Tag: CC TV

  • ಬಿಲ್ ಕೇಳಿದ್ದಕ್ಕೆ ಡಾಬಾ ಮಾಲೀಕನ ಮೇಲೆ ಮಾರಣಾಂತಿಕ ಹಲ್ಲೆ

    ಬಿಲ್ ಕೇಳಿದ್ದಕ್ಕೆ ಡಾಬಾ ಮಾಲೀಕನ ಮೇಲೆ ಮಾರಣಾಂತಿಕ ಹಲ್ಲೆ

    ಕಲಬುರಗಿ: ಊಟದ ಬಿಲ್ ಕೊಡಿ ಎಂದು ಕೇಳಿದ್ದಕ್ಕೆ ಡಾಬಾ ಮಾಲೀಕನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ ಘಟನೆ ಕಲಬುರಗಿ ನಗರದ ಹೊರವಲಯದಲ್ಲಿ ನಡೆದಿದೆ.

    ನಗರದ ಹೊರವಲಯದಲ್ಲಿರುವ ಏರ್‌ಲೈನ್ಸ್‌ ದಾಬಾದಲ್ಲಿ ಕಳೆದ ಮಂಗಳಾವಾರ ಈ ಘಟನೆ ನಡೆದಿದೆ. ಮಧ್ಯಾಹ್ನದ ಸುಮಾರಿಗೆ ಕಲಬುರಗಿ ಪಟ್ಟಣದ ಶಕೀಲ್ ಮತ್ತು ಆತನ ಸ್ನೇಹಿತರು ಊಟಕ್ಕೆ ಹೋಗಿದ್ದರು. ಊಟ ಮುಗಿಸಿ ವಾಪಸ್ ಬರುವಾಗ ಡಾಬಾ ಮಾಲೀಕ ಅಬ್ದುಲ್ ಲತೀಪ್ ಬಿಲ್ ಕೊಡಿ ಎಂದು ಶಕೀಲ್ ಹಾಗೂ ಆತನ ಸ್ನೇಹಿತರನ್ನು ಕೇಳಿದರು.

    ಹಣ ಕೇಳಿದ್ದಕ್ಕೆ ಸಿಟ್ಟಾದ ಶಕೀಲ್ ಮತ್ತು ಆತನ ಸ್ನೇಹಿತರು ಡಾಬಾ ಮಾಲೀಕ ಅಬ್ದುಲ್ ಲತೀಪ್ ನ ಮೇಲೆ 10ಕ್ಕೂ ಹೆಚ್ಚು ಜನರಿದ್ದ ಈ ತಂಡ, ಬಿಯರ್ ಬಾಟಲಿಯಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ.

    ಶಕೀಲ್ ಹಾಗೂ ಆತನ ಸ್ನೇಹಿತರ ಈ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗಂಭೀರವಾಗಿ ಗಾಯಗೊಂಡ ಅಬ್ದುಲ್ ಲತೀಪ್ ರನ್ನು ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

    ಈ ಕುರಿತಂತೆ ಕಲಬುರಗಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿಗಳು ನಾಪತ್ತೆಯಾಗಿದ್ದಾರೆ.

  • ರೈಲ್ವೇಯಲ್ಲಿ ಆಹಾರ ತಯಾರಾಗೋದನ್ನು ಪ್ರಯಾಣಿಕರು ಇನ್ಮುಂದೆ ಲೈವ್ ನೋಡ್ಬಹುದು!

    ರೈಲ್ವೇಯಲ್ಲಿ ಆಹಾರ ತಯಾರಾಗೋದನ್ನು ಪ್ರಯಾಣಿಕರು ಇನ್ಮುಂದೆ ಲೈವ್ ನೋಡ್ಬಹುದು!

    ನವದೆಹಲಿ: ಇನ್ನು ಮುಂದೆ ಪ್ರಯಾಣಿಕರು ನೇರವಾಗಿ ರೈಲ್ವೇ ಕೆಟರಿಂಗ್ ಮತ್ತು ಟೂರಿಸಂ ಕಾರ್ಪೋರೇಷನ್(IRCTC) ಆಡುಗೆ ಕೋಣೆಯಲ್ಲಿ ಆಹಾರಗಳನ್ನು ಹೇಗೆ ತಯಾರಿಸಲಾಗುತ್ತದೆ ಎನ್ನುವುದನ್ನು ನೋಡಬಹುದು.

    ಹೌದು. ಭಾರತೀಯ ರೈಲ್ವೇ ಪ್ರಯಾಣಿಕರಿಗೆ ವಿತರಿಸಲಾಗುವ ಆಹಾರದ ಗುಣಮಟ್ಟದ ಮೇಲೆ ನಿಗಾವಹಿಸಲು ತನ್ನ ಎಲ್ಲ ಅಡುಗೆ ಕೋಣೆಗಳಲ್ಲಿ ಸಿಸಿ ಟಿವಿ ಅಳವಡಿಸಲು ನಿರ್ಧರಿಸಿದೆ.

    ರೈಲುಗಳಲ್ಲಿ ವಿತರಿಸಲಾಗುವ ಆಹಾರ ಪದಾರ್ಥಗಳ ಗುಣಮಟ್ಟವನ್ನು ಕಾಪಾಡುವ ಹಾಗೂ ಪ್ರಯಾಣಿಕರ ಅನುಕೂಲದ ದೃಷ್ಟಿಯಿಂದ ಈ ನಿರ್ಧಾರವನ್ನು ಇಲಾಖೆ ಕೈಗೊಂಡಿದೆ ಎಂದು ರೈಲ್ವೇ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.

    ಪ್ರಯಾಣಿಕರು IRCTC ವೆಬ್‍ಸೈಟ್ ಮೂಲಕ ಅಡುಗೆ ಕೋಣೆಗಳ ನೇರ ದೃಶ್ಯಗಳನ್ನು ನೋಡಬಹುದಾಗಿದೆ. ಪ್ರಯಾಣಿಕರಿಗೆ ಭದ್ರತೆ ಜೊತೆಗೆ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ರೈಲ್ವೆ ಇಲಾಖೆ ಹೇಳಿದೆ.

    ಈ ನಿಟ್ಟಿನಲ್ಲಿ ಈಗಾಗಲೇ ದೆಹಲಿ, ಮುಂಬೈ ಹಾಗೂ ಭುವನೇಶ್ವರ್ ಸೇರಿದಂತೆ 16 ಮುಖ್ಯ ಆಡುಗೆ ಕೋಣೆಗಳಲ್ಲಿ ಸಿಸಿ ಟಿವಿ ಅಳವಡಿಸಲಾಗಿದೆ. ಈ ಅಡುಗೆ ಕೋಣೆಗಳು ವಿಜನ್ ಕಂಪ್ಯೂಟಿಂಗ್ ವ್ಯವಸ್ಥೆಯನ್ನು ಹೊಂದಿದ್ದು ಅಲ್ಲಿ ಉಂಟಾಗುವ ಅವ್ಯವಸ್ಥೆಯನ್ನು ಗುರುತಿಸಲು ಸಹಾಯಕವಾಗಿದೆ. 

    ಇಲ್ಲಿ ಅಡುಗೆ ತಯಾರಕರ ಮೇಲೂ ನಿಗಾವಹಿಸಲಾಗುತ್ತದೆ. ಅವರು ಸಮವಸ್ತ್ರ ಧರಿಸದಿದ್ದರೂ ಅಲ್ಲಿನ ಕಂಟ್ರೋಲರ್ ಗೆ ವರದಿ ನೀಡುತ್ತದೆ. ಕಂಟ್ರೋಲರ್ ಕ್ರಮ ಕೈಗೊಳ್ಳದೇ ಹೋದರೆ ನೇರವಾಗಿ ರೈಲ್ವೇ ಅಧಿಕಾರಿಗಳಿಗೆ ಮಾಹಿತಿಯನ್ನು ರವಾನಿಸಲಾಗುತ್ತದೆ.

    ರೈಲ್ವೆ ಇಲಾಖೆ IRCTC ಕೆಲ ದಿನ ಗಳ ತನ್ನ ವೆಬ್‍ಸೈಟ್ ಅನ್ನು ಅಪ್‍ಡೇಟ್ ಮಾಡಿತ್ತು. ಸದ್ಯಕ್ಕೆ ಬಿಡುಗಡೆಯಾಗಿರುವ ಬೀಟಾ ಆವೃತ್ತಿ ವೆಬ್‍ಸೈಟ್ ನಲ್ಲಿ ಮುಂದಿನ ದಿನಗಳಲ್ಲಿ ಈ ವಿಶೇಷತೆ ಸೇರ್ಪಡೆಯಾಗಲಿದೆ.

  • ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಜಾರಿ ಬಿದ್ದ ಮಹಿಳೆ-ವಿಡಿಯೋ ನೋಡಿ

    ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಜಾರಿ ಬಿದ್ದ ಮಹಿಳೆ-ವಿಡಿಯೋ ನೋಡಿ

    ಮುಂಬೈ: ಚಲಿಸುತ್ತಿದ್ದ ರೈಲನ್ನು ಹತ್ತಲು ಹೋಗಿ ಸ್ಲಿಪ್ ಆಗಿ ರೈಲಿನ ಅಡಿಗೆ ಸಿಲುಕುತ್ತಿದ್ದ ಮಧ್ಯ ವಯಸ್ಸಿನ ಮಹಿಳೆಯನ್ನು ಪ್ಲಾಟ್ ಫಾರಂ ನಲ್ಲಿದ್ದ ಕೆಲ ಪ್ರಯಾಣಿಕರು ರಕ್ಷಿಸಿದ್ದಾರೆ.

    ಈ ಘಟನೆಯು ಬೆಳಗ್ಗೆ ಸುಮಾರು 11:45ಕ್ಕೆ ಮುಂಬೈ ನಗರದ ಕುರ್ಲಾ ನಿಲ್ದಾಣದ ಪ್ಲಾಟ್ ಫಾರಂ 1 ರಲ್ಲಿ ನಡೆದಿದೆ.

    ಮಹಿಳೆ ತಮ್ಮ ಮಗನ ಜೊತೆ ಬಂದಿದ್ದರು. ಚಲಿಸುತ್ತಿದ್ದ ರೈಲಲ್ಲಿ ಮೊದಲಿಗೆ ಮಗನನ್ನು ಬೋಗಿಗೆ ಹತ್ತಿಸಿದ್ದಾರೆ. ನಂತರ ತಾವು ಸಹ ಹತ್ತಲು ಹೋದಾಗ ಆಯ ತಪ್ಪಿ ರೈಲಿನ ಮೆಟ್ಟಿಲಿಗೂ ಪ್ಲಾಟ್ ಫಾರಂಗೂ ನಡುವೆ ಇರುವ ಗ್ಯಾಪ್ ಗೆ ಜಾರಿದ್ದಾರೆ. ಇದನ್ನೂ ಓದಿ:ರೈಲಿನಡಿ ಸಿಲುಕುತ್ತಿದ್ದ ಬಾಲಕಿಯನ್ನ ರಕ್ಷಿಸಿದ್ರು ಭಾರತೀಯ ಯೋಧ – ವಿಡಿಯೋ ವೈರಲ್

    ಮಹಿಳೆ ಜಾರಿ ರೈಲಿನಡಿ ಸಿಲುಕುವಷ್ಟರಲ್ಲಿಯೇ ಪ್ಲಾಟ್ ಫಾರಂನಲ್ಲಿದ್ದ ಕೆಲವರು ರಕ್ಷಣೆ ಮಾಡಿದ್ದಾರೆ. ಈ ಎಲ್ಲ ದೃಶ್ಯಗಳು ನಿಲ್ದಾಣದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ರೈಲಿನಲ್ಲಿ ಹತ್ತಿದ್ದ ಮಹಿಳೆಯ ಮಗನನ್ನು ಆರ್ ಪಿಎಫ್ ಪೊಲೀಸರು ತಾಯಿಯೊಂದಿಗೆ ಸೇರಿಸಿದ್ದಾರೆ.

     

  • ಬೈಕ್ ಗೆ ಡಿಕ್ಕಿ ಹೊಡೆದು, ಕೆಳಗೆ ಬಿದ್ದ ವೃದ್ಧನ ಮೇಲೆಯೇ ಕಾರು ಹರಿಸಿಕೊಂಡು ಹೋದ ಚಾಲಕ

    ಬೈಕ್ ಗೆ ಡಿಕ್ಕಿ ಹೊಡೆದು, ಕೆಳಗೆ ಬಿದ್ದ ವೃದ್ಧನ ಮೇಲೆಯೇ ಕಾರು ಹರಿಸಿಕೊಂಡು ಹೋದ ಚಾಲಕ

    ಶಿವಮೊಗ್ಗ: ವೇಗವಾಗಿ ಬಂದ ಕಾರು ಬೈಕ್ ಗೆ ಡಿಕ್ಕಿಯಾದ ಪರಿಣಾಮ ವೃದ್ಧರೊಬ್ಬರು ಕೆಳಗೆ ಬಿದ್ದಿದ್ದು, ಈ ವೇಳೆ ಕಾರು ನಿಲ್ಲಿಸದ ಚಾಲಕ ವೃದ್ಧರ ಮೇಲೆಯೇ ಕಾರು ಚಲಾಯಿಸಿಕೊಂಡು ಪರಾರಿಯಾಗಿರುವ ಅಮಾನವೀಯ ಟನೆ ಜಿಲ್ಲೆಯ ಹರಿಗೆ ಗ್ರಾಮದ ಬಿ.ಹೆಚ್. ರಸ್ತೆಯಲ್ಲಿ ನಡೆದಿದೆ.

    ಹರಿಗೆ ಗ್ರಾಮದ ನಿವಾಸಿಯಾದ 72 ವರ್ಷದ ಕೃಷ್ಣಮೂರ್ತಿ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡು ಖಾಸಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೃಷ್ಣಮೂರ್ತಿ ತಮ್ಮ ಮೊಮ್ಮಗ ಸಾತ್ವಿಕ್ ಜೊತೆ ಮಲವಗೊಪ್ಪದಿಂದ ಶಿವಮೊಗ್ಗ ಕಡೆಗೆ ಟಿವಿಎಸ್ ಮೊಪೆಡ್ ನಲ್ಲಿ ಬರುವಾಗ ಈ ಘಟನೆ ನಡೆದಿದೆ.

    ಹಿಂದಿನಿಂದ ವೇಗವಾಗಿ ಬಂದ ಕಾರು ಬೈಕ್ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯಾದ ರಭಸಕ್ಕೆ ಕೃಷ್ಣಮೂರ್ತಿ ಅವರು ಕಾರಿನ ಬ್ಯಾನೆಟ್ ಮೇಲೆ ಬಿದ್ದು ಕೆಳಗೆ ಉರುಳಿದ್ದಾರೆ. ಈ ಸಂದರ್ಭದಲ್ಲಿ ಕಾರು ನಿಲ್ಲಿಸದ ಚಾಲಕ, ಕೃಷ್ಣಪ್ಪ ಅವರ ಮೇಲೆಯೇ ಕಾರು ಚಲಾಯಿಸಿಕೊಂಡು ಹೋಗಿದ್ದಾನೆ.

    ಈ ದೃಶ್ಯಗಳು ಸಮೀಪದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಚಾಲಕನ ಈ ಅಮಾನುಷ ಕೃತ್ಯವನ್ನು ಕೃಷ್ಣಮೂರ್ತಿ ಮನೆಯವರು ಖಂಡಿಸಿದ್ದಾರೆ. ಘಟನೆ ಕುರಿತು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸಿಸಿಟಿವಿ ದೃಶ್ಯ ಆಧಾರಿಸಿ ಅಪಘಾತ ನಡೆಸಿದ ಕಾರು ಚಾಲಕನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

    https://www.youtube.com/watch?v=4WjtpdGY3H0

  • ನೋಡ ನೋಡ್ತಿದ್ದಂತೆ ದಿಢೀರನೇ ಕುಸಿದು ಬಿತ್ತು ಶೇರು ವಿನಿಮಯ ಕೇಂದ್ರದ ಮಹಡಿ

    ನೋಡ ನೋಡ್ತಿದ್ದಂತೆ ದಿಢೀರನೇ ಕುಸಿದು ಬಿತ್ತು ಶೇರು ವಿನಿಮಯ ಕೇಂದ್ರದ ಮಹಡಿ

    ಜಕಾರ್ತ: ಇಂಡೋನೇಷ್ಯಾದ ರಾಜಧಾನಿ ಜಕಾರ್ತದಲ್ಲಿರುವ ಶೇರು ವಿನಿಮಯ ಕೇಂದ್ರದ ಮಳಿಗೆಯೊಂದು ಇದ್ದಕ್ಕಿದ್ದಂತೆ ಕುಸಿದು 77ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

    ಸೋಮವಾರ ಬಳಗ್ಗೆ ಈ ದುರ್ಘಟನೆ ಸಂಭವಿಸಿದ್ದು, ಎರಡನೇ ಮಳಿಗೆ ಕುಸಿಯುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಶೇರು ವಿನಿಮಯ ಕೇಂದ್ರವನ್ನು ವೀಕ್ಷಿಸಲು ಬಂದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗಾಯಗೊಂಡಿದ್ದಾರೆ.

    ಕೂಡಲೇ ಎಲ್ಲರನ್ನೂ ಸ್ಟ್ರೆಚರ್ ಸಾಗಿಸಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹಲವು ಮಂದಿಯ ಕಾಲು ಮತ್ತು ಭುಜಕ್ಕೆ ಪೆಟ್ಟಾಗಿದೆ. 2000ನೇ ಇಸ್ವಿಯಲ್ಲಿ ಉಗ್ರರ ಆತ್ಮಹತ್ಯೆ ಬಾಂಬ್ ದಾಳಿಯ ಬಳಿಕ ಇಲ್ಲಿ ನಡೆದ ಎರಡನೇ ಅತಿ ದೊಡ್ಡ ದುರಂತ ಇದಾಗಿದೆ. ಮೊದಲ ಮಹಡಿಯಲ್ಲಿ ಈ ದುರಂತ ಸಂಭವಿಸಿದ್ದು. ಕಾಂಕ್ರೀಟ್ ಕಲ್ಲುಗಳು ಬಿದ್ದಿದ್ದು, ನೀರಿನ ಪೈಪ್‍ಗಳು ಒಡೆದು ಹೋಗಿವೆ.

    ಈ ಘಟನೆ ನಡೆದು ಮಧ್ಯಾಹ್ನದ ಬಳಿಕ  ಶೇರು ವಿನಿಮಯ ಕೇಂದ್ರದಲ್ಲಿ ಎಂದಿನಂತೆ ವ್ಯವಹಾರ ನಡೆದಿದೆ.

    https://www.youtube.com/watch?v=mqltuw7ban8