Tag: ccb

  • ಸಿಸಿಬಿ ಕಸ್ಟಡಿಯಲ್ಲಿ ನಿದ್ದೆ ಬಾರದೇ ಮೊದಲ ರಾತ್ರಿ ಕಳೆದ ರವಿ ಬೆಳಗೆರೆ- ಪೇಪರ್ ನಲ್ಲಿ ಏನೇನೋ ಗೀಚಿದ್ರು

    ಸಿಸಿಬಿ ಕಸ್ಟಡಿಯಲ್ಲಿ ನಿದ್ದೆ ಬಾರದೇ ಮೊದಲ ರಾತ್ರಿ ಕಳೆದ ರವಿ ಬೆಳಗೆರೆ- ಪೇಪರ್ ನಲ್ಲಿ ಏನೇನೋ ಗೀಚಿದ್ರು

    ಬೆಂಗಳೂರು: ಸಹೋದ್ಯೋಗಿ ಸುನೀಲ್ ಹೆಗ್ಗರವಳ್ಳಿ ಕೊಲೆಗೆ ಸುಪಾರಿ ನೀಡಿದ ಆರೋಪದ ಮೇಲೆ ಶುಕ್ರವಾರದಂದು ಬಂಧಿತರಾದ ಪತ್ರಕರ್ತ ರವಿ ಬೆಳಗೆರೆ ಇಂದು ಬೆಳಗಿನ ಜಾವದವರೆಗೂ ನಿದ್ದೆಯಿಲ್ಲದೆ ರಾತ್ರಿ ಕಳೆದಿದ್ದಾರೆ.

    ಕಾಲು ನೋವಿನಿಂದ ಬಳಲುತ್ತಿರುವ ರವಿ ಬೆಳಗೆರೆಗೆ ಕಾಲು ಒತ್ತುವವರಿಲ್ಲದೇ ತಳಮಳ ಅನುಭವಿಸಿದ್ರು. ರಾತ್ರಿ ಮನೆಯಿಂದ ಊಟ, ಔಷಧಿ ಮತ್ತು ನೈಟ್ ಡ್ರೆಸ್ ತರಿಸಿಕೊಂಡಿದ್ದರು. ಮಧ್ಯರಾತ್ರಿ ಸಿಸಿಬಿ ಕಚೇರಿಗೆ ಆಗಮಿಸಿದ ಡಿಸಿಪಿ ಜಿನೇಂದ್ರರಿಂದ ರವಿ ಬೆಳಗೆರೆ ಅವರ ವಿಚಾರಣೆ ನಡೆಯಿತು. ರಾತ್ರಿಯಿಡೀ ರವಿ ಬೆಳಗೆರೆ ಮಕ್ಕಳು ಕಚೇರಿ ಮುಂದೆಯೇ ಠಿಕಾಣಿ ಹೂಡಿದ್ದರು. ವೈದ್ಯರಿಂದ ಪ್ರತಿ ನಾಲ್ಕು ಗಂಟೆಗೆ ಒಮ್ಮೆ ರವಿ ಬೆಳಗೆರೆ ಆರೋಗ್ಯ ಪರಿಶೀಲನೆ ನಡೆಯಿತು.

    ರಾತ್ರಿ 11.00: ಸಿಸಿಬಿ ವಶಕ್ಕೆ ಒಪ್ಪಿಸಿದ ಜಡ್ಜ್.
    ರಾತ್ರಿ 11.20: ಸಿಸಿಬಿ ಕಚೇರಿಗೆ ರವಿ ಬೆಳಗೆರೆ ಆಗಮನ.
    ರಾತ್ರಿ 11.30: ಮಗ ಕರ್ಣ ಜೊತೆ ಮಾತುಕತೆ. ನೈಟ್ ಡ್ರೆಸ್, ಊಟ ತರಲು ಸೂಚನೆ.
    ರಾತ್ರಿ 11.45: ಸಿಸಿಬಿ ಕಚೇರಿಯಲ್ಲಿ ಧಮ್ ಹೊಡೆದ ಬೆಳಗೆರೆ.
    ರಾತ್ರಿ 11.50: ಕಾಲು ನೋವು…ನೋವು ಎಂದ ರವಿ.
    ರಾತ್ರಿ 12.00: ಕಾಲು ಒತ್ರೋ…ಒತ್ರೋ ಎಂದ ರವಿ
    ರಾತ್ರಿ 12.10: ನನ್ನ ಮಕ್ಕಳನಾದ್ರೂ ಕರೀರಿ ಅಂತ ಕೇಳಿದ ರವಿ
    ರಾತ್ರಿ 12.15: ಮತ್ತೆ ಮತ್ತೆ ಸಿಗರೇಟು ಸೇದಿದ ಬೆಳಗೆರೆ
    ರಾತ್ರಿ 12.20: ನಾನು ತಪ್ಪೇ ಮಾಡಿಲ್ಲ ಅಂತ ಪೊಲೀಸರಿಗೆ ಸಮಜಾಯಿಷಿ
    ರಾತ್ರಿ 12.30: ಪೊಲೀಸರಿಂದ ಪೇಪರ್ ಪಡೆದು ಏನೇನೋ ಬರೆದ್ರು
    ರಾತ್ರಿ 1.00: ಡಿಸಿಪಿ ಜಿನೇಂದ್ರ ಸಿಸಿಬಿ ಕಚೇರಿಗೆ ಆಗಮನ
    ರಾತ್ರಿ 1.45: 45 ನಿಮಿಷಗಳ ಮೊದಲ ವಿಚಾರಣೆ
    ಮಧ್ಯರಾತ್ರಿ 2.00: ನಿದ್ರೆಗೆ ಜಾರಿದ ರವಿ ಬೆಳಗೆರೆ. ಮಧ್ಯೆ ಮಧ್ಯೆ ಎದ್ದು ಸಿಗರೇಟು ಸೇವನೆ
    ಬೆಳಗಿನ ಜಾವ 4.00 ಗಂಟೆ: ನಿದ್ರೆಯಿಂದ ಎದ್ದ ರವಿ ಬೆಳಗೆರೆ
    ಬೆಳಗಿನ ಜಾವ 4.30 ಗಂಟೆ: ಏನೇನೋ ಕನವರಿಸಿದ ರವಿ ಬೆಳಗೆರೆ

  • ಸಿಸಿಬಿ ಮುಂದೆ 7 ಶಾರ್ಪ್ ಶೂಟರ್ ಗಳ ಬಗ್ಗೆ ಬಾಯ್ಬಿಟ್ಟ ತಾಹಿರ್

    ಸಿಸಿಬಿ ಮುಂದೆ 7 ಶಾರ್ಪ್ ಶೂಟರ್ ಗಳ ಬಗ್ಗೆ ಬಾಯ್ಬಿಟ್ಟ ತಾಹಿರ್

    ಬೆಂಗಳೂರು: ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಕೊಲೆ ಮಾಡಲು ರವಿ ಬೆಳಗೆರೆ ಸುಪಾರಿ ನೀಡಿದ ಕುರಿತು ಶಶಿಧರ್ ಮುಂಡೇವಾಡ ಬಾಯ್ಬಿಟ್ಟ ನಂತರ ಸಿಸಿಬಿ ಅಧಿಕಾರಿಗಳು ವೆಪನ್ ಸಪ್ಲೈಯರ್ ತಾಹಿರ್ ನಿಂದ ಮತ್ತಷ್ಟು ಮಾಹಿತಿ ಕಲೆ ಹಾಕಿದ್ದಾರೆ.

    ಅಲ್ಲದೇ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ಸಂಬಂಧಿಸಿದಂತೆ ತನಿಖೆ ಮುಂದುವರೆದಿದ್ದು, ಮಹಾರಾಷ್ಟ್ರದ ಏಳು ಶಾರ್ಪ್ ಶೂಟರ್ ಗಳ ಬಗ್ಗೆ ತಾಹಿರ್ ಮಾಹಿತಿ ನೀಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ತನಿಖೆ ವೇಳೆ ಸಿಸಿಬಿ ಮುಂದೆ ಹೇಳಿಕೆ ನೀಡಿರೋ ತಾಹೀರ್ ನಾನು ಶಾರ್ಪ್ ಶೂಟರ್ ಗಳಿಗೆ ರಿವಲ್ವಾರ್ ಸಪ್ಲೈ ಮಾಡುತ್ತೇನೆ. ಆದರೆ ಯಾರು ಯಾರನ್ನು ಕೊಲೆ ಮಾಡಿದ್ದಾರೆ ಎಂಬುದು ತಿಳಿದಿಲ್ಲ. ಸಾಕಷ್ಟು ಜನರು ನನ್ನ ಬಳಿ ರಿವಲ್ವಾರ್ ಪಡೆದು ಹಣ ನೀಡಿದ್ದಾರೆ ಎಂದು ಹೇಳಿದ್ದಾನೆ.

    ಬೆಲೆ ಎಷ್ಟು?: ನನ್ನ ಬಳಿಯೇ ಬಂದು ರಿವಲ್ವಾರ್ ಪಡೆದರೆ 15 ಸಾವಿರ ರೂ. ನಾನೇ ರಿವಾಲ್ವರ್ ತಗೆದುಕೊಂಡು ಹೋದರೆ 30 ರಿಂದ 50 ಸಾವಿರ ರೂ. ಹಣ ಪಡೆದುಕೊಳ್ಳುತ್ತೇನೆ ಎಂಬ ಮಾಹಿತಿಯನ್ನು ನೀಡಿದ್ದಾನೆ. ತಾಹಿರ್ ನೀಡಿರುವ ಮಾಹಿತಿ ಆಧಾರಿಸಿ ಒಂದು ದಿನದ ಹಿಂದೆಯೇ ಮಹಾರಾಷ್ಟ್ರಕ್ಕೆ ತೆರಳಿರುವ ಎಸ್‍ಐಟಿ ತಂಡ ಅಲ್ಲಿಯೇ ಬಿಡು ಬಿಟ್ಟಿದೆ ಎಂಬ ಮಾಹಿತಿ ಲಭ್ಯವಾಗಿದೆ.

    https://www.youtube.com/watch?v=86k-IW3-boE

    https://www.youtube.com/watch?v=lgEoaxQ1l44

    https://www.youtube.com/watch?v=tvAkOpM6ZZo

  • ಹಾಯ್ ಬೆಂಗಳೂರು ಸಂಪಾದಕ ರವಿ ಬೆಳಗೆರೆ ಅರೆಸ್ಟ್

    ಹಾಯ್ ಬೆಂಗಳೂರು ಸಂಪಾದಕ ರವಿ ಬೆಳಗೆರೆ ಅರೆಸ್ಟ್

    ಬೆಂಗಳೂರು: ಗೌರಿ ಹತ್ಯೆಯ ತನಿಖೆ ವೇಳೆ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಪತ್ರಕರ್ತರೊಬ್ಬರ ಹತ್ಯೆಗೆ ಸುಪಾರಿ ನೀಡಿದ ಆರೋಪದಡಿ ಹಾಯ್ ಬೆಂಗಳೂರು ಸಂಪಾದಕ ರವಿ ಬೆಳಗೆರೆಯನ್ನು ಪೊಲೀಸರು ಬಂಧಿಸಿದ್ದಾರೆ.

    ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ ಆರೋಪದಲ್ಲಿ ರವಿ ಬೆಳಗೆರೆ ಅವರನ್ನು ಬಂಧಿಸಲಾಗಿದೆ ಎಂದು ಪಬ್ಲಿಕ್ ಟಿವಿಗೆ ಸಿಸಿಬಿ ಮುಖ್ಯಸ್ಥ ಸತೀಶ್ ಕುಮಾರ್ ತಿಳಿಸಿದ್ದಾರೆ. ಶಶಿಧರ್ಮುಂಡೇವಾಡಗಿ  ಸ್ನೇಹಿತರಿಗೆ ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ನೀಡಿದ ಆರೋಪದಲ್ಲಿ ರವಿ ಬೆಳಗೆರೆ ಅವರನ್ನು ಬಂಧಿಸಲಾಗಿದೆ.

    ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯ ವೇಳೆ ವಿಶೇಷ ತನಿಖಾ ತಂಡ ಬೆಂಗಳೂರಿನಲ್ಲಿ ಸುಪಾರಿ ಕಿಲ್ಲರ್ ವಿಜಯಪುರದ ಚಡಚಣದ ಶಾರ್ಪ್ ಶೂಟರ್ ಶಶಿ ಮುಂಡೇವಾಡಗಿ ಬಂಧಿಸಿತ್ತು. ಆತ ವಿಚಾರಣೆ ವೇಳೆ ನೀಡಿದ ಮಾಹಿತಿ ಮೇರೆಗೆ ಈ ಪ್ರಕರಣ ಬೆಳಕಿಗೆ ಬಂದಿದೆ.

    ರವಿ ಬೆಳಗೆರೆ ಎರಡನೇ ಪತ್ನಿ ಜತೆ ಹಾಯ್ ಬೆಂಗಳೂರು ಪತ್ರಿಕೆ ವರದಿಗಾರ ಸನೀಲ್ ಹೆಗ್ಗರವಳ್ಳಿ ಅಕ್ರಮ ಸಂಬಂಧದ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಸುನೀಲ್ ಹತ್ಯೆ ಮಾಡಲು ನಿರ್ಧರಿಸಿದ್ದ ಬೆಳಗೆರೆ ಶಾರ್ಪ್ ಶೂಟರ್ ಶಶಿ ಮುಂಡೇವಾಡಗಿಗೆ 30 ಲಕ್ಷ ರುಪಾಯಿ ಸುಪಾರಿ ಕೊಟ್ಟಿದ್ದರು ಎನ್ನಲಾಗಿದೆ.

    ವಿಜಯಪುರದ ಜೈಲಿನಲ್ಲಿದ್ದ ಕೈದಿ ನೀಡಿದ್ದ ಸುಳಿವು ಆಧರಿಸಿ ಸುಪಾರಿ ಕಿಲ್ಲರ್ ನನ್ನು ಬಂಧಿಸಿದ್ದ ಪೊಲೀಸರು, ಯಲಹಂಕ ಮನೆಯಲ್ಲಿ ಮೂರು ರಿವಾಲ್ವರ್ ವಶಪಡಿಸಿಕೊಂಡಿದ್ದರು. ಆರಂಭದಲ್ಲಿ ಈತ ನನಗೆ ಈ ಪ್ರಕರಣದ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದನಾದರೂ ಎಸ್‍ಐಟಿ ಈ ಮನೆಯಲ್ಲಿ ತೀವ್ರ ಪರಿಶೋಧನೆ ನಡೆಸಿತ್ತು. ಈ ವೇಳೆ ಮನೆಯಲ್ಲಿದ್ದ ಖಾಲಿ ಟಿವಿಯ ಒಳಗಡೆ 3 ರಿವಾಲ್ವರ್ ಸಿಕ್ಕಿದೆ ಎಂದು ಪಬ್ಲಿಕ್ ಟಿವಿಗೆ ಪೊಲೀಸ್ ಇಲಾಖೆಯ ಉನ್ನತ ಮೂಲಗಳಿಂದ ಮಾಹಿತಿ ಸಿಕ್ಕಿತ್ತು.

    ಸದ್ಯ ಸುಪಾರಿ ಕಿಲ್ಲರ್ ನನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸುತ್ತಿದ್ದಾರೆ. ಜೊತೆಗೆ ಆತನಿಂದ ವಶಕ್ಕೆ ಪಡೆದ ರಿವಾಲ್ವರ್ ತಪಾಸಣೆ ಮಾಡ್ತಿದ್ದಾರೆ. ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಂಟ್ರಿ ಮೇಡ್ ರಿವಾಲ್ವರ್ ರವಾನೆ ಮಾಡಲಾಗಿದೆ. ಸುಪಾರಿ ಕಿಲ್ಲರ್ ವಶಕ್ಕೆ ಪಡೆದು ಪೊಲೀಸರು ನಡೆಸಿದ ವಿಚಾರಣೆ ಇನ್ನಷ್ಟು ಮಹತ್ವದ ವಿಚಾರಗಳನ್ನು ಬಾಯ್ಬಿಟ್ಟಿದ್ದಾನೆ. ಈ ಪ್ರಕರಣದ ಹಿಂದೆ ಪ್ರಭಾವಿಗಳಿದ್ದಾರೆ ಎಂಬ ಮಾಹಿತಿಯನ್ನೂ ಈತ ನೀಡಿದ್ದಾನೆ ಎಂಬ ಮಾಹಿತಿಯೂ ಸಿಕ್ಕಿದೆ.

    ಸುಪಾರಿ ಕಿಲ್ಲರ್ ವಶಕ್ಕೆ ಪಡೆದ ಸುದ್ದಿಯನ್ನು ಪಬ್ಲಿಕ್ ಟಿವಿ ಶನಿವಾರ ಮೊದಲು ಬ್ರೇಕ್ ಮಾಡಿತ್ತು. ಆದರೆ ಕೆಲ ಮಾಧ್ಯಮಗಳು ಈ ವರದಿಯನ್ನು ಅಲ್ಲಗೆಳೆದಿತ್ತು.

     

     

  • ಪೊಲೀಸರ ಪ್ರಶ್ನೆಗಳಿಗೆ ಗೀತಾ ವಿಷ್ಣು ನೀಡಿದ ಉತ್ತರ  ಇಲ್ಲಿದೆ

    ಪೊಲೀಸರ ಪ್ರಶ್ನೆಗಳಿಗೆ ಗೀತಾ ವಿಷ್ಣು ನೀಡಿದ ಉತ್ತರ ಇಲ್ಲಿದೆ

    ಬೆಂಗಳೂರು: ಜಯನಗರದಲ್ಲಿ ಕಾರು ಅಪಘಾತ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರಿಂದ ಬಂಧನಕ್ಕೆ ಒಳಗಾಗಿರುವ ಉದ್ಯಮಿಯ ಮೊಮ್ಮಗ ಗೀತಾವಿಷ್ಣು ಲಾಯರ್ ಜೊತೆ ತರಬೇತಿ ಪಡೆದು ಪ್ರಶ್ನೆಗಳಿಗೆ ಉತ್ತರ ನೀಡುತ್ತಿದ್ದಾನೆ ಎನ್ನುವ ಅನುಮಾನ ವ್ಯಕ್ತವಾಗಿದೆ.

    ಕೋರಮಂಗಲದಲ್ಲಿ ಬಂಧನಕ್ಕೊಳಗಾದ ಬಳಿಕ ಗೀತಾ ವಿಷ್ಣುವನ್ನು ಮಧ್ಯರಾತ್ರಿ 1 ಗಂಟೆಗೆ ಸಿಸಿಬಿ ಕಚೇರಿಗೆ ಕರೆ ತಂದಿದ್ದಾರೆ. ಪೊಲೀಸರು ಪ್ರಾಥಮಿಕ ವಿಚಾರಣೆ ಮಾಡಲು ಪ್ರಶ್ನೆ ಕೇಳಿದ್ದಾರೆ. ಬಳಿಕ ವಿಷ್ಣುಗೆ ರಾತ್ರಿ ಕಛೇರಿಯ ಮೊದಲನೆ ಮಹಡಿಯಲ್ಲಿ ನಿದ್ದೆ ಮಾಡಲು ಅವಕಾಶನ್ನು ಕೊಡಲಾಗಿತ್ತು.

    ಮಂಗಳವಾರ ರಾತ್ರಿ ಪೊಲೀಸರ ವಿಚಾರಣೆಗೆ ಒಪ್ಪಲು ಗೀತಾ ವಿಷ್ಣು ನಿರಾಕರಿಸಿದ್ದಾನೆ. ನಾಳೆ ಕಸ್ಟಡಿಗೆ ತಗೆದುಕೊಳ್ಳುತ್ತೀರಿ ಅಲ್ಲವೇ? ಅವಾಗ್ಲೇ ಉತ್ತರ ಕೊಡುತ್ತೇನೆ ಎಂದು ಹೇಳಿಕೆ ನೀಡಿದ್ದಾನೆ. ಅಪಘಾತ ಆಗಿದ್ದು ನಿಜ, ನಾನು ಡ್ರಿಂಕ್ಸ್ ಮಾಡಿದ್ದು ನಿಜ, ಆದರೆ ನಾನು ಕಾರು ಓಡಿಸುತ್ತಿರಲಿಲ್ಲ ಸಂತೋಷ್ ಕಾರನ್ನು ಓಡಿಸುತ್ತಿದ್ದನು. ಈ ವಿಷಯವನ್ನು ನಾನು ಟ್ರಾಫಿಕ್ ಪೊಲೀಸರ ಮುಂದೆಯೂ ಹೇಳಿದ್ದೇನೆ. ಟ್ರಾಫಿಕ್ ಪೊಲೀಸರು ಆಲ್ಕೋಮೀಟರ್‍ನಲ್ಲಿ ಪರ್ಸೆಂಟೇಜ್ ಚೆಕ್ ಮಾಡಿದ ಬಳಿಕ ನಾನು ಹೋಗಿದ್ದು. ಗಾಂಜಾ ಅದ್ಯಾವುದರ ಬಗ್ಗೆಯೂ ನನಗೆ ಗೊತ್ತಿಲ್ಲ ಆಮೇಲೆ ಹೇಳುತ್ತೆನೆ ಉಳಿದಿದ್ದನ್ನು ಎಂದು ತಿಳಿಸಿದ್ದಾನೆ.

    ಗಾಂಜಾ ಬಗ್ಗೆ ಗೊತ್ತಿಲ್ಲ: ಗಾಂಜಾ ಬಗ್ಗೆ ನನಗೇನು ಗೊತ್ತಿಲ್ಲ, ಗಾಂಜಾ ನನ್ನ ಕಾರಲ್ಲಿ ಹೇಗೆ ಬಂತು ಎಂಬುದು ನನಗೆ ಗೊತ್ತಿಲ್ಲ, ನನ್ನ ಕಾರು ಅಪಘಾತವಾಗಿ ಬಲ ಭಾಗ ಸಂಪೂರ್ಣವಾಗಿ ಜಾಮ್ ಆಗಿತ್ತು. ಬಲಭಾಗದ ಡೋರ್ ಓಪನ್ ಮಾಡಲಿಕ್ಕೆ ಆಗುತ್ತಿರಲಿಲ್ಲ. ಗಾಂಜಾ ಸಿಕ್ಕಿರೋದು ಎಡಭಾಗದ ಡೋರ್‍ನ ವಾಟರ್ ಬಾಟಲ್ ಇಡುವ ಜಾಗದಲ್ಲಿ. ವಾಟರ್ ಬಾಟಲ್ ಇಡುವ ಜಾಗದಲ್ಲಿ ಗಾಂಜಾ ಪತ್ತೆಯಾಗಿದೆ ಅಂತ ಹೇಳ್ತಿದ್ದೀರಿ, ಯಾರೋ ಬೇರೆಯವರು ತಂದಿಟ್ಟಿರಬಹುದು. ನನಗೆ ಕುಡಿಯುವ ಅಭ್ಯಾಸ ಇದೆ, ಆದರೆ ಡ್ರಗ್ಸ್ ಅಭ್ಯಾಸ ಇಲ್ಲ ಕುಡಿದಿದ್ದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಆಮೇಲೆ ನಮ್ಮ ತಂದೆ ಬಂದ ಬಳಿಕ ಅವರ ಜೊತೆಯಲ್ಲಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಮೊದಲೇ ಆ ಗಾಂಜಾದ ಪ್ಯಾಕೆಟ್ ಸಿಕ್ಕಿದ್ರೆ ನನ್ನ ಪೊಲೀಸರು ಬಿಡುತ್ತಿರಲಿಲ್ಲ ಎಂದು ತಿಳಿಸಿದ್ದಾನೆ.

    ವಕೀಲರಿಂದ ತರಬೇತಿ: ಶರಣಾಗುವ ಮುನ್ನ ವಕೀಲರೊಂದಿಗೆ ಮಾತುಕತೆ ನಡೆಸಿದ್ದು, ಯಾವ ಪ್ರಶ್ನೆಗಳಿಗೆ ಹೇಗೆ ಉತ್ತರ ನೀಡಬೇಕು ಎಂದು ತಿಳಿದುಕೊಂಡು ಬಂದಿದ್ದಾನೆ ಎನ್ನುವ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

    ವಿಷ್ಣು ಯಾರ್ಯಾರ ಜೊತೆಯಲ್ಲಿ ಕುಳಿತು ಪಾರ್ಟಿ ಮಾಡಿದ್ದಾನೆ ಎಂಬುದರ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗಿದೆ. ಅಲ್ಲಿಯೂ ಒಂದಷ್ಟು ಗೊಂದಲದ ಹೇಳಿಕೆ ನೀಡಿದ್ದಾನೆ. ಸಿಸಿಬಿ ಅಧಿಕಾರಿಗಳು ವಿಷ್ಣು ಹೆಸರು ಹೇಳಿದವರಿಗೆಲ್ಲಾ ವಿಚಾರಣೆ ನಡೆಸಲಿದ್ದಾರೆ. ಈಗಾಗಲೇ ಜಯನಗರ ಪೊಲೀಸರು ರಕ್ತ ಮತ್ತು ಮೂತ್ರದ ಮಾದರಿ ಕಲೆ ಹಾಕಿದ್ದಾರೆ. ಎಫ್‍ಎಸ್‍ಎಲ್ ಗೆ ಮಾದರಿಗಳನ್ನು ಕಳುಹಿಸಿದ್ದಾರೆ. ಅದರ ಪೂರ್ಣ ವರದಿ ಬಂದಿಲ್ಲ, ಮತ್ತೆ ರಕ್ತ ಮತ್ತು ಮೂತ್ರದ ಮಾದರಿಯನ್ನು ಕಲೆ ಹಾಕುತ್ತಿಲ್ಲ ಎಂದು ಸಿಸಿಬಿ ಉನ್ನತ ಮೂಲಗಳು ಹೇಳಿವೆ.

    ಗೀತಾವಿಷ್ಣು ಲೂಸ್ ಮೋಷನ್ ನಿಂದ  ಬಳಲುತ್ತಿದ್ದು, ಕಾಡುಗೋಡಿಯ ಸರ್ಕಾರಿ ಆಸ್ಪತ್ರೆಯಲ್ಲಿ ವೈದಕೀಯ ಚಿಕಿತ್ಸೆ ಕೊಡಿಸಿ ಮತ್ತೆ ವಿಚಾರಣೆ ನಡೆಸಿದ್ದಾರೆ. ಅಪಘಾತದ ವೇಳೆಯಲ್ಲಿ ಪ್ರಣಾಮ್ ದೇವರಾಜ್ ನನ್ನ ಜೊತೆ ಇದ್ದದ್ದು ನಿಜ ಎಂದು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ.

    ಉತ್ತರ ಸಿಕ್ಕಿಲ್ಲ: ಯಾರಿಂದ ಡ್ರಗ್ಸ್ ಬರುತ್ತೆ? ಯಾರ ಬಳಿಯಲ್ಲಿ ಡ್ರಗ್ಸ್ ಪಡೆದು ರೇವ್ ಪಾರ್ಟಿಯನ್ನು ಮಾಡ್ತೀಯಾ ಎಂಬಿತ್ಯಾದಿ ಪ್ರಶ್ನೆಗಳು ಗೀತಾ ವಿಷ್ಣುಗೆ ಕೇಳಿದ್ದಾರೆ. ಆದರೆ ಈ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ನೀಡಲಿಲ್ಲ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.

    ವಿಚಾರಣೆ ವೇಳೆ ಡ್ರಗ್ಸ್ ಮೂಲ ಮತ್ತು ಡೀಲರ್ ಗಳ ಬಗ್ಗೆ ಮಾಹಿತಿ ನೀಡದೇ ಇದ್ದರೆ ಸುಳ್ಳು ಪತ್ತೆ ಪರೀಕ್ಷೆ ನಡೆಸಲು ಚಿಂತನೆ ನಡೆಸುತ್ತಿದ್ದಾರೆ. ಈ ಮೂಲಕ ಡ್ರಗ್ಸ್ ಕಿಂಗ್ ಪಿನ್‍ಪತ್ತೆ ಹಚ್ಚಲು ಪೊಲೀಸರು ಚಿಂತನೆ ನಡೆಸಿದ್ದಾರೆ.

  • ಪಾಕಿಸ್ತಾನಿ ಪ್ರಜೆಗಳ ಬಂಧನಕ್ಕೆ ಟ್ವಿಸ್ಟ್ – ಪೊಲೀಸರಿಂದಲೇ ಪೊಲೀಸ್ ಪೇದೆ ವಿಚಾರಣೆ

    ಪಾಕಿಸ್ತಾನಿ ಪ್ರಜೆಗಳ ಬಂಧನಕ್ಕೆ ಟ್ವಿಸ್ಟ್ – ಪೊಲೀಸರಿಂದಲೇ ಪೊಲೀಸ್ ಪೇದೆ ವಿಚಾರಣೆ

    ಬೆಂಗಳೂರು: ಮೂವರು ಪಾಕಿಸ್ತಾನಿ ಪ್ರಜೆಗಳ ಬಂಧನ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಒರ್ವ ಪೊಲೀಸ್ ಪೇದೆಯನ್ನು ವಿಚಾರಣೆ ಮಾಡಲಾಗುತ್ತಿದೆ.

    ಕೆ.ಎಸ್.ಲೇಔಟ್ ಪೊಲೀಸ್ ಪೇದೆ ಇರ್ಫಾನ್‍ರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಅರೋಪಿಗಳ ಪರಿಚಯವಿದ್ದ ಕಾರಣ ಪೇದೆಯ ವಿಚಾರಣೆ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.

    ಸಿಸಿಬಿ ಅಧಿಕಾರಿಗಳು ಪ್ರಕರಣದ ತನಿಖೆಯನ್ನ ಮತ್ತಷ್ಟು ಚುರುಕುಗೊಳಿಸಿದ್ದು, ಇಲ್ಲಿಯತನಕ ಐಬಿ, ಸ್ಟೇಟ್ ಇಂಟೆಲಿಜೆನ್ಸ್, ಸಿಸಿಬಿ, ರಾ, ಇಂಟರ್ನಲ್ ಸೆಕ್ಯೂರಿಟಿ, ಮಿಲಿಟರಿ ಇಂಟೆಲಿಜೆನ್ಸ್ ಸೇರಿದಂತೆ 7 ತನಿಖಾ ಸಂಸ್ಥೆಗಳಿಂದ ವಿಚಾರಣೆ ಮುಂದುವರೆದಿದೆ.

    ಸದ್ಯಕ್ಕೆ ಯಾವುದೇ ಉಗ್ರರ ಜತೆ ಲಿಂಕ್ ಇರುವ ಬಗ್ಗೆ ಸುಳಿವು ಸಿಕ್ಕಿಲ್ಲ. ಆದರೆ ಸಿಸಿಬಿ ಅಧಿಕಾರಿಗಳಿಗೆ ಎರಡು ಪ್ರಮುಖ ಅನುಮಾನಗಳಿವೆ. ಯಾರೋ ಉಗ್ರರು ಇವರನ್ನು ಗಡಿ ದಾಟಿಸಿ ಕಳಿಸಿರುವ ಶಂಕೆ ಒಂದೆಡೆಯಾದ್ರೆ ಸ್ಲೀಪರ್ ಸೆಲ್ ಆಗಿ ಕೆಲಸ ಮಾಡ್ತಾರಾ ಅನ್ನೋ ಶಂಕೆಯೂ ಇದೆ. ಮುಂದಿನ ದಿನಗಳಲ್ಲಿ ಇವರನ್ನ ಸ್ಲೀಪರ್ ಸೆಲ್‍ಗಳಾಗಿ ಬಳಸೋ ಸಾಧ್ಯತೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

    ಇಲ್ಲಿಯತನ ಸಿಸಿಬಿ 116 ಮಂದಿಯ ವಿಚಾರಣೆ ಮಾಡಿದೆ. ಅರೋಪಿಗಳು ಬೆಂಗಳೂರಿಗೆ ಬಂದ ಮೇಲೂ ಪಾಕಿಸ್ತಾನಕ್ಕೆ ಕರೆ ಮಾಡಿದ್ದು, 9 ತಿಂಗಳಲ್ಲಿ 18 ಮಂದಿಯ ಜತೆ ಸಂಪರ್ಕ ಮಾಡಿದ್ದರು ಎಂದು ಹೇಳಲಾಗಿದೆ. ಸದ್ಯ ಪ್ರಕರಣದ ತನಿಖೆ ಪಾಕಿಸ್ತಾನ ತಲುಪಿದ್ದು, ರಾ ಸಂಸ್ಥೆಯಿಂದ ಅರೋಪಿಗಳ ಹಿನ್ನೆಲೆ ಪರಿಶೀಲನೆ ನಡೆಯುತ್ತಿದೆ. ಆರೋಪಿಗಳಿಗೆ 25 ಕ್ಕೂ ಹೆಚ್ಚು ಪಾಕಿಸ್ತಾನಿಗಳ ಜೊತೆ ಸಂಪರ್ಕ ಇದ್ದ ಹಿನ್ನೆಲೆಯಲ್ಲಿ ಎಲ್ಲಾ ಮಾಹಿತಿಗಳನ್ನು ರಾ ತನಿಖಾ ಸಂಸ್ಥೆಗೆ ಕಳುಹಿಸಲಾಗಿದೆ. ರಾ ಸಂಸ್ಥೆ ಈಗಾಗಲೇ ಅವರ ಮಾಹಿತಿಯನ್ನು ಕಲೆಹಾಕ್ತಿದೆ.

    ಪಾಕಿಸ್ತಾನ ಪ್ರಜೆಗಳಿಗೆ ಆಧಾರ್ ಕಾರ್ಡ್ ನೀಡಲು ಸಹಕರಿಸಿದ ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರಿನ ಜಯನಗರ ಸಾರ್ವಜನಿಕ ಆಸ್ಪತ್ರೆಯ ಉಪ ಮುಖ್ಯ ವೈದ್ಯಾಧಿಕಾರಿ ಡಾ. ನಾಗಲಕ್ಷ್ಮಮ್ಮ ಹಾಗೂ ಡಿ ಗ್ರೂಪ್ ನೌಕರ ಟಿ.ಎಚ್. ರವಿಕುಮಾರ್ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಈ ಇಬ್ಬರನ್ನೂ ಅಮಾನತು ಮಾಡಿ ಆರೋಗ್ಯ ಇಲಾಖೆ ಆಯುಕ್ತ ಸುಬೋಧ್ ಯಾದವ್ ಆದೇಶ ಹೊರಡಿಸಿದ್ದಾರೆ.

     

  • ಬ್ಲ್ಯಾಕ್ ಆಂಡ್ ವೈಟ್ ದಂಧೆ: 1 ಕೋಟಿಗೆ 30 ಲಕ್ಷ ಕಮಿಷನ್ ಪಡೆಯುತ್ತಿದ್ದ ಇಬ್ಬರು ಅರೆಸ್ಟ್

    ಬ್ಲ್ಯಾಕ್ ಆಂಡ್ ವೈಟ್ ದಂಧೆ: 1 ಕೋಟಿಗೆ 30 ಲಕ್ಷ ಕಮಿಷನ್ ಪಡೆಯುತ್ತಿದ್ದ ಇಬ್ಬರು ಅರೆಸ್ಟ್

    ಬೆಂಗಳೂರು: ಬ್ಲ್ಯಾಕ್  ಅಂಡ್ ವೈಟ್ ದಂಧೆ ನಡೆಸುತ್ತಿದ್ದ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

    ಜಿಮ್ಮಿ ರಾಹುಲ್ ಮತ್ತು ಅಜಯ್ ಬಂಧಿತ ಆರೋಪಿಗಳು. ಬಂಧಿತರಿಂದ 1 ಕೋಟಿ 28 ಲಕ್ಷ ರೂ. ಮೌಲ್ಯದ ಹಳೆಯ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ.

    ಒಂದು ಕೋಟಿಗೆ ಮೂವತ್ತು ಲಕ್ಷ ಕಮಿಷನ್ ಆಧಾರದ ಮೇಲೆ ಹಣ ಬದಲಾವಣೆ ಮಾಡುತ್ತಿದ್ದರು. ಒಟ್ಟು 53 ಲಕ್ಷ ರೂ. ಮೌಲ್ಯದ ಒಂದು ಸಾವಿರ ರೂಪಾಯಿಯ ನೋಟುಗಳು ವಶಪಡಿಸಿಕೊಳ್ಳಲಾಗಿದೆ. ಉಳಿದವು 500 ರೂಪಾಯಿಯ ನೋಟುಗಳಾಗಿದೆ.

    ಜಿಮ್ಮಿ ರಾಹುಲ್ ಮೂಲತಃ ಮಂಗಳೂರಿನ ನಿವಾಸಿಯಾಗಿದ್ದು, ಅಜಯ್ ಮೂಲತಃ ಕೊಡಗು ನಿವಾಸಿಯಾಗಿದ್ದಾನೆ. ಇವರಿಬ್ಬರು ನಗರದಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದರು. ಅಕ್ರಮವಾಗಿ ಹಳೆಯ ನೋಟುಗಳಿಗೆ ಸೈಟ್ ಗಳನ್ನು ಮಾರಾಟ ಮಾಡುತ್ತಿದ್ದರು. ಇದೇ ರೀತಿ ಎರಡು ಕೋಟಿಗೂ ಹೆಚ್ಚು ಹಣ ಸಂಗ್ರಹ ಮಾಡಿದ್ದ ಇವರು ಸ್ಥಳೀಯವಾಗಿ ಹಣ ಬದಲಾವಣೆ ಮಾಡಲು ಹೋಗಿ ಮೂರು ಬಾರಿ  ಪೊಲೀಸರಿಂದ ಪರಾರಿಯಾಗಿದ್ದರು.

    ಬೆಂಗಳೂರಲ್ಲಿ ಸುಲಭವಾಗಿ ಹಣ ಬದಲಾವಣೆ ಮಾಡಬಹುದು ಎಂದು ತಿಳಿದು ನಗರಕ್ಕೆ ಬಂದಿದ್ದರು. ಚೀಟಿಂಗ್ ಗ್ಯಾಂಗ್ ನ ಜೊತೆ ಹಣ ಬದಲಾವಣೆ ಮಾಡುವುದಕ್ಕೆ ನಗರಕ್ಕೆ ಬಂದಿದ್ದರು. ಇವರ ಬಳಿ ಹಣ ಇದೆ ಎನ್ನುವ ಖಚಿತ ಮಾಹಿತಿಯನ್ನು ಆಧಾರಿಸಿ ಸಿಸಿಸಿ ಪೊಲೀಸರು ಇಂದು ಇಬ್ಬರನ್ನು ಅರೆಸ್ಟ್ ಮಾಡಿದ್ದಾರೆ.

  • ಮಂಗಳೂರಿನಲ್ಲಿ ಕೊಲೆ, ಶ್ರೀಮಂತರ ದರೋಡೆಗೆ ಸಂಚು ರೂಪಿಸಿದ್ದ 7 ಮಂದಿ ಸೆರೆ

    ಮಂಗಳೂರಿನಲ್ಲಿ ಕೊಲೆ, ಶ್ರೀಮಂತರ ದರೋಡೆಗೆ ಸಂಚು ರೂಪಿಸಿದ್ದ 7 ಮಂದಿ ಸೆರೆ

    ಮಂಗಳೂರು: ನಗರದ ಪಣಂಬೂರು ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರ ಕೊಲೆಗೆ ಹಾಗೂ ಶ್ರೀಮಂತ ವ್ಯಕ್ತಿಗಳ ದರೋಡೆಗಾಗಿ ಸಂಚು ರೂಪಿಸುತ್ತಿದ್ದ ಕುಖ್ಯಾತ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 2 ಪಿಸ್ತೂಲ್, ಸಜೀವ ಗುಂಡುಗಳು, ಚೂರಿ ಹಾಗೂ ಕೃತ್ಯಕ್ಕೆ ಉಪಯೋಗಿಸಿದ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

    ಮಂಗಳೂರು ನಗರದ ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ತಣ್ಣೀರುಬಾವಿ ಬೀಚ್ ರಸ್ತೆಯಲ್ಲಿ ಮಾರುತಿ ಸ್ವಿಫ್ಟ್ ಕಾರು ಹಾಗೂ ರಿಕ್ಷಾವೊಂದರಲ್ಲಿ ಈ ಹಿಂದೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿ ಜೈಲಿನಿಂದ ಇತ್ತೀಚೆಗೆ ಬಿಡುಗಡೆಗೊಂಡಿದ್ದವರು ವ್ಯಕ್ತಿಯೊಬ್ಬರ ಕೊಲೆಗೆ ಸಂಚು ರೂಪಿಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ಸುರತ್ಕಲ್‍ನ ಸಫ್ವಾನ್, ಹುಸೈನ್, ಮೊಹಮ್ಮದ್ ಫೈಸಲ್, ಎಮ್ಮೆಕೆರೆಯ ಅಬ್ದುಲ್ ನಾಸಿರ್, ಮುಕ್ಕ ಸುರತ್ಕಲ್‍ನ ಸಂಶುದ್ದೀನ್, ಉಳ್ಳಾಲದ ಹಳೆಕೋಟೆಯ ಉಮ್ಮರ್ ಫಾರೂಕ್ ಹಾಗೂ ಮೊಹಮ್ಮದ್ ಅನ್ಸಾರ್ ಎಂಬುವವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತರಿಂದ 2 ಪಿಸ್ತೂಲ್‍ಗಳು, 7 ಸಜೀವ ಮದ್ದುಗುಂಡುಗಳು, 2 ಚೂರಿಗಳು, 3 ಮೊಬೈಲ್ ಫೋನ್  ಕೆಎ-19-ಎಂಇ-4009 ಮಾರುತಿ ಸ್ವಿಫ್ಟ್ ಕಾರು, ಕೆಎ-19-ಎಬಿ-6123 ಬಜಾಜ್ ಆಟೋ ರಿಕ್ಷಾವನ್ನು ವಶಪಡಿಸಿಕೊಳ್ಳಲಾಗಿದೆ.

    ಈ ಆರೋಪಿಗಳ ಪೈಕಿ ಸಫ್ವಾನ್ ಹುಸೈನ್ ಎಂಬಾತನ ವಿರುದ್ಧ ಈ ಹಿಂದೆ ಕೊಲೆ, ಕೊಲೆಗೆ ಪ್ರಯತ್ನ, ಅಪಹರಣ, ದರೋಡೆ, ಕರ್ತವ್ಯನಿರತ ಪೆÇಲೀಸರ ಹಲ್ಲೆ ಮುಂತಾದ ಒಟ್ಟು 23 ಪ್ರಕರಣಗಳು ದಾಖಲಾಗಿದ್ದುದಲ್ಲದೇ ಗೂಂಡಾ ಕಾಯ್ದೆಯಡಿಯಲ್ಲಿ ಕೂಡಾ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಗಳಲ್ಲಿ ಜಾಮೀನು ಪಡೆದು ಈತ 2 ತಿಂಗಳ ಹಿಂದೆ ಬಿಡುಗಡೆಗೊಂಡಿದ್ದ.

    ಮೊಹಮ್ಮದ್ ಫೈಸಲ್ ಇಬ್ರಾಹಿಂ ಶೇಖ್ ವಿರುದ್ಧ ಕೊಲೆಗೆ ಯತ್ನ, ದರೋಡೆ, ಜೈಲಿನಲ್ಲಿ ಗಲಾಟೆ ಮುಂತಾದ ಒಟ್ಟು 8 ಪ್ರಕರಣಗಳು ದಾಖಲಾಗಿದ್ದು, ಇತ್ತೀಚೆಗೆ ಜೈಲ್ ನಿಂದ ಬಿಡುಗಡೆಗೊಂಡಿದ್ದ. ಸಂಶುದ್ದೀನ್ ಎಂಬಾತನ ವಿರುದ್ಧ ಕೊಲೆ, ಕೊಲೆಗೆ ಯತ್ನ, ಅಪಹರಣ, ದರೋಡೆ, ಜೈಲಿನಲ್ಲಿ ಗಲಾಟೆ ಮುಂತಾದ ಒಟ್ಟು 8 ಪ್ರಕರಣಗಳು ದಾಖಲಾಗಿದ್ದು, ಸುಮಾರು 8 ತಿಂಗಳ ಹಿಂದೆ ಜೈಲಿನಿಂದ ಬಿಡುಗಡೆಗೊಂಡಿದ್ದ.

    ಅಬ್ದುಲ್ ನಾಸಿರ್ ಯಾನೆ ಡಾನ್ ನಾಸೀರ್ ಎಂಬಾತನ ವಿರುದ್ಧ ಕೊಲೆಯತ್ನ, ಅಪಹರಣ, ದರೋಡೆ, ಕೋಮು ಗಲಭೆ ಮುಂತಾದ ಒಟ್ಟು 9 ಪ್ರಕರಣಗಳು ದಾಖಲಾಗಿದೆ.

    ಉಮರ್ ಫಾರೂಕ್ ಯಾನೆ ಮಾನಾ ಫಾರೂಕ್ ವಿರುದ್ದ ಮೂರು ಪ್ರಕರಣಗಳು ದಾಖಲಾಗಿದೆ. ಅವುಗಳ ಪೈಕಿ ಒಂದು ಕೊಲೆ ಯತ್ನ, ದರೋಡೆ ಯತ್ನ ಹಾಗೂ ಹಲ್ಲೆ ಪ್ರಕರಣವೂ ಇದೆ. ಮೊಹಮ್ಮದ್ ಅನ್ಸಾರ್ ನ ಮೇಲೆ ಯಾವುದೇ ಪ್ರಕರಣಗಳು ದಾಖಲಾಗಿಲ್ಲ. ಆರೋಪಿಗಳನ್ನು ಹಾಗೂ ವಶಪಡಿಸಿಕೊಂಡ ವಸ್ತುಗಳನ್ನು ಪಣಂಬೂರು ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.