Tag: CCTV Scene

  • ನಡುರಸ್ತೆಯಲ್ಲಿ ಅಮ್ಮ, ಮಗಳಿಗೆ ಹಿಗ್ಗಾಮುಗ್ಗಾ ಥಳಿಸಿದ ಗ್ಯಾಂಗ್

    ನಡುರಸ್ತೆಯಲ್ಲಿ ಅಮ್ಮ, ಮಗಳಿಗೆ ಹಿಗ್ಗಾಮುಗ್ಗಾ ಥಳಿಸಿದ ಗ್ಯಾಂಗ್

    ನವದೆಹಲಿ: 38 ವರ್ಷದ ಮಹಿಳೆ ಹಾಗೂ ಅವರ ಪುತ್ರಿ ಮೇಲೆ ನಡುರಸ್ತೆಯಲ್ಲಿ ಗ್ಯಾಂಗ್‍ವೊಂದು ದಾಳಿ ಮಾಡಿರುವ ಘಟನೆ ದೆಹಲಿಯ ಶಾಲಿಮಾರ್ ಬಾಗ್ ಪ್ರದೇಶದಲ್ಲಿ ನಡೆದಿದೆ.

    ಈ ಘಟನೆ ನವೆಂಬರ್ 19ರಂದು ನಡೆದಿದ್ದು, ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವೀಡಿಯೋದಲ್ಲಿ ಮಹಿಳೆ ಕಾರನ್ನು ಪಾರ್ಕ್ ಮಾಡಿದಾಗ ಅವರ ಮಗಳು ಕಾರಿನಿಂದ ಕೆಳಗೆ ಇಳಿಯುತ್ತಿದ್ದಂತೆ ಏಕಾಏಕಿ ಇಬ್ಬರು ಮಹಿಳೆಯರು ಸೇರಿದಂತೆ ಇಬ್ಬರು ಪುರುಷರು ಮಹಿಳೆಯ ಪುತ್ರಿ ಮೇಲೆ ದೈಹಿಕವಾಗಿ ಹಲ್ಲೆ ಮಾಡಲು ಆರಂಭಿಸುತ್ತಾರೆ. ಈ ವೇಳೆ ಮಗಳನ್ನು ರಕ್ಷಿಸಲು ಮುಂದಾದ ತಾಯಿಗೂ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಪಾರ್ಕಿಂಗ್ ಪ್ರದೇಶದಲ್ಲಿ ಈ ಗ್ಯಾಂಗ್ ದೊಣ್ಣೆಯಿಂದ ಹೊಡೆಯುವುದು, ಕಾಲಿನಿಂದ ತೀವ್ರವಾಗಿ ಒದೆಯುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ: ಮುಖ್ಯಮಂತ್ರಿ ತೀರ್ಮಾನಕ್ಕೆ ಬದ್ಧ: ಎಸ್.ಆರ್ ವಿಶ್ವನಾಥ್

    ಘಟನೆ ಬಳಿಕ ಮಹಿಳೆ ಹಾಗೂ ಆಕೆಯ ಪುತ್ರಿ ಆಸ್ಪತ್ರೆಗೆ ದಾಖಲಿಸಲಾಗಿ ಇದೀಗ ಚೇತರಿಸಿಕೊಂಡು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಅನ್ವಯ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‍ಗಳ ಅಡಿಯಲ್ಲಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಸದ್ಯ ಸಿಸಿಟಿವಿ ದೃಶ್ಯಾವಳಿಯಲ್ಲಿ ಕಂಡು ಬಂದ ಇಬ್ಬರು ಆರೋಪಿ ಮಹಿಳೆಯರನ್ನು ಪೊಲೀಸರು ಬಂಧಿಸಿದ್ದು, ಮತ್ತಿಬ್ಬರು ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ: ನನ್ನ ಸೇವೆಯನ್ನು ಸಹಿಸಲಾಗದೆ ಕೊಲೆಗೆ ಸಂಚು: ಎಸ್.ಆರ್ ವಿಶ್ವನಾಥ್

    ಹಲ್ಲೆ ನಡೆಸಿರುವ ಆರೋಪಿಗಳು ಎಎಪಿ ಶಾಸಕಿ ಬಂದಾನ ಕುಮಾರಿ ಅವರ ಬೆಂಬಲಿಗಾರಾಗಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಆದರೆ ಈ ಆರೋಪ ಕುರಿತಂತೆ ಪ್ರತಿಕ್ರಿಯಿಸಿರು ಬಂದಾನ ಕುಮಾರಿ ಅವರು, ಮಹಿಳೆ ನನ್ನ ನೆರೆ ಮನೆಯಲ್ಲಿ ವಾಸಿಸುತ್ತಾಳೆ. ಆಕೆ ಯಾವಾಗಲೂ ನನ್ನ ಮೇಲೆ ಆರೋಪ ಮಾಡುತ್ತಲೇ ಇರುತ್ತಾಳೆ. ಈ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ತಿರುಗೇಟು ನೀಡಿದ್ದಾರೆ.

  • ಬಾಲಕಿ ಮೇಲೆ ಏಕಾಏಕಿ ನಾಯಿಗಳ ದಾಳಿ – ಸಿಸಿಟಿವಿಯಲ್ಲಿ ದೃಶ್ಯ ಸೆರೆ

    ಬಾಲಕಿ ಮೇಲೆ ಏಕಾಏಕಿ ನಾಯಿಗಳ ದಾಳಿ – ಸಿಸಿಟಿವಿಯಲ್ಲಿ ದೃಶ್ಯ ಸೆರೆ

    ಬೆಂಗಳೂರು/ಆನೇಕಲ್: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಬಾಲಕಿ ಮೇಲೆ ನಾಯಿಗಳು ದಾಳಿ ಮಾಡಿವೆ. ಬಾಲಕಿ ಮೇಲೆ ನಾಯಿಗಳು ಅಟ್ಯಾಕ್ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.  

    DOG

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ನಗರದ ಮಾರ್ಕೆಟ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಇಂದು ಬೆಳಿಗ್ಗೆ 16 ವರ್ಷದ ಬಾಲಕಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಳು. ಈ ವೇಳೆ 6 ಕ್ಕೂ ಹೆಚ್ಚು ನಾಯಿಗಳು ಏಕಾಏಕಿ ಬಾಲಕಿ ಮೇಲೆ ದಾಳಿ ಮಾಡಿವೆ. ಸ್ಥಳೀಯರ ನೆರವಿನಿಂದ ಅದೃಷ್ಟವಶಾತ್ ಬಾಲಕಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಇದನ್ನೂ ಓದಿ:  ಈಶ್ವರಪ್ಪ ಜೀವನದಲ್ಲಿ ಈವರೆಗೆ ಯಾವ ಕೆಲಸವನ್ನೂ ಸರಿಯಾಗಿ ಮಾಡಿಲ್ಲ: ಎಚ್.ಎಂ. ರೇವಣ್ಣ

    DOG

    ಬಾಲಕಿ ಮೇಲೆ ನಾಯಿಗಳು ಏಕಾಏಕಿ ದಾಳಿ ನಡೆಸಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಗಾಯಗೊಂಡ ಬಾಲಕಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾಳೆ. ಬೀದಿ ನಾಯಿಗಳ ದಾಳಿ ಹೆಚ್ಚಾಗುತ್ತಿದೆ ಅಂತ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:  ನಾನು ಎಲ್ಲರಿಗಿಂತ ಸೀನಿಯರ್, ಅರ್ಧ ಬೆಂಗಳೂರು ಉಸ್ತುವಾರಿ ಕೊಡಲಿ: ಸೋಮಣ್ಣ

  • ಕೆಳಗೆ ಬಿದ್ದ ರೈಲಿನ ಬಾಗಿಲ ಬಳಿ ನಿಂತಿದ್ದ ಬಾಲಕಿ

    ಕೆಳಗೆ ಬಿದ್ದ ರೈಲಿನ ಬಾಗಿಲ ಬಳಿ ನಿಂತಿದ್ದ ಬಾಲಕಿ

    – ಸಿಸಿಟಿವಿಯಲ್ಲಿ ಸೆರೆಯಾಯ್ತು ದೃಶ್ಯ

    ಮುಂಬೈ: ರೈಲಿನ ಬಾಗಿಲ ಬಳಿ ನಿಂತಿದ್ದ 12 ವರ್ಷದ ಬಾಲಕಿ ಕೆಳಗೆ ಬಿದ್ದಿರುವ ಘಟನೆ ಮುಂಬೈನ ಬೈಕುಲಾ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ. ಘಟನೆಯ ಎಲ್ಲ ದೃಶ್ಯಗಳು ನಿಲ್ದಾಣದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

    ಲೋಕಲ್ ರೈಲು ಬೈಕುಲಾ ನಿಲ್ದಾಣ ಪ್ರವೇಶಿಸಿತ್ತು. ಈ ವೇಳೆ ರೈಲಿನ ಬಳಿಯೇ ನಿಂತಿದ್ದ ಬಾಲಕಿ ಆಯತಪ್ಪಿ ಪ್ಲಾಟ್‍ಫಾರಂ ಮೇಲೆ ಬಿದ್ದಿದ್ದಾಳೆ. ಕೂಡಲೇ ಎಚ್ಚೆತ್ತ ಸ್ಥಳದಲ್ಲಿದ್ದ ಜಿಆರ್‍ಪಿ ಸಿಬ್ಬಂದಿ ರೈಲಿನಡಿ ಸಿಲುಕಿಕೊಳ್ಳುತ್ತಿದ್ದ ಬಾಲಕಿಯನ್ನ ರಕ್ಷಿಸಿ ಜೀವ ಉಳಿಸಿದ್ದಾರೆ.

    ರೈಲಿನಿಂದ ಕೆಳಗೆ ಬೀಳುತ್ತಿದ್ದಂತೆ ಭಯಗೊಂಡ ಬಾಲಕಿ ಜ್ಞಾನ ತಪ್ಪಿದ್ದಳು. ಬಾಲಕಿಗೆ ರೈಲ್ವೇ ನಿಲ್ದಾಣದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ, ತದನಂತರ ಬಾಲಕಿಯ ಪೋಷಕರಿಗೆ ಮಾಹಿತಿ ನೀಡಿ ಅವರ ವಶಕ್ಕೆ ನೀಡಲಾಗಿದೆ.

  • ರಂಗೋಲಿ ಹಾಕ್ತಿದ್ದ ಮಹಿಳೆಯ ಸರಗಳ್ಳತನ

    ರಂಗೋಲಿ ಹಾಕ್ತಿದ್ದ ಮಹಿಳೆಯ ಸರಗಳ್ಳತನ

    – ಸಿಸಿಟಿವಿಯಲ್ಲಿ ಕಳ್ಳನ ಚಲನವಲನ ಸೆರೆ

    ಭೋಪಾಲ್: ಮನೆಯ ಮುಂದೆ ರಂಗೋಲಿ ಹಾಕುತ್ತಿದ್ದ ಮಹಿಳೆಯ ಕುತ್ತಿಗೆಗೆ ಕೈ ಹಾಕಿ ಚಿನ್ನದ ಚೈನ್ ಕದ್ದು ಸವರಾನೋರ್ವ ಎಸ್ಕೇಪ್ ಆಗಿದ್ದಾರೆ. ಕಳ್ಳನ ಚಲನವಲನ ಮನೆಯ ಮುಂಭಾಗದಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಮಧ್ಯಪ್ರದೇಶದ ಇಂದೋರ್ ನಗರದ ಲಸೂಡಿಯಾದದ ಮಹಾಲಕ್ಷ್ಮಿ ಬಡಾವಣೆಯಲ್ಲಿ ಸರಗಳ್ಳತನ ನಡೆದಿದೆ. ಇಂದು ಬೆಳಗ್ಗೆ ಮಹಿಳೆ ಮನೆಯ ಮುಂದೆ ರಂಗೋಲಿ ಹಾಕುತ್ತಿದ್ದರು. ಬೆಳಗ್ಗೆಯಾಗಿದ್ದರಿಂದ ರಸ್ತೆಯಲ್ಲಿ ಜನ ಸಂಚಾರವಿರಲಿಲ್ಲ. ಹಿಂದಿನಿಂದ ಬಂದ ಬೈಕ್ ಸವಾರ ಕ್ಷಣಾರ್ಧದಲ್ಲಿ ಮಹಿಳೆಯನ್ನ ಕೆಳಗೆ ಬೀಳಿಸಿ ಕೊರಳಲ್ಲಿದ್ದ ಚಿನ್ನದ ಚೈನ್ ಕದ್ದು ಪರಾರಿಯಾಗಿದ್ದಾನೆ. ಘಟನೆ ಸಂಬಂಧ ಮಹಿಳೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಘಟನೆ ಕುರಿತು ಪ್ರತಿಕ್ರಿಯಿಸಿರುವ ಎಎಸ್ ಪಿ ರಾಜೇಶ್ ರಘುವಂಶಿ, ಮಹಾಲಕ್ಷ್ಮಿ ಬಡಾವಣೆಯಲ್ಲಿ ಸರಗಳ್ಳತನ ನಡೆದಿರುವ ಬಗ್ಗೆ ಪ್ರಕರಣ ದಾಖಲಾಗಿದೆ. ಸಿಸಿಟಿವಿ ದೃಶ್ಯಗಳನ್ನ ಪರಿಶೀಲನೆ ನಡೆಸಲಾಗುತ್ತಿದೆ. ಶೀಘ್ರದಲ್ಲಿಯೇ ಆರೋಪಿಯನ್ನ ಬಂಧಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಕಳೆದ ಕೆಲ ದಿನಗಳಿಂದ ಬಡವಾಣೆಯಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ರಸ್ತೆಯಲ್ಲಿ ಮಹಿಳೆಯರು, ವೃದ್ಧರು ಓಡಾಡದ ಸ್ಥಿತಿ ನಿರ್ಮಾಣವಾಗಿದೆ. ಪೊಲೀಸರು ಕಾರ್ಯಪ್ರವೃತ್ತರಾಗಿ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

  • ಬೆಳಗ್ಗೆ ತಾಯಿಯ ಮುಂದೆ ಮಗಳ ಕಿಡ್ನಾಪ್- ಮಧ್ಯಾಹ್ನ ಮದ್ವೆ

    ಬೆಳಗ್ಗೆ ತಾಯಿಯ ಮುಂದೆ ಮಗಳ ಕಿಡ್ನಾಪ್- ಮಧ್ಯಾಹ್ನ ಮದ್ವೆ

    – ತನಿಖೆ ವೇಳೆ ಬಯಲಾಯ್ತು ಯುವತಿಯ ಲವ್ ಸ್ಟೋರಿ
    – ಓಡಿ ಹೋಗಲು ಕಿಡ್ನ್ಯಾಪ್ ಡ್ರಾಮಾ
    – ನನ್ನ ಮಗಳನ್ನ ಬಿಟ್ಬಿಡಿ ಎಂದು ಗೋಗರೆದ ತಾಯಿ
    – ಅಪಹರಣ ದೃಶ್ಯ ಸಿಸಿಟಿವಿಯಲ್ಲಿ ಸೆರೆ

    ಚಂಡೀಗಢ: ತಾಯಿಯ ಮುಂದೆಯೇ ಮಗಳ ಅಪಹರಣದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಇಂದು ಬೆಳಗ್ಗೆ ನಡೆದ ಪ್ರಕರಣ ಸಂಜೆ ವೇಳೆಗೆ ಹಲವು ತಿರುವುಗಳನ್ನು ಪಡೆದುಕೊಂಡು ಮದುವೆಯ ಸ್ವರೂಪ ಪಡೆದುಕೊಂಡಿದೆ. ಯುವತಿಯ ಸಮ್ಮತಿಯ ಮೇರೆಗೆ ಅಪಹರಣ ನಡೆದಿರೋದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

    ಹರಿಯಾಣದ ಝಜ್ಜರ್ ಪಟ್ಟಣದ ಛಾವಣಿ ಬಡಾವಣೆಯಲ್ಲಿ ಇಂದು ಬೆಳಗ್ಗೆ ತಾಯಿ ಮುಂದೆಯೇ ನಡೆದ ಮಗಳ ಪಹರಣ ಪ್ರಕರಣ ಇಡೀ ನಗರವನ್ನೇ ಬೆಚ್ಚಿ ಬೀಳಿಸಿತ್ತು. ಸಂಜೆ ವೇಳೆ ಯುವತಿ ಆರ್ಯ ಸಮಾಜದ ಮಂದಿರದಲ್ಲಿ ಮದುವೆ ಆಗೋ ಮೂಲಕ ಪೋಷಕರಿಗೆ ಶಾಕ್ ನೀಡಿದ್ದಾರೆ. ಅಪಹರಣ ಮೊದಲೇ ಪ್ಲಾನ್ ಆಗಿದ್ದರಿಂದ ಯುವತಿ ಜೊತೆ ತನ್ನ 10ನೇ ಕ್ಲಾಸ್ ಮಾರ್ಕ್ಸ್ ಕಾರ್ಡ್ ತೆಗೆದುಕೊಂಡು ಹೋಗಿದ್ದಾಳೆ. ಒಂದು ತಿಂಗಳ ಹಿಂದೆಯೇ ಯುವತಿಗೆ 18 ವರ್ಷ ತುಂಬಿತ್ತು ಎಂದು ವರದಿಯಾಗಿದೆ.

    ಬೆಳಗ್ಗೆ ಯುವತಿಯ ಹೈಡ್ರಾಮಾ: ಬೆಳಗ್ಗೆ ಯುವತಿ ತಾಯಿ ಜೊತೆ ಟೈಲರಿಂಗ್ ಕ್ಲಾಸ್ ಮುಗಿಸಿಕೊಂಡು ಮನೆಗೆ ಹಿಂದಿರುಗುತ್ತಿದ್ದಳು. ಈ ವೇಳೆ ಕಾರಿನಲ್ಲಿ ಬಂದ ಕೆಲ ಯುವಕರು ಯುವತಿಯನ್ನು ಕಾರಿನೊಳಗೆ ಎಳೆದುಕೊಂಡಿದ್ದಾರೆ. ತಾಯಿ ಮಗಳನ್ನು ರಕ್ಷಿಸಲು ಮುಂದಾಗಿ, ಯುವಕರಲ್ಲಿ ಪುತ್ರಿಯನ್ನು ಬಿಟ್ಟುಬಿಡಿ ಎಂದು ಕಣ್ಣೀರು ಹಾಕಿದ್ದಾಳೆ. ಇದೆಲ್ಲಾ ಡ್ರಾಮಾ ಎಂದು ಗೊತ್ತಿದ್ದರೂ ಯುವತಿ ಕಾರ್ ನಲ್ಲಿ ಬಂದವರ ಜೊತೆ ಎಸ್ಕೇಪ್ ಆಗಿದ್ದಾಳೆ. ಮಗಳ ಪ್ಲಾನ್ ಅರಿಯದ ಮುಗ್ಧ ತಾಯಿ ಮಾತ್ರ ಕಾರಿನ ಹಿಂದೆ ಓಡಿ ಹೋಗ್ತಿರೋ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

    ವಿಷಯ ತಿಳಿಯುತ್ತಿದ್ದಂತೆ ಕಾರ್ಯಪ್ರವೃತ್ತರಾದ ಪೊಲೀಸರು ಘಟನೆ ನಡೆದ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ನಡೆಸಿ ಮಾಹಿತಿ ಕಲೆ ಹಾಕಿದಾಗ ಯುವತಿಯ ಹೈಡ್ರಾಮಾ ಬೆಳಕಿಗೆ ಬಂದಿದೆ. ಜಿಂದ್ ಜಿಲ್ಲೆಯಲ್ಲಿದ್ದ ಯುವತಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಆಕೆಯ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ. ಈ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • ಅತ್ತಿತ್ತ ನೋಡ್ತಾಳೆ-ಬ್ಯಾಗ್‍ನಲ್ಲಿ ಮೊಬೈಲ್ ಹಾಕ್ತಾಳೆ

    ಅತ್ತಿತ್ತ ನೋಡ್ತಾಳೆ-ಬ್ಯಾಗ್‍ನಲ್ಲಿ ಮೊಬೈಲ್ ಹಾಕ್ತಾಳೆ

    -ಸಿಸಿಟಿವಿಯಲ್ಲಿ ಸೆರೆಯಾಯ್ತು ಕಿಲಾಡಿ ಕಳ್ಳಿಯ ಕೈ ಚಳಕ

    ಬೆಂಗಳೂರು: ಕಳ್ಳರು ಹೇಗೆ ನಮ್ಮ ಮುಂದೆ ಬರ್ತಾರೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ಕೆಲವೊಮ್ಮೆ ನಮ್ಮ ಮುಂದೆ ನಿಂತಿದ್ರೂ ಗುರುತಿಸದಷ್ಟು ಸಾಮಾನ್ಯರಂತೆ ನಿಂತಿರುತ್ತಾರೆ. ಅಯ್ಯೋ ಪಾಪ ಅನ್ನುವಷ್ಟರಲ್ಲಿ ನಮ್ಮ ಬಳಿಯ ವಸ್ತು ಕದ್ದು ಮಿಂಚಿನಂತೆ ಮಾಯವಾಗಿರತ್ತಾರೆ. ಅಂತಹುದೇ ಘಟನೆಯೊಂದು ನಗರದ ಬನ್ನೇರುಘಟ್ಟ ರಸ್ತೆಯಲ್ಲಿರುವ ರಾಯಲ್ ಮೀನಾಕ್ಷಿ ಮಾಲ್ ನಲ್ಲಿ ನಡೆದಿದೆ.

    ಇದೇ ತಿಂಗಳು 4ನೇ ತಾರೀಖಿನಂದು ರಾತ್ರಿ 9.55ಕ್ಕೆ ಕಳ್ಳತನ ನಡೆದಿದ್ದು, ಕಳ್ಳಿಯ ಕೈಚಳಕ ಮಾಲ್ ನಲ್ಲಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಐಸ್ ಕ್ರೀಂ ಖರೀದಿಗೆ ಬಂದ ಮಹಿಳೆಯೊಬ್ಬಳು ಸಿಬ್ಬಂದಿ ಹೊರಗಡೆತಯಿಂದ ಒಳಗಡೆ ಬರುತ್ತಲೇ ಕ್ಷಣಾರ್ಧದಲ್ಲಿ ಮೊಬೈಲ್ ಕದ್ದು ಎಸ್ಕೇಪ್ ಆಗಿದ್ದಾಳೆ.

    ವಿಡಿಯೋದಲ್ಲಿ ಏನಿದೆ?
    ಫೆಬ್ರವರಿ 4ನೇ ತಾರೀಖು ರಾಯಲ್ ಮಿನಾಕ್ಷಿ ಮಾಲ್ ನಲ್ಲಿ ಯ ಐಸ್ ಕ್ರೀಂ ಪಾರ್ಲರ್ ಗೆ ಬಂದ ಮಹಿಳೆ ಐಸ್ ಕ್ರೀಂ ಖರೀದಿಸಿದ್ದಾಳೆ. ಈ ವೇಳೆ ಸ್ಪೂನ್ ಇಲ್ಲವೆಂದು ಮಾಲ್ ಸಿಬ್ಬಂದಿ ಪಕ್ಕದ ಸ್ಟೋರ್ ನತ್ತ ಹೋಗಿದ್ದಾರೆ. ಕೇವಲ ಒಂದೆರೆಡು ನಿಮಿಷದಲ್ಲಿ ಅತ್ತಿತ್ತ ಕಣ್ಣು ಹಾಯಿಸಿದ ಕಳ್ಳಿ ಕೌಂಟರ್ ನಲ್ಲಿದ್ದ ಮೊಬೈಲ್ ಬಾಗ್‍ನಲ್ಲಿ ಹಾಕಿಕೊಂಡಿದ್ದಾಳೆ. ಇತ್ತ ಮಾಲ್ ಸಿಬ್ಬಂದಿ ಬರುತ್ತಿದ್ದಂತೆ ಸ್ಪೂನ್ ಪಡೆದ ಆಕೆ ಏನು ಗೊತ್ತಿಲ್ಲದಂತೆ ಅಲ್ಲಿಂದ ಕಾಲ್ಕಿತ್ತಿದ್ದಾಳೆ.

    ಕೌಂಟರ್ ಒಳಗೆ ಬಂದ ಸಿಬ್ಬಂದಿ ಮೊಬೈಲ್ ಕಾಣದಿದ್ದಾಗ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದಾಗ ಕಳ್ಳಿಯ ಕೈ ಚಳಕ ಗೊತ್ತಾಗಿದೆ. ಈ ಸಂಬಂಧ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    https://youtu.be/fxlLmkE60rA

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪೆಟ್ರೋಲ್ ವಿತರಣಾ ಘಟಕಕ್ಕೆ ಡಿಕ್ಕಿ ಹೊಡೆದು, ಆಟೋಗೆ ಗುದ್ದಿದ ಕಾರ್-ವಿಡಿಯೋ ನೋಡಿ

    ಪೆಟ್ರೋಲ್ ವಿತರಣಾ ಘಟಕಕ್ಕೆ ಡಿಕ್ಕಿ ಹೊಡೆದು, ಆಟೋಗೆ ಗುದ್ದಿದ ಕಾರ್-ವಿಡಿಯೋ ನೋಡಿ

    ರಾಜ್‍ಕೋಟ್: ವೇಗವಾಗಿ ಬಂದ ಕಾರೊಂದು ಬಂಕ್ ನ ಪೆಟ್ರೋಲ್ ವಿತರಣಾ ಘಟಕಕ್ಕೆ ಗುದ್ದಿಕೊಂಡು ಆಟೋಗೂ ಗುದ್ದಿರುವ ಆಘಾತಕಾರಿ ಅಪಘಾತವೊಂದು ನಗರದಲ್ಲಿ ನಡೆದಿದೆ.

    ಇಡೀ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಮೊದಲಿಗೆ ಪೆಟ್ರೋಲ್ ವಿತರಣಾ ಘಟಕಕ್ಕೆ ಗುದ್ದಿರುವುದರಿಂದ ಘಟಕ ಮುರಿದು ಬಿದ್ದಿದೆ. ನಂತರ ಆಟೋಕ್ಕೆ ಗುದ್ದಿ ಆಟೋ ಮಗಚಿ ಬಿದ್ದಿದೆ. ಈ ಅಪಘಾತದಲ್ಲಿ ಮೂರು ಜನರು ಗಾಯಗೊಂಡಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ವರದಿಯಾಗಿದೆ.

    ಕಾರ್ ವೇಗವಾಗಿ ಬಂದು ವಿತರಣಾ ಘಟಕಕ್ಕೆ ಡಿಕ್ಕಿಯಾಗಿದ್ದರಿಂದ ಪೆಟ್ರೋಲ್ ಚೆಲ್ಲಿತ್ತು. ಇದರಿಂದ ಗಾಬರಿಗೊಂಡ ಆಟೋ ಚಾಲಕ ಸ್ಥಳದಿಂದ ಓಡಿ ಹೋಗಿದ್ದಾರೆ. ಕಾರು ಚಾಲಕನ ಅಜಾಗರೂಕತೆಯೇ ಅಪಘಾತಕ್ಕೆ ಕಾರಣ ಎಂದು ಶಂಕಿಸಲಾಗಿದೆ.

    ಮಂಗಳವಾರ ಬ್ರೇಕ್ ಫೈಲ್ಯೂರ್ ಮತ್ತು ಸ್ಟೇರಿಂಗ್ ಲಾಕ್ ಆದ ಕಾರಣ ನಿಯಂತ್ರಣ ತಪ್ಪಿದ ಕೆಎಸ್‍ಆರ್ ಟಿಸಿ ಬಸ್ಸೊಂದು ಪೆಟ್ರೋಲ್ ಬಂಕ್ ಒಳಗೆಯೇ ನುಗ್ಗಿತ್ತು. ಬೆಂಗಳೂರಿನ ಗೊರಗುಂಟೆ ಪಾಳ್ಯ ಎಚ್‍ಪಿ ಪೆಟ್ರೋಲ್ ಬಂಕ್ ಬಳಿ ಈ ಅಪಘಾತ ಸಂಭವಿಸಿತ್ತು.

    ಕೆಎಸ್‍ಆರ್ ಟಿಸಿ ಬಸ್ ಹಾಸನದಿಂದ ಬೆಂಗಳೂರಿಗೆ ಬರುತ್ತಿತ್ತು. ಬಸ್ ಗೊರಗುಂಟೆಪಾಳ್ಯ ಸಿಗ್ನಲ್ ದಾಟಿದ ನಂತರ ಬ್ರೇಕ್ ವೈಫಲ್ಯವಾಗಿದ್ದ ಕಾರಣ ಸ್ಟೇರಿಂಗ್ ಲಾಕ್ ಆಗಿದೆ. ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಬಸ್ ನೇರವಾಗಿ ಎಚ್‍ಪಿ ಪೆಟ್ರೋಲ್ ಬಂಕ್ ಒಳಗೆ ನುಗ್ಗಿದೆ.

    ಬಸ್ಸಿನಲ್ಲಿ ಒಟ್ಟು 11 ಮಂದಿ ಪ್ರಯಾಣಿಕರಿದ್ದರು. ಸದ್ಯ ಈ ಅವಘಡದಿಂದ ಯಾವುದೇ ರೀತಿಯ ಪ್ರಾಣಪಾಯ ಸಂಭವಿಸಿಲ್ಲ. ಆದರೆ ಪೆಟ್ರೋಲ್ ಹಾಕುವ ಕ್ಯಾಬಿನ್ ಪೈಪ್ ಲೈನ್, ಕಾಂಪೌಂಡ್ ಮತ್ತು ಎರಡು ದ್ವಿಚಕ್ರ ವಾಹನಗಳಿಗೆ ಹಾನಿಯಾಗಿದೆ.

    https://www.youtube.com/watch?v=n34rplpjNRs

     

  • ವೈದ್ಯರ ಮುಷ್ಕರ ದಿನದಂದೇ ಮೆಡಿಕಲ್ ಶಾಪ್‍ನಿಂದ ಔಷಧಿ ಕದ್ದ ಮಹಿಳೆ

    ವೈದ್ಯರ ಮುಷ್ಕರ ದಿನದಂದೇ ಮೆಡಿಕಲ್ ಶಾಪ್‍ನಿಂದ ಔಷಧಿ ಕದ್ದ ಮಹಿಳೆ

    ಚಾಮರಾಜನಗರ: ನೀವೂ ಹಣ ಕದಿಯೋರನ್ನಾ, ಚಿನ್ನ ಕದಿಯೋರನ್ನ ನೋಡಿರುತ್ತಿರಾ ಆದರೆ ಮೆಡಿಸನ್ ಕದಿಯೋರನ್ನಾ ನೋಡಿದ್ದೀರಾ. ಜಿಲ್ಲೆಯಲ್ಲಿ ನವಂಬರ್ 12ರಂದು ಖಾಸಗಿ ವೈದ್ಯರು ಮುಷ್ಕರದ ದಿನದಂತೆ ಮಹಿಳೆಯೊಬ್ಬರು ಥೈರಾಯಿಡ್ ಗೆ ಸಂಬಂಧಿಸಿದಂತಹ ಮಾತ್ರೆ ಡಬ್ಬವನ್ನು ಕದ್ದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಚಾಮರಾಜನಗರ ಜಿಲ್ಲಾಸ್ಪತ್ರೆಯ ಎದುರಿಗೆ ಇರುವ ಸುರಕ್ಷಾ ಮೆಡಿಕಲ್ ನಲ್ಲಿ ಥೈರಾಯಿಡ್ ಗೆ ಸಂಬಂಧಿಸಿದ 150 ರೂ. ಮೌಲ್ಯದ ಔಷಧಿಯನ್ನು ಕೊಳ್ಳಲು ಮಹಿಳೆಯೊಬ್ಬರು ತಮ್ಮ ಮಗಳೊಂದಿಗೆ ಬಂದಿದ್ದಾರೆ. ಈ ವೇಳೆ ಮಹಿಳೆ ನನಗೆ ಈ ಔಷಧಿ ಬೇಡ ಆ ಔಷಧಿ ಕೊಡಿ ಎಂದು ಮೆಡಿಕಲ್ ಶಾಪ್ ಸಿಬ್ಬಂದಿ ಜೊತೆ ಸುಮಾರು 20 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ.

    ಈ ವೇಳೆ ಸಿಬ್ಬಂದಿಯ ಗಮನ ಬೇರೆಡೆ ಸೆಳೆದು ಔಷಧಿಯ ಬಾಟಲಿಯನ್ನು ತನ್ನ ಮಗಳ ಕೈಗೆ ಕೊಟ್ಟಿದ್ದಾರೆ. ನಂತರ ನನಗೆ ಔಷಧಿ ಬೇಡ ಎಂದು ಆ ಮಹಿಳೆ ಹೊರಟು ಹೋಗಿದ್ದಾರೆ.

    ಸರ್ಕಾರಿ ಆಸ್ಪತ್ರೆಯಲ್ಲಿರುವ ಜನರಿಕ್ ಔಷಧಿ ಮಳಿಗೆಯಲ್ಲಿ ಕಡಿಮೆ ದರದಲ್ಲಿ ಔಷಧಿಗಳು ದೊರೆಯುತಿತ್ತು. ಆದರೆ ಅಲ್ಲಿ ಅಗತ್ಯವಿರುವ ಔಷಧಿಗಳು ಸಿಗುತ್ತಿಲ್ಲ, ಇದರಿಂದ ಮಹಿಳೆ ಹಣವಿಲ್ಲದೇ ಔಷಧಿಯನ್ನು ಕದಿಯುವ ಪ್ರಸಂಗ ಎದುರಾಗಿದೆ ಎನ್ನಲಾಗಿದೆ.

  • ವಿಜಯಪುರದಲ್ಲಿ ಉಪಮೇಯರ್ ದರ್ಬಾರ್- ದಸರಾ ದೇಣಿಗೆ ಕೊಡದ ಕೆಲಸಗಾರರ ಮೇಲೆ ಹಲ್ಲೆ

    ವಿಜಯಪುರದಲ್ಲಿ ಉಪಮೇಯರ್ ದರ್ಬಾರ್- ದಸರಾ ದೇಣಿಗೆ ಕೊಡದ ಕೆಲಸಗಾರರ ಮೇಲೆ ಹಲ್ಲೆ

    -ಸಿಸಿಟಿವಿಯಲ್ಲಿ ಸೆರೆಯಾಯ್ತು ಪುಂಡಾಟಿಕೆ

    ವಿಜಯಪುರ: ದಸರಾ ಹಬ್ಬದ ಪ್ರಯುಕ್ತ ದೇಣಿಗೆ ನೀಡದ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಉಪಮೇಯರ್ ಅವರ ಗುಂಡಾಗಿರಿ ನಡೆಸಿರುವ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

    ಮಹಾನಗರ ಪಾಲಿಕೆ ಉಪಮೇಯರ್ ರಾಜೇಶ್ ದೇವಗಿರಿ ಅವರು ದಸರಾ ಹಬ್ಬದ ಪ್ರಯುಕ್ತ ನಗರದ ಶಾಪೇಟೆಯಲ್ಲಿ ದೇವಿ ಪ್ರತಿಷ್ಠಾಪನೆಗೆ ದೇಣಿಗೆ ಕೇಳಲು ನಗರದ ಮಾರ್ಕೆಟ್ ನಲ್ಲಿರುವ ಶ್ರೀ ಸಾಯಿ ಮೊಬೈಲ್ ಅಂಗಡಿಗೆ ತೆರಳಿದ್ದಾರೆ. ಆಗ ಅಂಗಡಿಯ ಮಾಲೀಕ ಗಂಗಪ್ಪ ಹಂಚಿನಾಳ ಹೊರಗಡೆ ಹೋಗಿದ್ದಾರೆ ನಂತರ ಬನ್ನಿ ಅಂತಾ ತಮ್ಮ ಯಲ್ಲಪ್ಪ ಹಂಚಿನಾಳ ಹೇಳಿದ್ದಾರೆ. ಆಗ ಉಪಮೇಯರ್ ರಾಜೇಶ್ ದೇವಗಿರಿ ಮತ್ತು ಜೊತೆ ಬಂದಿದ್ದ 15 ಜನರು ಅಂಗಡಿಯಲ್ಲಿ ಮೂರು ಜನ ಇದ್ದರಿ ನಿಮ್ಮ ಹತ್ತಿರ 250 ರೂ. ಕೂಡ ಇಲ್ವಾ ಎಂದು ಅವಾಜ್ ಹಾಕಿದ್ದಾರೆ.

    ಯಲ್ಲಪ್ಪ ಮತ್ತು ಅಂಗಡಿಯ ಕೆಲಸಗಾರರು ಹಣ ಇಲ್ಲ ಅಂದಿದ್ದಾರೆ. ನಿಮಗೆ ಮಾಲೀಕ ಸಂಬಳ ಎಷ್ಟು ಕೊಡ್ತಾನೆ. ನಮ್ಮ ಜೊತೆ ದೇಣಿಗೆ ಕೇಳಲು ಬನ್ನಿ ಇದಕ್ಕಿಂತ ಹೆಚ್ಚು ಸಂಬಳ ಕೊಡುತ್ತೇವೆ ಎಂದು ಉಪಮೇಯರ್ ಜೊತೆ ಬಂದಿದ್ದ ಸಿದ್ದು ಎಂಬಾತ ಹೇಳಿದ್ದಾರೆ. ಇಷ್ಟಕ್ಕೆ ಇಬ್ಬರಲ್ಲು ಗಲಾಟೆ ಶುರುವಾಗಿದೆ. ಆಗ ನಮಗೆ ಈ ರೀತಿ ಮಾತಾಡತೀಯ ಅಂತಾ ಸಿಟ್ಟಿಗೆದ್ದ ಉಪಮೇಯರ್ ರಾಜೇಶ್ ಮತ್ತು ಸಿದ್ದು ಯಲ್ಲಪ್ಪನನ್ನು ಹಿಗ್ಗಾ ಮುಗ್ಗಾ ಥಳಿಸಿದ್ದಾರೆ.

    ಈ ಎಲ್ಲ ದೃಶ್ಯಗಳು ಅಂಗಡಿಯ ಸಿಸಿಟಿವಿಯಲ್ಲಿ ಸೆರೆ ಆಗಿದ್ದು, ಉಪಮೇಯರ್ ಗುಂಡಾಗಿರಿಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಈ ಸಂಬಂಧ ಗಾಂಧಿಚೌಕ ಪೊಲೀಸ್ ಠಾಣೆಯಲ್ಲಿ ಹಲ್ಲೆಗೊಳಗಾದ ಯಲ್ಲಪ್ಪ ದೂರು ದಾಖಲಿಸಿದ್ದು, ಗಾಯಾಳು ಯಲ್ಲಪ್ಪ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

    https://youtu.be/modGIcWAOTI