Tag: cavery

  • ನಿಷೇಧವಿದ್ರೂ ಹಣಕ್ಕಾಗಿ ಕಾವೇರಿ ನದಿಯಲ್ಲಿ ಡೇಂಜರಸ್ ತೆಪ್ಪದ ಸವಾರಿ!

    ನಿಷೇಧವಿದ್ರೂ ಹಣಕ್ಕಾಗಿ ಕಾವೇರಿ ನದಿಯಲ್ಲಿ ಡೇಂಜರಸ್ ತೆಪ್ಪದ ಸವಾರಿ!

    – ಸ್ವಲ್ಪ ಯಾಮಾರಿದ್ರೂ ಅಪಾಯ ಕಟ್ಟಿಟ್ಟ ಬುತ್ತಿ

    ಚಾಮರಾಜನಗರ: ಕೊರೊನಾ ಭಯ, ಲಾಕ್‍ಡೌನ್‍ನಿಂದ ಕಳೆದ ಏಳೆಂಟು ತಿಂಗಳಿನಿಂದ ಮನೆಯಲ್ಲಿಯೇ ಇದ್ದ ಜನ ಈಗ ಪ್ರವಾಸಿ ತಾಣಗಳತ್ತ ಮುಖ ಮಾಡ್ತಿದ್ದಾರೆ. ರಾಜ್ಯದ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗ ದಂಡೇ ನೆರೆದಿದೆ. ಮೋಜು ಮಸ್ತಿಯ ಮೂಡ್‍ನಲ್ಲಿರೋ ಜನ ಕೊಂಚ ಮೈಮರೆತಂತೆ ಕಾಣುತ್ತಿದೆ. ಇದನ್ನೇ ಬಂಡವಾಳ ಮಾಡ್ಕೊಂಡಿರೋರು ಜನರ ಜೀವದ ಜೊತೆ ಚೆಲ್ಲಾಟವಾಡ್ತಿದ್ದಾರೆ.

    ಹೌದು. ಕಾವೇರಿ ಮೈದುಂಬಿ ಹರಿಯುತ್ತಿದ್ದು ಕೊಳ್ಳೆಗಾಲದ ಭರಚುಕ್ಕಿಗೆ ಪ್ರವಾಸಿಗರ ದಂಡೇ ಬರುತ್ತಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರೋ ಇಲ್ಲಿನವರು ಪ್ರವಾಸಿಗರಿಗೆ ತೆಪ್ಪದ ಸವಾರಿ ನಡೆಸುತ್ತಿದ್ದಾರೆ. ಭರಚುಕ್ಕಿ, ಮಧ್ಯರಂಗನಾಥಸ್ವಾಮಿ, ಶಿಂಷಾದ ಮಾರಮ್ಮ, ವೆಸ್ಲಿ ಸೇತುವೆ ವೀಕ್ಷಣೆಗೆ ಬರುವ ಪ್ರವಾಸಿಗರು ತೆಪ್ಪದ ಸವಾರಿ ಮಾಡ್ತಿದ್ದಾರೆ.

    ಕೆಲವು ವರ್ಷಗಳ ಹಿಂದೆಯೇ ಇಲ್ಲಿ ತೆಪ್ಪದ ಸವಾರಿಯನ್ನು ನಿಷೇಧಿಸಲಾಗಿದೆ. ಆದರೆ ಇದನ್ನು ಲೆಕ್ಕಿಸದ ಕೆಲವರು ತೆಪ್ಪದ ಸವಾರಿ ನಡೆಸುತ್ತಿದ್ದಾರೆ. ತೆಪ್ಪವೇರೋ ಪ್ರವಾಸಿಗರಿಗೆ ಲೈಫ್ ಜಾಕೆಟ್‍ಗಳನ್ನು ಕೊಡ್ತಿಲ್ಲ. ಸ್ವಲ್ಪ ಹೆಚ್ಚುಕಡಿಮೆಯಾದ್ರೂ ಕಾವೇರಿಯಲ್ಲಿ ಲೀನವಾಗೋದು ಗ್ಯಾರೆಂಟಿಯಾಗಿದೆ. ಇದನ್ನೂ ಓದಿ: ಪ್ರವಾಸಿಗರ ಚೆಲ್ಲಾಟ ಪೊಲೀಸರಿಗೆ ಸಂಕಟ – ಕೊರೊನಾಗೆ ಡೋಂಟ್‍ಕೇರ್, ಬಿಂದಾಸ್ ಮಸ್ತಿ

    ವಿಷಯ ತಿಳಿದ ಬಳಿಕ ಎಚ್ಚೆತ್ತ ಚಾಮರಾಜನಗರ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಕಾನೂನು ಬಾಹಿರವಾಗಿ ತೆಪ್ಪ ನಡೆಸುತ್ತಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು. ಇನ್ನಾದರೂ ಡೇಂಜರ್ ತೆಪ್ಪದ ಸವಾರಿಗೆ ಬ್ರೇಕ್ ಬೀಳಬೇಕಿದೆ. ಪ್ರವಾಸದ ಜೋಶ್‍ನಲ್ಲಿರೋ ಜನ ಸಹ ಪ್ರವಾಸಿಸ್ಥಳಗಳಲ್ಲಿನ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಗಮನ ಹರಿಸಬೇಕಿದೆ.

  • ಕಾವೇರಿ ನದಿಯಲ್ಲಿ ಸ್ನಾನ ಮಾಡಲು ಹೋದ ಕೃಷ್ಣ ಭಕ್ತರು ಕಣ್ಮರೆ

    ಕಾವೇರಿ ನದಿಯಲ್ಲಿ ಸ್ನಾನ ಮಾಡಲು ಹೋದ ಕೃಷ್ಣ ಭಕ್ತರು ಕಣ್ಮರೆ

    ಮಂಡ್ಯ: ಕಾವೇರಿ ನದಿಯಲ್ಲಿ ಸ್ನಾನ ಮಾಡಲು ತೆರಳಿದ್ದ ವೇಳೆ ಇಬ್ಬರು ಕೃಷ್ಣನ ಭಕ್ತರು ನದಿಯಲ್ಲಿ ಕೊಚ್ಚಿ ಹೋಗಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರದ ಬಳಿ ಜರುಗಿದೆ.

    ಬೆಂಗಳೂರಿನ ನಂದಿನಿ ಲೇಔಟ್‍ನ ಆರ್.ಎಸ್.ದಾಸ್ (43), ಚಿತ್ರದುರ್ಗದ ಗುಣಾರನವದಾಸ್ (35) ಕಾವೇರಿ ನದಿಯಲ್ಲಿ ಕಣ್ಮರೆಯಾಗಿರುವ ಕೃಷ್ಣನ ಭಕ್ತರು. ಈ ಇಬ್ಬರು ಮೈಸೂರಿನ ಇಸ್ಕಾನ್ ದೇವಸ್ಥಾನದಲ್ಲಿ ದೀಕ್ಷೆ ಪಡೆದು ಹಲವು ವರ್ಷಗಳಿಂದ ಧಾರ್ಮಿಕ ಕೆಲಸಗಳನ್ನು ಮಾಡುತ್ತಿದ್ದರು. ನಿನ್ನೆ ಸಂಜೆಯ ವೇಳೆ ಧಾರ್ಮಿಕ ಕೆಸಲ ಮುಗಿಸಿ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರದ ಕಾವೇರಿ ನದಿಯ ತಟದಲ್ಲಿ ಇರುವ ಇಸ್ಕಾನ್ ದೇವಸ್ಥಾನದ ಫಾರಂ ಹೌಸ್‍ಗೆ ಇತರ ಸಹೋದ್ಯೋಗಿಗಳೊಂದಿಗೆ ಬಂದಿದ್ದಾರೆ.

    ಈ ವೇಳೆ ಆಹಾರ ಸೇವನೆ ಮಾಡುವ ಮೊದಲು ಸ್ನಾನ ಮಾಡುವ ಪದ್ಧತಿ ಇವರಲ್ಲಿ ಇರುವ ಕಾರಣ ಕಾವೇರಿ ನದಿಯಲ್ಲಿ ಸ್ನಾನ ಮಾಡಲು ತೆರಳಿದ್ದಾರೆ. ಈ ವೇಳೆ ಇಬ್ಬರು ಕೃಷ್ಣ ಭಕ್ತರು ಕಾವೇರಿ ನದಿಯಲ್ಲಿ ಕೊಚ್ಚಿ ಹೋಗಿದ್ದಾರೆ. ಕಣ್ಮರೆಯಾಗಿರುವ ಕೃಷ್ಣ ಭಕ್ತರನ್ನು ಅಗ್ನಿ ಶಾಮಕ ದಳದ ಸಿಬ್ಬಂದಿ ಹುಡುಕುತ್ತಿದ್ದಾರೆ.

  • ‘ಕಾವೇರಿ’ ಆಸೆ ಬಿಟ್ಟ ಮಾಜಿ ಸಿಎಂ ಸಿದ್ದರಾಮಯ್ಯ

    ‘ಕಾವೇರಿ’ ಆಸೆ ಬಿಟ್ಟ ಮಾಜಿ ಸಿಎಂ ಸಿದ್ದರಾಮಯ್ಯ

    ಬೆಂಗಳೂರು: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಸರ್ಕಾರಿ ನಿವಾಸ ಗೊಂದಲ ಇನ್ನೂ ಮುಗಿದಿಲ್ಲ. ವಾಸ್ತವ್ಯ ಇರುವ ಕಾವೇರಿ ನಿವಾಸ ತಮಗೆ ಸಿಗಲ್ಲ ಎಂಬ ಸಂಗತಿ ಅರಿವಾದ ಬಳಿಕ ಮಾಜಿ ಸಿಎಂ ತಮ್ಮ ವರಸೆ ಬದಲಿಸಿಕೊಂಡಿದ್ದಾರೆ.

    ಸಿದ್ದರಾಮಯ್ಯ ಅವರು ಸಿಎಂ ಆಗಿದ್ದ ಸಂದರ್ಭದಲ್ಲಿ ವಾಸವಿದ್ದ ಗಾಂಧಿಭವನ ರಸ್ತೆಯಲ್ಲಿರುವ ಸರ್ಕಾರಿ ಬಂಗಲೆಯನ್ನು ನೀಡಲು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಈ ಸಂಬಂಧ ಸಿಎಂ ಯಡಿಯೂರಪ್ಪ ಅವರಿಗೆ ಹೊಸ ಪತ್ರವನ್ನು ಸಿದ್ದರಾಮಯ್ಯ ಬರೆದಿದ್ದು, ಮೈತ್ರಿ ಸರ್ಕಾರದ ಅವಧಿಯಲ್ಲಿ ಗಾಂಧಿಭವನ ರಸ್ತೆಯಲ್ಲಿರುವ ನಿವಾಸದಲ್ಲಿ ಮಾಜಿ ಸಚಿವ ಎಚ್‍ಡಿ ರೇವಣ್ಣ ವಾಸವಿದ್ದರು. ಈ ನಿವಾಸವನ್ನು ತಮಗೆ ಹಂಚಿಕೆ ಮಾಡಿ ಕೊಡಿ ಎಂದು ಸಿದ್ದರಾಮಯ್ಯ ಅವರು ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ಸರ್ಕಾರ ಹಂಚಿಕೆ ಮಾಡಿರುವ ರೇಸ್ ವ್ಯೂ ಕಾಟೇಜ್ ಬೇಡ ಎಂದೂ ಪತ್ರದಲ್ಲಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ. ಸಿದ್ದರಾಮಯ್ಯ ಅವರು ಹೊಸ ನಿವಾಸ ಪಡೆಯುವುದರಿಂದ ಮತ್ತೆ ಅದೃಷ್ಟದ ಬಾಗಿಲು ತೆರೆಯುತ್ತಾ ಎಂಬ ಲೆಕ್ಕಾಚಾರಗಳು ನಡೆದಿದೆ. 2013 ರ ವೇಳೆಗೆ ವಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ಇದೇ ನಿವಾಸದಲ್ಲಿ ವಾಸವಿದ್ರು. ಸದ್ಯ ಮತ್ತೆ ಇದೇ ನಿವಾಸವನ್ನು ಸಿದ್ದರಾಮಯ್ಯ ಅವರು ನೀಡಲು ಮನವಿ ಮಾಡಿರುವುದರಿಂದ ಮತ್ತೆ ಸಿಎಂ ಆಗುವ ಅದೃಷ್ಟ ಬರುವ ನಿರೀಕ್ಷೆ ಇದೆ ಎನ್ನಲಾಗಿದೆ.

    ಸದ್ಯ ಗಾಂಧಿಭವನದ ರಸ್ತೆಯಲ್ಲಿರುವ ಈ ನಿವಾಸವನ್ನು ಸ್ಪೀಕರ್ ಕಾಗೇರಿಗೆ ಹಂಚಿಕೆ ಮಾಡಲಾಗಿದೆ. ಆದರೆ ಕಾಗೇರಿ ಅವರು ಇನ್ನೂ ಈ ನಿವಾಸದಲ್ಲಿ ವಾಸ್ತವ್ಯ ಆರಂಭಿಸಿಲ್ಲ. ಹೀಗಾಗಿ ಸಿದ್ದರಾಮಯ್ಯರ ಹೊಸ ಮನವಿಗೆ ಸಿಎಂ ಅವರು ಸ್ಪಂದಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

  • ಇಂದು ಸುಪ್ರೀಂನಲ್ಲಿ `ಕಾವೇರಿ’ ಅಂತಿಮ ತೀರ್ಪು- ಬೆಂಗ್ಳೂರು, ಮಂಡ್ಯ, ಮೈಸೂರಲ್ಲಿ ಕಟ್ಟೆಚ್ಚರ

    ಇಂದು ಸುಪ್ರೀಂನಲ್ಲಿ `ಕಾವೇರಿ’ ಅಂತಿಮ ತೀರ್ಪು- ಬೆಂಗ್ಳೂರು, ಮಂಡ್ಯ, ಮೈಸೂರಲ್ಲಿ ಕಟ್ಟೆಚ್ಚರ

    ಬೆಂಗಳೂರು: ಕರ್ನಾಟಕದ ಮತ್ತು ತಮಿಳುನಾಡು ನಡುವಿನ ದಶಕಗಳ ಕಾವೇರಿ ನದಿ ನೀರು ಹಂಚಿಕೆ ವಿವಾದ ಸಂಬಂಧ ಸುಪ್ರೀಂಕೋರ್ಟ್ ಇಂದು ಬೆಳಗ್ಗೆ 10.30ಕ್ಕೆ ಅಂತಿಮ ತೀರ್ಪು ಹೊರಡಿಸುವ ಸಾಧ್ಯತೆ ಇದೆ.

    ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿ ಎಎಂ ಖಾನ್ವೀಲ್ಕರ್ ಮತ್ತು ಅಮಿತಾವ್ ರಾಯ್ ಅವ್ರನ್ನು ಒಳಗೊಂಡ ತ್ರಿಸದಸ್ಯ ಪೀಠ ಸೆಪ್ಟೆಂಬರ್ 20ರಂದೇ ವಿಚಾರಣೆ ಅಂತ್ಯಗೊಳಿಸಿ ತೀರ್ಪನ್ನು ಕಾಯ್ದಿರಿಸಿತ್ತು. 2007ರ ಕಾವೇರಿ ನ್ಯಾಯಾಧಿಕರಣದ ಹೈ ತೀರ್ಪು ಪ್ರಶ್ನಿಸಿ ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯಗಳು ಮೇಲ್ಮನವಿ ಸಲ್ಲಿಸಿದ್ದವು. ಇದನ್ನೂ ಓದಿ: ಕಾವೇರಿ ನೀರಿಗೆ ತಮಿಳುನಾಡು ಕ್ಯಾತೆ ಯಾಕೆ? ಆರಂಭದಿಂದ ಇಲ್ಲಿಯವರೆಗೆ ಏನಾಯ್ತು? ಇಲ್ಲಿದೆ ಪೂರ್ಣ ವಿವರ

    ಈ ಮೇಲ್ಮನವಿ ಅರ್ಜಿಗಳ ವಿಚಾರಣೆ ನಡೆಸಿದ್ದ ತ್ರಿಸದಸ್ಯ ಪೀಠ, ಕಾವೇರಿ ಕೊಳ್ಳದ ರಾಜ್ಯಗಳ ವಾದ-ಪ್ರತಿವಾದವನ್ನು ಆಲಿಸಿತ್ತು. ನ್ಯಾಯಮೂರ್ತಿ ಅಮಿತಾವ್ ರಾಯ್ ಮಾರ್ಚ್ 1ಕ್ಕೆ ನಿವೃತ್ತಿಯಾಗುತ್ತಿದ್ದು, ಫೆಬ್ರವರಿ 26ರಿಂದ ಮಾರ್ಚ್ 3ರವರೆಗೆ ಸುಪ್ರೀಂಕೋರ್ಟ್‍ಗೆ ಹೋಳಿ ಹಬ್ಬದ ಹಿನ್ನೆಲೆಯಲ್ಲಿ ರಜೆ ಕೂಡ ಇದೆ. ಹೀಗಾಗಿ ಇಂದೇ ತೀರ್ಪು ಹೊರಬೀಳುವ ಸಾಧ್ಯತೆ ಹೆಚ್ಚಿದೆ.

    ಕರ್ನಾಟಕ-ತಮಿಳುನಾಡಿನ ವಾದ-ಪ್ರತಿವಾದಗಳು ಇಂತಿವೆ..

    * ಕರ್ನಾಟಕ – ಕಾವೇರಿ ಅಚ್ಚುಕಟ್ಟು ಪ್ರದೇಶದಿಂದ ಹೊರಗಿರೋ ಬೆಂಗಳೂರಿನ ಅರ್ಧಕ್ಕೂ ಹೆಚ್ಚು ಭಾಗಕ್ಕೆ ಕುಡಿಯುವ ನೀರು ಒದಗಿಸಬೇಕು
    * ತಮಿಳುನಾಡು – ಬೆಂಗಳೂರು ಕಾವೇರಿ ಅಚ್ಚುಕಟ್ಟು ಪ್ರದೇಶದಿಂದ ಹೊರಗಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಕುಡಿಯುವ ನೀರು ಕೊಡಬಾರದು (ಅಂತರ್ಜಲವನ್ನೇ ಬೆಂಗಳೂರು ಆಧರಿಸಲಿ)

    * ಕರ್ನಾಟಕ – ತಮಿಳುನಾಡಿನ ಕಾವೇರಿ ಕೊಳ್ಳದ ಭಾಗದಲ್ಲಿ ದೊರೆಯುವ 20 ಟಿಎಂಸಿ ಅಂತರ್ಜಲವನ್ನು ಕೋರ್ಟ್ ಪರಿಗಣಿಸಬೇಕು
    * ತಮಿಳುನಾಡು – ಕಾವೇರಿ ನೀರೇ ಬೇರೆ.. ಅಂತರ್ಜಲವೇ ಬೇರೆ.. ಅಂತರ್ಜಲವನ್ನು ಪರಿಗಣಿಸಬೇಡಿ

    * ಕರ್ನಾಟಕ – ಕೃಷಿ ನೀರಾವರಿ ಭೂಮಿ ಹೆಚ್ವಿಸಲು ಅನುಮತಿ ಬೇಕು
    * ತಮಿಳುನಾಡು – ಕರ್ನಾಟಕದ ಕೃಷಿ ಭೂಮಿ ಭತ್ತ, ಕಬ್ಬು ಬೆಳೆಯಲು ಯೋಗ್ಯವಿಲ್ಲ.. ಒಣ ಬೇಸಾಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು

    * ಕರ್ನಾಟಕ – ಮೇಕೆದಾಟು ಡ್ಯಾಂ ಕಟ್ಟಲು ಅವಕಾಶ ಕೊಡಬೇಕು
    * ತಮಿಳುನಾಡು – ಯಾವುದೇ ಕಾರಣಕ್ಕೂ ಮೇಕೆದಾಟು ಸೇರಿ ಯಾವುದೇ ಡ್ಯಾಂ ಕಟ್ಟಲು ಅವಕಾಶ ನೀಡಬಾರದು

    * ಕರ್ನಾಟಕ – ತಮಿಳುನಾಡಿಗೆ ಹರಿಸುವ 192 ಟಿಎಂಸಿ ನೀರನ್ನು 102 ಟಿಎಂಸಿಗೆ ಇಳಿಸಬೇಕು
    * ತಮಿಳುನಾಡು – ಇಲ್ಲ ಇಲ್ಲ ಅದು ಮಾಡಬೇಡಿ.. ತಮಿಳುನಾಡಿನ ಸಾಂಬಾ ,ಕುರುವೈ ಬೆಳೆಗೆ ಅಗತ್ಯ ನೀರನ್ನು ಹರಿಸಬೇಕು

    * ಕರ್ನಾಟಕ – ಬ್ರಿಟೀಷ್ ಕಾಲದ ಒಪ್ಪಂದಗಳು ರಾಜ್ಯಕ್ಕೆ ಮುಳುವಾಗಿದ್ದು ಒಪ್ಪಂದಗಳು ಅಮಾನ್ಯ ಮಾಡಬೇಕು
    * ತಮಿಳುನಾಡು – ಬ್ರಿಟೀಷ್ ಕಾಲದ ಒಪ್ಪಂದಗಳ ಅನ್ವಯವೇ ನೀರಿನ ಹಂಚಿಕೆಯಾಗಬೇಕು

    * ಕರ್ನಾಟಕ – ಕಾವೇರಿ ನಿರ್ವಹಣ ಮಂಡಳಿ ರಚನೆ ಅವಕಾಶ ನೀಡಬಾರದು
    * ತಮಿಳುನಾಡು – ಕಾವೇರಿ ನಿರ್ವಹಣಾ ಮಂಡಳಿ ತುರ್ತಾಗಿ ರಚನೆಯಾಗಬೇಕು