ಉದಯಪುರದಲ್ಲಿ ನಡೆದಿದ್ದ ಟ್ರೇಲರ್ ಕನ್ಹಯ್ಯ ಲಾಲ್ (Kanhaiya Lal) ಪ್ರಕರಣದ ಕುರಿತಂತೆ ಉದಯಪುರ ಫೈಲ್ಸ್ (Udaipur Files) ಸಿನಿಮಾ ರೆಡಿ ಆಗಿತ್ತು. ಈ ಸಿನಿಮಾ ಬಿಡುಗಡೆಗೂ ಸಿದ್ಧವಾಗಿತ್ತು. ಈ ಚಿತ್ರವನ್ನು ಬಿಡುಗಡೆ ಮಾಡದಂತೆ ಜಮಿಯತ್ ಉಲಾಮ ಇ ಹಿಂದ್ ಅಧ್ಯಕ್ಷ ಮೌಲಾನಾ ಹರ್ಷದ್ ಕೋರ್ಟ್ ಮೊರೆ ಹೋಗಿದ್ದರು. ಇದೀಗ ಸಿನಿಮಾ ರಿಲೀಸ್ ಮಾಡದಂತೆ ದೆಹಲಿ ಹೈಕೋರ್ಟ್ (Delhi High Court) ತಡೆದಿದೆ.
ಜು. 11ಕ್ಕೆ ಉದಯಪುರ ಫೈಲ್ಸ್ ಸಿನಿಮಾ ಬಿಡುಗಡೆ ಆಗಬೇಕಿತ್ತು. ದ್ವೇಷ ಕಾರುವ ಸಿನಿಮಾ ಇದಾಗಿದ್ದರಿಂದ, ಸಿನಿಮಾವನ್ನು ತಡೆಯಬೇಕು ಅಂತ ಕೋರ್ಟ್‌ಗೆ ಮನವಿ ಸಲ್ಲಿಸಲಾಗಿತ್ತು. ಧಾರ್ಮಿಕ ಪ್ರಚೋದನೆಯ ಕಾರಣದಿಂದಾಗಿ ದೆಹಲಿ ಹೈಕೋರ್ಟ್ ಸಿನಿಮಾ ಬಿಡುಗಡೆಯನ್ನು ತಡೆದಿದೆ. ಈ ಸಿನಿಮಾವನ್ನು ಬಿಡುಗಡೆ ಮಾಡಬೇಕೇ, ಬೇಡವೇ ಅನ್ನುವುದನ್ನು ಕೇಂದ್ರ ಸರ್ಕಾರ ನಿರ್ಧಾರ ಮಾಡಬೇಕು ಎಂದು ಒಂದು ವಾರ ಗಡವು ನೀಡಿದೆ. ಇದನ್ನೂ ಓದಿ: ಸೋಮವಾರ ಥೈಲ್ಯಾಂಡ್‌ಗೆ ಹಾರಲಿದ್ದಾರೆ ದರ್ಶನ್
ಈ ಮಧ್ಯ ಸೆನ್ಸಾರ್ ಮಂಡಳಿಯು (CBFC) ಚಿತ್ರಕ್ಕೆ 150 ಕಡೆ ಕತ್ತರಿಸುವಂತೆ ಸೂಚಿಸಲಾಗಿದೆ ಅನ್ನುವ ಸುದ್ದಿಯೂ ಹರಿದಾಡುತ್ತಿದೆ. ಆಕ್ಷೇಪಾರ್ಹ ದೃಶ್ಯಗಳಿಗೆ ಮತ್ತು ಸಂಭಾಷಣೆಗಳಿಗೆ ಕತ್ತರಿ ಹಾಕಬೇಕು ಅಂತ ಸೂಚಿಸಲಾಗಿದೆಯಂತೆ. ಆದರೆ, ನಿರ್ಮಾಪಕರು ಇದಕ್ಕೆ ಒಪ್ಪಿಲ್ಲ ಎನ್ನುವ ಮಾತೂ ಇದೆ. ಒಟ್ಟಿನಲ್ಲಿ ಒಂದು ವಾರದ ಒಳಗೆ ಸಿನಿಮಾ ಬಿಡುಗಡೆ ಕುರಿತು ನಿರ್ಧಾರ ತಗೆದುಕೊಳ್ಳಬೇಕಿದೆ.
ನಿನ್ನೆಯಷ್ಟೇ ತಮಿಳಿನ ಖ್ಯಾತ ನಟ ವಿಶಾಲ್, ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಷನ್ (ಸಿ.ಬಿ.ಎಫ್.ಸಿ) ಮೇಲೆ ಗುರುತರ ಆರೋಪ ಮಾಡಿದ್ದರು. ತಾವು ತಮ್ಮ ಚಿತ್ರಕ್ಕೆ ಸೆನ್ಸಾರ್ ಪ್ರಮಾಣ ಪತ್ರ ಪಡೆಯುವುದಕ್ಕಾಗಿ 6.50 ಲಕ್ಷ ರೂಪಾಯಿಯನ್ನು ನೀಡಿರುವುದಾಗಿ ಅವರು ಹೇಳಿಕೊಂಡಿದ್ದರು. ಯಾರಿಗೆ ಎಷ್ಟೆಲ್ಲ ಹಣ ನೀಡಲಾಗಿದೆ ಎಂದು ವಿವರ ಸಮೇತ ವಿಡಿಯೋ ಮಾಡಿದ್ದರು. ಸೆನ್ಸಾರ್ ಮಂಡಳಿಯ ಅಧಿಕಾರಿಗಳಾದ ಎಂ.ರಾಜನ್ ಎನ್ನುವವರು ಮೂರು ಲಕ್ಷ ಮತ್ತು ಜೀಜಾ ರಾಮದಾಸ್ ಎನ್ನುವವರಿಗೆ 3.5 ಲಕ್ಷ ರೂಪಾಯಿಯನ್ನು ಬ್ಯಾಂಕ್ ಖಾತೆಗೆ ಹಾಕಿರುವ ವಿವರವನ್ನು ವಿಶಾಲ್ ಹೇಳಿದ್ದರು.
ಸಾಕ್ಷಿ ಸಮೇತವಾಗಿ ವಿಶಾಲ್ ವಿಡಿಯೋ ಮಾಡಿ ಅದನ್ನು ಮಹಾರಾಷ್ಟ್ರದ ಮುಖ್ಯಮಂತ್ರಿ ಮತ್ತು ಪ್ರಧಾನ ಮಂತ್ರಿಗಳಿಗೆ ಟ್ಯಾಗ್ ಮಾಡಿದ್ದರು. ಇದರ ಗಂಭೀರತೆಯನ್ನು ಅರಿತ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಕೂಡಲೇ ತನಿಖೆಗೆ ಆದೇಶ ಮಾಡಿದೆ. ಸಿ.ಬಿ.ಎಫ್.ಸಿಯ ಹಿರಿಯ ಅಧಿಕಾರಿಯನ್ನು ತನಿಖಾಧಿಕಾರಿಯನ್ನಾಗಿ ನೇಮಿಸಿ, ತನಿಖೆಗೆ ಆದೇಶ ಮಾಡಿದೆ. ಈ ಕುರಿತು ಇದೊಂದು ದುರಾದೃಷ್ಟ ಸಂಗತಿ ಎಂದು ವಿಷಾದ ವ್ಯಕ್ತ ಪಡಿಸಿದೆ.
#Corruption being shown on silver screen is fine. But not in real life. Cant digest. Especially in govt offices. And even worse happening in #CBFC Mumbai office. Had to pay 6.5 lacs for my film #MarkAntonyHindi version. 2 transactions. 3 Lakhs for screening and 3.5 Lakhs for… pic.twitter.com/3pc2RzKF6l
ಲಂಚಮುಕ್ತ ಆಡಳಿತ ಕೊಡಬೇಕು ಎನ್ನುವುದು ನಮ್ಮ ಗುರಿ. ಆದರೆ, ಇಂತಹ ಬೆಳವಣಿಗೆ ನಡೆದಿದ್ದು ನೋವು ತಂದಿದೆ. ವಿಶಾಲ್ ಅವರು ವಿಡಿಯೋ ಹಾಕಿದ 24 ಗಂಟೆಯೊಳಗೆ ತನಿಖೆಗೆ ಆದೇಶ ಮಾಡಿದ್ದೇವೆ. ತಪ್ಪಿತಸ್ಥರಿಗೆ ಶಿಕ್ಷೆ ನೀಡಲಾಗುವುದು ಎಂದು ಸಚಿವಾಲಯ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದೆ. ವಿಶಾಲ್ ಅವರಿಗೆ ಟ್ಯಾಗ್ ಮಾಡಲಾಗಿದೆ.
ಏನಿದು ಪ್ರಕರಣ?
ಸಿನಿಮಾಗಳಿಗೆ ಪ್ರಮಾಣಪತ್ರ ನೀಡುವ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಷನ್ (ಸಿಬಿಎಫ್‍ಸಿ) (Censor Board) ಅಥವಾ ಸೆನ್ಸಾರ್ ಮಂಡಳಿಗಳ ಮೇಲೆ ಒಂದಿಲ್ಲೊಂದು ಆರೋಪಗಳು ಬರುತ್ತಲೇ ಇವೆ. ಇದೀಗ ತಮಿಳಿನ (Tamil) ಹೆಸರಾಂತ ನಟ ವಿಶಾಲ್ (Vishal) ಗುರುತರ ಆರೋಪವೊಂದನ್ನು ಮಾಡಿದ್ದರು. ತಮ್ಮ ತಮಿಳು ಚಿತ್ರದ ಹಿಂದಿ ಆವೃತ್ತಿಗೆ ಪ್ರಮಾಣ ಪತ್ರ ನೀಡಲು ಮುಂಬೈ ಸಿಬಿಎಫ್‍ಸಿ ಅಧಿಕಾರಿಗಳು ಲಂಚ ಕೇಳಿದ್ದರು ಎಂದು ಆರೋಪ ಮಾಡಿದ್ದರು.
The issue of corruption in CBFC brought forth by actor @VishalKOfficial is extremely unfortunate.
The Government has zero tolerance for corruption and strictest action will be taken against anyone found involved. A senior officer from the Ministry of Information & Broadcasting…
— Ministry of Information and Broadcasting (@MIB_India) September 29, 2023
ತಮಿಳು ನಟನೆಯ ಮಾರ್ಕ್ ಆಂಟೋನಿ (Mark Antony)ರಿಲೀಸ್ ಆಗಿ, ಪ್ರೇಕ್ಷಕರಿಂದಲೂ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಈ ಸಿನಿಮಾದ ಹಿಂದಿ ಆವೃತ್ತಿಗೆ ಪ್ರಮಾಣ ಪತ್ರ ಪಡೆಯಲು ಚಿತ್ರತಂಡ ಮುಂದಾಗಿದೆ. ಈ ಸಿನಿಮಾಗೆ ಪ್ರಮಾಣ ಪತ್ರ ನೀಡಲು ಅಧಿಕಾರಿಗಳು ಬರೋಬ್ಬರಿ 6.50 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದರು ಎಂದು ವಿಶಾಲ್ ಹೇಳಿದ್ದರು. ಈ ಕುರಿತು ಸಾಕ್ಷಿ ಸಮೇತ ಅವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು.
ಹಿಂದಿಯಲ್ಲಿ ಚಿತ್ರವನ್ನು ಡಬ್ ಮಾಡಿ ಬಿಡುಗಡೆ ಮಾಡಲು ನಿರ್ಧಾರ ಮಾಡಿದೆವು. ತಾಂತ್ರಿಕ ಕಾರಣಗಳಿಂದಾಗಿ ಹಿಂದಿಯಲ್ಲಿ ಚಿತ್ರವನ್ನು ರೆಡಿ ಮಾಡಲು ಕಷ್ಟವಾಯಿತು. ಬಿಡುಗಡೆ ದಿನಾಂಕ ತೀರಾ ಹತ್ತಿರವಿದ್ದ ಕಾರಣದಿಂದಾಗಿ ಬೇಗ ಪ್ರಮಾಣ ಪತ್ರ ನೀಡುವಂತೆ ವಿನಂತಿಸಿದೆವು. ಆದರೆ, ಅಧಿಕಾರಿಗಳು ಬೇಗ ಪ್ರಮಾಣ ಪತ್ರ ಬೇಕು ಅಂದರೆ ಲಂಚ ನೀಡಿ ಎಂದರು ಎಂದು ವಿಶಾಲ್ ಮಾತನಾಡಿದ್ದರು.
ಮತ್ತೊಂದು ಅಚ್ಚರಿಯ ಸಂಗತಿ ಅಂದರೆ, ಚಿತ್ರತಂಡವು ಅವರು ಕೇಳಿದ ಹಣವನ್ನು ಲಂಚದ ರೂಪದಲ್ಲಿ ನೀಡಿರುವುದಾಗಿಯೂ ವಿಶಾಲ್ ಹೇಳಿಕೊಂಡಿದ್ದರು. ತಾವು ಹಣ ಕಳುಹಿಸಿದ ಬ್ಯಾಂಕ್ ಖಾತೆಯ ವಿವರವನ್ನೂ ಅವರು ಹಂಚಿಕೊಂಡಿದ್ದರು. ನಿಮಗೆ ಯಾವುದೇ ದಾರಿ ಕಾಣದೇ ಹಣವನ್ನು ಕೊಡಬೇಕಾಯಿತು ಎಂದು ಅವರು ಹೇಳಿಕೊಂಡಿದ್ದರು.
ನವದೆಹಲಿ: ಕೇರಳ ಸ್ಟೋರಿ (Kerala Story) ಚಿತ್ರದ ಪ್ರದರ್ಶನಕ್ಕೆ ನಿಷೇಧ ಹೇರಿರುವ ಪಶ್ಚಿಮ ಬಂಗಾಳ (West Bengal) ಸರ್ಕಾರದ ನಿರ್ಧಾರಕ್ಕೆ ಸುಪ್ರೀಂ ಕೋರ್ಟ್ (Supreme Court) ಗುರುವಾರ ತಡೆ ನೀಡಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ (CJI) ಡಿವೈ ಚಂದ್ರಚೂಡ್ (DY Chandrachud), ನ್ಯಾಯಮೂರ್ತಿ ಪಿ.ಎಸ್ ನರಸಿಂಹ ಮತ್ತು ಜೆಬಿ ಪಾರ್ದಿವಾಲಾ ಅವರಿದ್ದ ಪೀಠವು ಈ ಆದೇಶ ನೀಡಿದೆ. ಚಿತ್ರಮಂದಿರಗಳಿಗೆ ಭದ್ರತೆ ಒದಗಿಸುವಂತೆ ತಮಿಳುನಾಡು (Tamil Nadu) ರಾಜ್ಯಕ್ಕೆ ಸೂಚಿಸಿದೆ. ವಿಚಾರಣೆ ನಡೆಸುವಾಗ ಪ್ರತಿ ಚಿತ್ರಮಂದಿರಕ್ಕೆ ಸಾಕಷ್ಟು ಭದ್ರತೆಯನ್ನು ಒದಗಿಸಬೇಕು. ಅಲ್ಲದೆ ಚಲನಚಿತ್ರ ನೋಡುವವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯವಾದ ವ್ಯವಸ್ಥೆಯನ್ನು ಮಾಡಬೇಕೆಂದು ನ್ಯಾಯಾಲಯ ನಿರ್ದೇಶಿಸಿದೆ. ಇದನ್ನೂ ಓದಿ: ಜಲ್ಲಿಕಟ್ಟುಗೆ ಸುಪ್ರೀಂ ಅನುಮತಿ – ಕಂಬಳಕ್ಕೂ ಗ್ರೀನ್ ಸಿಗ್ನಲ್
ಚಲನಚಿತ್ರವು ಘಟನೆಗಳ ಕಾಲ್ಪನಿಕ ಆವೃತ್ತಿಯಾಗಿದೆ. 32 ಸಾವಿರ ಮಹಿಳೆಯರ ಮತಾಂತರದ ಅಂಕಿಅಂಶವನ್ನು ಖಚಿತಪಡಿಸಲು ಯಾವುದೇ ಅಧಿಕೃತ ದತ್ತಾಂಶಗಳಿಲ್ಲ ಎಂದು ಚಿತ್ರದ ವಿರುದ್ಧ ವಾದಿಸಲಾಗಿದೆ. ಇದನ್ನು ಸ್ಪಷ್ಟವಾಗಿ ಹೇಳುವ ಅಥವಾ ನಿರಾಕರಣೆಯ ಸ್ಪಷ್ಟತೆಯನ್ನು ಖಚಿತಪಡಿಸಬೇಕು ಎಂದು ನಿರ್ಮಾಪಕರಿಗೆ ನಿರ್ದೇಶನ ನೀಡಿದೆ.
ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (CBFC) ಪ್ರಮಾಣೀಕರಣಕ್ಕೆ ಸಂಬಂಧಿಸಿದ ಅರ್ಜಿಯನ್ನು ನ್ಯಾಯಾಲಯದ ಬೇಸಿಗೆ ರಜೆಯ ನಂತರ ವಿಚಾರಣೆ ನಡೆಸಲಿದೆ. ಅದಕ್ಕಾಗಿ ನ್ಯಾಯಾಲಯವು ಮೊದಲು ಚಲನಚಿತ್ರವನ್ನು ನೋಡಬೇಕಾಗುತ್ತದೆ ಎಂದು ಆದೇಶದಲ್ಲಿ ಹೇಳಿದೆ.
ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ಮೇ 8 ರಂದು ಪಶ್ಚಿಮ ಬಂಗಾಳ ಸಿನಿಮಾಗಳ ನಿಯಂತ್ರಣ ಕಾಯಿದೆಯ ಸೆಕ್ಷನ್ 4 ಹಾಗೂ ಸೆಕ್ಷನ್ 6 (1) ರ ಅಡಿಯಲ್ಲಿ ರಾಜ್ಯದ ಶಾಂತಿ ಕಾಪಾಡುವ ಕಾರಣ ನೀಡಿ ಚಿತ್ರ ಪ್ರದರ್ಶನಕ್ಕೆ ನಿಷೇಧ ಹೇರಿತ್ತು. ಅಲ್ಲದೆ ತಮಿಳುನಾಡು ಸರ್ಕಾರ ಚಿತ್ರ ನಿಷೇಧಕ್ಕೆ ತಯಾರಿ ನಡೆಸಿತ್ತು. ಈ ಎರಡು ಸರ್ಕಾರಗಳ ನಿರ್ಧಾರವನ್ನು ಪ್ರಶ್ನಿಸಿ ಚಿತ್ರದ ನಿರ್ಮಾಪಕರು ಸುಪ್ರೀಂಗೆ ಮನವಿ ಸಲ್ಲಿಸಿದ್ದರು. ಅಲ್ಲದೆ ಮೂಲಭೂತ ಹಕ್ಕಾದ ವಾಕ್ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ನಿರ್ಧಾರ ಇದಾಗಿದೆ. ಈ ನಿರ್ಧಾರದಿಂದಾಗಿ ಚಿತ್ರದ ಹಣ ಗಳಿಕೆಯಲ್ಲಿ ಕುಸಿತ ಕಂಡಿದೆ. ಚಿತ್ರವನ್ನು ಪೈರಸಿ ಮಾಡಲು ಇದು ಕಾರಣವಾಗುತ್ತಿದೆ ಎಂದು ಆರೋಪಿಸಿದ್ದರು.
ಮೇ 2 ರಂದು ಕೇರಳ ಹೈಕೋರ್ಟ್ ಇಂತಹ ಸಿನಿಮಾಗಳ ವಿರುದ್ಧದ ಅರ್ಜಿಗಳು ಅನಗತ್ಯ ಪ್ರಚಾರವನ್ನು ನೀಡುತ್ತವೆ ಎಂದು ಹೇಳಿತ್ತು. ಸಿನಿಮಾವನ್ನು ನಿಷೇಧಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಮದ್ರಾಸ್ ಹೈಕೋರ್ಟ್ ಮೇ 4ರಂದು ತಿರಸ್ಕರಿಸಿತ್ತು. ಬಳಿಕ ಅಗತ್ಯ ಮೂಲಭೂತ ಹಕ್ಕಿಗೆ ಧಕ್ಕೆಯಾಗುತ್ತಿದೆ ಎಂದು ನಿರ್ಮಾಪಕರು ಮನವಿ ಮಾಡಿಕೊಂಡ ನಂತರ ಸುಪ್ರೀಂ ವಿಚಾರಣೆಗೆ ಒಪ್ಪಿಕೊಂಡಿತ್ತು. ಇದನ್ನೂ ಓದಿ: ಮಾಡೆಲ್ ಹೇರ್‌ಸ್ಟೈಲ್ ಹಾಳು ಮಾಡಿದ್ದಕ್ಕೆ 2 ಕೋಟಿ ಪರಿಹಾರ – ಆದೇಶಕ್ಕೆ ಸುಪ್ರೀಂ ತಡೆ
ತೆಲಂಗಾಣ: ಶೀಘ್ರವೇ ತೆರೆಗೆ ಬರಲಿರುವ ರಾಜಮೌಳಿ ನಿರ್ದೇಶನದ, ನಟರಾದ ರಾಮ್‍ಚರಣ್ ತೇಜ, ಜ್ಯೂನಿಯರ್ ಎನ್‍ಟಿಆರ್ ಅಭಿನಯದ ಆರ್‍ಆರ್‍ಆರ್ ಸಿನಿಮಾ ವಿರುದ್ಧ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್)ಯನ್ನು ತೆಲಂಗಾಣ ಹೈಕೋರ್ಟ್ ವಜಾಗೊಳಿಸಿದೆ.
ಸ್ವಾತಂತ್ರ್ಯ ಹೋರಾಟಗಾರ ಅಲ್ಲೂರಿ ಸೀತಾರಾಮ ರಾಜು ಅವರು ಅಂದಿನ ಬ್ರಿಟಿಷ್ ಸರ್ಕಾರದಲ್ಲಿ ಪೊಲೀಸ್ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು ಎಂದು RRR ಚಿತ್ರದಲ್ಲಿ ತೋರಿಸಲಾಗಿದೆ. ಅಲ್ಲದೆ ಅವರನ್ನು ಕೆಟ್ಟದಾಗಿ ಬಿಂಬಿಸಲಾಗಿದ್ದು, ಅವರ ವ್ಯಕ್ತಿತ್ವಕ್ಕೆ ಕಳಂಕ ತರಲಾಗಿದೆ. ಈ ಹಿನ್ನೆಲೆಯಲ್ಲಿ ಚಿತ್ರಕ್ಕೆ ಸೆನ್ಸಾರ್ ಪ್ರಮಾಣ ಪತ್ರ ನೀಡದಂತೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಗೆ (ಸಿಬಿಎಫ್‍ಸಿ) ನಿರ್ದೇಶಿಸಬೇಕು ಎಂದು ವಿದ್ಯಾರ್ಥಿನಿ ಸೌಮ್ಯ ಅರ್ಜಿ ಸಲ್ಲಿಸಿದ್ದರು.
ಸೆನ್ಸಾರ್ ಪ್ರಮಾಣ ಪತ್ರದ ಸಿಂಧುತ್ವವು ಸವಾಲಿಗೆ ಒಳಪಡದಿರುವ ಹಿನ್ನೆಲೆಯಲ್ಲಿ ಅರ್ಜಿದಾರರಿಗೆ ಪರಿಹಾರ ನೀಡಲು ಯಾವುದೇ ಕಾರಣ ಕಂಡುಬರುತ್ತಿಲ್ಲ. ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಪ್ರತಿ ಅಫಿಡವಿಟ್ ಸಲ್ಲಿಸಿದ್ದ ಸಿಬಿಎಫ್‍ಸಿ ಸಿನಿಮಾ ಕಾಲ್ಪನಿಕ ಕೃತಿಯಾಗಿರುವುದರಿಂದ ಕೆಲ ಸಿನಿಮಾಗಳಿಗೆ ಸ್ವಾತಂತ್ರ್ಯವನ್ನು ಅನುಮತಿಸಲಾಗಿದೆ. ಅರ್ಜಿದಾರರ ವಾದವನ್ನು ಒಪ್ಪಿದರೂ ರಾಜು ಮತ್ತು ಕೊಮರಂ ಭೀಮ್ ಅವರನ್ನು ದೊಡ್ಡ ದೇಶಭಕ್ತರಾಗಿಯೇ ಚಿತ್ರದಲ್ಲಿ ಬಿಂಬಿಸಲಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಇದನ್ನೂ ಓದಿ: ಮೌಳಿಯ ರಂಗೀನ್ ಲೋಕದಲ್ಲಿ ಮಿಂದೆದ್ದ ಜನಸಾಗರ… ಒಂದೇ ವೇದಿಕೆಯಲ್ಲಿ ಸೌತ್ ಸ್ಟಾರ್ಸ್‍ಗಳ ಸಮಾಗಮ
ಇತ್ತೀಚೆಗೆ ಬಾಲಿವುಡ್ ನಟಿ ಆಲಿಯಾ ಭಟ್ ಅಭಿನಯದ `ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾಗೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್, ಹಿತನ್ ಧೀರಜ್‍ಲಾಲ್ ಮೆಹ್ತಾ ಮತ್ತು ಬನ್ಸಾಲಿ ಪ್ರೊಡಕ್ಷನ್ ಚಿತ್ರದಲ್ಲಿ ನೀಡಿದ್ದ ತೀರ್ಪನ್ನು ಅವಲಂಬಿಸಿ ನ್ಯಾಯಾಲಯ ಈ ಆದೇಶ ನೀಡಿದೆ.
ಮುಂಬೈ: ಸಿನಿಮಾ ಸೆಟ್ಟೇರುತ್ತಲೇ ಸಾಕಷ್ಟು ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಪದ್ಮಾವತಿ’ ಹಲವು ಮಾರ್ಪಾಡುಗಳನ್ನ ಮಾಡುವಂತೆ ಸೆನ್ಸಾರ್ ಬೋರ್ಡ್ ಸೂಚಿಸಿದೆ.
ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್(ಸಿಬಿಎಫ್‍ಸಿ) ನಿಂದ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ಸಿಗಲಿದೆ. ಸಿನಿಮಾದಲ್ಲಿನ ಬರೋಬ್ಬರಿ 26 ದೃಶ್ಯಗಳಿನ್ನ ತೆಗೆಯುವಂತೆ ಹೇಳಿದ್ದು, ಚಿತ್ರದ ಹೆಸರನ್ನು ‘ಪದ್ಮಾವತ್’ ಎಂದು ಬದಲಿಸಲು ಸೂಚಿಸಲಾಗಿದೆ.
ಸೆನ್ಸಾರ್ ಮಂಡಳಿಯು ಚಿತ್ರ ನಿರ್ಮಾಣಗಾರರು ಮತ್ತು ಸಮಾಜ ಎರಡನ್ನೂ ಗಮನದಲ್ಲಿರಿಸಿಕೊಂಡು ಚಿತ್ರದ ಬಗ್ಗೆ ಈ ನಿರ್ಧಾರ ತಿಳಿಸಿದೆ. ಚಿತ್ರದ ಬಗೆಗಿನ ಗೊಂದಲ, ಸಂಕೀರ್ಣತೆ ಮತ್ತು ಕಳವಳವನ್ನು ಪರಿಗಣಿಸಿ ಅಂತಿಮ ನಿರ್ಣಯ ಕೈಗೊಳ್ಳಲು ವಿಶೇಷ ತಂಡದ ಅಗತ್ಯವಿದೆ ಎಂದು ಸೆನ್ಸಾರ್ ಬೋರ್ಡ್ ಅಭಿಪ್ರಾಯಿಸಿತ್ತು.
ಹೀಗಾಗಿ ಸೆನ್ಸಾರ್ ಬೋರ್ಡ್‍ನಿಂದ ರಚಿಸಲಾದ ವಿಶೇಷ ತಂಡದಿಂದ ಚಿತ್ರವನ್ನ ವಿಮರ್ಶಿಸಲಾಗಿದೆ. ಸಿನಿಮಾ ಐತಿಹಾಸಿಕ ಕಥೆಯನ್ನು ಆಧರಿಸಿರುವುದರಿಂದ ತಂಡದಲ್ಲಿ ಇತಿಹಾಸಕಾರರು ಕೂಡ ಇದ್ದರು.
ಉದಯಪುರ್ ಮೂಲದ ಅರವಿಂದ್ ಸಿಂಗ್, ಜೈಪುರ ವಿಶ್ವವಿದ್ಯಾಲಯದ ಪ್ರೊಫೆಸರ್ ಗಳಾದ ಕೆಕೆ ಸಿಂಗ್ ಮತ್ತು ಡಾ.ಚಂದ್ರಮಣಿ ಸಿಂಗ್ ವಿಶೇಷ ತಂಡದಲ್ಲಿ ಇದ್ದರು. ಸದಸ್ಯರು ಐತಿಹಾಸಿಕ ಘಟನೆಗಳು, ದೇಶದ ಸಾಮಾಜಿಕ-ಸಾಂಸ್ಕೃತಿಕ ಅಂಶಗಳ ಬಗ್ಗೆ ಜ್ಞಾನ ಹೊಂದಿದ ವ್ಯಕ್ತಿಗಳಾಗಿದ್ದು, ಕಥೆಯ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ್ರು ಎಂದು ಸೆನ್ಸಾರ್ ಬೋರ್ಡ್ ತಿಳಿಸಿದೆ.
ಪದ್ಮಾವತಿ 190 ಕೋಟಿ ರೂ. ಬಜೆಟ್‍ನ ಸಿನಿಮಾವಾಗಿದ್ದು, ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದಲ್ಲಿ ಮೂಡಿ ಬಂದಿದೆ. ಆದ್ರೆ ಸಿನಿಮಾದಲ್ಲಿ ಇತಿಹಾಸವನ್ನ ತಿರುಚಲಾಗಿದೆ ಎಂದು ಆರೋಪಿಸಿ ಸಿನಿಮಾ ಬಿಡುಗಡೆಗೆ ರಾಜಸ್ಥಾನದ ಕರ್ಣಿ ಸೇನಾ ಸಾಕಷ್ಟು ವಿರೋಧವನ್ನು ವ್ಯಕ್ತಪಡಿಸಿತ್ತು. ಚಿತ್ರದ ನಿರ್ದೇಶಕರು ಇತಿಹಾಸವನ್ನು ತಿರುಚಿ ರಜಪೂತ ಸಮುದಾಯಕ್ಕೆ ಅಗೌರವ ತೋರಿಸುತ್ತಿದ್ದಾರೆ ಎಂದು ಆರೋಪ ಮಾಡಿದ್ದರು. ಕರ್ಣಿ ಸೇನಾಕ್ಕೆ ಹಲವು ರಾಜಕೀಯ ನಾಯಕರು ಕೂಡ ಬೆಂಬಲ ನೀಡಿದ್ದರು.
ಚಿತ್ರದಲ್ಲಿ ಮುಸ್ಲಿಂ ದೊರೆ ಅಲ್ಲಾವುದ್ದೀನ್ ಖಿಲ್ಜಿ ಮತ್ತು ರಾಣಿ ಪದ್ಮಿನಿ ನಡುವೆ ರೊಮ್ಯಾಂಟಿಕ್ ಸೀನ್ ಗಳಿವೆ ಅಂತಾ ಕರ್ಣಿ ಸೇನಾ ಆರೋಪಿಸಿತ್ತು. ಎಲ್ಲವು ಅಂದುಕೊಂಡಂತೆ ಆಗಿದ್ದರೆ ಚಿತ್ರ ಡಿಸೆಂಬರ್ 01ರಂದು ತೆರೆ ಕಾಣಬೇಕಿತ್ತು. ಆದ್ರೆ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಬಿಡುಗಡೆಯನ್ನ ಮುಂದೂಡಲಾಗಿದೆ.
ಚಿತ್ರದಲ್ಲಿ ರಾಣಿ ಪದ್ಮಿನಿಯಾಗಿ ಗುಳಿ ಕೆನ್ನೆ ಬೆಡಗಿ ದೀಪಿಕಾ ಪಡುಕೋಣೆ ಕಾಣಿಸಿಕೊಂಡಿದ್ದಾರೆ. ರಾಣಾ ರಾವಲ್ ರತನ್‍ಸಿಂಗ್ ಪಾತ್ರದಲ್ಲಿ ಶಾಹಿದ್ ಕಪೂರ್ ಮತ್ತು ಅಲ್ಲಾವುದ್ದೀನ್ ಖಿಲ್ಜಿ ಪಾತ್ರದಲ್ಲಿ ರಣ್‍ವೀರ್ ಸಿಂಗ್ ಬಣ್ಣ ಹಚ್ಚಿದ್ದಾರೆ. ಸಿನಿಮಾದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಇದೂವರೆಗೂ ಅಂತಿಮಗೊಳಿಸಿಲ್ಲ.
ಮುಂಬೈ: ಬಾಲಿವುಡ್‍ನ ಮಾಜಿ ನೀಲಿ ತಾರೆ ಸನ್ನಿ ಲಿಯೋನ್ ತನ್ನದೇ ಆದ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಭೂಮಿ ಸಿನಿಮಾ ಪ್ರಚಾರಕ್ಕಾಗಿ ಕೊಚ್ಚಿಗೆ ತೆರೆಳಿದ್ದಾಗ ಸಾವಿರಾರು ಅಭಿಮಾನಿಗಳು ಅವರನ್ನು ನೋಡಲು ಮುಗಿಬಿದ್ದಿದ್ದರು. ಆದರೆ ಅಂತಹ ಸಾವಿರಾರು ಅಭಿಮಾನಿಗಳಿಗೆ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಷನ್ (ಸಿಬಿಎಫ್‍ಸಿ) ನಿರಾಸೆಯನ್ನುಂಟು ಮಾಡಿದೆ.
ಸನ್ನಿ ಲಿಯೋನ್ ಭೂಮಿ ಸಿನಿಮಾದಲ್ಲಿ ಟ್ರಿಪ್ಪಿ ಟ್ರಿಪ್ಪಿ ಎಂಬ ಐಟಂ ಸಾಂಗ್‍ಗೆ ಡ್ಯಾನ್ಸ್ ಮಾಡಿದ್ದಾರೆ. ಆದರೆ ಈ ಸಾಂಗ್‍ನ ಕೆಲವು ದೃಶ್ಯಗಳನ್ನು ಸಿಬಿಎಫ್‍ಸಿ ಮಂಡಳಿ ಕಟ್ ಮಾಡಿ ಸನ್ನಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.
ಭೂಮಿಯಲ್ಲಿ ನಟ ಸಂಜಯ್ ದತ್ ನಟಿಸುತ್ತಿದ್ದಾರೆ. ಸಂಜಯ್‍ಗೆ ಜೊತೆಯಾಗಿ ಅದಿತಿ ರಾವ್ ಹೈದರಿ ಬಣ್ಣ ಹಚ್ಚಿದ್ದಾರೆ. ಈ ಸಿನಿಮಾದ ಹಾಡೊಂದರಲ್ಲಿ ಸನ್ನಿ ಲಿಯೋನ್ `ಟ್ರಪ್ಪಿ ಟ್ರಿಪ್ಪಿ’ ಎಂಬ ಹಾಡಿಗೆ ಹೆಜ್ಜೆ ಹಾಕಿದ್ದರು. ಆದರೆ ಈ ಹಾಡಿನ ಕೆಲವೊಂದು ಸೀನ್‍ಗಳನ್ನು ಸೆನ್ಸಾರ್ ಬೋರ್ಡ್ ತೆಗೆದು ಹಾಕಿದೆ.
ಟ್ರಿಪ್ಪಿ ಟ್ರಿಪ್ಪಿ ಸಾಂಗ್‍ನಲ್ಲಿ ಮಾತ್ರವಲ್ಲದೆ, ಸಿನಿಮಾದಲ್ಲಿ ನಟಿಯ ಮೇಲೆ ಆಗುವ ಅತ್ಯಾಚಾರದ ದೃಶ್ಯಗಳಿಗೆ ಸಹ ಕತ್ತರಿ ಹಾಕಿದ್ದಾರೆ. ಅಷ್ಟೆ ಅಲ್ಲದೆ ಸಾಲಿ, ಅಸಾರಾಂ, ಗಂಡಾ ಪಾನಿ, ಚುಂಬನ ದೃಶ್ಯವನ್ನು ತೆಗೆದು ಹಾಕಿದ್ದಾರೆ. ಸಿನಿಮಾದ ಕೆಲವು ಸಂಭಾಷಣೆಯ ಪದಗಳನ್ನು ಬದಲಾಯಿಸುವಂತೆ ಸಿಬಿಎಫ್‍ಸಿ ತಿಳಿಸಿದೆ. ಒಟ್ಟಾರೆ ಭೂಮಿ ಸಿನಿಮಾದಲ್ಲಿ 12 ಸೀನ್‍ಗಳಿಗೆ ಕತ್ತರಿ ಹಾಕಲಾಗಿದೆ.
ಸಿಬಿಎಫ್‍ಸಿ ಹಲವು ದೃಶ್ಯಗಳನ್ನು ಕಟ್ ಮಾಡಿರುವುದು ನನಗೆ ಆಶ್ಚರ್ಯವೇನು ಆಗಿಲ್ಲ. ಯಾಕೆಂದರೆ ಇದೊಂದು ಸೂಕ್ಷ್ಮದ ವಿಷಯವಾಗಿದೆ ನನಗೆ ಮೊದಲೇ ತಿಳಿದಿತ್ತು. ಈ ಸಿನಿಮಾ ತುಂಬಾ ಹಿಂಸೆಯಾದುದ್ದು, ಆದ್ದರಿಂದ ಕೆಲವೊಂದು ದೃಶ್ಯಗಳನ್ನು ಬದಲಾಯಿಸಲಾಗಿದೆ ಎಂದು ನಿರ್ದೇಶಕ ಓಮುಂಗ್ ಕುಮಾರ್ ತಿಳಿಸಿದ್ದಾರೆ.