Tag: ccb

  • ಕುಖ್ಯಾತ ರೌಡಿಶೀಟರ್‌ಗಳ ಫ್ಯಾನ್ ಫಾಲೋಯಿಂಗ್ ಗ್ರೂಪ್ ಮೇಲೆ ಸಿಸಿಬಿ ಕಣ್ಣು

    ಕುಖ್ಯಾತ ರೌಡಿಶೀಟರ್‌ಗಳ ಫ್ಯಾನ್ ಫಾಲೋಯಿಂಗ್ ಗ್ರೂಪ್ ಮೇಲೆ ಸಿಸಿಬಿ ಕಣ್ಣು

    ಬೆಂಗಳೂರು: ನಟ ದರ್ಶನ್ ಗ್ಯಾಂಗ್‍ನಿಂದ ರೇಣುಕಾಸ್ವಾಮಿ (Renukaswamy) ಕೊಲೆ ಪ್ರಕರಣದ ಬಳಿಕ ಬೆಂಗಳೂರು ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ನಗರದ ಕುಖ್ಯಾತ ರೌಡಿಶೀಟರ್ ಗಳ ಫ್ಯಾನ್ ಫಾಲೋಯಿಂಗ್ ಗ್ರೂಪ್‍ಗಳ ಮೇಲೆ ಸಿಸಿಬಿ ಪೊಲೀಸರು ಕಣ್ಣಿಟ್ಟಿದ್ದಾರೆ.

    ನಗರದ ಕ್ರಿಮಿನಲ್‍ಗಳ ಹೆಸರಿನಲ್ಲಿ ಗ್ರೂಪ್‍ಗಳನ್ನು ಪೊಲೀಸರು ಲಿಸ್ಟ್ ಮಾಡ್ತಿದ್ದು ರೌಡಿಶೀಟರ್‍ಗಳ ಹೆಸರು ಬಳಸಿ ಹತ್ತಾರು ಫ್ಯಾನ್ ಪೇಜ್‍ಗಳು ಕ್ರಿಯೇಟ್ ಮಾಡ್ತಿರೋ ಸಹಚರರ ಬೆನ್ನುಬಿದ್ದಿದ್ದಾರೆ. ಫ್ಯಾನ್ ಪೇಜ್‍ಗಳಲ್ಲಿ ರೌಡಿಶೀಟರ್ ಗಳಿಗೆ ಬಿಲ್ಡಪ್ ಕೊಟ್ಟು ಪೋಸ್ಟ್ ಮಾಡ್ತಿದ್ದು, ಇದಕ್ಕೆಲ್ಲ ಕಡಿವಾಣ ಹಾಕಲು ಸಿಸಿಬಿ ರೌಡಿ ವಿಂಗ್ ಮುಂದಾಗಿದೆ.‌

    ಇತ್ತೀಚೆಗೆ ಇನ್‍ಸ್ಟಾಗ್ರಾಂನಲ್ಲಿ ರೌಡಿಶೀಟರ್ ಗಳ ಫ್ಯಾನ್ ಪೇಜ್‍ಗಳು ಹೆಚ್ಚಾಗಿದ್ದು, ರೌಡಿಗಳಿಗೆ ಎನ್ ಬಾಸ್, ಎಸ್ ಬಾಸ್, ಸಿ ಬಾಸ್ ಅಂತ ಪೇಜ್ ಕ್ರಿಯೇಟ್ ಮಾಡಿದ್ದಾರೆ. ಕುಖ್ಯಾತ ರೌಡಿಶೀಟರ್ ಗಳಾದ ವಿಲ್ಸನ್ ಗಾರ್ಡನ್ ನಾಗ, ಸೈಲೆಂಟ್ ಸುನಿಲ, ಸೈಕಲ್ ರವಿ ಸೇರಿದಂತೆ ಹಲವರ ಹೆಸರಲ್ಲಿರೋ ಫ್ಯಾನ್ ಪೇಜ್‍ಗಳು ಓಪನ್ ಮಾಡಿದ್ದು ಇಂತಹ ಪೇಜ್‍ಗಳನ್ನ ಸಾವಿರಾರು ಯುವಕರು ಫಾಲೋ ಮಾಡ್ತಿದ್ದಾರೆ. ಇದನ್ನೂ ಓದಿ: ದರ್ಶನ್ ಗ್ಯಾಂಗ್ ಕ್ರೌರ್ಯ ಮತ್ತಷ್ಟು ಬಯಲು- ಸ್ವಾಮಿಗೆ ಶೆಡ್‍ನಲ್ಲಿ ಊಟ ಕೊಟ್ಟು ಹಲ್ಲೆ

    ಬೆಂಗಳೂರು ಡಾನ್, ಅಂಡರ್ ವರ್ಲ್ಡ್ ಡಾನ್, ಅಂತ ಬಿಲ್ಡಪ್ ಕೊಟ್ಟು ಪೇಜ್‍ನಲ್ಲಿ ಪೋಸ್ಟ್ ಮಾಡ್ತಿದ್ದು ಇಂತಹ ಪೇಜ್‍ಗಳಿಂದಾಗಿ ಯುವಜನತೆ ರೌಡಿಸಂ ನತ್ತ ಆಕರ್ಷಿತರಾಗ್ತಿದ್ದಾರೆ. ಈ ಬಗ್ಗೆ ಸಿಸಿಬಿಗೆ ಹಲವು ದೂರುಗಳು ಬಂದಿದ್ದು, ಸೈಬರ್ ಕ್ರೈಂ ಪೊಲೀಸರ ಸಹಾಯದೊಂದಿಗೆ ಫ್ಯಾನ್ ಪೇಜ್‍ಗಳು, ಗ್ರೂಪ್‍ಗಳನ್ನು ಡಿಲೀಟ್ ಮಾಡಿಸಲಾಗುತ್ತಿದೆ.

  • ಡ್ರಗ್ಸ್‌ ಕೇಸ್‌ – ಸಂಜನಾ ಗಲ್ರಾನಿಗೆ ಬಿಗ್‌ ರಿಲೀಫ್‌, ಎಫ್‌ಐಆರ್‌ ರದ್ದು

    ಡ್ರಗ್ಸ್‌ ಕೇಸ್‌ – ಸಂಜನಾ ಗಲ್ರಾನಿಗೆ ಬಿಗ್‌ ರಿಲೀಫ್‌, ಎಫ್‌ಐಆರ್‌ ರದ್ದು

    ಬೆಂಗಳೂರು: ಭಾರೀ ಸಂಚಲನ ಸೃಷ್ಟಿಸಿದ್ದ ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣದಲ್ಲಿ (Sandalwood Drugs Case) ನಟಿ ಸಂಜನಾ ಗಲ್ರಾನಿ (Sanjjanaa Galrani) ಹಾಗೂ ಶಿವಪ್ರಕಾಶ್ ಚಿಪ್ಪಿಗೆ ಬಿಗ್ ರಿಲೀಫ್ ಸಿಕ್ಕಿದೆ. ಇಬ್ಬರ ವಿರುದ್ದ ದಾಖಲಾಗಿದ್ದ ಎಫ್‌ಐಆರ್‌ ಅನ್ನು ಹೈಕೋರ್ಟ್ ರದ್ದುಗೊಳಿಸಿದೆ.

    ಸಿಸಿಬಿಯಿಂದ (CCB) ನಟಿಯರು ಸೇರಿದಂತೆ ಡ್ರಗ್ ಪೆಡ್ಲರ್ ಗಳ ಬಂಧನವಾಗಿತ್ತು. ಎಫ್‌ಐಆರ್ (FIR) ರದ್ದು ಕೋರಿ ಸಂಜನಾ ಹಾಗೂ ಶಿವಪ್ರಕಾಶ್ ಹೈಕೋರ್ಟ್ ಮೆಟ್ಟಿಲೇರಿದ್ದರು.

     

    ಈ ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್‌ (High Court) ಏಕಸದಸ್ಯ ಪೀಠ ಎಫ್‌ಐಆರ್‌ ರದ್ದುಗೊಳಿಸಿ ಆದೇಶಿಸಿದೆ.  ಇದನ್ನೂ ಓದಿ: 1 ಲಕ್ಷ ರೂ. ವ್ಯವಹಾರಕ್ಕೆ 1 ಸಾವಿರ ರೂ. ಕಮಿಷನ್‌ – ವಂಚನೆಗಾಗಿ ಬಾಡಿಗೆಗೆ ಸಿಗುತ್ತೆ ಬ್ಯಾಂಕ್‌ ಖಾತೆ!

    ಮಾದಕ ಜಾಲಕ್ಕೆ ಸ್ಯಾಂಡಲ್​ವುಡ್​ ನಂಟಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ 2020ರ ಸೆಪ್ಟೆಂಬರ್‌ನಲ್ಲಿ ಸಂಜನಾ ಗಲ್ರಾಣಿ ಮನೆಗೆ ದಾಳಿ ಮಾಡಿದ ಸಿಸಿಬಿ ಅಧಿಕಾರಿಗಳು ಮನೆ ಪರಿಶೀಲನೆ ನಡೆಸಿ ಬಂಧಿಸಿದ್ದರು.

     

  • ರೇವ್ ಪಾರ್ಟಿ ಪ್ರಕರಣ – ನಟಿ ಹೇಮಾಗೆ ಜೂ.14ರವರೆಗೆ ನ್ಯಾಯಾಂಗ ಬಂಧನ

    ರೇವ್ ಪಾರ್ಟಿ ಪ್ರಕರಣ – ನಟಿ ಹೇಮಾಗೆ ಜೂ.14ರವರೆಗೆ ನ್ಯಾಯಾಂಗ ಬಂಧನ

    ಬೆಂಗಳೂರು: ರೇವ್ ಪಾರ್ಟಿ (Rave Party) ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ದಿಕ್ಕು ತಪ್ಪಿಸುವ ಯತ್ನ ಮಾಡಿದ್ದ ಆರೋಪದ ಮೇಲೆ ತೆಲಗು ನಟಿ ಹೇಮಾ (Hema) ಅವರನ್ನು ಸಿಸಿಬಿ ಪೊಲೀಸರು (CCB) ಬಂಧಿಸಿದ್ದಾರೆ. ಬಂಧನಕ್ಕೊಳಗಾದ ನಟಿಯನ್ನು ಜೂ.14ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ನಾಲ್ಕನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಮ್ಎಫ್‌ಸಿ ನ್ಯಾಯಾಧೀಶರಾದ ಸಲ್ಮಾ ಎ.ಎಸ್ ಅವರಿದ್ದ ಪೀಠ ನ್ಯಾಂಯಾಂಗ ಬಂಧನಕ್ಕೆ ಆದೇಶಿಸಿದೆ.

    ಇತ್ತೀಚೆಗೆ ಡ್ರಗ್ಸ್ ಸೇವನೆಗೆ ಸಂಬಂಧಿಸಿದಂತೆ ಹೇಮಾ ರಿಪೋರ್ಟ್ ಪಾಸಿಟೀವ್ ಬಂದಿತ್ತು. ಈ ವೇಳೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಮೊದಲು ವಿಚಾರಣೆಗೆ ಹಾಜರಾಗುವಂತೆ ಅವರಿಗೆ ನೋಟಿಸ್ ನೀಡಲಾಗಿತ್ತು. ಆದರೆ ಅವರು ಅನಾರೋಗ್ಯದ ನೆಪ ಹೇಳಿ ವಿಚಾರಣೆಗೆ ಹಾಜರಾಗದೇ ಸಮಯಾವಕಾಶ ಕೇಳಿದ್ದರು. ಹಾಜರಾಗದ ಹಿನ್ನೆಲೆಯಲ್ಲಿ ಸಿಸಿಬಿ ಅಧಿಕಾರಿಗಳು 2ನೇ ನೋಟಿಸ್ ಕೂಡ ನೀಡಿದ್ದರು.

    ಇಂದು ಸಂಜೆ 4 ಗಂಟೆಗೆ ಬೆಂಗಳೂರಿಗೆ ಆಗಮಿಸಿರುವ ಅವರು ಬುರ್ಖಾ ತೊಟ್ಟು ಅಧಿಕಾರಿಗಳ ಮುಂದೆ ಹಾಜರಾಗಿದ್ದರು. ಈ ವೇಳೆ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

    ಸಿಸಿಬಿ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಅವರು ಸಮರ್ಪಕ ಉತ್ತರ ನೀಡಿಲ್ಲ. ಅವರನ್ನು ಕೆಸಿ ಜನರಲ್ ಆಸ್ಪತ್ರೆಗೆ ಮೆಡಿಕಲ್ ಟೆಸ್ಟ್‌ಗಾಗಿ ಪೊಲೀಸರು ಕರೆದೊಯ್ದಿದ್ದಾರೆ. ವೈದ್ಯರು ನಟಿ ಹೇಮಾ ಅವರ ಹೇರ್ ಸ್ಯಾಂಪಲ್ ಸಂಗ್ರಹಿಸಿದ್ದಾರೆ. ಅಲ್ಲದೇ ಅವರಿಗೆ ಜ್ವರ ಇರುವ ಹಿನ್ನೆಲೆ ಚಿಕಿತ್ಸೆ ನೀಡಿದ್ದಾರೆ.

  • Breaking- ಡ್ರಗ್ಸ್ ಪಾರ್ಟಿ ಪ್ರಕರಣ : ಸಿಸಿಬಿ ಕಚೇರಿಗೆ ಹಾಜರಾದ ನಟಿ ಹೇಮಾ

    Breaking- ಡ್ರಗ್ಸ್ ಪಾರ್ಟಿ ಪ್ರಕರಣ : ಸಿಸಿಬಿ ಕಚೇರಿಗೆ ಹಾಜರಾದ ನಟಿ ಹೇಮಾ

    ಬೆಂಗಳೂರಿನ ಡ್ರಗ್ಸ್ ಪಾರ್ಟಿ (Drugs) ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಹೇಮಾ (Hema) ಇಂದು ಬೆಂಗಳೂರಿನ ಸಿಸಿಬಿ (CCB) ಕಚೇರಿಗೆ ವಿಚಾರಣೆಗಾಗಿ (Inquiry) ಹಾಜರಾಗಿದ್ದಾರೆ. ಈ ಮೊದಲು ಹಾಜರಾಗುವಂತೆ ಅವರಿಗೆ ಮೊದಲ ನೋಟಿಸ್ ನೀಡಲಾಗಿತ್ತು. ಆದರೆ, ಅವರು ಅಂದು ಹಾಜರಾಗದೇ ಸಮಯಾವಕಾಶ ಕೇಳಿದ್ದರು.

    ಹೇಮಾ ಹಾಜರಾಗದ ಹಿನ್ನೆಲೆಯಲ್ಲಿ 2ನೇ ನೋಟಿಸ್ ಕೂಡ ನೀಡಿದ್ದರು ಸಿಸಿಬಿ ಅಧಿಕಾರಿಗಳು. ಇಂದು ಸಂಜೆ 4 ಗಂಟೆಗೆ ಬೆಂಗಳೂರಿಗೆ ಆಗಮಿಸಿರುವ ಹೇಮಾ ಅಧಿಕಾರಿಗಳ ಮುಂದೆ ಹಾಜರಾಗಿದ್ದಾರೆ. ಹೇಮಾ ಅವರ ವಿಚಾರಣೆಯನ್ನು ಅಧಿಕಾರಿಗಳು ಸಿಸಿಬಿ ಕಚೇರಿಯಲ್ಲಿ ಮಾಡುತ್ತಿದ್ದಾರೆ.

     

    ಮೊನ್ನೆಯಷ್ಟೇ ಡ್ರಗ್ಸ್ ಸೇವನೆಗೆ ಸಂಬಂಧಿಸಿದಂತೆ ಹೇಮಾ ರಿಪೋರ್ಟ್ ಪಾಸಿಟೀವ್ ಬಂದಿತ್ತು. ಆನಂತರ ಮೊದಲ ನೋಟಿಸ್  ನೀಡಲಾಗಿತ್ತು. ಅನಾರೋಗ್ಯದ ಕಾರಣಕೊಟ್ಟು  ಕಾಲಾವಕಾಶ ಕೇಳಿದ್ದರು ನಟಿ ಹೇಮಾ. ಆನಂತರ 2ನೇ ನೋಟಿಸ್ ನೀಡಲಾಗಿತ್ತು.  ಎರಡನೇ ನೋಟಿಸ್ ಗೆ ಸಿಸಿಬಿ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.

  • ಫಾರ್ಮ್‍ಹೌಸ್‍ನಲ್ಲಿ ರೇವ್ ಪಾರ್ಟಿ ಪ್ರಕರಣ- ಐವರ ಬ್ಯಾಂಕ್ ಅಕೌಂಟ್ ಸೀಜ್

    ಫಾರ್ಮ್‍ಹೌಸ್‍ನಲ್ಲಿ ರೇವ್ ಪಾರ್ಟಿ ಪ್ರಕರಣ- ಐವರ ಬ್ಯಾಂಕ್ ಅಕೌಂಟ್ ಸೀಜ್

    ಬೆಂಗಳೂರು: ನಗರದ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಫಾರ್ಮ್‍ಹೌಸ್‍ನಲ್ಲಿ ನಡೆದ ರೇವ್ ಪಾರ್ಟಿ (Rave Party) ಪ್ರಕರಣದ ತನಿಖೆ ಚುರುಕುಗೊಂಡಿದೆ.

    ಬಂಧಿತರ ಐವರು ಆರೋಪಿಗಳ ಅಕೌಂಟ್‍ನಲ್ಲಿದ್ದ ಹಣವನ್ನು ಸಿಸಿಬಿ ಪೊಲೀಸರು (CCB Police) ಸೀಜ್ ಮಾಡಿದ್ದಾರೆ. ಆರೋಪಿಗಳ ಅಕೌಂಟ್‍ನಲ್ಲಿ ಲಕ್ಷಲಕ್ಷ ಹಣ ಪತ್ತೆಯಾಗಿತ್ತು. ಹೀಗಾಗಿ ಸಿಸಿಬಿ ಅಧಿಕಾರಿಗಳು ಎಲ್ಲಾ ಅಕೌಂಟ್‍ಗಳನ್ನ ಫ್ರೀಜ್ ಮಾಡಿಸಿದ್ದಾರೆ. ಅಲ್ಲದೆ ಆರೋಪಿಗಳ ಮೊಬೈಲ್ ಮಿರರ್ ಇಮೇಜ್ ಮಾಡಿಸಲು ಸಿದ್ಧತೆ ನಡೆಸುತ್ತಿದ್ದಾರೆ.

    ಬೇರೆ ಎಲ್ಲೆಲ್ಲಿ ರೇವ್ ಪಾರ್ಟಿ ಮಾಡಿಸಿದ್ರು..? ಯಾರೆಲ್ಲ ಭಾಗಿಯಾಗಿದ್ರು..?, ರೇವ್ ಪಾರ್ಟಿಗೆ ಎಷ್ಟು ಹಣ ವಸೂಲಿ ಮಾಡ್ತಿದ್ರು..? ಡ್ರಗ್ಸ್ ಎಲ್ಲಿಂದ ಬರ್ತಿತ್ತು..?, ಎಲ್ಲ ಮಾಹಿತಿ ಪತ್ತೆ ಮಾಡಲು ಮೊಬೈಲ್ ಮಿರರ್ ಇಮೇಜಿಂಗ್ ಮಾಡಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಅಲ್ಲದೇ ಐವರು ಆರೋಪಿಗಳನ್ನ ಬಾಡಿ ವಾರೆಂಟ್ ಮೇಲೆ ಕಸ್ಟಡಿಗೆ ಪಡೆಯಲು ಕೂಡ ತಯಾರಿ ನಡೆಯುತ್ತಿದೆ.

    ಸೋಮವಾರ ಕೋರ್ಟ್ ಗೆ ಅರ್ಜಿ ಹಾಕಿ ಆರೋಪಿಗಳನ್ನ ಕಸ್ಟಡಿಗೆ ಪಡೆಯಲು ಸಿಸಿಬಿ ಹಾಗೂ ಆರೋಪಿಗಳ ವಿಚಾರಣೆ ಬಳಿಕ ನಟಿ ಹೇಮ ಸೆರಿದಂತೆ ಪಾರ್ಟಿಯಲ್ಲಿದ್ದವರಿಗೆ ನೋಟಿಸ್ ನೀಡಲು ಸಿದ್ಧತೆ ಮಾಡಿಕೊಂಡಿದೆ.

    ವಾಸು ಎಂಬಾತನ ಹುಟ್ಟುಹಬ್ಬದ ಅಂಗವಾಗಿ Sunset To Sun Rise victory ಶೀರ್ಷಿಕೆಯಲ್ಲಿ ರೇವ್ ಪಾರ್ಟಿ ಆಯೋಜನೆ ಮಾಡಲಾಗಿತ್ತು. ಪಾರ್ಟಿಯಲ್ಲಿ ನೂರರಿಂದ ನೂರೈವತ್ತು ಮಂದಿ ಜಮಾವಣೆಗೊಂಡಿದ್ದರು ಎನ್ನಲಾಗಿದೆ. ರೇವ್ ಪಾರ್ಟಿಯಲ್ಲಿ ದೊಡ್ಡ ಮಟ್ಟದ ಮಾದಕ ವಸ್ತು ಬಳಕೆ ಮಾಡಿರುವ ಸುಳಿವು ಸಿಕ್ಕಿದೆ. ಎಂಡಿಎಂಎ, ಕೊಕೇನ್, ಹೈಡೋಗಾಂಜಾ ಪತ್ತೆಯಾಗಿತ್ತು.

    ಪಾರ್ಟಿಯಲ್ಲಿ ಭಾಗಿಯಾಗಿದ್ದ 73 ಮಂದಿ ಪುರುಷರಲ್ಲಿ 59 ಮಂದಿ ಹಾಗೂ 30 ಮಂದಿ ಯುವತಿಯರ ಪೈಕಿ 27 ಮಂದಿಯ ಬ್ಲಡ್ ರಿಪೋರ್ಟ್ ಪಾಸಿಟಿವ್ ಎಂದು ಬಂದಿತ್ತು. ಈ ಮೂಲಕ ಪಾರ್ಟಿಯಲ್ಲಿ ಸೇರಿದ್ದ ಬಹುತೇಕ ಮಂದಿ ಮಾದಕ ವಸ್ತು ಸೇವನೆ ಮಾಡಿರುವುದು ದೃಢಪಟ್ಟಿತ್ತು. ತೆಲುಗು ಕಿರುತೆರೆ ನಟಿ ಹೇಮಾ(ಕೃಷ್ಣವೇಣಿ) ಪಾಲ್ಗೊಂಡಿರುವುದು ಕೂಡ ಬಯಲಾಗಿತ್ತು.

  • ಬೆಂಗ್ಳೂರಲ್ಲಿ ರೇವ್ ಪಾರ್ಟಿ ಮೇಲೆ ಸಿಸಿಬಿ ದಾಳಿ- ಅಪಾರ ಪ್ರಮಾಣದ ಡ್ರಗ್ಸ್ ಪತ್ತೆ

    ಬೆಂಗ್ಳೂರಲ್ಲಿ ರೇವ್ ಪಾರ್ಟಿ ಮೇಲೆ ಸಿಸಿಬಿ ದಾಳಿ- ಅಪಾರ ಪ್ರಮಾಣದ ಡ್ರಗ್ಸ್ ಪತ್ತೆ

    – ತೆಲುಗು ನಟಿಯರು, ಮಾಡೆಲ್‍ಗಳು ಭಾಗಿ

    ಬೆಂಗಳೂರು: ನಗರದ ಎಲೆಕ್ಟ್ರಾನಿಕ್ ಸಿಟಿ (Electronic City) ಹೊರಭಾಗದ ಸಿಂಗೇನಾ ಅಗ್ರಹಾರದ ಫಾರಂ ಹೌಸ್‍ನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ (Rave Party) ಮೇಲೆ ಸಿಸಿಬಿ (CCB) ಅಧಿಕಾರಿಗಳು ದಾಳಿ ನಡೆಸಿದ್ದು, ಅಪಾರ ಪ್ರಮಾಣದ ಮಾದಕ ವಸ್ತುಗಳು ಪತ್ತೆಯಾಗಿವೆ. ಪಾರ್ಟಿಯಲ್ಲಿ ತೆಲುಗು ನಟ-ನಟಿಯರು, ಮಾಡೆಲ್‍ಗಳು ಹಾಗೂ ಟೆಕ್ಕಿಗಳು ಭಾಗಿಯಾಗಿದ್ದರು ಎಂದು ತಿಳಿದು ಬಂದಿದೆ.

    ಕಾನ್ ಕಾರ್ಡ್ ಮಾಲೀಕ ಗೋಪಾಲ ರೆಡ್ಡಿ ಎಂಬವರಿಗೆ ಸೇರಿದ ಜಿ.ಆರ್‌ ಫಾರಂ ಹೌಸ್‍ನಲ್ಲಿ ಹೈದರಾಬಾದ್ ಮೂಲದ ವಾಸು ಎಂಬಾತ ರೇವ್ ಪಾರ್ಟಿ ಆಯೋಜಿಸಿದ್ದ. ಪಾರ್ಟಿಯಲ್ಲಿ ಆಂಧ್ರಪ್ರದೇಶ ಹಾಗೂ ಬೆಂಗಳೂರು (Bengaluru) ಮೂಲದ 100ಕ್ಕೂ ಅಧಿಕ ಮಂದಿ ಯುವಕ ಯುವತಿಯರಿದ್ದರು. ಖಚಿತ ಮಾಹಿತಿ ಆಧರಿಸಿ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅವಧಿ ಮೀರಿ ಪಾರ್ಟಿ ನಡೆದಿದ್ದಲ್ಲದೇ ಪಾರ್ಟಿಯಲ್ಲಿ ಎಂಡಿಎಂಎ, ಕೋಕೆನ್ ಸೇರಿ ಹಲವು ಮಾದರಿಯ ಮಾದಕ ವಸ್ತುಗಳು ಪತ್ತೆಯಾಗಿವೆ. ಇದನ್ನೂ ಓದಿ: ಇರಾನ್‌ ಅಧ್ಯಕ್ಷರಿದ್ದ ಹೆಲಿಕಾಪ್ಟರ್‌ ಪತನ- ಸುರಕ್ಷಿತವಾಗಿ ವಾಪಸ್‌ ಆಗಲು ಮೋದಿ ಪ್ರಾರ್ಥನೆ

    ಸ್ಥಳದಲ್ಲಿದ್ದ ಬೆಂಜ್ ಕಾರಿನಲ್ಲಿ ಆಂಧ್ರದ ಎಂಎಲ್‍ಎ ಕಾಕನಿ ಗೋವರ್ಧನ ರೆಡ್ಡಿ ಎಂಬವರ ಹೆಸರಿನ ಪಾಸ್ ಪತ್ತೆಯಾಗಿದೆ. ಪಾರ್ಟಿಗೆ ಯುವಕರು ಜಾಗ್ವಾರ್ ಹಾಗೂ ಆಡಿ ಕಾರುಗಳಲ್ಲಿ ಬಂದಿದ್ದು, ಕೆಲವರನ್ನು ಹೈದರಾಬಾದ್‍ನಿಂದ ಕರೆಸಿಕೊಳ್ಳಲಾಗಿತ್ತು. ಸನ್ ಸೆಟ್ ಟು ಸನ್ ರೈಸ್ ಪಾರ್ಟಿ ಎಂಬ ಹೆಸರಿನಲ್ಲಿ ಪಾರ್ಟಿ ಆಯೋಜಿಸಲಾಗಿದ್ದು, ಭಾನುವಾರ ಸಂಜೆ 5 ಗಂಟೆಯಿಂದ ಬೆಳಗ್ಗೆ 6 ಗಂಟೆ ವರೆಗೂ ಪಾರ್ಟಿ ನಡೆಸಲು ಮುಂದಾಗಿದ್ದರು. ಪಾರ್ಟಿಗೆ ಸುಮಾರು 30 ರಿಂದ 50 ಲಕ್ಷ ರೂ. ಹಣ ಖರ್ಚು ಮಾಡಲಾಗಿದೆ ಎಂದು ತಿಳಿದು ಬಂದಿದೆ.

    ಸಿಸಿಬಿ ಅಧಿಕಾರಿಗಳು ನಾರ್ಕೊಟಿಕ್ಸ್ ಸ್ನಿಫರ್ ಡಾಗ್‍ಗಳಿಂದ ಸ್ಥಳ ಪರಿಶೀಲನೆ ನಡೆಯತ್ತಿದೆ. ಕಾರುಗಳ ಮಾಲೀಕರ ಸಮಕ್ಷಮದಲ್ಲಿ ಕಾರುಗಳನ್ನು ಪರಿಶೀಲಿಸಲಾಗುತ್ತಿದೆ. ಈ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಶಿವರಾಮೇಗೌಡ ಮನೆ ಮೇಲೆ ಮೊಟ್ಟೆ ಎಸೆತ- ಪೊಲೀಸರಿಂದ ಬಿಗಿಭದ್ರತೆ

  • ಬೆಂಗ್ಳೂರಿನ ಬಿಸ್ಮಿಲ್ಲಾ ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದ ನಾಲ್ವರು ಬಾಂಗ್ಲಾ ಪ್ರಜೆಗಳು ಅರೆಸ್ಟ್!

    ಬೆಂಗ್ಳೂರಿನ ಬಿಸ್ಮಿಲ್ಲಾ ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದ ನಾಲ್ವರು ಬಾಂಗ್ಲಾ ಪ್ರಜೆಗಳು ಅರೆಸ್ಟ್!

    – ಭಾರತದ ಪಾಸ್‌ಪೋರ್ಟ್, ಆಧಾರ್, ರೇಷನ್ ಕಾರ್ಡ್ ನಕಲು ಮಾಡಿದ್ದ ಆರೋಪಿಗಳು
    – ಅಕ್ರಮವಾಸಿಗಳಿಗೆ ಸಹಕರಿಸಿದ್ದ ನಾಲ್ವರು ಯುವಕರ ವಿರುದ್ಧವೂ ಕೇಸ್

    ಬೆಂಗಳೂರು: ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದ ನಾಲ್ವರು ಬಾಂಗ್ಲಾದೇಶದ ಪ್ರಜೆಗಳನ್ನು (Bangladesh Citizens) ಸಿಸಿಬಿ ಪೊಲೀಸರು (CCB Police) ಬಂಧಿಸಿರುವ ಘಟನೆ ಸುದ್ದಗುಂಟೆಪಾಳ್ಯ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

    ಬಂಧಿತರನ್ನು ಶಮೀಮ್ ಅಹಮದ್, ಮೊಹಮ್ಮದ್ ಅಬ್ದುಲ್ಲಾ, ನೂರ್ ಜಹಾನ್ ಮತ್ತು ಹರೂನ್ ಮೊಹಮ್ಮದ್ ಎಂದು ಗುರುತಿಸಲಾಗಿದೆ. ಓರ್ವ ಮಹಿಳೆ ಸೇರಿ ಮೂವರು ಪುರುಷರು ನಕಲಿ ದಾಖಲೆಗಳನ್ನು ಸೃಷ್ಟಿಸಿ, ಭಾರತದ ಪಾಸ್‌ಪೋರ್ಟ್‌ (Indian Passport) ಸಹ ಪಡೆದಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಅಧಿಕಾರಿಗಳು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿ ಕಾಲೇಜ್‌ ಕ್ಯಾಂಪಸ್‌ನಲ್ಲಿ ಚಾಕುವಿನಿಂದ ಇರಿದು ವಿದ್ಯಾರ್ಥಿನಿಯ ಹತ್ಯೆ – ಯುವಕ ಅರೆಸ್ಟ್‌

    ದಾಳಿ ವೇಳೆ ಆರೋಪಿಗಳಿಂದ ಸಿಕ್ಕ ಆಧಾರ್ ಕಾರ್ಡ್ (Aadhar Card), ಜಾತಿ ಪ್ರಮಾಣ ಪತ್ರ, ರೇಷನ್ ಕಾರ್ಡ್, ಆಯುಷ್ಮಾನ್ ಕಾರ್ಡ್, ಮಜ್ದೂರ್ ಕಾರ್ಡ್, ಮತದಾರರ ಗುರುತಿನ ಚೀಟಿಗಳನ್ನು ಸಹ ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ರಾಣಿ ತರಹ ನೋಡಿಕೊಳ್ತಿದ್ವಿ, ಪ್ರತಿದಿನ ಕಾರಿನಲ್ಲೇ ಕಾಲೇಜಿಗೆ ಕಳಿಸ್ತಿದ್ವಿ – ಮಗಳ ಸಾವು ನೆನೆದು ತಂದೆ-ತಾಯಿ ಅಳಲು!

    ಆರೋಪಿಗಳನ್ನು ಸೆರೆಹಿಡಿದದ್ದೇ ರೋಚಕ:
    ಬಾಂಗ್ಲಾದೇಶದಿಂದ ಅಕ್ರಮವಾಗಿ ಬಂದಿದ್ದ ಶಮೀಮ್ ಅಹಮದ್, ಮೊಹಮ್ಮದ್ ಅಬ್ದುಲ್ಲಾ, ನೂರ್ ಜಹಾನ್ ಮತ್ತು ಹರೂನ್ ಮೊಹಮ್ಮದ್ ಬನ್ನೇರುಘಟ್ಟ ರಸ್ತೆಯ ಬಿಸ್ಮಿಲಾನಗರದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಜಮೀಲ್ ಎಂಬುವರ ಮನೆ ಬಾಡಿಗೆ ಪಡೆದು ವಾಸವಿದ್ದರು. ನಕಲಿ ಬಾಡಿಗೆ ಕರಾರು ಪತ್ರ ಮತ್ತು ವಾಸದ ದೃಢೀಕರಣ ಪತ್ರಗಳನ್ನೂ ಸಿದ್ಧಪಡಿಸಿಕೊಂಡಿದ್ದರು. ಆ ಮೂಲಕ ಆಧಾರ್ ಕಾರ್ಡ್, ಫ್ಯಾನ್ ಕಾರ್ಡ್, ರೇಷನ್ ಕಾರ್ಡ್‌ಗಳನ್ನೂ ಹೊಂದಿದ್ದರು. ಇದನ್ನೂ ಓದಿ: ಡಬಲ್ ಮರ್ಡರ್‌ಗೆ ಟ್ವಿಸ್ಟ್; ಕಣ್ಣಮುಂದೆ ಮಗಳನ್ನ ಚುಚ್ಚಿಕೊಂದ ಪ್ರೇಮಿಯನ್ನ ಕಲ್ಲಿನಿಂದ ಚಚ್ಚಿದ ತಾಯಿ!

    ಅಲ್ಲದೇ ನಾಲ್ವರು ಸ್ಥಳೀಯರ ಸಹಾಯದಿಂದ ಭಾರತದ ಗುರುತಿನ ಚೀಟಿಗಳನ್ನು ಪಡೆದುಕೊಂಡಿದ್ದರು. ಅನಧಿಕೃತ ದಾಖಲೆ ನೀಡಿ ಪಾಸ್‌ಪೋರ್ಟ್ ಸಹ ಮಾಡಿಸಿಕೊಂಡಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಬಿಸ್ಮಿಲ್ಲಾ ನಗರದ ಮನೆ ಮೇಲೆ ದಾಳಿ ನಡೆಸಿ ಅಕ್ರಮವಾಸಿಗಳನ್ನು ಬಂಧಿಸಿದ್ದಾರೆ. ಇದರೊಂದಿಗೆ ಬಾಂಗ್ಲಾ ಪ್ರಜೆಗಳಿಗೆ ಸಹಾಯ ಮಾಡಿದ್ದ ಮುಬಾರಕ್, ಮುನೀರ್, ಹುಸೇನ್, ನಹೀಂ ಎಂಬ ನಾಲ್ವರು ಯುವಕರ ಮೇಲೂ ಪ್ರಕರಣ ದಾಖಲಿಸಲಾಗಿದೆ. ಸುದ್ದಗುಂಟೆಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಸಿಸಿಬಿಯಿಂದ ರಾಮೇಶ್ವರಂ ಕೆಫೆ ಬಾಂಬರ್ ರೇಖಾಚಿತ್ರ ಬಿಡುಗಡೆ

    ಸಿಸಿಬಿಯಿಂದ ರಾಮೇಶ್ವರಂ ಕೆಫೆ ಬಾಂಬರ್ ರೇಖಾಚಿತ್ರ ಬಿಡುಗಡೆ

    ಬೆಂಗಳೂರು: ರಾಮೇಶ್ವರಂ ಕೆಫೆ (Rameshwaram Cafe) ಬ್ಲಾಸ್ಟ್‌ನ ಶಂಕಿತ ಉಗ್ರನ (Suspected Terrorist) ಸುಳಿವು ಕೊಟ್ಟರೆ 10 ಲಕ್ಷ ನಗದು ಬಹುಮಾನ ಕೊಡುವುದಾಗಿ ಬಾಂಬರ್‌ನ ಸಿಸಿಟಿವಿ ಫೋಟೋವೊಂದನ್ನು ಬುಧವಾರ ಎನ್‌ಐಎ (NIA) ಬಿಡುಗಡೆ ಮಾಡಿತ್ತು. ಈ ಬೆನ್ನಲ್ಲೇ ಸಿಸಿಬಿ (CCB) ಪೊಲೀಸರು ಬಾಂಬರ್‌ನ ಮತ್ತೊಂದು ರೇಖಾಚಿತ್ರವನ್ನು (Sketch) ಬಿಡುಗಡೆ ಮಾಡಿದ್ದಾರೆ.

    ಸಿಸಿಟಿವಿಯಲ್ಲಿ ಬಾಂಬರ್ ದೃಶ್ಯ ಸಮರ್ಪಕವಾಗಿ ಸೆರೆಯಾಗದ ಕಾರಣ ರೇಖಾಚಿತ್ರ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದ್ದರು. ಸಿಸಿಟಿವಿಯಲ್ಲಿ ಸೆರೆಯಾಗಿರುವ ದೃಶ್ಯವನ್ನು ಆಧಾರವಾಗಿ ಇಟ್ಟುಕೊಂಡು ಸಿಸಿಬಿ ಶಂಕಿತ ಉಗ್ರನ ರೇಖಾಚಿತ್ರ ತಯಾರಿ ಮಾಡಿದೆ. ಈಗಾಗಲೇ ಸಾರ್ವಜನಿಕರಿಂದ ಸಾಕಷ್ಟು ಕರೆಗಳು ಬಂದಿವೆ. ಆರೋಪಿಯನ್ನು ನೋಡಿದ್ದಾಗಿ ಕರೆಗಳು ಬರುತ್ತಿದ್ದ ಕಾರಣ ರೇಖಾಚಿತ್ರ ಬಿಡುಗಡೆ ಮಾಡಲು ಸಿಸಿಬಿ ತಯಾರಿ ನಡೆಸಿತ್ತು. ಇದನ್ನೂ ಓದಿ: ತೆಪ್ಪ ಮಗುಚಿಬಿದ್ದು ಮೀನು ಹಿಡಿಯಲು ಹೋಗಿದ್ದ ವ್ಯಕ್ತಿ ಸಾವು

    ಖ್ಯಾತ ಸ್ಕೆಚ್ ಆರ್ಟಿಸ್ಟ್‌ನಿಂದ ಬಾಂಬರ್‌ನ ಇಮ್ಯಾಜಿನರಿ ಸ್ಕೆಚ್ ಬಿಡಿಸಲಾಗಿದೆ. ಸ್ಕೆಚ್ ಆರ್ಟಿಸ್ಟ್ ಎನ್‌ಐಎ ಬಿಡುಗಡೆ ಮಾಡಿದ ಸಿಸಿಟಿವಿ ಫೋಟೋವನ್ನು ಆಧರಿಸಿ ಸಂಪೂರ್ಣ ಮುಖದ ಇಮ್ಯಾಜಿನರಿ ಸ್ಕೆಚ್ ಮಾಡಿದ್ದಾರೆ. ಆರ್ಟಿಸ್ಟ್ ಹರ್ಷ ಅವರು ಈ ರೇಖಾಚಿತ್ರವನ್ನು ಬಿಡಿಸಿದ್ದಾರೆ. ಮಾಸ್ಕ್ ಧರಿಸಿದ ರೀತಿಯಲ್ಲಿ ಹಾಗೂ ಮಾಸ್ಕ್ ಇಲ್ಲದೇ ಟೋಪಿ ಕನ್ನಡಕ ಧರಿಸಿದ ರೇಖಾಚಿತ್ರವನ್ನು ಬಿಡಿಸಲಾಗಿದೆ. ಇದೇ ರೀತಿ ಬಾಂಬರ್ ಇರಬಹುದು ಎಂದು ಕಲ್ಪಿಸಿ ಕಲಾವಿದ ಹರ್ಷ ಈ ರೇಖಾಚಿತ್ರ ಬಿಡಿಸಿದ್ದಾರೆ. ಇದನ್ನೂ ಓದಿ: ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಕೇಸ್‌ – ಬಾಂಬರ್‌ ಬಳ್ಳಾರಿಯಿಂದ ಭಟ್ಕಳಕ್ಕೆ ತೆರಳಿರುವ ಶಂಕೆ

  • ಬೆಂಗ್ಳೂರು ಜೈಲಿನಲ್ಲಿದ್ದುಕೊಂಡೇ ಸಹ ಕೈದಿಗಳನ್ನು ಸೆಳೆದು ಉಗ್ರ ಚಟುವಟಿಕೆಗೆ ಬಳಕೆ – ದೇಶದ 17 ಕಡೆ ಎನ್‌ಐಎ ದಾಳಿ

    ಬೆಂಗ್ಳೂರು ಜೈಲಿನಲ್ಲಿದ್ದುಕೊಂಡೇ ಸಹ ಕೈದಿಗಳನ್ನು ಸೆಳೆದು ಉಗ್ರ ಚಟುವಟಿಕೆಗೆ ಬಳಕೆ – ದೇಶದ 17 ಕಡೆ ಎನ್‌ಐಎ ದಾಳಿ

    ಬೆಂಗಳೂರು/ ನವದೆಹಲಿ: ಜೈಲಿನಲ್ಲಿ ಸಹ ಕೈದಿಗಳನ್ನು ಸೆಳೆದು ಉಗ್ರ ಚಟುವಟಿಕೆಗೆ ಬಳಕೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (NIA) ಕರ್ನಾಟಕ ಸೇರಿದಂತೆ ದೇಶದ 17 ಕಡೆ ದಾಳಿ ನಡೆಸಿದೆ.

    ಕಳೆದ ಜುಲೈನಲ್ಲಿ ಆರ್‌ಟಿ ನಗರದ ಮನೆ ಮೇಲೆ ದಾಳಿ ಮಾಡಿದ ಬೆಂಗಳೂರು ಸಿಸಿಬಿ ಪೊಲೀಸರು (CCB Police)  ಐವರು ಆರೋಪಿಗಳನ್ನು ಬಂಧಿಸಿದ್ದರು. ಈ ವೇಳೆ ಜೀವಂತ ಗ್ರೆನೇಡ್‌ ಪತ್ತೆಯಾಗಿತ್ತು. ಈ ಪ್ರಕರಣದ ಆರೋಪಿಗಳ ಜೊತೆ ಜೈಲಿನಲ್ಲಿದ್ದ ಉಗ್ರ ಟಿ.ನಾಸೀರ್ (T Naseer) ಸಂಪರ್ಕ ಬೆಳೆಸಿದ್ದ ವಿಚಾರ ತನಿಖೆಯಿಂದ ಬಯಲಾಗಿತ್ತು. ನಂತರ ಈ ಪ್ರಕರಣ ಎನ್‌ಐಎಗೆ ವರ್ಗಾವಣೆಯಾಗಿತ್ತು.   ಇದನ್ನೂ ಓದಿ: ಸರ್‌, ನಾನು ನೂರಾರು ಕೋಟಿಗೆ ಬಾಳ್ತೀನಿ: ಪಾಕ್‌ ಪರ ಘೋಷಣೆ ಕೂಗಿದ್ದ ನಾಶಿಪುಡಿ ಯಾರು?

    ಈ ವರ್ಷದ ಜನವರಿ 12 ರಂದು ಎನ್‌ಐಎ ಈ ಪ್ರಕರಣದ ಸಂಬಂಧ 8 ಮಂದಿ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಿತ್ತು. ಚಾರ್ಜ್‌ಶೀಟ್ ಮಾಡಿರುವ ಆರೋಪಿಗಳಲ್ಲಿ ಕೇರಳದ ಕಣ್ಣೂರು ಜಿಲ್ಲೆಯ ಟಿ ನಾಸೀರ್ 2013 ರಿಂದ ಬೆಂಗಳೂರಿನ ಸೆಂಟ್ರಲ್ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ. ಉಳಿದ ಇಬ್ಬರು ಆರೋಪಿಗಳಾದ ಜುನೈದ್ ಅಹ್ಮದ್ ಅಲಿಯಾಸ್ ಜೆಡಿ ಮತ್ತು ಸಲ್ಮಾನ್ ಖಾನ್ ವಿದೇಶಕ್ಕೆ ಪರಾರಿಯಾಗಿದ್ದಾರೆ ಎಂದು ಶಂಕಿಸಲಾಗಿದೆ.

    ಸಹ ಖೈದಿಗಳನ್ನ ಸೆಳೆದು ಉಗ್ರ ಕೃತ್ಯಕ್ಕೆ ಪ್ರೇರೇಪಣೆ ನೀಡಿದ ಹಿನ್ನೆಲೆಯಲ್ಲಿ ಇಂದು ಏಳು ರಾಜ್ಯದಲ್ಲಿ ಎನ್‌ಐಎ ದಾಳಿ ನಡೆಸಿದೆ. ಬೆಂಗಳೂರಿನ ಹೆಣ್ಣೂರು ಠಾಣಾ ವ್ಯಾಪ್ತಿಯ ತೂಬಾ ಲೇಔಟ್ ಮತ್ತು ಸರಾಯಿ ಪಾಳ್ಯದಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದೆ.

    ಚಾರ್ಜ್‌ಶೀಟ್‌ನಲ್ಲಿ ಏನಿದೆ?
    ಆರ್‌ಟಿ ನಗರ ಮನೆಯಲ್ಲಿ ಶೋಧ ಕಾರ್ಯದ ವೇಳೆ ಆರೋಪಿಗಳ ಬಳಿ 7 ನಾಡ ಪಿಸ್ತೂಲ್, 45 ಜೀವಂತ ಗುಂಡು, ಗ್ರೆನೇಡ್ ಹಾಗೂ ವಾಕಿಟಾಕಿಗಳು ಸಿಕ್ಕಿದ್ದವು. ವಿಚಾರಣೆ ಸಂದರ್ಭದಲ್ಲಿ ಆರೋಪಿಗಳು ಬೆಂಗಳೂರಿನಲ್ಲಿ ಸರಣಿ ಬಾಂಬ್‌ ಸ್ಫೋಟ ನಡೆಸಲು ಮುಂದಾಗಿದ್ದರು ಎಂಬ ವಿಚಾರ ತನಿಖೆಯಿಂದ ಬಯಲಾಗಿತ್ತು.

    ಉಗ್ರರ ಮನೆಯಲ್ಲಿ ಪತ್ತೆಯಾದ ಗ್ರೆನೇಡ್‌ಗಳು
    ಬೆಂಗಳೂರು ದಾಳಿಯ ವೇಳೆ ಉಗ್ರರ ಮನೆಯಲ್ಲಿ ಪತ್ತೆಯಾಗಿದ್ದ ಗ್ರೆನೇಡ್‌ಗಳು

    ಪೌಡರ್ ರೂಪದ ಕೆಮಿಕಲ್ ಬಳಸಿ ಪೆಟ್ಟಿಗೆಯೊಂದರಲ್ಲಿ ಆರೋಪಿಗಳು ಅಡಗಿಸಿಟ್ಟಿದ್ದರು. ಈ ಬಗ್ಗೆ ಮಾಹಿತಿ ಪಡೆದ ನಂತರ ತನಿಖಾಧಿಕಾರಿಗಳು ಬಾಂಬ್ ನಿಷ್ಟ್ರೀಯ ದಳ (BDDS) ಮತ್ತು FSL ಅಧಿಕಾರಿಗಳ ಜೊತೆಯಲ್ಲಿ ಕಾರ್ಯಾಚರಣೆ ನಡೆಸಿ ಸಜೀವ ಗ್ರೇನೆಡ್‌ಗಳನ್ನ ಪತ್ತೆಮಾಡಿ ವಶಪಡಿಸಿಕೊಳ್ಳಲಾಗಿತ್ತು. ಗ್ರೆನೇಡ್ (Grenade) ಮೇಲಿದ್ದ ಮೇಡ್ ಇನ್ ವಿವರವನ್ನೇ ಆರೋಪಿಗಳು ಅಳಿಸಿ ಹಾಕಿದ್ದರು. ಇದನ್ನೂ ಓದಿ: ಆಪಲ್‌ ಐಫೋನ್‌ಗೆ ಭರ್ಜರಿ 16,584 ಕೋಟಿ ರೂ. ದಂಡ

    ಸೆರೆ ಸಿಕ್ಕ ಶಂಕಿತರ ಉಗ್ರರ ಹಿಂದೆ ಬ್ಯಾಕ್ ಬೋನ್ ಆಗಿದ್ದ ಮಾಸ್ಟರ್ ಮೈಂಡ್ ಜುನೈದ್ ವಿದೇಶದಲ್ಲಿದ್ದುಕೊಂಡೇ ಬೆಂಗಳೂರಿನಲ್ಲಿ ಬಂಧನಕ್ಕೆ ಒಳಗಾದವರನ್ನು ಸಾಕುತ್ತಿದ್ದ, ಬೆಂಗಳೂರಿನಲ್ಲಿದ್ದವರಿಗೆ ಲಕ್ಷ ಲಕ್ಷ ರೂ. ಫಂಡಿಂಗ್ ಮಾಡ್ತಿದ್ದ. ಜೊತೆಗೆ ಏನೇನು ಮಾಡಬೇಕು ಅಂತಾ ಟ್ರೈನಿಂಗ್ ಕೊಡ್ತಿದ್ದ. ಅದಕ್ಕಾಗಿ ಬೆಂಗಳೂರಿನಲ್ಲಿ ಎಲ್ಲೆಲ್ಲಿ ಕೃತ್ಯ ಎಸಬೇಕು ಅನ್ನೋದರ ನೀಲನಕ್ಷೆಯನ್ನೂ (ಬ್ಲೂ ಪ್ರಿಂಟ್) ಸಿದ್ಧ ಮಾಡಿಕೊಂಡಿದ್ದ.

    ಜುನೈದ್ ಕೊಡುವ ಮಾರ್ಗದರ್ಶನದಂತೆ ಸಿಲಿಕಾನ್ ಸಿಟಿಯಲ್ಲಿ ಶಂಕಿತರು ಸ್ಫೋಟಕ್ಕೆ ಸಂಚು ರೂಪಿಸುತ್ತಿದ್ದರು. ನಗರದಲ್ಲಿ 10ಕ್ಕೂ ಹೆಚ್ಚು ಸ್ಥಳಗಳನ್ನು ಗುರುತಿಸಿಕೊಂಡಿದ್ದರು ವಿಚಾರ ಅಂಶ ಚಾರ್ಜ್‌ಶೀಟ್‌ನಲ್ಲಿದೆ.

  • ಬಿಟ್ ಕಾಯಿನ್ ಪ್ರಕರಣ – ತನಿಖೆಗೆ ಹಾಜರಾಗದೇ ಶ್ರೀಕಿ ಕಳ್ಳಾಟ

    ಬಿಟ್ ಕಾಯಿನ್ ಪ್ರಕರಣ – ತನಿಖೆಗೆ ಹಾಜರಾಗದೇ ಶ್ರೀಕಿ ಕಳ್ಳಾಟ

    ಬೆಂಗಳೂರು: ಬಿಟ್ ಕಾಯಿನ್ ಹಗರಣದಲ್ಲಿ (BitCoin Case) ಸಿಸಿಬಿ  (CCB) ವಿರುದ್ಧದ ಪ್ರಕರಣದ ಪ್ರಮುಖ ಸಾಕ್ಷಿಯಾಗಿರುವ ಶ್ರೀಕಿ ಸಿಐಡಿ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದಾನೆ.

    ಶ್ರೀಕಿ ವಿಚಾರಣೆಗೆ ಹಾಜರಾಗದೇ ಕಳ್ಳಾಟ ಆಡುತ್ತಿದ್ದಾನೆ. ಐದಾರು ಬಾರಿ ನೋಟಿಸ್ ನೀಡಿದರೂ ಸಹ ಆತ ವಿಚಾರಣೆಗೆ ಹಾಜರಾಗುತ್ತಿಲ್ಲ. ಪ್ರತಿ ಬಾರಿ ಒಂದೊಂದು ಕಾರಣ ನೀಡುತ್ತಿರುವ ಆತ, ತಂದೆಗೆ ಹುಷಾರಿಲ್ಲ, ತಾಯಿಗೆ ಹುಷಾರಿಲ್ಲ ಹಾಗೂ ನನಗೆ ಹುಷಾರಿಲ್ಲ ಎಂಬ ಕಾರಣ ನೀಡಿ ವಿಚಾರಣೆಯಿಂದ ತಪ್ಪಿಸಿಕೊಳ್ಳುತ್ತಿದ್ದಾನೆ. ಇದನ್ನೂ ಓದಿ: ನಾಯಿ ಕಚ್ಚಿದ ಕೇಸ್‌ – ನಟ ದರ್ಶನ್‌ಗೆ ಕ್ಲೀನ್‌ ಚಿಟ್‌, ಶೀಘ್ರವೇ ಚಾರ್ಜ್‌ಶೀಟ್‌

    ಒಂದೂವರೆ ತಿಂಗಳ ಹಿಂದೆ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಆತ ಊಟ, ತಿಂಡಿ ಸಮಯದಲ್ಲಿ ಹಾಗೂ ರಾತ್ರಿ ಮಲಗಲು ಮನೆಗೆ ತೆರಳುತ್ತಿದ್ದ. ವಿಚಾರಣೆ ನಡೆಸಲು ನಿಮ್ಹಾನ್ಸ್‌ಗೆ  ಹೋದ ಎಸ್‍ಐಟಿ ತಂಡಕ್ಕೆ ಡೆತ್‍ನೋಟ್ ಬರೆದು ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಸಹ ಹಾಕಿದ್ದ. ಈ ರೀತಿ ಶ್ರೀಕಿ ನಡೆದುಕೊಳ್ಳುವುದರಿಂದ ತನಿಖೆಯಲ್ಲಿ ಹಿನ್ನಡೆ ಆಗುತ್ತಿದೆ.

    ಶ್ರೀಕಿಯನ್ನು ಬಂಧಿಸಿ ಬಿಟ್ ಕಾಯಿನ್ ಪ್ರಕರಣದ ತನಿಖೆ ನಡೆಸಿತ್ತು. ಸಿಸಿಬಿ ತನಿಖೆಯಲ್ಲಿ ಲೋಪ ನಡೆದಿದೆ ಎಂದು ಎಸ್‍ಐಟಿ ತನಿಖೆಯಲ್ಲಿ ತಿಳಿದು ಬಂದಿತ್ತು. ಈ ಹಿನ್ನೆಲೆಯಲ್ಲಿ ಎಫ್‍ಐಆರ್ ಕೂಡ ದಾಖಲಾಗಿತ್ತು. ಇದೀಗ ಈ ಪ್ರಕರಣದ ಪ್ರಮುಖ ಸಾಕ್ಷಿ ಶ್ರೀಕಿ ತನಿಖೆಗೆ ಸಹಕರಿಸದೇ ಸತಾಯಿಸುತ್ತಿದ್ದಾನೆ. ಇದನ್ನೂ ಓದಿ: ಕೆರೆಯ ಮಣ್ಣು ಅಕ್ರಮ ಸಾಗಾಟ – ಗ್ರಾಮಸ್ಥರಿಂದ 50ಕ್ಕೂ ಹೆಚ್ಚು ಲಾರಿಗಳನ್ನು ತಡೆದು ಆಕ್ರೋಶ