Tag: CDC

  • ನದಿ, ಕೆರೆಗಳಲ್ಲಿ ಸ್ನಾನ ಮಾಡೋ ಮುನ್ನ ಹುಷಾರ್ – ವಿದೇಶದಲ್ಲಿ ಪತ್ತೆಯಾಗಿದೆ ಮೆದುಳು ತಿನ್ನುವ ಡೆಡ್ಲಿ ವೈರಸ್

    ನದಿ, ಕೆರೆಗಳಲ್ಲಿ ಸ್ನಾನ ಮಾಡೋ ಮುನ್ನ ಹುಷಾರ್ – ವಿದೇಶದಲ್ಲಿ ಪತ್ತೆಯಾಗಿದೆ ಮೆದುಳು ತಿನ್ನುವ ಡೆಡ್ಲಿ ವೈರಸ್

    ವಾಷಿಂಗ್ಟನ್: ಕೆರೆ, ಕೊಳ್ಳ ಹಾಗೂ ನದಿಗಳಲ್ಲಿ ಸ್ನಾನ ಮಾಡುವ ಮುನ್ನ ಜನರು ಎಚ್ಚರ ವಹಿಸಬೇಕಾಗಿದೆ. ಏಕೆಂದರೆ ಅಪರೂಪದ ಅಮೀಬಾ ಡೆಡ್ಲಿ ವೈರಸ್ ಅಮೆರಿಕದಲ್ಲಿ ಪತ್ತೆಯಾಗಿದ್ದು, ಇದು ನೇರವಾಗಿ ಮೆದುಳು ನಾಶಗೊಳಿಸುತ್ತದೆ. ಇದಕ್ಕೆ ಸಾಕ್ಷಿ ಎನ್ನುವಂತೆ ನದಿಗೆ ಸ್ನಾನ ಮಾಡಲು ಹೋಗಿದ್ದ ಬಾಲಕನ ದೇಹಕ್ಕೆ `ಅಮೀಬಾ’ ಹೆಸರಿನ ವೈರಸ್ ಸೇರಿದ್ದು ಬಾಲಕ ಮೃತಪಟ್ಟಿರುವ ಪೂರ್ವ ಅಮೆರಿಕದಲ್ಲಿ ನಡೆದಿದೆ.

    ಪೂರ್ವ ಅಮೆರಿಕದ ಅಮೆರಿಕದ ನೆಬ್ರಸ್ಕಾದ ಎಲ್ಖೋರ್ನ್ ನದಿಯಲ್ಲಿ ಬಾಲಕ ಸ್ನಾನ ಮಾಡಲು ಹೋದಾಗ ವೈರಸ್ ದೇಹ ಸೇರಿದೆ. ಇದನ್ನೂ ಓದಿ: ಕಾಂಗ್ರೆಸ್‍ನಲ್ಲಿ ಕಾರ್ಯಕರ್ತರೇ ತಮ್ಮ ನಾಯಕರ ಮೇಲೆ ಅಟ್ಟಹಾಸ ಮೆರೆಯುತ್ತಿದ್ದಾರೆ: ಸುಧಾಕರ್

    ಬಾಲಕನು ಆಗಸ್ಟ್ 8 ರಂದು ಈ ನದಿಯಲ್ಲಿ ಈಜುತ್ತಿದ್ದನು. ನಂತರ ಸ್ನಾನ ಮಾಡುತ್ತಿರುವಾಗ ಅಮೀಬಾ ವೈರಸ್ ದೇಹ ಪ್ರವೇಶಿಸಿದೆ. 5 ದಿನಗಳ ನಂತರ ರೋಗ ಲಕ್ಷಣಗಳು ಕಂಡುಬಂದಿದೆ. ರೋಗಲಕ್ಷಣಗಳು ಕಾಣಿಸಿಕೊಂಡ 48 ಗಂಟೆಗಳ ಬಳಿಕ ಪೋಷಕರು ಆಸ್ಪತ್ರೆಗೆ ಕರೆತಂದಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಗೆ ದಾಖಲಾದ 10 ದಿನಗಳ ನಂತರ ಬಾಲಕ ಮೃತಪಟ್ಟಿದ್ದಾನೆ ಎಂದು ಯುಎಸ್ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

    ಸೋಂಕು ಹರಡೋದು ಹೇಗೆ?
    ಮೆದುಳು ತಿನ್ನುವ ಈ ಅಮೀಬಾ ಹೆಸರಿನ ವೈರಸ್ `ನೇಗ್ಲೇರಿಯಾ ಫೌಲೆರಿ’ಯಿಂದ ಬರುತ್ತದೆ. ಮಗುವಿನ ಮೆದುಳಿನ ಸುತ್ತಲೂ ಹರಿಯುವ ಸೆರೆಬ್ರೊಸ್ಪೈನಲ್‌ ದ್ರವದಲ್ಲಿ ನೇಗ್ಲೇರಿಯಾ ಫೌಲೆರಿ ಕಂಡುಬಂದಿದೆ ಎಂದು ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ (ಸಿಡಿಸಿ) ದೃಢಪಡಿಸಿದೆ. ಇದನ್ನೂ ಓದಿ: ಅಜಾದ್‌ ಬೆನ್ನಲ್ಲೇ ಕಾಂಗ್ರೆಸ್‌ನ ಮಹತ್ವದ ಹುದ್ದೆಗೆ ಆನಂದ್‌ ಶರ್ಮಾ ರಾಜೀನಾಮೆ

    ಸಿಡಿಸಿ ಹೇಳುವಂತೆ ಅಮೀಬಾ ನೀರಿನಲ್ಲಿದ್ದಾಗ ಮೂಗಿನ ಮೂಲಕ ದೇಹವನ್ನು ಪ್ರವೇಶಿಸಬಹುದು. ಮೂಗಿನ ಮೂಲಕ ಮೆದುಳಿಗೆ ಚಲಿಸಿ ದಾಳಿ ಮಾಡುತ್ತದೆ. ಇಂತಹ ವೈರಸ್ ಸಿಹಿನೀರಿನ ಸರೋವರಗಳು, ನದಿಗಳು, ಕಾಲುವೆಗಳು ಹಾಗೂ ಕೊಳಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ ಎಂದು ಹೇಳಿದೆ.

    Live Tv
    [brid partner=56869869 player=32851 video=960834 autoplay=true]

  • ಮನೆಯ ಸಾಮಾನ್ಯ ವಸ್ತುಗಳ ಮೇಲೂ ಉಳಿಯಬಹುದು ಮಂಕಿಪಾಕ್ಸ್ ವೈರಸ್ – ವರದಿ

    ಮನೆಯ ಸಾಮಾನ್ಯ ವಸ್ತುಗಳ ಮೇಲೂ ಉಳಿಯಬಹುದು ಮಂಕಿಪಾಕ್ಸ್ ವೈರಸ್ – ವರದಿ

    ವಾಷಿಂಗ್ಟನ್‌: ಮನೆಯಲ್ಲಿರುವ ಸಾಮಾನ್ಯ ವಸ್ತುಗಳ ಮೇಲೆ ಹಲವು ದಿನಗಳವರೆಗೂ ಮಂಕಿಪಾಕ್ಸ್ ವೈರಸ್ ಉಳಿಯುವ ಸಾಧ್ಯತೆಗಳಿದೆ. ಆದರೆ ಇದರಿಂದ ಸೋಂಕು ಹರಡಬಹುದೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಯುಎಸ್ ರೋಗ ನಿಯಂತ್ರಣ ಸಂಸ್ಥೆ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ವರದಿ ಹೇಳಿದೆ.

    ಸಂಸ್ಥೆ ಇದಕ್ಕೆ ವಿಶೇಷ ಅಧ್ಯಯನ ನಡೆಸಿದ್ದು, ಅಧ್ಯಯನಕ್ಕಾಗಿ ಇಬ್ಬರು ಮಂಕಿಪಾಕ್ಸ್ ರೋಗಿಗಳ ಮನೆಯನ್ನು ಬಳಸಿಕೊಳ್ಳಲಾಗಿದೆ. ರೋಗಿಗಳು ದಿನಕ್ಕೆ ಹಲವಾರು ಬಾರಿ ತಮ್ಮ ಕೈಗಳನ್ನು ತೊಳೆದುಕೊಳ್ಳುತ್ತಾರೆ ಮತ್ತು ನಿಯಮಿತವಾಗಿ ಸ್ನಾನ ಮಾಡುತ್ತಾರೆ. ಅದಾಗ್ಯೂ ಅವರ ಮನೆಯ ಸಾಮಾನ್ಯ ವಸ್ತುಗಳ ಮೇಲೆ ಸೋಂಕು ಪತ್ತೆಯಾಗಿದೆ.

    ಸಿಡಿಸಿ ಪ್ರಕಾರ, ರೋಗಲಕ್ಷಣಗಳು ಪ್ರಾರಂಭವಾದ 20 ದಿನಗಳ ನಂತರ ಶೇ.70 ಪ್ರತಿಶತದಷ್ಟು ಹೆಚ್ಚಿನ ಸಂಪರ್ಕದ ಪ್ರದೇಶಗಳಲ್ಲಿ ಸಂಶೋಧಕರು ವೈರಸ್ ಅನ್ನು ಕಂಡುಕೊಂಡಿದ್ದಾರೆ. ಮಂಚಗಳು, ಹೊದಿಕೆಗಳು, ಕಾಫಿ ಯಂತ್ರ, ಕಂಪ್ಯೂಟರ್ ಮೌಸ್ ಮತ್ತು ಲೈಟ್ ಸ್ವಿಚ್‌ಬೋರ್ಡ್‌ಗಳಲ್ಲಿ ಮಂಕಿಪಾಕ್ಸ್ ವೈರಸ್ ಪತ್ತೆಯಾಗಿದೆ. ಆದರೆ ಇದರ ಹರಡುವಿಕೆಯ ಬಗ್ಗೆ ಸ್ಪಷ್ಟತೆ ಇಲ್ಲ. ಮನೆಯಲ್ಲಿ ಸ್ವಚ್ಛತೆ ಕಾಯ್ದುಕೊಂಡರೇ ಯಾವುದೇ ಅಪಾಯಗಳಿಲ್ಲ ಎಂದು ತಜ್ಞರು ಹೇಳಿದ್ದಾರೆ.

    ಅಧ್ಯಯನಕ್ಕೆ ಒಳಪಟ್ಟ ಇಬ್ಬರು ರೋಗಿಗಳಲ್ಲಿ ಮಂಕಿಪಾಕ್ಸ್ ಪ್ರಕರಣ ಮೇ ತಿಂಗಳಲ್ಲಿ ವರದಿಯಾಗಿದೆ. ಒಬ್ಬರಿಗೆ ಜನನಾಂಗ, ಕೈ, ಎದೆ, ತುಟಿ ಮತ್ತು ನೆತ್ತಿಯ ಮೇಲೆ ಗಾಯಗಳಾಗಿದ್ದರೆ, ಇನ್ನೊಬ್ಬರಿಗೆ ಕಾಲು, ಕಾಲು ಮತ್ತು ಬೆರಳಿನ ಮೇಲೆ ಗಾಯಗಳಾಗಿವೆ. ವರದಿಯ ಪ್ರಕಾರ ಇಬ್ಬರೂ ಸುಮಾರು ಒಂದು ತಿಂಗಳ ಕಾಲ ಅನಾರೋಗ್ಯದಿಂದ ಬಳಲುತ್ತಿದ್ದರು.

    ಮಂಕಿಪಾಕ್ಸ್ ಇರುವವರ ಮನೆಗೆ ಭೇಟಿ ನೀಡುವ ಜನರು ಚೆನ್ನಾಗಿ ಹೊಂದಿಕೊಳ್ಳುವ ಮಾಸ್ಕ್ ಧರಿಸಬೇಕು. ಅನಗತ್ಯ ಕಲುಷಿತ ವಸ್ತುಗಳ ಮೇಲ್ಮೈಗಳನ್ನು ಸ್ಪರ್ಶಿಸುವುದನ್ನು ತಪ್ಪಿಸಬೇಕು, ಸೂಕ್ತವಾಗಿ ಕೈಗಳನ್ನು ತೊಳೆಯಬೇಕು, ತಿನ್ನುವ ಪಾತ್ರೆಗಳು, ಬಟ್ಟೆ, ಹಾಸಿಗೆ ಅಥವಾ ಟವೆಲ್‌ಗಳನ್ನು ರೋಗಿಗಳೊಂದಿಗೆ ಹಂಚಿಕೊಳ್ಳುವುದನ್ನು ತಪ್ಪಿಸಬೇಕು ಎಂದು ಸಿಡಿಸಿ ಸೂಚಿಸಿದೆ.

    Live Tv
    [brid partner=56869869 player=32851 video=960834 autoplay=true]