Tag: CD

  • ರಮೇಶ್ ಜಾರಕಿಹೊಳಿ ಸಿಡಿಕೋರರಿಗೆ ಲಕ್ಷ ಲಕ್ಷ ಪೇಮೆಂಟ್….!

    ರಮೇಶ್ ಜಾರಕಿಹೊಳಿ ಸಿಡಿಕೋರರಿಗೆ ಲಕ್ಷ ಲಕ್ಷ ಪೇಮೆಂಟ್….!

    – ಸುಲಿಗೆಕೋರರ ಮನೆ ಮೇಲೆ ಎಸ್‍ಐಟಿ ದಾಳಿ

    ಬೆಂಗಳೂರು: ರಮೇಶ್ ಜಾರಕಿಹೊಳಿ ಈಗಾಗಲೇ ಹೇಳಿರುವಂತೆ 4 ತಿಂಗಳಿಂದ ಈ ಸಿಡಿ ಬ್ಲಾಕ್‍ಮೇಲ್ ನಡೆದಿದೆ. ವೀಡಿಯೋ ಇಟ್ಟುಕೊಂಡು ರಮೇಶ್ ಬಳಿ ಸುಲಿಗೆಗೆ ಈ ಟೀಂ ಮುಂದಾಗಿತ್ತು ಎನ್ನಲಾಗಿದೆ.

    ಇಂತಿಷ್ಟೇ ಹಣ ಬೇಕು ಅಂತ ಡೀಲ್ ಒಪ್ಪದಿದ್ದಾಗ, ಈ ತಂಡ ಕೊನೆಗೆ ಮಹಾನಾಯಕನ ಜೊತೆ ವ್ಯವಹಾರ ಕುದುರಿಸಿ, ಮಹಾನಾಯಕನ ಸೂಚನೆಯಂತೆ ವೀಡಿಯೋ ರಿಲೀಸ್ ಆಯ್ತಾ ಅನ್ನೋ ಅನುಮಾನ ಎದ್ದಿದೆ. ಈ ಡೀಲ್‍ನಲ್ಲಿ `ಸಿಡಿ’ಗೇಡಿಗಳಿಗೆ ಕಾಂಚಾಣದ ಹೊಳೆಯೇ ಹರಿದಿದೆ. ಸಾಮಾಜಿಕ ಕಾರ್ಯಕರ್ತನಿಗೆ ಸಿಡಿ ಕೊಟ್ಟ ರಾಮನಗರ ಮೂಲದ ಯುವತಿಗೆ 3 ಲಕ್ಷ ನೀಡಿರೋದು ಎಸ್‍ಐಟಿ ತನಿಖೆಯಲ್ಲಿ ಪತ್ತೆಯಾಗಿದೆ. ಸಿಡಿಯ ಕಿಂಗ್‍ಪಿನ್ ಹಾಗೂ ಶಿರಾ ಮೂಲದ ಯುವಕನಿಗೂ ಲಕ್ಷ ಲಕ್ಷ ಸಂದಾಯವಾಗಿದೆ. ಕಾರ್ ಶೋ ರೂಂಗೆ ತೆರಳಿದ್ದ ಶಿರಾದ ಯುವಕ 45 ಲಕ್ಷದ ಫಾಚ್ರ್ಯೂನರ್ ಕಾರ್ ಖರೀದಿಗೆ ಮುಂದಾಗಿದ್ದ ಎನ್ನಲಾಗಿದೆ.

    ಭಾರೀ ಹಣದ ವರ್ಗಾವಣೆ ನಡೆದಿರೋದ್ರಿಂದ ಕಿಂಗ್‍ಪಿನ್‍ಗಳ ಖಾತೆಗಳನ್ನು ಬ್ಲ್ಯಾಕ್ ಮಾಡೋದಕ್ಕೂ ಅಧಿಕಾರಿಗಳು ಮುಂದಾಗಿದ್ದಾರೆ. ಪಬ್ಲಿಕ್‍ಟಿವಿ ಜೊತೆ ಮಾತನಾಡಿರೋ ದಿನೇಶ್ ಕಲ್ಲಹಳ್ಳಿ, ನಿನ್ನೆ ವಿಚಾರಣೆ ನಡೆಸಿದ ಒಬ್ಬ ಮಾತ್ರ ಪರಿಚಯ. ಆದರೆ ಅವನು ನನಗೆ ಸಿಡಿ ತಂದು ಕೊಟ್ಟಿಲ್ಲ. ಸಿಡಿ ತಂದುಕೊಟ್ಟವ ಅಪರಿಚಿತ. ಎಸ್‍ಐಟಿ ನನಗೆ ನೋಟಿಸ್ ಕೊಟ್ಟರೆ ವಿಚಾರಣೆಗೆ ಹಾಜರಾಗ್ತೇನೆ ಅಂತ ಹೇಳಿದ್ರು. ಈ ಮಧ್ಯೆ ಸಿಡಿ ಕೇಸ್ ತನಿಖೆ ಬಗ್ಗೆ ಸಿಎಂ ಯಡಿಯೂರಪ್ಪಗೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮಾಹಿತಿ ನೀಡಿದ್ರು. ಬಳಿಕ ಮಾತನಾಡಿ, ಎಸ್‍ಐಟಿಗೆ ಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದೇವೆ. ತನಿಖೆ ನಡೀತಿರೋದ್ರಿಂದ ಹೆಚ್ಚಿಗೆ ಏನೂ ಮಾತಾಡಲ್ಲ ಅಂದ್ರು.

  • ಯುವತಿ ಹೇಳಿಕೆ ವೀಡಿಯೋ ಬಿಡುಗಡೆಯಾಗಿರುವುದು ಷಡ್ಯಂತ್ರದ ಒಂದು ಭಾಗ: ರಮೇಶ್ ಜಾರಕಿಹೊಳಿ

    ಯುವತಿ ಹೇಳಿಕೆ ವೀಡಿಯೋ ಬಿಡುಗಡೆಯಾಗಿರುವುದು ಷಡ್ಯಂತ್ರದ ಒಂದು ಭಾಗ: ರಮೇಶ್ ಜಾರಕಿಹೊಳಿ

    ಬೆಂಗಳೂರು: ಯುವತಿ ವೀಡಿಯೋ ಸಂದೇಶದ ಮೂಲಕ ಹೇಳಿಕೆ ಬಿಡುಗಡೆ ಮಾಡಿರುವುದು ಷಡ್ಯಂತ್ರದ ಒಂದು ಭಾಗ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಯುವತಿಯ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ್ದಾರೆ.

    ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಇಂದು ದೂರು ನೀಡುತ್ತಿದ್ದಂತೆ, ಪೊಲೀಸರು ಎಫ್‍ಐಆರ್ ದಾಖಲಿಸಿದ್ದು, ಇದರ ಬೆನ್ನಲ್ಲೇ ಯುವತಿ ವೀಡಿಯೋ ಸಂದೇಶದ ಮೂಲಕ ತನ್ನ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾಳೆ. ಈ ಕುರಿತು ಪ್ರತಿಕ್ರಿಯೆ ನೀಡಲು ಒಪ್ಪದ ಸಚಿವರು, ವೀಡಿಯೋ ಬಿಡುಗಡೆಯಾಗಿ 12 ದಿನ ಆಯಿತು. ಇಂದೇ ಏಕೆ ಯುವತಿ ಮಾತನಾಡಿದಳು? ಇದು ಷಡ್ಯಂತ್ರದ ಒಂದು ಭಾಗವಷ್ಟೇ. ಇದರಿಂದ ಯುವತಿ ಎಷ್ಟು ಕೈಗೊಂಬೆ ಆಗಿದ್ದಾಳೆ ಎನ್ನುವುದನ್ನು ತಿಳಿದುಕೊಳ್ಳಬೇಕು ಎಂದು ಹೇಳಿದರು.

    ವೀಡಿಯೋ ಸಂದೇಶವನ್ನು ಬಿಡುಗಡೆ ಮಾಡಿರುವ ಯುವತಿ, ನನಗೆ ಕೆಲಸ ಕೊಡಿಸುವುದಾಗಿ ನಂಬಿಸಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಂಚಿಸಿದ್ದಾರೆ ಎಂದು ಸಿಡಿ ವೀಡಿಯೋದ ಯುವತಿ ಹೇಳಿದ್ದಾಳೆ.. ಇಂದು ವೀಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಸಂತ್ರಸ್ತೆ, ನನಗೆ ಯಾವುದೇ ರಾಜಕೀಯ ನಾಯಕರ ಬೆಂಬಲವಿಲ್ಲ. ರಮೇಶ್ ಜಾರಕಿಹೊಳಿ ವೀಡಿಯೋ ರಿಲೀಸ್ ಮಾಡಿದ್ದಾರೆ. ಈ ವೀಡಿಯೋದಿಂದ ನನ್ನ ಮಾನ ಹರಾಜಾಗಿದೆ. ನನಗೆ ಕೆಲಸ ಕೊಡಿಸೋದಾಗಿ ನಂಬಿಸಿ ಜಾರಕಿಹೊಳಿ ವಂಚಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾಳೆ.

    ನನ್ನ ತಂದೆ, ತಾಯಿ 2 ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ನಾನು ಕೂಡ ಹಲವಾರು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದೇನೆ. ನನಗೆ, ನನ್ನ ಕುಟುಂಬಕ್ಕೆ ರಕ್ಷಣೆ ಕೊಡಿ. ವಿಡಿಯೋ ಹೇಗೆ ಮಾಡಿದ್ದು ಅಂತಾ ನನಗೆ ಗೊತ್ತಿಲ್ಲ ಎಂದು ಯುವತಿ ಹೇಳಿದ್ದಾಳೆ.

  • ಯಶವಂತಪುರದಲ್ಲಿಯೇ ನನ್ನ ವಿರುದ್ಧ ಮಸಲತ್ತು: ರಮೇಶ್ ಜಾರಕಿಹೊಳಿ

    ಯಶವಂತಪುರದಲ್ಲಿಯೇ ನನ್ನ ವಿರುದ್ಧ ಮಸಲತ್ತು: ರಮೇಶ್ ಜಾರಕಿಹೊಳಿ

    ಬೆಂಗಳೂರು: ವಕೀಲರ ಸೂಚನೆಯಂತೆ ದೂರು ಕೊಟ್ಟಿದ್ದೇನೆ. ಇದೊಂದು ರಾಜಕೀಯ ಷಡ್ಯಂತ್ರವಾಗಿದ್ದು, ಯಶವಂತಪುರದಲ್ಲಿಯೇ ನನ್ನ ವಿರುದ್ಧ ಮಸಲತ್ತು ಹೂಡಲಾಗಿದೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

    ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವರು ದೂರು ದಾಖಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಸಿಡಿ ಪ್ರಕರಣ ಸಂಬಂಧ ಈಗಾಗಲೇ ದೂರು ಕೊಟ್ಟಿದ್ದೇನೆ. ವಕೀಲರ ಸೂಚನೆಯ ಮೇರೆಗೆ ಈ ದೂರನ್ನು ನೀಡಿದ್ದೇನೆ ಎಂದು ತಿಳಿಸಿದ್ದಾರೆ.

    ಸಿಡಿ ವಿಚಾರದಲ್ಲಿ ಕಾನೂನು ಹೋರಾಟ ನಡೆಸಲಾಗುತ್ತಿದ್ದು, ಇಂದಿನಿಂದ ಈ ಹೋರಾಟ ಆರಂಭವಾಗಿದೆ. ಎರಡ್ಮೂರು ದಿನಗಳಲ್ಲಿ ತನಿಖೆಯ ಮಾಹಿತಿ ಸಿಗಲಿದೆ. ಸುಲಿಗೆ ಬಗ್ಗೆ ನಾನು ಏನೂ ಹೇಳಲ್ಲ. ಮುಂದಿನ ದಿನಗಳಲ್ಲಿ ಎಲ್ಲರ ಹೆಸರು ಬಹಿರಂಗಪಡಿಸುತ್ತೇನೆ. ಆ ಮಹಾನಾಯಕನ ಹೆಸರನ್ನು ಶೀಘ್ರವೇ ಬಹಿರಂಗಪಡಿಸುತ್ತೇನೆ. ನೂರಾರು ಕೋಟಿ ಷಡ್ಯಂತ್ರ ಮಾಡಿದ್ದಾರೆ ಎಂದು  ಮಾಜಿ ಸಚಿವರು ಹೇಳಿದ್ದಾರೆ.

    ಮಾರ್ಚ್ 2ರಂದು ಮಾಜಿ ಸಚಿವರ ಸಿಡಿ ಬಿಡುಗಡೆಗೊಂಡಿತ್ತು. ಈ ಸಿಡಿ ಹೊರಬರುತ್ತಿದ್ದಂತೆಯೇ ರಾಜ್ಯ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಯಿತು. ಈ ಸಂಬಂಧ ಮಾತನಾಡಿದ್ದ ರಮೇಶ್, ನನ್ನದೇನೂ ತಪ್ಪಿಲ್ಲ. ನಾನು ಯಾವ ತಪ್ಪು ಮಾಡಿಲ್ಲ ಎಂದು ಹೇಳಿಕೆ ನೀಡಿದ್ದರು. ಅದಾದ ಬಳಿಕ ಸಿಡಿ ಬಗ್ಗೆ ಭಾರೀ ಚರ್ಚೆಯಾಗಿತ್ತು. ಶುಕ್ರವಾರವಷ್ಟೇ ಪ್ರಕರಣವನ್ನು ಎಸ್‍ಐಟಿ ತನಿಖೆಗೆ ಒಪ್ಪಿಸುವುದಾಗಿ ಗೃಹ ಸಚಿವ ಬೊಮ್ಮಾಯಿ ಹೇಳಿದ್ದರು. ಅದರಂತೆ ನಿನ್ನೆ ತಾನೇ ಎಸ್‍ಐಟಿ ಟೀಂ ರಚನೆಗೊಂಡಿದ್ದು, ಮೊದಲ ದಿನವೇ ಐವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿತ್ತು.

    ಎಸ್‍ಐಟಿ ತನಿಖೆಯ ಬೆನ್ನಲ್ಲೇ ಇತ್ತ ಇಂದು ಸಂಜೆ ರಮೇಶ್ ಜಾರಕಿಹೊಳಿ ಅವರು ತಮ್ಮ ಆಪ್ತ ನಾಗರಾಜ್ ಮೂಲಕ ಪ್ರಕರಣ ಸಂಬಂಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು,. ಇದೀಗ ಅಪರಿಚಿತರ ಮೇಲೆ ಎಫ್‍ಐಆರ್ ಕೂಡ ದಾಖಲಾಗಿದೆ.

  • ಮಂತ್ರಾಲಯದ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿದ ಸಚಿವ ಅರವಿಂದ ಲಿಂಬಾವಳಿ

    ಮಂತ್ರಾಲಯದ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿದ ಸಚಿವ ಅರವಿಂದ ಲಿಂಬಾವಳಿ

    ರಾಯಚೂರು: ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಮಠದ ವ್ಯಾಪ್ತಿಯಲ್ಲಿ ನಡೆಯುತ್ತಿರುವ ನಾನಾ ಅಭಿವೃದ್ಧಿ ಕಾಮಗಾರಿಗಳನ್ನು ಚುರುಕುಗೊಳಿಸಲು ಅಗತ್ಯ ಸಹಕಾರ ನೀಡುವುದಾಗಿ ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಅರವಿಂದ ಲಿಂಬಾವಳಿ ತಿಳಿಸಿದ್ದಾರೆ.

    ಇಂದು ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಭೇಟಿ ನೀಡಿ, ದರ್ಶನ ಪಡೆದರು. ಈ ವೇಳೆ ಮಠದಿಂದ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದರು. ಈ ಸಮಯದಲ್ಲಿ ಮಂತ್ರಾಲಯ ಗುರು ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿ ಶ್ರೀ ಸುಭುಧೇಂದ್ರ ತೀರ್ಥ ಸ್ವಾಮೀಜಿ ಈ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿದರು.

    ಸಚಿವ ಅರವಿಂದ ಲಿಂಬಾವಳಿ ಮಂತ್ರಾಲಯ ಗುರು ಶ್ರೀ ರಾಘವೇಂದ್ರ ಮಠದ ಅಭಿವೃದ್ಧಿ ಸಮಿತಿ ಸದಸ್ಯರಾಗಿ 2009ರಿಂದಲೂ ಕರ್ತವ್ಯ ನಿರ್ವಹಿಸುತ್ತಿದ್ದು, ಶ್ರೀಮಠದ ಕೆಲಸಗಳಲ್ಲಿ ಸಕ್ರಿಯವಾಗಿದ್ದಾರೆ. ಹೀಗಾಗಿ ಅವರು ಇಂದು ಮಂತ್ರಾಲಯದ ಅಭಿವೃದ್ಧಿ ಕಾರ್ಯಗಳ ವೀಕ್ಷಣೆ ನಡೆಸಿದರು. ನಾನಾ ಹಂತಗಳಲ್ಲಿ ಈ ಕಾಮಗಾರಿಗಳು ನಡೆಯುತ್ತಿದ್ದು, ಹಲವು ಸಮಸ್ಯೆಗಳು ಮತ್ತು ಅಡಚಣೆಗಳಿಂದಾಗಿ ಕೆಲಸ ನಿಧಾನವಾಗುತ್ತಿದೆ ಎಂದು ಸಚಿವರ ಗಮನ ಸೆಳೆದರು. ಇದಕ್ಕೆ ಸ್ಪಂದಿಸಿದ ಸಚಿವರು, ಈ ಬಗ್ಗೆ ಕೂಡಲೇ ಕ್ರಮ ವಹಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಅಗತ್ಯವಿರುವ ಎಲ್ಲ ಸಹಕಾರ ನೀಡುವುದಾಗಿ ತಿಳಿಸಿದರು.

    ಇದೇ ವೇಳೆ ನಾಡಿದ್ದು ಮಂತ್ರಾಲಯದಲ್ಲಿ ಉದ್ಘಾಟನೆ ಆಗಲಿರುವ ಶ್ರೀ ಅಭಯ ಆಂಜನೇಯ ಸ್ವಾಮಿ ದರ್ಶನ ಪಡೆದು, ಕಾಮಗಾರಿಗಳ ಪರಿಶೀಲನೆ ನಡೆಸಿದರು. ಅಲ್ಲದೆ ಉದ್ಘಾಟನಾ ಕಾರ್ಯಕ್ರಮದ ಬಗ್ಗೆ ಸಚಿವರು ಮಾಹಿತಿ ಪಡೆದರು.

  • ರಮೇಶ್ ಜಾರಕಿಹೊಳಿ ದೂರಿನ ಬೆನ್ನಲ್ಲೇ ಎಫ್‍ಐಆರ್ ದಾಖಲು

    ರಮೇಶ್ ಜಾರಕಿಹೊಳಿ ದೂರಿನ ಬೆನ್ನಲ್ಲೇ ಎಫ್‍ಐಆರ್ ದಾಖಲು

    ಬೆಂಗಳೂರು: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಕೊನೆಗೂ ದೂರು ದಾಖಲಿಸಿದ್ದು, ಇದೀಗ ದೂರಿನ ಆಧಾರದ ಮೇಲೆ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.

    ಸಿಡಿ ಹೊರ ಬಿದ್ದ 12 ದಿನಗಳ ನಂತರ ಇಂದು ರಮೇಶ್ ಜಾರಕಿಹೊಳಿ ಅವರು ತಮ್ಮ ಆಪ್ತನ ಮೂಲಕ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಒಂದು ಪುಟದ ದೂರಿನಲ್ಲಿ ಜಾರಕಿಹೊಳಿ ಯಾರ ಹೆಸರನ್ನೂ ಉಲ್ಲೆಖಿಸಿಲ್ಲ. ಅಲ್ಲದೆ ಈ ಪ್ರಕರಣದಲ್ಲಿ ನನ್ನ ತಪ್ಪಿಲ್ಲ. ಇದೊಂದು ನಕಲಿ ಸಿಡಿಯಾಗಿದೆ ಎಂದಿದ್ದಾರೆ. ನಾಲ್ಕು ತಿಂಗಳ ಹಿಂದಿನ ಷಡ್ಯಂತ್ರವನ್ನು ಸಹ ಉಲ್ಲೇಖಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

    ಮಾಜಿ ಸಚಿವರ ಸಿಡಿ ಪ್ರಕರಣವನ್ನು ಎಸ್‍ಐಟಿ ತನಿಖೆಗೆ ಒಪ್ಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಶುಕ್ರವಾರ ವಿಶೇಷ ತನಿಖಾ ತಂಡ ಐವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿತ್ತು. ಇಂದು ಕೂಡ ಎಸ್‍ಐಟಿ ವಿಚಾರಣೆ ಮುಂದುವರಿಸಿದ್ದು, ಈ ಮಧ್ಯೆ ರಮೇಶ್ ಜಾರಕಿಹೊಳಿ ಅವರೇ ಸ್ವತಃ ದೂರು ದಾಖಲಿಸಿದ್ದಾರೆ.

    ಈ ಹಿಂದೆ ಸುದ್ದಿಗೋಷ್ಠಿ ನಡೆಸಿದ್ದ ಜಾರಕಿಹೊಳಿ, ನನ್ನ ಹೆಸರನ್ನು ಕೆಡಿಸಲೆಂದೇ ಸಿಡಿಯನ್ನು ಬಿಡುಗಡೆ ಮಾಡಲಾಗಿದೆ. ಈ ಪ್ರಕರಣದಲ್ಲಿ ಭಾಗಿಯಾದ ಎಲ್ಲರನ್ನೂ ನಾನು ಜೈಲಿಗೆ ಕಳುಹಿಸುತ್ತೇನೆ. ಯಶವಂತಪುರ ಅಪಾರ್ಟ್‍ಮೆಂಟ್ ಮತ್ತು ಹುಳಿಮಾವಿನಲ್ಲಿ ನನ್ನ ವಿರುದ್ಧ ಷಡ್ಯಂತ್ರ ಮಾಡಲಾಗಿದೆ ಎಂದು ಆರೋಪಿಸಿದ್ದರು.

  • ಮಾಜಿ ಸಚಿವರ ಸಿಡಿ ಪ್ರಕರಣ- ಕೊನೆಗೂ ದೂರು ದಾಖಲು

    ಮಾಜಿ ಸಚಿವರ ಸಿಡಿ ಪ್ರಕರಣ- ಕೊನೆಗೂ ದೂರು ದಾಖಲು

    ಬೆಂಗಳೂರು: ಮಾಜಿ ಸಚಿವರ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ದೂರು ದಾಖಲಾಗಿದ್ದು, ಸದಾಶಿವ ನಗರ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

    ಮಾಜಿ ಸಚಿವ ರಮೇಶ್ ಜಾರಕಿಹೊಳಿ ನೀಡಿದ ದೂರನ್ನು ಆಧರಿಸಿ ಪೊಲೀಸರು ಎಫ್‍ಐಆರ್ ದಾಖಲಿಸಿಕೊಳ್ಳಲಿದ್ದು, ಈ ಮೂಲಕ ಸಿಡಿ ಪ್ರಕರಣದ ತನಿಖೆಗೆ ಸ್ಫೋಟಕ ಟ್ವಿಸ್ಟ್ ಸಿಗಲಿದೆ. ಬೆಂಬಲಿಗರ ಮೂಲಕ ರಮೇಶ್ ಜಾರಕಿಹೊಳಿ ದೂರು ದಾಖಲಿಸಿದ್ದು, ದೂರಿನಲ್ಲಿ ಯಾರ ಹೆಸರನ್ನೂ ಉಲ್ಲೇಖಿಸಿಲ್ಲ. ಬ್ಲಾಕ್‍ಮೇಲ್ ಹಾಗೂ ಫೋರ್ಜರಿ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ ನಾಲ್ಕು ತಿಂಗಳ ಹಿಂದಿನ ಷಡ್ಯಂತ್ರವನ್ನು ಸಹ ಉಲ್ಲೇಖಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಜಾರಕಿಹೊಳಿ ಆಪ್ತ ಹಾಗೂ ಮಾಜಿ ಶಾಸಕ ನಾಗರಾಜ್ ಅವರು ರಮೇಶ್ ಜಾರಕಿಹೊಳಿಯವರ ದೂರನ್ನು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

    ಎಫ್‍ಐಆರ್ ದಾಖಲಾಗದಿದ್ದರೆ ತನಿಖೆ ಮುಂದುವರಿಯೋದು ಕಷ್ಟ. ಹೀಗಾಗಿ ಎಫ್‍ಐಆರ್ ದಾಖಲಿಸಲು ಎಸ್‍ಐಟಿ ತಯಾರಿ ನಡೆಸಿತ್ತು. ಅದರಂತೆ ಇಂದು ಮಾಜಿ ಸಚಿವರಿಂದ ದೂರು ಪಡೆದಿದ್ದಾರೆ. ಎಫ್‍ಐಆರ್ ಹಾಕದಿದ್ದರೆ ಕೋರ್ಟಿಗೆ ಹೋಗುವ ಮಾತುಗಳು ಕೇಳಿ ಬರುತ್ತಿದ್ದವು. ಸೋಮವಾರ ಎಸ್‍ಐಟಿ ತನಿಖೆಯ ಬಗ್ಗೆ ಅರ್ಜಿ ಸಲ್ಲಿಕೆಯಾಗಬಹುದು ಎನ್ನಲಾಗಿತ್ತು. ಹೈ ಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಲು ತಯಾರಿ ನಡೆದಿತ್ತು. ಹೀಗಾಗಿ ಎಫ್‍ಐಆರ್ ಮಾಡದಿದ್ದರೆ ತನಿಖೆಗೆ ಹಿನ್ನಡೆಯಾಗುತ್ತೆ ಎಂಬ ಉದ್ದೇಶದಿಂದ ಇಂದು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

  • ಸಿಡಿ ಪ್ರಕರಣದ ಸ್ಫೋಟಕ ಸುದ್ದಿ- 45 ಲಕ್ಷ ನೀಡಿ ಕಾರ್ ಖರೀದಿಗೆ ನಿರ್ಧರಿಸಿದ್ದ ಸಿಡಿಕೋರ

    ಸಿಡಿ ಪ್ರಕರಣದ ಸ್ಫೋಟಕ ಸುದ್ದಿ- 45 ಲಕ್ಷ ನೀಡಿ ಕಾರ್ ಖರೀದಿಗೆ ನಿರ್ಧರಿಸಿದ್ದ ಸಿಡಿಕೋರ

    ಬೆಂಗಳೂರು: ಮಾಜಿ ಸಚಿವರ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಷಣಕ್ಕೊಂದು ಟ್ವಿಸ್ಟ್ ದೊರೆಯುತ್ತಿದ್ದು, ಎಸ್‍ಐಟಿ ಸಹ ಅಷ್ಟೇ ಚುರುಕಾಗಿ ತನಿಖೆ ನಡೆಸುತ್ತಿದೆ. ಇದೇ ವೇಳೆ ಹಲವು ಅಚ್ಚರಿಯ ಮಾಹಿತಿ ಸಹ ಲಭ್ಯವಾಗುತ್ತಿದೆ.

    ಎಸ್‍ಐಟಿ ಅಧಿಕಾರಿಗಳು ತನಿಖೆಯನ್ನು ತೀವ್ರಗೊಳಿಸಿದ್ದು, ಈ ವೇಳೆ ಅಚ್ಚರಿಯ ಮಾಹಿತಿ ಲಭ್ಯವಾಗುತ್ತಿದೆ. ಆರೋಪಿಗಳು ಸಿಡಿ ಇಟ್ಟುಕೊಂಡು ಬೆದರಿಕೆ ಹಾಕಿ ಲಕ್ಷ, ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ಬರೋಬ್ಬರಿ 45 ಲಕ್ಷ ರೂಪಾಯಿಯ ಫಾರ್ಚೂನರ್ ಕಾರು ಖರೀದಿಗೆ ಸಿಡಿಕೋರ ಯತ್ನಿಸಿದ್ದನು. ಈ ಸಿಡಿಕೋರನಿಗೆ ವ್ಯಕ್ತಿ 45 ಲಕ್ಷ ರೂಪಾಯಿ ನಗದು ನೀಡಿದ್ದ. ಇದೇ ಹಣದಲ್ಲಿ ವ್ಯಕ್ತಿ ಫಾರ್ಚೂನರ್ ಕಾರು ಖರೀದಿಗೆ ಯತ್ನಿಸಿದ್ದ, ಆದರೆ ನಗದು ವ್ಯವಹಾರ ಮಾಡುವುದಿಲ್ಲ ಎಂದು ಶೋ ರೂಂ ಸಿಬ್ಬಂದಿ ಹೇಳಿದ್ದಕ್ಕೆ ಕಾರ್ ಖರೀದಿಸಲು ಸಾಧ್ಯವಾಗಿರಲಿಲ್ಲ ಎನ್ನಲಾಗಿದೆ.

    ವೀಡಿಯೋ ಅಪ್‍ಲೋಡ್ ಮಾಡಿದ್ದರ ಬಗ್ಗೆ ಸಹ ಎಸ್‍ಐಟಿಗೆ ಸಾಕ್ಷ್ಯ ಸಿಕ್ಕಿದ್ದು, ಯೂಟ್ಯೂಬ್‍ಗೆ ಅಪ್‍ಲೋಡ್ ಮಾಡಿದ್ದರ ಬಗ್ಗೆ ಪುರಾವೆ ಸಿಕ್ಕಿದೆ. ದೇವನಹಳ್ಳಿಯ ಹ್ಯಾಕರ್ ಮನೆ ಮೇಲೆ ಎಸ್‍ಐಟಿ ದಾಳಿ ಮಾಡಿತ್ತು. ವೀಡಿಯೋ ಅಪ್‍ಲೋಡ್, ಕಂಪ್ಯೂಟರ್, ಹಾರ್ಡ್ ಡಿಸ್ಕ್ ನಲ್ಲಿ ಸಾಕ್ಷ್ಯ ಸಿಕ್ಕಿದೆ. ಅಲ್ಲದೆ ಹ್ಯಾಕ್ ಮಾಡಿದ್ದ ವೆಬ್‍ಸೈಟ್, ಕೆಲ ದಾಖಲೆಗಳೂ ಪೊಲೀಸರಿಗೆ ಲಭ್ಯವಾಗಿವೆ.

    ಮಾಜಿ ಸಚಿವರ ಸಿಡಿ ತಂದುಕೊಟ್ಟವರಿಗೆ ಲಕ್ಷ ಲಕ್ಷ ರೂಪಾಯಿ ದುಡ್ಡು ನೀಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಸಿಡಿ ತೆಗೆದುಕೊಂಡು ಹೋಗಿ ಕೊಟ್ಟ ಐದಾರು ಮಂದಿಗೆ ಲಕ್ಷಗಟ್ಟಲೇ ಹಣ ಸಂದಾಯವಾಗಿದೆ. ಈ ಹಣ ಕೊಟ್ಟಿದ್ದು ಯಾರು? ಆ ಹಣದ ಮೂಲ ಎಲ್ಲಿಯದು ಎಂಬುದನ್ನು ಸಹ ಎಸ್‍ಐಟಿ ಮಾಹಿತಿ ಕಲೆ ಹಾಕುತ್ತಿದೆ.

  • ಎಸ್‍ಐಟಿ ತನಿಖೆ ಆರಂಭವಾಗಿದೆ, ಸದ್ಯದಲ್ಲೇ ಎಲ್ಲಾ ಹೊರಬರಲಿದೆ: ಎಸ್.ಟಿ ಸೋಮಶೇಖರ್

    ಎಸ್‍ಐಟಿ ತನಿಖೆ ಆರಂಭವಾಗಿದೆ, ಸದ್ಯದಲ್ಲೇ ಎಲ್ಲಾ ಹೊರಬರಲಿದೆ: ಎಸ್.ಟಿ ಸೋಮಶೇಖರ್

    ಚಾಮರಾಜನಗರ: ರಮೇಶ್ ಜಾರಕಿಹೊಳಿ ಸಿಡಿ ವಿಚಾರ ಕುರಿತಂತೆ ಶುಕ್ರವಾರದಿಂದ ಎಸ್‍ಐಟಿ ತನಿಖೆ ಆರಂಭವಾಗಿದೆ. ಸದ್ಯದಲ್ಲೇ ಎಲ್ಲವೂ ಹೊರಬರಲಿದೆ ಎಂದು ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಹೇಳಿದ್ದಾರೆ.

    ಚಾಮರಾಜನಗರದಲ್ಲಿ ಮಾತನಾಡಿದ ಅವರು, ಸಿಡಿ ಬಗ್ಗೆ ಹೆಚ್ಚಿನ ವಿಚಾರಗಳಿಗೆ ರಮೇಶ್ ಜಾರಕಿಹೊಳಿ ಅವರನ್ನೇ ಕೇಳಬೇಕು ಎಂದಿದ್ದು, ಮಹಾನಾಯಕ ಯಾರು ಎಂಬ ಪ್ರಶ್ನೆಗೆ ಉತ್ತರಿಸದೆ ನುಣಚಿಕೊಂಡರು.

    ಇದೇ ವೇಳೆ ಮೈಮುಲ್ ಚುನಾವಣೆಗೆ ಮಾಜಿ ಸಿಎಂ ಹೆಚ್.ಡಿ.ಕೆ. ಎಂಟ್ರಿ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಸಹಕಾರಿ ಸಂಸ್ಥೆಗಳಲ್ಲಿ ರಾಜಕೀಯ ಇರಬಾರದು. ಯಾರೋ ಪುಣ್ಯಾತ್ಮರು ಸಹಕಾರಿ ಚಳವಳಿ ಕಟ್ಟಿದ್ದಾರೆ. ಇದರಲ್ಲಿ ರಾಜಕೀಯ ಬೆರೆಸಿ ಹಾಳುಮಾಡುವುದು ಸರಿಯಲ್ಲ. ಸಹಕಾರಿ ಚುನಾವಣೆಯ ವಿಚಾರವನ್ನು ಸ್ಥಳೀಯರಿಗೆ ಬಿಟ್ಟುಬಿಡಬೇಕು ಎಂದು ಮಾಜಿ ಸಿಎಂ ಹೆಚ್.ಡಿ.ಕೆ.ಗೆ ಟಾಂಗ್ ನೀಡಿದರು.

    ಹಾಲು ಒಕ್ಕೂಟಗಳಲ್ಲಿ ಭ್ರಷ್ಟಾಚಾರ ಎಂಬ ಹೆಚ್.ಡಿ.ಕೆ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಸೋಮಶೇಖರ್, ಅವರು ಮಾಜಿ ಸಿಎಂ ಆಗಿದ್ದವರು. ಸಹಕಾರಿ ಕ್ಷೇತ್ರದ ಬಗ್ಗೆ ಅವರಿಗಿಂತ ಅವರ ಅಣ್ಣ ಹೆಚ.ಡಿ.ರೇವಣ್ಣ ಅವರಿಗೆ ಗೊತ್ತಿದೆ. ಅವರು ಹೇಳುವ ರೀತಿ ಯಾವ ಭ್ರಷ್ಟಾಚಾರವೂ ನಡೆಯುತ್ತಿಲ್ಲ. ಹಾಲು ಒಕ್ಕೂಟಗಳು ಲಕ್ಷಾಂತರ ರೈತರಿಗೆ ಅನುಕೂಲ ಮಾಡಿಕೊಡುತ್ತಿವೆ. ಇಲ್ಲಿ ಭ್ರಷ್ಟಾಚಾರ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

  • ಚಡ್ಡಿ, ಪ್ಯಾಂಟ್ ಬಿಚ್ಚೋದು ನೋಡಿರೋರು ಚನ್ನಪಟ್ಟಣದವರಲ್ವ, ಅವರನ್ನೇ ಕೇಳಿ: ಡಿಕೆ ಸುರೇಶ್

    ಚಡ್ಡಿ, ಪ್ಯಾಂಟ್ ಬಿಚ್ಚೋದು ನೋಡಿರೋರು ಚನ್ನಪಟ್ಟಣದವರಲ್ವ, ಅವರನ್ನೇ ಕೇಳಿ: ಡಿಕೆ ಸುರೇಶ್

    ರಾಮನಗರ: ಚಡ್ಡಿ, ಪ್ಯಾಂಟ್ ಬಿಚ್ಚೋದು ನೋಡಿರೋರು ಜೊತೆಯಲ್ಲಿದ್ದವರು. ಜೊತೆಯಲ್ಲಿದ್ದವರೇ ಅದನ್ನ ನೋಡಲು ಸಾಧ್ಯ, ಬೇರೆಯವರಿಂದ ಹೇಗೆ ಸಾಧ್ಯ. ಅವರ ಜೊತೆಯಲ್ಲಿದ್ದವರು ಚನ್ನಪಟ್ಟಣದವರು ಅಲ್ವ, ಅವರನ್ನೇ ಕೇಳಿ ಎಂದು ಸಂಸದ ಡಿ.ಕೆ ಸುರೇಶ್ ಟಾಂಗ್ ನೀಡಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಮಾಜಿ ಸಚಿವರ ಸಿಡಿ ಪ್ರಕರಣ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದರು. ಸಿಡಿ ಪ್ರಕರಣದಲ್ಲಿ ಚನ್ನಪಟ್ಟಣದವರದ್ದು ಪಾತ್ರ ಇದೆ. ಚನ್ನಪಟ್ಟಣದವರಿಗೆ ಅಧಿಕಾರದ ಮೇಲೆ ಆಸೆಯಿತ್ತಲ್ಲ. ಹಾಗಾಗಿ ಈ ಪ್ರಕರಣದಲ್ಲಿ ಅವರದ್ದು ಭಾಗಿ ಇದೆ ಎಂದು ಆರೋಪಿಸಿದರು.

    ಕನಕಪುರದವರದ್ದು ಆಸೆಯಿದ್ದ ಮೇಲೆ, ಚನ್ನಪಟ್ಟಣದವರದ್ದು ಇಲ್ವಾ. ಚಡ್ಡಿ, ಪ್ಯಾಂಟ್ ಬಿಚ್ಚೋದು ನೋಡಲು ಜೊತೆಯಲ್ಲಿದ್ದವರಿಂದ ಮಾತ್ರ ಸಾಧ್ಯ, ಬೇರೆಯವರಿಂದ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಅಲ್ಲದೆ ಅವರ ಜೊತೆಯಲ್ಲಿದ್ದವರು ಚನ್ನಪಟ್ಟಣದವರು ಅಲ್ವ, ಅವರನ್ನೇ ಕೇಳಿ ಎಂದರು.

    ಈ ಹಿಂದೆ ಮಾತನಾಡಿದ್ದ ಸಿ.ಪಿ ಯೋಗೇಶ್ವರ್ ಅವರು, ಸಿಡಿ ಪ್ರಕರಣದಲ್ಲಿ ಕನಕಪುರ, ಬೆಳಗಾವಿಯವರ ಪಾತ್ರ ಇದೇ ಎಂದಿದ್ದರು. ಇದೀಗ ಸಂಸದರು ಇದೇ ಹೇಳಿಕೆಯನ್ನಿಟ್ಟುಕೊಂಡು ಟಾಂಗ್ ನೀಡಿದ್ದಾರೆ.

    ಒಟ್ಟಿನಲ್ಲಿ ಮಾಜಿ ಸಚಿವರ ಸಿಡಿ ಪ್ರಕರಣವನ್ನು ಕೈಗೆತ್ತಿಕೊಂಡ ಮೊದಲ ದಿನವಾದ ಇಂದು ಎಸ್‍ಐಟಿ ಭರ್ಜರಿ ಬೇಟೆಯಾಡಿದ್ದು, ಓರ್ವ ಯುವತಿ ಹಾಗೂ ನಾಲ್ವರು ಯುವಕರನ್ನು ವಶಕ್ಕೆ ಪಡೆದಿದೆ. ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಎಸ್‍ಐಟಿ, ಇಂದು ಒಟ್ಟು 5 ಜನರನ್ನು ಬೇಟೆಯಾಡಿದೆ. ಇದರಲ್ಲಿ ಓರ್ವ ಯುವತಿ, ನಾಲ್ವರು ಯವಕರು ಸೇರಿದ್ದಾರೆ. ಆರಂಭದಲ್ಲಿ ಯಶವಂತಪುರದಲ್ಲಿ ಓರ್ವನನ್ನು ವಶಕ್ಕೆ ಪಡದು ವಿಚಾರಣೆ ನಡೆಸಲಾಗಿತ್ತು. ತೀವ್ರ ವಿಚಾರಣೆಗೊಳಪಡಿಸಿ ಮಾಹಿತಿ ಕಲೆ ಹಾಕಿದ್ದು ಬಳಿಕ ನಾಲ್ವರನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದೆ.

  • ಸಿಡಿ ತಯಾರಿಸುವ ಗ್ಯಾಂಗ್‍ಗಳಿವೆ, ಯುವರಾಜ್ ಬಂಧನವಾಗಿದ್ದೂ ಇದೇ ಕಾರಣಕ್ಕೆ: ಯತ್ನಾಳ್

    ಸಿಡಿ ತಯಾರಿಸುವ ಗ್ಯಾಂಗ್‍ಗಳಿವೆ, ಯುವರಾಜ್ ಬಂಧನವಾಗಿದ್ದೂ ಇದೇ ಕಾರಣಕ್ಕೆ: ಯತ್ನಾಳ್

    – ಪರೋಕ್ಷವಾಗಿ ಸಿಎಂ, ವಿಜಯೇಂದ್ರ ವಿರುದ್ಧ ವಾಗ್ದಾಳಿ

    ವಿಜಯಪುರ: ಬೆಂಗಳೂರಿನಲ್ಲಿ ಕೆಲವು ಜನ ಬ್ಲ್ಯಾಕ್ ಮೇಲ್ ಆರಂಭಿಸಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ಸಿಎಂ ಯಡಿಯೂರಪ್ಪ ಹಾಗೂ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿಜಯೇಂದ್ರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಸಿಡಿ ತಯಾರಿಸುವ ಗ್ಯಾಂಗ್‍ಗಳಿವೆ. ಬ್ಲ್ಯಾಕ್ ಮೇಲ್ ಮಾಡುವುದು ಅವರ ರಾಜಕೀಯ ವಿರೋಧಿಗಳಿಗೆ ನೀಡುವುದು ನಡೆಯುತ್ತಿದೆ. ಯುವರಾಜ್ ಬಂಧನವೂ ಇದೇ ಕಾರಣಕ್ಕಾಗಿ ನಡೆದಿದೆ. ಎಷ್ಟೋ ರಾಜಕಾರಣಿಗಳು ಯುವರಾಜ್ ಗೆ ಎಂಪಿ, ರಾಜ್ಯಸಭೆ ಸದಸ್ಯ, ಸಚಿವರಾಗಲು ಕೋಟ್ಯಂತರ ರೂಪಾಯಿ ಹಣ ನೀಡಿದ್ದಾರೆ. ಯುವರಾಜ ಸಿಎಂ ಮನೆಯಲ್ಲಿಯೇ ಇರುತ್ತಿದ್ದ. ಈಗ ನೂರಾರು ಕೋಟಿ ರೂಪಾಯಿ ಮನುಷ್ಯನಾಗಿದ್ದಾನೆ ಎಂದರು.

    ಮನೆಗೆ ಹೋದವರಿಗೆ ಬೆಳ್ಳಿತಟ್ಟೆ, ಬೆಳ್ಳಿ ಗ್ಲಾಸಿನಲ್ಲಿ ಊಟ ಮಾಡಿಸುತ್ತಿದ್ದ ಬ್ಲ್ಯಾಕ್ ಮೇಲರ ಈತ. ಬಿಜೆಪಿ ರಾಷ್ಟ್ರೀಯ ನಾಯಕರ ಜೊತೆಗಿನ ಫೋಟೋಗಳು ವೈರಲ್ ಆಗಿವೆ. ಆದರೆ ಸಿಎಂ, ವಿಜಯೇಂದ್ರ ಜೊತೆಗಿನ ಒಂದೂ ಫೋಟೋ ಹೊರ ಬರಲಿಲ್ಲ ಪರೋಕ್ಷವಾಗಿ ಸಿಎಂ ಹಾಗೂ ವಿಜಯೇಂದ್ರ ವಿರುದ್ಧ ಹರಿಹಾಯ್ದರು.

    ಸಿಡಿ ಬಹಿರಂಗದಲ್ಲಿ ಕಾಂಗ್ರೆಸ್ ಕೈವಾಡದ ಕುರಿತು ಸಚಿವ ಎಸ್.ಟಿ.ಸೋಮಶೇಖರ್ ಮಾತಿನಲ್ಲಿ ನಿಜಾಂಶವಿದೆ. ಅವರು 20-25 ವರ್ಷಗಳ ಅನುಭವದಲ್ಲಿ ಇದನ್ನು ಹೇಳಿದ್ದಾರೆ. ಅವರ ಮಾತು, ಅನುಭವದಲ್ಲಿ ಅಮೃತವಿದೆ ಎಂಬಂತಿದೆ. ಏಕೆಂದರೆ ಕಾಂಗ್ರೆಸ್ ಸಂಸ್ಕೃತಿ ಬಗ್ಗೆ ಅವರಿಗೆ ಗೊತ್ತಿದೆ. ಕಾಂಗ್ರೆಸ್ಸಿಗೆ ಕೆಟ್ಟ ಕೆಲಸ ಮಾಡುವ ಬಗ್ಗೆ ಭಯ ಬಂದಿದೆ. ಕಾಂಗ್ರೆಸ್ ರಾಜ್ಯಕ್ಕೆ ಕೆಟ್ಟ ನಾಯಕತ್ವ ನೀಡಿದ್ದು ದುರ್ದೈವ ಎಂದು ಪರೋಕ್ಷವಾಗಿ ಡಿಕೆಶಿಗೆ ಟಾಂಗ್ ನೀಡಿದರು.

    ಸಿಡಿ ಪ್ರಕರಣದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದಂತೆ ಸೂಚನೆ ನೀಡಲಾಗಿದೆ. ರಾಜ್ಯದಲ್ಲಿ ಸಿಡಿ ತಯಾರಿಸುವ ಫ್ಯಾಕ್ಟರಿಗಳಿವೆ. ರಾಜ್ಯದಲ್ಲಿ ಸಿಡಿ ತಯಾರಿಸುವ ಇಬ್ಬರು ವ್ಯಕ್ತಿಗಳಿ ದ್ದಾರೆ. ಓರ್ವ ಬಿಜೆಪಿಯಲ್ಲಿ ಮತ್ತೋರ್ವ ಕಾಂಗ್ರೆಸ್ಸಿನಲ್ಲಿದ್ದಾರೆ ಎಂದರು.