Tag: CD

  • ದೊಡ್ಡ ಸಿಡಿ ಸುಟ್ಟು ಬ್ಲಾಕ್‍ಮೇಲ್ ವಿರುದ್ಧ ವಾಟಾಳ್ ಪ್ರತಿಭಟನೆ

    ದೊಡ್ಡ ಸಿಡಿ ಸುಟ್ಟು ಬ್ಲಾಕ್‍ಮೇಲ್ ವಿರುದ್ಧ ವಾಟಾಳ್ ಪ್ರತಿಭಟನೆ

    ಬೆಂಗಳೂರು: ಸಚಿವರೊಬ್ಬರ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಇಂದು ನಗರದಲ್ಲಿ ದೊಡ್ಡ ಅಣಕು ಸಿಡಿಯನ್ನು ಸುಟ್ಟುಹಾಕುವ ಮೂಲಕ ಪ್ರತಿಭಟನೆ ನಡೆಸಿದರು.

    ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್‍ನಲ್ಲಿ ದೊಡ್ಡ ಅಣಕು ಸಿಡಿಯನ್ನು ಸುಟ್ಟು ಹಾಕಿ ಪ್ರತಿಭಟನೆ ನಡೆಸಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸಿಡಿ ಒಂದು ರೀತಿಯಲ್ಲಿ ದೊಡ್ಡ ಬ್ಲಾಕ್‍ಮೇಲ್. ನಾವು ಇಂದು ಪ್ರತಿಭಟನೆ ನಡೆಸುವ ಮೂಲಕ ಸಿಡಿ ಬೇಡ ಎಂದು ಹೇಳುತ್ತಿದ್ದೇವೆ. ಆದರೆ ಈ ಮೂಲಕ ನಾವು ಮಾಜಿ ಸಚಿವರ ಬೆಂಬಲಿಸುತ್ತಿಲ್ಲ. ಕೋರ್ಟ್‍ನಲ್ಲಿ ಅರ್ಜಿ ಹಾಕಿರುವವರಿಗೂ ಬೆಂಬಲ ನೀಡುತ್ತಿಲ್ಲ. ಯಡಿಯೂರಪ್ಪನವರಿಗೂ ನಮ್ಮ ಬೆಂಬಲ ಇಲ್ಲ ಎಂದು ಹೇಳಿದರು.

    ಬಜೆಟ್ ಮಂಡನೆ ಮಾಡಲು ಯಡಿಯೂರಪ್ಪನವರಿಗೆ ಯೋಗ್ಯತೆ ಇಲ್ಲ. ಈ ಸರ್ಕಾರ ಅತಿ ಭ್ರಷ್ಟ ಸರ್ಕಾರ. ಈ ಸಿಡಿ ಮುಂದೆ ಒಂದು ಸುಪಾರಿಯಾಗಬಹುದು. ಸಿಡಿ ಇಟ್ಟುಕೊಂಡು ಸರ್ಕಾರ ಉರಳಿಸುವ ತಂತ್ರ ಕೂಡ ನಡೆಯಬಹುದು. ಭ್ರಷ್ಟರನ್ನು ಹತ್ತಿಕಲು ನಾವು ಲೋಕಾಯುಕ್ತಾರನ್ನು ತರಬೇಕು. ಲೋಕಾಯುಕ್ತಕ್ಕೆ ಶಕ್ತಿ ನೀಡಬೇಕು. ಲೋಕಾಯುಕ್ತಕ್ಕೆ ಬಹಳ ಶಕ್ತರನ್ನು ತರಬೇಕು. ಲೋಕಾಯುಕ್ತಕ್ಕೆ ಸಿಎಂ ನೇಮಕ ಮಾಡುವಂತಾಗಬಾರದು. ಭ್ರಷ್ಟರ ಎದೆ ನಡುಗಿಸುವ ಲೋಕಯುಕ್ತ ನಮಗೆ ಬೇಕಾಗಿದೆ ಎಂದರು.

    ಸಿಡಿ ಒಂದು ಕೆಟ್ಟ ಸಂಸ್ಕೃತಿ ಇದು ತೊಲಗಲಿ ಎಂಬ ಕಾರಣಕ್ಕೆ ಸಿಡಿ ಸುಡುತ್ತಿದ್ದೇವೆ ಎಂದು ಹೇಳಿದರು.

  • ನನ್ನ ಬಗ್ಗೆ ಸಿಡಿ ಇದ್ರೆ ರಾಷ್ಟ್ರಮಟ್ಟದಲ್ಲಿ ಬಿಡುಗಡೆ ಮಾಡಲಿ: ಮುನಿರತ್ನ

    ನನ್ನ ಬಗ್ಗೆ ಸಿಡಿ ಇದ್ರೆ ರಾಷ್ಟ್ರಮಟ್ಟದಲ್ಲಿ ಬಿಡುಗಡೆ ಮಾಡಲಿ: ಮುನಿರತ್ನ

    ಬೆಂಗಳೂರು: ನನ್ನ ಬಗ್ಗೆ ಸಿಡಿ ಇದ್ದರೆ ರಾಷ್ಟ್ರಮಟ್ಟದಲ್ಲಿ ಬಿಡುಗಡೆ ಮಾಡಲಿ ಎಂದು ಶಾಸಕ ಮುನಿರತ್ನ ಹೇಳಿದ್ದಾರೆ.

    ಮಾಜಿ ಸಚಿವರೊಬ್ಬರ ಸಿಡಿ ಬಿಡುಗಡೆಯಾಗಿ ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ಇದರ ಬೆನ್ನಲ್ಲೇ 6 ಮಂದಿ ಸಚಿವರು ಕೋರ್ಟ್ ಮೊರೆ ಹೋಗಿದ್ದಾರೆ. ಈ ಸಂಬಂಧ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಶಾಸಕರು, ನಾನಂತೂ ಯಾವುದೇ ಕೋರ್ಟ್ ಮೊರೆ ಹೋಗಲ್ಲ. ನನಗೆ ಆತಂಕವಿಲ್ಲ. ರಾಜಕೀಯದಲ್ಲಿ ಸೂಕ್ಷ್ಮವಾಗಿ ಹೆಜ್ಜೆ ಇಡಬೇಕಾಗಿದೆ. ಯಾವುದೇ ಕಾರಣಕ್ಕೆ ಕೋರ್ಟ್ ಮೆಟ್ಟಿಲು ಹತ್ತಲ್ಲ. ನನ್ನ ಬಗ್ಗೆ ಸಿಡಿ ಇದೆ ಅಂದ್ರೆ ಅದನ್ನ ರಾಷ್ಟ್ರಮಟ್ಟದಲ್ಲಿ ಬಿಡುಗಡೆ ಮಾಡಲಿ ಎಂದರು.

    ನಾನು ಯಾವುದೇ ಕಾರಣಕ್ಕೂ ಕೋರ್ಟ್ ಮೊರೆ ಹೋಗುವ ಪ್ರಶ್ನೆಯೇ ಇಲ್ಲ. ಯಾರಾದ್ರೂ ಸಿಡಿ ಇದೆ ಅಂತ ಹೇಳಿದ್ರೆ, ತಡೆಯಾಜ್ಞೆ ತರುವ ಪ್ರಶ್ನೆಯೇ ಇಲ್ಲ. ತರುವಂತವರಿಗೆ ನಾನು ಸ್ವಾಗತ ಕೋರಿ ಕೂಡಲೇ ಬಿಡುಗಡೆ ಮಾಡಿ, ವಿಳಂಬ ಮಾಡಬೇಡಿ. ರಾಷ್ಟ್ರಮಟ್ಟದ ಪತ್ರಿಕಾಗೋಷ್ಟಿ ನಡೆಸಿ ಬಿಡುಗಡೆ ಮಾಡಲಿ ಎಂದು ಶಾಸಕರು ಸವಾಲೆಸೆದರು.

    ಮುಂಜಾಗೃತಾ ಕ್ರಮವಾಗಿ ಸೇಫ್ಟಿಗಾಗಿ ಸಚಿವರು ನ್ಯಾಯಾಲಯ ಮೊರೆ ಹೋಗಿದ್ದಾರೆ. ಆದರೆ ನಾನು ಯಾವುದೇ ಕಾರಣಕ್ಕೂ ಕೋರ್ಟ್ ಮೊರೆ ಹೋಗಲ್ಲ. ಬಾಂಬೆ, ಪುಣೆಯಲ್ಲಿ ಒಟ್ಟಿಗೆ ಇದ್ವಿ. ಒಂದೇ ರೆಸಾರ್ಟ್ ನಲ್ಲಿದ್ವಿ. ಅಲ್ಲಿ ನಮಗೆ ತೇಜೋವಧೆ ಮಾಡುವ ಕೆಲಸ ಯಾರೂ ಮಾಡಿಲ್ಲ. ಇದು ವ್ಯವಸ್ಥಿತ ಸಂಚು. ಸಿಲುಕಿಸಬೇಕು ಅಂತಾನೇ ಮಾಡಿರುವ ಕೆಲಸವಿದು. ಅವರ ದೌರ್ಬಲ್ಯ ಯಾರಿಗೆ ಗೊತ್ತಿತ್ತೋ, ಅವರೇ ಅದನ್ನು ಬಳಸಿಕೊಂಡಿ ಸಿಲುಕಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    ಮಾಜಿ ಸಚಿವರ ಹಿಂದೆ ಇದ್ದವ್ರೇ ಸಂಚು ಮಾಡಿರುತ್ತಾರೆ. ಅವರನ್ನ ಅರ್ಥ ಮಾಡಿಕೊಂಡವ್ರೇ ಸಿಡಿ ಮಾಡಿದ್ದಾರೆ. ಹೊಸಬರಿಂದ ಇದು ಆಗಿಲ್ಲ ಎಂದು ಮುನಿರತ್ನ ಶಂಕೆ ವ್ಯಕ್ತಪಡಿಸಿದರು.

  • ನನ್ನದು ಅಂತಹ ಯಾವುದೇ ಸಿಡಿಗಳು ಇಲ್ಲ- ನಗೆ ಚಟಾಕಿ ಹಾರಿಸಿದ್ರು ಮಾಧುಸ್ವಾಮಿ

    ನನ್ನದು ಅಂತಹ ಯಾವುದೇ ಸಿಡಿಗಳು ಇಲ್ಲ- ನಗೆ ಚಟಾಕಿ ಹಾರಿಸಿದ್ರು ಮಾಧುಸ್ವಾಮಿ

    ದಾವಣಗೆರೆ: ಮಾಜಿ ಸಚಿವರ ಸಿಡಿ ಪ್ರಕರಣದಲ್ಲಿ ನೈತಿಕತೆ ಬಗ್ಗೆ ಹೆಚ್ಚು ಆದ್ಯತೆ ಕೊಡಬೇಕಾಗುತ್ತದೆ. ನಾನು ಈ ಪ್ರಕರಣಕ್ಕೆ ಉತ್ತರಿಸಿದರೂ ಒಂದು ಮಾತು ಬರುತ್ತದೆ, ಉತ್ತರಿಸುತ್ತಿದ್ದರೂ ಒಂದು ಮಾತು ಬರುತ್ತದೆ. ನನ್ನದು ಅಂತಹ ಯಾವುದೇ ಸಿಡಿಗಳು ಇಲ್ಲ ಎಂದು ಸಚಿವ ಮಾಧುಸ್ವಾಮಿ ನಗೆ ಚಟಾಕಿ ಹಾರಿಸಿದರು.

    ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹನಗವಾಡಿ ಬಳಿ ಇರುವ ಪಂಚಮಸಾಲಿ ಗುರುಪೀಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವರ ವಿಚಾರದಲ್ಲಿ ತಪ್ಪು ಸರಿ ಎಂಬುದನ್ನ ಕೋರ್ಟ್ ಹೇಳುತ್ತದೆ. ಆದರೆ ಅಷ್ಟರಲ್ಲಿ ಅವರ ತೇಜೋವಧೆ ಆಗಿ ಹೋಗಿರುತ್ತದೆ. ಈ ಕಾರಣಕ್ಕಾಗಿಯೇ ಕೆಲ ಸಚಿವರು ಕೋರ್ಟ್ ಮೊರೆ ಹೋಗಿ ಮಾಧ್ಯಮಗಳಲ್ಲಿ ಪ್ರಸಾರ ಆಗದಂತೆ ತಡೆ ತರುತ್ತಿದ್ದಾರೆ ಎಂದರು.

    ತೇಜೋವಧೆ ತಡೆಯಲು ಇಂತಹ ಪ್ರಯತ್ನ ನಡೆದಿದೆ. ಮಾಜಿ ಸಚಿವರ ವಿಚಾರದಲ್ಲಿ ಸಂತ್ರಸ್ತೆ ಬಂದು ದೂರು ನೀಡಿಲ್ಲ ಎಂಬುದು ಚರ್ಚೆ ಆಗುತ್ತದೆ. ಯಾವುದೇ ಆರೋಪ ಇದ್ದರೆ ಅದರ ಬಗ್ಗೆ ಬೇಕಾದವರು ದೂರು ಸಲ್ಲಿಸಬಹುದು ಎಂದು ಈ ಹಿಂದೆ ಸುಪ್ರೀಂಕೋರ್ಟ್ ತೀರ್ಪು ಬಂದಿದೆ. ಅದನ್ನ ಬಳಕೆ ಮಾಡಿಕೊಂಡು ಮೂರನೇ ವ್ಯಕ್ತಿಗಳು ದೂರು ನೀಡುತ್ತಿದ್ದಾರೆ. ಇಲ್ಲವಾದ್ರೆ ಪ್ರಕರಣಕ್ಕೆ ಸಂಬಂಧಿಸಿವರು ಮಾತ್ರ ದೂರು ನೀಡಬೇಕು ಎಂದು ಹೇಳಿದರು.

    25ಕ್ಕೂ ಹೆಚ್ಚು ಸಚಿವರು ಕೋರ್ಟ್ ಮೊರೆ ಹೋಗುತ್ತಿದ್ದಾರೆ ಎಂಬ ವಿಚಾರದ ಕುರಿತು ನನಗೆ ಗೊತ್ತಿಲ್ಲ ಎಂದು ಮಾಧುಸ್ವಾಮಿ ತಿಳಿಸಿದರು.

  • ಸಿಡಿ ರಿಲೀಸ್‌ ಆದ 4 ಗಂಟೆಯ ಬಳಿಕ ಮನೆ ಖಾಲಿ ಮಾಡಿದ್ದ ಯುವತಿ

    ಸಿಡಿ ರಿಲೀಸ್‌ ಆದ 4 ಗಂಟೆಯ ಬಳಿಕ ಮನೆ ಖಾಲಿ ಮಾಡಿದ್ದ ಯುವತಿ

    ಬೆಂಗಳೂರು: ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್‌ ತನಿಖೆ ಚುರುಕುಗೊಂಡಿದೆ. ಸಿಡಿಯಲ್ಲಿ ಇರುವ ಯವತಿ ಯಾರು? ಈಗ ಎಲ್ಲಿದ್ದಾಳೆ ಎಂಬುದರ ಬಗ್ಗೆ ಮಾಹಿತಿಗಳು ಲಭ್ಯವಾಗಿಲ್ಲ. ಆದರೆ ಆಕೆ ಬೆಂಗಳೂರಿನಲ್ಲಿ ನೆಲೆಸಿದ್ದ ಬಗ್ಗೆ ಹಲವು ಮಾಹಿತಿಗಳು ಈಗ ಲಭ್ಯವಾಗಿದ್ದು, ಮಾರ್ಚ್ 2ರ ರಾತ್ರಿ 9:30ಕ್ಕೆ ಮನೆಯಿಂದ ಯುವತಿ ಹೊರಕ್ಕೆ ಹೋಗಿದ್ದಾಳೆ.

    ಹೌದು. ಮಂಗಳವಾರ ಸಂಜೆ ಸ್ಫೋಟಕ ಸಿಡಿ ರಿಲೀಸ್‌ ಆಗಿತ್ತು. ಸಿಡಿ ರಿಲೀಸ್ ಆಗಿ 4 ಗಂಟೆ ಬಳಿಕ ಸಂತ್ರಸ್ತೆ ಮನೆಯಿಂದ ಹೊರಗಡೆ ಬಂದಿದ್ದಾಳೆ. ಬ್ಯಾಗ್ ಇಟ್ಟುಕೊಂಡು ಮನೆಯಿಂದ ಏಕಾಂಗಿಯಾಗಿ ಹೊರಗೆ ಬಂದ ಯುವತಿ ನಡೆದುಕೊಂಡೇ ಮುಖ್ಯ ರಸ್ತೆಗೆ ತಲುಪಿದ್ದಳು ಎಂಬ ವಿಚಾರ ಮೂಲಗಳಿಂದ ಲಭ್ಯವಾಗಿದೆ.

    ಮನೆಯಿಂದ ಹೊರಬಂದ ಬಳಿಕ ಮೊಬೈಲ್ ಸ್ವಿಚ್‍ಆಫ್ ಮಾಡಿ ಸಿಮ್ ಡಿಆಕ್ಟಿವೇಟ್ ಮಾಡಿದ್ದಾಳೆ. ಮೊಬೈಲ್ ಸ್ವಿಚ್‍ ಆಫ್‌ ಮಾಡಿರುವ  ವಿಚಾರ ತಾಂತ್ರಿಕ ದಾಖಲೆಗಳಿಂದ ಲಭ್ಯವಾಗಿದೆ

    ಆರಂಭದಲ್ಲಿ ಯುವತಿ ಆರ್‌ಟಿ ನಗರದ ಪಿಜಿಯಲ್ಲಿ ವಾಸವಾಗಿದ್ದಳು ಎಂಬ ಮಾಹಿತಿ ಸಿಕ್ಕಿತ್ತು. ಆದರೆ ಈಗ ಆಕೆ ‌ಪಿಜಿಯಲ್ಲಿ ಇರಲಿಲ್ಲ. ಆರ್.ಟಿ.ನಗರದ ಮುಖ್ಯರಸ್ತೆಯ ಬಾಡಿಗೆ ಮನೆಯಲ್ಲಿ ಒಬ್ಬಳೇ ವಾಸವಾಗಿದ್ದ ವಿಚಾರ ಈಗ ಲಭ್ಯವಾಗಿದೆ.

    ಯುವತಿಯ ಬಗ್ಗೆ ಪಬ್ಲಿಕ್‌ ಟಿವಿ ಮನೆ ಮಾಲೀಕರನ್ನು ಮಾತನಾಡಿಸಿದೆ. ಈ ವೇಳೆ ಅವರು, ಇದು ಪಿಜಿಯಲ್ಲ. ಅವರಿಗೆ ಬಾಡಿಗೆ ನೀಡಿದ್ದೆ. ಬಾಡಿಗೆಯಲ್ಲಿ ನಾಲ್ಕು ಜನ ಸೇರಿ ಮನೆ ತೆಗೆದುಕೊಂಡಿದ್ದಾರೆ. 2018ರಿಂದ ಅವರು ಇಲ್ಲಿ ನೆಲೆಸಿದ್ದರು. ರೂಮಿನಲ್ಲ ಆಕೆ ಒಬ್ಬಳೇ ಇದ್ದಳು. ಸೋಮವಾರ ಇಲ್ಲಿಂದ ತೆರಳಿದ್ದಾಳೆ ಎಂದು ತಿಳಿಸಿದ್ದಾರೆ.

  • ಕೋರ್ಟ್ ಮೊರೆ ಹೋದ 6 ಮಂದಿ ಸಚಿವರು – ಲಿಂಬಾವಳಿಯಿಂದ ನಡ್ಡಾ ಮಾಹಿತಿ ಸಂಗ್ರಹ

    ಕೋರ್ಟ್ ಮೊರೆ ಹೋದ 6 ಮಂದಿ ಸಚಿವರು – ಲಿಂಬಾವಳಿಯಿಂದ ನಡ್ಡಾ ಮಾಹಿತಿ ಸಂಗ್ರಹ

    – ಲಿಂಬಾವಳಿಗೆ ನಡ್ಡಾ ಪ್ರಶ್ನೆಗಳ ಮೇಲೆ ಪ್ರಶ್ನೆ

    ನವದೆಹಲಿ: ಮಾಜಿ ಸಚಿವರೊಬ್ಬರ ರಾಸಲೀಲೆ ಸಿಡಿ ಹೊರ ಬರುತ್ತಿದ್ದಂತೆಯೇ ಆರು ಮಂದಿ ಸಚಿವರು ಕೋರ್ಟ್ ಮೊರೆ ಹೋಗಿದ್ದಾರೆ. ಈ ಬೆನ್ನಲ್ಲೇ ಕೆಲಸದ ನಿಮಿತ್ತ ದೆಹಲಿಗೆ ಆಗಮಿಸಿರುವ ಸಚಿವ ಅರವಿಂದ ಲಿಂಬಾವಳಿಯಿಂದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಮಾಹಿತಿ ಸಂಗ್ರಹಿಸಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಹೌದು. 6 ಮಂದಿ ಸಚಿವರು ಕೋರ್ಟ್ ಮೆಟ್ಟಿರುತ್ತಿದ್ದಂತೆಯೇ ಬಿಜೆಪಿ ಹೈಕಮಾಂಡ್ ಮಟ್ಟದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ದೆಹಲಿಗೆ ಆಗಮಿಸಿದ್ದ ಅರವಿಂದ ಲಿಂಬಾವಳಿ ಬಳಿಯಿಂದ ಜೆ.ಪಿ. ನಡ್ಡಾ ಇಂಚಿಂಚೂ ಮಾಹಿತಿ ಸಂಗ್ರಹಿಸಿದ್ದಾರೆ ಎನ್ನಲಾಗಿದೆ.

    ಪಶ್ಚಿಮ ಬಂಗಾಳ ಚುನಾವಣೆಯ ಹಿನ್ನೆಲೆಯಲ್ಲಿ ಅರವಿಂದ ಲಿಂಬಾವಳಿ ದೆಹಲಿಗೆ ಆಗಮಿಸಿದ್ದಾರೆ. ಹೀಗೆ ಭೇಟಿ ವೇಳೆ ಜೆ.ಪಿ ನಡ್ಡಾ ಭೇಟಿ ಮಾಡಿ ಸಿಡಿ ಬಗ್ಗೆ ಚರ್ಚೆ ಮಾಡಿದ್ದಾರೆ. ಕೋರ್ಟ್ ಮೆಟ್ಟಿಲೇರಿ ತಾವೇ ತಪ್ಪಿತಸ್ಥರು ಎಂದು ಒಪ್ಪಿಕೊಂಡಂತಲ್ಲವೇ ಎಂದು ಲಿಂಬಾವಳಿಯನ್ನು ನಡ್ಡಾ ಪ್ರಶ್ನಿಸಿದ್ದಾರೆ. ಅಲ್ಲದೆ ಕೋರ್ಟಿಗೆ ಹೋಗುವ ಮುನ್ನ ಪಕ್ಷದ ನಾಯಕರ ಜೊತೆ ಚರ್ಚೆ ಮಾಡಿದ್ದರಾ…? ಮುಂದಿನ ನಡೆಗಳು ಏನು ಅನ್ನೊ ಬಗ್ಗೆ ಲಿಂಬಾವಳಿ ಬಳೀ ನಡ್ಡಾ ಸಮಾಲೋಚನೆ ನಡೆಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

    ಕೋರ್ಟ್ ಮೊರೆ ಹೋಗಿರುವ ಸಚಿವರು:
    ತಮ್ಮ ವಿರುದ್ಧ ಮಾಧ್ಯಮಗಳು ವರದಿ ಪ್ರಸಾರ ಮಾಡಬಾರದು ಎಂದು 6 ಮಂದಿ ಸಚಿವರು ಕೋರ್ಟ್ ಮೊರೆ ಹೋಗಿದ್ದಾರೆ. ಸಚಿವರಾದ ಶಿವರಾಮ್ ಹೆಬ್ಬಾರ್, ಬಿ.ಸಿ.ಪಾಟೀಲ್, ಎಸ್.ಟಿ.ಸೋಮಶೇಖರ್, ಕೆ.ಸುಧಾಕರ್, ನಾರಾಯಣಗೌಡ, ಭೈರತಿ ಬಸವರಾಜ್ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

    ತಮ್ಮ ವಿರುದ್ಧ ಸುದ್ದಿ ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಬೇಕೆಂದು ಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿ ಮನವಿ ಮಾಡಿದ್ದಾರೆ. ಆರು ಸಚಿವರಿಗೆ ಭೀತಿ ಹುಟ್ಟಿರುವುದು ಏಕೆ? ಇದ್ದಕ್ಕಿಂದ್ದಂತೆ ಯಾಕೆ ಕೋರ್ಟ್ ಮೊರೆ ಹೋಗಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.

  • ರಾಸಲೀಲೆ ಕೇಸ್ – ರಮೇಶ್ ಜಾರಕಿಹೊಳಿ ವಿರುದ್ಧ ಎಫ್‌ಐಆರ್‌ಗೆ ಚಿಂತನೆ

    ರಾಸಲೀಲೆ ಕೇಸ್ – ರಮೇಶ್ ಜಾರಕಿಹೊಳಿ ವಿರುದ್ಧ ಎಫ್‌ಐಆರ್‌ಗೆ ಚಿಂತನೆ

    ಬೆಂಗಳೂರು: ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಔಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮಾಜಿ ಸಚಿವ ವಿರುದ್ಧ ಎಫ್‍ಐಆರ್ ದಾಖಲಾಗುವ ಸಾಧ್ಯತೆಗಳಿವೆ.

    ಕೆಪಿಟಿಸಿಎಲ್ ನಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿ ಯುವತಿಯನ್ನು ಲೈಂಗಿಕವಾಗಿ ಬಳಸಿಕೊಂಡಿರುವ ಹಿನ್ನೆಲೆಯಲ್ಲಿ ಬಹುತೇಕ ಇಂದು ಮಧ್ಯಾಹ್ನದೊಳಗೆ ಎಫ್‍ಐಆರ್ ದಾಖಲಾಗಬಹುದು. ಕೆಲ ಕಾನೂನು ತಜ್ಞರ ಸಲಹೆಯ ಹಿನ್ನೆಲೆಯಲ್ಲಿ ಎಫ್‍ಐಆರ್ ದಾಖಲಾಗುವ ಸಾಧ್ಯತೆ ಇದೆ.

    ಲೈಂಗಿಕ ದೌರ್ಜನ್ಯದಡಿ ಈ ಎಫ್‍ಐಆರ್ ದಾಖಲು ಮಾಡುವ ಸಾಧ್ಯತೆ ಇದ್ದು, ಸೆಕ್ಸ್ ಸ್ಕ್ಯಾಂಡಲ್‍ನಲ್ಲಿ ಜಾರಕಿಹೊಳಿಗೆ ಸಂಕಷ್ಟ ಕಟ್ಟಿಟ್ಟ ಬುತ್ತಿಯಾಗಿದೆ. ಕಾನೂನು ತಜ್ಞರು ಈಗಾಗಲೇ ನಿತ್ಯಾನಂದ ಪ್ರಕರಣದ ಉದಾಹರಣೆ ನೀಡಿದ್ದಾರೆ. ಇದನ್ನೂ ಓದಿ: ಸರ್ಕಾರಕ್ಕೆ ಮುಜುಗರ ಆಗ್ಬಾರ್ದು ಅಂತ ರಾಜೀನಾಮೆ: ರಮೇಶ್ ಜಾರಕಿಹೊಳಿ

    ನಿತ್ಯಾನಂದ ಕೇಸ್‍ನಲ್ಲಿ ಕಾರು ಚಾಲಕ ಲೆನಿನ್ ದೂರಿನ ಮೂಲಕ ಎಫ್‍ಐಆರ್ ದಾಖಲಾಗಿತ್ತು. ಲೆನಿನ್ ಕೂಡ ಅವತ್ತು ಮೂರನೇ ವ್ಯಕ್ತಿ ಆಗಿದ್ದ. ದೂರು ನೀಡಿದ ಬಳಿಕ ಅತ್ಯಾಚಾರ ಆಗಿಲ್ಲ ಎಂದು ಆ ನಟಿ ಹೇಳಿದ್ದರು. ಈಗ ಜಾರಕಿಹೊಳಿ ಕೇಸ್‍ನಲ್ಲೂ ಅದೇ ಮಾರ್ಗ ಅನುಸರಿಸಲು ಚಿಂತನೆ ನಡೆಸಲಾಗಿದೆ. ಹೀಗಾಗಿ ಪ್ರಕರಣ ದಾಖಲು ಮಾಡಿ ಯುವತಿಯ ಹೇಳಿಕೆ ಬಿಡಲು ಚಿಂತನೆ ನಡೆಸಲಾಗಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

  • ಇಂದಿನಿಂದ ವಿಧಾನ ಮಂಡಲ ಅಧಿವೇಶನ- ಸರ್ಕಾರಕ್ಕೆ ಸಿಡಿ ಜೊತೆಗೆ ಮೀಸಲಾತಿ ಅಗ್ನಿಪರೀಕ್ಷೆ

    ಇಂದಿನಿಂದ ವಿಧಾನ ಮಂಡಲ ಅಧಿವೇಶನ- ಸರ್ಕಾರಕ್ಕೆ ಸಿಡಿ ಜೊತೆಗೆ ಮೀಸಲಾತಿ ಅಗ್ನಿಪರೀಕ್ಷೆ

    ಬೆಂಗಳೂರು: ಇಂದಿನಿಂದ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಲಿದೆ. ಸುಮಾರು 19 ದಿನಗಳ ಕಾಲ ಈ ಅಧಿವೇಶನ ನಡೆಯಲಿದೆ.

    ಸೋಮವಾರ ಸಿಎಂ ಯಡಿಯೂರಪ್ಪ ರಾಜ್ಯದ ಬಜೆಟ್ ಮಂಡನೆ ಮಾಡಲಿದ್ದಾರೆ. ಅದಕ್ಕೂ ಮುನ್ನ ಇಂದು ಮತ್ತು ನಾಳೆ ವಿಧಾನಸಭೆ ಹಾಗೂ ವಿಧಾನ ಪರಿಷತ್ ನಲ್ಲಿ ಒಂದು ರಾಷ್ಟ್ರ ಒಂದು ಚುನಾವಣೆ ಬಗ್ಗೆ ವಿಶೇಷ ಚರ್ಚೆ ನಡೆಯಲಿದೆ.

    ವಿಧಾನಸಭೆ ಕಲಾಪ ಪ್ರಾರಂಭವಾದ ಕೂಡಲೇ ಒಂದು ರಾಷ್ಟ್ರ ಒಂದು ಚುನಾವಣೆ ಬಗ್ಗೆ ಚರ್ಚೆಗೆ ಅವಕಾಶ ಕೊಡಲಾಗಿದೆ. ವಿಧಾನ ಪರಿಷತ್ ನಲ್ಲಿ ಮೊದಲು ಅಗಲಿದ ಗಣ್ಯರಿಗೆ ಸಂತಾಪ ಸೂಚಿಸುವ ಕಾರ್ಯ ಕಲಾಪ ನಡೆಯುತ್ತೆ. ಬಳಿಕ ಪ್ರಶ್ನೋತ್ತರ ಮತ್ತು ನಿಯಮ 330, ಗಮನ ಸೆಳೆಯುವ ಸೂಚನೆ ಬಳಿಕ ಒಂದು ರಾಷ್ಟ್ರ ಮತ್ತು ಚುನಾವಣೆ ಬಗ್ಗೆ ಚರ್ಚೆ ನಡೆಯಲಿದೆ. ಈ ಚರ್ಚೆಯೂ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ಬಗ್ಗೆ ಮಾತ್ರ ಇರಲಿದೆ. ರಾಜ್ಯ ಚುನಾವಣೆ ಆಯೋಗ ನಡೆಸುವ ಚುನಾವಣೆ ಬಗ್ಗೆ ಚರ್ಚೆ ಆಗೋದಿಲ್ಲ ಅಂತ ಸ್ಪೀಕರ್ ಕಾಗೇರಿ ಸ್ಪಷ್ಟಪಡಿಸಿದ್ದಾರೆ.

    ಇತ್ತ ಕಲಾಪದಲ್ಲಿ ರಾಸಲೀಲೆ ಪ್ರಕರಣ ಪ್ರಸ್ತಾಪವಾಗುವ ಸಾಧ್ಯತೆಗಳಿವೆ. ಈಗಾಗಲೇ ರಮೇಶ್ ಜಾರಕಿಹೊಳಿ ರಾಜೀನಾಮೆ ಕೊಟ್ಟರೂ ಅಧಿವೇಶನದಲ್ಲಿ ಕಾಂಗ್ರೆಸ್, ಜೆಡಿಎಸ್ ಅದೇ ಅಸ್ತ್ರ ಉಪಯೋಗಿಸುವ ಸಾಧ್ಯತೆ ಇದೆ. ಒಟ್ಟಿನಲ್ಲಿ ರಾಸಲೀಲೆ ಪ್ರಸ್ತಾಪ ಮಾಡಿ ಸರ್ಕಾರಕ್ಕೆ ಮುಜುಗರ ತರೋ ಪ್ಲ್ಯಾನ್ ಅನ್ನು ಕಾಂಗ್ರೆಸ್, ಜೆಡಿಎಸ್ ಹೂಡಿವೆ.

    ಜಾರಕಿಹೊಳಿ ಸಿಡಿ ವಿಚಾರ ಪ್ರಸ್ತಾಪಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ತಂತ್ರವಿದ್ದು, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಬಿಜೆಪಿಗೆ ಮುಜುಗರ ಉಂಟು ಮಾಡುವುದು. ಪಂಚರಾಜ್ಯ ಚುನಾವಣೆಯಲ್ಲಿ ಸಿಡಿ ಅಸ್ತ್ರ ಬಳಸಿ ಮತ್ತಷ್ಟು ಡ್ಯಾಮೇಜ್ ಮಾಡೋದು. ಸಿಡಿಯಲ್ಲಿ ಬಿಎಸ್‍ವೈಯವರನ್ನ ಭ್ರಷ್ಟ ಎಂದಿರುವ ಜಾರಕಿಹೊಳಿ ಹೇಳಿಕೆ ಆಧರಿಸಿ ಸಿಎಂ ಮೇಲೆಯೂ ಮುಗಿಬೀಳಲು ಪ್ಲ್ಯಾನ್ ಮಾಡಲಾಗಿದೆ. ಈ ಮೂಲ ತನಿಖೆಗೆ ಒತ್ತಾಯಿಸಿ ಯಡಿಯೂರಪ್ಪರನ್ನ ಇಕ್ಕಟ್ಟಿಗೆ ಸಿಲುಕಿಸೋದು ಕಾಂಗ್ರೆಸ್, ಜೆಡಿಎಸ್ ತಂತ್ರವಾಗಿದೆ.

  • ಸಾಹುಕಾರನ ರಾಸಲೀಲೆಗೆ ಸಚಿವರ ಸಾಫ್ಟ್ ಕಾರ್ನರ್..!

    ಸಾಹುಕಾರನ ರಾಸಲೀಲೆಗೆ ಸಚಿವರ ಸಾಫ್ಟ್ ಕಾರ್ನರ್..!

    – ಪರೋಕ್ಷವಾಗಿ ಬೆಂಬಲಕ್ಕೆ ನಿಂತ್ರಾ ಮಂತ್ರಿಗಳು..?

    ಬೆಂಗಳೂರು: ಬೆಳಗಾವಿ ಸಾಹುಕಾರನಿಂದ ರಾಜ್ಯ ಬಿಜೆಪಿ ಸರ್ಕಾರ ಮುಜುಗರಕ್ಕೇನೋ ಒಳಗಾಗಿದೆ. ಆದರೆ ಕಮಲಪಾಳಯದ ಮಂತ್ರಿಗಳು ಮಾತ್ರ ರಮೇಶ್ ಜಾರಕಿಹೊಳಿ ಬೆಂಬಲಕ್ಕೆ ನಿಂತಿದ್ದಾರೆ. ಸಿಡಿ ಸಿಡಿತದಿಂದ ಕೆಸರು ಮೆತ್ತಿಕೊಂಡಿದ್ರೂ ಸಚಿವರುಗಳು ಸಮರ್ಥನೆಗೆ ಇಳಿದಿದ್ದಾರೆ.

    ಮೈತ್ರಿ ಸರ್ಕಾರ ಕೆಡವಿ ಬಿಜೆಪಿ ಸರ್ಕಾರದಲ್ಲಿ ಪ್ರಭಾವಿ ಎನಿಸಿಕೊಂಡಿದ್ದ ರಮೇಶ್ ಜಾರಕಿಹೊಳಿ ಕಾಮ ಪುರಾಣದ ಹಿಟ್ ವಿಕೆಟ್‍ಗೆ ಒಳಗಾಗಿದ್ದಾರೆ. ಸಿಡಿ ಕಾಮಕಾಂಡ ಬಯಲಾಗುತ್ತಿದ್ದಂತೆ ಹೈಕಮಾಂಡ್ ಸೂಚನೆ ಮೇರೆಗೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದಾರೆ. ಇತ್ತ ಸಿಎಂ ಯಡಿಯೂರಪ್ಪ, ಸಚಿವರು ಮುಜುಗರಕ್ಕೆ ಒಳಗಾಗಿದ್ದಾರಾದ್ರೂ ಪರೋಕ್ಷವಾಗಿ ಬೆಂಬಲಕ್ಕೆ ನಿಂತಂತೆ ಕಾಣುತ್ತಿದೆ.

    ಬಿಜೆಪಿಯ ಹಲವು ಮಂತ್ರಿಗಳೂ ಸೇರಿದಂತೆ ಯಾವೊಬ್ಬ ನಾಯಕರೂ ಕೂಡ ರಮೇಶ್ ಜಾರಕಿಹೊಳಿ ಪ್ರಕರಣವನ್ನು ನೆಪ ಮಾತ್ರಕ್ಕೂ ತಪ್ಪು ಎನ್ನಲಿಲ್ಲ. ಎಲ್ಲರದ್ದು ಹಾರಿಕೆಯ ಉತ್ತರವೇ ಆಗಿದೆ. ರಮೇಶ್ ಜಾರಕಿಹೊಳಿ ಪ್ರಕರಣದ ಬಗ್ಗೆ ತನಿಖೆ ಆಗ್ಲಿ, ಆಗ ಸತ್ಯಾಸತ್ಯತೆ ಹೊರಬರುತ್ತೆ ಅಂತಾ ಹೇಳಿದ್ರು.

    ಕೆಲವರಂತೂ ರಮೇಶ್ ಜಾರಕಿಹೊಳಿ ತಪ್ಪೇ ಮಾಡಿಲ್ಲ ಎಂದು ಸಮರ್ಥಿಸಿಕೊಂಡರು. ನೈತಿಕವಾಗಿ ಜಾರಕಿಹೊಳಿ ನಿಲ್ಲೋದಾಗಿ ಬಹಿರಂಗವಾಗಿ ಘೋಷಿಸಿದ್ರು. ಕೆಲ ಸಚಿವರು ಮುಜುಗರದಿಂದ ಪ್ರತಿಕ್ರಿಯೆಗೆ ನಿರಾಕರಿಸಿ ಕೈಮುಗಿದ್ರು.

    ಒಟ್ಟಿನಲ್ಲಿ ಸಂಪುಟ ಸಭೆಯಲ್ಲಿ ಸಿಎಂ ಯಡಿಯೂರಪ್ಪ ರಾಸಲೀಲೆ ಪ್ರಕರಣದ ಬಗ್ಗೆ ಬಹಿರಂಗವಾಗಿ ಮಾತನಾಡದಂತೆ ಸೂಚನೆ ನೀಡಿದ್ದಾರೆ ಎನ್ನಲಾಗ್ತಿದೆ. ಹೀಗಾಗಿಯೇ ಬಹುತೇಕ ಸಚಿವರು ಪ್ರಕರಣದ ಬಗ್ಗೆ ತುಟಿಬಿಚ್ಚುತ್ತಿಲ್ಲ. ಆದರೆ ವಾಸ್ತವದಲ್ಲಿ ಬಿಜೆಪಿ ಮುಖಂಡರು ಮುಜುಗರಕ್ಕೆ ಒಳಗಾಗಿರೋದಂತು ಸತ್ಯ.

  • ಏಯ್ ಯಡಿಯೂರಪ್ಪ ನಿಮ್ಮ ಸಿಡಿ ಬಿಟ್ಟುಬಿಡ್ತೀವಿ ಅಂದ್ರಂತೆ: ಸಿದ್ದರಾಮಯ್ಯ

    ಏಯ್ ಯಡಿಯೂರಪ್ಪ ನಿಮ್ಮ ಸಿಡಿ ಬಿಟ್ಟುಬಿಡ್ತೀವಿ ಅಂದ್ರಂತೆ: ಸಿದ್ದರಾಮಯ್ಯ

    ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಪುರಾಣ ರಾಜ್ಯ ರಾಜಕಾರಣದಲ್ಲಿಯೇ ಭಾರೀ ಸಂಚಲನ ಮೂಡಿಸಿದ್ದು, ಕೊನೆಗೂ ಸಾಹುಕಾರ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಆದರೂ ಅವರ ವಿರುದ್ಧ ಟೀಕೆಗಳು ಕೇಳುತ್ತಲೇ ಬರುತ್ತಿವೆ. ಈ ಮಧ್ಯೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಿಎಂ, ನಿನ್ನೆ ಟಿವಿನಲ್ಲಿ ನೋಡಿದ್ರಾ ಒಬ್ಬ ಮಂತ್ರಿ. ನೋಡೋಕೆ ನಾಚಿಕೆ ಹೇಳೋಕೆ ಅಸಹ್ಯವಾಗುತ್ತೆ. ಅವನ ತಮ್ಮ ಹೇಳ್ತಾನಂತೆ ಏಯ್ ಯಡಿಯೂರಪ್ಪ ನನ್ನ ಅಣ್ಣನ ರಾಜೀನಾಮೆ ಪಡೆದರೆ ನಿಮ್ಮ ಸಿಡಿ ಬಿಡಬೇಕಾಗುತ್ತೆ ಅಂತಾನಂತೆ. ಇಂತಹ ಲಜ್ಜೆಗೆಟ್ಟವರೆಲ್ಲಾ ಅಧಿಕಾರದಲ್ಲಿ ಇರಬೇಕಾ ಎಂದು ಪ್ರಶ್ನಿಸಿದ್ದಾರೆ.

    ಕೆಪಿಟಿಸಿಎಲ್‍ನಲ್ಲಿ ಕೆಲಸ ಕೊಡಿಸುವುದಾಗಿ ಆಮಿಷ ಒಡ್ಡಿ ಸಂತ್ರಸ್ತ ಯುವತಿಯನ್ನು ಕಾಮಕ್ರಿಯೆಗೆ ಬಳಸಿಕೊಂಡಿರುವುದಾಗಿ ನಿನ್ನೆ ಸಂಜೆ ದೂರು ಕೊಡಲಾಗಿತ್ತು. ಪೊಲೀಸ್ ಆಯುಕ್ತ ಕಮಲ್ ಪಂತ್ ಸೂಚನೆ ಮೇರೆಗೆ ದಿನೇಶ್ ಕಲ್ಲಹಳ್ಳಿ ಅವರು ನಿನ್ನೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅಲ್ಲದೆ ಸಂತ್ರಸ್ತೆಗೆ ನ್ಯಾಯ ಒದಗಿಸುವಂತೆ ದಿನೇಶ್ ಕಲ್ಲಹಳ್ಳಿ ಮನವಿ ಮಾಡಿದ್ದರು.

    ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಭೇಟಿ ಬಳಿಕ ಮಾತನಾಡಿದ್ದ ದಿನೇಶ್, ಕುಟುಂಬದ ಸದಸ್ಯರೊಬ್ಬರು ಆಗಮಿಸಿ ಸೋಮವಾರ ನನಗೆ ಸಿಡಿ ನೀಡಿದರು. ಕಿರು ಚಿತ್ರ ನಿರ್ಮಾಣಕ್ಕೆಂದು ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಭೇಟಿ ಮಾಡಿದಾಗ ಕೆಪಿಟಿಸಿಎಲ್‍ನಲ್ಲಿ ಕೆಲಸ ನೀಡುವುದಾಗಿ ಹೇಳಿಕೆ ನೀಡಿ, ಲೈಂಗಿಕವಾಗಿ ಬಳಸಿಕೊಂಡಿದ್ದಾರೆ. ಹಲವು ಪ್ರಕರಣಗಳಲ್ಲಿ ನನಗೆ ತುಂಬಾ ನೋವು ಕೊಟ್ಟಿದ್ದಾರೆ. ನನ್ನಿಂದ ಅವರ ವಿರುದ್ಧ ಹೋರಾಟ ಮಾಡಲು ಆಗುತ್ತಿಲ್ಲ. ನ್ಯಾಯ ಕೊಡಿಸಿ ಎಂದು ನನ್ನ ಬಳಿ ಮನವಿ ಮಾಡಿದರು. ನಾನು ನಮ್ಮ ವಕೀಲರ ಜೊತೆ ಚರ್ಚೆ ನಡೆಸಿ, ಇದೀಗ ದೂರು ನೀಡಲು ಬಂದಿದ್ದೇನೆ ಎಂದು ದಿನೇಶ್ ತಿಳಿಸಿದ್ದರು.

    ಈ ವಿಚಾರ ಬಯಲಾಗುತ್ತಿದ್ದಂತೆಯೇ ರಾಜ್ಯ ರಾಜಕಾರಣದಲ್ಲಿ ಅಲ್ಲೋಲಕಲ್ಲೋಲವೇ ಸೃಷ್ಟಿಯಾಯಿತು. ವಿರೋಧ ಪಕ್ಷಗಳು ರಾಜೀನಾಮೆ ನೀಡುವಂತೆ ಪಟ್ಟು ಹಿಡದವು. ಕೊನೆಗೆ ಇಂದು ಮಧ್ಯಾಹ್ನ ರಮೇಶ್ ಜಾರಕಿಹೊಳಿ ಅವರು ಸಿಎಂಗೆ ರಾಜೀನಾಮೆ ಪತ್ರ ರವಾನಿಸಿದ್ದಾರೆ. ಅಲ್ಲದೆ ಪಕ್ಷಕ್ಕೆ ಮುಜುಗರ ಆಗಬಾರದು. ನನ್ನಿಂದ ಸಿಎಂಗೆ ಇರುಸುಮುರುಸು ಆಗಬಾರದು. ಸದನದಲ್ಲಿ ಆಡಳಿತ ಪಕ್ಷಕ್ಕೆ ಮುಜುಗರವಾಗೋದು ಬೇಡ. ಆದರೆ ಈ ಬಗ್ಗೆ ಸೂಕ್ತ ತನಿಖೆಯಾಗಲೇಬೇಕು. ಷಡ್ಯಂತ್ರ ನಡೆದಿರೋ ಬಗ್ಗೆಯೂ ಸಮರ್ಪಕ ವಿಚಾರಣೆಯಾಗಬೇಕು ಎಂದು ಇದೇ ವೇಳೆ ಜಾರಕಿಹೊಳಿ ಸಿಎಂಗೆ ಮನವಿ ಮಾಡಿದ್ದಾರೆ.

  • ಬೆದರಿಕೆ ಕರೆ ಬರುತ್ತಿವೆ, ಸಂತ್ರಸ್ತೆ ಹೊರಗೆ ಬರುತ್ತಿಲ್ಲ, ನಾನೇ ದೂರು ನೀಡಲು ಬಂದೆ: ದಿನೇಶ್ ಕಲ್ಲಹಳ್ಳಿ

    ಬೆದರಿಕೆ ಕರೆ ಬರುತ್ತಿವೆ, ಸಂತ್ರಸ್ತೆ ಹೊರಗೆ ಬರುತ್ತಿಲ್ಲ, ನಾನೇ ದೂರು ನೀಡಲು ಬಂದೆ: ದಿನೇಶ್ ಕಲ್ಲಹಳ್ಳಿ

    ಬೆಂಗಳೂರು: ಬೆದರಿಕೆ ಇರುವುದರಿಂದ ಸಂತ್ರಸ್ತೆ ಎಲ್ಲೂ ಹೊರಗೆ ಬರುತ್ತಿಲ್ಲ. ನನಗೆ ಭಯ ಆಗುತ್ತಿದೆ ದೂರು ನೀಡಿ ಎಂದು ಮನವಿ ಮಾಡಿದರು. ಹೀಗಾಗಿ ನಾನು ದೂರು ನೀಡಲು ಬಂದಿದ್ದೇನೆ ಎಂದು ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಹೇಳಿದ್ದಾರೆ.

    ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಭೇಟಿ ಬಳಿಕ ಮಾತನಾಡಿದ ಅವರು, ಇದು ತುಂಬಾ ಸೂಕ್ಷ್ಮವಾದ ವಿಚಾರ ಆಗಿರುವ ಕಾರಣ ಬಹಿರಂಗಪಡಿಸಲು ಸಾಧ್ಯವಿಲ್ಲ. ಸಂತ್ರಸ್ತೆಗೆ ಭಾರೀ ಪ್ರಮಾಣದಲ್ಲಿ ಬೆದರಿಕೆ ಕರೆಗಳು ಬರುತ್ತಿವೆ. ಒಂದೆರಡು ತಿಂಗಳ ಹಿಂದೆ ಈ ಘಟನೆ ನಡೆದಿದ್ದು, ಬಳಿಕ ಬೆದರಿಕೆ ಕರೆಗಳು ಬರುತ್ತಿವೆ. ಹೀಗಾಗಿ ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡಿದ್ದು, ಕ್ರಮ ಕೈಗೊಳ್ಳುವ ಭರವಸೆ ಇದೆ ಎಂದು ತಿಳಿಸಿದರು.

    ಆಯುಕ್ತರನ್ನು ಭೇಟಿ ಮಾಡಿದ ಬಳಿಕ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ತಿಳಿಸಿದ್ದಾರೆ. ಹೀಗಾಗಿ ದೂರು ನೀಡಲು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ತೆರಳುತ್ತಿದ್ದೇನೆ ಎಂದರು.

    ಕುಟುಂಬದ ಸದಸ್ಯರೊಬ್ಬರು ಆಗಮಿಸಿ ಸೋಮವಾರ ನನಗೆ ಸಿಡಿ ನೀಡಿದರು. ಕಿರು ಚಿತ್ರ ನಿರ್ಮಾಣಕ್ಕೆಂದು ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಭೇಟಿ ಮಾಡಿದಾಗ ಕೆಪಿಟಿಸಿಎಲ್‍ನಲ್ಲಿ ಕೆಲಸ ನೀಡುವುದಾಗಿ ಹೇಳಿಕೆ ನೀಡಿ, ಲೈಂಗಿಕವಾಗಿ ಬಳಸಿಕೊಂಡಿದ್ದಾರೆ. ಹಲವು ಪ್ರಕರಣಗಳಲ್ಲಿ ನನಗೆ ತುಂಬಾ ನೋವು ಕೊಟ್ಟಿದ್ದಾರೆ. ನನ್ನಿಂದ ಅವರ ವಿರುದ್ಧ ಹೋರಾಟ ಮಾಡಲು ಆಗುತ್ತಿಲ್ಲ. ನ್ಯಾಯ ಕೊಡಿಸಿ ಎಂದು ನನ್ನ ಬಳಿ ಮನವಿ ಮಾಡಿದರು. ನಾನು ನಮ್ಮ ವಕೀಲರ ಜೊತೆ ಚರ್ಚೆ ನಡೆಸಿ, ಇದೀಗ ದೂರು ನೀಡಲು ಬಂದಿದ್ದೇನೆ ಎಂದು ತಿಳಿಸಿದರು.

    ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರೊಬ್ಬರು ಈ ರೀತಿ ಮಾಡುವುದು ಅಕ್ಷಮ್ಯ ಅಪರಾಧ, ಈ ಬಗ್ಗೆ ಸಮಗ್ರ ತನಿಖೆಯಾಗಿ ಸೂಕ್ತ ಕ್ರಮ ಕೈಗೊಳ್ಳಬೇಕೆಂಬುದು ನಮ್ಮ ಒತ್ತಾಯವಾಗಿದೆ ಎಂದು ಅವರು ತಿಳಿಸಿದರು. ಪೊಲೀಸರು ಸಂತ್ರಸ್ತೆಯನ್ನು ಕರೆಸುವ ಬಗ್ಗೆ ಚಿಂತನೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.