Tag: CBI Case

  • ಬಿಜೆಪಿಯ ರಾಜಕೀಯ ನಿರ್ಣಯಕ್ಕೆ ನಮ್ಮ ಸರ್ಕಾರ ರಾಜಕೀಯ ಉತ್ತರ ನೀಡಿದೆ- ಡಿಕೆ ಸುರೇಶ್ ಗುಡುಗು

    ಬಿಜೆಪಿಯ ರಾಜಕೀಯ ನಿರ್ಣಯಕ್ಕೆ ನಮ್ಮ ಸರ್ಕಾರ ರಾಜಕೀಯ ಉತ್ತರ ನೀಡಿದೆ- ಡಿಕೆ ಸುರೇಶ್ ಗುಡುಗು

    -ಸಿಬಿಐ ಕೇಸ್‌ ವಾಪಸ್‌ ಪಡೆದ ಸರ್ಕಾರದ ಕ್ರಮಕ್ಕೆ ಸಂಸದರ ಸಮರ್ಥನೆ

    ಬೆಂಗಳೂರು: ಡಿಕೆಶಿವಕುಮಾರ್ (DK Shivakumar) ವಿರುದ್ಧ ಬಿಜೆಪಿ ಸರ್ಕಾರ ರಾಜಕೀಯವಾಗಿ ತೆಗೆದುಕೊಂಡಿದ್ದ ನಿರ್ಣಯಕ್ಕೆ ಕಾಂಗ್ರೆಸ್ ಸರ್ಕಾರ ರಾಜಕೀಯವಾಗಿಯೇ ಉತ್ತರ ಕೊಟ್ಟಿದೆ ಅಂತ ಸಂಸದ ಡಿಕೆ ಸುರೇಶ್ (DK Suresh) ಸಹೋದರನ ಸಿಬಿಐ ಕೇಸ್ (CBI Case) ವಾಪಸ್ ತೆಗೆದುಕೊಂಡ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡರು.

    ಬೆಂಗಳೂರಿನಲ್ಲಿ (Bengaluru) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು (BJP) ಇಡೀ ದೇಶದ ಸಂವಿಧಾನವನ್ನ ಬಿಗಿ ಮುಷ್ಠಿಯಲ್ಲಿ ಇಟ್ಟುಕೊಂಡಿದ್ದಾರೆ. ಕಳೆದ 9 ವರ್ಷದಿಂದ ಸಂವಿಧಾನ ವಿರೋಧಿ ಕೆಲಸ ಮಾಡ್ತಿದ್ದಾರೆ. ಸಾಂವಿಧಾನ ಹುದ್ದೆಯನ್ನ ದುರ್ಬಳಕೆ ಮಾಡ್ತಿದ್ದಾರೆ. ಕೇಸ್ ವಾಪಸ್ ಪಡೆದಿರೋದು ರಾಜ್ಯ ಸರ್ಕಾರದ (Government Of Karnataka) ನಿರ್ಣಯ. ಇಡೀ ಕ್ಯಾಬಿನೆಟ್ ತೀರ್ಮಾನ. ಹಿಂದೆ ಡಿಕೆ ಶಿವಕುಮಾರ್ ಅವರನ್ನ ಸಿಲುಕಿಸಬೇಕು ಅಂತ ಅವರ ಹೈಕಮಾಂಡ್ ಮಾತು ಕೇಳಿ ಕೇಸ್ ಸಿಬಿಐಗೆ ಕೊಟ್ರು. ಡಿಕೆಶಿವಕುಮಾರ್ ಅವರನ್ನ ರಾಜಕೀಯ ದಾಳ ಮಾಡಿಕೊಳ್ಳಲು ಬಿಜೆಪಿ ಅವರು ಆತುರವಾಗಿ ತೀರ್ಮಾನ ಮಾಡಿದ್ದರು. ಬಿಜೆಪಿ ಮಾಡಿದ ಆತುರದ ತೀರ್ಮಾನವನ್ನು ಕ್ಯಾಬಿನೆಟ್ ಹಿಂಪಡೆದಿದೆ ಅಂತ ಸಮರ್ಥನೆ ಮಾಡಿಕೊಂಡರು.

    ಮೊದಲೇ ಇಡಿ, ಐಟಿ (ED – IT) ಈ ಕೇಸ್ ನಡೆಸುತ್ತಿತ್ತು. ಹೀಗಿದ್ದರೂ ಈ ಕೇಸ್ ಅನ್ನ ಸಿಬಿಐಗೆ ಕೊಟ್ರು. ಸಿಬಿಐಯನ್ನ ಬಳಸಿಕೊಂಡು ಡಿಕೆ ಶಿವಕುಮಾರ್‌ ಅವರಿಗೆ ತೊಂದರೆ ಕೊಡೋಕೆ, ರಾಜಕೀಯ ಕಾರಣಕ್ಕೆ ಮಾಡಿದ ‌ಪ್ರಕರಣ ಇದು. ಯಾವುದೇ ಕೇಸ್ ಸಿಬಿಐಗೆ ಕೊಡಬೇಕಾದರೇ ಸರ್ಕಾರ, ಕಾನುನೂ ಇಲಾಖೆ ಒಪ್ಪಿಗೆ ಬೇಕು. ಆದರೆ ಕಾನೂನು ಇಲಾಖೆ ಇದಕ್ಕೆ ಒಪ್ಪಿಗೆ ನೀಡಿರಲಿಲ್ಲ. ಲೋಕಾಯುಕ್ತದ ಮೂಲಕವೇ ಮಾಡಬಹುದಿತ್ತು. ಆದರೆ ಡಿಕೆಶಿವಕುಮಾರ್ ಅವರಿಗೆ ತೊಂದರೆ ಕೊಡಬೇಕು ಅಂತ ಕಾನೂನು ಮೀರಿ ಸಿಬಿಐಗೆ ಕೇಸ್ ಕೊಟ್ಟರು. ರಾಜಕೀಯವಾಗಿ ಮಾಡಿದ ಪ್ರಕರಣಕ್ಕೆ ರಾಜಕೀಯವಾಗಿ ಕಾಂಗ್ರೆಸ್ ಸರ್ಕಾರ ಉತ್ತರ ಕೊಟ್ಟಿದೆ ಅಂತ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ‘ಕಾಂತಾರ’ ಚಿತ್ರಕ್ಕೆ ಮಹೂರ್ತ : ಕುಂಭಾಸಿ ಶ್ರೀ ವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆ

    ಸಾಂವಿಧಾನಿಕ ವಿಚಾರ ತಿರುಚುವ ಕೆಲಸ ಮಾಡಿರುವುದು ಬಿಜೆಪಿ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಈ ವಿಷಯ ಗೊತ್ತು. ಯಾರಿಗೆ ಎಷ್ಟು ಕಿರುಕುಳ ನೀಡ್ತಿದ್ದಾರೆ? ವಿಪಕ್ಷಗಳಿಗೆ ಹೇಗೆ ಕಿರುಕುಳ ಕೊಟ್ಟಿದ್ದಾರೆ? ಎಲ್ಲಾ ಗೊತ್ತಿದೆ. ಬಿಜೆಪಿ ಮಾಡಿದ ರಾಜಕೀಯ ಪ್ರಕರಣಕ್ಕೆ ರಾಜಕೀಯವಾಗಿಯೇ ಉತ್ತರ ನೀಡಲಾಗಿದೆ ಅಂತ ಬಿಜೆಪಿ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ಸಚಿವ ಶರಣಬಸಪ್ಪ ದರ್ಶನಾಪೂರ ಕ್ಷೇತ್ರದಲ್ಲೇ 6,000 ಕ್ವಿಂಟಲ್‌ ಪಡಿತರ ಅಕ್ಕಿಗೆ ಕನ್ನ!

  • ಕೇಸ್ ವಿಥ್‌ಡ್ರಾ ಮಾಡಿದ್ದು ನೋಡಿದ್ರೆ ಗೊತ್ತಾಗುತ್ತೆ ಸರ್ಕಾರ ನಡೆಸುತ್ತಿರೋದು ಸಿದ್ದರಾಮಯ್ಯ ಅಲ್ಲ, ಡಿಕೆಶಿ ಅಂತ: ನಿರಾಣಿ

    ಕೇಸ್ ವಿಥ್‌ಡ್ರಾ ಮಾಡಿದ್ದು ನೋಡಿದ್ರೆ ಗೊತ್ತಾಗುತ್ತೆ ಸರ್ಕಾರ ನಡೆಸುತ್ತಿರೋದು ಸಿದ್ದರಾಮಯ್ಯ ಅಲ್ಲ, ಡಿಕೆಶಿ ಅಂತ: ನಿರಾಣಿ

    ಬಾಗಲಕೋಟೆ: ಸಿಎಂ ಸಿದ್ದರಾಮಯ್ಯ (Siddaramaiah) ಅವರು ಕ್ಯಾಬಿನೆಟ್‌ನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರ ಕೇಸ್ ವಿಥ್‌ಡ್ರಾ ಮಾಡಿದ್ದನ್ನು ನೋಡಿದರೆ ಬಹಳ ಸ್ಪಷ್ಟವಾಗಿ ಗೊತ್ತಾಗುತ್ತದೆ ಸರ್ಕಾರ ನಡೆಸುತ್ತಿರೋರು ಸಿದ್ದರಾಮಯ್ಯ ಅಲ್ಲ ಡಿಕೆ ಶಿವಕುಮಾರ್ ಅಂತ ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ‌ (Murugesh Nirani) ಹೇಳಿಕೆ ನೀಡಿದ್ದಾರೆ.

    ಡಿಸಿಎಂ ಡಿಕೆಶಿ ಮೇಲೆ ಸಿಬಿಐ ಕೇಸ್ (CBI Case) ಪ್ರಸ್ತಾವನೆ ವಾಪಸ್ ವಿಚಾರವಾಗಿ ಬಾಗಲಕೋಟೆಯಲ್ಲಿ ಮಾತನಾಡಿದ ನಿರಾಣಿ, ಡಿಕೆ ಶಿವಕುಮಾರ್ ಅವರು ರಾಜಕೀಯವಾಗಿ ಹಿರಿಯರು. ಸಾಕಷ್ಟು ಏಳು ಬೀಳು ನೋಡಿದಂತವರು. ಈಗಾಗಲೇ ಈ ಕೇಸ್ ಕೋರ್ಟ್‌ನಲ್ಲಿ ತನಿಖೆ ಹಂತದಲ್ಲಿರುವಾಗ ಅದನ್ನು ಏಕಾಏಕಿಯಾಗಿ ಹೆದರಿಕೆಯಿಂದ ಸೋಲಾಗುತ್ತದೆ ಎಂಬ ಭಾವನೆಯಿಂದ ಕ್ಯಾಬಿನೆಟ್‌ನಲ್ಲಿ ವಿಥ್ ಡ್ರಾ ಮಾಡಿದ್ದಾರೆ. ಇದು ಶೋಭೆ ತರುವಂತದ್ದಲ್ಲ ಎಂದು ಹೇಳಿದರು.

    ಸಿದ್ದರಾಮಯ್ಯ ಅವರ ಬಗ್ಗೆ ಕರ್ನಾಟಕದಲ್ಲಿ ಅವರದ್ದೇ ಆದ ಘನತೆ ಗೌರವವಿತ್ತು. ಅವರು ಕಾನೂನಿಗೆ ತಲೆ ಬಾಗುತ್ತಾರೆ. ಕಾನೂನಿಗೆ ಹೆಚ್ಚು ಗೌರವ ಕೊಡುತ್ತಾರೆ ಎಂಬ ಭಾವನೆ ಎಲ್ಲರಲ್ಲಿತ್ತು. ಆದರೆ ಸಿದ್ದರಾಮಯ್ಯ ಅವರು ಕ್ಯಾಬಿನೆಟ್‌ನಲ್ಲಿ ಡಿಕೆ ಶಿವಕುಮಾರ್ ಕೇಸ್ ವಿಥ್‌ಡ್ರಾ ಮಾಡಿದ್ದನ್ನು ನೋಡಿದರೆ ಬಹಳ ಸ್ಪಷ್ಟವಾಗಿ ಗೊತ್ತಾಗುತ್ತದೆ ಸರ್ಕಾರ ನಡೆಸುತ್ತಿರೋರು ಸಿದ್ದರಾಮಯ್ಯ ಅಲ್ಲ ಡಿಕೆಶಿ ಎಂದು ಆರೋಪಿಸಿದರು. ಇದನ್ನೂ ಓದಿ: ಬಿಜೆಪಿ ಕಾರ್ಯಕರ್ತರ ಕಾನೂನು ನೆರವಿಗೆ ಶೀಘ್ರವೇ ಕಾಲ್ ಸೆಂಟರ್ ಪ್ರಾರಂಭ: ವಿಜಯೇಂದ್ರ

    ಈ ಕೇಸಲ್ಲಿ ನಿರಪರಾಧಿ ಎಂಬ ಆತ್ಮವಿಶ್ವಾಸ ಅವರಲ್ಲಿದ್ದರೆ ಅದನ್ನು ವಿಥ್‌ಡ್ರಾ ಮಾಡಲು ಹೋಗುವಂತಹ ಅವಶ್ಯಕತೆ ಇರಲಿಲ್ಲ. ಅವರು ಮಾಡಿರೋದು ತಪ್ಪಿದೆ. ಮುಂದೆ ನಾವು ಬಿಜೆಪಿಯಿಂದ ಬೇರೆ ಬೇರೆ ರೀತಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದೇವೆ. ಮುಂದೆ ಕಾನೂನು ಪ್ರಕಾರ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.

    ಡಿಕೆಶಿ ಮೇಲೆ ಸಿಬಿಐ ಕೇಸ್ ಪ್ರಸ್ತಾವನೆ ದುರುದ್ದೇಶಪೂರಿತವಾಗಿತ್ತು ಎಂಬ ಸಚಿವ ತಿಮ್ಮಾಪುರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಡಿಕೆಶಿ ಕ್ಲೀನ್ ಆಗಿದ್ದರೆ ತನಿಖೆ ಮಾಡೋಕೆ ಬಿಡಲಿ. ಅವರದ್ದೇ ಸರ್ಕಾರ ಇದೆ, ತನಿಖಾಧಿಕಾರಿಗಳು ಯಾವುದೇ ಸರ್ಕಾರಕ್ಕೆ ಸೀಮಿತವಾಗಿರುವುದಿಲ್ಲ. ರಾಜ್ಯದ ಅಧಿಕಾರಿಗಳು ಅವರು. ಅವರ ಮೇಲೆ ವಿಶ್ವಾಸವಿದ್ದರೆ, ತನಿಖೆ ಮಾಡೋಕೆ ಬಿಟ್ಟು, ಅಲ್ಲಿ ಕ್ಲೀನ್ ಚಿಟ್ ಆಗಿ ಬಂದಿದ್ದರೆ ಗೌರವ ಇರುತ್ತಿತ್ತು. ಆದರೆ ತನಿಖೆ ಮಾಡೋದಕ್ಕೇನೇ ಬಿಡ್ತಿಲ್ಲ ಎಂದು ನಿರಾಣಿ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ನರೇಗಾ ಕಾಮಗಾರಿಯಲ್ಲಿ ಕೋಟ್ಯಂತರ ರೂ. ಗೋಲ್ಮಾಲ್- ಅಧಿಕಾರಿಗಳಿಬ್ಬರ ವಿರುದ್ಧ ಎಫ್‌ಐಆರ್

  • ಲೂಟಿ‌ ಮಾಡೋರಿಗೆ ನಮ್ಮ ಸರ್ಕಾರ ಅಂತ ಪ್ರೂವ್‌ ಮಾಡಿದ್ದಾರೆ – ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ಆಗುತ್ತೆ ಎಂದ HDK

    – ಡಿಕೆಶಿ ವಿರುದ್ಧದ ಸಿಬಿಐ ಕೇಸ್ ವಾಪಸ್ ಪಡೆಯುವ ಸರ್ಕಾರದ ನಡೆಗೆ ಮಾಜಿ ಸಿಎಂ ಖಂಡನೆ
    – ಸಿಎಂ ವಿರುದ್ಧವೂ ವಾಗ್ದಾಳಿ

    ರಾಮನಗರ: ಈ ಸರ್ಕಾರದಲ್ಲಿ ಬಡವರಿಗೆ ರಕ್ಷಣೆ ಇಲ್ಲ, ಲೂಟಿ‌ ಮಾಡುವವರಿಗೆ, ಕೊಳ್ಳೆ ಒಡೆದು ಬದುಕುವವರಿಗೆ ನಮ್ಮ ಸರ್ಕಾರ ಎಂಬುದನ್ನ ನಿರೂಪಿಸಿದ್ದಾರೆ. ಈ ನಡವಳಿಕೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತೆ ಎಂದು ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ (HD Kumaraswamy) ಕಿಡಿ ಕಾರಿದ್ದಾರೆ.

    ಡಿಕೆಶಿ ವಿರುದ್ಧದ ಸಿಬಿಐ ಕೇಸ್ (CBI Case) ವಾಪಸ್ ಪಡೆಯುವ ಸರ್ಕಾರದ ನಡೆಗೆ ಕುಮಾರಸ್ವಾಮಿ ಅವರು ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. ಸಿಎಂ ಸಿದ್ದರಾಮಯ್ಯ (Siddaramaiah) ವಕೀಲರಾಗಿ, ವಕೀಲ ಉಪನ್ಯಾಸಕರಾಗಿ ಕೆಲಸ ಮಾಡಿದ್ದಾರೆ. ನಿನ್ನೆ ಅವರ ನೇತೃತ್ವದ ಸಂಪುಟ ಸಭೆಯಲ್ಲಿ ತೆಗೆದುಕೊಂಡ ನಿರ್ಣಯ ಸರಿಯಲ್ಲ. ಹಲವಾರು ಸುಪ್ರೀಂ ಕೋರ್ಟ್ (Supreme Court) ತೀರ್ಪುಗಳು ನಮ್ಮ ಕಣ್ಣಮುಂದೆ ಇದೆ. ಈಗಾಗಲೇ ಇದೇ ವಿಷಯವಾಗಿ ಎರಡು ಬಾರಿ ಹೈಕೋರ್ಟ್ ನಲ್ಲಿ ಚರ್ಚೆ ಆಗಿದೆ. ಎರಡು ಬಾರಿ ಅರ್ಜಿ ವಜಾಕ್ಕೆ ಮನವಿ ಸಲ್ಲಿಸಿದ್ರೂ ಕೋರ್ಟ್‌ನಲ್ಲಿ ತಿರಸ್ಕಾರ ಆಗಿದೆ. ಸೂಕ್ಷ್ಮ ವಿಚಾರ ನ್ಯಾಯಾಲಯದ ಮುಂದೆ ಇದ್ದಾಗ ಈ ರೀತಿಯ ಸರ್ಕಾರ ಏಕಾಏಕಿ ನಿರ್ಧಾರ ತೆಗೆದುಕೊಳ್ಳುವುದು ತಪ್ಪು. ಕಾನೂನನ್ನ ಧಿಕ್ಕರಿಸಿ, ಕಾನೂನಿಗಿಂತ ನಾವೇ ದೊಡ್ಡವರು ಎಂಬುದನ್ನ ಪ್ರದರ್ಶನ ಮಾಡಿಕೊಂಡಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

    ಬಡವರಿಗೆ ರಕ್ಷಣೆ ಇಲ್ಲ, ಲೂಟಿ‌ ಮಾಡುವವರಿಗೆ, ಕೊಳ್ಳೆ ಒಡೆದು ಬದುಕುವವರಿಗೆ ನಮ್ಮ ಸರ್ಕಾರ ಎಂಬುದನ್ನ ನಿರೂಪಿಸಿದ್ದಾರೆ. ಡಿಸಿಎಂ ಎಂತಹಾ ದೊಡ್ಡತನ ತೋರಿಸಿದ್ದಾರೆ ಅಂದ್ರೆ, ಈ ವಿಚಾರ ಕ್ಯಾಬಿನೆಟ್ ನಲ್ಲಿ ಚರ್ಚೆ ಆಗುತ್ತೆ. ಪಾಪ ನಿನ್ನೆ ದಿನ ಡಿಸಿಎಂ ಸಂಪುಟ ಸಭೆಗೂ ಹೋಗಿಲ್ಲ. ಕಳೆದ 3 ದಿನಗಳ ಹಿಂದೆ ಸೀನಿಯರ್ ಅಡ್ವೋಕೇಟ್‌ಗಳನ್ನ ಕರೆದು ಸಭೆಮಾಡಿ ಇದರಿಂದ ಯಾವ ರೀತಿ ರಕ್ಷಣೆ ಪಡೆಯಬೇಕು ಅಂತ ಚರ್ಚೆ ಮಾಡಿದ್ದಾರೆ. ನಮಗೆ ಎಲ್ಲಾ ಮಾಹಿತಿ ಇದೆ. ಮೊನ್ನೆಯೇ ಈ ವಿಚಾರ ಗಮನಕ್ಕೆ ಬಂತು. ಸರ್ಕಾರದ ನಿನ್ನೆಯ ತೀರ್ಮಾನ, ಈ ನಡವಳಿಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ಆಗುತ್ತೆ. ಈ ವಿಚಾರ ಮುಂದಿನ ಸದನದಲ್ಲಿ ಚರ್ಚೆ ಮಾಡ್ತೀನಿ ಎಂದು ಕುಮಾರಸ್ವಾಮಿ (HD Kumaraswamy) ತಿಳಿಸಿದ್ದಾರೆ.

    ಸರ್ಕಾರಕ್ಕೆ ಡಿಕೆಶಿ (DK Shivakumar) ಒತ್ತಡ ಹಾಕಿದ್ರಾ ಪ್ರಶ್ನೆಗೆ ಉತ್ತರಿಸಿ, ಇಲ್ಲಿ ಒತ್ತಡದ ಪ್ರಶ್ನೆಯೇ ಇಲ್ಲ. ಸರ್ಕಾರ ಇರೋದು ಕಾನೂನು ವ್ಯಾಪ್ತಿಯಲ್ಲಿ ಕೆಲಸ ಮಾಡೋದಕ್ಕೆ. ತಿಳಿವಳಿಕೆ ಇರುವವರೇ ಇಂತಹ ನಿರ್ಣಯ ಮಾಡಿರೋದು ಸರ್ಕಾರಕ್ಕೆ ಛೀಮಾರಿ ಹಾಕಿದಂತೆ. ಒಂದು ಬಾರಿ ಆದೇಶ ಮಾಡಿದ ಮೇಲೆ ಬದಲಾವಣೆ ಮಾಡಲು ಆಗಲ್ಲ. ಸಿಬಿಐ ನಿಂದ ವಾಪಸ್ಸ್ ತಗೆದು ಲೋಕಾಯುಕ್ತ ಅಥವಾ ಸ್ಥಳೀಯ ಪೊಲೀಸರಿಂದ ಇದನ್ನ ತನಿಖೆ ಮಾಡಲು ಆಗುತ್ತಾ? ಲೋಕಾಯುಕ್ತ ಅಥವಾ ಪೊಲೀಸರು ಇದನ್ನ ಮಾಡಲು ಸಾಧ್ಯವೇ? ಹಿಂದಿನ ಸರ್ಕಾರ ಸ್ಪೀಕರ್ ಅನುಮತಿ ಪಡೆದಿರಲಿಲ್ಲ ಎನ್ನುವುದಾದರೇ, ಇವರು ಸ್ಪೀಕರ್ ನಿಂದ ಅನುಮತಿ ಪಡೆದಿದ್ದಾರಾ? ಇದೆಲ್ಲಾ ಕೇವಲ ಸಬೂಬುಗಳು ಅಷ್ಟೇ. ಈಗಾಗಲೇ ತನಿಖೆ ಮುಂದುವರಿಸಿ ಅಂತಾ ಕೋರ್ಟ್ ಆದೇಶ ಆಗಿದೆ. ಈಗ ಸ್ಪೀಕರ್ ಅನುಮತಿ ಪಡೆದ್ರೂ ಕೇಸ್ ವಾಪಸ್ಸ್ ಪಡೆಯಲು ಆಗುತ್ತಾ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

    ಇದೇ ಸಿಎಂ ಸಿದ್ದರಾಮಯ್ಯ ಅವರು ಲೋಕಾಯುಕ್ತ ರದ್ದು ಮಾಡಿ, ಅಕ್ರಮ ಮುಚ್ಚಿಹಾಕಿದ್ರು. ಇದರಲ್ಲಿ ಸಿದ್ದರಾಮಯ್ಯ ನಿಪುಣರು. ಈ ಬಗ್ಗೆ ಅವರಿಗೆ ಬಹಳ ಅನುಭವ ಇದೆ. ಹಾಗಾಗಿ ಕಾನೂನು ವ್ಯವಸ್ಥೆಯಲ್ಲಿ ಹೊಸ ಹೆಜ್ಜೆಹಾಕಲು ಹೊರಟಿದ್ದಾರೆ ಎಂದು ಸಿಎಂ ವಿರುದ್ಧವೂ ಕಿಡಿ ಕಾರಿದ್ದಾರೆ.

  • ಕಳ್ಳ ಯಾವತ್ತಿದ್ದರೂ ಕಳ್ಳನೇ; ಡಿಕೆಶಿ ವಿರುದ್ಧದ ಸಿಬಿಐ ತನಿಖೆ ಅನುಮತಿ ಹಿಂಪಡೆದ ನಿರ್ಧಾರಕ್ಕೆ ಈಶ್ವರಪ್ಪ ಕಿಡಿ

    ಕಳ್ಳ ಯಾವತ್ತಿದ್ದರೂ ಕಳ್ಳನೇ; ಡಿಕೆಶಿ ವಿರುದ್ಧದ ಸಿಬಿಐ ತನಿಖೆ ಅನುಮತಿ ಹಿಂಪಡೆದ ನಿರ್ಧಾರಕ್ಕೆ ಈಶ್ವರಪ್ಪ ಕಿಡಿ

    ಶಿವಮೊಗ್ಗ: ಸಿಬಿಐ ತನಿಖೆಗೆ ವಹಿಸಿರುವ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (DK Shivakumar) ಅವರ ಪ್ರಕರಣವನ್ನು ಸಚಿವ ಸಂಪುಟ ಹಿಂಪಡೆಯುವ ನಿರ್ಧಾರ ಮಾಡಿರುವುದು ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಮಾನ. ಕಳ್ಳ ಯಾವತ್ತಿದ್ದರೂ ಕಳ್ಳನೇ. ಸಿದ್ದರಾಮಯ್ಯ ರಾಜಕೀಯ ಜೀವನದಲ್ಲಿ ಇದೊಂದು ಕಪ್ಪು ಚುಕ್ಕೆ. ಡಿಕೆಶಿ ಸಲುವಾಗಿ ಸಿದ್ದರಾಮಯ್ಯ ಕಪ್ಪು ಚುಕ್ಕೆ ಅಂಟಿಸಿಕೊಂಡಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ (KS Eshwarappa) ಕಿಡಿ ಕಾರಿದ್ದಾರೆ.

    ಮಹತ್ವದ ಬೆಳವಣಿಗೆಯಲ್ಲಿ ಹಿಂದಿನ ಬಿಜೆಪಿ ಸರ್ಕಾರವು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ವಿರುದ್ಧ ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಪ್ರಕರಣವನ್ನು ಸಿಬಿಐ ತನಿಖೆಗೆ (CBI Investigation) ವಹಿಸಿದ್ದ ನಿರ್ಧಾರವನ್ನು ಹಿಂಪಡೆಯಲು ಗುರುವಾರ (ನ.23) ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಈಶ್ವರಪ್ಪ ಮಾತನಾಡಿದ್ದಾರೆ. ಇದನ್ನೂ ಓದಿ:  ಸೂರ್ಯ ಬೆಂಕಿ ಆಟ- ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ರೋಚಕ ಗೆಲುವು

    ಡಿಕೆಶಿ ವಿರುದ್ಧದ ಸಿಬಿಐ (CBI Case) ಕೇಸನ್ನು ಸಚಿವ ಸಂಪುಟ ವಾಪಸ್ ತಗೊಂಡಿರೋದು ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಮಾನ. ಕಳ್ಳ ಯಾವತ್ತಿದ್ದರೂ ಕಳ್ಳನೇ, 135 ಸೀಟ್ ಬಂದಿದೆ ಅಂತ ಮಾಡಬಾರದ್ದನ್ನೆಲ್ಲಾ ಮಾಡ್ತಿದ್ದಾರೆ. 23 ಕೋಟಿ ಇದ್ದ ವರಮಾನ 163 ಕೋಟಿಗೆ ಹೆಚ್ಚಳವಾಗಿದೆ. ಯಡಿಯೂರಪ್ಪ (BS Yediyurappa) ಸಿಎಂ ಆಗಿದ್ದಾಗ ಈ ಪ್ರಕರಣವನ್ನು ಸಿಬಿಐ ತನಿಖೆಗೆ ಕೊಟ್ಟಿದ್ದರು. ಡಿಕೆಶಿ ನ್ಯಾಯಾಲಯಕ್ಕೆ ಹೋದರೂ ಅಲ್ಲಿ ತಿರಸ್ಕಾರವಾಯ್ತು. ಇದು ಇಡೀ ದೇಶಕ್ಕೆ ಗೊತ್ತು. ಸಿಬಿಐ ತನಿಖೆ ಅಂತಿಮ ಹಂತಕ್ಕೆ ಬಂದಿರುವಾಗ ಈ ರೀತಿ ಮಾಡೋದು ಸರಿಯಲ್ಲ. ಕೇಡಿ ಸಿದ್ದು ಸಚಿವ ಸಂಪುಟ ಕಳ್ಳರ ಗುಂಪಾಗಿದೆ, ಕೇಡಿ ಸಿದ್ದು ಅವರ ದರೋಡೆಕೋರರ ತಂಡ ದುರುಪಯೋಗ ಮಾಡಿಕೊಂಡಿದೆ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

    ಸಚಿವ ಕೆ.ಜೆ ಜಾರ್ಜ್ ಮೇಲೆ ಆಪಾದನೆ ಬಂದಾಗ ರಾಜೀನಾಮೆ ಕೊಟ್ಟು ನಂತರ ಸಚಿವ ಸಂಪುಟಕ್ಕೆ ಸೇರಿದರು. ನನ್ನ ಮೇಲೆ ಆಪಾದನೆ ಬಂತು ನಾನು ರಾಜೀನಾಮೆ ಕೊಟ್ಟೆ. ಸುಪ್ರೀಂ ಕೋರ್ಟ್ ತಜ್ಞರು ಹೇಳ್ತಿದ್ದಾರೆ ಸಿಬಿಐಗೆ ತನಿಖೆಗೆ ವಹಿಸಲು ಅನುಮತಿ ಇದೆ, ಆದ್ರೆ ಹಿಂಪಡೆಯಲು ಅನುಮತಿ ಬೇಕಿಲ್ಲ. ಸಿದ್ದರಾಮಯ್ಯ ಅವರಿಗೆ ಈ ವಿಷಯ ಗೊತ್ತಿಲ್ವಾ. ಡಿಕೆಶಿ ಕೇಸನ್ನ ವಾಪಸ್ ಪಡೆಯಬೇಕು ಅಂತಾ ಸಚಿವ ಸಂಪುಟ ಸಭೆಗೆ ಹೋಗಿಲ್ಲ. ಇದು ದೇಶದಲ್ಲೇ ದೊಡ್ಡ ಅಪರಾಧ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: T20 ಕದನಕ್ಕೆ ವಿಶ್ವಕಪ್‌ ದಾಖಲೆ ಉಡೀಸ್‌ – ಏಕಕಾಲಕ್ಕೆ ಕರ್ನಾಟಕದ ಜನಸಂಖ್ಯೆಗಿಂತಲೂ ಅಧಿಕ ಮಂದಿ ವೀಕ್ಷಣೆ

    ಸಚಿವ ಸಂಪುಟ ದುರ್ಬಳಕೆ ಮಾಡಿಕೊಳ್ಳುತ್ತಿರುವ ಮೊದಲ ವ್ಯಕ್ತಿ ಡಿಕೆಶಿ, ನಮಗೂ ಮುಂದೆ ಇಂತಹ ಸ್ಥಿತಿ ಬರಬಹುದು ಅಂತ ಅವರ ಕೇಂದ್ರದ ನಾಯಕರು ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಒಪ್ಪಿಕೊಂಡಿರಬಹುದು. ಸಿದ್ದರಾಮಯ್ಯ ಅವರಿಗೆ ಖುರ್ಚಿ ಮುಖ್ಯವೇ ಹೊರತು ನ್ಯಾಯವಲ್ಲ. ಸಂವಿಧಾನದ ಬಗ್ಗೆ ಉದ್ದುದ್ದ ಭಾಷಣ ಮಾಡುವ ನಾಯಕರಿಗೆ ಇದು ಗೊತ್ತಿಲ್ಲವೇ? ಕಾಂಗ್ರೆಸ್ ನಾಯಕರಿಗೆ ನಾಚಿಕೆ ಆಗಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ.

    ಕಾಂಗ್ರೆಸ್ ಸರ್ಕಾರ ಗೂಂಡಾಗಳಿಗೆ ರಕ್ಷಣೆ ಕೊಡುವ ಸರ್ಕಾರವಾಗಿದೆ. ಕರ್ನಾಟಕದ ಗ್ಯಾರಂಟಿ ಯೋಜನೆಯಲ್ಲಿ ಮೋಸ ಮಾಡಿ ಅಧಿಕಾರಕ್ಕೆ ಬಂದಿದ್ದಾರೆ. ಮುಂದಿನ ಚುನಾವಣೆಯಲ್ಲಿ ಜನ ಬುದ್ಧಿ ಕಲಿಸುತ್ತಾರೆ. ಸಚಿವ ಸಂಪುಟಕ್ಕೆ ಬೆಲೆ ಇಲ್ಲ ಅಂತಾ ಇವರು ತೀರ್ಮಾನ ಮಾಡಿದ್ರು. ಸಂವಿಧಾನಕ್ಕೆ ಬೆಲೆ ಇದೆ ಅಲ್ಲಿ ಸರಿಯಾದ ತೀರ್ಪು ಬರುತ್ತದೆ, ಸಿಬಿಐ ತನಿಖೆಯಿಂದ ಡಿಕೆಶಿ ಕೇಸನ್ನು ಹಿಂಪಡೆಯುವ ನಿರ್ಧಾರವನ್ನು ಕೈಬಿಡಬೇಕು. ಸಿಬಿಐ ತಪ್ಪಿತಸ್ಥನಲ್ಲ ಅಂದ್ರೆ ಡಿಕೆಶಿ ಡಿಸಿಎಂ ಅಲ್ಲ ಸಿಎಂ ಬೇಕಾದರೂ ಆಗಲಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮೆಗಾ ರಿಯಾಲಿಟಿ ಚೆಕ್‍ಗೆ ಭರ್ಜರಿ ಇಂಪ್ಯಾಕ್ಟ್- PUBLiC TVಗೆ ಸಾರ್ವಜನಿಕರು ಧನ್ಯವಾದ

    ಇದೇ ವೇಳೆ ಜಾತಿಗಣತಿ ವರದಿ ಜಾರಿ ವಿಚಾರ ಕುರಿತು ಮಾತನಾಡಿ, 9 ವರ್ಷಗಳ ಹಿಂದೆ ಸಿದ್ದರಾಮಯ್ಯ ಜಾತಿ ಗಣತಿ ವರದಿ ಬಿಡುಗಡೆ ಮಾಡ್ತೀನಿ ಅಂದ್ರು ಮಾಡಲಿಲ್ಲ. ಆಗ ಮಾಡಿದ್ದರೆ ಈ ಸಮಸ್ಯೆ ಬರುತ್ತಿರಲಿಲ್ಲ. ಮೂಲ ಪ್ರತಿ ಕಳೆದಿದೆ ಅಂತಾ ಸಿಎಂ ಹೇಳ್ತಾರೆ, ಮೂಲ ಪ್ರತಿ ಕಳೆದಿಲ್ಲ ಅಂತಾ ಪರಮೇಶ್ವರ್ ಹೇಳ್ತಾರೆ. ಆಗ ಜಾತಿಜನಗಣತಿ ವರದಿ ಬಿಡುಗಡೆ ಮಾಡಿದ್ದರೇ ಜಾತಿ ಜಾತಿ ನಡುವೆ ಸಂಘರ್ಷ ಆಗ್ತಿರಲಿಲ್ಲ. ಜಾತಿ ಜನಗಣತಿಯ ಸಂಘರ್ಷಕ್ಕೆ ಸಿಎಂ ಸಿದ್ದರಾಮಯ್ಯ ಕಾರಣ ಎಂದು ದೂರಿದ್ದಾರೆ.

    ಸಿದ್ದರಾಮಯ್ಯ ಹಿಂದುಳಿದವರಿಗೆ ದಲಿತರಿಗೆ ದ್ರೋಹ ಮಾಡ್ತಿದ್ದಾರೆ. ಡಿಕೆಶಿ ಅರ್ಧ ಆಯಸ್ಸು ಕೋರ್ಟಿಗೆ ಅಲೆಯುತ್ತಿದ್ದಾರೆ. ಸಚಿವ ಸಂಪುಟದ ಪಾವಿತ್ರ‍್ಯತೆ ಹಾಳು ಮಾಡ್ತಿದ್ದಾರೆ. ತನಿಖೆ ಮುಂದುವರಿದರೆ ನೂರಕ್ಕೆ ನೂರರಷ್ಟು ಡಿಕೆಶಿ ವಿರುದ್ದವಾಗಿ ತೀರ್ಪು ಬರಲಿದೆ. ಡಿಕೆಶಿ ಜೈಲಿಗೆ ಹೋಗ್ತಾರೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಇದರಿಂದ ತಪ್ಪಿಸಿಕೊಳ್ಳಲು ಈ ರೀತಿ ಮಾಡ್ತಿದ್ದಾರೆ. ಸಿದ್ದರಾಮಯ್ಯ ರಾಜಕೀಯ ಜೀವನದಲ್ಲಿ ಇದೊಂದು ಕಪ್ಪು ಚುಕ್ಕೆ. ಡಿಕೆಶಿ ಸಲುವಾಗಿ ಸಿದ್ದರಾಮಯ್ಯ ಕಪ್ಪು ಚುಕ್ಕೆ ಅಂಟಿಸಿಕೊಂಡಿದ್ದಾರೆ ಎಂದು ಕೆಂಡಕಾರಿದ್ದಾರೆ.