Tag: CBI Director

  • ಸಿಬಿಐ ನಿರ್ದೇಶಕರಂತಹ ಕಾರ್ಯನಿರ್ವಾಹಕ ನೇಮಕಾತಿಗಳಲ್ಲಿ ಸಿಜೆಐ ಯಾಕೆ ಭಾಗಿಯಾಗಬೇಕು – ಉಪ ರಾಷ್ಟ್ರಪತಿ ಪ್ರಶ್ನೆ

    ಸಿಬಿಐ ನಿರ್ದೇಶಕರಂತಹ ಕಾರ್ಯನಿರ್ವಾಹಕ ನೇಮಕಾತಿಗಳಲ್ಲಿ ಸಿಜೆಐ ಯಾಕೆ ಭಾಗಿಯಾಗಬೇಕು – ಉಪ ರಾಷ್ಟ್ರಪತಿ ಪ್ರಶ್ನೆ

    ನವದೆಹಲಿ: ಸಿಬಿಐ ನಿರ್ದೇಶಕರಂತಹ ಕಾರ್ಯನಿರ್ವಾಹಕ ನೇಮಕಾತಿಗಳಲ್ಲಿ (Executive Appointments) ಭಾರತದ ಮುಖ್ಯ ನ್ಯಾಯಮೂರ್ತಿ ಯಾಕೆ ಭಾಗಿಯಾಗಬೇಕು ಎಂದು ಅಚ್ಚರಿ ವ್ಯಕ್ತಪಡಿಸಿರುವ ಉಪ ರಾಷ್ಟ್ರಪತಿ ಜಗದೀಪ್ ಧನಕರ್ (Jagdeep Dhankhar), ಅಂತಹ ನಿಯಮಗಳನ್ನು ಮರುಪರಿಶೀಲಿಸುವ ಸಮಯ ಬಂದಿದೆ ಎಂದು ಹೇಳಿದ್ದಾರೆ.

    ಭೋಪಾಲ್‌ನ ರಾಷ್ಟ್ರೀಯ ನ್ಯಾಯಾಂಗ ಅಕಾಡೆಮಿಯಲ್ಲಿ ಮಾತನಾಡಿದ ಅವರು, ತಮ್ಮ ಅಭಿಪ್ರಾಯದಲ್ಲಿ, ‘ಮೂಲ ರಚನೆಯ ಸಿದ್ಧಾಂತ’ವು ಬಹಳ “ಚರ್ಚಾಸ್ಪದ ನ್ಯಾಯಶಾಸ್ತ್ರದ ಆಧಾರ”ವನ್ನು ಹೊಂದಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಟ್ರಂಪ್‌ ಎಚ್ಚರಿಕೆ ಬೆನ್ನಲ್ಲೇ ಬೌರ್ಬನ್ ವಿಸ್ಕಿಯ ಆಮದು ಸುಂಕ ಭಾರೀ ಇಳಿಕೆ – ಈ ವಿಸ್ಕಿಯ ವಿಶೇಷತೆ ಏನು?

    ನಮ್ಮಂತಹ ದೇಶದಲ್ಲಿ ಅಥವಾ ಯಾವುದೇ ಪ್ರಜಾಪ್ರಭುತ್ವದಲ್ಲಿ, ಶಾಸನಬದ್ಧ ಕಾನೂನಿನ ಮೂಲಕ ಭಾರತದ ಮುಖ್ಯ ನ್ಯಾಯಮೂರ್ತಿಗಳು ಸಿಬಿಐ ನಿರ್ದೇಶಕರ ಆಯ್ಕೆಯಲ್ಲಿ ಯಾಕೆ ಭಾಗವಹಿಸಬೇಕು? ಇದಕ್ಕೆ ಯಾವುದಾದರೂ ಕಾನೂನು ತಾರ್ಕಿಕತೆ ಇದೆಯೇ? ಅಂದಿನ ಕಾರ್ಯನಿರ್ವಾಹಕರು ನ್ಯಾಯಾಂಗ ತೀರ್ಪಿಗೆ ಮಣಿದ ಕಾರಣ ಶಾಸನಬದ್ಧ ಕಾನೂನು ರೂಪುಗೊಂಡಿದೆ ಎಂದು ನಾನು ಪ್ರಶಂಸಿಸಬಲ್ಲೆ. ಆದರೀಗ ಇದನ್ನು ಮರುಪರಿಶೀಲಿಸುವ ಸಮಯ ಬಂದಿದೆ. ಏಕೆಂದರೆ ಇದು ಪ್ರಜಾಪ್ರಭುತ್ವವಲ್ಲ, ಯಾವುದೇ ಕಾರ್ಯನಿರ್ವಾಹಕ ನೇಮಕಾತಿಯಲ್ಲಿ ನಾವು ಸಿಜೆಐ ಅನ್ನು ಹೇಗೆ ಒಳಗೊಳ್ಳಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

    ನ್ಯಾಯಾಂಗ ತೀರ್ಪಿನ ಮೂಲಕ ಕಾರ್ಯಾಂಗ ಆಡಳಿತ ನಡೆಸುವುದು ಈ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ. ಇನ್ನು ಮುಂದೆ ಭರಿಸಲಾಗದ ಸಾಂವಿಧಾನಿಕ ವಿರೋಧಾಭಾಸವಾಗಿದೆ ಎಂದು ಅವರು ಹೇಳಿದ್ದಾರೆ. ಎಲ್ಲಾ ಸಂಸ್ಥೆಗಳು ತಮ್ಮ ಸಾಂವಿಧಾನಿಕ ಮಿತಿಯೊಳಗೆ ಕಾರ್ಯನಿರ್ವಹಿಸಬೇಕು ಎಂದು ಅವರು ಹೇಳಿದ್ದಾರೆ. ಶಾಸಕಾಂಗ ಅಥವಾ ನ್ಯಾಯಾಂಗದಿಂದ ಆಡಳಿತದಲ್ಲಿನ ಯಾವುದೇ ಹಸ್ತಕ್ಷೇಪವು ಸಾಂವಿಧಾನಿಕತೆಗೆ ವಿರುದ್ಧವಾಗಿದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಯುಪಿ ಆಯ್ತು.. ಲವ್ ಜಿಹಾದ್, ಬಲವಂತದ ಮತಾಂತರದ ವಿರುದ್ಧ ಸಮರ ಸಾರಿದ ಮಹಾರಾಷ್ಟ್ರ

    ಅಲ್ಲದೇ ನ್ಯಾಯಾಂಗ ಪರಿಶೀಲನೆಯ ಶಕ್ತಿಯ ಕುರಿತು ಮಾತನಾಡಿರುವ ಅವರು, ಕಾನೂನುಗಳು ಸಂವಿಧಾನಕ್ಕೆ ಅನುಗುಣವಾಗಿ ಖಚಿತಪಡಿಸಿಕೊಳ್ಳುವುದು ಒಳ್ಳೆಯ ವಿಷಯ. ಆದರೆ ಸಂವಿಧಾನ ತಿದ್ದುಪಡಿ ವಿಷಯಕ್ಕೆ ಬಂದಾಗ, ಅಂತಿಮ ಅಧಿಕಾರ ಸಂಸತ್ತಿಗೆ ಇರುತ್ತದೆ ಎಂದು ಒತ್ತಿ ಹೇಳಿದ್ದಾರೆ. ಇದನ್ನೂ ಓದಿ: ಗೋದಾವರಿ-ಕೃಷ್ಣ-ಕಾವೇರಿ ಯೋಜನೆಯಲ್ಲಿ ಕರ್ನಾಟಕಕ್ಕೆ 25 TMC ನೀರು ಕೊಡಬೇಕು: ಹೆಚ್.ಡಿ.ದೇವೇಗೌಡ

  • CBI ನಿರ್ದೇಶಕರಾಗಿ ಕರ್ನಾಟಕದ ಡಿಜಿಪಿ ಪ್ರವೀಣ್‌ ಸೂದ್‌ ನೇಮಕ

    CBI ನಿರ್ದೇಶಕರಾಗಿ ಕರ್ನಾಟಕದ ಡಿಜಿಪಿ ಪ್ರವೀಣ್‌ ಸೂದ್‌ ನೇಮಕ

    ನವದೆಹಲಿ: ಕೇಂದ್ರೀಯ ತನಿಖಾ ದಳದ (CBI) ನಿರ್ದೇಶಕರಾಗಿ ಕರ್ನಾಟಕದ ಡಿಜಿಪಿ ಪ್ರವೀಣ್‌ ಸೂದ್‌ (Praveen Sood) ನೇಮಕಗೊಂಡಿದ್ದಾರೆ.

    ಪ್ರಧಾನ ಮಂತ್ರಿ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕರನ್ನು ಒಳಗೊಂಡ ಸಮಿತಿಯು ಕೇಂದ್ರೀಯ ತನಿಖಾ ದಳದ ಉನ್ನತ ಹುದ್ದೆಗೆ ಮೂವರು ಹಿರಿಯ ಐಪಿಎಸ್ ಅಧಿಕಾರಿಗಳ ಹೆಸರನ್ನು ಸಚಿವ ಸಂಪುಟಕ್ಕೆ ಶಿಫಾರಸು ಮಾಡಿತ್ತು. ಶನಿವಾರ ಸಂಜೆ ನಡೆದ ಉನ್ನತ ಮಟ್ಟದ ಸಮಿತಿ ಸಭೆಯ ನಂತರ ಹೆಸರುಗಳನ್ನು ಶಾರ್ಟ್ ಲಿಸ್ಟ್ ಮಾಡಲಾಗಿತ್ತು. ಇದನ್ನೂ ಓದಿ: CBI ನಿರ್ದೇಶಕರ ಆಯ್ಕೆ ಪಟ್ಟಿಯಲ್ಲಿ ಕರ್ನಾಟಕದ ಡಿಜಿಪಿ ಪ್ರವೀಣ್‌ ಸೂದ್‌ ಹೆಸರು

    ಸಿಬಿಐ ನಿರ್ದೇಶಕ ಸುಬೋಧ್ ಕುಮಾರ್ ಜೈಸ್ವಾಲ್ ಅವರ ಎರಡು ವರ್ಷಗಳ ಅವಧಿ ಮೇ 25 ರಂದು ಕೊನೆಗೊಳ್ಳಲಿದೆ. ಮೇ 26 ಕ್ಕೆ ಸಿಬಿಐ ನಿರ್ದೇಶಕರಾಗಿ ಪ್ರವೀಣ್‌ ಸೂದ್‌ ಅಧಿಕಾರ ಸ್ವೀಕರಿಸಲಿದ್ದಾರೆ.

    ರಾಜ್ಯ ಕೇಡರ್‌ನ 1986-ಬ್ಯಾಚ್‌ನ ಐಪಿಎಸ್ ಅಧಿಕಾರಿ ಪ್ರವೀಣ್ ಸೂದ್ ಅವರು ಈ ಹುದ್ದೆಗೆ ಮುಂಚೂಣಿಯಲ್ಲಿದ್ದಾರೆ. ಡಿಜಿಪಿ ಪ್ರವೀಣ್‌ ಸೂದ್‌ ಆಡಳಿತಾರೂಢ ಬಿಜೆಪಿ ಸರ್ಕಾರದ ಪರವಾಗಿ ಕೆಲಸ ಮಾಡುತ್ತಿದ್ದು, ಅವರನ್ನು ರಕ್ಷಿಸುತ್ತಿದ್ದಾರೆ. ನಮ್ಮ ಪಕ್ಷದ ನಾಯಕರ ವಿರುದ್ಧ ಪ್ರಕರಣ ದಾಖಸುತ್ತಿದ್ದಾರೆ. ಪ್ರವೀಣ್‌ ಸೂದ್‌ ಒಬ್ಬ ನಾಲಾಯಕ್‌. ಕೂಡಲೇ ಅವರ ವಿರುದ್ಧ ಪ್ರಕರಣ ದಾಖಲಿಸಿ, ಬಂಧಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಟೀಕಿಸಿದ್ದರು. ಇದನ್ನೂ ಓದಿ: ಮೋದಿ ಅಲೆ ಮುಗಿದಿದೆ, ಬಜರಂಗ ಬಲಿ ಕಾಂಗ್ರೆಸ್ ಜೊತೆಗಿದೆ: ಸಂಜಯ್ ರಾವತ್

    ಪ್ರಧಾನ ಮಂತ್ರಿ, ಸಿಜೆಐ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕರನ್ನು ಒಳಗೊಂಡ ಸಮಿತಿಯು ಎರಡು ವರ್ಷಗಳ ಅವಧಿಗೆ ಸಿಬಿಐ ನಿರ್ದೇಶಕರನ್ನು ಆಯ್ಕೆ ಮಾಡುತ್ತದೆ. ಅಧಿಕಾರಾವಧಿಯನ್ನು ಐದು ವರ್ಷಗಳವರೆಗೆ ವಿಸ್ತರಿಸಬಹುದು.

  • CBI ನಿರ್ದೇಶಕರ ಆಯ್ಕೆ ಪಟ್ಟಿಯಲ್ಲಿ ಕರ್ನಾಟಕದ ಡಿಜಿಪಿ ಪ್ರವೀಣ್‌ ಸೂದ್‌ ಹೆಸರು

    CBI ನಿರ್ದೇಶಕರ ಆಯ್ಕೆ ಪಟ್ಟಿಯಲ್ಲಿ ಕರ್ನಾಟಕದ ಡಿಜಿಪಿ ಪ್ರವೀಣ್‌ ಸೂದ್‌ ಹೆಸರು

    ನವದೆಹಲಿ: ಕೇಂದ್ರೀಯ ತನಿಖಾ ದಳದ (CBI) ಉನ್ನತ ಹುದ್ದೆಗೆ ಆಯ್ಕೆ ಪಟ್ಟಿಯಲ್ಲಿ ಕರ್ನಾಟಕದ ಡಿಜಿಪಿ (DGP) ಪ್ರವೀಣ್‌ ಸೂದ್‌ (Praveen Sood) ಅವರ ಹೆಸರೂ ಇದೆ ಎನ್ನಲಾಗಿದೆ.

    ಪ್ರಧಾನ ಮಂತ್ರಿ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕರನ್ನು ಒಳಗೊಂಡ ಸಮಿತಿಯು ಕೇಂದ್ರೀಯ ತನಿಖಾ ದಳದ ಉನ್ನತ ಹುದ್ದೆಗೆ ಮೂವರು ಹಿರಿಯ ಐಪಿಎಸ್ ಅಧಿಕಾರಿಗಳನ್ನು ಆಯ್ಕೆ ಮಾಡಿದೆ. ಶನಿವಾರ ಸಂಜೆ ನಡೆದ ಉನ್ನತ ಮಟ್ಟದ ಸಮಿತಿ ಸಭೆಯ ನಂತರ ಹೆಸರುಗಳನ್ನು ಶಾರ್ಟ್ ಲಿಸ್ಟ್ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: 2024ರ ಹೊತ್ತಿಗೆ ಬಿಜೆಪಿ ಅಂತ್ಯ ಶುರು: ಮಮತಾ ಬ್ಯಾನರ್ಜಿ

    ಪ್ರವೀಣ್ ಸೂದ್ (ಡಿಜಿಪಿ ಕರ್ನಾಟಕ), ಸುಧೀರ್ ಸಕ್ಸೇನಾ (ಡಿಜಿಪಿ ಮಧ್ಯಪ್ರದೇಶ) ಮತ್ತು ತಾಜ್ ಹಾಸನ್ ಈಗ ಸಿಬಿಐ ಮುಂದಿನ ನಿರ್ದೇಶಕರಾಗುವ ಲೆಕ್ಕಾಚಾರದಲ್ಲಿದ್ದಾರೆ ಎಂದು ಹೇಳಲಾಗಿದೆ. ಸಿಬಿಐ ನಿರ್ದೇಶಕ ಸುಬೋಧ್ ಕುಮಾರ್ ಜೈಸ್ವಾಲ್ ಅವರ ಎರಡು ವರ್ಷಗಳ ಅವಧಿ ಮೇ 25 ರಂದು ಕೊನೆಗೊಳ್ಳಲಿದೆ.

    ರಾಜ್ಯ ಕೇಡರ್‌ನ 1986-ಬ್ಯಾಚ್‌ನ ಐಪಿಎಸ್ ಅಧಿಕಾರಿ ಪ್ರವೀಣ್ ಸೂದ್ ಅವರು ಈ ಹುದ್ದೆಗೆ ಮುಂಚೂಣಿಯಲ್ಲಿದ್ದಾರೆ. ಡಿಜಿಪಿ ಪ್ರವೀಣ್‌ ಸೂದ್‌ ಆಡಳಿತಾರೂಢ ಬಿಜೆಪಿ ಸರ್ಕಾರದ ಪರವಾಗಿ ಕೆಲಸ ಮಾಡುತ್ತಿದ್ದು, ಅವರನ್ನು ರಕ್ಷಿಸುತ್ತಿದ್ದಾರೆ. ನಮ್ಮ ಪಕ್ಷದ ನಾಯಕರ ವಿರುದ್ಧ ಪ್ರಕರಣ ದಾಖಸುತ್ತಿದ್ದಾರೆ. ಪ್ರವೀಣ್‌ ಸೂದ್‌ ಒಬ್ಬ ನಾಲಾಯಕ್‌. ಕೂಡಲೇ ಅವರ ವಿರುದ್ಧ ಪ್ರಕರಣ ದಾಖಲಿಸಿ, ಬಂಧಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಟೀಕಿಸಿದ್ದರು. ಇದನ್ನೂ ಓದಿ: ಈ ಫಲಿತಾಂಶ ಲೋಕಸಭಾ ಚುನಾವಣೆಗೆ ದಿಕ್ಸೂಚಿ: ಕೆ. ಹೆಚ್ ಮುನಿಯಪ್ಪ

    ಪ್ರಧಾನ ಮಂತ್ರಿ, ಸಿಜೆಐ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕರನ್ನು ಒಳಗೊಂಡ ಸಮಿತಿಯು ಎರಡು ವರ್ಷಗಳ ಅವಧಿಗೆ ಸಿಬಿಐ ನಿರ್ದೇಶಕರನ್ನು ಆಯ್ಕೆ ಮಾಡುತ್ತದೆ. ಅಧಿಕಾರಾವಧಿಯನ್ನು ಐದು ವರ್ಷಗಳವರೆಗೆ ವಿಸ್ತರಿಸಬಹುದು.