Tag: CCB police

  • ಸಾಹಿತಿಗಳಿಗೆ ಕೊಲೆ ಬೆದರಿಕೆ ಪ್ರಕರಣಕ್ಕೆ ಟ್ವಿಸ್ಟ್‌ – ಪತ್ರ ಬರೆದಿದ್ದು ಓರ್ವನೇ ವ್ಯಕ್ತಿ

    ಸಾಹಿತಿಗಳಿಗೆ ಕೊಲೆ ಬೆದರಿಕೆ ಪ್ರಕರಣಕ್ಕೆ ಟ್ವಿಸ್ಟ್‌ – ಪತ್ರ ಬರೆದಿದ್ದು ಓರ್ವನೇ ವ್ಯಕ್ತಿ

    ಬೆಂಗಳೂರು: ಪ್ರಗತಿಪರ ಸಾಹಿತಿಗಳನ್ನು ಹತ್ಯೆ ಮಾಡುವುದಾಗಿ ಪತ್ರ ಬರೆದಿದ್ದ ಪ್ರಕರಣಕ್ಕೆ ಟ್ವಿಸ್ಟ್‌ ಸಿಕ್ಕಿದೆ. 7 ಮಂದಿ ಸಾಹಿತಿಗಳಿಗೂ ಒಬ್ಬನೇ ಆರೋಪಿ ಪತ್ರ ಬರೆದ ವಿಚಾರ ಸಿಸಿಬಿ ಪೊಲೀಸರ (CCB Police) ತನಿಖೆಯಿಂದ ಬೆಳಕಿಗೆ ಬಂದಿದೆ.

    ಒಂದೇ ಒಂದು ಕೈಬರಹದಿಂದ ಕೊಲೆ ಬೆದರಿಕೆ ಬಂದಿದೆ ಎನ್ನುವುದು ವಿಧಿ ವಿಜ್ಞಾನ ಪ್ರಯೋಗಾಲಯದ (FSL) ಪರೀಕ್ಷೆಯಿಂದ ದೃಢಪಟ್ಟಿದೆ. ದಾವಣಗೆರೆ ಮೂಲದಿಂದ ಪತ್ರ ಬಂದಿರುವುದು ಖಚಿತವಾಗಿದ್ದು, ಬೇರೆ ಬೇರೆ ತಾಲೂಕು, ಜಿಲ್ಲೆಗಳಿಗೆ ಹೋಗಿ ಪೋಸ್ಟ್‌ ಮಾಡಲಾಗಿದೆ. ಇದನ್ನೂ ಓದಿ: ತನಗಿಂತ 2 ವರ್ಷ ಕಿರಿಯವನನ್ನ ಪ್ರೀತಿಸಿ ಮದ್ವೆಯಾಗಿದ್ದ ವಿವಾಹಿತೆ ಆತ್ಮಹತ್ಯೆ

    ಪ್ರೊ. ಕೆ. ಮರುಳಸಿದ್ದಪ್ಪ, ಪ್ರೊ. ಎಸ್.ಜಿ. ಸಿದ್ಧರಾಮಯ್ಯ, ಬಂಜಗೆರೆ ಜಯಪ್ರಕಾಶ್, ವಸುಂಧರಾ ಭೂಪತಿ, ಕುಂ.ವೀರಭದ್ರಪ್ಪ ಸೇರಿದಂತೆ 15ಕ್ಕೂ ಹೆಚ್ಚು ಲೇಖಕರಿಗೆ ಒಂದು ವರ್ಷದಿಂದ ಬೆದರಿಕೆ ಪತ್ರಗಳು ಬರುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಸ್ವೀಕರಿಸಿದೆ.

    ಈ ಬಗ್ಗೆ ಹಿಂದೆ ಪ್ರತಿಕ್ರಿಯಿಸಿದ್ದ ಗೃಹ ಸಚಿವ ಪರಮೇಶ್ವರ್‌, ಬೆದರಿಕೆಗೆ ಒಳಗಾಗಿರುವ ಸಾಹಿತಿಗಳಿಗೆ ಸೂಕ್ತ ಪೊಲೀಸ್ ಭದ್ರತೆ ನೀಡಲು ಕಮಿಷನರ್, ಡಿಜಿಪಿ ಅವರಿಗೆ ಸೂಚನೆ ಕೊಡಲಾಗಿದೆ ಎಂದು ತಿಳಿಸಿದ್ದರು.

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಂಗಳೂರಿನಲ್ಲಿ ಇಬ್ಬರು ಕುಖ್ಯಾತ ಡ್ರಗ್ ಪೆಡ್ಲರ್‌ಗಳ ಬಂಧನ

    ಮಂಗಳೂರಿನಲ್ಲಿ ಇಬ್ಬರು ಕುಖ್ಯಾತ ಡ್ರಗ್ ಪೆಡ್ಲರ್‌ಗಳ ಬಂಧನ

    ಮಂಗಳೂರು: ಸಿಸಿಬಿ ಪೊಲೀಸರು (CCB Police) ಕಾರ್ಯಾಚರಣೆ ನಡೆಸಿ ಇಬ್ಬರು ಕುಖ್ಯಾತ ಡ್ರಗ್ಸ್ ಪೆಡ್ಲರ್ ಗಳನ್ನು ಇಂದು ಬಂಧಿಸಿದ್ದಾರೆ.

    ಸುರತ್ಕಲ್ (Surathkal)  ಸಮೀಪದ ಕಾಟಿಪಳ್ಳ ನಿವಾಸಿ ಶಾಕೀಬ್ ಅಲಿಯಾಸ್ ಶಬ್ಬು ಹಾಗೂ ಚೊಕ್ಕಬೆಟ್ಟು ನಿವಾಸಿ ನಿಸಾರ್ ಹುಸೈನ್ ಅಲಿಯಾಸ್ ನಿಚ್ಚು ಎಂಬ ಇಬ್ಬರು ಕುಖ್ಯಾತ ಪೆಡ್ಲರ್ ಗಳನ್ನ ಸುರತ್ಕಲ್ ನ ತಡಂಬೈಲ್ ಬೀಚ್ ಬಳಿ ಕಾರಿನಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿರುವಾಗಲೇ ಬಂಧಿಸಲಾಗಿದೆ.

    ಆರೋಪಿಗಳಿಂದ ಎರಡು ಲಕ್ಷದ ಆರು ಸಾವಿರ ಮೌಲ್ಯದ ಎಂಡಿಎಂಎ ಮಾದಕ ವಸ್ತುವನ್ನು ವಶಕ್ಕೆ ಪಡೆಯಲಾಗಿದೆ. ಈ ಹಿಂದೆ ಇಬ್ಬರೂ ಆರೋಪಿಗಳು ಕೊಲೆಯತ್ನ, ಹಲ್ಲೆ, ಸರಗಳ್ಳತನ, ಮನೆಗಳ್ಳತನ ಹಾಗೂ ವಾಹನ ಕಳ್ಳತನ ಸೇರಿದಂತೆ ಹತ್ತಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ಇದೀಗ ಈ ಇಬ್ಬರೂ ಡ್ರಗ್ಸ್ ಮಾರಾಟದಲ್ಲಿ ತೊಡಗಿಕೊಂಡಿದ್ದಾರೆ. ಇದನ್ನೂ ಓದಿ: ಕಲ್ಯಾಣ ಕರ್ನಾಟಕದಿಂದ ಹಲವು ಪ್ರಮುಖ ನಾಯಕರು ಕಾಂಗ್ರೆಸ್‌ಗೆ ಬರಲಿದ್ದಾರೆ: ಬೋಸರಾಜು ಹೊಸ ಬಾಂಬ್

    ಸಿಸಿಬಿ ಪೊಲೀಸರು ಸುರತ್ಕಲ್ ಪೊಲೀಸರಿಗೆ ಹಸ್ತಾಂತರಿಸಿದ್ದು, ಪ್ರಕರಣ ದಾಖಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಶಂಕಿತ ಉಗ್ರ ಜುನೈದ್‍ಗೆ ಲುಕ್ ಔಟ್ ನೋಟಿಸ್ – ಸಿಸಿಬಿ ಸಿದ್ಧತೆ

    ಶಂಕಿತ ಉಗ್ರ ಜುನೈದ್‍ಗೆ ಲುಕ್ ಔಟ್ ನೋಟಿಸ್ – ಸಿಸಿಬಿ ಸಿದ್ಧತೆ

    ಬೆಂಗಳೂರು: ಶಂಕಿತ ಉಗ್ರರ ಮಾಸ್ಟರ್ ಮೈಂಡ್ ಜುನೈದ್‍ನನ್ನು ಪತ್ತೆಹಚ್ಚಲು ಇಂಟರ್‌ಪೋಲ್‌ ಮೂಲಕ ಲುಕ್ ಔಟ್ ನೋಟಿಸ್‍ಗೆ (Look Out Circular) ಸಿಸಿಬಿ ಪೊಲೀಸರು (CCB Police) ತಯಾರಿ ನಡೆಸಿದ್ದಾರೆ. ಆರೋಪಿ ವಿದೇಶಕ್ಕೆ ತೆರಳಿರುವ ಶಂಕೆ ಇದ್ದು ಆತನನ್ನು ಬಂಧಿಸಲು ಸೂಕ್ತ ಕ್ರಮಕ್ಕೆ ಪೊಲೀಸರು ಈಗ ಮುಂದಾಗಿದ್ದಾರೆ.

    ಅಪರಾಧ ಕ್ರತ್ಯಗಳಲ್ಲಿ ತೊಡಗಿಕೊಂಡಿದ್ದ ಜುನೈದ್ ಕಳೆದ ಎರಡು ವರ್ಷಗಳ ಹಿಂದೆ ಜೈಲಿನಿಂದ ಹೊರಬಂದಿದ್ದ. ಬಳಿಕ ಜೈಲಿನಿಂದ ಹೊರ ಬಂದು ದುಬೈಗೆ ತೆರಳಿರುವ ಅನುಮಾನ ವ್ಯಕ್ತವಾಗಿದೆ. 2021ರಲ್ಲಿ ದುಬೈಗೆ ಪ್ರಯಾಣ ಮಾಡಿರುವ ಬಗ್ಗೆ ಸಿಸಿಬಿ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ. ಈ ಬಗ್ಗೆ ರಾಷ್ಟ್ರೀಯ ತನಿಖಾ ದಳಕ್ಕೆ (NIA) ಮಾಹಿತಿ ನೀಡಿರುವ ಸಿಸಿಬಿ ಅಧಿಕಾರಿಗಳು ಪರಿಶೀಲನೆ ನಡೆಸಿ ಶೀಘ್ರ ಲುಕ್ ಔಟ್ ನೋಟಿಸ್ ಜಾರಿಗೊಳಿಸಲು ಸಿದ್ಧತೆ ನಡೆಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಭಾರೀ ಸ್ಫೋಟಕ್ಕೆ ಸಂಚು – ಐವರು ಶಂಕಿತ ಉಗ್ರರು ಅರೆಸ್ಟ್‌

    ಸಿಸಿಬಿ ಪೊಲೀಸರು ಇತ್ತೀಚೆಗೆ ಬಂಧಿಸಿದ್ದ ಶಂಕಿತ ಉಗ್ರರಿಗೆ ಜುನೈದ್ ಹಣ ಸಹಾಯ ಮಾಡುತ್ತಿದ್ದ. ಅಲ್ಲದೇ ವಿಧ್ವಂಸಕ ಕೃತ್ಯಗಳಿಗೆ ಸಂಚು ರೂಪಿಸಿದ್ದ ಮಾಹಿತಿ ಇದೆ. ಇದೀಗ ಆರೋಪಿ ವಿದೇಶದಲ್ಲಿ ತಲೆಮರೆಸಿಕೊಂಡಿದ್ದರೂ ಆತನನ್ನು ಬಂಧಿಸಲು ಬೇಕಾದ ಎಲ್ಲಾ ಸಿದ್ಧತೆಗಳನ್ನು ಪೊಲೀಸರು ಮಾಡಿಕೊಂಡಿದ್ದಾರೆ. ಇದರಿಂದಾಗಿ ಪ್ರಮುಖ ಆರೋಪಿ ಶೀಘ್ರದಲ್ಲೇ ಪೊಲೀಸರ ಬಲೆಗೆ ಬೀಳುವ ಸಾಧ್ಯತೆ ಇದೆ.

    ಜುಲೈ 19 ರಂದು ಐವರು ಶಂಕಿತ ಉಗ್ರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಶಂಕಿತರಿಂದ ಅಪಾರ ಪ್ರಮಾಣದ ಸ್ಫೋಟಕ ಸಾಮಾಗ್ರಿ ಹಾಗೂ ಪಿಸ್ತೂಲ್‍ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಬೆಂಗಳೂರು ಸೇರಿದಂತೆ ಹಲವೆಡೆ ಆರೋಪಿಗಳು ಸ್ಫೋಟಕ್ಕೆ ಸಂಚು ರೂಪಿಸಿದ್ದರು ಎಂಬುದು ತನಿಖೆ ವೇಲೆ ಬೆಳಕಿಗೆ ಬಂದಿತ್ತು. ಇದನ್ನೂ ಓದಿ: 2 ದಿನದೊಳಗೆ ದೊಡ್ಡ ಮಟ್ಟದ ಸ್ಪೋಟಕ್ಕೆ ನಡೆದಿತ್ತು ಸಿದ್ಧತೆ!

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕರಾವಳಿ, ಮಧ್ಯ ಕರ್ನಾಟಕದಲ್ಲೂ ರಕ್ತಪಾತಕ್ಕೆ ಸ್ಕೆಚ್- ಕೋಮುಗಲಭೆ ಸೃಷ್ಟಿಗೆ ಶಂಕಿತರಿಂದ ಪಿತೂರಿ

    ಕರಾವಳಿ, ಮಧ್ಯ ಕರ್ನಾಟಕದಲ್ಲೂ ರಕ್ತಪಾತಕ್ಕೆ ಸ್ಕೆಚ್- ಕೋಮುಗಲಭೆ ಸೃಷ್ಟಿಗೆ ಶಂಕಿತರಿಂದ ಪಿತೂರಿ

    ಬೆಂಗಳೂರು: ಬಂಧಿತ ಶಂಕಿತ ಉಗ್ರರ (Suspected Terrorist Arrest in Bengaluru) ಪಾತಕಿ ಕೃತ್ಯಗಳ ಪ್ಲಾನ್‍ಗಳು ಬಗೆದಷ್ಟೂ ಬಯಲಾಗ್ತಿದೆ. ಶಂಕಿತ ಉಗ್ರರ ಟಾರ್ಗೆಟ್ ಬೆಂಗಳೂರು ಮಾತ್ರ ಅಲ್ಲ, ಇಡೀ ಕರ್ನಾಟಕದಲ್ಲೇ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದರು ಎಂಬ ಆಘಾತಕಾರಿ ವಿಚಾರವೊಂದು ಬೆಳಕಿಗೆ ಬಂದಿದೆ. ಕೋಮುಗಲಭೆ ಸೃಷ್ಟಿಸಿ ನರಮೇಧಕ್ಕೆ ಷಡ್ಯಂತ್ರ ರೂಪಿಸಿರುವುದು ಎಂಬಂತಹ ಒಂದೊಂದೇ ಸ್ಫೋಟಕ ಸತ್ಯಗಳು  ಕೇಂದ್ರ ಅಪರಾಧ ವಿಭಾಗದ ಪೊಲೀಸರು (CCB Police) ತನಿಖೆ ನಡೆಸಿದ ವೇಳೆ ಹೊರ ಬರುತ್ತಿರುವುದಾಗಿ ಮಾಹಿತಿ ಲಭಿಸಿದೆ.

    ಕೋಮುಗಲಭೆ ಸೃಷ್ಟಿಸಿ ರಕ್ತಪಾತಕ್ಕೆ ಸ್ಕೆಚ್: ಶಂಕಿತ ಉಗ್ರರು ರಾಜ್ಯಾದ್ಯಂತ ರಕ್ತಪಾತ, ನರಮೇಧ, ಪೈಶಾಚಿಕ ಕೃತ್ಯಕ್ಕೆ ಪಿತೂರಿ ಹೂಡಿದ್ದರು. ಕರಾವಳಿ, ಮಧ್ಯ ಕರ್ನಾಟಕದ ಮೇಲೂ ಶಂಕಿತ ಉಗ್ರರ ವಕ್ರದೃಷ್ಟಿ ಬಿದ್ದಿದೆ. ಕೋಮುಗಲಭೆ ನಡೆಯೋ ಸ್ಥಳಗಳನ್ನೇ ಶಂಕಿತರು ಹೆಚ್ಚು ಟಾರ್ಗೆಟ್ ಮಾಡಿದ್ದರು. ಬೆಂಗಳೂರು, ಮಂಗಳೂರು, ಶಿವಮೊಗ್ಗ, ಉಡುಪಿ, ಕಲಬುರಗಿ ಹಾಗೂ ಹುಬ್ಬಳಿಯಂತಹ ಕಡೆ ಟಾರ್ಗೆಟ್ ಮಾಡಿದ್ದರು. ಇದಕ್ಕಾಗಿ ಈ ಹಿಂದೆ ಎಲ್ಲೆಲ್ಲಿ ಕೋಮುಗಲಭೆ ನಡೆದಿದೆ ಅನ್ನೋ ಮಾಹಿತಿ ಸಂಗ್ರಹಿಸುತ್ತಿದ್ದರು. ಅಂತಹ ಜಾಗಗಳಲ್ಲಿ ಮತ್ತೆ ಗಲಭೆ ರೀತಿ ಸೀನ್ ರೀಕ್ರಿಯೇಟ್‍ಗೆ ಸಂಚು ರೂಪಿಸಿದ್ದರು. ಈ ಮೂಲಕ ಗಲಭೆ ಮಾಡಿ ಪ್ಲಾನ್ ಎಕ್ಸಿಕ್ಯೂಟ್ ಮಾಡಲು ಚಿಂತನೆ ನಡೆಸಿದ್ದರು. ಈ ರೀತಿ ಮಾಡಿದ್ರೆ ಡೌಟ್ ಬರಲ್ಲ, ದೇಶ ದ್ರೋಹ ಕೇಸ್ ಹಾಕಲ್ಲ ಅನ್ನೋ ಪ್ಲಾನ್ ಶಂಕಿತ ಉಗ್ರರದ್ದಾಗಿತ್ತು ಎಂಬ ಎಕ್ಸ್ ಕ್ಲೂಸೀವ್ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಉನ್ನತ ಮೂಲಗಳಿಂದ ಲಭಿಸಿದೆ.

    ಇನ್ನೂ ದೊಡ್ಡದಿದೆ ಉಗ್ರಜಾಲ: ಬೆಂಗಳೂರಲ್ಲಿ ಶಂಕಿತ ಉಗ್ರರ ಬಂಧನದ ಬೆನ್ನಲ್ಲೇ ಸ್ಫೋಟಕ ಅಂಶಗಳು ಒಂದೊಂದಾಗಿಯೇ ಬಯಲಾಗುತ್ತಿದ್ದು, ಉಗ್ರಜಾಲ ಇನ್ನೂ ದೊಡ್ಡದಿರುವ ಅನುಮಾನ ಎದ್ದಿದೆ. ಈ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ದಾವಣಗೆರೆ, ಚಿಕ್ಕಮಗಳೂರು ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಲ್ಲೂ ಶೋಧಕಾರ್ಯ ನಡೆಸುತ್ತಿದ್ದಾರೆ. ಬೇರೆ ಬೇರೆ ಜಿಲ್ಲೆಯಲ್ಲಿ ಬಂಧಿತ ಶಂಕಿತರ ಸಂಪರ್ಕದಲ್ಲಿರುವ ವ್ಯಕ್ತಿಗಳ ವಿಚಾರಣೆ ನಡೆಸುತ್ತಿದ್ದು, ಈವರೆಗೆ ಸುಮಾರು 50ಕ್ಕೂ ಹೆಚ್ಚು ಜನರನ್ನು ತನಿಖೆಗೆ ಒಳಪಡಿಸಲಾಗಿದೆ.

    ಬಂಧಿತರಿಂದ 12 ಮೊಬೈಲ್ ವಶ: ಬಂಧಿತ ಶಂಕಿತರಿಂದ ಸಿಸಿಬಿ ಪೊಲೀಸರು 12 ಮೊಬೈಲ್‍ಗಳನ್ನ ವಶಪಡೆದಿದ್ದಾರೆ. ಮೊಬೈಲ್‍ನಲ್ಲಿ ಯಾರೆಲ್ಲಾ ಸತತ ಕಾಂಟ್ಯಾಕ್ಟ್ ಇದ್ದರು ಅವರ ವಿಚಾರಣೆ ನಡೆಸಲಾಗುತ್ತಿದೆ. ಇನ್ಸ್ ಸ್ಟಾಗ್ರಾಂ, ವಾಟ್ಸಾಪ್ ಮೂಲಕ  ಕೂಡ ಶಂಕಿತರು ಹೆಚ್ಚು ಸಂಭಾಷಣೆ ನಡೆಸಿದ್ದು, ಕೆಲವು ಕೋಡ್ ವರ್ಡ್‍ಗಳು ಬಳಸಿ ಮಾತನಾಡಿರೋ ಮಾಹಿತಿ ಸಿಕ್ಕಿದೆ. ಈ ಬಗ್ಗೆಯೂ ಸಿಸಿಬಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬೆಂಗ್ಳೂರಿನಲ್ಲಿ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ – 24 ಯುವತಿಯರ ರಕ್ಷಣೆ, 9 ಮಂದಿ ಅರೆಸ್ಟ್

    ಬೆಂಗ್ಳೂರಿನಲ್ಲಿ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ – 24 ಯುವತಿಯರ ರಕ್ಷಣೆ, 9 ಮಂದಿ ಅರೆಸ್ಟ್

    ಬೆಂಗಳೂರು: ವೇಶ್ಯಾವಾಟಿಕೆ ಅಡ್ಡೆ ಮೇಲೆ ಸಿಸಿಬಿ ಪೊಲೀಸರು (CCB Police) ದಾಳಿ ನಡೆಸಿದ್ದಾರೆ. 24 ಯುವತಿಯರನ್ನು ರಕ್ಷಣೆ ಮಾಡಿದ್ದು, 9 ಮಂದಿಯನ್ನು ಬಂಧಿಸಿರುವ ಘಟನೆ ಶನಿವಾರ ನಡೆದಿದೆ.

    ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣಾ (Jnanabharathi Police Station) ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಪತ್ನಿಯೊಂದಿಗೆ ಜಗಳ – ಬೀದಿಗಳಲ್ಲಿ ಆಕೆಯ ನಂಬರ್‌ನೊಂದಿಗೆ ಅಶ್ಲೀಲ ಪೋಸ್ಟರ್ ಹಚ್ಚಿದ ಆಸಾಮಿ

    ಆರೋಪಿಗಳು (Accused) ಕೆಲಸ ಕೊಡಿಸುವ ನೆಪದಲ್ಲಿ ಬೇರೆ ಬೇರೆ ರಾಜ್ಯಗಳಿಂದ ಯುವತಿಯರನ್ನ ಕರೆತಂದು ಅಪಾರ್ಟ್ಮೆಂಟ್ ನಲ್ಲಿಟ್ಟು ವೇಶ್ಯಾವಾಟಿಕೆ ನಡೆಸುತ್ತಿದ್ದರು. ಇದನ್ನೂ ಓದಿ: ಮದ್ವೆಯಾಗಿ ಮುಚ್ಚಿಟ್ಟಿದ್ದರು – ಡೆಡ್ಲಿ ಮರ್ಡರ್ ತನಿಖೆ ವೇಳೆ ಸ್ಫೋಟಕ ರಹಸ್ಯ ಬಯಲು

    ಈ ಕುರಿತು ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನ ಬಂಧಿಸಿದ್ದಾರೆ. 
  • ಶಾಸಕರ ಮನೆ ಬೆನ್ನಲ್ಲೇ ಪ್ರತಿಷ್ಠಿತ ಉದ್ಯಮಿ ಮನೆಯಲ್ಲಿದ್ದ ಕೋಟಿ.. ಕೋಟಿ.. ಅಕ್ರಮ ಹಣ ಸೀಜ್

    ಶಾಸಕರ ಮನೆ ಬೆನ್ನಲ್ಲೇ ಪ್ರತಿಷ್ಠಿತ ಉದ್ಯಮಿ ಮನೆಯಲ್ಲಿದ್ದ ಕೋಟಿ.. ಕೋಟಿ.. ಅಕ್ರಮ ಹಣ ಸೀಜ್

    -ಹುಬ್ಬಳಿ- ಧಾರವಾಡದಲ್ಲಿ ಸಿಬಿಬಿ ಪೊಲೀಸರ ಮಿಂಚಿನ ಕಾರ್ಯಾಚರಣೆ
    -ಉದ್ಯಮಿ ರಮೇಶ್ ಬೊಣಗೇರಿ ಮನೆಯಲ್ಲಿ ಕೋಟಿ ಕೋಟಿ ಹಣ ಕಂಡು ಪೊಲೀಸರೇ ಶಾಕ್

    ಹುಬ್ಬಳಿ: ರಾಜ್ಯದಲ್ಲಿ ಬಿಜೆಪಿ (BJP) ಶಾಸಕ ವಿರೂಪಾಕ್ಷಪ್ಪನ ಮಗನ ಮನೆಯಲ್ಲಿ 8 ಕೋಟಿಗೂ ಹೆಚ್ಚು ಹಣ ಸಿಕ್ಕ ಬೆನ್ನಲ್ಲೇ, ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲೂ (Hubballi) ಇಂತಹದ್ದೇ ಪ್ರಕರಣ ಬೆಳಕಿಗೆ ಬಂದಿದೆ.

    ಖಚಿತ ಮಾಹಿತಿ ಮೇರೆಗೆ ಹುಬ್ಬಳಿ-ಧಾರವಾಡ ಸಿಸಿಬಿ ಪೊಲೀಸರು (CCB Police), ಪ್ರತಿಷ್ಠಿತ ಉದ್ಯಮಿ ರಮೇಶ್ ಬೊಣಗೇರಿಯ ಭವಾನಿ ನಗರದಲ್ಲಿರುವ ಮನೆಯ ಮೇಲೆ ದಾಳಿ ನಡೆಸಿದ್ದು, 3 ಕೋಟಿ ಹಣ ಪತ್ತೆಯಾಗಿದೆ. ಇದನ್ನೂ ಓದಿ: PublicTV Explainer: ಇರಾನ್‌ನಲ್ಲಿ ಹಿಜಬ್‌ ವಿರುದ್ಧದ ಹೋರಾಟದ ಹೊತ್ತಲ್ಲೇ ನೂರಾರು ಶಾಲಾ ವಿದ್ಯಾರ್ಥಿನಿಯರಿಗೆ ವಿಷವಿಕ್ಕಿದ ದುರುಳರು – ಏನಾಗ್ತಿದೆ ಅಲ್ಲಿ?

    ಇಲ್ಲಿಯವರೆಗೆ ಹಣದ ಆದಾಯದ ಮೂಲ ಮಾತ್ರ ಬಯಲಿಗೆ ಬಂದಿಲ್ಲ. ಉದ್ಯಮಿ ರಮೇಶ್ ರಸಗೊಬ್ಬರ ಮತ್ತು ಕ್ರಿಮಿನಾಶಕ ಮಾರಾಟ ವ್ಯಾಪಾರಿಯಾಗಿದ್ದಾನೆ. ಜೊತೆಗೆ ರಾಜ್ಯ ಸರ್ಕಾರದ (Government Of Karnataka) ಕೃಷಿ ಇಲಾಖೆಗೂ ಸಹ ಬೀಜ, ರಸಗೊಬ್ಬರ ಮತ್ತು ಕ್ರಿಮಿನಾಶಕ ಸರಬರಾಜು ಮಾಡುತ್ತಿದ್ದಾನೆ. ಶನಿವಾರ ದಾಳಿ ನಡೆಸಿದ ಸಿಸಿಬಿ ಪೊಲೀಸರು ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ 3 ಕೋಟಿ ರೂ.ಗಳನ್ನ ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಬ್ಲಿಂಕ್ ಸಿನಿಮಾದಲ್ಲಿ ಗಾಯಕಿ ಚೈತ್ರಾ ಆಚಾರ್: ದೇವಕಿ ಝಲಕ್ ರಿಲೀಸ್

    ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಅಶೋಕ್ ನಗರ ಪೊಲೀಸರು, ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಈಗಾಗಲೇ ಆದಾಯ ತೆರಿಗೆ ಅಧಿಕಾರಿಗಳು ಸಿಸಿಬಿ ಪೊಲೀಸರ ಜೊತೆಗೆ ಸೇರಿ ಹಣ ಮೂಲದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಒಂದು ವೇಳೆ ಹಣದ ಮೂಲ ಅಪರಾಧದ ಹಿನ್ನೆಲೆ ಹೊಂದಿದ್ದರೆ, ಉದ್ಯಮಿ ರಮೇಶ್ ಬಂಧನವಾಗುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

    ಲೋಕಾಯುಕ್ತ (Lokayukta) ದಾಳಿಯ ಬೆನ್ನಲ್ಲೇ ಹುಬ್ಬಳಿ-ಧಾರವಾಡ ಸಿಸಿಬಿ ಪೊಲೀಸರು ಈ ಮಹತ್ವದ ಪ್ರಕರಣ ಬಯಲಿಗೆಳೆದಿದ್ದಾರೆ. ಅಧಿಕಾರಿಗಳಿಗೆ ಪೊಲೀಸ್ ಆಯುಕ್ತ ರಮಣಗುಪ್ತಾ ಅಭಿನಂದನೆ ಸಲ್ಲಿಸಿ, 25 ಸಾವಿರ ನಗದು ಬಹುಮಾನ ಘೋಷಣೆ ಮಾಡಿದ್ದಾರೆ.

  • ಬೆಂಗಳೂರಿನಲ್ಲಿ ಬೃಹತ್ ನಕಲಿ ನೋಟು ಜಾಲ ಪತ್ತೆ – 1.30 ಕೋಟಿ ಜಪ್ತಿ

    ಬೆಂಗಳೂರಿನಲ್ಲಿ ಬೃಹತ್ ನಕಲಿ ನೋಟು ಜಾಲ ಪತ್ತೆ – 1.30 ಕೋಟಿ ಜಪ್ತಿ

    ಬೆಂಗಳೂರು: ನಗರದಲ್ಲಿ ಬೃಹತ್ ನಕಲಿ ನೋಟು ಜಾಲ (Fake Currency) ಪತ್ತೆಯಾಗಿದ್ದು, ಪೊಲೀಸರು (Police) 1.30 ಕೋಟಿ ಮೌಲ್ಯದ ನಕಲಿ ನೋಟುಗಳನ್ನು ಜಪ್ತಿ ಮಾಡಿದ್ದಾರೆ.

    ಸಿಸಿಬಿ (CCB) ಆರ್ಥಿಕ ಅಪರಾಧ ಪೊಲೀಸ್ ವಿಂಗ್ ಕಾರ್ಯಾಚರಣೆ ನಡೆಸಿ, ಖೋಟಾನೋಟು ಪ್ರಿಂಟ್ ಮಾಡಿ ಚಲಾವಣೆ ಮಾಡುತ್ತಿದ್ದ ತಮಿಳುನಾಡು ಮೂಲದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ನಕಲಿ ನೋಟುಗಳನ್ನು ಕೊಟ್ಟು ಅಸಲಿ ನೋಟುಗಳನ್ನು ಪಡೆಯಲು ಆರೋಪಿಗಳು ಬೆಂಗಳೂರಿಗೆ ಬಂದಿದ್ದರು. ತಿರುನಲ್ ವೇಲಿಯ ಪ್ರಮುಖ ಆರೋಪಿ ಕಣ್ಣಿ ಎಂಬಾತನ ಸೂಚನೆ ಮೇರೆಗೆ ಪಿಚ್ಚು ಮುತ್ತು ಮತ್ತು ತಂಡ ಬೆಂಗಳೂರಿಗೆ ಬಂದಿತ್ತು. ಈ ವೇಳೆ ಪೊಲೀಸರು ದಾಳಿ ನಡೆಸಿದ್ದಾರೆ.

    ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಖೋಟಾನೋಟು ಚಲಾವಣೆ ಮಾಡುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಪಿಚ್ಚು ಮುತ್ತು, ನಲ್ಲಕಣಿ, ಅಜಯ್ ಸಿಂಗ್, ಮಣಿಯನ್ ಎಂಬಾತನನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬೆಳ್ಳಂಬೆಳಗ್ಗೆ ಖಾಕಿ ಕಾರ್ಯಾಚರಣೆ – 86 ರೌಡಿಶೀಟರ್‌ಗಳ ಮನೆ ಮೇಲೆ ದಾಳಿ

    ಬೆಳ್ಳಂಬೆಳಗ್ಗೆ ಖಾಕಿ ಕಾರ್ಯಾಚರಣೆ – 86 ರೌಡಿಶೀಟರ್‌ಗಳ ಮನೆ ಮೇಲೆ ದಾಳಿ

    ಬೆಂಗಳೂರು: ಇಂದು ಬೆಳ್ಳಂಬೆಳಗ್ಗೆ ಕಾರ್ಯಾಚರಣೆ ನಡೆಸಿದ ಖಾಕಿ ಪಡೆ 86 ರೌಡಿಶೀಟರ್‌ಗಳ ಮನೆ ಮೇಲೆ ದಾಳಿ ನಡೆಸಿದ್ದು, 30 ರೌಡಿ ಶೀಟರ್‌ಗಳನ್ನ ಸಿಸಿಬಿ (CCB Police) ಕಚೇರಿಗೆ ಕರೆತಂದಿದ್ದಾರೆ.

    ಐವರು ಎಸಿಪಿ (ACP), 30 ಇನ್ಸ್ಪೆಕ್ಟರ್‌ಗಳ ನೇತೃತ್ವದ ತಂಡ ದಾಳಿ ನಡೆಸಿದೆ. ನಂತರ ಸಿಸಿಬಿ ಕಚೇರಿಗೆ ಕರೆತಂದು ಸಿಸಿಬಿ ಎಸಿಪಿ ಧರ್ಮೆಂದ್ರ ನೇತೃತ್ವದಲ್ಲಿ ಫುಲ್ ಕ್ಲಾಸ್ ಮಾಡಿದ್ದಾರೆ. ಅಪರಾಧ ಕೃತ್ಯಗಳಲ್ಲಿ ತೊಡಗುವುದು ಕಂಡುಬಂದರೆ ತಕ್ಕ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದೂ ವಾರ್ನಿಂಗ್ ನೀಡಲಾಗಿದೆ. ಇದನ್ನೂ ಓದಿ: ಸಾವು-ಬದುಕಿನ ನಡುವೆ ಶಂಕಿತ ಉಗ್ರ ಶಾರೀಕ್ ನರಳಾಟ- ಪೊಲೀಸರಲ್ಲಿ ಆತಂಕ

    ಸೈಕಲ್ ರವಿ, ವಿಲ್ಸನ್ ಗಾರ್ಡನ್ ನಾಗ ಸೇರಿ ಕುಖ್ಯಾತ ರೌಡಿ ಶೀಟರ್‌ಗಳ ಮನೆ ಮೇಲೆ ದಾಳಿ ನಡೆದಿದೆ. ಈ ವೇಳೆ 30 ರೌಡಿಗಳನ್ನ ವಶಕ್ಕೆ ಪಡೆದಿದ್ದು, ದಾಳಿ ವೇಳೆ ಸೈಕಲ್ ರವಿ, ವಿಲ್ಸನ್ ಗಾರ್ಡನ್ ನಾಗ ಸೇರಿದಂತೆ ಹಲವರು ಮನೆಯಿಂದ ಎಸ್ಕೇಪ್ ಆಗಿರುವುದು ಕಂಡುಬಂದಿದೆ. ಇದನ್ನೂ ಓದಿ: ಚಿಲುಮೆ ಬಳಿಕ ಧಾರವಾಡದಲ್ಲೂ ವೋಟರ್ ಸ್ಕ್ಯಾಮ್- ಮತದಾರರ ಕ್ಷೇತ್ರ ವರ್ಗಾವಣೆ ಆರೋಪ

    ದಾಳಿ ವೇಳೆ ವಿಲ್ಸನ್‌ಗಾರ್ಡನ್ (Wilson Garden) ನಾಗ ತಮಿಳುನಾಡಿನಲ್ಲಿ ಇರುವುದು ಬೆಳಕಿಗೆ ಬಂದಿದ್ದು, ಕೋತಿರಾಮ, ಆರ್.ಟಿ ನಗರ ವೆಂಕಟೇಶ, ಟಾಮಿ ಸೇರಿ 30 ಮಂದಿ ಸಿಕ್ಕಿಬಿದ್ದಿದ್ದಾರೆ. ವಿಜಯನಗರದ ರೌಡಿಶೀಟರ್ ರಾಘವೇಂದ್ರ ಪ್ರಸಾದ್ ಮನೆಯಲ್ಲಿ ಎರಡು ಲಾಂಗ್‌ಗಳು ಪತ್ತೆಯಾಗಿವೆ.

    Live Tv
    [brid partner=56869869 player=32851 video=960834 autoplay=true]

  • ಶುಶೃತಿ ಸಹಕಾರಿ ಬ್ಯಾಂಕ್‌ನಿಂದ ವಂಚನೆ ಪ್ರಕರಣ – ಬೆಂಗ್ಳೂರಿನ 14 ಕಡೆ CCB ದಾಳಿ

    ಶುಶೃತಿ ಸಹಕಾರಿ ಬ್ಯಾಂಕ್‌ನಿಂದ ವಂಚನೆ ಪ್ರಕರಣ – ಬೆಂಗ್ಳೂರಿನ 14 ಕಡೆ CCB ದಾಳಿ

    ಬೆಂಗಳೂರು: ಶುಶೃತಿ ಸೌಹಾರ್ದ ಸಹಕಾರ ಬ್ಯಾಂಕ್‌ನಿಂದ (ShuShruti Bank) ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರಿಂದ (CCB Police) ನಗರದ 14 ಕಡೆಗಳಲ್ಲಿ ದಾಳಿ ನಡೆದಿದೆ.

    ಐವರು ಎಸಿಪಿ (ACP), 14 ಇನ್ಸ್ಪೆಕ್ಟರ್ ಸೇರಿ 60ಕ್ಕೂ ಹೆಚ್ಚು ಪೊಲೀಸರ ತಂಡದಿಂದ ಬೆಂಗಳೂರಿನ (Bengaluru) ವಿಲ್ಸನ್ ಗಾರ್ಡನ್, ಪೀಣ್ಯ, ರಾಜಗೋಪಾಲನಗರ, ಚಿಕ್ಕಜಾಲ ಸೇರಿದಂತೆ ನಗರದ ಹಲವೆಡೆ ದಾಳಿ ನಡೆದಿದೆ. ಇದನ್ನೂ ಓದಿ: ಚಲಿಸುತ್ತಿದ್ದ ರೈಲಿನಲ್ಲಿ ಮಚ್ಚನ್ನು ಹಿಡಿದುಕೊಂಡು ಸಾಹಸ ಪ್ರದರ್ಶನ- ಮೂವರು ವಿದ್ಯಾರ್ಥಿಗಳ ಬಂಧನ

    ಹೂಡಿಕೆದಾರರಿಗೆ ವಾಪಸ್ಸು ಹಣ ನೀಡದೇ ವಂಚಿಸಿದ ಆರೋಪದ ಹಿನ್ನೆಲೆಯಲ್ಲಿ ನಗರದ ಹಲವೆಡೆ ಬ್ಯಾಂಕ್ ವಿರುದ್ಧ ಎಫ್‌ಐಆರ್ (FIR) ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಶುಶೃತಿ ಬ್ಯಾಂಕ್ ಅಧ್ಯಕ್ಷ ಶ್ರೀನಿವಾಸ ಮೂರ್ತಿಯನ್ನು ಬಂಧಿಸಲಾಗಿತ್ತು. ನಂತರ ಈ ಎಲ್ಲಾ ಕೇಸ್‌ಗಳನ್ನು ಸಿಸಿಬಿಗೆ (CCB) ವರ್ಗಾವಣೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಏಕಕಾಲಕ್ಕೆ ಬ್ಯಾಂಕ್‌ನ ಹಲವು ಶಾಖೆಗಳ ಮೇಲೆ ದಾಳಿ ನಡೆಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರ – ಶಿವನ ಭಕ್ತನಾಗಿದ್ದ ಗಾಂಜಾ ಆರೋಪಿ

    ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರ – ಶಿವನ ಭಕ್ತನಾಗಿದ್ದ ಗಾಂಜಾ ಆರೋಪಿ

    – ಇರಾನಿಗೆ ಮರಳಿದ್ರೆ ನನ್ನನ್ನು ಹತ್ಯೆ ಮಾಡ್ತಾರೆ
    – ಭಾರತದಲ್ಲಿ ಗಾಂಜಾದ ಬಗ್ಗೆ ವಿಪರೀತ ಅಧ್ಯಯನ
    – ತಂತ್ರಜ್ಞಾನದ ಸಹಾಯದಿಂದ ಮನೆಯಲ್ಲೇ ಗಾಂಜಾ ಬೆಳೆ

    ಬೆಂಗಳೂರು: ಈಗಲ್ಟನ್ ವಿಲ್ಲಾದಲ್ಲಿ ಗಾಂಜಾ ಬೆಳೆದು ಬಂಧನಕ್ಕೆ ಒಳಗಾದ ಪ್ರಮುಖ ಆರೋಪಿ ಜಾವೀದ್ ಶಿವನ ಪೂಜೆ ಮಾಡುವುದರ ಜೊತೆಗೆ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದ ವಿಚಾರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

    ರಾಮನಗರ ಸಮೀಪದ ಈಗಲ್ಟನ್ ರೆಸಾರ್ಟ್ ಆವರಣದಲ್ಲಿ ಹೈಡ್ರೋ ಗಾಂಜಾ ಬೆಳೆದಿದ್ದ ಈತನ ವಿಚಾರಣೆ ವೇಳೆ ಪೊಲೀಸರೇ ದಂಗಾಗಿದ್ದಾರೆ. ಜಾವೀದ್ ಇರಾನ್ ಮೂಲದ ಯುವಕನಾಗಿದ್ದ ಈತ ಹಿಂದೂ ಧರ್ಮದ ಮೇಲೆ ಬಲವಾದ ನಂಬಿಕೆ ಹೊಂದಿದ್ದ ವಿಚಾರ ಸಿಸಿಬಿ ಮೂಲಗಳಿಂದ ತಿಳಿದು ಬಂದಿದೆ. ಇದನ್ನೂ ಓದಿ: ಈಗಲ್ಟನ್ ವಿಲೇಜ್ ಮೇಲೆ ಸಿಸಿಬಿ ದಾಳಿ- ಇಬ್ಬರು ಇರಾನಿಗಳು ಸೇರಿ ನಾಲ್ವರು ಡ್ರಗ್ಸ್ ಪೆಡ್ಲರ್‌ಗಳು ಅರೆಸ್ಟ್

    ಜಾವದ್ ಇರಾನ್ ಮೂಲದ ಇಸ್ಲಾಂ ಯುವಕ ಆದರೆ ಆತ ನಂಬಿಕೆ ಇಟ್ಟಿದ್ದು ಮಾತ್ರ ಹಿಂದೂ ಧರ್ಮದ ಮೇಲೆ. ಮನೆಯಲ್ಲಿ ಶಿವನ ಪೂಜೆ, ಧ್ಯಾನ ಮಾಡುತ್ತಿದ್ದ ಆರೋಪಿ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದ ಎಂದು ತನಿಖೆಯಲ್ಲಿ ತಿಳಿದಿದುಬಂದಿದೆ. ಜಾವೀದ್ ರೋಸ್ಟಂಪೌರ್ ಎಂಬಿಎ ಪದವೀಧರನಾಗಿದ್ದು, 2010ರಲ್ಲಿ ಭಾರತಕ್ಕೆ ಬಂದಿದ್ದ ಈತ ಬಾಣಸವಾಡಿಯ ಖಾಸಗಿ ಕಾಲೇಜಿನಲ್ಲಿ ಎಂಬಿಎ ಪದವಿ ಪಡೆದಿದ್ದಾನೆ. ಭಾರತಕ್ಕೆ ಬಂದು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದರೂ ಈತ ಹೆಸರನ್ನು ಮಾತ್ರ ಬದಲಾಯಿಸಿರಲಿಲ್ಲ. ಭಯೋತ್ಪಾದನೆಯಿಂದ ಬೇಸತ್ತು ಇಸ್ಲಾಂ ಧರ್ಮವನ್ನು ನಾನು ತೊರೆದು ಹಿಂದೂ ಧರ್ಮ ಸ್ವೀಕರಿಸಿದ್ದೇನೆ ಎಂದು ತನಿಖೆಯ ವೇಳೆ ಹೇಳಿದ್ದಾನೆ.

    ಪೋಷಕರು ಇರಾನ್ ದೇಶದಲ್ಲಿದ್ದರೂ ಯಾಕೆ ಹೋಗಿಲ್ಲ ಎಂದು ಪ್ರಶ್ನಿಸಿದ್ದಕ್ಕೆ, ತಂದೆ, ತಾಯಿಗೆ ಇಷ್ಟವಿಲ್ಲದಿದ್ದರೂ ಹಿಂದೂ ಧರ್ಮಕ್ಕೆ ಮತಾಂತರವಾದೆ. ಮತಾಂತರವಾದ ಬಳಿಕ ಇರಾನಿಗೆ ಹೋದರೆ ಕೊಲ್ಲುತ್ತಾರೆಂಬ ಭಯದಿಂದಾಗಿ ಇಲ್ಲೇ ಉಳಿದುಕೊಂಡಿದ್ದೆ ಎಂದು ಹೇಳಿದ್ದಾನೆ. ಇದನ್ನೂ ಓದಿ: ಸುಳ್ಯದಲ್ಲಿ ಯುವತಿಯ ಅತ್ಯಾಚಾರಕ್ಕೆ ಯತ್ನ- ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು

    ಗಾಂಜಾ ಬೆಳೆದಿದ್ದು ಯಾಕೆ?
    ಸಿಜರ್ ಡಿಸಿಸ್ ಖಾಯಿಲೆ(ಮಾನಸಿಕ ಖಿನ್ನತೆ)ಯಿಂದ ಬಳಲುತ್ತಿದ್ದೇನೆ. ಇದಕ್ಕೆ ಔಷಧಿಗಾಗಿ ಆನ್‍ಲೈನ್‍ನಲ್ಲಿ ಹುಡುಕಾಟ ನಡೆಸುತ್ತಿದ್ದಾಗ ಗಾಂಜಾದಿಂದ ಇದಕ್ಕೆ ಪರಿಣಾಮಕಾರಿ ಔಷಧಿ ಎನ್ನುವುದು ಗೊತ್ತಾಯಿತು. ಬಳಿಕ ಅದಕ್ಕೆ ಗಾಂಜಾ ಸೇವನೆ ಆರಂಭಿಸಿದೆ ಎಂದು ಪೊಲೀಸರೊಂದಿಗೆ ತಿಳಿಸಿದ್ದಾನೆ.

    ನಾನು ಗಾಂಜಾ ಬಗ್ಗೆ ತಿಳಿದುಕೊಂಡ ಬಳಿಕ ಅಂದಿನಿಂದ ಗಾಂಜಾ ಬೆಳೆಯಲು ಮತ್ತು ಸೇವಿಸಲು ಆರಂಭ ಮಾಡಿದೆ. ಗಾಂಜಾ ಸೊಪ್ಪನ್ನು ಕೇವಲ ಸೇದುತ್ತಿರಲಿಲ್ಲ. ಅದನ್ನು ಬೇಯಿಸಿ ತಿನ್ನುತ್ತಿದ್ದೆ ಅದರಿಂದ ಮನಸ್ಸಿಗೆ ನೆಮ್ಮದಿ ಸಿಗತ್ತೆ ಎಂದು ಸಿಸಿಬಿ ಎದುರು ಹೇಳಿಕೆ ನೀಡಿದ್ದಾನೆ.

    ಈ ಹೈಡ್ರೋ ಗಾಂಜಾ ಉತ್ತಮ ಗುಣಮಟ್ಟದ್ದಾಗಿದ್ದು, ಹೀಗಾಗಿ ಇದು ತಿನ್ನಲು ಯೋಗ್ಯವಾಗಿದೆ ಎಂದಿದ್ದಾನೆ. ವಿದ್ಯಾವಂತನಾಗಿರುವ ಜಾವೀದ್ ಸಾಕ ಗಾಂಜಾ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿದ್ದಾನೆ. ಭಾರತದಲ್ಲಿ ಗಾಂಜಾಗೆ 11 ಸಾವಿರ ವರ್ಷದ ಇತಿಹಾಸವಿದೆ. ಇದು ಹಲವು ರೋಗಕ್ಕೆ ಔಷಧಿ ಎಂದು ಪೊಲೀಸರ ಮುಂದೆ ತನ್ನ ಅಧ್ಯಯನದ ಮಾಹಿತಿಯನ್ನು ಬಿಚ್ಚಿಟ್ಟಿದ್ದಾನೆ.

    ಗ್ರೋ ವಿಥ್ ಈಸಿ ವೆಬ್ ಸೈಟ್ ಮೂಲಕ ಅಧ್ಯಯನ ಮಾಡಿ, ಅಮೆಜಾನ್ ಮೂಲಕ ಮಾರಿಜುವಾನ ಪುಸ್ತಕ ಖರೀದಿಸಿ ಗಾಂಜಾ ಬೆಳೆಯೋದರ ಬಗ್ಗೆ ಅಧ್ಯಯನ ಮಾಡಿದ್ದ. ಡೈನಾಸೆನ್ ವೆನ್ ಸೈಟ್ ಮೂಲಕ ಯುರೋಪ್ ನಿಂದ ಗಾಂಜಾ ಬೀಜ ಖರೀದಿಸಿ ಅದನ್ನು ಫಿಶ್ ಟ್ಯಾಂಕ್ ನಲ್ಲಿಟ್ಟು ಬೆಳೆಯಲು ಪ್ರಾರಂಭ ಮಾಡಿದ್ದ.  ದನ್ನೂ ಓದಿ: ಕೌಟುಂಬಿಕ ಕಲಹಕ್ಕೆ ಒಂದೇ ಮನೆಯ ಮೂವರು ಹೆಣ್ಣುಮಕ್ಕಳ ಕೊಲೆ

    ತನ್ನ ಪ್ರಯೋಗ ಯಶಸ್ವಿಯಾದ ಬಳಿಕ ನಂತರ ದೊಡ್ಡ ಮಟ್ಟದಲ್ಲಿ ಗಾಂಜಾ ಬೆಳೆಯಲು ಪ್ಲ್ಯಾನ್ ಮಾಡಿ, ಮೊದಲು ಕಮ್ಮನಹಳ್ಳಿಯ ಅಪಾರ್ಟ್‍ಮೆಂಟ್ ನಲ್ಲಿ ವಾಸವಾಗಿದ್ದು ಬೆಳೆಸುತ್ತಿದ್ದ. ನಂತರ ಸಾಕಷ್ಟು ಸದ್ದು ಮಾಡಿದ್ದ ಸೆಲೆಬ್ರಿಟಿ ಡ್ರಗ್ಸ್ ಕೇಸ್ ಕಂಡು ಹೆದರಿದ್ದ ಜಾವೀದ್ ಜನ ಹೆಚ್ಚಿರುವ ಪ್ರದೇಶದಲ್ಲಿ ಬೆಳೆಯುವುದು ಕಷ್ಟ ಎಂದು ನಂತರ ಅಪಾರ್ಟ್ ಮೆಂಟ್ ನಿಂದ ಜಾಗ ಬದಲಾವಣೆ ಮಾಡಿ ಬಿಡದಿಯ ಈಗಲ್ಟನ್ ರೆಸಾರ್ಟ್ ವಿಲ್ಲಾದಲ್ಲಿ ವಾಸ್ತವ್ಯ ಹೂಡಿದ್ದ.

    ಆರ್ಮಿ ಆಫಿಸರ್ ಓರ್ವರಿಂದ ವಿಲ್ಲಾ ಬಾಡಿಗೆಗೆ ಪಡೆದಿದ್ದ ಜಾವೀದ್ ಪ್ರತಿ ತಿಂಗಳು 36 ಸಾವಿರ ಬಾಡಿಗೆ ನೀಡುತ್ತಿದ್ದ. ವಿಲ್ಲಾಗೆ ಯಾರು ಬರೋದಿಲ್ಲ ಎಂದುಕೊಂಡು ವಿಲ್ಲಾದಲ್ಲಿ ಹೈಡ್ರೋ ಗಾಂಜಾ ಬೆಳೆಯಲು ಪ್ರಾರಂಭ ಮಾಡಿದ್ದ. ಈತ ಬೆಳೆಯುತ್ತಿದ್ದ ಗಾಂಜಾ ದಲ್ಲಿ ಸಿಬಿಡಿ ಕೆಮಿಕಲ್ ಇರುತ್ತಿತ್ತು. ಸಿಬಿಡಿ ಕೆಮಿಕಲ್ ಸೇವಿಸಿದರೆ ಮತ್ತು ಬರುವ ಭಾವನೆ ನೀಡುತ್ತದೆ. ಮೆದುಳಿನ ಕಾರ್ಯ ಬದಲಿಸುವ ಕ್ಷಮತೆ ಈ ರಾಸಾಯನಿಕ ಹೊಂದಿದ್ದು, ಈ ರಾಸಾಯನಿಕ ಮೆದುಳಿಗೆ ತಲುಪಿದಾಗ ಮನಃಸ್ಥಿತಿ, ಅರಿವು, ನಡವಳಿಕೆ ಮತ್ತು ವಾಸ್ತವದ ಗ್ರಹಿಕೆಗಳಲ್ಲಿ ತಾತ್ಕಾಲಿಕ ಬದಲಾವಣೆ ಆಗಲಿದೆ ಎಂಬುದು ತಿಳಿದುಬಂದಿದೆ.

    ಹೈಡ್ರೋ ಗಾಂಜಾ ಬೆಳೆಯಲು ಹೆಚ್ಚು ಉಷ್ಣಾಂಶ ಮತ್ತು ಹೆಚ್ಚು ತಂಪು ವಾತಾವರಣ ಕೂಡ ಇರಬಾರದು ಅದೆಲ್ಲವನ್ನು ಅಧ್ಯಯನ ಮೂಲಕ ತಿಳಿದುಕೊಂಡಿದ್ದ. ಮನೆಯಲ್ಲಿ ಯುವಿ ಲೈಟ್ಸ್, ಎಲ್‍ಇಡಿ, ಲ್ಯಾಂಪ್ ಟೆಂಪರೇಚರ್, ರೆಗ್ಯೂಲೇಟರ್ ಬಳಸಿ ಮನೆಯಲ್ಲಿಯೇ ಹೈಡ್ರೋ ಗಾಂಜಾ ಉತ್ಪಾದನೆ ಮಾಡುತ್ತಿದ್ದ. ಇದನ್ನೂ ಓದಿ: ರೌಡಿಗಳಿಗೆ ಕಾನೂನಿನ ಭಯವಿಲ್ಲದೆ ಅಟ್ಟಹಾಸ ತೋರಿಸುತ್ತಿದ್ದಾರೆ: ಯು.ಟಿ.ಖಾದರ್