗಾಯನ ಕಾರ್ಯಕ್ರಮ ನಡೆಯಲಿದೆ.

  • ಸ್ಟಾರ್ ನಟನ ಜೊತೆ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಬಿಗ್ ಬಾಸ್ ದಿವಾಕರ್!

    ಸ್ಟಾರ್ ನಟನ ಜೊತೆ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಬಿಗ್ ಬಾಸ್ ದಿವಾಕರ್!

    ಬೆಂಗಳೂರು: ಬಿಗ್ ಬಾಸ್ ಸೀಸನ್-5 ರನ್ನರ್ ಅಪ್ ದಿವಾಕರ್ ಇಂದು ತಮ್ಮ 29ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ದಿವಾಕರ್ ತಮ್ಮ ಹುಟ್ಟುಹಬ್ಬವನ್ನು ಸ್ಟಾರ್ ನಟನ ಜೊತೆ ಆಚರಿಸಿಕೊಂಡಿದ್ದಾರೆ.

    ದಿವಾಕರ್, ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಅವರನ್ನು ಭೇಟಿ ಮಾಡಿ ಅವರ ಜೊತೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ತಮ್ಮ ಹುಟ್ಟುಹಬ್ಬದಂದು ಶಿವಣ್ಣನನ್ನು ಭೇಟಿ ಮಾಡಿ ಸಿಹಿ ತಿನಿಸಿ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಶಿವಣ್ಣ ಕೂಡ ದಿವಾಕರ್ ಗೆ ಸಿಹಿ ತಿನಿಸಿ ಒಳ್ಳೆಯದಾಗಲಿ ಎಂದು ಶುಭಾಶಯ ತಿಳಿಸಿದ್ದಾರೆ.

    ದಿವಾಕರ್ ಈಗ ಸಿನಿಮಾರಂಗಕ್ಕೆ ಪ್ರವೇಶ ಮಾಡಿದ್ದು, ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸದ್ಯ ಈಗ ಅವರು ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪುತ್ರ ಮನೋರಂಜನ್ ರವಿಚಂದ್ರನ್ ಅವರ ‘ಚಿಲ್ಲಂ’ ಚಿತ್ರದಲ್ಲಿ ನಟಿಸುತ್ತಿದ್ದಾರೆ.

    ಚಿಲ್ಲಂ ಚಿತ್ರದಲ್ಲಿ ದಿವಾಕರ್ ಮನೋರಂಜನ್ ಅವರ ಸ್ನೇಹಿತನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾದಲ್ಲಿ ದಿವಾಕರ್ ನೆಗೆಟಿವ್ ಶೇಡ್‍ನಲ್ಲಿ ಮಿಂಚಲಿದ್ದು, ಇಡೀ ಸಿನಿಮಾದಲ್ಲಿ ಮನೋರಂಜನ್ ಜೊತೆಯಲ್ಲೇ ಕಾಣಿಸಿಕೊಳ್ಳಲಿದ್ದಾರೆ.

    ದಿವಾಕರ್ ಈಗಾಗಲೇ ಚಿಲ್ಲಂ ಚಿತ್ರಕ್ಕೆ ಎಲ್ಲ ತಯಾರಿಗಳನ್ನು ನಡೆಸಿದ್ದಾರೆ. ದಿವಾಕರ್ ಈ ಚಿತ್ರಕ್ಕಾಗಿ ಫೋಟೋಶೂಟ್ ಕೂಡ ಮಾಡಿಸಿದ್ದಾರೆ. ಚಿಲ್ಲಂ ಚಿತ್ರದ ಜೊತೆಗೆ ದಿವಾಕರ್ ಅವರಿಗೆ ಮತ್ತಷ್ಟು ಸಿನಿಮಾಗಳಲ್ಲಿ ನಟಿಸುವ ಅವಕಾಶ ದೊರೆತಿದ್ದು, ಮುಂದಿನ ದಿನಗಳಲ್ಲಿ ಹೆಚ್ಚು ಸಿನಿಮಾ ಮಾಡುವ ಬಯಕೆ ವ್ಯಕ್ತಪಡಿಸಿದ್ದಾರೆ.

  • ಮದುವೆ ನಂತರ ಬ್ಯಾಕ್ ಟು ಬ್ಯಾಕ್ ಸಂಭ್ರಮದಲ್ಲಿದ್ದಾರೆ ಚಿರು- ಮೇಘನಾ!

    ಮದುವೆ ನಂತರ ಬ್ಯಾಕ್ ಟು ಬ್ಯಾಕ್ ಸಂಭ್ರಮದಲ್ಲಿದ್ದಾರೆ ಚಿರು- ಮೇಘನಾ!

    ಬೆಂಗಳೂರು: ಸ್ಯಾಂಡಲ್ ವುಡ್ ಕ್ಯೂಟ್ ಕಪಲ್ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಒಂದು ತಿಂಗಳು ಆಗಲಿಲ್ಲ. ಈಗ ಮತ್ತೆ ಚಿರು ಮನೆಯಲ್ಲಿ ಇವರಿಬ್ಬರು ಬ್ಯಾಕ್ ಟು ಬ್ಯಾಕ್ ಸಂಭ್ರಮ ಆಚರಿಸುತ್ತಿದ್ದಾರೆ.

    ಮೇ 25 ನಟಿ ಮೇಘನಾ ರಾಜ್ ಅವರಿಗೆ ವಿಶೇಷವಾದ ದಿನವಾಗಿದ್ದು, ತಮ್ಮ ‘ಇರುವುದೆಲ್ಲವ ಬಿಟ್ಟು’ ಚಿತ್ರದ ಆಡಿಯೋ ಬಿಡುಗಡೆಯಾಗಲಿದೆ. ಈ ಚಿತ್ರ ಮೇಘನಾ ಅವರ ಕೆರಿಯರ್ ನಲ್ಲೇ ತುಂಬಾ ವಿಶೇಷವಾದ ಚಿತ್ರವಾಗಿದ್ದು, ಮೇಘನಾ ಮದುವೆಯಾದ ನಂತರ ಬಿಡುಗಡೆಯಾಗಲಿರುವ ಮೊದಲ ಸಿನಿಮಾ ಇದಾಗಿದೆ.

    ಮೇಘನಾ ರಾಜ್ ಅಭಿನಯಿಸುತ್ತಿರುವ ಇರುವುದೆಲ್ಲವ ಬಿಟ್ಟು ಚಿತ್ರದಲ್ಲಿ ತಮಿಳು ನಟ ಸಿಂಬು ಒಂದು ಹಾಡನ್ನು ಹಾಡಿದ್ದರು. ಈ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಸಿಂಬು, ಶಿವರಾಜ್‍ಕುಮಾರ್ ಸೇರಿದಂತೆ ಅನೇಕ ಕಲಾವಿದರು ಮುಖ್ಯ ಅತಿಥಿಗಳಾಗಿ ಆಗಮಿಸುತ್ತಿದ್ದಾರೆ.

    ಮೇ 28ರಂದು ಮೇಘನಾ ಪತಿ ನಟ ಚಿರಂಜೀವಿ ಸರ್ಜಾ ಅವರಿಗೂ ವಿಶೇಷವಾದ ದಿನವಾಗಿದೆ. ಚಿರು ಅಭಿನಯಿಸಿದ ‘ಅಮ್ಮ ಐ ಲವ್ ಯೂ’ ಚಿತ್ರದ ಆಡಿಯೋ ಬಿಡುಗಡೆ ಆಗುತ್ತಿದೆ. ತನ್ನ ಕೆರಿಯರ್ ನಲ್ಲಿ ಈ ಚಿತ್ರವನ್ನು ತುಂಬಾ ಇಷ್ಟಪಟ್ಟು ಅಭಿನಯಿಸುತ್ತಿದ್ದೇನೆ ಎಂದು ಚಿರು ಹೇಳಿಕೊಂಡಿದ್ದಾರೆ.

  • ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಮನೆಯಲ್ಲಿ ಇಂದು ಡಬಲ್ ಧಮಾಕಾ!

    ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಮನೆಯಲ್ಲಿ ಇಂದು ಡಬಲ್ ಧಮಾಕಾ!

    ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಅವರ ಮನೆಯಲ್ಲಿ ಇಂದು ಡಬಲ್ ಧಮಾಕಾ ನಡೆಯಲಿದೆ. ಶಿವರಾಜ್‍ಕುಮಾರ್ ಇಂದು ತಮ್ಮ 32ನೇ ವಿವಾಹ ವಾರ್ಷಿಕೋತ್ಸವ ಆಚರಿಸುತ್ತಿದ್ದು, ಮತ್ತೊಂದೆಡೆ ‘ಓಂ’ ಚಿತ್ರ ಬಿಡುಗಡೆಗೊಂಡು 23 ವರ್ಷಗಳು ಆಗಿದೆ.

    ಶಿವರಾಜ್‍ಕುಮಾರ್ ತನ್ನ ಪತ್ನಿ ಗೀತಾ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಇಂದಿಗೆ 32 ವರ್ಷ ಆಗಿದೆ. ಮೇ 19, 1986ರಲ್ಲಿ ಶಿವರಾಜ್‍ಕುಮಾರ್ ಪತ್ನಿ ಗೀತಾ ಅವರನ್ನು ಮದುವೆಯಾಗಿದ್ದರು. 32 ವರ್ಷದಲ್ಲಿ ಗೀತಾ ನಟ ಶಿವರಾಜ್‍ಕುಮಾರ್ ಅವರಿಗೆ ಅತ್ಯುತ್ತಮ ಪತ್ನಿ ಎನಿಸಿಕೊಂಡಿದ್ದಾರೆ. ಮನೆಗೆಲಸ ಅಲ್ಲದೇ ಶಿವರಾಜ್ ಕುಮಾರ್ ಅವರ ಸಿನಿಮಾಗೆ ಸಂಬಂಧಪಟ್ಟಂತ ಕೆಲಸಗಳಲೂ ಗೀತಾ ಶಿವಣ್ಣನಿಗೆ ಸಾಥ್ ನೀಡಿದ್ದಾರೆ.

    ಮೇ 19, 1986ರಲ್ಲಿ ಶಿವರಾಜ್‍ಕುಮಾರ್ ಗೀತಾ ಅವರ ಜೊತೆ ಆರೇಂಜ್ ಮ್ಯಾರೇಜ್ ಆಗಿದ್ದರು. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ನಿವೇದಿತಾ ಹಾಗೂ ನಿರೂಪಮಾ ಇಬ್ಬರೂ ಹೆಣ್ಣು ಮಕ್ಕಳಿದ್ದು, ನಿರೂಪಮಾ ಆಗಸ್ಟ್ 31, 2015ರಂದು ದಿಲೀಪ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ರಾಜ್‍ಕುಮಾರ್ ಮೊಮ್ಮಕ್ಕಳಲ್ಲಿ ನಿರೂಪಮಾ ಅವರ ಮೊದಲ ಮದುವೆಯಾಗಿದ್ದು, ಶಿವರಾಜ್‍ಕುಮಾರ್ ಅದ್ಧೂರಿಯಾಗಿ ತಮ್ಮ ಮಗಳ ಮದುವೆಯನ್ನು ನಡೆಸಿಕೊಟ್ಟಿದ್ದರು.

    ಇನ್ನೊಂದೆಡೆ ಸೂಪರ್ ಸ್ಟಾರ್ ಉಪೇಂದ್ರ ನಿರ್ದೇಶಿಸಿದ್ದ ಶಿವರಾಜ್‍ಕುಮಾರ್ ನಟನೆಯ ‘ಓಂ’ ಚಿತ್ರ ತೆರೆಗೆ ಬಂದು ಇಂದು 23 ವರ್ಷಗಳು ಆಗಿದೆ. ಮೇ 19, 1995ರಲ್ಲಿ ಓಂ ಚಿತ್ರ ಬಿಡುಗಡೆಯಾಗಿದ್ದು, ಚಿತ್ರ ಸೂಪರ್ ಡೂಪರ್ ಹಿಟ್ ಆಗಿತ್ತು. ಓಂ ಚಿತ್ರ 550 ಬಾರಿ ರೀ ರಿಲೀಸ್ ಆಗಿ ಕನ್ನಡ ಚಿತ್ರರಂಗದಲ್ಲಿ ಇತಿಹಾಸ ಬರೆದಿದೆ. ಓಂ ಚಿತ್ರಕ್ಕಾಗಿ ಶಿವರಾಜ್‍ಕುಮಾರ್ ಅವರಿಗೆ ಕರ್ನಾಟಕ ರಾಜ್ಯ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದಿದ್ದಾರೆ.

    ಓಂ ಚಿತ್ರ ಮಾಸ್ ಸಿನಿಮಾ ಹಾಗೂ ಅಂಡರ್ ವರ್ಲ್ಡ್ ಕಥೆಯನ್ನು ಹೊಂದಿದೆ. ಈ ಚಿತ್ರವನ್ನು ಉಪೇಂದ್ರ ಅವರು ನಿರ್ದೇಶನ ಮಾಡಿದ್ದು, ಶಿವರಾಜ್‍ಕುಮಾರ್ ಅವರಿಗೆ ನಟಿ ಪ್ರೇಮಾ ನಾಯಕಿಯಾಗಿ ಕಾಣಿಸಿಕೊಂಡಿದ್ದರು.

     

  • ಫಲಿತಾಂಶಕ್ಕೂ ಮೊದ್ಲೇ ಬಿಜೆಪಿ ಅಭ್ಯರ್ಥಿಯಿಂದ ವಿಜಯೋತ್ಸವ!

    ಫಲಿತಾಂಶಕ್ಕೂ ಮೊದ್ಲೇ ಬಿಜೆಪಿ ಅಭ್ಯರ್ಥಿಯಿಂದ ವಿಜಯೋತ್ಸವ!

    ಕಲಬುರಗಿ: ಸಂಗೋಳಗಿ (ಜಿ) ಗ್ರಾಮದಲ್ಲಿ ವಿಧಾನಸಭಾ ಚುನಾವಣೆ ಫಲಿತಾಂಶಕ್ಕೂ ಮುನ್ನವೇ ವಿಜಯೋತ್ಸವ ಆಚರಿಸಿದ ಘಟನೆ ಕಲಬುರಗಿ ಜಿಲ್ಲೆ ಆಳಂದ ತಾಲೂಕಿನಲ್ಲಿ ನಡೆದಿದೆ.

    ಆಳಂದ ಬಿಜೆಪಿ ಅಭ್ಯರ್ಥಿ ಸುಭಾಷ್ ಗುತ್ತೇದಾರ್ ಗೆಲುವು ನಿಶ್ಚಿತ ಎಂದು ವಿಜಯೋತ್ಸವ ಆಚರಿಸುತ್ತಿದ್ದಾರೆ. ಅಲ್ಲದೇ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಎಲ್ಲರಿಗೂ ಸಿಹಿ ಹಂಚಿ ಸಂಭ್ರಮಾಚರಣೆ ಮಾಡುತ್ತಿದ್ದಾರೆ.

    ಆಳಂದ ತಾಲೂಕಿನಾದ್ಯಂತ ಬಿಜೆಪಿ ಅಲೆಯಿದ್ದು, ಗೆಲುವು ಖಚಿತ ಎಂದು ಸಂಭ್ರಮಿಸುತ್ತಿದ್ದಾರೆ.

  • ಮೆಹೆಂದಿ ಹಾಕಿ ಮದುವೆಗೆ ರೆಡಿಯಾದ ತುಪ್ಪದ ಬೆಡಗಿ!

    ಮೆಹೆಂದಿ ಹಾಕಿ ಮದುವೆಗೆ ರೆಡಿಯಾದ ತುಪ್ಪದ ಬೆಡಗಿ!

    ಬೆಂಗಳೂರು: ಇತ್ತೀಚಿಗೆ ಸ್ಯಾಂಡಲ್‍ವುಡ್ ನಲ್ಲಿ ಹಲವು ನಟ-ನಟಿಯರ ಸುದ್ದಿ ಕೇಳಿಬರುತ್ತಿದ್ದು, ಈಗ ತುಪ್ಪದ ಬೆಡಗಿ ರಾಗಿಣಿ ಮಹೆಂದಿ ಹಾಕಿಕೊಂಡು ಮದುವೆಗೆ ಸಿದ್ಧರಾಗಿದ್ದಾರೆ.

    ರಾಗಿಣಿ ಇಷ್ಟು ಬೇಗ ಮದುವೆ ಆಗುತ್ತಾರಾ ಎಂದು ಆಶ್ಚರ್ಯ ಪಡಬೇಡಿ. ರಾಗಿಣಿ ತಮ್ಮ ಸ್ನೇಹಿತ ಮೆಹೆಕ್ ಮದುವೆಗೆ ಮೆಹೆಂದಿ ಹಾಕಿಸಿಕೊಂಡು ಸಂಭ್ರಮದಿಂದ ಓಡಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ಅವರ ಸ್ನೇಹಿತನ ಮದುವೆಗೆ ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದ್ದಾರೆ.

    ರಾಗಿಣಿ ಅವರ ಸ್ನೇಹಿತ ಮೆಹಕ್ ಹಿಮಾಚಲ ಪ್ರದೇಶದಲ್ಲಿದ್ದು, ಅವರ ಮದುವೆಗಾಗಿ ತಮ್ಮ ಬ್ಯೂಸಿ ಶೆಡ್ಯೂಲ್‍ನಲ್ಲೂ ಬಿಡುವು ಮಾಡಿಕೊಂಡಿದ್ದಾರೆ. ಅವರ ಮದುವೆಗೆ ಒಂದು ವಾರ ಇರುವಾಗಲೇ ರಾಗಿಣಿ ಹಿಮಾಚಲ್ ಪ್ರದೇಶಕ್ಕೆ ಪ್ರಯಾಣ ಬೆಳೆಸಿದ್ದಾರೆ.

    ರಾಗಿಣಿ ಜೊತೆ ಅವರ ಕುಟುಂಬವು ಕೂಡ ಮದುವೆಯಲ್ಲಿ ಬ್ಯುಸಿಯಾಗಿದ್ದಾರೆ. ರಾಗಿಣಿ ತನ್ನ ಸ್ನೇಹಿತನ ಮದುವೆಗಾಗಿ ಸಾಕಷ್ಟು ಸಂಭ್ರಮದಲ್ಲಿದ್ದು, ನೀಲಿ ಬಣ್ಣದ ವಸ್ತ್ರವನ್ನು ಧರಿಸಿ ತಮ್ಮ ಗೆಳೆಯನ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ.

     

     

     

  • ‘ಯುಗ ಯುಗಾದಿ ಕಳೆದರೂ… ಯುಗಾದಿ ಮರಳಿ ಬರುತಿದೆ…’ ಹಾಡಿಗೆ ಹೆಜ್ಜೆ ಹಾಕಿದ ಹಿರಿಯ ನಟಿ ಲೀಲಾವತಿ!

    ‘ಯುಗ ಯುಗಾದಿ ಕಳೆದರೂ… ಯುಗಾದಿ ಮರಳಿ ಬರುತಿದೆ…’ ಹಾಡಿಗೆ ಹೆಜ್ಜೆ ಹಾಕಿದ ಹಿರಿಯ ನಟಿ ಲೀಲಾವತಿ!

    ಬೆಂಗಳೂರು: ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ…… ಈ ಹಾಡನ್ನು ನೀವೆಲ್ಲರೂ ಕೇಳಿ ನೋಡಿ ಆನಂದಿಸಿದ್ದಿರಾ. ಬ್ಲಾಕ್ ಆಡ್ ವೈಟ್ ತೆರೆಯ ಮೇಲೆ 55 ವರ್ಷಗಳ ಹಿಂದೆ ಕುಲವಧು ಚಿತ್ರದ ಹಾಡಿಗೆ ಹೆಜ್ಜೆ ಹಾಕಿದ ತಾರೆ ನಟಿ ಲೀಲಾವತಿ. ಲೀಲಾವತಿ ಅವರು ತಮ್ಮ ಮನೆಯಲ್ಲಿ ಪಬ್ಲಿಕ್ ಟಿವಿ ತಂಡದ ಜೊತೆ ಯುಗಾದಿ ಹಬ್ಬದಂದು ಅದೇ ಹಾಡಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದ್ದಾರೆ.

    ಕರುನಾಡ ಕನ್ನಡಿಗರ ಮನೆ ಮಾತಾಗಿರುವ 55 ವರ್ಷಗಳ ಹಿಂದಿನ ಕುಲವಧು ಚಿತ್ರದ ಹಾಡಿಗೆ ಹೆಜ್ಜೆ ಹಾಕಿದ ಹಿರಿಯ ನಟಿ ಡಾ. ಲೀಲಾವತಿಯವರು ಯುಗಾದಿ ಹಬ್ಬವನ್ನ ತಮ್ಮ ಮನೆಯಲ್ಲಿ ಸರಳವಾಗಿ ಆಚರಿಸಿದರು. ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯ ತೋಟದ ಮನೆಯಲ್ಲಿ ಮಗ ವಿನೋದ್ ರಾಜ್ ಹಾಗೂ ಮನೆಯ ಕೆಲಸಗಾರರ ಜೊತೆ ಲೀಲಾವತಿಯವರು ದೇವರಿಗೆ ಪೂಜೆ ಸಲ್ಲಿಸಿ ಬೇವು ಬೆಲ್ಲ ತಿಂದು ಸಂತಸಪಟ್ಟರು.

     

    ಇದೇ ವೇಳೆ 1963ರಲ್ಲಿ ತಾವು ನಟಿಸಿರುವ ಕುಲವಧು ಚಿತ್ರದ ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತಿದೆ…. ಎಂಬ ಕರುನಾಡ ಕನ್ನಡಿಗರು ಮರೆಯಲಾಗದಂತಹ ಹಾಡಿಗೆ ಅಮ್ಮ-ಮಗ ಹೆಜ್ಜೆ ಹಾಕುವ ಮೂಲಕ ಯುಗಾದಿ ಹಬ್ಬವನ್ನ ಸಂಭ್ರಮಿಸಿದರು. ಐದುವರೆ ದಶಕದ ಹಿಂದಿನ ಕುಲವಧು ಚಿತ್ರದ ಸನ್ನಿವೇಶದ ಜೊತೆ ಮುಖ್ಯ ಪಾತ್ರವನ್ನ ನಟಿಸಿರುವ ವರನಟ ಡಾ.ರಾಜ್‍ರವರನ್ನು ನೆನೆದು ಲೀಲಾವತಿಯವರು ಕಣ್ಣೀರಿಟ್ಟರು.

    ಒಟ್ಟಾರೆ ಮರೆಯಾಗದ ಮಾಣಿಕ್ಯದಂತಿರುವ ಐದುವರೆ ದಶಕದ ಹಿಂದಿನ ಕುಲವಧು ಚಿತ್ರದ ಹಾಡು, ಇಂದಿಗೂ ಯುಗಾದಿ ಹಬ್ಬದ ಸಂಭ್ರಮಕ್ಕೆ ರಾಜ್ಯದ ಜನರಲ್ಲಿ ಮನೆ ಮಾತಾಗಿಯೇ ಉಳಿದಿದೆ.

     

     

  • ವಿಜಯಪುರ- ರಾಯಚೂರಿನಲ್ಲಿ ಹೋಳಿ ಸಂಭ್ರಮ- ವಯಸ್ಸಿನ ಬೇಧವಿಲ್ಲದೆ ಬಣ್ಣಗಳಲ್ಲಿ ಮಿಂದು ಸಂಭ್ರಮಿಸಿದ ಜನ

    ವಿಜಯಪುರ- ರಾಯಚೂರಿನಲ್ಲಿ ಹೋಳಿ ಸಂಭ್ರಮ- ವಯಸ್ಸಿನ ಬೇಧವಿಲ್ಲದೆ ಬಣ್ಣಗಳಲ್ಲಿ ಮಿಂದು ಸಂಭ್ರಮಿಸಿದ ಜನ

    ವಿಜಯಪುರ/ರಾಯಚೂರು: ಎಲ್ಲೆಲ್ಲೂ ಹೋಳಿ ಹಬ್ಬದ ಸಂಭ್ರಮ ಮುಗಿಲು ಮುಟ್ಟಿದೆ. ವಿಜಯಪುರ ಮತ್ತು ರಾಯಚೂರಿನಲ್ಲಿ ಹೋಳಿ ಹಬ್ಬವನ್ನ ಜನರು ಸಡಗರ ಸಂಭ್ರಮದಿಂದ ಆಚರಿಸುತ್ತಿದ್ದಾರೆ.

    ರಾಯಚೂರಿನಲ್ಲಿ ಮಾರ್ವಾಡಿ ಸಮಾಜದವರು ತಮ್ಮ ಮನೆಯಲ್ಲಿ ಜನಿಸಿದ ಮೊದಲ ಗಂಡು ಮಗುವಿಗೆ ಬಣ್ಣ ಹಚ್ಚಿ ಸಂಪ್ರದಾಯ ಬದ್ಧವಾಗಿ ಹಬ್ಬವನ್ನ ಆಚರಿಸುತ್ತಿದ್ದಾರೆ. ಹೋಳಿ ಹಿನ್ನೆಲೆ ಅಹಿತಕರ ಘಟನೆ ನಡೆಯದಂತೆ ನರಗದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಈ ಬಾರಿ ಬಣ್ಣದ ಜೊತೆ ಮೊಟ್ಟೆ ಹೊಡೆಯುವುದನ್ನ ನಿರ್ಬಂಧಿಸಲಾಗಿದೆ.

    ವಿಜಯಪುರದಲ್ಲಿ ವಯಸ್ಸಿನ ಬೇಧವಿಲ್ಲದೆ ಚಿಕ್ಕಮಕ್ಕಳಿಂದ ಹಿಡಿದು ಮಹಿಳೆಯರು, ಪುರುಷರು ಹಾಗೂ ವಯೊವೃದ್ದರವರೆಗೆ ಬಣ್ಣಗಳಲ್ಲಿ ಮಿಂದೆಳುತ್ತಿದ್ದಾರೆ. ಪರೀಕ್ಷಾ ಭಯದ ನಡುವೆಯೂ ಪಿಯುಸಿ ವಿದ್ಯಾರ್ಥಿಗಳು ಓಕುಳಿ ಆಟದಲ್ಲಿ ಕುಣಿದು ಕುಪ್ಪಳಿಸುತ್ತಿದ್ದಾರೆ.

    ಸಂಪ್ರದಾಯಿಕ ಹೋಳಿ ಹಬ್ಬಕ್ಕೆ ಬಿಜೆಪಿ ಪಕ್ಷದ ಕಾರ್ಯಕತ್ರರು ಶಿವಾಜಿ ವೃತ್ತದಲ್ಲಿ ಬೃಹತ್ ರಾವಣನ ಪ್ರತಿಕೃತಿ ದಹಿಸುವ ಮೂಲಕ ಹೋಳಿ ಹಬ್ಬಕ್ಕೆ ಚಾಲನೆ ನೀಡಿದರು. ಕಾಮಣ್ಣನ ಮಕ್ಕಳು ಕಳ್ಳನ ಮಕ್ಕಳು ಎಂದು ಕೇಕೆ, ಸಿಳ್ಳೆ ಹಾಕುತ್ತಾ ಯುವಕರು ಸಂಭ್ರಮಿಸಿದರು. ಬೈಕಲ್ಲಿ ಗುಂಪು ಗುಂಪಾಗಿ ಜಾಲಿ ರೈಡ್ ಮಾಡುತ್ತಾ ಕೈಯಲ್ಲಿ ಹಲಗೆ ಬಾರಿಸುತ್ತಾ ಕೇಕೆ ಹಾಕಿದರು.

    ಸ್ಥಳೀಯ ಸಂಸ್ಥೆಯೊಂದು ರಂಗ್ ಹೋಲಿ ಕಾ ಸಾಥ್ ಎಂಬ ನಾಮಫಲಕದೊಂದಿಗೆ ಮಹಿಳೆಯರಿಗೆ, ಯುವಕರಿಗೆ ಬಣ್ಣದ ಹಬ್ಬ ಆಡಲು ಆಶ್ರಮ ರಸ್ತೆಯ ಸರ್ಕಸ್ ಗ್ರೌಂಡ್ ನಲ್ಲಿ ವೇದಿಕೆ ಸಿದ್ಧಪಡಿಸಲಾಗಿದೆ. ನೂರಾರು ಯುವಕ ಯುವತಿಯರು ಡಿಜೆ ಹಾಡಿನೊಂದಿಗೆ ಕುಣಿದು ಕುಪ್ಪಳಿಸಿದ್ದಾರೆ.