Tag: CCB police

  • 3 ದಿನಗಳ ಪೊಲೀಸ್ ಕಸ್ಟಡಿ ಅಂತ್ಯ – ಸಾಂತ್ವನ ಕೇಂದ್ರದಲ್ಲಿ ಇಬ್ಬರು ನಟಿಯರಿಗೆ ಟೆನ್ಶನ್

    3 ದಿನಗಳ ಪೊಲೀಸ್ ಕಸ್ಟಡಿ ಅಂತ್ಯ – ಸಾಂತ್ವನ ಕೇಂದ್ರದಲ್ಲಿ ಇಬ್ಬರು ನಟಿಯರಿಗೆ ಟೆನ್ಶನ್

    – ರಾಗಿಣಿ, ಸಂಜನಾಗೆ ಜೈಲಾ, ಬೇಲಾ?

    ಬೆಂಗಳೂರು: ಸ್ಯಾಂಡಲ್‍ವುಡ್‍ನಲ್ಲಿ ಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ ಮತ್ತು ಸಂಜನಾರನ್ನು ಸಿಸಿಬಿ ಪೊಲೀಸರು ಬಂಧಿಸಿ ವಿಚಾರಣೆ ಮಾಡುತ್ತಿದ್ದಾರೆ. ಇಂದಿಗೆ ಇಬ್ಬರು ನಟಿಯರ ಪೊಲೀಸ್ ಕಸ್ಟಡಿ ಅಂತ್ಯವಾಗಿದ್ದು, ಇಂದು ನ್ಯಾಯಾಲದಲ್ಲಿ ಮತ್ತೆ ವಿಚಾರಣೆ ನಡೆಯಲಿದೆ. ಇದನ್ನೂ ಓದಿ: ರಾಗಿಣಿ ಡ್ರಗ್ಸ್ ಸೇವಿಸಿರೋದಕ್ಕೆ ‘ಬಿಗ್’ ಸಾಕ್ಷ್ಯ – ಆರೋಪಿ ರವಿಶಂಕರ್ ತಪ್ಪೊಪ್ಪಿಗೆ

    ನಟಿ ರಾಗಿಣಿ ಮತ್ತು ಸಂಜನಾ ಪೊಲೀಸ್ ಕಸ್ಟಡಿ ಮುಗಿದ ಹಿನ್ನೆಲೆಯಲ್ಲಿ ಮತ್ತೆ ನ್ಯಾಯಾಧೀಶರ ಮುಂದೆ ಹಾಜರಾಗಲಿದ್ದಾರೆ. ಮತ್ತೆ ಪೊಲೀಸ್ ಕಸ್ಟಡಿಗೆ ಕೇಳದಿರಲು ಸಿಸಿಬಿ ತೀರ್ಮಾನ ಮಾಡಿದೆ. ಹೀಗಾಗಿ ನಟಿ ರಾಗಿಣಿಗೆ ಬೇಲ್ ಸಿಗುತ್ತಾ ಅಥವಾ ಇಲ್ಲವಾ ಎಂಬುದು ವಿಚಾರಣೆಯ ನಂತರ ತಿಳಿಯುತ್ತದೆ. ಇದನ್ನೂ ಓದಿ: ಮತ್ತೆ ಪೊಲೀಸ್ ಕಸ್ಟಡಿಗೆ ಕೇಳ್ಬೇಡಿ- ಅಧಿಕಾರಿಗಳ ಮುಂದೆ ರಾಗಿಣಿ, ಸಂಜನಾ ಗೋಳು

    ನಟಿ ರಾಗಿಣಿಯ ಜಾಮೀನು ಅರ್ಜಿ ಸಹ ಇಂದೇ ವಿಚಾರಣೆಗೆ ಬರಲಿದೆ. ಇಂದು ಸಿಸಿಬಿ ಆಕ್ಷೇಪಣೆ ಸಲ್ಲಿಸಿ ವಾದಕ್ಕೆ ಇಳಿಯೋದಿಲ್ಲ. ಆದರೆ ರಾಗಿಣಿ ಪರ ವಕೀಲರು ಮಧ್ಯಂತರ ಜಾಮೀನಿಗೆ ಮನವಿ ಮಾಡುತ್ತಾರೆ. ಈಗಾಗಲೇ ಎಲ್ಲಾ ದಾಳಿ ಮುಗಿದಿದೆ. ವಿಚಾರಣೆ ಮುಗಿದಿದೆ, ಆರೋಪಿಗಳ ಬಂಧನವಾಗಿಲ್ಲ ಅಂತಾರೆ. ಅದು ಪೊಲೀಸರ ವೈಫಲ್ಯ ಅದಕ್ಕಾಗಿ ಮಧ್ಯಂತರ ಜಾಮೀನಿಗೆ ಮನವಿ ಮಾಡುತ್ತಾರೆ ಎಂದು ತಿಳಿದು ಬಂದಿದೆ.

    ನಟಿ ಸಂಜನಾ ಇನ್ನೂ ಕೂಡ ಜಾಮೀನಿಗೆ ಅರ್ಜಿ ಸಲ್ಲಿಸಿಲ್ಲ. ಇಂದು ಅರೆಸ್ಟ್ ಆಗಿರುವ ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಹೀಗಾಗಿ ಸಂಜನಾರನ್ನ ಮತ್ತೆ 5 ದಿನ ಕಸ್ಟಡಿಗೆ ಪಡೆಯಲು ಸಿಸಿಬಿ ಸಿದ್ಧತೆ ಮಾಡಿಕೊಂಡಿದೆ. ಕಸ್ಟಡಿ ಮುಗಿಯಲಿ ಅಂತ ಜಾಮೀನಿಗೆ ಅರ್ಜಿ ಸಲ್ಲಿಸಿಲ್ಲ ಎಂದು ಹೇಳಲಾಗುತ್ತಿದೆ. ಇಂದಿನ ಆದೇಶ ನೋಡಿಕೊಂಡು ನಟಿ ಸಂಜನಾ ಜಾಮೀನು ಅರ್ಜಿ ಸಲ್ಲಿಸೋ ಸಾಧ್ಯತೆ ಇದೆ.

    ಇತ್ತ ಪ್ರತಿನಿತ್ಯ ಬೆಳ್ಳಂಬೆಳಗ್ಗೆ ವ್ಯಾಯಾಮಾದಲ್ಲಿದ್ದ ರಾಗಿಣಿಗೆ ಇಂದು ಟೆನ್ಶನ್ ಶುರುವಾಗಿದೆ. ಇಂದು ಮತ್ತೆ ನ್ಯಾಯಾಧೀಶರ ಮುಂದೆ ನಟಿ ರಾಗಿಣಿ ಮತ್ತು ಸಂಜನಾ ಹಾಜರಾಗಲಿದ್ದಾರೆ. ಹೀಗಾಗಿ ಇಂದು ಕೋರ್ಟಿನ ವಿದ್ಯಮಾನದ ಬಗ್ಗೆ ಇಬ್ಬರು ನಟಿಯರು ತಲೆಕೆಡಿಸಿಕೊಂಡಿದ್ದಾರೆ ಎನ್ನಲಾಗಿದೆ. ನಟಿ ಸಂಜನಾಳಿಗಿಂತ ನಟಿ ರಾಗಿಣಿ ಮತ್ತಷ್ಟು ಟೆನ್ಶನ್‍ನಲ್ಲಿದ್ದು, ಭಾನುವಾರ ರಾತ್ರಿ ಕೂಡ ಊಟವನ್ನು ತಡವಾಗಿ ಸೇವಿಸಿದ್ದಾರೆ. ಆದ್ದರಿಂದ ಮಹಿಳಾ ಪೊಲೀಸರು ಸಾಂತ್ವನ ಕೇಂದ್ರದಲ್ಲೇ ಇಬ್ಬರ ಮೇಲೂ ಹೆಚ್ಚಿನ ನಿಗಾ ಇಟ್ಟಿದ್ದಾರೆ.

    ಈಗಾಗಲೇ ಮೂರನೇ ಬಾರಿ ರಾಗಿಣಿಯನ್ನು ಪೊಲೀಸ್ ಕಸ್ಟಡಿಗೆ ಪಡೆಯಲಾಗಿತ್ತು. ನಟಿಯರ ಹೈಡ್ರಾಮಗಳ ಮಧ್ಯೆಯೂ ಕೂಡ ಕೆಲ ಮಹತ್ವದ ಮಾಹಿತಿಯನ್ನು ಪೊಲೀಸರು ಕಲೆಹಾಕಿದ್ದಾರೆ. ಈಗಾಗಲೇ ಸಾಕ್ಷಿ ನಾಶಕ್ಕೆ ಪ್ರಯತ್ನಪಟ್ಟಿರುವ ವಿಡಿಯೋಗಳು, ದಾಖಲೆಗಳನ್ನು ಕೋರ್ಟ್ ಗಮನಕ್ಕೆ ತರಲು ಪೊಲೀಸರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.

    ಒಟ್ಟಿನಲ್ಲಿ ಇಂದು ಸಂಜೆ ಮೂರು ಗಂಟೆಗೆ ಬೇಲ್ ಸಿಗುತ್ತಾ ಇಲ್ಲವಾ ಎಂಬುದು ಗೊತ್ತಾಗುತ್ತದೆ. ಒಂದು ವೇಳೆ ಇಂದು ನಟಿ ರಾಗಿಣಿಗೆ ಜಾಮೀನು ಸಿಕ್ಕಿದರೆ 12 ದಿನಗಳ ಪೊಲೀಸ್ ಕಸ್ಟಡಿಯ ವಾಸ ಮುಗಿಯಲಿದೆ. ಸದ್ಯದ ಪರಿಸ್ಥಿತಿಯಲ್ಲಿ ಬೇಲ್ ಸಿಗೋದು ಡೌಟ್ ಎಂದು ಸಿಸಿಬಿ ಪೊಲೀಸರು ಹೇಳುತ್ತಿದ್ದಾರೆ.

  • ಡ್ರಗ್ಸ್ ಪ್ರಕರಣಕ್ಕೆ ಹೊಸ ಟ್ವಿಸ್ಟ್ – ವಿರೇನ್ ಖನ್ನಾ ಡ್ರಗ್ಸ್ ಪಾರ್ಟಿಯಲ್ಲಿ ಕ್ರಿಕೆಟ್ ಆಟಗಾರರು?

    ಡ್ರಗ್ಸ್ ಪ್ರಕರಣಕ್ಕೆ ಹೊಸ ಟ್ವಿಸ್ಟ್ – ವಿರೇನ್ ಖನ್ನಾ ಡ್ರಗ್ಸ್ ಪಾರ್ಟಿಯಲ್ಲಿ ಕ್ರಿಕೆಟ್ ಆಟಗಾರರು?

    ಬೆಂಗಳೂರು: ಸ್ಯಾಂಡಲ್‍ವುಡ್‍ನಲ್ಲಿ ಡ್ರಗ್ಸ್ ಜಾಲ ಪ್ರಕರಣದ ತನಿಖೆ ವೇಳೆ ಹೊಸ ಹೊಸ ವಿಚಾರಗಳು ಬೆಳಕಿಗೆ ಬರುತ್ತಿದೆ. ವಿರೇನ್ ಖನ್ನಾ ಪಾರ್ಟಿಗೆ ಕೇವಲ ನಟ, ನಟಿಯರು ಮಾತ್ರ ಬರುತ್ತಿರಲಿಲ್ಲ. ಖನ್ನಾ ಪಾರ್ಟಿಗೆ ರಾಜಕಾರಣಿಗಳು, ಉದ್ಯಮಿಗಳು ಜೊತೆಗೆ ಕ್ರಿಕೆಟ್ ಆಟಗಾರರು ಕೂಡ ಬರುತ್ತಿದ್ದರು ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ. ಇದನ್ನೂ ಓದಿ: ಮತ್ತೆ ಪೊಲೀಸ್ ಕಸ್ಟಡಿಗೆ ಕೇಳ್ಬೇಡಿ- ಅಧಿಕಾರಿಗಳ ಮುಂದೆ ರಾಗಿಣಿ, ಸಂಜನಾ ಗೋಳು

    ಸಿಸಿಬಿ ಪೊಲೀಸ್ ತಂಡ ವಿರೇನ್ ಖನ್ನಾನನ್ನು ದೆಹಲಿಯಿಂದ ಬಂಧಿಸಿ ಇಲ್ಲಿಗೆ ಕರೆದುಕೊಂಡು ವಿಚಾರಣೆ ಮಾಡುತ್ತಿದೆ. ಈ ಸಂದರ್ಭದಲ್ಲಿ ಖನ್ನಾ ಆಯೋಜನೆ ಮಾಡುತ್ತಿದ್ದ ಪಾರ್ಟಿಯಲ್ಲಿ ನಟ, ನಟಿಯರು, ರಾಜಕಾರಣಿಗಳು, ಉದ್ಯಮಿಗಳ ಮಕ್ಕಳು ಮಾತ್ರವಲ್ಲದೇ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಕ್ರಿಕೆಟ್ ಆಟಗಾರರೂ ಕೂಡ ಬರುತ್ತಿದ್ದರು ಎಂಬ ಸ್ಫೋಟಕ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಸಿಸಿಬಿ ಪೊಲೀಸರು ಯಾವ ಕ್ರಿಕೆಟ್ ಆಟಗಾರರು ಬರುತ್ತಿದ್ದರು, ಅವರಿಗೂ ಡ್ರಗ್ಸ್ ಸಪ್ಲೈ ಆಗುತ್ತಿತ್ತಾ ಎಂಬ ಬಗ್ಗೆ ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ:  ವೈಭವ್ ಜೈನ್ ವೈಭವಕ್ಕೆ ತುಪ್ಪದ ಹುಡ್ಗಿ ಫುಲ್ ಸೈಲೆಂಟ್

    ಪಾರ್ಟಿಗೆ ಕೇವಲ ನಟ, ನಟಿಯರು ಮಾತ್ರ ಬರುತ್ತಿರಲಿಲ್ಲ. ರಾಜಕಾರಣಿಗಳು, ಉದ್ಯಮಿಗಳು ಬರುತ್ತಿದ್ದರು. ಅಷ್ಟೇ ಅಲ್ಲದೇ ಕ್ರಿಕೆಟ್ ಆಟಗಾರರು ಕೂಡ ಬರುತ್ತಿದ್ದರು. ನ್ಯಾಷನಲ್ ಹಾಗೂ ಇಂಟರ್ ನ್ಯಾಷನಲ್ ಆಟಗಾರರು ಪಾರ್ಟಿಗೆ ಬರುತ್ತಿದ್ದರು. ನನ್ನ ಪಾರ್ಟಿಗೆ ರಾಗಿಣಿ ಬಂದಿರುವುದು ಎರಡೇ ಸಲ. ಸಂಜನಾ ಮಾತ್ರ ಆಗಾಗ ಬರುತ್ತಿದ್ದರು ಎಂದು ತನಿಖಾಧಿರಿಗಳ ಮುಂದೆ ಇಂಟರ್ ನ್ಯಾಷನಲ್ ಸ್ಟಾರ್ ಹೆಸರುಗಳನ್ನು ಖನ್ನಾ ಬಾಯಿ ಬಿಟ್ಟಿದ್ದಾನೆ ಎಂದು ತಿಳಿದುಬಂದಿದೆ.

    ಖನ್ನಾ ಸಿಸಿಬಿ ಲಿಸ್ಟ್‌ನಲ್ಲಿ ಇರುವ ಹೆಸರನ್ನು ಬಿಟ್ಟು ಬೇರೆ ಯಾರ ಹೆಸರನ್ನು ಹೇಳಿಲ್ಲ. ಲೋಕಲ್ ನಲ್ಲಿ ಪಾರ್ಟಿಗೆ ಯಾರು ಬರುತ್ತಿದ್ದರು ಅನ್ನೋ ಪ್ರಶ್ನೆಗೆ ಖನ್ನಾ ಸೈಲೆಂಟ್ ಆಗಿದ್ದಾನೆ. ಯಾವುದೇ ರಾಜಕಾರಣಿಗಳ ಬಗ್ಗೆ ಮಾತನಾಡಿಲ್ಲ ಎಂದು ಹೇಳಲಾಗುತ್ತಿದೆ. ಸದ್ಯಕ್ಕೆ ಖನ್ನಾನ ಒಂದು ಮೊಬೈಲ್ ಇನ್ನೂ ರಿಟ್ರೀವ್ ಆಗಿಲ್ಲ. ರಿಟ್ರೀವ್ ಆದ ಬಳಿಕ ಮತ್ತಷ್ಟು ಮಾಹಿತಿ ಹೊರ ಬರುವ ಸಾಧ್ಯತೆ ಇದೆ. ಹೀಗಾಗಿ ಸೋಮವಾರ ಕಸ್ಟಡಿ ಅಂತ್ಯವಾಗುವ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಮತ್ತೆ ಕಸ್ಟಡಿಗೆ ಕೇಳುವ ಸಾಧ್ಯತೆ ಇದೆ.

    ಆರೋಪಿಗಳು ವಾಟ್ಸಪ್ ಹಾಗೂ ಇನ್ಸ್ಟಾಗ್ರಾಮ್ ಗ್ರೂಪ್‍ನಲ್ಲಿ ಪಾರ್ಟಿಗಳ ಕುರಿತು ಚಾಟಿಂಗ್ ಮಾಡುತ್ತಿದ್ದರು. ಪಾರ್ಟಿ ಎಲ್ಲಿ ನಡೆಯುತ್ತೆ? ಯಾರೆಲ್ಲಾ ಬರುತ್ತಿದ್ದಾರೆ ಎಂದು ಕೂಡ ಚಾಟಿಂಗ್ ಮಾಡಿದ್ದಾರೆ. ಪಾರ್ಟಿ ಆಯೋಜನೆ ಸ್ಥಳದ ಲೊಕೇಷನ್ ಪಾರ್ಟಿ ಹಿಂದಿನ ದಿನ ಶೇರ್ ಆಗುತ್ತಿತ್ತು. ವಿರೇನ್ ಖನ್ನಾ ಆಯೋಜನೆ ಮಾಡುವ ಪ್ರತಿ ಪಾರ್ಟಿಯ ಮಾಹಿತಿ ಈ ಗ್ರೂಪ್‍ನಲ್ಲಿ ಶೇರ್ ಆಗುತ್ತಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಆರೋಪಿಗಳು ಬಂಧನಕ್ಕೂ ಮುನ್ನ ಎಲ್ಲರೂ ಗ್ರೂಪ್ ಡಿಲೀಟ್ ಮಾಡಿದ್ದಾರೆ ಎನ್ನಲಾಗಿದೆ.

    ವಿಚಾರಣೆ ವೇಳೆ ಕೂಡ ಗ್ರೂಪ್‍ನ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಹೀಗಾಗಿ ಇದೇ ಪಾರ್ಟಿಗಳಲ್ಲಿ ಡ್ರಗ್ಸ್ ಸಹ ಸರಬರಾಜು ಆಗಿರುವ ಶಂಕೆ ವ್ಯಕ್ತವಾಗುತ್ತಿದೆ. ಸದ್ಯ ಎಲ್ಲಾ ಮೊಬೈಲ್‍ನಲ್ಲಿ ಪಾರ್ಟಿ ಸಂಬಂಧ ಮಾಡಿರುವ ಮೆಸೇಜ್‍ಗಳು ರಿಟ್ರೀವ್ ಮಾಡಲಾಗುತ್ತಿದೆ. ಇಂದು ಸಿಸಿಬಿ ವಿರೇನ್ ಖನ್ನಾ, ವೈಭವ್ ಜೈನ್, ರವಿಶಂಕರ್ ಬಳಿ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ವಿಚಾರಣೆ ಮಾಡಿದ್ದು, ಎಲ್ಲಾ ಆರೋಪಿಗಳ ಮೊಬೈಲ್ ರಿಟ್ರೀವ್ ಆಗಿದ್ದ ರಿಪೋರ್ಟ್ ಸಿಸಿಬಿ ಕೈ ಸೇರಿದೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.

    ಆರೋಪಿ ವಿರೇನ್ ಖನ್ನಾಗೆ ಸ್ಯಾಂಡಲ್‍ವುಡ್ ಅಷ್ಟೇ ಅಲ್ಲ ಬಾಲಿವುಡ್‍ನಲ್ಲೂ ಲಿಂಕ್ ಇದೆ ಎಂದು ಹೇಳಲಾಗುತ್ತಿದೆ. ಸಿಸಿಬಿ ತನಿಖೆಯಲ್ಲಿ ಕಿಂಗ್ ಫಿನ್ ವಿರೇನ್ ಖನ್ನಾಗೆ ದೊಡ್ಡ ಜಾಲದ ಲಿಂಕ್ ಇದೆ ಎಂಬ ಮಾಹಿತಿ ಲಭ್ಯವಾಗಿದೆ. ಡ್ರಗ್ಸ್ ಪೇಡ್ಲರ್ ವಿರೇನ್ ಖನ್ನಾಗೆ ನಟಿ ರಾಗಿಣಿ ಮತ್ತು ಸಂಜನಾ ರೀತಿಯ ಸೆಲೆಬ್ರಿಟಿಗಳು ಸಾವಿರಾರು ಮಂದಿ ಪರಿಚಯ ಇದ್ದಾರೆ. ಅದರಲ್ಲೂ ದೊಡ್ಡ ಸೆಲೆಬ್ರಿಟಿಗಳನ್ನ ಖುಷಿಪಡಿಸಿ ಹಣ ಮಾಡುವುದೇ ಖನ್ನಾ ಕಾಯಕವಾಗಿದೆ. ಹೀಗಾಗಿ ಸಿಸಿಬಿ ಪೊಲೀದರು ಆರೋಪಿ ವಿರೇನ್ ಖನ್ನಾಗೆ ಬಾಲಿವುಡ್‍ನಲ್ಲಿರೋ ಸೆಲೆಬ್ರಿಟಿಗಳ ಲಿಂಕ್ ಪತ್ತೆ ಹಚ್ಚುತ್ತಿದ್ದಾರೆ.

  • ವೈಭವ್ ಜೈನ್ ವೈಭವಕ್ಕೆ ತುಪ್ಪದ ಹುಡ್ಗಿ ಫುಲ್ ಸೈಲೆಂಟ್

    ವೈಭವ್ ಜೈನ್ ವೈಭವಕ್ಕೆ ತುಪ್ಪದ ಹುಡ್ಗಿ ಫುಲ್ ಸೈಲೆಂಟ್

    ಬೆಂಗಳೂರು: ಸಿಸಿಬಿ ಪೊಲೀಸರು ಶನಿವಾರ ಡ್ರಗ್ಸ್ ಪ್ರಕರಣದ ಮತ್ತೋರ್ವ ಪ್ರಮುಖ ಆರೋಪಿ ವೈಭವ್ ಜೈನ್ ಅನ್ನು ವಶಕ್ಕೆ ಪಡೆದುಕೊಂಡಿದ್ದು, ಇದರಿಂದ ನಟಿ ರಾಗಿಣಿಗೆ ಸಂಕಷ್ಟ ಶುರುವಾಗಿದೆ.

    ಸ್ಯಾಂಡಲ್‍ವುಡ್ ಡ್ರಗ್ಸ್ ಮಾಫಿಯಾ ವಿಚಾರವಾಗಿ ಈಗಾಗಲೇ ನಟಿಮಣಿಯಾರದ ರಾಗಿಣಿ ಮತ್ತು ಸಂಜನಾ ಗಲ್ರಾನಿ ಅರೆಸ್ಟ್ ಆಗಿದ್ದಾರೆ. ಇದರ ಜೊತೆಗೆ ನಟಿಯರ ಜೊತೆ ನಂಟು ಹೊಂದಿದ್ದ ವ್ಯಕ್ತಿಗಳನ್ನು ಪೊಲೀಸರು ಖೆಡ್ಡಾಗೆ ಬೀಳಿಸುತ್ತಿದ್ದಾರೆ. ಅಂತೆಯೇ ಶನಿವಾರ ವೈಭವ್ ಜೈನ್ ಎಂಬ ಚಿನ್ನದ ವ್ಯಾಪಾರಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ.

    ಶನಿವಾರ ನಡೆದ ಸಿಸಿಬಿ ತನಿಖೆಯಲ್ಲಿ ವೈಭವ್ ಜೈನ್ ರವಿಶಂಕರ್ ಮತ್ತು ರಾಗಿಣಿಗೆ ನಾನೇ ಎಲ್‍ಎಸ್‍ಡಿ ಪಿಲ್ಸ್ ತಂದುಕೊಟ್ಟಿದ್ದೇ ಎಂದು ತಪ್ಪೊಪ್ಪಿಕೊಂಡಿದ್ದಾನೆ. ಜೊತೆಗೆ ನಟಿ ರಾಗಿಣಿ, ರವಿಶಂಕರ್, ವೀರೇನ್ ಖನ್ನಾ ಹಾಗೂ ಇತರ ಡ್ರಗ್ಸ್ ಪೆಡ್ಲರ್ ಗಳ ಜೊತೆಗೆ ಪಾರ್ಟಿಯಲ್ಲಿ ಭಾಗಿಯಾಗಿದ್ದೆ. ಬೆಂಗಳೂರು ಸೇರಿದಂತೆ ದೇಶದ ವಿವಿಧೆಡೆ ಪಾರ್ಟಿಗಳು ನಡೆದಿದ್ದವು ಎಂದು ವೈಭವ್ ಜೈನ್ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

    ಈಗಾಗಲೇ ಪೊಲೀಸರು ಪಾರ್ಟಿ ಮಾಡಿರುವ ಬಗ್ಗೆ ಮೊಬೈಲ್ ತಾಂತ್ರಿಕ ತಜ್ಞರಿಂದ ವರದಿ ಪಡೆದುಕೊಂಡಿದ್ದಾರೆ. ವಿಚಾರಣೆ ವೇಳೆ ನಾನು ಏನೂ ಮಾಡೇ ಇಲ್ಲ ಎಂದು ನಾಟಕವಾಡುತ್ತಿದ್ದ ರಾಗಿಣಿಗೆ ವೈಭವ್ ಜೈನ್ ತಪ್ಪೊಪ್ಪಿಕೊಂಡಿರುವ ವಿಡಿಯೋವನ್ನು ಪೊಲೀಸರು ತೋರಿಸಿದ್ದಾರೆ. ಇದನ್ನು ಕಂಡು ರಾಗಿಣಿ ಫುಲ್ ಸೈಲೆಂಟ್ ಆಗಿ ಹೋಗಿದ್ದಾರೆ. ಈ ಸಾಕ್ಷಿಗಳೇ ತುಪ್ಪದ ಹುಡ್ಗಿಗೆ ಮುಳುವಾಗಲಿವೆ ಎಂದು ಹೇಳಲಾಗಿದೆ.

    ಈ ಹಿಂದೆ ವಿದೇಶಿ ಡ್ರಗ್ಸ್ ಪೆಡ್ಲರ್ ಲೂಮ್ ಪೆಪ್ಪರ್ ಬಗ್ಗೆ ಕೇಳಿದಾಗಲೂ ರಾಗಿಣಿ ನನಗೆ ಏನೂ ಗೊತ್ತೇ ಇಲ್ಲ ಎಂದು ಡ್ರಾಮಾ ಮಾಡಿದ್ದರು. ಆದರೆ ಸಿಸಿಬಿ ಪೊಲೀಸರು ಲೂಮ್ ಪೆಪ್ಪರ್ ರಾಗಿಣಿ ಮಾಡಿರುವ ಮೆಸೇಜ್‍ಗಳ ಕಾಪಿ ತೋರಿಸಿದಾಗ ಸೈಲೆಂಟ್ ಆಗಿದ್ದರು. ರಾಗಿಣಿ ತನಿಖೆಗೆ ಸಹಕರಿಸದಿರುವುದೇ ಆಕೆಗೆ ಮುಳುವಾಗಲಿದೇ ಎಂದು ಹೇಳಲಾಗಿದೆ. ಇಂದು ಸಿಸಿಬಿ ಪೊಲೀಸರು ರಾಗಿಣಿಯನ್ನು ಸುದೀರ್ಘ ವಿಚಾರಣೆಗೆ ಒಳಪಡಿಸಲಿದ್ದಾರೆ.

  • ಹೆಚ್ಚಿನ ಮಾಹಿತಿ ಕೇಳಿದ್ದಾರೆ, ಮತ್ತೆ ಶುಕ್ರವಾರ ವಿಚಾರಣೆಗೆ ಹೋಗ್ತೀನಿ – ಸಂಬರಗಿ

    ಹೆಚ್ಚಿನ ಮಾಹಿತಿ ಕೇಳಿದ್ದಾರೆ, ಮತ್ತೆ ಶುಕ್ರವಾರ ವಿಚಾರಣೆಗೆ ಹೋಗ್ತೀನಿ – ಸಂಬರಗಿ

    – ಜಮೀರ್‌ಗೂ ಡ್ರಗ್ಸ್‌ಗೂ ಸಂಬಂಧ ಇದೆ ಅಂತ ನಾನು ಹೇಳಿಲ್ಲ
    – ನಾನು ಏನೂ ಸಾಕ್ಷ್ಯ ಕೊಟ್ಟಿಲ್ಲ
    – ಕೊಂಲಬೋಗೆ ಹೋಗಿರುವುದನ್ನ ಜಮೀರ್ ಒಪ್ಪಿಕೊಂಡಿದ್ದಾರೆ

    ಬೆಂಗಳೂರು: ಮತ್ತೆ ಶುಕ್ರವಾರ ವಿಚಾರಣೆಗೆ ಬರುವಂತೆ ಸಿಸಿಬಿ ತನಿಖಾಧಿಕಾರಿಗಳು ನನಗೆ ಸೂಚಿಸಿದ್ದಾರೆ ಎಂದು ಉದ್ಯಮಿ, ಸಿನಿ ವಿತರಕ ಪ್ರಶಾಂತ್ ಸಂಬರಗಿ ಹೇಳಿದ್ದಾರೆ. ಇದನ್ನೂ ಓದಿ: ಜಮೀರ್ ಆಸ್ತಿಯನ್ನು ಸರ್ಕಾರಕ್ಕೆ ಕೊಡಿಸುತ್ತಿದ್ದೇನೆ: ಪ್ರಶಾಂತ್ ಸಂಬರಗಿ

    ಸಿಸಿಬಿ ವಿಚಾರಣೆ ಮುಗಿದ ನಂತರ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಪ್ರಶಾಂತ್ ಸಂಬರಗಿ, ತನಿಖಾಧಿಕಾರಿಗಳ ಮುಂದೆ ಕೊಟ್ಟ ದಾಖಲೆಗಳು ಸಮರ್ಪಕವಾಗಿಲ್ಲ ಅಂದಿದ್ದಾರೆ. ಸಂಪೂರ್ಣವಾದ ದಾಖಲೆಗಳನ್ನು ತರುವಂತೆ ಹೇಳಿದ್ದಾರೆ. ಅಲ್ಲದೇ ಮತ್ತೆ ಶುಕ್ರವಾರವೂ ಬರುವಂತೆ ಹೇಳಿದ್ದು, ನೋಟಿಸ್ ಕೊಡುತ್ತೇವೆ ಎಂದಿದ್ದಾರೆ. ವಿಡಿಯೋ ಬಿಡುಗಡೆ ಮಾಡಿರುವುದು ತೋರಿಸುವಂತೆ ಹೇಳಿದರು. ನಾನು ನನ್ನ ಬಳಿ ಇರುವ ವಿಡಿಯೋವನ್ನು ತೋರಿಸಿದೆ. ಆದರೆ ಆ ವಿಡಿಯೋ ನಮ್ಮ ಬಳಿಯೂ ಇದೆ, ನಿಮ್ಮ ಬಳಿ ಇರುವುದು ಕೊಡಿ ಅಂದರು. ಆಗ ನಾನು ನನ್ನ ಬಳಿಯೂ ಇದೆ ವಿಡಿಯೋ ಇರುವುದು ಅಂತ ಹೇಳಿದ್ದೇನೆ ಎಂದು ಅವರು ತಿಳಿಸಿದರು.

    ನಾನು ಫೇಸ್‍ಬುಕ್, ಟ್ವಿಟ್ಟರ್ ಯಾವುದೇ ಸೋಶಿಯಲ್ ಮೀಡಿಯಾದಲ್ಲಿ ಜಮೀರ್‌ಗೂ ಡ್ರಗ್ಸ್‌ಗೂ ಸಂಬಂಧ ಇದೆ ಅಂತ ನಾನು ಹೇಳಿಲ್ಲ. ಜಮೀರ್ ಕೊಲಂಬೋಗೆ ಹೋಗಿದ್ದರು ಎಂದು ಹೇಳಿದ್ದೆ ಎಂದು ಪ್ರಶಾಂತ್ ಸಂಬರಗಿ ಈ ವೇಳೆ ಸ್ಪಷ್ಟಪಡಿಸಿದ್ದರು.

    ವಿಚಾರಣೆ ವೇಳೆ ಜಮೀರ್ ನಾನು ಶ್ರೀಲಂಕಾ ಹೋಗಿದ್ದೇನೆ ಅಂತ ಒಪ್ಪಿಕೊಂಡಿದ್ದಾರೆ ಅನ್ನೋ ವಿಚಾರ ಟಿವಿಯಲ್ಲಿ ನೋಡಿದೆ. ಹೀಗಾಗಿ ನಾನು ಮಾಡಿರುವ ಆರೋಪಕ್ಕೆ ಉತ್ತರ ಇಲ್ಲೇ ಸಿಕ್ಕಿದೆ. ನಾನು ಯಾವ ದಾಖಲೆಗಳನ್ನು ಕೊಟ್ಟಿದ್ದೇನೆ ಎನ್ನುವುದನ್ನು ಹೇಳುವುದಕ್ಕೆ ಆಗಲ್ಲ. ನಾನು ಏನೂ ಸಾಕ್ಷ್ಯ ಕೊಟ್ಟಿಲ್ಲ ಎಂದೇ ತಿಳಿದುಕೊಳ್ಳಿ, ನಾನು ಏನೂ ಸಾಕ್ಷ್ಯ ಕೊಟ್ಟಿಲ್ಲ ಎಂದರು.

    ಜಮೀರ್ ಕೊಲಂಬೋಗೆ ಹೋಗಿದ್ದರು ಎಂದು ಹೇಳಿದ್ದೆ. ಅದನ್ನು ಈಗ ಅವರೇ ಒಪ್ಪಿಕೊಂಡಿದ್ದಾರೆ. ಈಗ ಶೇಖ್ ಫಾಝಿಲ್ ಬಗ್ಗೆ ವಿಚಾರಣೆ ಮಾಡಿ ಅಂತ ಮಾತ್ರ ನಾನು ಹೇಳಿದ್ದೇನೆ. ಸಾಕಷ್ಟು ಪ್ರಶ್ನೆಗಳನ್ನು ಕೇಳಿದರು. ಅದಕ್ಕೆ ಪೂರಕ ಸಾಕ್ಷ್ಯ ಕೊಡಿ ಅಂದರು. ನಾನು ನನ್ನ ಬಳಿ ಇರುವಷ್ಟು ಮಾಹಿತಿಯನ್ನು ಕೊಟ್ಟಿದ್ದೇನೆ. ಆದರೆ ಸಿಸಿಬಿ ಇನ್ನೂ ಹೆಚ್ಚಿನ ಮಾಹಿತಿಯನ್ನು ಕೇಳಿದ್ದಾರೆ. ಹೀಗಾಗಿ ಶುಕ್ರವಾರ ಮತ್ತೆ ವಿಚಾರಣೆಗೆ ಕರೆಯುತ್ತಾರೆ ಎಂದು ಸಂಬರಗಿ ತಿಳಿಸಿದರು.

    ನಾನು ರಾಹುಲ್ ಜೊತೆ ಇದ್ದ ಫೋಟೋಗಳ ಬಗ್ಗೆಯೂ ಕೇಳಿದರು ಎಂದರು. ನಾನು ಸಂಜನಾ ಬಗ್ಗೆ ಯಾವುದೇ ಸಾಕ್ಷ್ಯಗಳನ್ನು ಕೊಟ್ಟಿಲ್ಲ. ಆದರೆ ಅವರ ಟಿಕ್‍ಟಾಕ್ ವಿಡಿಯೋಗಳು, ದುಬೈಗೆ ಹೋಗಿರುವ ಮಾಹಿತಿ ಹೇಳಿದೆ. ಬೇರೆ ಯಾವುದೇ ನಟಿ-ನಟರ ಬಗ್ಗೆ ಮಾಹಿತಿ ಕೊಟ್ಟಿಲ್ಲ. ನಾನು ಬಿಜೆಪಿ ವಕ್ತಾರ ಎಂದು ಹೇಳುತ್ತಿದ್ದಾರೆ. ಆದರೆ ನಾನು ಕಾಂಗ್ರೆಸ್ ಅವರನ್ನೂ ಭೇಟಿ ಮಾಡಿದರೆ ಕಾಂಗ್ರೆಸ್ ವಕ್ತಾರ ಎಂದು ಹೇಳುತ್ತಾರೆ. ರಾಜಕೀಯಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ, ರಾಜಕೀಯ ಪ್ರೇರಿತವಾಗಿ, ಈ ಉದ್ದೇಶಪೂರವಾಗಿ ಈ ಅಭಿಯಾನ ನಡೆಸುತ್ತಿಲ್ಲ ಎಂದು ಪ್ರಶಾಂತ್ ಆಕ್ರೊಶದಿಂದ ಮಾತನಾಡಿದರು.

    ಜಮೀರ್ ಕೊಲಂಬೋಕ್ಕೆ ಹೋದ ಬಗ್ಗೆ ಪೊಲೀಸರು ಪ್ರಶ್ನೆ ಕೇಳಲ್ಲ ಎಂದಿದ್ದಾರೆ. ಯಾಕೆಂದರೆ ಜಮೀರ್ ಕೊಲಂಬೋಕ್ಕೆ ಹೋಗಿರುವ ಬಗ್ಗೆ ಅವರೇ ಒಪ್ಪಿಕೊಂಡಿದ್ದಾರೆ. ಶಾಸಕ ಜಮೀರ್ ಬಗ್ಗೆ ನನಗೆ ಯಾವುದೇ ಅಭ್ಯಂತರ ಇಲ್ಲ. ಅವರ ವೈಯಕ್ತಿಕ ವಿಷಯದ ಬಗ್ಗೆ ನಾನು ಮಾತಾಡಲ್ಲ. ಮಾನ್ಯ ಶಾಸಕರ ಬಗ್ಗೆ ನನ್ನ ಅಭ್ಯಂತರ ಇಲ್ಲ. ಆದರೆ ಶಾಸಕರ ಆಪ್ತ ಬಂಟ ಶೇಖ್ ಫಾಝಿಲ್ ಬಗ್ಗೆ ಮಾತಾಡಿದ್ದೇನೆ ಎಂದರು.

     

    ನನ್ನ ವಿರುದ್ಧದ ಎಫ್‍ಐಆರ್ ಬಗ್ಗೆ ನಮ್ಮ ವಕೀಲರು ನೋಡಿಕೊಳ್ಳುತ್ತಾರೆ. ಜಮೀರ್‍ಗೂ ಶೇಖ್ ಫಾಝೀಲ್‍ಗೂ ಏನು ಸಂಬಂಧ ಇದೆ ಅನ್ನೋದನ್ನ ವಿಚಾರ ಮಾಡುವಂತೆ ಹೇಳಿದ್ದೇನೆ. ಅದೆಲ್ಲದಕ್ಕೂ ನಾನು ಉತ್ತರವನ್ನು ಕೊಟ್ಟಿದ್ದೇನೆ. ಕೆಲವೊಂದು ಡಾಕ್ಯುಮೆಂಟ್ ತರುವುದಕ್ಕೆ ಹೇಳಿದ್ದಾರೆ. ಎಲ್ಲವನ್ನು ಶುಕ್ರವಾರ ತಂದು ಕೊಡುತ್ತೇನೆ ಎಂದು ಪ್ರಶಾಂತ್ ಸಂಬರಗಿ ಹೇಳಿದರು.

  • ಡ್ರಗ್ಸ್ ಪ್ರಕರಣದ 5ನೇ ಆರೋಪಿ, ಚಿನ್ನ ವ್ಯಾಪಾರಿಯ ಪುತ್ರ ಬಂಧನ

    ಡ್ರಗ್ಸ್ ಪ್ರಕರಣದ 5ನೇ ಆರೋಪಿ, ಚಿನ್ನ ವ್ಯಾಪಾರಿಯ ಪುತ್ರ ಬಂಧನ

    ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ಸ್ ಪ್ರಕರಣದ ಐದನೇ ಆರೋಪಿ ವೈಭವ್ ಜೈನ್‍ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಸಂಬರಗಿಗೆ ಸಿಸಿಬಿ ನೋಟಿಸ್ – ಟೆನ್ಶನ್ ಜಾಸ್ತಿಯಾಗಿ ರಾತ್ರಿ ನಿದ್ದೆ ಮಾಡದ ಸಂಜನಾ

    ಈಗ ಬೆಂಗಳೂರಿನ ವೈಯ್ಯಾಲಿಕಾವಲ್‍ನ ನಿವಾಸದಲ್ಲಿ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ತನಗೆ ಕೊರೊನಾ ಬಂದಿದೆ ಹೋಮ್ ಐಸೋಲೇಷನ್‍ನಲ್ಲಿ ಇದ್ದೇನೆ ಎಂದು ಈ ಮೊದಲು ತಿಳಿಸಿದ್ದ. ಹೀಗಾಗಿ ಈತನ ಬಂಧನ ತಡವಾಗಿ ನಡೆದಿದೆ.  ಇದನ್ನೂ ಓದಿ: ನಟಿ ಸಂಜನಾ ಸೇರಿ ಉಳಿದ ಆರೋಪಿಗಳೂ 3 ದಿನ ಸಿಸಿಬಿ ಕಸ್ಟಡಿಗೆ

    ಸ್ಯಾಂಡಲ್‍ವುಡ್‍ನಲ್ಲಿ ಡ್ರಗ್ಸ್ ಮಾಫಿಯಾದಲ್ಲಿ ಆರೋಪಿ ವೈಭವ್ ಜೈನ್ ಬಗ್ಗೆ ಆರೋಪಿ ರವಿಶಂಕರ್ ಮಾಹಿತಿ ನೀಡಿದ್ದನು. ವೈಭವ್ ಜೈನ್ ಪ್ರಕರಣದ ಐದನೇ ಆರೋಪಿಯಾಗಿದ್ದಾನೆ. ಪ್ರತಿಷ್ಠಿತ ಚಿನ್ನದ ವ್ಯಾಪಾರಿಯ ಪುತ್ರನಾಗಿರುವ ಈತ ಕೂಡ ಚಿನ್ನದ ವ್ಯವಹಾರ ನಡೆಸುತ್ತಿದ್ದಾನೆ.

    ವೈಭವ್ ಪಾರ್ಟಿಗೆ ಬಂದವರಿಗೆ ಡ್ರಗ್ಸ್ ಸಪ್ಲೆ ಮಾಡುತ್ತಿದ್ದನಂತೆ. ಆದರೆ ಸ್ಯಾಂಡಲ್‍ವುಡ್‍ನಲ್ಲಿ ಡ್ರಗ್ಸ್ ಮಾಫಿಯಾ ಪ್ರಕರಣ ಸದ್ದು ಮಾಡುತ್ತಿದ್ದಂತೆ ವೈಭವ್ ಕೊರೊನಾ ಪಾಸಿಟಿವ್ ಎಂದು ಹೇಳಿಕೊಂಡು ಹೋಮ್ ಐಸೋಲೇಷನ್‍ನಲ್ಲಿದ್ದನು.

    2018ರಲ್ಲಿ ರವಿಶಂಕರ್ ಹಾಗೂ ರಾಗಿಣಿ ಪ್ರತಿಷ್ಠಿತ ಹೋಟೆಲ್‍ನಲ್ಲಿ ಪಾರ್ಟಿಗೆ ಹೋಗಿದ್ದರು. ಅಲ್ಲಿ ರವಿಶಂಕರ್‌ಗೆ ವೈಭವ್ ಜೈನ್‍ಗೆ ಪರಿಚಯವಾಗಿದ್ದ. ಸ್ನೇಹ-ಸಲುಗೆ ಜಾಸ್ತಿ ಆಗುತ್ತಿದ್ದಂತೆ ವೈಭವ್ ಜೈನ್ ವ್ಯವಹಾರ ರವಿಶಂಕರ್‌ಗೆ ಗೊತ್ತಾಗಿದೆ. ವೈಭವ್ ಜೈನ್ ಸ್ನೇಹಿತರಾದ ಅರುಣ್, ವಿನಯ್, ಪ್ರಶಾಂತ್ ರಾಂಕಾ ಮೂಲಕ ದಂಧೆ ಮಾಡುತ್ತಿದ್ದನು. ಪ್ರತಿಷ್ಠಿತ ಹೋಟೆಲ್‍ಗಳಲ್ಲಿ ಪಾರ್ಟಿ ಆಯೋಜಿಸಿ ಡ್ರಗ್ಸ್ ದಂಧೆ ಮಾಡುತ್ತಿದ್ದನು ಎಂಬ ಮಾಹಿತಿ ತಿಳಿದುಬಂದಿದೆ.

    ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಸಿಸಿಬಿ ಪೊಲೀಸರಿಂದ ಬಂಧನವಾಗಿರುವ ನಟಿ ಸಂಜನಾ, ರಾಗಿಣಿ, ರವಿಶಂಕರ್, ಲೂಮ್ ಪೆಪ್ಪರ್, ಪ್ರಶಾಂತ್ ರಂಕಾ, ರಾಹುಲ್ ಅವರನ್ನು ಮತ್ತೆ ಮೂರು ದಿನಗಳ ಕಾಲ ಸಿಸಿಬಿ ಪೊಲೀಸರ ಕಸ್ಟಡಿಗೆ ನ್ಯಾಯಾಲಯ ನೀಡಿದೆ. ಸೋಮವಾರದವರೆಗೂ ನಟಿ ರಾಗಿಣಿ, ಸಂಜನಾ ಸೇರಿದಂತೆ 6 ಮಂದಿ ಆರೋಪಿಗಳು ಪೊಲೀಸ್ ಕಸ್ಟಡಿಯಲ್ಲೇ ಉಳಿಯಲ್ಲಿದ್ದಾರೆ.

  • ಡ್ರಗ್ ಡೀಲರ್ ಆದಿತ್ಯ ಆಗರ್ವಾಲ್‍ಗೆ ಬರುತ್ತಿತ್ತು 4 ಲಕ್ಷ ಸಂಬಳ

    ಡ್ರಗ್ ಡೀಲರ್ ಆದಿತ್ಯ ಆಗರ್ವಾಲ್‍ಗೆ ಬರುತ್ತಿತ್ತು 4 ಲಕ್ಷ ಸಂಬಳ

    – ಲೈಫ್ ಈಸ್ ಶಾರ್ಟ್, ನೋ ಮ್ಯಾರೇಜ್ ಎಂಜಾಯ್ ಇಟ್ ಅಜೆಂಡಾ

    – ಬೆಂಗಳೂರಿನ ಪ್ರತಿಷ್ಟಿತ ಸಾಫ್ಟ್ ವೇರ್ ಕಂಪನಿಯಲ್ಲಿ ಟೆಕ್ಕಿ

    ಬೆಂಗಳೂರು: ಡ್ರಗ್ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ಡ್ರಗ್ ಡೀಲರ್ ಆದಿತ್ಯ ಆಗರ್ವಾಲ್‍ಗೆ ತಿಂಗಳಿಗೆ ನಾಲ್ಕು ಲಕ್ಷ ಸಂಬಳ ಬರುತ್ತಿತ್ತು ಎಂಬುದು ತನಿಖೆ ವೇಳೆ ಬಯಲಾಗಿದೆ.

    ಡ್ರಗ್ ಮಾಫಿಯಾ ಪ್ರಕರಣದಲ್ಲಿ ದೆಹಲಿಯಲ್ಲಿ ಅರೆಸ್ಟ್ ಆದ ಡ್ರಗ್ ಕಿಂಗ್‍ಪಿನ್ ವೀರೇನ್ ಖನ್ನಾನ ಬಲಗೈ ಬಂಟನಾಗಿದ್ದ ಆದಿತ್ಯ ಆಗರ್ವಾಲ್, ಬೆಂಗಳೂರಿನ ಪ್ರತಿಷ್ಟಿತ ಸಾಫ್ಟ್ ವೇರ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ. ಟೆಕ್ಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಈತನಿಗೆ ತಿಂಗಳಿಗೆ 4 ಲಕ್ಷ ರೂ. ಸಂಬಳ ಬರುತ್ತಿತ್ತು. ಆದರೂ ಲೈಫ್ ಎಂಜಾಯ್ ಮಾಡಲು ಡ್ರಗ್ ದಂಧೆಗೆ ಇಳಿದಿದ್ದ.

    ವೀರೇನ್ ಖನ್ನ ಮತ್ತು ಆದಿತ್ಯ ಆಗರ್ವಾಲ್ ಇಬ್ಬರು ಸೇರಿ ಬೆಂಗಳೂರಿನಲ್ಲಿ ಹೈಟೆಕ್ ಪಾರ್ಟಿಗಳನ್ನು ಆಯೋಜನೆ ಮಾಡುತ್ತಿದ್ದರು. ವೀರೇನ್ ಖನ್ನಾ ಇಲ್ಲದ ದಿನಗಳಲ್ಲಿ ಪಾರ್ಟಿಯನ್ನು ಆದಿತ್ಯ ಆಗರ್ವಾಲ್ ನೋಡಿಕೊಳ್ಳುತ್ತಿದ್ದ. ಜೊತೆಗೆ ಪಾರ್ಟಿಗಳಿಗೆ ಲಕ್ಷ ಲಕ್ಷ ಹಣ ಖರ್ಚು ಮಾಡುತ್ತಿದ್ದ. ನಾಲ್ಕು ಲಕ್ಷ ಸಂಬಳವನ್ನು ಈತ ಎರಡು ವಾರದಲ್ಲಿ ಉಡೀಸ್ ಮಾಡುತ್ತಿದ್ದ. ವೀರೇನ್ ಖನ್ನಾ ಇವನು ಒಟ್ಟಿಗೆ ಸೇರಿದ್ದರೆ, ಮೋಜು ಮಸ್ತಿಗೆ ದಿನಕ್ಕೆ ಲಕ್ಷದ ತನಕ ಖರ್ಚು ಮಾಡುತ್ತಿದ್ದರು ಎಂಬುದು ಗೊತ್ತಾಗಿದೆ.

    ಜೊತೆಗೆ ಈ ಇಬ್ಬರು ಲೈಫ್ ಈಸ್ ವೆರಿ ಶಾರ್ಟ್, ಎಂಜಾಯ್ ಇಟ್ ಎಂಬ ಅಜೆಂಡಾವನ್ನು ಇಟ್ಟುಕೊಂಡು ಜೀವನ ಮಾಡುತ್ತಿದ್ದರು. ನಾನು ಮದುವೆ ಆಗಲ್ಲ, ನೀನು ಮದುವೆ ಆಗಬೇಡ ಎಂದು ಇಬ್ಬರು ಮಾತನಾಡಿಕೊಂಡಿದ್ದರಂತೆ. ಬಂದ ಸಂಬಳವನ್ನು ಎರಡೇ ವಾರಕ್ಕೆ ಮುಗಿಸಿ ತಿಂಗಳ ಕೊನೆಯಲ್ಲಿ ಹಣಕ್ಕಾಗಿ ಇಬ್ಬರು ಡ್ರಗ್ ಡೀಲ್ ಮಾಡುತ್ತಿದ್ದರಂತೆ. ಈ ಕಾರಣಕ್ಕೆ 35 ವರ್ಷವಾದರೂ ಈ ಇಬ್ಬರು ಮದುವೆಯಾಗಿಲ್ಲ.

    ಕಳೆದ ವಾರ ವೀರೇನ್ ಖನ್ನಾನನ್ನು ಸಿಸಿಬಿ ಪೊಲೀಸರು ದೆಹಲಿಯಲ್ಲಿ ಬಂಧಿಸಿ ಕರೆತಂದಿದ್ದರು, ಸದ್ಯ ಆತ ಪೊಲೀಸರ ವಶದಲ್ಲಿದ್ದಾನೆ. ಈತನ ಮಾಹಿತಿ ಮೇರೆಗೆ ಆದಿತ್ಯ ಆಗರ್ವಾಲ್‍ನನ್ನು ಸಿಸಿಬಿ ಪೊಲೀಸರು ಹರಿಯಾಣದಲ್ಲಿ ಬಂಧಿಸಿ ಬೆಂಗಳೂರಿಗೆ ಕರೆತಂದಿದ್ದಾರೆ.

  • ಡ್ರಗ್ಸ್ ಪ್ರಕರಣ: ಶಿವಪ್ರಕಾಶ್ ಎ1, ರಾಗಿಣಿ ಎ2 ಆಗಿದ್ದು ಯಾಕೆ?

    ಡ್ರಗ್ಸ್ ಪ್ರಕರಣ: ಶಿವಪ್ರಕಾಶ್ ಎ1, ರಾಗಿಣಿ ಎ2 ಆಗಿದ್ದು ಯಾಕೆ?

    ಬೆಂಗಳೂರು: ಸ್ಯಾಂಡಲ್‍ವುಡ್‍ನ ಡ್ರಗ್ಸ್ ಪ್ರಕರಣಕ್ಕೆ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಿದ್ದು, ಸಿಸಿಬಿ ವಿಚಾರಣೆಯ ವೇಳೆ ಹೊಸ ಹೊಸ ವಿಷಯಗಳು ಹೊರ ಬರುತ್ತಿವೆ. ಸದ್ಯ ಈ ಡ್ರಗ್ಸ್ ಕೇಸ್‍ನಲ್ಲಿ ಆರೋಪಿ ನಂಬರ್ 2 ಆಗಿರುವ ನಟಿ ರಾಗಿಣಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಮಾಜಿ ಸಚಿವ ಜೀವರಾಜ್‌ ಆಳ್ವಾ ಪುತ್ರ ಸೇರಿದಂತೆ 12 ಮಂದಿ ವಿರುದ್ಧ ಕೇಸ್‌ – ಯಾವೆಲ್ಲ ಸೆಕ್ಷನ್‌? ಶಿಕ್ಷೆ ಏನು?

    ಡ್ರಗ್ಸ್ ಮಾಫಿಯಾಗೆ ಸಂಬಂಧಿಸಿದಂತೆ ನಟಿ ರಾಗಿಣಿ ಆಪ್ತ ರವಿಶಂಕರ್ ಅರೆಸ್ಟ್ ಆದ ಬಳಿಕ ಒಬ್ಬೊಬ್ಬರಾಗಿ ಅರೆಸ್ಟ್ ಆಗುತ್ತಿದ್ದಾರೆ. ರವಿಶಂಕರ್ ಬಾಯಿಬಿಡುತ್ತಿದ್ದಂತೆ ನಟಿ ರಾಗಿಣಿ ಸಹ ಸಿಸಿಬಿ ಬಂಧನದಲ್ಲಿದ್ದಾರೆ. ನಂತರ ಶಿವಪ್ರಕಾಶ್ ಪಾತ್ರ ಗೊತ್ತಾಗಿದ್ದು, ಅಲ್ಲದೇ ವಿಚಾರಣೆ ವೇಳೆ ರವಿಶಂಕರ್ ಡೀಲರ್ ಅನ್ನೋದು ಬೆಳಕಿಗೆ ಬಂದಿದೆ.

    ಅಷ್ಟೇ ಅಲ್ಲದೇ ಶಿವಪ್ರಕಾಶ್ ಕೂಡ ಡ್ರಗ್ ಡೀಲ್ ಮಾಡುತ್ತಿದ್ದು, ಪಾರ್ಟಿಗಳಿಗೆ ಡ್ರಗ್ಸ್ ಕೊಡುತ್ತಿದ್ದನು. ರಾಗಿಣಿ ಸೇರಿ ಹಲವು ಮಾಡೆಲ್‍ಗಳಿಗೂ ಪಾರ್ಟಿಗಳಲ್ಲಿ ಡ್ರಗ್ಸ್ ಕೊಡುತ್ತಿದ್ದನು ಎಂಬ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಈ ಡ್ರಗ್ಸ್ ಕೇಸ್‍ನಲ್ಲಿ ಶಿವಪ್ರಕಾಶ್ ಆರೋಪಿ ನಂಬರ್ 1 ಆಗಿದ್ದು, ನಟಿ ರಾಗಿಣಿ ಆರೋಪಿ ನಂಬರ್ 2 ಆಗಿದ್ದಾರೆ.

    ಪ್ರಕರಣದಲ್ಲಿ ಎ1 ಶಿವಪ್ರಕಾಶ್, ರಾಗಿಣಿಯನ್ನ ಎ2 ಏಕೆ ಮಾಡಲಾಯಿತು:
    ರವಿಶಂಕರ್ ಅರೆಸ್ಟ್ ಆದ ನಂತರವೇ ಶಿವಪ್ರಕಾಶ್ ರೋಲ್ ಗೊತ್ತಾಗಿದ್ದು, ವಿಚಾರಣೆ ವೇಳೆ ತಾನೂ ಡೀಲರ್ ಅನ್ನೋದನ್ನ ರವಿಶಂಕರ್ ಹೇಳಿದ್ದನು. ಸಾಕಷ್ಟು ಬಾರಿ ಶಿವಪ್ರಕಾಶ್ ಡೀಲ್ ಮಾಡಿ ರಾಗಿಣಿ ಸೇರಿದಂತೆ ಪಾರ್ಟಿಗಳಲ್ಲಿ ಡ್ರಗ್ಸ್ ಕೊಡುತ್ತಿದ್ದ ಎನ್ನುವ ಮಾಹಿತಿ ಲಭ್ಯವಾಗಿತ್ತು. ಅಲ್ಲದೇ ಶಿವಪ್ರಕಾಶ್ ಡ್ರಗ್ ಪೆಡ್ಲರ್‌ಗಳ ಜೊತೆ ವ್ಯವಹಾರ ಮಾಡಿರುವ ಸಾಕ್ಷಿ ಸಿಕ್ಕ ಹಿನ್ನೆಲೆ ಆತನನ್ನು ಆರೋಪಿ ನಂಬರ್ 1 ಮಾಡಲಾಗಿದೆ.

    ಇತ್ತ ಪ್ರಕರಣದಲ್ಲಿ ರಾಗಿಣಿ ಎಲ್ಲೂ ನೇರವಾಗಿ ಭಾಗಿಯಾಗಿರಲಿಲ್ಲ. ಶಿವಪ್ರಕಾಶ್ ಅಥವಾ ರವಿಶಂಕರ್ ಕೊಟ್ಟ ಡ್ರಗ್ಸ್ ಪಡೆದು ಪಾರ್ಟಿಯಲ್ಲಿ ನಟಿ ರಾಗಿಣಿ ಹಂಚಿಕೆ ಮಾಡಿದ್ದರು. ಅಲ್ಲದೇ ಎಲ್ಲೂ ಕೂಡ ರಾಗಿಣಿ ಹಣಕ್ಕಾಗಿ ಡ್ರಗ್ಸ್ ಮಾರಿಲ್ಲ ಅನ್ನೋದು ಗೊತ್ತಾಗಿದೆ. ಹೀಗಾಗಿ ಶಿವಪ್ರಕಾಶ್ ಎ1, ರಾಗಿಣಿ ಎ2 ಆಗಿದ್ದಾರೆ.

  • ವೃತ್ತಿಯಲ್ಲಿ ಟೆಕ್ಕಿ, ಪ್ರವೃತ್ತಿಯಲ್ಲಿ ಡ್ರಗ್ಸ್ ದಂಧೆಯ ಕಿಂಗ್ ಪಿನ್- ವಿರೇನ್ ಖನ್ನಾ ಬಂಧನ

    – ದೆಹಲಿಯಲ್ಲಿದ್ದುಕೊಂಡೇ ಡ್ರಗ್ ಪಾರ್ಟಿ ಆಯೋಜನೆ

    ಬೆಂಗಳೂರು: ಡ್ರಗ್ಸ್ ಮಾಫಿಯಾ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಸಿಸಿಬಿ ಪೊಲೀಸರು ದಂಧೆಯ ಕಿಂಗ್‍ಪಿನ್ ವೀರೇನ್ ಖನ್ನಾ ಎಂಬಾತನನ್ನು ಬಂಧಿಸಿದ್ದಾರೆ.

    ಬಂಧಿತ ಆರೋಪಿ ವಿರೇನ್ ಖನ್ನಾ ಡ್ರಗ್ ಪಾರ್ಟಿಗಳನ್ನು ಮಾಡಲು ಬೇಕಾದ ಅಗತ್ಯ ಸಿದ್ಧತೆಗಳನ್ನು ಮಾಡುತ್ತಿದ್ದ. ಈ ಕುರಿತು ಖಚಿತ ಮಾಹಿತಿ ಪಡೆದ ಪೊಲೀಸರು ದೆಹಲಿಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.

    ಆರೋಪಿ ಕುರಿತು ಖಚಿತ ಮಾಹಿತಿಗಳನ್ನು ಕಲೆಹಾಕಿದ್ದ ಪೊಲೀಸರು ಆತನನ್ನು ಬಂಧಿಸಲು ಕಾರ್ಯಾಚರಣೆಯನ್ನು ನಡೆಸಿದ್ದರು. ಈ ವೇಳೆ ಆತ ದೆಹಲಿಯಲ್ಲಿರುವ ಮಾಹಿತಿ ಲಭಿಸಿತ್ತು. ಕೂಡಲೇ ದೆಹಲಿಗೆ ತೆರಳಿದ ಸಿಸಿಬಿಯ ಇಬ್ಬರು ಪಿಎಸ್‍ಐಗಳು ಆರೋಪಿಯನ್ನು ಬಂಧಿಸಿ ನಾಲ್ಕು ದಿನಗಳ ಕಾಲ ಕಸ್ಟಡಿಗೆ ಪಡೆದುಕೊಂಡಿದ್ದಾರೆ.

    ವೃತ್ತಿಯಲ್ಲಿ ಟೆಕ್ಕಿಯಾಗಿರುವ ಆರೋಪಿ ಖನ್ನಾ ದೊಡ್ಡ ಪಾರ್ಟಿ ಆರೆಂಜ್ ಮಾಡುತ್ತಿದ್ದ. ನಾಳೆಯೂ ಬೆಂಗಳೂರಿನಲ್ಲಿ ದೊಡ್ಡ ಪಾರ್ಟಿ ನಡೆಸಲು ವೇದಿಕೆ ಸಿದ್ಧ ಮಾಡಿದ್ದ. ಈ ಪಾರ್ಟಿಗೆ ಸಂಬಂಧಿಸಿದ ಫೋಟೋವನ್ನು ಬಿಡುಗಡೆ ಮಾಡಿದ್ದ. ಬಂಧಿತ ಖನ್ನಾ ಮೂಲತಃ ಬೆಂಗಳೂರಿನ ನಿವಾಸಿಯೇ ಆಗಿದ್ದು, ದೆಹಲಿಯ ಮಥೂರ ರಸ್ತೆಯ ನಿವಾಸಿದಲ್ಲಿದ್ದುಕೊಂಡೇ ಬೇರೆ ಬೇರೆ ಪಾರ್ಟಿಗಳನ್ನು ಏರ್ಪಡಿಸಲು ಸಿದ್ಧತೆ ನಡೆಸುತ್ತಿದ್ದ. ಇಂತಹ ಪಾರ್ಟಿಗಳಿಗೆ ಕೇವಲ ಸೆಲೆಬ್ರಿಟಿಗಳಿಗೆ ಮಾತ್ರ ಭಾಗವಹಿಸಲು ಅವಕಾಶ ನೀಡುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ.

  • ಡ್ರಗ್‍ಗೆ ಚಿಕ್ಕನ್ ಪೀಸ್ ಎನ್ನುತ್ತಿದ್ದ ರಾಗಿಣಿ – ತುಪ್ಪದ ಬೆಡಗಿ ಕೋಡ್‍ವರ್ಡ್ ರೀವಿಲ್

    ಡ್ರಗ್‍ಗೆ ಚಿಕ್ಕನ್ ಪೀಸ್ ಎನ್ನುತ್ತಿದ್ದ ರಾಗಿಣಿ – ತುಪ್ಪದ ಬೆಡಗಿ ಕೋಡ್‍ವರ್ಡ್ ರೀವಿಲ್

    ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ ಮಾಫಿಯಾ ಕೇಸಿನಲ್ಲಿ ಸಿಕ್ಕಿಬಿದ್ದಿರುವ ನಟಿ ರಾಗಿಣಿಯವರು ಡ್ರಗ್ಸ್ ವಿಚಾರದಲ್ಲಿ ಕೋಡ್‍ವರ್ಡ್‍ಗಳನ್ನು ಬಳಸುತ್ತಿದ್ದರು ಎಂದು ತಿಳಿದು ಬಂದಿದೆ.

    ಡ್ರಗ್ ಮಾಫಿಯಾ ವಿಚಾರವಾಗಿ ಇಂದು ನಟಿ ರಾಗಿಣಿಯವರನ್ನು ಸಿಸಿಬಿ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಇಂದು ಬೆಳಗ್ಗೆ ರಾಗಿಣಿ ಮನೆ ಮೇಲೆ ದಿಢೀರ್ ದಾಳಿ ಮಾಡಿದ ಅಧಿಕಾರಿಗಳು ಅವರ ಮೊಬೈಲ್ ಫೋನ್, ಲ್ಯಾಪ್‍ಟಾಪ್ ಮತ್ತು ಕಂಪ್ಯೂಟರ್‍ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದರಲ್ಲಿ ಕೆಲ ಮಹತ್ವದ ಸಾಕ್ಷಿಗಳು ಸಿಕ್ಕಿವೆ ಎನ್ನಲಾಗಿದೆ.

    ಇದರಲ್ಲಿ ರಾಗಿಣಿ ಮತ್ತು ಅವರ ಅಪ್ತ ರವಿಶಂಕರ್ ಕೋಡ್‍ವರ್ಡ್ ಉಪಯೋಗಿಸಿಕೊಂಡು ಡ್ರಗ್ ವಿಚಾರದ ಬಗ್ಗೆ ಚಾಟ್ ಮಾಡುತ್ತಿದ್ದರು ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಚಾಟ್ ವೇಳೆ ತಮ್‍ಸಪ್ ಸಿಂಬಲ್ ಸೆಂಡ್ ಮಾಡಿದ್ರೆ ಇವತ್ತು ಡ್ರಗ್ ಬೇಕು ಎಂದು, ಸ್ಟಾರ್ ಇಮೋಜಿ ಕಳುಹಿಸಿದರೆ ಫ್ಲಾಟ್‍ಗೆ ಬರಬೇಕು ಎಂದು ಅರ್ಥ. ಏರೋಪ್ಲೇನ್ ಸಿಂಬಲ್ ಕಳುಹಿಸಿದರೆ ಊರಿಂದ ಹೊರಗಡೆ ಹೋಗುವುದು ಎಂಬಂತೆ ಕೋಡ್‍ವರ್ಡ್ ಸೆಟ್ ಮಾಡಿಕೊಂಡಿದ್ದಾರೆ.

    ಅಂತಯೇ ರವಿಶಂಕರ್ 3 ಚಿಕನ್ ಪೀಸ್, 1 ಕಾಲಿ ಫ್ಲವರ್ ಕಳುಹಿಸಿದರೆ ಕೊಕೈನ್ ಎಂಡಿಎಂಎ, ಎಲ್‍ಎಸ್‍ಡಿ ರೆಡಿ ಇದೆ ಎಂಬ ಅರ್ಥವನ್ನು ಸೂಚಿಸುತ್ತದೆ ಎಂಬುದು ತನಿಖೆ ವೇಳೆ ಗೊತ್ತಾಗಿದೆ. ಈ ರೀತಿಯ ಚಾಟ್‍ಗಳು ಪೊಲೀಸರು ವಶಕ್ಕೆ ಪಡೆದಿರುವ ರವಿಶಂಕರ್ ಮತ್ತು ರಾಗಿಣಿ ಮೊಬೈಲ್‍ನಲ್ಲಿ ಸಿಕ್ಕಿವೆ. ಜೊತೆಗೆ ಇದೇ ರೀತಿಯ ಕೋಡ್‍ವರ್ಡ್‍ಗಳನ್ನು ಬಳಸುತ್ತಿದ್ದರು ಎಂದು ತನಿಖೆ ವೇಳೆ ಬೆಳಕಿಗೆ ಬಂದಿದೆ.

  • ನಟಿ ರಾಗಿಣಿ ಸಿಸಿಬಿ ಪೊಲೀಸರ ವಶಕ್ಕೆ

    ನಟಿ ರಾಗಿಣಿ ಸಿಸಿಬಿ ಪೊಲೀಸರ ವಶಕ್ಕೆ

    ಬೆಂಗಳೂರು: ಡ್ರಗ್ಸ್ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿಯನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    ಇಂದು ಬೆಳ್ಳಂಬೆಳಗ್ಗೆ ಸಿಸಿಬಿ ಪೊಲೀಸರು ಯಲಹಂಕದಲ್ಲಿರುವ ನಟಿ ರಾಗಿಣಿಯ ಫ್ಲ್ಯಾಟ್ ಮೇಲೆ ದಾಳಿ ಮಾಡಿದ್ದಾರೆ. ಇದೀಗ ಸತತ ಮೂರು ಗಂಟೆಯ ಶೋಧ ಕಾರ್ಯದ ನಂತರ ಸಿಸಿಬಿ ಪೊಲೀಸರು ನಟಿ ರಾಗಿಣಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಒಂದೇ ಅಪಾರ್ಟ್‌ಮೆಂಟ್‌ನಲ್ಲಿ 2 ಫ್ಲ್ಯಾಟ್ ಇದ್ರೂ ಗೌಪ್ಯವಾಗಿಟ್ಟಿದ್ದ ನಟಿ

    ದಾಖಲೆ ಸಮೇತ ಸಿಸಿಬಿ ಕಚೇರಿಗೆ ನಟಿ ರಾಗಿಣಿಯನ್ನು ಕರೆದುಕೊಂಡು ಹೋಗಲಿದ್ದಾರೆ. ಯಲಹಂಕದ ಮನೆಯಿಂದ ಚಾಮಾರಾಜಪೇಟೆ ಕಚೇರಿಗೆ ಕರೆದುಕೊಂಡು ಹೋಗಲಿದ್ದೇವೆ ಎಂದು ಡಿಸಿಪಿ ರವಿಕುಮಾರ್ ಅಧಿಕೃತ ಮಾಹಿತಿ ನೀಡಿದ್ದಾರೆ.

    ದಾಳಿಯ ವೇಳೆ ಯಾವುದೇ ಡ್ರಗ್ ಪತ್ತೆಯಾಗಿಲ್ಲ. ಇದೇ ವೇಳೆ ರಾಗಿಣಿಯ ಇನ್ನೋವಾ ಕಾರಿನ ಪರಿಶೀಲನೆ ನಡೆಸಿದ್ದಾರೆ. ಆಗ ಕಾರಿನಲ್ಲಿ ಮದ್ಯದ ಬಾಟಲುಗಳು ಪತ್ತೆಯಾಗಿವೆ. ಬಹುತೇಕ ರಾಗಿಣಿ ಮನೆಯ ಸರ್ಚ್ ಮುಕ್ತಾಯವಾಗಿದ್ದು, ಮಹತ್ವದ ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಲ್ಲದೇ ನಟಿ ರಾಗಿಣಿಯ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.