Tag: CBDT

  • ತೆರಿಗೆದಾರರೇ ಗಮನಿಸಿ: IT Returns ಸಲ್ಲಿಕೆಗೆ ಜುಲೈ 31 ಅಲ್ಲ, ಸೆ.15 ಕೊನೆ ದಿ‌ನ..!

    ತೆರಿಗೆದಾರರೇ ಗಮನಿಸಿ: IT Returns ಸಲ್ಲಿಕೆಗೆ ಜುಲೈ 31 ಅಲ್ಲ, ಸೆ.15 ಕೊನೆ ದಿ‌ನ..!

    – ಜುಲೈ 31ರವರೆಗೆ ಇದ್ದ ಗಡುವು ವಿಸ್ತರಣೆ

    ನವದೆಹಲಿ: 2025-26ನೇ ಸಾಲಿನ ಆದಾಯ ತೆರಿಗೆ ರಿಟರ್ನ್ಸ್‌ (Income Tax Returns) ಸಲ್ಲಿಸುವ ದಿನಾಂಕವನ್ನು ಸೆಪ್ಟೆಂಬರ್‌ 15ರ ವರೆಗೆ ವಿಸ್ತರಿಸಲಾಗಿದೆ.

    ಜುಲೈ 31ಕ್ಕೆ ಇದ್ದ ಅವಧಿಯನ್ನು ಸೆಪ್ಟೆಂಬರ್‌ 15ಕ್ಕೆ ವಿಸ್ತರಿಸಲಾಗಿದೆ. ಅಧಿಸೂಚಿತ ITR ಫಾರ್ಮ್‌ಗಳಲ್ಲಿನ ವ್ಯಾಪಕವಾದ ರಚನಾತ್ಮಕ ಮತ್ತು ವಿಷಯ ಪರಿಷ್ಕರಣೆಗಳೇ ಈ ವಿಸ್ತರಣೆಗೆ ಕಾರಣವೆಂದು ಕೇಂದ್ರೀಯ ನೇರ ತೆರಿಗೆ ಮಂಡಳಿ (CBDT) ತಿಳಿಸಿದೆ. ಈ ಪರಿಷ್ಕರಣೆಗಳು ಅನುಸರಣೆ ಸರಳಗೊಳಿಸುವ, ಪಾರದರ್ಶಕತೆ ಹೆಚ್ಚಿಸುವ ಮತ್ತು ವರದಿ ಮಾಡುವ ನಿಖರತೆಯನ್ನು ಸುಧಾರಿಸುವ ಗುರಿಯನ್ನು ಹೊಂದಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಪಾಕ್‌, ಚೀನಾಗೆ ಟಕ್ಕರ್‌ ಕೊಡಲು ಹೊಸ ಫೈಟರ್‌ ಜೆಟ್‌ಗೆ ಭಾರತ ಅನುಮೋದನೆ

    ಇ-ಫೈಲಿಂಗ್ ಉಪಯುಕ್ತತೆಗಳ ವ್ಯವಸ್ಥೆಯ ಅಭಿವೃದ್ಧಿ, ಏಕೀಕರಣ ಮತ್ತು ಪರೀಕ್ಷೆಗೆ ಹೆಚ್ಚುವರಿ ಸಮಯ ಬೇಕಾಗುತ್ತದೆ ಎಂದು ಇಲಾಖೆ ಹೇಳಿದೆ. ಮೇ 31 ರೊಳಗೆ ಬಾಕಿ ಇರುವ ಟಿಡಿಎಸ್ ಕ್ರೆಡಿಟ್‌ಗಳು ಜೂನ್ ಆರಂಭದಲ್ಲಿ ಪ್ರತಿಫಲಿಸಲು ಪ್ರಾರಂಭಿಸುವ ನಿರೀಕ್ಷೆಯಿದೆ.

    ತೆರಿಗೆದಾರರಿಗೆ ಸುಗಮ ಮತ್ತು ಅನುಕೂಲಕರ ಫೈಲಿಂಗ್ ಸಾಧ್ಯವಾಗಲೆಂದು ಕ್ರಮವಹಿಸಲಾಗಿದೆ ಎಂದು CBDT ಹೇಳಿದೆ. ವಿಸ್ತರಣೆಯು ಪಾಲುದಾರರಿಗೆ ನವೀಕರಿಸಿದ ಫಾರ್ಮ್‌ಗಳು ಮತ್ತು ಉಪಯುಕ್ತತೆಗಳನ್ನು ಅನುಸರಿಸಲು ಸಾಕಷ್ಟು ಸಮಯಾವಕಾಶ ನೀಡುತ್ತದೆ.

    ಔಪಚಾರಿಕ ಅಧಿಸೂಚನೆಯನ್ನು ಪ್ರತ್ಯೇಕವಾಗಿ ನೀಡಲಾಗುವುದು. ಈ ವಿಸ್ತರಣೆಯು ರಿಟರ್ನ್ ಫೈಲಿಂಗ್ ಪ್ರಕ್ರಿಯೆಯ ನಿಖರತೆ ಮತ್ತು ಸಮಗ್ರತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ತಿಳಿಸಲಾಗಿದೆ. ಇದನ್ನೂ ಓದಿ: ಜ್ಯೋತಿ ಮಲ್ಹೋತ್ರಾ ಮೊಬೈಲ್, ಲ್ಯಾಪ್‌ಟಾಪ್‌ನಿಂದ 12,000 ಜಿಬಿ ಡಾಟಾ ರಿಟ್ರೀವ್ – ಸ್ಫೋಟಕ ರಹಸ್ಯಗಳು ಬಯಲಿಗೆ!

  • ಬಿಬಿಸಿ ತೆರಿಗೆ ಪಾವತಿಯಲ್ಲಿ ಅಕ್ರಮ,  ಸಾಕ್ಷ್ಯ ಲಭ್ಯ: CBDT

    ಬಿಬಿಸಿ ತೆರಿಗೆ ಪಾವತಿಯಲ್ಲಿ ಅಕ್ರಮ,  ಸಾಕ್ಷ್ಯ ಲಭ್ಯ: CBDT

    ನವದೆಹಲಿ: ಅಂತಾರಾಷ್ಟ್ರೀಯ ಮಾಧ್ಯಮ ಸಂಸ್ಥೆಯೊಂದರ ದಾಖಲೆ ಪರಿಶೀಲನೆ ವೇಳೆ ಸಂಸ್ಥೆಯು ತೆರಿಗೆ ಪಾವತಿಸದಿರುವುದು ಹಾಗೂ ಬಹಿರಂಗಪಡಿಸದ ಆದಾಯ ಹೊಂದಿರುವ ಬಗ್ಗೆ ಸಾಕ್ಷ್ಯಗಳು ಸಿಕ್ಕಿದೆ ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (CBDT) ಶುಕ್ರವಾರ ಹೇಳಿದೆ.

    ಬಿಬಿಸಿ (BBC) ಹೆಸರನ್ನು ಉಲ್ಲೇಖಿಸದೆ ಹೇಳಿಕೆ ಬಿಡುಗಡೆ ಮಾಡಿದ ಸಿಬಿಡಿಟಿ, ಇಲಾಖೆ ಹಲವಾರು ಸಾಕ್ಷ್ಯಗಳನ್ನು ಕಲೆಹಾಕಿದೆ. ಡಿಜಿಟಲ್ ದಾಖಲೆಗಳು ಹಾಗೂ ಉದ್ಯೋಗಿಗಳ ಹೇಳಿಕೆಗಳನ್ನು ಪಡೆದುಕೊಳ್ಳುವ ಕಾರ್ಯ ನಡೆಯುತ್ತಿದೆ. ವಿದೇಶಿ ಸಂಸ್ಥೆಗಳಿಂದ ಭಾರತದ ಶಾಖೆಗೆ ಬಂದಿರುವ ಆದಾಯಕ್ಕೆ ಯಾವುದೇ ತೆರಿಗೆ ಪಾವತಿಯಾಗಿಲ್ಲ ಎಂದು ಉಲ್ಲೇಖಿಸಿದೆ. ಇದನ್ನೂ ಓದಿ: ಭಾರತ ಈಗ ಕುಸಿಯುತ್ತಿದೆ: ಮೋದಿಯನ್ನು ಟೀಕಿಸಿದ ಜಾರ್ಜ್ ಸೊರಸ್ ಯಾರು?

    ಬಿಬಿಸಿ ಸಿಬ್ಬಂದಿ ತನಿಖೆಗೆ ಸಹಕರಿಸುತ್ತಿಲ್ಲ. ಹಲವು ತಂತ್ರಗಳನ್ನು ಬಳಸಿ ತನಿಖೆ ವಿಳಂಬವಾಗುವಂತೆ ಮಾಡುತ್ತಿದ್ದಾರೆ. ಮಾಧ್ಯಮದ ಪ್ರಸಾರಕ್ಕೆ ಯಾವುದೇ ತೊಂದರೆಯಾಗದಂತೆ ಸಿಬ್ಬಂದಿ ವಿಚಾರಣೆ ಮಾಡುತ್ತಿರುವುದಾಗಿ ತಿಳಿಸಿದೆ.

    2002ರಲ್ಲಿ ನಡೆದ ಗುಜರಾತ್ ಹಿಂಸಾಚಾರದ ಕುರಿತು ಸಾಕ್ಷ್ಯಚಿತ್ರ ಬಿಡುಗಡೆ ಮಾಡಿದ ಬೆನ್ನಲ್ಲೇ  ಬಿಬಿಸಿ ಮೇಲೆ ಐಟಿ ಸಮೀಕ್ಷೆ (IT Survey) ನಡೆಸಿತ್ತು. ಅಧಿಕಾರಿಗಳು ಮೂರು ದಿನಗಳ ಕಾಲ ನಿರಂತರ ಸಮೀಕ್ಷೆ ಕಾರ್ಯ ನಡೆಸಿದ್ದರು.

    ಬಿಬಿಸಿ ಮೇಲಿನ ಐಟಿ ದಾಳಿ ಪ್ರಧಾನಿ ನರೇಂದ್ರ ಮೋದಿಯವರಿಗೆ (Narendra Modi) ಮುಜುಗರ ತರುವಂತಹ ಸಾಕ್ಷ್ಯಾಚಿತ್ರ ಬಿಡುಗಡೆಗೊಳಿಸಿದಕ್ಕೆ ಪ್ರತೀಕಾರವಾಗಿ ಈ ದಾಳಿ ನಡೆದಿದೆ ಎಂದು ವಿಪಕ್ಷಗಳು ದೂರಿದ್ದವು.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k