Tag: CCTV VIDEO

  • ಗ್ರಾಹಕರ ಸೋಗಿನಲ್ಲಿ ಚಿನ್ನದ ಸರ ಎಗರಿಸಿದ ಐನಾತಿ ಕಳ್ಳಿಯರ ಗ್ಯಾಂಗ್

    ಗ್ರಾಹಕರ ಸೋಗಿನಲ್ಲಿ ಚಿನ್ನದ ಸರ ಎಗರಿಸಿದ ಐನಾತಿ ಕಳ್ಳಿಯರ ಗ್ಯಾಂಗ್

    ಬೆಂಗಳೂರು: ಸಿಲಿಕಾನ್ ಸಿಟಿಯ ಪ್ರತಿಷ್ಠಿತ ಹೋಟೆಲ್‍ನಲ್ಲಿ ಚಿನ್ನಾಭರಣ ಮೇಳ ಏರ್ಪಡಿಸಲಾಗಿತ್ತು. ಇದನ್ನೇ ಟಾರ್ಗೆಟ್ ಮಾಡಿದ್ದ ಐನಾತಿ ಕಳ್ಳಿಯರ ಗ್ಯಾಂಗ್ ಮೇಳಕ್ಕೆ ಟಿಪ್‍ಟಾಪ್ ಆಗಿ ಬಂದು ಗುಂಪಿನಲ್ಲಿ ಚಿನ್ನದ ಸರ ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದಾರೆ.

    ಇದೇ ತಿಂಗಳ 18ರಿಂದ ಮೂರು ದಿನಗಳ ಕಾಲ ಒರಾಯನ್ ಮಾಲ್ ಪಕ್ಕದಲ್ಲಿರುವ ಶೆಲ್ಟನ್ ಹೋಟಲ್‍ನಲ್ಲಿ ಚಿನ್ನಾಭರಣ ಮೇಳೆ ಆಯೋಜನೆ ಮಾಡಲಾಗಿತ್ತು. ಚಿನ್ನಾಭರಣ ಮೇಳದಲ್ಲಿ ನಗರದ ಹಾಗೂ ಹೊರ ರಾಜ್ಯದ ಪ್ರತಿಷ್ಠಿತ ಚಿನ್ನದ ಮಳಿಗೆಗಳು ಭಾಗಿಯಾಗಿದ್ದವು. ಮೂರು ದಿನಗಳ ಕಾಲ ನಡೆದ ಚಿನ್ನದ ಮೇಳಕ್ಕೆ ಸಾವಿರಾರರು ಜನ ಬಂದು ತಮ್ಮ ನೆಚ್ಚಿನ ಚಿನ್ನವನ್ನ ಖರೀದಿ ಮಾಡಿದ್ದರು.

    ಮೇಳದಲ್ಲಿ ವೈಭವ್ ಚಿನ್ನದ ಮಳಿಗೆಯ 200 ಗ್ರಾಂ ತೂಕದ ಲಾಂಗ್ ಚಿನ್ನದ ಸರ ಕಳ್ಳತನ ಮಾಡಲಾಗಿದೆ. ನೂರಾರು ಜನರ ನಡುವೆ ಸಿಸಿಟಿವಿ ಅಳವಿಡಿಸಿದ್ದರು ಚಿನ್ನಾಭರಣ ಕಳವು ಮಾಡಲು ಕಳ್ಳಿಯರ ಗ್ಯಾಂಗ್ ಯಶಸ್ವಿಯಾಗಿದೆ. ಐನಾತಿ ಕಳ್ಳಿಯರ ಕೃತ್ಯ ಸದ್ಯ ಸಿಸಿಟಿವಿಯಲ್ಲಿ ಬಯಲಾಗಿದೆ. ಘಟನೆ ಸಂಬಂದ ವೈಭವ್ ಚಿನ್ನದ ಮಳಿಗೆಯ ಮಾಲೀಕರು ಸುಬ್ರಮಣ್ಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಸಿಸಿಟಿವಿ ದೃಶ್ಯ ಆಧರಿಸಿ ಕಳ್ಳಿಯರಿಗೆ ಬಿಸಿದ್ದಾರೆ.

  • ಬೌನ್ಸ್ ಬೈಕ್‍ನಲ್ಲಿ ಬರ್ತಾರೆ, ತಲೆಗೆ ಹಿಂಬದಿಯಿಂದ ಹೊಡೀತಾರೆ- ಬೆಂಗ್ಳೂರಲ್ಲಿ ಸರಗಳ್ಳರ ಕಾಟ

    ಬೌನ್ಸ್ ಬೈಕ್‍ನಲ್ಲಿ ಬರ್ತಾರೆ, ತಲೆಗೆ ಹಿಂಬದಿಯಿಂದ ಹೊಡೀತಾರೆ- ಬೆಂಗ್ಳೂರಲ್ಲಿ ಸರಗಳ್ಳರ ಕಾಟ

    ಬೆಂಗಳೂರು: ನಗರದಲ್ಲಿ ಸರಗಳ್ಳರ ಹಾವಳಿ ಹೆಚ್ಚಾಗಿದ್ದು, ಬೈಕಿನಲ್ಲಿ ಬರುತ್ತಾ ಇದ್ದ ಸರಗಳ್ಳರು ಈಗ ಲಾಂಗ್ ಹಿಡಿಕೊಂಡು ಕೃತ್ಯಕ್ಕೆ ಮುಂದಾಗಿದ್ದಾರೆ. ಅದು ಬಾಡಿಗೆ ಬೌನ್ಸ್ ಸ್ಕೂಟರ್ ಪಡೆದು ಕೃತ್ಯ ನಡೆಸಿರುವ ಘಟನೆ ನಗರದ ಕೆ.ಆರ್.ಪುರಂನಲ್ಲಿ ನಡೆದಿದೆ.

    ಕಳೆದ ಎರಡು ದಿನಗಳ ಹಿಂದೆಯಷ್ಟೇ ಕೆ.ಆರ್.ಪುರಂನ ಟಿ.ಸಿ.ಪಾಳ್ಯದ ಸರೋಜಮ್ಮ ಎಂಬುವವವರು ತಮ್ಮ ಮೊಮ್ಮಕ್ಕಳ ಜೊತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಹಿಂಬದಿಯಿಂದ ಬಂದ ಇಬ್ಬರು ದುಷ್ಕರ್ಮಿಗಳು ಮಹಿಳೆಗೆ ಲಾಂಗ್ ನಲ್ಲಿ ಹಿಂಬದಿಯಿಂದ ಹಲ್ಲೆ ನಡೆಸಿದ್ದಾರೆ.

    ಬೌನ್ಸ್‍ನ ಬಾಡಿಗೆ ಸ್ಕೂಟರಿನಲ್ಲಿ ಬಂದ ದುಷ್ಕರ್ಮಿಗಳು ಹಲ್ಲೆ ನಡೆಸಿ ಬಳಿಕ ಮಹಿಳೆಯನ್ನು ನೆಲಕ್ಕೆ ಬೀಳುವಂತೆ ಮಾಡಿದ್ದಾರೆ. ಆ ಬಳಿಕ ನೆಲಕ್ಕೆ ಬಿದ್ದ ಮಹಿಳೆ ಬಳಿ ಬಂದು ಹಲ್ಲೆ ನಡೆಸಿ ಚಿನ್ನಾಭರಣ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಬೌನ್ಸ್ ಗಾಡಿಯಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ನಡೆಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಗಳ ಪತ್ತೆಗೆ ಬೌನ್ಸ್ ಕಂಪನಿಯ ಜೊತೆ ಸಂಪರ್ಕವನ್ನು ಮಾಡಿದ್ದಾರೆ.