Tag: celebration

  • ಪತ್ನಿ ಜೊತೆ ಆಶ್ರಮದಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ ಕೊಹ್ಲಿ

    ಪತ್ನಿ ಜೊತೆ ಆಶ್ರಮದಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ ಕೊಹ್ಲಿ

    ನವದೆಹಲಿ: ಭಾರತದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇಂದು ತಮ್ಮ 30ನೇ ಹುಟ್ಟುಹಬ್ಬವನ್ನು ಪತ್ನಿ ಅನುಷ್ಕಾ ಶರ್ಮಾ ಜೊತೆ ಉತ್ತರಾಖಂಡದ ಹರಿದ್ವಾರದ ಆಶ್ರಮದಲ್ಲಿ ಆಚರಿಸಿಕೊಳ್ಳುತ್ತಿದ್ದಾರೆ.

    ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಶನಿವಾರ ಡೆಹರಾಡೂನ್‍ನ ಜಾಲಿ ಗ್ರಾಂಟ್ ವಿಮಾನ ನಿಲ್ದಾಣಕ್ಕೆ ಬಂದು ಅಲ್ಲಿಂದ ನೇರವಾಗಿ ನರೇಂದ್ರ ನಗರದಲ್ಲಿರುವ ಹೋಟೆಲ್ ಆನಂದಕ್ಕೆ ತೆರಳಿದ್ದಾರೆ. ವಿರುಷ್ಕಾ ನವೆಂಬರ್ 7ರ ವರೆಗೂ ಅಲ್ಲಿಯೇ ಇದ್ದು, ರಿವರ್ ರಾಫ್ಟಿಂಗ್ ಹಾಗೂ ರಿಶಿಕೇಶ್‍ನಲ್ಲಿ ಕ್ಯಾಂಪಿಂಗ್ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

    ಕೊಹ್ಲಿ ಹಾಗೂ ಅನುಷ್ಕಾ ಇಂದು ಅನಂತ್ ಧಾಮ್ ಆತ್ಮಭೋದ್ ಆಶ್ರಮಕ್ಕೆ ಭೇಟಿ ನೀಡಿ ಅಲ್ಲಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಮಹರಾಜ್ ಅನಂತ್ ಬಾಬ ಆಶ್ರಮದ ಮುಖ್ಯಸ್ಥರಾಗಿದ್ದು, ಅನುಷ್ಕಾ ಅವರ ಕುಟುಂಬದ ಆಧ್ಯಾತ್ಮಿಕ ಗುರು ಎನ್ನಲಾಗಿದೆ. ವಿರಾಟ್ ಹಾಗೂ ಅನುಷ್ಕಾಗಾಗಿ ಅಲ್ಲಿ ಎಲ್ಲ ತಯಾರಿ ಮಾಡಲಾಗಿದೆ ಎಂದು ವರದಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪಟಾಕಿ ಸಿಡಿತದಿಂದ ಅನಾಹುತ ಸಂಭವಿಸಿದಾಗ ಏನು ಮಾಡ್ಬೇಕು? ಮುನ್ನೆಚ್ಚರಿಕಾ ಕ್ರಮಗಳೇನು?

    ಪಟಾಕಿ ಸಿಡಿತದಿಂದ ಅನಾಹುತ ಸಂಭವಿಸಿದಾಗ ಏನು ಮಾಡ್ಬೇಕು? ಮುನ್ನೆಚ್ಚರಿಕಾ ಕ್ರಮಗಳೇನು?

    ಬೆಂಗಳೂರು: ದೀಪಾವಳಿ ಅಂದರೆ ಬೆಳಕಿನ ಹಬ್ಬ, ಸಂಭ್ರಮದ ಹಬ್ಬ. ಆದರೆ ಈ ಬೆಳಕಿನ ಹಬ್ಬ ಅದೆಷ್ಟು ಜನರ ಬದುಕಲ್ಲಿ ಕತ್ತಲೆ ತಂದಿದೆ. ಪ್ರತಿ ವರ್ಷ ಪಟಾಕಿ ಸಿಡಿತದಿಂದ ಕಣ್ಣು ಕಳೆದುಕೊಳ್ಳುವ ದುರಂತಗಳು ನಡೆಯುತ್ತಲೇ ಇರುತ್ತವೆ. ಅದರಲ್ಲೂ ಯಾರೋ ಹಚ್ಚಿದ ಪಟಾಕಿಯ ಕಿಡಿಗೆ ಇನ್ಯಾರೋ ಕಣ್ಣು ಕಳೆದುಕೊಳ್ಳುವ ದುರಂತ ನಡೆಯುತ್ತಿದೆ. ಅಷ್ಟೆ ಅಲ್ಲದೇ ಶ್ರವಣ ದೋಷ, ಮಾಲಿನ್ಯದ ಪ್ರಮಾಣ ಹೆಚ್ಚಾಗುವುದರ ಜೊತೆಗೆ ಅಸ್ತಮಾ ರೋಗಿಗಳ ಸಂಖ್ಯೆಯೂ ಹೆಚ್ಚಾಗುತ್ತದೆ.

    ದೀಪಾವಳಿ ಪಟಾಕಿ ಸಿಡಿತದಿಂದ ಗಾಯಗೊಂಡವರಿಗಾಗಿ ನಗರದ ಮಿಂಟೋ ಆಸ್ಪತ್ರೆ ಪ್ರತ್ಯೇಕ ಬೆಡ್ ವ್ಯವಸ್ಥೆ ಮಾಡಿದೆ. ಅಲ್ಲದೇ ಇಪ್ಪತ್ತಾನಾಲ್ಕು ಗಂಟೆ ವೈದ್ಯರು ಹಾಗೂ ನರ್ಸ್ ಗಳ ಸೇವೆ ಲಭ್ಯವಿರುವಂತೆ ಸೂಚಿಸಿದೆ. 080-26707176 ಸಹಾಯವಾಣಿಯನ್ನು ಕೂಡ ತೆರೆದಿದೆ. ನಗರದ ನಾರಾಯಣ ನೇತ್ರಾಲಯದಲ್ಲಿ ಡಾ ಭುಜಂಗ ಶೆಟ್ಟಿ ದೀಪಾವಳಿ ಸಿಡಿತದಿಂದ ಗಾಯಗೊಂಡವರಿಗೆ ಉಚಿತ ಚಿಕಿತ್ಸೆ ನೀಡೋದಾಗಿ ಹೇಳಿದ್ದಾರೆ.

    ಪಟಾಕಿ ಸಿಡಿತದಿಂದ ಕಣ್ಣಿಗೆ ಹಾನಿಯಾದರೆ ತಕ್ಷಣಕ್ಕೆ ಯಾವ ಏನು ಮಾಡಬೇಕು, ಯಾವ ರೀತಿ ಮುನ್ನೇಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಅನ್ನುವ ಮಾಹಿತಿ ಇಲ್ಲಿದೆ.
    1. ಸ್ಫೋಟಕ ಪಟಾಕಿಗಳನ್ನು ಸಾಧ್ಯವಾದಷ್ಟು ದೂರವಿರಿಸಿ, ಮಕ್ಕಳಿಗೆ ಪಟಾಕಿ ಅದರಲ್ಲೂ ರಾಕೆಟ್‍ನಂತಹ ಡೇಂಜರಸ್ ಪಟಾಕಿ ನೀಡಬೇಡಿ. ಮಕ್ಕಳನ್ನು ಒಂಟಿಯಾಗಿ ಪಟಾಕಿ ಹೊಡೆಯಲು ಬಿಡಬೇಡಿ.
    2. ಪಟಾಕಿ ಸುಡೋದಕ್ಕೆ ಗಾಜಿನ ಬಾಟಲಿ, ಗಾಜಿನ ಕಂಟೇನರ್ ಬಳಸಬೇಡಿ. ಇದರಿಂದ ಅದರ ಚೂರು ಕಣ್ಣಿಗೆ ಹಾನಿ ಮಾಡಬಹುದು.
    3. ಪಟಾಕಿ ಸಿಡಿಸುವಾಗ ರೇಷ್ಮೆ, ಸಿಂಥೆಟಿಕ್ ಹಾಗೂ ಸಡಿಲವಾದ ಬಟ್ಟೆ ಧರಿಸಬೇಡಿ
    4. ಪಟಾಕಿ ಕಿಡಿ ಕಣ್ಣಿಗೆ ಬಿದ್ದಾಗ ಕಣ್ಣು ಉಜ್ಜಿಕೊಳ್ಳಬೇಡಿ.
    6. ಕೈಯಲ್ಲಿ ಪಟಾಕಿ ಸುಡುವ ಸಾಹಸ ಮಾಡಬೇಡಿ.

    ಹೀಗೆ ಮಾಡಿ:
    1. ಪಟಾಕಿ ಸಿಡಿಸುವಾಗ ಕಾಟನ್ ಬಟ್ಟೆ ಧರಿಸಿ
    2. ತೆರೆದ ಪ್ರದೇಶದಲ್ಲಿ ಪಟಾಕಿ ಸಿಡಿಸಿ
    3. ಕಣ್ಣಿಗೆ ಕಿಡಿ ತಾಕಿದಾಗ ಸ್ವಚ್ಛ ನೀರಿನಿಂದ ಕಣ್ಣನ್ನು ತೊಳೆಯಿರಿ, ಕೂಡಲೇ ಕಣ್ಣಿನ ಆಸ್ಪತ್ರೆಗೆ ಹೋಗಿ
    4. ಪಟಾಕಿ ಶಬ್ಧ ಕಿವಿಗೆ ಆಗುವ ಘಾಸಿ ತಡೆಯಲು ಹತ್ತಿಯನ್ನು ಕಿವಿಯಲ್ಲಿ ಇಟ್ಟುಕೊಳ್ಳಿ.
    5. ಪಟಾಕಿ ಮುಟ್ಟಿದ ಮೇಲೆ ಕೈಯನ್ನು ಸ್ವಚ್ಛವಾಗಿ ತೊಳೆಯಿರಿ
    6. ಆಸ್ತಮಾ ಸಮಸ್ಯೆ ಇರುವವರು ಸಿಟಿಯಲ್ಲಿ ಓಡಾಡುವಾಗ ಮಾಸ್ಕ್ ಧರಿಸಿ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬೆಂಗ್ಳೂರು ಮನೆಯಲ್ಲಿ ದೀಪಿಕಾ ಪಡುಕೋಣೆ ಮದ್ವೆ ಸಂಭ್ರಮ

    ಬೆಂಗ್ಳೂರು ಮನೆಯಲ್ಲಿ ದೀಪಿಕಾ ಪಡುಕೋಣೆ ಮದ್ವೆ ಸಂಭ್ರಮ

    ಬೆಂಗಳೂರು: ಬಾಲಿವುಡ್ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ಮನೆಯಲ್ಲಿ ಮದುವೆ ಸಂಭ್ರಮ ಶುರುವಾಗಿದೆ. ದೀಪಿಕಾ ಇಂದು ತಮ್ಮ ಬೆಂಗಳೂರಿನ ಮನೆಯಲ್ಲಿ ಪೂಜೆ ಮಾಡಿದ್ದಾರೆ.

    ದೀಪಿಕಾ ಪಡುಕೋಣೆ ಇಂದು ತಮ್ಮ ಬೆಂಗಳೂರಿನ ನಿವಾಸದಲ್ಲಿ ಸಬ್ಯಸಾಚಿ ಮುಖರ್ಜಿ ವಿನ್ಯಾಸ ಮಾಡಿದ ಸೂಟ್ ಧರಿಸಿ ಪೂಜೆಯಲ್ಲಿ ಭಾಗಿಯಾಗಿದ್ದಾರೆ. ಸದ್ಯ ತಮ್ಮ ಇನ್‍ಸ್ಟಾಗ್ರಾಂನಲ್ಲಿ ದೀಪಿಕಾ ಪೂಜೆ ಮಾಡುತ್ತಿರುವ ಫೋಟೋ ಹಾಗೂ ಕುಟುಂಬದವರ ಜೊತೆಯಿರುವ ಫೋಟೋವನ್ನು ಸಬ್ಯಸಾಚಿ ಪೋಸ್ಟ್ ಮಾಡಿದ್ದಾರೆ.

    ಸಬ್ಯಸಾಚಿ ಅವರು ತನ್ನ ಇನ್‍ಸ್ಟಾಗ್ರಾಂನಲ್ಲಿ ದೀಪಿಕಾ ಫೋಟೋ ಹಾಕಿ ಅದಕ್ಕೆ, “ಡಿಯರ್ ದೀಪಿಕಾ, ಒಂದು ಹೊಸ ಹಾಗೂ ಉತ್ಸಾಹ ಜೀವನ ನಿಮಗೆ ಶುರುವಾಗಿದೆ. ಸಬ್ಯಸಾಚಿ ಕಡೆಯಿಂದ ನಿಮಗೆ ಶುಭಾಶಯಗಳು” ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

    ದೀಪಿಕಾ ಹಾಗೂ ರಣವೀರ್ ಮದುವೆಯ 10 ದಿನದ ಮೊದಲು ದೀಪಿಕಾ ಅವರ ತಾಯಿ ಉಜ್ಜಲ ಪಡುಕೋಣೆ ಇಬ್ಬರಿಗಾಗಿ ನಂದಿ ಪೂಜಾ ಕಾರ್ಯವನ್ನು ಹಮ್ಮಿಕೊಂಡಿದ್ದಾರೆ ಎಂದು ವರದಿಯಾಗಿದೆ.

    ರಣ್‍ವೀರ್ ಹಾಗೂ ದೀಪಿಕಾ ಈ ತಿಂಗಳು 14 ಹಾಗೂ 15 ರಂದು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಮೂಲಗಳ ಪ್ರಕಾರ ಇಟಲಿಯ ಕೋಮೋ ಸಿಟಿಯಲ್ಲಿ ಈ ಮದುವೆ ನಡೆಯಲಿದೆ. ನಂತರ ಬೆಂಗಳೂರು ಹಾಗೂ ಮುಂಬೈನಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಸಲು ಕುಟುಂಬ ಸಿದ್ಧತೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪೋತಿಸ್ ಮಳಿಗೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

    ಪೋತಿಸ್ ಮಳಿಗೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

    ಬೆಂಗಳೂರು: ದಕ್ಷಿಣ ಭಾರತದ ಜವಳಿ ಮಾರಾಟ ಸಂಸ್ಥೆ ಪೋತಿಸ್ ಸಂಸ್ಥೆ ನಗರದಲ್ಲಿ ಅದ್ಧೂರಿಯಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದೆ.

    ಪೋತಿಸ್ ಮಳಿಗೆಯನ್ನು ಕೆಂಪು ಮತ್ತು ಹಳದಿ ಬಣ್ಣದಿಂದ ಶೃಂಗರಿಸಿ ಬಟ್ಟೆ ಖರೀದಿಗೆ ಆಗಮಿಸಿದ ಎಲ್ಲ ಗ್ರಾಹಕರಿಗೆ ಸಿಹಿ ನೀಡಿ ಸಂಂಭ್ರಮಾಚರಣೆ ಮಾಡಿದೆ. ಅಷ್ಟೇ ಅಲ್ಲದೇ ಮಧ್ಯಾಹ್ನ 1,500 ಮಂದಿಗೆ ಅನ್ನದಾನ ಸಹ ನಡೆಸಿ ವಿಶಿಷ್ಟವಾಗಿ ರಾಜೋತ್ಸವ ಆಚರಿಸಿದೆ. ಮಳಿಗೆಗೆ ಆಗಮಿಸಿದ ಗ್ರಾಹಕರಿಗೆ ಒಂದು ಸ್ವೀಟ್ ಬಾಕ್ಸ್ ಉಡುಗೊರೆ ನೀಡಿದ್ದು, ಇಡೀ ದಿನ ಮಳಿಗೆಯಲ್ಲಿ ಕನ್ನಡದ ಹಾಡುಗಳನ್ನು ಹಾಕುವ ಮೂಲಕ ಕನ್ನಡ ವಾತಾವರಣವನ್ನು ಸೃಷ್ಟಿಮಾಡಿತ್ತು.

    2018ರ ಫೆಬ್ರವರಿಯಲ್ಲಿ ಕೆಂಪೇಗೌಡ ರಸ್ತೆಯಲ್ಲಿ ಮಳಿಗೆ ಉದ್ಘಾಟನೆ ಮಾಡಿತ್ತು. ಅಲ್ಲದೇ ಸಂಸ್ಥೆಯ ರಾಯಭಾರಿಯಾಗಿ ನಟ ಪುನೀತ್ ರಾಜ್‍ಕುಮಾರ್ ಹಾಗೂ ನಟಿ ತಮನ್ನಾ ಅವರನ್ನ ನೇಮಕ ಮಾಡಿತ್ತು. 95 ವರ್ಷಗಳಿಂದ ಜವಳಿ ಉದ್ಯಮದಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ಪೋತಿಸ್, ಮಯೂರಿ, ವಸುಂಧರ, ಪರಂಪರಾ, ವಸ್ತ್ರಕಲಾ ಹಾಗೂ ಕಲಾಕ್ಷೇತ್ರದಂತಹ ಬ್ರ್ಯಾಂಡೆಡ್ ರೇಷ್ಮೆ ವಸ್ತ್ರಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಅಲ್ಲದೇ ಕಾಂಚೀಪುರಂ, ಧರ್ಮವರಂ, ಬನಾರಸ್ ರೇಷ್ಮೆ ಉಡುಪುಗಳು, ಫ್ಯಾನ್ಸಿ ಹಾಗೂ ಡಿಸೈನರ್ ಸೀರೆಗಳು ಸೇರಿದಂತೆ ಸಿದ್ದ ಉಡುಪುಗಳನ್ನು ಗ್ರಾಹಕರಿಗೆ ಮಾರಾಟ ಮಾಡುತ್ತಾ ವಿಶ್ವಾಸಗಳಿಸಿದೆ.

    ಪೋತಿಸ್ ಶಾಖೆಯಲ್ಲಿ ಕುಟುಂಬದ ಎಲ್ಲಾ ಸದಸ್ಯರಿಗೂ ಒಂದೇ ಕಡೆ ಉಡುಪುಗಳನ್ನು ಖರೀದಿಬಹುದಾಗಿದ್ದ ಮಳಿಗೆಯಾಗಿದ್ದು, ಎಲ್ಲಾ ಸಮಾರಂಭಗಳಿಗೂ ಸೂಕ್ತ ಎನಿಸುವಂಥ ಅತ್ಯುತ್ತಮ ಗುಣಮಟ್ಟದ ವೈವಿಧ್ಯಮಯ ವಸ್ತ್ರಗಳನ್ನು ಒಳಗೊಂಡಿದೆ.

    ಕೆಂಪೇಗೌಡ ರಸ್ತೆಯಲ್ಲಿರುವ ಮಳಿಗೆ ಒಂದು ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ಹಾಗೂ ಎಂಟು ಅಂತಸ್ತಿನ ಕಟ್ಟದಲ್ಲಿ ನಿರ್ಮಾಣವಾಗಿದ್ದು, ಕುಟುಂಬದ ಎಲ್ಲಾ ಸದಸ್ಯರಿಗೂ ಬೇಕಾದ ವಸ್ತ್ರಗಳನ್ನು ಪ್ರತ್ಯೇಕ ವಿಭಾಗಗಳಲ್ಲಿ ಮಾರಾಟ ಮಾಡುತ್ತಿದೆ. ಅಲ್ಲದೇ ತಮ್ಮ ಮಾರಾಟ ಮಳಿಗೆಗೆ ಬರುವ ಗ್ರಾಹಕರಿಗೆ ಶುಲ್ಕ ರಹಿತ ವಾಹನ ಪಾರ್ಕಿಂಕ್ ವ್ಯವಸ್ಥೆಯನ್ನು ಮಾಡಿದ್ದು, ರಾಷ್ಟ್ರೀಯ ಹಬ್ಬಗಳು ಸೇರಿ ವಿವಿಧ ವಿಶೇಷ ಸನ್ನಿವೇಶದಲ್ಲಿ ರಿಯಾಯಿತಿ ಮಾರಾಟವನ್ನು ಏರ್ಪಡಿಸುತ್ತಾ ಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹಬ್ಬದ ಮೊದ್ಲೇ ದೀಪಾವಳಿಯನ್ನು ಬರಮಾಡಿಕೊಂಡ ಬೆಂಗ್ಳೂರು ಮಂದಿ

    ಹಬ್ಬದ ಮೊದ್ಲೇ ದೀಪಾವಳಿಯನ್ನು ಬರಮಾಡಿಕೊಂಡ ಬೆಂಗ್ಳೂರು ಮಂದಿ

    ಬೆಂಗಳೂರು: ದೀಪಗಳ ಹಬ್ಬ ದೀಪಾವಳಿಗೆ ದಿನಗಣನೆ ಶುರುವಾಗಿದೆ. ಆದರೆ ಈಗಾಗಲೇ ಬೆಂಗಳೂರಿನವರು ದೀಪಾವಳಿ ಹಬ್ಬವನ್ನು ಬರಮಾಡಿಕೊಂಡಿದ್ದಾರೆ.

    ವೈಶಿಷ್ಟ್ಯಪೂರ್ಣ ದೀಪಾವಳಿ ಹಬ್ಬದ ಪ್ರಯುಕ್ತ ದೀಪಗಳ ಪ್ರದರ್ಶನವನ್ನು ಗರುಡಾ ಮಾಲ್ ಆಯೋಜಿಸಿದೆ. ಮಣ್ಣಿನ ಹಾಗೂ ಎಲೆಕ್ಟ್ರಿಕಲ್ ದೀಪಗಳಿಂದ ಝಗಮಗಿಸುವ ಮೈಸೂರು ಪ್ಯಾಲೆಸ್ ನ ರೇಪ್ಲಿಕಾವೂ ಎಲ್ಲರನ್ನೂ ಸ್ವಾಗತಿಸುತ್ತಿದೆ. 10 ಸಾವಿರಕ್ಕೂ ಹೆಚ್ಚು ಗೊಂಬೆಗಳನ್ನು ಇಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.

    ದೀಪಾವಳಿ ಹಬ್ಬಕ್ಕೆ ಇಲ್ಲಿಗೆ ಶಾಪಿಂಗ್ ಬಂದ ಗ್ರಾಹಕರು, ಹಬ್ಬದ ವಾತಾವರಣ ನೋಡಿ ಫುಲ್ ಖುಷ್ ಆಗಿದ್ದು ಕಂಡು ಬಂತು. ಈ ರೀತಿಯ ಅಲಂಕಾರವನ್ನು ನಾವು ಎಲ್ಲಿಯೂ ನೋಡಲು ಸಾಧ್ಯವಿಲ್ಲ, ನಮಗೆ ತುಂಬಾ ಖುಷಿಯಾಗುತ್ತಿದೆ ಎಂದು ಗ್ರಾಹಕರೊಬ್ಬರು ತಿಳಿಸಿದ್ದರು.

    ಸದ್ಯ ದೀಪಗಳ ಹಬ್ಬ ದೀಪಾವಳಿ ಬೆಂಗಳೂರಿನಲ್ಲಿ ಕಳೆಗಟ್ಟುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಜಲಪ್ರಳಯದ ನಂತ್ರ ಮಡಿಕೇರಿಯಲ್ಲಿ 9 ದಿನ ಸರಳ ದಸರಾ ಆಚರಣೆ

    ಜಲಪ್ರಳಯದ ನಂತ್ರ ಮಡಿಕೇರಿಯಲ್ಲಿ 9 ದಿನ ಸರಳ ದಸರಾ ಆಚರಣೆ

    ಮಡಿಕೇರಿ: ನಾಡಹಬ್ಬ ಐತಿಹಾಸಿಕ ದಸರಾಕ್ಕೆ ಮಡಿಕೇರಿಯಲ್ಲಿ ಚಾಲನೆ ಸಿಕ್ಕಿದೆ. ನಗರದ ನಾಲ್ಕು ಶಕ್ತಿದೇವತೆಯ ಕರಗಗಳು ಸಾಂಪ್ರದಾಯಿಕವಾಗಿ ನಗರ ಪ್ರದಕ್ಷಿಣೆ ಆರಂಭಿಸಿವೆ. ಜಲಪ್ರಳಯ ಹಿನ್ನಲೆ ಇದೇ ಮೊದಲ ಬಾರಿಗೆ ಮಡಿಕೇರಿ ದಸರಾವನ್ನು ಸರಳವಾಗಿ ಆಚರಿಸಲಾಗ್ತಿದ್ದು, 10 ದಿನಗಳ ಕಾಲ ಅದ್ಧೂರಿಯಿಂದ ನಡೆಯುತ್ತಿದ್ದ ದಸರಾ ಆಚರಣೆ ಕಾರ್ಯಕ್ರಮಗಳು 2 ದಿನಗಳಿಗೆ ಸೀಮಿತವಾಗಿವೆ. ಅದ್ಧೂರಿ ಇಲ್ಲದಿದ್ರೂ ಸರಳ ಹಾಗೂ ಸಾಂಪ್ರದಾಯಿಕವಾಗಿ ಮಡಿಕೇರಿ ದಸರಾ ಕೊಡಗಿನಲ್ಲಿ ಆಚರಣೆಯಾಗುತ್ತಿದೆ.

    ಕೊಡಗು ಕೇವಲ ಟೂರಿಸ್ಟ್ ಹಾಟ್ ಸ್ಪಾಟ್ ಮಾತ್ರ ಅಲ್ಲ. ಕೊಡಗಿನ ಹಬ್ಬ ಹರಿದಿನ ಹಾಗೂ ಆಚರಣೆಗಳು ವಿಭಿನ್ನವಾಗಿದ್ದು ಎಲ್ಲರ ಗಮನ ಸೆಳೆಯುತ್ತವೆ. ಅದರಲ್ಲೂ ಮಡಿಕೇರಿ ದಸರಾ ಅಂತೂ ಕೊಡಗಿನ ಪಾಲಿಗೆ ಅದ್ಧೂರಿಯ ಹಬ್ಬದಾಚರಣೆ. ಬೃಹತ್ತಾದ ವೇದಿಕೆ, ದಶದಿನಗಳು ಮನಸೂರೆಗೊಳ್ಳುವ ಸಾಂಸ್ಕೃತಿಕ ಕಾರ್ಯಕ್ರಮಗಳು, ದಶಮಂಟಪಗಳ ಶೋಭಾಯಾತ್ರೆ, ಡಿಜೆ ಸೌಂಡ್ಸ್, ಜನಸಾಗರ. ಇದು ಮಡಿಕೇರಿ ದಸರಾದ ಅದ್ಧೂರಿತನಕ್ಕೆ ಸಾಕ್ಷಿಯಾಗಿದ್ದವು.

    ಆದರೆ ಈ ಬಾರಿ ಮಡಿಕೇರಿಯ ಅದ್ಧೂರಿ ದಸರಾ ಆಚರಣೆಗೆ ಬ್ರೇಕ್ ಬಿದ್ದಿದೆ. ಪ್ರಾಕೃತಿಕ ವಿಕೋಪದಿಂದ ಕೊಡಗು ತತ್ತರಿಸಿರೋದರಿಂದ ಸರಳವಾಗಿ ಸಾಂಪ್ರದಾಯಿಕ ದಸರಾ ಆಚರಣೆಗೆ ದಸರಾ ಕಮೀಟಿ ಮುಂದಾಗಿದೆ. ಜಳಪ್ರಳಯದಿಂದ ಇಡೀ ಜಿಲ್ಲೆಯಲ್ಲೇ ಸೂತಕದ ಛಾಯೆ ಆವರಿಸಿದ್ದು, ಜನರು ಸಂಕಷ್ಟದಲ್ಲಿ ಕೈ ತೊಳೆಯುತ್ತಿದ್ದಾರೆ. ಈ ವೇಳೆ ಅದ್ಧೂರಿ ದಸರಾ ಆಚರಣೆ ಮುಂದಾಗದೇ ಸರಳವಾಗಿ ಆಚರಿಸುತ್ತಿದ್ದೇವೆ ಎಂದು ದಸರಾ ಸಮಿತಿ ಕಾರ್ಯಧ್ಯಕ್ಷ ಮಹೇಶ್ ಜೈನ್ ತಿಳಿಸಿದ್ದಾರೆ.

    ಮಡಿಕೇರಿ ದಸರಾ ಆಚರಣೆಯ ಕಾರ್ಯಕ್ರಮಗಳನ್ನು 10 ದಿನಗಳ ಬದಲಾಗಿ 2 ದಿನಕ್ಕೆ ಸೀಮಿತಗೊಳಿಸಲಾಗಿದೆ. ಸರ್ಕಾರದಿಂದ 50 ಲಕ್ಷ ಅನುದಾನ ಸಿಕ್ಕಿದ್ದು, ಅದರಲ್ಲೇ ದಸರಾ ಆಚರಣೆ ನಡೆಯುತ್ತಿದೆ. ನಗರದ ನಾಲ್ಕು ಶಕ್ತಿ ದೇವತೆಗಳ ಕರಗಗಳು ನಗರ ಪ್ರದಕ್ಷಿಣೆ ನಡೆಸುತ್ತಿವೆ. ಆಯುಧ ಪೂಜೆ ಹಾಗೂ ವಿಜಯದಶಮಿ ದಿನದಂದು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.

    ವಿಜಯದಶಮಿಯ ಪ್ರಮುಖ ಆಕರ್ಷಣೆಯಾಗಿದ್ದ ದಶಮಂಟಪಗಳ ಶೋಭಾಯಾತ್ರೆಯನ್ನು ಸರಳವಾಗಿ ಮಾಡಲು ತಯಾರಿ ನಡೆಯುತ್ತಿದೆ. ಮೈಸೂರು ದಸರಾ ಬಿಟ್ಟರೆ ಮಡಿಕೇರಿ ದಸರಾ ಸೂಪರ್ ಎಂದು ಹೇಳುತ್ತಿದ್ದ ಮಂದಿ ಇದೀಗ ಸರಳ ದಸರಾ ಆಚರಣೆ ಆಗುತ್ತಿರುವುದನ್ನು ನೋಡಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

    ಪ್ರಾಕೃತಿಕ ವಿಕೋಪದ ಸೂತಕದ ಛಾಯೆಯಿಂದ ಕೊಡಗು ಜನರು ನಿಧಾನವಾಗಿ ಹೊರಬರುವ ಪ್ರಯತ್ನ ಮಾಡುತ್ತಿದ್ದಾರೆ. ಅದ್ಧೂರಿ ಹಾಗೂ ವಿಭಿನ್ನವಾಗಿ ದಸರಾ ಆಚರಿಸುವ ಮೂಲಕ ಗಮನ ಸೆಳೆಯುತ್ತಿದ್ದ ಮಡಿಕೇರಿ ದಸರಾ ಇದೇ ಮೊದಲ ಬಾರಿಗೆ ಸರಳವಾಗಿ ಆಚರಣೆ ಆಗುತ್ತಿರುವುದಿಂದ ಜನಸಾಮಾನ್ಯರಿಗೆ ನಿರಾಸೆ ಉಂಟು ಮಾಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೈಸೂರಿನಲ್ಲಿ ಪ್ರಗತಿಪರರಿಂದ ಮಹಿಷಾ ದಸರಾ!- ವಿಡಿಯೋ ನೋಡಿ

    ಮೈಸೂರಿನಲ್ಲಿ ಪ್ರಗತಿಪರರಿಂದ ಮಹಿಷಾ ದಸರಾ!- ವಿಡಿಯೋ ನೋಡಿ

    ಮೈಸೂರು: ದಸರಾ ತಯಾರಿ ದಿನದಿಂದಕ್ಕೆ ರಂಗು ಪಡೆದುಕೊಳ್ಳುತ್ತಿದೆ. ಇದರ ಬೆನ್ನಲ್ಲೇ ಪ್ರಗತಿಪರ ಒಕ್ಕೂಟಗಳಿಂದ ಮಹಿಷ ದಸರಾವನ್ನು ಇಂದು ಅದ್ಧೂರಿಯಾಗಿ ಆಚರಿಸಿ, ಮಹಿಷ ಒಬ್ಬ ಜನಪರ ನಾಯಕ. ಆದರೆ ಇತಿಹಾಸಲ್ಲಿ ಆತನ ಬಗ್ಗೆ ತಪ್ಪಾಗಿ ಬಿಂಬಿಸಲಾಗಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

    ಮೈಸೂರಿನ ಪುರಭವನದಿಂದ ಆಕರ್ಷಕ ರಥದಲ್ಲಿ ಮಹಿಷಾಸುರ ಭಾವಚಿತ್ರ ಮೆರವಣಿಗೆ ಮಾಡಿದ ಪ್ರಗತಿಪರರು, ವಿವಿಧ ಕಲಾತಂಡಗಳೊಂದಿಗೆ ನಗರದ ರಸ್ತೆಗಳಲ್ಲಿ ಹೆಜ್ಜೆ ಹಾಕಿದರು. ಮೆರವಣಿಗೆಯಲ್ಲಿ ಮಾಜಿ ಸಚಿವ ಸತೀಶ್ ಜಾರಕಿಹೋಳಿ ಸೇರಿದಂತೆ ಸಾಹಿತಿಗಳಾದ ಪ್ರೊ.ಮಹೇಶ್‍ಚಂದ್ರ ಗುರು, ಪ್ರೊ.ಕೆ.ಎಸ್ ಭಗವಾನ್, ಉರಿಲಿಂಗಿ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ ಸೇರಿದಂತೆ ಹಲವು ಗಣ್ಯರು ಭಾಗಿಯಾದ್ದರು.

    ಪುರಭವನದಿಂದ ಆರಂಭವಾದ ಮೆರವಣಿಗೆ ನಗರದ ಪ್ರಮುಖ ರಸ್ತೆಯ ಮೂಲಕ ಸಾಗಿ ಚಾಮುಂಡಿ ಬೆಟ್ಟ ತಲುಪಿ, ಮಹಿಷಾಸುರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.

    ಮೆರವಣಿಗೆ ಚಾಮುಂಡಿ ಬೆಟ್ಟ ತಲುಪಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅವರು, ಮಹಿಷ ಜನಪರವಾಗಿದ್ದ, ಆದರೆ ಇತಿಹಾಸದಲ್ಲಿ ಅವರ ಬಗ್ಗೆ ತಪ್ಪು ಅಭಿಪ್ರಾಯ ಮೂಡಿಸಲಾಗಿದೆ. ಕಳೆದ 7 ವರ್ಷಗಳಿಂದ ಮಹಿಷ ದಸರಾವನ್ನು ಆಚರಿಸಲಾಗುತ್ತಿದೆ. ಉರಿಲಿಂಗಿ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ ಹಾಗೂ ಅನೇಕ ಚಿಂತಕರ ನೇತೃತ್ವದಲ್ಲಿ ವಿಶೇಷ ಕಾರ್ಯಕ್ರ ಆಯೋಜನೆ ಮಾಡಲಾಗಿದೆ. ಅವರ ವಿಚಾರಗಳನ್ನು ನಾನು ಪ್ರೋತ್ಸಾಹಿಸುತ್ತಾ ಬಂದಿರುವೆ ಎಂದು ಹೇಳಿದರು.

    ಪ್ರೊ.ಕೆ.ಎಸ್.ಭಗವಾನ್ ಮಾತನಾಡಿ, ವಲಸೆ ಸಂಸ್ಕೃತಿಯವರು ಉದ್ದೇಶಪೂರ್ವಕವಾಗಿ ನಮ್ಮ ಸಂಸ್ಕೃತಿಯ ಮೂಲ ಪ್ರತಿಪಾದಕ ಮಹಿಷನನ್ನು ರಾಕ್ಷಸ ಅಂತಾ ಮಾಡಿ, ಇವರೇ ರಾಕ್ಷಸರಾದರು. ಮಹಿಷ ಕೆಟ್ಟ ಮನುಷ್ಯನಾಗಿದ್ದರೆ ಅವನ ಹೆಸರನ್ನು ಈ ಪ್ರದೇಶಕ್ಕೆ ಇಡುತ್ತಿರಲಿಲ್ಲ. ಕೆಟ್ಟ ವ್ಯಕ್ತಿಯ ಹೆಸರನ್ನು ಊರಿಗೆ, ಪ್ರದೇಶಕ್ಕೆ ಇಡುವುದನ್ನು ಎಲ್ಲಿಯೂ ಕೇಳಿಲ್ಲ. ಮಹಿಷ ರಾಜನಾಗಿದ್ದವನು, ಆದರೆ ಆತನ ಬಗ್ಗೆ ಇತಿಹಾಸದಲ್ಲಿ ತಪ್ಪಾಗಿ ಬಿಂಬಿಸಲಾಗಿದೆ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://youtu.be/rCdHN3PwRNQ

  • ಸ್ಯಾಂಡಲ್‍ವುಡ್ ಪ್ರಿನ್ಸ್ ಗೆ ಬರ್ತ್ ಡೇ ಸಂಭ್ರಮ- ಸೆಲೆಬ್ರೇಷನ್ ವೇಳೆ ಧ್ರುವ ಸರ್ಜಾ ಅಭಿಮಾನಿಗಳಿಗೆ ಲಾಠಿ

    ಸ್ಯಾಂಡಲ್‍ವುಡ್ ಪ್ರಿನ್ಸ್ ಗೆ ಬರ್ತ್ ಡೇ ಸಂಭ್ರಮ- ಸೆಲೆಬ್ರೇಷನ್ ವೇಳೆ ಧ್ರುವ ಸರ್ಜಾ ಅಭಿಮಾನಿಗಳಿಗೆ ಲಾಠಿ

    ಬೆಂಗಳೂರು: ಸಾಂಡಲ್‍ವುಡ್ ಪ್ರಿನ್ಸ್ ಧ್ರುವ ಸರ್ಜಾ ಅಭಿಮಾನಿಗಳಿಗೆ ಶುಕ್ರವಾರ ತಡರಾತ್ರಿ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ.

    ಧ್ರುವ ಸರ್ಜಾ ನಿನ್ನೆ ತಡರಾತ್ರಿ ತಮ್ಮ 30ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಬೆಂಗಳೂರಿನ ಬನಶಂಕರಿಯ ಎರಡನೇ ಹಂತದಲ್ಲಿರುವ ತಮ್ಮ ನಿವಾಸದಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಬರ್ತ್ ಡೇ ಸೆಲೆಬ್ರೇಷನ್ ಮಾಡಿಕೊಂಡಿದ್ದಾರೆ. ಈ ವೇಳೆ ಅಭಿಮಾನಿಗಳು ಮುಗಿಬಿದ್ದ ಕಾರಣ ಸ್ಥಳದಲ್ಲಿ ನೂಕುನುಗ್ಗಲು ಉಂಟಾಗಿ ಬಂದಿದ್ದ ಅಭಿಮಾನಿಗಳಿಗೆ ಗಾಯಗಳಾದವು.

    ಧ್ರುವ ತಮ್ಮ ಮುಂದಿನ ‘ಪೊಗರು’ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದ್ದು, ಧ್ರುವ ಈ ಹಿಂದೆ ಇದ್ದ ಲುಕ್‍ಗಿಂತ ಈ ಲುಕ್ ನಲ್ಲಿ ಅಭಿಮಾನಿಗಳ ಮನಸ್ಸು ಸೆಳೆದಿದ್ದಾರೆ. ಧ್ರುವ ನಟಿಸಿದ ಮೂರು ಚಿತ್ರದಲ್ಲಿ ಒಂದೇ ರೀತಿ ಲುಕ್‍ನಲ್ಲಿ ಕಾಣಿಸಿಕೊಂಡಿದ್ದರು. ಆದರೆ ಪೊಗರು ಚಿತ್ರದಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ.

    ಪೊಗರು ಚಿತ್ರದ ಪೋಸ್ಟರ್ ನಲ್ಲಿ ಧ್ರುವ ಉದ್ದನೆಯ ಕೂದಲು ಹಾಗೂ ಗಡ್ಡ ಬೆಳೆಸಿಕೊಂಡಿದ್ದಾರೆ. ಸದ್ಯ ಧ್ರುವ ತಮ್ಮ ನಾಲ್ಕನೇ ಚಿತ್ರದಲ್ಲಿ ಯಾವ ರೀತಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದನ್ನು ನೋಡಲು ಅಭಿಮಾನಿಗಳಿಗೆ ಕುತೂಹಲ ಮೂಡಿದೆ.

    ಈ ಚಿತ್ರದಲ್ಲಿ ಧ್ರುವ ಸರ್ಜಾ ಬೇರೆ ಬೇರೆ ರೀತಿಯ ಎರಡು ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹಾಗಾಗಿ ಈ ಚಿತ್ರ ತಡವಾಗುತ್ತಿದೆ. ಸದ್ಯ ಚಿತ್ರದ ಎರಡನೇ ಹಂತದ ಶೂಟಿಂಗ್ ಅಕ್ಟೋಬರ್ 10ರಿಂದ ನಡೆಯಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

    ಸದ್ಯ ಪೊಗರು ಚಿತ್ರವನ್ನು ನಿರ್ದೇಶಕ ನಂದ ಕಿಶೋರ್ ನಿರ್ದೇಶನ ಮಾಡುತ್ತಿದ್ದು, ಬಿ.ಕೆ ಗಂಗಾಧರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಸದ್ಯ ಈ ಚಿತ್ರಕ್ಕೆ ನಾಯಕಿ ಆಯ್ಕೆ ಆಗಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದಸರಾದಲ್ಲಿ ಆದ್ಯವೀರ್ ಭಾಗಿಯಾಗ್ತಿರೋದು ಖುಷಿ ತಂದಿದೆ: ಯದುವೀರ್ ಒಡೆಯರ್

    ದಸರಾದಲ್ಲಿ ಆದ್ಯವೀರ್ ಭಾಗಿಯಾಗ್ತಿರೋದು ಖುಷಿ ತಂದಿದೆ: ಯದುವೀರ್ ಒಡೆಯರ್

    ಮೈಸೂರು: ಐತಿಹಾಸಿಕ ನಾಡ ಹಬ್ಬ ದಸರಾಗೆ ನಾಡಿನ ಜನತೆ ಸಿದ್ಧರಾಗುತ್ತಿದ್ದು, ಈ ಬಾರಿ ವಿಶೇಷವಾಗಿ ಯದುವಂಶದ ಕುಡಿ ಆದ್ಯವೀರ್ ನರಸಿಂಹರಾಜ ಒಡೆಯರ್ ಭಾಗಿಯಾಗುತ್ತಿರುವುದು ಖುಷಿ ತಂದಿದೆ ಎಂದು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದ್ದಾರೆ.

    ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಯದುವೀರ್, ಈ ಬಾರಿಯ ದಸರಾದಲ್ಲಿ ಮಗ ಆದ್ಯವೀರ್ ಭಾಗಿಯಾಗುತ್ತಿರುವುದು ಸಂತಸದ ವಿಚಾರ. ನಮ್ಮ ಕುಟಂಬದ ಮತ್ತೊಬ್ಬ ಸದಸ್ಯ ಹಲವು ವರ್ಷಗಳ ನಂತರ ಪಾಲ್ಗೊಳ್ಳುತ್ತಿರುವುದು ಸಂತಸ ಇಮ್ಮಡಿಗೊಳಿಸಿದೆ. ದಸರಾದ ಸಿದ್ಧತೆಯಲ್ಲಿ ತೊಡಗಿಕೊಂಡಿರುವುದರಿಂದ ಆದ್ಯವೀರ್‍ರನ್ನು ಗಮನಿಸಿಕೊಳ್ಳಲು ಆಗುತ್ತಿಲ್ಲ ಎಂದು ಹೇಳಿದರು.

    ಅಕ್ಟೋಬರ್ 10 ರಿಂದ ಅರಮನೆಯಲ್ಲಿ ದಸರಾ ಕಾರ್ಯಕ್ರಮಗಳು ಪ್ರಾರಂಭವಾಗಲಿದ್ದು, ವಿಜಯ ದಶಮಿ 19ಕ್ಕೆ ನಿಗಧಿಯಾಗಿದೆ. ಪ್ರತಿ ವರ್ಷದಂತೆ ಎಲ್ಲಾ ಕಾರ್ಯಕ್ರಮಗಳು ನಡೆಯುತ್ತವೆ. ಅಲ್ಲದೇ ದಸರಾ ಕಾರ್ಯಕ್ರಮಗಳು ಈಗಾಗಲೇ ಚುರುಕುಗೊಂಡಿವೆ ಎಂದು ತಿಳಿಸಿದರು. ಇದನ್ನೂ ಓದಿ: ಮೊದಲ ದಸರಾಗೆ ಸಜ್ಜಾದ ಆದ್ಯವೀರ್ – ಈಗ ಅರಮನೆ ಒಡೆಯರ್ ಹೀಗಿದ್ದಾರೆ

    ಆದ್ಯವೀರ್ ಒಡೆಯರ್ ಅವರು 2017ರ ಡಿಸೆಂಬರ್ 6 ರಲ್ಲಿ ಜನಿಸಿದ್ದರು. ಆದ್ದರಿಂದ ಆದ್ಯವೀರ್ ಗೆ ಇದೇ ಮೊದಲ ದಸರವಾಗಿದೆ. ಈ ಬಾರಿಯ ದಸರಾ ವಿಶೇಷವಾಗಿದೆ. ಏಕೆಂದರೆ ಮೈಸೂರಿನ ಸಂಸ್ಥಾನದ ಯದುವಂಶಕ್ಕೆ ಸುಮಾರು 6 ದಶಕಗಳಿಂದ ಸಂತಾನವೇ ಇರಲಿಲ್ಲ. ಕಳೆದ ವರ್ಷ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ತ್ರಿಷಿಕಾ ದಂಪತಿಗೆ ಆದ್ಯವೀರ್ ಜನಿಸುವ ಮೂಲಕ ರಾಜಮನೆತನಕ್ಕೆ ಸಂತಾನ ಪ್ರಾಪ್ತಿಯಾಗಿತ್ತು. ಈ ಸಂತಸವನ್ನು ಇಡೀ ನಾಡಿನ ಜನತೆಯೂ ಸಂಭ್ರಮಿಸಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಸಾಹಸಸಿಂಹ ಡಾ.ವಿಷ್ಣುವರ್ಧನ್ 69ನೇ ಜನ್ಮ ದಿನಾಚರಣೆ- ನೆಲಮಂಗಲ ವಿಷ್ಣು ಸೇನಾ ಸಂಸ್ಥೆಯಿಂದ ಆಚರಣೆ

    ಸಾಹಸಸಿಂಹ ಡಾ.ವಿಷ್ಣುವರ್ಧನ್ 69ನೇ ಜನ್ಮ ದಿನಾಚರಣೆ- ನೆಲಮಂಗಲ ವಿಷ್ಣು ಸೇನಾ ಸಂಸ್ಥೆಯಿಂದ ಆಚರಣೆ

    ಬೆಂಗಳೂರು: ಸಾಹಸಸಿಂಹ ಅಭಿನವ ಭಾರ್ಗವ ಡಾ. ವಿಷ್ಣುವರ್ಧನ್ ಅವರ 69ನೇ ಜನ್ಮ ದಿನಾಚರಣೆಯನ್ನು ಸಡಗರ ಸಂಭ್ರಮದಿಂದ ಅಭಿಮಾನಿಗಳು ಆಚರಿಸಿದರು.

    ಬೆಂಗಳೂರು ಹೊರವಲಯ ನೆಲಮಂಗಲ ಪಟ್ಟಣದ ಹೊನ್ನಗಂಗಯ್ಯನ ಪಾಳ್ಯದಲ್ಲಿ ವಿಷ್ಣು ಸೇವಾ ಸಮಿತಿಯಿಂದ ಹುಟ್ಟುಹಬ್ಬದ ಆಚರಣೆಯನ್ನು ಅಭಿಮಾನಿಗಳು ಕೇಕ್ ಅನ್ನು ಕತ್ತರಿಸಿ, ಕಂಚಿನ ವಿಷ್ಣು ಪುತ್ಥಳಿಗೆ ಮಾಲಾರ್ಪಣೆ ಮಾಡಿ ತಮ್ಮ ನೆಚ್ಚಿನ ನಾಯಕ ನಟನ ಸ್ಮರಣೆ ಮಾಡಿದರು.

    ಯಾವ ಸರ್ಕಾರ ಬಂದರೂ, ಯಾರೇ ಮುಖ್ಯಮಂತ್ರಿ ಆದರೂ ಇದುವರೆಗೆ, ಬೆಂಗಳೂರು ನಗರದಲ್ಲಿ ವಿಷ್ಣು ಸ್ಮಾರಕ ನಿರ್ಮಾಣ ಮಾಡದೇ ಇರುವುದು ಬೇಸರದ ಸಂಗತಿಯಾಗಿದೆ. ಇನ್ನಾದರೂ ಜನ ಪ್ರತಿನಿಧಿಗಳು ಸ್ಮಾರಕ ನಿರ್ಮಾಣ ಮಾಡುವತ್ತ ಮನಸ್ಸು ಮಾಡಬೇಕು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ವಿಷ್ಣು ಸೇವಾ ಸಮಿತಿಯ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.

    ಸಾಹಸಸಿಂಹ ವಿಷ್ಣುವರ್ಧನ್ ಅವರ 68 ನೇ ಹುಟ್ಟುಹಬ್ಬವನ್ನು ಅಭಿಮಾನಿಗಳು ಸಮಾಧಿ ಮುಂದೆ ಕೇಕ್ ಕಟ್ ಮಾಡೋದರ ಮೂಲಕ ಸಂಭ್ರಮಿಸಿದರು. ಇದೇ ವೇಳೆ ವಿಷ್ಣುವರ್ಧನ್ ಅಭಿಮಾನಿಯೊಬ್ಬರು ಪಬ್ಲಿಕ್ ಟಿವಿ ಜೊತೆ ಮಾತನಾಡಿ, ವಿಷ್ಣು ದಾದಾ ಅವರ 69ನೇ ಹುಟ್ಟು ಹಬ್ಬವನ್ನು ಆಚರಿಸುತ್ತಿದ್ದೇವೆ. ಪ್ರತೀ ವರ್ಷದಂತೆ ಈ ವರ್ಷವೂ ಮಧ್ಯರಾತ್ರಿ 12 ಗಂಟೆಯ ಸುಮಾರಿಗೆ ಅಭಿಮಾನಿಗಳು ಸೇರಿ ಹುಟ್ಟುಹಬ್ಬವನ್ನು ಆಚರಿಸುತ್ತೇವೆ. ಬೆಳಗ್ಗೆ ಇತಿಶ್ರೀ ಡಾ. ವಿಷ್ಣುವರ್ಧನ್ ಅಭಿಮಾನಿಗಳ ಬಳಗದಿಂದ ರಕ್ತದಾನ ಶಿಬಿರ, ಮನರಂಜನಾ ಕಾರ್ಯಕ್ರಮ, ಡೆಂಟಲ್ ಹಾಗೂ ನೇತ್ರದಾನ ಶಿಬಿರಗಳನ್ನು ಮಾಡುತ್ತಿದ್ದೇವೆ ಎಂದು ಹೇಳಿದರು.

    ಸ್ಯಾಂಡಲ್‍ವುಡ್‍ನ ರಿಯಲ್ ಸ್ಟಾರ್ ಉಪೇಂದ್ರ, ಸಾಹಸಸಿಂಹ ವಿಷ್ಣುವರ್ಧನ್ ಹಾಗೂ ನಟಿ ಶೃತಿ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ನಗರದ ಕತ್ರಿಗುಪ್ಪೆಯ ತಮ್ಮ ನಿವಾಸದಲ್ಲಿ ಉಪೇಂದ್ರ ಅವರ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ 51 ನೇ ಬರ್ತ್ ಡೇ ಆಚರಿಸಿಕೊಂಡರು. ಅಭಿಮಾನಿಗಳು ಅದ್ಧೂರಿಯಿಂದ ರಿಯಲ್ ಸ್ಟಾರ್ ಬರ್ತ್ ಡೇ ಆಚರಣೆ ಮಾಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv