Tag: CCB police

  • ಸಾಹಿತಿಗಳಿಗೆ ಜೀವ ಬೆದರಿಕೆ ಪತ್ರ – ದಾವಣಗೆರೆ ಮೂಲದ ಹಿಂದೂ ಸಂಘಟನೆಯ ಸಂಚಾಲಕ ಅರೆಸ್ಟ್‌

    ಸಾಹಿತಿಗಳಿಗೆ ಜೀವ ಬೆದರಿಕೆ ಪತ್ರ – ದಾವಣಗೆರೆ ಮೂಲದ ಹಿಂದೂ ಸಂಘಟನೆಯ ಸಂಚಾಲಕ ಅರೆಸ್ಟ್‌

    ಬೆಂಗಳೂರು: ಬುದ್ದಿಜೀವಿ ಸಾಹಿತಿಗಳಿಗೆ ಅನಾಮಧೇಯ ಪತ್ರದ ಮೂಲಕ ಜೀವ ಬೆದರಿಕೆ (Threat Letter to Kannada Writers)  ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು (CCB Police) ದಾವಣಗೆರೆಯ ಮೂಲದ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.

    ದಾವಣಗೆರೆಯ ಹಿಂದೂ ಸಂಘಟನೆಯ ಸಂಚಾಲಕ ಶಿವಾಜಿರಾವ್ ಜಾಧವ್‌ (Shivaji Rao Jadhav) ಬಂಧನಕ್ಕೆ ಒಳಗಾದ ಆರೋಪಿ. 2 ವರ್ಷಗಳಿಂದ ಕೊಲೆ ಬೆದರಿಕೆ ಪತ್ರ ಬರೆಯುತ್ತಿದ್ದ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಸಿಸಿಬಿ ಎಸಿಪಿ ನವೀನ್ ಕುಲಕರ್ಣಿ ಮತ್ತು ತಂಡ ದಾವಣಗೆರೆಯಲ್ಲಿ (Davanagere) ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

     

    ಪತ್ರದಲ್ಲಿ ಏನಿತ್ತು?
    ನಿಮ್ಮನ್ನು ಯಾಕೆ ಕೊಲೆ ಮಾಡಬಾರದು? ನಿಮ್ಮನ್ನು ಯಾಕೆ ಗುಂಡಿಟ್ಟು ಕೊಲ್ಲಬಾರದು? ನೀವು ನಿಮ್ಮ ಕೊನೆ ದಿನಗಳನ್ನು ಎಣಿಸುತ್ತಿದ್ದೀರಿ ಎಂದು ಶಿವಾಜಿ ರಾವ್ ಪತ್ರ ಬರೆಯುತ್ತಿದ್ದ. ಪ್ರತಿ ಬೆದರಿಕೆ ಪತ್ರದಲ್ಲೂ ಒಂದೇ ರೀತಿಯ ಕೈ ಬರಹ ಇತ್ತು. ದಾವಣಗೆರೆಯಿಂದಲೇ ಈ ಪತ್ರಗಳು ಪೋಸ್ಟ್ ಆಗುತ್ತಿದ್ದವು.

    ಎರಡು ವರ್ಷಗಳಿಂದ ಬರುತ್ತಿದ್ದ ಅನಾಮಧೇಯ ಬೆದರಿಕೆ ಪತ್ರದ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿ ರಾಜ್ಯಾದ್ಯಂತ ಏಳು ಎಫ್‌ಐಆರ್ ದಾಖಲಾಗಿತ್ತು. ನಂತರ ಪ್ರಕರಣವನ್ನು ರಾಜ್ಯ ಸರ್ಕಾರ ಸಿಸಿಬಿಗೆ ವರ್ಗಾಯಿಸಿತ್ತು.

     
    ಒಂದೇ ಒಂದು ಕೈಬರಹದಿಂದ ಕೊಲೆ ಬೆದರಿಕೆ ಬಂದಿದೆ ಎನ್ನುವುದು ವಿಧಿ ವಿಜ್ಞಾನ ಪ್ರಯೋಗಾಲಯದ (FSL) ಪರೀಕ್ಷೆಯಿಂದ ದೃಢಪಟ್ಟಿತ್ತು. ತನಿಖೆಯಿಂದ ದಾವಣಗೆರೆ ಮೂಲದಿಂದ ಪತ್ರ ಬಂದಿದ್ದರೂ ಬೇರೆ ಬೇರೆ ತಾಲೂಕು, ಜಿಲ್ಲೆಗಳಿಗೆ ಹೋಗಿ ಪೋಸ್ಟ್‌ ಮಾಡಲಾಗಿತ್ತು. ಇದನ್ನೂ ಓದಿ: ಹೆತ್ತವರು ಬುದ್ಧಿವಾದ ಹೇಳಿದ್ದಕ್ಕೆ ಪದವಿ ವಿದ್ಯಾರ್ಥಿನಿ ಆತ್ಮಹತ್ಯೆ

    ಪ್ರೊ. ಕೆ. ಮರುಳಸಿದ್ದಪ್ಪ, ಪ್ರೊ. ಎಸ್.ಜಿ. ಸಿದ್ಧರಾಮಯ್ಯ, ಬಂಜಗೆರೆ ಜಯಪ್ರಕಾಶ್, ವಸುಂಧರಾ ಭೂಪತಿ, ಕುಂ.ವೀರಭದ್ರಪ್ಪ ಸೇರಿದಂತೆ 15ಕ್ಕೂ ಹೆಚ್ಚು ಲೇಖಕರಿಗೆ ಒಂದು ವರ್ಷದಿಂದ ಬೆದರಿಕೆ ಪತ್ರಗಳು ಬರುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಸ್ವೀಕರಿಸಿತ್ತು.

    ಈ ಬಗ್ಗೆ ಹಿಂದೆ ಪ್ರತಿಕ್ರಿಯಿಸಿದ್ದ ಗೃಹ ಸಚಿವ ಪರಮೇಶ್ವರ್‌, ಬೆದರಿಕೆಗೆ ಒಳಗಾಗಿರುವ ಸಾಹಿತಿಗಳಿಗೆ ಸೂಕ್ತ ಪೊಲೀಸ್ ಭದ್ರತೆ ನೀಡಲು ಕಮಿಷನರ್, ಡಿಜಿಪಿ ಅವರಿಗೆ ಸೂಚನೆ ಕೊಡಲಾಗಿದೆ ಎಂದು ತಿಳಿಸಿದ್ದರು.

     
    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • CCB ಅಧಿಕಾರಿಗಳ ಮುಂದೆ ಮೌನಾಚರಣೆ – ಚೈತ್ರಾಳ ಮುಂದಿರುವ ಆ 30 ಪ್ರಶ್ನೆಗಳೇನು?

    CCB ಅಧಿಕಾರಿಗಳ ಮುಂದೆ ಮೌನಾಚರಣೆ – ಚೈತ್ರಾಳ ಮುಂದಿರುವ ಆ 30 ಪ್ರಶ್ನೆಗಳೇನು?

    ಬೆಂಗಳೂರು: ಸಿಸಿಬಿ ಡ್ರಿಲ್ ತಪ್ಪಿಸಿಕೊಳ್ಳಲು ಬಾಯಲ್ಲಿ ನೊರೆ ಸೃಷ್ಟಿಸಿಕೊಂಡು ಮೂರ್ಛೆ ರೋಗದ ನಾಟಕವಾಡಿದ್ದ ವಂಚನೆ ಪ್ರಕರಣದ ಆರೋಪಿ ಚೈತ್ರಾ ಕುಂದಾಪುರ (Chaitra Kundapura) ಆಸ್ಪತ್ರೆ ಎಪಿಸೋಡ್‌ಗೆ ಬ್ರೇಕ್ ಬಿದ್ದಿದೆ. 3 ದಿನಗಳಿಂದ ವಿಕ್ಟೋರಿಯಾ ಆಸ್ಪತ್ರ‍್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಚೈತ್ರಾಳನ್ನ ಸೋಮವಾರ ಡಿಸ್ಚಾರ್ಜ್ ಮಾಡಲಾಗಿದೆ.

    ಆಸ್ಪೆçಯಿಂದ ಡಿಸ್ಚಾರ್ಜ್ ಆಗುತ್ತಿದ್ದಂತೆ ಪೊಲೀಸರು ಸಿಸಿಬಿ (CCB Police) ಕಚೇರಿಗೆ ಕರೆದೊಯ್ದಿದ್ದರು. ಇದೀಗ ಚೈತ್ರಾ ಆರೋಗ್ಯವಾಗಿದ್ದರು ಕೂಡ ತನಿಖಾಧಿಕಾರಿಗಳ ಮುಂದೆ ಮೌನಂ ಸಮ್ಮತ್ತಿ ಲಕ್ಷಣಂ ಎಂಬಂತೆ ಚೈತ್ರಾ ಮೌನ್ಯಕ್ಕೆ ಜಾರಿದ್ದಾಳೆ. ತನಿಖಾಧಿಕಾರಿಗಳ ಮುಂದೆ ಜಪ್ಪಯ್ಯ ಅಂದರೂ ಬಾಯ್ಬಿಡ್ತಿಲ್ಲ. ತನಿಖಾಧಿಕಾರಿಗಳ ಪ್ರಶ್ನೆಗೆ ಮೌನವೇ ಚೈತ್ರಾಳ ಉತ್ತರವಾಗಿದ್ದು, ಸುಸ್ತಾಗಿರುವಂತೆ ನಾಟಕವಾಡಲು ಶುರು ಮಾಡಿಕೊಂಡಿದ್ದಾಳೆ ಎಂದು ಅಧಿಕಾರಿ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಚೈತ್ರಾ ಕುಂದಾಪುರ ಮೇಲೆ ಮತ್ತೊಂದು FIR – ಸನಾತನ ಧರ್ಮ ಬಟ್ಟೆ ಮಳಿಗೆ ಪ್ರಕರಣದಲ್ಲೂ ವಂಚನೆ

    ಚೈತ್ರಾ ಮೌನಕ್ಕೆ ಜಾರಿರೋದ್ರಿಂದ ಉತ್ತರಿಸುವಂತೆ ಪ್ರಶ್ನಾವಳಿಗಳನ್ನ ಪಟ್ಟ ಮಾಡಿ ಸಿಸಿಬಿ ಕೊಟ್ಟಿದೆ. ರಿಕವರಿ ಮಾಡಿದ ಹಣ ಹೊರತುಪಡಿಸಿ ಉಳಿದ ಹಣದ ಎಲ್ಲಿ? ಸ್ವಾಮೀಜಿಗೆ ಎಷ್ಟು ಹಣ ಕೊಟ್ಟಿದ್ದಿರಿ? ಹೀಗೆ 30ಕ್ಕೂ ಹೆಚ್ಚು ಪ್ರಶ್ನಾವಳಿಗಳನ್ನ ಮಾಡಿ ಚೈತ್ರಾಗೆ ಉತ್ತರಿಸುವಂತೆ ಸೂಚಿಸಲಾಗಿದೆ. ಪ್ರಶ್ನಾವಳಿಗೂ ಸರಿಯಾಗಿ ಉತ್ತರ ಕೊಡಲು ನಿರಾಕರಿಸಿದ್ರೆ ಉಳಿದ ಆರೋಪಿಗಳ ಸಮ್ಮುಖದಲ್ಲಿ ವಿಚಾರಣೆ ಮಾಡಲು ಸಿಸಿಬಿ ತಯಾರಿ ಮಾಡಿಕೊಂಡಿದೆ. ಇದನ್ನೂ ಓದಿ: ಚೈತ್ರಾ ಕುಂದಾಪುರಗೆ ಪಿಟ್ಸ್ ಬಂದಿಲ್ಲ, ನೊರೆ ಅವರೇ ಮಾಡಿಕೊಂಡಿರೋದು: ಡಾ.ದಿವ್ಯಪ್ರಕಾಶ್

    ನಿನ್ನೆಯಷ್ಟೇ PMSSY ಆಸ್ಪತ್ರೆಯ ಸ್ಪೆಷಲ್ ಆಫೀಸರ್ ದಿವ್ಯ ಪ್ರಕಾಶ್ ಮಾತನಾಡಿ, ಎಲ್ಲ ತಪಾಸಣೆಯಲ್ಲೂ ನಾರ್ಮಲ್ ಇದೆ. ಇಸಿಜಿ ಕೂಡ ನಾರ್ಮಲ್ ಇದೆ. ನ್ಯೂರಾಲಾಜಿಸ್ಟ್, ಮನೋ ವೈದ್ಯರು ತಪಾಸಣೆ ಮಾಡಿದ್ದಾರೆ. ಎಲ್ಲರೂ ಕೂಡ ಸಮಸ್ಯೆ ಇಲ್ಲ. ಪಿಟ್ಸ್ ಬಗ್ಗೆ ಏನೂ ಕಂಡು ಬಂದಿಲ್ಲ, ನೊರೆಯನ್ನು ಅವರೇ ಸೃಷ್ಟಿ ಮಾಡಿಕೊಂಡಿದ್ದಾರೆ. ವೈದ್ಯರ ಸ್ಪಷ್ಟನೆ ಬಳಿಕ ಆಸ್ಪತ್ರೆ ಹಿಂಭಾಗದಿಂದ ಸಿಸಿಬಿ ಪೊಲೀಸರು ಚೈತ್ರಾಳನ್ನ ಸಿಸಿಬಿ ಕಚೇರಿಗೆ ಕರೆದೊಯ್ದಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 3 ದಿನಗಳ ಆಸ್ಪತ್ರೆ ನಾಟಕ ಬಂದ್ – ಆಸ್ಪತ್ರೆಯಿಂದ ಚೈತ್ರಾ ಕುಂದಾಪುರ ಡಿಸ್ಚಾರ್ಜ್‌

    3 ದಿನಗಳ ಆಸ್ಪತ್ರೆ ನಾಟಕ ಬಂದ್ – ಆಸ್ಪತ್ರೆಯಿಂದ ಚೈತ್ರಾ ಕುಂದಾಪುರ ಡಿಸ್ಚಾರ್ಜ್‌

    ಬೆಂಗಳೂರು: ವಿಚಾರಣೆ ಸಂದರ್ಭದಲ್ಲಿ ಪ್ರಜ್ಞೆ ತಪ್ಪಿ ಕುಸಿದು ಬಿದ್ದು, ಕಳೆದ ಮೂರು ದಿನಗಳಿಂದ ಆಸ್ಪತ್ರೆಗೆ ದಾಖಲಾಗಿದ್ದ ವಂಚನೆ ಪ್ರಕರಣದ ಪ್ರಮುಖ ಆರೋಪಿ ಚೈತ್ರಾ ಕುಂದಾಪುರಳನ್ನ (Chaitra Kundapura) ವಿಕ್ಟೋರಿಯಾ ಆಸ್ಪತ್ರೆಯಿಂದ (Victoria Hospital) ಡಿಸ್ಚಾರ್ಜ್‌ ಮಾಡಲಾಗಿದೆ.

    ಸತತ ವೈದ್ಯಕೀಯ ತಪಾಸಣೆ ನಂತರ ಎಲ್ಲಾ ವರದಿಗಳು ನಾರ್ಮಲ್‌ ಬಂದಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಮಾಡಿದ್ದು, ಅಲ್ಲಿಂದ ನೇರವಾಗಿ ಪೊಲೀಸರು ಸಿಸಿಬಿ (CCB Police) ಕಚೇರಿಗೆ ಕರೆತಂದಿದ್ದಾರೆ. ಚೈತ್ರಾಳ ತಲೆ ಹಾಗೂ ಮುಖಕ್ಕೆ ಮಾಸ್ಕ್‌ ಕಟ್ಟಿಸಿ ಆಸ್ಪತ್ರೆ ಹಿಂಬಾಗಿಲಿನಿಂದ ಪೊಲೀಸರು ಕರೆ ತಂದಿದ್ದಾರೆ. ಇದನ್ನೂ ಓದಿ: ಚೈತ್ರಾ ಕುಂದಾಪುರಗೆ ಪಿಟ್ಸ್ ಬಂದಿಲ್ಲ, ನೊರೆ ಅವರೇ ಮಾಡಿಕೊಂಡಿರೋದು: ಡಾ.ದಿವ್ಯಪ್ರಕಾಶ್

    ಇಂದಿನಿಂದಲೇ ವಿಚಾರಣೆ ನಡೆಸಲು ಎಲ್ಲಾ ಹಂತದ ಸಿದ್ಧತೆ ಮಾಡಿಕೊಂಡಿದ್ದಾರೆ. ಐದಾರು ದಿನಗಳ ಕಾಲ ಕಸ್ಟಡಿಯಲ್ಲಿ ವಿಚಾರಣೆ ನಡೆಸಿ, ನಂತರ ಸ್ಥಳ ಮಹಜರು ನಡೆಸಬೇಕು. ಬಳಿಕ ಉಳಿದ ಆರೋಪಿಗಳನ್ನೂ ಚೈತ್ರಾಳ ಮುಖಾಮುಖಿಯಾಗಿ ಕೂರಿಸಿ ವಿಚಾರಣೆ ನಡೆಸಲು ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಗಣೇಶ ಹಬ್ಬದಂದೇ ಇಸ್ರೋ ಗುಡ್‌ನ್ಯೂಸ್ – ಡೇಟಾ ಸಂಗ್ರಹಿಸಲು ಆರಂಭಿಸಿದ ಆದಿತ್ಯ L1

    ಉದ್ಯಮಿಗೆ ವಂಚನೆ ಎಸಗಿದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಚೈತ್ರಾ ಕುಂದಾಪುರಳನ್ನ ಸಿಸಿಬಿ ಪೊಲೀಸರು ಸೆಪ್ಟೆಂಬರ್ 15 ರಂದು ಬೆಳಗ್ಗೆ 8 ಗಂಟೆಯ ವೇಳೆಗೆ ಮಹಿಳಾ ಸಾಂತ್ವನ ಕೇಂದ್ರದಿಂದ ಸಿಸಿಬಿ ಕಚೇರಿಗೆ ವಿಚಾರಣೆಗೆ ಕರೆತಂದಿದ್ದರು. 45 ನಿಮಿಷದ ವಿಚಾರಣೆ ವೇಳೆ ಆಕೆ ಪ್ರಜ್ಞಾಹೀನ ಸ್ಥಿತಿಗೆ ಬಂದು ಕುಸಿದು ಬಿದ್ದಿದ್ದಳು. ತಕ್ಷಣವೇ ಆಕೆಯನ್ನ ವಿಕ್ಟೋರಿಯಾ ಟ್ರಾಮಾ ಕೇರ್ ಸೆಂಟರ್‌ಗೆ ದಾಖಲಿಸಲಾಗಿತ್ತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚೈತ್ರಾ ಕುಂದಾಪುರಗೆ ಪಿಟ್ಸ್ ಬಂದಿಲ್ಲ, ನೊರೆ ಅವರೇ ಮಾಡಿಕೊಂಡಿರೋದು: ಡಾ.ದಿವ್ಯಪ್ರಕಾಶ್

    ಚೈತ್ರಾ ಕುಂದಾಪುರಗೆ ಪಿಟ್ಸ್ ಬಂದಿಲ್ಲ, ನೊರೆ ಅವರೇ ಮಾಡಿಕೊಂಡಿರೋದು: ಡಾ.ದಿವ್ಯಪ್ರಕಾಶ್

    ಬೆಂಗಳೂರು: ಬಿಜೆಪಿ ಟಿಕೆಟ್ ಕೊಡಿಸುವ ವಿಚಾರದಲ್ಲಿ 5 ಕೋಟಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ಚೈತ್ರಾ ಕುಂದಾಪುರ (Chaitra Kundapura) ಆರೋಗ್ಯ ಚೆನ್ನಾಗಿದೆ ಎಂಬುದು ವೈದ್ಯಕೀಯ ತಪಾಸಣೆ ಬಳಿಕ ಸ್ಪಷ್ಟವಾಗಿದೆ.

    ಈ ಕುರಿತು ಮಾತನಾಡಿರುವ ವೈದ್ಯ ಡಾ.ದಿವ್ಯಪ್ರಕಾಶ್ (Dhivya Prakash), ಚೈತ್ರಾಳ ಆರೋಗ್ಯ ಎಲ್ಲಾ ತಪಾಸಣೆಯಲ್ಲೂ ನಾರ್ಮಲ್ ಇದೆ, ಇಸಿಜಿ ಕೂಡ ನಾರ್ಮಲ್ ಇದೆ. ನ್ಯೂರಾಲಾಜಿಸ್ಟ್, ಮನೋ ವೈದ್ಯರು ತಪಾಸಣೆ ಮಾಡಿದ್ದಾರೆ. ಎಲ್ಲೂ ಆರೋಗ್ಯ ಸಮಸ್ಯೆ ಕಂಡುಬಂದಿಲ್ಲ. ಇಂದೇ ಆಕೆಯನ್ನ ಡಿಸ್ಚಾರ್ಜ್ ಮಾಡುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸದ್ಯಕ್ಕೆ ಆಸ್ಪತ್ರೆಯಿಂದ ಚೈತ್ರಾ ಕುಂದಾಪುರ ಡಿಸ್ಚಾರ್ಜ್‌ ಇಲ್ಲ: ಬಾಲಾಜಿ ಪೈ

    ಚೈತ್ರಾಳ ಬಾಯಲ್ಲಿ ನೊರೆ ಬಂದ ವಿಚಾರಕ್ಕೆ ಪ್ರತಿಕ್ರಿಯಿಸಿ, ಅದು ಫಂಕ್ಷನಲ್ ಆಗಿ ಆಗಿರೋದು. ಅವರೇ ಅದನ್ನ ಮಾಡಿಕೊಂಡಿರೋದು. ಪಿಟ್ಸ್ ಏನೂ ಬಂದಿಲ್ಲ. ಬೆಳಗ್ಗೆ ಸಿಸಿಬಿ ಅಧಿಕಾರಿಗಳು ವಿಚಾರಿಸಿದ್ದಾರೆ, ಆರೋಗ್ಯ ಚೆನ್ನಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಚೈತ್ರಾ ಕುಂದಾಪುರ ವಂಚನೆ ಪ್ರಕರಣ- ಇದುವರೆಗೂ 3 ಕೋಟಿಯಷ್ಟು ಮೌಲ್ಯದ ನಗದು, ಚಿನ್ನ ಜಪ್ತಿ

    ಇದೇ ವೇಳೆ ಪಿಟ್ಸ್ ಇತ್ತ ಎಂಬ ವಿಚಾರಕ್ಕೆ ಉತ್ತರಿಸಿದ ವೈದ್ಯರು, ಪಿಟ್ಸ್ ಪತ್ತೆ ಮಾಡೋದಕ್ಕೆ ಎಂಆರ್‌ಐ ಸ್ಕ್ಯಾನಿಂಗ್ ಮಾಡಿದ್ದೀವಿ. ಇಇಜಿ ಸ್ಕ್ಯಾನಿಂಗ್ ಕೂಡ ಮಾಡಿದ್ದೇವೆ ಎಲ್ಲಾ ನಾರ್ಮಲ್ ಇದೆ. ಸದ್ಯಕ್ಕೆ ಪಿಟ್ಸ್ ಕಂಡು ಬಂದಿಲ್ಲ. ನ್ಯೂರಾಲಾಜಿಸ್ಟ್ ಕೆಲವು ಮಾತ್ರೆ ಕೊಟ್ಟಿದ್ದಾರೆ ಎಂದು ವಿವರಿಸಿದ್ದಾರೆ.

    ಉದ್ಯಮಿಗೆ ವಂಚನೆ ಎಸಗಿದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಚೈತ್ರಾ ಕುಂದಾಪುರಳನ್ನ ಸಿಸಿಬಿ ಪೊಲೀಸರು ಸೆಪ್ಟೆಂಬರ್ 15 ರಂದು ಬೆಳಗ್ಗೆ 8 ಗಂಟೆಯ ವೇಳೆಗೆ ಮಹಿಳಾ ಸಾಂತ್ವನ ಕೇಂದ್ರದಿಂದ ಸಿಸಿಬಿ ಕಚೇರಿಗೆ ವಿಚಾರಣೆಗೆ ಕರೆತಂದಿದ್ದರು. 45 ನಿಮಿಷದ ವಿಚಾರಣೆ ವೇಳೆ ಆಕೆ ಪ್ರಜ್ಞಾಹೀನ ಸ್ಥಿತಿಗೆ ಬಂದು ಕುಸಿದು ಬಿದ್ದಿದ್ದಳು. ತಕ್ಷಣವೇ ಆಕೆಯನ್ನ ವಿಕ್ಟೋರಿಯಾ ಟ್ರಾಮಾ ಕೇರ್ ಸೆಂಟರ್‌ಗೆ ದಾಖಳಿಸಲಾಗಿತ್ತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸೊಲ್ಲಾಪುರದಲ್ಲಿ ಚೈತ್ರಾ ಕಾರಿದ್ದು, ತಂದು ಇಟ್ಕೊಳಿ- ಕಿರಣ್‍ಗೆ ಕರೆ ಮಾಡಿದ್ದ ಶ್ರೀಕಾಂತ್

    ಸೊಲ್ಲಾಪುರದಲ್ಲಿ ಚೈತ್ರಾ ಕಾರಿದ್ದು, ತಂದು ಇಟ್ಕೊಳಿ- ಕಿರಣ್‍ಗೆ ಕರೆ ಮಾಡಿದ್ದ ಶ್ರೀಕಾಂತ್

    – ಕಿಯಾ ಕಾರು, ಸಿಸಿಬಿ ವಶಕ್ಕೆ
    – ಕಿರಣ್ ಯಾರು..?

    ಬಾಗಲಕೋಟೆ: ವಂಚಕಿ ಚೈತ್ರಾ ಕುಂದಾಪುರ ಡೀಲ್ ಪ್ರಕರಣವು (Chaitra Kundapura Deal Case) ದಿನಕ್ಕೊಂದು ತಿರುವು ಪಡೆಯುತ್ತಿದೆ. ಚೈತ್ರಾ ಪ್ರಕರಣ ಹೊರಬೀಳುತ್ತಿದ್ದಂತೆಯೇ ಆರೋಪಿ ಶ್ರೀಕಾಂತ್, ಕಿರಣ್‍ಗೆ (Kiran) ಕರೆ ಮಾಡಿದ್ದಾನೆ. ಕಾರು ಮಹಾರಾಷ್ಟ್ರದ ಸೊಲ್ಲಾಪುರದಲ್ಲಿದೆ. ಸೊಲ್ಲಾಪುರದ ಒಂದು ಬಾರ್ ಆ್ಯಂಡ್ ರೆಸ್ಟೊರೆಂಟ್ ಮುಂದೆ ಇದೆ. ಅದನ್ನು ತಂದು ನಿಮ್ಮ ಬಳಿ ಇಟ್ಕೊಳಿ ಎಂದು ಹೇಳಿರುವುದು ಇದೀಗ ಬಯಲಾಗಿದೆ.

    ಶ್ರೀಕಾಂತ್ ಹೇಳಿದಂತೆ ಕಿರಣ್ ಅವರು ಸೆಪ್ಟೆಂಬರ್ 9 ರಂದು ಸೊಲ್ಲಾಪುರಕ್ಕೆ ಹೋಗಿ ಕಿಯಾ ಕಾರೆನ್ಸ್ (Kia Carens) ತಂದು ತನ್ನ ಡ್ರೈವಿಂಗ್ ಸ್ಕೂಲ್‍ನಲ್ಲಿಟ್ಟುಕೊಂಡಿದ್ದರು. ಚೈತ್ರಾ ಕುಂದಾಪುರ, ಪಿಎ ಶ್ರೀಕಾಂತ್, ಕಿರಣ್ ಕರೆಯನ್ನು ಸಿಸಿಬಿ ಪೊಲೀಸರು ಟ್ರೇಸೌಟ್ ಮಾಡಿದ್ದಾರೆ. ಈ ಆಧಾರದ ಮೇಲೆ ಕಿರಣ್ ವಶಕ್ಕೆ ಪಡೆದು ಕಾರು ಜಪ್ತಿ ಮಾಡಿ ವಿಚಾರಣೆಗೆ ಒಳಪಡಿಸಿದ್ದಾರೆ. ಇದನ್ನೂ ಓದಿ: ಅಂದರ್‌ಗೂ ಮುನ್ನ ಬಚಾವ್ ಆಗಲು ಕಾರನ್ನೇ ಮುಚ್ಚಿಟ್ಟಿದ್ದ ಚೈತ್ರಾ ಕುಂದಾಪುರ!

    ಕಿರಣ್ ಯಾರು..?: 32 ವರ್ಷದ ಕಿರಣ್ ಗಣಪ್ಪಗೊಳ ಹಿಂದೂ ಕಾರ್ಯಕರ್ತ. ಇವರು 26 ವರ್ಷದಿಂದ ರನ್ನ ಡ್ರೈವಿಂಗ್ ಸ್ಕೂಲ್ ಇಟ್ಟುಕೊಂಡಿದ್ದಾರೆ. ಮೊದಲು ಕಿರಣ್ ತಂದೆ ಭೀಮಶಿ ಡ್ರೈವಿಂಗ್ ಸ್ಕೂಲ್ ನಡೆಸುತ್ತಿದ್ದರು. ಕಳೆದ ಹಲವಾರು ವರ್ಷಗಳಿಂದ ಮಗ ಕಿರಣ್ ಸ್ಕೂಲ್ ನೋಡಿಕೊಳ್ಳುತ್ತಿದ್ದಾರೆ. ಹಿಂದೂಪರ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ಕಾರಣ ಮೂರು ಬಾರಿ ಮುಧೋಳ ನಗರಕ್ಕೆ ಚೈತ್ರಾ ಕುಂದಾಪುರ ಅವರನ್ನು ಭಾಷಣಕ್ಕೆ ಕರೆಸಿದ್ದರು. ಈ ವೇಳೆ ಇಬ್ಬರ ಮಧ್ಯೆ ಪರಿಚಯ ಆಗಿತ್ತು.

    ಕಾರು ಪತ್ತೆ: ಸದ್ಯ ಕಿರಣ್ ಡ್ರೈವಿಂಗ್ ಸ್ಕೂಲ್‍ನಲ್ಲಿದ್ದ ಕಾರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕಿಯಾ ಕಾರು ಚೈತ್ರಾ ಬಾಲಕೃಷ್ಣ ಕುಂದಾಪುರ ಹೆಸರಲ್ಲಿದೆ. ಇದನ್ನು 2023 ರಲ್ಲಿ ಚೈತ್ರಾ ಖರೀದಿ ಮಾಡಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚೈತ್ರಾ ಗೆಳೆಯ ಶ್ರೀಕಾಂತ್‌ ವಿರುದ್ಧದ ಕೇಸ್‌ಗೆ ಮತ್ತೊಂದು ಸೆಕ್ಷನ್‌ ದಾಖಲು

    ಚೈತ್ರಾ ಗೆಳೆಯ ಶ್ರೀಕಾಂತ್‌ ವಿರುದ್ಧದ ಕೇಸ್‌ಗೆ ಮತ್ತೊಂದು ಸೆಕ್ಷನ್‌ ದಾಖಲು

    ಬೆಂಗಳೂರು: ಬಿಜೆಪಿ ಟಿಕೆಟ್‌ ನೀಡುವುದಾಗಿ ಹೇಳಿ ಉದ್ಯಮಿ ಗೋವಿಂದ ಬಾಬು ಪೂಜಾರಿಗೆ 5 ಕೋಟಿ ರೂ. ವಂಚನೆ ಎಸಗಿದ ಪ್ರಕರಣ ಸಂಬಂಧ ಚೈತ್ರಾ ಕುಂದಾಪುರ (Chaitra Kundapura) ಗೆಳೆಯ ಶ್ರೀಕಾಂತ್ ವಿರುದ್ಧ ಮತ್ತೊಂದು  ಸೆಕ್ಷನ್‌ ದಾಖಲು ಮಾಡಲಾಗಿದೆ.

    ಬಂಡೆಪಾಳ್ಯ ಠಾಣೆಯಲ್ಲಿ ಸಿಸಿಬಿ ಪೊಲೀಸರು ಐಪಿಸಿ ಸೆಕ್ಷನ್ 201 ಹೊಸದಾಗಿ ಸೇರ್ಪಡೆ ಮಾಡಿದ್ದಾರೆ. ಸಿಸಿಬಿ ತನಿಖೆ ವೇಳೆ ಚೈತ್ರಾ ಹಾಗೂ ಗೆಳೆಯ ಆರೋಪಿ ಶ್ರೀಕಾಂತ್ (Shrikanth) ಕಳ್ಳಾಟ ಬಯಲಾಗಿದ್ದು, ಶ್ರೀಕಾಂತ್ ಮೊಬೈಲ್ ಸಂಪೂರ್ಣ ನಾಶ ಮಾಡಲಾಗಿದೆ.  ಇದನ್ನೂ ಓದಿ: ಹಬ್ಬಕ್ಕೆ ಊರಿಗೆ ಹೊರಟ ಜನ- ಮೆಜೆಸ್ಟಿಕ್ ಸುತ್ತಮುತ್ತ ಭಾರೀ ಟ್ರಾಫಿಕ್ ಜಾಮ್

     

    ಆರೋಪಿಗಳ ಇಬ್ಬರ ಮೊಬೈಲ್ ಪೋನ್ ತಡಕಾಡಿದ ಸಿಸಿಬಿಗೆ ಮೊಬೈಲ್‌ನಲ್ಲಿರುವ ದತ್ತಾಂಶ ನಾಶವಾಗಿರುವ ವಿಚಾರ ಬೆಳಕಿಗೆ ಬಂದಿದೆ. ಹಾಗಾಗಿ ಆರೋಪಿಗಳ ವಿರುದ್ಧ ಸಾಕ್ಷಿ ನಾಶ ಆರೋಪದ ಮೇಲೆ ಮತ್ತೊಂದು ಸೆಕ್ಷನ್ ಸೇರಿಸಲಾಗಿದೆ.

    ವಂಚನೆ ಪ್ರಕರಣ ಸಂಬಂಧ ಎಫ್‌ಐಆರ್ ಆಗುತ್ತಿದ್ದಂತೆ ಶ್ರೀಕಾಂತ್ ಹಾಗೂ ಚೈತ್ರಾ ನಡುವೆ ನಡೆದಿರುವ ಸಂಭಾಷಣೆಗಳನ್ನು ನಾಶ ಮಾಡಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನನ್ನ ಮುಖ ನೋಡಿ ಯಾರ್ ದುಡ್ಡು ಕೊಡ್ತಾರೆ ಮೇಡಂ: ಚೈತ್ರಾ ಹೇಳಿದ್ದೇನು?

    ನನ್ನ ಮುಖ ನೋಡಿ ಯಾರ್ ದುಡ್ಡು ಕೊಡ್ತಾರೆ ಮೇಡಂ: ಚೈತ್ರಾ ಹೇಳಿದ್ದೇನು?

    ಬೆಂಗಳೂರು: ವಂಚನೆ ಪ್ರಕರಣದ (Fraud Case) ಎ1 ಆರೋಪಿ ಚೈತ್ರಾ ಕುಂದಾಪುರ (Chaithra Kundapura) ತನಿಖೆ ವೇಳೆ ಒಂದೊಂದೇ ವಿಚಾರವನ್ನು ಬಾಯ್ಬಿಡಲು ಶುರು ಮಾಡಿದ್ದಾಳೆ.

    ಆರೋಪಿ ಗಗನ್ ಹೇಳಿದಂತೆ ನಾನು ಮಾಡಿದ್ದೇನೆ. ಈ ವಿಚಾರದಲ್ಲಿ ನನಗೇನು ಗೊತ್ತಿಲ್ಲ ಎಂದು ಪೊಲೀಸರ (Police) ಮುಂದೆ ಹೇಳಿದ್ದಾಳೆ. ಈ ಹಿಂದೆ ಅರೆಸ್ಟ್ ಆದ ದಿನ, ನನ್ನ ಮುಖ ನೋಡಿ ಯಾರ್ ದುಡ್ಡು ಕೊಡ್ತಾರೆ ಮೇಡಂ. ಅದು ಐದು ಕೋಟಿ ರೂ. ಕೊಡ್ತಾರಾ? ಎಂದು ತನಿಖಾಧಿಕಾರಿ ಮುಂದೆ ಹೇಳಿದ್ದಾಳೆ ಎಂಬ ವಿಚಾರ ಸಿಸಿಬಿ ಮೂಲಗಳಿಂದ ತಿಳಿದು ಬಂದಿದೆ.

    ಇದನ್ನೂ ಓದಿ: ಚೈತ್ರಾ ಕುಂದಾಪುರ ಡೀಲ್‌ ಪ್ರಕರಣಕ್ಕೆ ಟ್ವಿಸ್ಟ್‌ – ಸಲೂನ್‌ ಮಾಲೀಕನಿಗೆ ಬೆದರಿಕೆ ಕರೆ

    ಚೈತ್ರಾಳನ್ನು ಮುಂದೆ ಕೂರಿಸಿ ಉಳಿದ ಆರೋಪಿಗಳಿಗೆ ಸಿಸಿಬಿ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ. ಈ ವೇಳೆ ಆಕೆ ವಿಚಾರಣೆ ನೋಡಿ ಒಂದೊಂದೆ ವಿಚಾರವನ್ನು ಬಾಯ್ಬಿಡಲು ಶುರು ಮಾಡಿದ್ದಾಳೆ. ನನಗೇನು ಗೊತ್ತಿಲ್ಲ ಮೇಡಂ, ಎಲ್ಲಾ ಗಗನ್ ಮಾಡಿರೋದು ಎಂದು ಅಧಿಕಾರಿಗಳ ಮುಂದೆ ಹೇಳಿದ್ದಾಳೆ. ಇನ್ನಷ್ಟು ವಿಚಾರಣೆ ಆದ ಮೇಲೆ ಪ್ರಕರಣದಲ್ಲಿ ಆಕೆಯ ಪಾತ್ರವೂ ಹೊರ ಬರುವ ಸಾಧ್ಯತೆ ಇದೆ. ಇದನ್ನೂ ಓದಿ: ಎಲ್ಲಾ ದೊಡ್ಡೋರ ಹೆಸರೆಲ್ಲ ಹೊರಗಡೆ ಬರುತ್ತೆ: ಚೈತ್ರಾ ಕುಂದಾಪುರ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚೈತ್ರಾ ಕುಂದಾಪುರ ಡೀಲ್‌ ಪ್ರಕರಣಕ್ಕೆ ಟ್ವಿಸ್ಟ್‌ – ಸಲೂನ್‌ ಮಾಲೀಕನಿಗೆ ಬೆದರಿಕೆ ಕರೆ

    ಚೈತ್ರಾ ಕುಂದಾಪುರ ಡೀಲ್‌ ಪ್ರಕರಣಕ್ಕೆ ಟ್ವಿಸ್ಟ್‌ – ಸಲೂನ್‌ ಮಾಲೀಕನಿಗೆ ಬೆದರಿಕೆ ಕರೆ

    ಚಿಕ್ಕಮಗಳೂರು: ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಬಿಜೆಪಿಯಿಂದ ಟಕೆಟ್‌ ಕೊಡಿಸುವುದಾಗಿ ನಂಬಿಸಿ ಚೈತ್ರಾ ಕುಂದಾಪುರ (Chaithra Kundapura) ಅಂಡ್‌ ಟೀಂ 5 ಕೋಟಿ ರೂ. ವಂಚನೆ ಎಸಗಿರುವ ಪ್ರಕರಣಕ್ಕೆ (Fraud Case) ಇದೀಗ ಟ್ವಿಸ್ಟ್‌ ಸಿಕ್ಕಿದೆ. ತನಿಖೆ ನಡೆದಷ್ಟು ಹೊಸ ಹೊಸ ವಿಷಯಗಳು ಬೆಳಕಿಗೆ ಬರುತ್ತಿವೆ.

    ಚೈತ್ರಾ ಕುಂದಾಪುರ ವಂಚನೆ ಪ್ರಕರಣ ತನಿಖೆ ಚುರುಕುಗೊಳ್ಳುತ್ತಿದ್ದಂತೆ ಕಡೂರಿನ ಸಲೂನ್ ಮಾಲೀಕ ರಾಮುಗೆ ಗಗನ್‌ ಮತ್ತು ಅವರ ಗುಂಪಿನಿಂದ ಬೆದರಿಕೆ ಕರೆ ಬಂದಿದೆ. ಸಲೂನ್‌ ಮಾಲೀಕ ಧನರಾಜ್ ಕಾಂಗ್ರೆಸ್ ಮುಖಂಡ ಎಂಬ ಸಂಗತಿಯೂ ಹೊರಬಂದಿದೆ. ಗೋವಿಂದಬಾಬು ಬಳಿ ತೆರಳುವ ಮುನ್ನ 5ನೇ ಆರೋಪಿ ಚನ್ನ ನಾಯ್ಕ್‌ಗೆ ಥೇಟ್ ಆರ್‌ಎಸ್‌ಎಸ್‌ ಮುಖಂಡನಂತೆ ಕೂದಲು ಶೈನಿಂಗ್ ಮಾಡಿ ಹೇರ್ ಕಟ್ ಮಾಡಿಸಿಕೊಂಡು ಹೋದ ಬಳಿಕ ಪ್ರಕರಣ ಹೊರ ಬರುತ್ತಿದ್ದಂತೆ ಸಲೂನ್ ಮಾಲೀಕ ರಾಮುಗೆ ಬೆದರಿಕೆ ಕರೆ ಬಂದಿದೆ. ಇದನ್ನೂ ಓದಿ: ಡೀಲ್‍ನಲ್ಲಿ ‘ವಿಶ್ವನಾಥ್‌ ಜೀʼ ಪಾತ್ರಧಾರಿ ಚನ್ನನಾಯ್ಕ್ ತನ್ನ ಪಾತ್ರದ ಬಗ್ಗೆ ವಿವರಿಸಿದ್ದು ಹೀಗೆ..

    ಮಾಧ್ಯಮಗಳ ಮುಂದೆ ತನಗೆ ತಿಳಿದ ಮಾಹಿತಿ ನೀಡಿದ್ದಕ್ಕೆ ಧನರಾಜ್ ಆಪ್ತ ನೂತನ್ ಸಲೂನ್ ಮಾಲೀಕನಿಗೆ ಧಮ್ಕಿ ಹಾಕಿದ್ದಾನೆ ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಆಡಿಯೋ ಸಹ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ʻನಿನ್ಯಾಕೆ ಮಾಧ್ಯಮ ಮುಂದೆ ಮಾತಾನಾಡಿದೆ, ನನಗೆ ಗೊತ್ತಿಲ್ಲ ಅಂತಾ ಹೇಳಬೇಕಿತ್ತು. ಅಂಗಡಿ ಹೇಗೆ ನಡೆಸುತ್ತೀಯಾ ನೋಡ್ತೀನಿ ಎಂದು ಧಮ್ಕಿ ಹಾಕಿದ್ದಾರೆ. ಇದನ್ನೂ ಓದಿ: ತೆರಿಗೆ ವಂಚನೆ, ತೆರಿಗೆ ಸೋರಿಕೆ, ತೆರಿಗೆ ಕಳ್ಳತನದ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಸಿಎಂ ಸೂಚನೆ

    ಇನ್ನು ಚೈತ್ರಾ ಕುಂದಾಪುರಗೆ 2018ರಿಂದಲೇ ಕಡೂರಿನ ಲಿಂಕ್ ಇತ್ತು ಅನ್ನೋ ಮಾಹಿತಿ ಕೂಡ ಲಭ್ಯವಾಗಿದೆ. 2018ರಲ್ಲಿ ಚೈತ್ರಾ ಕಡೂರು ಪಟ್ಟಣದ ಸರ್ಕಾರಿ ಕಾಲೇಜು ಒಂದರಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಪ್ರಚೋದನಕಾರಿ ಭಾಷಣ ಮಾಡಿದ್ದರು. ಇದಕ್ಕೆ ಸಾಕಷ್ಟು ವಿರೋಧ ಕೂಡ ವ್ಯಕ್ತವಾಗಿತ್ತು. ಆ ವೇಳೆ ಅಂದಿನ ಬಿಜೆಪಿಯಲ್ಲಿದ್ದ ಆರೋಪಿ ಗಗನ್ ಹಾಗೂ ಧನರಾಜ್ ಆಕೆ ಬೆನ್ನಿಗೆ ನಿಂತಿದ್ದರು. ಅಂದಿನಿಂದ ಕಡೂರಿನ ಗಗನ್ ಹಾಗೂ ಧನರಾಜ್ ಜೊತೆ ಚೈತ್ರಾಳ ಸ್ನೇಹ ಉತ್ತಮವಾಗಿತ್ತು ಎಂದು ಹೇಳಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • MLA ಟಿಕೆಟ್‌ಗಾಗಿ ಬರೋಬ್ಬರಿ 5 ಕೋಟಿ ಡೀಲ್ – ಪ್ರಕರಣದ 5ನೇ ಆರೋಪಿ ಅರೆಸ್ಟ್‌

    MLA ಟಿಕೆಟ್‌ಗಾಗಿ ಬರೋಬ್ಬರಿ 5 ಕೋಟಿ ಡೀಲ್ – ಪ್ರಕರಣದ 5ನೇ ಆರೋಪಿ ಅರೆಸ್ಟ್‌

    ಬೆಂಗಳೂರು: ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರಿಗೆ ವಂಚಿಸಿದ ಪ್ರಕರಣದ ಎ-5 ಆರೋಪಿ ಚನ್ನ ನಾಯ್ಕ್‌ನ (Channa Nayak) ಸಿಸಿಬಿ ಪೊಲೀಸರು ಬೆಂಗಳೂರಿನಲ್ಲಿ (Bengaluru) ಬಂಧಿಸಿದ್ದಾರೆ.

    ವಂಚನೆ ಪ್ರಕರಣದಲ್ಲಿ ವಿಶ್ವನಾಥ್ ಜೀ ಪಾತ್ರ ನಿರ್ವಹಿಸಿದ್ದ ಚನ್ನ ನಾಯ್ಕ್‌ನನ್ನ ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಈಗಾಗಲೇ ಚೈತ್ರಾ ಕುಂದಾಪುರ ಮತ್ತು ತಂಡವನ್ನ ಸಿಸಿಬಿ ಪೊಲೀಸರು (CCB Police) ಬಂಧಿಸಿದ್ದು, 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಕೋರ್ಟ್ ಒಪ್ಪಿಸಿದೆ. ಈ ಬೆನ್ನಲ್ಲೇ 5ನೇ ಆರೋಪಿಯನ್ನ ಬಂಧಿಸಲಾಗಿದೆ. ಇದನ್ನೂ ಓದಿ: ಎಂಎಲ್‌ಎ ಟಿಕೆಟ್‌ಗಾಗಿ ಬರೋಬ್ಬರಿ 5 ಕೋಟಿ ಡೀಲ್ – ಉದ್ಯಮಿಗೆ ಚೈತ್ರಾ ಮೋಸ ಮಾಡಿದ್ದು ಹೇಗೆ? ಪೂರ್ಣ ಕಥೆ ಓದಿ

    ಬಂಧನಕ್ಕೂ ಮುನ್ನ ʻಪಬ್ಲಿಕ್‌ ಟಿವಿʼಯೊಂದಿಗೆ ಮಾತನಾಡಿದ ಚನ್ನ ನಾಯ್ಕ್‌, ʻಟಿಕೆಟ್ ಬಗ್ಗೆ ಮಾತನಾಡ್ತಿನಿʼ ಇದೊಂದು ಡೈಲಾಗ್‌ಗೆ ನನಗೆ ಹಣ ನೀಡಿದ್ರು. ಎಲ್ಲದಕ್ಕೂ ಜೀ.. ಜೀ… ಅನ್ನೋ ಪದ ಬಳಕೆ ಮಾಡೋದಕ್ಕೆ ಹೇಳಿದ್ರು. ಯಾವ ಲುಕ್‌ನಲ್ಲಿ ಬರಬೇಕು ಅನ್ನೋ ಬಗ್ಗೆಯೂ ನನಗೆ ತರಬೇತಿ ನೀಡಿದ್ರು. ನನಗೂ ಚೈತ್ರಾಗೂ ಪರಿಚಯ ಇಲ್ಲ, ಸಂಬಂಧವೂ ಇಲ್ಲ. ನಾನೇ ಸಿಸಿಬಿ ಪೊಲೀಸರಿಗೆ ಫೋನ್ ಮಾಡ್ತಿನಿ ಎಂದು ಹೇಳಿದ್ದ. ಇದನ್ನೂ ಓದಿ: ನಟಿ ವಿಜಯಲಕ್ಷ್ಮಿ ಗರ್ಭಪಾತ ಆರೋಪ : ವಿಚಾರಣೆಗೆ ಇಂದು ರಾಜಕಾರಣಿ ಸೀಮನ್ ಹಾಜರಿ?

    ಚೈತ್ರಾ ಕುಂದಾಪುರ ಗೋವಿಂದ ಬಾಬು ಪೂಜಾರಿ ಎಂಬ ಉದ್ಯಮಿಗೆ ಟಿಕೆಟ್ ಕೊಡಿಸುವುದಾಗಿ ಹೇಳಿ ಮೊದಲಿಗೆ 50 ಲಕ್ಷ ರೂ. ಅಡ್ವಾನ್ಸ್ ಕೊಡಬೇಕು ಎಂದು ಹೇಳಿದ್ದಳು. ನಂತರ ನಾಯ್ಕ್ ಎನ್ನುವವನ ಮೂಲಕ 3 ಕೋಟಿ ರೂ. ತೆಗೆದುಕೊಳ್ಳುವುದು ಎಂಬುದು ಆಕೆಯ ಅಸಲಿ ಪ್ಲಾನ್ ಆಗಿತ್ತು. ಆದರೆ ಯಾವಾಗ ಪೂಜಾರಿ 50 ಲಕ್ಷ ರೂ. ಕೇಳಿದ ಕೂಡಲೇ ಕೊಟ್ಟನೋ ಆಗಲೇ ಮತ್ತೆ ಇನ್ನೊಂದು ಕತೆ ಶುರು ಮಾಡಿದ್ದಳು. ಇಷ್ಟು ಸುಲಭವಾಗಿ ಹಣ ಸಿಕ್ಕಿದರೇ ಜಾಸ್ತಿ ಹಣ ಹೊಡೆಯೋಣ ಎಂದು ಚೈತ್ರಾ ಪ್ಲಾನ್ ಮಾಡಿದ್ದಳು ಅನ್ನೋ ಬಗ್ಗೆ ತನಿಖೆಯಲ್ಲಿ ಗೊತ್ತಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಾಪತ್ತೆಯಾಗಿದ್ದ ಚೈತ್ರಾಗೆ ಆಶ್ರಯ ನೀಡಿದ್ದು ಕಾಂಗ್ರೆಸ್ ವಕ್ತಾರೆ

    ನಾಪತ್ತೆಯಾಗಿದ್ದ ಚೈತ್ರಾಗೆ ಆಶ್ರಯ ನೀಡಿದ್ದು ಕಾಂಗ್ರೆಸ್ ವಕ್ತಾರೆ

    ಉಡುಪಿ: ವಂಚನೆ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ಚೈತ್ರಾ ಕುಂದಾಪುರಳಿಗೆ (Chaitra Kundapura) ಆಶ್ರಯ ನೀಡಿದ್ದ ಕಾಂಗ್ರೆಸ್ (Congress) ಮಾಧ್ಯಮ ವಕ್ತಾರೆ ಅಂಜುಮ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಪೊಲೀಸರು (CCB Police) ನೋಟಿಸ್ ನೀಡಿದ್ದಾರೆ.

    ಬಿಜೆಪಿ ಶಾಸಕ ಸ್ಥಾನದ ಟಿಕೆಟ್‍ಗಾಗಿ ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರ ಬಳಿ 5 ಕೋಟಿ ರೂ. ಪಡೆದು ವಂಚಿಸಿದ್ದಾಳೆ ಎಂಬ ಆರೋಪದ ಮೇಲೆ ಚೈತ್ರಾಳನ್ನು ಹಾಗೂ ಆಕೆಯ ಸ್ನೇಹಿತ ಶ್ರೀಕಾಂತ ನಾಯ್ಕ್ ಬಂಧಿಸಲಾಗಿದೆ. ಆಕೆ ಕಳೆದ ಒಂದು ವಾರದಿಂದ ತಲೆಮರೆಸಿಕೊಂಡಿದ್ದಳು. ಕಾಂಗ್ರೆಸ್ ಮಾಧ್ಯಮ ವಕ್ತಾರೆ ಅಂಜುಮ್ ಅವರ ಅಪಾರ್ಟ್‍ಮೆಂಟ್‍ನಲ್ಲಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಅಡಗಿಕೊಂಡಿದ್ದಳು. ಇದನ್ನೂ ಓದಿ: ಉಡುಪಿಯಲ್ಲಿ ಚೈತ್ರಾ ಕುಂದಾಪುರ ಅರೆಸ್ಟ್

    ಅಂಜುಮ್ ಚೈತ್ರಾಳ ಸ್ನೇಹಿತೆಯಾಗಿದ್ದು ಈ ಹಿಂದೆ ಇಬ್ಬರು ಸಹೋದ್ಯೋಗಿಯಾಗಿದ್ದರು. ಆರೋಪಿಗೆ ಆಶ್ರಯ ನೀಡಿದ ವಿಚಾರವಾಗಿ ಅಂಜುಮ್ ಅವರಿಗೆ ಸಿಸಿಬಿ ಈಗ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.

    ಬಂಧನಕ್ಕೊಳಗಾಗಿರುವ ಆರೋಪಿಗಳನ್ನು ಬೆಂಗಳೂರಿಗೆ ಕರೆತರಲಾಗುತ್ತಿದ್ದು, ಸಂಜೆಯ ವೇಳೆಗೆ ಕೋರ್ಟ್‍ಗೆ ಹಾಜರುಪಡಿಸಿ ಮುಂದಿನ ಕ್ರಮಕೈಗೊಳ್ಳಲು ಪೊಲೀಸರು ತಿರ್ಮಾನಿಸಿದ್ದಾರೆ. ಆರೋಪಿ ಚೈತ್ರಾ ಬಂಧನದ ಬಳಿಕ ಒಡೆದ ಬಳೆ ಹಾಗೂ ಉಂಗುರವನ್ನು ನುಂಗಲು ಯತ್ನಿಸಿದ್ದಳು. ಇದರಿಂದಾಗಿ ಪೊಲೀಸ್ ಸಿಬ್ಬಂದಿ ಆಕೆಯನ್ನು ಅಜ್ಞಾತ ಸ್ಥಳದಲ್ಲಿ ರಾತ್ರಿ ಪೂರ್ತಿ ಕಾವಲು ಕಾದಿದ್ದಾರೆ.

    ವಂಚನೆ ವಿಚಾರವಾಗಿ ಗೋವಿಂದ ಬಾಬು ಪೂಜಾರಿ ಬೆಂಗಳೂರಲ್ಲಿ ದೂರು ನೀಡಿದ್ದರು. ಪ್ರಕರಣ ಸಂಬಂಧ ಈವರೆಗೆ ನಾಲ್ವರನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಎಂಎಲ್‌ಎ ಟಿಕೆಟ್‌ಗಾಗಿ ಬರೋಬ್ಬರಿ 5 ಕೋಟಿ ಡೀಲ್ – ಉದ್ಯಮಿಗೆ ಚೈತ್ರಾ ಮೋಸ ಮಾಡಿದ್ದು ಹೇಗೆ? ಪೂರ್ಣ ಕಥೆ ಓದಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]