Tag: cbi

  • ಕರೂರು ಕಾಲ್ತುಳಿತ ನಡೆದ ಸ್ಥಳಕ್ಕೆ ಭೇಟಿ ನೀಡಲಿದೆ ಸುಪ್ರೀಂ ಕೋರ್ಟ್ ಸಮಿತಿ

    ಕರೂರು ಕಾಲ್ತುಳಿತ ನಡೆದ ಸ್ಥಳಕ್ಕೆ ಭೇಟಿ ನೀಡಲಿದೆ ಸುಪ್ರೀಂ ಕೋರ್ಟ್ ಸಮಿತಿ

    ನವದೆಹಲಿ/ಚೆನ್ನೈ: ಕರೂರು ಕಾಲ್ತುಳಿತ (Karur Stampede) ಪ್ರಕರಣ ಸಂಬಂಧ ಸುಪ್ರೀಂಕೋರ್ಟ್ (Supreme Court) ನೇಮಿಸಿದ ಸಮಿತಿಯು ಅಗತ್ಯವಿದ್ದರೆ ಘಟನಾ ಸ್ಥಳಕ್ಕೆ ಭೇಟಿ ನೀಡಲಿದೆ ಎಂದು ತಿಳಿದುಬಂದಿದೆ.

    ತಮಿಳುನಾಡಿನ (Tamilnadu) ಕರೂರಿನಲ್ಲಿ ಟಿವಿಕೆ ನಾಯಕ (TVK Vijay) ವಿಜಯ್ ಅವರ ರ‍್ಯಾಲಿ ಸಂದರ್ಭದಲ್ಲಿ 41 ಜನರು ಸಾವನ್ನಪ್ಪಿದ್ದರು. ನಟ ದಳಪತಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ ಪಕ್ಷ ಸ್ವತಂತ್ರ ತನಿಖೆಗೆ ಕೋರಿ ಅರ್ಜಿ ಸಲ್ಲಿಸಿತ್ತು. ಎಸ್‌ಐಟಿಯಲ್ಲಿ ತಮಿಳುನಾಡಿನ ಪೊಲೀಸರೇ ಇರುವುದರಿಂದ ನಿಷ್ಪಕ್ಷಪಾತ ತನಿಖೆ ಸಾಧ್ಯವಿಲ್ಲ ಎಂದು ಹೇಳಿತ್ತು. ಅರ್ಜಿ ವಿಚಾರಣೆ ಬಳಿಕ ಕರೂರು ಕಾಲ್ತುಳಿತ ತನಿಖೆಯನ್ನು ಸಿಬಿಐಗೆ ವಹಿಸಿ ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಅಲ್ಲದೇ ಈ ತನಿಖೆಯನ್ನು ಮೇಲ್ವಿಚಾರಣೆ ಮಾಡಲು ನಿವೃತ್ತ ನ್ಯಾಯಾಧೀಶರಾದ ಅಜಯ್ ರಸ್ತೋಗಿ ಅವರ ಅಧ್ಯಕ್ಷತೆಯಲ್ಲಿ ಮೂರು ಸದಸ್ಯರ ಸಮಿತಿಯನ್ನ ಕೂಡ ಸುಪ್ರೀಂ ಕೋರ್ಟ್ ರಚಿಸಿತ್ತು.ಇದನ್ನೂ ಓದಿ: ಕರೂರು ಕಾಲ್ತುಳಿತ ದುರಂತದ ತನಿಖೆ ಆರಂಭಿಸಿದ ಸಿಬಿಐ

    ಸದ್ಯ ಸುಪ್ರೀಂಕೋರ್ಟ್ ರಚಿಸಿದ ಸಮಿತಿಯು ಸಿಬಿಐ ನಿರ್ದೇಶಕರ ಬಳಿ ಕೆಲವು ದಾಖಲೆಗಳನ್ನು ಕೋರಿದ್ದು, ತನಿಖೆಯ ಭಾಗವಾಗಿ ಘಟನಾ ಸ್ಥಳಕ್ಕೆ ಸುಪ್ರೀಂಕೋರ್ಟ್ ನೇಮಿಸಿದ ಸಮಿತಿಯು ಭೇಟಿ ನೀಡಲಿದೆ ಎನ್ನಲಾಗಿದೆ. ಸುಪ್ರೀಂ ಕೋರ್ಟ್ ರಚಿಸಿರುವ ಈ ಸಮಿತಿಯಲ್ಲಿ ತಮಿಳುನಾಡು ಕೇಡರ್‌ನ ಇಬ್ಬರು ಹಿರಿಯ ಐಪಿಎಸ್ ಅಧಿಕಾರಿಗಳಾದ ಸುಮಿತ್ ಸರನ್ ಮತ್ತು ಸೋನಲ್ ವಿ ಮಿಶ್ರಾ ಕೂಡ ಇದ್ದಾರೆ.

    ಸೆಪ್ಟೆಂಬರ್ 27ರಂದು ನಟ, ಟಿವಿಕೆ ಮುಖ್ಯಸ್ಥ ವಿಜಯ್ ತಮಿಳುನಾಡಿನ ಕರೂರಿನಲ್ಲಿ ರ‍್ಯಾಲಿ ಹಮ್ಮಿಕೊಂಡಿದ್ದರು. ಈ ವೇಳೆ ವಿಜಯ್ ಅನ್ನು ನೋಡಲು ಲಕ್ಷಾಂತರ ಜನರು ಆಗಮಿಸಿದ್ದರು. ಜೊತೆಗೆ ಆ ದಿನ ವಿಜಯ್ ಕರೂರಿಗೆ 7 ಗಂಟೆ ತಡವಾಗಿ ಆಗಮಿಸಿದ್ದರು. ಇದರಿಂದ ಜನಸಂದಣಿ ಹೆಚ್ಚಾಗಿ, ಕಾಲ್ತುಳಿತ ಸಂಭವಿಸಿತ್ತು. ಪರಿಣಾಮ 41 ಜನರು ಸಾವನ್ನಪ್ಪಿದ್ದರು.ಇದನ್ನೂ ಓದಿ: ಕರೂರು ಕಾಲ್ತುಳಿತ ದುರಂತ – ಸಿಬಿಐ ತನಿಖೆಗೆ ಸುಪ್ರೀಂ ಆದೇಶ

  • ದೇಶಾದ್ಯಂತ ʻಡಿಜಿಟಲ್ ಅರೆಸ್ಟ್ʼ ಹಾವಳಿ – ಸಿಬಿಐ ತನಿಖೆಗೆ ಸುಪ್ರೀಂ ಒಲವು

    ದೇಶಾದ್ಯಂತ ʻಡಿಜಿಟಲ್ ಅರೆಸ್ಟ್ʼ ಹಾವಳಿ – ಸಿಬಿಐ ತನಿಖೆಗೆ ಸುಪ್ರೀಂ ಒಲವು

    – ಎಫ್‌ಐಆರ್‌ ವಿವರ ನೀಡಲು ಎಲ್ಲಾ ರಾಜ್ಯಗಳಿಗೆ ನಿರ್ದೇಶನ

    ನವದೆಹಲಿ: ದೇಶಾದ್ಯಂತ ಹೆಚ್ಚುತ್ತಿರುವ ʻಡಿಜಿಟಲ್ ಅರೆಸ್ಟ್ʼ (Digital Arrest) ವಂಚನೆ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್ (Supreme Court), ಈ ಪ್ರಕರಣಗಳ ತನಿಖೆಯನ್ನ ಕೇಂದ್ರೀಯ ತನಿಖಾ ದಳಕ್ಕೆ (CBI) ವಹಿಸುವ ಕುರಿತು ಚಿಂತನೆ ನಡೆಸಿದೆ.

    ನ್ಯಾಯಾಧೀಶರು ಮತ್ತು ಪೊಲೀಸ್ ಅಧಿಕಾರಿಗಳ ಸೋಗಿನಲ್ಲಿ ನಕಲಿ ದಾಖಲೆಗಳನ್ನ ಬಳಸಿ ವಂಚಕರು ನಡೆಸುತ್ತಿರುವ ಈ ಕೃತ್ಯಗಳ ಬಗ್ಗೆ ಸಮಗ್ರ ತನಿಖೆಯ ಅಗತ್ಯವಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಇದರೊಂದಿಗೆ ಡಿಜಿಟಲ್‌ ಅರೆಸ್ಟ್‌ ಪ್ರಕರಣಗಳಿಗೆ ಸಂಬಂಧ ದಾಖಲಾಗಿರುವ ಎಫ್‌ಐಆರ್‌ಗಳ ವಿವರ ನೀಡುವಂತೆ ಎಲ್ಲಾ ರಾಜ್ಯಗಳಿಗೆ ನಿರ್ದೇಶನ ನೀಡಿದೆ.

    ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾ. ಸೂರ್ಯ ಕಾಂತ್ ಮತ್ತು ಜೋಯ್ಮಲ್ಯ ಬಾಗ್ಚಿ ಅವರಿದ್ದ ಪೀಠವು ತನಿಖೆಯನ್ನ ಕೇಂದ್ರ ತನಿಖಾ ದಳಕ್ಕೆ (CBI) ಹಸ್ತಾಂತರಿಸುವ ಬಗ್ಗೆಯೂ ಚಿಂತನೆ ನಡೆಸಿದೆ. ಈ ಬಗ್ಗೆ ದೇಶಾದ್ಯಂತದ ದಾಖಲಾಗಿರುವ ಎಲ್ಲಾ ಪ್ರಕರಣಗಳನ್ನ ನಿರ್ವಹಿಸಲು ಸಿಬಿಐಗೆ ಸಂಪನ್ಮೂಲಗಳಿವೆಯೇ ಎಂದು ಪ್ರಶ್ನಿಸಿತು. ಆಗ ಸಿಬಿಐ ಈಗಾಗಲೇ ಕೆಲವು ಪ್ರಕರಣಗಳನ್ನು ನಿಭಾಯಿಸುತ್ತಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನ್ಯಾಯಪೀಠಕ್ಕೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ನ್ಯಾಯಮೂರ್ತಿ ಬಾಗ್ಚಿ, ಎಲ್ಲಾ ಪ್ರಕರಣಗಳನ್ನ ನಿರ್ವಹಿಸಲು ಸಿಬಿಐ ಬಳಿ ಅಗತ್ಯ ಸಂಪನ್ಮೂಲಗಳಿವೆಯೇ ಪರಿಶೀಲಿಸುವಂತೆ ಸೂಚಿಸಿದರು.

    ಸೈಬರ್ ಅಪರಾಧದಲ್ಲಿ (Cyber Crime) ಅವರಿಗೆ ತಜ್ಞರು ಬೇಕಾದರೆ ನಮಗೆ ಹೇಳಬಹುದು ಎಂದು ನ್ಯಾಯಮೂರ್ತಿ ಸೂರ್ಯಕಾಂತ್ ಹೇಳಿದರು. ಇದಕ್ಕೆ ಉತ್ತರಿಸಿದ ತುಷಾರ್ ಮೆಹ್ತಾ, ಸಿಬಿಐ ಗೃಹ ಸಚಿವಾಲಯದ ಸೈಬರ್ ಅಪರಾಧ ವಿಭಾಗದ ಸಹಾಯ ಪಡೆಯುತ್ತಿದೆ ಎಂದು ವಿವರಿಸಿದರು.

    Digital Arrest

    ಅಂತಿಮವಾಗಿ ಏಕರೂಪದ ತನಿಖೆ ನಡೆಯುವಂತೆ ನೋಡಿಕೊಳ್ಳಲು ನಾವು ಇಂದು ನಿರ್ದೇಶನಗಳನ್ನು ನೀಡುತ್ತಿಲ್ಲ. ನಾವು ಎಲ್ಲ ರಾಜ್ಯಗಳಿಗೆ ನೋಟಿಸ್ ನೀಡುತ್ತಿದ್ದೇವೆ ಎಂದು ನ್ಯಾಯಮೂರ್ತಿ ಕಾಂತ್ ಹೇಳಿದರು. ದೇಶಾದ್ಯಂತ ಹೆಚ್ಚುತ್ತಿರುವ ಡಿಜಿಟಲ್ ಅರೆಸ್ಟ್‌ ಹಗರಣಗಳ ಬೆದರಿಕೆಯನ್ನ ಪರಿಹರಿಸಲು ಅಕ್ಟೋಬರ್ 17 ರಂದು ನ್ಯಾಯಾಲಯವು ಸ್ವಯಂಪ್ರೇರಿತ ಪ್ರಕರಣವನ್ನು ದಾಖಲಿಸಿಕೊಂಡಿದೆ.

    ಡಿಜಿಟಲ್ ಅರೆಸ್ಟ್ ಎಂದರೇನು?
    ಡಿಜಿಟಲ್ ಅರೆಸ್ಟ್‌ ಸೈಬರ್ ವಂಚನೆಯ ಒಂದು ವಿಧಾನ. ಇದರಲ್ಲಿ ವಂಚಕರು ಕಾನೂನು ಅಧಿಕಾರಿಗಳಂತೆ ಪೋಸ್ ನೀಡುತ್ತಾರೆ. ಆಡಿಯೊ ಅಥವಾ ವೀಡಿಯೊ ಕರೆಗಳಲ್ಲಿ ಜನರನ್ನು ಬೆದರಿಸುತ್ತಾರೆ. ಬಂಧನದ ಸುಳ್ಳು ನೆಪದಲ್ಲಿ ಡಿಜಿಟಲ್ ಒತ್ತೆಯಾಳುಗಳನ್ನಾಗಿ ಮಾಡಿ ಹಣ ಪೀಕುತ್ತಾರೆ.

  • ಕರೂರು ಕಾಲ್ತುಳಿತ ದುರಂತದ ತನಿಖೆ ಆರಂಭಿಸಿದ ಸಿಬಿಐ

    ಕರೂರು ಕಾಲ್ತುಳಿತ ದುರಂತದ ತನಿಖೆ ಆರಂಭಿಸಿದ ಸಿಬಿಐ

    ನವದೆಹಲಿ: ನಟ, ರಾಜಕಾರಣಿ ವಿಜಯ್ (Vijay) ಅವರ ಚುನಾವಣಾ ರ‍್ಯಾಲಿಯ ವೇಳೆ ಸಂಭವಿಸಿದ ಕರೂರು ಕಾಲ್ತುಳಿತ (Karur Stampede) ದುರಂತದ ತನಿಖೆಯನ್ನು ಕೇಂದ್ರ ತನಿಖಾ ದಳ (CBI) ವಹಿಸಿಕೊಂಡಿದ್ದು, ತನಿಖೆ ಆರಂಭಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಕಾಲ್ತುಳಿತ ಸಂಭವಿಸಿದ ಸ್ಥಳಕ್ಕೆ ಸಿಬಿಐ ತಂಡ ಈಗಾಗಲೇ ಭೇಟಿ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೆಪ್ಟೆಂಬರ್ 27 ರಂದು ತಮಿಳುನಾಡಿನ ಕರೂರಿನಲ್ಲಿ ನಟ ವಿಜಯ್ ನೇತೃತ್ವದಲ್ಲಿ ನಡೆದ ರಾಜಕೀಯ ರ‍್ಯಾಲಿ ವೇಳೆ ಕಾಲ್ತುಳಿತ ಸಂಭವಿಸಿ 41 ಮಂದಿ ಸಾವನ್ನಪ್ಪಿದ್ದರು. ಹಲವರು ಗಾಯಗೊಂಡಿದ್ದರು. ಇದನ್ನೂ ಓದಿ: ಕರ್ನೂಲ್‌ ದುರಂತದ ಬಳಿಕ ಎಚ್ಚೆತ್ತ ಸಾರಿಗೆ ಇಲಾಖೆ – ಬಸ್‌ಗಳಲ್ಲಿ ಈ ವಸ್ತುಗಳನ್ನ ಕೊಂಡೊಯ್ಯುವಂತಿಲ್ಲ!

    ನಟ ದಳಪತಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ ಪಕ್ಷ ಸ್ವತಂತ್ರ ತನಿಖೆಗೆ ಕೋರಿ ಅರ್ಜಿ ಸಲ್ಲಿಸಿತ್ತು. ಎಸ್‌ಐಟಿಯಲ್ಲಿ (SIT) ತಮಿಳುನಾಡಿನ ಪೊಲೀಸರೇ ಇರುವುದರಿಂದ ನಿಷ್ಪಕ್ಷಪಾತ ತನಿಖೆ ಸಾಧ್ಯವಿಲ್ಲ ಎಂದು ಹೇಳಿತ್ತು. ಅರ್ಜಿ ವಿಚಾರಣೆ ಬಳಿಕ ಕರೂರು ಕಾಲ್ತುಳಿತ ತನಿಖೆಯನ್ನು ಸಿಬಿಐಗೆ ವಹಿಸಿ ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಇದನ್ನೂ ಓದಿ: ಜನವರಿಯಲ್ಲಿ ನನಗೆ ಶುಕ್ರದೆಸೆ ಬರುವುದು ಪಕ್ಕಾ – ಸಚಿವನಾಗುವ ಇಂಗಿತ ವ್ಯಕ್ತಪಡಿಸಿದ ಲಕ್ಷ್ಮಣ ಸವದಿ

    ಈ ತನಿಖೆಯನ್ನು ಮೇಲ್ವಿಚಾರಣೆ ಮಾಡಲು ನಿವೃತ್ತ ನ್ಯಾಯಾಧೀಶರಾದ ಅಜಯ್ ರಸ್ತೋಗಿ ಅವರ ಅಧ್ಯಕ್ಷತೆಯಲ್ಲಿ ಮೂರು ಸದಸ್ಯರ ಸಮಿತಿಯನ್ನ ಕೂಡ ಸುಪ್ರೀಂ ಕೋರ್ಟ್ ರಚಿಸಿತ್ತು. ಇದನ್ನೂ ಓದಿ: ಶಬರಿಮಲೆ ಚಿನ್ನ ಕಳ್ಳತನ ಪ್ರಕರಣ – ಅಸಲಿ ಚಿನ್ನದ ಬಾಗಿಲು ತಾನೇ ಇಟ್ಟುಕೊಂಡು ತಾಮ್ರದ ಬಾಗಿಲನ್ನು ದೇಗುಲಕ್ಕೆ ಕೊಟ್ಟಿದ್ದ ಉನ್ನಿಕೃಷ್ಣನ್

  • ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಕೇಸ್ – ನಟಿ ರಿಯಾ ಚಕ್ರವರ್ತಿಗೆ CBIನಿಂದ ಕ್ಲೀನ್‌ಚಿಟ್

    ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಕೇಸ್ – ನಟಿ ರಿಯಾ ಚಕ್ರವರ್ತಿಗೆ CBIನಿಂದ ಕ್ಲೀನ್‌ಚಿಟ್

    – ಸುಶಾಂತ್ ಸಿಂಗ್ ಆತ್ಮಹತ್ಯೆಗೂ 6 ದಿನ ಮೊದಲು ಅಪಾರ್ಟ್ಮೆಂಟ್‌ನಿಂದ ಹೋಗಿದ್ದ ರಿಯಾ ಚಕ್ರವರ್ತಿ

    ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಆತ್ಮಹತ್ಯೆ ಕೇಸಲ್ಲಿ ಗೆಳತಿ-ನಟಿ ರಿಯಾ ಚಕ್ರವರ್ತಿಗೆ (Rhea Chakraborty) ಸಿಬಿಐ ಕ್ಲೀನ್‌ಚಿಟ್ ಕೊಟ್ಟಿದೆ.

    ಪಾಟ್ನಾದ ಕೋರ್ಟ್‌ಗೆ ಸಿಬಿಐ (CBI) ಸಲ್ಲಿಸಿದ್ದ ಕ್ಲೋಸರ್ ರಿಪೋರ್ಟ್‌ನ ಅಂಶಗಳು ಬೆಳಕಿಗೆ ಬಂದಿವೆ. 6 ದಿನಗಳ ಮೊದಲೇ ರಿಯಾ ಅಪಾರ್ಟ್ಮೆಂಟ್‌ನಿಂದ ಹೊರಟಿದ್ದರು. ಹಣಕಾಸಿನ ಯಾವುದೇ ಅವ್ಯವಹಾರ ನಡೆದಿಲ್ಲ ಅಂತ ಉಲ್ಲೇಖಿಸಿದೆ.ಇದನ್ನೂ ಓದಿ: ಸುಶಾಂತ್‌ ಸಿಂಗ್‌ ರಜಪೂತ್‌ ಆತ್ಮಹತ್ಯೆಗೆ ಯಾರೂ ಪ್ರಚೋದನೆ ಮಾಡಿಲ್ಲ: ಅಂತಿಮ ವರದಿ ಸಲ್ಲಿಸಿದ ಸಿಬಿಐ

    2020ರಲ್ಲಿ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣ ಸಂಬಂಧ ಸುಶಾಂತ್ ಸಿಂಗ್ ತಂದೆ ಕೆ.ಕೆ. ಸಿಂಗ್ ಅವರು ರಿಯಾ ಚಕ್ರವರ್ತಿ ಮೇಲೆ ಆರೋಪ ಹೊರಿಸಿದ್ದರು. ಇದೀಗ ಸಿಬಿಐ ರಿಯಾ ಚಕ್ರವರ್ತಿಗೆ ಕ್ಲೀನ್‌ಚಿಟ್ ನೀಡಿದೆ. ಆದರೆ ಸಿಬಿಐ ರಿಪೋರ್ಟ್‌ಗೆ ಸುಶಾಂತ್ ಕುಟುಂಬಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ಸಿಬಿಐ ಅಂತಿಮ ವರದಿಯ 5 ಪ್ರಮುಖ ಅಂಶಗಳೇನು?
    1. ಸುಶಾಂತ್ ಸಿಂಗ್ ಆತ್ಮಹತ್ಯೆಗೂ 6 ದಿನಗಳ ಮೊದಲೇ ಅಂದರೆ 2020ರ ಜೂ.8ರಂದು ರಿಯಾ ಚಕ್ರವರ್ತಿ ಹಾಗೂ ಅವರ ಸಹೋದರ ಶೋವಿಕ್ ಚಕ್ರವರ್ತಿ ಸುಶಾಂತ್ ಸಿಂಗ್ ಫ್ಲ್ಯಾಟ್‌ನಿಂದ ಹೊರಟಿದ್ದರು. ಅದಾದ ಬಳಿಕ ಅರ‍್ಯಾರು ಸುಶಾಂತ್‌ನ್ನು ಭೇಟಿಯಾಗಿಲ್ಲ. ಅದಲ್ಲದೇ ಜೂ.8ರಿಂದ ಜೂ.14ರ ಮಧ್ಯೆ ಆರೋಪಿಗಳ ಪೈಕಿ ಯಾರೂ ಕೂಡ ಸುಶಾಂತ್ ಜೊತೆ ಇರಲಿಲ್ಲ. ರಿಯಾ ಚಕ್ರವರ್ತಿ ಹೋದ ನಂತರ, ಜೂ.10ರಂದು ಶೋವಿಕ್ ಚಕ್ರವರ್ತಿ ಮತ್ತು ಸುಶಾಂತ್ ಸಿಂಗ್ ರಜಪೂತ್ ನಡುವೆ ಒಂದೇ ಒಂದು ವಾಟ್ಸಪ್ ಮೆಸೇಜ್ ಬಿಟ್ಟರೆ, ಅವರಿಬ್ಬರ ನಡುವೆ ಯಾವುದೇ ಮಾತುಕತೆ ನಡೆದಿಲ್ಲ.

    2 ಸುಶಾಂತ್ ಸಹೋದರಿ ಮೀತು ಸಿಂಗ್ ಜೂ.8ರಿಂದ ಜೂ.12ರವರೆಗೆ ಸುಶಾಂತ್ ಅವರೊಂದಿಗಿದ್ದರು. ಇನ್ನೂ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾದ ಮ್ಯಾನೇಜರ್ ಶ್ರುತಿ ಮೋದಿ 2020ರ ಫೆಬ್ರವರಿಯಿಂದ ಕಾಲಿಗೆ ಗಾಯವಾದ ಕಾರಣ ಸುಶಾಂತ್ ಅವರ ಮನೆಗೆ ಬಂದಿರಲಿಲ್ಲ.

    3. ರಿಯಾ ಚಕ್ರವರ್ತಿ ಅವರು ಸುಶಾಂತ್ ಸಿಂಗ್ ರಜಪೂತ್ ಅವರ ಕೆಲವು ವಸ್ತುಗಳನ್ನು ತೆಗೆದುಕೊಂಡಿದ್ದಾರೆ ಎಂದು ಆರೋಪ ಕೇಳಿಬಂದಿತ್ತು. ಇದರ ಆಧಾರದ ಮೇಲೆ ತನಿಖೆ ಮಾಡಿದಾಗ ಸುಶಾಂತ್ ಅವರು ಉಡುಗೊರೆಯಾಗಿ ನೀಡಿದ್ದ ಆಪಲ್ ಲ್ಯಾಪ್‌ಟಾಪ್ ಮತ್ತು ವಾಚ್‌ನ್ನು ಮಾತ್ರ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಇದರ ಹೊರತಾಗಿ ಯಾವುದೇ ಹಣಕಾಸಿನ ಯಾವುದೇ ಅವ್ಯವಹಾರ ನಡೆದಿರುವುದಕ್ಕೆ ಪುರಾವೆಗಳಿಲ್ಲ.

    4. ವರದಿಗಳ ಪ್ರಕಾರ 2019ರ ಏಪ್ರಿಲ್‌ನಿಂದ ರಿಯಾ ಹಾಗೂ ಸುಶಾಂತ್ ಅವರು ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದರು. ಅದಾದ ಬಳಿಕ ಸುಶಾಂತ್ ಅವರೇ ರಿಯಾ ನಮ್ಮ ಕುಟುಂಬದ ಭಾಗ ಎಂದು ಹೇಳಿಕೊಂಡಿದ್ದರು. ಅದಲ್ಲದೇ ರಿಯಾ ಅವರಿಗೆ ಸಂಬಂಧಿಸಿದ ಖರ್ಚುಗಳನ್ನು ಸುಶಾಂತ್ ಸಿಂಗ್ ಅವರ ಅಕೌಂಟೆಂಟ್ ನೋಡಿಕೊಳ್ಳುತ್ತಿದ್ದರು. ಇದನ್ನು ವಂಚನೆ ಎಂದು ಪರಿಗಣಿಸಲು ಸಾಧ್ಯವಿಲ್ಲ.

    5. ರಿಯಾ ಚಕ್ರವರ್ತಿ ಅವರು ಸುಶಾಂತ್ ಸಿಂಗ್ ರಜಪೂತ್ ಅವರಿಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪಗಳನ್ನು ಸಿಬಿಐ ತಳ್ಳಿಹಾಕಿದೆ. ಹೀಗಾಗಿ ಆತ್ಮಹತ್ಯೆಗೆ ಪ್ರಚೋದಿಸುವಂತದ್ದು ಏನೂ ನಡೆದಿಲ್ಲ ಎಂದು ಸಿಬಿಐ ವರದಿಯಲ್ಲಿ ತಿಳಿಸಿದೆ.ಇದನ್ನೂ ಓದಿ: ಮರಣೋತ್ತರ ಪರೀಕ್ಷೆ ಪೂರ್ಣ- ಮತ್ತೊಂದು ಆಸ್ಪತ್ರೆಗೆ ದೇಹದ ಭಾಗ ರವಾನೆ

  • IPS ಅಧಿಕಾರಿ ಮನೆ ಮೇಲೆ ದಾಳಿ ಮಾಡಿದ ಸಿಬಿಐಗೆ ಶಾಕ್‌ – 5 ಕೋಟಿ ಹಣ, ಮರ್ಸಿಡಿಸ್‌, ಆಡಿ ಕಾರು ವಶಕ್ಕೆ

    IPS ಅಧಿಕಾರಿ ಮನೆ ಮೇಲೆ ದಾಳಿ ಮಾಡಿದ ಸಿಬಿಐಗೆ ಶಾಕ್‌ – 5 ಕೋಟಿ ಹಣ, ಮರ್ಸಿಡಿಸ್‌, ಆಡಿ ಕಾರು ವಶಕ್ಕೆ

    ಚಂಡೀಗಢ: ಪಂಜಾಬ್‌ನ ರೋಪರ್ ರೇಂಜ್‌ನಲ್ಲಿ ಡೆಪ್ಯೂಟಿ ಇನ್ಸ್‌ಪೆಕ್ಟರ್ ಜನರಲ್ (ಡಿಐಜಿ) ಆಗಿ ನೇಮಕಗೊಂಡ ಹಿರಿಯ ಐಪಿಎಸ್ ಅಧಿಕಾರಿಯನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಬಂಧಿಸಿದೆ. ಐಪಿಎಸ್ ಅಧಿಕಾರಿ ಮನೆಯಿಂದ 5 ಕೋಟಿ ರೂ. ನಗದು, ಮರ್ಸಿಡಿಸ್, ಆಡಿ ಕಾರು ವಶಕ್ಕೆ ಪಡೆದಿದ್ದಾರೆ.

    8 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದ ಪ್ರಕರಣ ತನಿಖೆ ವೇಳೆ ಸಿಬಿಐಗೆ ಶಾಕ್‌ ಎದುರಾಗಿದೆ. ಐಪಿಎಸ್‌ ಅಧಿಕಾರಿ ಮನೆಯಲ್ಲಿ 5 ಕೋಟಿ ರೂ. ನಗದು, ಐಷಾರಾಮಿ ವಾಹನಗಳು, ಆಭರಣಗಳು ಮತ್ತು ಉನ್ನತ ದರ್ಜೆಯ ವಾಚ್‌ಗಳು ಸೇರಿದಂತೆ ಅಪಾರ ಸಂಪತ್ತು ಪತ್ತೆಯಾಗಿದೆ.

    2009 ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ಡಿಐಜಿ ಹರ್‌ಚರಣ್ ಸಿಂಗ್ ಭುಲ್ಲರ್ ಮತ್ತು ಅವರ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಿದ ಕೃಷ್ಣ ಎಂಬ ವ್ಯಕ್ತಿಯನ್ನು ಬಂಧಿಸಲಾಯಿತು. ಸ್ಥಳೀಯ ಉದ್ಯಮಿಯ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ಇತ್ಯರ್ಥಗೊಳಿಸಲು, ಹರ್‌ಚರಣ್‌ ಈ ಮಧ್ಯವರ್ತಿಯ ಮೂಲಕ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಲಂಚ ಸ್ವೀಕರಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ ಎಂದು ಸಿಬಿಐ ತಿಳಿಸಿದೆ.

    ಪಂಜಾಬ್‌ನ ಫತೇಘರ್ ಸಾಹಿಬ್‌ನಲ್ಲಿರುವ ಆಕಾಶ್ ಬಟ್ಟಾ ಎಂಬ ವ್ಯಾಪಾರಿ ಐದು ದಿನಗಳ ಹಿಂದೆ ಸಲ್ಲಿಸಿದ ಲಿಖಿತ ದೂರಿನ ಮೇರೆಗೆ ಸಿಬಿಐ ಈ ಪ್ರಕರಣ ದಾಖಲಿಸಿತ್ತು. ಡಿಐಜಿ ಭುಲ್ಲರ್ ಅವರು ಆರಂಭಿಕ ಲಂಚವಾಗಿ 8 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು. ಪ್ರಕರಣ ಇತ್ಯರ್ಥಗೊಳಿಸಿದ ನಂತರ ಉಳಿದ ಹಣ ನೀಡದಿದ್ದರೆ ಸುಳ್ಳು ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಕೆ ಹಾಕಿದ್ದರೆಂದು ದೂರಲಾಗಿತ್ತು.

    ಸಿಬಿಐನ ಎಫ್‌ಐಆರ್ ಪ್ರಕಾರ, ಭುಲ್ಲರ್ ತನ್ನ ಸಹಚರ ಕೃಷ್ಣ ಮೂಲಕ ಲಂಚಕ್ಕೆ ಒತ್ತಾಯಿಸಿದ್ದಾರೆ. ಕೃಷ್ಣ ಪದೇ ಪದೇ ಒತ್ತಡ ಹೇರುತ್ತಿದ್ದ ಎನ್ನಲಾಗಿದೆ.

  • ನೀವು ಪಿತೂರಿಯಲ್ಲಿ ತೊಡಗಿದ್ದೀರಿ – ರೈಲ್ವೇ ಹಗರಣದಲ್ಲಿ ಲಾಲು, ರಾಬ್ಡಿ, ತೇಜಸ್ವಿ ವಿರುದ್ಧ ದೋಷಾರೋಪ ನಿಗದಿ

    ನೀವು ಪಿತೂರಿಯಲ್ಲಿ ತೊಡಗಿದ್ದೀರಿ – ರೈಲ್ವೇ ಹಗರಣದಲ್ಲಿ ಲಾಲು, ರಾಬ್ಡಿ, ತೇಜಸ್ವಿ ವಿರುದ್ಧ ದೋಷಾರೋಪ ನಿಗದಿ

    ನವದೆಹಲಿ: ಬಿಹಾರ ಚುನಾವಣೆ (Bihar Election) ದಿನಾಂಕ ಘೋಷಣೆಯಾಗಿರುವಾಗಲೇ ಆರ್‌ಜೆಡಿಗೆ (RJD) ಬಿಗ್‌ ಶಾಕ್‌ ಸಿಕ್ಕಿದೆ. ಭಾರತೀಯ ರೈಲ್ವೇಯಲ್ಲಿ ನಡೆದಿದೆ ಎನ್ನಲಾಗಿರುವ ಹಗರಣಕ್ಕೆ ಸಂಬಂಧಿಸಿದಂತೆ ಆರ್‌ಜೆಡಿ ಪಕ್ಷದ ಮುಖ್ಯಸ್ಥ ಲಾಲು ಪ್ರಸಾದ್ (Lalu Prasad Yadav), ಬಿಹಾರ ಮಾಜಿ ಮುಖ್ಯಮಂತ್ರಿ ರಾಬ್ಡಿ ದೇವಿ (Rabri Devi) ಹಾಗೂ ಬಿಹಾರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ (Tejashwi Yadav) ವಿರುದ್ಧ ನ್ಯಾಯಾಲಯ ದೋಷಾರೋಪ ನಿಗದಿ ಮಾಡಿದೆ.

    ವಿಶೇಷ ನ್ಯಾಯಾಧೀಶ (ಭ್ರಷ್ಟಾಚಾರ ತಡೆ ಕಾಯ್ದೆ) ವಿಶಾಲ್ ಗೊಗ್ನೆ ಅವರು, ರಾಬ್ಡಿ ದೇವಿ ಹಾಗೂ ತೇಜಸ್ವಿ ವಿರುದ್ಧ ಕ್ರಿಮಿನಲ್ ಸಂಚು ಹಾಗೂ ಮೋಸದ ಆರೋಪ ಹೊರಿಸಿದ್ದಾರೆ. ಐಆರ್‌ಸಿಟಿಸಿಯ ಎರಡು ಹೋಟೆಲ್‌ಗಳನ್ನು ಖಾಸಗಿ ಸಂಸ್ಥೆಗೆ ಗುತ್ತಿಗೆ ನೀಡುವಾಗ ಅವ್ಯವಹಾರ ನಡೆದಿದೆ ಎಂದು ಆರೋಪಿಸಲಾಗಿದೆ.

    ನ್ಯಾಯಾಲಯವು ಲಾಲು ಪ್ರಸಾದ್ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿಯೂ ಆರೋಪಗಳನ್ನು ಹೊರಿಸಿದೆ. ದೋಷಾರೋಪ ನಿಗದಿ ಮಾಡುವ ಆದೇಶದ ವೇಳೆ ಮೂವರು ಖುದ್ದಾಗಿ ಕೋರ್ಟ್‌ನಲ್ಲಿ ಹಾಜರಿರಬೇಕು ಎಂದು ಮೂವರಿಗೂ ಕೋರ್ಟ್ ಸೆಪ್ಟೆಂಬರ್ 24ರಂದೇ ಸೂಚಿಸಿತ್ತು. ಇದನ್ನೂ ಓದಿ:  ಬಿಹಾರದಲ್ಲಿ ಸೀಟು ಹಂಚಿಕೆ ಇತ್ಯರ್ಥ – ಬಿಜೆಪಿ, ಜೆಡಿಯು ತಲಾ 101 ಸ್ಥಾನಗಳಲ್ಲಿ ಸ್ಪರ್ಧೆ

    ನೀವು ಪಿತೂರಿಯಲ್ಲಿ ತೊಡಗಿದ್ದೀರಿ ಮತ್ತು ಸರ್ಕಾರದ ಸೇವಕರಾಗಿ ನಿಮ್ಮ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದ್ದೀರಿ. ನೀವು ಟೆಂಡರ್ ಮೇಲೆ ಪ್ರಭಾವ ಬೀರಿದ್ದೀರಿ ಮತ್ತು ಅರ್ಹತಾ ಷರತ್ತುಗಳನ್ನು ನಿಮಗೆ ಬೇಕಾದಂತೆ ಬದಲಾಯಿಸಿದ್ದೀರಿ ಎಂದು ಕೋರ್ಟ್‌ ಹೇಳಿದೆ.

    ಸಿಬಿಐ ಚಾರ್ಜ್‌ಶೀಟ್‌ನಲ್ಲಿ ಏನಿದೆ?
    2004 ಮತ್ತು 2014 ರ ನಡುವೆ ಪಿತೂರಿ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಪುರಿ ಮತ್ತು ರಾಂಚಿಯಲ್ಲಿರುವ ಭಾರತೀಯ ರೈಲ್ವೆಯ ಹೋಟೆಲ್‌ಗಳನ್ನು ಮೊದಲು IRCTCಗೆ ವರ್ಗಾಯಿಸಲಾಗಿತ್ತು. ನಂತರ ಅದರ ಕಾರ್ಯಾಚರಣೆ, ನಿರ್ವಹಣೆ ಮತ್ತು ನಿರ್ವಹಣೆಗಾಗಿ ಬಿಹಾರದ ಪಾಟ್ನಾದಲ್ಲಿರುವ ಸುಜಾತಾ ಹೋಟೆಲ್ಸ್ ಪ್ರೈವೇಟ್ ಲಿಮಿಟೆಡ್‌ಗೆ ಗುತ್ತಿಗೆಗೆ ನೀಡಲಾಯಿತು.

    ಟೆಂಡರ್ ಪ್ರಕ್ರಿಯೆಯಲ್ಲಿ ಅಕ್ರಮ ಮಾಡಲಾಗಿದೆ. ಖಾಸಗಿ ಸಂಸ್ಥೆಯಾದ ಸುಜಾತಾ ಹೋಟೆಲ್ಸ್‌ಗೆ ಸಹಾಯ ಮಾಡಲು ಷರತ್ತುಗಳನ್ನು ಬದಲಾಯಿಸಲಾಗಿದೆ. ಇದನ್ನೂ ಓದಿ:  ಕರೂರು ಕಾಲ್ತುಳಿತ ದುರಂತ – ಸಿಬಿಐ ತನಿಖೆಗೆ ಸುಪ್ರೀಂ ಆದೇಶ

    ಚಾರ್ಜ್‌ಶೀಟ್‌ನಲ್ಲಿ ಐಆರ್‌ಸಿಟಿಸಿಯ ಗ್ರೂಪ್ ಜನರಲ್ ಮ್ಯಾನೇಜರ್‌ಗಳಾದ ವಿ ಕೆ ಅಸ್ತಾನಾ ಮತ್ತು ಆರ್ ಕೆ ಗೋಯಲ್, ಮತ್ತು ಸುಜಾತಾ ಹೋಟೆಲ್ಸ್‌ನ ನಿರ್ದೇಶಕರು ಮತ್ತು ಚಾಣಕ್ಯ ಹೋಟೆಲ್‌ನ ಮಾಲೀಕರಾದ ವಿಜಯ್ ಕೊಚ್ಚರ್, ವಿನಯ್ ಕೊಚ್ಚರ್ ಅವರ ಹೆಸರುಗಳಿವೆ.

    ಈಗ ಲಾರಾ ಪ್ರಾಜೆಕ್ಟ್ಸ್ ಎಂದು ಕರೆಯಲ್ಪಡುವ ಡಿಲೈಟ್ ಮಾರ್ಕೆಟಿಂಗ್ ಕಂಪನಿ ಮತ್ತು ಸುಜಾತಾ ಹೋಟೆಲ್ಸ್ ಪ್ರೈವೇಟ್ ಲಿಮಿಟೆಡ್ ಅನ್ನು ಸಹ ಚಾರ್ಜ್‌ಶೀಟ್‌ನಲ್ಲಿ ಆರೋಪಿ ಸಂಸ್ಥೆಗಳಾಗಿ ಹೆಸರಿಸಲಾಗಿದೆ.

  • ಕರೂರು ಕಾಲ್ತುಳಿತ ದುರಂತ – ಸಿಬಿಐ ತನಿಖೆಗೆ ಸುಪ್ರೀಂ ಆದೇಶ

    ಕರೂರು ಕಾಲ್ತುಳಿತ ದುರಂತ – ಸಿಬಿಐ ತನಿಖೆಗೆ ಸುಪ್ರೀಂ ಆದೇಶ

    – ದೇಶವನ್ನೇ ಬೆಚ್ಚಿಬೀಳಿಸಿದ ಘಟನೆ, ನಿಷ್ಪಕ್ಷಪಾತ ತನಿಖೆ ಅಗತ್ಯ; ಕೋರ್ಟ್‌

    ನವದೆಹಲಿ: ಸೆಪ್ಟೆಂಬರ್ 27 ರಂದು ತಮಿಳುನಾಡಿನ ಕರೂರಿನಲ್ಲಿ ನಡೆದ ಕಾಲ್ತುಳಿತ (Karur Stampede) ದುರಂತ ಪ್ರಕರಣದ ತನಿಖೆಯನ್ನ ಸಿಬಿಐಗೆ ವಹಿಸಿ ಸುಪ್ರೀಂ ಕೊರ್ಟ್‌ (Supreme Court) ಇಂದು ಆದೇಶಿಸಿದೆ.

    ನ್ಯಾಯಮೂರ್ತಿಗಳಾದ ಜೆ.ಕೆ. ಮಹೇಶ್ವರಿ ಮತ್ತು ಎನ್.ವಿ ಅಂಜಾರಿಯಾ ಅವರಿದ್ದ ದ್ವಿ ಸದಸ್ಯ ಪೀಠ ಈ ಮಹತ್ವದ ಆದೇಶ ನೀಡಿದೆ. ಇದನ್ನೂ ಓದಿ: TVK Vijay Rally Stampede | ಮದ್ರಾಸ್‌ ಹೈಕೋರ್ಟ್‌ನಲ್ಲಿಂದು ವಿಚಾರಣೆ – ಸಾವಿನ ಸಂಖ್ಯೆ 41ಕ್ಕೆ ಏರಿಕೆ

    TVK Vijay

    ಹೌದು. ಸೆಪ್ಟೆಂಬರ್ 27 ರಂದು ತಮಿಳುನಾಡಿನ ಕರೂರಿನಲ್ಲಿ ನಟ ವಿಜಯ್‌ ನೇತೃತ್ವದಲ್ಲಿ ನಡೆದ ರಾಜಕೀಯ ರ‍್ಯಾಲಿವೇಳೆ ಕಾಲ್ತುಳಿತ ಸಂಭವಿಸಿ 41 ಮಂದಿ ಸಾವನ್ನಪ್ಪಿದ್ದರು. ಹಲವರು ಗಾಯಗೊಂಡಿದ್ದರು. ಈ ತನಿಖೆಯನ್ನು ಮೇಲ್ವಿಚಾರಣೆ ಮಾಡಲು ನಿವೃತ್ತ ನ್ಯಾಯಾಧೀಶರಾದ ಅಜಯ್ ರಸ್ತೋಗಿ (Ajay Rastogi) ಅವರ ಅಧ್ಯಕ್ಷತೆಯಲ್ಲಿ ಮೂರು ಸದಸ್ಯರ ಸಮಿತಿಯನ್ನ ಕೂಡ ಸುಪ್ರೀಂ ಕೋರ್ಟ್‌ ರಚಿಸಿದೆ.

    ಇದು ರಾಷ್ಟ್ರವನ್ನೇ ಬೆಚ್ಚಿಬೀಳಿಸಿದ ಘಟನೆ ಎಂದಿರುವ ಕೋರ್ಟ್‌, ನ್ಯಾಯಯುತ ಮತ್ತು ನಿಷ್ಪಕ್ಷಪಾತ ತನಿಖೆಯ ಅಗತ್ಯವಿದೆ ಎಂದು ಹೇಳಿದೆ. ಸುಪ್ರೀಂ ಕೋರ್ಟ್‌ನ ಆದೇಶದಿಂದ ಸಿಎಂ ಎಂ.ಕೆ ಸ್ಟಾಲಿನ್‌ ನೇತೃತ್ವದ ಸರ್ಕಾರಕ್ಕೆ ಹಿನ್ನಡೆಯಾಗಿದೆ. ಇದನ್ನೂ ಓದಿ: Vijay Rally Stampede | ದುರಂತದ ಬೆನ್ನಲ್ಲೇ ನಟ ವಿಜಯ್‌ ನಿವಾಸಕ್ಕೆ ಬಾಂಬ್‌ ಬೆದರಿಕೆ – ಬಿಗಿ ಭದ್ರತೆ

    ನಟ ದಳಪತಿ ವಿಜಯ್‌ ನೇತೃತ್ವದ ತಮಿಳಗ ವೆಟ್ರಿ ಕಳಗಂ ಪಕ್ಷದಿಂದ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ಬಳಿಕ ಸುಪ್ರೀಂ ಕೋರ್ಟ್‌ ಸಿಬಿಐ ತನಿಖೆಗೆ ಆದೇಶಿಸಿದೆ. ಈ ಅರ್ಜಿಗಳು ಮದ್ರಾಸ್ ಹೈಕೋರ್ಟ್‌ನ ಏಕ ನ್ಯಾಯಾಧೀಶರು ನೀಡಿದ್ದ ವಿಶೇಷ ತನಿಖಾ ದಳ ತನಿಖೆಯ ಆದೇಶವನ್ನು ಪ್ರಶ್ನಿಸಿದ್ದವು. ಅಲ್ಲದೇ, ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠದ ವಿಭಾಗೀಯ ಪೀಠವು ಸಿಬಿಐ ತನಿಖೆಯನ್ನು (CBI Investigation) ತಿರಸ್ಕರಿಸಿದ್ದ ಆದೇಶವನ್ನೂ ಪ್ರಶ್ನಿಸಲಾಗಿತ್ತು. ಇದನ್ನೂ ಓದಿ: TVK Vijay Rally Stampede | ದುರಂತದಲ್ಲಿ 2 ವರ್ಷದ ಕಂದಮ್ಮ ಬಲಿ – ಕುಟುಂಬದಲ್ಲಿ ಮುಗಿಲು ಮುಟ್ಟಿದ ಆಕ್ರಂದನ

    ಕೋರ್ಟ್‌ ಹೇಳಿದೇನು?
    ವಾಸ್ತವಾಂಶ ಪರಿಶೀಲಿಸಿದಾಗ ಈ ವಿಷಯವು ನಾಗರಿಕರ ಮೂಲಭೂತ ಹಕ್ಕುಗಳ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಸಿಬಿಐಗೆ ಹಸ್ತಾಂತರಿಸಲು ನಿರ್ದೇಶಿಸಿದ್ದೇವೆ. ನ್ಯಾಯಯುತ ಮತ್ತು ನಿಷ್ಪಕ್ಷಪಾತ ತನಿಖೆ ಪ್ರತಿಯೊಬ್ಬ ನಾಗರಿಕರ ಹಕ್ಕು ಎಂಬುದರಲ್ಲಿ ಯಾವುದೇ ಸಂಶಯ ಇಲ್ಲ ಎಂದು ಕೋರ್ಟ್‌ ಹೇಳಿದೆ. ಇದನ್ನೂ ಓದಿ: Vijay Rally Stampede | 10 ವರ್ಷದ ಬಾಲಕಿ ಸಾವನ್ನ ಕಣ್ಣಾರೆ ಕಂಡೆ – ಕಾಲ್ತುಳಿತ ದುರಂತದ ಭೀಕರತೆ ಬಿಚ್ಚಿಟ್ಟ ಬೆಂಗ್ಳೂರಿನ ಪ್ರತ್ಯಕ್ಷದರ್ಶಿ

    ಎಲ್ಲಾ ರೀತಿಯ ಗೊಂದಲಗಳನ್ನ ನಿವಾರಿಸಲು ನಾವು ಮೂವರು ಸದಸ್ಯರ ಸಮಿತಿಯನ್ನು ರಚಿಸಿದ್ದೇವೆ. ನ್ಯಾಯಮೂರ್ತಿ ಅಜಯ್ ರಸ್ತೋಗಿ ಅವರು ಸಮಿತಿಯ ನೇತೃತ್ವ ವಹಿಸಲಿದ್ದಾರೆ. ಅಲ್ಲದೇ ರಾಜ್ಯದ ಸ್ಥಳೀಯರಲ್ಲದ ಇಬ್ಬರು ಐಪಿಎಸ್ ಅಧಿಕಾರಿಗಳು ಸಮಿತಿಯ ಭಾಗವಾಗಿರಲಿದ್ದಾರೆ. ನಿವೃತ್ತ ನ್ಯಾಯಾಧೀಶರ ನಿರ್ದೇಶನಗಳ ಪ್ರಕಾರ ಸಮಿತಿಯು ತನ್ನದೇ ಆದ ಕಾರ್ಯವಿಧಾನಗಳನ್ನ ರೂಪಿಸಬೇಕು. ಇದರೊಂದಿಗೆ ತನಿಖೆಯ ಮಾಸಿಕ ವರದಿಯನ್ನು ಸಿಬಿಐ ಸಮಿತಿ ಮುಂದಿಡಬೇಕು ಎಂದು ಸಹ ಕೋರ್ಟ್‌ ಹೇಳಿದೆ.

  • ಮಧ್ಯಪ್ರದೇಶದಲ್ಲಿ ಕೆಮ್ಮಿನ ಸಿರಪ್‌ ಸೇವಿಸಿ ಮಕ್ಕಳು ಸಾವು ಕೇಸ್‌ – CBI ತನಿಖೆಗೆ ನೀಡಲು ಸುಪ್ರೀಂ ನಕಾರ

    ಮಧ್ಯಪ್ರದೇಶದಲ್ಲಿ ಕೆಮ್ಮಿನ ಸಿರಪ್‌ ಸೇವಿಸಿ ಮಕ್ಕಳು ಸಾವು ಕೇಸ್‌ – CBI ತನಿಖೆಗೆ ನೀಡಲು ಸುಪ್ರೀಂ ನಕಾರ

    ಭೋಪಾಲ್: ಮಧ್ಯಪ್ರದೇಶ, ರಾಜಸ್ಥಾನದಲ್ಲಿ ಕೆಮ್ಮಿನ ಸಿರಪ್ (Cough Syrup) ಸೇವಿಸಿ ಮಕ್ಕಳು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ (CBI) ತನಿಖೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್‌ (Supreme Court) ವಜಾಗೊಳಿಸಿದೆ.

    ವಕೀಲ ವಿಶಾಲ್ ತಿವಾರಿ ಸಲ್ಲಿಸಿದ್ದ ಅರ್ಜಿಯನ್ನು ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಅವರಿದ್ದ ಪೀಠ ತಿರಸ್ಕರಿಸಿದೆ. ಇದನ್ನೂ ಓದಿ: ಕೆಮ್ಮಿನ ಸಿರಪ್ ಸೇವಿಸಿ 20ಕ್ಕೂ ಹೆಚ್ಚು ಮಕ್ಕಳ ಸಾವು – ಫಾರ್ಮಾ ಕಂಪನಿ ಮಾಲೀಕ ಅರೆಸ್ಟ್

    ವಿಷಕಾರಿ ದ್ರಾವಣವಾದ ಡೈಎಥಿಲಿನ್‌ ಗ್ಲೈಕಾಲ್‌ (ಡಿಇಜಿ) ಮತ್ತು ಎಥಿಲಿನ್‌ ಗ್ಲೈಕಾಲ್‌ (ಇಜಿ) ಇರುವ ಸಿರಪ್‌ ಸೇವಿಸಿದ 20 ಮಕ್ಕಳು ಮೂತ್ರಪಿಂಡ ಸೋಂಕಿನಿಂದ ಮೃತಪಟ್ಟಿದ್ದಾರೆ. ಕೆಲ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ.

    ಘಟನೆ ಕುರಿತು ಮಧ್ಯಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಕ್ಕಳ ಸಾವಿಗೆ ಕಾರಣವಾದ ಕೋಲ್ಡ್‌ರಿಫ್‌ ಕೆಮ್ಮಿನ ಸಿರಪ್‌ ತಯಾರಿಸುವ ಶ್ರೇಸನ್‌ ಫಾರ್ಮಾಸ್ಯುಟಿಕಲ್‌ ಕಾರ್ಖಾನೆ ಮಾಲೀಕನನ್ನು ಈಗಾಗಲೇ ಬಂಧಿಸಲಾಗಿದೆ. ಇದನ್ನೂ ಓದಿ: ಮಧ್ಯಪ್ರದೇಶ | ಕಿಲ್ಲರ್ ಕಾಫ್ ಸಿರಪ್ ಸೇವಿಸಿ ಚಿಕಿತ್ಸೆ ಪಡೆಯುತ್ತಿದ್ದ 6 ಮಕ್ಕಳು ಸಾವು

    ಮಧ್ಯಪ್ರದೇಶ ಘಟನೆ ಬಳಿಕ ಎಚ್ಚೆತ್ತ ತಮಿಳುನಾಡು ಸರ್ಕಾರ, ಶ್ರೇಯಸ್‌ ಫಾರ್ಮಾಸ್ಯುಟಿಕಲ್ಸ್‌ ಕಾರ್ಖಾನೆಗೆ ಬೀಗ ಜಡಿದಿದೆ. ಕಂಪನಿಯ ಇಬ್ಬರಿಗೆ ಶೋಕಾಸ್‌ ನೋಟಿಸ್‌ ನೀಡಿದೆ.

  • ನಟ ವಿಜಯ್ ರ‍್ಯಾಲಿಯಲ್ಲಿ ಕಾಲ್ತುಳಿತ ಪ್ರಕರಣ – ಸಿಬಿಐ ತನಿಖೆಗೆ ನಿರಾಕರಿಸಿದ ಮದ್ರಾಸ್ ಹೈಕೋರ್ಟ್

    ನಟ ವಿಜಯ್ ರ‍್ಯಾಲಿಯಲ್ಲಿ ಕಾಲ್ತುಳಿತ ಪ್ರಕರಣ – ಸಿಬಿಐ ತನಿಖೆಗೆ ನಿರಾಕರಿಸಿದ ಮದ್ರಾಸ್ ಹೈಕೋರ್ಟ್

    – ರಾಜಕೀಯ ರ‍್ಯಾಲಿ ಕಠಿಣ ಷರತ್ತು

    ಚೆನ್ನೈ: ಕರೂರಿನಲ್ಲಿ ನಟ, ರಾಜಕಾರಣಿ ವಿಜಯ್ ಅವರ ರ‍್ಯಾಲಿಯಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 41 ಜನರು ಸಾವನ್ನಪ್ಪಿದ ಪ್ರಕರಣದ ತನಿಖೆಯನ್ನು ಕೇಂದ್ರೀಯ ತನಿಖಾ ದಳಕ್ಕೆ ಆದೇಶಿಸಲು ಮದ್ರಾಸ್ ಹೈಕೋರ್ಟ್ ನಿರಾಕರಿಸಿದೆ.

    ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಅರ್ಜಿಗಳನ್ನು ಒಟ್ಟುಗೂಡಿಸಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಂ ದಂಡಪಾಣಿ ಮತ್ತು ಎಂ ಜೋತಿರಾಮನ್ ಅವರ ಪೀಠವು ಸಿಬಿಐ ತನಿಖೆಗೆ ನೀಡಲು ನಿರಾಕರಿಸಿತು.

    ಘಟನೆಯ ಕುರಿತು ತಮಿಳುನಾಡು ಪೊಲೀಸರ ತನಿಖೆ ಆರಂಭಿಕ ಹಂತದಲ್ಲಿದೆ. ಸಿಬಿಐ ತನಿಖೆ ಕೋರಿದ ಅರ್ಜಿದಾರರು ಕಾಲ್ತುಳಿತಕ್ಕೆ ಬಲಿಯಾಗಿರಲಿಲ್ಲ. ಕಾಲ್ತುಳಿತಕ್ಕೆ ಬಲಿಯಾದ ಕುಟುಂಬಸ್ಥರು ಈ ನ್ಯಾಯಾಲಯಕ್ಕೆ ಬಂದರೆ, ನಾವು ಅವರನ್ನು ರಕ್ಷಿಸುತ್ತೇವೆ. ಈ ನ್ಯಾಯಾಲಯವನ್ನು ರಾಜಕೀಯ ಕ್ಷೇತ್ರವೆಂದು ಪರಿಗಣಿಸಬೇಡಿ. ತನಿಖೆಯಲ್ಲಿ ಏನಾದರೂ ತಪ್ಪಾದಲ್ಲಿ, ನೀವು ಬನ್ನಿ. ತನಿಖೆ ಇನ್ನು ಆರಂಭಿಕ ಹಂತದಲ್ಲಿದೆ ಎಂದು ನ್ಯಾಯಾಲಯ ಛೀಮಾರಿ ಹಾಕಿದೆ.

    ರಾಜ್ಯ ಅಥವಾ ರಾಷ್ಟ್ರೀಯ ಹೆದ್ದಾರಿಗಳ ಬಳಿ ಯಾವುದೇ ರ‍್ಯಾಲಿಗಳು ಅಥವಾ ಸಭೆಗಳನ್ನು ನಡೆಸಲು ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನಗಳು (SOP ಗಳು) ರೂಪಿಸುವವರೆಗೆ ಅನುಮತಿಸುವುದಿಲ್ಲ ಎಂಬ ರಾಜ್ಯ ಸರ್ಕಾರದ ವಾದವನ್ನು ನ್ಯಾಯಪೀಠ ದಾಖಲಿಸಿಕೊಂಡಿತು.

    ರಾಜಕೀಯ ರ‍್ಯಾಲಿಗಳು ಅಥವಾ ಸಭೆಗಳು ನಡೆದಾಗಲೆಲ್ಲಾ, ಗೊತ್ತುಪಡಿಸಿದ ಸ್ಥಳಗಳಲ್ಲಿಯೂ ಸಹ, ಕುಡಿಯುವ ನೀರು ಮತ್ತು ನೈರ್ಮಲ್ಯ ಸೌಲಭ್ಯಗಳಿಗೆ ಸೂಕ್ತ ವ್ಯವಸ್ಥೆಗಳನ್ನು ಮಾಡಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ನ್ಯಾಯಾಲಯವು ಸರ್ಕಾರ ಮತ್ತು ರಾಜಕೀಯ ಪಕ್ಷಗಳಿಗೆ ನಿರ್ದೇಶನ ನೀಡಿತು. ಇದಲ್ಲದೆ, ರ‍್ಯಾಲಿಗಳಲ್ಲಿ ತಪ್ಪಿಸಿಕೊಳ್ಳುವ ಮಾರ್ಗಗಳು ಮತ್ತು ಪಾರ್ಕಿಂಗ್ ಸೌಲಭ್ಯಗಳನ್ನು ಸಹ ಒದಗಿಸಬೇಕು ಎಂದು ನ್ಯಾಯಾಲಯ ಹೇಳಿದೆ.

    ಕರೂರ್ ಕಾಲ್ತುಳಿತದ ನಂತರ ಸಲ್ಲಿಸಲಾದ ಒಂದು ಡಜನ್‌ಗೂ ಹೆಚ್ಚು ಅರ್ಜಿಗಳ ಸಲ್ಲಿಕೆಯಾಗಿವೆ‌. ಒಂದು ಗುಂಪಿನ ಅರ್ಜಿಗಳು ಸಿಬಿಐ ತನಿಖೆಗೆ ಕೋರಿದರೆ, ಇನ್ನೊಂದು ಗುಂಪಿನ ಅರ್ಜಿಗಳು ಎಲ್ಲಾ ಸಭೆಗಳಿಗೆ SOP ಗಳನ್ನು ರೂಪಿಸುವಂತೆ ಕೋರಿದವು. ಮೂರನೇ ಗುಂಪಿನ ಅರ್ಜಿಗಳು ಹೆಚ್ಚಿನ ಪರಿಹಾರವನ್ನು ನೀಡುವಂತೆ ಕೋರಿವೆ. ಪರಿಹಾರ ಹೆಚ್ಚಿಸುವ ಬಗ್ಗೆ ಕೋರ್ಟ್ ಸರ್ಕಾರಕ್ಕೆ ನೋಟಿಸ್ ನೀಡಿದ್ದು, ಅ.18 ಕ್ಕೆ ವಿಚಾರಣೆ ಮುಂದೂಡಲಾಗಿದೆ.

  • ವಾಲ್ಮೀಕಿ ಹಗರಣ| ಬಳ್ಳಾರಿ ಬಿಜೆಪಿ ನಾಯಕನ ಮನೆ ಮೇಲೆ ಸಿಬಿಐ ದಾಳಿ

    ವಾಲ್ಮೀಕಿ ಹಗರಣ| ಬಳ್ಳಾರಿ ಬಿಜೆಪಿ ನಾಯಕನ ಮನೆ ಮೇಲೆ ಸಿಬಿಐ ದಾಳಿ

    ಬಳ್ಳಾರಿ: ವಾಲ್ಮೀಕಿ ನಿಗಮದ ಬಹುಕೋಟಿ ಹಗರಣಕ್ಕೆ (Valmiki Scam) ಸಂಬಂಧಿಸಿದಂತೆ ಹುಟ್ಟುಹಬ್ಬದ ದಿನವೇ ಮಾಜಿ ಸಚಿವ ಬಿ ನಾಗೇಂದ್ರ (B Nagendra) ಅವರಿಗೆ ಸಿಬಿಐ (CBI) ಅಧಿಕಾರಿಗಳು ಬಿಗ್ ಶಾಕ್ ನೀಡಿದ್ದಾರೆ. ವಾಲ್ಮೀಕಿ ಹಗಣ ಸಂಬಂಧವಾಗಿ ಬಳ್ಳಾರಿಯಲ್ಲಿ (Ballari) ಮೊಟ್ಟೆ ವ್ಯಾಪಾರಿ ಕುಮಾರಸ್ವಾಮಿ ಹಾಗೂ ಅವರ ಮಗ ಬಿಜೆಪಿ ಕಾರ್ಪೊರೇಟರ್ ಗೋವಿಂದರಾಜು ಮನೆ ಮೇಲೆ 10ಕ್ಕೂ ಹೆಚ್ಚು ಸಿಬಿಐ ಅಧಿಕಾರಿಗಳು ದಾಳಿ ಮಾಡಿದ್ದಾರೆ.

    ವಾಲ್ಮೀಕಿ ನಿಗಮ ಪ್ರಕರಣದ ಪ್ರಮುಖ ಆರೋಪಿ ನೆಕ್ಕಂಟಿ ನಾಗರಾಜ್ ಖಾತೆಯಿಂದ ಗೋವಿದರಾಜು ಖಾತೆಗೆ 60 ಲಕ್ಷ ರೂ. ಹಣ ವರ್ಗಾಣೆಯಾಗಿತ್ತು. ಇದೇ ವಿಚಾರಕ್ಕೆ ಸಿಬಿಐ ಕಚೆರಿಯಲ್ಲಿ ಗೋವಿಂದರಾಜು ವಿಚಾರಣೆಯನ್ನೂ ಎದುರಿಸಿದ್ದರು. ಇದನ್ನೂ ಓದಿ: ಬಾನು ಮುಷ್ತಾಕ್ ಆಯ್ಕೆ ಪ್ರಶ್ನಿಸಿ ಪ್ರತಾಪ್‌ ಸಿಂಹ ಸೇರಿ ಮೂವರು ಸಲ್ಲಿಸಿದ್ದ ಅರ್ಜಿ ವಜಾ

    ನೆಕ್ಕಂಟಿ ನಾಗರಾಜ್‌ನಿಂದ ನಾನು 60 ಲಕ್ಷ ರೂ. ಸಾಲ ಪಡೆದಿದ್ದೆ ಎಂದು ಹೇಳಿಕೆ ಕೊಟ್ಟಿದ್ದರು. ಅಲ್ಲದೇ ಡಿಸೆಂಬರ್ ವೇಳೆಗೆ ಸಾಲದ ಹಣವನ್ನು ವಾಪಸ್‌ ನೀಡುವುದಾಗಿಯೂ ಗೋವಿಂದರಾಜು ಹೇಳಿದ್ದರು.

    ಈ ಬೆನ್ನಲ್ಲೇ ಸಿಬಿಐ ಗೋವಿಂದರಾಜು ಹಾಗೂ ಅವರ ತಂದೆ ಕುಮಾರಸ್ವಾಮಿ ಮನೆ ಮೇಲೆ ದಾಳಿ ಮಾಡಿದೆ. ದಾಳಿ ವೇಳೆ ಸಿಬಿಐ ಅಧಿಕಾರಿಗಳು ಬ್ಯಾಂಕ್ ವಹಿವಾಟಿನ ದಾಖಲೆ ಪರಿಶೀಲನೆ ನಡೆಸಿದ್ದಾರೆ. ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಎಲ್ಲಾ ಮಾಹಿತಿ ಸಂಗ್ರಹಿಸಿ, ಬ್ಯಾಂಕ್ ವಹಿವಾಟಿನ ಕುರಿತು ದಾಖಲೆಗಳನ್ನ ಮುಂದಿಟ್ಟುಕೊಂಡು ತಂದೆ ಮಗ ಇಬ್ಬರಿಗೂ ಸಿಬಿಐ ಅಧಿಕಾರಿಗಳು ಡ್ರಿಲ್ ಮಾಡಿದ್ದಾರೆ.