ಚಿಕ್ಕಬಳ್ಳಾಪುರ: ನಗರದ ಚಿತ್ರಾವತಿ ಬಳಿಯ ಆರ್‌ಟಿಒ ಕಚೇರಿಯ (Chikkaballapur RTO office) ಬೀಗ ಮುರಿದು ಒಳನುಗ್ಗಿರುವ ಕಳ್ಳರು ಕಚೇರಿಯಲ್ಲಿರೋ ಮೂರು ಕಂಪ್ಯೂಟರ್ (Computer) ಸಿಪಿಐ ಹಾಗೂ ಮಾನಿಟರ್‌ಗಳನ್ನ ಕದ್ದೊಯ್ದಿದ್ದಾರೆ.

ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಕಚೇರಿ ಹಿಂಬಾಗಿಲಿನಿಂದ ಎಂಟ್ರಿ ಕೊಟ್ಟಿರೋ ಇಬ್ಬರು ಕಳ್ಳರು, ಕಚೇರಿಯ ಬೀಗ ಕಟ್ ಮುರಿದು, ಕಂಪ್ಯೂಟರ್ ಗಳನ್ನ ಕಳವು ಮಾಡಿದ್ದಾರೆ. ಇದನ್ನೂ ಓದಿ: ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ – ಮೃತ ಸಚಿನ್ ವಿರುದ್ಧವೇ ಲಕ್ಷಾಂತರ ರೂಪಾಯಿ ವಂಚನೆ ಆರೋಪ
ಇನ್ನೂ ಕಚೇರಿಯಲ್ಲಿ ಇಬ್ಬರು ಹೊಂ ಗಾರ್ಡ್‍ಗಳನ್ನ ಭದ್ರತೆಗೆ ನಿಯೋಜನೆ ಮಾಡಿದ್ರೂ ಹೋಂ ಗಾರ್ಡ್‍ಗಳು ನಿದ್ದೆಗೆ ಜಾರಿದ್ದಾರೆ. ಇದರಿಂದ ಕಳ್ಳರಿಗೆ ಹಾದಿ ಸುಗಮ ಮಾಡಿಕೊಟ್ಟಂತಾಗಿದೆ. ಬೆಳಗ್ಗೆ ಕಚೇರಿ ತೆರೆಯಲು ಹೋದಾಗ ಘಟನೆ ಬೆಳಕಿಗೆ ಬಂದಿದೆ. ವಿಷಯ ತಿಳಿದು ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರ್‌ಟಿಓ ವಿವೇಕಾನಂದ ಬಳಿ ಮಾಹಿತಿ ಪಡೆದುಕೊಂಡಿದ್ದಾರೆ.
ಸಿಸಿಟಿವಿ ಪರಿಶೀಲನೆ ಮಾಡಲಾಗಿದ್ದು ಇಬ್ಬರು ಮುಸುಕುಧಾರಿಗಳು ಈ ಕೃತ್ಯ ನಡೆಸಿರೋದು ಗೊತ್ತಾಗಿದೆ. ಇದನ್ನೂ ಓದಿ: ಪ್ರಿಯಾಂಕ್ ಖರ್ಗೆ ಕಲಬುರಗಿಯ ನಿಜಾಮ ಅಲ್ಲ, ಅನುಯಾಯಿಗಳು ರಜಾಕರಲ್ಲ, ರಾಜೀನಾಮೆ ಕೊಡಲಿ: ಅಶೋಕ್
























