Tag: ceiling

  • ಕೊಪ್ಪಳದಲ್ಲಿ ಅಂಗನವಾಡಿ ಸೀಲಿಂಗ್ ಕುಸಿದು ನಾಲ್ಕು ಮಕ್ಕಳಿಗೆ ಗಾಯ

    ಕೊಪ್ಪಳದಲ್ಲಿ ಅಂಗನವಾಡಿ ಸೀಲಿಂಗ್ ಕುಸಿದು ನಾಲ್ಕು ಮಕ್ಕಳಿಗೆ ಗಾಯ

    ಕೊಪ್ಪಳ: ಅಂಗನವಾಡಿ (Anganwadi) ಕೇಂದ್ರದ ಸೀಲಿಂಗ್ (ಛಾವಣಿ) ಕುಸಿದು ಬಿದ್ದು ನಾಲ್ಕು ಮಕ್ಕಳು ಗಾಯಗೊಂಡಿರುವ ಘಟನೆ ಕೊಪ್ಪಳ (Koppala) ಜಿಲ್ಲೆಯ ಗಂಗಾವತಿಯ ಮಹೆಬೂಬ ನಗರದ 7ನೇ ವಾರ್ಡ್‌ನ  11ನೇ ಅಂಗನವಾಡಿ ಕೇಂದ್ರದಲ್ಲಿ ಇಂದು (ಸೋಮವಾರ) ಬೆಳಗ್ಗೆ ನಡೆದಿದೆ.

    ಘಟನೆಯಲ್ಲಿ ನಾಲ್ಕರಿಂದ ಐದು ವರ್ಷದೊಳಗಿನ ಅಮಾನ್ ಸೈಯದ್, ಮರ್ದಾನ್, ಮಾನ್ವಿತಾ, ಸುರಕ್ಷಾ ಎಂಬ ಮಕ್ಕಳು ಗಾಯಗೊಂಡಿದ್ದಾರೆ. ಗಾಯಾಳು ಮಕ್ಕಳನ್ನು ಸ್ಥಳೀಯರು ತಕ್ಷಣ ಸರ್ಕಾರಿ ಉಪ ವಿಭಾಗ ಆಸ್ಪತ್ರೆಗೆ ದಾಖಲಿಸಿದ್ದಾರೆ. ಎಲ್ಲಾ ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ: ರೇಣುಕಾಸ್ವಾಮಿ ಹತ್ಯೆ ಕೇಸ್‌ – ಮೊದಲ ಜಾಮೀನು ಮಂಜೂರು

    ಕಳೆದ ಮೂರು ದಿನಗಳ ರಜೆಯ ಬಳಿಕ ಇಂದು ಎಂದಿನಂತೆ ಅಂಗನವಾಡಿ ಕೇಂದ್ರ ಆರಂಭವಾಗಿದೆ. ಕೇಂದ್ರದ ಶಿಕ್ಷಕಿ ಹಸೀನಾ ಸುಮಾರು 20ಕ್ಕೂ ಹೆಚ್ಚು ಮಕ್ಕಳನ್ನು ವೃತ್ತಾಕಾರದಲ್ಲಿ ಕೂರಿಸಿ ಪಾಠ ಮಾಡುತ್ತಿದ್ದರು. ಈ ವೇಳೆ ಕಟ್ಟಡದ ಸೀಲಿಂಗ್ ಕುಸಿದು ಬಿದ್ದಿದೆ. ಘಟನೆ ನಡೆದ ಸ್ಥಳಕ್ಕೆ ನಗರಸಭೆಯ ಅಧ್ಯಕ್ಷ ಮೌಲಸಾಬ್, ವಾರ್ಡ್ ಸದಸ್ಯ ಮನೋಹರಸ್ವಾಮಿ, ಸಿಡಿಪಿಒ ಜಯಶ್ರೀ ದೇಸಾಯಿ, ಸೂಪರ್‌ವೈಸರ್ ಚಂದ್ರಮ್ಮ ಸೇರಿದಂತೆ ನಗರಸಭೆ ಸದಸ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದನ್ನೂ ಓದಿ: ಬಿಜೆಪಿ ಸರ್ಕಾರ ಇದ್ದಾಗ ಯಾಕೆ ಅರ್ಕಾವತಿ ರೀ ಡೂ ವರದಿಯನ್ನು ಮಂಡನೆ ಮಾಡಲಿಲ್ಲ?: ಸಿದ್ದರಾಮಯ್ಯ

  • ಮಳೆಯಿಂದಾಗಿ ಮಾಲ್‍ನ ಸೀಲಿಂಗ್ ಕುಸಿತ – ವೀಡಿಯೋ ವೈರಲ್

    ಮಳೆಯಿಂದಾಗಿ ಮಾಲ್‍ನ ಸೀಲಿಂಗ್ ಕುಸಿತ – ವೀಡಿಯೋ ವೈರಲ್

    ಚೆನ್ನೈ: ತಮಿಳುನಾಡಿನಲ್ಲಿ ಗುರುವಾರ ಸುರಿದ ಭಾರೀ ಮಳೆಯಿಂದಾಗಿ ಅಣ್ಣಾನಗರದ ವಿಆರ್ ಮಾಲ್‍ನ ಒಂದು ಭಾಗದಲ್ಲಿ ಸೀಲಿಂಗ್ ಕುಸಿದು ಬಿದ್ದಿದೆ. ಸಂಜೆ 5 ಗಂಟೆ ಸುಮಾರಿಗೆ ನಡೆದ ಘಟನೆಯ ವೀಡಿಯೋ ವೈರಲ್ ಆಗಿದೆ.

    ಛಾವಣಿಯ ಮೇಲೆ ನೀರು ನಿಂತಿದ್ದರಿಂದ ಸೀಲಿಂಗ್ ಕುಸಿದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ. ಘಟನೆ ನಡೆದ 2 ಗಂಟೆಗಳೊಳಗೆ ಮಾಲ್‍ನ ಮೇಲ್ಛಾವಣಿಯನ್ನು ದುರಸ್ಥಿ ಮಾಡಲಾಗಿದ್ದು, ಸಾರ್ವಜನಿಕರಿಗೆ ಮತ್ತೆ ತೆರವುಗೊಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಹೊಸ ವರ್ಷದ ಸಂಭ್ರಮ ಕಸಿದ ಕೋವಿಡ್ ಹೆಮ್ಮಾರಿ- ಬೆಂಗ್ಳೂರಿನ ಪ್ರಮುಖ ರಸ್ತೆಗಳೆಲ್ಲವೂ ನಿರ್ಜನ

    ಮಾಲ್‍ನ ಸೀಲಿಂಗ್ ಕುಸಿದು ಬಿದ್ದ ಸಂದರ್ಭದಲ್ಲಿ ಜೋರಾಗಿ ಸದ್ದು ಕೇಳಿಸಿತು. ಮಾಲ್‍ನಲ್ಲಿದ್ದ ಜನರೆಲ್ಲರೂ ನೆಲದ ಅಂತಸ್ತಿಗೆ ಓಡಿ ಹೋದರು. ಜೋರಾಗಿ ಮಳೆ ಸುರಿಯುತ್ತಿದ್ದ ಕಾರಣ ಮಾಲ್‍ನಿಂದ ಹೊರಗಡೆ ಹೋಗಲೂ ಸಾಧ್ಯವಾಗಲಿಲ್ಲ. ಮಳೆಯ ನೀರು ಮಾಲ್ ಒಳಗೂ ಪ್ರವೇಶಿಸಿತ್ತು. ಪರಿಸ್ಥಿತಿ ಸ್ವಲ್ಪ ಸಮಯದಲ್ಲಿ ಹತೋಟಿಗೆ ತರಲಾಯ್ತು ಎಂದು ಮಾಲ್‍ನಲ್ಲಿ ನೆರೆದಿದ್ದ ಒಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ. ಇದನ್ನೂ ಓದಿ: ಸಾಧು ವೇಷದಲ್ಲಿ ಮಾದಕ ವಸ್ತು ಮಾರುತ್ತಿದ್ದ ವ್ಯಕ್ತಿ ಅರೆಸ್ಟ್

    ಭಾರೀ ಮಳೆಯ ಹಿನ್ನೆಲೆಯಲ್ಲಿ ತಮಿಳುನಾಡಿನ ರಾಜ್ಯ ಸರ್ಕಾರ ಚೆನ್ನೈ, ಕಾಂಚೀಪುರಂ, ತಿರುವಳ್ಳೂರು ಹಾಗೂ ಚಿಂಗಲ್‍ಪೇಟೆ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಿದೆ. ಚೆನ್ನೈನ ಮೆಟ್ರೋ ಪ್ರಯಾಣಿಕರು ಸುರಕ್ಷಿತವಾಗಿ ಮನೆ ತಲುಪಲು ಸುಲಭವಾಗಲು ಕಾರ್ಯಾಚರಣೆ ಸಮಯವನ್ನು ರಾತ್ರಿ 12 ಗಂಟೆಯಿಂದ 1 ಗಂಟೆಗೆ ವಿಸ್ತರಿಸುವುದಾಗಿ ಘೋಷಿಸಿದೆ.

  • ಮನೆಯ ಮೆಲ್ಛಾವಣಿ ಕುಸಿದು 2 ವರ್ಷದ ಕಂದಮ್ಮ ಸಾವು

    ಮನೆಯ ಮೆಲ್ಛಾವಣಿ ಕುಸಿದು 2 ವರ್ಷದ ಕಂದಮ್ಮ ಸಾವು

    ಯಾದಗಿರಿ: ಮನೆಯಲ್ಲಿ ಮಲಗಿದ್ದ ಮಗುವಿನ ಮೇಲೆ ಮೇಲ್ಛಾವಣಿ ಕುಸಿದ ಪರಿಣಾಮ ಮಗು ಸಾವನ್ನಪ್ಪಿರೋ ಘಟನೆ ಯಾದಗಿರಿಯಲ್ಲಿ ನಡೆದಿದೆ.

    ಜಿಲ್ಲೆಯ ಶಹಾಪುರ ನಗರದ ಹನುಮಾನ್ ಮಂದಿರದ ಹತ್ತಿರವಿರುವ ಡಾ.ವೆಂಕಟೇಶ ಶಿರವಾಳಕರ್ ಎಂಬವರ ಮನೆಯಲ್ಲಿ ಈ ದುರ್ಘಟನೆ ನಡೆದಿದೆ. ಅಡುಗೆ ಭಟ್ಟರಾಗಿ ಕೆಲಸ ಮಾಡುತ್ತಿರುವ ಉತ್ತರಾಖಂಡ್ ಮೂಲದ ವಿಜಯಪ್ರಕಾಶ್ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. 30 ವರ್ಷ ಹಳೆಯದಾದ ಮನೆಯ ಮೇಲ್ಛಾವಣಿ ಸ್ಪಲ್ಪ ಭಾಗ ಮಗುವಿನ ತಲೆ ಮೇಲೆ ಬಿದ್ದ ಪರಿಣಾಮ ಎರಡು ವರ್ಷದ ಬಾಲಕ ಪ್ರಿಯಾನಸೂ ಮೃತಪಟ್ಟಿದ್ದಾನೆ.

    ಘಟನೆ ನಡೆದ ವೇಳೆ ತಂದೆ ವಿಜಯಪ್ರಕಾಶ್ ಹೊರಗಡೆ ಕೆಲಸಕ್ಕೆ ತೆರಳಿದ್ದರು. ತಾಯಿ ಇಂದುಮತಿ ಅಡುಗೆ ಮನೆಯಲ್ಲಿ ಅಡುಗೆ ಮಾಡುತ್ತಿದ್ದರು. ಮೇಲ್ಛಾವಣಿ ಮಗುವಿನ ಮೇಲೆ ಕುಸಿದ ಬಳಿಕ ಮಗುವನ್ನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ರು. ಆದ್ರೆ ಚಿಕಿತ್ಸೆ ಫಲಿಸದೇ ತಾಲೂಕು ಆಸ್ಪತ್ರೆಯಲ್ಲಿ ಮಗು ಮೃತಪಟ್ಟಿದೆ.

    ಘಟನಾ ಸ್ಥಳಕ್ಕೆ ಶಹಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಶಹಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.