Tag: CBSE Result

  • CBSE Result 2023: ಸಿಬಿಎಸ್‍ಇ 12ನೇ ತರಗತಿ ಫಲಿತಾಂಶ ಪ್ರಕಟ

    CBSE Result 2023: ಸಿಬಿಎಸ್‍ಇ 12ನೇ ತರಗತಿ ಫಲಿತಾಂಶ ಪ್ರಕಟ

    ನವದೆಹಲಿ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ (CBSE) 12ನೇ ತರಗತಿಯ ಬೋರ್ಡ್ ಪರೀಕ್ಷೆಯ (Exam) ಫಲಿತಾಂಶವನ್ನು (Result) ಪ್ರಕಟಿಸಿದ್ದು, ಈ ಬಾರಿ 87.33% ಫಲಿತಾಂಶ ದಾಖಲಾಗಿದೆ.

    ಸಿಬಿಎಸ್‍ಇ ಮಂಡಳಿಯಿಂದ ಫೆಬ್ರವರಿ 15 ರಿಂದ ಏ. 5ರವರೆಗೆ 12ನೇ ತರಗತಿ ಬೋರ್ಡ್ ಪರೀಕ್ಷೆಗಳು ನಡೆದಿದ್ದವು. ಇದೀಗ ಫಲಿತಾಂಶವನ್ನು ಅಧಿಕೃತ ವೆಬ್‍ಸೈಟ್‍ಗಳಲ್ಲಿ ಪೋಸ್ಟ್ ಮಾಡಲಾಗಿದೆ. cbseresults.nic.in ಹಾಗೂ cbse.gov.in. ಅಧಿಕೃತ ವೆಬ್‍ಸೈಟ್‍ನಲ್ಲಿ ಫಲಿತಾಂಶ ಪ್ರಕಟವಾಗಿದೆ.

    ಸಿಬಿಎಸ್‍ಇ ನೀಡಿದ ಮಾಹಿತಿ ಪ್ರಕಾರ, ಈ ವರ್ಷ ಸಿಬಿಎಸ್‍ಇ 12ನೇ ತರಗತಿ ಬೋರ್ಡ್ ಪರೀಕ್ಷೆಗೆ ಒಟ್ಟು 16,96,770 ವಿದ್ಯಾರ್ಥಿಗಳು ಹಾಜರಾಗಿದ್ದರು. ಈ ವಿದ್ಯಾರ್ಥಿಗಳ ಫಲಿತಾಂಶವನ್ನು ಪ್ರಕಟಿಸಲಾಗಿದ್ದು, 87.33% ಫಲಿತಾಂಶ ದಾಖಲಾಗಿದೆ. ಇದನ್ನೂ ಓದಿ: ಈ ಬಾರಿ ಆಪರೇಷನ್ ಬಗ್ಗೆ ನಾವು ಹುಷಾರಾಗಿರ್ತೀವಿ : ಪರಮೇಶ್ವರ್

    ಅತ್ಯುನ್ನತ ಶ್ರೇಣಿ ತಿರುವನಂತಪುರ ಪಡೆದಿದ್ದು, ಇಲ್ಲಿ 99.91% ರಷ್ಟು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಅದೇ ರೀತಿ ಪ್ರಯಾಗ್‍ರಾಜ್ ಫಲಿತಾಂಶ ಪಟ್ಟಿಯಲ್ಲಿ 78.05% ರಷ್ಟು ಪಡೆದು ಕೊನೆಯ ಸ್ಥಾನದಲ್ಲಿದೆ. ಇದನ್ನೂ ಓದಿ: ರಾಜ್ಯದ 6 ಜಿಲ್ಲೆಗಳಲ್ಲಿ ಹೆಣ್ಮಕ್ಕಳೇ ಸ್ಟ್ರಾಂಗ್‌ ಗುರೂ!

    ಸಿಬಿಎಸ್‍ಇ 12ನೇ ತರಗತಿಯ ಫಲಿತಾಂಶ ನೋಡುವುದು ಹೇಗೆ:
    ಅಧಿಕೃತ ವೆಬ್‍ಸೈಟ್ cbseresults.nic.in ಹಾಗೂ cbse.gov.in. ಗೆ ಭೇಟಿ ನೀಡಿ.
    ನಂತರ ಫಲಿತಾಂಶ ಎನ್ನುವುದರ ಮೇಲೆ ಕ್ಲಿಕ್ ಮಾಡಿ.
    ಇನ್ನೊಂದು ವೆಬ್‍ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ಸಿಬಿಎಸ್‍ಇ 12ನೇ ತರಗತಿಗಳ ಫಲಿತಾಂಶ ಲಿಂಕ್ ಮೇಲೆ ಕ್ಲಿಕ್ ಮಾಡಿ.
    ನಂತರ ಓಪನ್ ಆದ ಪೇಜ್‍ನಲ್ಲಿ ನೋಂದಣಿ ಸಂಖ್ಯೆ, ಶಾಲೆಯ ಸಂಖ್ಯೆ, ಜನ್ಮ ದಿನಾಂಕ, ಪ್ರವೇಶ ಪತ್ರದ ಐಡಿ ನಂಬರ್ ನಮೂದಿಸಿ.
    ಆಗ ನಿಮ್ಮ ರಿಸಲ್ಟ್ ಪೇಜ್ ಓಪನ್ ಆಗುತ್ತದೆ.
    ಚೆಕ್ ಮಾಡಿಕೊಂಡು, ಮುಂದಿನ ರೆಫ್ರೆನ್ಸ್‌ಗಾಗಿ ಪ್ರಿಂಟ್ ತೆಗೆದುಕೊಳ್ಳಿ.