Tag: CBSC

  • ಒಂದು ಪರೀಕ್ಷೆ ಯಾರು ಎಂಬುದನ್ನು ನಿರ್ಧರಿಸುವುದಿಲ್ಲ: ಮೋದಿ

    ಒಂದು ಪರೀಕ್ಷೆ ಯಾರು ಎಂಬುದನ್ನು ನಿರ್ಧರಿಸುವುದಿಲ್ಲ: ಮೋದಿ

    ನವದೆಹಲಿ: ಈ ವರ್ಷದ ಸಿಬಿಎಸ್‌ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿಯವರು ವಿದ್ಯಾರ್ಥಿಗಳನ್ನು ಅಭಿನಂದಿಸಲು ಟ್ವೀಟ್ ಮಾಡಿದ್ದಾರೆ. ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸದವರಿಗೂ ಧೈರ್ಯ ತುಂಬಿ, ವಿದ್ಯಾರ್ಥಿಗಳ ಮನಗೆದ್ದಿದ್ದಾರೆ.

    ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ಶುಕ್ರವಾರ ಬೆಳಗ್ಗೆ 9 ಗಂಟೆಗೆ ಸಿಬಿಎಸ್‌ಸಿ 12ನೇ ತರಗತಿಯ ಫಲಿತಾಂಶವನ್ನು ಬಿಡುಗಡೆ ಮಾಡಿತು. ಸಿಬಿಎಸ್‌ಇ 10ನೇ ತರಗತಿಯ ಫಲಿತಾಂಶವನ್ನು ಮಧ್ಯಾಹ್ನ 2 ಗಂಟೆಗೆ ಘೋಷಿಸಲಾಯಿತು. ವಿದ್ಯಾರ್ಥಿಗಳು ಡಿಜಿಲಾಕರ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್ ಹಾಗೂ ಅಧಿಕೃತ ವೆಬ್‌ಸೈಟ್‌ಗಳಾದ cbseresults.nic.in ಮತ್ತು cbse.gov.in. ನಿಂದ ಫಲಿತಾಂಶವನ್ನು ಪರಿಶೀಲಿಸಲು ಸಾಧ್ಯವಾಗುತ್ತಿದೆ.

    ಮೋದಿ ಟ್ವೀಟ್:
    ಸಿಬಿಎಸ್‌ಇ 12ನೇ ತರಗತಿ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ನನ್ನ ಎಲ್ಲಾ ಯುವ ಸ್ನೇಹಿತರಿಗೆ ಅಭಿನಂದನೆಗಳು. ಈ ಯುವಕರ ಶ್ರದ್ಧೆ ಶ್ಲಾಘನೀಯ. ಜಗತ್ತು ಒಂದು ದೊಡ್ಡ ಸವಾಲನ್ನು ಎದುರಿಸಿದ ಸಂದರ್ಭದಲ್ಲೇ ನೀವೆಲ್ಲಾ ಪರೀಕ್ಷೆಗೆ ತಯಾರಿ ನಡೆಸಿ ಈ ಯಶಸ್ಸನ್ನು ಸಾಧಿಸಿದ್ದೀರಿ ಎಂದರು. ಇದನ್ನೂ ಓದಿ: Monkeypox; ಕೇರಳದಲ್ಲಿ 3ನೇ ಪ್ರಕರಣ ಪತ್ತೆ

    ಪರೀಕ್ಷೆಗಳಲ್ಲಿ ಉತ್ತೀರ್ಣರಾದ ನಮ್ಮ ಯುವ ಪರೀಕ್ಷಾ ಯೋಧರಿಗೆ ಅಸಂಖ್ಯಾತ ಅವಕಾಶಗಳಿವೆ. ಅವರ ಮನಸ್ಸಿನ ಮಾತನ್ನು ಅನುಸರಿಸಲು ಹಾಗೂ ಅವರು ಆಸಕ್ತಿ ಹೊಂದಿರುವ ವಿಷಯಗಳಲ್ಲಿ ಮುಂದುವರಿಯಲು ನಾನು ವಿದ್ಯಾರ್ಥಿಗಳನ್ನು ಒತ್ತಾಯಿಸುತ್ತೇನೆ. ಅವರ ಮುಂದಿನ ಪ್ರಯತ್ನಗಳಿಗೆ ನನ್ನ ಶುಭಾಶಯಗಳು ಎಂದಿದ್ದಾರೆ. ಇದನ್ನೂ ಓದಿ: ಆಸ್ಪತ್ರೆಯ ಖಾಸಗಿ ವಾರ್ಡ್ ಕೊಠಡಿಗಳ ಮೇಲೆ GST ಸುಂಕ – ರೋಗಿಗಳಿಗೆ ಶಾಕ್ ಕೊಟ್ಟ AIIMS

    ಕೆಲವು ವಿದ್ಯಾರ್ಥಿಗಳಿಗೆ ತಮ್ಮ ಫಲಿತಾಂಶಗಳಿಂದ ಅಸಮಾಧಾನವಿರಬಹುದು. ಆದರೆ ಒಂದು ಪರೀಕ್ಷೆ ಅವರು ಯಾರೆಂದು ಎಂದಿಗೂ ವ್ಯಾಖ್ಯಾನಿಸುವುದಿಲ್ಲ ಎಂಬುದು ಅವರು ತಿಳಿದಿರಬೇಕು. ಮುಂಬರುವ ದಿನಗಳಲ್ಲಿ ಅವರು ಹೆಚ್ಚಿನ ಯಶಸ್ಸನ್ನು ಕಾಣುತ್ತಾರೆ ಎಂಬುದು ನನಗೆ ಖಾತ್ರಿಯಿದೆ ಎಂದು ಭರವಸೆಯ ಮಾತುಗಳನ್ನಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • 10, 12ನೇ ತರಗತಿಯ ಸಿಬಿಎಸ್‌ಇ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ

    10, 12ನೇ ತರಗತಿಯ ಸಿಬಿಎಸ್‌ಇ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ

    ನವದೆಹಲಿ: 10ನೇ ತರಗತಿ ಹಾಗೂ 12ನೇ ತರಗತಿಯ ಬೋರ್ಡ್ ಪರೀಕ್ಷೆಯನ್ನು(ಸಿಬಿಎಸ್‌ಇ) ಬರೆದಿರುವ 33 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮಂಡಳಿ ಸಿಹಿ ಸುದ್ದಿಯನ್ನು ತಂದಿದೆ. ಈ ವರ್ಷ ಬೋರ್ಡ್ ಪರೀಕ್ಷೆ ಬರೆದಿರುವ ಎಲ್ಲಾ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸುವುದಾಗಿ ಮಂಡಳಿ ನಿರ್ಧರಿಸಿದೆ.

    ಹೊಸ ಎಮ್‌ಸಿಕ್ಯು ಸ್ವರೂಪದ ಟರ್ಮ್-1 ಸಿಬಿಎಸ್‌ಇ ಪರೀಕ್ಷೆಗಳು ಕಠಿಣವಾಗಿತ್ತು ಎಂದು ವಿದ್ಯಾರ್ಥಿಗಳು ಕಳವಳ ವ್ಯಕ್ತಪಡಿಸಿದ್ದರು. ಇದೇ ಸಂದರ್ಭದಲ್ಲಿ ಶಿಕ್ಷಣ ಮಂಡಳಿ ಯಾವುದೇ ಸಿಬಿಎಸ್‌ಇ ವಿದ್ಯಾರ್ಥಿಗಳನ್ನು ಉತ್ತೀರ್ಣ ಅಥವಾ ಅನುತ್ತೀರ್ಣಗೊಳಿಸದಂತೆ ನಿರ್ಧರಿಸಿದೆ.‌ ಇದನ್ನೂ ಓದಿ: ಯುವತಿಯರ ಮದುವೆ ವಯಸ್ಸು 21ಕ್ಕೆ ಏರಿಕೆ ಕೇವಲ ಹಿಂದೂ ಧರ್ಮಕ್ಕೆ ಮಾತ್ರ ಅಲ್ಲ: ಶೋಭಾ ಕರಂದ್ಲಾಜೆ

    ಮಂಡಳಿಯ ಪ್ರಕಾರ ಟರ್ಮ್ 1 ಬೋರ್ಡ್ ಪರೀಕ್ಷೆಯ ಫಲಿತಾಂಶಗಳಲ್ಲಿ ಅಂಕಗಳು ಮಾತ್ರವೇ ಇರಲಿದೆ. ಅಂದರೆ ವಿದ್ಯಾರ್ಥಿಗಳಿಗೆ ಪಾಸ್, ಫೇಲ್, ರಿಪೀಟರ್ ಅಥವಾ ಕಂಪಾರ್ಟ್ಮೆಂಟ್ ಗ್ರೇಡ್‌ಗಳನ್ನು ನೀಡಲಾಗುವುದಿಲ್ಲ ಎಂದು ಪರೀಕ್ಷಾ ಮಂಡಳಿ ಮೊದಲೇ ಹೇಳಿತ್ತು.

    ಈ ನಿರ್ಧಾರದಿಂದಾಗಿ ಫೇಲ್ ಆಗುವ ಪ್ರಮಾಣ ಕಡಿಮೆಯಾಗುತ್ತದೆ. ವಿದ್ಯಾರ್ಥಿಗಳು ತಮ್ಮನ್ನು ತಾವು ಬೆಳೆಸಿಕೊಳ್ಳುವಲ್ಲಿ ಹೆಚ್ಚಿನ ಅವಕಾಶಗಳನ್ನು ಪಡೆಯುತ್ತಾರೆ. ಅವರು ತಮ್ಮ ಶಾಲಾ ಕೆಲಸದ ಮೇಲೆ ಹೆಚ್ಚು ಗಮನ ಹರಿಸಲು ಸಾಧ್ಯವಾಗುತ್ತದೆ ಎಂದು ಈ ಹಿಂದೆ ಸಿಬಿಎಸ್‌ಇ ಪರೀಕ್ಷಾ ನಿಯಂತ್ರಕ ಸಂಯಮ್ ಭಾರದ್ವಾಜ್ ಹೇಳಿದ್ದರು. ಇದನ್ನೂ ಓದಿ: ರಾಷ್ಟಮಟ್ಟದ ಸ್ಕೇಟಿಂಗ್ – ಏಕಾಂಶ್ ಕುಮಾರ್‌ಗೆ 1 ಬೆಳ್ಳಿ, 1 ಕಂಚಿನ ಪದಕ

    ಸಿಬಿಎಸ್‌ಇ 10 ಮತ್ತು 12ನೇ ತರಗತಿಯ ಟರ್ಮ್-1 ಬೋರ್ಡ್ ಪರೀಕ್ಷೆಯ ಫಲಿತಾಂಶ ಜನವರಿಯಲ್ಲಿ ಪ್ರಕಟವಾಗುವ ಸಾಧ್ಯತೆ ಇದೆ.

  • SSLCಯಲ್ಲಿ ಮಗ ಶೇ. 60 ಅಂಕಗಳಿಸಿದಕ್ಕೆ ತಾಯಿಯ ಪೋಸ್ಟ್- ಜನರಿಂದ ಮೆಚ್ಚುಗೆ

    SSLCಯಲ್ಲಿ ಮಗ ಶೇ. 60 ಅಂಕಗಳಿಸಿದಕ್ಕೆ ತಾಯಿಯ ಪೋಸ್ಟ್- ಜನರಿಂದ ಮೆಚ್ಚುಗೆ

    ನವದೆಹಲಿ: ಸೋಮವಾರ 10ನೇ ತರಗತಿಯ ಸಿಬಿಎಸ್‍ಸಿ ಫಲಿತಾಂಶ ಹೊರಬಿದಿದ್ದು, 13 ವಿದ್ಯಾರ್ಥಿಗಳು 500ಕ್ಕೆ 499 ಅಂಕಗಳನ್ನು ಪಡೆದಿದ್ದಾರೆ. ಹೀಗಿರುವಾಗ ತಾಯಿಯೊಬ್ಬರು ತನ್ನ ಮಗ 10ನೇ ತರಗತಿ ಪರೀಕ್ಷೆಯಲ್ಲಿ ಶೇ. 60ರಷ್ಟು ಅಂಕಗಳಿಸಿದ್ದಾನೆ ಎಂದು ಹಾಕಿದ ಪೋಸ್ಟ್ ವೈರಲ್ ಆಗುತ್ತಿದೆ.

    ಮಕ್ಕಳು ಪರೀಕ್ಷೆಯಲ್ಲಿ ನೂರಕ್ಕೆ ನೂರು ಅಂಕಗಳಿಸಬೇಕು, ಶೇ. 90 ಕಿಂತ ಹೆಚ್ಚು ಅಂಕಗಳಿಸಬೇಕು ಎಂದು ಮಕ್ಕಳ ಮೇಲೆ ಒತ್ತಡ ಹೇರುವ ಪೋಷಕರಿದ್ದಾರೆ. ಅದರೆ ದೆಹಲಿಯ ಮಹಿಳೆ ತನ್ನ ಮಗ ಶೇ. 60 ಅಂಕಗಳಿಸಿರುವುದಕ್ಕೆ ಖುಷಿಪಟ್ಟು ಅದನ್ನು ತನ್ನ ಫೇಸ್‍ಬುಕ್ ಖಾತೆಯಲ್ಲಿ ಹೆಮ್ಮೆಯಿಂದ ಹಂಚಿಕೊಂಡಿದ್ದಾರೆ.

    ವಂದನಾ ಸುಫಿಯಾ ಕಟೊಚ್ ಎಂಬ ಮಹಿಳೆ ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಮಗ ಶೇ. 60ರಷ್ಟು ಅಂಕಗಳಿಸಿರುವುದಕ್ಕೆ ಹೆಮ್ಮೆ ಇದೆ ಎಂದು ಪೋಸ್ಟ್ ಮಾಡಿದ್ದಾರೆ. ನನಗೆ ನನ್ನ ಮಗ ಶೇ.60 ಅಂಕಗಳನ್ನು ತೆಗೆದಿರುವುದು ಹೆಮ್ಮೆ ಇದೆ. ಹೌದು ಅವನು ಶೇ.90 ತೆಗೆದಿಲ್ಲ ಅದರೂ ನನಗೆ ಖುಷಿ ಇದೆ. ಏಕೆಂದರೆ ಅವನು ಕೆಲವೊಂದು ವಿಷಯದಲ್ಲಿ ತುಂಬ ದುರ್ಬಲನಾಗಿದ್ದನು. ಅದರೆ ಅದನ್ನು ಮೀರಿ ಅಂಕಗಳಿಸಿರುವುದು ನನಗೆ ಸಂತೋಷವಾಗಿದೆ. ನಿನ್ನ ಕುತೂಹಲ ಮತ್ತು ಬುದ್ಧಿವಂತಿಕೆಯನ್ನು ಜೀವಂತವಾಗಿ ಇಟ್ಟಿಕೊ. ನನ್ನ ಪ್ರೀತಿಯ ಮಗನೇ ನಿನಗೆ ಒಳ್ಳೆಯದು ಅಗಲಿ ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

    ತಾಯಿಯ ಈ ಪೋಸ್ಟ್ ಗೆ ಹಲವಾರು ಮಂದಿ ಕಮೆಂಟ್ ಮಾಡಿದ್ದು, ಮಗನಿಗೆ ಶುಭಾಷಯಗಳನ್ನು ತಿಳಿಸಿದ್ದಾರೆ. ಮತ್ತು ಕೆಲವರು ನಿಮ್ಮಂತಹ ತಾಯಿಯನ್ನು ಪಡೆಯಲು ನಿಮ್ಮ ಮಗ ಪುಣ್ಯ ಮಾಡಿದ್ದಾನೆ ಎಂದು ತಾಯಿಯ ಪೋಸ್ಟ್ ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಗೆಳತಿಗೆ ಅಪ್ಪುಗೆ ನೀಡಿ ಸಸ್ಪೆಂಡ್ ಆಗಿದ್ದ ವಿದ್ಯಾರ್ಥಿ ಪರೀಕ್ಷೆಯಲ್ಲಿ 91.2% ಅಂಕ ಪಡೆದ!

    ಗೆಳತಿಗೆ ಅಪ್ಪುಗೆ ನೀಡಿ ಸಸ್ಪೆಂಡ್ ಆಗಿದ್ದ ವಿದ್ಯಾರ್ಥಿ ಪರೀಕ್ಷೆಯಲ್ಲಿ 91.2% ಅಂಕ ಪಡೆದ!

    ತಿರುವನಂತಪುರಂ: ಕಳೆದ ಕೆಲ ದಿನಗಳ ಹಿಂದೆ ಗೆಳತಿಗೆ ಅಪ್ಪುಗೆ ನೀಡಿ ಅಮಾನತುಗೊಂಡಿದ್ದ ವಿದ್ಯಾರ್ಥಿ ಸಿಬಿಎಸ್‍ಸಿ 12 ತರಗತಿಯ ಪರೀಕ್ಷೆಯಲ್ಲಿ 91.2% ಅಂಕ ಪಡೆದಿದ್ದಾನೆ.

    ಈ ಕುರಿತು ಸ್ಥಳೀಯ ಮಾಧ್ಯಮದೊಂದಿಗೆ ಸಂತಸ ವ್ಯಕ್ತಪಡಿಸಿರುವ ವಿದ್ಯಾರ್ಥಿ ಪೋಷಕರು ಶಾಲೆಯ ಆಡಳಿತ ಮಂಡಳಿ ನಿರ್ಧಾರದಿಂದ ಸಾಕಷ್ಟು ಬೇಸರ ಉಂಟಾಗಿತ್ತು. ಆದರೆ ವಿದ್ಯಾರ್ಥಿಗಳ ಭವಿಷ್ಯದ ಕಾರಣ ಪರೀಕ್ಷೆ ಬರೆಯಲು ಅನುಮತಿ ನೀಡಲಾಗಿತ್ತು. ಸದ್ಯ ತಮ್ಮ ಮಗ ಎಲ್ಲವನ್ನು ಬದಿಗೊತ್ತಿ ಉತ್ತಮ ಅಂಕ ಪಡೆದಿರುವುದು ಸಂತಸ ತಂದಿದೆ ಎಂದು ತಿಳಿಸಿದ್ದಾರೆ.

    ವಿದ್ಯಾರ್ಥಿ ಎದುರಿಸಿದ್ದ ಪರೀಕ್ಷೆಯಲ್ಲಿ ಆಂಗ್ಲಭಾಷೆಯಲ್ಲಿ 87, ಅರ್ಥಶಾಸ್ತ್ರದಲ್ಲಿ 99, ವ್ಯವಹಾರ ಅಧ್ಯಯನದಲ್ಲಿ 90, ಲೆಕ್ಕಶಾಸ್ತ್ರದಲ್ಲಿ 88, ಮನಃಶಾಸ್ತ್ರದಲ್ಲಿ 92 ಅಂಕಗಳನ್ನು ಗಳಿಸಿದ್ದಾನೆ.

    ಏನಿದು ಪ್ರಕರಣ?
    ಕಳೆದ ಡಿಸೆಂಬರ್ ಅವಧಿಯಲ್ಲಿ ಕೇರಳದ ಸೇಂಟ್ ಥಾಮಸ್ ಸೆಂಟ್ರಲ್ ಶಾಲೆಯಲ್ಲಿ ಓದುತ್ತಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಗಿತ್ತು. ವಿದ್ಯಾರ್ಥಿ ತನ್ನ ಗೆಳತಿಯನ್ನು ಅಪ್ಪಿಕೊಂಡಿದ್ದ ಫೋಟೋವನ್ನು ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಆಗಿದ್ದಕ್ಕೆ ಶಿಸ್ತು ಕ್ರಮದ ಹಿನ್ನೆಲೆಯಲ್ಲಿ ಶಾಲೆ ಈ ನಿರ್ಣಯ ಕೈಗೊಂಡಿತ್ತು.

    ಶಾಲೆಯ ನಿರ್ಧಾರದ ವಿರುದ್ಧ ವಿದ್ಯಾರ್ಥಿ ಫೋಷಕರು ಕೇರಳ ಹೈಕೋರ್ಟ್ ಹಾಗೂ ಮಾನವ ಹಕ್ಕುಗಳ ಆಯೋಗದ ಮೆಟ್ಟಿಲು ಸಹ ಹತ್ತಿದ್ದರು. ಆದರೆ ನ್ಯಾಯಾಲಯ ಶಾಲೆಗೆ ಶಿಸ್ತು ನಿಯಮ ರೂಪಿಸುವ ಅಧಿಕಾರ ಇದೇ ಎಂದು ಅಭಿಪ್ರಾಯಪಟ್ಟು ಪ್ರಕರಣದಲ್ಲಿ ಮಧ್ಯ ಪ್ರವೇಶಿಸಲು ನಿರಾಕರಿಸಿತ್ತು. ಬಳಿಕ ಸಂಸದ ಶಶಿ ತರೂರ್ ಮಧ್ಯ ಪ್ರವೇಶದಿಂದ ವಿದ್ಯಾರ್ಥಿಗಳಿಗೆ ಪರೀಕ್ಷೆ ತೆಗೆದು ಕೊಳ್ಳಲು ಅವಕಾಶ ನೀಡಲಾಗಿತ್ತು.

  • ಸಿಬಿಎಸ್‍ಸಿ ಪ್ರಶ್ನೆಪತ್ರಿಕೆ ಸೋರಿಕೆ- ಇಬ್ಬರು ಶಿಕ್ಷಕರು, ಕೋಚಿಂಗ್ ಸೆಂಟರ್ ಮಾಲೀಕನ ಬಂಧನ

    ಸಿಬಿಎಸ್‍ಸಿ ಪ್ರಶ್ನೆಪತ್ರಿಕೆ ಸೋರಿಕೆ- ಇಬ್ಬರು ಶಿಕ್ಷಕರು, ಕೋಚಿಂಗ್ ಸೆಂಟರ್ ಮಾಲೀಕನ ಬಂಧನ

    ನವದೆಹಲಿ: ಸಿಬಿಎಸ್‍ಸಿ ದ್ವಿತೀಯ ಪಿಯುಸಿ ಅರ್ಥಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

    ರಿಶಬ್ (ಭೌತ ಶಾಸ್ತ್ರ) ಮತ್ತು ರೋಹಿತ್ (ಗಣಿತ) ಬಂಧಿತ ಶಿಕ್ಷಕರು. ಕೋಚಿಂಗ್ ಸೆಂಟರ್ ಮಾಲೀಕನನ್ನು ತಖ್ವೀರ್ ಎಂದು ಗುರುತಿಸಲಾಗಿದೆ. ಇಬ್ಬರು ಶಿಕ್ಷಕರು ಬೆಳಗ್ಗೆ 9:15 ಸಮಯಕ್ಕೆ ಪ್ರಶ್ನೆ ಪತ್ರಿಕೆಯ ಫೋಟೋಗಳನ್ನು ತೆಗೆದು ಕೋಚಿಂಗ್ ಸೆಂಟರ್ ಮಾಲೀಕನಿಗೆ ಕಳುಹಿಸಿದ್ದಾರೆ. ಮಾಲೀಕನು ವಿದ್ಯಾರ್ಥಿಗಳಿಗೆ ಕಳಿಸಿದ್ದಾನೆ ಎಂಬ ಮಾಹಿತಿಗಳು ಲಭ್ಯವಾಗಿವೆ.

    ಎರಡು ರೂಪದಲ್ಲಿ ಸೋರಿಕೆ: ಪ್ರಶ್ನೆಪತ್ರಿಕೆ ಎರಡು ರೂಪದಲ್ಲಿ ಸೋರಿಕೆಯಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ. ಒಂದು ಮುದ್ರಿತ ಪ್ರಶ್ನೆ ಪತ್ರಿಕೆ ವಾಟ್ಸಪ್ ಮೂಲಕ ಹಾಗೂ ಕೈ ಬರಹದ ಪ್ರಶ್ನೆಪತ್ರಿಕೆ ಕೂಡ ಹರಿದಾಡಿದೆ. ದೆಹಲಿಯ ಬವನಾದಲ್ಲಿ ಕೋಚಿಂಗ್ ಸೆಂಟರ್ ಅನ್ನು ನಡೆಸುತ್ತಿದ್ದಾರೆ. ಪ್ರಶ್ನೆಪತ್ರಿಕೆ ಸೋರಿಕೆಯಿಂದಾಗಿ ಸಿಬಿಎಸ್‍ಸಿ ಮತ್ತು ಕೇಂದ್ರ ಸರ್ಕಾರ ದ್ವಿತೀಯ ಪಿಯುಸಿ ಅರ್ಥಶಾಸ್ತ್ರದ ಮರು ಪರೀಕ್ಷೆಗೆ ಆದೇಶಿಸಿದೆ.

    ದೇಶಾದ್ಯಂತ ಏಪ್ರಿಲ್ 25 ರಂದು ದ್ವಿತೀಯ ಪಿಯುಸಿ ಅರ್ಥಶಾಸ್ತ್ರದ ಮರುಪರೀಕ್ಷೆ ನಡೆಯಲಿದೆ. ಹೆಚ್ಚಿನ ಮಾಹಿತಿ ದೊರೆಯುವರೆಗೂ 10ನೇ ತರಗತಿ ಗಣಿತಶಾಸ್ತ್ರದ ಮರು ಪರೀಕ್ಷೆ ನಿರ್ಧಾರವನ್ನು ಮುಂದೂಡಿದ್ದೇವೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವ್ಡೇಕರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

    ಸೋರಿಕೆಯ ಹೆಚ್ಚಿನ ಮಾಹಿತಿ ದೊರೆತ ನಂತರ 10ನೇ ತರಗತಿ ಗಣಿತಶಾಸ್ತ್ರದ ಮರು ಪರೀಕ್ಷೆ ದೆಹಲಿ, ಹರಿಯಾಣ ವಲಯದಲ್ಲಿ ಮಾತ್ರ ನಡೆಯಲಿದೆ. ಮರುಪರೀಕ್ಷೆ ಜುಲೈನಲ್ಲಿ ನಡೆಯುವ ಸಾಧ್ಯತೆಗಳಿವೆ ಎಂದು ಸಚಿವರು ತಿಳಿಸಿದ್ದಾರೆ.

    ಸಿಬಿಎಸ್‍ಸಿ 10ನೇ ತರಗತಿ ಗಣಿತ ಪ್ರಶ್ನೆಪತ್ರಿಕೆ ಸೋರಿಕೆ ವಿಚಾರವಾಗಿ ಜಾರ್ಖಂಡ್ ಪೊಲೀಸರು ಚಾತ್ರ ಜಿಲ್ಲೆಯಲ್ಲಿ 12 ಜನ ವಿದ್ಯಾರ್ಥಿಗಳು ಹಾಗೂ ಕೋಚಿಂಗ್ ಸೆಂಟರ್ ಸಿಬ್ಬಂಧಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.