Tag: ceasefire violation

  • ಕದನ ವಿರಾಮ ಉಲ್ಲಂಘಿಸಿದ ಪಾಕ್ – ಲೀಪಾ ಕಣಿವೆಯ ಎಲ್‌ಒಸಿ ಉದ್ದಕ್ಕೂ ಗುಂಡಿನ ದಾಳಿ

    ಕದನ ವಿರಾಮ ಉಲ್ಲಂಘಿಸಿದ ಪಾಕ್ – ಲೀಪಾ ಕಣಿವೆಯ ಎಲ್‌ಒಸಿ ಉದ್ದಕ್ಕೂ ಗುಂಡಿನ ದಾಳಿ

    ನವದೆಹಲಿ: ಜಮ್ಮು ಮತ್ತು ಕಾಶ್ಮೀರದ (Jammu And Kashmir) ಲೀಪಾ ಕಣಿವೆಯಲ್ಲಿ (Leepa valley) ಎಲ್‌ಒಸಿ ಉದ್ದಕ್ಕೂ ಪಾಕಿಸ್ತಾನಿ ಸೇನೆ (Pakistani Army) ಕದನ ವಿರಾಮವನ್ನು ಉಲ್ಲಂಘಿಸಿ (Ceasefire Violation) ಭಾರತೀಯ ಪೋಸ್ಟ್‌ಗಳ ಮೇಲೆ ಗುಂಡು ಹಾರಿಸಿದೆ ಎಂದು ಮೂಲಗಳು ತಿಳಿಸಿವೆ. ಅಕ್ಟೋಬರ್ 26-27ರ ಮಧ್ಯರಾತ್ರಿ ಪಾಕಿಸ್ತಾನ ಸಣ್ಣ ಶಸ್ತ್ರಾಸ್ತ್ರಗಳನ್ನು ಮತ್ತು ಮಾರ್ಟರ್ ಶೆಲ್ಲಿಂಗ್ ಬಳಸಿ ದಾಳಿ ನಡೆಸಿದೆ.

    ಪಾಕಿಸ್ತಾನದ ಅಪ್ರಚೋದಿತ ಗುಂಡಿನ ದಾಳಿಗೆ ಭಾರತೀಯ ಸೇನೆಯು ಸೂಕ್ತ ಪ್ರತ್ಯುತ್ತರ ನೀಡಿದೆ ಎಂದು ಮೂಲಗಳು ತಿಳಿಸಿವೆ. ಲೀಪಾ 9 ಕಿ.ಮೀ ಎತ್ತರದ ಕಣಿವೆಯಾಗಿದ್ದು, ಇದು ಕಾಜಿನಾಗ್ ಸ್ಪ್ರಿಂಗ್ ಮೂಲಕ ಹಾದುಹೋಗುತ್ತದೆ ಮತ್ತು ಇದು ಬಹಳ ಹಿಂದಿನಿಂದಲೂ ಒಳನುಸುಳುವಿಕೆ ಪ್ರಯತ್ನಗಳಿಗೆ ಪ್ರಮುಖ ಮಾರ್ಗವಾಗಿದೆ. ಇದನ್ನೂ ಓದಿ: ಮಹಿಳೆಯರಿಗೆ ಪ್ರತಿ ತಿಂಗಳು 2,500 ರೂ., 25 ಲಕ್ಷ ವರೆಗೆ ಉಚಿತ ವೈದ್ಯಕೀಯ ಚಿಕಿತ್ಸೆ: ಬಿಹಾರಿಗಳಿಗೆ ಮಹಾಘಟಬಂಧನ್ ‘ಗ್ಯಾರಂಟಿ’

    ಮೂರು ದಿನಗಳ ಯುದ್ಧದ ನಂತರ ಪಾಕಿಸ್ತಾನವು ಕದನ ವಿರಾಮಕ್ಕಾಗಿ ಭಾರತಕ್ಕೆ ಮನವಿ ಮಾಡಿದ ಹಿನ್ನೆಲೆ ಕಳೆದ ಮೇ 10ರಿಂದ ಎಲ್‌ಒಸಿ ಕದನ ವಿರಾಮ ಘೋಷಿಸಿತ್ತು. ಆಗಸ್ಟ್ನಲ್ಲಿ ಪೂಂಚ್ ಪ್ರದೇಶದಲ್ಲಿ ಪಾಕಿಸ್ತಾನ ಗುಂಡು ಹಾರಿಸುವ ಮೂಲಕ ಕದನ ವಿರಾಮವನ್ನು ಉಲ್ಲಂಘಿಸಿದೆ ಎಂಬ ವರದಿಗಳು ಬಂದವು. ಆದರೆ, ಸೇನೆಯು ಈ ವರದಿಗಳನ್ನು ನಿರಾಕರಿಸಿತ್ತು. ಇದನ್ನೂ ಓದಿ: ಬೆಳಗಾವಿ | ಭಿಕ್ಷೆ ಬೇಡುತ್ತಾ ರಸ್ತೆ ದಾಟುತ್ತಿದ್ದ ವೃದ್ಧನ ಮೇಲೆ ಹರಿದ ಲಾರಿ – ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ

  • ಪಾಕ್‍ಗೆ ನಾವು ಹೇಗಾದ್ರೂ ಪ್ರತಿಕ್ರಿಯಿಸುತ್ತೇವೆ, ಇದನ್ನು ಟ್ರಂಪ್ ಅರ್ಥ ಮಾಡಿಕೊಳ್ಳಲಿ: ಮೋದಿ

    ಪಾಕ್‍ಗೆ ನಾವು ಹೇಗಾದ್ರೂ ಪ್ರತಿಕ್ರಿಯಿಸುತ್ತೇವೆ, ಇದನ್ನು ಟ್ರಂಪ್ ಅರ್ಥ ಮಾಡಿಕೊಳ್ಳಲಿ: ಮೋದಿ

    ನವದೆಹಲಿ: ಪಾಕಿಸ್ತಾನದ (Pakistan) ದಾಳಿಗೆ ಭಾರತ ಏನು ಬೇಕಾದರೂ, ಹೇಗೆ ಬೇಕಾದರೂ ಪ್ರತಿಕ್ರಿಯಿಸುತ್ತೇವೆ. ಇದನ್ನು ಟ್ರಂಪ್ (Donald Trump) ಸರ್ಕಾರ ಅರ್ಥ ಮಾಡಿಕೊಳ್ಳಬೇಕು ಎಂದು ಅಮೆರಿಕದ ಉಪಾಧ್ಯಕ್ಷ ಜೆ.ಡಿ ವ್ಯಾನ್ಸ್ (JD Vance) ಅವರಿಗೆ ಪ್ರಧಾನಿ ನರೇಂದ್ರ ಮೋದಿಯವರು ಖಡಕ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ.

    ಭಾರತ ಹಾಗೂ ಪಾಕ್ ನಡುವಿನ ಉದ್ವಿಗ್ನತೆ ಹೆಚ್ಚಾದ ಬಗ್ಗೆ ಗುಪ್ತಚರ ಮಾಹಿತಿ ಪಡೆದಿದ್ದ ವ್ಯಾನ್ಸ್, ಮೇ 9ರಂದು ಮೋದಿಯವರನ್ನು ಸಂಪರ್ಕಿಸಿ ಸಂಯಮದಿಂದ ವರ್ತಿಸುವಂತೆ ಮನವಿ ಮಾಡಿದ್ದರು. ಈ ಬಗ್ಗೆ ಅಮೆರಿಕದ ಪತ್ರಿಕೆಗಳಲ್ಲಿ ವರದಿಯಾಗಿತ್ತು. ಈ ವೇಳೆ ಮೋದಿಯವರು ಪಾಕಿಸ್ತಾನದ ವಿರುದ್ಧ ಖಾರವಾಗಿ ಪ್ರತಿಕ್ರಿಯಿಸಿದ್ದರು ಎನ್ನಲಾಗಿದೆ. ಇದನ್ನೂ ಓದಿ: ಲಷ್ಕರ್ ಉಗ್ರನ ಅಂತ್ಯಕ್ರಿಯೆಯಲ್ಲಿ ಪಾಕ್ ಸೇನಾಧಿಕಾರಿಗಳು ಭಾಗಿ – ಭಾರತ ತೀವ್ರ ಆಕ್ಷೇಪ

    ಭಾರತ ಮತ್ತು ಪಾಕಿಸ್ತಾನವನ್ನ ಸಮಾನವಾಗಿ ನೋಡಲು ಸಾಧ್ಯವೇ ಇಲ್ಲ. ಪಾಕ್ ಏನಾದ್ರೂ ದಾಳಿ ಮಾಡಿದ್ರೆ ವಿನಾಶಕಾರಿ ಪ್ರತಿಕ್ರಿಯೆ ಕೊಡ್ತೀವಿ. ಇದನ್ನು ಪಾಕಿಸ್ತಾನ ಅರ್ಥ ಮಾಡಿಕೊಳ್ಳಬೇಕು ಎಂದು ಮೋದಿ ಎಚ್ಚರಿಕೆ ನೀಡಿದ್ದರು ಎಂದು ಮೂಲಗಳು ತಿಳಿಸಿವೆ.

    ಪಾಕಿಸ್ತಾನದಲ್ಲಿರುವ ಭಯೋತ್ಪಾದಕರ ಮೇಲೆ ಭಾರತ ದಾಳಿ ಮಾಡಲಿದೆ ಎಂದು ಆಪರೇಷನ್‌ ಸಿಂಧೂರ (Operation Sindoor) ಕಾರ್ಯಾಚರಣೆಗೂ ಮುನ್ನವೇ ಅಮೆರಿಕಗೆ ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್‌ ಸ್ಪಷ್ಟಪಡಿಸಿದ್ದರು.

    ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, ಮೇ 1 ರಂದು ದೂರವಾಣಿ ಕರೆಯಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರಿಗೆ ಪಾಕಿಸ್ತಾನದಲ್ಲಿರುವ ಭಯೋತ್ಪಾದಕರ ಮೇಲೆ ಭಾರತ ದಾಳಿ ಮಾಡಲಿದೆ ಎಂದು ಹೇಳಿದ್ದರು. ಇದನ್ನೂ ಓದಿ: ಭಾರತ ಮತ್ತಷ್ಟು ಸೇಡು ತೀರಿಸಿಕೊಳ್ಳಬೇಕು, ಕೇಂದ್ರಕ್ಕೆ ನಮ್ಮ ಬೆಂಬಲ ಇದೆ: ಆರ್‌.ವಿ ದೇಶಪಾಂಡೆ

  • ಉಗ್ರರ ಸಂಹಾರಕ್ಕೆ ಭಾರತೀಯ ಸೇನೆಗೆ ನೆರವಾಗಿದ್ದು ಬೆಂಗಳೂರಿನ ʻಇಸ್ರೋʼ

    ಉಗ್ರರ ಸಂಹಾರಕ್ಕೆ ಭಾರತೀಯ ಸೇನೆಗೆ ನೆರವಾಗಿದ್ದು ಬೆಂಗಳೂರಿನ ʻಇಸ್ರೋʼ

    ಬೆಂಗಳೂರು: ಭಾರತೀಯ ಸೇನೆ ನಡೆಸಿದ ಕ್ರೂಸ್ ಕ್ಷಿಪಣಿ ದಾಳಿಯಲ್ಲಿ ಪಾಕಿಸ್ತಾನದ ಮಿಲಿಟರಿ ನೆಲೆಗಳಿಗೆ ಆಗಿರುವ ಹಾನಿಗಳ ಕುರಿತು ಸಾಕ್ಷಿ ಸಮೇತ ಓಪನ್ ಸೋರ್ಸ್ ಇಂಟೆಲಿಜೆನ್ಸ್ (OSINT) ತಜ್ಞರು ಮಾಹಿತಿ ಹಂಚಿಕೊಂಡಿದ್ದಾರೆ. ಆದ್ರೆ ಸೇನೆಯ ಈ ಕಾರ್ಯಾಚರಣೆಗೆ ನೆರವಾಗಿದ್ದು ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ನಮ್ಮ ಇಸ್ರೋ (ISRO) ಸಂಸ್ಥೆ ಅನ್ನೋದು ಉನ್ನತ ಮೂಲಗಳಿಂದ ತಿಳಿದುಬಂದಿದೆ.

    ಹೌದು, ಭಾರತೀಯ ಸೇನೆಗೆ (Indian Army) ಉಗ್ರರ ನೆಲೆಗಳನ್ನ ತೋರಿಸಿದ್ದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ). ಯುದ್ಧದ ಸಂದರ್ಭ ನಿರ್ಮಾಣ ಆಗ್ತಿದ್ದಂತೆ ಭಾರತೀಯ ಸೇನೆ ಇಸ್ರೋ ಸಂಸ್ಥೆಯ ಸಹಾಯ ಕೇಳಿತ್ತು. ಹೀಗಾಗಿ 10 ಉಪಗ್ರಹಗಳಿಂದ ಸತತ ನಿಗಾ ವಹಿಸಿದ್ದ ಇಸ್ರೋ ಉಗ್ರರ ನೆಲೆ ಫೋಟೋಗಳನ್ನ ಕಳಿಸಿಕೊಟ್ಟಿತ್ತು. ಪಾಕಿಸ್ತಾನದ ಸೇನಾ ನೆಲೆಗಳು, ಡ್ರೋನ್‌ ಲಾಂಚ್‌ ಪ್ಯಾಡ್‌ಗಳ ಮಾಹಿತಿಯನ್ನು ಚಿತ್ರ ಸಮೇತ ಸಂಗ್ರಹಿಸಿಕೊಟ್ಟಿತ್ತು. ಹೀಗಾಗಿ ನಿಕರ ಗುರಿಯಿಟ್ಟ ಭಾರತೀಯ ಸೇನೆ ಉಗ್ಗರ ಸೇನಾ ನೆಲೆಗಳು ಹಾಗೂ ವಾಯು ನೆಲೆಗಳನ್ನು ಛಿದ್ರಗೊಳಿಸಿತ್ತು ಎಂದು ಇಸ್ರೋದ ಉನ್ನತ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಪಾಕ್‌ನಲ್ಲಿರುವ ಉಗ್ರರ ನೆಲೆಗಳಿಗೆ ಹೊಡೀತೀವಿ: ಅಮೆರಿಕಗೆ ಮೊದಲೇ ಹೇಳಿದ್ದ ಜೈಶಂಕರ್‌

    ಭಾರತವು ಪಾಕಿಸ್ತಾನದ ಪ್ರದೇಶದೊಳಗೆ ಆಯ್ದ ಮಿಲಿಟರಿ ಗುರಿಗಳ ಮೇಲೆ ನಿಖರ ದಾಳಿಗಳನ್ನು ನಡೆಸಿತು. ಇವುಗಳಲ್ಲಿ ರಫಿಕಿ, ಚಕ್ಲಾಲಾ, ರಹೀಮ್ ಯಾರ್ ಖಾನ್, ಸುಕ್ಕೂರ್ ಮತ್ತು ಸಿಯಾಲ್‌ಕೋಟ್‌ನಲ್ಲಿರುವ ರಾಡಾರ್ ಸ್ಥಾಪನೆಗಳು, ಕಮಾಂಡ್ ಮತ್ತು ನಿಯಂತ್ರಣ ಕೇಂದ್ರಗಳು ಮತ್ತು ಮದ್ದುಗುಂಡು ಡಿಪೋಗಳು ಸೇರಿವೆ. ಇದನ್ನೂ ಓದಿ: ಜಮ್ಮು & ಕಾಶ್ಮೀರದ ವಾಯುಪ್ರದೇಶ ಮೂಲಕ ಹಾದುಹೋದ ಸ್ಟಾರ್‌ಲಿಂಕ್‌ ಉಪಗ್ರಹ – ಡ್ರೋನ್‌ ಅಂತ ಬೆಚ್ಚಿದ ಜನ

    ಪಾಕಿಸ್ತಾನದ ಭೋಲಾರಿಯಲ್ಲಿರುವ ಪಿಎಎಫ್ ನೆಲೆಯ ಬಿಡಿಎ (ಬಾಂಬ್ ಹಾನಿ ಮೌಲ್ಯಮಾಪನ) ಚಿತ್ರವನ್ನು ಕಾವಾ ಸ್ಪೇಸ್ ಹಂಚಿಕೊಂಡಿದೆ. ಭಾರತೀಯ ಎಎಲ್‌ಸಿಎಂ (ವಾಯು-ಉಡಾವಣಾ ಕ್ರೂಸ್ ಕ್ಷಿಪಣಿ) ನಡೆಸಿದ ನಿಖರ ದಾಳಿಯ ಕುರಿತು ಸಾಕ್ಷಿ ಸಮೇತ ಮಾಹಿತಿ ಹಂಚಿಕೊಳ್ಳಲಾಗಿದೆ. ಪಿಎಎಫ್ (ಪಾಕಿಸ್ತಾನ ವಾಯುಪಡೆ) ಹ್ಯಾಂಗರ್ ಮೇಲೆ ಆಗಿರುವ ಎಫೆಕ್ಟ್‌ ಬಗ್ಗೆ ಸಾಕ್ಷಿ ಇದೆ. ಇದನ್ನೂ ಓದಿ: ಭಾರತೀಯ ಕ್ರೂಸ್ ಕ್ಷಿಪಣಿಗಳಿಂದ ಪಾಕ್ ವಾಯುನೆಲೆಗಳು ಧ್ವಂಸ – ಸೇನೆಯಿಂದ ಸಾಕ್ಷಿ ರಿಲೀಸ್‌

    ಸರ್ಗೋಧಾದಲ್ಲಿರುವ ಪಿಎಎಫ್ ನೆಲೆ ಮುಷಾಫ್‌ನ ಬಿಡಿಎ ವಿಶ್ಲೇಷಣೆ ಎಂಬ ಫೊಟೊವೊಂದನ್ನು ಒಸಿಂಟ್ ಹ್ಯಾಂಡಲ್ ಕಾವಾ ಸ್ಪೇಸ್ ಹಂಚಿಕೊಂಡಿದೆ. ದಾಳಿಯ ನಂತರದ ಚಿತ್ರಣ ವಿಶ್ಲೇಷಣೆಯು ಭಾರತೀಯ ಪಡೆಗಳಿಂದ ನಾಶವಾದ ರನ್‌ವೇಯನ್ನು ತೋರಿಸುತ್ತದೆ ಎಂದು ಕಾವಾ ಸ್ಪೇಸ್ ಹೇಳಿದೆ. ಜಾಕೋಬಾಬಾದ್‌ನಲ್ಲಿರುವ ಪಿಎಎಫ್ ಬೇಸ್ ಶಹಬಾಜ್‌ನ ಕಾವಾ ಸ್ಪೇಸ್ ನಡೆಸಿದ ಬಿಡಿಎ ವಿಶ್ಲೇಷಣೆಯು, ಪಿಎಎಫ್ ಹ್ಯಾಂಗರ್ ಮೇಲೆ ಭಾರತೀಯ ಎಎಲ್‌ಸಿಎಂ ನಡೆಸಿದ ನಿಖರ ದಾಳಿಯ ಪರಿಣಾಮವನ್ನು ತೋರಿಸುತ್ತದೆ.

  • ಕದನ ವಿರಾಮದ ಬಗ್ಗೆ ಸಮಾಧಾನ ಇಲ್ಲ, ಪಾಕಿಸ್ತಾನಕ್ಕೆ ಇನ್ನೂ ಬುದ್ಧಿ ಕಲಿಸಬೇಕಾಗಿತ್ತು: ರಾಮಲಿಂಗಾ ರೆಡ್ಡಿ

    ಕದನ ವಿರಾಮದ ಬಗ್ಗೆ ಸಮಾಧಾನ ಇಲ್ಲ, ಪಾಕಿಸ್ತಾನಕ್ಕೆ ಇನ್ನೂ ಬುದ್ಧಿ ಕಲಿಸಬೇಕಾಗಿತ್ತು: ರಾಮಲಿಂಗಾ ರೆಡ್ಡಿ

    ರಾಮನಗರ: ಈ ಕದನ ವಿರಾಮದ (Ceasefire) ಬಗ್ಗೆ ನನಗೆ ಸಮಾಧಾನ ಇಲ್ಲ. ಪಾಕಿಸ್ತಾನಕ್ಕೆ (Pakistan) ಇನ್ನೂ ಬುದ್ಧಿ ಕಲಿಸಬೇಕಾಗಿತ್ತು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಹೇಳಿದ್ದಾರೆ.

    ಭಾರತ ಹಾಗೂ ಪಾಕಿಸ್ತಾನದ ನಡುವೆ ಕದನ ವಿರಾಮ ಘೋಷಣೆ ಆಗಿದ್ದರೂ, ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ಮಾಡಿರುವ ವಿಚಾರದ ಕುರಿತು ರಾಮನಗರದಲ್ಲಿ ಅವರು ಮಾತನಾಡಿದರು. ಪಾಕಿಸ್ತಾನ ಪದೇ ಪದೇ ಚೇಷ್ಟೆ ಮಾಡುತ್ತಲೇ ಬಂದಿದೆ. ಸುಮಾರು 10 ಘಟನೆಗಳಲ್ಲಿ ನೇರವಾಗಿ ಅವರ ಪಾತ್ರ ಇದೆ. ತಾಜ್ ಹೋಟೆಲ್ ಅಟ್ಯಾಕ್, ಪುಲ್ವಾಮ ದಾಳಿ, ಉರಿ ಸೆಕ್ಟರ್ ದಾಳಿ ಹೀಗೆ ಹಲವು ದಾಳಿಗಳ ಮೇಲೆ ಪಾಕಿಸ್ತಾನದ ಕೈವಾಡ ಇದೆ. ಅಲ್ಲಿನ ರಾಜಕಾರಣಿಗಳು, ಹಾಗೂ ಸೇನೆ ಉಗ್ರರಿಗೆ ಸಹಕಾರ ಕೊಡುತ್ತಿವೆ. ಅವರಿಗೆ ಇನ್ನೂ ಬುದ್ಧಿ ಕಲಿಸಬೇಕಾಗಿತ್ತು ಎನ್ನುವುದು ನನ್ನ ಭಾವನೆ. ಸದ್ಯ ಇಷ್ಟಾದರೂ ಬುದ್ಧಿ ಕಲಿಸಿದ್ದಾರಲ್ಲ ಎಂದು ಸಂತೋಷ ಪಡಬೇಕು ಅಷ್ಟೇ ಎಂದರು. ಇದನ್ನೂ ಓದಿ: ಜಮ್ಮು ಗಡಿಯಲ್ಲಿ ಪಾಕ್‌ ಗುಂಡಿನ ದಾಳಿ – ಗಂಭೀರ ಗಾಯಗೊಂಡಿದ್ದ BSF ಯೋಧ ಹುತಾತ್ಮ

    ಉಗ್ರರ ವಿರುದ್ಧದ ಹೋರಾಟಕ್ಕೆ ದೇಶದ ಎಲ್ಲಾ ಪಕ್ಷಗಳು ಕೇಂದ್ರ ಸರ್ಕಾರದ ಜೊತೆಗಿವೆ. ಸಂಪೂರ್ಣ ಸಹಕಾರ ಕೊಡುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಪಾಕ್‌ನ 35-40 ಸೈನಿಕರು ಬಲಿ – ಆಪರೇಷನ್‌ ಸಿಂಧೂರ ಬಗ್ಗೆ ಇಂಚಿಂಚು ಮಾಹಿತಿ ಕೊಟ್ಟ ಇಂಡಿಯನ್‌ ಆರ್ಮಿ

  • ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ಮಾಡಿದೆ: ವಿಕ್ರಂ ಮಿಸ್ರಿ

    ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ಮಾಡಿದೆ: ವಿಕ್ರಂ ಮಿಸ್ರಿ

    – ದಾಳಿ ಹಿಮ್ಮೆಟ್ಟಿಸಲು ಭಾರತೀಯ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ: ವಿದೇಶಾಂಗ ಇಲಾಖೆ ಕಾರ್ಯದರ್ಶಿ

    ನವದೆಹಲಿ: ಪಾಕಿಸ್ತಾನದಿಂದ (Pakistan) ಕದನ ವಿರಾಮ ಉಲ್ಲಂಘನೆಯಾಗಿದೆ. ಪಾಕ್‌ ಇದಕ್ಕೆ ಸಂಪೂರ್ಣ ಜವಾಬ್ದಾರಿ ಎಂದು ವಿದೇಶಾಂಗ ಇಲಾಖೆ ಕಾರ್ಯದರ್ಶಿ ವಿಕ್ರಂ ಮಿಸ್ರಿ (Vikram Misri) ಹೇಳಿದ್ದಾರೆ.

    ಕದನ ವಿರಾಮ (Ceasefire) ಕುರಿತು ಮಾಹಿತಿ ನೀಡಿದ ವಿಕ್ರಂ ಮಿಶ್ರಿ, ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಮಿಲಿಟರಿ ಕಾರ್ಯಾಚರಣೆಯನ್ನು ನಿಲ್ಲಿಸಲು ಭಾರತ ಮತ್ತು ಪಾಕಿಸ್ತಾನದ ಡಿಜಿಎಂಒಗಳ ನಡುವೆ ಇಂದು ಸಂಜೆ ಒಪ್ಪಂದ ಮಾಡಿಕೊಳ್ಳಲಾಯಿತು. ಆದರೆ, ಕಳೆದ ಕೆಲವು ಗಂಟೆಗಳಿಂದ ಪಾಕಿಸ್ತಾನ ಒಪ್ಪಂದ ಉಲ್ಲಂಘಿಸುತ್ತಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ – BSF ಯೋಧ ಹುತಾತ್ಮ

    ಭಾರತೀಯ ಸೇನೆಯು ಈ ಗಡಿ ಒಳನುಸುಳುವಿಕೆ ಪ್ರತೀಕಾರ ತೀರಿಸಿಕೊಳ್ಳುತ್ತಿದೆ. ಸನ್ನಿವೇಶವನ್ನು ನಿಭಾಯಿಸುತ್ತಿದೆ. ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಒಳನುಸುಳುವಿಕೆ ಅತ್ಯಂತ ಖಂಡನೀಯ. ಪಾಕಿಸ್ತಾನ ಇದಕ್ಕೆ ಕಾರಣವಾಗಿದೆ. ಪಾಕಿಸ್ತಾನವು ಈ ಪರಿಸ್ಥಿತಿಯನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ಒಳನುಸುಳುವಿಕೆ ತಡೆಯಲು ತಕ್ಷಣವೇ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

    ಒಪ್ಪಂದವಾದ ಕೆಲವೇ ಗಂಟೆಗಳಲ್ಲಿ ಕದನ ವಿರಾಮ ಮತ್ತೆ ಉಲ್ಲಂಘಿಸಿ ಪಾಕಿಸ್ತಾನ ಬಾಲ ಬಿಚ್ಚಿದೆ. ಜಮ್ಮುವಿನ ಅಖ್ನೂರ್‌, ಕನಾಚಕ್‌, ಪರ್ಗ್ವಾಲ್‌, ರಾಮನಗರ ವಲಯಗಳಲ್ಲಿ ಜೋರಾಗಿ ಸ್ಫೋಟಗಳು ಕೇಳಿಬಂದಿವೆ. ಇದನ್ನೂ ಓದಿ: ಮತ್ತೆ ಕದನ ವಿರಾಮ ಉಲ್ಲಂಘಿಸಿ ಬಾಲ ಬಿಚ್ಚಿದ ಪಾಕ್‌ – ಜಮ್ಮು, ರಾಜಸ್ಥಾನದ ಹಲವೆಡೆ ಸ್ಫೋಟದ ಸದ್ದು

    ಜಮ್ಮುವಿನ ಅಖ್ನೂರ್‌ನಲ್ಲಿ ಸಂಜೆ 7:45 ಕ್ಕೆ ಕದನ ವಿರಾಮ ಉಲ್ಲಂಘನೆಯಾದ ವರದಿಯಾಗಿದೆ. ಹಲವಾರು ಬಾರಿ ಜೋರಾಗಿ ಸ್ಫೋಟಗಳು ಕೇಳಿಬಂದವು. ಅಖ್ನೂರ್, ಕನಾಚಕ್, ಪರ್ಗ್ವಾಲ್ ಮತ್ತು ರಾಮನಗರ ವಲಯಗಳಲ್ಲಿ ಫಿರಂಗಿ ಶೆಲ್ ದಾಳಿ ವರದಿಯಾಗಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮ ಒಪ್ಪಂದದ ಸುಮಾರು 2 ಗಂಟೆ 45 ನಿಮಿಷಗಳ ನಂತರ ಈ ಘಟನೆ ಸಂಭವಿಸಿದೆ. ಪಾಕ್‌ನ ಡ್ರೋನ್‌ಗಳನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ. ಇದನ್ನೂ ಓದಿ: ಕದನ ವಿರಾಮಕ್ಕೆ ಏನಾಯಿತು?: ಶ್ರೀನಗರದಲ್ಲಿ ಸ್ಫೋಟದ ಸದ್ದು ಕೇಳಿ ಜಮ್ಮು ಸಿಎಂ ಆತಂಕ

  • ಕದನ ವಿರಾಮಕ್ಕೆ ಏನಾಯಿತು?: ಶ್ರೀನಗರದಲ್ಲಿ ಸ್ಫೋಟದ ಸದ್ದು ಕೇಳಿ ಜಮ್ಮು ಸಿಎಂ ಆತಂಕ

    ಕದನ ವಿರಾಮಕ್ಕೆ ಏನಾಯಿತು?: ಶ್ರೀನಗರದಲ್ಲಿ ಸ್ಫೋಟದ ಸದ್ದು ಕೇಳಿ ಜಮ್ಮು ಸಿಎಂ ಆತಂಕ

    ಶ್ರೀನಗರ: ಭಾರತ ಮತ್ತು ಪಾಕಿಸ್ತಾನ (India Pakistan Conflict) ಔಪಚಾರಿಕವಾಗಿ ಕದನ ವಿರಾಮಕ್ಕೆ ಒಪ್ಪಿಕೊಂಡ ಕೆಲವೇ ಗಂಟೆಗಳ ನಂತರ ಶನಿವಾರ ಸಂಜೆ ಶ್ರೀನಗರವು ದೊಡ್ಡ ಸ್ಫೋಟಗಳಿಂದ ನಡುಗಿದೆ. ಹಠಾತ್ ಸ್ಫೋಟಗಳನ್ನು ಗಮನಿಸಿದ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ (Omar Abdullah) ಕದನ ವಿರಾಮವನ್ನು ಪ್ರಶ್ನಿಸಿದ್ದಾರೆ.

    ಇದು ಕದನ ವಿರಾಮವಲ್ಲ. ಶ್ರೀನಗರದ ಮಧ್ಯಭಾಗದಲ್ಲಿರುವ ವಾಯು ರಕ್ಷಣಾ ಘಟಕಗಳು ಇದೀಗಷ್ಟೇ ತೆರೆದುಕೊಂಡಿವೆ ಎಂದು ಸಿಎಂ ಒಮರ್‌ ಅಬ್ದುಲ್ಲಾ ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿ ಆತಂಕ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮತ್ತೆ ಕದನ ವಿರಾಮ ಉಲ್ಲಂಘಿಸಿ ಬಾಲ ಬಿಚ್ಚಿದ ಪಾಕ್‌ – ಜಮ್ಮು, ರಾಜಸ್ಥಾನದ ಹಲವೆಡೆ ಸ್ಫೋಟದ ಸದ್ದು

    ಕದನ ವಿರಾಮಕ್ಕೆ ಈಗಷ್ಟೇ ಏನಾಯಿತು? ಶ್ರೀನಗರದಾದ್ಯಂತ ಸ್ಫೋಟಗಳ ಸದ್ದು ಕೇಳಿಬಂದಿದೆ!!! ಎಂದು ಸಿಎಂ ಕಳವಳ ವ್ಯಕ್ತಪಡಿಸಿದ್ದಾರೆ.

    ಕದನ ವಿರಾಮ ಮತ್ತೆ ಉಲ್ಲಂಘಿಸಿ ಪಾಕಿಸ್ತಾನ ಬಾಲ ಬಿಚ್ಚಿದೆ. ಜಮ್ಮುವಿನ ಅಖ್ನೂರ್‌, ಕನಾಚಕ್‌, ಪರ್ಗ್ವಾಲ್‌, ರಾಮನಗರ ವಲಯಗಳಲ್ಲಿ ಜೋರಾಗಿ ಸ್ಫೋಟಗಳು ಕೇಳಿಬಂದಿವೆ.

    ಜಮ್ಮುವಿನ ಅಖ್ನೂರ್‌ನಲ್ಲಿ ಸಂಜೆ 7:45 ಕ್ಕೆ ಕದನ ವಿರಾಮ ಉಲ್ಲಂಘನೆಯಾದ ವರದಿಯಾಗಿದೆ. ಹಲವಾರು ಬಾರಿ ಜೋರಾಗಿ ಸ್ಫೋಟಗಳು ಕೇಳಿಬಂದವು. ಅಖ್ನೂರ್, ಕನಾಚಕ್, ಪರ್ಗ್ವಾಲ್ ಮತ್ತು ರಾಮನಗರ ವಲಯಗಳಲ್ಲಿ ಫಿರಂಗಿ ಶೆಲ್ ದಾಳಿ ವರದಿಯಾಗಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮ ಒಪ್ಪಂದದ ಸುಮಾರು 2 ಗಂಟೆ 45 ನಿಮಿಷಗಳ ನಂತರ ಈ ಘಟನೆ ಸಂಭವಿಸಿದೆ. ಪಾಕ್‌ನ ಡ್ರೋನ್‌ಗಳನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ. ಇದನ್ನೂ ಓದಿ: ಭೂ, ಜಲ, ವಾಯು ಮಿಲಿಟರಿ ಕಾರ್ಯಾಚರಣೆ ನಿಲ್ಲಿಸಿ ಕದನ ವಿರಾಮಕ್ಕೆ ಭಾರತ-ಪಾಕ್‌ ಒಪ್ಪಿಗೆ

  • ಮತ್ತೆ ಕದನ ವಿರಾಮ ಉಲ್ಲಂಘಿಸಿ ಬಾಲ ಬಿಚ್ಚಿದ ಪಾಕ್‌ – ಜಮ್ಮು, ರಾಜಸ್ಥಾನದ ಹಲವೆಡೆ ಸ್ಫೋಟದ ಸದ್ದು

    ಮತ್ತೆ ಕದನ ವಿರಾಮ ಉಲ್ಲಂಘಿಸಿ ಬಾಲ ಬಿಚ್ಚಿದ ಪಾಕ್‌ – ಜಮ್ಮು, ರಾಜಸ್ಥಾನದ ಹಲವೆಡೆ ಸ್ಫೋಟದ ಸದ್ದು

    ನವದೆಹಲಿ: ಕದನ ವಿರಾಮ (Ceasefire Violation) ಮತ್ತೆ ಉಲ್ಲಂಘಿಸಿ ಪಾಕಿಸ್ತಾನ ಬಾಲ ಬಿಚ್ಚಿದೆ. ಜಮ್ಮುವಿನ ಅಖ್ನೂರ್‌, ಕನಾಚಕ್‌, ಪರ್ಗ್ವಾಲ್‌, ರಾಮನಗರ ವಲಯಗಳಲ್ಲಿ ಜೋರಾಗಿ ಸ್ಫೋಟಗಳು ಕೇಳಿಬಂದಿವೆ.

    ಜಮ್ಮುವಿನ ಅಖ್ನೂರ್‌ನಲ್ಲಿ ಸಂಜೆ 7:45 ಕ್ಕೆ ಕದನ ವಿರಾಮ ಉಲ್ಲಂಘನೆಯಾದ ವರದಿಯಾಗಿದೆ. ಹಲವಾರು ಬಾರಿ ಜೋರಾಗಿ ಸ್ಫೋಟಗಳು ಕೇಳಿಬಂದವು. ಅಖ್ನೂರ್, ಕನಾಚಕ್, ಪರ್ಗ್ವಾಲ್ ಮತ್ತು ರಾಮನಗರ ವಲಯಗಳಲ್ಲಿ ಫಿರಂಗಿ ಶೆಲ್ ದಾಳಿ ವರದಿಯಾಗಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮ ಒಪ್ಪಂದದ ಸುಮಾರು 2 ಗಂಟೆ 45 ನಿಮಿಷಗಳ ನಂತರ ಈ ಘಟನೆ ಸಂಭವಿಸಿದೆ. ಇದನ್ನೂ ಓದಿ: ಭಾರತದ ವಿರುದ್ಧ ಪಾಕಿಸ್ತಾನ ಸುಳ್ಳು ಸುದ್ದಿಗಳನ್ನು ಹಬ್ಬಿಸಿದೆ: ಸೋಫಿಯಾ ಖುರೇಷಿ

    ಉಧಂಪುರದಲ್ಲಿ ಕತ್ತಲೆಯಾದಾಗ ಭಾರತದ ವಾಯು ರಕ್ಷಣಾ ಪಡೆಗಳು ಪಾಕಿಸ್ತಾನಿ ಡ್ರೋನ್‌ಗಳನ್ನು ತಡೆಹಿಡಿಯುತ್ತಿದ್ದಂತೆ ಕೆಂಪು ಗೆರೆಗಳು ಮತ್ತು ಸ್ಫೋಟಗಳು ಕೇಳಿಬರುತ್ತಿವೆ. ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಜೋರಾದ ಸ್ಫೋಟಗಳು ಕೇಳಿಬರುತ್ತಿವೆ. ರಾಜಸ್ಥಾನದ ಬಾರ್ಮರ್ ನಗರದಲ್ಲಿ ಸಂಪೂರ್ಣ ವಿದ್ಯುತ್ ಕಡಿತಗೊಳಿಸಲಾಗಿದೆ. ಪಂಜಾಬ್‌ನ ಫಿರೋಜ್‌ಪುರದಲ್ಲಿ ಸಂಪೂರ್ಣ ವಿದ್ಯುತ್ ಕಡಿತಗೊಳಿಸಲಾಗಿದೆ. ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಬ್ಲ್ಯಾಕ್‌ಔಟ್‌ ಮಾಡಲಾಗಿದೆ. ಇದನ್ನೂ ಓದಿ: ಭೂ, ಜಲ, ವಾಯು ಮಿಲಿಟರಿ ಕಾರ್ಯಾಚರಣೆ ನಿಲ್ಲಿಸಿ ಕದನ ವಿರಾಮಕ್ಕೆ ಭಾರತ-ಪಾಕ್‌ ಒಪ್ಪಿಗೆ

    ‘ಇದು ಕದನ ವಿರಾಮವಲ್ಲ. ಶ್ರೀನಗರದ ಮಧ್ಯಭಾಗದಲ್ಲಿರುವ ವಾಯು ರಕ್ಷಣಾ ಘಟಕಗಳು ಇದೀಗಷ್ಟೇ ತೆರೆದುಕೊಂಡಿವೆ’ ಎಂದು ಎಕ್ಸ್‌ನಲ್ಲಿ ಜಮ್ಮು-ಕಾಶ್ಮೀರ ಸಿಎಂ ಓಮರ್‌ ಅಬ್ದುಲ್ಲಾ ತಿಳಿಸಿದ್ದಾರೆ. ಶ್ರೀನಗರದಲ್ಲಿ ಸ್ಫೋಟದ ಸದ್ದು ಕೇಳಿಬರುತ್ತಿದೆ ಎಂದು ಸಿಎಂ ಹೇಳಿದ್ದಾರೆ.

  • ಕದನ ವಿರಾಮ ಉಲ್ಲಂಘಿಸಿದ ಪಾಕ್ – ಗುಂಡೇಟಿಗೆ 10 ದಿನದ ಕಂದಮ್ಮ ಬಲಿ

    ಕದನ ವಿರಾಮ ಉಲ್ಲಂಘಿಸಿದ ಪಾಕ್ – ಗುಂಡೇಟಿಗೆ 10 ದಿನದ ಕಂದಮ್ಮ ಬಲಿ

    ಶ್ರೀನಗರ: ಗಡಿಯಲ್ಲಿ ಮತ್ತೆ ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ಮಾಡಿ ದಾಳಿ ನಡೆಸಿದ್ದು, ಈ ಗುಂಡಿನ ಚಕಮಕಿಯಲ್ಲಿ 10 ದಿನದ ಶಿಶು ಸಾವನ್ನಪ್ಪಿ, ಇಬ್ಬರು ಸಾರ್ವಜನಿಕರು ಗಾಯಗೊಂಡಿದ್ದಾರೆ.

    ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ನಿಯಂತ್ರಣ ರೇಖೆಯ (ಎಲ್‍ಒಸಿ) ಪಕ್ಕದ ಕೃಷ್ಣ ಕಣಿವೆ, ಮೆಂದರ್ ಮತ್ತು ಮಂಕೋಟ್ ವಲಯದಲ್ಲಿ ಪಾಕಿಸ್ತಾನ ಮತ್ತೆ ಗುಂಡಿನ ದಾಳಿ ನಡೆಸಿದೆ. ಭಾನುವಾರ ರಾತ್ರಿ ಈ ದಾಳಿ ನಡೆಸಿದ್ದು, ಗುಂಡೇಟಿಗೆ 10 ದಿನ ಶಿಶು ಮೃತಪಟ್ಟು, ಇಬ್ಬರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಪ್ರಚೋದನೆಯಿಲ್ಲದೆ ಗುಂಡು ಹಾರಿಸುವ ಮೂಲಕ ಪಾಕಿಸ್ತಾನವು ಭಾರತೀಯ ಚೆಕ್‍ಪೋಸ್ಟ್ ಗಳು ಮತ್ತು ವಸತಿ ಪ್ರದೇಶಗಳನ್ನು ಗುರಿಯಾಗಿಸಿದೆ. ದಾಳಿಯಲ್ಲಿ ಒಟ್ಟು ಮೂವರು ಗಾಯಗೊಂಡಿದ್ದರು. ಅವರನ್ನು ಕೂಡಲೇ ಪೂಂಚ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಗುಂಡೇಟು ತಗುಲಿ ಮಗುವಿನ ಸ್ಥಿತಿ ಚಿಂತಾಜನಕವಾಗಿತ್ತು. ಹೀಗಾಗಿ ಚಿಕಿತ್ಸೆ ಫಲಕಾರಿಯಾಗದೇ ಪ್ರಾಣಬಿಟ್ಟಿದೆ. ಸದ್ಯ ಗಾಯಗೊಂಡ ಇಬ್ಬರನ್ನು ಜಮ್ಮುವಿಗೆ ಸ್ಥಳಾಂತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

    ಪಾಕ್ ಸೈನ್ಯ ಏಕಾಏಕಿ ದಾಳಿ ನಡೆಸಲು ಆರಂಭಿಸಿದ ಕೂಡಲೇ ಭಾರತೀಯ ಯೋಧರು ಕೂಡ ಪ್ರತಿದಾಳಿ ನಡೆಸಿ ತಕ್ಕ ಉತ್ತರ ನೀಡಿದ್ದಾರೆ. ಕಳೆದ ಜುಲೈ 22ರಂದು ರಾಜೌರಿ ಪ್ರದೇಶದಲ್ಲಿ ಪಾಕ್ ನಡೆಸಿದ ದಾಳಿಗೆ ಓರ್ವ ಭಾರತೀಯ ಯೋಧ ಹುತಾತ್ಮರಾಗಿದ್ದರು. ಕೆಲವು ಸಾರ್ವಜನಿಕರು ಕೂಡ ಈ ದಾಳಿಯಲ್ಲಿ ಗಾಯಗೊಂಡಿದ್ದರು.

    ಪದೇ ಪದೇ ಗಡಿಯಲ್ಲಿ ಭಾರತ- ಪಾಕ್ ನಡುವೆ ಗುಂಡಿನ ಚಕಮಕಿ ನಡೆಯುತ್ತಿದ್ದು, ಕಾಶ್ಮೀರದಲ್ಲಿ ಭದ್ರತೆಯನ್ನು ಬಿಗಿಗೊಳಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಉನ್ನತ ಮಟ್ಟದ ಸಭೆ ನಡೆಸಿದ್ದರು. ಈ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರದ ಅನ್ವಯ ಮುಂಜಾಗೃತಾ ಕ್ರಮವಾಗಿ 10 ಸಾವಿರ ಯೋಧರನ್ನು ಕಾಶ್ಮೀರ ಕಣಿವೆ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ.

    ಭಾರತದ ಮೇಲೆ ಪಾಕಿಸ್ತಾನ ಸೇನೆ ಹಾಗೂ ಉಗ್ರರು ದೊಡ್ಡ ಮಟ್ಟದಲ್ಲಿ ದಾಳಿ ನಡೆಸಲು ಯೋಜನೆ ಹೂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅಲ್ಲದೆ ಅಮರನಾಥ ಯಾತ್ರೆಗೆ ಬರುವ ಯಾತ್ರಾರ್ಥಿಗಳ ಮೇಲೆ ಕೂಡ ಉಗ್ರರು ದಾಳಿ ಮಾಡಲು ಹೊಂಚು ಹಾಕಿದ್ದಾರೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.

  • ಕಾಶ್ಮೀರದಲ್ಲಿ ಪಾಕ್ ಸೈನಿಕರ ಗುಂಡಿನ ದಾಳಿ: ಯೋಧ, ಪತ್ನಿ ಸಾವು – ಮಕ್ಕಳಿಗೆ ಗಾಯ

    ಕಾಶ್ಮೀರದಲ್ಲಿ ಪಾಕ್ ಸೈನಿಕರ ಗುಂಡಿನ ದಾಳಿ: ಯೋಧ, ಪತ್ನಿ ಸಾವು – ಮಕ್ಕಳಿಗೆ ಗಾಯ

     

    ಶ್ರೀನಗರ: ಕಾಶ್ಮೀರದ ಪೂಂಚ್ ಸೆಕ್ಟರ್‍ನಲ್ಲಿ ಗಡಿ ನಿಯಂತ್ರಣಾ ರೇಖೆಯ ಬಳಿ ಪಾಕಿಸ್ತಾನ ಸೈನಿಕರು ಗಡಿ ನಿಯಮ ಉಲ್ಲಂಘಿಸಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದು, ಓರ್ವ ಸೈನಿಕ ಹಾಗೂ ಅವರ ಪತ್ನಿ ಮೃತಪಟ್ಟಿದ್ದಾರೆ.

    ಇಲ್ಲಿನ ಚಕ್ಕಾ ದಾ ಭಾಗ್ ಹಾಗೂ ಖರ್ರಿ ಕರ್ಮಾರಾ ಪ್ರದೇಶದ ಗ್ರಾಮಗಳಲ್ಲಿರುವ ಭಾರತೀಯ ನೆಲೆಗಳನ್ನ ಗುರಿಯಾಗಿಸಿಕೊಂಡು ಇಂದು ಬೆಳಿಗ್ಗೆ 6.30ರ ವೇಳೆಗೆ ಪಾಕ್ ಸೇನೆ ಮಾರ್ಟರ್ ಶೆಲ್ ದಾಳಿ ನಡೆಸಿದೆ.

    ಘಟನೆಯಲ್ಲಿ ಯೋಧ ಮೊಹಮ್ಮದ್ ಶೌಕತ್ ಹಾಗೂ ಅವರ ಪತ್ನಿ ಸಾಫಿಯಾ ಬೀ ಮೃತಪಟ್ಟಿದ್ದು, ಅವರ ಇಬ್ಬರು ಮಕ್ಕಳಿಗೆ ಗಂಭಿರವಾಗಿ ಗಾಯವಾಗಿದೆ.

    ಅಪ್ರಚೋದಿತ ದಾಳಿಗೆ ಭಾರತೀಯ ಸೈನಿಕರು ಕೂಡ ಪ್ರತ್ಯುತ್ತರ ನೀಡುತ್ತಿದ್ದಾರೆ ಎಂದು ವರದಿಯಾಗಿದೆ. ಸೇನಾ ಮೂಲಗಳ ಮಾಹಿತಿಯ ಪ್ರಕಾರ ಪಾಕಿಸ್ತಾನಿ ಸೈನಿಕರು 82 ಎಮ್‍ಎಮ್ ಹಾಗೂ 120 ಎಮ್‍ಎಮ್ ನ ಮಾರ್ಟರ್ ಶೆಲ್‍ಗಳನ್ನ ಬಳಸುತ್ತಿದ್ದಾರೆ. ಗುಪ್ತಚರ ಮಾಹಿತಿಯ ಪ್ರಕಾರ ಪಾಕಿಸ್ತಾನ ಈ ದಾಳಿಯನ್ನ ಬಳಸಿಕೊಂಡು ಉಗ್ರರನ್ನು ಗಡಿಯಿಂದ ಮತ್ತೊಂದು ಭಾಗಕ್ಕೆ ಕಳಿಸಬೇಕೆಂದಿದೆ ಎನ್ನಲಾಗಿದೆ.