Tag: CCB police

  • ಖಲಿಸ್ತಾನ್ ಪ್ರತ್ಯೇಕತಾವಾದಿ ಬೆಂಗಳೂರಲ್ಲಿ ಅರೆಸ್ಟ್

    ಖಲಿಸ್ತಾನ್ ಪ್ರತ್ಯೇಕತಾವಾದಿ ಬೆಂಗಳೂರಲ್ಲಿ ಅರೆಸ್ಟ್

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬಾಂಗ್ಲಾ ಉಗ್ರರಾಯ್ತು. ಇದೀಗ ಖಲಿಸ್ತಾನ್ ಉಗ್ರರ ಸರದಿ ಶುರುವಾಗಿದೆ. ಇದನ್ನೆಲ್ಲ ನೋಡುತ್ತಿದ್ದರೆ ಉಗ್ರರ, ಜಿಹಾದಿಗಳ, ಪ್ರತ್ಯೇಕತಾವಾದಿಗಳ ಅಡ್ಡವಾವಾಗುತ್ತಿದೆಯಾ ಬೆಂಗಳೂರು ಎಂಬ ಆತಂಕ ಕಾಡಲಾರಂಭಿಸಿದೆ.

    ಬೆಂಗಳೂರು ಸಿಸಿಬಿ ಪೊಲೀಸರಿಂದ ಬಹುದೊಡ್ಡ ಕಾರ್ಯಾಚರಣೆ ನಡೆದಿದ್ದು, ಖಲಿಸ್ತಾನದ ಪ್ರತ್ಯೇಕತಾವಾದಿ ಜರ್ನಲ್ ಸಿಂಗ್ ಸಿದ್ದು ಬೆಂಗಳೂರಲ್ಲಿ ಅರೆಸ್ಟ್ ಆಗಿದ್ದಾನೆ. ಕಳೆದ 6 ತಿಂಗಳಿಂದ ಬೆಂಗಳೂರಿನಲ್ಲಿ ಇದ್ದ ಜರ್ನಲ್ ಸಿಂಗ್ ಸಿದ್ದು, ಸಂಪಿಗೆಹಳ್ಳಿ ರಾಧಾಕೃಷ್ಣ ಪಿಜಿಯಲ್ಲಿ ವಾಸವಿದ್ದನು. ಮೂಲತಃ ತೆಲಂಗಾಣದ ಹೈದರಾಬಾದ್‍ನವನಾದ ಜರ್ನಲ್ ಸಿಂಗ್ ಸಿದ್ದು, ಎಂಜಿನಿಯರಿಂಗ್ ಮಾಡಿಕೊಂಡು ಬೆಂಗಳೂರಲ್ಲಿ ಕೆಲಸ ಮಾಡುತ್ತಿದ್ದ.

    ನಗರದ ಬಾಗಮನೆ ಟೆಕ್ ಪಾರ್ಕ್ ನಲ್ಲಿ ಕೆಲಸ ಮಾಡುತ್ತಿದ್ದ ಈತ ಪ್ರತ್ಯೇಕ ಖಲಿಸ್ತಾನ ದೇಶಕ್ಕಾಗಿ ಹೋರಾಟ ನಡೆಸುತ್ತಿದ್ದ. ಸಿಖ್ ಧರ್ಮದವರಿಗಾಗಿಯೇ ಪ್ರತ್ಯೇಕ ದೇಶಬೇಕು ಎಂದು ಹೋರಾಟ ಮಾಡುತ್ತಿದ್ದ. ಪಂಜಾಬ್ ಅನ್ನು ಪ್ರತ್ಯೇಕ ಖಲಿಸ್ತಾನ ಮಾಡಬೇಕೆಂದು ನಿರಂತರ ಹೋರಾಟದಲ್ಲಿ ನಿರತನಾಗಿದ್ದ. ತೆಲಂಗಾಣದವನಾಗಿದ್ದರು ಪಂಜಾಬ್‍ನಲ್ಲಿ ಉಗ್ರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಈತ, ಸಿಖ್ ಧರ್ಮದ ವಿರುದ್ಧ ಕೆಲಸ ಮಾಡುವವರ ವಿರುದ್ಧ ಸಮರ ನಡೆಸುತ್ತಿದ್ದ.

    ಇದೇ ರೀತಿಯ ಗಲಾಟೆಯೊಂದರಲ್ಲಿ ಪಂಜಾಬ್‍ನ ಮೊಹಾಲಿಯಲ್ಲಿ ಈತನ ಮೇಲೆ ಪ್ರಕರಣ ಕೂಡ ದಾಖಲಾಗಿತ್ತು. 2019ರ ಫೆಬ್ರವರಿಯಲ್ಲಿ ಮೊಹಾಲಿ ಐಎಸ್‍ಡಿ ಪ್ರಕರಣ ದಾಖಲಿಸಿ, ಪಂಜಾಬ್ ರಾಜ್ಯ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಪ್ರಕರಣ ದಾಖಲಾಗುತ್ತಿದ್ದಂತೆ ಬೆಂಗಳೂರಿಗೆ ಎಸ್ಕೇಪ್ ಆಗಿದ್ದ ಇಂಗ್ ಮೊಹಾಲಿಯಿಂದ ಬೆಂಗಳೂರಿಗೆ ಬಂದಿದ್ದ. ಪಾಕಿಸ್ತಾನದ ಐಎಸ್‍ಐ ಜೊತೆ ನಿರಂತರ ಸಂಪರ್ಕದಲ್ಲಿದ್ದ ಜರ್ನಲ್ ಸಿಂಗ್ ಸಿದ್ದು. ಮೊಹಾಲಿಯ ಐಎಸ್‍ಐ ಏಜೆಂಟ್ ನಿಹಾಲ್ ಸಿಂಗ್ ಸ್ನೇಹಿತನಾಗಿದ್ದ.

    ಪ್ರತ್ಯೇಕ ಖಲಿಸ್ತಾನದ ಹೋರಾಟಕ್ಕೆ ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದ್ದ. ಆದರೆ ಸದ್ಯ ಸಿಸಿಬಿಯ ಒಸಿಡಬ್ಲ್ಯೂ ವಿಂಗ್ ನಿಂದ ಜರ್ನಲ್ ಸಿಂಗ್ ಅರೆಸ್ಟ್ ಆಗಿದ್ದಾನೆ. ಸಿಸಿಬಿ ಡಿಸಿಪಿ ರವಿಕುಮಾರ್ ನೇತೃತ್ವದಲ್ಲಿ ನಡೆದಿದ್ದ ಆಪರೇಷನ್ ನಲ್ಲಿ ಆರೋಪಿಯನ್ನು ಬಂಧಿಸಿ ಪಂಜಾಬ್ ಪೊಲೀಸರಿಗೆ ಒಪ್ಪಿಸಿದ್ದಾರೆ.

  • ಪೌರತ್ವ ಗಲಾಟೆ ಬಳಸಿ ಉಗ್ರರ ನೇಮಕಕ್ಕೆ ನಡೆದಿತ್ತು ಫ್ಲಾನ್!

    ಪೌರತ್ವ ಗಲಾಟೆ ಬಳಸಿ ಉಗ್ರರ ನೇಮಕಕ್ಕೆ ನಡೆದಿತ್ತು ಫ್ಲಾನ್!

    ಬೆಂಗಳೂರು: ಸಿಸಿಬಿ ಪೊಲೀಸರಿಂದ ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದೆ. ಕರ್ನಾಟಕದಲ್ಲಿ ಸರಣಿ ವಿಧ್ವಂಸಕ ಕೃತ್ಯ ಮಾಡಲು ರೆಡಿಯಾಗಿದ್ದ ಸ್ಕೆಚ್ ಹೊರಗೆಡವಿದ್ದಾರೆ.

    ಪೌರತ್ವ ಕಾಯ್ದೆಯ ಗಲಾಟೆಯನ್ನೇ ಬಳಸಿಕೊಂಡು ಉಗ್ರರ ನೇಮಕ ಮಾಡಲು ಸ್ಕೆಚ್ ರೆಡಿಯಾಗಿದ್ದನ್ನ ಸಿಸಿಬಿ ಪೊಲೀಸರು ಬಯಲಿಗೆಳೆದಿದ್ದಾರೆ. ವಿಧ್ವಂಸಕ ಕೃತ್ಯದ ಮಾಸ್ಟರ್ ಮೈಂಡ್ ಮೆಹಬೂಬ್ ಪಾಷಾ ಎಂದು ತಿಳಿದು ಬಂದಿದೆ.

    ಅಲ್ಪ ಸಂಖ್ಯಾತರನ್ನು ಜಿಹಾದ್‍ಗೆ ಸೆಳೆಯಲು ಸ್ಕೆಚ್ ಮಾಡಿದ್ದ ಮೆಹಬೂಬ್ ಪಾಷಾ, ಬೆಂಗಳೂರಿನ ಸದ್ದು ಗುಂಟೆಪಾಳ್ಯದಲ್ಲಿ ವಾಸವಾಗಿದ್ದನು. ಅಲ್ಲದೆ ಬೆಂಗಳೂರು ಜಿಹಾದಿ ಗ್ಯಾಂಗ್‍ನ ಕಮಾಂಡರ್ ಕೂಡ ಆಗಿದ್ದ. ಮೂರು ದಿನಗಳ ಹಿಂದೆ ಸಿಕ್ಕ ಜಿಹಾದಿ ಗ್ಯಾಂಗ್ ವಿರುದ್ಧ ಎಫ್‍ಐಆರ್ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. ತನಿಖೆ ವೇಳೆಯಲ್ಲಿ ಸಿಸಿಬಿಯಿಂದ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.

    ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ಐಸಿಸ್ ನೇಮಕಾತಿಗೆ ಸ್ಕೆಚ್ ಕೂಡ ನಡೆದಿತ್ತು. ಮೆಹಬೂಬ್ ಪಾಷಾ ಸದಸ್ಯರ ನೇಮಕ, ಶಸ್ತ್ರ ಪೂರೈಕೆಯ ನೀಲನಕ್ಷೆ ರಚಿಸಿದ್ದನು. ಬೆಂಗಳೂರು ಹೊರವಲಯ, ಮಡಿಕೇರಿಯ ಅರಣ್ಯ ಪ್ರದೇಶದಲ್ಲಿ ಟ್ರೈನಿಂಗ್ ಕೊಡಿಸಿದ್ದನು. ಅಲ್ಲದೇ ರಾಜ್ಯದಲ್ಲಿ ಸರಣಿ ವಿಧ್ವಂಸಕ ಕೃತ್ಯ ಮಾಡಲು ಸ್ಕೆಚ್ ಮಾಡಿದ್ದ ಮೆಹಬೂಬ್ ಪಾಷಾ, ತನ್ನ ಸಹಚರರ ಬಂಧನದ ಬಳಿಕ ತಲೆಮರೆಸಿಕೊಂಡಿದ್ದಾನೆ.

    ಮೆಹಬೂಬ್ ಪಾಷಾಗಾಗಿ ಸಿಸಿಬಿ ಪೊಲೀಸರ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಈ ವರ್ಷ ಕರ್ನಾಟಕದಲ್ಲಿ ವಿಧ್ವಂಸಕ ಕೃತ್ಯ ಮಾಡಲು ಸ್ಕೆಚ್ ಮಾಡಿದ್ದ ಜಿಹಾದಿ ಗ್ಯಾಂಗ್ ಹೆಡೆ ಮುರಿಕಟ್ಟಿ ಮುಂದಾಗಬಹುದಾದ ಬಹುದೊಡ್ಡ ಅಪಾಯ ತಪ್ಪಿಸಿದ್ದಾರೆ.

  • ಮಸಾಜ್ ಪಾರ್ಲರ್‌ನಲ್ಲಿ ಮಾಂಸ ದಂಧೆ – ಮನೆಯಲ್ಲಿತ್ತು ಕಾರ್ಡ್ ಸ್ವೈಪಿಂಗ್ ಮೆಷಿನ್

    ಮಸಾಜ್ ಪಾರ್ಲರ್‌ನಲ್ಲಿ ಮಾಂಸ ದಂಧೆ – ಮನೆಯಲ್ಲಿತ್ತು ಕಾರ್ಡ್ ಸ್ವೈಪಿಂಗ್ ಮೆಷಿನ್

    ಬೆಂಗಳೂರು: ಮಸಾಜ್ ಪಾರ್ಲರ್ ಹೆಸರಿನಲ್ಲಿ ಮಾಂಸದಂಧೆ ನಡೆಸುತ್ತಿದ್ದ ಸ್ಪಾಗಳ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

    ಎಚ್‍ಎಎಲ್‍ನ ಈಸ್ಟರ್ನ್ ಸಲೂನ್ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಮೂವರು ದಲ್ಲಾಳಿಗಳನ್ನು ಬಂಧಿಸಿದ್ದಾರೆ. ಜೊತೆಗೆ ಮೂವರು ಯವತಿಯರನ್ನು ರಕ್ಷಣೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ಮಸಾಜ್ & ಸ್ಪಾ ಹೆಸರಿನಲ್ಲಿ ಹೈಟೆಕ್ ವೈಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು.

    ಸ್ಪಾ ಹೆಸರಿನಲ್ಲಿ ನಡೆಸಲಾಗುತ್ತಿದ್ದ ವೈಶ್ಯಾವಾಟಿಕೆ ಅಡ್ಡೆ ಮೇಲೆ ಸಿಸಿಬಿ ದಾಳಿ ನಡೆಸಿದರು. ಜೀವನ ಭೀಮಾನಗರ ಮತ್ತಿತರ ಕಡೆಯಲ್ಲಿ ದಾಳಿ ನಡೆಸಿದ್ದಾರೆ. ಮತ್ತೊಂದು ವಿಚಾರ ಏನೆಂದರೆ ದಾಳಿ ನಡೆಸಿದಾಗ ವೈಶ್ಯಾವಾಟಿಕೆ ನಡೆಸುತ್ತಿದ್ದ ಮನೆಯಲ್ಲಿ ಕಾರ್ಡ್ ಸೈಪಿಂಗ್ ಮೆಷಿನ್ ಸಿಕ್ಕಿದ್ದು, ಮನೆಗೆ ಬರುತ್ತಿದ್ದ ಗಿರಾಕಿಗಳ ಬಳಿ ಹಣ ಇಲ್ಲದೆ ಹೋದರೆ ಅವರು ಕಾರ್ಡ್ ಅನ್ನು ಸೈಪ್ ಮಾಡಬಹುದಿತ್ತು.

    ಈ ಹೈಟೆಕ್ ವೇಶ್ಯಾವಾಟಿಕೆ ದಂಧೆಯಲ್ಲಿ ಸಿಕ್ಕಿಂ ಮತ್ತು ನಾಗಾಲ್ಯಾಂಡ್‍ನ ಯುವತಿಯರನ್ನು ಬಳಸಿಕೊಂಡಿದ್ದು ಬೆಳಕಿಗೆ ಬಂದಿದೆ. ಗಿರಾಕಿಗಳನ್ನು ಆನ್‍ಲೈನ್ ಅಲ್ಲಿ ಸೆಳೆದುಕೊಳ್ಳುತ್ತಾ ಇದ್ದಿದ್ದು ಅಲ್ಲದೇ, ಫೋಟೋಗಳನ್ನು ಖಾಸಗಿಯಾಗಿ ಮೊಬೈಲ್‍ಗೆ ಕಳುಹಿಸಿ ವ್ಯವಹಾರ ಕುದುರಿಸುತ್ತಿದ್ದದ್ದೂ ಕೂಡ ತನಿಖೆಯಲ್ಲಿ ತಿಳಿದು ಬಂದಿದೆ.

  • ಬಾಡಿ ಮಸಾಜ್ ಹೆಸರಲ್ಲಿ ಸೆಕ್ಸ್ ದಂಧೆ – ಆರು ಯುವತಿಯರ ರಕ್ಷಣೆ

    ಬಾಡಿ ಮಸಾಜ್ ಹೆಸರಲ್ಲಿ ಸೆಕ್ಸ್ ದಂಧೆ – ಆರು ಯುವತಿಯರ ರಕ್ಷಣೆ

    ಬೆಂಗಳೂರು: ಬಾಡಿ ಟು ಬಾಡಿ ಮಸಾಜ್ ಹೆಸರನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಪಾರ್ಲರ್ ಮೇಲೆ ಸಿಸಿಬಿ ಪೊಲೀಸ್ರು ದಾಳಿ ಮಾಡಿ ಇಬ್ಬರನ್ನು ಅರೆಸ್ಟ್ ಮಾಡಿದ್ದಾರೆ.

    ಕೋರಮಂಗಲ ಬಳಿಯ ಈಜಿಪುರದಲ್ಲಿ ಮಸಾಜ್ ಅಂಡ್ ಸ್ಪಾ ಹೆಸರಲ್ಲಿ ವೇಶ್ಯಾವಾಟಿಕೆ ನಡೆಸಲಾಗುತ್ತಿತ್ತು. ಸ್ಪಾ ಹೆಸರಲ್ಲಿ ಗಿರಾಕಿಗಳನ್ನು ವೇಶ್ಯಾವಾಟಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡುತ್ತಿದ್ದರು. ಹೆಣ್ಣುಮಕ್ಕಳಿಂದ ಬಾಡಿ ಟು ಬಾಡಿ ಮಸಾಜ್ ಹೆಸರಲ್ಲಿ ಆಕರ್ಷಕರಾಗುವಂತೆ ಮಾಡಿ ಸೆಕ್ಸ್ ನಲ್ಲಿ ತೊಡಗಿಸಿಕೊಳ್ಳುತ್ತಿದ್ದರು.

    ಸಾಮ್ರಾಟ್ ಮತ್ತು ರಾಕೇಶ್ ಬಂಧಿತ ಆರೋಪಿಗಳು. ಕೆಲಸ ಕೊಡಿಸೋದಾಗಿ ಹೆಣ್ಣುಮಕ್ಕಳನ್ನು ಕರೆತಂದು ಹಣದ ಆಸೆ ತೋರಿಸಿ ಸೆಕ್ಸ್ ನಲ್ಲಿ ತೊಡಗಿಕೊಳ್ಳುವಂತೆ ಮಾಡುತ್ತಿದ್ದರು. ಹ್ಯಾಪಿ ಎಂಡಿಂಗ್, ಬಾಡಿ ಟು ಬಾಡಿ ಮಸಾಜ್ ಹೆಸರಲ್ಲಿ ಕಸ್ಟಮರ್‍ಗಳಿಗೆ ಆಹ್ವಾನ ನೀಡುತ್ತಿರುವುದು ರೇಡ್ ವೇಳೆ ಬಯಲಿಗೆ ಬಂದಿದೆ. ಸದ್ಯ ಆರು ಯುವತಿಯರನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ.

  • ಕೆಪಿಎಲ್ ಬೆಟ್ಟಿಂಗ್ ಪ್ರಕರಣ – ಅಂತರಾಷ್ಟ್ರೀಯ ಬುಕ್ಕಿ ಸಿಸಿಬಿ ವಶಕ್ಕೆ

    ಕೆಪಿಎಲ್ ಬೆಟ್ಟಿಂಗ್ ಪ್ರಕರಣ – ಅಂತರಾಷ್ಟ್ರೀಯ ಬುಕ್ಕಿ ಸಿಸಿಬಿ ವಶಕ್ಕೆ

    ಬೆಂಗಳೂರು: ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಮತ್ತು ಹನಿಟ್ರ್ಯಾಪ್ ಪ್ರಕರಣದಲ್ಲಿ ಸಿಸಿಬಿ ಪೊಲೀಸರಿಗೆ ಬಹುದೊಡ್ಡ ಸುಳಿವು ಸಿಕ್ಕಿದೆ. ಅಂತರಾಷ್ಟ್ರೀಯ ಬುಕ್ಕಿ ಜತಿನ್ ಎಂಬಾತನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

    ಹಲವಾರು ಮ್ಯಾಚ್‍ಗಳನ್ನು ಆರೋಪಿ ಬುಕ್ ಮಾಡಿದ್ದ ಬಗ್ಗೆ ಸಿಸಿಬಿ ಪೊಲೀಸರಿಗೆ ಸಾಕ್ಷಿ ಸಿಕ್ಕಿತ್ತು. ಬಂಧನ ಭಯದಿಂದ ಆರೋಪಿ ದುಬೈ ಸೇರಿಕೊಂಡಿದ್ದ. ಆರೋಪಿ ಪತ್ತೆಗಾಗಿ ಎಲ್‍ಒಸಿ (Look out circular) ಹೊರಡಿಸಲಾಗಿತ್ತು. ಕೋರ್ಟ್ ನಿಂದ ನಿರೀಕ್ಷಣಾ ಜಾಮೀನು ಪಡೆದ ಜತಿನ್ ಏರ್ ಪೋರ್ಟಿಗೆ ಬಂದಾಗ, ಸಿಸಿಬಿ ಪೊಲೀಸ್ರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

    ಈತ ಭವೇಶ್ ಭಾಪ್ನಾ ಜೊತೆ ಸೇರಿ ಸಾಕಷ್ಟು ಮ್ಯಾಚ್‍ಗಳನ್ನು ಬುಕ್ ಮಾಡಿರೊ ಬಗ್ಗೆ ಸಿಸಿಬಿ ಪೊಲೀಸರು ಸಾಕ್ಷಿ ಸಂಗ್ರಹ ಮಾಡಿದ್ದಾರೆ. ಬೇಲ್ ಸಿಕ್ಕಿರುವ ಹಿನ್ನೆಲೆ ಆರೋಪಿಯನ್ನು ವಿಚಾರಣೆ ನಡೆಸಿ ಬಿಟ್ಟು ಕಳಿಸಲಾಗುತ್ತೆ. ಅಗತ್ಯ ಬಿದ್ದರೆ ನೋಟಿಸ್ ನೀಡಿ ಮತ್ತೆ ಕರೆಸಲಾಗುತ್ತೆ ಎಂದು ಸಹ ಪೊಲೀಸ್ರು ಹೇಳಿದ್ದು, ಆರೋಪಿಯ ಹೇಳಿಕೆಯ ಆಧಾರದ ಮೇಲೆ ಬೆಟ್ಟಿಂಗ್ ಕೇಸ್ ಒಂದು ಹಂತ ತಲುಪೋದು ಗ್ಯಾರೆಂಟಿಯಾಗಿದೆ.

  • ದಾಳಿ ಮಾಡಿದ ಮನೆಯಲ್ಲೇ ಎಣ್ಣೆ ಹಾಕಿದ ಸಿಸಿಬಿ ಪೊಲೀಸರು- ಅಟಿಕಾ ಗೋಲ್ಡ್ ಮಾಲೀಕ ಆರೋಪ

    ದಾಳಿ ಮಾಡಿದ ಮನೆಯಲ್ಲೇ ಎಣ್ಣೆ ಹಾಕಿದ ಸಿಸಿಬಿ ಪೊಲೀಸರು- ಅಟಿಕಾ ಗೋಲ್ಡ್ ಮಾಲೀಕ ಆರೋಪ

    ಬೆಂಗಳೂರು: ದಾಳಿ ಮಾಡುವುದಕ್ಕೆ ಹೋದ ಬೆಂಗಳೂರು ಸಿಸಿಬಿ ಪೊಲೀಸರು ಅದೇ ಮನೆಯಲ್ಲೇ ರಾತ್ರಿ ಎಣ್ಣೆ ಪಾರ್ಟಿ ಮಾಡಿರುವ ಆರೋಪ ಕೇಳಿಬಂದಿದೆ.

    ಅಟಿಕಾ ಗೋಲ್ಡ್ ಕಂಪೆನಿ ಮಾಲೀಕ ಬಾಬು ಅವರ ಬಾಣಸವಾಡಿ ಬಳಿಯ ಕಲ್ಯಾಣ ನಗರದ ಮನೆ ಮೇಲೆ ಕಳೆದ 30ರಂದು ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು. ದಾಳಿ ವೇಳೆ ಮಾಲೀಕ ಬಾಬು ಮನೆಯಲ್ಲಿ ಇರಲಿಲ್ಲ. ಹಾಗಾಗಿ ಪೊಲೀಸರು ಬಾಬುಗಾಗಿ ಕಾಯುತ್ತಿದ್ದರು. ಅಲ್ಲದೆ ರಾತ್ರಿ ಆದರೂ ಪರವಾಗಿಲ್ಲ ಕಾಯೋಣ ಎಂದು ಕಾದು ಕುಳಿತ್ತಿದ್ದರು. ಆದರೆ ಬಾಬು ಮನೆಗೆ ಬಂದಿಲ್ಲ.

    ತಡರಾತ್ರಿ ಹಿರಿಯ ಅಧಿಕಾರಿಗಳು ಮನೆಗೆ ಹೋದ ನಂತರ ಅಲ್ಲಿಯೇ ಉಳಿದಿದ್ದ ಐವರು ಸಿಸಿಬಿ ಅಧಿಕಾರಿಗಳು ಅದೇ ಮನೆಯಲ್ಲೇ ಎಣ್ಣೆ ಪಾರ್ಟಿ ಮಾಡಿದ್ದಾರೆ. ಪೊಲೀಸರು ಪಾರ್ಟಿ ಮಾಡುವ ದೃಶ್ಯವನ್ನು ಮನೆಯವರು ಸೆರೆಹಿಡಿದಿದ್ದಾರೆ. ಪೊಲೀಸರ ಎಣ್ಣೆ ಪಾರ್ಟಿಯ ವಿಡಿಯೋವನ್ನು ಮಾಲೀಕ ಬಾಬು ಬಿಡುಗಡೆ ಮಾಡುವ ಮೂಲಕ ಪೊಲೀಸರ ನಡೆಯನ್ನು ಪ್ರಶ್ನೆ ಮಾಡಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಸಿಸಿಬಿ ಹಿರಿಯ ಅಧಿಕಾರಿ, ಇದು ನಮ್ಮ ಪೊಲೀಸರು ಎನ್ನುವುದರ ಬಗ್ಗೆ ಅನುಮಾನವಿದೆ. ವಿಡಿಯೋ ಪರಿಶೀಲನೆ ನಡೆಸಿದ ನಂತರ ತಪ್ಪು ಕಂಡು ಬಂದರೆ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದ್ದಾರೆ.

  • ಕಾಮನ್‍ವೆಲ್ತ್ ಗೇಮ್ಸ್‌ನಲ್ಲಿ ಭಾರತ ಪ್ರತಿನಿಧಿಸಿದ್ದಾತ ಇಂದು ಅಕ್ರಮ ಗನ್ ಪೂರೈಕೆದಾರ

    ಕಾಮನ್‍ವೆಲ್ತ್ ಗೇಮ್ಸ್‌ನಲ್ಲಿ ಭಾರತ ಪ್ರತಿನಿಧಿಸಿದ್ದಾತ ಇಂದು ಅಕ್ರಮ ಗನ್ ಪೂರೈಕೆದಾರ

    ಬೆಂಗಳೂರು: ಬೆಂಗಳೂರು ಅಂಡರ್‌ವರ್ಲ್ಡ್‌ ಡಾನ್‍ಗಳಿಗೆ ಅಕ್ರಮವಾಗಿ ಗನ್ ಪೂರೈಸುತ್ತಿದ್ದ ಆರು ಮಂದಿ ಆರೋಪಿಗಳು ಸಿಸಿಬಿ ಬಲೆಗೆ ಬಿದ್ದಿದ್ದಾರೆ.

    ಹಾವೇರಿ ಮೂಲದ ಅಸ್ಲಂ ಗುತ್ತಲ್ ಬ್ಯಾಸ್ಕೆಟ್‍ಬಾಲ್‍ನಲ್ಲಿ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ತಂಡದ ಪರ ಆಡಿದ್ದನು. ಪಶ್ಚಿಮ ಬಂಗಾಳ, ಬಿಹಾರದ ಮೂಲಕ ಅಕ್ರಮವಾಗಿ ಗನ್ ತರಿಸುತ್ತಿದ್ದ ಅಸ್ಲಂ ತನ್ನದೇ ಜಾಲ ಕಟ್ಟಿಕೊಂಡು, ಹತ್ತಿಪ್ಪತ್ತು ಸಾವಿರಕ್ಕೆಲ್ಲಾ ರೌಡಿಗಳಿಗೆ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಈತ ರೌಡಿಯಾಗಿದ್ದ ಬ್ರಿಗೇಡ್ ಅಜಂನ ಶಿಷ್ಯ ಎನ್ನಲಾಗಿದೆ.

    ಈ ಹಿಂದೆ ಕೂಡ ಅಸ್ಲಾಂ ಮೇಲೆ ಬೆಂಗಳೂರಿನ ವಿವಿಧ ಪೊಲೀಸ್ ಠಾಣೆಯಲ್ಲಿ ನಾಲ್ಕು ಶಸ್ತ್ರಾಸ್ತ್ರ ಕಾಯ್ದೆ ಜೊತೆ 8 ಪ್ರಕರಣಗಳು ಮೇಲಿವೆ. ಈತನ ಜೊತೆ ಇದೇ ಕೃತ್ಯದಲ್ಲಿ ಪಾಲ್ಗೊಂಡಿದ್ದ ಜಾವಿದ್ ಖಾನ್, ಧರ್ಮಣ್ಣ, ದೇವಲಪ್ಪ ಚೌಹಾಣ್, ರಾಯಣ್ಣಗೌಡ, ಸೈಯದ್ ರಿಜ್ವಾನ್, ರೋಹನ್ ಮಂಡಲ್ ಸೇರಿ ಆರು ಮಂದಿಯನ್ನು ಬಂಧಿಸಿ, ಮೂರು ಪಿಸ್ತೂಲ್ ಮತ್ತು ಒಂದು ರಿವಾಲ್ವರ್ ಸಮೇತ ಎಂಟು ಸಜೀವ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

    ಅಜಂ ಕಾಂಗ್ರಸ್ ನಾಯಕರ ಜೊತೆ ಫೋಟೋಗಳನ್ನು ಸಹ ತೆಗೆಸಿಕೊಂಡಿದ್ದಾನೆ. ಕಾಂಗ್ರೆಸ್ ಶಾಲು ಹಾಕಿ ಪೋಸ್ ಕೂಡ ಕೊಟ್ಟಿದ್ದು, ಈತ ಕಾಂಗ್ರೆಸ್ ಕಾರ್ಯಕರ್ತ ಎನ್ನುವ ಮಾತುಗಳು ಸಹ ಕೇಳಿ ಬರುತ್ತಿವೆ.

  • ಪಿಸ್ತೂಲ್ ಡೀಲರ್ ಸೆರೆ- ಸಿಸಿಬಿ ಪೊಲೀಸರಿಂದ ಬಂಧನ

    ಪಿಸ್ತೂಲ್ ಡೀಲರ್ ಸೆರೆ- ಸಿಸಿಬಿ ಪೊಲೀಸರಿಂದ ಬಂಧನ

    ಬೆಂಗಳೂರು: ಪಿಸ್ತೂಲ್ ಡೀಲರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

    ಅಸ್ಲಾಂ ಅಲಿಯಾಸ್ ಹಾವೇರಿ ಅಸ್ಲಾಂ ಬಂಧಿತ ಆರೋಪಿ. ಅಸ್ಲಾಂ ಪಶ್ಚಿಮ ಬಂಗಾಳದಿಂದ ಪಿಸ್ತೂಲ್ ಹಾಗೂ ರಿವಾಲ್ವರ್ ಗಳು ತಂದು ಕರ್ನಾಟಕದ ವಿವಿಧ ನಗರಗಳಲ್ಲಿ ಮಾರಾಟ ಮಾಡುತ್ತಿದ್ದ ಎಂದು ಹೇಳಲಾಗುತ್ತಿದೆ.

    ಹಲವು ವರ್ಷಗಳಿಂದ ಅಸ್ಲಾಂ ಈ ದಂಧೆಯಲ್ಲಿ ತೊಡಗಿದ್ದು, ರೌಡಿಗಳು, ಸೇರಿದಂತೆ ಭೂಗತ ನಂಟಿರುವ ವ್ಯಕ್ತಿಗಳಿಗೆ ಅಕ್ರಮವಾಗಿ ಪಿಸ್ತೂಲ್, ರಿವಾಲ್ವರ್ ಸೇರಿದಂತೆ ಅಕ್ರಮ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡಿದರ ಬಗ್ಗೆ ಸಿಸಿಬಿ ಪೊಲೀಸರಿಗೆ ಮಾಹಿತಿ ಸಿಕ್ಕಿದೆ.

    ಮತ್ತೊಬ್ಬ ಡೀಲರ್ ಆಗಿರುವ ಮೈಸೂರು ಮೂಲದ ಜಾವೀದ್ ಎನ್ನುವ ವ್ಯಕ್ತಿ ಕೂಡ ಈ ಡೀಲ್ ಮಾಡುತ್ತಿರುವುದು ಗೊತ್ತಾಗಿದ್ದು, ಜಾವೀದ್‍ನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಸದ್ಯ ಖಚಿತ ಮಾಹಿತಿ ಆಧಾರದಲ್ಲಿ ಸಿಸಿಬಿ ಪೊಲೀಸರು ಅಸ್ಲಾಂನನ್ನು ಬಂಧಿಸಿದ್ದಾರೆ.

    ಬಂಧಿತ ಆರೋಪಿಯಿಂದ ಎರಡು ಪಿಸ್ತೂಲ್ ಸೇರಿದಂತೆ ಕೆಲವು ಮಾರಾಕಾಸ್ತ್ರಗಳನ್ನು ವಶಕ್ಕೆ ಪಡೆದಿದ್ದಾರೆ. ಅಸ್ಲಾಂ ಮತ್ತು ಜಾವೀದ್ ಯಾರಿಗೆಲ್ಲಾ ಮಾರಾಟ ಮಾಡಿದ್ದಾರೆ ಎನ್ನುವುದು ತನಿಖೆಯಿಂದ ಬಹಿರಂಗವಾಗಬೇಕಿದೆ.

  • 80 ಲಕ್ಷ ಮೌಲ್ಯದ ಚಂದನ ಮರದ ತುಂಡುಗಳು ವಶ

    80 ಲಕ್ಷ ಮೌಲ್ಯದ ಚಂದನ ಮರದ ತುಂಡುಗಳು ವಶ

    – ಸಿಸಿಬಿ ಪೊಲೀಸರ ಕಾರ್ಯಾಚರಣೆ

    ಮೈಸೂರು: ಅಕ್ರಮವಾಗಿ ಶೇಖರಿಸಿಟ್ಟಿದ್ದ ಚಂದನ ಮರದ ತುಂಡುಗಳನ್ನು ಮೈಸೂರು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ಬರೋಬ್ಬರಿ 80 ಲಕ್ಷ ಮೌಲ್ಯದ ಚಂದನದ ಮರ ಇದ್ದಾಗಿದ್ದು, 750 ಕೆಜಿ ತೂಕದ 80 ಮರದ ತುಂಡುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಓರ್ವನನ್ನು ಬಂಧಿಸಿದ್ದಾರೆ.

    ಲಷ್ಕರ್ ಮೊಹಲ್ಲಾದ ಫೈರೋಜ್ ಬಂಧಿತ ಆರೋಪಿ. ಸಿಸಿಬಿ, ಎಸಿಪಿ ಮರಿಯಪ್ಪ ಮಾರ್ಗದರ್ಶನದಲ್ಲಿ ಇನ್ಸಪೆಕ್ಟರ್ ಕಿರಣ್ ಕುಮಾರ್ ತಂಡ ಈ ಕಾರ್ಯಾಚರಣೆ ನಡೆಸಿದೆ. ಮಂಡಿ ಮೊಹಲ್ಲಾದ ಪುಲಿಕೇಶಿ ರಸ್ತೆಯ ಮನೆಯಲ್ಲಿ ಆರೋಪಿ ಮರಗಳನ್ನು ಶೇಖರಿಸಿಟ್ಟಿದ್ದನು. ಜೊತೆಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಹಡಗಿನ ಮೂಲಕ ಸಾಗಿಸಲು ಪ್ಲ್ಯಾನ್ ಮಾಡಿಕೊಂಡಿದ್ದನು.

    ರಾಜ್ಯ ಹೊರ ರಾಜ್ಯಗಳಿಂದ ಅಕ್ರಮವಾಗಿ ಇದನ್ನು ಖರೀದಿಸಿ ತನ್ನ ಮನೆಯಲ್ಲಿ ಶೇಖರಿಸಿಟ್ಟುಕೊಂಡಿದ್ದನು. ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಕಾರ್ಯಾಚರಣೆ ಮಾಡಿ ಆರೋಪಿಯನ್ನು ಬಂಧಿಸಿ, ಮರದ ತುಂಡುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

  • ‘ನಾವು ಅಲ್ಲಿಗೆ ಬರೋಲ್ಲ’ – ಸಿಸಿಬಿ ಅಧಿಕಾರಿಗಳಿಗೆ ಸ್ಯಾಂಡಲ್‍ವುಡ್ ಕ್ವೀನ್‍ಗಳ ಷರತ್ತು

    ‘ನಾವು ಅಲ್ಲಿಗೆ ಬರೋಲ್ಲ’ – ಸಿಸಿಬಿ ಅಧಿಕಾರಿಗಳಿಗೆ ಸ್ಯಾಂಡಲ್‍ವುಡ್ ಕ್ವೀನ್‍ಗಳ ಷರತ್ತು

    ಬೆಂಗಳೂರು: ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಹಗರಣದ ಸಂಬಂಧ ಸ್ಯಾಂಡಲ್ ವುಡ್ ನಟಿಯರನ್ನು ವಿಚಾರಣೆಗೆ ಒಳಪಡಿಸಲು ಮುಂದಾಗಿರುವ ಸಿಸಿಬಿ ಅಧಿಕಾರಿಗಳಿಗೆ ಸ್ಯಾಂಡಲ್ ವುಡ್ ನಟಿಯರು ಷರತ್ತು ವಿಧಿಸಿದ್ದಾರೆ.

    ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಹನಿಟ್ರ್ಯಾಪ್ ಅಲ್ಲಿ ಸ್ಯಾಂಡಲ್ ವುಡ್‍ನ ಮೂವರು ನಟಿಯರು ಭಾಗಿಯಾಗಿದ್ದಾರೆ ಅನ್ನೋ ಆರೋಪ ಇದೆ. ಈ ಆರೋಪ ಹಿನ್ನೆಲೆಯಲ್ಲಿ ಸಾಕಷ್ಟು ತನಿಖೆ ನಡೆಸಿರೋ ಸಿಸಿಬಿ ಅಧಿಕಾರಿಗಳು ಕೆಲವೊಂದು ಸಾಕ್ಷ್ಯಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆಟಗಾರರ ಜೊತೆಯಲ್ಲಿ ಪಂಚತಾರಾ ಹೋಟೆಲ್ ಗಳಲ್ಲಿ ಕಾಣಿಸಿಕೊಂಡಿರೋ ಈ ನಟಿಯರು ಹನಿಟ್ರ್ಯಾಪ್ ಅಲ್ಲಿ ಭಾಗಿಯಾಗಿದ್ರಾ ಎನ್ನುವ ಅನುಮಾನ ಇದೆ.

    ಈ ಹಿನ್ನೆಲೆಯಲ್ಲಿ ವಿಚಾರಣೆಗೆ ಮುಂದಾಗಿರುವ ಸಿಸಿಬಿ ಅಧಿಕಾರಿಗಳಿಗೆ ಸ್ಯಾಂಡಲ್ ವುಡ್ ನಟಿಮಣಿಯರು ಒಂದು ಷರತ್ತುಗಳನ್ನು ಹಾಕಿದ್ದಾರೆ. ನಾವು ವಿಚಾರಣೆಗೆ ಹಾಜರಾಗಲು ಯಾವುದೇ ಭಯ ಇಲ್ಲ. ಚಾಮರಾಜಪೇಟೆಯಲ್ಲಿ ಇರುವ ಕೇಂದ್ರ ಕಚೇರಿಗೆ ವಿಚಾರಣೆಗೆ ಹಾಜರಾಗೋದಿಲ್ಲ. ಅಲ್ಲಿ ವಿಚಾರಣೆಗೆ ಹಾಜರಾದರೇ ಮಾಧ್ಯಮಗಳಿಗೆ ಸಿಕ್ಕಿ ಬೀಳುತ್ತೇವೆ. ಆ ಹಿನ್ನೆಲೆಯಲ್ಲಿ ನಾವು ಅಲ್ಲಿಗೆ ವಿಚಾರಣೆಗೆ ಬರೋದಿಲ್ಲ ಎಂದು ಮನವಿ ಮಾಡಿದ್ದಾರೆ.

    ಅಷ್ಟೇ ಅಲ್ಲದೆ ರಾಜಕಾರಣಿಗಳ ಮೂಲಕ ಕೂಡ ಅಧಿಕಾರಿಗಳ ಮೇಲೆ ಒತ್ತಡ ಹೇರಲಾಗ್ತಿದೆ ಎನ್ನುವ ವಿಚಾರ ಮೂಲಗಳಿಂದ ಸಿಕ್ಕಿದೆ.