Tag: cbi

  • ಗಣಪತಿ ಕೇಸ್: ಕಾಟಾಚಾರದ ಸಿಐಡಿ ತನಿಖೆಗೆ ಸಿಕ್ತು ಪುರಾವೆ-ಸಿಬಿಐ ತನಿಖೆ ವೇಳೆ ಪತ್ತೆ ಆಯ್ತು ಗುಂಡು

    ಗಣಪತಿ ಕೇಸ್: ಕಾಟಾಚಾರದ ಸಿಐಡಿ ತನಿಖೆಗೆ ಸಿಕ್ತು ಪುರಾವೆ-ಸಿಬಿಐ ತನಿಖೆ ವೇಳೆ ಪತ್ತೆ ಆಯ್ತು ಗುಂಡು

    ಮಡಿಕೇರಿ: ಡಿವೈಎಸ್‍ಪಿ ಗಣಪತಿ ಸಾವಿನ ಪ್ರಕರಣವನ್ನು ಕಾಟಾಚಾರಕ್ಕೆ ಸಿಐಡಿ ನಡೆಸಿದೆ ಎನ್ನುವ ಆರೋಪಕ್ಕೆ ಪುರಾವೆ ಎಂಬಂತೆ ಇಂದು ಸಿಬಿಐಯ ಆರಂಭಿಕ ತನಿಖೆ ವೇಳೆ ಲಾಡ್ಜ್ ನಲ್ಲಿ ಗುಂಡು ಪತ್ತೆಯಾಗಿದೆ.

    ಚೆನ್ನೈನಿಂದ ಮಡಿಕೇರಿಗೆ ಆಗಮಿಸಿರುವ ಸಿಬಿಐ ತಂಡ ಗಣಪತಿ ಶವ ಪತ್ತೆಯಾದ ವಿನಾಯಕ ಲಾಡ್ಜ್ ನಲ್ಲಿ ಮಂಗಳವಾರ ಪರಿಶೀಲನೆ ನಡೆಸಿತು. ಒಟ್ಟು 10 ಮಂದಿ ಸಿಬಿಐ ಅಧಿಕಾರಿಗಳು ಮಡಿಕೇರಿಗೆ ಆಗಮಿಸಿದ್ದು, ಗಣಪತಿ ಅವರ ಶವ ಪತ್ತೆಯಾಗಿದ್ದ 315ನೇ ಸಂಖ್ಯೆಯ ಕೊಠಡಿಯನ್ನು ಪರಿಶೀಲನೆ ನಡೆಸಿದಾಗ ಒಂದು ಗುಂಡು ಪತ್ತೆಯಾಗಿದೆ.

    ಪೊಲೀಸ್ ಅಧಿಕಾರಿಗಳು, ಕುಟುಂಬ ಸದಸ್ಯರ ಸಮ್ಮುಖದಲ್ಲಿ ಸ್ಥಳ ಪರಿಶೀಲನೆ ವೇಳೆ ಬುಲೆಟ್ ಪತ್ತೆಯಾಗಿದೆ. ಹೀಗಾಗಿ ಕೊಠಡಿಯನ್ನು ಸೀಲ್ ಮಾಡಿ ಸಿಬಿಐ ತಂಡ ವಶಕ್ಕೆ ಪಡೆದಿದೆ. ಆರಂಭದಲ್ಲೇ ಬುಲೆಟ್ ಪತ್ತೆಯಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಸಿಐಡಿ ತಂಡ ಈ ಪ್ರಕರಣವನ್ನು ಯಾವ ರೀತಿ ತನಿಖೆ ನಡೆಸಿದೆ ಎನ್ನುವ ಬಗ್ಗೆ ಗಂಭೀರವಾದ ಪ್ರಶ್ನೆ ಈಗ ಎದ್ದಿದೆ.

    ತನಿಖಾಧಿಕಾರಿ ಕಲೈಮಣಿ ನೇತೃತ್ವದಲ್ಲಿ ತಂಡ, ಗಣಪತಿ ಸಹೋದರ ಎಂ.ಕೆ ಮಾಚಯ್ಯ ಸೇರಿದಂತೆ ಈ ಪ್ರಕರಣದ ಪ್ರಮುಖ ಸಾಕ್ಷಿಗಳಾದ ಬೆಳ್ಯಪ್ಪ, ಉದಯ್, ಜಗನ್ ಅವರನ್ನು ಲಾಡ್ಜ್ ಗೆ ಕರೆಸಿಕೊಂಡು ವಿಚಾರಣೆ ನಡೆಸಿದ್ದಾರೆ.

    ಏನಿದು ಪ್ರಕರಣ? 2016 ಜುಲೈ 7 ರಂದು ಡಿವೈಎಸ್ಪಿ ಗಣಪತಿ ಮಡಿಕೇರಿಯ ವಿನಾಯಕ ಲಾಡ್ಜ್ ನಲ್ಲಿ ಆತ್ಮಹತ್ಯೆ ಶರಣಾಗುವ ಮುನ್ನ ಸ್ಥಳೀಯ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಮುಂದೆ ನನಗೆ ಏನಾದ್ರೂ ಆದರೆ ಅದಕ್ಕೆ ಸಚಿವ ಕೆಜೆ ಜಾರ್ಜ್, ಪೊಲೀಸ್ ಅಧಿಕಾರಿಗಳಾದ ಅಶಿತ್ ಮೋಹನ್ ಪ್ರಸಾದ್ ಮತ್ತು ಪ್ರಣಬ್ ಮೊಹಂತಿ ಕಾರಣ ಎಂದು ನೇರವಾಗಿ ಆರೋಪಿಸಿದ್ದರು. ಈ ಸಂದರ್ಶನ ನೀಡಿದ ಬಳಿಕ ಸಂಜೆ ಮಡಿಕೇರಿ ನಗರದ ಲಾಡ್ಜ್ ನಲ್ಲಿ ನೇಣಿಗೆ ಶರಣಾಗಿದ್ದರು. ಈ ಪ್ರಕರಣದ ತನಿಖೆಯನ್ನು ನಡೆಸಿದ ಸಿಐಡಿ ಸಚಿವ ಜಾರ್ಜ್ ಮತ್ತು ಐಪಿಎಸ್ ಅಧಿಕಾರಿಗಳಿಗೆ ಬಿ ರಿಪೋರ್ಟ್ ಸಲ್ಲಿಸಿ ಕ್ಲೀನ್ ಚಿಟ್ ನೀಡಿತ್ತು.

    ಸಿಐಡಿ ವರದಿಯಲ್ಲಿ ಸಚಿವ ಜಾರ್ಜ್ ಗೆ ಕ್ಲೀನ್ ಚಿಟ್ ನೀಡಿದ್ದನ್ನು ಪ್ರಶ್ನಿಸಿ ಸಿಬಿಐ ತನಿಖೆಗೆ ಆಗ್ರಹಿಸುವಂತೆ ಗಣಪತಿ ತಂದೆ ಕುಶಾಲಪ್ಪ ಈ ಹಿಂದೆ ಕರ್ನಾಟಕ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಈ ಅರ್ಜಿಯನ್ನು ನ್ಯಾ.ಎಸ್.ಅಬ್ದುಲ್ ನಜೀರ್ ಅವರಿದ್ದ ಹೈಕೋರ್ಟ್ ಏಕಸದಸ್ಯ ಪೀಠ ವಜಾಗೊಳಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಕುಶಾಲಪ್ಪ ಸುಪ್ರೀಂ ಕೋರ್ಟ್ ಮೆಟ್ಟಿಲು ಏರಿದ್ದರು. ಸುಪ್ರೀಂ ಸಿಬಿಐ ತನಿಖೆ ನಡೆಸುವಂತೆ ಆದೇಶಿಸಿತ್ತು.

    ಇದನ್ನೂ ಓದಿ: ಗಣಪತಿ ಕೇಸ್: ಸುಪ್ರೀಂ ನ್ಯಾಯಮೂರ್ತಿಗಳ ಪ್ರಶ್ನೆಗಳಿಗೆ ಸರ್ಕಾರಿ ವಕೀಲರು ಸುಸ್ತು: ಕಲಾಪದ ಪೂರ್ಣ ವರದಿ ಇಲ್ಲಿದೆ

    ದಾಖಲೆಗಳು ನಾಶ: ಗಣಪತಿ ಪ್ರಕರಣಕ್ಕೆ ಒಂದು ವರ್ಷ ಕಳೆಯುತ್ತಿದ್ದಂತೆ ರಾಷ್ಟ್ರೀಯ ಸುದ್ದಿ ವಾಹಿನಿ ಟೈಮ್ಸ್ ನೌ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ವಿಧಿವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ ಸಾಕ್ಷ್ಯ ನಾಶ ಮಾಡಿರುವ ಬಗ್ಗೆ ಉಲ್ಲೇಖ ಇರುವುದನ್ನು ಬಹಿರಂಗಪಡಿಸಿತ್ತು. ಆತ್ಮಹತ್ಯೆ ಮಾಡಿಕೊಂಡ ದಿನಾಂಕದ ಬಳಿಕ ಹಾಲಿ ಮಂತ್ರಿ, ಮಾಜಿ ಮಂತ್ರಿ, ಹಾಲಿ ಶಾಸಕರು, ಕೇಂದ್ರ ಸಚಿವರ ಸಂಬಂಧಿ, ಮುಖಂಡರು, ಇಬ್ಬರು ಪೊಲೀಸ್ ಅಧಿಕಾರಿಗಳ ಕರೆ ದಾಖಲೆ, ಮೊಬೈಲ್ ದಾಖಲೆ ನಾಶ ಮಾಡಿರುವುದು ಹಾಗೂ ಕಂಪ್ಯೂಟರ್ ದಾಖಲೆ ನಾಶ ಮಾಡಿರೋದು ವಿಧಿವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ ಉಲ್ಲೇಖಿಸಲಾಗಿದೆ.

    ಸಿಐಡಿ ಫೊರೆನ್ಸಿಕ್ ವರದಿಯನ್ನು ತನಿಖೆ ವೇಳೆ ಪರಿಗಣಿಸಿದೇ ಸಚಿವ ಜಾರ್ಜ್ ಮತ್ತು ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ಕ್ಲೀನ್ ಚೀಟ್ ನೀಡಿದೆ. ಈ ವೇಳೆ ಗಣಪತಿ ಆತ್ಮಹತ್ಯೆಗೆ ಸಂಬಂಧಿಸಿದಂತೆ ಪ್ರತ್ಯಕ್ಷದರ್ಶಿಗಳನ್ನು ವಾಹಿನಿ ಮಾತನಾಡಿಸಿತ್ತು. ಜಗನ್ ಬೆಳ್ಳಿಯಪ್ಪ ಮಾತನಾಡಿ, ಪೊಲೀಸ್ ಅಧಿಕಾರಿಗಳು ನಮ್ಮ ಜೊತೆ ಜಾಸ್ತಿ ಪ್ರಶ್ನೆ ಕೇಳಿಲ್ಲ. ಕೆಲ ಪ್ರಶ್ನೆ ಕೇಳಿದರು. ಏನು ಪ್ರಶ್ನೆ ಕೇಳಿದ್ದಾರೆ ಎನ್ನುವುದು ತಿಳಿದು ಬಂದಿಲ್ಲ. ಕೊನೆಗೆ ಖಾಲಿ ಬಿಳಿ ಹಾಳೆಯಲ್ಲಿ ಸಹಿ ಹಾಕಲು ಹೇಳಿದರು. ನಾವು ಸಹಿ ಹಾಕಿದ್ವಿ ಎಂದು ತಿಳಿಸಿದ್ದಾರೆ.

    ಏನೇನು ಡಿಲೀಟ್ ಆಗಿದೆ?: 100 ಇಮೇಲ್, 2699 ವರ್ಡ್ ಫೈಲ್, 910 ಎಂಎಸ್ ಎಕ್ಸೆಲ್ ಫೈಲ್, 145 ಪಿಡಿಎಫ್ ಫೈಲ್, 2500 ಇಮೇಜ್ ಫೈಲ್, 331 ಪಿಪಿಟಿ ಫೈಲ್, 791 ಟೆಕ್ಸ್ಟ್ ಫೈಲ್, 352 ಕಾಂಟಾಕ್ಟ್ , 52 ಮೆಸೇಜ್‍ಗಳು ಡಿಲೀಟ್ ಆಗಿದೆ ಎಂದು ವಾಹಿನಿ ವರದಿ ಪ್ರಸಾರಿಸಿತ್ತು.

    ತಕರಾರು ಅರ್ಜಿ ಸಲ್ಲಿಸಿರಲಿಲ್ಲ: ಸಚಿವ ಜಾರ್ಜ್ ಅವರಿಗೆ ಸಿಐಡಿ ನೀಡಿರುವ ಬಿ ರಿಪೋರ್ಟ್ ಅನ್ನು ಗಣಪತಿ ಅವರ ಪುತ್ರ ನೇಹಾಲ್ ಒಪ್ಪಿಕೊಂಡಿದ್ದರು. ಸಿಐಡಿ ಸಲ್ಲಿಸಿದ ಬಿ ರಿಪೋರ್ಟ್ ಗೆ ಗಣಪತಿ ಪುತ್ರ ಯಾವುದೇ ತಕರಾರು ಅರ್ಜಿ ಸಲ್ಲಿಸಿರಲಿಲ್ಲ.

     

    https://youtu.be/AGmp1M_0q2s

    https://youtu.be/p2V1xEclj3g

  • ಬಾಲಕ ಪ್ರದ್ಯುಮನ್ ಕೊಲೆ ಆರೋಪಿಯನ್ನ ಚಾಕು ಅಂಗಡಿಗೆ ಕರೆದುಕೊಂಡು ಹೋದ ಸಿಬಿಐ

    ಬಾಲಕ ಪ್ರದ್ಯುಮನ್ ಕೊಲೆ ಆರೋಪಿಯನ್ನ ಚಾಕು ಅಂಗಡಿಗೆ ಕರೆದುಕೊಂಡು ಹೋದ ಸಿಬಿಐ

    ನವದೆಹಲಿ: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಆರ್ಯನ್ ಇಂಟರ್ ನ್ಯಾಷನಲ್ ಶಾಲೆಯ 2ನೇ ಕ್ಲಾಸ್ ಬಾಲಕ ಪ್ರದ್ಯುಮನ್ ಕೊಲೆ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದ್ದು, ಪರೀಕ್ಷೆಯನ್ನು ಮುಂದೂಡುವ ಸಲುವಾಗಿ ಅದೇ ಶಾಲೆಯ ಹಿರಿಯ ವಿದ್ಯಾರ್ಥಿ ಕೊಲೆ ಮಾಡಿರುವುದಾಗಿ ಸಿಬಿಐ ಹೇಳಿದೆ.

    ಪ್ರದ್ಯುಮನ್‍ನನ್ನು ಕೊಲೆ ಮಾಡಿದ ದೃಶ್ಯದ ಮರುಸೃಷ್ಟಿಗಾಗಿ 16 ವರ್ಷದ ಆರೋಪಿ ವಿದ್ಯಾರ್ಥಿಯನ್ನು ಇಂದು ಸಿಬಿಐ ತಂಡ ಚಾಕುವಿನ ಅಂಗಡಿಗಳಿಗೆ ಕರೆದುಕೊಂಡು ಹೋಗಿದೆ. ಜೊತೆಗೆ ಇಂದು ಆತನನ್ನು ಶಾಲೆಗೂ ಕರೆದುಕೊಂಡು ಹೋಗಲಿದ್ದಾರೆ ಎಂದು ವರದಿಯಾಗಿದೆ.

    ಆರೋಪಿ ವಿದ್ಯಾರ್ಥಿ ಚಾಕುವನ್ನ ಯಾವ ಅಂಗಡಿಯಲ್ಲಿ ಖರೀದಿಸಿದ್ದ ಎಂಬುದನ್ನ ತಿಳಿಯಲು ಆಯ್ದ ಕೆಲವು ಅಂಗಡಿಗಳಿಗೆ ಆತನನ್ನು ಕರೆದುಕೊಂಡು ಹೋಗಲಾಗಿದೆ. ಶಾಲೆಗೂ ಆರೋಪಿಯನ್ನ ಕರೆದುಕೊಂಡು ಹೋಗಿ ಸೆಪ್ಟೆಂಬರ್ 8ರಂದು ಪ್ರದ್ಯುಮನ್‍ನನ್ನು ಕೊಲೆ ಮಾಡಿದ ರೀತಿಯನ್ನು ವಿವರಿಸುವಂತೆ ಕೇಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಸೆಪ್ಟೆಂಬರ್ 8 ರಂದು ಇಲ್ಲಿನ ಆರ್ಯನ್ ಇಂಟರ್ ನ್ಯಾಷನಲ್ ಶಾಲೆಯ ಟಾಯ್ಲೆಟ್ ನಲ್ಲಿ 7 ವರ್ಷದ ಬಾಲಕ ಪ್ರದ್ಯುಮನ್‍ನನ್ನು ಕತ್ತು ಸೀಳಿ ಕೊಲೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೇ ಶಾಲೆಯ 11ನೇ ತರಗತಿ ವಿದ್ಯಾರ್ಥಿಯನ್ನು ಮಂಗಳವಾರದಂದು ಪೊಲೀಸರು ವಶಕ್ಕೆ ಪಡೆದಿದ್ದರು. ಆತನ ವಿಚಾರಣೆಯಿಂದ ಸ್ಫೋಟಕ ಮಾಹಿತಿಗಳು ಬಯಲಾಗಿದ್ದು, ಪರೀಕ್ಷೆ ಮುಂದೂಡಿಕೆಯಾಗಲಿ ಅಂತ 11ನೇ ತರಗತಿ ವಿದ್ಯಾರ್ಥಿ ಬಾಲಕನನ್ನು ಕೊಲೆ ಮಾಡಿದ್ದಾನೆಂದು ಸಿಬಿಐ ಹೇಳಿದೆ.

    11 ನೇ ತರಗತಿ ವಿದ್ಯಾರ್ಥಿಯನ್ನು ಸಿಬಿಐ ಕಸ್ಟಡಿಯಲ್ಲಿ ಇಟ್ಟುಕೊಂಡು ವಿಚಾರಣೆ ಮಾಡುತ್ತಿದ್ದು, ಆತ 6 ಗಂಟೆ ಸಮಯ ಆದ ಬಳಿಕ ಮಾತನಾಡಿದ್ದಾನೆ. ಹತ್ಯೆಗೆ ಬಳಸಲಾಗಿದ್ದ ಚಾಕವನ್ನು ಯಾವ ಅಂಗಡಿಯಲ್ಲಿ ಖರೀದಿಸಲಾಗಿದೆ ಎಂದು ತಿಳಿಸಿದ್ದಾನೆ. ಇನ್ನೂ ಎರಡು ದಿನಗಳಲ್ಲಿ ಆತನನ್ನು ಶಾಲೆಗೆ ಕರೆದುಕೊಂಡು ಹೋಗಿ ಸೆ.8 ರಂದು ಪ್ರದ್ಯುಮನ್‍ನನ್ನು ತರಗತಿಯ ಪಕ್ಕದ ಶಾಲೆಯ ಶೌಚಾಲಯದಲ್ಲಿ ಹೇಗೆ ಹತ್ಯೆ ಮಾಡಿದ ಎಂದು ಮರುಸೃಷ್ಟಿ ಮಾಡಲಾಗುತ್ತದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.

    ಪರೀಕ್ಷೆ ಮುಂದೂಡಿಕೆಯಾಗಲು ಕೊಲೆ?: ತನಿಖಾಧಿಕಾರಿಗಳು ಜುವೆನೈಲ್ ಕೋರ್ಟ್‍ಗೆ ಆರೋಪಿಯನ್ನು ಹಾಜರುಪಡಿಸಿದ್ದು, ಅಲ್ಲಿ ಆರೋಪಿ ತಂದೆ, ಸಾಕ್ಷಿಗಳು ಮತ್ತು ಸಮಾಜ ಕಲ್ಯಾಣ ಬೋರ್ಡ್‍ನ ಸದಸ್ಯರ ಮುಂದೆ ತಾನು ಮಾಡಿರುವ ಕೊಲೆಯನ್ನು ಒಪ್ಪಿಕೊಂಡಿದ್ದಾನೆ. ಪರೀಕ್ಷೆಯನ್ನು ಮುಂದೂಡುವ ಸಲುವಾಗಿ ಈ ಹತ್ಯೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಆದರೆ ಸಿಬಿಐ ಇನ್ನೂ ಪುರಾವೆಗಳನ್ನು ಪತ್ತೆ ಹಚ್ಚುತ್ತಿವೆ.

    ಕಂಡಕ್ಟರ್ ಬಂಧನ: ಪ್ರದ್ಯುಮನ್ ತಂದೆ ಬಾಲಕನನ್ನು ಶಾಲೆಗೆ ಬಿಟ್ಟು ಹೋದ 15 ನಿಮಿಷಗಳಲ್ಲಿ ಹತ್ಯೆ ಮಾಡಲಾಗಿತ್ತು. 7 ಗಂಟೆಯ ನಂತರ ಪೊಲೀಸರು ಶಾಲೆಯ ಬಸ್ ಕಂಡಕ್ಟರ್ ಅಶೋಕ್ ಕುಮಾರ್‍ನನ್ನು ಬಂಧಿಸಿದ್ದರು. ಬಸ್ ಡ್ರೈವರ್‍ನ ಚಾಕುವನ್ನ ಕ್ಲೀನ್ ಮಾಡಲು ಟಾಯ್ಲೆಟ್ ಗೆ ಹೋಗಿದ್ದು ಬಾಲಕನ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದ. ಲೈಂಗಿಕ ಕ್ರಿಯೆಗೆ ಒಪ್ಪದ್ದಕ್ಕೆ ಕಂಡಕ್ಟರ್ ಬಾಲಕನನ್ನು ಕೊಲೆ ಮಾಡಿದ್ದಾನೆಂದು ಪೊಲೀಸರು ಹೇಳಿದ್ದರು.

    ಬಸ್‍ನಲ್ಲಿ ಚಾಕು ಇರ್ಲಿಲ್ಲ: ಆದ್ರೆ ಎರಡು ದಿನಗಳ ನಂತರ ಬಸ್‍ನಲ್ಲಿ ಯಾವುದೇ ಚಾಕು ಇರಲಿಲ್ಲ ಎಂದು ಡ್ರೈವರ್ ತಿಳಿಸಿದ್ದನು. ಪೊಲೀಸರು 7 ದಿನಗಳ ಚಾರ್ಜ್‍ಶೀಟ್ ಫೈಲ್ ಮಾಡುವುದಾಗಿ ಹೇಳಿದ್ದರೂ ಯಾವುದೇ ಚಾರ್ಜ್‍ಶೀಟ್ ಸಲ್ಲಿಸಿರಲಿಲ್ಲ. ನಂತರ ಸಿಬಿಐ ಸೆ.29 ರಂದು ಈ ಕೇಸ್ ಕೈಗೆತ್ತಿಕೊಂಡಿತ್ತು

    ಸಿಬಿಐ ವಿಚಾರಣೆ ನಡೆಸಿದಾಗ ಬಸ್ ಕಂಡಕ್ಟರ್ ಮತ್ತೆ ಮತ್ತೆ ನಾನು ಈ ಕೊಲೆ ಮಾಡಿಲ್ಲ ಎಂದು ಹೇಳಿದ್ದನು. ಬಾಲಕನ ಶವವನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗಲೂ ಯಾವುದೇ ರೀತಿಯ ಲೈಂಗಿಕ ದೌರ್ಜನ್ಯ ನಡೆದಿಲ್ಲ ಎಂದು ವರದಿ ಬಂದಿತ್ತು. ಬಾಲಕನ ಶವವನ್ನು ಮೊದಲು ನೋಡಿದ್ದ ಶಾಲೆಯ ತೋಟದ ಮಾಲಿ, ಅಶೋಕ್ ಕುಮಾರ್ ಟಾಯ್ಲೆಟ್ ಒಳಗೆ ಹೋಗೋದನ್ನ ನೋಡಿದ್ದೆ. ಆದ್ರೆ ಅವನ ಕೈಯಲ್ಲಿ ಚಾಕು ಇರಲಿಲ್ಲ ಎಂದು ಹೇಳಿಕೆ ನೀಡಿದ್ದರು. ಅಲ್ಲದೆ ಇಬ್ಬರು ವಿದ್ಯಾರ್ಥಿಗಳು ಬಂದು ಪ್ರದ್ಯುಮನ್ ರಕ್ತದ ಮಡುವಿನಲ್ಲಿ ಬಿದ್ದಿದ್ದಾನೆಂದು ಹೇಳಿದ್ದಾಗಿ ಅವರು ತಿಳಿಸಿದ್ದರು. ನಂತರ ವಿದ್ಯಾರ್ಥಿಗಳನ್ನು ವಿಚಾರಣೆ ನಡೆಸಿದಾಗ 11ನೇ ತರಗತಿಯ ವಿದ್ಯಾರ್ಥಿ ಬಳಿ ಚಾಕು ಇದ್ದಿದ್ದನ್ನು ನೋಡಿದ್ದೆವು ಎಂದು ಹೇಳಿದ್ದರು.

    ವಿದ್ಯಾರ್ಥಿಯ ಬಗ್ಗೆ ವಿಚಾರಣೆ ನಡೆಸಿದಾಗ ಈ ವಿದ್ಯಾರ್ಥಿ ಕಳೆದ ಒಂದು ವರ್ಷದಿಂದ ಮನೋವೈದ್ಯಕೀಯ ಪರೀಕ್ಷೆಗೆ ಒಳಪಟ್ಟಿದ್ದ. ಆತನಿಗೆ ತುಂಬಾ ಕೋಪ. ಶಾಲೆಯಲ್ಲಿ ರೌಡಿ ಎಂದು ಕರೆಯುತ್ತಿದ್ದರು ಎಂದು ತಿಳಿದುಬಂದಿದ್ದಾಗಿ ವರದಿಯಾಗಿದೆ.

    ಕೊಲೆಗೂ ಮುನ್ನ ವಿದ್ಯಾರ್ಥಿ ತನ್ನ ಸ್ನೇಹಿತರ ಬಳಿ ಪರೀಕ್ಷೆ ಮುಂದೂಡಿಕೆಯಾಗಬೇಕು. ಆಗ ನಾವು ಓದುವ ಚಿಂತೆಯೇ ಇರುವುದಿಲ್ಲ ಎಂದು ಹೇಳಿಕೊಂಡಿದ್ದ ಎಂದು ಸಿಬಿಐ ಹೇಳಿದೆ. ಈತನ ಶಾಲೆಯ ರೆಕಾರ್ಡ್ ನೋಡಿದ್ರೆ ಈತ ಒಳ್ಳೆಯ ವಿದ್ಯಾರ್ಥಿಯಾಗಿರಲಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

  • ಎಕ್ಸಾಂ ಮುಂದೂಡಿಕೆಯಾಗ್ಲಿ ಅಂತ 11ನೇ ಕ್ಲಾಸ್ ವಿದ್ಯಾರ್ಥಿಯಿಂದ ಬಾಲಕನ ಕೊಲೆ- ಸಿಬಿಐ

    ಎಕ್ಸಾಂ ಮುಂದೂಡಿಕೆಯಾಗ್ಲಿ ಅಂತ 11ನೇ ಕ್ಲಾಸ್ ವಿದ್ಯಾರ್ಥಿಯಿಂದ ಬಾಲಕನ ಕೊಲೆ- ಸಿಬಿಐ

    ಗುರ್ಗಾಂವ್: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ 2ನೇ ಕ್ಲಾಸ್ ಬಾಲಕ ಪ್ರದ್ಯುಮನ್ ಕೊಲೆ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ಬಾಲಕನನ್ನು ಕೊಂದಿದ್ದು ಬಸ್ ಕಂಡಕ್ಟರ್ ಅಲ್ಲ, ಶಾಲೆಯ ಹಿರಿಯ ವಿದ್ಯಾರ್ಥಿ ಎಂದು ಸಿಬಿಐ ಹೇಳಿದೆ.

    ಸೆಪ್ಟೆಂಬರ್ 8ರಂದು ಇಲ್ಲಿನ ಆರ್ಯನ್ ಇಂಟರ್‍ನಮ್ಯಾಷನಲ್ ಶಾಲೆಯ ಟಾಯ್ಲೆಟ್‍ ನಲ್ಲಿ 7 ವರ್ಷದ ಬಾಲಕ ಪ್ರದ್ಯುಮನ್‍ನನ್ನು ಕತ್ತು ಸೀಳಿ ಕೊಲೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೇ ಶಾಲೆಯ 11ನೇ ತರಗತಿ ವಿದ್ಯಾರ್ಥಿಯನ್ನು ಮಂಗಳವಾರದಂದು ಪೊಲೀಸರು ವಶಕ್ಕೆ ಪಡೆದಿದ್ದರು. ಇದೀಗ ಆತನ ವಿಚಾರಣೆಯಿಂದ ಸ್ಫೋಟಕ ಮಾಹಿತಿಗಳು ಬಯಲಾಗಿದೆ. ಪರೀಕ್ಷೆ ಮುಂದೂಡಿಕೆಯಾಗಲಿ ಅಂತ 11ನೇ ತರಗತಿ ವಿದ್ಯಾರ್ಥಿ ಬಾಲಕನನ್ನು ಕೊಲೆ ಮಾಡಿದ್ದಾನೆಂದು ಸಿಬಿಐ ಹೇಳಿದೆ.

    ಪ್ರದ್ಯುಮನ್ ಶವವನ್ನು ಮೊದಲು ನೋಡಿದ್ದವನು ಎಂದು ನಂಬಲಾಗಿದ್ದ ವಿದ್ಯಾರ್ಥಿಯೇ ಕೊಲೆ ಮಾಡಿದ್ದಾನೆ. ಆತನನ್ನು ಇಂದು ಜುವಿನೈಲ್ ಬೋರ್ಡ್ ಮುಂದೆ ಹಾಜರುಪಡಿಸಲಾಗುತ್ತದೆ ಎಂದು ವರದಿಯಾಗಿದೆ.

    ಈ ವಿದ್ಯಾರ್ಥಿ ಕಳೆದ ಒಂದು ವರ್ಷದಿಂದ ಮನೋವೈದ್ಯಕೀಯ ಪರೀಕ್ಷೆಗೆ ಒಳಪಟ್ಟಿದ್ದ. ಆತನನ್ನು ಕಳೆದ ಕೆಲವು ದಿನಗಳಿಂದ ವಿಚಾರಣೆ ಮಡಲಾಗುತ್ತಿದ್ದು, ಪ್ರತಿ ಬಾರಿಯೂ ಆತನ ಹೇಳಿಕೆ ಭಿನ್ನವಾಗಿರುತ್ತಿತ್ತು ಎಂದು ಮೂಲಗಳು ತಿಳಿಸಿವೆ.

    ಎಕ್ಸಾಂ ಪೋಸ್ಟ್ ಪೋನ್‍ಗೆ ಕೊಲೆ?: ಕೊಲೆಗೂ ಮುನ್ನ ವಿದ್ಯಾರ್ಥಿ ತನ್ನ ಸ್ನೇಹಿತರ ಬಳಿ ಪರೀಕ್ಷೆ ಮುಂದೂಡಿಕೆಯಾಗಬೇಕು. ಆಗ ನಾವು ಓದುವ ಚಿಂತೆಯೇ ಇರುವುದಿಲ್ಲ ಎಂದು ಹೇಳಿಕೊಂಡಿದ್ದ ಎಂದು ಸಿಬಿಐ ಹೇಳಿದೆ. ಈತನ ಶಾಲೆಯ ರೆಕಾರ್ಡ್ ನೋಡಿದ್ರೆ ಈತ ಒಳ್ಳೆಯ ವಿದ್ಯಾರ್ಥಿಯಾಗಿರಲಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

    ಶಾಲೆಗೆ ಚಾಕು ತರುತ್ತಿದ್ದ: ಘಟನೆಯ ಸಿಸಿಟಿವಿ ದೃಶ್ಯಾವಳಿಯಲ್ಲಿ ಪ್ರದ್ಯುಮನ್ ಜೊತೆ ಟಾಯ್ಲೆಟ್ ಪ್ರವೇಶಿಸಿದ ಐವರಲ್ಲಿ ಈ ವಿದ್ಯಾರ್ಥಿಯೂ ಒಬ್ಬನಾಗಿದ್ದ ಎಂದು ಮೂಲಗಳು ಹೇಳಿವೆ. ಪ್ರದ್ಯುಮನ್‍ ನನ್ನು ಕೊಲೆ ಮಾಡಲು ಬಳಸಲಾಗಿರಬಹುದಾದ ಚಾಕು ಕಮೋಡ್‍ ನಲ್ಲಿ ಪತ್ತೆಯಾಗಿತ್ತು. ಆರೋಪಿ ವಿದ್ಯಾರ್ಥಿಯು ಶಾಲೆಗೆ ಚಾಕು ತೆಗೆದುಕೊಂಡು ಬರುತ್ತಿದ್ದುದನ್ನು ಶಿಕ್ಷಕರು ಹಾಗೂ ಆತನ ಸಹಪಾಠಿಗಳು ನೋಡಿದ್ದರು ಎಂಬುದನ್ನು ಸಿಬಿಐ ಪತ್ತೆಹಚ್ಚಿದೆ.

    ಆರೋಪಿ ವಿದ್ಯಾರ್ಥಿಯ ತಂದೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಕಳೆದ ರಾತ್ರಿ ನನ್ನ ಮಗನನ್ನು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಶಕ್ಕೆ ಪಡೆಯಲಾಗ್ತಿದೆ ಎಂದು ಕರೆ ಬಂತು. ನನ್ನ ಮಗ ಈ ಕೃತ್ಯವೆಸಗಿಲ್ಲ. ನಾವು ಪೊಲೀಸರ ವಿಚಾರಣೆಗೆ ಸಹಕರಿಸುತ್ತಿದ್ದೇವೆ. ನನ್ನ ಮಗನನ್ನು 4 ಬಾರಿ ವಿಚಾರಣೆ ಮಾಡಲಾಗಿದೆ. ನಮ್ಮ ಮನೆಗೆ ಬಂದು ಕೂಡ ವಿಚಾರಣೆ ಮಾಡಿದ್ದಾರೆ. ನಿನ್ನೆ ಮಧ್ಯರಾತ್ರಿವರೆಗೆ ನನ್ನನ್ನು ಅವರ ಕಚೇರಿಯಲ್ಲಿ ಕೂರಿಸಿಕೊಂಡಿದ್ದರು. ನಿಮ್ಮ ಮಗ ಕೊಲೆ ಮಾಡಿದ್ದಾನೆ. ಆತನನ್ನು ಬಂಧಿಸುತ್ತಿದ್ದೇವೆ ಎಂದು ಹೇಳಿದ್ರು. ಆತನ ತಪ್ಪೊಪ್ಪಿಗೆಗೆ ನೀವು ಸಹಿ ಮಾಡಬೇಕೆಂದು ಹೇಳಿದ್ರು. ನಾನು ಮಧ್ಯರಾತ್ರಿ 2 ಗಂಟೆಗೆ ಅಲ್ಲಿಂದ ಹೊರಟೆ ಎಂದು ಹೇಳಿದ್ದಾರೆ.

    ಈ ಹಿಂದೆ ಶಾಲೆಯ ಬಸ್ ಕಂಡಕ್ಟರ್ ಅಶೋಕ್ ಕುಮಾರ್‍ನನ್ನು ಬಂಧಿಸಲಾಗಿತ್ತು. ಲೈಂಗಿಕ ಕ್ರಿಯೆಗೆ ಒಪ್ಪದ್ದಕ್ಕೆ ಕೊಲೆ ಮಾಡಿದ್ದೇನೆಂದು ಅಶೋಕ್ ಕುಮಾರ್ ಹೇಳಿಕೆ ನೀಡಿದ್ದ. ಆದ್ರೆ ಈಗಲೂ ಆತನಿಗೆ ಸಂಪೂರ್ಣವಾಗಿ ಪ್ರಕರಣದಿಂದ ರಿಲೀಫ್ ಸಿಕ್ಕಿಲ್ಲ. ಸದ್ಯಕ್ಕೆ ಸಿಬಿಐ ವಿದ್ಯಾರ್ಥಿಯ ಮೇಲೆ ಗಮನ ಕೇಂದ್ರೀಕರಿಸಿದೆ ಎಂದು ವರದಿಯಾಗಿದೆ.

    ಈ ಪ್ರಕರಣದಲ್ಲಿ ಶಾಲೆಯ ಆಡಳಿತ ಮಂಡಳಿ ಸತ್ಯ ಮುಚ್ಚಿಡುವ ಪ್ರಯತ್ನ ಮಾಡುತ್ತಿದೆ. ಪೊಲೀಸರು ಸರಿಯಾಗಿ ತನಿಖೆ ಮಡಿಲ್ಲ ಎಂದು ಪ್ರದ್ಯುಮನ್ ಪೋಷಕರು ಆರೋಪಿಸಿದ್ದರು. ಪೋಷಕರ ಒತ್ತಾಯದ ನಂತರ ಹರ್ಯಾಣ ಸರ್ಕಾರ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿತ್ತು.

    ಸೆಪ್ಟೆಂಬರ್ 22ರಂದು ಸಿಬಿಐ ಈ ಪ್ರಕರಣವನ್ನು ಕೈಗೆತ್ತಿಕೊಂಡು, ಸಿಸಿಟಿವಿ ದೃಶ್ಯಾವಳಿ ಹಾಗೂ ಫೋರೆನ್ಸಿಕ್ ಸಾಕ್ಷಿಯನ್ನು ಮರುಪರಿಶೀಲನೆ ಮಾಡಿತ್ತು.

  • ಜನಾರ್ದನ ರೆಡ್ಡಿ ಮಗಳ ಮದ್ವೆ ಮುಗಿದು ವರ್ಷದ ಬಳಿಕ ವಿವಾದ – ಸಿವಿಸಿಯಿಂದ ಸಿಬಿಐಗೆ ಪತ್ರ

    ಜನಾರ್ದನ ರೆಡ್ಡಿ ಮಗಳ ಮದ್ವೆ ಮುಗಿದು ವರ್ಷದ ಬಳಿಕ ವಿವಾದ – ಸಿವಿಸಿಯಿಂದ ಸಿಬಿಐಗೆ ಪತ್ರ

    ಬಳ್ಳಾರಿ: ಮಾಜಿ ಸಚಿವ ಜನಾರ್ದನರೆಡ್ಡಿ ಪುತ್ರಿಯ ಮದುವೆ ಮುಗಿದು ವರ್ಷವೇ ಕಳೆದಿದೆ. ಆದ್ರೆ ರೆಡ್ಡಿ ಮಗಳ ಮದುವೆಯ ವಿವಾದ ಮಾತ್ರ ಇನ್ನೂ ಮುಗಿಯುತ್ತಿಲ್ಲ.

    ಪುತ್ರಿ ಬ್ರಹ್ಮಣಿಯ ವಿವಾಹಕ್ಕೆ ನೂರಾರು ಕೋಟಿ ಖರ್ಚು ಮಾಡಿದ ಬಗ್ಗೆ ದೂರು ನೀಡಿದ್ರೂ ತನಿಖೆ ನಡೆಸದ ಸಿಬಿಐ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕೇಂದ್ರ ಜಾಗೃತ ಆಯೋಗ (ಸಿವಿಸಿ) ಸೆಕ್ಷನ್ ಆಫೀಸರ್ ಅರವಿಂದ ಕುಮಾರ್ ಸಿಬಿಐನ ಜಂಟಿ ನಿರ್ದೇಶಕ ಎ.ಕೆ ಶರ್ಮಾರವರಿಗೆ ಪತ್ರ ಬರೆದಿದ್ದಾರೆ. ಈ ಕುರಿತು ಅಕ್ಟೋಬರ್ 25ರಂದು ಬರೆದಿರುವ ಪತ್ರದ ಪ್ರತಿ ಇದೀಗ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಮಾಜಿ ಸಚಿವ ಜನಾರ್ದನರೆಡ್ಡಿ ತಮ್ಮ ಪುತ್ರಿಯ ಮದುವೆಗೆ ನೂರಾರು ಕೋಟಿ ಹಣ ಖರ್ಚು ಮಾಡಿದ್ದರು. ಈ ಮದುವೆ ಖರ್ಚಿಗೆ ಓಬಳಾಪುರ ಮೈನಿಂಗ್ ಕಂಪನಿಯ ಅಂಗಸಂಸ್ಥೆಯಾದ ಟ್ಯೂಬೂಲಾರ್ ರೆವಿಟ್ ಪ್ರೈವೇಟ್ ಲಿಮಿಟೆಡ್ ಹಾಗೂ ಮಿದಿತಾ ಎಂಟರ್ ಪ್ರೈಸಸ್ ಕಂಪನಿಗಳ ಆದಾಯವೇ ಮೂಲವೆಂದು ತಿಳಿಸಿದ್ದರು.

    ಆದ್ರೆ ಸಿಬಿಐ ಅಧಿಕಾರಿಗಳ ಪ್ರಕಾರ ಓಬಳಾಪುರ ಮೈನಿಂಗ್ ಕಂಪನಿ ಅಸ್ಥಿತ್ವದಲ್ಲಿಲ್ಲ, ಹೀಗಾಗಿ ಮಗಳ ಮದುವೆಗೆ ಬೇನಾಮಿ ಹಣ ಖರ್ಚು ಮಾಡಿದ ಬಗ್ಗೆ ಗಣಿ ಉದ್ಯಮಿ ಟಪಾಲ ಗಣೇಶ್ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ತನಿಖೆ ನಡೆಸುವಂತೆ ಒತ್ತಾಯಿಸಿದ್ದರು. ಈ ಪತ್ರದ ಆಧಾರದ ಮೇಲೆ ಇದೀಗ ಸಿವಿಸಿ ತನಿಖೆ ನಡೆಸಲು ಮುಂದಾಗಿದ್ದು, ರೆಡ್ಡಿಗೆ ಮತ್ತಷ್ಟು ಸಂಕಷ್ಟ ತಂದಿದೆ.

    https://www.youtube.com/watch?v=gSJ3qGxzb9E

    https://www.youtube.com/watch?v=Y6SdnI1txBc

    https://www.youtube.com/watch?v=_DhPa8YfeIs

  • ಬಿಜೆಪಿಯನ್ನ ಅಲುಗಾಡಿಸಲು ಸಿದ್ದವಾಗಿದೆ ಸೂತ್ರ- ಸಿಬಿಐ ಕೈಬಿಟ್ಟದ್ದ ಅಕ್ರಮ ಅದಿರು ಪ್ರಕರಣವನ್ನು ಎಸ್‍ಐಟಿಗೆ ವಹಿಸಲು ರಾಜ್ಯ ಸರ್ಕಾರ ಚಿಂತನೆ

    ಬಿಜೆಪಿಯನ್ನ ಅಲುಗಾಡಿಸಲು ಸಿದ್ದವಾಗಿದೆ ಸೂತ್ರ- ಸಿಬಿಐ ಕೈಬಿಟ್ಟದ್ದ ಅಕ್ರಮ ಅದಿರು ಪ್ರಕರಣವನ್ನು ಎಸ್‍ಐಟಿಗೆ ವಹಿಸಲು ರಾಜ್ಯ ಸರ್ಕಾರ ಚಿಂತನೆ

    ಬೆಂಗಳೂರು: ಕರ್ನಾಟಕದ ರಾಜಕಾರಣದಲ್ಲಿ ಮತ್ತೆ ಗಣಿ ಗದ್ದಲ ಶುರುವಾಗಿದೆ. ಸಿಬಿಐ ಕೈಬಿಟ್ಟದ್ದ ಅಕ್ರಮ ಅದಿರು ಪ್ರಕರಣವನ್ನು ಎಸ್‍ಐಟಿ ಗೆ ವಹಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.

    ಎರಡು ಮಹತ್ವದ ಪ್ರಕರಣಗಳನ್ನು ಸಿಬಿಐ ಕೈಬಿಟ್ಟಿತ್ತು. ಕಾರವಾರ, ಮಂಗಳೂರು ಬಂದರಿನಲ್ಲಿ ಅಕ್ರಮ ರಫ್ತು ಪ್ರಕರಣವನ್ನು ಸಿಬಿಐ ಸೂಕ್ತ ಸಾಕ್ಷ್ಯಗಳಿಲ್ಲ ಎಂದು ಕೈಬಿಟ್ಟಿತ್ತು. ಈ ಸಹಸ್ರಾರು ಕೋಟಿ ಪ್ರಕರಣದ ಹಿಂದೆ ಕಳ್ಳ ಕುಳಗಳೇ ಇದ್ದು, ನರೇಂದ್ರ ಮೋದಿ, ಅಮಿತ್ ಶಾ ಜೊತೆ ಇರುವ ಉದ್ಯಮಿಗಳು ಶಾಮೀಲಾಗಿದ್ದಾರೆ ಎನ್ನಲಾಗಿದೆ.

    ಉದ್ಯಮಿಗಳ ಮೇಲೆ ಎಸ್‍ಐಟಿ ಅಸ್ತ್ರ ಪ್ರಯೋಗಕ್ಕೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಬಿಜೆಪಿಯ ಹಣಬಲಕ್ಕೆ ಬ್ರೇಕ್ ಹಾಕಲು ಈ ಪ್ಲ್ಯಾನ್ ಮಾಡಿದೆ. ಬಿಜೆಪಿಯ ಐಟಿ ಶಸ್ತ್ರಕ್ಕೆ ಪ್ರತಿಯಾಗಿ ಎಸ್‍ಐಟಿ ಶಸ್ತ್ರ ಬಳಸಲು ಮುಂದಾಗಿದೆ. ನವೆಂಬರ್ 8ರ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಅಂತಿಮ ತೀರ್ಮಾನವಾಗುವ ಸಾಧ್ಯತೆ ಇದೆ.

  • ಬಹುಕೋಟಿ ಲಾಟರಿ ಹಗರಣ- ಐಜಿಪಿ ಅಲೋಕ್‍ಕುಮಾರ್‍ಗೆ ಕ್ಲೀನ್‍ಚಿಟ್

    ಬಹುಕೋಟಿ ಲಾಟರಿ ಹಗರಣ- ಐಜಿಪಿ ಅಲೋಕ್‍ಕುಮಾರ್‍ಗೆ ಕ್ಲೀನ್‍ಚಿಟ್

    ಬೆಂಗಳೂರು: ಬಹುಕೋಟಿ ಲಾಟರಿ ಹಗರಣದಲ್ಲಿ ಐಜಿಪಿ ಅಲೋಕ್‍ಕುಮಾರ್‍ಗೆ ಕ್ಲೀನ್‍ಚಿಟ್ ನೀಡುತ್ತಿದ್ದಾರೆ. ಹಗರಣದ ಕುರಿತಂತೆ ಈಗಾಗಲೇ ತನಿಖೆಯನ್ನು ನಡೆಸಿರೋ ಸಿಬಿಐ ಅಧಿಕಾರಿಗಳು ವರದಿಯನ್ನು ತಯಾರು ಮಾಡಿದ್ದಾರೆ ಎಂದು ತಿಳಿದುಬಂದಿದೆ.

    ಲಾಟರಿ ಹಗರಣದ ಸೂತ್ರಧಾರಿ ಪಾರಿರಾಜನ್ ಜೊತೆಯಲ್ಲಿ ನಿಕಟ ಸಂಪರ್ಕ ಹೊಂದಿದ್ದಾರೆ ಮತ್ತು ಹಗರಣದಲ್ಲಿ ಭಾಗಿಯಾಗಿದ್ದಾರೆ ಅಂತ ಹೇಳಲಾಗಿತ್ತು. ಖುದ್ದು ಅಲೋಕ್‍ಕುಮಾರ್ ಪಾರಿರಾಜನ್ ನನ್ನ ಹಿತೈಷಿ ಅಂತ ಹೇಳಿಕೆ ನೀಡಿದ್ರು. ಈ ಹೇಳಿಕೆಯ ನಂತರ ಸರ್ಕಾರ ಅಲೋಕ್ ಕುಮಾರ್ ಅವರನ್ನು ಅಮಾನತಿನಲ್ಲಿ ಇಟ್ಟಿತ್ತು.

    ಬಳಿಕ ಸಿಬಿಐ ಅಧಿಕಾರಿಗಳು ಪೊಲೀಸ್ ಮಹಾನಿರ್ದೇಶಕರು ಸೇರಿದಂತೆ ಹಗರಣದಲ್ಲಿ ಭಾಗಿಯಾಗಿದ್ದಾರೆ ಅನ್ನಲಾಗಿರೋ ಎಲ್ಲರನ್ನು ವಿಚಾರಣೆ ಮಾಡಿದ್ರು. ಈ ವೇಳೆ ಪಾರಿರಾಜನ್ ಮತ್ತು ಅಲೋಕ್‍ಕುಮಾರ್ ನಡುವೆ ಬರೀ ಸ್ನೇಹ ಇತ್ತು ಅನ್ನೋ ವಿಚಾರ ತಿಳಿದಿದ್ದು, ಈ ಹಿನ್ನೆಲೆಯಲ್ಲಿ ಕ್ಲೀನ್‍ಚಿಟ್ ನೀಡುತ್ತಿದ್ದಾರೆ ಎನ್ನಲಾಗಿದೆ.

    ಇನ್ನು ಐಜಿಪಿ ಪದ್ಮನಯನ ಅವರ ಮೇಲೆಯೇ ಪ್ರಕರಣ ದಾಖಲಿಸಬೇಕು ಅಂತ ಅಭಿಪ್ರಾಯಪಟ್ಟಿದೆ. ವಿಜಯನಗರದ ಸರ್ಕಾರಿ ಮುದ್ರಣಾಲಯದಲ್ಲಿ ಲಾಟರಿಗಳನ್ನು ತೆಗೆದುಕೊಂಡು ಹೋಗಿ ಪಾರಿರಾಜನ್ ಮನೆಯಲ್ಲಿ ಇಟ್ಟು ಆರೋಪಿ ಬಂಧನ ಮಾಡಿದ್ದಾರೆ ಅನ್ನೋ ಮಾಹಿತಿಯ ಮೇರೆಗೆ ಪದ್ಮನಯನ ಅವರ ವಿರುದ್ಧವೇ ಪ್ರಕರಣ ದಾಖಲಿಸೋ ಎಲ್ಲಾ ಸಾಧ್ಯತೆಗಳಿವೆ. ಸದ್ಯ ಪ್ರಕರಣದ ತನಿಖೆ ಮುಕ್ತಾಯಗೊಂಡಿದ್ದು, ಕೆಲವೇ ದಿನಗಳ ನಂತ್ರ ನ್ಯಾಯಾಲಯಕ್ಕೆ ವರದಿ ಸಲ್ಲಿಕೆ ಮಾಡಲಿದ್ದಾರೆ.

  • ಗಣಪತಿ ಕೇಸಲ್ಲಿ ಜಾರ್ಜ್ ಮೊದಲ ಆರೋಪಿ- ಇಂದು ಮಡಿಕೇರಿ, ಬೆಂಗ್ಳೂರಿಗೆ ಸಿಬಿಐ

    ಗಣಪತಿ ಕೇಸಲ್ಲಿ ಜಾರ್ಜ್ ಮೊದಲ ಆರೋಪಿ- ಇಂದು ಮಡಿಕೇರಿ, ಬೆಂಗ್ಳೂರಿಗೆ ಸಿಬಿಐ

    ಬೆಂಗಳೂರು: ಡಿವೈಎಸ್‍ಪಿ ಎಂಕೆ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಗುರುವಾರವಷ್ಟೇ ಬೆಂಗಳೂರು ಅಭಿವೃದ್ಧಿ ಸಚಿವ ಕೆಜೆ ಜಾರ್ಜ್ ವಿರುದ್ಧ ಎಫ್‍ಐಆರ್ ದಾಖಲಿಸಿರುವ ಸಿಬಿಐ ತನಿಖೆ ಚುರುಕುಗೊಳಿಸಲಿದೆ.

    ಸಿಬಿಐ ಅಧಿಕಾರಿಗಳ ತಂಡ ಇಂದು ಮಧ್ಯಾಹ್ನದೊಳಗೆ ಬೆಂಗಳೂರು ಮತ್ತು ಮಡಿಕೇರಿಗೆ ತಲುಪುವ ಸಾಧ್ಯತೆ ಇದ್ದು ಮಹತ್ವದ ಮಾಹಿತಿಗಳನ್ನು ಸಂಗ್ರಹಿಸಲಿದ್ದಾರೆ. ಜಾರ್ಜ್, ಗುಪ್ತಚರ ದಳ ಡಿಜಿ ಪ್ರಣವ್ ಮೊಹಾಂತಿಗೆ ಎರಡು ದಿನಗಳ ಒಳಗಾಗಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡೋ ಸಾಧ್ಯತೆ ಇದೆ.

    ಇತ್ತ ಬಂಧನದ ಭೀತಿಯಲ್ಲಿರುವ ಜಾರ್ಜ್ ಕೂಡಾ ಇಂದೇ ಕೋರ್ಟ್‍ಗೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಬಹುದು. ನಾನು ಸಮಾಜದಲ್ಲಿ ಗುರುತಿಸಿಕೊಂಡಿರುವ ಪ್ರತಿಷ್ಠಿತ ವ್ಯಕ್ತಿಯಾಗಿದ್ದು, ಬಂಧನವಾದ್ರೆ ಮಾನಹಾನಿಯಾಗುತ್ತೆ ಅಂತಾ ವಾದಿಸಿ ನಿರೀಕ್ಷಣಾ ಜಾಮೀನು ಕೋರಬಹುದು. ಆಗ ಸಿಬಿಐ ಜಾರ್ಜ್ ಅರ್ಜಿಗೆ ಆಕ್ಷೇಪಣೆ ಸಲ್ಲಿಸಬಹುದು.

    ನಿರೀಕ್ಷಣಾ ಜಾಮೀನು ನೀಡಿದ್ರೆ ಮೂವರು ಆರೋಪಿಗಳು ಪ್ರಭಾವಿಗಳಾಗಿರುವ ಕಾರಣ ಸಾಕ್ಷ್ಯನಾಶ ಮತ್ತು ಒತ್ತಡ ಹೇರುವ ಸಾಧ್ಯತೆ ಇದೆ ಅನ್ನೋ ವಾದವನ್ನು ಸಿಬಿಐ ವಕೀಲರು ಮಂಡಿಸಬಹುದು. ಹೀಗಾಗಿ ಬಂಧನಕ್ಕೆ ಅವಕಾಶ ನೀಡುವಂತೆ ಮನವಿ ಮಾಡಬಹುದು. ಅಲ್ಲದೇ ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳನ್ನು ವಿಚಾರಣೆ ಮುಗಿಯುವವರೆಗೆ ಅಮಾನತಿನಲ್ಲಿಡುವಂತೆ ಕೋರಬಹುದು ಎಂಬುದಾಗಿ ತಿಳಿದುಬಂದಿದೆ.

    ಇದನ್ನೂ ಓದಿ: ಡಿವೈಎಸ್ಪಿ ಗಣಪತಿ ಕೇಸಲ್ಲಿ ಸಿಬಿಐ ಎಫ್.ಐ.ಆರ್ – ಮತ್ತೆ ಸಂಕಷ್ಟದಲ್ಲಿ ಜಾರ್ಜ್

    ಸಿಬಿಐನಿಂದ ಎಫ್‍ಐಆರ್ ದಾಖಲಾಗಿರೋ ಹೊರತಾಗಿಯೂ ಕಾಂಗ್ರೆಸ್ ಸಚಿವ ಜಾರ್ಜ್ ರಾಜೀನಾಮೆ ಪಡೆಯೋ ಸಾಧ್ಯತೆ ಇಲ್ಲ. ಇದು ನಮ್ಮ ನಾಯಕರ ವಿರುದ್ಧ ಪ್ರಧಾನಿ ಮೋದಿ ಸರ್ಕಾರ ಮಾಡ್ತಿರೋ ಕುತಂತ್ರ. ಚುನಾವಣೆ ಹೊತ್ತಲ್ಲಿ ಪ್ರತೀಕಾರದ ರಾಜಕಾರಣ ಮಾಡ್ತಿದೆ ಅಂತಾ ಕಾಂಗ್ರೆಸ್ ವಾದಿಸ್ತಿದೆ.

    ಈ ಹಿಂದೆ ಸಿಐಡಿ ತನಿಖೆ ಕೈಗೊಂಡಿದ್ದಾಗ ಜಾರ್ಜ್ ರಾಜೀನಾಮೆ ನೀಡಿದ್ರು. ಈಗ ಮತ್ತೊಮ್ಮೆ ರಾಜೀನಾಮೆ ನೀಡಿ ನಾವಾಗಿಯೇ ಬಿಜೆಪಿ ಕೈಗೆ ಮತ್ತೊಂದು ಅಸ್ತ್ರ ನೀಡೋದು ಬೇಡ ಅನ್ನೋದು ಕೈ ಲೆಕ್ಕಾಚಾರ. ಸುಪ್ರೀಂಕೋರ್ಟ್ ಸೂಚನೆಯಂತೆ ತನಿಖೆ ನಡೆಸಿ ಮೂರು ತಿಂಗಳೊಳಗೆ ಸಿಬಿಐ ವರದಿ ಸಲ್ಲಿಸಬೇಕು. ಆಗ ಒಂದು ವೇಳೆ ತಪ್ಪಿತಸ್ಥ ಅಂತಾ ಸಾಬೀತಾದಲ್ಲಿ ಮಾತ್ರ ರಾಜೀನಾಮೆ ತೆಗೆದುಕೊಳ್ಳಲು ತೀರ್ಮಾನಿಸಲಾಗಿದೆ. ಪಕ್ಷದ ನಾಯಕರ ಈ ಅಭಿಪ್ರಾಯಕ್ಕೆ ಸಿಎಂ ಸಿದ್ದರಾಮಯ್ಯ ಕೂಡಾ ಸಮ್ಮತಿ ಸೂಚಿಸಿದ್ದಾರೆ ಎನ್ನಲಾಗಿದೆ.

     

  • ಅದಿರು ಹಗರಣ ಸಾಬೀತಿಗೆ ಸಾಕ್ಷ್ಯವೇ ಇಲ್ಲ – ಬಳ್ಳಾರಿ ಗಣಿ ಹಗರಣ ಕೇಸ್ ಕ್ಲೋಸ್..?

    ಅದಿರು ಹಗರಣ ಸಾಬೀತಿಗೆ ಸಾಕ್ಷ್ಯವೇ ಇಲ್ಲ – ಬಳ್ಳಾರಿ ಗಣಿ ಹಗರಣ ಕೇಸ್ ಕ್ಲೋಸ್..?

    -ಎಲೆಕ್ಷನ್ ಹೊತ್ತಲ್ಲಿ ರೆಡ್ಡಿ ಬ್ರದರ್ಸ್ ಬಚಾವ್..?

    ಬೆಂಗಳೂರು: ಕರ್ನಾಟಕದ ರಾಜಕಾರಣವನ್ನೇ ತಲ್ಲಣಿಸಿದ್ದ ಬಹುಕೋಟಿ ಗಣಿಗಾರಿಕೆ ಹಗರಣಕ್ಕೆ ಸಂಬಂಧಿಸಿದ ಪ್ರಕರಣದ ತನಿಖೆಯನ್ನು ಸಿಬಿಐ ಸದ್ದಿಲ್ಲದೆ ಕೊನೆಮಾಡುತ್ತಿದೆ.

    ಮೊದಲ ಬಾರಿಗೆ ಅಧಿಕಾರದಲ್ಲಿದ್ದ ಬಿಜೆಪಿಗೆ ಕಂಟಕವಾಗಿದ್ದ ಈ ಹಗರಣವನ್ನು ತನಿಖೆ ಮಾಡುವಂತೆ ಸಿಬಿಐಗೆ ಒಪ್ಪಿಸಲಾಗಿತ್ತು. ಆಂಧ್ರ ಪ್ರದೇಶ, ಮಂಗಳೂರು, ಗೋವಾ, ಮತ್ತು ಕೃಷ್ಣಪಟ್ಟಣ ಬಂದರುಗಳಿಂದ ಅಕ್ರಮ ಅದಿರಿನ ರಫ್ತು ನಡೆಯುತ್ತಿದ್ದು, ಅಲ್ಲಿಂದನೇ ಪ್ರಾಥಮಿಕ ಶೋಧ ಕಾರ್ಯಚರಣೆ ಆರಂಭವಾಗಿದೆ. ಆದರೆ ಮೊದಲ ಹಂತದಲ್ಲಿಯೇ ಸಿಬಿಐಗೆ ಪ್ರಕರಣಗಳಿಗೆ ಸಂಬಂಧಿಸಿಂತೆ ಯಾವುದೇ ಸಾಕ್ಷ್ಯಗಳು ಸಿಕ್ಕಿಲ್ಲ ಎಂದು ಕೈ ಚೆಲ್ಲಿ ಕುಳಿತಿದೆ.

    ಸುಪ್ರೀಂ ಕೋರ್ಟ್ ಈ ಹಗರಣದ ಬಗ್ಗೆ ಹೆಚ್ಚಿನ ತನಿಖೆ ನಡೆಸುವಂತೆ ಆದೇಶ ನೀಡಿದಾಗ ಸಿಬಿಐ, ಜನಾರ್ದನ ರೆಡ್ಡಿ ಮತ್ತು ಅಕ್ರಮ ಗಣಿಗಾರಿಕೆಯೊಂದಿಗೆ ಸಂಪರ್ಕ ಹೊಂದಿದೆ ಎಂದು ಹೇಳಲಾದ ಕಂಪನಿಗಳ ವಿರುದ್ಧ ಚಾರ್ಜ್ ಸೀಟ್‍ಗಳನ್ನು ಹಾಕಲಾಗಿತ್ತು.

    ಅಕ್ರಮ ಗಣಿಗಾರಿಕೆ ಕರ್ನಾಟಕದ ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದ್ದು, 2012 ರಲ್ಲಿ ಸಚಿವಾಲಯ ಸುಮಾರು 25 ಸಾವಿರ ಕೋಟಿ ರೂ. ನಷ್ಟ ಅನುಭವಿಸಿದೆ ಎಂದು ಅಂದಾಜಿಸಿ ಸಿಬಿಐ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿದೆ.

    ಸಿಬಿಐ ಸಲ್ಲಿದ ವದರಿಯ ಪ್ರಕಾರ, ಆಂಧ್ರ ಪ್ರದೇಶ, ಗೋವಾ ಮತ್ತು ಕರ್ನಾಟಕ ಸಿಬಿಐನ ಅಧಿಕಾರಿಗಳು ಪ್ರಕರಣವನ್ನು ಮುಚ್ಚುವಂತೆ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ಲದೇ ಪ್ರಾಥಮಿಕ ಹಂತದಲ್ಲಿಯೇ ಅಕ್ರಮ ಗಣಿಗಾರಿಕೆ ಸಾಬೀತಿಗೆ ಸಾಕ್ಷ್ಯಗಳೇ ಇಲ್ಲವೆಂದು ಸಿಬಿಐ ತನಿಖಾಧಿಕಾರಿಗಳಿಂದ ಮೇಲಾಧಿಕಾರಿಗಳಿಗೆ ಮಾಹಿತಿ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಲೋಕಾಯುಕ್ತ ವರದಿಯಲ್ಲಿ ಏನಿತ್ತು?

    * 2006 ರಿಂದ 2010ರವರೆಗೆ 12.57 ಕೋಟಿ ಮೆಟ್ರಿಕ್ ಟನ್ ಕಬ್ಬಿಣದ ಅದಿರು ಸಾಗಾಟ
    * ಇದರಲ್ಲಿ 2.98 ಕೋಟಿ ಮೆಟ್ರಿಕ್ ಟನ್‍ನಷ್ಟು ಪ್ರಮಾಣದ ಕಬ್ಬಿಣದ ಅದಿರು ಅಕ್ರಮ ಸಾಗಾಟ
    * ಸುಪ್ರೀಂ ಕೋರ್ಟ್ ಆದೇಶದಂತೆ ಸಿಬಿಐನಿಂದ ತನಿಖೆ, ಆರೋಪಪಟ್ಟಿ ಸಲ್ಲಿಕೆ
    * ಮಾಜಿ ಸಚಿವ ಜನಾರ್ದನ ರೆಡ್ಡಿ ಸೇರಿ ಪ್ರಮುಖರ ವಿರುದ್ಧ ಎಫ್‍ಐಆರ್, ಬಂಧನ
    * ಬೇಲೆಕೇರಿ, ನವ ಮಂಗಳೂರು ಬಂದರಿಂದ 50 ಸಾವಿರ ಮೆಟ್ರಿಕ್ ಟನ್‍ನ್ನಷ್ಟು ಅಕ್ರಮವಾಗಿ ಅದಿರು ಸಾಗಾಟ
    * ಸುಪ್ರೀಂಕೋರ್ಟ್ ಆದೇಶದಂತೆ ಕರ್ನಾಟಕ ಸರ್ಕಾರದಿಂದ ಎಸ್‍ಐಟಿ ಸ್ಥಾಪನೆ


  • ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಪ್ರಕರಣ- ಫುಲ್ ರಿಪೋರ್ಟ್ ನೀಡುವಂತೆ ಸಿಐಡಿಗೆ ಸಿಬಿಐ ಪತ್ರ

    ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಪ್ರಕರಣ- ಫುಲ್ ರಿಪೋರ್ಟ್ ನೀಡುವಂತೆ ಸಿಐಡಿಗೆ ಸಿಬಿಐ ಪತ್ರ

    ಬೆಂಗಳೂರು: ಡಿವೈಎಸ್‍ಪಿ ಎಂಕೆ ಗಣಪತಿ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪೂರ್ಣ ವರದಿ ನೀಡುವಂತೆ ಸಿಐಡಿಗೆ ಸಿಬಿಐ ನಿರ್ದೇಶಕರು ಪತ್ರ ಬರೆದಿದ್ದಾರೆ.

    ಸಿಬಿಐ ಬರೆದಿರೋ ಈ ಪತ್ರ ಇತ್ತೀಚೆಗಷ್ಟೇ ಸಿಐಡಿ ಡಿಜಿಪಿ ಕಿಶೋರ್ ಚಂದ್ರ ಅವರ ಕೈ ಸೇರಿದೆ. ಪತ್ರದಲ್ಲಿ ಚೆನೈನ ಸಿಬಿಐ ವಿಶೇಷ ಅಪರಾಧ ವಿಭಾಗಕ್ಕೆ ಕಡತಗಳನ್ನು ಹಸ್ತಾಂತರಿಸುವಂತೆ ಸೂಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇದೀಗ ಸಿಐಡಿ ಕಡತಗಳನ್ನು ಕ್ರೂಢೀಕರಿಸಿ, ಎಂ.ಕೆ.ಗಣಪತಿ ಅವರ ಪ್ರಕರಣದ ತನಿಖಾ ವರದಿಯನ್ನು ಹಸ್ತಾಂತರಿಸುವ ಪ್ರಕ್ರಿಯೆಯಲ್ಲಿ ತೊಡಗಿದೆ. ಒಂದೆರಡು ದಿನಗಳಲ್ಲಿ ಸಿಬಿಐಗೆ ಕೇಸ್ ಫೈಲ್ ಹಸ್ತಾಂತರ ಮಾಡಲಿದೆ ಎಂಬುದಾಗಿ ತಿಳಿದುಬಂದಿದೆ.

    ಈ ಹಿಂದೆ ಸಿಐಡಿ ಪ್ರಕರಣದ ತನಿಖೆ ನಡೆಸಿ ಕೆಲವು ಮಹತ್ವದ ಸಾಕ್ಷಾಧಾರಗಳನ್ನು ವಶಕ್ಕೆ ಪಡೆದಿತ್ತು. ಈ ಪ್ರಕರಣದಲ್ಲಿ ಸಚಿವರೊಬ್ಬರು ಸೇರಿ ಐಪಿಎಸ್ ಅಧಿಕಾರಿಗಳಾದ ಆಶಿಷ್ ಮೋಹನ್ ಪ್ರಸಾದ್, ಪ್ರಣಬ್ ಮೋಹಂತಿ ಅವರೇ ನೇರ ಹೊಣೆ ಅಂತ ಗಣಪತಿ ಅವರು ಆರೋಪಿಸಿದ್ದರು. ಸಾವಿಗೂ ಮುನ್ನ ಡಿವೈಎಸ್‍ಪಿ ಗಣಪತಿ ಖಾಸಗಿ ವಾಹಿನಿಗೆ ಸಂದರ್ಶನ ನೀಡಿದ್ದ ವೇಳೆ ಈ ಆರೋಪ ಮಾಡಿದ್ದರು. ಈ ಪ್ರಕರಣಕ್ಕೆ ಸಿಐಡಿ ಬಿ ರಿಪೋರ್ಟ್ ಸಲ್ಲಿಕೆ ಮಾಡಿತ್ತು. ಇದೀಗ ಸಿಬಿಐ ಸೂಚನೆಯಂತೆ ಮುಂದಿನ ವಾರ ಚನ್ನೈನ ಸಿಬಿಐ ಕಚೇರಿಗೆ ಸಂಬಂಧಪಟ್ಟಂತಹ ದಾಖಲೆಗಳನ್ನು ಕಳುಹಿಸಿಕೊಡಲಾಗುವುದು ಎಂದು ಸಿಐಡಿ ಡಿಜಿ ಕಿಶೋರ್ ಚಂದ್ರ ಸ್ಪಷ್ಟನೆ ನೀಡಿದ್ದಾರೆ.

    ಇದನ್ನೂ ಓದಿ: ಗಣಪತಿ ಕೇಸ್: ಸುಪ್ರೀಂ ನ್ಯಾಯಮೂರ್ತಿಗಳ ಪ್ರಶ್ನೆಗಳಿಗೆ ಸರ್ಕಾರಿ ವಕೀಲರು ಸುಸ್ತು: ಕಲಾಪದ ಪೂರ್ಣ ವರದಿ ಇಲ್ಲಿದೆ

    ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಪ್ರಕರಣ ಸಿಬಿಐಗೆ ವರ್ಗಾವಣೆ ಮಾಡುವ ವಿಚಾರವಾಗಿ ಕೆಜೆ ಜಾರ್ಜ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಸಿಬಿಐ ತನಿಖೆ ಮಾಡಲಿ. ಸತ್ಯಾಂಶ ಏನೆಂದು ಹೊರಗೆ ಬರಲಿ. ಮೂರು ತಿಂಗಳಲ್ಲಿ ಸುಪ್ರೀಂ ಕೋರ್ಟ್ ರಿಪೋರ್ಟ್ ಕೊಡೋಕೆ ಹೇಳಿದ್ದಾರಲ್ಲ. ಆ ಸಂದರ್ಭದಲ್ಲಿ ಸತ್ಯಾಂಶ ಏನೆಂದು ಹೊರಬರಲಿದೆ. ವರದಿ ಬಂದ ಬಳಿಕ ನಾನು ಮಾತಾನಾಡುತ್ತೇನೆ. ಇವರೇ ಆತ್ಮಹತ್ಯೆ ಮಾಡಿಸಿದ್ದಾರೆ ಅಂತ ಸುಪ್ರೀಂ ಕೋರ್ಟ್ ಹೇಳಿಲ್ಲ ಅಲ್ವಾ ಅಂತ ಹೇಳಿದ್ರು. 

    ಕಳೆದ ತಿಂಗಳಷ್ಟೇ ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 1 ವರ್ಷದ ಬಳಿಕ ಫೊರೆನ್ಸಿಕ್ ಲ್ಯಾಬ್ ವರದಿ ಬಹಿರಂಗವಾಗಿತ್ತು. ಜುಲೈ 7, 2016 ರಂದು ಡಿವೈಎಸ್‍ಪಿ ಗಣಪತಿ ಮಡಿಕೇರಿಯ ವಿನಾಯಕ ಲಾಡ್ಜ್ ನಲ್ಲಿ ಅತ್ಮಹತ್ಯೆ ಮಾಡಿಕೊಂಡಿದ್ರು. ಅದರೆ ಅಂದು ಗಣಪತಿ ಅವರು ಲಾಡ್ಜ್ ಗೆ ಬಂದು ಹೋಗಿರುವ ಸಿಸಿಟಿವಿ ದೃಶ್ಯಗಳು ನಾಶವಾಗಿದೆ. ಅಂದಿನ ದೃಶ್ಯಗಳ ಬದಲಿಗೆ 1999, 2001, 2004, 2008, 2014, 2015 ರವರೆಗಿನ ಹಳೇ ವಿಡಿಯೋ ತುಂಬಿ, ಅಸಲಿ ವಿಡಿಯೋ ನಾಶ ಮಾಡಲಾಗಿದೆ ಅಂತ ವಿಧಿವಿಜ್ಞಾನ ಪ್ರಯೋಗಾಲಯ ವರದಿ ನೀಡಿತ್ತು.

    ಇದನ್ನೂ ಓದಿ:  ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಪ್ರಕರಣ: ಸಿಬಿಐ ತನಿಖೆಗೆ ಸುಪ್ರೀಂ ಆದೇಶ

    ಜುಲೈ 9ರಂದು ವಿಡಿಯೋ ಸಹ ರೆರ್ಕಾಡ್ ಅಗಿದ್ದು, ಅದನ್ನ ನಾಶ ಮಾಡಲಾಗಿದೆ ಅಂತ ಫೊರೆನ್ಸಿಕ್ ಲ್ಯಾಬ್ ವರದಿಯಲ್ಲಿ ಹೇಳಲಾಗಿತ್ತು. ಡಿವಿಆರ್ ಬಳಕೆಗೆ ಯೋಗ್ಯವಾಗಿದ್ದರೂ ಅವರು ಬಂದು ಹೋಗಿರುವ ದೃಶ್ಯಗಳು ರೆಕಾರ್ಡ್ ಆಗಿಲ್ಲ. ಇದರ ಬಗ್ಗೆ ವಿನಾಯಕ ಲಾಡ್ಜ್ ಅವರನ್ನು ಸಂರ್ಕಿಸಿದಾಗ ಗಣಪತಿ ಅವರು ಮೃತಪಟ್ಟ ದಿನವೇ ಪೊಲೀಸರು ಡಿವಿಆರ್ ವಶಕ್ಕೆ ತೆಗೆದುಕೊಂಡ್ರು ಅಂತ ಹೇಳಿದ್ದರು.

    ಇದನ್ನೂ ಓದಿ:    ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಕೇಸ್: ಕಂಪ್ಯೂಟರ್ ಫೈಲ್, ಫೋನ್ ಕಾಲ್ ಡಿಲೀಟ್

    https://www.youtube.com/watch?v=AGmp1M_0q2s

    https://www.youtube.com/watch?v=p2V1xEclj3g

  • ಪ್ರಭಾವಿ ಕಾಂಗ್ರೆಸ್ ಮುಖಂಡ ಆರ್‍ಎಲ್ ಜಾಲಪ್ಪ ವಿರುದ್ಧ ಸಿಬಿಐನಿಂದ ಎಫ್‍ಐಆರ್

    ಪ್ರಭಾವಿ ಕಾಂಗ್ರೆಸ್ ಮುಖಂಡ ಆರ್‍ಎಲ್ ಜಾಲಪ್ಪ ವಿರುದ್ಧ ಸಿಬಿಐನಿಂದ ಎಫ್‍ಐಆರ್

    ಬೆಂಗಳೂರು: ರಾಜ್ಯ ಕಾಂಗ್ರೆಸ್‍ಗೆ ಮತ್ತೊಂದು ಬಿಗ್ ಶಾಕ್ ಸಿಕ್ಕಿದೆ. ಕಾಂಗ್ರೆಸ್ ಪಿಲ್ಲರ್ ಅಂತಾನೇ ಫೇಮಸ್ ಆಗಿರೋ ನಾಯಕನಿಗೆ ಸಿಬಿಐ ಶಾಕ್ ನೀಡಿದೆ.

    ಭ್ರಷ್ಟಾಚಾರದ ಆರೋಪದ ಮೇಲೆ ಕಾಂಗ್ರೆಸ್‍ನ ಪ್ರಭಾವಿ ಮುಖಂಡ ಆರ್.ಎಲ್ ಜಾಲಪ್ಪ ಮೇಲೆ ಸಿಬಿಐ ಎಫ್‍ಐಆರ್ ದಾಖಲು ಮಾಡಿದೆ. ದಲಿತರು, ಹಿಂದುಳಿದವರ ಹೆಸರಲ್ಲಿ ಜಾಲಪ್ಪ ಭಾರೀ ಭ್ರಷ್ಟಾಚಾರ ಮಾಡಿದ್ದಾರೆಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ರಾಷ್ಟ್ರೀಯ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಸಿಕ್ಕಿದೆ.

    ಮೆಡಿಕಲ್ ಕಾಲೇಜು ಸೀಟು ಹಗರಣದಲ್ಲಿ ದೇವರಾಜ ಅರಸ್ ಶಿಕ್ಷಣ ಸಂಸ್ಥೆಗಳ ಮಾಲೀಕರು ಆಗಿರುವ ಆರ್.ಎಲ್.ಜಾಲಪ್ಪ ಸೇರಿದಂತೆ ಆಂಧ್ರದ ನಾಲ್ವರು ಪ್ರಭಾವಿಗಳ ವಿರುದ್ಧ ಸಿಬಿಐ ಎಫ್‍ಐಆರ್ ದಾಖಲಿಸಿದೆ. ದೇವರಾಜು ಅರಸು ಮೆಡಿಕಲ್ ಕಾಲೇಜು, ಎಜುಕೇಷನ್ ಅಂಡ್ ರೀಸರ್ಚ್ ಸಂಸ್ಥೆಯಲ್ಲಿ ಗೋಲ್‍ಮಾಲ್ ನಡೆದಿದ್ದು, ಶಿಕ್ಷಣ ಸಂಸ್ಥೆಯಲ್ಲಿ ಅನಧಿಕೃತವಾಗಿ ಮೆಡಿಕಲ್ ಕೋರ್ಸ್ ತೆರೆದ ಗಂಭೀರ ಆರೋಪ ಕೇಳಿಬಂದಿದೆ.

    ಮೆಡಿಕಲ್ ಕೋರ್ಸ್ ತೆಗೆದು ಹಿಂದುಳಿದವರ ಹೆಸರಲ್ಲಿ ಹೆಚ್ಚು ಸೀಟು ಸೃಷ್ಟಿಸಿ ಹಣ ಲೂಟಿ ಮಾಡಿದ್ದಾರೆ ಎನ್ನಲಾಗಿದೆ. ಮೆಡಿಕಲ್ ವಿದ್ಯಾರ್ಥಿಗಳ ಹೆಸರಲ್ಲಿ ಜಾಲಪ್ಪ ಶಿಕ್ಷಣ ಸಂಸ್ಥೆ ಲೂಟಿ ಮಾಡಿದ್ದು, ಈ ಬಗ್ಗೆ ಆಂಧ್ರ ಎಸಿಬಿಯಿಂದ ದಾಖಲಾದ ದೂರಿನ ಮೇಲೆ ಸಿಬಿಐನಿಂದಲೂ ಎಫ್‍ಐಆರ್ ದಾಖಲಾಗಿದೆ. ಕಾನೂನು ಬಾಹಿರವಾಗಿ ಎಂಬಿಬಿಎಸ್, ಎಂಎಸ್, ಎಂಡಿ ಕೋರ್ಸ್‍ಗಳಿಗೆ ಸೀಟು ಹಂಚಿಕೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

    ಜಾಲಪ್ಪ ಶಿಕ್ಷಣ ಸಂಸ್ಥೆಯಿಂದ ಭಾರೀ ಲಂಚ ಪಡೆದ ಆರೋಪದಲ್ಲಿ ಆರ್‍ಎಲ್ ಜಾಲಪ್ಪ ಜೊತೆ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾದ ನಾಲ್ವರ ವಿರುದ್ಧ ಸಿಬಿಐ ಎಫ್‍ಐಆರ್ ದಾಖಲಿಸಿದೆ.


    ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಆರೋಗ್ಯ ಸೇವೆಗಳ ಉಪ ನಿರ್ದೇಶಕ ಎಸ್.ಅಜಯ್‍ಕುಮಾರ್, ಕರ್ನೂಲ್ ಮೆಡಿಕಲ್ ಕಾಲೇಜಿನ ಹಿರಿಯ ಪ್ರಾಧ್ಯಾಪಕ ಡಾ. ಜಿ. ನರೇಂದ್ರ ರೆಡ್ಡಿ, ನಾಂದೇಡ್‍ನ ಮೆಡಿಕಲ್ ಕಾಲೇಜು ಪ್ರಾಧ್ಯಾಪಕರಾದ ಡಾ.ಶಂಕರ್ ರಾವ್ ಚಹ್ವಾಣ್ ಹಾಗೂ ಡಾ.ಎಸ್.ಆರ್ ವಕೋಡೆ ವಿರುದ್ಧ ಎಫ್‍ಐಆರ್ ದಾಖಲಾಗಿದೆ.