Tag: CD

  • ನನ್ನ ಹೆಸರು ಕೆಡಿಸಿದ್ದಕ್ಕೆ ಬರಗಾಲ ಬಂದಿದೆ: ರಮೇಶ್ ಜಾರಕಿಹೊಳಿ

    ನನ್ನ ಹೆಸರು ಕೆಡಿಸಿದ್ದಕ್ಕೆ ಬರಗಾಲ ಬಂದಿದೆ: ರಮೇಶ್ ಜಾರಕಿಹೊಳಿ

    – ಡಿಕೆಶಿ ಸಿಡಿ ಫ್ಯಾಕ್ಟರಿ ಬಂದ್ ಆಗಬೇಕು ಅಂದ್ರೆ ಸಿಬಿಐಗೆ ವಹಿಸಬೇಕು

    ಬೆಳಗಾವಿ: ನಾನು 4 ವರ್ಷಗಳಿಂದ ಅಪಮಾನ ಸಹಿಸಿಕೊಂಡಿದ್ದೇನೆ. ಪದೇ ಪದೇ ನನ್ನ ಹೆಸರು ಕೆಡಿಸಿದ್ದಕ್ಕೆ ಇದೀಗ ರಾಜ್ಯದಲ್ಲಿ ಬರಗಾಲ ಬಂದಿದೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ (Ramesh Jarkiholi) ಹೇಳಿಕೆ ನೀಡಿದ್ದಾರೆ.

    ಬೆಳಗಾವಿ (Belagavi) ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಮೇಶ್ ಜಾರಕಿಹೊಳಿ, ಸಿಡಿ ಕೇಸ್‌ನಲ್ಲಿ (CD Case) ಡಿಕೆ ಶಿವಕುಮಾರ್ (DK Shivakumar) ಕಾರ್ ಚಾಲಕ ಪರಶಿವಮೂರ್ತಿಯನ್ನು ಯಾಕೆ ವಿಚಾರಣೆಗೆ ಒಳಪಡಿಲ್ಲ? ಬಿಜೆಪಿ ಸರ್ಕಾರ ಇದ್ದಾಗ ಯಾಕೆ ವಿಚಾರಣೆ ಮಾಡಲಿಲ್ಲ? ಅಲ್ಲೇ ಇರೋದು ಟ್ವಿಸ್ಟ್. ನನ್ನ ಮಾತಿನಿಂದ ಬಿಜೆಪಿಗೆ ಮುಜುಗರ ಆಗೋದು ಬೇಡ ಎನ್ನುವ ಮೂಲಕ ಪರೋಕ್ಷವಾಗಿ ಬಿಜೆಪಿ ನಾಯಕರು ಸಿಡಿ ಕೇಸ್‌ನಲ್ಲಿ ಇದ್ದಾರೆ ಎಂದು ಜಾರಕಿಹೊಳಿ ತಿಳಿಸಿದ್ದಾರೆ.

    ನಾನು 4 ವರ್ಷಗಳಿಂದ ಅಪಮಾನ ಸಹಿಸಿಕೊಂಡಿದ್ದೇನೆ. ನಾನು ದಾಖಲೆ ಕೊಡದೇ ಇದ್ರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ. ಡಿಕೆಶಿ ಅಂತ್ಯವಾದ್ರೆ ರಾಜಕಾರಣದಲ್ಲಿ ಒಳ್ಳೆಯದು. ಡಿಕೆಶಿ ಸಿಡಿ ಫ್ಯಾಕ್ಟರಿ ಬಂದ್ ಆಗಬೇಕು ಅಂದ್ರೆ ಸಿಬಿಐಗೆ ವಹಿಸಬೇಕು. ಹೈಕೋರ್ಟ್ ಇಲ್ಲ ಸುಪ್ರೀಂ ಕೋರ್ಟ್ ಮೆಟ್ಟಿಲೇರುತ್ತೇನೆ. ಡಿಕೆಶಿ ಬಹಳ ವೀಕ್ ಮನುಷ್ಯ, ಕೇವಲ ಬ್ಲ್ಯಾಕ್‌ಮೇಲ್ ಮಾಡುವುದೇ ಅವನ ಕೆಲಸ. ಇಲ್ಲವಾದರೆ ಮುಂದೆ ಅವರ ಶಾಸಕರಿಗೂ ತೊಂದರೆ ಇದೆ ಎಂದು ಎಚ್ಚರಿಕೆ ನೀಡಿದರು.

    ತಮ್ಮ ಮನೆಗೆ ಪೋಸ್ಟರ್ ಅಂಟಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಡಿಸಿಎಂ ತಮ್ಮ ಗೂಂಡಾಗಳನ್ನು ಕಳಿಸಿ ಮನೆಗೆ ಪೋಸ್ಟರ್ ಅಂಟಿಸಿದ್ದಾರೆ. ಅವರು ಕಾಂಗ್ರೆಸ್ ಕಾರ್ಯಕರ್ತರು ಅಲ್ಲ. ಡಿಕೆಶಿ ಗೂಂಡಾಗಳು ರಾಜಕಾರಣದಲ್ಲಿ ಇದೇನೂ ಹೊಸದಲ್ಲ. ಇದು ಸಾಮಾನ್ಯ ನಡೆಯುತ್ತದೆ. ಸಿಡಿ ಕೇಸ್‌ನಲ್ಲಿ ಡಿಕೆಶಿ ನನಗೆ ಅಪಮಾನ ಮಾಡಿದ್ದಾರೆ. ಆಗ ನಾನು ಏನು ಬೇಕಾದರೂ ಮಾಡಬಹುದಿತ್ತು, ಮಾಡಲಿಲ್ಲ. ಈಗಲೂ ಅವರನ್ನು ಎದುರಿಸುವ ಸಾಮರ್ಥ್ಯ ಇದೆ. ಆದರೆ ಡಿಕೆಶಿ ತನ್ನ ಚಾಳಿ ಬಿಡ್ತಿಲ್ಲ ಎಂದು ರಮೇಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಡಿಕೆಶಿ ಮಾಜಿ ಸಚಿವ ಆಗೋದಿಲ್ಲ, ಸಿಎಂ ಆಗುತ್ತಾರೆ: ಶಿವಗಂಗಾ ಬಸವರಾಜ್

    ನನ್ನ ಮನೆಗೆ ಪೋಸ್ಟರ್ ಅಂಟಿಸಿದಕ್ಕೆ ಗೋಕಾಕ್ ಠಾಣೆಯಲ್ಲಿ ದೂರು ನೀಡಿದ್ದೇನೆ. ನಾನು ನಿನ್ನೆ ಸುದ್ದಿಗೋಷ್ಠಿಯಲ್ಲಿ ಸಾಮಾನ್ಯ ವಿಚಾರ ಮಾತನಾಡಿದ್ದೆ. ನನ್ನ ಸಿಡಿ ಕೇಸ್ ಸಿಬಿಐಗೆ ಕಳುಹಿಸಲು ಸಿಎಂಗೆ ಪತ್ರ ಬರೆದಿರುವೆ. ಅಲ್ಲದೇ ತ್ವರಿತವಾಗಿ ಕ್ರಮ ವಹಿಸುವಂತೆ ಇಮೇಲ್ ಮಾಡಿದ್ದೇನೆ. ಸಿಡಿ ಕೇಸ್‌ನಲ್ಲಿ ಡಿಕೆಶಿ, ವಿಷಕನ್ಯೆ ಹಾಗೂ ಮತ್ತೊಬ್ಬರು ಸೇರಿದ್ದಾರೆ. ಆ ಸಂಬಂಧ ನನ್ನ ಬಳಿ ದಾಖಲೆಗಳಿವೆ. ಅದನ್ನು ಸಿಬಿಐಗೆ ಸಲ್ಲಿಸುವೆ. ರಮೇಶ್‌ರನ್ನು ಮುಗಿಸುತ್ತೇನೆಂದು ಡಿಕೆಶಿ ಮಾತನಾಡಿದ ಆಡಿಯೋ ಇದೆ. ಸಿಡಿ ಫ್ಯಾಕ್ಟರಿ ಬಂದ್ ಆಗಬೇಕಾದರೆ ಡಿಕೆಶಿ ವಿರುದ್ಧ ಸಿಬಿಐ ತನಿಖೆ ಆಗಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಇನ್ನು ಮುಂದೆ ಶಾಸಕರು, ಮಂತ್ರಿಗಳು ಪಕ್ಷ ವಿರೋಧಿ ಹೇಳಿಕೆ ಕೊಡಬಾರದು: ಕೋಳಿವಾಡ ಎಚ್ಚರಿಕೆ

    Web Stories 
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದಿ ಕೇರಳ ಸ್ಟೋರಿ ನಟಿಯ ಚಿತ್ರಕ್ಕೆ ‘ಸಿ.ಡಿ’ ಎಂದ ಹೆಸರಿಟ್ಟ ತಂಡ

    ದಿ ಕೇರಳ ಸ್ಟೋರಿ ನಟಿಯ ಚಿತ್ರಕ್ಕೆ ‘ಸಿ.ಡಿ’ ಎಂದ ಹೆಸರಿಟ್ಟ ತಂಡ

    ದಿ ಕೇರಳ ಸ್ಟೋರಿ ಯಶಸ್ಸಿನ ನಂತರ ಸಾಲು ಸಾಲು ಚಿತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ ಬಾಲಿವುಡ್ (Bollywood)ನಟಿ ಅದಾ ಶರ್ಮಾ (Adah Sharma). ಅವುಗಳಲ್ಲಿ ಒಂದು ಚಿತ್ರಕ್ಕೆ ವಿಚಿತ್ರ ಹೆಸರನ್ನು ಇಡಲಾಗಿದೆ. ಅದು ಹಾರರ್ ಸಿನಿಮಾವಾಗಿದ್ದರಿಂದ ‘ಸಿ.ಡಿ’ (CD) ಎಂದು ಹೆಸರಿಡಲಾಗಿದೆ ಎನ್ನುತ್ತಾರೆ ನಿರ್ದೇಶಕರು. ಸಿಡಿ ಅಂದರೆ ಕ್ರಿಮಿನಲ್ ಅಥವಾ ಡೆವಿಲ್ ಎಂದೂ ಅರ್ಥೈಸಿದ್ದಾರೆ.

    ಟೈಟಲ್ (Title) ಹೊಂದಿರುವ ಪೋಸ್ಟರ್ ಅನ್ನು ಚಿತ್ರತಂಡ ರಿಲೀಸ್ ಮಾಡಿದ್ದು, ಅದಾ ಶರ್ಮಾ ಕೆಂಪು ಡ್ರೆಸ್‍ ನಲ್ಲಿದ್ದಾರೆ. ಅವರ ಸುತ್ತಲೂ ಅನೇಕ ಕೈಗಳು ಇವೆ. ಆ ನಟಿ ಗಾಬರಿಗೊಂಡಿದ್ದಾಳೆ ಎಂದು ಬಿಂಬಿಸುವ ಪ್ರಯತ್ನವನ್ನು ಪೋಸ್ಟರ್ ನಲ್ಲಿ ಮಾಡಲಾಗಿದೆ. ಇದೊಂದು ಸೈಕಲಾಜಿಕಲ್ ಮತ್ತು ಹಾರರ್ ಸಿನಿಮಾವಾಗಿದ್ದು, ಕೃಷ್ಣ ಅನ್ನಮ್ ಎನ್ನುವವರು ನಿರ್ದೇಶನ ಮಾಡುತ್ತಿದ್ದಾರೆ.

     

    ಈಗಾಗಲೇ ಸಿನಿಮಾದ ಬಹುತೇಕ ಚಿತ್ರೀಕರಣ ಕೂಡ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತವಾಗಿದೆ ಟೀಮ್. ಭರಣಿ ಶಂಕರ್, ರೋಹಿ, ಮಹೇಶ್ ವಿಟ್ಟಾ ಸೇರಿದಂತೆ ಹೆಸರಾಂತ ತಾರಾಬಳಗವೇ ಸಿನಿಮಾದಲ್ಲಿದೆ. ಈ ಸಿನಿಮಾದಲ್ಲಿ ಅದಾ ಶರ್ಮಾ ಅವರ ಪಾತ್ರದ ಬಗ್ಗೆ ಈವರೆಗೂ ಒಂದೇ ಒಂದು ಸುಳಿವನ್ನೂ ಬಿಟ್ಟುಕೊಟ್ಟಿಲ್ಲ ಟೀಮ್.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮತ್ತೆ ರಮೇಶ್ ಜಾರಕಿಹೊಳಿ ದೆಹಲಿಗೆ ದಂಡಯಾತ್ರೆ – ಸಿಬಿಐ ತನಿಖೆಗೆ ತೀವ್ರ ಒತ್ತಾಯ

    ಮತ್ತೆ ರಮೇಶ್ ಜಾರಕಿಹೊಳಿ ದೆಹಲಿಗೆ ದಂಡಯಾತ್ರೆ – ಸಿಬಿಐ ತನಿಖೆಗೆ ತೀವ್ರ ಒತ್ತಾಯ

    ಹುಬ್ಬಳ್ಳಿ: ಸಿಡಿ ಷಡ್ಯಂತ್ರ (CD Case) ಬಗ್ಗೆ ಸಿಬಿಐ (CBI) ತನಿಖೆಗೆ ತ್ರೀವಾಗಿ ಒತ್ತಾಯಿಸಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ (Ramesh Jarkiholi) ಮತ್ತೆ ಬುಧವಾರ ದೆಹಲಿ (Delhi) ದಂಡಯಾತ್ರೆ ಕೈಗೊಂಡಿದ್ದಾರೆ. ರಮೇಶ್ ಜಾರಕಿಹೊಳಿ ಮತ್ತೆ ದೆಹಲಿ ಪ್ರವಾಸ ಕೈಗೊಂಡಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

    ತಮ್ಮ ಆಪ್ತ ಕಿರಣ್ ಜಾಧವ್ ಹಾಗೂ ಹಿಂಡಲಗಾ ಗ್ರಾ.ಪಂ. ಅಧ್ಯಕ್ಷ ನಾಗೇಶ್ ಮನ್ನೋಳ್ಕರ್ ಜೊತೆಗೆ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ದೆಹಲಿಯತ್ತ ಜಾರಕಿಹೊಳಿ ಪ್ರಯಾಣ ಬೆಳೆಸಿದ್ದಾರೆ.

    ಕಳೆದ ವಾರ ಜಾರಕಿಹೊಳಿ ಅಮಿತ್ ಶಾ (Amit Shah) ಭೇಟಿಯಾಗಿದ್ದರು ಈ ವೇಳೆ ಬುಧವಾರ ಅಥವಾ ಗುರುವಾರ ತಮಗೆ ಕರೆಯಿಸಿ ಮಾತನಾಡುವೆ ಎಂದು ಶಾ ಭರವಸೆ ನೀಡಿದ್ದರು ಎನ್ನಾಲಾಗಿದೆ. ಅಮಿತ್ ಶಾ ಕರೆಯ ನಿರೀಕ್ಷೆಯಲ್ಲಿ ದೆಹಲಿಗೆ ತೆರಳುತ್ತಿರುವ ರಮೇಶ್ ಜಾರಕಿಹೊಳಿ ಸಾಧ್ಯವಾದರೆ ಗುರುವಾರ ಸಂಜೆ ಮತ್ತೆ ಶಾ ಭೇಟಿ ಮಾಡುವ ಸಾಧ್ಯತೆಯಿದೆ. ಇದನ್ನೂ ಓದಿ: ತೇಜಸ್ವಿ ಸೂರ್ಯಗೆ ಅಮಾವಾಸ್ಯೆ ಎಂದು ಕರೆಯುತ್ತೇನೆ: ಸಿದ್ದರಾಮಯ್ಯ

    ರಾಜಕೀಯ ಬದ್ಧ ವೈರಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ತಮ್ಮ ಆಪ್ತ ನಾಗೇಶ್ ಮನ್ನೋಳ್ಕರ್ ಅವರನ್ನು ಕಣಕ್ಕಿಳಿಸಲು ರಮೇಶ್ ಜಾರಕಿಹೊಳಿ ಭರ್ಜರಿ ತಯಾರಿ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿಯೇ ನಾಗೇಶ್ ಮನ್ನೋಳ್ಕರ್ ಅವರನ್ನು ದೆಹಲಿಗೆ ಜೊತೆಯಲ್ಲಿ ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಹೈಕಮಾಂಡ್ ಭೇಟಿ ಮಾಡಲಿದ್ದಾರೆಂದು ಆಪ್ತ ಮೂಲಗಳು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿವೆ. ಇದನ್ನೂ ಓದಿ: ಸತ್ಯವನ್ನು ಹೇಳಲು ಧೈರ್ಯ ಇಲ್ಲದವನು ರಾಜಕೀಯ ನಪುಂಸಕ- ಹೆಚ್‍ಡಿಕೆ ವಿರುದ್ಧ ಸಿಟಿ ರವಿ ವಾಗ್ದಾಳಿ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸಿದ್ದಗಂಗೆ, ಆದಿ ಚುಂಚನಗಿರಿ ಗುರುಗಳ ಪರಮ ಶಿಷ್ಯ, ಅಭಿವೃದ್ಧಿ ಜಪ ಮಾಡೋನು: ಸೋಮಣ್ಣ

    ಸಿದ್ದಗಂಗೆ, ಆದಿ ಚುಂಚನಗಿರಿ ಗುರುಗಳ ಪರಮ ಶಿಷ್ಯ, ಅಭಿವೃದ್ಧಿ ಜಪ ಮಾಡೋನು: ಸೋಮಣ್ಣ

    ಚಾಮರಾಜನಗರ: ನನಗೆ ಸಿ.ಡಿ-ಪಾಡಿ ಯಾವುದೂ ಗೊತ್ತಿಲ್ಲ. ನಾನು ಸಿದ್ದಗಂಗೆ, ಆದಿ ಚುಂಚನಗಿರಿ ಗುರುಗಳ ಪರಮ ಶಿಷ್ಯ, ಈ ಬಗ್ಗೆ ನಂಗೆ ಏನೂ ಗೊತ್ತಿಲ್ಲ. ಇದರಲ್ಲಿ ನಾನು ಎಲ್ ಬೋರ್ಡ್ ಎಂದು ಸಚಿವ ವಿ. ಸೋಮಣ್ಣ (V Somanna) ಹೇಳಿದ್ದಾರೆ.

    ಸಿಡಿ ರಾಜಕಾರಣ (CD Politics) ದ ಬಗ್ಗೆ ಚಾಮರಾಜನಗರದಲ್ಲಿ ಪ್ರತಿಕ್ರಿಯಿಸಿದ ಅವರು, ನೀವು ಯಾವ ಪ್ರಶ್ನೆ ಯಾರಿಗೆ ಕೇಳಬೇಕು ಅಂತಾ ಕೇಳ್ದೆ ನನ್ನನ್ನು ಕೇಳಿದ್ರೆ ಹೇಗೆ? ರಾಂಗ್ ಡೈರಕ್ಷನ್‍ನಲ್ಲಿ ಕೇಳಿದ್ರೆ ನಾನೇನು ಹೇಳಲಿ? ನಾನು ಅಭಿವೃದ್ಧಿ ಜಪ ಮಾಡೋನು, ನನ್ನ ಕೇಳಿದ್ರೆ ಸುಖವಿಲ್ಲ, ದಯಮಾಡಿ ಯಾರ್ಯಾರೂ ಸಂಬಂಧಪಟ್ಟೋರು ಇದ್ದಾರೋ ಅವರನ್ನು ಕೇಳಿ ಮಾಹಿತಿ ತಗೊಳ್ಳಿ ಎಂದರು.

    ತಮ್ಮ ರಕ್ತದ ಕಣಕಣದಲ್ಲೂ ಕಾಂಗ್ರೆಸ್ ಇದೆಯೆಂಬ ಎಚ್.ವಿಶ್ವನಾಥ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ವಿಶ್ವನಾಥ್ (H Vishwanath) ಬುದ್ದಿಜೀವಿ, ಹಳ್ಳಿ ಹಕ್ಕಿ, ಅವರಿಗೆ ಒಳ್ಳೆಯದಾಗಲಿ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಸಿದ್ದರಾಮಯ್ಯ ಈ ಬಾರಿಯೂ ಗೆಲ್ಲಲಿ ಅಂತ ಆಶಿಸುವೆ: ಸುಧಾಕರ್

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಶಾ ಭೇಟಿಯಾದ ರಮೇಶ್ ಜಾರಕಿಹೊಳಿ – ಸಿಬಿಐ ತನಿಖೆಗೆ ಮನವಿ

    ಶಾ ಭೇಟಿಯಾದ ರಮೇಶ್ ಜಾರಕಿಹೊಳಿ – ಸಿಬಿಐ ತನಿಖೆಗೆ ಮನವಿ

    ನವದೆಹಲಿ: ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದ್ದ ಸಿಡಿ ಪ್ರಕರಣ (CD Case) ದೆಹಲಿ (Delhi) ಅಂಗಳ ತಲುಪಿದೆ. ಈ ಬಗ್ಗೆ ಸಿಬಿಐ (CBI) ತನಿಖೆ ನಡೆಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ (Amit Shah) ಮಾಜಿ ಸಚಿವ ರಮೇಶ್ ಜಾರಕಿಹೊಳಿ (Ramesh Jarkiholi) ಮನವಿ ಮಾಡಿದ್ದಾರೆ.

    ಅಮಿತ್ ಶಾ ಭೇಟಿಗಾಗಿ ಗುರುವಾರ ದೆಹಲಿಗೆ ತೆರಳಿದ್ದ ರಮೇಶ್ ಜಾರಕಿಹೊಳಿ ಶುಕ್ರವಾರ ಸಂಸತ್ ಭವನದಲ್ಲಿ ಭೇಟಿಯಾಗಿ ಸಾಕ್ಷ್ಯಗಳೊಂದಿಗೆ ಮನವಿ ಪತ್ರ ನೀಡಿ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದಾರೆ. ಈ ಬಗ್ಗೆ ಪರಿಶೀಲಿಸುವುದಾಗಿ ಅಮಿತ್ ಶಾ ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಅಮಿತ್ ಶಾ ಭೇಟಿಗೂ ಮುನ್ನ ರಮೇಶ್ ಜಾರಕಿಹೊಳಿ ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಭೇಟಿಯಾಗಿ ಈ ಬಗ್ಗೆ ಚರ್ಚೆ ನಡೆಸಿದ್ದರು. ಎಲ್ಲಾ ಅಗತ್ಯ ದಾಖಲೆಗಳಿದ್ದು ಈ ಬಗ್ಗೆ ಕ್ರಮ ಆದಲ್ಲಿ ದೊಡ್ಡ ರಾಜಕೀಯ ಲಾಭವಾಗಲಿದೆ ಎಂದು ಅವರಿಗೆ ವಿವರಿಸಿದ್ದರು. ಇದನ್ನೂ ಓದಿ: BBC ಸಾಕ್ಷ್ಯಚಿತ್ರ ನಿಷೇಧ – ಕೇಂದ್ರ ಸರ್ಕಾರಕ್ಕೆ ಸುಪ್ರೀಂ ನೋಟಿಸ್

    ಇದಾದ ಬಳಿಕ ಸಂಸತ್ ಭವನದಲ್ಲಿರುವ ಅಮಿತ್ ಶಾ ಕಚೇರಿಯಲ್ಲಿ ಭೇಟಿಯಾಗಿ ಅಗತ್ಯ ದಾಖಲೆಗಳೊಂದಿಗೆ ಮನವಿ ಪತ್ರ ನೀಡಿದ್ದು, ಪ್ರಕರಣದ ಬಗ್ಗೆ ಮನವರಿಕೆ ಮಾಡುವ ಪ್ರಯತ್ನ ಮಾಡಿದ್ದಾರೆ. ರಾಜ್ಯದಲ್ಲಿ ಸದ್ದು ಮಾಡುತ್ತಿದ್ದ ಸಿಡಿ ಪ್ರಕರಣ ಈಗ ದೆಹಲಿ ಅಂಗಳ ತಲುಪಿದ್ದು, ಅದನ್ನು ಸಿಬಿಐ ಶಿಫಾರಸು ಮಾಡಲಾಗುತ್ತಾ ಎನ್ನುವ ಕುತೂಹಲ ಮೂಡಿದೆ. ಇದನ್ನೂ ಓದಿ: ಸುದೀಪ್ ಕಾಂಗ್ರೆಸ್ ಸೇರಿದರೆ ಸ್ವಾಗತ : ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸಿಡಿ ಜಿದ್ದು ಬಿಡುವಂತೆ ಸಹೋದರರ ಉಪದೇಶ – ಆದ್ರೆ ದೆಹಲಿ ಅಂಗಳಕ್ಕೂ ಕೇಸ್ ಕೊಂಡೊಯ್ಯಲು ಮುಂದಾದ ಜಾರಕಿಹೊಳಿ

    ಸಿಡಿ ಜಿದ್ದು ಬಿಡುವಂತೆ ಸಹೋದರರ ಉಪದೇಶ – ಆದ್ರೆ ದೆಹಲಿ ಅಂಗಳಕ್ಕೂ ಕೇಸ್ ಕೊಂಡೊಯ್ಯಲು ಮುಂದಾದ ಜಾರಕಿಹೊಳಿ

    ಬೆಂಗಳೂರು: ರಮೇಶ್ ಜಾರಕಿಹೊಳಿ (Ramesh Jarkiholi) ಅವರಿಗೆ ಡಿಕೆ ಶಿವಕುಮಾರ್ (DK Shivakumar) ಮೇಲಿನ ಸಿಟ್ಟು ಹಾಗೂ ಸಿಡಿ (CD) ಜಿದ್ದು ತೀವ್ರಗೊಂಡಿದೆ. ಯಾರ ಮಾತೂ ಕೇಳದ ಸಾಹುಕಾರ್ ಸಿಡಿ ಕೇಸ್ ಸಿಬಿಐ ತನಿಖೆಗೆ ಕೊಡುವಂತೆ ಪಟ್ಟು ಮುಂದುವರಿಸಿದ್ದಾರೆ. ಈ ಚುನಾವಣೆಯೊಳಗೆ ಸಿಬಿಐಗೆ (CBI) ಕೇಸ್ ಕೊಡಿಸಲು ಹಠ ಹಿಡಿದು ಕೂತಿದ್ದಾರೆ. ಈ ಮೂಲಕ ಡಿಕೆಶಿ ಮೇಲೆ ಸೇಡು ತೀರಿಸಿಕೊಳ್ಳಲು ರಮೇಶ್ ಜಾರಕಿಹೊಳಿ ಮುಂದಾಗಿದ್ದಾರೆ.

    ಇದೀಗ ಸಾಹುಕಾರ್ ವೇಗಕ್ಕೆ ಬ್ರೇಕ್ ಹಾಕಲು ಅವರ ಕುಟುಂಬ ಮುಂದಾಗಿದೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ ನಡೆಗೆ ಅವರ ಸಹೋದರರಿಂದಲೇ ಆಕ್ಷೇಪ ವ್ಯಕ್ತವಾಗಿದೆ. ಸಾಹುಕಾರ್ ಧೋರಣೆ, ಹಠ ಒಪ್ಪದ ಜಾರಕಿಹೊಳಿ ಸಹೋದರರು, ಇಷ್ಟೊಂದು ದ್ವೇಷ ಬೇಡ, ಸರಿಯಲ್ಲ ಎಂದು ಕಿವಿ ಮಾತು ಹೇಳಿದ್ದಾರೆನ್ನಲಾಗಿದೆ.

    ನಿನ್ನ ಹಠದಿಂದ ಈಗಾಗಲೇ ಸಾಕಷ್ಟು ನಷ್ಟ ಆಗಿಹೋಗಿದೆ. ಈ 2 ವರ್ಷ ನಮ್ಮ ಕುಟುಂಬವೂ ಮುಜುಗರ ಅನುಭವಿಸಿದೆ. ಈಗ ಇದೆಲ್ಲವನ್ನೂ ನಿಲ್ಲಿಸು. ಇನ್ನು ಇದನ್ನು ಮುಂದುವರಿಸಿದರೆ ಮತ್ತಷ್ಟು ಆಪತ್ತು, ನಷ್ಟ ಆಗುತ್ತದೆ. ನೀನು ಅವರತ್ತ ಕಲ್ಲೆಸೆದರೆ ಅವರೂ ನಿನ್ನೆಡೆ ಎಸೆಯುತ್ತಾರೆ. ಈ ರೀತಿ ಸೇಡಿನ ರಾಜಕೀಯಕ್ಕೆ ಅಂತ್ಯ ಇರುವುದಿಲ್ಲ, ಇದರಿಂದ ವಿನಾಶ ಮಾತ್ರ. ಸಾರ್ವಜನಿಕ ಬದುಕು, ಮುಂದೆ ನಡೆಯುವ ಹಾದಿಯ ಬಗ್ಗೆ ಗಮನ ಕೊಡು ಎಂದು ಜಾರಕಿಹೊಳಿ ಸಹೋದರರು ಅಣ್ಣ ರಮೇಶ್ ಜಾರಕಿಹೊಳಿಗೆ ಉಪದೇಶ ಮಾಡಿದ್ದಾರೆ.

    ಇದೀಗ ಸಹೋದರರ ಸಲಹೆಗೆ ಗೋಕಾಕ್ ಸಾಹುಕಾರ್ ನಡೆ ಏನು ಎನ್ನುವ ಕುತೂಹಲ ಮೂಡಿದೆ. ಸಹೋದರರ ಉಪದೇಶಕ್ಕೆ ರಮೇಶ್ ಜಾರಕಿಹೊಳಿ ಮಣಿಯುತ್ತಾರಾ ಅಥವಾ ಇಲ್ಲವಾ ಎನ್ನುವುದು ಸ್ಪಷ್ಟವಿಲ್ಲ. ಇನ್ನುಮೇಲಾದರೂ ರಮೇಶ್ ಸಿಟ್ಟು, ಜಿದ್ದು ತಣ್ಣಗಾಗುತ್ತಾ ಎಂಬುದು ಅವರ ಬೆಂಬಲಿಗರೂ ನಿರೀಕ್ಷೆ ಹುಟ್ಟಿಸಿದೆ. ಅಥವಾ ನನಗೆ ನನ್ನ ಹಠ, ಸೇಡೇ ಮುಖ್ಯ ಎಂದು ಸಿಡಿ ವಾರ್ ಮುಂದುವರಿಸುತ್ತಾರಾ ಎಂಬುದು ತಿಳಿಯದೇ ಹೋಗಿದೆ. ಇದನ್ನೂ ಓದಿ: ಕಾರ್ಕಳದಿಂದ ಮುತಾಲಿಕ್ ಸ್ಪರ್ಧೆ – ಬಿಜೆಪಿಯಿಂದ ಅಭ್ಯರ್ಥಿ ಹಾಕಬೇಡಿ: ಶ್ರೀರಾಮಸೇನೆ ಒತ್ತಾಯ

    ಆದರೆ ಇದಕ್ಕೆ ವ್ಯತಿರಿಕ್ತವೆಂಬಂತೆ ರಮೇಶ್ ಜಾರಕಿಹೊಳಿ ಇದೀಗ ದೆಹಲಿಗೆ ಹೊರಟು ನಿಂತಿದ್ದಾರೆ. ಗುರುವಾರ ಸಂಜೆ ದೆಹಲಿಗೆ ತೆರಳಲಿರುವ ಸಾಹುಕಾರ್ ಶುಕ್ರವಾರ ಅಮಿತ್ ಶಾ ಭೇಟಿಗೆ ಮುಂದಾಗಲಿದ್ದಾರೆ. ಸಿಡಿ ಕೇಸ್ ಸಿಬಿಐ ತನಿಖೆಗೆ ವಹಿಸುವಂತೆ ಅಮಿತ್ ಶಾ ಬಳಿ ರಮೇಶ್ ಮತ್ತೊಮ್ಮೆ ಮನವಿ ಮಾಡಲು ನಿರ್ಧರಿಸಿದ್ದಾರೆ. ಇತ್ತೀಚೆಗೆ ಅಮಿತ್ ಶಾ ಬೆಳಗಾವಿಗೆ ಬಂದಾಗಲೂ ಇದೇ ಒತ್ತಾಯವನ್ನು ರಮೇಶ್ ಜಾರಕಿಹೊಳಿ ಪ್ರಸ್ತಾಪಿಸಿದ್ದರು. ಒಟ್ಟಿನಲ್ಲಿ ಸಿಡಿ ಕೇಸ್ ಹೈಕಮಾಂಡ್ ಅಂಗಳಕ್ಕೆ ತಲುಪುತ್ತಿದ್ದು, ಮುಂದಿನ ವಿದ್ಯಮಾನಗಳು ಕುತೂಹಲ ಮೂಡಿಸಿವೆ. ಇದನ್ನೂ ಓದಿ: ಸೊರಬದಲ್ಲಿ ಸಹೋದರರ ಸವಾಲ್ – ದಾಯಾದಿಗಳ ಜಿದ್ದಾಜಿದ್ದಿ ಈ ಬಾರಿ ಮತ್ತಷ್ಟು ಜೋರು

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಶಾ ಫಸ್ಟ್ ರೌಂಡ್ ಬಳಿಕ ರಮೇಶ್ ಜಾರಕಿಹೊಳಿ ಸಿಡಿ ಬಾಂಬ್ ಏಕೆ?

    ಶಾ ಫಸ್ಟ್ ರೌಂಡ್ ಬಳಿಕ ರಮೇಶ್ ಜಾರಕಿಹೊಳಿ ಸಿಡಿ ಬಾಂಬ್ ಏಕೆ?

    ಬೆಂಗಳೂರು: ಕಿತ್ತೂರು ಕರ್ನಾಟಕದಲ್ಲಿ ಅಮಿತ್ ಶಾ (Amit Shah) ಫಸ್ಟ್ ರೌಂಡ್ ಬಳಿಕ ಸಿಡಿ ಕದನ ಮತ್ತೆ ಶುರುವಾಗಿದೆ. ಅಮಿತ್ ಶಾ ಬಂದು ಹೋಗುವ ತನಕ ಸುಮ್ಮನಿದ್ದು ಈಗ ಅಸಲಿ ಎಲೆಕ್ಷನ್ ಆಟ ಶುರು ಮಾಡಿದ್ದಾರೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ (Ramesh Jarkiholi).

    ಜಾರಕಿಹೊಳಿ ಡಿಕೆಶಿ (DK Shivakumar) ವಿರುದ್ಧ ಸಮರ ಸಾರಲು ಬಿಜೆಪಿ (BJP) ಹೈಕಮಾಂಡ್ ಬಳಿ ಅನುಮತಿ ಕೇಳಿ ಪಡೆದಿದ್ದಾರೆ ಎನ್ನಲಾಗಿದೆ. ಪರ್ಸನಲ್ ಆಗಿ ನನ್ನ ದಾಳಿ ಇರುತ್ತದೆ. ನನಗೆ ಪರ್ಮಿಶನ್ ಕೊಡಿ ಎಂದು ರಮೇಶ್ ಜಾರಕಿಹೊಳಿ ಮನವಿ ಮಾಡಿದ್ದರು ಎನ್ನಲಾಗಿದೆ.

    ನನ್ನ ಮರ್ಯಾದೆ ಹೋಗಿದೆ, ಅಧಿಕಾರ ಹೋಗಿದೆ, ಈಗ ನನ್ನ ಹಠ ಗೆಲ್ಲಬೇಕೆಂಬ ಅಸ್ತ್ರ ಮುಂದಿಟ್ಟು ರಮೇಶ್ ಜಾರಕಿಹೊಳಿ ಹೊಸ ಗೇಮ್ ಚಾಲೂ ಮಾಡಿರುವ ಬಗ್ಗೆ ನಾನಾ ಚರ್ಚೆಗಳು ನಡೆಯುತ್ತಿವೆ. ಈ ನಡುವೆ ಪರ್ಸನಲ್ ಅಟ್ಯಾಕ್ ಏನಾದರೂ ಮಾಡಿಕೊಳ್ಳಿ. ಆದರೆ ಪಾರ್ಟಿಗೆ ಡ್ಯಾಮೇಜ್ ಆಗದ ರೀತಿ ನಡೆದುಕೊಳ್ಳಿ ಎಂದು ಬಿಜೆಪಿ ಹೈಕಮಾಂಡ್ ಎಚ್ಚರಿಕೆ ನೀಡಿದೆ ಎನ್ನಲಾಗಿದೆ. ಇದನ್ನೂ ಓದಿ: 2+1 ಬೆಳಗಾವಿ ಜಿದ್ದು: ಎಲೆಕ್ಷನ್ ವೇಳೆ ಸಿಡಿ, ಆಡಿಯೋ ಬಾಂಬ್ ಸಮರ ಹೆಚ್ಚಾಗುತ್ತಾ?

    ಇದರ ಬೆನ್ನಲ್ಲೇ ರಮೇಶ್ ಜಾರಕಿಹೊಳಿ ಡಿಕೆಶಿ ವಿರುದ್ಧ ಹಳೇ ಕೇಸ್ ಹೊಸ ನಶೆ ಎಂಬ ರೀತಿಯಲ್ಲಿ ರಾಜಕೀಯ ದಾಳಿ ನಡೆಸಿದ್ದಾರೆ. ಇದೇ ವೇಳೆ ಪೊಲಿಟಿಕಲ್ ಚಾರ್ಜ್ ಶೀಟ್ ಹಾಕಿರುವ ರಮೇಶ್ ಜಾರಕಿಹೊಳಿ, 10 ಸಾವಿರ ಕೋಟಿ ಫೈಲ್ ಕ್ಲಿಯರ್ ರಹಸ್ಯದ ಹೊಸ ಬಾಂಬ್ ಹಾಕಿದ್ದಾರೆ. ಹಾಗಾದರೆ ರಮೇಶ್ ಜಾರಕಿಹೊಳಿ ಆರೋಪಕ್ಕೆ ಡಿಕೆಶಿ ಪ್ರತಿ ಅಸ್ತ್ರ ರೆಡಿ ಇದೆಯಾ? ಎಂಬ ಕುತೂಹಲವಿದ್ದು, ಇಬ್ಬರ ಜಿದ್ದಾಜಿದ್ದಿನ ಗುದ್ದಾಟ ರೋಚಕ ಪಡೆದುಕೊಳ್ಳುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. ಇದನ್ನೂ ಓದಿ: ರಮೇಶ್ ಜಾರಕಿಹೊಳಿಗೆ ಕಾಮನ್ ಸೆನ್ಸ್ ಇಲ್ಲ – `ವಿಷಕನ್ಯೆ’ ಪದ ಬಳಕೆಗೆ ಹೆಬ್ಬಾಳ್ಕರ್ ಸಹೋದರ ಖಂಡನೆ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸ್ಯಾಂಟ್ರೋ ಟ್ರಾವೆಲ್ಸ್ ಹತ್ತಿದವರಿಗೆ ಸಿಡಿ ಭಯ- ರವಿ ಹತ್ರ ಸಿಡಿ ಇವೆಯಾ..!?

    ಸ್ಯಾಂಟ್ರೋ ಟ್ರಾವೆಲ್ಸ್ ಹತ್ತಿದವರಿಗೆ ಸಿಡಿ ಭಯ- ರವಿ ಹತ್ರ ಸಿಡಿ ಇವೆಯಾ..!?

    ಬೆಂಗಳೂರು: ಸ್ಯಾಂಟ್ರೋ ರವಿ (Santro Ravi) ಹಾಕಿದ್ದ ವಾಟ್ಸಪ್ ಸ್ಟೇಟಸ್ (Whatsapp Status) ನಿಂದ ಯಾರಿಗೆಲ್ಲ ಕಷ್ಟ..? ವಾಟ್ಸಪ್ ಸ್ಟೇಟಸ್‍ನಲ್ಲಿದ್ದವರ ಕೆಲವರ ರಿಯಲ್ ಸ್ಟೇಟಸ್ ಏನಾಗುತ್ತೆ..? ಹೀಗೆ ರಾಜ್ಯ ರಾಜಕೀಯ ಪಡಸಾಲೆಯಲ್ಲಿ ಕುತೂಹಲ ಗರಿಗೆದರಿದೆ. ಕೆಲವರ ತಪ್ಪು ಅಚ್ಚು ಹಾಕ್ತಾರಾ..? ಕೆಲವರ ತಪ್ಪನ್ನ ಮುಚ್ಚಿ ಹಾಕ್ತಾರಾ..!? ಎಂಬ ಚರ್ಚೆಯೂ ಶುರು ಆಗಿದೆ. ಸ್ಯಾಂಟ್ರೋ ಅಂದರ್ ಆಗಿ ಮುಜಗರದಿಂದ ಸದ್ಯಕ್ಕೆ ಸರ್ಕಾರ ಬಚಾವ್ ಎನ್ನಬಹುದು. ಆದರೆ ಸಿಡಿಗಳ ಸ್ಟೋರಿ ಏನಾಗುತ್ತೆ..!? ಎಂಬ ಕುತೂಹಲ ಇದೆ.

    ಅಂದಹಾಗೆ ಸ್ಯಾಂಟ್ರೋ ರವಿ ಬಳಿ ಬಾಂಬೆ ಡೇಸ್ ಸಿಡಿಗಳಿವೆ ಅಂತಾ ಹೆಚ್‍ಡಿಕೆ ಬಾಂಬ್ ಸಿಡಿಸಿದ್ರು. ಕಾಂಗ್ರೆಸ್, ಜೆಡಿಎಸ್‍ಗೆ ಎಲೆಕ್ಷನ್ ಪ್ರಚಾರದ ಸರಕಾಗಿದ್ದು, ಮುಂದೆ ಸಿಡಿ ರಹಸ್ಯ ಬಯಲಾಗುವ ಟ್ವಿಸ್ಟ್ ಕೂಡ ಕೊಡುತ್ತಿವೆ. ಈಗಾಗಲೇ ಬಂಧನ ಆಗಿರುವ ಸ್ಯಾಂಟ್ರೋ ರವಿ ಬಾಯಿಬಿಡ್ತಾನಾ ಸಿಡಿ (CD) ರಹಸ್ಯ..? ಸ್ಯಾಂಟ್ರೋ ರವಿ ಸಿಡಿ ಬ್ಲ್ಯಾಕ್‍ಮೇಲ್ ಶುರುವಾಗುತ್ತಾ..? ನಿಜಕ್ಕೂ ಸಿಡಿಗಳು ಇವೆಯಾ..? ಅನ್ನೋ ಆತಂಕ ಎದುರಾಗಿದ್ದು, ಸ್ಯಾಂಟ್ರೋ ಟ್ರಾವೆಲ್ಸ್ ಹತ್ತಿದವರಿಗೆ ಢವಢವ ಶುರು ಆಗಿದೆ. ಇದನ್ನೂ ಓದಿ: ಸ್ಯಾಂಟ್ರೋ ರವಿ ವಿರುದ್ಧ 1995 ರಿಂದಲೂ ಕೇಸ್‍ಗಳನ್ನು ಜಾಲಾಡ್ತಿರೋ ಪೊಲೀಸರು

    ಇದರ ಜೊತೆಗೆ ಕೆಲ ವರ್ಗಾವಣೆ ವಿಚಾರವಾಗಿ ಆಡಿಯೋ ಕೂಡ ರಿಲೀಸ್ ಆಗಿತ್ತು. ವರ್ಗಾವಣೆ ಮಾಡಿಸಿ ಇದು ನನ್ನ ಮೊದಲ ವರ್ಕ್ ಎಂದು ಸ್ಟೇಟಸ್ ಹಾಕಿಕೊಂಡಿದ್ದ. ವರ್ಗಾವಣೆ ದಂಧೆಯ ಮೂಲಕವೂ ಹಣ ಮಾಡಿದ್ದ ಎಂಬುದಕ್ಕೆ ಸಾಕ್ಷಿಗಳಿವೆ ಎನ್ನಲಾಗಿದೆ. ಇದರಿಂದ ವರ್ಗಾವಣೆ ಮಾಡಿಸಿಕೊಂಡವರು, ಮಾಡಿಸಿಕೊಟ್ಟವರ ಹೆಸರು ಹೊರಗೆ ಬರುತ್ತಾ..? ಅವರಿಗೂ ಸಂಕಷ್ಟವಾ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಈಶ್ವರಪ್ಪನ ರಾಜೀನಾಮೆಯ ಹಿಂದೆ ನಮ್ಮ ಪಕ್ಷದ ಕಳ್ಳನ ಕೈವಾಡವಿದೆ: ಯತ್ನಾಳ್‌ ಕುಟುಕಿದ್ದು ಯಾರಿಗೆ?

    ಈಶ್ವರಪ್ಪನ ರಾಜೀನಾಮೆಯ ಹಿಂದೆ ನಮ್ಮ ಪಕ್ಷದ ಕಳ್ಳನ ಕೈವಾಡವಿದೆ: ಯತ್ನಾಳ್‌ ಕುಟುಕಿದ್ದು ಯಾರಿಗೆ?

    ವಿಜಯಪುರ: ರಾಜ್ಯದಲ್ಲಿ ಎರಡು ಸಿಡಿ ಕಾರ್ಖಾನೆಗಳಿವೆ. ಬಿಜೆಪಿಯಲ್ಲಿರುವ ಓರ್ವ ಯುವನಾಯಕ, ಕಾಂಗ್ರೆಸ್‌ನಲ್ಲಿರುವ `ಮಹಾನಾಯಕ’ ಸೇರಿ ಕುತಂತ್ರ ಹೆಣೆದಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡಪಾಟೀಲ ಯತ್ನಾಳ್, ಬಿ.ವೈ.ವಿಜಯೇಂದ್ರ ಹಾಗೂ ಡಿ.ಕೆ.ಶಿವಕುಮಾರ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.

    YATNAL_ VIJAYENDRA

    ವಿಜಯಪುರದಲ್ಲಿ ಪಬ್ಲಿಕ್‌ಟಿವಿಯೊಂದಿಗೆ ಮಾತನಾಡಿದ ಅವರು, `ನನ್ನ ಸಿಡಿ ಪ್ರಕರಣ ಹಾಗೂ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣವನ್ನೂ ಸಿಬಿಐ ತನಿಖೆಗೆ ವಹಿಸಬೇಕು. ಈ ಕೇಸ್ ಹಿಂದೆಯೂ `ಮಹಾನಾಯಕ’ನ ತಂಡ ಕೆಲಸ ಮಾಡುತ್ತಿದೆ’ ಎಂಬ ರಮೇಶ್ ಜಾರಕಿಹೋಳಿ ಅವರ ಹೇಳಿಕೆಗೆ ದನಿಗೂಡಿಸಿದ್ದಾರೆ. ಇದನ್ನೂ ಓದಿ: ಈಶ್ವರಪ್ಪ ಸ್ವಯಂ ಪ್ರೇರಣೆಯಿಂದ ರಾಜೀನಾಮೆ ನೀಡಲಿದ್ದಾರೆ: ಬೊಮ್ಮಾಯಿ

    ರಮೇಶ್ ಜಾರಕಿಹೋಳಿ ಹೇಳಿದ್ದರಲ್ಲಿ ಸತ್ಯವಿದೆ. ನಮ್ಮ ಬಿಜೆಪಿಯಲ್ಲಿರುವ ಓರ್ವ ಯುವನಾಯಕ, ಕಾಂಗ್ರೆಸ್‌ನಲ್ಲಿರುವ `ಮಹಾನಾಯಕ’ ಸೇರಿ ಕುತಂತ್ರ ಹೆಣೆದಿದ್ದಾರೆ. ಕಾಂಗ್ರೆಸ್‌ನಲ್ಲಿ ಒಂದು ಟೀಂ ಇದ್ದರೆ, ಬಿಜೆಯಲ್ಲೂ ಒಂದು ಟೀಂ ಇದೆ. ನಮ್ಮಲ್ಲಿರುವ ಕಳ್ಳ, ಕಾಂಗ್ರೆಸ್‌ನಲ್ಲಿರುವ ಮಹಾಕಳ್ಳ ಇಬ್ಬರೂ ಸೇರಿ ಇಂತಹ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ನಾನು ತಪ್ಪಿತಸ್ಥನಲ್ಲ ನನ್ನ ತಪ್ಪು ಇದ್ದರೆ ಭಗವಂತ ನನಗೆ ಶಿಕ್ಷೆ ಕೊಡಲಿ: ಈಶ್ವರಪ್ಪ

    DK SHIVAKUMAR

    ರಾಜೀನಾಮೆ ಕಾಂಗ್ರೆಸ್ ಅವನತಿಯ ಹೆಜ್ಜೆ: ಈಶ್ವರಪ್ಪ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡುತ್ತಿದ್ದಾರೆ. ಇದು ಕಾಂಗ್ರೆಸ್ ಅವನತಿಯ ಹೆಜ್ಜೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಲಕ್ಚ್ಮೀ ಹೆಬ್ಬಾಳ್ಕರ್ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಇದರ ಹಿಂದೆ ಷಡ್ಯಂತ್ರವಿದೆ. ಇದು ಕಾಂಗ್ರೆಸ್ ವ್ಯೂಹ, ಈ ಬಗ್ಗೆಯೂ ತನಿಖೆಯಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.

    ಸಿದ್ದರಾಮಯ್ಯಗೆ ಶ್ಲಾಘನೆ: ಕಾಂಗ್ರೆಸ್ ನವರು ಹತಾಶರಾಗಿದ್ದಾರೆ. ಕರ್ನಾಟಕದ ರಾಜಕಾರಣ ಸುಸಂಸ್ಕೃತ, ಒಳ್ಳೆಯ ರಾಜಕಾರಣ. ರಾಮಕೃಷ್ಣ ಹೆಗಡೆ, ನಿಜಲಿಂಗಪ್ಪ, ಎಸ್.ಎಂ.ಕೃಷ್ಣ, ಡಿ.ದೇವರಾಜ ಅರಸು ಅಂತಹವರನ್ನು ನಾವು ನೋಡಿದ್ದೇವೆ. ಸಿದ್ದರಾಮಯ್ಯ ಅವರ ಬಗ್ಗೆ ಕೂಡ ನಮಗೆ ಗೌರವವಿದೆ. ಅವರು ಇಷ್ಟು ನೀಚ ರಾಜಕಾರಣ ಮಾಡಲ್ಲ, ಅವರು ತೂಕದಲ್ಲಿದ್ದಾರೆ ಎಂದು ಶ್ಲಾಘಿಸಿದ್ದಾರೆ. ಇದನ್ನೂ ಓದಿ: ಮಂತ್ರಿ ಸ್ಥಾನಕ್ಕೆ ಈಶ್ವರಪ್ಪ ರಾಜೀನಾಮೆ ಘೋಷಣೆ

    Yatnal Ramesh Jarkiholi Session

    ಈಗ ಎಲ್ಲ ಪಕ್ಷಗಳಲ್ಲೂ ಕಳ್ಳರು, ಗೂಂಡಾಗಳು, ಲೂಟಿಕೋರರು, ಗಣಿ ಲೂಟಿ ಮಾಡಿದವರು ಇದ್ದಾರೆ. ಮಾದರಿ ಕರ್ನಾಟಕದಲ್ಲಿಂದು ಸಿಡಿ ಮಾಡಿಸೋದು, ಬ್ಲಾಕ್ ಮೇಲ್ ಮಾಡುವಂತಹ ನೀಚ ರಾಜಕಾರಣ ನಡೆಯುತ್ತಿದೆ. ಬೆಂಗಳೂರಿನಲ್ಲಿ ಇಂತಹದೊಂದು ಟೀಂ ಕೆಲಸ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

  • ಸಚಿವಾಕಾಂಕ್ಷಿ ರೇಣುಕಾಚಾರ್ಯಗೆ ಮತ್ತೆ ಸಿ.ಡಿ ಭಯ- ಕೋರ್ಟ್ ಮೊರೆ

    ಸಚಿವಾಕಾಂಕ್ಷಿ ರೇಣುಕಾಚಾರ್ಯಗೆ ಮತ್ತೆ ಸಿ.ಡಿ ಭಯ- ಕೋರ್ಟ್ ಮೊರೆ

    ಬೆಂಗಳೂರು: ಬಿ.ಎಸ್ ಯಡಿಯೂರಪ್ಪ ಬದಲಾವಣೆ ಆದ ಬಳಿಕ ಸಚಿವ ಸ್ಥಾನ ಗಿಟ್ಟಿಸಿಕೊಳ್ಳೋದಕ್ಕೆ ಸತತ ಪ್ರಯತ್ನ ಮಾಡ್ತಾ ಇರೋ ಬಿಜೆಪಿ ಶಾಸಕ ರೇಣುಕಾಚಾರ್ಯಗೆ ಈಗ ಸಿಡಿ ಶುರುವಾಗಿದೆ. ಇದೀಗ ಅವರು ಕೋರ್ಟ್ ಮೊರೆ ಹೋಗಿದ್ದಾರೆ.

    ರೇಣುಕಾಚಾರ್ಯ ವಿರುದ್ಧ ಯಾವುದೇ ಸಿಡಿಯನ್ನು ಪ್ರಸಾರ ಮಾಡದಂತೆ ಕೋರ್ಟ್ ಮೊರೆ ಹೋಗಿದ್ದಾರೆ.ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಗೆ ತಡೆಯಾಜ್ಞೆಗೆ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿ ವಿಚಾರಣೆ ಮಾಡಿದ ನ್ಯಾಯಾಲಯ ಮಧ್ಯಂತರ ತಡೆಯಾಜ್ಞೆಯನ್ನು ನೀಡಿದ್ದು, ರೇಣುಕಾಚಾರ್ಯ ಮಾನಹಾನಿಯಾಗುವಂತಹ ಯಾವುದೇ ಸಿಡಿಯನ್ನು ದೃಶ್ಯಾವಳಿಗಳನ್ನು ಪ್ರಸಾರ ಮಾಡದಂತೆ ಆದೇಶ ನೀಡಿದೆ.

    ಆದರೆ ಹದಿನೈದು ದಿನಗಳ ಹಿಂದೆ ಸಿಡಿ ವಿಚಾರ ಕೇಳಿದಾಗ ನನಗೇನೂ ಗೊತ್ತಿಲ್ಲ. ನನ್ನದು ಯಾವುದೇ ಸಿಡಿ ಇಲ್ಲ ಅಂತ ಮಾಧ್ಯಮಗಳ ಜೊತೆ ವಾದ ಮಾಡಿದ್ದರು. ಇದೀಗ ಸೈಲೆಂಟ್ ಆಗಿ ಕೋರ್ಟ್ ಗೆ ಹೋಗಿ ಮಧ್ಯಂತರ ತಡೆಯಾಜ್ಞೆ ತಂದಿದ್ದಾರೆ. ಇದನ್ನೂ ಓದಿ: ನಾನು ತಪ್ಪು ಮಾಡಿಲ್ಲ, ಗ್ರಾಫಿಕ್ಸ್‌ನಲ್ಲಿ ಏನು ಬೇಕಾದರೂ ಮಾಡಬಹುದು: ರೇಣುಕಾಚಾರ್ಯ

    ವಾರದ ಹಿಂದೆ ರೇಣುಕಾಚಾರ್ಯ ಅವರು ದಿಢೀರ್ ದೆಹಲಿಗೆ ತೆರಳಿ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದರು. ಈ ವೇಳೆ ಸಿಡಿ ಸಂಬಂಧ ಪಬ್ಲಿಕ್ ಟಿವಿ ಪ್ರಶ್ನಿಸಿದಾಗ, ಸಿಡಿ ಬಗ್ಗೆ ನಂಗೇನೂ ಗೊತ್ತಿಲ್ಲ. ಈ ಬಗ್ಗೆ ಹೈಕಮಾಂಡ್ ಭೇಟಿ ಮಾಡುವಷ್ಟು ದೊಡ್ಡವನಲ್ಲ. ಕ್ಷೇತ್ರದ ಕಾರ್ಯಕ್ಕೆ ದೆಹಲಿಗೆ ಬಂದಿದ್ದೇನೆ. ನಂಗೇ ಯಾವುದೇ ಮಾಹಿತಿ ಇಲ್ಲ ಎಂದು ಹೇಳುವ ಮೂಲಕ ಪ್ರತಿಕ್ರಿಯಿಸಲು ನಿರಾಕರಿಸಿದ್ದರು. ಆದರೆ ರೇಣುಕಾಚಾರ್ಯ ಅವರು ಹೈಕಮಾಂಡ್ ನಾಯಕರಿಂದ ಸಿಡಿ ಬಿಡುಗಡೆ ತಡೆ ತರಲು ಪ್ಲ್ಯಾನ್ ಮಾಡಿಕೊಂಡು ದೆಹಲಿಗೆ ಹೋಗಿದ್ದರು. ಬಿಜೆಪಿ ನಾಯಕರ ಬಳಿಯೇ ಸಿ.ಡಿ ಇರುವ ಬಗ್ಗೆ ಮಾಹಿತಿ ಇದ್ದು, ಹೈಕಮಾಂಡ್ ಮೂಲಕ ಒತ್ತಡ ಹಾಕಿ ಸಿ.ಡಿ ವಿಚಾರಕ್ಕೆ ಬ್ರೇಕ್ ಹಾಕಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಲಾಗಿತ್ತು.