ಕಳೆದ ಆಗಸ್ಟ್‌ನಲ್ಲಿ ಆರೋಪಿ ಕೆಂಚ, ಮಹಿಳೆಯ (Women) ತಾಯಿಗೆ ವಾಟ್ಸಪ್ ಮೂಲಕ ಮಗಳ ಬೆತ್ತಲೆ ಫೋಟೋ ಕಳುಹಿಸಿ 40 ಸಾವಿರ ರೂ. ಹಣಕ್ಕೆ ಡಿಮ್ಯಾಂಡ್ ಮಾಡಿದ್ದ. ಅದರಂತೆ ಮಹಿಳೆ ತಾಯಿ ಚೋಟು ಎಂಬವನ ಖಾತೆಗೆ 20 ಸಾವಿರ ರೂ., ಮತ್ತೊಬ್ಬನ ಖಾತೆಗೆ 20 ಸಾವಿರ ರೂ. ಹಣ ಹಾಕಿದ್ದರು. ಇದನ್ನೂ ಓದಿ: ಬೆಂಗಳೂರಿಗೆ ಫೆಬ್ರವರಿಯಲ್ಲೇ ಸಮಸ್ಯೆ – ಶುದ್ದ ಕುಡಿಯುವ ನೀರಿನ ಘಟಕದಲ್ಲಿ ಸಮಯ ನಿಗದಿ
ನಂತರ ಕೆಂಚನ ಸ್ನೇಹಿತ ಎಂದು ಹೇಳಿಕೊಂಡು ಕಾರ್ತಿಕ್ ಎಂಬಾತ ಕರೆ ಮಾಡಿ, ನಾನು ಕೆಂಚನ ಸ್ನೇಹಿತ ನಿಮ್ಮ ಮಗಳ ಫೋಟೋ, ವೀಡಿಯೋ ನಮ್ಮ ಬಳಿ ಇದೆ, ನನಗೆ ಮನು ಹೇಳಿದ್ದಾನೆ. ನೀವು 5 ಲಕ್ಷ ಹಣ ಕೊಡದೇ ಇದ್ದರೆ, ನಿಮ್ಮ ಮಗಳ ಫೋಟೋವನ್ನು ನಿಮ್ಮ ಅಳಿಯನಿಗೆ ಕಳಿಸ್ತೇವೆ ಎಂದು ಬೆದರಿಕೆ ಹಾಕಿದ್ದಾನೆ, ಸಂತ್ರಸ್ತ ಮಹಿಳೆಗೂ ಬೆದರಿಸಿದ್ದಾನೆ. ಫೆಬ್ರವರಿ 12 ರಂದು ಮತ್ತೆ ವಾಟ್ಸಪ್, ಫೇಸ್‌ಬುಕ್ ಮೆಸೆಂಜರ್‌ಗಳಲ್ಲಿ ಕಾಲ್ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಇದರಿಂದ ಮನನೊಂದ ಮಹಿಳೆ ಹಾಗೂ ಆಕೆಯ ತಾಯಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬೆಂಗಳೂರು: ಇಲ್ಲಿನ ರೇಸ್‌ಕೋರ್ಸ್ (Race Course) ಬುಕ್ಕಿಂಗ್ ಕೌಂಟರ್ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದು, ಸೂಕ್ತ ದಾಖಲೆಗಳಿಲ್ಲದ 3.47 ಕೋಟಿ ರೂ. ಹಣವನ್ನು ಜಪ್ತಿ ಮಾಡಿರುವ ಘಟನೆ ಬೆಂಗಳೂರು (Bengaluru) ನಗರದಲ್ಲಿ ತಡರಾತ್ರಿ ನಡೆದಿದೆ.
ನಿಗದಿತ ದರಗಳಿಗಿಂತ ಹೆಚ್ಚಿನ ಬೆಲೆಗೆ ಟಿಕೆಟ್ ಮಾರಾಟ ಹಾಗೂ ಜಿಎಸ್ಟಿ ಕಟ್ಟದೇ ವಂಚನೆ ಮಾಡಿದ ಆರೋಪಗಳ ಮೇಲೆ ರೇಸ್‌ಕೋರ್ಸ್ ಬುಕ್ಕಿಂಗ್ ಕೌಂಟರ್ ಮೇಲೆ ಸಿಸಿಬಿ ಪೊಲೀಸರು (CCB Police) ದಾಳಿ ನಡೆಸಿದ್ದಾರೆ. ಬುಕ್ಕಿಂಗ್ ಕೌಂಟರ್ಗಳನ್ನ ಲಾಕ್ ಮಾಡಿದ್ದಾರೆ. ಅಲ್ಲದೇ ಕೌಂಟರ್ನಲ್ಲಿನ ಸಿಬ್ಬಂದಿ ಹೊರ ಹೋಗದಂತೆ ತಡೆದು ಪರಿಶೀಲಿಸಿದ್ದಾರೆ. ಮಧ್ಯರಾತ್ರಿ 1 ಗಂಟೆ ಸುಮಾರಿಗೆ ದಾಳಿಯನ್ನು ಅಂತ್ಯಗೊಳಿಸಿದ್ದಾರೆ. ಇದನ್ನೂ ಓದಿ: ವಿದ್ಯುತ್ ಸ್ಪರ್ಶಿಸಿ ಯಶ್ ಅಭಿಮಾನಿಗಳ ಸಾವು – ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ವಿತರಣೆ
ದಾಳಿ ವೇಳೆ ದಾಖಲೆಗಳಿಲ್ಲದ 3.47 ಕೋಟಿ ರೂ. ಜಪ್ತಿ ಮಾಡಿದ್ದಾರೆ. ಈ ವೇಳೆ ಸಿಕ್ಕವರ ವಿರುದ್ಧ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಸುಮಾರು 60 ಜನರನ್ನ ವಶಕ್ಕೆ ಪಡೆದು ಸ್ಟೇಷನ್ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ. ಜೊತೆಗೆ ನೋಟೀಸ್ ನೀಡಿ ಮುಂದೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಇದನ್ನೂ ಓದಿ: ಸಂಸತ್ ದಾಳಿ: ಮೈಸೂರಿನ ಮನೋರಂಜನ್ ಸೇರಿ ಐವರಿಗೆ ಮಂಪರು ಪರೀಕ್ಷೆ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸಿಸಿಬಿ ಭರ್ಜರಿ ಬೇಟೆಯಾಡಿದೆ. ಸ್ಪಾ (Spa) ಹೆಸರಲ್ಲಿ ಹೈಟೆಕ್ ವೇಶ್ಯಾವಾಟಿಕೆ (Prostitue) ದಂಧೆ ನಡೆಸುತ್ತಿದ್ದ ಮಸಾಜ್ ಪಾರ್ಲರ್ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.
ಸುಮಾರು 10 ಜನ ಸಿಸಿಬಿ ಅಧಿಕಾರಿಗಳ (CCB Officers) ತಂಡ ಟಿನ್ ಫ್ಯಾಕ್ಟರಿ ಬಳಿ ಇರುವ ನಿರ್ವಾನ್ ಇಂಟರ್ ನ್ಯಾಷನಲ್ ಸ್ಪಾನ ಫಸ್ಟ್ ಫ್ಲೋರ್ ಹಾಗೂ 6ನೇ ಫ್ಲೋರ್ ನಲ್ಲಿ ಪರಿಶೀಲನೆ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ. ಹೊರ ರಾಜ್ಯದಿಂದ ಬಂದು ಅನಿಲ್ ಎಂಬಾತ ಸ್ಪಾ ನಡೆಸುತ್ತಿದ್ದ.
ಒಟ್ಟು 34 ರೂಂಗಳನ್ನು ಒಳಗೊಂಡ ಬಹುಮಹಡಿ ಕಟ್ಟಡದಲ್ಲಿ ಹೊರ ರಾಜ್ಯ, ಹೊರ ದೇಶದಿಂದ ಯುವತಿಯರು, ಮಹಿಳೆಯರನ್ನು ಕರೆಸಿ ಅನೈತಿಕ ಚಟುವಟಿಕೆ ನಡೆಸುತ್ತಿದ್ದ. ಸದ್ಯ ಮಾಲೀಕ ಅನಿಲ್ ಸೇರಿ ಒಟ್ಟು 44 ಮಹಿಳೆಯರು, 34 ಗಿರಾಕಿಗಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ಅಕ್ರಮವಾಗಿ ನಡೆಸುತ್ತಿದ್ದ ಆಶ್ರಯ ಮನೆಯಿಂದ 26 ಬಾಲಕಿಯರು ನಾಪತ್ತೆ
ಮಾಲೀಕ ಅನಿಲ್‍ಗೆ ಸೇರಿದ ಮೂರುವರೆ ಕೋಟಿ ಮೌಲ್ಯದ ಬೆನ್ಜ್ ಕಾರನ್ನು ಸಿಸಿಬಿ ಸೀಜ್ ಮಾಡಿದೆ. ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು: ಹಸುಗೂಸುಗಳ ಮಾರಾಟ (Child Trafficking) ಜಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು (CCB Police) 10 ಆರೋಪಿಗಳ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ವೇಳೆ ಆರೋಪಿಗಳ ಪೈಕಿ ಮಹಾಲಕ್ಷ್ಮಿ (Mahalakshmi) ಎಂಬಾಕೆ ತರಕಾರಿ ಮಾರಾಟ (Vegetable Selling) ಮಾಡುತ್ತಲೇ ಮಕ್ಕಳ ಡೀಲ್ ಮಾಡುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ.
ಆರೋಪಿ ಮಹಾಲಕ್ಷ್ಮಿ ಹಸುಗೂಸುಗಳನ್ನು ಮಾರಾಟ ಮಾಡಿ ಲಕ್ಷಲಕ್ಷ ದುಡ್ಡು ಮಾಡಿದ್ದರೂ ಬಡವರು ಎನ್ನುವಂತಿದ್ದಳು. ಯಾರಿಗೂ ಅನುಮಾನ ಬರಬಾರದು ಎಂದು ತರಕಾರಿ ಮಾರುತ್ತಿದ್ದ ಈಕೆ, ತರಕಾರಿ ಮಾರಾಟ ಮಾಡುತ್ತಲೇ ಹಲವರನ್ನು ಪರಿಚಯ ಮಾಡಿಕೊಳ್ಳುತ್ತಿದ್ದಳು. ನಂತರ ಯಾವುದಾದರೂ ಗ್ರಾಹಕರಿಗೆ ಮಕ್ಕಳಿಲ್ಲ ಎಂಬ ವಿಚಾರ ಗೊತ್ತಾದರೇ ಅವರ ಜೊತೆ ಇನ್ನೂ ಹೆಚ್ಚು ಸಲುಗೆ ಬೆಳೆಸುತ್ತಿದ್ದಳು. ಇದನ್ನೂ ಓದಿ: ಬೈಕ್ ಡಿಕ್ಕಿ- ವೃದ್ಧನ ತಲೆಯಲ್ಲಿದ್ದ ದಿನಸಿ ಚೀಲಕ್ಕೆ ಕೈತಾಗಿ ಬಿದ್ದಾಕೆಯ ಮೇಲೆ ಹರಿದ ಬಸ್!
ಬಳಿಕ ಅವರ ನಂಬರ್ ಪಡೆದು ಪ್ರತಿನಿತ್ಯ ಮಾತನಾಡಲು ಶುರುಮಾಡುತ್ತಿದ್ದಳು. ನಂತರ ಮಕ್ಕಳು ಬೇಕು ಎಂದವರಿಗೆ ನನಗೆ ಪರಿಚಯ ಇರುವವರ ಬಳಿ ಸಿಗುತ್ತದೆ ಎಂದು ಹೇಳಿ ಅವರು ಓಕೆ ಅಂದರೆ ಆರೋಪಿಗಳ ಪೈಕಿ ತಮಿಳುನಾಡಿನ (Tamil Nadu) ರಾಧಾಳಿಗೆ ಕರೆ ಮಾಡುತ್ತಿದ್ದಳು. ಅಲ್ಲಿಂದ ಮಕ್ಕಳ ಫೋಟೋಗಳನ್ನು ಕಳುಹಿಸಿಕೊಂಡು ಮಹಾಲಕ್ಷ್ಮಿ ಡೀಲ್ ಮಾಡುತ್ತಿದ್ದು, ತರಕಾರಿ ಮಾರುತ್ತಲೇ ಗಾಳ ಹಾಕುತ್ತಿದ್ದಳು. ಇದನ್ನೂ ಓದಿ: ಮದುವೆ ಒಪ್ಪಂದಕ್ಕೆ ಒಪ್ಪದ ಶಿಕ್ಷಕಿಯ ಅಪಹರಣ
ಇದೀಗ ಮಕ್ಕಳ ಮಾರಾಟ ಜಾಲವನ್ನು ಸಿಸಿಬಿ ಪೊಲೀಸರು ಪತ್ತೆಹಚ್ಚಿದ್ದು, ಆರೋಪಿಗಳ ವಿಚಾರಣೆ ನಡೆಸುತ್ತಿದ್ದಾರೆ. ಈ ವೇಳೆ 6 ವರ್ಷಗಳಲ್ಲಿ 250ಕ್ಕೂ ಹೆಚ್ಚು ಮಕ್ಕಳನ್ನು ಮಾರಾಟ ಮಾಡಿರುವ ಬಗ್ಗೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಅದರಲ್ಲಿ ಕರ್ನಾಟಕದ 50-60 ಮಕ್ಕಳನ್ನು ಮಾರಾಟ ಮಾಡಿದ್ದು, ಉಳಿದ ಮಕ್ಕಳನ್ನು ತಮಿಳುನಾಡಿನಲ್ಲಿ ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಸದ್ಯ ಸಿಸಿಬಿ ಪೊಲೀಸರು ಕರ್ನಾಟಕದಲ್ಲಿ ಮಾರಾಟ ಆಗಿರುವ ಮಕ್ಕಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಇದುವರೆಗೆ 10 ಮಕ್ಕಳ ಬಗ್ಗೆ ಮಾತ್ರ ಸಿಸಿಬಿಗೆ ಮಾಹಿತಿ ಸಿಕ್ಕಿದ್ದು, ಉಳಿದ ಮಕ್ಕಳನ್ನು ಯಾರಿಗೆ ಕೊಟ್ಟಿದ್ದಾರೆ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಪೊಲೀಸರ ಕಣ್ತಪ್ಪಿಸಲು ಸಿಗರೇಟ್‌ಗೆ ಸೀಕ್ರೆಟ್ ರೂಮ್ – ಬ್ರ‍್ಯಾಂಡೆಡ್ ಹೆಸರಿನ ನಕಲಿ ಸಿಗರೇಟ್ ಸೀಜ್..!
ಭ್ರೂಣ ಹತ್ಯೆ (Foeticide) ಮತ್ತು ಮಕ್ಕಳ ಮಾರಾಟ ಜಾಲ ಪ್ರಕರಣ ಹೆಚ್ಚಿದ ಹಿನ್ನೆಲೆ ಮಕ್ಕಳ ಆಯೋಗ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮತ್ತು ಗೃಹ ಇಲಾಖೆಯನ್ನು ವರದಿ ಕೇಳಿದೆ. ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ವರದಿ ನೀಡುವಂತೆ ಸರ್ಕಾರವನ್ನು ಕೇಳಿದೆ. ಪಿಸಿ ಮತ್ತು ಪಿನ್ ಡಿಟಿ ಕಾಯ್ದೆ ಅಡಿ ಮೇಲ್ವಿಚಾರಣೆ ಮಂಡಳಿ, ರಾಜ್ಯ ಸಕ್ಷಮ ಪ್ರಾಧಿಕಾರ, ರಾಜ್ಯ ಸಲಹಾ ಸಮಿತಿ, ರಾಜ್ಯ ತಪಾಸಣಾ, ಮೇಲ್ವಿಚಾರಣಾ ಸಮಿತಿ ಇದ್ದರೂ ಭ್ರೂಣ ಹತ್ಯೆ ಆಗುತ್ತಿರುವುದು ನಾಚಿಕೆಗೇಡಿನ ಸಂಗತಿ. ಎಷ್ಟು ತಪಾಸಣೆ ಮಾಡಿದ್ದೀರಾ? ಎಷ್ಟು ಕ್ರಮ ಆಗಿದೆ ಎಂದು ಮಕ್ಕಳ ಆಯೋಗ ವರದಿ ಕೇಳಿದೆ. ಅಲ್ಲದೇ ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ಭೇಟಿ ಕೊಟ್ಟು ಕ್ರಮ ವಹಿಸಲು ಆಗ್ರಹಿಸಿದೆ. ಮಕ್ಕಳ ಮಾರಾಟ ಜಾಲದ ವಿರುದ್ಧ ಇದುವರೆಗೂ ಏನು ಕ್ರಮ ಆಗಿದೆ ಎಂಬುದರ ಬಗ್ಗೆಯೂ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ವರದಿ ಕೇಳಿದೆ. ಇದನ್ನೂ ಓದಿ: ಕೆಳಗೆ ನಿಂತು ಟ್ರ್ಯಾಕ್ಟರ್ ಆನ್ ಮಾಡಿದ ರೈತ – ಮೈಮೇಲೆ ಟ್ರ್ಯಾಕ್ಟರ್ ಹರಿದು ಸಾವು
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸಿಗರೇಟಿಗೊಂದು ಸೀಕ್ರೇಟ್ ರೂಮ್ (Cigarettes Secret Room) ಮಾಡಿ, ನಕಲಿ ವಿದೇಶಿ ಬ್ರ‍್ಯಾಂಡೆಡ್ ಸಿಗರೇಟ್‌ಗಳನ್ನ ಮಾರಾಟ ಮಾಡ್ತಿದ್ದ ಅಡ್ಡೆ ಮೇಲೆ ಸಿಸಿಬಿ ಪೊಲೀಸರು (CCB Police) ದಾಳಿ ನಡೆಸಿದ್ದಾರೆ.
ವಿದೇಶಿ ಸಿಗರೇಟ್‌ಗಳನ್ನ ಕಂಡು ಪೊಲೀಸರೇ ಶಾಕ್ ಆಗಿದ್ದಾರೆ. ಬೆಂಗಳೂರಿನ ಕೆ.ಆರ್ ಮಾರ್ಕೆಟ್ ಹಿಂಭಾಗದ ರಸ್ತೆಯ ಗೊಡೌನ್‌ನಲ್ಲಿದ್ದ ಬರೋಬ್ಬರಿ 20 ಲಕ್ಷ ರೂ. ಮೌಲ್ಯದ ವಿದೇಶಿ ಸಿಗರೇಟ್‌ಗಳನ್ನ ಸಿಸಿಬಿ ಆರ್ಥಿಕ ಅಪರಾಧ ದಳದ ಇನ್ಸ್ಪೆಕ್ಟರ್ ಸಾದಿಕ್ ಪಾಷಾ ಅಂಡ್ ಟೀಂ ಪತ್ತೆ ಮಾಡಿದೆ. ಬಳಿಕ ಗೊಡೌನ್ ಸೀಜ್ ಮಾಡಿದೆ. ಇದನ್ನೂ ಓದಿ: ಬಿಟ್ಟೋದ ಗಂಡನನ್ನ ಜೊತೆಯಾಗಿರುವಂತೆ ಮಾಡ್ತೀನಿ ಎಂದು 7 ಲಕ್ಷ ಪಡೆದು ಎಸ್ಕೇಪ್!
ಲೈಟರ್ ಗೊಡೌನ್‌ನಲ್ಲಿ ಮಾಡಿಸಿದ್ದ ವುಡ್ ಶೆಲ್ಫ್ ನಲ್ಲೇ ಸೀಕ್ರೇಟ್ ರೂಮ್‌ಗೆ ದಾರಿ ಮಾಡಿಡಲಾಗಿತ್ತು. ಕಿಚನ್ ಕಬೋರ್ಡ್‌ನಂತೆ ಸಣ್ಣ ಕಿಂಡಿಯಷ್ಟು ಡೋರ್ ಇಡಲಾಗಿತ್ತು. ಒಂದು ವೇಳೆ ಪೊಲೀಸರು ಬಂದರೂ ಗೊತ್ತಾಗದ ರೀತಿ ಡೋರ್ ಮಾಡಿಸಿದ್ದ ಗೋಡೋನ್ ಮಾಲೀಕ ಲಲಿತ್, ವಿದೇಶಿ ಬ್ರಾಂಡೆಡ್‌ಗಳ ಹೆಸರಲ್ಲಿ ನಕಲಿ ಸಿಗರೇಟ್ ಮಾರಾಟ ಮಾಡುತ್ತಿದ್ದರು. ಇದನ್ನೂ ಓದಿ: ಎತ್ತಿನಹೊಳೆ ಯೋಜನೆಗೆ ಆರಂಭದಲ್ಲೇ ವಿಘ್ನ- ನೀರು ಹರಿಸಿದ್ದರಿಂದ ಪೈಪ್‍ನಿಂದ ಸೋರಿಕೆ
ಈ ಸೀಕ್ರೆಟ್ ಅಡ್ಡೆ ಮೇಲೆ ದಾಳಿ ಮಾಡಿದ ಪೊಲೀಸರು ನಕಲಿ ಸಿಗರೇಟ್‌ಗಳನ್ನ ಜಪ್ತಿ ಮಾಡಿದ್ದಾರೆ. ನಗರದ ಹಲವು ಕಡೆಗಳಿಗೆ ಇಲ್ಲಿಂದಲೇ ಸಿಗರೇಟ್ ಸರಬರಾಜು ಮಾಡಲಾಗುತ್ತಿತ್ತು ಎನ್ನಲಾಗಿದೆ. ಈ ಸಂಬಂಧ ಕೆ.ಆರ್ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಬೆಂಗಳೂರು: ಮಕ್ಕಳ ಕಳ್ಳಸಾಗಾಣಿಕೆ (Child Trafficking) ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು (CCB Police) ಭರ್ಜರಿ ಕಾರ್ಯಾಚರಣೆ ನಡೆಸಿ ಹಸುಗೂಸು ಮಾರಾಟ ದಂಧೆಯನ್ನು ಭೇದಿಸಿದ್ದಾರೆ. ಇನ್ನೂ ಈ ಗ್ಯಾಂಗ್‌ನಲ್ಲಿದ್ದ 7 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಪ್ರಕರಣದಲ್ಲಿ ಆರೋಪಿಗಳ ಪಾತ್ರ ಏನು ಎಂಬುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಈ ಕುರಿತ ಕಂಪ್ಲೀಟ್ ಮಾಹಿತಿ ಇಲ್ಲಿ ನೀಡಲಾಗಿದೆ.
ಸಿಸಿಬಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಆರೋಪಿಗಳಾದ ಶರಣ್ಯ, ರಾಧ, ಸುಹಾಸಿನಿ, ಮಹಾಲಕ್ಷ್ಮಿ, ಗೋಮತಿ, ಹೇಮಲತಾ, ಕಣ್ಣನ್ ರಾಮಸ್ವಾಮಿ ಎಂಬವರನ್ನು ಬಂಧಿಸಲಾಗಿದೆ. ಈ 7 ಆರೋಪಿಗಳ ಪೈಕಿ ಮಹಾಲಕ್ಷ್ಮಿ ಮತ್ತು ರಾಧ ಪ್ರಮುಖ ಆರೋಪಿಗಳಾಗಿದ್ದಾರೆ. ಮಹಾಲಕ್ಷ್ಮಿ ಮಗು ಯಾರಿಗೆ ಬೇಕು ಎನ್ನುವುದನ್ನು ಹುಡುಕಿ ಡೀಲ್ ಮಾಡಿದರೇ ರಾಧ ಎಲ್ಲಿ ಮಗು ಇದೆ ಎಂಬುದನ್ನು ಹುಡುಕಿ ಅಲ್ಲಿಂದ ಡೀಲ್ ಮಾಡಿ ಮಹಾಲಕ್ಷ್ಮಿ ಹೇಳಿದ ಕಡೆಗೆ ಶರಣ್ಯ ಮತ್ತು ಇತರರ ಮೂಲಕ ಕಳುಹಿಸುತ್ತಿದ್ದಳು. ಇದನ್ನೂ ಓದಿ: ಮೂರು ತಿಂಗಳಲ್ಲಿ 242 ಭ್ರೂಣ ಹತ್ಯೆ: ಪೊಲೀಸ್ ಆಯುಕ್ತ
ಶರಣ್ಯ: ಈಕೆ ರಾಧ ಮಗು ಸೇಲ್ ಮಾಡುವಾಗ ಜೊತೆಗೆ ಹೋಗುತ್ತಿದ್ದಳು ಮತ್ತು ಮಗುವನ್ನು ಸೇಲ್ ಮಾಡಿದ ನಂತರ ಹಣವನ್ನು ಪಡೆಯುವುದು ಈಕೆಯ ಕೆಲಸವಾಗಿತ್ತು.
ಸುಹಾಸಿನಿ: ಈಕೆ ಸರೋಗೆಸಿ ಏಜೆಂಟ್ ಮಕ್ಕಳು ಯಾರಿಗೆ ಬೇಕು ಮತ್ತು ಮಕ್ಕಳನ್ನು ಯಾರು ಕೊಡುತ್ತಾರೆ ಎನ್ನುವುದನ್ನು ಫೋಟೊಗಳ ಸಹಿತ ಕೆಲಸ ಮಾಡುತ್ತಿದ್ದಳು.
ರಾಧ: ಹೇಮಲತ ಮತ್ತು ಶರಣ್ಯನನ್ನು ಕಳುಹಿಸಿ ಹಣ ಪಡೆಯುವುದು ಮತ್ತೆ ಮಗುವನ್ನು ಕೊಟ್ಟುಬರುವ ಕೆಲಸ ಈಕೆ ಮಾಡಿಸುತ್ತಿದ್ದಳು. ಈಕೆ ತಮಿಳುನಾಡಿನ ಆಸ್ಪತ್ರೆಯಲ್ಲಿ ಬಾಡಿಗೆ ತಾಯ್ತನ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಳು. ಈಕೆ ಮಗುವನ್ನು ಮಾಡಿಕೊಂಡು ಸಾಕಲು ಆಗಲ್ಲಾ ಎನ್ನುವವರನ್ನು ಟಾರ್ಗೆಟ್ ಮಾಡಿ ಸಂಪರ್ಕ ಮಾಡುತ್ತಿದ್ದಳು.
ಕಣ್ಣನ್ ರಾಮಸ್ವಾಮಿ: ಈತ ಸಹ ಒರ್ವ ಏಜೆಂಟ್ ಆಗಿದ್ದು, ಮಹಾಲಕ್ಷ್ಮಿ ಮಗು ಬೇಕು ಎಂದು ರಾಧಗೆ ಹೇಳಿದಾಗ ರಾಧ ಕಣ್ಣನ್‌ಗೆ ಮಾಹಿತಿ ನೀಡುತ್ತಾಳೆ. ಆಗ ಕಣ್ಣನ್ ಈ ವಿಚಾರವನ್ನು ಗೋಮತಿಗೆ ಹೇಳುತ್ತಿದ್ದ. ಗೋಮತಿ ಮಗುವಿನ ತಾಯಿಗೆ ಸಂಪರ್ಕ ಮಾಡುತ್ತಿದ್ದಳು.
ಮಹಾಲಕ್ಷ್ಮಿ: ಈಕೆ ಕರ್ನಾಟಕದಲ್ಲಿ ಮಗು ಯಾರಿಗೆ ಬೇಕು ಎಂದು ಮಾಹಿತಿ ಪಡೆದು ನಂತರ ಆ ಮಾಹಿತಿಯನ್ನು ತಮಿಳುನಾಡಿನ (Tamil Nadu) ಗ್ಯಾಂಗ್‌ಗೆ ಹೇಳುತ್ತಿದ್ದಳು. ಆಗ ತಮಿಳುನಾಡಿನ ಗ್ಯಾಂಗ್ ಕೆಲಸ ಶುರು ಮಾಡುತ್ತಿತ್ತು.
ಗೋಮತಿ: ಈಕೆ ತಮಿಳುನಾಡಿನಿಂದ ಮಗು ಮತ್ತು ಮಗುವಿನ ತಾಯಿಯನ್ನು ಕರೆದುಕೊಂಡು ಬರುತ್ತಿದ್ದಳು.
ಹೇಮಲತಾ: ರಾಧ ಹೇಳಿದಂತೆ ಮಗುವನ್ನು ತಂದು ಕೊಡುವ ಕೆಲಸ ಈಕೆಯದಾಗಿತ್ತು. ರಾಧ ಹೇಳುತ್ತಿದ್ದ ಪ್ರತಿಯೊಂದು ಕೆಲಸವನ್ನು ಈಕೆ ಮಾಡುತ್ತಿದ್ದಳು.
ಇದಾದ ಬಳಿಕ ಆರೋಪಿಗಳು ಗರ್ಭಿಣಿಯರು ಗರ್ಭಪಾತ ಮಾಡಿಸಲು ಬರುತ್ತಿದ್ದವರನ್ನು ಟಾರ್ಗೆಟ್ ಮಾಡಿದ್ದಾರೆ. ಮಹಿಳೆಯರನ್ನು ಮನವೊಲಿಸಿ ಕರೆದುಕೊಂಡು ಹೋಗಿ ಅವರಿಗೆ ಇರಲು ಬೇಕಾದ ವ್ಯವಸ್ಥೆ ಮಾಡಿಕೊಡುತ್ತಾರೆ. ಹೀಗೆ ಮಗು ಹುಟ್ಟುವವರೆಗೆ ಕಾದು ಹೆರಿಗೆ ಮಾಡಿಸುತ್ತಾರೆ. ನಂತರ ಮಗುವಿನ ಫೋಟೋವನ್ನು ಎಲ್ಲರಿಗೂ ಶೇರ್ ಮಾಡುವ ಮೂಲಕ ಯಾರು ಮಕ್ಕಳು ಇಲ್ಲ ಎಂದು ಹುಡುಕುತ್ತಾರೋ ಅವರನ್ನು ಟಾರ್ಗೆಟ್ ಮಾಡುತ್ತಾರೆ. ಬಳಿಕ ಅವರಿಗೆ ಮಗುವಿನ ಫೋಟೋ ಕಳುಹಿಸಿ ಡೀಲ್ ಮಾಡುತ್ತಾರೆ. ಅಲ್ಲದೇ ಮಗುವಿಗೆ ಬೇಕಾದ ದಾಖಲಾತಿ ಸೃಷ್ಟಿ ಮಾಡುತ್ತಾರೆ. ಮಕ್ಕಳು ಹೇಗಿದ್ದಾರೆ? ಯಾವ ಬಣ್ಣ? ಲಿಂಗ ಯಾವುದು ಎಂಬ ಆಧಾರದ ಮೇಲೆ ಹಣವನ್ನು ನಿಗದಿ ಮಾಡಲಾಗುತ್ತದೆ. ಗಂಡು ಮಕ್ಕಳಾದರೆ 5ರಿಂದ 10 ಲಕ್ಷ ರೂ. ವರೆಗೆ ಮಾರಾಟ ಮಾಡುತ್ತಾರೆ. ಹೆಣ್ಣುಮಗುವಾದರೆ 4ರಿಂದ 5 ಲಕ್ಷದವರೆಗೂ ಮಾರಾಟ ಮಾಡಲಾಗುತ್ತದೆ. ಮಗುವನ್ನು ಹೆತ್ತುಕೊಟ್ಟ ತಾಯಂದಿರಿಗೆ ಒಂದೂವರೆಯಿಂದ 2 ಲಕ್ಷ ರೂ. ಹಣ ನೀಡಿ ಕಳುಹಿಸುತ್ತಾರೆ. ಇದನ್ನೂ ಓದಿ: ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿ – ಸವಾರ ಸ್ಥಳದಲ್ಲೇ ಸಾವು
ಇದಕ್ಕೂ ಮೊದಲು ಆರೋಪಿಗಳು ಡೋನರ್‌ಗಳನ್ನು ಕರೆದುಕೊಂಡು ಹೋಗಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದರು. 2021ರಲ್ಲಿ ಕಾಯ್ದೆ ಕಠಿಣ ಆಗಿತ್ತು. ಸೆರೋಗೆಸಿ ಕಾಯ್ದೆ ಕಠಿಣ ಆದ ಬಳಿಕ ಇವರೆಲ್ಲರಿಗೂ ಏಜೆಂಟ್ ಕೆಲಸ ಮಾಡುವುದು ಕಷ್ಟವಾಗುತ್ತದೆ. ನಂತರ ಐವಿಎಫ್ ಆಸ್ಪತ್ರೆಗೆ ಡೋನರ್‌ಗಳನ್ನು ಕರೆದುಕೊಂಡು ಹೋಗುವ ಕೆಲಸ ಮಾಡುತ್ತಾರೆ. ಒಂದು ಡೋನರ್‌ಗೆ 25,000 ಕಮಿಷನ್ ಪಡೆಯುತ್ತಿರುತ್ತಾರೆ. ಡೋನರ್ ಮತ್ತು ಎಗ್ಸ್ ಪಡೆಯುವವರು ಭೇಟಿಯಾಗಬೇಕು ಎಂದರೆ ಅದನ್ನು ಮಾಡಿಸುತ್ತಿರಲಿಲ್ಲಾ. ಆರೋಪಿಗಳು ತಾವು ಕುಟುಂಬ ಎಂದು ಸಹಿ ಮಾಡುತ್ತಿದ್ದರು. 25-35 ವಯಸ್ಸಿನ ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತಿದ್ದರು. ಆ ಮಹಿಳೆಯರು ಸಿಕ್ಕಿಲ್ಲಾ ಎಂದಾಗ ಆಧಾರ್ ಕಾರ್ಡ್ ನಕಲಿ ಮಾಡಿ ಕೆಲಸ ಮಾಡಲಾಗುತ್ತಿತ್ತು. ತಮಿಳುನಾಡಿನ ಆಸ್ಪತ್ರೆ ಕೇಸ್ ಆದ ಬಳಿಕ ಈ ದಂಧೆಯೂ ಕಷ್ಟ ಆಯಿತು. ನಂತರ ಗರ್ಭಿಣಿರು ಗರ್ಭಪಾತ ಮಾಡಿಸಲು ಬರುತ್ತಿದ್ದವರನ್ನು ಟಾರ್ಗೆಟ್ ಮಾಡಿದ್ದಾರೆ. ಇದನ್ನೂ ಓದಿ: 1 ವರ್ಷದ ಬಳಿಕ ರೇಣುಕಾಚಾರ್ಯ ಅಣ್ಣನ ಮಗ ಸಾವು ಪ್ರಕರಣ ಮುಕ್ತಾಯ; ಅಪಘಾತದಿಂದಲೇ ಸಾವು ಎಂದು ವರದಿ
ಈ ಕುರಿತು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು, ನವೆಂಬರ್ 26ರಂದು ಆರ್‌ಆರ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಕ್ಕಳನ್ನು ಕಾರಿನಲ್ಲಿ ಕರೆದುಕೊಂಡು ಹೋಗುತ್ತಿದ್ದರು. ಅನುಮಾನದಿಂದ ಅವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಯಿತು. 20 ದಿನದ ನವಜಾತ ಶಿಶುವನ್ನು ಇಟ್ಟುಕೊಂಡು ಮಾರಾಟ ಮಾಡಲು ಯತ್ನಿಸಿದ್ದರು. ಈ ಗ್ಯಾಂಗ್‌ನಲ್ಲಿ 7 ಜನ ಆರೋಪಿಗಳಿದ್ದಾರೆ. ಇವರು ಮಹಿಳೆಯರನ್ನು ಪುಸಲಾಯಿಸಿ ಮಗುವನ್ನು ಹೆತ್ತುಕೊಡಲು ಒಪ್ಪಿಸಿದ್ದರು. ಹಣಕ್ಕಾಗಿ ಬಾಡಿಗೆ ತಾಯಿಯನ್ನು ಮಾಡುತ್ತಿದ್ದರು. ಇದುವರೆಗೆ ಈ ಗ್ಯಾಂಗ್ 10 ಮಕ್ಕಳನ್ನು ಮಾರಾಟ ಮಾಡಿದೆ ಎಂದು ಹೇಳಿದರು. ಇದನ್ನೂ ಓದಿ: ಬೆಂಗ್ಳೂರಲ್ಲಿ ಹಸುಗೂಸುಗಳ ಮಾರಾಟ ದಂಧೆ – ಬೃಹತ್ ಜಾಲ ಭೇದಿಸಿದ ಸಿಸಿಬಿ, 8 ಮಂದಿ ಅರೆಸ್ಟ್
8ರಿಂದ 10 ಲಕ್ಷ ರೂ.ಗೆ ಮಕ್ಕಳನ್ನು ಮಾರಾಟ ಮಾಡಲಾಗುತ್ತಿತ್ತು. ಅನಧಿಕೃತವಾಗಿ ದಾಖಲಾತಿಗಳನ್ನು ಮಾಡಿಕೊಡಲಾಗುತಿತ್ತು. ತಮಿಳುನಾಡಿನ ಪ್ರತಿಷ್ಠಿತ ವೈದ್ಯರು ಇದರಲ್ಲಿ ಭಾಗಿಯಾಗಿದ್ದಾರೆ. ತಮಿಳುನಾಡಿನ 4 ಆಸ್ಪತ್ರೆಗಳು ಇದರಲ್ಲಿ ಭಾಗಿಯಾಗಿದೆ. ಈಗಾಗಲೇ 3 ಆಸ್ಪತ್ರೆಗಳನ್ನು ಮುಚ್ಚಲಾಗಿದ್ದು, 1 ಆಸ್ಪತ್ರೆಯಲ್ಲಿ ಇನ್ನೂ ಈ ಅವ್ಯವಹಾರ ನಡೆಯುತ್ತಿದೆ. ಅಲ್ಲಿನ ಬಡ ಹೆಣ್ಣುಮಕ್ಕಳಿಗೆ ಪುಸಲಾಯಿಸಿ ಈ ರೀತಿ ಮಾಡಿದ್ದಾರೆ. ಅಕ್ರಮದಲ್ಲಿ ಭಾಗಿಯಾಗಿರುವ ಡಾಕ್ಟರ್‌ಗಳ ಬಂಧನ ಆಗಬೇಕು ಎಂದರು. ಇದನ್ನೂ ಓದಿ: ಅಪ್ರಾಪ್ತ ಮಗಳ ಮೇಲೆಯೇ ರೇಪ್ ಮಾಡಲು ಪ್ರೇಮಿಗೆ ಅವಕಾಶ ಕೊಟ್ಟ ಮಹಿಳೆಗೆ 40 ವರ್ಷ ಜೈಲು ಶಿಕ್ಷೆ
ಬೆಂಗಳೂರು: ನಗರದಲ್ಲಿ ನಡೆದ ಭರ್ಜರಿ ಕಾರ್ಯಾಚರಣೆಯಲ್ಲಿ ಹಸುಗೂಸುಗಳ ಮಾರಾಟ ದಂಧೆಯನ್ನು ಸಿಸಿಬಿ ಪೊಲೀಸರು (CCB Police) ಭೇದಿಸಿದ್ದಾರೆ. ಪುಟ್ಟ ಕಂದಮ್ಮಗಳನ್ನು ಮಾರಾಟ (Children’s Sale) ಮಾಡುತ್ತಿದ್ದ ಘಟನೆ ಬೆಳಕಿಗೆ ಬಂದಿದೆ. ಈವರೆಗೆ ದುರುಳರು ಸುಮಾರು 60ಕ್ಕೂ ಹೆಚ್ಚು ಮಕ್ಕಳನ್ನು ಮಾರಾಟ ಮಾಡಿರೋದಾಗಿ ವಿಚಾರಣೆ ವೇಳೆ ದಂಧೆಕೋರರು ಸ್ಪೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ.
ಆರೋಪಿ ಏಜೆಂಟ್‌ಗಳು ನೀಡಿದ ಮಾಹಿತಿ ಮೇರೆಗೆ ಈವರೆಗೆ ಮಾರಾಟವಾಗಿರೋ 10 ಮಕ್ಕಳ ವಿಳಾಸವನ್ನು ಸಿಸಿಬಿ ಪೊಲೀಸರು ಪತ್ತೆ ಮಾಡಿದ್ದಾರೆ. ವಿಎಫ್, ಸೆರೊಗೆಸಿ ಮೂಲಕ ತಾಯಂದಿರಿಂದ ಮಕ್ಕಳನ್ನ ಪಡೆದು ಮಾರಾಟ ಮಾಡಿರುವುದು ತನಿಖೆಯಲ್ಲಿ ಗೊತ್ತಾಗಿದೆ.
ಕೇವಲ 10, 20 ದಿನದ ಎಳೆ ಕಂದಮ್ಮಗಳನ್ನ ಈ ಗ್ಯಾಂಗ್ ಮಾರಾಟ ಮಾಡುತ್ತಿತ್ತು. ಅಲ್ಲದೇ 1 ಮಗುವಿಗೆ 3 ಲಕ್ಷ ಹಣ ಕೊಡುವುದಾಗಿ ತಾಯಂದಿರಿಗೆ ಆಸೆ ತೋರಿಸಿಸುತ್ತಿದ್ದರು. ಅವುಗಳನ್ನು ಖರೀದಿಸಿ ಮಕ್ಕಳಿಲ್ಲದ ದಂಪತಿಗಳಿಗೆ 8 ಲಕ್ಷಕ್ಕೆ ಮಾರಾಟ ಮಾಡಿ, ಮಧ್ಯವರ್ತಿಗಳು ತಾವು 5 ಲಕ್ಷ ಹಣವನ್ನ ಲಪಟಾಯಿಸುತ್ತಿದ್ದರು. ಗರ್ಭಿಣಿಯಾಗಿದ್ದು, ಮನೆಯಲ್ಲಿ ಆರ್ಥಿಕ ಸಂಕಷ್ಟ ಇರುವ ಮಹಿಳೆಯರು, 2-3 ಮಕ್ಕಳಿದ್ದು, ಮತ್ತೆ ಗರ್ಭಿಣಿಯಾಗಿ ಕಷ್ಟದಲ್ಲಿರುವ ಮಹಿಳೆಯರು, ಕೂಲಿ ಮಾಡುವ ಮಹಿಳೆಯರನ್ನೇ ಹೆಚ್ಚಾಗಿ ಆರೋಪಿಗಳು ಟಾರ್ಗೆಟ್ ಮಾಡುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನೂ ಮಕ್ಕಳ ಮಾರಾಟ ಜಾಲವನ್ನ ಪತ್ತೆ ಹಚ್ಚಲು ಸಿಸಿಬಿ ಅಧಿಕಾರಿಗಳ ತಂಡ 1 ತಿಂಗಳು ಮಾರುವೇಷದಲ್ಲಿ ಕಾರ್ಯಚರಣೆ ನಡೆಸಿತ್ತು. ಮಗುವನ್ನು ಕೊಳ್ಳುವವರಂತೆ ರಾಜರಾಜೇಶ್ವರಿ ನಗರದಲ್ಲಿ ಮಗು ಮಾರಾಟ ಜಾಲಕ್ಕೆ ಖೆಡ್ಡಾ ತೋಡಿದ್ದರು. ಮಾರಾಟ ಜಾಲದಲ್ಲಿ ಮಹಾಲಕ್ಷ್ಮಿ ಎಂಬಾಕೆಯೇ ಕರ್ನಾಟಕದ ಕಿಂಗ್‌ಪಿನ್ ಆಗಿದ್ದು, ರಾಜ್ಯದಲ್ಲಿ ಹಲವರಿಗೆ ಮಗು ಮಾರಾಟ ಮಾಡುತ್ತಿದ್ದಳು ಅನ್ನೋದು ತಿಳಿದುಬಂದಿದೆ.
ಸಿಸಿಬಿ ಪೊಲೀಸರು ಮಹಾಲಕ್ಷ್ಮಿ ಸೇರಿ ತಮಿಳುನಾಡಿನ ಈರೋಡ್ ಮೂಲದ ಕಣ್ಣನ್ ರಾಮಸ್ವಾಮಿ, ಮುರುಗೇಶ್ವರಿ, ಹೇಮಲತಾ, ಶರಣ್ಯಳನ್ನ ಮಗು ಮಾರಾಟ ಮಾಡುತ್ತಿದ್ದಾಗಲೇ ಅರೆಸ್ಟ್ ಮಾಡಿದ್ದಾರೆ. ಆರೋಪಿಗಳ ತೀವ್ರ ವಿಚಾರಣೆ ಬಳಿಕ ದಂಧೆಯಲ್ಲಿ ತೊಡಗಿದ್ದ ಗೋಮತಿ, ರಾಧಾಮಣಿ ಹಾಗೂ ಸುಹಾಸಿಣಿಯನ್ನು ಬಂಧಿಸಿದ್ದಾರೆ. ಸದ್ಯ ಬಂಧಿತ ಆರೋಪಿಗಳ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.
ಮಲ್ಲಿಯ ಗೆಳೆಯರು, ಸೇರಿ ಯಾವ ಪರಿಚಿತರನ್ನ ಕೇಳಿದರೂ ಸತ್ತಿದ್ದಾನೆ ಎಂದು ಮಾಹಿತಿ ಸಿಕ್ಕಿತ್ತು. ಸತ್ತು ಹೋಗಿದ್ದಾನೆ ಎನ್ನುವುದಕ್ಕೆ ಬೇಕಾದ ದಾಖಲೆಯನ್ನು ಸಹ ಕುಟುಂಬ ಮಾಡಿಟ್ಟುಕೊಂಡಿತ್ತು.
ಬೆಂಗಳೂರು: ಹಿಂದೂ ಧರ್ಮದ (Hindu Religion) ಬಗ್ಗೆ ಅವಹೇಳನ ಮಾಡಿದ್ದಕ್ಕೆ ಪತ್ರ ಬರೆದು ಬೆದರಿಕೆ ಹಾಕಿದ್ದರೆ ಪ್ರಗತಿಪರರು ಸುಮ್ಮನಾಗುತ್ತಿದ್ದರು. ಈ ಕಾರಣಕ್ಕೆ ನಾನು ಪತ್ರ ಬರೆಯುತ್ತಿದ್ದೆ ಎಂದು ಆರೋಪಿ ಶಿವಾಜಿರಾವ್ ಜಾಧವ್ (Shivaji Rao Jadhav) ಸಿಸಿಬಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ.
ಸಾಹಿತಿಗಳಿಗೆ ಬೆದಿಕೆ ಹಾಕಿದ ಪ್ರಕಣಕ್ಕೆ ಸಂಬಂಧಿಸಿದಂತೆ ದಾವಣಗೆರೆಯಲ್ಲಿ ಸಿಸಿಬಿ ಪೊಲೀಸರು (CCB Police) ಶಿವಾಜಿ ರಾವ್‌ನನ್ನು ಬಂಧಿಸಿದ್ದು, ಕೋರ್ಟ್ 13 ದಿನ ಪೊಲೀಸ್ ಕಸ್ಟಡಿಗೆ (Police Custody) ನೀಡಿದೆ. ಪೊಲೀಸರ ವಿಚಾರಣೆ ಸಮಯದಲ್ಲಿ ಹಲವು ವಿಷಯಗಳನ್ನು ತಿಳಿಸಿದ್ದಾನೆ ಎಂದು ಸಿಸಿಬಿ ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ. ಇದನ್ನೂ ಓದಿ: ಹಿಂದುತ್ವದ ಮೇಲೆ ಆತನಿಗೆ ಒಲವಿತ್ತು, ಪತ್ರದಲ್ಲಿ ಮನವಿ ಮಾಡಿರಬಹುದು – ಆರೋಪಿ ಶಿವಾಜಿರಾವ್ ಜಾಧವ್ ಸಹೋದರ
ಏನು ಬಾಯಿಬಿಟ್ಟಿದ್ದಾನೆ?
ಸಾಹಿತಿಗಳ ಬಾಯಿ ಮುಚ್ಚಿಸಲು ನನಗೆ ಬೇರೆ ಯಾವುದೇ ದಾರಿಯೂ ಸಿಕ್ಕಿರಲಿಲ್ಲ. ಪತ್ರ ಬರೆದು ಬೆದರಿಕೆ ಹಾಕುವುದು ಒಂದೇ ನನ್ನ ಮುಂದಿದ್ದ ದಾರಿಯಾಗಿತ್ತು. ನಾನು ಪತ್ರ ಬರೆದ ಬಳಿಕ ಎಲ್ಲರೂ ಸುಮ್ಮನಿರುತ್ತಿದ್ದರು. ಹಿಂದೂ ಧರ್ಮದ ಬಗ್ಗೆ ವಿರೋಧವಾಗಿ ಮಾತನಾಡುವುದನ್ನು ನಿಲ್ಲಿಸುತ್ತಿದ್ದರು. 2008 ರಲ್ಲಿಯೇ ಇದು ನನಗೆ ಮನವರಿಕೆಯಾಗಿತ್ತು. ಇದನ್ನೂ ಓದಿ: ಸಾಹಿತಿಗಳಿಗೆ ಜೀವ ಬೆದರಿಕೆ ಪತ್ರ – ದಾವಣಗೆರೆ ಮೂಲದ ಹಿಂದೂ ಸಂಘಟನೆಯ ಸಂಚಾಲಕ ಅರೆಸ್ಟ್
2008 ರಲ್ಲಿ ಯು ಆರ್ ಅನಂತಮೂರ್ತಿ, ಭಗವಾನ್ ಅವರಿಗೆ ಪತ್ರ ಬರೆದು ಬೆದರಿಸಿದ್ದೆ. ಪತ್ರದ ಬಳಿಕ ಇವರು ಸುಮ್ಮನಾಗಿದ್ದರು. ಇತ್ತಿಚೀನ ದಿನಗಳಲ್ಲಿ ಈ ಸಾಹಿತಿಗಳದ್ದು ಹೆಚ್ಚಾಗಿತ್ತು. ಅದಕ್ಕೆ ಅವರಿಗೆ ಪತ್ರ ಬರೆದು ಹೆದರಿಸಿದ್ದೆ. ನನಗೆ ಶಕ್ತಿ ಇದ್ದಿದ್ದರೆ ಮತ್ತೊಂದು ಗೌರಿ ಲಂಕೇಶ್ ಹತ್ಯೆಯ ರೀತಿ ಆಗುತ್ತಿತ್ತು. ನಾನು ಪತ್ರ ಬರೆದ ಬಳಿಕ ಅವರು ವಿರೋಧವಾಗಿ ಮಾತನಾಡುವುದನ್ನು ನಿಲ್ಲಿಸಿದ್ದರು. ಈ ಕಾರಣಕ್ಕೆ ನಾನು ಪತ್ರ ಬರೆಯುತ್ತಿದ್ದೆ ಎಂದು ಹೇಳಿರುವುದಾಗಿ ಸಿಸಿಬಿ ಮೂಲಗಳು ತಿಳಿಸಿವೆ.
ದಾವಣಗೆರೆ: ಸಾಹಿತಿಗಳಿಗೆ ಪತ್ರ (Threat Letter to Kannada Writers) ಬರೆದು ಮನವಿ ಮಾಡಿರಬಹುದು. ಆದರೆ ಆತ ಬೆದರಿಕೆ ಒಡ್ಡಲು ಸಾಧ್ಯವಿಲ್ಲ ಎಂಬುದು ನನ್ನ ಅಭಿಪ್ರಾಯ ಎಂದು ಶಿವಾಜಿ ರಾವ್ ಸಹೋದರ ಗುರುರಾಘವೆಂದ್ರ ಜಾಧವ್ ಹೇಳಿದ್ದಾರೆ.
ಆತನಿಗೆ ಹಿಂದುತ್ವದ ಮೇಲೆ ಒಲವಿತ್ತು. ಆತ ಶಿವಮೊಗ್ಗದಲ್ಲಿ ನಡೆಯುವ ಹಿಂದುತ್ವದ ಕಾರ್ಯಕ್ರಮಗಳಿಗೆ ಹೋಗಿಬರುತ್ತಿದ್ದ. ಪ್ರತಿನಿತ್ಯ ಭಗವದ್ಗೀತೆ ಓದುತ್ತಿದ್ದ. ಹಿಂದೂ ಧರ್ಮದ ಬಗ್ಗೆ ಆತನಿಗೆ ಅಪಾರ ಪ್ರಮಾಣದ ಗೌರವವಿತ್ತು. ಆದರೆ ಅದಕ್ಕಾಗಿ ಬೆದರಿಕೆ ಹಾಕುವ ಮಟ್ಟಕ್ಕೆ ಹೋಗಿದ್ದಾನೆ ಎಂಬ ವಿಚಾರದಲ್ಲಿ ನನಗೆ ನಂಬಿಕೆ ಇಲ್ಲ. ಆತ ಪತ್ರ ಬರೆದಿರಬಹುದು. ಪತ್ರದಲ್ಲಿ ಸಾಹಿತಿಗಳ ಭಾಷಣದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಮನವಿ ಮಾಡಿರಬಹುದು. ಆದರೆ ಬೆದರಿಕೆ ಹಾಕುವ ವ್ಯಕ್ತಿತ್ವ ಆತನದ್ದಲ್ಲ ಎಂದು ಹೇಳಿದ್ದಾರೆ.
ಬೆದರಿಕೆ ಪತ್ರ ಬರೆದಿದ್ದಾರೆ ಎಂಬುದು ನಮಗೆ ನಂಬಲಾಗದ ವಿಚಾರವಾಗಿದೆ. ಆತ ಪ್ರಿಂಟಿಂಗ್ ಪ್ರೆಸ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಬೆಳಗ್ಗೆ ಹೋದರೆ ರಾತ್ರಿ 10 ಗಂಟೆಗೆ ಮನೆಗೆ ಮರಳುತ್ತಿದ್ದ. ಅಲ್ಲಿಯೂ ಆತ ಒಳ್ಳೆಯ ಹೆಸರನ್ನೇ ಗಳಿಸಿದ್ದಾನೆ. ಆತ ಈ ಕೃತ್ಯ ಎಸಗಿದ್ದಾನೆ ಎಂಬುದು ನನಗೆ ನಂಬಲಾಗುತ್ತಿಲ್ಲ ಎಂದರು.
ಆತನಿಗೆ ಇನ್ನೂ ಮದುವೆ ಆಗಿಲ್ಲ, ಯಾವಾಗಲೂ ಹಿಂದುತ್ವ ಎಂದು ಸುತ್ತಾಡುತ್ತಿದ್ದ. ಬಂಧನದ ಬಳಿಕವಷ್ಟೇ ನಮಗೆ ಈ ವಿಚಾರ ಗೊತ್ತಾಗಿದೆ. ಪೊಲೀಸರು ಆತನನ್ನು ಬಂಧಿಸಿರುವುದಾಗಿ ತಿಳಿಸಲು ಕರೆ ಮಾಡಿದ್ದರು. ಬಳಿಕ ಯಾವುದೇ ಮಾಹಿತಿಯನ್ನು ನೀಡಿಲ್ಲ. ಹೆಚ್ಚಿನ ಮಾಹಿತಿಯನ್ನು ಪೊಲೀಸರು ಇನ್ನಷ್ಟೇ ನೀಡಬೇಕು ಎಂದಿದ್ದಾರೆ. ಇದನ್ನೇ ಓದಿ: ವ್ಯಕ್ತಿಗಳ ಬ್ರೈನ್ ವಾಷ್ ಮಾಡಿ ಆಯುಧ ಮಾಡುವುದು ಪ್ರಜಾಪ್ರಭುತ್ವದ ಲಕ್ಷಣವಲ್ಲ: ಕುಂ.ವೀರಭದ್ರಪ್ಪ