Tag: celebration

  • ಮದುವೆ ಸಂಭ್ರಮದಲ್ಲಿ ಪ್ರಭಾಸ್- ಅನುಷ್ಕಾ

    ಮದುವೆ ಸಂಭ್ರಮದಲ್ಲಿ ಪ್ರಭಾಸ್- ಅನುಷ್ಕಾ

    ಜೈಪುರ: ಬಾಹುಬಲಿ ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಅವರು ಟಾಲಿವುಡ್ ಸ್ಟಾರ್ ನಿರ್ದೇಶಕ ಎಸ್.ಎಸ್ ರಾಜಮೌಳಿ ಅವರ ಮಗ ಕಾರ್ತಿಕೇಯಾ ಅವರ ಮದುವೆಯ ಸಂಭ್ರಮದಲ್ಲಿದ್ದಾರೆ.

    ರಾಜಮೌಳಿ ಅವರ ಮಗ ಕಾರ್ತಿಕೇಯಾ ಇಂದು ಗಾಯಕಿ ಪೂಜಾ ಪ್ರಸಾದ್ ಅವರ ಜೊತೆ ರಾಜಸ್ಥಾನದ ಜೈಪುರ್ ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಾರ್ತಿಕೇಯಾ ಹಾಗೂ ಪೂಜಾ ನವೆಂಬರ್ ತಿಂಗಳಿನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಪೂಜಾ ಗಾಯಕಿ ಆಗಿದ್ದು, ನಟ ಜಗಪತಿ ಬಾಬು ಅವರ ಸೋದರ ಸೊಸೆ ಆಗಿದ್ದಾರೆ.

    ಅನುಷ್ಕಾ, ಪ್ರಭಾಸ್ ಸೇರಿದಂತೆ ಸಿನಿ ರಂಗದ ಹಲವು ಗಣ್ಯರು ಮದುವೆಯ ಸಂಭ್ರಮದಲ್ಲಿ ಭಾಗಿಯಾದರು. ಅಲ್ಲದೇ ತೆಲುಗು ಕಲಾವಿದರಾದ ಜೂ. ಎನ್‍ಟಿಆರ್, ಜಗಪತಿ ಬಾಬು, ರಾಮ್‍ಚರಣ್, ನಾನಿ ಹಾಗೂ ಬಾಲಿವುಡ್ ನಟಿ ಸುಶ್ಮಿತಾ ಸೇನ್ ಈ ಮದುವೆಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

    ಕಾರ್ತಿಕೇಯಾ ಅವರ ಸಂಗೀತ್ ಕಾರ್ಯಕ್ರಮದಲ್ಲಿ ರಾಜಮೌಳಿ ಜೊತೆ ಬಾಹುಬಲಿ ಚಿತ್ರತಂಡದ ಕಲಾವಿದರು ಡ್ಯಾನ್ಸ್ ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಕಲಾವಿದರೆಲ್ಲರೂ ಡ್ಯಾನ್ಸ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಂದಿಗಿರಿಧಾಮದಲ್ಲಿ ನ್ಯೂ ಇಯರ್ ಸೆಲೆಬ್ರೇಷನ್ ಗೆ ಬ್ರೇಕ್…!

    ನಂದಿಗಿರಿಧಾಮದಲ್ಲಿ ನ್ಯೂ ಇಯರ್ ಸೆಲೆಬ್ರೇಷನ್ ಗೆ ಬ್ರೇಕ್…!

    ಚಿಕ್ಕಬಳ್ಳಾಪುರ: ವಿಶ್ವವಿಖ್ಯಾತ ನಂದಿಗಿರಿಧಾಮದಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್ ಬಿದ್ದಿದ್ದು, ಡಿಸೆಂಬರ್ 31ರ ಸಂಜೆ 4 ಗಂಟೆಯಿಂದ 2019ರ ಹೊಸ ವರ್ಷದ ಜನವರಿ 1ರ ಬೆಳಗ್ಗೆ 8 ಗಂಟೆಯವರೆಗೂ ನಂದಿಗಿರಿಧಾಮ ಪ್ರವೇಶಕ್ಕೆ ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ.

    ಪ್ರತಿ ವರ್ಷದಂತೆ ಈ ವರ್ಷವೂ ಪ್ರವಾಸಿಗರ ಹಿತದೃಷ್ಟಿಯಿಂದ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಈ ಆದೇಶ ಹೊರಡಿಸಿದೆ. 2019ರ ಜನವರಿ 1ರ ಬೆಳಗ್ಗೆ 8 ಗಂಟೆ ತರುವಾಯ ಪ್ರವಾಸಿಗರಿಗೆ ನಂದಿಗಿರಿಧಾಮ ಪ್ರವೇಶಕ್ಕೆ ಮುಕ್ತ ಅವಕಾಶವಿದೆ. ನಂದಿಗಿರಿಧಾಮದ ಜೊತೆ ಜೊತೆಗೆ ಪ್ರಮುಖ ಪ್ರವಾಸಿ ತಾಣಗಳಾದ ಸ್ಕಂದಗಿರಿ ಬೆಟ್ಟ ಹಾಗೂ ಆವಲಬೆಟ್ಟದಲ್ಲೂ ಸಹ ನಿಷೇಧ ಹೇರಲಾಗಿದೆ. ಇದನ್ನೂ ಓದಿ: ತೋಟದ ಮನೆಯಲ್ಲಿ ಗಾಂಜಾ ಗಮ್ಮತ್ತು? ನಶೆಯಲ್ಲಿ ಯುವಕ-ಯುವತಿಯರ ತೇಲಾಟ!

    ಅಂಕು-ಡೊಂಕಿನ ನಂದಿಗಿರಿಧಾಮದ ರಸ್ತೆಯಲ್ಲಿ ಅಪಘಾತಗಳಾಗುವ ಸಂಭವ, ಮದ್ಯ ಸೇವಿಸಿದ ಅಮಲಲ್ಲಿ ಅನಾಹುತಗಳ ಆಗುವ ಸಾಧ್ಯತೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಂದಿಗಿರಿಧಾಮದ ಪ್ರವೇಶವನ್ನು ನಿಷೇಧಿಸಲಾಗಿದೆ. ಇದಲ್ಲದೆ ನಂದಿಗಿರಿಧಾಮದಲ್ಲಿನ ವಸತಿ ಗೃಹಗಳ ಬುಕ್ಕಿಂಗ್‍ಗೆ ಸಹ ಅವಕಾಶವಿಲ್ಲವಾಗಿದ್ದು, ಡಿಸೆಂಬರ್ 31ರಂದು ನಂದಿಗಿರಿಧಾಮದ ವಸತಿ ಗೃಹಗಳಲ್ಲೂ ಸಹ ಯಾರೂ ತಂಗುವಂತಿಲ್ಲ. ಇದನ್ನೂ ಓದಿ: ಹಚ್ಚಹಸಿರಿನ ಮಧ್ಯೆ ಹಾಲ್ನೊರೆ ಸೂಸುತ್ತಾ ಜುಳು-ಜುಳು ಹರೀತಿದೆ ಇರ್ಪು ಫಾಲ್ಸ್

    ಈ ಬಗ್ಗೆ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದ ಎಸ್‍ಪಿ ಕಾರ್ತಿಕ್ ರೆಡ್ಡಿ, “ಜಿಲ್ಲೆಯಾದ್ಯಾಂತ ಹೊಸ ವರ್ಷಾಚರಣೆ ವೇಳೆ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸಿದ್ದು, ಮದ್ಯಪಾನ ಮಾಡಿ ವಾಹನ ಚಲಾಯಿಸುವವರೆಗೂ ಕಡಿವಾಣ ಹಾಕಿ ದಂಡ ವಿಧಿಸೋಕೆ ಜಿಲ್ಲೆಯ ಪೊಲೀಸರು ಸಜ್ಜಾಗಿರುತ್ತಾರೆ. ನಿಗದಿಪಡಿಸಿದ ಸಮಯದ ನಂತರವೂ ಮದ್ಯ ಮಾರಾಟ ಮಾಡಿದರೆ ಬಾರ್‍ಗಳ ವಿರುದ್ಧವೂ ಕ್ರಮ ಕೈಗೊಳ್ಳುಲಾಗುವುದು” ಎಂದು ಹೇಳಿದರು. ಇದನ್ನೂ ಓದಿ: ಹೊಸ ವರ್ಷದಂದು ಪ್ರವಾಸಿ ತಾಣ ಮುತ್ತತ್ತಿಗೆ ನೋ ಎಂಟ್ರಿ

    ಇದಲ್ಲದೆ ಹೊಸ ವರ್ಷಾಚರಣೆಗೆ ಪಾರ್ಟಿ ಆಯೋಜನೆ ಮಾಡುವಂತವರು ಆಯಾ ಪೊಲೀಸ್ ಠಾಣಾ ವ್ಯಾಪ್ತಿಯ ಪೊಲೀಸರಿಂದ ಅನುಮತಿ ಪತ್ರ ಪಡೆದು ಪಾರ್ಟಿ ಆಯೋಜನೆ ಮಾಡಬೇಕಿದ್ದು, ಮದ್ಯ ಸರಬರಾಜು ಸಹ ಮಾಡುತ್ತಿದ್ರೆ ಅದಕ್ಕೂ ಸಂಬಂಧಪಟ್ಟ ಅಬಕಾರಿ ಇಲಾಖೆಯಿಂದ ಅನುಮತಿ ಕಡ್ಡಾಯ ಅಂತ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನ್ಯೂಯರ್ ಗೆ  ಪಬ್, ಬಾರ್‌ಗಳಿಗೆ ಖಾಕಿಯಿಂದ ಚೋಕ್

    ನ್ಯೂಯರ್ ಗೆ ಪಬ್, ಬಾರ್‌ಗಳಿಗೆ ಖಾಕಿಯಿಂದ ಚೋಕ್

    – ಲೇಡಿ ಬೌನ್ಸರ್ ಕಡ್ಡಾಯ!
    – ಕಲರ್ ಸಿಸಿಟಿವಿಯಲ್ಲಿ ಸೆರೆಯಾಗುತ್ತೆ ಪಾರ್ಟಿ ಹಾಟ್ ಸ್ಪಾಟ್

    ಬೆಂಗಳೂರು: ಹೊಸ ವರ್ಷದ ಆಚರಣೆಯಲ್ಲಿ ಫುಲ್ ಜೇಬು ತುಂಬಿಸಿಕೊಳ್ಳೋ ಮೂಡ್‍ನಲ್ಲಿದ್ದ ಪಬ್, ಬಾರ್‌ಗಳಿಗೆ ಖಾಕಿ ಚೋಕ್ ಕೊಟ್ಟಿದೆ. ಪ್ರತಿ ಪಬ್ ಬಾರ್‌ನಲ್ಲೂ ಲೇಡಿ ಬೌನ್ಸರ್ ಕಡ್ಡಾಯವಾಗಿ ಇರಬೇಕು, ಕಲರ್ ಸಿಸಿಟಿವಿ ಅಳವಡಿಸಬೇಕು ಎಂದು ಕಂಡೀಷನ್ ಹಾಕಿದೆ.

    ಜಗಮಗಿಸುವ ಬೆಳಕು, ಮತ್ತೇರಿಸುವ ಡಿಜೆ ಹಾಡಿನ ಸೌಂಡ್, ಕಿಕ್ ಹೊಡೆಸೋಕೆ ಎಣ್ಣೆಯೇಟು ಹೊಸ ವರ್ಷ ಸ್ವಾಗತಿಸೋಕೆ ಇನ್ನೇನು ಬೇಕು ಅಂತಾ ಯೂತ್ಸ್ ಪಬ್‍ನ ಮೆಟ್ಟಿಲು ಹತ್ತೋದು ಕಾಮನ್. ಈ ಹಿಂದೆ ಹೊಸ ವರ್ಷದಲ್ಲಿ ಕಾಮುಕರ ಕಾಟದಿಂದ ಬೆಂಗಳೂರಿಗೆ ಕೆಟ್ಟ ಹೆಸರು ಬಂದಿತ್ತು. ಆದ್ದರಿಂದ ಈ ಕಹಿ ಘಟನೆಗಳಿಗೆ ಬ್ರೇಕ್ ಹಾಕಲು ಖಾಕಿ ಪಡೆ ಈ ಬಾರಿ ಪಬ್, ಬಾರ್ ಅಂಡ್ ರೆಸ್ಟೋರೆಂಟ್ ಹಾಗೂ ನ್ಯೂ ಇಯರ್ ಈವೆಂಟ್ ಮಾಡುವ ಆಯೋಜಕರಿಗೆ ಕಠಿಣ ಕಂಡೀಷನ್ ಹಾಕಿದ್ದಾರೆ.

    ಪ್ರತಿ ಪಬ್‍ನಲ್ಲಿ ಹಾಗೂ ಈವೆಂಟ್‍ನಲ್ಲೂ ಲೇಡಿ ಬೌನ್ಸರ್ ಕಡ್ಡಾಯವಾಗಿದೆ. ಮಿನಿಮಂ ಇಪ್ಪತ್ತು ಜನವಾದ್ರೂ ಬೌನ್ಸರ್ಸ್ ಇರಲೇಬೇಕು ಅಂತಾ ಹೇಳಿದೆ. ಖಾಕಿ ಕಂಡೀಷನ್‍ಗೆ ಸುಸ್ತು ಹೊಡೆದಿರುವ ಪಬ್ ಮಾಲೀಕರು ಈಗ ಲೇಡಿ ಬೌನ್ಸರ್ ಎಲ್ಲಿ ಹುಡುಕೋಕೆ ಹೋಗೋಣ ಅಂತಾ ತಡಕಾಡುತ್ತಿದ್ದಾರೆ. ಆದಕ್ಕಾಗಿ ಹೊರ ರಾಜ್ಯದ ಬೌನ್ಸರ್‌ಗಳನ್ನು ಕರೆಸಿಕೊಳ್ಳಲು ಸಜ್ಜಾಗಿದ್ದಾರೆ.

    ಇನ್ನು ಪಬ್‍ಗಳ ಸುತ್ತಮುತ್ತಾ ರಸ್ತೆಗೆ ಸ್ಪೆಷಲ್ ಎಫೆಕ್ಟ್ ಇರುವ ಬೀದಿ ದೀಪ ಆಳವಡಿಸಬೇಕು. ಅಲ್ಲದೇ ಪಾರ್ಟಿ ಹಾಟ್ ಸ್ಪಾಟ್ ಹಾಗೂ ರಸ್ತೆಯ ಇಕ್ಕೆಲಗಳಲ್ಲಿ ಕಲರ್ ಸಿಸಿ ಟಿವಿ ಅಳವಡಿಸಲೇಬೇಕು. ಆಗ ಅಹಿತಕರ ಘಟನೆಗಳಿಗೆ ಕಡಿವಾಣ ಬೀಳೋದರ ಜೊತೆಗೆ ಕಿರಿಕ್ ಪಾರ್ಟಿಗಳು ಕ್ಯಾಮೆರಾ ಕಣ್ಣಿನಿಂದ ತಪ್ಪಿಸಿಕೊಂಡು ಹೋಗೋಕೆ ಸಾಧ್ಯವಿಲ್ಲ ಎಂದು ಪೊಲೀಸರು ಈ ಕಂಡೀಷನ್ ಹಾಕಿದ್ದಾರೆ.

    ಒಟ್ಟಿನಲ್ಲಿ ಹೊಸ ವರ್ಷದ ಆಚರಣೆಗೆ ಕಾನೂನು ಕಠಿಣವಾದಷ್ಟು ಒಳ್ಳೆಯದೇ. ಸಂಭ್ರಮ ಸಡಗರದಿಂದ ಹೊಸ ವರ್ಷವನ್ನು ಸ್ವಾಗತಿಸೋಣ. ಒಂದು ದಿನದ ಸಂಭ್ರಮ ಇಡೀ ವರ್ಷದ ಮೂಡ್ ಕೆಟ್ಟುಹೋಗಬಾರದು ಅಂತ ಖಾಕಿ ಪಡೆ ಈ ಹೊಸ ರೂಲ್ಸ್ ತಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹೊಸ ವರ್ಷ ಸಂಭ್ರಮಾಚರಣೆಗೆ ರೆಡಿಯಾಯ್ತು ವೆರೈಟಿ ಕ್ಯಾಂಡಲ್ಸ್

    ಹೊಸ ವರ್ಷ ಸಂಭ್ರಮಾಚರಣೆಗೆ ರೆಡಿಯಾಯ್ತು ವೆರೈಟಿ ಕ್ಯಾಂಡಲ್ಸ್

    ಮಡಿಕೇರಿ: ಹೊಸ ವರ್ಷಕ್ಕೆ ಕೇಕ್ ಕಟ್ ಮಾಡಿ ದೀಪಗಳನ್ನು ಬೆಳಗಿಸೋ ಮೂಲಕ ಸಂಭ್ರಮಿಸುತ್ತಿರೋರಿಗೆ ಕ್ಯಾಂಡಲ್ ದೀಪಗಳೂ ಇದೀಗ ಕೈಬೀಸಿ ಕರೆಯುತ್ತಿವೆ.

    ಬಣ್ಣ ಬಣ್ಣದ ವೆರೈಟಿ ಕ್ಯಾಂಡಲ್‍ಗಳು ನ್ಯೂಯರ್ ಗೆ ಸಿದ್ಧಗೊಂಡಿದ್ದು ಗ್ರಾಹಕರ ಮನಸ್ಸಿಗೆ ಇಷ್ಟವಾಗೋ ಎಲ್ಲಾ ರೀತಿಯ ಮೊಂಬತ್ತಿಗಳ ಮಂಜಿನ ನಗರಿಯಲ್ಲಿ ಲಭ್ಯವಿದೆ. ನೋಡಿದಷ್ಟೂ ಮತ್ತೆ ಮತ್ತೆ ನೋಡಬೇಕೆನಿಸುವಷ್ಟು ಸುಂದರ ಕ್ಯಾಂಡಲ್‍ಗಳು. ಗಮನ ಸೆಳೆಯುವ ಬಣ್ಣ ಬಣ್ಣದ ಸುವಾಸನೆ ಭರಿತ ಮೊಂಬತ್ತಿಗಳು.

    ಕೊಡಗಿನ ಗೋಣಿಕೊಪ್ಪಗೆ ನೀವೇನಾದ್ರು ಹೋಸ ವರ್ಷದ ಸಂಭ್ರಮ ಅಚರಣೆಗೆ ಹೋದರೆ ಇಲ್ಲಿನ ಕ್ಯಾಂಡಲ್ ಶಾಪ್ ಎಲ್ಲರ ಗಮನಸೆಳೆಯುತ್ತೆ. ಅಲ್ಲಿನ ವೆರೈಟಿ ಮೊಂಬತ್ತಿಗಳು ಗ್ರಾಹಕರ ಕಣ್ಣುಕೋರೈಸುತ್ತದೆ. ಮಾಮೂಲಿ ಕ್ಯಾಂಡಲ್ ಜೊತೆಗೆ ಗೊಂಬೆ, ಹಕ್ಕಿ, ಹೂ, ಗಿಡ ಮರ ಹೀಗೆ ಎಲ್ಲಾ ರೀತಿಯ ಕ್ಯಾಂಡಲ್‍ಗಳನ್ನು ಗ್ರಾಹಕರ ಅಭಿರುಚಿಗೆ ತಕ್ಕಂತೆ ಕೊಡಗಿನ ಶ್ರೀನಿವಾಸ ಪ್ರಸಾದ್ ದಂಪತಿ ತಯಾರಿಸಿ ಮಾರಾಟ ಮಾಡುತ್ತಾರೆ.

    ಕೇವಲ ಬೆಳಕು ನೀಡೋ ಕ್ಯಾಂಡಲ್ ತಯಾರಿಸಿದರೆ ಗ್ರಾಹಕರನ್ನು ಸೆಳೆಯೋದು ಕಷ್ಟ ಎಂದರಿತ ದಂಪತಿ, ಸುಮಾರು 70 ಬಗೆಯ ವಿವಿದ ವಿನ್ಯಾಸದ ಕ್ಯಾಂಡಲ್‍ಗಳನ್ನು ತಯಾರಿಸುತ್ತಿದ್ದಾರೆ. ಒಂದೊಂದು ಕ್ಯಾಂಡಲ್‍ಗಳು ಒಂದೊಂದು ಆಕಾರದಲ್ಲಿ ಕಂಗೊಳಿಸುತ್ತಾ ನೋಡುಗರನ್ನು ಕೈಬೀಸಿ ಕರೆಯುತ್ತಿವೆ. ವಿಶೇಷವಾಗಿ ಬೆಳಕಿನ ಹಬ್ಬ ದೀಪಾವಳಿ, ಕ್ರಿಸ್ ಮಸ್, ನ್ಯೂಯರ್ ಸಂದರ್ಭದಲ್ಲಿ ಬಣ್ಣ ಬಣ್ಣದ ಕ್ಯಾಂಡಲ್ ಗಳಿಗೆ ಬೇಡಿಕೆ ಬಂದಿದ್ದು ಜನರು ಮುಗಿಬಿದ್ದು ಖರೀದಿಸುತ್ತಿದ್ದಾರೆ.

    ಕಳೆದ 20 ವರ್ಷಗಳಿಂದ ಕ್ಯಾಂಡಲ್ ತಯಾರಿಕೆ ಮಾಡುತ್ತಿರೋ ಇವರು, ಸೀಸನ್ ಗೆ ತಕ್ಕಂತೆ, ಗ್ರಾಹಕರ ಅಭಿರುಚಿಯನ್ನರಿತು ಕ್ಯಾಂಡಲ್ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. 4 ರೂಪಾಯಿಂದ ಪ್ರಾರಂಭಗೊಂಡು 3 ಸಾವಿರದ ವರೆಗಿನ ಮೌಲ್ಯದ ಕ್ಯಾಂಡಲ್‍ಗಳು ಇಲ್ಲಿ ಲಭ್ಯ. ಕೊಡಗು ಜಿಲ್ಲೆ ವಿರಾಜಪೇಟೆಯಿಂದ ಗೋಣಿಕೊಪ್ಪಕ್ಕೆ ಹೋಗೋ ರಸ್ತೆಯಲ್ಲಿ ಸಿಗೋ ಈ ಕ್ಯಾಂಡಲ್ ಶಾಪ್, ಪ್ರವಾಸಿಗರ ನೆಚ್ಚಿನ ಶಾಪಿಂಗ್ ಸ್ಥಳವಾಗಿದೆ. ಪುಟ್ಟ ಬಣ್ಣ ಬಣ್ಣದ ಕ್ಯಾಂಡಲ್‍ಗಳಿಂದ ಹಿಡಿದು ಬಾಲ್, ಹೃದಯ, ಹಕ್ಕಿ, ಮರಗಿಡ ಹೀಗೆ ನಾನಾ ಬಗೆಯ ಸುಮಾರು 70 ವೆರೈಟಿ ಕ್ಯಾಂಡಲ್ ಇಲ್ಲಿ ತಯಾರಾಗುತ್ತಿದೆ. ಮನೆಯ ಅಂದ ಹೆಚ್ಚಿಸೋ ತರಹೇವರಿ ಕ್ಯಾಂಡಲ್‍ಗಳು ಎಲ್ಲರ ಗಮನ ಸೆಳೆಯುತ್ತಿವೆ.

    ಹೊಸ ವರ್ಷದ ಸಂಭ್ರಮವನ್ನು ನೀವು ದೀಪಗಳ ಜೊತೆ ಆಚರಣೆ ಮಾಡಲು ಬಯಸಿದ್ದರೆ ಈ ಮೇಣದ ಬತ್ತಿಯ ಬೆಳಕಿನಲ್ಲಿ ಆಚರಣೆ ಮಾಡಬಹುದು. ಗ್ರಾಹಕರಿಗೆ ಇಷ್ಟಾವಾಗೋ ರೀತಿಯಲ್ಲಿ ನಾನಾ ಬಗೆಯ ಕ್ಯಾಂಡಲ್‍ಗಳು ಈ ಬಾರಿಯ ಹೊಸ ವರ್ಷ ಆಚರಣೆಗೆ ರೆಡಿಯಾಗಿದ್ದು ಕಣ್ಮನ ಸೆಳೆಯುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ಹೊಸವರ್ಷ ಆಚರಣೆಗೆ ಅವಕಾಶ ನೀಡ್ಬಾರ್ದು- ಪೊಲೀಸರಿಗೆ ದೂರು

    ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ಹೊಸವರ್ಷ ಆಚರಣೆಗೆ ಅವಕಾಶ ನೀಡ್ಬಾರ್ದು- ಪೊಲೀಸರಿಗೆ ದೂರು

    ಬೆಂಗಳೂರು: ನಗರದ ಎಂ.ಜಿ. ರಸ್ತೆ ಹಾಗೂ ಬ್ರಿಗೇಡ್ ರಸ್ತೆಯಲ್ಲಿ ಹೊಸ ವರ್ಷ ಆಚರಣೆ ಮಾಡುವುದಕ್ಕೆ ಅವಕಾಶ ನೀಡಬಾರದು ಎಂದು ನಗರ ಪೊಲೀಸ್ ಆಯಕ್ತರಿಗೆ ಹಿಂದೂ ಜಾಗರಣ ವೇದಿಕೆ ದೂರು ಕೊಟ್ಟಿದ್ದಾರೆ.

    ಎಂ.ಜಿ.ರಸ್ತೆ ಹಾಗೂ ಬ್ರಿಗೇಡ್ ರಸ್ತೆಯಲ್ಲಿ ಹೊಸ ವರ್ಷ ಆಚರಣೆ ವೇಳೆ ಅಹಿತಕರ ಘಟನೆಗಳು ನಡೆಯುವುದಕ್ಕೆ ಅವಕಾಶ ಮಾಡಿಕೊಟ್ಟಂತಾಗುತ್ತೆ. ಅಹಿತಕರ ಘಟನೆಗಳು ನಡೆದರೆ ರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರಿನ ಮಾನ ಹರಾಜ್ ಆಗುತ್ತದೆ. ಹಾಗಾಗಿ ಹೊಸ ವರ್ಷ ಆಚರಣೆಗೆ ಅವಕಾಶ ನೀಡದಂತೆ ಮನವಿ ಮಾಡಿಕೊಂಡಿದ್ದಾರೆ.

    ಇದರ ಜೊತೆಗೆ ಹೊಸ ವರ್ಷದ ಆಚರಣೆ ಸಂದರ್ಭದಲ್ಲಿ ಎರಡು ರಸ್ತೆಯಲ್ಲಿ ಮದ್ಯ ಮಾರಾಟವನ್ನು ನಿಷೇಧ ಮಾಡುವಂತೆ ಒತ್ತಾಯಿಸಿದ್ದಾರೆ. ಹೊಸ ವರ್ಷ ಎಂದು ಯುವಕರು ಕುಡಿದ ಮತ್ತಿನಲ್ಲಿ ಯುವತಿಯರ ಜೊತೆ ಅಸಭ್ಯವಾಗಿ ವರ್ತಿಸಿದ್ದ ಘಟನೆ ಈ ಹಿಂದೆ ನಡೆದಿದೆ. ಹಾಗಾಗಿ ಮದ್ಯ ಮಾರಾಟ ನಿಷೇಧಿಸಬೇಕು ಹಾಗೂ ಹೊಸ ವರ್ಷ ಆಚರಣೆಗೆ ಅವಕಾಶ ನೀಡಬಾರದು ಎಂದು ಹಿಂದೂ ಜಾಗರಣ ವೇದಿಕೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬರ್ತ್ ಡೇಗೆ ಮೊದ್ಲೇ ಸಿಎಂರಿಂದ ಅಭಿಮಾನಿಗಳಿಗೆ ನೋವಿನ ಸಂದೇಶ..!

    ಬರ್ತ್ ಡೇಗೆ ಮೊದ್ಲೇ ಸಿಎಂರಿಂದ ಅಭಿಮಾನಿಗಳಿಗೆ ನೋವಿನ ಸಂದೇಶ..!

    ಬೆಂಗಳೂರು: ಇಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು 58ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಆದರೆ ಶನಿವಾರ ರಾತ್ರಿ ಸಿಎಂ ಟ್ವೀಟ್ ಮಾಡುವ ಮೂಲಕ ಅಭಿಮಾನಿಗಳಿಗೆ ಸಂದೇಶ ರವಾನಿಸಿದ್ದಾರೆ.

    ಟ್ವೀಟ್ ನಲ್ಲೇನಿದೆ?:
    “ರಾಜ್ಯದಲ್ಲಿ ನಡೆದ ಕೆಲವು ದುರ್ಘಟನೆಗಳಿಂದ ನಾನು ಮಾನಸಿಕವಾಗಿ ನೊಂದಿದ್ದೇನೆ. ಆದ್ದರಿಂದ ನನ್ನ ಹುಟ್ಟಿದ ದಿನವನ್ನು ಸಾರ್ವಜನಿಕವಾಗಿ ಸಂಭ್ರಮಿಸುವ ಮನಸ್ಥಿತಿಯಲ್ಲಿ ನಾನಿಲ್ಲ. ಹಿತೈಷಿಗಳ ಹಾರೈಕೆಯೇ ನನಗೆ ಶ್ರೀರಕ್ಷೆ. ನಾಳೆ(ಭಾನುವಾರ) ನನ್ನ ಕುಟುಂಬದೊಡನೆ ಇರುತ್ತೇನೆ” ಎಂದು ನೋವಿನಿಂದ ಟ್ವೀಟ್ ಮಾಡಿ ತಿಳಿಸಿದ್ದಾರೆ.

    ಮುಖ್ಯಮಂತ್ರಿ ಆದ ಬಳಿಕ ಕುಮಾರಸ್ವಾಮಿ ಅವರಿಗೆ ಇದು ಮೊದಲ ಹುಟ್ಟುಹಬ್ಬವಾಗಿದೆ. ಆದ್ದರಿಂದ ಅನೇಕರು ಅವರಿಗೆ ಶುಭಾಶಯವನ್ನು ಸಾಮಾಜಿಕ ಜಾಲತಾಣಗಳ ಮೂಲಕ ತಿಳಿಸುತ್ತಿದ್ದರು. ಆದರೆ ಇತ್ತೀಚೆಗೆ ರಾಜ್ಯದಲ್ಲಿ ನಡೆಯುತ್ತಿರುವ ಘಟನೆಯಿಂದ ಬೇಸರಗೊಂಡು ಈ ರೀತಿಯಾಗಿ ಅವರ ಅಭಿಮಾನಿಗಳಿಗೆ ಸಂದೇಶ ರವಾನಿಸಿದ್ದಾರೆ.

    ಸಿಎಂ ಕುಮಾರಸ್ವಾಮಿ ಅವರ ಹುಟ್ಟುಹಬ್ಬದ ಕಾರಣ ಸಾರ್ವಜನಿಕರು, ಅಭಿಮಾನಿಗಳಿಗೆ ಹಾಗೂ ಕಾರ್ಯಕರ್ತರಿಗೆ ಸಿಎಂ ಸಿಗುವುದಿಲ್ಲ. ಇಡೀ ದಿನ ಸಿಎಂ ಕುಮಾರಸ್ವಾಮಿ ತಮ್ಮ ಕುಟುಂಬ ಜೊತೆ ಇರಲು ನಿರ್ಧಾರ ಮಾಡಿದ್ದು, ಜೆಪಿ ನಗರದ ನಿವಾಸಕ್ಕೆ ಯಾರು ಬಾರದಂತೆ ಮನವಿ ಮಾಡಿದ್ದರು. ಜೊತೆಗೆ ಕಾರ್ಯಕರ್ತರು, ಅಭಿಮಾನಿಗಳು ಫ್ಲೆಕ್ಸ್ ಬ್ಯಾನರ್ ಅಳವಡಿಸಿ ಊರಿನ ಅಂದ ಹಾಳು ಮಾಡಬೇಡಿ. ಪರಿಸರ ಕಾಳಜಿ ಮೆರೆದಲ್ಲಿ ಅದೇ ಅತ್ಯುತ್ತಮ ಸಿಎಂ ಮನವಿ ಮಾಡಿದ್ದರು.

    ಶನಿವಾರ ಮಧ್ಯರಾತ್ರಿ ಸಿಎಂ ಅವರು ತಮ್ಮ ಪತ್ನಿ ಅನಿತಾ ಕುಮಾರಸ್ವಾಮಿ ಹಾಗೂ ಪುತ್ರ ನಿಖಿಲ್ ಕುಮಾರಸ್ವಾಮಿ ಜೊತೆ ಕೇಕ್ ಕತ್ತರಿಸಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ವಿಭಿನ್ನವಾಗಿ ಮದ್ವೆ ವಾರ್ಷಿಕೋತ್ಸವ ಆಚರಿಸಿಕೊಂಡ್ರು ಉಡುಪಿಯ ಶಶಿಧರ್ ಭಟ್

    ವಿಭಿನ್ನವಾಗಿ ಮದ್ವೆ ವಾರ್ಷಿಕೋತ್ಸವ ಆಚರಿಸಿಕೊಂಡ್ರು ಉಡುಪಿಯ ಶಶಿಧರ್ ಭಟ್

    ಉಡುಪಿ: ಹುಟ್ಟುಹಬ್ಬ, ಮದುವೆ ವಾರ್ಷಿಕೋತ್ಸವ ಎಂದರೆ ಸಾಕು ಕುಟುಂಬದವರ ಜೊತೆ ಸೇರಿ ಕೇಕ್ ಕಟ್ ಮಾಡಿ, ಸ್ನೇಹಿತರ ಜೊತೆ ಪಾರ್ಟಿ ಮಾಡುತ್ತಾರೆ. ಆದರೆ ಉಡುಪಿಯಲ್ಲೊಬ್ಬರು ವಿಭಿನ್ನವಾಗಿ ತಮ್ಮ ಮದುವೆ ವಾರ್ಷಿಕೋತ್ಸವವನ್ನು ಆಚರಣೆ ಮಾಡಿಕೊಂಡಿದ್ದಾರೆ.

    ಉಡುಪಿ ನಿವಾಸಿ ಶಶಿಧರ್ ಭಟ್ ತಮ್ಮ 25ನೇ ಮದುವೆ ವಾರ್ಷಿಕೋತ್ಸವವನ್ನು ಜಿಲ್ಲೆಯ ಬ್ರಹ್ಮಾವರದ ನೀಲಾವರ ಗೋವು ಶಾಲೆಯಲ್ಲಿ ಆಚರಣೆ ಮಾಡಿದ್ದಾರೆ. ಶಶಿಧರ್ ಭಟ್ ಅವರು ಯುವ ಬ್ರಾಹ್ಮಣ ಪರಿಷತ್ ಜೊತೆ ಸೇರಿ ಸುಮಾರು 1,500 ಹಸುಗಳಿಗೆ ಗೋಗ್ರಾಸ ನೀಡುವ ಮೂಲಕ ವಿಭಿನ್ನವಾದ ಒಂದು ಸೇವೆಯನ್ನು ಮಾಡಿದ್ದಾರೆ.

    ಶಶಿಧರ್ ಅವರು ಹಸುಗಳಿಗೆ ಹೊಟ್ಟೆ ತುಂಬಾ ರುಚಿಕರವಾದ ಆಹಾರ ಕೊಟ್ಟಿದ್ದಾರೆ. ಇದಕ್ಕಾಗಿ ಸುಮಾರು 60 ಸಾವಿರ ರೂಪಾಯಿಗಳನ್ನು ಖರ್ಚು ಮಾಡಿದ್ದಾರೆ. ಇದೊಂಥರಾ ದೇವರ ಸೇವೆ ಎಂಬುದು ಅವರ ನಂಬಿಕೆಯಾಗಿದೆ ಎಂದು ಸ್ಥಳೀಯ ವಿಷ್ಣು ಪಾಡಿಗಾರ್ ಹೇಳಿದ್ದಾರೆ.

    ಹುಟ್ಟಿದ ಹಬ್ಬ ಆಚರಣೆ, ವಾರ್ಷಿಕೋತ್ಸವ ಆಚರಣೆ ಅಂತ ಜನ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಾರೆ. ಅದೇ ದುಡ್ಡನ್ನು ಹೀಗೂ ಖರ್ಚು ಮಾಡಬಹುದು ಅನ್ನೋದನ್ನು ಭಟ್ ಮತ್ತು ಅವರ ತಂಡ ತೋರಿಸಿಕೊಟ್ಟಿದ್ದಾರೆ. ನೀಲಾವರ ಗೋಶಾಲೆಗೆ ಗೆಳೆಯರ ಬಳಗ ವಾರ್ಷಿಕೋತ್ಸವ ಹಿಂದಿನ ದಿನ ತೆರಳಿ ಆಹಾರ ತಯಾರಿಯ ಸಿದ್ಧತೆ ಮಾಡಿದ್ದರು. ಮಧ್ಯಾಹ್ನಕ್ಕೆ ಹೊಂದುವಂತೆ ಹಿಂಡಿ, ಅನ್ನ, ಬಿಸಿಬಿಸಿ ಹುರುಳಿ, ಹೀಗೆ ಎಲ್ಲಾ ಆಹಾರವನ್ನು ಕಲಸಿ ಗೋಗ್ರಾಸ ಸಿದ್ಧಪಡಿಸಲಾಗಿತ್ತು. ಗೋಶಾಲೆಯ 1500ಕ್ಕೂ ಹೆಚ್ಚು ಹಸುಗಳಿಗೆ ವಿತರಿಸಲಾಗಿದೆ. ಈ ಕಾರ್ಯಕ್ರಮ ಸಾಕಷ್ಟು ಮಂದಿಗೆ ಪ್ರೇರಣೆಯಾಗಿದೆ ಎಂದು ಸ್ಥಳೀಯ ನಿವಾಸಿ ದಿವ್ಯ ಭಟ್ ತಿಳಿಸಿದ್ದಾರೆ.

    ಗೋಶಾಲೆ ನಿರ್ವಹಣೆಗೆ ತಿಂಗಳಿಗೆ ಲಕ್ಷಾಂತರ ರೂಪಾಯಿ ಖರ್ಚಿದೆ. ಪಾರ್ಟಿ, ಸಮಾರಂಭ ಅಂತ ಸುಮ್ಮನೆ ದುಂದು ವೆಚ್ಚ ಮಾಡುವವರು ಮೂಕಪ್ರಾಣಿಗಳ ಜೊತೆ ಸಂಭ್ರಮ ಆಚರಿಸಬಹುದು ಎಂಬುದನ್ನು ಶಶಿಧರ್ ಭಟ್ ತಿಳಿಸಿಕೊಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • 58ನೇ ವಸಂತಕ್ಕೆ ಕಾಲಿಟ್ಟ ಸಿಎಂ ಎಚ್‍ಡಿಕೆ- ನಿವಾಸಕ್ಕೆ ಯಾರೂ ಬರದಂತೆ ಮನವಿ

    58ನೇ ವಸಂತಕ್ಕೆ ಕಾಲಿಟ್ಟ ಸಿಎಂ ಎಚ್‍ಡಿಕೆ- ನಿವಾಸಕ್ಕೆ ಯಾರೂ ಬರದಂತೆ ಮನವಿ

    ಬೆಂಗಳೂರು: ಮುಖ್ಯಮಂತ್ರಿ ಆಗ ಬಳಿಕ ಮೊದಲ ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಎಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಬರ್ತ್ ಡೇಯನ್ನು ಅದ್ಧೂರಿಯಾಗಿ ಆಚರಿಸಿಕೊಳ್ಳದೇ ಇರಲು ನಿರ್ಧಾರ ಮಾಡಿದ್ದಾರೆ.

    ಇಂದು ಹುಟ್ಟುಹಬ್ಬದ ಕಾರಣ ಸಾರ್ವಜನಿಕರು, ಅಭಿಮಾನಿಗಳು, ಕಾರ್ಯಕರ್ತರಿಗೆ ಸಿಎಂ ಸಿಗುವುದಿಲ್ಲ. ಇಡೀ ದಿನ ಸಿಎಂ ಕುಮಾರಸ್ವಾಮಿ ತಮ್ಮ ಕುಟುಂಬ ಜೊತೆ ಇರಲು ನಿರ್ಧಾರ ಮಾಡಿದ್ದಾರೆ. ಹೀಗಾಗಿ ಜೆಪಿ ನಗರದ ನಿವಾಸಕ್ಕೆ ಯಾರು ಬಾರದಂತೆ ಮನವಿ ಮಾಡಿದ್ದಾರೆ.

    ಹಿತೈಷಿಗಳು, ಅಭಿಮಾನಿಗಳು ಬೆಳಗಾವಿ ಅಧಿವೇಶನದ ನಂತರ ಸಿಎಂರನ್ನ ಭೇಟಿ ಮಾಡಿ ಶುಭಾಶಯ ತಿಳಿಸಬಹುದಾಗಿದೆ. ಇದೇ ವೇಳೆ ಕಾರ್ಯಕರ್ತರು, ಅಭಿಮಾನಿಗಳು ಫ್ಲೆಕ್ಸ್, ಬ್ಯಾನರ್ ಅಳವಡಿಸದಿರುವಂತೆ ಸಿಎಂ ಮನವಿ ಮಾಡಿದ್ದಾರೆ. ಈ ಸಂಬಂಧ ಸಂದೇಶ ರವಾನೆ ಮಾಡಿರುವ ಸಿಎಂ ನಿಮ್ಮ ಶುಭ ಹಾರೈಕೆಗಳೇ ನನಗೆ ಶ್ರೀರಕ್ಷೆ, ಫ್ಲೆಕ್ಸ್ ಬ್ಯಾನರ್ ಅಳವಡಿಸಿ ಊರಿನ ಅಂದ ಹಾಳು ಮಾಡಬೇಡಿ. ಪರಿಸರ ಕಾಳಜಿ ಮೆರೆದಲ್ಲಿ ಅದೇ ಅತ್ಯುತ್ತಮ ಅಂತ ಸಂದೇಶ ರವಾನೆ ಮಾಡಿದ್ದಾರೆ.

    ತಮ್ಮ ಮಗನ ಚಿತ್ರ ಸೀತಾರಾಮ ಕಲ್ಯಾಣದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವ ಸಾಧ್ಯತೆ ಇದ್ದು, ಸೋಮಾವಾರ ಮಧ್ಯಪ್ರದೇಶ ಸಿಎಂ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಸಿಎಂ ಕುಮಾರಸ್ವಾಮಿ ಭಾಗವಹಿಸಲಿದ್ದಾರೆ ಅಂತ ಸಿಎಂ ಕಚೇರಿಯಿಂದ ಪತ್ರಿಕಾ ಪ್ರಕಟಣೆ ಬಿಡುಗಡೆಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಇದು ಪ್ರಜಾಪ್ರಭುತ್ವದ ಗೆಲುವು – ಕಾಂಗ್ರೆಸ್ ಸಂಭ್ರಮಾಚರಣೆ

    ಇದು ಪ್ರಜಾಪ್ರಭುತ್ವದ ಗೆಲುವು – ಕಾಂಗ್ರೆಸ್ ಸಂಭ್ರಮಾಚರಣೆ

    ನವದೆಹಲಿ: ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಪ್ರಜಾಪ್ರಭುತ್ವದ ಗೆಲುವೆಂದು ಹೇಳಿ ಕಾಂಗ್ರೆಸ್ ಸಂಭ್ರಮಿಸಿದೆ.

    ಇಂದು ಭಾರತವು ದ್ವೇಷವನ್ನು ಬಿಟ್ಟು ಪ್ರೀತಿ ಮತ್ತು ಸ್ನೇಹವನ್ನು, ಹಿಂಸೆಯನ್ನು ಬಿಟ್ಟು ಶಾಂತಿಯನ್ನು, ಸುಳ್ಳನ್ನು ಬಿಟ್ಟು ಸತ್ಯವನ್ನು ಆಯ್ಕೆ ಮಾಡಿಕೊಂಡಿದೆ. ಈ ಜಯ ನಿಮ್ಮದು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

    5 ರಾಜ್ಯಗಳ ಫಲಿತಾಂಶ ದೇಶದ ಜನತೆ ಬಿಜೆಪಿ ಆಡಳಿತದಲ್ಲಿ ವಿಶ್ವಾಸ ಕಳೆದುಕೊಂಡಿರುವುದು ತೋರಿಸುತ್ತದೆ. ಸುಳ್ಳುಗಳು, ಕೋಮು ದ್ವೇಷ ಹರಡುವ ವಿಷಯಗಳ ಮೇಲಿನ ರಾಜಕಾರಣವನ್ನು ಜನ ತಿರಸ್ಕರಿಸಿದ್ದಾರೆ. ನೈಜ ವಿಚಾರಗಳು ಮತ್ತು ಅಭಿವೃದ್ಧಿ ಬಯಸಿ ಮತ ಚಲಾವಣೆಯಾಗಿದೆ. ಈ ಬದಲಾವಣೆ 2019ರ ಲೋಕಸಭಾ ಚುನಾವಣೆಯಲ್ಲೂ ಮುಂದುವರಿಯಲಿದೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

    ಮೂರು ರಾಜ್ಯಗಳ ಭರ್ಜರಿ ಜಯದಿಂದಾಗಿ ದೆಹಲಿಯ ಪ್ರಧಾನ ಕಚೇರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ. ಅಲ್ಲದೇ ಕಾಂಗ್ರೆಸ್ ಮತದಾರರಿಗೆ ಟ್ವೀಟ್ ಮೂಲಕ ಧನ್ಯವಾದವನ್ನು ಸಲ್ಲಿಸಿದೆ.

    ಈ ಗೆಲುವು ಪ್ರಜಾಪ್ರಭುತ್ವದ ಗೆಲುವಾಗಿದೆ. ದ್ವೇಷದ ಮೇಲಿನ ಪ್ರೀತಿಯನ್ನು, ಹಿಂಸೆಯ ಮೇಲಿನ ಶಾಂತಿಯನ್ನು ಹಾಗೂ ಸುಳ್ಳಿನ ಮೇಲಿನ ಸತ್ಯವನ್ನು ಆಯ್ಕೆಮಾಡಿಕೊಂಡ ಭಾರತಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತದೆ. ಈ ಜಯ ನಿಮ್ಮದು ಎಂದು ಬರೆದುಕೊಂಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಹೇಳೋದು ಒಂದು ಮಾಡೋದು ಮತ್ತೊಂದು – ಪ್ರಿಯಾಂಕ ಚೋಪ್ರಾ ವಿರುದ್ಧ ನೆಟ್ಟಿಗರು ಗರಂ

    ಹೇಳೋದು ಒಂದು ಮಾಡೋದು ಮತ್ತೊಂದು – ಪ್ರಿಯಾಂಕ ಚೋಪ್ರಾ ವಿರುದ್ಧ ನೆಟ್ಟಿಗರು ಗರಂ

    ಬೆಂಗಳೂರು: ಬಾಲಿವುಡ್ ಮತ್ತು ಹಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ವಿರುದ್ಧ ನೆಟ್ಟಿಗರು ಗರಂ ಆಗಿದ್ದು, ಹೇಳುವುದು ಒಂದು ಮಾಡುವುದು ಮತ್ತೊಂದು ಹೇಳಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

    ತರಾಟೆಗೆ ತೆಗೆದುಕೊಳ್ಳಲು ಕಾರಣವಿದೆ. ಶನಿವಾರ ರಾಜಸ್ಥಾನದಲ್ಲಿ ಪ್ರಿಯಾಂಕ ಚೋಪ್ರಾ ಮತ್ತು ನಿಕ್ ಜೊನಾಸ್ ಮದುವೆ ಸಮಾರಂಭ ಅದ್ಧೂರಿಯಾಗಿ ನಡೆಯಿತು. ಜೋಧಪುರದ ತಾಜ್ ಉಮಾಯಿದ್ ಭವನ ಅರಮನೆಯಲ್ಲಿ ಕ್ರೈಸ್ತ ಸಂಪ್ರದಾಯದಂತೆ ನಿಕ್ ಜೊನಾಸ್ ಹಾಗೂ ಪ್ರಿಯಾಂಕಾ ಸತಿಪತಿಗಳಾದರು. ಮದುವೆ ಸಮಾರಂಭದ ಬಳಿಕ ಅರಮನೆಯ ಹೋಟೆಲ್ ಆವರಣದಲ್ಲಿ ಪಟಾಕಿ ಸಿಡಿಸುವ ಪ್ರದರ್ಶನ ಏರ್ಪಡಿಸಲಾಗಿತ್ತು.

    ವಾಯುಮಾಲಿನ್ಯ ತಡೆ ಚಳುವಳಿಯ ಬ್ರಾಂಡ್ ಅಂಬಾಸಿಡರ್ ನೀವೇ ಆಗಿದ್ದು, ನಿಮ್ಮ ಮದುವೆ ಸಮಾರಂಭದಲ್ಲಿಯೇ ಪಟಾಕಿ ಸಿಡಿಸಿ ಸಂಭ್ರಮಿಸಿದ್ದು ಎಷ್ಟು ಸರಿ ಎಂದು ನೆಟ್ಟಿಗರು ಪ್ರಿಯಾಂಕ ಅವರನ್ನು ಪ್ರಶ್ನಿಸುತ್ತಿದ್ದಾರೆ.

    ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪ್ರಿಯಾಂಕ ಚೋಪ್ರಾ ವಾಯುಮಾಲಿನ್ಯ ತಡೆ ಚಳಿವಳಿಯಲ್ಲಿ ಭಾಗವಹಿಸಿ ದೇಶದ ಜನತೆಯಲ್ಲಿ ಪಟಾಕಿ ಸಿಡಿಸದಂತೆ ಜಾಗೃತಿ ಮೂಡಿಸಿ ಮನವಿ ಮಾಡಿದ್ದರು. ಅಲ್ಲದೇ ಪ್ರಿಯಾಂಕ ಅವರು ಅಸ್ತಮಾ ಅನಾರೋಗ್ಯದ ಸಂಬಂಧಿಸಿದ ಜಾಗೃತಿ ಮೂಡಿಸುವ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ.

    ಬ್ರಿಥ್ ಫ್ರೀ ಕ್ಯಾಂಪೆನ್ ನಲ್ಲಿ ಕೂಡ ಭಾಗವಹಿಸಿರುವ ಪ್ರಿಯಾಂಕ ವಿಶ್ವಾದ್ಯಂತ ಅಸ್ತಮಾದಿಂದ ಬಳುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಇದನ್ನು ಹೇಳಿಕೊಳ್ಳಲು ಕೆಲವರು ಹಿಂಜರಿಯುತ್ತಾರೆ. ಇನ್ನು ಕೆಲವರು ಧೈರ್ಯವಾಗಿ ಹೇಳಿಕೊಳ್ಳುತ್ತಾರೆ. ನನಗೂ ಅಸ್ತಮಾ ಇದೆ. ಅದನ್ನು ಕಂಟ್ರೋಲ್ ಮಾಡುತ್ತೇನೆ. ನನ್ನ ಗುರಿ ಸಾಧನೆಗೆ ಅಡ್ಡ ಬರಲು ಸಾಧ್ಯವಿಲ್ಲ ಎಂದು ಅಸ್ತಮಾ ರೋಗಿಗಳಿಗೆ ಈ ಹಿಂದೆ ಧೈರ್ಯ ತುಂಬಿದ್ದರು.

    https://twitter.com/Ankur_Kumar_/status/1069104042712932357?

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv