Tag: CD case

  • ನನ್ನ ಸಿ.ಡಿ ಮಾಡಿಸಿದ್ದೇ ಡಿಕೆಶಿ, ಪ್ರಕರಣ ಸಿಬಿಐಗೆ ವಹಿಸಿ: ಜಾರಕಿಹೊಳಿ ಆಗ್ರಹ

    ನನ್ನ ಸಿ.ಡಿ ಮಾಡಿಸಿದ್ದೇ ಡಿಕೆಶಿ, ಪ್ರಕರಣ ಸಿಬಿಐಗೆ ವಹಿಸಿ: ಜಾರಕಿಹೊಳಿ ಆಗ್ರಹ

    ಬೆಳಗಾವಿ: ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (DK Shivakumar) ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ (Ramesh Jarakiholi) ಮಧ್ಯೆ ಮತ್ತೆ ಸಿಡಿ ಕದನ ಶುರುವಾಗಿದೆ. ಸಿಡಿ ಕೇಸ್ (CD Case) ಮುನ್ನೆಲೆಗೆ ತರುವ ಮೂಲಕ ಡಿಕೆಶಿ ಹಣಿಯಲು ರಮೇಶ್ ಜಾರಕಿಹೊಳಿ ಹೊಸ ಪ್ಲಾನ್ ಮಾಡಿದ್ದಾರೆ.

    ಸಿಡಿ ಕೇಸ್ ಸಿಬಿಐಗೆ ಕೊಡುವಂತೆ ಹಳೆಯ ಆಗ್ರಹಕ್ಕೆ ಮತ್ತೆ ಮರುಜೀವ ಕೊಟ್ಟಿದ್ದಾರೆ. ಈ ಮೂಲಕ ಡಿಕೆಶಿ ವಿರುದ್ಧ ಮತ್ತೊಂದು ಹಂತದ ಹೋರಾಟಕ್ಕೆ ಸಾಹುಕಾರ್ ಧುಮುಕಿದ್ದಾರೆ. ಸಿಡಿ ಕೇಸನ್ನು ಸಿಬಿಐಗೆ (CBI) ಕೊಡಿಸಿ ಡಿಕೆಶಿಯನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ಲ್ಯಾನ್ ಮಾಡಿದ್ದಾರೆ. ಹೀಗಾಗಿ ಫ್ಯಾಕ್ಸ್ ಮೂಲಕ ಸಿಎಂಗೆ ಪತ್ರ ಕಳಿಸಿ ಸಿಬಿಐ ತನಿಖೆಗೆ ಒತ್ತಾಯ ಮಾಡಿದ್ದಾರೆ. ಇಲ್ಲದಿದ್ರೆ ಹೈಕೋರ್ಟ್ ಅಥವಾ ಸುಪ್ರೀಂಕೋರ್ಟ್‍ಗೆ ಹೋಗೋದಾಗಿಯೂ ಜಾರಕಿಹೊಳಿ ವಾನಿರ್ಂಗ್ ಮಾಡಿದ್ದಾರೆ. ಇದನ್ನೂ ಓದಿ: ನನ್ನ ಹೆಸರು ಕೆಡಿಸಿದ್ದಕ್ಕೆ ಬರಗಾಲ ಬಂದಿದೆ: ರಮೇಶ್ ಜಾರಕಿಹೊಳಿ

    ಬಿಜೆಪಿ ಸರ್ಕಾರ ಇದ್ದಾಗಲೂ ಸಿಡಿ ಕೇಸ್ ಸಿಬಿಐಗೆ ಕೊಡುವಂತೆ ಜಾರಕಿಹೊಳಿ ಪಟ್ಟು ಹಿಡಿದಿದ್ದರು. ಆದ್ರೆ ಅಂದು ಅದು ಆಗಿಲ್ಲ, ಈಗ ಮತ್ತೆ ಅದೇ ಒತ್ತಾಯ ಮಾಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವಿಜಯ ಸಂಕಲ್ಪ ಯಾತ್ರೆ ಬದಲು CD ಯಾತ್ರೆ ಮಾಡಿ: HDK

    ವಿಜಯ ಸಂಕಲ್ಪ ಯಾತ್ರೆ ಬದಲು CD ಯಾತ್ರೆ ಮಾಡಿ: HDK

    ಬೆಂಗಳೂರು: ಈ ಬಾರಿಯ ಚುನಾವಣೆಯಲ್ಲಿ (Karnataka Assembly Election 2023) ಸಿಡಿಗಳೇ ಬ್ರಹ್ಮಾಸ್ತ್ರಗಳಾಗುವ ಎಲ್ಲಾ ಸಾಧ್ಯತೆಗಳು ದಟ್ಟವಾಗುತ್ತಿದೆ.

    ಪ್ರಹ್ಲಾದ್ ಜೋಶಿ (Pralhad Joshi)  ವಿರುದ್ಧ ವಾಗ್ದಾಳಿ ನಡೆಸಿರುವ ಕುಮಾರಸ್ವಾಮಿಗೆ (H.D Kumaraswamy)  ಟಕ್ಕರ್ ಕೊಡುವ ಭರದಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ (N.Ravikumar) ಅವರು ಹೆಚ್‍ಡಿಕೆ ಮೇಲೆ ಮತ್ತೊಂದು ಸಿಡಿ ಬಾಂಬ್ ಸಿಡಿಸಿದ್ದಾರೆ. ಹೆಚ್‍ಡಿಕೆ ತಾಜ್ ವೆಸ್ಟೆಂಡ್ ಹೊಟೇಲ್, ಅವರ ಮನೆ, ತೋಟದ ಮನೆ, ಇವೆಲ್ಲ ಪ್ರಕರಣಗಳ ಬಗ್ಗೆ ನಮಗೂ ಗೊತ್ತಿದೆ. ಅವರು ಮಾತಾಡಲಿ, ಅವರು ಇದೇ ರೀತಿ ಮುಂದುವರಿದರೆ ನಾವೂ ಮಾತಾಡ್ತೀವಿ. ನಾವೂ ರಾಜಕಾರಣ ಮಾಡಲು ಬಂದವರು. ಅವರೇನು ಹರಿಶ್ಚಂದ್ರ ಅಲ್ಲ, ನಾವೂ ಮಾತಾಡ್ತೇವೆ ಅಂತ ಗುಡುಗಿದ್ದಾರೆ.

    ಹೆಚ್‍ಡಿಕೆ ಸ್ವಜಾತಿ ಕೂಪಿಷ್ಟ ಅಂತ ಜರಿದಿದ್ದಾರೆ. ಇದಕ್ಕೆ ತಿರುಗೇಟು ಕೊಟ್ಟಿರುವ ಕುಮಾರಸ್ವಾಮಿ, ಸಿಡಿಯಲ್ಲಿ ರವಿಕುಮಾರ್ ಎಕ್ಸ್‌ಪರ್ಟ್‌ ಇದ್ದಾರೆ. ವಿಜಯ ಸಂಕಲ್ಪ ಯಾತ್ರೆ ಬದಲು ಸಿಡಿ ಯಾತ್ರೆ ಮಾಡಿ. ಅದನ್ನು ತೋರಿಸಿಕೊಂಡು ಓಡಾಡಿ. ನಾಲ್ಕು ವರ್ಷದ ಹಿಂದಿನ ಸಿಡಿ ಯಾತ್ರೆ ಮಾಡಿ. ಬಿಜೆಪಿಯವರು ಈ ರಾಜ್ಯ ಲೂಟಿ ಮಾಡಿದ್ದಾರೆ. ಬಿಜೆಪಿಯನ್ನು (BJP) ರಾಜ್ಯದಿಂದ ಜನ ಹೊರಗೆ ಕಳುಹಿಸಲಿದ್ದಾರೆ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

    ಈ ಬಗ್ಗೆ ವಾಗ್ದಾಳಿ ಮುಂದುವರಿಸಿದ ಎನ್. ರವಿಕುಮಾರ್, ರಾಜ್ಯದ ಅತ್ಯಂತ ಸ್ವಾರ್ಥ ರಾಜಕಾರಣಿ ಹೆಚ್‍ಡಿಕೆ. ನಮ್ಮನೆ ಬಾಗಿಲಿಗೆ ಎಲ್ರೂ ಬರಬೇಕು ಅನ್ಕೊಂಡಿರೋರು. ಪ್ರಹ್ಲಾದ್ ಜೋಶಿ ಅವರು ಸರಿಯಾಗಿ ಹೇಳಿದ್ದಾರೆ. ರಾಜ್ಯದಲ್ಲಿ ಸ್ಮಾರ್ಥ ಬ್ರಾಹ್ಮಣರು, ಪೇಶ್ವೆ ಬ್ರಾಹ್ಮಣರು ಅಂತ ಇಲ್ಲ. ಮಹಾರಾಷ್ಟ್ರದಲ್ಲಿ ಇರೋದು. ಕುಮಾರಸ್ವಾಮಿ ಪಿಎಚ್‍ಡಿ ಮಾಡಿದ್ದಾರಾ? ಕುಮಾರಸ್ವಾಮಿ ಕಿರುಕುಳಕ್ಕೆ ಬ್ರಾಹ್ಮಣ ವೈಎಸ್‍ವಿ ದತ್ತಾ ಪಕ್ಷ ಬಿಟ್ ಹೋಗಿದ್ದಾರೆ. ಬ್ರಾಹ್ಮಣರು ಸಿಎಂ, 8 ಜನ ಡಿಸಿಎಂ ಮಾಡೋ ಬಗ್ಗೆ ಚರ್ಚೆ ಆಗಿಲ್ಲ, ಆ ರೀತಿ ಏನೂ ಇಲ್ಲ. ಬಿಜೆಪಿ ಅಧಿಕಾರಕ್ಕೆ ಬರುತ್ತೆ ಎಂದು ಹೆಚ್‍ಡಿಕೆ ಭಯದಿಂದ ಚಡಪಡಿಸ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಡಿಕೆಶಿ ಸಹ ಲಿಮಿಟ್ ಮೀರಬಾರದು, ಪಕ್ಷಕ್ಕೆ ಡ್ಯಾಮೇಜ್ ಆಗುತ್ತೆ – ಸತೀಶ್ ಜಾರಕಿಹೋಳಿ

    ಡಿಕೆಶಿ ಸಹ ಲಿಮಿಟ್ ಮೀರಬಾರದು, ಪಕ್ಷಕ್ಕೆ ಡ್ಯಾಮೇಜ್ ಆಗುತ್ತೆ – ಸತೀಶ್ ಜಾರಕಿಹೋಳಿ

    ಬೆಂಗಳೂರು: ರಮೇಶ್ ಜಾರಕಿಹೋಳಿ (Ramesh Jarkiholi) ಮತ್ತು ಡಿಕೆ ಶಿವಕುಮಾರ್ (DK Shivakumar) ಇಬ್ಬರು ಯಾವುದೇ ವಿಚಾರದಲ್ಲಿ ಲಿಮಿಟ್ ಮೀರಿ ಹೋಗಬಾರದು ಅಂತಾ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೋಳಿ (Satish Jarkiholi) ಸಲಹೆ ನೀಡಿದ್ದಾರೆ.

    `ವಿಷಕನ್ಯೆ'ಯಿಂದ ಕಾಂಗ್ರೆಸ್ ಹಾಳಾಗ್ತಿದೆ, ಡಿಕೆಶಿ ಗರ್ಲ್‌ಫ್ರೆಂಡ್‌ ಜೊತೆ ಮಾತನಾಡಿದ ಆಡಿಯೋ ಇದೆ: ಜಾರಕಿಹೊಳಿ

    ಡಿಕೆ ಶಿವಕುಮಾರ್, ರಮೇಶ್ ಜಾರಕಿಹೊಳಿ ನಡುವಿನ ಸಿಡಿ ಕದನ (CD Case) ವಿಚಾರವಾಗಿ ಮಾತನಾಡಿದ ಅವರು, ಯಾರೂ ಕೂಡ ವೈಯಕ್ತಿಕ ಟೀಕೆ ಮಾಡಬಾರದು. ರಮೇಶ್ ಇರಬಹುದು, ಡಿಕೆಶಿ ಇರಬಹುದು ಯಾರೇ ಆಗಲಿ. ಒಂದು ಲಿಮಿಟ್ ನಲ್ಲಿ ಹೇಳಿಕೆ ನೀಡಿದರೆ ಒಳ್ಳೆಯದು ಎಂದು ಸಲಹೆ ನೀಡಿದರು. ಇದನ್ನೂ ಓದಿ: ನನಗೆ ಸಚಿವ ಸ್ಥಾನ ಬೇಡ, ನನ್ನನ್ನ ಮಂತ್ರಿ ಮಾಡುವ ಅವಶ್ಯಕತೆ ಇಲ್ಲ – ಈಶ್ವರಪ್ಪ

    ಹೇಳಿಕೆ ನೀಡುವುದು ಆರೋಪ ಮಾಡುವುದು ದೊಡ್ಡದಲ್ಲ. ಆದರೆ ಅದರಿಂದ ವೈಯಕ್ತಿಕವಾಗಿ ಪಕ್ಷಕ್ಕೂ ಡ್ಯಾಮೇಜ್ ಆಗುತ್ತದೆ. ವೈಯಕ್ತಿಕವಾಗಿಯೂ ನಷ್ಟವಾಗುತ್ತದೆ. ರಮೇಶ್ ದೆಹಲಿ ಭೇಟಿ ಬಗ್ಗೆ ಪತ್ರಿಕೆಯಲ್ಲಿ ನೋಡಿದೆ. ನಾನೂ ಮಾಧ್ಯಮಗಳ ಮೂಲಕ ರಮೇಶ್‌ಗೆ ಕಿವಿಮಾತು ಹೇಳ್ತೇನೆ. ಯಾವುದೂ ಲಿಮಿಟ್ ಮೀರಿ ಹೋಗುವುದು ಬೇಡ. ಎಲ್ಲವೂ ಕಾನೂನು ಚೌಕಟ್ಟಿನಲ್ಲಿಯೇ ಇರಬೇಕು. ಕಾನೂನು ಹೋರಾಟ ಮಾಡುವುದಕ್ಕೆ ಎಲ್ಲರಿಗೂ ಅವಕಾಶ ಇದೆ ಅಂತಾ ತಿಳಿಸಿದರು. ಇದನ್ನೂ ಓದಿ: ಇಂದಿನಿಂದ ಸಿದ್ದು-ಡಿಕೆಶಿ `ಪ್ರಜಾಧ್ವನಿ’ ಬಸ್ ಯಾತ್ರೆ – ಕಾಂಗ್ರೆಸ್‌ನಲ್ಲಿ ಅಸಮಾಧಾನ ಸ್ಫೋಟ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನನಗೆ ಸಚಿವ ಸ್ಥಾನ ಬೇಡ, ನನ್ನನ್ನ ಮಂತ್ರಿ ಮಾಡುವ ಅವಶ್ಯಕತೆ ಇಲ್ಲ – ಈಶ್ವರಪ್ಪ

    ನನಗೆ ಸಚಿವ ಸ್ಥಾನ ಬೇಡ, ನನ್ನನ್ನ ಮಂತ್ರಿ ಮಾಡುವ ಅವಶ್ಯಕತೆ ಇಲ್ಲ – ಈಶ್ವರಪ್ಪ

    ಬೆಂಗಳೂರು: ನನಗೆ ಸಚಿವ ಸ್ಥಾನ ಬೇಡ, ಇನ್ನು ನನ್ನನ್ನು ಮಂತ್ರಿ ಮಾಡುವ ಅವಶ್ಯಕತೆಯೂ ಇಲ್ಲ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ (KS Eshwarappa) ಹೇಳಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನನ್ನು ಮಂತ್ರಿ ಮಾಡುವ ಅವಶ್ಯಕತೆ ಇಲ್ಲ. ಇದನ್ನು ಬಸವರಾಜ ಬೊಮ್ಮಾಯಿ (Basavaraj Bommai) ಅವರಿಗೆ ತಿಳಿಸಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: ಅಮೆರಿಕದ ಅಣ್ವಸ್ತ್ರ ತಾಣದ ಮೇಲೆ ಚೀನಾದ ಬೇಹುಗಾರಿಕಾ ಬಲೂನು ಹಾರಾಟ

    ಸಂತೋಷ್ ಪಾಟೀಲ್ (Santosh Patil) ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಅಂತಾ ಯಾರಿಗೂ ಕನಸು ಬಿದ್ದಿರಲಿಲ್ಲ. ಅವರು ಮಲಗಿದ್ದು ಒಂದು ಕಡೆ. ಪತ್ರ ಸಿಕ್ಕಿದ್ದು ಮತ್ತೊಂದು ಕಡೆ. ಆದ್ರೂ ನನಗೆ ಕ್ಲಿನ್ ಚಿಟ್ ಸಿಕ್ಕಿದೆ. ಬಳಿಕ ಕಾರ್ಯಕರ್ತರ ಅಪೇಕ್ಷೆ ಮೇರೆಗೆ ಸಂಪುಟ ವಿಸ್ತರಣೆ ಮಾಡುವಂತೆ ಸಿಎಂಗೆ ಮನವಿ ಮಾಡಿದ್ದೆ. ಸಿಎಂ ಮಂತ್ರಿಮಾಡ್ತೀನಿ ಅಂತಾ ಭರವಸೆ ನೀಡಿದ್ರು. ಆದ್ರೆ ಈಗ ಅವರಿಗೆ ಏನೇನು ಸಮಸ್ಯೆ ಇದೆಯೋ ಅನ್ನೋದು ಗೊತ್ತಿಲ್ಲ. ಪಕ್ಷ ಮತ್ತು ಸರ್ಕಾರಕ್ಕೆ ಸಮಸ್ಯೆ ಮಾಡಲು ನಾನು ತಯಾರಿಲ್ಲ. ನಾನೀಗಾಗಲೇ ಅನೇಕ ಇಲಾಖೆಗಳನ್ನು ನೋಡಿದ್ದೇನೆ. ಹಾಗಾಗಿ ನನಗೆ ಸಚಿವ ಸ್ಥಾನ ಬೇಡ ಎಂದು ಸಿಎಂಗೆ ಹೇಳಿಬಂದಿರುವುದಾಗಿ ತಿಳಿಸಿದ್ದಾರೆ.

    `ವಿಷಕನ್ಯೆ'ಯಿಂದ ಕಾಂಗ್ರೆಸ್ ಹಾಳಾಗ್ತಿದೆ, ಡಿಕೆಶಿ ಗರ್ಲ್‌ಫ್ರೆಂಡ್‌ ಜೊತೆ ಮಾತನಾಡಿದ ಆಡಿಯೋ ಇದೆ: ಜಾರಕಿಹೊಳಿ

    ಇದೇ ವೇಳೆ ಸಿಡಿ ಕೇಸ್ (CD Case) ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿಡಿ ವಿಚಾರ ರಾಜ್ಯಕ್ಕೆ ಒಂದು ಕಪ್ಪು ಚುಕ್ಕೆ. ಸಿಡಿ ಇವೆ, ಸಿಬಿಐಗೆ ವಹಿಸಬೇಕು ಅಂತಾ ರಮೇಶ್ ಜಾರಕಿಹೊಳಿ (Ramesh Jarkiholi) ಹೇಳಿದ್ದಾರೆ. ಸತ್ಯಾಂಶ ಏನಿದೆ ಅನ್ನೋದು ತನಿಖೆಯಿಂದಲೇ ಹೊರಬರಬೇಕು. ಹಾಗಾಗಿ ಸರ್ಕಾರವೂ ಸಿಡಿ ಕೇಸ್ ಅನ್ನು ಸಿಬಿಐಗೆ ವಹಿಸಲಿ ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: `ವಿಷಕನ್ಯೆ’ಯಿಂದ ಕಾಂಗ್ರೆಸ್ ಹಾಳಾಗ್ತಿದೆ, ಡಿಕೆಶಿ ಗರ್ಲ್‌ಫ್ರೆಂಡ್‌ ಜೊತೆ ಮಾತನಾಡಿದ ಆಡಿಯೋ ಇದೆ: ಜಾರಕಿಹೊಳಿ

    ಶಿವಮೊಗ್ಗದಲ್ಲಿ (Shivamogga) ಶಾಂತಿ ನೆಲೆಸಬೇಕು ಎಂಬ ಡಿಕೆಶಿ (DK Shivakumar) ಹೇಳಿಕೆ ವಿಚಾರಕ್ಕೆ ತಿರುಗೇಟು ನೀಡಿದ ಈಶ್ವರಪ್ಪ, ಹರ್ಷನ ಕೊಲೆಯಾಗಿದ್ದಕ್ಕೆ ಬಿಜೆಪಿ ಕಾರ್ಯಕರ್ತರು, ಹಿಂದೂಗಳು ಸುಮ್ಮನೆ ಕುಳಿತುಕೊಳ್ಳಬೇಕಾ? ಪಿಎಫ್‌ಐ ಗೂಂಡಾ ಕೊಲೆ ಮಾಡಿದ ಬಳಿಕ ಅದನ್ನ ಖಂಡಿಸುವ ಪ್ರಯತ್ನವನ್ನೂ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಮಾಡಲಿಲ್ಲ. ಹಿಂದೂಗಳ ಕೊಲೆಯಾದ್ರೆ ಅವರಿಗೆ ಏನೂ ಬೇಜಾರಿಲ್ಲ, ಡಿ.ಕೆ. ಶಿವಕುಮಾರ್, ಕಾಂಗ್ರೆಸ್ ನವರಿಗೆ ಖುಷಿಯಾಗುತ್ತೆ. ಆದ್ರೆ ಮುಸ್ಲಿಮರ ಹತ್ಯೆಯಾದ್ರೆ ಬಿಜೆಪಿ ಕಾರ್ಯಕರ್ತರ ಮೇಲೆ ಆಪಾದನೆ ಮಾಡ್ತಾರೆ ಎಂದು ಕಿಡಿ ಕಾರಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • `ವಿಷಕನ್ಯೆ’ಯಿಂದ ಕಾಂಗ್ರೆಸ್ ಹಾಳಾಗ್ತಿದೆ, ಡಿಕೆಶಿ ಗರ್ಲ್‌ಫ್ರೆಂಡ್‌ ಜೊತೆ ಮಾತನಾಡಿದ ಆಡಿಯೋ ಇದೆ: ಜಾರಕಿಹೊಳಿ

    `ವಿಷಕನ್ಯೆ’ಯಿಂದ ಕಾಂಗ್ರೆಸ್ ಹಾಳಾಗ್ತಿದೆ, ಡಿಕೆಶಿ ಗರ್ಲ್‌ಫ್ರೆಂಡ್‌ ಜೊತೆ ಮಾತನಾಡಿದ ಆಡಿಯೋ ಇದೆ: ಜಾರಕಿಹೊಳಿ

    ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಓರ್ವ `ವಿಷಕನ್ಯೆ’ಯಿಂದ ಕಾಂಗ್ರೆಸ್ ಪಕ್ಷ ಹಾಳಾಗ್ತಿದೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕಿಡಿ ಕಾರಿದ್ದಾರೆ.

    ಬೆಳಗಾವಿಯ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿರುದ್ಧ ಸಿಡಿ ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿದರು. ಅಲ್ಲದೇ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ವಿರುದ್ಧವೂ ಗುಡುಗಿದರು.

    ಬೆಳಗಾವಿ ಗ್ರಾಮೀಣ ಕ್ಷೇತ್ರದ ಓರ್ವ `ವಿಷಕನ್ಯೆ’ಯಿಂದ ಇವತ್ತು ಕಾಂಗ್ರೆಸ್ ಪಕ್ಷ ಹಾಳಾಗ್ತಿದೆ. ಒಂದು ವೇಳೆ ರಾಜ್ಯದಲ್ಲಿ ಜಾತಿ ಸಂಘರ್ಷ ಆದರೂ ಅದಕ್ಕೆ ಡಿಕೆ ಶಿವಕುಮಾರ್ ಹಾಗೂ ಬೆಳಗಾವಿ ಗ್ರಾಮೀಣ ಶಾಸಕಿಯೇ ಕಾರಣ ಎಂದು ನೇರವಾಗಿಯೇ ಆರೋಪಿಸಿದ್ದಾರೆ. ಇದನ್ನೂ ಓದಿ: ನನ್ನ ಮೇಲೆ ಷಡ್ಯಂತ್ರ, ಷಂಡರಂತೆ ರಾಜಕೀಯ ಮಾಡಿದ್ದಾನೆ – ಮಹಾನಾಯಕನ ವಿರುದ್ಧ ಜಾರಕಿಹೊಳಿ ಕಿಡಿ

    ನನ್ನ ವಿರುದ್ಧ 40 ಕೋಟಿ ರೂ. ನೀಡಿ ಸಿಡಿ ಷಡ್ಯಂತ್ರ ಮಾಡಿದ್ದು ಡಿಕೆಶಿನೇ. ನನ್ನ ಸಿಡಿ ಮಾತ್ರವಲ್ಲದೇ ನೂರಾರು ಸಿಡಿ ಮಾಡಿದ್ದಾರೆ. ಸಾಕಷ್ಟು ಅಧಿಕಾರಿಗಳು ಅವರ ಜಾಲದಲ್ಲಿ ಸಿಲುಕಿದ್ದಾರೆ. ಇದು ಗಂಭೀರವಾದ ವಿಷಯ. ರಾಜ್ಯ ಸರ್ಕಾರ ತಕ್ಷಣ ಪ್ರಕರಣವನ್ನ ಸಿಬಿಐಗೆ ವಹಿಸಬೇಕು. ಡಿಕೆ ಶಿವಕುಮಾರ್ ರಾಜಕಾರಣದಲ್ಲಿ ಇರಲು ನಾಲಾಯಕ್. ಎಲ್ಲಾ ಆಯಾಮದಲ್ಲೂ ತನಿಖೆ ಆಗಬೇಕು. ಜೊತೆಗೆ ನನ್ನ ವಿರುದ್ಧ ಸಿಡಿಗೆ ಸಹಕರಿಸಿದ ಯುವತಿಯನ್ನೂ ಅರೆಸ್ಟ್ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

    ಡಿಕೆ ಶಿವಕುಮಾರ್ ಅವರು ಸಿಡಿ ಬಿಡುಗಡೆ ಮಾಡಿದ ಬಳಿಕವೂ ರಾಜಿಯಾಗಲು ಮುಂದಾಗಿದ್ದರು. ಆದರೆ ನಾನು ಒಪ್ಪಲಿಲ್ಲ. ಈಗ ಡಿಕೆ ಶಿವಕುಮಾರ್ ತಮ್ಮ ಗರ್ಲ್ಫ್ರೆಂಡ್ ಜೊತೆಗೆ `ನನ್ನ ಹತ್ತಿರ ದುಬೈನಲ್ಲಿ, ಲಂಡನ್‌ನಲ್ಲಿ ಮನೆಯಿದೆ. ಸಾವಿರಾರು ಕೋಟಿ ಹಣ ಇದೆ ಎಂದು ಹೇಳಿಕೊಂಡಿರುವ ಆಡಿಯೋ ನನ್ನ ಬಳಿಯಿದೆ. ಇದೆಲ್ಲವನ್ನೂ ಸಿಬಿಐ ತನಿಖೆಗೆ ಒಪ್ಪಿಸುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ನಿಖಿಲ್, ಅನಿತಾ ಕುಮಾರಸ್ವಾಮಿ ಗೆಲ್ತಾರೆ- ಭವಾನಿ ಪರ ರೇವಣ್ಣ ಬ್ಯಾಟಿಂಗ್

    ಕಳೆದ 15 ವರ್ಷದಿಂದ ನಾನು ಇಬ್ಬರು ಸ್ನೇಹಿತರು. 1987 ರಲ್ಲಿ ಸ್ಪರ್ಧಿಸಿದಾಗ ಡಿಕೆಶಿಯೂ ಸೋತರೂ ನಾನು ಸೋತಿದ್ದೆ. 1985 ರಲ್ಲಿ ಡಿಕೆಶಿ ಹರಕು ಚಪ್ಪಲಿ ಹಾಕಿಕೊಂಡಿದ್ದ, ಈಗ ಕೋಟ್ಯಂತರ ರೂಪಾಯಿ ಆಸ್ತಿ ಮಾಡಿದ್ದಾನೆ. ನಾನು ಬಡ ಕುಟುಂಬದಿಂದ ಬಂದಿದ್ದರೂ ರ‍್ಯಾಡೋ ವಾಚ್ ಧರಿಸುತ್ತಿದ್ದೆ, ಇವತ್ತಿಗೂ ಅದೇ ಧರಿಸುತ್ತಿದ್ದೇನೆ. ಡಿಕೆಶಿ ಆಸ್ಪತ್ರೆಯಲ್ಲಿದ್ದಾಗ ನಾನು ನೋಡಲು ಹೋಗಿದ್ದೆ, ಆಗ ಡಿಕೆಶಿ ಪತ್ನಿ ಪಾರ್ಟಿ ಬಿಡಬೇಡ ಅಣ್ಣ ಎಂದು ಮನವಿ ಮಾಡಿದ್ದರು. ಅವಾಗ ನಾನು ಇಲ್ಲ ತಂಗಿ ನಿಮ್ಮ ಯಜಮಾನ್ರು ಸರಿಯಿಲ್ಲ ಎಂದಿದ್ದೆ. ಡಿಕೆಶಿ ಅಂದು ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಟಿಕೆಟ್ ಕೊಡಬೇಡ ಎಂದಿದ್ದರು. ನಾನೇ ಮುಂದೆ ನಿಂತು ಒತ್ತಾಯ ಮಾಡಿ ಟಿಕೆಟ್ ಕೊಡಿಸಿದ್ದೆ. ಈಗ ಬೆಳಗಾವಿ ಡಿಸಿಸಿ ಬ್ಯಾಂಕ್ ಮೂಲಕ ಡಿಕೆಶಿ ಬ್ಲ್ಯಾಕ್‌ ಆಂಡ್ ವೈಟ್ ದಂಧೆ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

    ನನ್ನ ವಿರುದ್ಧ ಅಶ್ಲೀಲ ವೀಡಿಯೋನಲ್ಲಿ ಮಾಡಿದ್ದ ಯುವತಿ ಬೆಂಗಳೂರಿನ ಕಾಂಗ್ರೆಸ್ ಮಹಿಳಾ ಪದಾಧಿಕಾರಿಯ ಮನೆಯಲ್ಲಿ ಇದ್ದಾಳೆ. ಮುಂದಿನ ಚುನಾವಣೆ ನನ್ನ ಕೊನೆ ಚುನಾವಣೆಯಾಗಲಿದ್ದು, 5 ವರ್ಷದಲ್ಲಿ ಡಿಕೆಶಿ ಅವರನ್ನ ಮುಗಿಸುತ್ತೇನೆ, ಅರೆಸ್ಟ್ ಮಾಡಿಸುತ್ತೇನೆ ಎಂದು ಶಪಥ ಮಾಡಿದ್ದಾರೆ.

    ರಮೇಶ್ ಜಾರಕಿಹೊಳಿ ಗಾಳಿಯಲ್ಲಿ ಗುಂಡು ಹಾರಿಸುತ್ತಿಲ್ಲ. ಎಲ್ಲಾ ದಾಖಲೆಗಳು ನನ್ನ ಜೊತೆ ಇದೆ. ಸಂದರ್ಭ ಬಂದಾಗ ಬಿಡುಗಡೆ ಮಾಡುತ್ತೇನೆ. ಎಲ್ಲಾ ದಾಖಲೆಗಳನ್ನು ನಾನು ಸಿಬಿಐಗೆ ನೀಡುತ್ತೇನೆ ಎಂದು ಈ ವೇಳೆ ತಿಳಿಸಿದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಜಾರಕಿಹೊಳಿ ಸಿಡಿ ಕೇಸ್‌ – ಚುನಾವಣೆ ಸಮಯದಲ್ಲೇ ಡಿಕೆಶಿಗೆ ಸಂಕಷ್ಟ ಸಾಧ್ಯತೆ

    ಜಾರಕಿಹೊಳಿ ಸಿಡಿ ಕೇಸ್‌ – ಚುನಾವಣೆ ಸಮಯದಲ್ಲೇ ಡಿಕೆಶಿಗೆ ಸಂಕಷ್ಟ ಸಾಧ್ಯತೆ

    ಬೆಂಗಳೂರು: 2023ರ ವಿಧಾನಸಭೆ ಎಲೆಕ್ಷನ್‍ಗೆ ಕೌಂಟ್‍ಡೌನ್ ಶುರುವಾಗಿದ್ದು ದಿನಂಪ್ರತಿ ರಾಜಕೀಯ ಲೆಕ್ಕಾಚಾರಗಳು ನಡೆಯುತ್ತಿದೆ. ಯಾರನ್ನು ಹೇಗೆ ಮಣಿಸಬೇಕು? ಯಾರಿಗೆ ಹೇಗೆ ಶಾಕ್ ಕೊಡ್ಬೇಕು ಅಂತ ಕಾಯ್ತಿದ್ದಾರೆ. ಆದರೆ ಈಗ ರಮೇಶ್ ಜಾರಕಿಹೊಳಿ ಸಿಡಿ ಕೇಸ್‍ನಲ್ಲಿ ಡಿಕೆಶಿಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.

    ನನ್ನನ್ನು ನಂಬಿಸಿ ಯಾರೋ ಮೋಸ ಮಾಡಿದ್ದಾರೆ. ನನಗೆ ಗೊತ್ತಿಲ್ಲದೆ ಅಶ್ಲೀಲ ವಿಡಿಯೋ ರೆಕಾರ್ಡ್ ಮಾಡಿ ನನಗೆ ಬ್ಲಾಕ್ ಮೇಲ್ ಮಾಡಿದ್ದಾರೆ. ನನ್ನಿಂದ ಹಣ ವಸೂಲಿ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಸದಾಶಿವನಗರ ಪೊಲೀಸರಿಗೆ ಜಾರಕಿಹೊಳಿ ದೂರು ನೀಡಿದ್ದರು.

    ಆ ದೂರು ಎಸ್‍ಐಟಿಗೆ ರವಾನೆ ಆಗಿ ತನಿಖೆಯನ್ನು ನಡೆಸಿತ್ತು. ಆದರೆ ಚಾರ್ಜ್‍ಶೀಟ್ ಮಾತ್ರ ಹಾಕಲೇ ಇಲ್ಲ. ಈಗ ಅದೇ ಕೇಸ್‍ಗೆ ಮರುಜೀವ ಬರೋ ಸಾಧ್ಯತೆ ಇದ್ದು, ಸಿಬಿಐಗೆ ಕೊಡೋ ತಯಾರಿ ನಡೆದಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಅಯೋಧ್ಯೆ ನದಿಯಲ್ಲಿ ಪತ್ನಿಗೆ ಕಿಸ್‌ ಮಾಡಿದ ಪತಿಯನ್ನೇ ಥಳಿಸಿದ ಸಾರ್ವಜನಿಕರು… Video Viral

    ಈಗಾಗಲೇ ಸ್ಥಳೀಯ ಪೊಲೀಸರಿಗೆ ಈ ಮಾಹಿತಿ ರವಾನೆ ಆಗಿದೆ ಎಂದು ಹೇಳಲಾಗ್ತಿದೆ. ದೆಹಲಿ ಮಟ್ಟದಲ್ಲೂ ಚರ್ಚೆ ಆಗುತ್ತಿದೆ. ಸಿ.ಡಿ ಪ್ರಕರಣ ಸಿಬಿಐಗೆ ಹೋದರೆ ಕೆಪಿಸಿಸಿ ಅಧ್ಯಕ್ಷರಿಗೆ ಸಿಬಿಐ ಇಕ್ಕಳದ ಭೀತಿ ಆರಂಭವಾಗಲಿದೆ.

    ಒಂದು ವೇಳೆ ಸಿಬಿಐ ನೋಟಿಸ್ ಕೊಟ್ಟರೆ ಸಹಜವಾಗಿಯೇ ಇನ್ನು 10 ತಿಂಗಳಲ್ಲಿ ಚುನಾವಣೆ ಇರುವ ಕರ್ನಾಟಕದಲ್ಲಿ ಕಾಂಗ್ರೆಸ್ ಸಂಕಷ್ಟಕ್ಕೆ ಸಿಲುಕಲಿದೆ. ಇದನ್ನೇ ಇಟ್ಟುಕೊಂಡು ರಾಜಕೀಯ ದಾಳ ಉರುಳಿಸಲು ಪ್ರಯತ್ನ ಮಾಡಲಾಗುತ್ತಿದೆ.

    Live Tv

  • ರಮೇಶ್‌ ಜಾರಕಿಹೊಳಿ ಅತ್ಯಾಚಾರ ಮಾಡಿಲ್ಲ – ಬಿ ರಿಪೋರ್ಟ್‌ ಸಲ್ಲಿಸಿದ SIT

    ರಮೇಶ್‌ ಜಾರಕಿಹೊಳಿ ಅತ್ಯಾಚಾರ ಮಾಡಿಲ್ಲ – ಬಿ ರಿಪೋರ್ಟ್‌ ಸಲ್ಲಿಸಿದ SIT

    ಬೆಂಗಳೂರು: ಅತ್ಯಾಚಾರದ ಆರೋಪ ಹೊತ್ತಿದ್ದ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರಿಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ಕ್ಲೀನ್‌ ಚಿಟ್‌ ಕೊಟ್ಟಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ಸಾಕ್ಷ್ಯಾಧಾರ ಕೊರತೆ ಹಿನ್ನೆಲೆಯಲ್ಲಿ 1ನೇ ಎಸಿಎಂಎಂ ಕೋರ್ಟ್‌ಗೆ ಬಿ ರಿಪೋರ್ಟ್‌ ಪ್ರತಿ ಸಲ್ಲಿಸಿದೆ.

    150 ಪುಟಗಳ ಬಿ ರಿಪೋರ್ಟ್‌ ಅನ್ನು 1ನೇ ಎಸಿಎಂಎಂ ಕೋರ್ಟ್‌ಗೆ ಸಲ್ಲಿಕೆ ಮಾಡಲಾಗಿದೆ. ಇದರಿಂದ ರಮೇಶ್ ಜಾರಕಿಹೊಳಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ. ಅತ್ಯಾಚಾರ ಪ್ರಕರಣದಲ್ಲಿ ರಮೇಶ್‌ ಜಾರಕಿಹೊಳಿಗೆ ಎಸ್‌ಐಟಿ ಕ್ಲೀನ್ ಚಿಟ್ ಕೊಟ್ಟಿದೆ. ಯುವತಿ ಕೊಟ್ಟ ದೂರಿನಲ್ಲಿ ಯಾವುದೇ ಹುರುಳಿಲ್ಲ. ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳು ಇಲ್ಲ ಎಂದು ತಿಳಿಸಲಾಗಿದೆ. ಇದನ್ನೂ ಓದಿ: ಸಿಡಿ ಪ್ರಕರಣದಲ್ಲಿ ರಮೇಶ್ ಜಾರಕಿಹೊಳಿಗೆ ಬಿಗ್ ರಿಲೀಫ್

    ರಮೇಶ್‌ ಜಾರಕಿಹೊಳಿಗೆ ಸಂಬಂಧಿಸಿದ್ದು ಎನ್ನಲಾಗಿದ್ದ ಸಿಡಿ ಪ್ರಕರಣದ ತನಿಖಾ ವರದಿ ಸಲ್ಲಿಸುವಂತೆ ಎಸ್‌ಐಟಿಗೆ ಹೈಕೋರ್ಟ್‌ ಸೂಚನೆ ನೀಡಿತ್ತು. ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸಿದೆ. ಬಿ ರಿಪೋರ್ಟ್‌ ಸಲ್ಲಿಕೆ ಹಿನ್ನೆಲೆಯಲ್ಲಿ ದೂರುದಾರ ಯುವತಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ. ನಿಮ್ಮ ಪ್ರಕರಣ ಮುಕ್ತಾಯ ಆಗಿದೆ. ತನಿಖೆ ಮುಕ್ತಾಯಗೊಂಡಿದೆ. 1ನೇ ಎಸಿಎಂಎಂ ಕೋರ್ಟ್‌ಗೆ ಸಲ್ಲಿಕೆ ಮಾಡಲಾಗಿದೆ ಎಂದು ನೋಟಿಸ್ ನೀಡಿದೆ.

    ಸಾಕ್ಷ್ಯಾಧಾರ ಕೊರತೆಯಿಂದ ಪ್ರಕರಣ ಮುಕ್ತಾಯ ಮಾಡಿದ್ದೇವೆ ಎಂಬುದಾಗಿ ಇಂದು ಬೆಳಗ್ಗೆ ನೋಟಿಸ್ ನೀಡಿ ಬಳಿಕ ಬಿ ರಿಪೋರ್ಟ್ ಸಲ್ಲಿಸಲಾಗಿದೆ. ಇದನ್ನೂ ಓದಿ: ದಲಿತ ಯುವತಿಯನ್ನ ಮದುವೆಯಾಗಿದ್ದಕ್ಕೆ ಸ್ವಜಾತಿಯವರಿಂದ ಬಹಿಷ್ಕಾರ

    ಬಿ ರಿಪೋರ್ಟ್‌ನಲ್ಲೇನಿದೆ?
    ಇಬ್ಬರು ಕೂಡ ಸಾಕಷ್ಟು ದಿನಗಳಿಂದ ಪರಿಚಯ ಇಟ್ಟುಕೊಂಡಿದ್ದವರು. ಇಬ್ಬರೂ ಸಮ್ಮತಿಯಿಂದ ಲೈಂಗಿಕ ಸಂಪರ್ಕ ಹೊಂದಿದ್ದಾರೆ.  ಯುವತಿ ಆರೋಪ ಮಾಡಿದಂತೆ ಇಲ್ಲಿ ಯಾವುದೇ ಬಲತ್ಕಾರವೂ ನಡೆದಿಲ್ಲ. ಮಾಜಿ ಸಚಿವರು ಯುವತಿಗೆ ಕೆಲಸ ಕೊಡಿಸುವುದಾಗಿ ನಂಬಿಸಿ ವಂಚನೆ ಮಾಡಿದ್ದಾರೆ ಎನ್ನುವುದು ಆಧಾರ ರಹಿತ. ಯುವತಿಗೆ ಕೆಲಸ ಕೊಡಿಸುವುದಾಗಿ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಅನ್ನೋದಕ್ಕೆ ಯಾವುದೇ ಸಾಕ್ಷ್ಯ ಇಲ್ಲ. ಟೆಕ್ನಿಕಲ್ ಎವಿಡೆನ್ಸ್‌ಗಳು ಇಲ್ಲ.

    ಇಬ್ಬರು ನಿರಂತರವಾಗಿ ದೂರವಾಣಿಯ ಮೂಲಕ ತುಂಬಾ ಸಲಿಗೆಯಿಂದಲೇ ಮಾತನಾಡಿದ್ದಾರೆ. ಮಾತನಾಡುವಾಗ ಇಬ್ಬರ ಸಂಭಾಷಣೆಯಲ್ಲಿ ಕೂಡ ಲೈಂಗಿಕ ಪ್ರಚೋದನೆಯ ಮಾತುಗಳು ಇದ್ದಾವೆ. ಒಬ್ಬರ ಮೇಲೆ ಒಬ್ಬರು ಒತ್ತಡ ಹೇರಿದ್ದಾರೆ ಅನ್ನೋದಕ್ಕೆ ಸಾಕ್ಷ್ಯ ಇಲ್ಲ. ನ್ಯಾಯಾಧೀಶರ ಮುಂದೆ ಹೇಳಿದ ಹೇಳಿಕೆಗೆ ಸಂಬಂಧಪಟ್ಟ ಪೂರಕ ಸಾಕ್ಷ್ಯಗಳು ಇಲ್ಲ.

    ನ್ಯಾಯಾಧೀಶರ ಮುಂದೆ ಹೇಳಿದ ಹೇಳಿಕೆಗೂ ಪೊಲೀಸರ ಮುಂದೆ ಹೇಳಿದ ಹೇಳಿಕೆಗೂ ವ್ಯತ್ಯಾಸಗಳು ಇದ್ದಾವೆ. ಆರೋಪಿ ಮತ್ತು ಸಂತ್ರಸ್ತೆಯ ಮನೆಯನ್ನು ಮಹಜರು ಮಾಡಿದಾಗ ಪೂರಕ ಸಾಕ್ಷ್ಯಗಳು ಇಲ್ಲ. ಸಂತ್ರಸ್ತ ಯುವತಿ ಹೇಳಿದಂತೆ ಅಪಾರ್ಟ್ಮೆಂಟ್‌ನಲ್ಲಿ ಯಾವುದೇ ಕುರುಹುಗಳು ಪತ್ತೆ ಆಗಿಲ್ಲ. ವೈರಲ್ ಆಗಿರೋ ವಿಡಿಯೋ ಎಡಿಟೆಡ್ ವರ್ಸನ್ ವಿಡಿಯೋ ಆಗಿದೆ. ವಿಧಿವಿಜ್ಞಾನ ಪ್ರಯೋಗಾಲಯಕ್ಕೂ ವೀಡಿಯೋ ತುಣುಕುಗಳಿಗೆ ಸ್ಪಷ್ಟವಾದ ವರದಿಯನ್ನು ನೀಡಿಲ್ಲ.

    ವೀಡಿಯೋ ತುಣುಕುಗಳನ್ನು ಯುವತಿ ಉದ್ದೇಶ ಪೂರ್ವಕವಾಗಿ ಮಾಡಿದ್ದಾಳೆ ಎಂಬ ಅನುಮಾನ ಇದೆ. ಯುವತಿಯು ಎರಡೂ ಬಾರಿ ವೀಡಿಯೋವನ್ನು ಮಾಡಿದ್ದಾಳೆ. ಒಮ್ಮೆ ಕಪ್ಪು ಬಣ್ಣದ ಟೀ ಶರ್ಟ್ ಅನ್ನು, ಮತ್ತೊಮ್ಮೆ ಕಾಫಿ ಕಲರ್ ಟೀ ಶರ್ಟ್ ಅನ್ನು ಹಾಕಿದ್ದಾಳೆ. ಆಕೆ ಎರಡು ಬಾರಿ ವೀಡಿಯೋ ರೆಕಾರ್ಡ್ ಮಾಡಿರೋದು ಬೇರೊಂದು ಉದ್ದೇಶ ಇರಬಹುದು ಎಂದು ಅನಿಸಿದೆ. ಎರಡು ಕ್ಯಾಮೆರಾಗಳನ್ನು ಯುವತಿ ಬಳಸಿದ್ದು ಒಂದು ವ್ಯಾನಿಟಿ ಬ್ಯಾಗ್‌ನಲ್ಲಿ ಇತ್ತು ಎಂಬುದು ಸ್ಪಷ್ಟವಾಗಿದೆ. ವ್ಯಾನಿಟಿ ಬ್ಯಾಗ್‌ನಲ್ಲಿ ಇದ್ದ ಕ್ಯಾಮೆರಾವನ್ನು ಬೇರೊಬ್ಬ ಯುವಕನ ಸಹಾಯದಿಂದ ಆಫ್ ಮಾಡಿದ್ದಾರೆ. ಕ್ಯಾಮರಾ ಆಫ್ ಮಾಡುವಾಗ ಯುವತಿ ಬೇರೊಂದು ಪ್ರಕರಣದ ಶಂಕಿತ ಆರೋಪಿಯ ಹೆಸರನ್ನು ಉಲ್ಲೇಖ ಮಾಡಿದ್ದಾಳೆ. ಆರೋಪಿಯೂ ಕೂಡ ತನ್ನನ್ನು ಹೆದರಿಸುತ್ತಾ ಇದ್ದರು. ತನ್ನ ಮೊಬೈಲ್‌ಗೆ ಎರಡು ಬಾರಿ ವೀಡಿಯೋ ಕಳುಹಿಸಿದ್ದರು, ಹಣಕ್ಕೆ ಬೇಡಿಕೆ ಇಟ್ಟಿದ್ದರು ಅಂತ ಹೇಳಿದ್ದಾರೆ.

    ಆರೋಪಿ ಹೇಳಿಕೆಗೆ ಪೂರಕವಾದ ಕೆಲವೊಂದು ಸಾಕ್ಷ್ಯಗಳು ಸಿಕ್ಕಿವೆ. ಬೇರೊಂದು ಪ್ರಕರಣದ ಶಂಕಿತ ಆರೋಪಿಗಳು ಹಣವನ್ನು ಬ್ಲಾಕ್ ಅಂಡ್ ವೈಟ್ ಮಾಡಿರೋದು ಸಾಬೀತಾಗಿದೆ. ಆರೋಪಿ ರಮೇಶ್ ಜಾರಕಿಹೊಳಿ ಹಣ ನೀಡಿದ್ದಕ್ಕೂ ಈ ಯುವಕರು ಬ್ಲಾಕ್ ಅಂಡ್ ವೈಟ್ ಮಾಡಿದ್ದಕ್ಕೂ ತಾಳೆ ಆಗುತ್ತಾ ಇದೆ. ಅಲ್ಲದೇ ಯುವತಿಯ ಮೇಲೆ ಒಂದಷ್ಟು ಗಂಭೀರವಾದ ಆರೋಪಗಳು ಕೂಡ ಇದ್ದಾವೆ. ಆರೋಪಗಳಿಗೆ ಪ್ರಬಲ ಸಾಕ್ಷ್ಯ ಇಲ್ಲದೇ ಇದ್ದರೂ ಅನುಮಾನ ಹೆಚ್ಚಿದೆ. ಇಬ್ಬರೂ ಪ್ರಾಪ್ತರೂ ಆಗಿರುವುದರಿಂದ ಸಮ್ಮತಿಯ ಮೇಲೆ ಲೈಂಗಿಕ ಸಂಪರ್ಕವಾಗಿದೆ. ಇಲ್ಲಿ ಒತ್ತಾಯ ಪೂರ್ವಕವಾಗಿ ಯಾರ ಮೇಲೂ ಅತ್ಯಾಚಾರ ಆಗಿಲ್ಲ ಅನ್ನೋದು ಸ್ಪಷ್ಟವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

  • ಸಿಡಿ ಪ್ರಕರಣದಲ್ಲಿ ರಮೇಶ್ ಜಾರಕಿಹೊಳಿಗೆ ಬಿಗ್ ರಿಲೀಫ್

    ಸಿಡಿ ಪ್ರಕರಣದಲ್ಲಿ ರಮೇಶ್ ಜಾರಕಿಹೊಳಿಗೆ ಬಿಗ್ ರಿಲೀಫ್

    ಬೆಂಗಳೂರು: ಸಂಪುಟ ಪುನಾರಚನೆ ಸುದ್ದಿ ಹರಿದಾಡುತ್ತಿರುವ ಸಂದರ್ಭದಲ್ಲಿಯೇ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ ಆಗಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಸಿಡಿ ಕೇಸಲ್ಲಿ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ.

    ವಾದ-ಪ್ರತಿವಾದ ಆಲಿಸಿದ ಹೈಕೋರ್ಟ್, ಯುವತಿ ಪರ ವಕೀಲರ ಆಕ್ಷೇಪದ ನಡುವೆಯೂ ಸಂಬಂಧಿಸಿದ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಪ್ರಕರಣದ ಅಂತಿಮ ವರದಿ ಸಲ್ಲಿಸಲು ಎಸ್‍ಐಟಿಗೆ ಗ್ರೀನ್ ಸಿಗ್ನಲ್ ನೀಡಿತು. ಇದುವರೆಗೆ ಇದ್ದ ಮಧ್ಯಂತರ ತಡೆಯಾಜ್ಞೆಯನ್ನು ತೆರವು ಮಾಡಿತು. ಈ ಪ್ರಕರಣದಲ್ಲಿ ರಮೇಶ್ ಜಾರಕಿಹೊಳಿಗೆ ಎಸ್‍ಐಟಿ ಕ್ಲೀನ್ ಚಿಟ್ ಕೊಟ್ಟಿದೆ. ಇದು ಸಮ್ಮತಿಯ ಸೆಕ್ಸ್ ಪ್ರಕರಣ, ಇಲ್ಲಿ ಲೈಂಗಿಕ ದೌರ್ಜನ್ಯ ನಡೆದಿಲ್ಲ. ಇಲ್ಲಿ ಅತ್ಯಾಚಾರ ನಡೆದಿದೆ ಎಂಬ ಅಂಶ ಬೆಳಕಿಗೆ ಬಂದಿಲ್ಲ. ಇದನ್ನು ಯುವತಿಯೂ ಒಪ್ಪಿಕೊಂಡಿದ್ದಾರೆ. ಇದಕ್ಕೆ ಪೂರಕವಾದ ತಾಂತ್ರಿಕ ಸಾಕ್ಷ್ಯಗಳು ಕೂಡ ಇವೆ ಎಂದು ಹೇಳಲಾಗಿದೆ.

    ನಾಳೆ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಹಾಕಲು ಎಸ್‍ಐಟಿ ತಯಾರಿ ಮಾಡಿಕೊಂಡಿದೆ. ಆದರೆ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗಲು ಯುವತಿ ಪರ ವಕೀಲರು ತೀರ್ಮಾನಿಸಿದ್ದಾರೆ. ಎಸ್‍ಐಟಿ ರಚನೆಯ ನ್ಯಾಯಬದ್ಧತೆ ವಿಚಾರ ಹೈಕೋರ್ಟಿನಲ್ಲಿ ವಿಲೇವಾರಿ ಬಾಕಿ ಇದ್ದಾಗ್ಯೂ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಎಸ್‍ಐಟಿ ತನಿಖಾ ವರದಿ ಸಲ್ಲಿಸಲು ಅವಕಾಶ ನೀಡಿರೋದನ್ನು ಪ್ರಶ್ನಿಸಲಾಗುತ್ತದೆ ಎಂದು ಯುವತಿ ಪರ ವಕೀಲರು ತಿಳಿಸಿದ್ದಾರೆ. ಇದನ್ನೂ ಓದಿ: ದೇವೇಂದ್ರ ಫಡ್ನವೀಸ್ ಮೂಲಕ ಮಂತ್ರಿಗಿರಿಗೆ ರಮೇಶ್ ಜಾರಕಿಹೊಳಿ ಲಾಬಿ

    ಈ ಬೆಳವಣಿಗೆ ಮಧ್ಯೆಯೇ ಪಣಜಿಯಲ್ಲಿ ತಮ್ಮ ರಾಜಕೀಯ ಗುರು, ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನಾವೀಸ್‍ರನ್ನು ರಮೇಶ್ ಜಾರಕಿಹೊಳಿ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಫಡ್ನಾವೀಸ್ ಮೂಲಕ ಮತ್ತೆ ಮಂತ್ರಿ ಸ್ಥಾನ ಗಿಟ್ಟಿಸಲು ಲಾಬಿ ನಡೆಸಿದ್ದಾರೆ. ಅಲ್ಲದೇ ಪಕ್ಷದಲ್ಲಿ ಕೆಲವರು ತಮ್ಮ ವಿರುದ್ಧ ಷಡ್ಯಂತ್ರ ಮಾಡ್ತಿದ್ದಾರೆ ಎಂದು ರಮೇಶ್ ಜಾರಕಿಹೊಳಿ ದೂರು ನೀಡಿದ್ದಾರೆ ಎನ್ನಲಾಗುತ್ತಿದೆ.

  • ಶೂರರ ವಿರುದ್ಧ ಷಡ್ಯಂತ್ರಗಳು ನಡೆಯುವುದು ಸಹಜ: ರಮೇಶ್ ಜಾರಕಿಹೊಳಿ

    ಶೂರರ ವಿರುದ್ಧ ಷಡ್ಯಂತ್ರಗಳು ನಡೆಯುವುದು ಸಹಜ: ರಮೇಶ್ ಜಾರಕಿಹೊಳಿ

    – ಸಿಡಿ ಪ್ರಕರಣದ ಬಗ್ಗೆ ಮೌನ ಮುರಿದ ಜಾರಕಿಹೊಳಿ
    – ಬಿಜೆಪಿಯನ್ನು ಅಧಿಕಾರಕ್ಕೆ ತರಲು ಎಲ್ಲ ತ್ಯಾಗಕ್ಕೂ ಸಿದ್ಧ

    ಚಿಕ್ಕೋಡಿ(ಬೆಳಗಾವಿ): ಶೂರರ ವಿರುದ್ಧ ಷಡ್ಯಂತ್ರಗಳು ನಡೆಯುವುದು ಇತಿಹಾಸದಲ್ಲಿದೆ. ನನ್ನ ವಿರುದ್ಧ ನಡೆದಿರುವ ಷಡ್ಯಂತ್ರದ ಬಗ್ಗೆ ದೇವರು ನೋಡುತ್ತಾನೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಬಗ್ಗೆ ಮೌನ ಮುರಿದಿದ್ದಾರೆ.

    ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶೂರರ ವಿರುದ್ಧ ಷಡ್ಯಂತ್ರಗಳು ನಡೆಯುವುದು ಸಹಜ. ಇಂಥ ಷಡ್ಯಂತ್ರಗಳನ್ನು ಎದುರಿಸುತ್ತೇನೆ ಎಂದಿದ್ದಾರೆ. ಜೊತೆಗೆ ಸಿಡಿ ಪ್ರಕರಣ ಬಗೆಹರಿಸಲು ಸರ್ಕಾರ ಕಾಳಜಿ ತೋರುತ್ತಿಲ್ಲ ಎಂಬ ವಿಚಾರವಾಗಿ ಮಾತನಾಡಿದ ಅವರು, ನನ್ನ ಸಿಡಿ ಪ್ರಕರಣ ಇತ್ಯರ್ಥ ಆಗಲು ಇನ್ನೂ ಒಂದು ವರ್ಷ ಆಗಲಿ, ನನಗೇನು ಆತುರವಿಲ್ಲ. ನಾನು ಮಂತ್ರಿ ಆಗಬೇಕೆಂದಿಲ್ಲ. ನನ್ನ ಸಹೋದರ ಇದ್ದಾನೆ, ಶಾಸಕ ಮಹೇಶ್ ಕುಮಟಳ್ಳಿ ಅವರಿದ್ದಾರೆ ಎಂದು ಪರೋಕ್ಷವಾಗಿ ಸಹೋದರ ಬಾಲಚಂದ್ರ ಜಾರಕಿಹೊಳಿ ಹಾಗೂ ಮಹೇಶ್ ಕುಮಟಳ್ಳಿ ಅವರಿಗೆ ಮಂತ್ರಿ ಸ್ಥಾನ ನೀಡಲಿ. ಮಂತ್ರಿ ಆಗಬೇಕು ಎಂಬ ಆಸೆ ನನಗೆ ಇಲ್ಲ ಹೈ ಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದು ಹೇಳಿದ್ದಾರೆ.

    ಸಿಡಿ ಪ್ರಕರಣ ನ್ಯಾಯಾಲಯದಲ್ಲಿದೆ ಆ ಬಗ್ಗೆ ಮಾತನಾಡುವದಿಲ್ಲ. ಆರ್‍ಎಸ್‍ಎಸ್ ಹಾಗೂ ಬಿಜೆಪಿ ಪಕ್ಷ ನೀಡಿದ್ದಷ್ಟು ಪ್ರೀತಿ ಕಾಂಗ್ರೆಸ್ ನಲ್ಲಿ ನನಗೆ ಸಿಕ್ಕಿಲ್ಲ. ಸೂತ್ತೂರು ಮಠದ ಸಲಹೆ ಕೇಳಿ ಅವರ ಆದೇಶ ಪಾಲಿಸಿದ್ದೇನೆ. ನನಗೆ ಸಚಿವ ಸ್ಥಾನ ಸಿಗಲಿ ಬಿಡಲಿ ಸಮ್ಮಿಶ್ರ ಸರ್ಕಾರ ಬೀಳಿಸಿದ್ದಕ್ಕೆ ಈಗಲೂ ಸಂತೋಷವಿದೆ. ನಾನು ಮಂತ್ರಿ ಆಗುತ್ತೇನೋ ಇಲ್ಲೋ ಗೊತ್ತಿಲ್ಲ. ಆದರೆ ಮುಖ್ಯಮಂತ್ರಿ ನಮ್ಮ ಸ್ನೇಹಿತ ಬೊಮ್ಮಾಯಿ ಆಗಿರುವುದು ಸಂತೋಷವಾಗಿದೆ ಎಂದು ನುಡಿದಿದ್ದಾರೆ.

    ಮುಂಬರುವ ಚುನಾವಣೆಯಲ್ಲಿ ಬಿಜೆಪಿ ರಾಜ್ಯದಲ್ಲಿ ಪೂರ್ಣ ಪ್ರಮಾಣ ಅಧಿಕಾರಕ್ಕೆ ಬರಬೇಕು. ಬಿಜೆಪಿ ಪಕ್ಷ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ತ್ಯಾಗ ಮನೋಭಾವದಿಂದ ಕೆಲಸ ಮಾಡುತ್ತೇನೆ. ಬಿಜೆಪಿ ಅಧಿಕಾರಕ್ಕೆ ತರಲು ಎಲ್ಲ ತ್ಯಾಗಕ್ಕೂ ಸಿದ್ಧ. ರಾಜಕಾರಣದಲ್ಲಿ ಎಲ್ಲವನ್ನೂ ಬಹಿರಂಗಪಡಿಸಲು ಸಾಧ್ಯವಿಲ್ಲ. ಕುಮಟಳ್ಳಿ ಅವರಿಗೆ ಮುಂದಿನ ದಿನ ಹೆಚ್ಚಿನ ಸ್ಥಾನ ಸಿಗಬಹದು. ನಾನು ನೀರಾವರಿ ಮಂತ್ರಿ ಆಗಿದ್ದು, ಮಹೇಶ್ ಕುಮಟಳ್ಳಿ ಅವರಿಂದ ಹೈ ಕಮಾಂಡ್ ತೀರ್ಮಾನಕ್ಕೆ ನಾನು ಬದ್ಧ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ:550 ಕೋಟಿ ಅನುದಾನ ವಿಚಾರದಲ್ಲಿ ಜಿ.ಎಸ್ ಬಸವರಾಜು, ಎಸ್ ಆರ್ ಶ್ರೀನಿವಾಸ್ ನಡುವೆ ಕಿತ್ತಾಟ

  • ಜಾರಕಿಹೊಳಿ ಸಿಡಿ ಕೇಸ್‍ಗೆ ಟ್ವಿಸ್ಟ್ – ಹೈಕೋರ್ಟ್ ಅಸಮಾಧಾನ

    ಜಾರಕಿಹೊಳಿ ಸಿಡಿ ಕೇಸ್‍ಗೆ ಟ್ವಿಸ್ಟ್ – ಹೈಕೋರ್ಟ್ ಅಸಮಾಧಾನ

    ಬೆಂಗಳೂರು: ಸಿಡಿ ಕೇಸ್ ಸಂಬಂಧಿಸಿದಂತೆ ರಮೇಶ್ ಜಾರಕಿಹೊಳಿ ಪ್ರಕರಣದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಎಸ್‍ಐಟಿ ಮುಖ್ಯಸ್ಥ ಸೌಮೆಂದು ಮುಖರ್ಜಿ ಅವರ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ.

    ರಮೇಶ್ ಜಾರಕಿಹೊಳಿ ಪ್ರಕರಣ ಇತ್ಯರ್ಥ ಆಗುವ ಲಕ್ಷಣಗಳೇ ಕಾಣುತ್ತಿಲ್ಲ. ತನಿಖೆ ಮುಗಿದು ಕೋರ್ಟ್ ಸುಪರ್ದಿಯಲ್ಲಿ ಅಂತಿಮ ವರದಿ ಇದ್ದರೂ ಅದನ್ನು ಕೆಳಹಂತದ ನ್ಯಾಯಾಲಯ ಸಲ್ಲಿಸುವುದಾಗಲಿ, ಜಾರಕಿಹೊಳಿಗೆ ಮುಕ್ತಿ ಕೊಡಿಸುವುದಾಗಲಿ ಆಗುತ್ತಿಲ್ಲ.

    ಇಂದು ರಮೇಶ್ ಜಾರಕಿಹೊಳಿ ಪ್ರಕರಣದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಎಸ್ಐಟಿ ಮುಖ್ಯಸ್ಥ ಸೌಮೆಂದು ಮುಖರ್ಜಿ ಅವರ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತು. ಎಸ್‍ಐಟಿ ಮುಖ್ಯಸ್ಥರು ಮೂರು ತಿಂಗಳು ರಜೆ ಪಡೆದುಕೊಂಡಿದ್ದರು. ಆ ಸಂದರ್ಭದಲ್ಲಿ ಇಡೀ ಪ್ರಕರಣದ ತನಿಖೆ ನಡೆದಿದೆ. ಈ ಬಗ್ಗೆ ಹೈಕೋರ್ಟ್‍ಗೆ ಕೂಡ ಅಂತಿಮ ವರದಿ ಸಲ್ಲಿಕೆ ಮಾಡಿದ್ದಾರೆ. ಆದರೆ ಎಸ್‍ಐಟಿ ಮುಖ್ಯಸ್ಥರ ಗಮನದಲ್ಲಿ ಇಲ್ಲದೇ ತನಿಖೆ ಮುಕ್ತಾಯ ಆಗಿದೆ. ಹಾಗಾದರೆ ಎಸ್‍ಐಟಿ ಮುಖ್ಯಸ್ಥರನ್ನು ನೇಮಕ ಮಾಡೋದು ಯಾಕೆ ಎಂದು ಕೋರ್ಟ್ ಪ್ರಶ್ನೆ ಮಾಡಿದೆ.  ಇದನ್ನೂ ಓದಿ: ನಾನೀಗ ಪ್ರತಿದಿನ ಬ್ಯಾಡ್ಮಿಂಟನ್ ಆಡುತ್ತಿದ್ದೇನೆ, ನನಗೂ ಒಳ್ಳೆಯ ಕಾಲ ಬರಲಿದೆ: ರಮೇಶ್ ಜಾರಕಿಹೊಳಿ

    ರಜೆ ಮುಗಿಸಿಕೊಂಡು ವಾಪಸ್ ಬಂದಿರುವ ಸೌಮೆಂದು ಮುಖರ್ಜಿ ಎಸ್‍ಐಟಿ ಅಧಿಕಾರಗಳ ಜೊತೆ ಕೇಸ್ ಬಗ್ಗೆ ರಿವ್ಯೂ ಮೀಟಿಂಗ್ ಕೂಡ ಮಾಡಿಲ್ಲ. ರಿವ್ಯೂ ಮೀಟಿಂಗ್ ಮಾಡದೆ ಇದ್ದರೆ ವರದಿಯ ಬಗ್ಗೆ ಅನುಮತಿ ಇದ್ಯಾ, ಇಲ್ಲವೇ ಎಂಬ ನಿಲುವು ತಿಳಿಸುವಂತೆ 20 ನಿಮಿಷಗಳ ಕಾಲ ಹೈಕೋರ್ಟ್ ಅವಕಾಶ ನೀಡಿತ್ತು.

    ಈ ನಡುವೆ ಹೈಕೋರ್ಟ್‍ಗೆ ಸೌಮೆಂದು ಮುಖರ್ಜಿ ಯಾವ ನಿಲುವನ್ನು ಸ್ಪಷ್ಟಪಡಿಸಲಿಲ್ಲ. ಹಾಗಾಗಿ, ಮುಂದಿನ ವಿಚಾರಣೆಯಲ್ಲಿ ಪ್ರಮಾಣಪತ್ರ ನೀಡುವಂತೆ ಎಸ್‍ಐಟಿ ಮುಖ್ಯಸ್ಥರಿಗೆ ಹೈಕೋರ್ಟ್ ಸೂಚನೆ ನೀಡಿ ಮುಂದಿನ ವಿಚಾರಣೆಯನ್ನು ಸೆ.2ಕ್ಕೆ ಮುಂದೂಡಿದೆ.