Tag: CCB police

  • ಸಿಸಿಬಿಯಿಂದ ಮತ್ತೆ ಮುಂದುವರಿದ ರೇಡ್- ರಾತ್ರಿ ನಗರದ 40 ಬಾರ್ ಗಳ ಮೇಲೆ ದಾಳಿ

    ಸಿಸಿಬಿಯಿಂದ ಮತ್ತೆ ಮುಂದುವರಿದ ರೇಡ್- ರಾತ್ರಿ ನಗರದ 40 ಬಾರ್ ಗಳ ಮೇಲೆ ದಾಳಿ

    – 102 ಮಂದಿಯನ್ನ ವಶಕ್ಕೆ ಪಡೆದ ಪೊಲೀಸರು

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ರಾತ್ರಿ ಸಿಸಿಬಿ ಪೊಲೀಸರು ಮತ್ತೆ ಬೃಹತ್ ದಾಳಿ ನಡೆಸಿದ್ದಾರೆ. ನಗರದ ಸುಮಾರು 40 ಬಾರ್ ಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.

    5 ಎಸಿಪಿ, 20 ಇನ್ಸ್ ಪೆಕ್ಟರ್ ಮತ್ತು 70 ಸಿಬ್ಬಂದಿ ದಾಳಿ ನಡೆಸಿದ್ದಾರೆ. ಸಿಸಿಬಿ ದಾಳಿ ನಡೆಸುವ ವೇಳೆ 102 ಜನರನ್ನು ವಶಕ್ಕೆ ಪಡೆದಿದ್ದಾರೆ. ಹೆಣ್ಣೂರು ಸೇರಿದಂತೆ ಬೆಂಗಳೂರಿನ 40 ಪ್ರದೇಶದಲ್ಲಿ ದಾಳಿ ನಡೆಸಿದ್ದಾರೆ.

    ಕಳೆದ ವಾರ ತಡರಾತ್ರಿ ಸಿಸಿಬಿ ಪೊಲೀಸರು ಅನಧಿಕೃತ ಪಬ್, ಬಾರ್ ಆ್ಯಂಡ್ ರೆಸ್ಟೋರೆಂಟ್ ಗಳ ಮೇಲೆ ದಾಳಿ ನಡೆಸಿ ರಾತ್ರಿಯಿಡೀ ಕಾರ್ಯಾಚರಣೆ ನಡೆಸಿದ್ದರು. ನಗರದ ಮೆಜೆಸ್ಟಿಕ್, ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ಹಾಗೂ ಇಂದಿರಾನಗರದಲ್ಲಿ ದಾಳಿ ನಡೆಸಿದ್ದರು. ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್, ಸಿಸಿಬಿ ಡಿಸಿಪಿ ಗಿರೀಶ್ ನೇತೃತ್ವದಲ್ಲಿ ಒಟ್ಟು 100ಕ್ಕೂ ಹೆಚ್ಚು ಸಿಸಿಬಿ ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿದ್ದರು.

    ಒಟ್ಟು 20ಕ್ಕೂ ಹೆಚ್ಚು ಕಡೆ ನಡೆದ ದಾಳಿಯಲ್ಲಿ ಕೆಲವೆಡೆ ಯುವತಿಯರನ್ನು ಅಕ್ರಮವಾಗಿ ಕೂಡಿಟ್ಟುಕೊಂಡು ಬಾರ್ ಗರ್ಲ್ಸ್ ಆಗಿ ಕೆಲಸ ಮಾಡಿಸುತ್ತಿರುವುದು ಕಂಡು ಬಂದಿತ್ತು. ದಾಳಿ ವೇಳೆ ಅಕ್ರಮವಾಗಿ ಪಬ್ ಗಳನ್ನು ನಡೆಸುತ್ತಿರುವುದು ಗೊತ್ತಾಗಿದೆ. ಅಲ್ಲದೇ ಪಬ್ ಗಳ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿರುವ ಶಂಕೆ ಹಿನ್ನೆಲೆಯಲ್ಲಿ ಆಯಾ ಪಬ್ ಗಳ ಸಿಬ್ಬಂದಿಯನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಲಾಗಿತ್ತು.

    ಕೆಲ ಯುವತಿಯರನ್ನು ರಕ್ಷಿಸಿ ಅವರಿಂದಲೂ ಸಿಸಿಬಿ ಪೊಲೀಸರು ಹೇಳಿಕೆ ಪಡೆದಿದ್ದರು. ಅಕ್ರಮವೆಸಗಿದ ಆಯಾ ಪಬ್ ಗಳು ಹಾಗೂ ಬಾರ್ ಆ್ಯಂಡ್ ರೆಸ್ಟೋರೆಂಟ್ ಗಳ ಮಾಲೀಕರಿಗೆ ನೋಟಿಸ್ ನೀಡಲಾಗಿದ್ದು, ಖುದ್ದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಇಸ್ಪೀಟ್ ಅಡ್ಡೆಗಳ ಮೇಲೆ ದಾಳಿ – 18.92 ಲಕ್ಷ ರೂ. ಹಣ, 44 ಮಂದಿ ವಶ

    ಇಸ್ಪೀಟ್ ಅಡ್ಡೆಗಳ ಮೇಲೆ ದಾಳಿ – 18.92 ಲಕ್ಷ ರೂ. ಹಣ, 44 ಮಂದಿ ವಶ

    -ಅಲೋಕ್ ಕುಮಾರ್ ಆಗಮನ, ಮೈಕೊಡವಿ ನಿಂತಿ ಪೊಲೀಸರು

    ಬೆಂಗಳೂರು: ಅಲೋಕ್ ಕುಮಾರ್ ಅವರು ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತರಾಗಿ ಸಿಲಿಕಾನ್ ಸಿಟಿಗೆ ಬಂದಿದ್ದೇ ತಡ ಸಿಸಿಬಿ ಪೊಲೀಸರು ಮೈಕೊಡವಿ ನಿಂತಿದ್ದಾರೆ.

    ಶನಿವಾರ ರಾತ್ರಿ ಇಸ್ಪೀಟ್ ಅಡ್ಡೆಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ವಿಲ್ಸನ್ ಗಾರ್ಡನ್ ಕ್ಲಬ್ ಸೇರಿ ಒಟ್ಟು 20 ಕ್ಕೂ ಹೆಚ್ಚು ಕಡೆ ದಾಳಿ ನಡೆಸಲಾಗಿದೆ. ವಿಲ್ಸನ್ ಗಾರ್ಡನ್ ಕ್ಲಬ್‍ವೊಂದರಲ್ಲಿ 44 ಜನರನ್ನು ವಶಕ್ಕೆ ಪಡೆದಿದ್ದು, ಒಟ್ಟು 18 ಲಕ್ಷ 92 ಸಾವಿರ ನಗದು ಹಾಗೂ ಇಸ್ಪೀಟ್ ಜಪ್ತಿ ಮಾಡಲಾಗಿದೆ. ಇದನ್ನೂ ಓದಿ: ತಡರಾತ್ರಿ ಪಬ್, ಬಾರ್&ರೆಸ್ಟೋರೆಂಟ್ ಗಳ ಮೇಲೆ ಸಿಸಿಬಿ ದಾಳಿ- ಮಾಲೀಕರಿಗೆ ನೋಟಿಸ್

    ಶುಕ್ರವಾರ ಕೂಡ ಸಿಸಿಬಿ ಪೊಲೀಸರು ಅನಧಿಕೃತ ಪಬ್ ಮತ್ತು ಬಾರ್ ಆಂಡ್ ರೆಸ್ಟೋರೆಂಟ್ ಗಳ ಮೇಲೆ ದಾಳಿ ನಡೆಸಿ ರಾತ್ರಿಯಿಡೀ ಕಾರ್ಯಾಚರಣೆ ನಡೆಸಿದ್ದರು. ನಗರದ ಮೆಜೆಸ್ಟಿಕ್, ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ಹಾಗೂ ಇಂದಿರಾನಗರದಲ್ಲಿ ದಾಳಿ ನಡೆಸಲಾಗಿತ್ತು. ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್, ಸಿಸಿಬಿ ಡಿಸಿಪಿ ಗಿರೀಶ್ ನೇತೃತ್ವದಲ್ಲಿ ಒಟ್ಟು 100ಕ್ಕೂ ಹೆಚ್ಚು ಸಿಸಿಬಿ ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿದ್ದರು. ಇದನ್ನೂ ಓದಿ: ಅಲೋಕ್ ಕುಮಾರ್ ಖದರ್‌ಗೆ ಬೆಂಗಳೂರು ಮಹಿಳೆಯರು ಫಿದಾ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ತಡರಾತ್ರಿ ಪಬ್, ಬಾರ್&ರೆಸ್ಟೋರೆಂಟ್ ಗಳ ಮೇಲೆ ಸಿಸಿಬಿ ದಾಳಿ- ಮಾಲೀಕರಿಗೆ ನೋಟಿಸ್

    ತಡರಾತ್ರಿ ಪಬ್, ಬಾರ್&ರೆಸ್ಟೋರೆಂಟ್ ಗಳ ಮೇಲೆ ಸಿಸಿಬಿ ದಾಳಿ- ಮಾಲೀಕರಿಗೆ ನೋಟಿಸ್

    ಬೆಂಗಳೂರು: ನಿನ್ನೆ ತಡ ರಾತ್ರಿ ಸಿಸಿಬಿ ಪೊಲೀಸರು ಅನಧಿಕೃತ ಪಬ್, ಬಾರ್ ಆಂಡ್ ರೆಸ್ಟೋರೆಂಟ್ ಗಳ ಮೇಲೆ ದಾಳಿ ನಡೆಸಿ ರಾತ್ರಿಯಿಡೀ ಕಾರ್ಯಾಚರಣೆ ನಡೆಸಿದ್ದಾರೆ.

    ನಗರದ ಮೆಜೆಸ್ಟಿಕ್, ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ಹಾಗೂ ಇಂದಿರಾನಗರದಲ್ಲಿ ದಾಳಿ ನಡೆಸಲಾಗಿದೆ. ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್, ಸಿಸಿಬಿ ಡಿಸಿಪಿ ಗಿರೀಶ್ ನೇತೃತ್ವದಲ್ಲಿ ಒಟ್ಟು 100ಕ್ಕೂ ಹೆಚ್ಚು ಸಿಸಿಬಿ ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿದ್ದರು.

    ಒಟ್ಟು 20ಕ್ಕೂ ಹೆಚ್ಚು ಕಡೆ ನಡೆದ ದಾಳಿಯಲ್ಲಿ ಕೆಲವೆಡೆ ಯುವತಿಯರನ್ನು ಅಕ್ರಮವಾಗಿ ಕೂಡಿಟ್ಟುಕೊಂಡು ಬಾರ್ ಗರ್ಲ್ಸ್ ಆಗಿ ಕೆಲಸ ಮಾಡಿಸುತ್ತಿರುವುದು ಕಂಡು ಬಂದಿದೆ. ದಾಳಿ ವೇಳೆ ಅಕ್ರಮವಾಗಿ ಪಬ್ ಗಳನ್ನು ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಅಲ್ಲದೇ ಪಬ್ ಗಳ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿರುವ ಶಂಕೆ ಹಿನ್ನೆಲೆಯಲ್ಲಿ ಆಯಾ ಪಬ್ ಗಳ ಸಿಬ್ಬಂದಿಯನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಲಾಗ್ತಿದೆ.

    ಕೆಲ ಯುವತಿಯರನ್ನು ರಕ್ಷಿಸಿ ಅವರಿಂದಲೂ ಸಿಸಿಬಿ ಪೊಲೀಸರು ಹೇಳಿಕೆ ಪಡೆಯುತ್ತಿದ್ದಾರೆ. ಅಕ್ರಮವೆಸಗಿದ ಆಯಾ ಪಬ್ ಗಳು ಹಾಗೂ ಬಾರ್ ಆಂಡ್ ರೆಸ್ಟೋರೆಂಟ್ ಗಳ ಮಾಲೀಕರಿಗೆ ನೋಟಿಸ್ ನೀಡಲಾಗಿದ್ದು, ಖುದ್ದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ನೀವೇ ನನ್ನ ಹೆಂಡ್ತಿಯನ್ನ ಕಂಟ್ರೋಲ್ ಮಾಡ್ಬೇಕು ಸಾರ್ – ರೌಡಿಶೀಟರ್ ಯಶಸ್ವಿನಿ ಪತಿಯಿಂದ ಪೊಲೀಸ್ರಿಗೆ ಮನವಿ

    ನೀವೇ ನನ್ನ ಹೆಂಡ್ತಿಯನ್ನ ಕಂಟ್ರೋಲ್ ಮಾಡ್ಬೇಕು ಸಾರ್ – ರೌಡಿಶೀಟರ್ ಯಶಸ್ವಿನಿ ಪತಿಯಿಂದ ಪೊಲೀಸ್ರಿಗೆ ಮನವಿ

    ಬೆಂಗಳೂರು: ನನ್ನ ಹೆಂಡತಿ ನನ್ನ ಮಾತೇ ಕೇಳುವುದಿಲ್ಲ ಸಾರ್, ನೀವೇ ನನ್ನ ಹೆಂಡತಿಯನ್ನ ಕಂಟ್ರೋಲ್ ಮಾಡಬೇಕು ಸಾರ್ ಎಂದು ಕೈಮುಗಿದುಕೊಂಡು ರೌಡಿಶೀಟರ್ ಯಶಸ್ವಿನಿಯ ಎರಡನೇ ಪತಿ ದಡಿಯಾ ಮಹೇಶ್ ಪೊಲೀಸರ ಮುಂದೆ ತನ್ನ ಅಳಲನ್ನು ತೋಡಿಕೊಂಡಿದ್ದಾನೆ.

    ಇಂದು ಸಿಸಿಬಿ ಪೊಲೀಸರು ರೌಡಿಶೀಟರ್ ಗಳ ಮನೆ ಮೇಲೆ ದಾಳಿ ಮಾಡಿದ್ದಾರೆ. ಆಗ ಸಿಸಿಬಿ ಪೊಲೀಸರು ದಡಿಯಾ ಮಹೇಶ್‍ಗೆ ನಿನ್ನ ಹೆಂಡತಿಯೂ ರೌಡಿಶೀಟರ್, ಆಕೆಯನ್ನು ಕಂಟ್ರೋಲ್‍ನಲ್ಲಿ ಇಡು ಅಂತ ಹೇಳಿದ್ದಾರೆ. ಆಗ ನಾನು ಎಲ್ಲಾ ತರದಲ್ಲೂ ಬುದ್ಧಿ ಹೇಳಿದ್ದೇನೆ. ಆದರೆ ಅವಳು ನನ್ನ ಮಾತೇ ಕೇಳುವುದಿಲ್ಲ ಸರ್. ನಿಮ್ಮಂಥವರೇ ಅವಳಿಗೆ ಬುದ್ಧಿ ಕಲಿಸಿದರೆ ಕಲಿತಾಳೆ ಸಾರ್ ಅಂತ ಸಿಸಿಬಿ ಡಿಸಿಪಿ ಗಿರೀಶ್ ಮುಂದೆ ದಡಿಯಾ ಮಹೇಶ್ ಮನವಿ ಮಾಡಿಕೊಂಡಿದ್ದಾನೆ.

    ರೌಡಿಶೀಟರ್ ಮಹೇಶ್ ಮನೆಯಲ್ಲಿ ಆಕೆಯ ಹೆಂಡತಿಯ ಫೋಟೋ ಮತ್ತು ಪಿಸ್ತೂಲ್ ಸಿಕ್ಕಿದ್ದು, ಅದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಳಿಕ ಈ ಬಗ್ಗೆ ಪ್ರತಿಕ್ರಿಸಿದ ಡಿಸಿಪಿ ಗಿರೀಶ್ ಅವರು, ನಿನ್ನ ಹೆಂಡತಿಗೆ ಸರಿಯಾಗಿ ಬುದ್ಧಿ ಕಲಿಸುತ್ತೇವೆ. ನಿಮ್ಮ ಮನೆಯಲ್ಲಿ ಸಿಕ್ಕ ಪಿಸ್ತೂಲ್ ಬಗ್ಗೆ ತನಿಖೆ ಮಾಡುತ್ತೇವೆ. ನಿನ್ನ ಮತ್ತು ನಿನ್ನ ಜೊತೆ ನಿನ್ನ ಹೆಂಡತಿಯನ್ನ ಕೂಡಲೇ ಸರಿ ಮಾಡುತ್ತೇವೆ ಎಂದು ಹೇಳಿರುವುದಾಗಿ ತಿಳಿದು ಬಂದಿದೆ.

    ಇತ್ತೀಚೆಗಷ್ಟೇ ಶಿಸ್ತು ಸಂಸ್ಕೃತಿ ಎನ್ನುವ ಶ್ರೀರಾಮಸೇನೆ ಬೆಂಗಳೂರು ಮಹಿಳಾ ಘಟಕ ಅಧ್ಯಕ್ಷ ಸ್ಥಾನಕ್ಕೆ ರೌಡಿ ಶೀಟರ್ ಯಶಸ್ವಿನಿ ಗೌಡ ಅವರನ್ನು ಆಯ್ಕೆ ಮಾಡಲಾಗಿದೆ. ಶ್ರೀರಾಮ ಸೇನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರ ನೇತೃತ್ವದಲ್ಲಿಯೇ ಹಾರ ಹಾಕಿಸಿಕೊಳ್ಳುವ ಮೂಲಕ ಯಶಸ್ವಿನಿ ಗೌಡಗೆ ಅಧ್ಯಕ್ಷ ಪಟ್ಟ ನೀಡಲಾಗಿದೆ. ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುತಾಲಿಕ್ ಹಾಗೂ ಸಂಘಟನೆ ಮುಖಂಡರ ಸಮ್ಮುಖದಲ್ಲಿ ಯಶಸ್ವಿನಿ ಗೌಡ ಅವರಿಗೆ ಅಧಿಕಾರ ನೀಡಲಾಗಿದೆ.

    ಯಶಸ್ವಿನಿ ಗೌಡ ಪತಿಯನ್ನೇ ಹತ್ಯೆ ಮಾಡಿರುವ ಪ್ರಕರಣದಲ್ಲಿ ಆರೋಪಿಯಾಗಿದ್ದಾಳೆ. ಅಲ್ಲದೇ ನಗರದಲ್ಲಿ ಮೀಟರ್ ಬಡ್ಡಿ ದಂಧೆ ನಡೆಸುತ್ತಿದ್ದಳು ಎಂಬ ಮಾಹಿತಿ ಕೂಡ ಲಭಿಸಿದೆ. ನಗರದ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಯಶಸ್ವಿನಿ ಗೌಡ ವಿರುದ್ಧ ರೌಡಿಶೀಟರ್ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಕ್ರಮ ಜೂಜು ಅಡ್ಡೆಗಳ ಮೇಲೆ ದಾಳಿಗೆ ಅಲೋಕ್ ಕುಮಾರ್ ಸೂಚನೆ, 150 ಕ್ಕೂ ಅಧಿಕ ಮಂದಿ ವಶ

    ಅಕ್ರಮ ಜೂಜು ಅಡ್ಡೆಗಳ ಮೇಲೆ ದಾಳಿಗೆ ಅಲೋಕ್ ಕುಮಾರ್ ಸೂಚನೆ, 150 ಕ್ಕೂ ಅಧಿಕ ಮಂದಿ ವಶ

    – ಅಧಿಕಾರ ವಹಿಸಿಕೊಂಡ 3 ದಿನದಲ್ಲೇ ಸ್ಪಷ್ಟ ಸಂದೇಶ

    ಬೆಂಗಳೂರು: ಸಿಸಿಬಿ ಪೊಲೀಸರು ಮೆಜೆಸ್ಟಿಕ್, ಚಿಕ್ಕಪೇಟೆ, ಬಳೇಪೇಟೆಯಲ್ಲಿ ಅಕ್ರಮ ಜೂಜು ಅಡ್ಡೆಗಳ ಮೇಲೆ ದಾಳಿ ನಡೆಸಿದ್ದಾರೆ.

    ಅಕ್ರಮ ಜೂಜು ಅಡ್ಡೆಗಳ ಮೇಲೆ ರೈಡ್ ಮಾಡಿದ ಪೊಲೀಸರು ದಾಳಿ ಮಾಡಿದ ಸ್ಥಳದಲ್ಲಿ 38 ಲಕ್ಷ ರೂ. ನಗದು, ಹಣ ಲೆಕ್ಕ ಮಾಡುವ ಮಷಿನ್‍ಗಳು ಮತ್ತು 26 ಕ್ಲಬ್‍ನ ಮಾಲೀಕರು ಸೇರಿದಂತೆ 150ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದಿದ್ದಾರೆ. ಇಲ್ಲಿನ ಮಹಾಲಕ್ಷ್ಮೀ ಸ್ಪೋರ್ಟ್ಸ್ ಅಂಡ್ ಕ್ಲಬ್, ಕಲ್ಚರಲ್, ಬ್ಲೂಸ್ ಕ್ಲಬ್‍ ಗಳಲ್ಲಿ ಅಕ್ರಮವಾಗಿ ವಿವಿಧ ರೀತಿಯ ಜೂಜಾಟ ನಡೆಯುತ್ತಿತ್ತು.

    ಕಳೆದ ಮೂರು ದಿನಗಳ ಹಿಂದೆಯಷ್ಟೇ ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಅಲೋಕ್ ಕುಮಾರ್ ಸೂಚನೆ ಮೇರೆಗೆ ಈ ದಾಳಿ ನಡೆಸಲಾಗಿದೆ. ಡಿಸಿಪಿ ಗಿರೀಶ್ ನೇತೃತ್ವದಲ್ಲಿ ಭಾನುವಾರ ತಡರಾತ್ರಿವರೆಗೂ ಈ ದಾಳಿ ಮುಂದುವರೆದಿದ್ದು, ಈ ಮೂಲಕ ಸಿಸಿಬಿ ಪೊಲೀಸರು ಅಕ್ರಮ ಚಟುವಟಿಗೆ ಮಾಡುವರಿಗೆ ಇನ್ನು ಉಳಿಗಾಲವಿಲ್ಲ ಅನ್ನೋ ಸಂದೇಶವನ್ನು ರವಾನೆ ಮಾಡಿದ್ದಾರೆ.

    ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿಯಾಗಿದ್ದು, 20 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿತ್ತು. ಈ ಹಿಂದೆ ರೌಡಿಗಳಿಗೆ ಸಿಂಹ ಸ್ವಪ್ನರಾಗಿದ್ದ ಹಾಲಿ ಉತ್ತರ ವಲಯದ ಐಜಿಪಿಯಾಗಿರುವ ಅಲೋಕ್ ಕುಮಾರ್ ಸಿಸಿಬಿ ಎಡಿಜಿಪಿ ಹುದ್ದೆಗೆ ವರ್ಗವಾಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಸಿಸಿಬಿ ಪೊಲೀಸರ ಮುಂದೆ ಪ್ರಶ್ನೆಗಳ ಸುರಿಮಳೆಗೈದ ಚಂದನ್ ಶೆಟ್ಟಿ

    ಸಿಸಿಬಿ ಪೊಲೀಸರ ಮುಂದೆ ಪ್ರಶ್ನೆಗಳ ಸುರಿಮಳೆಗೈದ ಚಂದನ್ ಶೆಟ್ಟಿ

    ಬೆಂಗಳೂರು: ವಿಚಾರಣೆ ವೇಳೆ ಸಿಸಿಬಿ ಪೊಲೀಸರ ಮುಂದೆ ರ‍್ಯಾಪರ್ ಚಂದನ್ ಶೆಟ್ಟಿ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.

    ಕಳೆದ ನಾಲ್ಕಾರು ದಿನಗಳಿಂದ ಚಂದನ್ ಶೆಟ್ಟಿ ಗಾಯನದ `ಅಂತ್ಯ’ ಸಿನಿಮಾದ ಗಾಂಜಾ ಕುರಿತಾದ ಹಾಡೊಂದು ಸಾಕಷ್ಟು ವಿವಾದವಾಗಿತ್ತು. ಈ ಸಂಬಂಧ ಚಂದನ್ ಶೆಟ್ಟಿಯವರಿಗೆ ಸಿಸಿಬಿ ಪೊಲೀಸರು ಸಮನ್ಸ್ ಸಹ ಜಾರಿ ಮಾಡಿದ್ದರು. ವಿಚಾರಣೆಗೆ ಹಾಜರಾಗಿದ್ದ ಚಂದನ್, ತಮ್ಮ ಮೇಲಿನ ಆರೋಪಗಳು ಅಸಮಂಜಸ. ನಾನು ಕೇವಲ ಹಾಡನ್ನು ಹಾಡಿದ್ದನ್ನೇ, ಸಾಹಿತ್ಯ ಬರೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.

    ಮೂರು ವರ್ಷಗಳ ಹಿಂದೆ ಅಂತ್ಯ ಚಿತ್ರಕ್ಕೆ ಹಾಡು ಹಾಡಿದೆ. ಆದರೆ ಕಾರಣಾಂತರದಿಂದ ಆ ಚಿತ್ರ ಬಿಡುಗಡೆಯಾಗಲಿಲ್ಲ. ಆದರೆ ಈ ಹಾಡು ಲೀಕ್ ಆಗಿತ್ತು. ಹೀಗಾಗಿ ಚಿತ್ರದ ನಿರ್ದೇಶಕರು ಈ ಹಾಡನ್ನು ಯೂಟ್ಯೂಬ್‍ನಲ್ಲಿ ಬಿಡುಗಡೆ ಮಾಡುವುದು ಅನಿವಾರ್ಯವಾಗಿತ್ತು ಎಂದು ಚಂದನ್ ಶೆಟ್ಟಿ ವಿಚಾರಣೆ ವೇಳೆ ಸಿಸಿಬಿ ಪೊಲೀಸರಿಗೆ ಹೇಳಿದ್ದಾರೆ.

    ವಿಚಾರಣೆ ವೇಳೆ ಚಂದನ್ ಪೊಲೀಸರ ಜೊತೆ ವಾಗ್ವಾದಕ್ಕೆ ಇಳಿದಿದ್ದರು. ಗಾಂಜಾ ನೋಡಿ ಯುವಜನತೆ ಅದರತ್ತ ಸೆಳೆಯುತ್ತಾರೆ ಅಂದರೆ ಭಾರತದಲ್ಲಿ ಕೊಲೆ, ದರೋಡೆ ಹಾಗೂ ರೇಪ್ ಮಾಡುವುದು ಕೂಡ ಒಂದು ಕೃತ್ಯವಾಗಿದೆ. ನೀವು ಇದನ್ನು ಕೂಡ ಬ್ಯಾನ್ ಮಾಡಬೇಕು. ಯುವಜನತೆ ಇದರಿಂದಲೂ ಸೆಳೆಯುತ್ತಾರೆ. ಸಿನಿಮಾಗಳಲ್ಲಿ ಕೊಲೆ, ದರೋಡೆ ಹಾಗೂ ರೇಪ್ ಕೇವಲ ಮನರಂಜನೆಗೆ ಎಂದು ಎಲ್ಲರಿಗೂ ತಿಳಿದಿದೆ. ಆದರೆ ಗಾಂಜಾ ಹಾಡಿಗೆ ಮಾತ್ರ ಅವರು ಹೇಗೆ ಆಕರ್ಷಕರಾಗುತ್ತಾರೆ ಎಂದು ಚಂದನ್ ಸಿಸಿಬಿ ಪೊಲೀಸರಿಗೆ ಪ್ರಶ್ನಿಸಿದ್ದಾರೆ ಎನ್ನಲಾಗಿದೆ.

    ಸ್ಯಾಂಡಲ್‍ವುಡ್‍ನಲ್ಲಿ ನನಗೆ ದೊಡ್ಡ ಯಶಸ್ಸು ಬೇಕೆಂದುಕೊಂಡಿದೆ ಹಾಗೂ ಆ ಸಮಯದಲ್ಲಿ ನನಗೆ ಹಣದ ಅವಶ್ಯಕತೆ ಇತ್ತು. ಆ ವೇಳೆ ನಿರ್ದೇಶಕರು ಸ್ಕ್ರಿಪ್ಟ್ ನೀಡಿ ಚಿತ್ರಕ್ಕೆ ಹಾಡು ಹಾಡಲು ಹೇಳಿದ್ದರು. ಆ ಹಾಡು ಯುವಕರಿಗೆ ಒಂದು ಒಳ್ಳೆಯ ಸಂದೇಶ ಸಾರುವ ಹಾಡಾಗಿತ್ತು. ಗಾಂಜಾದಿಂದ ಆಗುವ ಅನಾಹುತಗಳು ಆ ಚಿತ್ರದಲ್ಲಿ ತೋರಿಸಲಾಗಿತ್ತು. ಹಾಗಾಗಿ ನಾನು ಆ ಹಾಡನ್ನು ಕೇವಲ 5,000 ರೂ. ಪಡೆದು ಹಾಡಿದೆ. ಮೂರು ಶತಮಾನಗಳ ಹಿಂದೆ ಶಿಶುನಾಳ ಶರೀಫ್ ಗಾಂಜಾ ಬಗ್ಗೆ ಹಾಡು ಬರೆದಿದ್ದರು. ಆ ಹಾಡು ಈಗಲೂ ಜನಪ್ರಿಯವಾಗಿದೆ. ಆದರೆ ಆ ಹಾಡಿನ ಬಗ್ಗೆ ಯಾರಿಗೂ ತಲೆ ಕೆಡಿಸಿಕೊಂಡಿಲ್ಲ. ಅಲ್ಲದೇ ಯಾರೂ ಆ ಹಾಡಿನ ವಿರುದ್ಧ ದೂರು ಕೂಡ ದಾಖಲಿಸಿಲ್ಲ ಎಂದು ಚಂದನ್ ಸಿಸಿಬಿ ಪೊಲೀಸರಿಗೆ ಹೇಳಿದ್ದರು.

    ಏನಿದು ಪ್ರಕರಣ?
    ಮಾದಕ ವಸ್ತುಗಳ ಸೇವನೆಗೆ ಪ್ರಚೋದನೆ ನೀಡಿದ ಆರೋಪದ ಹಿನ್ನೆಲೆಯಲ್ಲಿ ಚಂದನ್ ಶೆಟ್ಟಿಗೆ ಬಂಧನ ಭೀತಿ ಎದುರಾಗಿತ್ತು. ಚಂದನ್ ಶೆಟ್ಟಿ ಸಂಗೀತ ಸಂಯೋಜನೆಯ ಅಂತ್ಯ ಸಿನಿಮಾದ ಗಾಂಜಾ ಕಿಕ್ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿತ್ತು. ಆದರೆ ಗಾಂಜಾ ಕಿಕ್ ಹಾಡಿನಲ್ಲಿ ಮಾದಕ ವಸ್ತುಗಳನ್ನು ಸೇವಿಸುವ ಕುರಿತು ವೈಭವಿಕರಿಸಿ ತೋರಿಸಲಾಗಿದೆ. ಹೀಗಾಗಿ ಖುದ್ದು ಸ್ವಯಂ ದೂರು ದಾಖಲಿಸಿಕೊಂಡಿರುವ ಸಿಸಿಬಿ ಪೊಲೀಸರು, ವಿಚಾರಣೆಗೆ ಹಾಜರಾಗುವಂತೆ ಚಂದನ್ ಶೆಟ್ಟಿಗೆ ಸಮನ್ಸ್ ಜಾರಿ ಮಾಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಖಾಕಿ ವರ್ಸಸ್ ಸ್ಯಾಂಡಲ್‍ವುಡ್: ಪೊಲೀಸರ ವಿರುದ್ಧ ದೂರ ನೀಡಲು ಸಿದ್ಧವಾಯ್ತು ‘ಅಂತ್ಯ’ ಚಿತ್ರ ತಂಡ

    ಖಾಕಿ ವರ್ಸಸ್ ಸ್ಯಾಂಡಲ್‍ವುಡ್: ಪೊಲೀಸರ ವಿರುದ್ಧ ದೂರ ನೀಡಲು ಸಿದ್ಧವಾಯ್ತು ‘ಅಂತ್ಯ’ ಚಿತ್ರ ತಂಡ

    ಬೆಂಗಳೂರು: ಕನ್ನಡದ ಗಾಯಕ ಚಂದನ್ ಶೆಟ್ಟಿ ‘ಗಾಂಜಾ’ ಹಾಡಿಗೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರ ಮುಂದೆ ಹಾಜರಾಗಿ ತಾವು ಹಾಡು ಹಾಡಿದ್ದು ತಪ್ಪು ಎಂದು ಒಪ್ಪಿಕೊಂಡಿದ್ದಾರೆ. ಆದ್ರೆ ಹಾಡಿಗೆ ಸಾಹಿತ್ಯ ಬರೆದಿದ್ದು ರಚನೆಕಾರ ಹಾಗು ಚಿತ್ರದ ನಿರ್ಮಾಪಕ ಪೊಲೀಸರೇ ವಿರುದ್ಧವೇ ದೂರು ನೀಡಲು ಮುಂದಾಗ್ತಿದ್ದಾರೆ.

    ಹೌದು, ಕಳೆದ ನಾಲ್ಕಾರು ದಿನಗಳಿಂದ ಚಂದನ್ ಶೆಟ್ಟಿ ಗಾಯನದ ‘ಅಂತ್ಯ’ ಸಿನಿಮಾದ ಗಾಂಜಾ ಕುರಿತಾದ ಹಾಡೊಂದು ಸಾಕಷ್ಟು ವಿವಾದವಾಗಿತ್ತು. ಈ ಸಂಬಂಧ ಚಂದನ ಶೆಟ್ಟಿಯವರಿಗೆ ಸಿಸಿಬಿ ಪೊಲೀಸರು ಸಮನ್ಸ್ ಸಹ ಜಾರಿ ಮಾಡಿದ್ದರು. ವಿಚಾರಣೆಗೆ ಹಾಜರಾಗಿದ್ದ ಚಂದನ್, ತಮ್ಮ ಮೇಲಿನ ಆರೋಪಗಳು ಅಸಮಂಜಸ.ನಾನು ಕೇವಲ ಹಾಡನ್ನು ಹಾಡಿದ್ದನ್ನೇ, ಸಾಹಿತ್ಯ ಬರೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಆದ್ರೆ ಆಂತ್ಯದ ಚಿತ್ರದ ಸಾಹಿತ್ಯ ರಚನಕಾರರಾದ ಮುತ್ತು ಮತ್ತು ನಿರ್ಮಾಪಕ ಅವಿನಾಶ್ ಸಿಸಿಬಿ ಪೊಲೀಸರ ನಡೆಯನ್ನು ಪ್ರಶ್ನಿಸಿದ್ದಾರೆ.

    ನಮ್ಮ ಫಿಲ್ಮ್ ಸೆನ್ಸಾರ್ ಬೋರ್ಡ್ ಅಂತಿಮ, ಯೂಟ್ಯೂಬ್‍ನಲ್ಲಿ ಈ ಸಾಂಗ್ಸ್ ತೆಗಿಯಿರಿ ಅಂತಾ ಹೇಳೋದು ಪೊಲೀಸರ ಕೆಲಸವಲ್ಲ. ಹಾಗಿದ್ರೇ ಎಲ್ಲಾ ಭಾಷೆಯ ನಶೆಯ ಹಾಡುಗಳನ್ನು ತೆಗೆಸಲಿ. ಪೊಲೀಸರ ವಿರುದ್ಧ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಕೊಡಲು ನಿರ್ಧರಿಸಿರುವ ಈ ಟೀಂ ಕಾನೂನು ಹೋರಾಟಕ್ಕೂ ರೆಡಿಯಾಗಿದೆ. ಈ ಗಲಾಟೆಗೆ ಚಲನಚಿತ್ರ ವಾಣಿಜ್ಯ ಮಂಡಳಿ ಎಂಟ್ರಿಯಾಗುತ್ತಾ ಖಾಕಿ ವರ್ಸಸ್ ಬಣ್ಣದ ಲೋಕದ ಗಲಾಟೆ ಶುರುವಾಗುತ್ತಾ ಅಂತಾ ಬಿಟೌನ್‍ನಲ್ಲಿ ಬಿಸಿ ಬಿಸಿ ಚರ್ಚೆ ಶುರುವಾಗಿದೆ

    ಏನಿದು ಪ್ರಕರಣ?
    ಮಾದಕ ವಸ್ತುಗಳ ಸೇವನೆಗೆ ಪ್ರಚೋದನೆ ನೀಡಿದ ಆರೋಪದ ಹಿನ್ನೆಲೆಯಲ್ಲಿ ಸಿಂಗರ್ ಚಂದನ್ ಶೆಟ್ಟಿಗೆ ಬಂಧನ ಭೀತಿ ಎದುರಾಗಿತ್ತು. ಚಂದನ್ ಶೆಟ್ಟಿ ಸಂಗೀತ ಸಂಯೋಜನೆಯ ಅಂತ್ಯ ಸಿನಿಮಾದ ಗಾಂಜಾ ಕಿಕ್ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿತ್ತು. ಆದರೆ ಗಾಂಜಾ ಕಿಕ್ ಹಾಡಿನಲ್ಲಿ ಮಾದಕ ವಸ್ತುಗಳನ್ನು ಸೇವಿಸುವ ಕುರಿತು ವೈಭವಿಕರಿಸಿ ತೋರಿಸಲಾಗಿದೆ. ಹೀಗಾಗಿ ಖುದ್ದು ಸ್ವಯಂ ದೂರು ದಾಖಲಿಸಿಕೊಂಡಿರುವ ಸಿಸಿಬಿ ಪೊಲೀಸರು, ವಿಚಾರಣೆಗೆ ಹಾಜರಾಗುವಂತೆ ಚಂದನ್ ಶೆಟ್ಟಿಗೆ ಸಮನ್ಸ್ ಜಾರಿ ಮಾಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಚಂದನ್ ಬೆಂಬಲಕ್ಕೆ ನಿಂತ ಬಾರ್ಬಿ ಗರ್ಲ್

    ಚಂದನ್ ಬೆಂಬಲಕ್ಕೆ ನಿಂತ ಬಾರ್ಬಿ ಗರ್ಲ್

    ಬೆಂಗಳೂರು: ಗಾಂಜಾ ಕಿಕ್ ಸಾಂಗ್ ಮೂಲಕ ಬಿಗ್ ಬಾಸ್ ನ ವಿನ್ನರ್ ಚಂದನ್ ಶೆಟ್ಟಿ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ಈಗ ಚಂದನ್ ಬೆಂಬಲಕ್ಕೆ ಬಿಗ್ ಬಾಸ್‍ನ ಮತ್ತೋರ್ವ ಸ್ಪರ್ಧಿಯಾಗಿದ್ದ ನಿವೇದಿತಾ ಗೌಡ ನಿಂತಿದ್ದಾರೆ.

    ಈ ಬಗ್ಗೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ನಿವೇದಿತಾ ಗೌಡ, ಆ ಸಾಂಗ್ ಬಗ್ಗೆ ನನಗೆ ಹೆಚ್ಚಾಗಿ ಗೊತ್ತಿರಲಿಲ್ಲ. ಚಂದನ್ ಒಬ್ಬ ಗಾಯಕರಾಗಿ ಆ ಹಾಡನ್ನು ಹಾಡಿದ್ದಾರೆ. ಅವರೇನು ಲಿರಿಕ್ಸ್ ಮಾಡಿಲ್ಲ. ಇದೊಂದು ಹಳೆಯ ಹಾಡು ಅಷ್ಟೆ. ಉದ್ದೇಶ ಪೂರ್ವಕವಾಗಿ ಈ ಹಾಡು ಮಾದಕ ವಸ್ತುಗಳಿಗೆ ಪ್ರಚೋದನೆ ಮಾಡುತ್ತಿಲ್ಲ. ಇದು ಒಂದು ಹಾಡು, ಅದನ್ನು ಒಬ್ಬ ಸಿಂಗರಾಗಿ ಹಾಡಿದ್ದಾರೆ ಅಷ್ಟೆ ಎಂದು ಹೇಳಿದ್ದಾರೆ.

    ಚಂದನ್ ಲಿರಿಕ್ಷ್ ಬರೆದು ಹಾಡಿಲ್ಲ. ಆದ್ದರಿಂದ ಅವರ ಮೇಲೆ ಈ ರೀತಿ ಕೇಸ್ ಹಾಕುವುದು ಸರಿಯಲ್ಲ. ಈ ರೀತಿ ಘಟನೆಗಳು ಸಾಮಾನ್ಯವಾಗಿದೆ. ಈ ಪರಿಸ್ಥಿತಿಯನ್ನು ಚಂದನ್ ಚನ್ನಾಗಿ ನಿಭಾಯಿಸುತ್ತಾರೆ. ತಮ್ಮ ತಪ್ಪು ಏನು ಇಲ್ಲ ಎಂದು ಚಂದನ್ ಗೆ ಗೊತ್ತಿದ್ದರಿಂದ ಶಾಂತವಾಗಿದ್ದಾರೆ. ಅದೇ ರೀತಿ ಶಾಂತವಾಗಿ ನಿಭಾಯಿಸುತ್ತಿದ್ದಾರೆ. ಈ ಹಾಡು ಇತ್ತೀಚೆಗೆ ಮಾಡಿಲ್ಲ. ಆದ್ದರಿಂದ ಇದನ್ನು ದೊಡ್ಡದಾಗಿ ಮಾಡುವ ಅವಶ್ಯಕತೆ ಇಲ್ಲ ಎಂದು ಚಂದನ್ ಪರ ಮಾತನಾಡಿದ್ದಾರೆ.

    ಮಂಗಳವಾರ ಚಂದನ್ ಸಿಸಿಬಿ ಪೊಲೀಸ್ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿದ್ದು, ಬಳಿಕ ಹೊರ ಬಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದರು. ನನ್ನದು ಯಾವುದೇ ತಪ್ಪಿಲ್ಲ. ಅಂತ್ಯ ಚಿತ್ರಕ್ಕಾಗಿ ಮುತ್ತು ಎಂಬವರು ಸಾಹಿತ್ಯ ಬರೆದಿದ್ದು, ಕೇವಲ 5 ಸಾವಿರ ರೂ. ಸಂಭಾವನೆಗಾಗಿ ನಾನು ನನ್ನ ಜವಾಬ್ದಾರಿ ಮರೆತು ಸಂಗೀತ ಸಂಯೋಜನೆ ಮಾಡಿ ಹಾಡಿರುವುದಾಗಿ ಸಿಸಿಬಿ ಅಧಿಕಾರಿಗಳಿಗೆ ಮಾಹಿತಿ ನೀಡಿರುವೆ ಎಂದು ತಿಳಿಸಿದ್ದರು.

    ಏನಿದು ಪ್ರಕರಣ?
    ಮಾದಕ ವಸ್ತುಗಳ ಸೇವನೆಗೆ ಪ್ರಚೋದನೆ ನೀಡಿದ ಆರೋಪದ ಹಿನ್ನೆಲೆಯಲ್ಲಿ ಸಿಂಗರ್ ಚಂದನ್ ಶೆಟ್ಟಿಗೆ ಬಂಧನ ಭೀತಿ ಎದುರಾಗಿತ್ತು. ಚಂದನ್ ಶೆಟ್ಟಿ ಸಂಗೀತ ಸಂಯೋಜನೆಯ ಅಂತ್ಯ ಸಿನಿಮಾದ ಗಾಂಜಾ ಕಿಕ್ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿತ್ತು. ಆದರೆ ಗಾಂಜಾ ಕಿಕ್ ಹಾಡಿನಲ್ಲಿ ಮಾದಕ ವಸ್ತುಗಳನ್ನು ಸೇವಿಸುವ ಕುರಿತು ವೈಭವಿಕರಿಸಿ ತೋರಿಸಲಾಗಿದೆ. ಹೀಗಾಗಿ ಖುದ್ದು ಸ್ವಯಂ ದೂರು ದಾಖಲಿಸಿಕೊಂಡಿರುವ ಸಿಸಿಬಿ ಪೊಲೀಸರು, ವಿಚಾರಣೆಗೆ ಹಾಜರಾಗುವಂತೆ ಚಂದನ್ ಶೆಟ್ಟಿಗೆ ಸಮನ್ಸ್ ಜಾರಿ ಮಾಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮತ್ತೆ ನಗರದಲ್ಲಿ ಗುಂಡಿನ ಸದ್ದು – ಕುಖ್ಯಾತ ರೌಡಿಶೀಟರ್ ಸೈಕಲ್ ರವಿ ಕಾಲಿಗೆ ಗುಂಡು

    ಮತ್ತೆ ನಗರದಲ್ಲಿ ಗುಂಡಿನ ಸದ್ದು – ಕುಖ್ಯಾತ ರೌಡಿಶೀಟರ್ ಸೈಕಲ್ ರವಿ ಕಾಲಿಗೆ ಗುಂಡು

    ಬೆಂಗಳೂರು: ಸುಮಾರು 10 ಪ್ರಕರಣಗಳಲ್ಲಿ ಬೇಕಾಗಿರುವ ನಗರದ ಕುಖ್ಯಾತ ರೌಡಿಶೀಟರ್ ಸೈಕಲ್ ರವಿಗೆ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಪೊಲೀಸರು ಬಂಧಿಸಿದ್ದಾರೆ.

    ಪ್ರಮುಖ ಪ್ರಕರಣಗಳಲ್ಲಿ ಆರೋಪಿಯಾಗಿರುವ ರೌಡಿ ಸೈಕಲ್ ರವಿ ಬಂಧನಕ್ಕೆ ತೆರಳಿದ್ದ ವೇಳೆ ಪೊಲೀಸ್ ಕಾನ್ಸ್ ಟೇಬಲ್ ಸತೀಶ್ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಈ ವೇಳೆ ಆತ್ಮ ರಕ್ಷಣೆಗೆ ಮುಂದಾದ ಸಿಸಿಬಿ ಇನ್ಸ್ ಪೆಕ್ಟರ್ ಪ್ರಕಾಶ್ ಹಾಗು ಪಿಐ ಮಲ್ಲಿಕಾರ್ಜುನ್ ತಕ್ಷಣವೇ 2 ಸುತ್ತಿನ ಗುಂಡು ಹಾರಿಸಿ, ಆರೋಪಿಯನ್ನು ಬಂಧಿಸಿದ್ದಾರೆ.

    ಬಂಧಿತ ರವಿ ಮೇಲೆ ಸುಮಾರು 14 ಪೊಲೀಸ್ ಠಾಣೆಗಳಲ್ಲಿ ಆರೋಪಿಯಾಗಿದ್ದು, 6 ಕೊಲೆ ಪ್ರಕರಣ, 4 ಕೊಲೆ ಯತ್ನ ಪ್ರಕರಣಗಳು ದಾಖಲಾಗಿದೆ.

    ಸೈಕಲ್ ರವಿ ಹಿನ್ನೆಲೆ ಏನು: ಆರೋಪಿ ರವಿ ಮೇಲೆ 1998 ರಲ್ಲಿ ಮೊದಲ ಬಾರಿಗೆ ಬನಶಂಕರಿಯಲ್ಲಿ ರೌಡಿಶೀಟರ್ ಪಟ್ಟ ದಾಖಲಾಗಿತ್ತು. ಕೆಪಿ ಅಗ್ರಹಾರದಲ್ಲಿ ಸಣ್ಣ ಪುಟ್ಟ ಗಲಾಟೆಯಲ್ಲಿ ಭಾಗಿಯಾಗಿದ್ದ ರವಿ, ಸುಬ್ರಹ್ಮಣ್ಯಪುರ ಮುಖ್ಯ ಕೇಂದ್ರವಾಗಿಸಿಕೊಂಡು ಕಾನೂನು ಬಾಹಿರ ಕೃತ್ಯಗಳಲ್ಲಿ ತೊಡಗಿಕೊಂಡಿದ್ದ. ಪ್ರಮುಖವಾಗಿ ಕೊಲೆ, ಕೊಲೆಯತ್ನ, ಅಪಹರಣ, ಧಮ್ಕಿ, ಹಫ್ತಾವಸೂಲಿ ಸೇರಿ 30 ಕ್ಕೂ ಹೆಚ್ಚು ಪ್ರಕರಣಗಳು ಆತನ ಮೇಲೆ ದಾಖಲಾಗಿದೆ.

    ಕುಖ್ಯಾತ ರೌಡಿ ಲಿಂಗ ಮರ್ಡರ್, ಕೆಂಗೇರಿಯಲ್ಲಿ ಜಾನಿ, ಟಾಮಿ ಜೊಡಿ ಮರ್ಡರ್ ಸೇರಿದಂತೆ, ನಗರದಲ್ಲಿ ಜೆಪಿನಗರ ತಲಘಟ್ಟಪುರ, ಬನಶಂಕರಿ, ಸುಬ್ರಹ್ಮಣ್ಯಪುರ ಕೆಂಗೇರಿ ರಾಜರಾಜೇಶ್ವರಿ ನಗರ ಕೆಜಿ ನಗರ ಕೆಪಿ ಅಗ್ರಹಾರ ಸೇರಿ 14 ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಳಿದಂತೆ ಸೈಕಲ್ ರವಿ ಬೆಂಗಳೂರಿನ ಮತ್ತೊಬ್ಬ ಕುಖ್ಯಾತ ರೌಡಿಶೀಟರ್ ಹೆಬ್ಬೆಟ್ ಮಂಜನ ಸ್ನೇಹಿತನಾಗಿದ್ದ.

    https://www.youtube.com/watch?v=QeY2Qit2cpg

  • ವಿದ್ವತ್ ಮೇಲೆ ನಲಪಾಡ್ ಹಲ್ಲೆ ಪ್ರಕರಣ- ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಲು ಮುಂದಾಗಿದ್ದ ಯುಬಿ ಸಿಟಿ ಸಿಬ್ಬಂದಿ

    ವಿದ್ವತ್ ಮೇಲೆ ನಲಪಾಡ್ ಹಲ್ಲೆ ಪ್ರಕರಣ- ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಲು ಮುಂದಾಗಿದ್ದ ಯುಬಿ ಸಿಟಿ ಸಿಬ್ಬಂದಿ

    ಬೆಂಗಳೂರು: ಉದ್ಯಮಿ ಲೋಕನಾಥ್ ಅವರ ಮಗ ವಿದ್ವತ್ ಮೇಲೆ ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಯುಬಿ ಸಿಟಿ ಸಿಬ್ಬಂದಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಲು ಮುಂದಾಗಿದ್ದರು ಎಂಬ ವಿಚಾರ ಬಯಲಾಗಿದೆ.ಇದನ್ನೂ ಓದಿ: ಕರ್ನಾಟಕ ರಣಜಿ ಆಟಗಾರನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ರೌಡಿ ನಲಪಾಡ್!

    ಹಲ್ಲೆ ನಡೆಸಿದ ಸಿಸಿಟಿವಿ ಬಚ್ಚಿಟ್ಟ ಸಿಬ್ಬಂದಿ ಮತ್ತೊಂದು ವಿಡಿಯೋ ಕೊಟ್ಟು ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರ ದಿಕ್ಕು ತಪ್ಪಿಸಲು ಮುಂದಾಗಿದ್ದರು. ಈ ಮೊದಲು ಸಿಸಿಟಿವಿ ಪರಿಶೀಲನೆ ವೇಳೆ ಹಲ್ಲೆ ದೃಶ್ಯಾವಳಿಗಳನ್ನ ಯುಬಿ ಸಿಟಿ ಸಿಬ್ಬಂದಿ ತೋರಿಸಿದ್ದರು. ನಂತರ ಆ ವಿಡಿಯೋಗಳನ್ನ ನೀಡುವಂತೆ ಸಿಸಿಬಿ ಪೊಲೀಸರು ಸೂಚಿಸಿದ್ದರು. ಆಗ ಸಿಬ್ಬಂದಿ ಪೊಲೀಸರು ಹೇಳಿದ್ದ ವಿಡಿಯೋ ಮುಚ್ಚಿಟ್ಟು ಮತ್ತೊಂದು ವಿಡಿಯೋ ಕೊಟ್ಟಿದ್ದಾರೆ. ಇದನ್ನೂ ಓದಿ: ಖಾಸಗಿ ವಿಮಾನ ಖರೀದಿಸಲು ಮುಂದಾಗಿದ್ದ ರೌಡಿ ನಲಪಾಡ್!

    ನಂತರ ಸಿಸಿಬಿ ಕಚೇರಿಯಲ್ಲಿ ವಿಡಿಯೋ ಪರಿಶೀಲನೆ ವೇಳೆ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿರುವುದು ಬೆಳಕಿಗೆ ಬಂದಿದೆ. ಇದೇ ವಿಚಾರವಾಗಿ ಭಾನುವಾರದಂದು ಪೊಲೀಸರು ಯುಬಿ ಸಿಟಿಯ ಫರ್ಜಿ ರೆಸ್ಟೋರೆಂಟ್ ಸಿಬ್ಬಂದಿ ಹಾಗೂ ಯುಬಿ ಸಿಟಿ ಸಿಬ್ಬಂದಿಯ ವಿಚಾರಣೆ ನಡೆಸಿದ್ದಾರೆ. ವಿಚಾರಣೆ ನಂತರ ಸಿಸಿಬಿ ಪೊಲೀಸರು ಯುಬಿ ಸಿಟಿಯ ಸಂಪೂರ್ಣ ಡಿವಿಆರ್ ವಶಕ್ಕೆ ಪಡೆದಿದ್ದಾರೆ.ಇದನ್ನೂ ಓದಿ: ಮೈಮೇಲೆ ಕುರ್ಚಿಗಳನ್ನು ಎಸೆದ್ರು, sorry ಎಂದರೂ ಬಿಯರ್ ಬಾಟಲಿಯಿಂದ ಬಾಯಿಗೆ ಹೊಡೆದ್ರು- ನಲಪಾಡ್ ದಾಳಿ ಬಗ್ಗೆ ವಿದ್ವತ್ Exclusive ಮಾತು

    ಸಿಸಿಟಿವಿ ದೃಶ್ಯಗಳೇ ಈ ಘಟನೆಗೆ ಪ್ರಮುಖ ಸಾಕ್ಷ್ಯಗಳಾಗಿತ್ತು. ಈ ಹಿನ್ನೆಲೆಯಲ್ಲಿ ಅರೋಪಿ ನಲಪಾಡ್ ರಕ್ಷಣೆಗೆ ಯುಬಿ ಸಿಟಿ ಸಿಬ್ಬಂದಿ ನಿಂತಿದ್ದಾರಾ ಎಂಬ ಶಂಕೆ ಮೂಡಿದೆ. ಇದನ್ನೂ ಓದಿ: ಜೈಲಿಗೆ ಹೋದ ಎರಡೇ ದಿನಕ್ಕೆ ನಲಪಾಡ್ ಕೈಗೆ ಸಿಕ್ತು ಮೊಬೈಲ್ ಫೋನ್!

    ಇದನ್ನೂ ಓದಿ:  ಜೈಲಿನಲ್ಲೂ ಮುಂದುವರಿದ ನಲಪಾಡ್ ಪುಂಡಾಟ- ನಿನ್ನಿಂದ ನಾವು ಜೈಲು ಸೇರುವಂತಾಯ್ತು ಎಂದ ಸ್ನೇಹಿತ ಅಬ್ರಾಸ್ ಮೇಲೆ ಹಲ್ಲೆ

    ವಿದ್ವತ್- ಹಲ್ಲೆಗೊಳಗಾದ ಯುವಕ.