Tag: cd bs yeddyurappa

  • ಸಿಡಿ ಪ್ರಕರಣದ ಹೆಣ್ಮಗಳು ಸಿಕ್ಕಿದ್ದರೆ ಪ್ರಕರಣಕ್ಕೆ ಅಂತ್ಯ ದೊರೆಯಲಿದೆ: ಬಿಎಸ್‍ವೈ

    ಸಿಡಿ ಪ್ರಕರಣದ ಹೆಣ್ಮಗಳು ಸಿಕ್ಕಿದ್ದರೆ ಪ್ರಕರಣಕ್ಕೆ ಅಂತ್ಯ ದೊರೆಯಲಿದೆ: ಬಿಎಸ್‍ವೈ

    ಬೆಂಗಳೂರು: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ‘ಆ’ ಹೆಣ್ಣು ಮಗಳು ಸಿಕ್ಕಿದ್ದರೆ ಪ್ರಕರಣಕ್ಕೆ ಒಂದು ಅಂತ್ಯ ದೊರೆಯಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.

    ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿವೇಶನ ಸಂದರ್ಭದಲ್ಲಿ ನಮ್ಮ ಕಾಂಗ್ರೆಸ್ ಸದಸ್ಯರು ಕುಂಟು ನೆಪ ಹೇಳಿ ಪ್ರತಿಭಟನೆ ಮಾಡ್ತಿದ್ದಾರೆ. ರಮೇಶ್ ಜಾರಕಿಹೋಳಿ ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ತನಿಖೆ ನಡೆಸಲು ಎಲ್ಲಾ ಕ್ರಮ ಕೈಗೊಳ್ಳಲಾಗಿದೆ ಎಂದರು.

    ಬೇರೆ ವಿಚಾರ ಸಿಗದೆ ಇರೋದ್ರಿಂದ ಧರಣಿ ನಡೆಸುತ್ತಿದ್ದಾರೆ. ಇದು ಎಷ್ಟರ ಮಟ್ಟಿಗೆ ಸರಿ ಅಂತ ಸಿಎಂ ಪ್ರಶ್ನಿಸಿದರು. ನಿಮ್ಮೆಲ್ಲರ ಮಾತು ಕೇಳಿದ್ದೀನಿ. ಸುಸೂತ್ರವಾಗಿ ಕಲಾಪ ನಡೆಸಲು ಬಿಡಿ ಅಂತ ಕಾಂಗ್ರೆಸ್ ಸದಸ್ಯರಿಗೆ ಸಿಎಂ ಮಾಡಿಕೊಂಡರು.