Tag: CD

  • ಸಾಹುಕಾರನ ರಾಸಲೀಲೆ ಔಟ್ – ದೆಹಲಿಯ ಕರ್ನಾಟಕ ಭವನದಲ್ಲೇ ವಿಡಿಯೋ ಶೂಟ್

    ಸಾಹುಕಾರನ ರಾಸಲೀಲೆ ಔಟ್ – ದೆಹಲಿಯ ಕರ್ನಾಟಕ ಭವನದಲ್ಲೇ ವಿಡಿಯೋ ಶೂಟ್

    ಬೆಂಗಳೂರು: ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಲೈಂಗಿಕ ಚಟ ತೀರಿಸಿಕೊಂಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಕೃತ್ಯಕ್ಕೆ ದೆಹಲಿಯ ಕರ್ನಾಟಕ ಭವನವನ್ನು ರಮೇಶ್ ಜಾರಕಿಹೊಳಿ ಬಳಸಿಕೊಂಡಿದ್ದು, ಕಾಮದಾಟದ ವೀಡಿಯೋ ಇದೀಗ ವೈರಲ್ ಆಗಿದೆ.

    ಡ್ರೋನ್ ಕ್ಯಾಮೆರಾಗಳ ಮೂಲಕ ಕರ್ನಾಟಕದ ಡ್ಯಾಂ ಗಳನ್ನು ಚಿತ್ರೀಕರಣ ಮಾಡಲು ಬಯಸಿದ್ದ ಯುವತಿ ಸಹಾಯಕ್ಕೆಂದು ರಮೇಶ್ ಜಾರಕಿಹೊಳಿಯವರನ್ನು ಭೇಟಿಯಾಗಿದ್ದರು. ಈ ವೇಳೆ ಅಧಿಕಾರ ದುರುಪಯೋಗ ಮಾಡಿಕೊಂಡು ಜಾರಕಿಹೊಳಿ ಲೈಂಗಿಕ ತೃಷೆ ತೀರಿಸಿಕೊಂಡಿದ್ದಾರೆ ಎಂದು ದೂರುದಾರ ದಿನೇಶ್ ಕಲ್ಲಹಳ್ಳಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರಿನ ಜೊತೆ ಸಿಡಿ ನೀಡಿದ್ದಾರೆ.

    ನಾಳೆ ಮಧ್ಯಾಹ್ನ 2ಕ್ಕೆ ಸಿಎಂ ನೇತೃತ್ವದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದ್ದು, ಸಚಿವ ಸಂಪುಟ ಸಭೆಗೆ ರಮೇಶ್ ಜಾರಕಿಹೊಳಿ ಬರ್ತಾರಾ ಎಂಬ ಪ್ರಶ್ನೆ ಇದೀಗ ಎದ್ದಿದೆ. ಸಂಪುಟ ಸಭೆಯಲ್ಲೂ ಸಾಹುಕಾರ್ ರಾಸಲೀಲೆಯದ್ದೇ ಚರ್ಚೆಯಾಗುವ ಸಾಧ್ಯತೆ ಇದೆ. ಇದರಿಂದಾಗಿ ಸಂಪುಟ ಸಚಿವರು ಭಾರೀ ಮುಜುಗರಕ್ಕೊಳಗಾಗಿದ್ದು, ಈ ಹಿನ್ನೆಲೆಯಲ್ಲಿ ರಮೇಶ್ ಜಾರಕಿಹೊಳಿ ವಿರುದ್ಧ ಸಂಪುಟ ಸಚಿವರು ಆಕ್ರೋಶ ವ್ಯಕ್ತಪಡಿಸುವ ಸಾಧ್ಯತೆ ಇದೆ.

    ರಮೇಶ್ ಜಾರಕಿಹೊಳಿ ರಾಸಲೀಲೆಗೆ ಇಡೀ ಬಜೆಟ್ ಅಧಿವೇಶನ ಬಲಿಯಾಗುತ್ತಾ ಎಂಬ ಪ್ರಶ್ನೆ ಇದೀಗ ಎದ್ದಿದ್ದು, ಮಾರ್ಚ್ 4 ರಿಂದ 31 ರವರೆಗೆ ನಡೆಯಲಿರುವ ಬಜೆಟ್ ಅಧಿವೇಶನ ನಡೆಯಲಿದೆ. ಪ್ರತಿಪಕ್ಷಗಳಿಗೂ ಇದೀಗ ಭರ್ಜರಿ ಅಸ್ತ್ರ ಸಿಕ್ಕಂತಾಗಿದೆ. ರಮೇಶ್ ಜಾರಕಿಹೊಳಿ ಮೈತ್ರಿ ಸರ್ಕಾರ ಕೆಡವಿದ ಸಿಟ್ಟಲ್ಲಿರುವ ಪ್ರತಿಪಕ್ಷಗಳು, ಈ ರಾಸಲೀಲೆ ಪ್ರಕರಣ ಇಟ್ಟುಕೊಂಡು ಸರ್ಕಾರದ ವಿರುದ್ಧ ಮುಗಿಬೀಳಲು ಪ್ಲಾನ್ ಮಾಡಿವೆ. ಹೀಗಾಗಿ ಬಜೆಟ್ ಅಧಿವೇಶನದಲ್ಲಿ ಈ ಸಿಡಿ ಪ್ರಕರಣ ದೊಡ್ಡ ಸದ್ದು ಮಾಡಲಿದೆ.

  • ಆಪರೇಷನ್ ಕಮಲ, ಹಣದ ಪ್ರಭಾದಿಂದ ಬಿಎಸ್‍ವೈ ಸಿಎಂ ಆಗಿದ್ದಾರೆ: ಸಿದ್ದರಾಮಯ್ಯ

    ಆಪರೇಷನ್ ಕಮಲ, ಹಣದ ಪ್ರಭಾದಿಂದ ಬಿಎಸ್‍ವೈ ಸಿಎಂ ಆಗಿದ್ದಾರೆ: ಸಿದ್ದರಾಮಯ್ಯ

    – ರಾಜ್ಯದ ಜನರಿಗೆ ಬಿಜೆಪಿಯವರು ಸುಳ್ಳು ಹೇಳಿದ್ದಾರೆ
    – ಹಣದ ಕುರಿತು ತನಿಖೆಗೆ ಮಾಜಿ ಸಿಎಂ ಆಗ್ರಹ

    ಬೆಂಗಳೂರು: ಯಡಿಯೂರಪ್ಪ ಅವರು ಜನರ ಆಶೀರ್ವಾದದಿಂದ ರಾಜ್ಯದ ಮುಖ್ಯಮಂತ್ರಿ ಆಗಿಲ್ಲ. ಆಪೆರೇಷನ್ ಕಮಲ, ಹಣದ ಪ್ರಭಾವದಿಂದ ಮುಖ್ಯಮಂತ್ರಿಯಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಎಸ್‍ವೈ ಆಪರೇಷನ್ ಕಮಲದ ಜನಕರಾಗಿದ್ದಾರೆ. ಬಿಎಸ್‍ವೈ ಸುಳ್ಳು ಹೇಳಿ, ಎಂಎಲ್‍ಎಗಳನ್ನು ಕೊಂಡುಕೊಂಡು, 9 ಕೋಟಿ ಹಣವನ್ನು ಖರ್ಚು ಮಾಡಿ ಮುಖ್ಯಮಂತ್ರಿ ಆಗಿದ್ದಾರೆ. ಸ್ವತಃ ಅವರ ಪಕ್ಷದವರೇ ಹಣ ಖರ್ಚು ಮಾಡಿರುವ ಕುರಿತು ಹೇಳಿದ್ದಾರೆ. ಈ ಬಗ್ಗೆ ತನಿಖೆ ಆಗಲಿ ಎಂದು ಆಗ್ರಹಿಸಿದ್ದಾರೆ.

    ಬಿಜೆಪಿಯವರು ಸಜ್ಜನರಂತೆ ಹಣ ಖರ್ಚು ಮಾಡಿಲ್ಲ ಅಂತ ಹೇಳಿದ್ದರು. ಆದರೆ ಆಪರೇಷನ್ ಕಮಲಕ್ಕೆ ಯೋಗೇಶ್ವರ್ ಹಣ ಖರ್ಚು ಮಾಡಿದ್ದಾರೆ ಎಂದು ರಮೇಶ್ ಜಾರಕಿಹೊಳಿ ಒಪ್ಪಿಕೊಂಡಿದ್ದಾರೆ. ಆಪರೇಷನ್ ಕಮಲ ಮಾಡುವುದು ಎಂದರೆ ದುಡ್ಡುಕೊಟ್ಟು ಎಂಎಲ್‍ಎಗಳನ್ನು ಕೊಂಡುಕೊಳ್ಳುವುದು ಎಂದು ಆಗುತ್ತದೆ. ಇದನ್ನು ಅವರೇ ಈಗ ಒಪ್ಪಿಕೊಂಡಿದ್ದಾರೆ. ಆಪರೇಷನ್ ಕಮಲದಲ್ಲಿ ಹಣದ ಪ್ರಭಾವ ಇದೆ ಎಂದು ಈ ಮೂಲಕವಾಗಿ ತಿಳಿಯುತ್ತದೆ. ಆದರೆ ಬಿಜೆಪಿಯವರು ನಾವು ಹಣ ಕೊಟ್ಟಿಲ್ಲ ಯಾರನ್ನೂ ಕೊಂಡುಕೊಂಡಿಲ್ಲ, 17 ಎಂಎಲ್‍ಎಗಳು ಅವರಾಗಿಯೇ ಬಿಜೆಪಿಗೆ ಬಂದಿದ್ದಾರೆ ಎಂದು ಹೇಳಿದ್ದರು. ಆದರೆ ಯೋಗೇಶ್ವರ್ 9 ಕೋಟಿ ಹಣವನ್ನು ಖರ್ಚು ಮಾಡಿದ್ದಾರೆ ಎಂದು ಅವರ ಪಕ್ಷದವರೇ ಹೇಳಿದ್ದಾರೆ. ಈ ಕುರಿತಾಗಿ ಸ್ಪಷ್ಟ ಮತ್ತು ನಿಖರವಾದ ತನಿಖೆ ಆಗಬೇಕು ಎಂದು ಮಾಜಿ ಸಿಎಂ ಆಗ್ರಹಿಸಿದ್ದಾರೆ.

    ರಾಜಕೀಯ ಎಂದರೆ ವಿರೋಧ ಪಕ್ಷದವರು ಆರೋಪ ಮಾಡಿದರೆ, ಅವರು ಮಾಡುತ್ತಾರೆ ಎಂದು ಆಗುತ್ತಿತ್ತು. ಆದರೆ ಆರೋಪ ಮಾಡಿರುವವರು ಅವರ ಪಕ್ಷದವರಾಗಿದ್ದಾರೆ. ರಾಜ್ಯದ ಜನರಿಗೆ ಬಿಜೆಪಿಯವರು ಸುಳ್ಳು ಹೇಳಿದ್ದಾರೆ. ಬಿಜೆಪಿಯವರು ಏನು ಎಂದು ಗೊತ್ತಾಗಬೇಕು. ಸಿಡಿ ಕುರಿತಾಗಿ ತನಿಖೆ ಆಗಬೇಕು. ಬಿಜೆಪಿ ಒಬ್ಬ ಸೀನಿಯರ್ ಬಿಜೆಪಿ ಲೀಡರ್ ಆಗಿರುವ ಯತ್ನಾಳ್ ಅವರೇ ಬಾಯಿ ಬಿಟ್ಟು ಹೆಳ್ತಾ ಇದ್ದಾರೆ, ಯಡಿಯೂರಪ್ಪ ಅಲ್ಲಿ ಕೊಳಕು ದೃಶ್ಯಗಳಿವೆ ಎಂದು ಹೇಳುತ್ತಾರೆ. ಇದು ರಾಜ್ಯದ ಜನರಿಗೆ ಗೊತ್ತಾಗಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

  • ಸಿಡಿ ಇದ್ರೆ ಕೊಡಿ, ಸುಮ್ನೆ ಹೆದರಿಸುವುದು ಏಕೆ: ಪ್ರಹ್ಲಾದ್ ಜೋಶಿ ಪ್ರಶ್ನೆ

    ಸಿಡಿ ಇದ್ರೆ ಕೊಡಿ, ಸುಮ್ನೆ ಹೆದರಿಸುವುದು ಏಕೆ: ಪ್ರಹ್ಲಾದ್ ಜೋಶಿ ಪ್ರಶ್ನೆ

    ಹುಬ್ಬಳ್ಳಿ: ರಾಜಕಾರಣದಲ್ಲಿ ಆಸೆ ಇರುವುದು ತಪ್ಪಲ್ಲ. ಆದರೆ ಬಹಿರಂಗ ಹೇಳಿಕೆ ನೀಡುವುದು ಸರಿಯಾದ ಕ್ರಮವಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

    ನಗರದಲ್ಲಿಂದು ಚೆನ್ನಮ್ಮ ವೃತ್ತದ ಸುತ್ತ ಪ್ಲೈ ಓವರ್ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸಿ ಮಾತನಾಡಿದ ಅವರು, ಶಾಸಕರ ಅಸಮಾಧಾನವನ್ನು ಮುಖ್ಯಮಂತ್ರಿಗಳು ಬಗೆಹರಿಸುತ್ತಾರೆ. ಆದರೆ ಸಿಡಿ ಇದೆ ಎಂದು ಹೆದರಿಸುವುದು ಸರಿಯಲ್ಲ. ಸಿಡಿ ಇದ್ದರೆ ಕೊಡಿ ಎಂದು ಸ್ವತಃ ಸಿಎಂ ಅವರೇ ಹೇಳಿದ್ದಾರೆ ಎಂದು ತಿಳಿಸಿದರು.

    ಅವರ ಬಳಿ ಸಿಡಿ ಇಲ್ಲ, ಏನೂ ಇಲ್ಲ ಸುಮ್ಮನೆ ಹೆದರಿಸುತ್ತಿದ್ದಾರೆ. ಇದ್ದರೆ ಬಿಡುಗಡೆ ಮಾಡಲಿ, ಇದು ಕೇವಲ ಹೆದರಿಸುವ ತಂತ್ರ. ನನ್ನ ಬಳಿ ಸಿಡಿ ಬಂದಿಲ್ಲ. ಬಂದರೆ ನಾನು ಮೊದಲು ನಿಮಗೇ ಕೊಡುತ್ತೇನೆ ಎಂದು ನಗೆಚಟಾಕಿ ಹಾರಿಸಿದರು.

  • ಬಿಎಸ್‍ವೈಯಿಂದ ಕುಟುಂಬ ರಾಜಕಾರಣ – ಯತ್ನಾಳ್ ಕಿಡಿ

    ಬಿಎಸ್‍ವೈಯಿಂದ ಕುಟುಂಬ ರಾಜಕಾರಣ – ಯತ್ನಾಳ್ ಕಿಡಿ

    ಬಾಗಲಕೋಟೆ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ಗುಡುಗಿದ್ದಾರೆ.

    ಕೂಡಲಸಂಗಮದಲ್ಲಿ ಮಾತನಾಡಿದ ಅವರು, ಅಸಮಾಧಾನಿತರ ವಿರುದ್ಧ ಗರಂ ಆಗೋಕೆ ರಮೇಶ್ ಜಾರಕಿಹೊಳಿ ಯಾರು? ಅವರು ತಮ್ಮ ತ್ಯಾಗ ಮಾಡಿದ್ದಕ್ಕೆ ಪಕ್ಷ ಅಧಿಕಾರಕ್ಕೆ ಬಂದಿದೆ, ಅದನ್ನು ಸ್ವಾಗತಿಸುತ್ತೇನೆ. ಆದರೆ ಯಾವ ಶಾಸಕರೂ ಮಾತನಾಡಬಾರದೆಂದು ಅವರ ಬಾಯಿಗೆ ಕೀಲಿ ಹಾಕೋಕೆ ಸಾಧ್ಯವಿಲ್ಲ ಎಂದು ತಿಳಿಸಿದರು.

    ಸಚಿವ ಸ್ಥಾನಕ್ಕೆ ಬ್ಲಾಕ್ ಮೇಲ್ ಮಾಡಿದ್ದಾರೆಂದು ನಾನೊಬ್ಬನೇ ಆರೋಪ ಮಾಡಿಲ್ಲ. ಎಲ್ಲ ಬಿಜೆಪಿ ಮುಖಂಡರು ಆರೋಪ ಮಾಡುತ್ತಿದ್ದಾರೆ. ಕುಟುಂಬ ರಾಜಕಾರಣ ಅಂತ್ಯ ಮಾಡಬೇಕೆಂದು ಪ್ರಧಾನಿ ಮೋದಿ ಪರದಾಡುತ್ತಿದ್ದಾರೆ. ಆದರೆ ಬಿಜೆಪಿಯಲ್ಲಿ ಸಿಎಂ ಬಿಎಸ್‍ವೈ ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ. ಅವರ ಮಗ ಸಂಸದ, ಇನ್ನೂಬ್ಬ ಮಗ ಪಕ್ಷದ ಉಪಾಧ್ಯಕ್ಷ, ಮಗಳು ಸಂಘಟನಾ ಅಧ್ಯಕ್ಷೆ, ಮೊಮ್ಮಗನನ್ನು ಕಾರ್ಯದರ್ಶಿ ಮಾಡಿದ್ದಾರೆ. ಆಳಿಯನನ್ನು ನಿಗಮದ ಅಧ್ಯಕ್ಷ ಮಾಡಿದ್ದಾರೆ. ದೇಶದಲ್ಲಿ ಕುಟುಂಬ ರಾಜಕಾರಣ ಮಾಡಿದವರು ಅಂತ್ಯವಾಗಿದ್ದಾರೆ. ಅದೇ ರೀತಿ ನಿಮ್ಮ ಕುಟುಂಬವೂ ಅಂತ್ಯವಾಗ ಬಾರದೆಂದರೆ ನೀವು ಒಬ್ಬರೇ ಹುದ್ದೆಯಲ್ಲಿರಿ. ಇಡೀ ಕಾವೇರಿ ನಿವಾಸವೇ ಬಿಎಸ್‍ವೈ ಕುಟುಂಬದಿಂದ ತುಂಬಿದೆ ಎಂದು ಆರೋಪಿಸಿದ್ದಾರೆ.

    ಬಿಜೆಪಿಯನ್ನು ಯಡಿಯೂರಪ್ಪ ಮಾತ್ರ ಕಟ್ಟಿಲ್ಲ. ನಾವು ಯಡಿಯೂರಪ್ಪ ಕಾರಿಗೆ ಡಿಸೇಲ್ ಹಾಕಿಸಿ ಪಕ್ಷವನ್ನ ಕಟ್ಟಿದ್ದೇವೆ. ನಾವು ಬಿಎಸ್‍ವೈ ಕುಟುಂಬಕ್ಕಾಗಿ ಪಕ್ಷವನ್ನ ಕಟ್ಟಿಲ್ಲ. ಸಮುದಾಯದ ಸಲುವಾಗಿ, ರೈತರ ಸಲುವಾಗಿ, ದೀನ ದಲಿತರ ಸಲುವಾಗಿ ಪಕ್ಷವನ್ನು ಕಟ್ಟಿದ್ದೇವೆ. ಯಡಿಯೂರಪ್ಪ ಅವರು ಸಿಎಂ ಆಗಿ ಇರಲು ನಮ್ಮ ಅಭ್ಯಂತರವಿಲ್ಲ. ಆದರೆ ಅವರ ಇಡೀ ಕುಟುಂಬವೇ ಹುದ್ದೆಯಲ್ಲಿರುವುದು ನಮಗೆ ಒಪ್ಪಿಗೆ ಇಲ್ಲ ಎಂದರು.

    ಅಮಿತ್ ಶಾ ರಾಜ್ಯಕ್ಕೆ ಆಗಮಿಸಿದಾಗ ಅಸಮಾಧಾನಿತ ಶಾಸಕರು ದೂರು ನೀಡುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಅಸಮಾಧಾನಿತ ಶಾಸಕರು ದೂರು ನೀಡಲಿ, ತಪ್ಪೇನಿದೆ. ನಾವೂ ಹೋಗಿ ದೂರು ಕೊಡ್ತೇವೆ. ಎಲ್ಲ ಶಾಸಕರು ರೆಡಿ ಆಗಬೇಕು. ಎಲ್ಲ ಶಾಸಕರಿಗೂ ಅನ್ಯಾಯವಾಗುತ್ತಿದೆ. ಬಹಳ ನೋವಾಗಿದೆ. ನಮಗೆಲ್ಲ ಧೈರ್ಯ ಬಂದಿದೆ. ರಾಜಕೀಯ ಸ್ಥಾನಮಾನ ಸೇರಿ ನಮಗೆ ಅಭಿವೃದ್ಧಿಗೆ ಹಣ ಸಿಗುತ್ತಿಲ್ಲ. ಪಕ್ಷದ ರಾಜ್ಯಾಧ್ಯಕ್ಷರಿಗೇ ಬೆಲೆ ಇಲ್ಲ. ಬೇಕಾಬಿಟ್ಟಿಯಾಗಿ ನಿಗಮ ಮಂಡಳಿ ಸ್ಥಾನ ನೀಡುತ್ತಿದ್ದಾರೆ ಎಂದರು.

  • ಕಣ್ಣಿನಿಂದ ನೋಡಲಾರದ ದೃಶ್ಯಗಳು ಸಿಡಿಯಲ್ಲಿದೆ, ಸಿಬಿಐ ತನಿಖೆ ನಡೆಯಲಿ: ಯತ್ನಾಳ್

    ಕಣ್ಣಿನಿಂದ ನೋಡಲಾರದ ದೃಶ್ಯಗಳು ಸಿಡಿಯಲ್ಲಿದೆ, ಸಿಬಿಐ ತನಿಖೆ ನಡೆಯಲಿ: ಯತ್ನಾಳ್

    – ಡಿಕೆಶಿ ಬಳಿ ಸಿಡಿ ಇದೆ
    – ನನ್ನ ಬಳಿ ಸಿಡಿ ಇದ್ದರೆ ಡಿಸಿಎಂ ಆಗ್ತಿದ್ದೆ
    – ಬಿಜೆಪಿ ಶಾಸಕರಿಗಿಂತ ಕೈ ಶಾಸಕರಿಗೆ ಹೆಚ್ಚಿನ ಅನುದಾನ

    ಬಾಗಲಕೋಟೆ: ರಾಜ್ಯ ರಾಜಕೀಯದಲ್ಲಿ ಸಿಡಿ ಕುರಿತು ಭಾರೀ ಚರ್ಚೆ ನಡೆಯುತ್ತಿದ್ದು, ಇದೀಗ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸಿಡಿ ಕುರಿತು ಮತ್ತೊಂದು ಬಾಂಬ್ ಸಿಡಿಸಿದ್ದಾರೆ.

    ಕೂಡಲಸಂಗಮದಲ್ಲಿ ಮಾತನಾಡಿದ ಅವರು, ಕಣ್ಣಿನಿಂದ ನೋಡಲಾಗದಂತಹ ದೃಶ್ಯಗಳು ಸಿಡಿಯಲ್ಲಿದೆ. ಈ ಕುರಿತು ಕಾಲಕ್ರಮೇಣ ಇದು ತಿಳಿಯಲಿದೆ. ಈ ಕುರಿತು ಮುಕ್ತ ತನಿಖೆಯಾಗಬೇಕಾದಲ್ಲಿ ಸಿಬಿಐಗೆ ವಹಿಸಬೇಕು. ಹಿಂದೆ ಇದ್ದದ್ದೇ ಆ ಸಿಡಿ, ಯಾರೊಂದಿಗೆ ಇದೆ ಅಂತ ಎಲ್ಲರಿಗೂ ಗೊತ್ತೇ ಇದೆ. ನಾನು ಆ ಬಗ್ಗೆ ಏನೂ ಹೇಳಬೇಕಿಲ್ಲ. ಆ ಸಿಡಿಯನ್ನೇ ಮೂವರು ನನ್ನ ಬಳಿ ತೆಗೆದುಕೊಂಡು ಬಂದಿದ್ದರು. ಅದರಲ್ಲಿ ಇಬ್ಬರು ಈಗ ಸಚಿವರಾಗಿದ್ದಾರೆ. ನನ್ನ ಬಳಿ ಆ ಸಿಡಿ ಇದ್ದಿದ್ದರೆ ನಾನೇ ಉಪಮುಖ್ಯಮಂತ್ರಿ ಆಗಿರುತ್ತಿದ್ದೆ. ಆ ಸಿಡಿಯನ್ನ ಇಟ್ಟುಕೊಂಡೇ ಕಾಂಗ್ರೆಸ್ಸಿಗರು ಅನುದಾನ ತೆಗೆದುಕೊಳ್ಳುತ್ತಿದ್ದಾರೆ. ಆ ಸಿಡಿ ಡಿಕೆಶಿ ಬಳಿಯೂ ಇದೆ. ನಿಜವಾಗಲೂ ವಿರೋಧ ಪಕ್ಷ ಆಗಿದ್ದರೆ ಸಿಡಿ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದ್ದಾರೆ.

    ಡಿಕೆಶಿ ಮಾತನಾಡೋ ದಾಟಿಯಲ್ಲೇ ಅವರ ಬಳಿ ಸಿಡಿ ಇದೆ ಅನ್ನೋದು ಗೊತ್ತಾಗುತ್ತದೆ. ಸಿಡಿ ಕುರಿತು ಸಿಬಿಐ ತನಿಖೆ ಆಗಲಿ. ಸಿದ್ದರಾಮಯ್ಯ, ಕೆ.ಜೆ.ಜಾರ್ಜ್, ಜಮೀರ್ ಅಹ್ಮದ್, ಲಕ್ಷ್ಮೀ ಹೆಬ್ಬಾಳ್ಕರ್ ಕ್ಷೇತ್ರಕ್ಕೆ ಹೆಚ್ಚು ಅನುದಾನ ಹೋಗೋದೆ ಆ ಸಿಡಿ ಬ್ಲ್ಯಾಕ್ ಮೇಲ್‍ನಿಂದ ಎಂದು ಆರೋಪಿಸಿದರು.

    ಸಿಡಿ ಅಂತೂ ಇದೆ. ಅದನ್ನು ಇನ್ನೂ ಕೆಲವರು ಇಟ್ಟುಕೊಂಡು ಬ್ಲ್ಯಾಕ್‍ಮೇಲ್ ಮಾಡುತ್ತಿದ್ದಾರೆ. ಅದಕ್ಕೆ ಕಾಲವೇ ಉತ್ತರ ಕೊಡುತ್ತೆ. ಕಾರ್ಯದರ್ಶಿ ಬಳಿ ಸಿಡಿಯಿದೆ ಎಂದು ಈ ಹಿಂದೆ ಡಿಕೆ ಶಿವಕುಮಾರ್ ಹಿಂದೆ ಹೇಳಿದ್ದರು. ಮೊದಲು ಅವರ ಮನೆಯೆ ಸ್ವಚ್ಛ ಇಲ್ಲ. ಹೀಗಾಗಿ ತನಿಖೆ ಮಾಡಲು ಅವರೇನು ಹೇಳುತ್ತಾರೆ. ನೀವು ವಿರೋಧ ಪಕ್ಷದ ನಾಯಕರಂತೆ ಕೆಲಸ ಮಾಡಿ, ನಿಮ್ಮ ಬಳಿಯಿರುವ ಸಿಡಿಯನ್ನು ಬಿಡುಗಡೆ ಮಾಡಿ ಎಂದು ನಾನು ಡಿಕೆಶಿಯವರನ್ನು ಅಗ್ರಹಿಸುತ್ತೇನೆ ಎಂದರು.

    ಯುವರಾಜ್ ಪ್ರಕರಣ ಮುಚ್ಚಿಹಾಕಲಾಗಿದೆ: ಯುವರಾಜ್ ಬಂಧನವಾದ ಬಳಿಕ ಹಲವು ಸಚಿವರ ಜೊತೆ ಫೋಟೋ ತೆಗೆಸಿಕೊಂಡಿದ್ದನ್ನು ಬಿಡುಗಡೆ ಮಾಡಲಾಗಿದೆ. ಸಚಿವ ಸಂಪುಟ ವಿಸ್ತರಣೆ ಹೊತ್ತಲ್ಲೇ ಫೋಟೋ ಯಾಕೆ ಬಿಡುಗಡೆ ಮಾಡಿದಿರಿ. ಸಿಸಿಬಿ ದುರ್ಬಳಕೆ ಮಾಡಿಕೊಂಡು ಬಿಜೆಪಿ ನಾಯಕರ ಜೊತೆ ಯುವರಾಜ್ ಇದ್ದ ಫೋಟೋ ಬಿಡುಗಡೆ ಮಾಡಿದ್ದೀರಿ ಎಂದು ಯತ್ನಾಳ್ ಆರೋಪಿಸಿದ್ದಾರೆ. ಅಲ್ಲದೆ ಯುವರಾಜ್ ಪ್ರಕರಣವನ್ನು ಮುಚ್ಚಿ ಹಾಕಲಾಗುತ್ತಿದೆ ಎಂದಿದ್ದಾರೆ.

    ದಲಿತ ಶಾಸಕನ ಮನೆ ಸುಡುವ ವಿಚಾರವಾಗಿ ಪ್ರತಿಯೊಂದು ವಿಷಯದಲ್ಲೂ ನೀವು ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದೀರಿ. ನಿಮ್ಮ ನಾಯಕಿ ಸೋನಿಯಾ ಬಗ್ಗೆ ನಿಮಗೆ ಗೌರವಯಿದ್ದರೆ ನಿಮ್ಮ ಬಳಿ ಇರುವ ಸಿಡಿಯನ್ನು ತಕ್ಷಣವೇ ಬಿಡುಗಡೆಮಾಡಿ. ಆ ಸಿಡಿ ತೋರಿಸಿಯೇ ನೀವು ಬಿಎಸ್‍ವೈ ಬಳಿ ಹೆಚ್ಚಿನ ಕೆಲಸ ಮಾಡಿಸಿಕೊಳ್ಳುತ್ತಿದ್ದೀರಿ. ಬಿಜೆಪಿ ಶಾಸಕರಿಗಿಂತ ಕಾಂಗ್ರೆಸ್ ಶಾಸಕರಿಗೆ ಹೆಚ್ಚು ಅನುದಾನ ಬಿಡುಗಡೆ ಅಗುತ್ತಿದೆ. ಬೆಳಗಾವಿಯಲ್ಲಿ ಅಭಯ ಪಾಟೀಲ್ ಅವರಿಗಿಂತ ಬೇರೆ ಪಕ್ಷದ ಲಕ್ಷ್ಮೀ ಹೆಬ್ಬಾಳ್ಕರ್ ಕ್ಷೇತ್ರಕ್ಕೆ ಹೆಚ್ಚು ಅನುದಾನ ಹೋಗಿದೆ. ಇದರ ಜೊತೆ ನೀವು ಶಿಕಾರಿಪುರ ಸೇರಿದಂತೆ ಕೆಲವೇ ಜಿಲ್ಲೆಗಳಿಗೆ ಸಿಎಂ ಅಗಿದ್ದೀರಿ. ನಿಮ್ಮನ್ನು ಸಿಎಂ ಸ್ಥಾನದಿಂದ ತೆಗೆಯುತ್ತಿದ್ದಾರೆಂಬ ಮಾತು ಕೇಳಿ ಬರುತ್ತಿದ್ದಂತೆ ಕೊಡಲ ಸಂಗಮಕ್ಕೆ 500 ಕೋಟಿ ರೂಪಾಯಿ ಘೋಷಣೆ ಮಾಡತ್ತೀರಿ. ದುಡ್ಡು ಎಲ್ಲಿದೆ, ಸುಮ್ಮನೆ ಘೋಷಣೆ ಮಾಡುತ್ತಾ ಹೋಗುತ್ತೀರಿ. ವಿಜಯಪುರ ವಿಮಾನ ನಿಲ್ದಾಣಕ್ಕೆ ಹಣ ನೀಡಿಲ್ಲ. ಅದರೆ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಅನುದಾನ ನೀಡುತ್ತೀರಿ. ಸಿಎಂ ಅಗಿ ಈ ರೀತಿ ತಾರತ್ಯಮ ಮಾಡುವುದು ಸರಿನಾ ಎಂದು ಪ್ರಶ್ನಿಸಿದ್ದಾರೆ.

  • ಸನ್ ಸ್ಟ್ರೋಕ್, ಫ್ಯಾಮಿಲಿ ಸ್ಟ್ರೋಕ್‍ನಲ್ಲಿ ಬಿಜೆಪಿ ಹಾಳಾಗ್ತಿದೆ : ಹೆಚ್.ವಿಶ್ವನಾಥ್

    ಸನ್ ಸ್ಟ್ರೋಕ್, ಫ್ಯಾಮಿಲಿ ಸ್ಟ್ರೋಕ್‍ನಲ್ಲಿ ಬಿಜೆಪಿ ಹಾಳಾಗ್ತಿದೆ : ಹೆಚ್.ವಿಶ್ವನಾಥ್

    – ವಿಜಯೇಂದ್ರನಿಂದ ಬಿಜೆಪಿಗೆ ಸನ್ ಸ್ಟ್ರೋಕ್
    – ಶೀಘ್ರದಲ್ಲಿಯೇ ಸಿಡಿ ಬ್ಲಾಸ್ಟ್ ಆಗುತ್ತೆ

    ರಾಯಚೂರು: ಈ ಹಿಂದೆ ಕಾಂಗ್ರೆಸ್, ಜನತಾದಳದ ರೀತಿಯಲ್ಲಿಯೇ ಬಿಜೆಪಿ ಸಹ ಸನ್ ಸ್ಟ್ರೋಕ್ ಮತ್ತು ಫ್ಯಾಮಿಲಿ ಸ್ಟ್ರೋಕ್ ನಲ್ಲಿ ಹಾಳಾಗುತ್ತಿದೆ ಎಂದು ಎಂಎಲ್‍ಸಿ ಹೆಚ್.ವಿಶ್ವನಾಥ್ ಹೇಳಿದ್ದಾರೆ.

    ಇಂದು ರಾಯಚೂರಿನಲ್ಲಿ ಮಾತನಾಡಿದ ಹೆಚ್.ವಿಶ್ವನಾಥ್, ಈಗ ನಡೆಯುತ್ತಿರುವುದು ಸನ್ ಸ್ಟ್ರೋಕ್, ಈ ಸನ್ ಸ್ಟ್ರೋಕ್‍ಗೆ ಹಿಂದೆ ಜನತಾ ಪರಿವಾರ ಮುಳುಗಿತು. ಕಾಂಗ್ರೆಸ್ ಸಹ ಸನ್ ಸ್ಟ್ರೋಕ್ ನಲ್ಲಿ ಹಾಳಾಗಿ ಹೋಗಿದೆ. ಇದೀಗ ಸನ್ ಸ್ಟ್ರೋಕ್, ಫ್ಯಾಮಿಲಿ ಸ್ಟ್ರೋಕ್ ನಲ್ಲಿ ಬಿಜೆಪಿ ಹಾಳಾಗುತ್ತಿದೆ. ಸಿಎಂ ಪುತ್ರ ವಿಜಯೆಂದ್ರನಿಂದ ಈಗ ಬಿಜೆಪಿಗೆ ಸನ್ ಸ್ಟ್ರೋಕ್ ಆವರಿಸಿದೆ. ಯಾರ ಮುಲಾಜು, ಯಾರ ಭಿಕ್ಷೆಯಿಂದ ಸಿಎಂ ಸ್ಥಾನದಲ್ಲಿ ಕುಳಿತಿದ್ದಿರಾ ಯೋಚಿಸಿ ಎಂದು ಪ್ರಶ್ನಿಸಿದರು.

    ಭಷ್ಟನಿಗೆ ಮಂತ್ರಿ ಸ್ಥಾನ: ಸಂಪುಟ ವಿಸ್ತರಣೆ, ಪುನರ್ ರಚನೆ ಸಿಎಂ ಪರಮಾಧಿಕಾರ. ಹಲವು ಒತ್ತಾಯಗಳು ಬರುವುದು ಸಹಜ. ಆದರೆ ಆದ್ರೆ ಭ್ರಷ್ಟರನ್ನು ಮಂತ್ರಿ ಮಾಡುವ ಒತ್ತಾಯ ಸಾಮಾನ್ಯವಾಗಿ ಬರುವುದಿಲ್ಲ. ಭ್ರಷ್ಟನನ್ನು, ದಲ್ಲಾಳಿಯನ್ನು ಮಂತ್ರಿ ಮಾಡಿರುವುದು ಹುಬ್ಬೇರಿಸುವಂತೆ ಮಾಡಿದೆ. ಯೋಗೇಶ್ವರ್ ಭ್ರಷ್ಟಾಚಾರವನ್ನು ಹೊತ್ತು ಮಲಗಿದ್ದಾನೆ. 9,731 ಜನರ ಬಳಿ ಮೆಗಾ ಸಿಟಿಗೆ ನೂರಾರು ಕೋಟಿ ದುಡ್ಡು ತೆಗೆದುಕೊಂಡಿದ್ದಾನೆ. ಭ್ರಷ್ಟನ ವಿರುದ್ಧ ಮೋಸ ಹೋದವರು ನ್ಯಾಯಾಲಯಕ್ಕೆ ಹೋಗಿದ್ದಾರೆ. ನ್ಯಾಯಾಲಯ ಸಿರಿಯಸ್ ಫ್ರಾಡ್ ಇನ್ವೆಸ್ಟಿಗೇಷನ್ ಗೆ ರೆಫರ್ ಮಾಡಿದೆ. ಸಾವಿರಾರು ಜನರಿಗೆ ಟೋಪಿ ಹಾಕಿದವನಿಗೆ ಮಂತ್ರಿ ಸ್ಥಾನ ಕೊಟ್ಟಿದ್ದಾರೆ. ಇಷ್ಟೆಲ್ಲಾ ಮಾಡಿರುವ ಆತನಿಗೆ ನಿನ್ನೆ ಬಾಯಿ ತಪ್ಪಿ ಸೈನಿಕ ಎಂದೆ ಹಾಗೆ ಕರೆದರೆ ಅದು ನಿಜವಾದ ಸೈನಿಕನಿಗೂ ಅವಮಾನ ಎಂದು ಯೋಗೇಶ್ವರ್ ವಿರುದ್ಧ ಗುಡುಗಿದರು.

    ಯಡಿಯೂರಪ್ಪನವರ ಮೇಲೆ ಅಪಾರ ನಂಬಿಕೆ ಇಟ್ಟುಕೊಂಡಿದ್ದೆವು. ಬಿಎಸ್‍ವೈರವರಿಗೆ ಒಳ್ಳೆಯದಾಗಲಿ ಎಂದು 17 ಜನ ಕ್ಷಿಪ್ರ ಕ್ರಾಂತಿಗೆ ಬಂದಿದ್ದೇವು. ಆದರೆ ಸಂಪುಟದಿಂದ ದಲಿತ ನಾಗೇಶ್ ರನ್ನು ಕಿತ್ತು ಹಾಕಿದ್ದಿರಾ, ಹಿಂದುಳಿದ ವರ್ಗದ ಮುನಿರತ್ನನಿಗೆ ಅವಕಾಶ ನೀಡಿಲ್ಲ ಎಂದು ಸಿಎಂ ಬಿಎಸ್ ವೈ ವಿರುದ್ಧ ಆಕ್ರೋಶ ಹೊರಹಾಕಿದರು.

    ಶೀಘ್ರದಲ್ಲಿಯೇ ಸಿಡಿ ಬ್ಲಾಸ್ಟ್: ಈ ಬಾರಿ ಸಂಕ್ರಮಣಕ್ಕೆ ಹೋರಿ ಹಿಡಿದಾಗೆ ಹಿಡಿಯಲಾಗುತ್ತದೆ. ಸಿಡಿ ಶೀಘ್ರವೇ ಬಿಡುಗಡೆಯಾಗಲಿದೆ. ಅದನ್ನು ಯತ್ನಾಳ್ ಅಥವಾ ಯಾರೋ ಒಬ್ಬರು ಬಿಡುಗಡೆ ಮಾಡುತ್ತಾರೆ. ಈಗಲೂ ಯಡಿಯೂರಪ್ಪರವರ ಬಗ್ಗೆ ಅಭಿಮಾನವಿದೆ. ಆದರೆ ಅವರು ಕುಟುಂಬ ರಾಜಕಾರಣಕ್ಕೆ ಬಲಿಯಾಗುತ್ತಿದ್ದಾರಲ್ಲಾ ಎಂದು ಬೇಸರವಾಗುತ್ತಿದೆ. ಹಾಗಾಗಿ ಇಂದು ನಾಲಿಗೆ ಇಲ್ಲದ ನಾಯಕರೂ ಆಗಿದ್ದಾರೆ. ಅವರು ಕರೆದು ಮಾತನಾಡಿದರೆ ಮಾತನಾಡುತ್ತೇವೆ, ನಾವು ಸದ್ಯ ಪರಿಸ್ಥಿತಿಯಲ್ಲಿ ಶಿಶುಗಳಂತಾಗಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

    ಸಾರಾ ಮಹೇಶ್ ಕೊಚ್ಚೆಗುಂಡಿ: ಅಂದು ಕುಮಾರಸ್ವಾಮಿ, ಸಿದ್ದರಾಮಯ್ಯ ಸರಿಯಾಗಿದ್ದರೆ ಇಂದು ಇದೆಲ್ಲಾ ಆಗುತ್ತಿರಲಿಲ್ಲ ಎಂದರು. ಇನ್ನೂ ಸಾರಾ ಮಹೇಶ್ ಕೊಚ್ಚೆಗುಂಡಿ. ಅವನ ಬಗ್ಗೆ ಯಾವುದೇ ಮಾತನಾಡುವುದಿಲ್ಲ. ನನ್ನನ್ನು ನಮ್ಮವರು ನಡುನೀರಲ್ಲಿ ಬಿಟ್ಟಿಲ್ಲ, ಇಲ್ಲಿ ಯಾವ ನೀರೇ ಇಲ್ಲಾ. ನಾನೇನಾದರೂ ಅಸಂಬದ್ಧವಾಗಿ ಮಾತನಾಡಿದರೆ ನನ್ನ ವಿರುದ್ಧ ಕ್ರಮ ತೆಗೆದುಕೊಳ್ಳಲಿ ಎಂದು ವಾಗ್ದಾಳಿ ತಿಳಿಸಿದರು.

     

     

  • ಮೈಸೂರಲ್ಲಿ ಕೆಜಿಎಫ್ ಸಿಡಿ ಮಾರಾಟ- ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ ಯಶ್ ಅಭಿಮಾನಿಗಳು

    ಮೈಸೂರಲ್ಲಿ ಕೆಜಿಎಫ್ ಸಿಡಿ ಮಾರಾಟ- ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ ಯಶ್ ಅಭಿಮಾನಿಗಳು

    ಮೈಸೂರು: ನಗರದ ಕೆ.ಆರ್. ವೃತ್ತದ ಬಳಿ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರದ ಸಿಡಿಗಳನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಯಶ್ ಅಭಿಮಾನಿಗಳು ಪೊಲೀಸರಿಗೆ ಒಪ್ಪಿಸಿದ್ದಾರೆ.

    ಕೆಜಿಎಫ್ ಚಿತ್ರ ರಾಜ್ಯ ಸೇರಿದಂತೆ ವಿಶ್ವದಾದ್ಯಂತ ಸದ್ದು ಮಾಡುತ್ತಿದೆ. ಆದರೆ ಈ ಚಿತ್ರಕ್ಕೂ ಪೈರಸಿ ಕಾಟ ಉಂಟಾಗಿದ್ದು, ನಗರದ ಕೆ.ಆರ್. ವೃತ್ತದಲ್ಲಿ ವ್ಯಕ್ತಿಯೊಬ್ಬ ಕೆಜಿಎಫ್ ಸಿನಿಮಾದ ಸಿಡಿಗಳನ್ನು ಮಾರಾಟ ಮಾಡುತ್ತಿದ್ದ. ಈ ವಿಚಾರದ ತಿಳಿದ ಯಶ್ ಅಭಿಮಾನಿಗಳು ಸಿಡಿ ಮಾರುತ್ತಿದ್ದ ವ್ಯಕ್ತಿಯನ್ನು ಹಿಡಿದು, ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

    ಕೆಜಿಎಫ್ ಸಿನಿಮಾದ ಸಿಡಿಗಳ ಸಮೇತ ದೇವರಾಜುನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಯಶ್ ಅಭಿಮಾನಿಗಳು ಈ ಬಗ್ಗೆ ಮೈಸೂರಿನಾದ್ಯಂತ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಸಂಗಮ್ ಟಾಕೀಸ್ ರಸ್ತೆ, ಕೆ.ಟಿ.ಸ್ಟ್ರೀಟ್, ಮಂಡಿ ಮೊಹಲ್ಲಾ, ಅಗ್ರಹಾರ ಸೇರಿದಂತೆ ಹಲವು ಕಡೆ ಕೆಜಿಎಫ್ ಸಿನಿಮಾದ ಸಿಡಿಗಳು ಮಾರಾಟವಾಗಿರುವ ಶಂಕೆ ವ್ಯಕ್ತವಾಗುತ್ತಿದೆ.

    ಕೆಜಿಎಫ್ ಸಿನಿಮಾದ ಸಿಡಿಗಳನ್ನು ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ನಿರ್ಮಾಣ ಮಾಡಿರುವ ಹೊಂಬಾಳೆ ಸಿನಿಮಾಸ್ ಅವರು ಎಚ್ಚರಿಕೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಿಜೆಪಿ ಸಚಿವರ ಸೆಕ್ಸ್ ಸಿಡಿ ಇಟ್ಕೊಂಡು ಬ್ಲಾಕ್‍ಮೇಲ್ ಮಾಡಿದ ಆರೋಪ- ಪತ್ರಕರ್ತ ವರ್ಮಾ ಬಂಧನ

    ಬಿಜೆಪಿ ಸಚಿವರ ಸೆಕ್ಸ್ ಸಿಡಿ ಇಟ್ಕೊಂಡು ಬ್ಲಾಕ್‍ಮೇಲ್ ಮಾಡಿದ ಆರೋಪ- ಪತ್ರಕರ್ತ ವರ್ಮಾ ಬಂಧನ

    ರಾಯ್ಪುರ್: ಬಿಜೆಪಿ ಸಚಿವರ ಸೆಕ್ಸ್ ಸಿಡಿ ಇಟ್ಟುಕೊಂಡು ಬ್ಲಾಕ್‍ಮೇಲ್ ಮಾಡಿದ ಆರೋಪದ ಮೇಲೆ ಮಾಜಿ ಬಿಬಿಸಿ ಪತ್ರಕರ್ತ ವಿನೋದ್ ವರ್ಮಾ ಅವರನ್ನು ಛತ್ತೀಸ್‍ಗಢ ಪೊಲೀಸರು ಶುಕ್ರವಾರ ಬೆಳಗ್ಗೆ ಬಂಧಿಸಿದ್ದಾರೆ.

    ಛತ್ತೀಸ್‍ಗಢದ ರಾಯ್ಪುರ್ ಜಿಲ್ಲೆಯಲ್ಲಿನ ಪಂಡಾರಿ ಪೊಲೀಸ್ ಠಾಣೆಯಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಪ್ರಕಾಶ್ ಬಜಾಜ್ ದೂರು ದಾಖಲಿಸಿದ 12 ಗಂಟೆಗಳೊಳಗೆ ವರ್ಮಾ ಅವರ ಬಂಧನವಾಗಿದೆ. ವರ್ಮಾ ವಿರುದ್ಧ ಐಪಿಸಿ ಸೆಕ್ಷನ್ 384 ಹಾಗೂ 507ರ ಅಡಿ ಸುಲಿಗೆ ಹಾಗೂ ಬೆದರಿಕೆ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. ಈ ಪ್ರಕರಣವನ್ನ ಕ್ರೈ ಬ್ರಾಂಚ್ ಎಸ್‍ಪಿ ಅಜಾತಶತ್ರು ಬಹೂದೂರ್ ಸಿಂಗ್ ಅವರಿಗೆ ಹಸ್ತಾಂತರಿಸಲಾಗಿದೆ.

    ವರ್ಮಾ ಅವರನ್ನು ಇಂದಿರಾಪುರಂ ನಿವಾಸದಿಂದ ಛತ್ತೀಸ್‍ಗಢ ಪೊಲೀಸರು ಬಂಧಿಸಿದ್ದಾರೆ. ಅವರನ್ನು ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಕರೆತರಲಾಗಿತ್ತು. ಪಂಡಾರಿ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

    ಛತ್ತೀಸ್‍ಗಢದ ಬಿಜೆಪಿ ಸಚಿವರೊಬ್ಬರ ಸೆಕ್ಸ್ ಸಿಡಿ ಹೊಂದಿದ್ದು, ಸುಲಿಗೆ ಮಾಡಲು ಯತ್ನಿಸಿದ ಕಾರಣ ವಿನೋದ್ ವರ್ಮಾ ಅವರ ಬಂಧನವಾಗಿದೆ ಎಂದು ಮೂಲಗಳು ತಿಳಿಸಿವೆ. ಇದೇ ವಾರ ವರ್ಮಾ, ಬಿಜೆಪಿ ಸಚಿವರ ಆಪ್ತರೊಬ್ಬರಿಗೆ ಕರೆ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು ಎಂದು ಹೇಳಲಾಗಿದೆ.

    ಸಿಡಿ ವಶ: ಬಜಾಜ್ ಅವರು ದೂರು ದಾಖಲಿಸಿದ ನಂತರ ಛತ್ತೀಸ್‍ಗಢ ಪೊಲೀಸರು ದೆಹಲಿಯ ಅಂಗಡಿಯೊಂದರ ಮೇಲೆ ದಾಳಿ ಮಾಡಿ ಆರೋಪ ಕೇಳಿಬಂದಿರುವ ಸೆಕ್ಸ್ ಸಿಡಿಯ 1000 ಪ್ರತಿಗಳನ್ನು ವಶಪಡಿಸಿಕೊಂಡಿದ್ದಾರೆ. ಅಂಗಡಿ ಮಾಲೀಕನ ವಿಚಾರಣೆ ಬಳಿಕ ಪೊಲೀಸರು ವರ್ಮಾ ಅವರ ಮನೆ ಮೇಲೆ ದಾಳಿ ಮಾಡಿ ಹೆಚ್ಚಿನ ಸಂಖ್ಯೆಯ ಸಿಡಿಗಳು, ವರ್ಮಾ ಅವರ ಲ್ಯಾಪ್‍ಟಾಪ್ ಹಾಗೂ ಪೆನ್‍ಡ್ರೈವ್ ವಶಪಡಿಸಿಕೊಂಡಿದ್ದಾರೆ.

    ವಶಪಡಿಸಿಕೊಳ್ಳಲಾಗಿರುವ ಸಿಡಿಗಳಿಂದ ವ್ಯಕ್ತಿಯ ಪ್ರತಿಷ್ಠೆಗೆ ಧಕ್ಕೆಯಾಗಬಹುದಾದ ಕಾರಣ ಶೀಘ್ರವೇ ಬಂಧನ ಮಾಡಲಾಯ್ತು ಎಂದು ರಾಯ್ಪುರ್ ಐಜಿಪಿ ಪ್ರದೀಪ್ ಗುಪ್ತಾ ವರದಿಗಾರರಿಗೆ ಹೇಳಿದ್ದಾರೆ.

    ಗುರುವಾರ ಮಧ್ಯಾಹ್ನ ಎಫ್‍ಐಆರ್ ದಾಖಲಾಗಿದೆ. ಎಫ್‍ಐಆರ್‍ನಲ್ಲಿ ವಿನೋದ್ ವರ್ಮಾ ಅವರನ್ನು ಆರೋಪಿ ಎಂದು ಉಲ್ಲೇಖಿಸಿಲ್ಲ. ಆದ್ರೆ ಸಿಡಿಗಳು ವರ್ಮಾ ಅವರ ಬಳಿ ಇದ್ದವು. ಅವರನ್ನು ರಾಯ್ಪುರಕ್ಕೆ ಕರೆತರಲು ವಶಕ್ಕೆ ಕೋರಿದ್ದೇವೆ ಎಂದು ಗುಪ್ತಾ ಹೇಳಿದ್ದಾರೆ.

    ಸಿಡಿಯ ಮರುಮುದ್ರಣಕ್ಕೆ ಆರ್ಡರ್?:  ಯಾರೋ ಒಬ್ಬರು ಲ್ಯಾಂಡ್‍ಲೈನ್ ನಂಬರ್‍ಗೆ ಕರೆ ಮಾಡಿ ತನ್ನ ಬಾಸ್‍ನ ಸೆಕ್ಸ್ ಸಿಡಿ ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕಿದ್ರು ಎಂದು ಪ್ರಕಾಶ್ ಬಜಾಜ್ ಅವರು ನಮಗೆ ದೂರು ನೀಡಿದ್ರು. ಕಾಲ್ ಟ್ರೇಸ್ ಮಾಡಿದಾಗ ದೆಹಲಿ ಅಂಗಡಿಯ ವಿಳಾಸ ಸಿಕ್ಕಿದ್ದು, ನಂತರ ದಾಳಿ ನಡೆಯಿತು. ವರ್ಮಾ ಅವರು ಸಿಡಿಯ ಮರುಮುದ್ರಣಕ್ಕೆ ಆರ್ಡರ್ ಮಾಡಿದ್ದರು ಎನ್ನಲಾಗಿದೆ. ಕರೆ ಮಾಡಿದ್ದು ವರ್ಮಾ ಅವರೇನಾ ಅಥವಾ ಬೇರೆ ವ್ಯಕ್ತಿಯಾ ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ತನಿಖೆಯಿಂದ ಗೊತ್ತಾಗಲಿದೆ ಅಂತ ಗುಪ್ತಾ ತಿಳಿಸಿದ್ದಾರೆ.

    ವರ್ಮಾ ಬಂಧನವನ್ನ ಇಲ್ಲಿನ ವಿರೋಧ ಪಕ್ಷದ ನಾಯಕರು ಖಂಡಿಸಿದ್ದಾರೆ. ಛತ್ತೀಸ್‍ಗಢ ಬಿಜೆಪಿ ವಕ್ತಾರರಾದ ಶ್ರೀಚಂದ್ ಸುಂದರಾಣಿ ಪ್ರತಿಕ್ರಿಯಿಸಿ, ಇಂತಹ ವಿವಾದಗಳಿಂದ ಬಿಜೆಪಿಯ ಮೇಲೆ ಪರಿಣಾಮ ಬೀರುವುದಿಲ್ಲ. ಈ ಬಗ್ಗೆ ತನಿಖೆಗೆ ಪಕ್ಷ ಸಿದ್ಧವಾಗಿದೆ. ಇದೆಲ್ಲಾ ಕಾಂಗ್ರೆಸ್‍ನವರ ಪಿತೂರಿ ಎಂದು ಹೇಳಿದ್ದಾರೆ.

    ಸೆಕ್ಸ್ ಸಿಡಿ ನನ್ನ ಬಳಿ ಇದೆ: ಸಚಿವ ರಾಕೇಶ್ ಮುನಾತ್ ಅವರ ಸೆಕ್ಸ್ ಸಿಡಿ ನನ್ನ ಬಳಿ ಇದೆ. ಛತ್ತೀಸ್‍ಗಢ ಸರ್ಕಾರಕ್ಕೆ ಇದು ಇಷ್ಟವಿಲ್ಲ. ನನ್ನನ್ನು ಈ ಪ್ರಕರಣದಲ್ಲಿ ಸಿಲುಕಿಸಲಾಗ್ತಿದೆ ಎಂದು ವಿನೋದ್ ವರ್ಮಾ ಸುದ್ದಿ ಸಂಸ್ಥೆಗೆ ಹೇಳಿಕೆ ನೀಡಿದ್ದಾರೆ.

  • ಸಿಎಂ, ಗೃಹಸಚಿವರಿಗೆ ಶಾಕ್ ಕೊಟ್ಟ ನಾಗ

    ಸಿಎಂ, ಗೃಹಸಚಿವರಿಗೆ ಶಾಕ್ ಕೊಟ್ಟ ನಾಗ

    ಬೆಂಗಳೂರು: ರೌಡಿಶೀಟರ್ ನಾಗರಾಜ್ ಅಲಿಯಾಸ್ ನಾಗ ಹದಿನೈದು ದಿನಗಳ ಅಜ್ಞಾತ ಸ್ಥಳದಿಂದ ಹಿಂದೆ ಸಿಡಿಯೊಂದನ್ನ ಬಿಡುಗಡೆ ಮಾಡಿದ್ದು ಗೊತ್ತೆ ಇದೆ. ಈಗ ಮತ್ತೊಂದು ಸಿಡಿ ಬಿಡುಗಡೆ ಮಾಡಿದ್ದಾನೆ.

    ಈ ಸಿಡಿಯಲ್ಲಿ ಬಿಜೆಪಿ ನಾಯಕರೊಬ್ಬರ ವಿರುದ್ಧ ಅರೋಪ ಮಾಡಿದ್ದಾನೆ. ನಾನು ಮತ್ತು ಬಿಜೆಪಿ ಸಂಸದ ಪಿಸಿ ಮೋಹನ್ ನಡುವೆ 15 ವರ್ಷಗಳ ಸ್ನೇಹ ಸಂಬಂಧವಿದೆ. ನಾನು ಕಷ್ಟದಲ್ಲಿರುವಾಗ ನಮ್ಮ ಸ್ನೇಹವನ್ನ ಇಲ್ಲ ಅಂತಾ ಹೇಳುತ್ತಿದ್ದಾರೆ. ನಿಮಗೆ ನಮ್ಮ ಸ್ನೇಹದ ಬಗ್ಗೆ ಅನುಮಾನವಿದ್ದರೆ ನನ್ನ ಮೊಬೈಲ್ ಕಾಲ್ ಲಿಸ್ಟ್ ತೆಗೆದು ನೋಡಿ ಎಂದು ಹೊಸದಾಗಿ ರೀಲಿಸ್ ಮಾಡಿರುವ ಸಿಡಿಯಲ್ಲಿ ಹೇಳಿದ್ದಾನೆ.

    ಜೊತೆಗೆ ತನ್ನ ಶರಣಾಗತಿಗೆ ಹಲವಾರು ಷರತ್ತುಗಳನ್ನ ಸಹ ಸಿಡಿಯಲ್ಲಿ ಹೇಳಿಕೊಂಡಿದ್ದಾನೆ. ಗೃಹ ಸಚಿವ ಪರಮೇಶ್ವರ್ ಅವರನ್ನು ಹಾಡಿ ಹೊಗಳಿದ್ದಾನೆ. ಗೃಹ ಸಚಿವ ಪರಮೇಶ್ವರ್ ಅವರು ಹೂ ಅಂದ್ರೆ ಸಾಕು. 10 ನಿಮಿಷದಲ್ಲಿ ಮುಂದೆ ಬಂದು ನಿಂತುಕೊಳ್ತೀನಿ. ಆದ್ರೆ ಸುಳ್ಳು ಪ್ರಕರಣಗಳನ್ನ ರದ್ದು ಮಾಡಬೇಕು. ನೀವು ನನ್ನನ್ನು ಹುಡುಕುವ ಅವಶ್ಯಕತೆಯಿಲ್ಲ. ಪರಮೇಶ್ವರ್ ಅವರು ಕರೆದ್ರೆ ನಾನೇ ಬರುತ್ತೇನೆ ಅಂತ ಹೇಳಿದ್ದಾನೆ.

    ಇದೇ ವೇಳೆ ಸಿಎಂ ಕುರಿತು ಮಾತನಾಡಿದ ನಾಗ, ‘ನಮ್ಮ ಸಿಎಂ’ ಸಿದ್ದರಾಮಯ್ಯ ಅವರಿಗೆ ಒಂದು ಮಾತು ಹೇಳ್ತೀನಿ. ಕರ್ನಾಟಕದಲ್ಲಿ ಐಪಿಎಸ್ ಅಧಿಕಾರಿಗಳು ಮಾಡ್ತಿರುವ ಮೋಸವನ್ನ, ಸುಳ್ಳು ಕೇಸ್‍ಗಳನ್ನ ನಿಲ್ಲಿಸಿ. ಹೇಳೋಕಾಗಲ್ಲ, ನಾಳೆ ನನ್ನ ಮನಸ್ಸು ಕೆಟ್ಟು ವಿಧಾನಸೌಧದ ಮುಂದೆ ಏನಾದ್ರೂ ಮಾಡ್ಕೊಂಡ್ರೆ ನಿಮ್ಮ ಹೆಸರೇ ಕೆಡೋದು ಎಂದಿದ್ದಾನೆ.

    https://www.youtube.com/watch?v=ag1OqMjT-NQ