Tag: ccb

  • ರಮ್ಯಾಗೆ ಅವಹೇಳನ| ದರ್ಶನ್‌ ಅಭಿಮಾನಿಗಳ ವಿರುದ್ಧ 380 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ

    ರಮ್ಯಾಗೆ ಅವಹೇಳನ| ದರ್ಶನ್‌ ಅಭಿಮಾನಿಗಳ ವಿರುದ್ಧ 380 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ

    ಬೆಂಗಳೂರು: ನಟಿ ರಮ್ಯಾಗೆ ಸೋಷಿಯಲ್‌ ಮೀಡಿಯಾದಲ್ಲಿ (Social Media) ಅಶ್ಲೀಲ ಕಮೆಂಟ್ ಹಾಕಿದ ದರ್ಶನ್ (Darshan) ಅಭಿಮಾನಿಗಳ ಮೇಲೆ ಸಿಸಿಬಿ (CCB Police) ಸೈಬರ್ ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ.

    11 ಆರೋಪಿಗಳ ಮೇಲೆ 380 ಪುಟಗಳ ಸುಧೀರ್ಘ ಚಾರ್ಜ್‌ಶೀಟ್‌ (Chargesheet) ಸಲ್ಲಿಕೆ ಮಾಡಲಾಗಿದೆ. ಆರೋಪಿಗಳ ಮೊಬೈಲ್, ಸೋಷಿಯಲ್ ಮೀಡಿಯಾದಲ್ಲಿ ಕಮೆಂಟ್ ಹಾಕಿದ ಸ್ಕ್ರೀನ್ ಶಾಟ್‌, ವಿಡಿಯೋ ಶೇರ್ ಆಗಿರುವ ಲಿಂಕ್‌ಗಳು, ದೂರುದಾರೆ ರಮ್ಯಾ ಸ್ಟೇಟ್‌ಮೆಂಟ್, ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ, ಆರೋಪಿಗಳ ಸ್ವ ಇಚ್ಚಾ ಹೇಳಿಕೆ ಆಧಾರದಲ್ಲಿ ಚಾರ್ಜ್‌ಶೀಟ್ ಸಲ್ಲಿಕೆ ಮಾಡಲಾಗಿದೆ. ಇದನ್ನೂ ಓದಿ:  ಡಿಕೆಶಿ ವೈಲ್ಡ್‌ ಕಾರ್ಡ್‌ಎಂಟ್ರಿ – ಬಿಗ್‌ಬಾಸ್‌ ಮನೆ ಓಪನ್‌ | ರಾತ್ರಿ ಏನೇನಾಯ್ತು? ಇಲ್ಲಿದೆ ಇನ್‌ಸೈಡ್‌ ಸ್ಟೋರಿ

     

    60 ದಿನಗಳ ಡೆಡ್ ಲೈನ್ ಮುಗಿಯುತ್ತಾ ಬಂದ ಹಿನ್ನೆಲೆ ದೋಷಾರೋಪಣ ಪಟ್ಟಿ ಸಲ್ಲಿಕೆ ಮಾಡಲಾಗಿದೆ. ಅಶ್ಲೀಲ ಕಮೆಂಟ್ ಹಾಕಿದ ಇನ್ನೂ 6 ಆರೋಪಿಗಳು ಪೊಲೀಸರಿಗೆ ಸಿಕ್ಕಿಲ್ಲ. ಆ ಆರೋಪಿಗಳು ಸಿಕ್ಕ ಬಳಿಕ ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಸಲಿದ್ದಾರೆ.  ಇದನ್ನೂ ಓದಿ:  ಮೊದಲು 60 ಕೋಟಿ ಠೇವಣಿ ಇಡಿ – ಶಿಲ್ಪಾ ಶೆಟ್ಟಿ ದಂಪತಿ ವಿದೇಶಿ ಪ್ರವಾಸಕ್ಕೆ ಬಾಂಬೆ ಹೈಕೋರ್ಟ್ ತಡೆ

    ಅಶ್ಲೀಲ ಕಮೆಂಟ್ ಹಾಕಿದ ಇನ್ನೂ ನಾಲ್ವರು ಆರೋಪಿಗಳಿಗೆ ಬಿಡುಗಡೆ ಭಾಗ್ಯ ಸಿಕ್ಕಿಲ್ಲ. ಚಾರ್ಜ್ ಶೀಟ್ ಬೆನ್ನಲ್ಲೇ ಶೀಘ್ರದಲ್ಲೇ ಟ್ರಯಲ್ ಆರಂಭವಾಗಲಿದೆ.

  • ಮಾರಕಾಸ್ತ್ರ ಹಿಡಿದು ಯಶ್ ರೀತಿ ಬಿಲ್ಡಪ್ – ಡೂಪ್ಲಿಕೇಟ್ `ಕೆಜಿಎಫ್’ ಲೋಕ ಸೃಷ್ಟಿಸಿದ್ದವನಿಗೆ ಸಿಸಿಬಿ ಶಾಕ್

    ಮಾರಕಾಸ್ತ್ರ ಹಿಡಿದು ಯಶ್ ರೀತಿ ಬಿಲ್ಡಪ್ – ಡೂಪ್ಲಿಕೇಟ್ `ಕೆಜಿಎಫ್’ ಲೋಕ ಸೃಷ್ಟಿಸಿದ್ದವನಿಗೆ ಸಿಸಿಬಿ ಶಾಕ್

    ಬೆಂಗಳೂರು: ಮಾರಕಾಸ್ತ್ರ ಹಿಡಿದು ಯಶ್ ರೀತಿ ಬಿಲ್ಡಪ್ ಕೊಟ್ಟು ಡೂಪ್ಲಿಕೇಟ್ `ಕೆಜಿಎಫ್’ (KGF) ಲೋಕವನ್ನು ಸೃಷ್ಟಿಸಿ ವೈರಲ್ ಮಾಡಿದ್ದ ರೀಲ್ಸ್ ಸ್ಟಾರ್ ಶ್ರೀನಿವಾಸ್‌ಗೆ ಸಿಸಿಬಿ (CCB) ಶಾಕ್ ನೀಡಿದೆ.

    ರೀಲ್ಸ್ ಸ್ಟಾರ್ ಶ್ರೀನಿವಾಸ್ ರಾಜ್ ಎಂಬಾತನಿಗೆ ಸಿಸಿಬಿ ಪೊಲೀಸರು ಶಾಕ್ ಕೊಟ್ಟಿದ್ದಾರೆ. ಹಿಂದೆ ಮುಂದೆ ಜನರನ್ನು ಇಟ್ಟುಕೊಂಡು ಹೀರೋ ರೀತಿಯಲ್ಲೇ ಪೋಸ್ ಕೊಟ್ಟು ರೀಲ್ಸ್ ಮಾಡಿದ್ದ. ರಾಕಿಂಗ್ ಸ್ಟಾರ್ ಯಶ್ ಸ್ಟೈಲ್‌ನ್ನು ಕಾಪಿ ಮಾಡಿ, ಚಾಕು, ಚೂರಿ ಮತ್ತು ಗನ್ ಹಿಡಿದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಭಯ ಹುಟ್ಟಿಸುವ ರೀತಿಯಲ್ಲಿ ವಿಡಿಯೋ ಹರಿಬಿಟ್ಟಿದ್ದ.ಇದನ್ನೂ ಓದಿ: ನಿಮ್ಮ ಮಾಹಿತಿ ಸುರಕ್ಷಿತವಾಗಿರಲ್ಲ: ಜಾತಿಗಣತಿ ಬಹಿಷ್ಕಾರಕ್ಕೆ ತೇಜಸ್ವಿ ಸೂರ್ಯ ಕರೆ

    ಈ ವಿಡಿಯೋ ಪೊಲೀಸ್ ಸೋಷಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್‌ನ ಕಣ್ಣಿಗೆ ಬಿದ್ದಿದ್ದು, ಸಿಸಿಬಿ ಪೊಲೀಸರು ಶ್ರೀನಿವಾಸ್‌ ಕರೆತಂದು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಇದೆಲ್ಲ ಡೂಪ್ಲಿಕೇಟ್ ವೆಪನ್ಸ್ ಎಂದು ಮಾಹಿತಿ ನೀಡಿದ್ದಾನೆ.

    ಸದ್ಯ ಪೊಲೀಸರು ವಿಡಿಯೋದಲ್ಲಿ ಬಳಸಿದ್ದ ಎಲ್ಲಾ ವಸ್ತುಗಳನ್ನು ತಂದೊಪ್ಪಿಸಲು ಸೂಚಿಸಿದ್ದಾರೆ. ಯಾವುದೇ ಒಂದು ಮಾರಕಾ‌ಸ್ತ್ರ ತಪ್ಪಿಸಿದರೂ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ.ಇದನ್ನೂ ಓದಿ:‘ಐ ಲವ್ ಮುಹಮ್ಮದ್’ ಅಭಿಯಾನಕ್ಕೆ  5 ದಿನಗಳ ಪ್ಲ್ಯಾನಿಂಗ್ – ಯುಪಿ ಪೊಲೀಸರ ತನಿಖೆಯಲ್ಲಿ ಬಯಲು

  • ಡಿಜಿಟಲ್ ಅರೆಸ್ಟ್ – 30 ಲಕ್ಷ ರೂ. ಕಳೆದುಕೊಂಡ ಮಾಜಿ ಶಾಸಕ

    ಡಿಜಿಟಲ್ ಅರೆಸ್ಟ್ – 30 ಲಕ್ಷ ರೂ. ಕಳೆದುಕೊಂಡ ಮಾಜಿ ಶಾಸಕ

    ಬೆಂಗಳೂರು: ಡಿಜಿಟಲ್ ಅರೆಸ್ಟ್‌ಗೆ (Digital Arrest) ಒಳಗಾಗಿ ಔರದ್ (Aurad) ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಗುಂಡಪ್ಪ ವಕೀಲ್ (Gundappa Vakil) 30 ಲಕ್ಷ ರೂ. ಹಣ ಕಳೆದುಕೊಂಡಿದ್ದಾರೆ.

    ಸಿಬಿಐ, ಇಡಿ ಹಾಗೂ ಜಡ್ಜ್ ಹೆಸರಿನಲ್ಲಿ ಡಿಜಿಟಲ್ ಅರೆಸ್ಟ್ ಮಾಡಿದ್ದು, ಮಾಜಿ ಶಾಸಕರಿಂದ ಹಂತ ಹಂತವಾಗಿ 30 ಲಕ್ಷ ರೂ. ಹಣವನ್ನು ಖದೀಮರು ವರ್ಗಾಯಿಸಿಕೊಂಡಿದ್ದಾರೆ. ಘಟನೆ ಸಂಬಂಧ ಬೆಂಗಳೂರು ಸಿಸಿಬಿ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ:  ಈದ್‌ಮಿಲಾದ್ ವೇಳೆ 15 ನಿಮಿಷ ಪೊಲೀಸರನ್ನ ಸುಮ್ಮನಿರಿಸಿ ಹಾಡು ಪ್ರಸಾರ – ಮೂವರ ವಿರುದ್ಧ ಕೇಸ್ ದಾಖಲು

    ಮೊದಲು ಆಗಸ್ಟ್ 12ರಂದು ಸಿಬಿಐ ಆಫೀಸರ್ ಎಂದು ಕರೆ ಮಾಡಿದ್ದ ಖದೀಮರು, ನೀವು ನರೇಶ್ ಗೋಯಲ್ ಮನಿ ಲಾಡರಿಂಗ್ ಕೇಸ್‌ನಲ್ಲಿ ಭಾಗಿಯಾಗಿದ್ದೀರಿ. ನರೇಶ್ ಗೋಯಲ್ ಜೊತೆ ಅಕ್ರಮ ವ್ಯವಹಾರ ಮಾಡಿದ್ದೀರಿ ಎಂದು ಹೆದರಿಸಿದ್ದರು. ಆ.13ರಂದು ಸಿಬಿಐ ಡಿಸಿಪಿ ಎಂದು ಮತ್ತೋರ್ವ ಕರೆ ಮಾಡಿ, ನೀವು ಡಿಜಿಟಲ್ ಅರೆಸ್ಟ್ ಆಗಿದ್ದೀರಾ, ಕಾಲ್ ಕಟ್ ಮಾಡಬೇಡಿ ಎಂದು ಹೆದರಿಸಿದ್ದ. ಬಳಿಕ ಆನ್‌ಲೈನ್‌ನಲ್ಲಿ ಫೇಕ್ ಜಡ್ಜ್ ಮುಂದೆ ಹಾಜರು ಪಡಿಸಿದ್ದ ಖದೀಮರು ಕೋರ್ಟ್ ಹಾಲ್ ರೀತಿ ಸೆಟಪ್ ಮಾಡಿ ನಂಬಿಕೆ ಹುಟ್ಟಿಸಿದ್ದರು. ನಮ್ಮದು ತಪ್ಪಿಲ್ಲ ಎಂದು ಮುಚ್ಚಳಿಕೆ ಬರೆದುಕೊಡಿ ಎಂದು 10 ಲಕ್ಷ ರೂ. ಹಣ ವರ್ಗಾಯಿಸಿಕೊಂಡಿದ್ದರು. ಬಳಿಕ ಪ್ರಾಪರ್ಟಿ ತನಿಖೆ ಮಾಡಬೇಕೆಂದು 20 ಲಕ್ಷ ರೂ. ಡೆಪಾಸಿಟ್ ಮಾಡಿಸಿಕೊಂಡಿದ್ದರು. ಹೀಗೆ ಖದೀಮರ ಮಾತು ನಂಬಿ ಹಂತ-ಹಂತವಾಗಿ 30.99 ಲಕ್ಷ ರೂ. ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ. ಹಣ ಹಾಕಿಸಿಕೊಂಡು ತನಿಖೆ ಮುಗಿದ ನಂತರ ಮರಳಿ ಕೊಡುವುದಾಗಿ ನಂಬಿಸಿದ್ದರು. ಇದನ್ನೂ ಓದಿ: ಮದ್ದೂರಿನಲ್ಲಿ ಗಣೇಶನ ಮೇಲೆ ಕಲ್ಲು ತೂರಲು ಪ್ರಚೋದನೆ ಏನು? – ಇಲ್ಲಿದೆ ಇನ್‌ಸೈಡ್‌ ಸ್ಟೋರಿ

    ಹಣ ಮರಳಿ ಬಾರದಿದ್ದಾಗ ಮಾಜಿ ಶಾಸಕ ಗುಂಡಪ್ಪ ವಕೀಲ್ ಸಿಸಿಬಿ ಸೈಬರ್ ಕ್ರೈಂ (CCB) ಪೊಲೀಸರಿಗೆ ದೂರು ನೀಡಿದ್ದಾರೆ. ಗುಂಡಪ್ಪ ವಕೀಲ್ ನೀಡಿದ ದೂರಿನ ಅನ್ವಯ ಎಫ್‌ಐಆರ್ ದಾಖಲಿಸಲಾಗಿದೆ. ಇದನ್ನೂ ಓದಿ: ಮದ್ದೂರು ಗಲಭೆ – ರಾಜ್ಯದಲ್ಲಿ ಹಿಂದೂಗಳೇ ಟಾರ್ಗೆಟ್; ಎನ್‌ಐಎ ತನಿಖೆಗೆ ಆಗ್ರಹಿಸುವಂತೆ ಮನವಿ

  • ಮಾಜಿ ಐಜಿಪಿ ಓಂ ಪ್ರಕಾಶ್ ಹತ್ಯೆಯಲ್ಲಿ ಮಗಳ ಪಾತ್ರವಿಲ್ಲ – ಕೋರ್ಟ್‌ಗೆ ಚಾರ್ಜ್‌ಶೀಟ್‌ ಸಲ್ಲಿಕೆ

    ಮಾಜಿ ಐಜಿಪಿ ಓಂ ಪ್ರಕಾಶ್ ಹತ್ಯೆಯಲ್ಲಿ ಮಗಳ ಪಾತ್ರವಿಲ್ಲ – ಕೋರ್ಟ್‌ಗೆ ಚಾರ್ಜ್‌ಶೀಟ್‌ ಸಲ್ಲಿಕೆ

    ಬೆಂಗಳೂರು: ಮಾಜಿ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ (Om Prakash) ಹತ್ಯೆ ಕೇಸ್ ತನಿಖೆ ಮಾಡಿ ಸಿಸಿಬಿ, ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದೆ.

    ಕೊಲೆಯಾದ ಓಂಪ್ರಕಾಶ್ ಮಗಳ ಹೆಸರನ್ನ ಕೈಬಿಟ್ಟು ಚಾರ್ಜ್‌ಶೀಟ್ ಮಾಡಲಾಗಿದೆ. ಓಂಪ್ರಕಾಶ್ ಕೊಲೆಯಾದ ಬಳಿಕ ಹೆಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಓಂಪ್ರಕಾಶ್ ಪತ್ನಿ ಪಲ್ಲವಿ ಹಾಗೂ ಮಗಳ ವಿರುದ್ಧ ದೂರು ದಾಖಲಿಸಲಾಗಿದೆ. ಇದನ್ನೂ ಓದಿ: ಓಂ ಪ್ರಕಾಶ್‌ ಹತ್ಯೆಗೆ 1 ವಾರದಿಂದ ಸ್ಕೆಚ್‌ ಹಾಕಿದ್ದ ಪತ್ನಿ, ಪುತ್ರಿ!

    ಎಫ್‌ಐಆರ್‌ನಲ್ಲಿ ಓಂಪ್ರಕಾಶ್ ಪತ್ನಿ ಪಲ್ಲವಿಯನ್ನ ಎ1 ಆರೋಪಿ, ಮಗಳನ್ನ ಎ2 ಆರೋಪಿಯನ್ನಾಗಿ ಮಾಡಲಾಗಿತ್ತು. ತನಿಖೆಯ ವೇಳೆ ಓಂಪ್ರಕಾಶ್ ಹತ್ಯೆಯಲ್ಲಿ ಮಗಳ ಪಾತ್ರ ಇಲ್ಲ ಅನ್ನೋದು ಕಂಡು ಬಂದಿದೆ. ಹೀಗಾಗಿ, ತಂದೆಯ ಮರ್ಡರ್ ಕೇಸ್‌ನಲ್ಲಿ ಎ2 ಆರೋಪಿಯಾಗಿದ್ದ ಮಗಳನ್ನ ಚಾರ್ಜ್‌ಶೀಟ್‌ನಿಂದ ಕೈಬಿಡಲಾಗಿದೆ.

    ಸಾವಿರಕ್ಕೂ ಅಧಿಕ ಪುಟಗಳ ಚಾರ್ಜ್‌ಶೀಟ್ ಸಿಸಿಬಿ ಸಲ್ಲಿಕೆ ಮಾಡಿದ್ದು, ಕೊಲೆಗೆ ಪ್ರಮುಖವಾದ ಕಾರಣ ಕೋಟ್ಯಂತರ ರೂಪಾಯಿ ಬೆಲೆಬಾಳುವ ಆಸ್ತಿಯ ವಿಚಾರ ಎಂದು ಉಲ್ಲೇಖ ಮಾಡಿದೆ. ಪ್ರಕರಣದ ತನಿಖೆ ಮುಂದುವರೆಸಲು ಕೊಲೆಯಾದ ಡಿಜಿ-ಐಜಿಪಿ ಮಗ ಕಾರ್ತಿಕೇಶ್, ಪ್ರಕರಣದ ತನಿಖೆ ಮುಂದುವರೆಸಲು ಸರ್ಕಾರದಿಂದ ಅನುಮತಿ ಪಡೆದು ಸ್ವಂತ ಖರ್ಚಿನಲ್ಲಿ ಎಸ್‌ಪಿಪಿಯನ್ನ ನೇಮಕ ಮಾಡಿಕೊಂಡಿದ್ದಾರೆಂದು ತಿಳಿದುಬಂದಿದೆ. ಇದನ್ನೂ ಓದಿ: ಒಂದು ವಾರದಿಂದ ಬೆದರಿಕೆ – ಪುತ್ರನಿಂದ ದೂರು, ಓಂ ಪ್ರಕಾಶ್‌ ಪತ್ನಿ ಅರೆಸ್ಟ್‌

  • ಬೆಂಗಳೂರಿನ 2 ಪಬ್ ಮೇಲೆ ದಾಳಿ – ಇಬ್ಬರು ವಿದೇಶಿ ಡ್ರಗ್ ಪೆಡ್ಲರ್‌ಗಳು ಅರೆಸ್ಟ್

    ಬೆಂಗಳೂರಿನ 2 ಪಬ್ ಮೇಲೆ ದಾಳಿ – ಇಬ್ಬರು ವಿದೇಶಿ ಡ್ರಗ್ ಪೆಡ್ಲರ್‌ಗಳು ಅರೆಸ್ಟ್

    ಬೆಂಗಳೂರು: ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ(FRRO) ಮತ್ತು ಸಿಸಿಬಿ ಪೊಲೀಸರು ನಗರದ 2 ಪಬ್‌ಗಳ ಮೇಲೆ ಜಂಟಿ ಕಾರ್ಯಾಚರಣೆ ನಡೆಸಿ, ಇಬ್ಬರು ವಿದೇಶಿ ಡ್ರಗ್ ಪೆಡ್ಲರ್‌ಗಳನ್ನು (Drug Peddlers) ಬಂಧಿಸಿದ್ದಾರೆ.

    ನಗರದಲ್ಲಿ ಐಷಾರಾಮಿ ಟೆಕ್ನೋ ಪಾರ್ಟಿಗಳಿಗೆ ವಿವಿಧ ರೀತಿಯ ಡ್ರಗ್ ಸರಬರಾಜು ಮಾಡುತ್ತಿರೋ ಬಗ್ಗೆ ಸಿಸಿಬಿ ಅಧಿಕಾರಿಗಳಿಗೆ ಮಾಹಿತಿ ಸಿಕ್ಕಿತ್ತು. ಇದೇ ವೇಳೆ ವಿದೇಶಿಗರು ಈ ದಂಧೆಯಲ್ಲಿ ಭಾಗಿಯಾಗಿದ್ದಾರೆ ಅನ್ನೋ ಮಾಹಿತಿ ಮೇರೆಗೆ ಶನಿವಾರ ರಾತ್ರಿ ನಗರದ ಎಂಜಿ ರೋಡ್ (MG Road) ಮತ್ತು ಕೋರಮಂಗಲದ (Koramangala) 2 ಪಬ್‌ಗಳ ಮೇಲೆ ದಾಳಿ ಮಾಡಿದ್ದರು. ಇದನ್ನೂ ಓದಿ: ಮತಾಂತರಕ್ಕೆ ‘ಮಿಟ್ಟಿ, ಕಾಜಲ್‌, ದರ್ಶನ್‌’ ಅಂತ ಕೋಡ್‌ ವರ್ಡ್‌ ಬಳಸುತ್ತಿದ್ದ ಛಂಗೂರ್‌ ಬಾಬಾ

    ದಾಳಿ ವೇಳೆ ಪಬ್‌ಗಳಲ್ಲಿ ಡಿಜೆ ಆಪರೇಟರ್‌ಗಳಾಗಿ ಕೆಲಸ ಮಾಡ್ತಿದ್ದ ಇಬ್ಬರು ವಿದೇಶಿಗರು ಸಿಕ್ಕಿಬಿದ್ದಿದ್ದಾರೆ. ಆರೋಪಿಗಳು ಪಬ್‌ಗಳಿಂದಲೇ ಯುವಕರನ್ನು ಸಂಪರ್ಕ ಮಾಡಿ ಡ್ರಗ್ಸ್ ರವಾನಿಸುತ್ತಿದ್ದರು. ಅಷ್ಟೇ ಅಲ್ಲದೇ ಹೊರಗಿನ ಐಷಾರಾಮಿ ಪಾರ್ಟಿಗಳಿಗೂ ಡ್ರಗ್ಸ್ ಸರಬರಾಜು ಮಾಡ್ತಿರೋದು ಗೊತ್ತಾಗಿದೆ. ಇದನ್ನೂ ಓದಿ: ತ್ರಿಪುರದ ಯುವತಿ ದೆಹಲಿಯಲ್ಲಿ ನಿಗೂಢವಾಗಿ ನಾಪತ್ತೆ – ಪ್ರಕರಣದ ಸುತ್ತ ಹಲವು ಅನುಮಾನಗಳ ಹುತ್ತ!

    ವಿಚಾರಣೆ ವೇಳೆ ವಿದ್ಯಾಭ್ಯಾಸ ವೀಸಾದಲ್ಲಿ ಬಂದಿರುವ ಹಲವರು, ವೀಸಾ ಅವಧಿ ಮುಗಿದ ನಂತರವೂ ಇಲ್ಲೇ ಉಳಿದುಕೊಂಡು ಡ್ರಗ್ ಪೆಡ್ಲರ್‌ಗಳಾಗಿದ್ದರು ಎಂಬ ವಿಚಾರ ಬೆಳಕಿಗೆ ಬಂದಿದೆ.

  • ಲೇಡಿಸ್ ಬಾರ್‌ಗಳಲ್ಲಿ ನಿಯಮ ಉಲ್ಲಂಘನೆ – ಪ್ರತಿದಿನ ಸಿಸಿಟಿವಿ ಫೂಟೇಜ್ ಕೊಡುವಂತೆ ಸಿಸಿಬಿ ರೂಲ್ಸ್

    ಲೇಡಿಸ್ ಬಾರ್‌ಗಳಲ್ಲಿ ನಿಯಮ ಉಲ್ಲಂಘನೆ – ಪ್ರತಿದಿನ ಸಿಸಿಟಿವಿ ಫೂಟೇಜ್ ಕೊಡುವಂತೆ ಸಿಸಿಬಿ ರೂಲ್ಸ್

    ಬೆಂಗಳೂರು: ನಗರದ (Bengaluru) ಲೇಡಿಸ್ ಬಾರ್‌ಗಳಲ್ಲಿ (Ladies Bar) ನಿಯಮ ಉಲ್ಲಂಘನೆಯಾಗುತ್ತಿವೆ ಎಂಬ ಆರೋಪಗಳು ಆಗಾಗ ಕೇಳಿಬರುತ್ತಿವೆ. ಈ ಹಿಂದೆ ಯುವತಿಯರು ಅರ್ಧಂಬರ್ಧ ಬಟ್ಟೆ ತೊಟ್ಟು ಸರ್ವಿಸ್ ಮಾಡುತ್ತಿರುವುದು ದಾಳಿ ವೇಳೆ ಬೆಳಕಿಗೆ ಬಂದಿತ್ತು. ಈಗ ನಿಯಮ ಉಲ್ಲಂಘನೆ ತಡೆಗೆ ಸಿಸಿಬಿ (CCB) ಹೊಸ ನಿಯಮಕ್ಕೆ ಮುಂದಾಗಿದೆ.

    ಹಲವಾರು ಬಾರಿ ದಾಳಿ ಮಾಡಿ ಎಚ್ಚರಿಕೆ ಕೊಟ್ಟರು ಏನು ಪ್ರಯೋಜನವಾಗದ ಹಿನ್ನೆಲೆ, ನಿಯಮಗಳ ಉಲ್ಲಂಘನೆಗೆ ಸಿಸಿಬಿ ಹೊಸ ರೂಲ್ಸ್ ಮಾಡಿದೆ. ಪ್ರತಿದಿನದ ಸಿಸಿಟಿವಿ ವಿಡಿಯೋ ತುಣುಕನ್ನು ಆಯಾ ವ್ಯಾಪ್ತಿಯ ಪೊಲೀಸ್ ಠಾಣೆಗೆ ನೀಡಬೇಕೆಂದು ಸೂಚಿಸಲಾಗಿದೆ. ಇದನ್ನೂ ಓದಿ: ಪಬ್‌ನಲ್ಲಿ ಸಹೋದ್ಯೋಗಿ ಮೇಲೆ ಲೈಂಗಿಕ ದೌರ್ಜನ್ಯ – ಟೆಕ್ಕಿ ಅರೆಸ್ಟ್‌

    ಪೆನ್‌ಡ್ರೈವ್ ಅಥವಾ ಸಿಡಿಗೆ ಹಾಕಿ ವಿಡಿಯೋ ನೀಡಬೇಕು. ಸಿಸಿಟಿವಿ ವೀಕ್ಷಣೆ ವೇಳೆ ತಪ್ಪು ಕಂಡುಬಂದಲ್ಲಿ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ. ಇದನ್ನೂ ಓದಿ: ದಾವಣಗೆರೆ | ಫಸಲಿಗೆ ಬಂದಿದ್ದ 7.50 ಲಕ್ಷ ಮೌಲ್ಯದ ದಾಳಿಂಬೆ ಕಳವು

  • ಬೆಂಗಳೂರು | 10 ಕೋಟಿ ಮೌಲ್ಯದ ಮಾದಕವಸ್ತು ಸಾಗಾಟ – ವಿದೇಶಿ ಮಹಿಳೆ ಅರೆಸ್ಟ್

    ಬೆಂಗಳೂರು | 10 ಕೋಟಿ ಮೌಲ್ಯದ ಮಾದಕವಸ್ತು ಸಾಗಾಟ – ವಿದೇಶಿ ಮಹಿಳೆ ಅರೆಸ್ಟ್

    ಬೆಂಗಳೂರು: 10 ಕೋಟಿ ರೂ. ಮೌಲ್ಯದ ಮಾದಕವಸ್ತು ಸಾಗಾಟ ಮಾಡುತ್ತಿದ್ದ ವಿದೇಶಿ ಮಹಿಳೆಯನ್ನು ಸಿಸಿಬಿ (CCB) ಮತ್ತು ಚಿಕ್ಕಜಾಲ ಪೊಲೀಸರು (Police) ಬಂಧಿಸಿದ್ದಾರೆ. ಬಂಧಿತ ಮಹಿಳೆಯಿಂದ 10 ಕೋಟಿ ರೂ. ಮೌಲ್ಯದ ಎಂಡಿಎಂಎ ಮಾದಕ ವಸ್ತು ವಶಕ್ಕೆ ಪಡೆದಿದ್ದಾರೆ.

    ಬಂಧಿತ ಮಹಿಳೆ ಕಳೆದ 3 ವರ್ಷದ ಹಿಂದೆ ಬ್ಯುಸಿನೆಸ್ ವೀಸಾದಲ್ಲಿ ಭಾರತಕ್ಕೆ (India) ಬಂದಿದ್ದಳು. ಆರಂಭದಲ್ಲಿ ನವದೆಹಲಿಯಲ್ಲಿ ವಾಸವಾಗಿದ್ದಳು. ನಂತರ ತೆಲಂಗಾಣ ಯೂನಿವರ್ಸಿಟಿಯಲ್ಲಿ ವ್ಯಾಸಂಗ ಮಾಡುವುದಾಗಿ ಎಜುಕೇಷನ್ ವೀಸಾ ಪಡೆದಿದ್ದಳು. ನಂತರ ಕಾಲೇಜಿಗೆ ದಾಖಲಾಗದೆ ಡ್ರಗ್ಸ್ ಪೆಡ್ಲಿಂಗ್‍ಗೆ ಇಳಿದಿದ್ದಳು. ಇದನ್ನೂ ಓದಿ: Plane Crash – ಪತ್ನಿಯ ಕೊನೆಯ ಆಸೆಯನ್ನು ಈಡೇರಿಸಿ ಹಿಂತಿರುಗುವಾಗ ಪತಿ ಸಾವು!

    ದೆಹಲಿಯಿಂದ ಬೆಂಗಳೂರಿಗೆ (Bengaluru) ಬಸ್ ಮೂಲಕ ಮಾದಕವಸ್ತು ಸಾಗಾಟ ಮಾಡಿದ್ದಳು. ಚಿಕ್ಕಜಾಲ ಠಾಣಾ ವ್ಯಾಪ್ತಿಯ ರಾಜಾನುಕುಂಟೆ ಬಳಿ ಮಾದಕವಸ್ತು ವ್ಯಾಪಾರ ಮಾಡುವಾಗ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಬಂಧಿತಳಿಂದ 5 ಕೆಜಿ 325ಗ್ರಾಂ ಎಂಡಿಎಂಎ ಹಾಗೂ ಆ್ಯಪಲ್ ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿದೆ.

    ಮಹಿಳೆ, ಹೊಸ ಚೂಡಿದಾರ್ ಡ್ರೆಸ್ ಪೀಸ್‍ಗಳ ಮಧ್ಯೆ ಮಾದಕವಸ್ತು ಅಡಗಿಸಿಕೊಂಡು ದೆಹಲಿಯಿಂದ ಬೆಂಗಳೂರಿಗೆ ತರುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಏರ್ ಇಂಡಿಯಾ ವಿಮಾನ ದುರಂತ – ಕಪ್ಪು ಪಟ್ಟಿ ಧರಿಸಿ ಟೀಂ ಇಂಡಿಯಾ ಆಟಗಾರರಿಂದ ಮೌನಾಚರಣೆ

  • ಬೆಂಗ್ಳೂರಲ್ಲಿ 5 ಕೋಟಿ ಮೌಲ್ಯದ ಮಾದಕ ವಸ್ತು ವಶ – ಇಬ್ಬರು ಅರೆಸ್ಟ್

    ಬೆಂಗ್ಳೂರಲ್ಲಿ 5 ಕೋಟಿ ಮೌಲ್ಯದ ಮಾದಕ ವಸ್ತು ವಶ – ಇಬ್ಬರು ಅರೆಸ್ಟ್

    ಬೆಂಗಳೂರು: ನಗರದಲ್ಲಿ (Bengaluru) ಸಿಸಿಬಿ (CCB) ಪೊಲೀಸರು ದಾಳಿ ನಡೆಸಿ 5 ಕೋಟಿ ರೂ. ಮೌಲ್ಯದ ಮಾದಕ ವಸ್ತು ಸೀಜ್ ಮಾಡಿದ್ದಾರೆ.

    ಸಿಸಿಬಿ ಮಾದಕವಸ್ತು ನಿಗ್ರಹದಳ ಪೆಡ್ಲರ್‌ಗಳ ಮೇಲೆ ದಾಳಿ ಮಾಡಿದೆ. ದಾಳಿ ವೇಳೆ ಸುಮಾರು 5 ಕೋಟಿ ರೂ. ಮೌಲ್ಯದ ಮಾದಕ ವಸ್ತು ಪತ್ತೆಯಾಗಿದೆ. ಈ ಹಿಂದೆ ಈಗಲ್ ಟನ್ ರೆಸಾರ್ಟ್‌ನಲ್ಲಿ ಅರೆಸ್ಟ್ ಆಗಿದ್ದ ಪೆಡ್ಲರ್‌ನಿಂದ 3.5 ಕೋಟಿ ರೂ. ಮೌಲ್ಯದ ಹೈಡ್ರೋ ಗಾಂಜಾ, 1.5 ಕೋಟಿ ರೂ. ಮೌಲ್ಯದ ಸುಮಾರು 1ಕೆಜಿ ಎಂಡಿಎಂಎ ಹಾಗೂ 30 ಲಕ್ಷ ರೂ. ನಗದನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಇದನ್ನೂ ಓದಿ: ಕುಡಚಿ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಹವಾಲ್ದಾರ್ ಹೃದಯಾಘಾತದಿಂದ ಸಾವು

    ಅಧಿಕಾರಿಗಳು ಮಾದಕವಸ್ತು ಜಪ್ತಿ ಮಾಡಿ, ನಗರದ ಹಲವು ಕಾಲೇಜು ವಿದ್ಯಾರ್ಥಿಗಳ ಕೈ ಸೇರುವುದನ್ನು ತಪ್ಪಿಸಿದ್ದಾರೆ. ಈ ಸಂಬಂಧ ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರನ್ನು ಬಂಧಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಇದನ್ನೂ ಓದಿ: ತುಮಕೂರು | ಬೀದಿ ದೀಪ ಆರಿಸಲು ಹೋಗಿ ವಿದ್ಯುತ್ ಸ್ಪರ್ಶಿಸಿ ಶಿಕ್ಷಕ ಸಾವು

  • ಟೀಚರಮ್ಮನ ಒಂದು ಮುತ್ತಿಗೆ 50,000 ರೂ. – ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ಹನಿಟ್ರ್ಯಾಪ್ ಬೆದರಿಕೆ

    ಟೀಚರಮ್ಮನ ಒಂದು ಮುತ್ತಿಗೆ 50,000 ರೂ. – ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ಹನಿಟ್ರ್ಯಾಪ್ ಬೆದರಿಕೆ

    – ಉದ್ಯಮಿಯಿಂದ ಹಣ ಪಡೆದು ಹನಿಟ್ರ್ಯಾಪ್ ಬೆದರಿಕೆ ಒಡ್ಡಿದ್ದ ಗ್ಯಾಂಗ್ ಅರೆಸ್ಟ್

    ಬೆಂಗಳೂರು: ಸಚಿವ ರಾಜಣ್ಣ ಹನಿಟ್ರ್ಯಾಪ್‌ ಸದ್ದು ಹೊತ್ತಲ್ಲೇ ಮತ್ತೊಂದು ಹನಿಟ್ರ್ಯಾಪ್ ಗ್ಯಾಂಗನ್ನು ಪೊಲೀಸರು ಬಂಧಿಸಿದ್ದಾರೆ. ಒಂದು ಮುತ್ತಿಗೆ 50 ಸಾವಿರ ರೂ. ಚಾರ್ಜ್ ಮಾಡಿದ ಟೀಚರಮ್ಮನ ಸ್ಟೋರಿ ಇದು.

    ಶಿಕ್ಷಕಿ ಜೊತೆ ರೌಡಿ ಸೇರಿ ಮೂವರನ್ನ ಸಿಸಿಬಿ ಬಂಧಿಸಿದೆ. ಖಾಸಗಿ ಪ್ರೀಸ್ಕೂಲ್ ನಡೆಸ್ತಿದ್ದ ಆರೋಪಿತೆಗೆ 2023 ರಲ್ಲಿ ಉದ್ಯಮಿ ಪರಿಚಯ ವಾಗಿತ್ತು. ತನ್ನ ಮಕ್ಕಳನ್ನು ಈಕೆಯ ಪ್ಲೇಹೋಮ್‌ಗೆ ಉದ್ಯಮಿ ಕಳುಹಿಸುತ್ತಿದ್ದರು. ಉದ್ಯಮಿಯಿಂದ ಶಾಲೆ ನಿರ್ವಹಣೆ ಸಲುವಾಗಿ ಆರೋಪಿತೆ 2 ಲಕ್ಷ ಸಾಲ ಪಡೆದಿದ್ದಳು. 2024 ರಲ್ಲಿ ವಾಪಸ್ ಕೊಡುವುದಾಗಿ ತಿಳಿಸಿದ್ದಳು. ಹಣ ವಾಪಸ್ ಕೇಳಿದಾಗ ಶಾಲೆಗೆ ಪಾರ್ಟ್ನರ್ ಆಗು ಎಂದಿದ್ದಳು. ಈ ವೇಳೆ ಇಬ್ಬರ ನಡುವೆ ಸಲುಗೆ ಬೆಳೆದು, ಸುತ್ತಾಟ ನಡೆಸಿದ್ದರು.

    ಆರೋಪಿತೆ ಜೊತೆ ಮಾತನಾಡಲು ಉದ್ಯಮಿ ಹೊಸ ಸಿಮ್ ಹಾಗೂ ಖರೀದಿಸಿದ್ದರು. ಜನವರಿ ಮೊದಲ ವಾರದಲ್ಲಿ ಹಣ ವಾಪಸ್ ಕೇಳಿದ್ದರು. ಈ ವೇಳೆ ನಿನಗೆ ಏನು ಬೇಕು ಕೇಳು ಕೊಡುತ್ತೇನೆ. ಹಣಕಾಸಿನ ವ್ಯವಹಾರ ಒಂದೇ ಸಲ ಮುಗಿಸಿಬಿಡೋಣ ಎಂದಿದ್ದಳು. ಬಳಿಕ ಉದ್ಯಮಿ ಮನೆಗೆ ತೆರಳಿದ್ದ ಆರೋಪಿತೆ, ಮುತ್ತಿಟ್ಟು ಐವತ್ತು ಸಾವಿರ ಪಡೆದಿದ್ದಳು. ಬಳಿಕ ನಿನ್ನ ಜೊತೆ ರಿಲೇಷನ್‌ಶಿಪ್‌ನಲ್ಲಿ ಇರುತ್ತೇನೆಂದು ಆಫರ್ ನೀಡಿದ್ದಳು. ಈ ವೇಳೆ ಮತ್ತೆ ಹದಿನೈದು ಲಕ್ಷ ಹಣಕ್ಕೆ ಡಿಮ್ಯಾಂಡ್ ಮಾಡಿದ್ದಳು. ಪದೇ ಪದೇ ಹಣಕ್ಕೆ ಡಿಮ್ಯಾಂಡ್ ಮಾಡ್ತಿದ್ದರಿಂದ ಉದ್ಯಮಿ ಸಿಮ್ ಮುರಿದು ಬಿಸಾಕಿದ್ದರು.

    ಮಾ.12 ರಂದು ಉದ್ಯಮಿ ಪತ್ನಿಗೆ ಆರೋಪಿತೆ ಕರೆ ಮಾಡಿದ್ದಳು. ಮಕ್ಕಳ ಸ್ಕೂಲ್ ಟಿಸಿ ಕೊಡ್ತೇನೆ ನಿಮ್ಮ ಪತಿಯನ್ನ ಕಳಿಸಿ ಎಂದಿದ್ದಳು. ಅದರಂತೆ ಪ್ರೀಸ್ಕೂಲ್‌ಗೆ ಉದ್ಯಮಿ ತೆರಳಿದ್ದರು. ಪ್ರೀಸ್ಕೂಲ್‌ನಲ್ಲಿ ಆರೋಪಿತೆ ಜೊತೆ ಸಾಗರ್ ಮೋರೆ ಹಾಗೂ ಗಣೇಶ್ ಕಾಳೆ ಆರೋಪಿಗಳು ಹಾಜರಿದ್ದರು. ಸಾಗರ್‌ನನ್ನು ಉದ್ಯಮಿಗೆ ತೋರಿಸಿ ಆರೋಪಿತೆ ಆವಾಜ್ ಹಾಕಿದ್ದರು. ಸಾಗರ್ ಜೊತೆ ಆರೋಪಿತೆಗೆ ಎಂಗೇಜ್ಮೆಂಟ್ ಆಗಿದೆ. ಆದರೆ, ನೀನು ಆಕೆ ಜೊತೆ ಮಜಾ ಮಾಡ್ತಿದ್ದೀಯ? ಈ ವಿಚಾರವನ್ನ ಆರೋಪಿತೆ ತಂದೆ ಹಾಗೂ ನಿನ್ನ ಹೆಂಡತಿಗೆ ತಿಳಿಸ್ತೇನೆಂದು ಉದ್ಯಮಿಗೆ ಬ್ಲ್ಯಾಕ್‌ಮೇಲ್ ಮಾಡಿದ್ದರು.

    ಆರೋಪಿತೆಗೆ ಬಾಯ್‌ಫ್ರೆಂಡ್ ಇರುವ ವಿಚಾರ ತಿಳಿದಿಲ್ಲ. ಆಕೆ ಜೊತೆ ಊಟ ತಿಂಡಿ ಮಾಡಿದ್ದೇನಷ್ಟೇ ಎಂದು ಉದ್ಯಮಿ ಹೇಳಿದ್ದರು. ಮೊಬೈಲ್‌ನಲ್ಲಿ ಮುರಳಿ ಎಂಬಾತನ ಫೋಟೋ ತೋರಿಸಿದ್ದ ಗಣೇಶ್ ಹಾಗೂ ಸಾಗರ್, ಪೊಲೀಸ್ ಠಾಣೆಗೆ ಹೋಗೋಣ ಎಂದು ಎಕ್ಸ್ ಯುವಿ ಕಾರಿನಲ್ಲಿ ಉದ್ಯಮಿಯನ್ನು ಕರೆದೊಯ್ದಿದ್ದರು. ಮಹಾಲಕ್ಷ್ಮಿ ಲೇಔಟ್‌ನ ಉದ್ಯಮಿ ಮನೆ ಬಳಿಯೇ ಕರೆದೊಯ್ದು ಒಂದು ಕೋಟಿ ಹಣಕ್ಕೆ ಡಿಮ್ಯಾಂಡ್ ಮಾಡಿದ್ದರು. ನಿನ್ನ ಹೆಂಡತಿಗೆ ವಿಚಾರ ತಿಳಿಸಿ ಅವಳನ್ನು ಕರೆದೊಯ್ತೀವೆಂದು ಬೆದರಿಕೆ ಹಾಕಿದ್ದರು. ಬಳಿಕ ಗೊರಗುಂಟೆಪಾಳ್ಯದ ಕಡೆ ಕಾರು ನಿಲ್ಲಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಫೈನಲ್ ಸೆಟಲ್ಮೆಂಟ್ ಆಗಿ ಇಪ್ಪತ್ತು ಲಕ್ಷ ಕೊಡು ಎಂದಿದ್ದರು.

    ಕಡೆಗೆ 1.90 ಲಕ್ಷ ಹಣವನ್ನ ಪಡೆದು ಗ್ಯಾಂಗ್ ಬಿಟ್ಟು ಕಳಿಸಿತ್ತು. ಮಾ.17 ರಂದು ಮತ್ತೆ ಉದ್ಯಮಿಗೆ ಆರೋಪಿತೆ ಕರೆ ಮಾಡಿದ್ದಳು. ಮತ್ತೆ ಉದ್ಯಮಿಗೆ 15 ಲಕ್ಷ ಹಣ ಕೊಡುವಂತೆ ಡಿಮ್ಯಾಂಡ್ ಮಾಡಿದ್ದರು. ಹಣ ಕೊಟ್ಟರೆ ಅಶ್ಲೀಲ ವೀಡಿಯೋ ಚಾಟಿಂಗ್ ಡಿಲೀಟ್ ಮಾಡ್ತೀನಿ. ಇಲ್ಲವಾದರೆ ನಿನ್ನ ಪತ್ನಿಗೆ ತೋರಿಸಿ ನಿನ್ನ ಸಂಸಾರವನ್ನೇ ಹಾಳು ಮಾಡ್ತೀವೆಂದು ಬ್ಲ್ಯಾಕ್‌ಮೇಲ್ ಮಾಡಿದ್ದಳು. ಕಡೆಗೆ ಬೆಂಗಳೂರು ಸಿಸಿಬಿಗೆ ಉದ್ಯಮಿ ದೂರು ನೀಡಿದ್ದರು. ಸದ್ಯ ದೂರಿನನ್ವಯ ಆರೋಪಿತೆ, ಸಾಗರ್ ಮೋರೆ, ಗಣೇಶ್ ಕಾಳೆ ಬಂಧನವಾಗಿದೆ. ಮೂವರನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೆ ಸಿಸಿಬಿ ಕಸ್ಟಡಿಗೆ ಪಡೆದಿದ್ದಾರೆ. ವಿಚಾರಣೆ ವೇಳೆ ಗಣೇಶ್ ಕಾಳೆ ಬಿಜಾಪುರ ರೌಡಿಶೀಟರ್ ಅನ್ನೋದು ಗೊತ್ತಾಗಿದೆ. ಈತನ ಮೇಲೆ 9 ಪ್ರಕರಣಗಳಿರುವುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.

  • ಬೆಂಗಳೂರಿನಲ್ಲಿ ಬಾಡಿಗೆ, ಲೀಸ್‌ ಪಡೆಯುವ ಮುನ್ನ ಎಚ್ಚರವಾಗಿರಿ – 50ಕ್ಕೂ ಹೆಚ್ಚು ಮಂದಿಗೆ ಕೋಟ್ಯಂತರ ರೂ. ವಂಚನೆ

    ಬೆಂಗಳೂರಿನಲ್ಲಿ ಬಾಡಿಗೆ, ಲೀಸ್‌ ಪಡೆಯುವ ಮುನ್ನ ಎಚ್ಚರವಾಗಿರಿ – 50ಕ್ಕೂ ಹೆಚ್ಚು ಮಂದಿಗೆ ಕೋಟ್ಯಂತರ ರೂ. ವಂಚನೆ

    – ಬಾಡಿಗೆದಾರರ ಬಳಿಯೇ ಹಣ ಪಡೆದು ನಾಪತ್ತೆ
    – ಸಿಸಿಬಿಯಿಂದ ಓರ್ವ ಅರೆಸ್ಟ್‌, ಓರ್ವ ಪರಾರಿ

    ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ (Bengaluru) ಮನೆ ಬಾಡಿಗೆ ಮತ್ತು ಲೀಸ್ ಪಡೆಯಲು ಹುಡುಕಾಡುತ್ತಿದ್ದೀರಾ? ಹಾಗಾದರೆ ಬಹಳಷ್ಟು ಎಚ್ಚರವಾಗಿರಿ. ಮನೆ ಮಾಲೀಕನ ಬಳಿ ಬಾಡಿಗೆ ಎಂದು ಹೇಳಿ ಬಾಡಿಗೆದಾರರ ಬಳಿ ಲೀಸ್‌ಗೆ ಹಣ ಪಡೆದು ವಂಚನೆ ಎಸಗಿದ ಪ್ರಕರಣಗಳು ಈಗ ಬೆಳಕಿಗೆ ಬಂದಿದೆ.

    ಕೋಟ್ಯಂತರ ರೂ. ವಂಚನೆ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿಯಲ್ಲಿ (CCB) ಎಫ್‌ಐಆರ್ ದಾಖಲಾಗಿದೆ. ಪೊಲೀಸರು ಒಬ್ಬನನ್ನು ಬಂಧಿಸಿದ್ದು ಮತ್ತೊಬ್ಬ ಪರಾರಿಯಾಗಿದ್ದಾನೆ.

    ಆರೋಪಿಯಾದ ಖಲೀಲ್ ಷರೀಫ್ ಬಂಧನವಾಗಿದ್ದರೆ ಸೈಯದ್ ಅಹಮದ್ ಪರಾರಿಯಾಗಿದ್ದಾನೆ. ಮಾಧ್ಯಮಗಳಲ್ಲಿ ಈ ಸುದ್ದಿ ಪ್ರಕಟವಾದ ಬೆನ್ನಲ್ಲೇ ಸುಮಾರು 50ಕ್ಕೂ ಹೆಚ್ಚು ಮಂದಿ ಈಗ ಸಿಸಿಬಿ ಆಗಮಿಸಿ ತಮಗೂ ವಂಚನೆಯಾಗಿದೆ ಎಂದು ದೂರು ನೀಡುತ್ತಿದ್ದಾರೆ. ಇದನ್ನೂ ಓದಿ: ಮುರಿದ ಸೀಟ್‌ ನೀಡಿ ಮೋಸ ಮಾಡಿದ್ದೀರಿ: ಏರ್‌ ಇಂಡಿಯಾ ವಿರುದ್ಧ ಶಿವರಾಜ್‌ ಸಿಂಗ್‌ ಚೌಹಾಣ್‌ ಕೆಂಡಾಮಂಡಲ

    ವಂಚನೆ ಹೇಗೆ?
    ಬೆಂಗಳೂರಿಗೆ ಬೇರೆ ಬೇರೆ ಕಡೆಯಿಂದ ಬರುವವರು ಸೇರಿದಂತೆ ಜನ ಮನೆ ಬಾಡಿಗೆ ಮತ್ತು ಲೀಸ್‌ಗೆ ಮನೆ ಬೇಕಾಗಿದೆ ಎಂದು ಒಎಲ್‌ಎಕ್ಸ್ , ನೋ ಬ್ರೋಕರ್ ಸೇರಿದಂತೆ ಹಲವು ಆಪ್‌ಗಳಲ್ಲಿ ಹುಡುಕಾಟ ನಡೆಸುವುದು ಸಾಮಾನ್ಯ.

    ಈ ರೀತಿ ಹುಡುಕಾಟ ನಡೆಸುವವರನ್ನೇ ಖಲೀಲ್ ಷರೀಫ್ ಮತ್ತು ಸೈಯದ್ ಅಹಮದ್ ಸಂಪರ್ಕಿಸುತ್ತಿದ್ದರು. ತಮ್ಮ ಅಕ್ರಮ ವ್ಯವಹಾರಕ್ಕೆ ಟ್ಯಾಂಜನೈಟ್ ರಿಯಾಲಿಟಿ ಇಂಡಿಯ ಪ್ರೈವೇಟ್‌ ಲಿಮಿಟೆಡ್ ಕಂಪನಿಯನ್ನು ಸಹ ಸ್ಥಾಪಿಸಿದ್ದರು. ಜನರನ್ನು ಸಂರ್ಪಕಿಸುತ್ತಿದ್ದ ಇವರು ಮನೆ ಬಾಡಿಗೆ ಬೇಕಾ? ಲೀಸ್‌ಗೆ ಬೇಕಾ? ನೀವು ಕೇಳಿದ ಜಾಗದಲ್ಲೇ ಕಡಿಮೆ ಬೆಲೆಗೆ ಮನೆ ಕೊಡಿಸುತ್ತೇವೆ ಎಂದು ಹೇಳಿ ನಂಬಿಸುತ್ತಿದ್ದರು.

    ಮನೆಯನ್ನು ತೋರಿಸುತ್ತಿದ್ದ ಈ ವಂಚಕರು ಮೂಲ ಮನೆ ಮಾಲೀಕರ ಬಳಿ ಬಾಡಿಗೆಗೆ ಎಂದು ಮಾತಾಡುತ್ತಿದ್ದರು. ಆದರೆ ಬಾಡಿಗೆದಾರರ ಬಳಿ, ಈ ಮನೆ ನಮ್ಮದು ನಾವು ಲೀಸ್‌ಗೆ ಬಿಡುತ್ತಿದ್ದೇವೆ ಎಂದು ಹೇಳಿ 5 ಲಕ್ಷದಿಂದ 30 ಲಕ್ಷ ರೂ.ವರೆಗೆ ಹಣ ಪಡೆದು ನಕಲಿ ದಾಖಲೆ ನೀಡುತ್ತಿದ್ದರು. ಇದನ್ನೂ ಓದಿ: ಎಫ್‌ಬಿಐ ನಿರ್ದೇಶಕನಾದ ಭಾರತೀಯ – ಭಗವದ್ಗೀತೆ ಮೇಲೆ ಕೈಯಿಟ್ಟು ಪ್ರಮಾಣ ಸ್ವೀಕರಿಸಿದ ಕಾಶ್ ಪಟೇಲ್

    ಒಂದು ತಿಂಗಳು, ಎರಡು ತಿಂಗಳು ಬಾಡಿಗೆ ಹಣ ಬಾರದೇ ಇದ್ದಾಗ ಮೂಲ ಮಾಲೀಕ ಬಾಡಿಗೆ ಹಣಕ್ಕಾಗಿ ಮನೆ ಹತ್ತಿರ ಬರುತ್ತಿದ್ದ. ಮಾಲೀಕ ಮನೆ ಹತ್ತಿರ ಬಂದಾಗಲೇ ಬಾಡಿಗೆಯಲ್ಲಿದ್ದ ಕುಟುಂಬಕ್ಕೆ ನಾವು ಮೋಸ ಹೋಗಿರುವ ವಿಚಾರ ಗೊತ್ತಾಗುತ್ತದೆ.

    ಈ ವೇಳೆ ಮಧ್ಯವರ್ತಿಗಳಾದ ಖಲೀಲ್ ಷರೀಫ್ ಮತ್ತು ಸೈಯದ್ ಅಹಮದ್ ಅವರನ್ನು ಸಂಪರ್ಕಿಸಿದರೆ ಅವರಿಂದ ಯಾವುದೇ ಪ್ರತಿಕ್ರಿಯೆ ಬರುತ್ತಿರಲಿಲ್ಲ. ಇವರಿಬ್ಬರೂ ರಾಮಮೂರ್ತಿ ನಗರ, ರಾಜಾನುಗುಂಟೆ, ದೇವನಹಳ್ಳಿ, ಕೊತ್ತನೂರು, ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಐವತ್ತಕ್ಕೂ ಹೆಚ್ಚು ಜನರಿಗೆ ಕೋಟ್ಯಂತರ ರೂ. ವಂಚನೆ ಮಾಡಿರುವುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಹಲವು ಕಡೆ ಪ್ರಕರಣ ದಾಖಲಾಗುತ್ತಿದ್ದಂತೆ ಈಗ ಈ ಎಲ್ಲಾ ದೂರುಗಳು ಸಿಸಿಬಿಗೆ ವರ್ಗಾವಣೆಯಾಗಿದೆ.