Tag: cauvery water

  • ಕಾವೇರಿ ನದಿ ನೀರು ವಿವಾದ – ಶಾಶ್ವತ ಪರಿಹಾರಕ್ಕೆ ʻಕಾವೇರಿ ರಕ್ಷಣಾ ಸಮಿತಿʼ ರಚನೆ

    ಕಾವೇರಿ ನದಿ ನೀರು ವಿವಾದ – ಶಾಶ್ವತ ಪರಿಹಾರಕ್ಕೆ ʻಕಾವೇರಿ ರಕ್ಷಣಾ ಸಮಿತಿʼ ರಚನೆ

    – ಸ್ವಾಮೀಜಿ, ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚನೆ
    – ತಲಕಾವೇರಿಯಲ್ಲಿ ಪೂಜೆ ಸಲ್ಲಿಸಿದ ಸಮಿತಿ ಸದಸ್ಯರು

    ಮಡಿಕೇರಿ: ಕಾವೇರಿ ನದಿ (Cauvery River) ರಾಜ್ಯಕ್ಕೆ ಅಷ್ಟೇ ಅಲ್ಲ, ಪಕ್ಕದ ತಮಿಳುನಾಡು (TamilNadu), ಪುದುಚೇರಿಗೂ ಜೀವನದಿಯೇ ಆಗಿದೆ. ಉತ್ತರದಲ್ಲಿ ಗಂಗೆ ಎಷ್ಟು ಪವಿತ್ರಳೋ ದಕ್ಷಿಣದಲ್ಲಿ ಕಾವೇರಿ ನದಿಯೂ ಅಷ್ಟೇ ಪವಿತ್ರಳು ಎನ್ನುವ ಮಾತಿದೆ. ಈ ಕಾವೇರಿಯನ್ನು ಎರಡು ರಾಜ್ಯದ ಜನರು ಪೂಜ್ಯ ಭಾವನೆಯಿಂದ ನೋಡುತ್ತಾರೆ. ಆದ್ರೆ ನೀರಿನ ಸಮಸ್ಯೆ ಬಂದ್ರೆ ಸಾಕು ಎರಡು ರಾಜ್ಯದ ಜನರು ನೀರಿಗಾಗಿ ಹೋರಾಟ ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ರಾಜ್ಯದ ನಾನಾ ಭಾಗದ ಸ್ವಾಮೀಜಿಗಳು ನಿವೃತ್ತ ನ್ಯಾಯಾಧೀಶರು ಸೇರಿ ಪಕ್ಷ ಭೇದ ಮರೆತು ʻಕಾವೇರಿ ರಕ್ಷಣಾ ಸಮಿತಿʼಯೊಂದನ್ನ ರಚಿಸಿದ್ದಾರೆ. ಈ ಮೂಲಕ ಕಾವೇರಿ ನದಿ ನೀರಿನ ಸಮಸ್ಯೆಗೆ (Cauvery River water Dispute) ಶಾಶ್ವತ ಪರಿಹಾರ ಕಂಡುಕೊಳ್ಳಲು ರಾಜ್ಯದ ಸ್ವಾಮೀಜಿಗಳು ಮುಂದಾಗಿದ್ದಾರೆ.

    ಹೌದು. ಕಾವೇರಿ ನದಿಯು ಕೊಡಗಿನಲ್ಲಿ ರಾಜ್ಯದ ನಾನಾ ಭಾಗಗಳಿಗೆ ಅನ್ನದಾತೆಯಾಗಿದ್ದಾಳೆ. ಅಲ್ಲದೇ ತಮಿಳುನಾಡಿನ ಜನರು ಕಾವೇರಿ ನದಿಯ ನೀರನ್ನೇ ಅವಲಂಬಿಸಿದ್ದಾರೆ. ಹೀಗಾಗಿ ಕಾವೇರಿ ನದಿಯನ್ನು ಎರಡೂ ರಾಜ್ಯದ ಜನರು ಪೂಜ್ಯ ಭಾವನೆಯಿಂದ ಕಾಣುತ್ತಾರೆ. ಆದ್ರೆ ಹಲವು ವರ್ಷಗಳಿಂದ ಕಾವೇರಿ ನದಿ ನೀರು ಹಂಚಿಕೆ ವಿಚಾರ ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಜ್ವಲಂತ ಸಮಸ್ಯೆಯಾಗಿಯೇ ಉಳಿದಿದೆ. ಅದರಲ್ಲೂ ಮಳೆ ಅಭಾವ ಸಂದರ್ಭದಲ್ಲಿ ಎರಡು ರಾಜ್ಯದ ಜನರ ಕಷ್ಟ ಹೇಳತ್ತೀರದಾಗಿದೆ. ಇದನ್ನೂ ಓದಿ: ಪ್ಯಾನ್‌ ಇಂಡಿಯಾ ರೇಡ್‌ – 4 ರಾಜ್ಯಗಳಲ್ಲಿ ಬಿಷ್ಣೋಯ್‌ ಗ್ಯಾಂಗ್‌ನ 7 ಶೂಟರ್ಸ್‌ ಅರೆಸ್ಟ್‌

    ಇದೆಲ್ಲ ಸಮಸ್ಯೆಗಳಿಗೆ ಮುಕ್ತಿ ನೀಡಬೇಕೆಂಬ ಉದ್ದೇಶದಿಂದ ಕಾವೇರಿ ನದಿ ಪಾತ್ರದ ಸ್ವಾಮೀಜಿಗಳು, ನಿವೃತ್ತ ನ್ಯಾಯಾಧೀಶರು, ವಿಧಾನಪರಿಷತ್‌ ಮಾಜಿ ಸದಸ್ಯರು ʻಕಾವೇರಿ ರಕ್ಷಣಾ ಸಮಿತಿʼ ರಚಿಸಿದ್ದಾರೆ. ಈ ಮೂಲಕ ಎರಡೂ ರಾಜ್ಯಗಳ ಸಮಸ್ಯೆಯನ್ನು ಹೇಗೆ ಬರಿಸುವುದು ಅನ್ನೋ ಬಗ್ಗೆ ಚಿಂತನ-ಮಂಥನ ನಡೆಸಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಎಲ್ಲರೂ ಒಟ್ಟಾಗಿ ಕಾವೇರಿ ನದಿ ಪಾತ್ರದ ಜನರು ತಲಕಾವೇರಿಯಲ್ಲಿ ಪೂಜೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ನಿಖಿಲ್ ಸ್ಪರ್ಧೆ ಮಾಡದೆ ಇದ್ದಿದ್ದರೆ ಕುಮಾರಸ್ವಾಮಿ ಮಗ ಹೆದರಿ‌ ಓಡಿ ಹೋದ ಅಂತಿದ್ದರು: ಹೆಚ್.ಡಿ.ರೇವಣ್ಣ

    ನಿರ್ಮಲಾನಂದನಾಥ ಸ್ವಾಮೀಜಿ, ಕಾವೇರಿ ನದಿ ಭಾಗದ ಎಲ್ಲಾ ಸ್ವಾಮೀಜಿಗಳು, ನಿವೃತ್ತ ಸಿಜೆಐ ಗೋಪಾಲ ಗೌಡ್ರು, ಹೈಕೋರ್ಟ್‌ ನಿವೃತ್ತ ನ್ಯಾಯಾಧೀಶರಾದ ನಾಗಮೋಹನ್ ದಾಸ್, ಕಾವೇರಿ ನ್ಯಾಯಾಧಿಕರಣ ವಾದ ಮಂಡಿಸಿರುವ ಹಿರಿಯ ವಕೀಲರು ಹಾಗೂ ನೀರಾವರಿ ತಜ್ಞರನ್ನು ಒಗ್ಗೂಡಿಸಿ ಚಿಂತನ-ಮಂಥನ ನಡೆಸಲಾಗುತ್ತದೆ. ಬಳಿಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಮನವಿ ಸಲ್ಲಿಸಿ ಶಾಶ್ವತ ಪರಿಹಾರ ಕಂಡುಕೊಳ್ಳಲು ಉದ್ದೇಶಿಸಲಾಗಿದೆ. ಅದಕ್ಕಾಗಿ ʻಕಾವೇರಿ ರಕ್ಷಣಾ ಸಮಿತಿʼಯನ್ನು ರಚಿಸಲಾಗಿದೆ. ಪಕ್ಷಾತೀತ, ಜಾತ್ಯತೀತ, ಧರ್ಮಾತೀತ ಹೊರತಾಗಿ ಎಲ್ಲರನ್ನೂ, ಸಾಮಾಜಿಕ ನ್ಯಾಯದಡಿ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುತ್ತದೆ ಎಂದು ಕಾವೇರಿ ನದಿ ರಕ್ಷಣಾ ಸಮಿತಿ ಅದ್ಯಕ್ಷ ರಾಮು ತಿಳಿಸಿದ್ದಾರೆ.

  • ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಿಗೆ ನೀರು ಪೂರೈಸುವ ಕಾವೇರಿ 5ನೇ ಹಂತದ ಯೋಜನೆಗೆ ಚಾಲನೆ

    ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಿಗೆ ನೀರು ಪೂರೈಸುವ ಕಾವೇರಿ 5ನೇ ಹಂತದ ಯೋಜನೆಗೆ ಚಾಲನೆ

    ಮಂಡ್ಯ: ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಿಗೆ ನೀರು ಪೂರೈಸುವ ಕಾವೇರಿ 5ನೇ ಹಂತದ ಯೋಜನೆಗೆ (Cauvery Drinking Water Project) ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್‌ (DK Shivakumar) ಚಾಲನೆ ನೀಡಿದರು.

    ಮಂಡ್ಯ (Mandya) ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಟಿ.ಕೆ.ಹಳ್ಳಿಯ ಬೆಂಗಳೂರು ಜಲಮಂಡಳಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ, ಡಿಸಿಎಂ ಜಂಟಿಯಾಗಿ ಲೋಕಾರ್ಪಣೆಗೊಳಿಸಿದರು. ಇದನ್ನೂ ಓದಿ: ವಾಯು ಮಾಲಿನ್ಯ ನಿಯಂತ್ರಣಕ್ಕೆ ಕ್ರಮಕೈಗೊಳ್ಳದ ಹರಿಯಾಣ, ಪಂಜಾಬ್ ಸರ್ಕಾರಕ್ಕೆ ಸುಪ್ರೀಂ ಛೀಮಾರಿ

    ಯೋಜನೆಯನ್ನು ಲೋಕಾರ್ಪಣೆಗೊಳಿಸುವುದಕ್ಕೂ ಮುನ್ನ ಚಂಡಿಕಾ ಹೋಮ, ಗಣಪತಿ ಪೂಜೆ, ಯಜಮಾನ ಸಂಕಲ್ಪ, ಮಹಾ ಸುದರ್ಶನ ಚಕ್ರ ಪೂಜೆ, ಸುದರ್ಶನ ಹೋಮ, ಮಹಾಚಂಡಿ ಕಳಾಸರಾಧನೆ, ಮಹಮಂಗಳಾರತಿ ನೆರವೇರಿಸಲಾಯಿತು. ಮಹಾಸಂಕಲ್ಪ, ಚಂಡಿ ನವ ಬ್ರಹ್ಮ ಪೂಜೆ, ದುರ್ಗಾ ಸಪ್ತ ಸತಿ ನಾರಾಯಾಣ ಸೇರಿದಂತೆ 13 ಅಧ್ಯಾಯ, ಗಂಗಾ, ಯಮುನಾ, ಸರಸ್ವತಿ, ನರ್ಮದಾ, ಸಿಂಧು, ಕಾವೇರಿ ಮೊದಲಾದ ಸಪ್ತ ನದಿಗಳ ಕಳಸ ಸ್ಥಾಪನೆ ಮಾಡಿ ಪೂಜೆ ಸಲ್ಲಿಸಲಾಯಿತು. ಮಹಾ ಪೂರ್ಣಾವತಿ, ಮಂಗಳ ದ್ರವ್ಯ ಸಮರ್ಪಣೆ ಮಹಾ ಮಂಗಳಾರತಿ ಸೇರಿ ಹೋಮ-ಹವನ ನೆರವೇರಿಸಲಾಯತು.

    ಶೈವಾಗಮ ವಿಶಾರಾಧ ಜ್ಞಾನ ಸ್ಕಂದ ದೀಕ್ಷಿತರ ನೇತೃತ್ವದಲ್ಲಿ ಪೂಜಾ ಕೈಂಕಾರ್ಯ ನಡೆಯಿತು. ಡಿಸಿಎಂ ಡಿ.ಕೆ ಶಿವಕುಮಾರ್‌ ಪೂಜಾ ಕೈಂಕಾರ್ಯ ನೆರವೇರಿಸಿದರು. ಡಿಕೆಶಿಗೆ ಸಚಿವ ರಾಮಲಿಂಗಾರೆಡ್ಡಿ, ಶಾಸಕ ಪಿ.ಎಂ.ನರೇಂದ್ರಸ್ವಾಮಿ ಸಾಥ್‌ ನೀಡಿದರು. ಇದೇ ವೇಳೆ ಜಾನಪದ ಕಲಾ ತಂಡಗಳ ಮೆರವಣಿಗೆಯೂ ನಡೆಯಿತು. ಇದನ್ನೂ ಓದಿ: ಮಂಗನ ಕಾಯಿಲೆಗೆ ಲಸಿಕೆ: ಐಸಿಎಂಆರ್ ಮಹಾನಿರ್ದೇಶಕರ ಜೊತೆ ದಿನೇಶ್ ಗುಂಡೂರಾವ್ ಚರ್ಚೆ

    ಬಿಬಿಎಂಪಿ ವ್ಯಾಪ್ತಿಯಲ್ಲಿರುವ 110 ಹಳ್ಳಿಗಳಿಗೆ ನೀರು ಪೂರೈಸುವ ಯೋಜನೆ ಇದಾಗಿದೆ. 50 ಲಕ್ಷ ಫಲಾನುಭವಿಗಳಿಗೆ 4 ಲಕ್ಷ ಸಂಪರ್ಕ ಕಲ್ಪಿಸುವ ಮಹತ್ವಾಕಾಂಕ್ಷೆ ಹೊಂದಿದೆ. ಸುಮಾರು 4,336 ಕೋಟಿ ರೂ. ವೆಚ್ಚದ ಕುಡಿಯುವ ನೀರಿನ ಪೂರೈಕೆ ಮಾಡಲಾಗುತ್ತಿದ್ದು, 775 ಎಂ.ಎಲ್.ಡಿ ಹೆಚ್ಚುವರಿ ನೀರು ಸರಬರಾಜು ಮಾಡುವ ಗುರಿ ಹೊಂದಿದೆ. ಇದರಿಂದ ಯಲಹಂಕ, ಯಶವಂತಪುರ, ಬೆಂಗಳೂರು ದಕ್ಷಿಣ, ಬ್ಯಾಟರಾಯನಪುರ, ಬೊಮ್ಮನಹಳ್ಳಿ ವಲಯದ ಮನೆ-ಮನೆಗೂ ಕಾವೇರಿ ನೀರು ಪೂರೈಕೆಯಾಹಲಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ.

  • ಬೆಂಗಳೂರಿಗೆ ನೀರು – ಅ.16ರಂದು ಕಾವೇರಿ ಐದನೇ ಹಂತಕ್ಕೆ ಲೋಕಾರ್ಪಣೆ

    ಬೆಂಗಳೂರಿಗೆ ನೀರು – ಅ.16ರಂದು ಕಾವೇರಿ ಐದನೇ ಹಂತಕ್ಕೆ ಲೋಕಾರ್ಪಣೆ

    ಮಂಡ್ಯ: ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಿಗೆ ನೀರು ಸರಬರಾಜು ಮಾಡುವ ಕಾವೇರಿ (Cauvery Water) ಐದನೇ ಹಂತ ಲೋಕಾರ್ಪಣೆ ಕಾರ್ಯಕ್ರಮವನ್ನು ಅ.16ರಂದು ಮಂಡ್ಯ (Mandya) ಜಿಲ್ಲೆಯ ಮಳವಳ್ಳಿ ತಾಲೂಕಿನ ತೊರೆಕಾಡನಹಳ್ಳಿ (ಟಿ.ಕೆ.ಹಳ್ಳಿ)ಯಲ್ಲಿ ಹಮ್ಮಿಕೊಳ್ಳಲಾಗಿದ್ದು, ಸಿಎಂ ಸಿದ್ದರಾಮ್ಯಯ್ಯ (CM Siddaramaiah), ಡಿಸಿಎಂ ಡಿ.ಕೆ.ಶಿವಕುಮಾರ್ (D K Shivakumar) ಭಾಗವಹಿಸಲಿದ್ದಾರೆ.

    4,336 ಕೋಟಿ ರೂ ವೆಚ್ಚದ ಸದರಿ ಯೋಜನೆಯ ಮೂಲಕ 4 ಲಕ್ಷ ಸಂಪರ್ಕ ಕಲ್ಪಿಸಲಾಗುತ್ತಿದ್ದು, 50 ಲಕ್ಷ ಫಲಾನುಭವಿಗಳಿಗೆ ನೀರು ಒದಗಿಸಲಾಗುತ್ತದೆ. 775 ಎಂಎಲ್‌ಡಿ ಹೆಚ್ಚುವರಿ ನೀರು ಪೂರೈಕೆ ಮಾಡಲಾಗುತ್ತಿದೆ. ಇದನ್ನೂ ಓದಿ: ದರ್ಶನ್, ಪವಿತ್ರಾಗೌಡ ಜಾಮೀನು ಅರ್ಜಿ ವಜಾ; ನ್ಯಾಯಾಲಯದ ತೀರ್ಪನ್ನು ಗೌರವಿಸ್ತೇವೆ: ರೇಣುಕಾಸ್ವಾಮಿ ತಂದೆ

    ಈ ಉದ್ಘಾಟನೆ ಕಾರ್ಯಕ್ರಮವು ಅ.16 ರಂದು ಬೆಳಗ್ಗೆ 10:30ಕ್ಕೆ ಆರಂಭಗೊಳ್ಳಲಿದ್ದು, ಸಿಎಂ ಅವರು ಈ ಯೋಜನೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ಅಂದು ಸುಮಾರು 10 ಸಾವಿರ ಜನರನ್ನು ಸೇರಿಸುವ ಗುರಿಯನ್ನು ಸಹ ಹಾಕಿಕೊಳ್ಳಲಾಗಿದೆ. ಇದನ್ನೂ ಓದಿ: ರಾಜ್ಯಪಾಲ ಗೆಹ್ಲೋಟ್‌ಗೆ ಈಗ Z ಶ್ರೇಣಿಯ ಭದ್ರತೆ

  • BBMP ವ್ಯಾಪ್ತಿಯ 110 ಹಳ್ಳಿ ನಿವಾಸಿಗಳಿಗೆ ಗುಡ್‌ನ್ಯೂಸ್; ದಸರಾ ಮುಗಿದ ಬೆನ್ನಲ್ಲೇ ಹರಿಯಲಿದೆ ಕಾವೇರಿ

    BBMP ವ್ಯಾಪ್ತಿಯ 110 ಹಳ್ಳಿ ನಿವಾಸಿಗಳಿಗೆ ಗುಡ್‌ನ್ಯೂಸ್; ದಸರಾ ಮುಗಿದ ಬೆನ್ನಲ್ಲೇ ಹರಿಯಲಿದೆ ಕಾವೇರಿ

    ಬೆಂಗಳೂರು: ಹತ್ತಾರು ವರ್ಷಗಳಿಂದ ಕಾವೇರಿ ನೀರಿಗಾಗಿ (Bengaluru) ಕಾದು ಕುಳಿತಿದ್ದ ಬೆಂಗಳೂರು ಹೊರವಲಯದ ಜನಕ್ಕೆ ಕೊನೆಗೂ ಗುಡ್ ನ್ಯೂಸ್ ಸಿಕ್ಕಿದೆ. ಬಿಬಿಎಂಪಿ (BBMP) ವ್ಯಾಪ್ತಿಯ 110 ಹಳ್ಳಿಗಳಿಗೆ ಕಾವೇರಿ ಹರಿಯಲು ಮೂಹೂರ್ತ ಫಿಕ್ಸ್ ಆಗಿದೆ.

    ಹೌದು. ಇದೇ ಅಕ್ಟೋಬರ್‌ 16ರಂದು ಕಾವೇರಿ 5ನೇ ಹಂತದ ಯೋಜನೆಗೆ ಚಾಲನೆ ಸಿಗಲಿದ್ದು, ಬೆಂಗಳೂರು ಹೊರವಲಯದ ಹಳ್ಳಿ ನಿವಾಸಿಗಳ ಬಹುದಿನಗಳ ಕನಸು ನನಸಾಗಲಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ದಸರಾ ಉತ್ಸವ ಮುಗಿದ ಬಳಿಕ ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಿಗೆ ಕಾವೇರಿ ನೀರು ಹರಿಯಲಿದೆ. ಇದನ್ನೂ ಓದಿ: ಉದ್ಯಮಿ ಮುಮ್ತಾಜ್‌ ಅಲಿ ಸಾವು ಪ್ರಕರಣ – ಆರೋಪಿ ಮಹಿಳೆ ಬಂಧನ

    2019 ರಲ್ಲಿ ಕಾವೇರಿ 5ನೇ ಹಂತ ಯೋಜನೆ ಕಾಮಗಾರಿ ಆರಂಭ ಮಾಡಿದ್ದ ಜಲಮಂಡಳಿ, ಇದೀಗ ಸುಮಾರು 5,500 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಕಾಮಗಾರಿ ಮುಗಿಸಿದೆ. ಅ.16ರಂದು ಟಿಕೆ ಹಳ್ಳಿಯ ಜಲಮಂಡಳಿ ಆವರಣದಲ್ಲಿ ಸಿಎಂ, ಡಿಸಿಎಂ ಕಾವೇರಿ 5ನೇ ಹಂತ ಯೋಜನೆಗೆ ಚಾಲನೆ ನೀಡಲಿದ್ದಾರೆ. ಇದನ್ನೂ ಓದಿ: ಕಳೆಗಟ್ಟಿದ ಚೆಲುವ ಚಾಮರಾಜನಗರ ದಸರಾ ಮಹೋತ್ಸವ – ಗಡಿನಾಡ ಜನತೆಯ ಕಣ್ಮನ ಸೆಳೆದ ಫಲಪುಷ್ಪ ಪ್ರದರ್ಶನ

    ಈಗಾಗಲೇ ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳ ವ್ಯಾಪ್ತಿಯಲ್ಲಿ ಒಟ್ಟು 5 ಲಕ್ಷ ಸಂಪರ್ಕ ನೀಡಲು ಉದ್ದೇಶಿಸಲಾಗಿದೆ. ಈಗಾಗಲೇ 50 ಸಾವಿರಕ್ಕೂ ಹೆಚ್ಚು ನಿವಾಸಿಗಳು ನೀರಿನ ಸಂಪರ್ಕ ಹೊಂದಿದ್ದಾರೆ. ಮೊದಲ ಹಂತದಲ್ಲಿ 170 MLD ನೀರು ಪೂರೈಕೆಯಾಗಲಿದ್ದು, ಉಳಿದ ನೀರನ್ನು ಹಂತಹಂತವಾಗಿ ಪೂರೈಸಲು ಜಲ ಮಂಡಳಿ ನಿರ್ಧರಿಸಿದೆ. ಯಶವಂತಪುರ, ದಾಸರಹಳ್ಳಿ, ಬೊಮ್ಮನಹಳ್ಳಿ, ಮಹಾದೇವಪುರ, ಆರ್.ಆರ್ ನಗರ ವಿಧಾನಸಭಾ ಕ್ಷೇತ್ರದ ಹಳ್ಳಿಗಳಿಗೆ ಕಾವೇರಿ ನೀರು ಹರಿಯಲಿದೆ. ಇದನ್ನೂ ಓದಿ: `ಅಹಿಂದ’ ನಾಯಕರ ಡಿನ್ನರ್‌ ಮೀಟಿಂಗ್‌ – ರಾಜ್ಯ ರಾಜಕೀಯದಲ್ಲಿ ಸಂಚಲನ

  • BBMP ವ್ಯಾಪ್ತಿಯ 110 ಹಳ್ಳಿ ಜನರ ಕನಸು ಶೀಘ್ರ ನನಸು – ಮುಂದಿನ ವಾರದಲ್ಲೇ ಮನೆಗಳಿಗೆ ಬರಲಿದೆ ಕಾವೇರಿ!

    BBMP ವ್ಯಾಪ್ತಿಯ 110 ಹಳ್ಳಿ ಜನರ ಕನಸು ಶೀಘ್ರ ನನಸು – ಮುಂದಿನ ವಾರದಲ್ಲೇ ಮನೆಗಳಿಗೆ ಬರಲಿದೆ ಕಾವೇರಿ!

    ಬೆಂಗಳೂರು: ಹತ್ತಾರು ವರ್ಷಗಳಿಂದ ಕಾವೇರಿ ನೀರಿಗಾಗಿ (, Bengaluru, DK )ಕಾದು ಕುಳಿತಿದ್ದ ಬೆಂಗಳೂರು ಹೊರವಲಯದ ಜನಕ್ಕೆ ಕೊನೆಗೂ ಗುಡ್ ನ್ಯೂಸ್ ಸಿಕ್ಕಿದೆ. ಬಿಬಿಎಂಪಿ (BBMP) ವ್ಯಾಪ್ತಿಯ 110 ಹಳ್ಳಿಗಳಿಗೆ ಕೊನೆಗೂ ಕಾವೇರಿ ಹರಿಯಲು ಮೂಹೂರ್ತ ಫಿಕ್ಸ್ ಆಗಿದೆ.

    ಕಳೆದ 17 ವರ್ಷಗಳ ಹಿಂದೆ ಬಿಬಿಎಂಪಿ ತೆಕ್ಕೆ ಸೇರಿದ್ದ 110 ಹಳ್ಳಿಗಳ ಜನರಿಗೆ ಕೊನೆಗೂ ಕಾವೇರಿ ನೀರು ಕುಡಿಯುವ ಭಾಗ್ಯ ಬಂದೊದಗಿದೆ. ಕಾವೇರಿ 5ನೇ ಹಂತದ ಯೋಜನೆಯಡಿ ನೀರು ಪೂರೈಸಲು ಜಲಮಂಡಳಿ ಸಜ್ಜಾಗಿದ್ದು, ಮುಂದಿನ ವಾರ ಕಾವೇರಿ 5 ಹಂತ ಯೋಜನೆಗೆ ಸರ್ಕಾರದಿಂದಲೇ ಹಸಿರು ನಿಶಾನೆ ಸಿಗಲಿದೆ.

    ನಗರದ ಹೊರವಲಯದ 110 ಹಳ್ಳಿಗಳಿಗೆ ಜೂನ್ ಅಂತ್ಯದೊಳಗೆ ಕಾವೇರಿ ನೀರು ಪೂರೈಸುವುದಾಗಿ ಜಲಮಂಡಳಿ ಭರವಸೆ ನೀಡಿತ್ತು. ಆದರೆ, ಕಾಮಗಾರಿ ವಿಳಂಬ, ತಾಂತ್ರಿಕ ಸಮಸ್ಯೆಗಳ ಕಾರಣಗಳಿಂದ ಯೋಜನೆ ಪೂರ್ಣ ಆಗಿರಲಿಲ್ಲ. ಈಗ ಇದ್ದ ಅಡೆತಡೆಗಳೆಲ್ಲ ಕಳೆದಿದ್ದು ಸಮಯ ಕೂಡಿ ಬಂದಿದೆ. ಆಗಸ್ಟ್ ತಿಂಗಳು ಪೂರ್ತಿ ಟ್ರಯಲ್ ರನ್ ಮಾಡಲಾಗಿದ್ದು, 110 ಹಳ್ಳಿಗಳಿಗೆ ಅಳವಡಿಸಿರುವ ನೂರಾರು ಕಿಮೀ ಉದ್ದದ ಕೊಳವೆಗಳನ್ನು ಹಂತ ಹಂತವಾಗಿ ಪರೀಕ್ಷಿಸಲಾಗುತ್ತಿದೆ.

    ಬಹುತ್ತೇಕ ಕಡೆ ಕೊಳವೆಗಳಲ್ಲಿ ಯಾವುದೇ ಸಮಸ್ಯೆಗಳು ಕಂಡು ಬಂದಿಲ್ಲ. ನೀರು ಹರಿಸಲು ಯೋಗ್ಯವಾಗಿದೆ ಎಂದು ಎಂಜಿನಿಯರ್‌ಗಳು ತಿಳಿಸಿದ್ದಾರೆ. ಹೀಗಾಗಿ ಮುಂದಿನವಾರವೇ ಯೋಜನೆ ಜಾರಿಗೊಳಿಸಲು ಜಲಮಂಡಳಿ ತಯಾರಿ ಆರಂಭಿಸಿದೆ. ಇದನ್ನೂ ಓದಿ: ಲೆಬನಾನ್ ಪೇಜರ್ ಸ್ಫೋಟದ ಹಿಂದೆ ಟ್ಯಾಲೆಂಟೆಡ್ ಬ್ಯೂಟಿ!

    ಇನ್ನೂ ಜಲಮಂಡಳಿ ಯೋಜನೆ ಜಾರಿಗೆ ಸಿದ್ದವಾಗಿರೋ ಸುಳಿವು ನೀಡಿದ ಬೆನ್ನಲ್ಲೇ, ಸೋಮವಾರ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ಕಾವೇರಿ 5ನೇ ಹಂತದ ಯೋಜನೆ ಪರಿಶೀಲನೆ ನಡೆಸಲಿದ್ದಾರೆ. ಬಳಿಕ 5ನೇ ಹಂತದ ಯೋಜನೆಗೆ ಚಾಲನೆ ಸಿಗಲಿದೆ. ಕಾವೇರಿ 5ನೇ ಹಂತದ ಯೋಜನೆಯಡಿ 110 ಹಳ್ಳಿಗಳಿಗೆ ನಿತ್ಯ 775 ಎಂಎಲ್‌ಡಿ ನೀರು ಪೂರೈಕೆಯಾಗಲಿದೆ. ಒಟ್ಟು 5 ಲಕ್ಷ ಸಂಪರ್ಕ ನೀಡಲು ಉದ್ದೇಶಿಸಲಾಗಿದೆ. ಈಗಾಗಲೇ ಮೊದಲ ಹಂತದಲ್ಲಿ 55 ಸಾವಿರ ಸಂಪರ್ಕ ನೀಡಲಾಗಿದೆ. ಮೊದಲ ಹಂತದಲ್ಲಿ 100-200 ಎಂಎಲ್ಡಿ ನೀರು ಹರಿಸುವ ಗುರಿ ಹೊಂದಿದೆ. ಹಂತ ಹಂತವಾಗಿ ನೀರು ಪೂರೈಸುವ ಯೋಜನೆ ರೂಪಿಸಿರುವುದನ್ನು ಹೆಚ್ಚು ಮಾಡುವುದಾಗಿ ಜಲಮಂಡಳಿ ತಿಳಿಸಿದೆ. ಇದನ್ನೂ ಓದಿ: ಅರ್ಕಾವತಿ ರೀಡೂ ಪ್ರಕರಣದತ್ತ ರಾಜ್ಯಪಾಲರ ಚಿತ್ತ – ಸಿಎಂಗೆ ಮತ್ತೊಂದು ಸಂಕಷ್ಟ?

    ಒಟ್ಟಾರೆ 2019ರಲ್ಲಿ ಆರಂಭಗೊಂಡ ಕಾವೇರಿ 5ನೇ ಹಂತದ ಯೋಜನೆ ಕಾಮಗಾರಿ ಪೂರ್ಣಗೊಂಡಿದ್ದು, ಮುಂದಿನ ವಾರದಿಂದ 110 ಹಳ್ಳಿಗಳಿಗೆ ಕಾವೇರಿ ನೀರು ಹರಿಸಲು ಸಿದ್ಧವಾಗಿದ್ದು, ಈ ಮೂಲಕ ಈ ಭಾಗದ ಜನರ ಬಹುದಿನದ ಕನಸು ಹಾಗೂ ದಾಹಕ್ಕೆ ಎರಡು ಕೂಡ ತೀರಲಿದೆ. ಇದನ್ನೂ ಓದಿ: Chhattisgarh | ತಲೆಗೆ 11 ಲಕ್ಷ ಬಹುಮಾನ ಹೊಂದಿದ್ದ ಮೂವರು ಸೇರಿ 8 ನಕ್ಸಲರು ಶರಣು

  • ಬೆಂಗಳೂರಿಗೆ ಹರಿಯುತ್ತಾ ಶರಾವತಿ ನೀರು? – ಕಾರ್ಯ ಸಾಧ್ಯತೆ ವರದಿ ಪಡೆಯಲು ಸರ್ಕಾರ ತಯಾರಿ

    ಬೆಂಗಳೂರಿಗೆ ಹರಿಯುತ್ತಾ ಶರಾವತಿ ನೀರು? – ಕಾರ್ಯ ಸಾಧ್ಯತೆ ವರದಿ ಪಡೆಯಲು ಸರ್ಕಾರ ತಯಾರಿ

    – ಈಐ ಟೆಕ್ನಾಲಾಜೀಸ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆಗೆ ಟೆಂಡರ್
    – ಶರಾವತಿ ನದಿ ಉಳಿಸಿ ಹೋರಾಟ ಒಕ್ಕೂಟ ವಿರೋಧ

    ಶಿವಮೊಗ್ಗ: ಬೆಂಗಳೂರಿನ (Bengaluru) ಜನರ ದಾಹ ತೀರಿಸಲು ಸರ್ಕಾರ ಪಶ್ಚಿಮಾಭಿಮುಖವಾಗಿ ‌ಹರಿದು ಅರಬ್ಬಿ ಸಮುದ್ರ ಸೇರುತ್ತಿರುವ ಶರಾವತಿ ನದಿ‌ ನೀರಿನ ಮೇಲೆ ಕಣ್ಣಿಟ್ಟಿದೆ. ಈ ಬಗ್ಗೆ ಕಾರ್ಯ ಸಾಧ್ಯತೆ ವರದಿ ಪಡೆಯಲು ಸರ್ಕಾರ ಮುಂದಾಗಿದೆ. ಬೆಂಗಳೂರಿಗೆ ಶರಾವತಿ ನೀರು (Sharavathi River Water) ತರುವ ಯೋಜನೆಗೆ ಮಲೆನಾಡಿಗರು, ಪರಿಸರವಾದಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.

    ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಅಂಬುತೀರ್ಥದಲ್ಲಿ ಹುಟ್ಟುವ ಶರಾವತಿ ನದಿಗೆ ಲಿಂಗನಮಕ್ಕಿ‌ ಬಳಿ ಜಲಾಶಯ ನಿರ್ಮಿಸಲಾಗಿದೆ. ಪಶ್ಚಿಮ ಘಟ್ಟದಲ್ಲಿ ಹುಟ್ಟಿ ಪಶ್ಚಿಮ ದಿಕ್ಕಿಗೆ ಹರಿಯುವ ಪ್ರಮುಖ ನದಿಗಳಲ್ಲಿ ಶರಾವತಿ ನದಿಯೂ (Sharavathi River) ಒಂದು. ರಾಜ್ಯದ ಅತಿದೊಡ್ಡ ಜಲಾಶಯಗಳಲ್ಲಿ ಲಿಂಗನಮಕ್ಕಿ‌ ‌ಜಲಾಶಯವು ಒಂದು. 151.75 ಟಿಎಂಸಿ ಸಾಮರ್ಥ್ಯ ಹೊಂದಿರುವ ಜಲಾಶಯ ಇದಾಗಿದೆ. 1962 ರಲ್ಲಿ ಈ ಜಲಾಶಯ ನಿರ್ಮಿಸಲಾಗಿದೆ. ಜಲಾಶಯ ನಿರ್ಮಾಣವಾದ 60 ವರ್ಷದಲ್ಲಿ ಈ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು ಕೇವಲ 12 ಬಾರಿ ಮಾತ್ರ. ಇದನ್ನೂ ಓದಿ: ನಿವೇಶನ ಲೂಟಿ ಮಾಡುತ್ತಿರುವುದು ನಾನಾ ನೀವಾ? – ಎಂ.ಬಿ.ಪಾಟೀಲರ ಸೈಟ್ ಅಕ್ರಮ ಸದ್ಯದಲ್ಲೇ ಬಯಲು: ಛಲವಾದಿ ನಾರಾಯಣಸ್ವಾಮಿ

    40 ಟಿಎಂಸಿ ನೀರು ತರಲು ಚಿಂತನೆ:
    ಲಿಂಗನಮಕ್ಕಿ‌ ಜಲಾಶಯವನ್ನು ಜಲ ವಿದ್ಯುತ್ ಉತ್ಪಾದನೆಗೆ ಬಳಸಿಕೊಂಡಿದ್ದು, ರಾಜ್ಯದ ಶೇ.30 ರಷ್ಟು ಕತ್ತಲೆಯನ್ನು ಈ ಜಲಾಶಯ ನೀಗಿಸುತ್ತಿದೆ. ಅಂದರೆ ಶೇ.30 ರಷ್ಟು ರಾಜ್ಯಕ್ಕೆ ವಿದ್ಯುತ್ ಉತ್ಪಾದಿಸಿ ನೀಡುತ್ತಿದೆ. ಆದರೆ ಇತ್ತೀಚೆಗೆ ಮಿತಿಮೀರಿ ಬೆಳೆಯುತ್ತಿರುವ ಬೆಂಗಳೂರಿಗೆ ಕಾವೇರಿ ನೀರು ಸಾಲದಾಗಿದೆ.‌ ಈಗಾಗಿ ಅಂತರರಾಜ್ಯ ಸಮಸ್ಯೆ ಇಲ್ಲದ ಶರಾವತಿ ನದಿಯ ಲಿಂಗನಮಕ್ಕಿ‌ ಜಲಾಶಯದಿಂದ (Linganamakki Dam) 40 ಟಿಎಂಸಿ ನೀರನ್ನು ತೆಗೆದುಕೊಂಡು ಹೋಗಲು ಸರ್ಕಾರ ಚಿಂತನೆ ನಡೆಸುತ್ತಿದೆ. ಈ ಬಗ್ಗೆ ತಾಂತ್ರಿಕ ಮತ್ತು ಆರ್ಥಿಕ ಯೋಜನೆಯ ಕಾರ್ಯ ಸಾಧ್ಯತೆಯ ವರದಿ ತಯಾರಿಸಲು ಈಐ ಟೆಕ್ನಾಲಾಜೀಸ್‌ ಪ್ರೈವೇಟ್ ಲಿಮಿಟೆಡ್‌ಗೆ ಸರ್ಕಾರ ಟೆಂಡರ್ ನೀಡಿದೆ. ಇದನ್ನೂ ಓದಿ: ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಲು ರಾಜ್ಯಗಳು ಪ್ರಾಮಾಣಿಕ ಪ್ರಯತ್ನ ಮಾಡ್ತಿಲ್ಲ: ರಾಜನಾಥ್ ಸಿಂಗ್ ಆರೋಪ

    2018 ರಲ್ಲಿಯೂ ಶರಾವತಿ ನದಿಯಿಂದ ಬೆಂಗಳೂರಿಗೆ ನೀರು ತರುವ ಪ್ರಸ್ತಾಪ ಮಲೆನಾಡಿನ ಜನರ ವಿರೋಧದಿಂದ ಯೋಜನೆ ಕೈ ಬಿಡಲಾಗಿತ್ತು. ಆದರೆ ಇದೀಗ ಈ ಪ್ರಸ್ತಾಪ ಮುನ್ನಲೆಗೆ ಬಂದಿದೆ. ಶರಾವತಿ ನದಿಯಿಂದ ಬೆಂಗಳೂರಿಗೆ ನೀರು ಕೊಂಡೊಯ್ಯುವುದಕ್ಕೆ ಜಿಲ್ಲೆಯ ಪರಿಸರವಾದಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಯೋಜನೆ ಜಾರಿಯಾದರೇ ನೂರಾರು ಎಕರೆ ಅರಣ್ಯ ಪ್ರದೇಶ ನಾಶವಾಗುತ್ತದೆ. ವನ್ಯಜೀವಿ ಪ್ರಭೇಧ ನಾಶವಾಗುತ್ತದೆ. ಅಲ್ಲದೇ ಜಿಲ್ಲೆಯಲ್ಲೇ ಇರುವ ಗ್ರಾಮಗಳಿಗೆ, ನಗರ ಪ್ರದೇಶಕ್ಕೆ ಶರಾವತಿಯಿಂದ ನೀರು ಕೊಡಲು ಸಾಧ್ಯವಾಗಿಲ್ಲ. ಇನ್ನೂ ಬೆಂಗಳೂರಿಗೆ ಕೊಡಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ. ಜೊತೆಗೆ ಈ ಯೋಜನೆ ಕೈ ಬಿಡುವಂತೆ ಆಗ್ರಹಿಸಿದ್ದಾರೆ.

    ಒಟ್ಟಿನಲ್ಲಿ ಶರಾವತಿ ನದಿ ನೀರು ಬೆಂಗಳೂರಿಗೆ ಕೊಂಡೊಯ್ಯುವ ಯೋಜನೆಗೆ ಆರಂಭದಲ್ಲೇ ವಿರೋಧ ವ್ಯಕ್ತವಾಗಿದೆ. ಈ ಯೋಜನೆ ಕೈಬಿಡದಿದ್ದರೇ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲು ಶರಾವತಿ ನದಿ ನೀರು ಉಳಿಸಿ ಹೋರಾಟ ಒಕ್ಕೂಟದ ಸದಸ್ಯರು ಉಗ್ರ ಹೋರಾಟ ನಡೆಸುವ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಸಚಿವರ ಜೊತೆ ಕಂಪನಿಯ ನಿಯೋಗದ ಭೇಟಿ; ವಿಜಯಪುರ ಜಿಲ್ಲೆಯಲ್ಲಿ ಕೆನಡಾದ ವಿಟೆರಾದಿಂದ 250 ಕೋಟಿ ಹೂಡಿಕೆ: ಎಂ.ಬಿ.ಪಾಟೀಲ್ 

  • ತಮಿಳುನಾಡಿಗೂ ಕಾವೇರಿ ಹರಿದರೂ ರೈತರಿಗೆ ತಪ್ಪದ ಕಂಟಕ!

    ತಮಿಳುನಾಡಿಗೂ ಕಾವೇರಿ ಹರಿದರೂ ರೈತರಿಗೆ ತಪ್ಪದ ಕಂಟಕ!

    – ಸರ್ಕಾರದ ನಿರ್ಧಾರಕ್ಕೆ ರೈತರ ಆಕ್ರೋಶ

    ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದೆ. ಇದರಿಂದ ಕೆಆರ್‌ಎಸ್ (KRS) ಅಣೆಕಟ್ಟೆ ಭರ್ತಿಯಾಗಿದೆ. ಇತ್ತ ತಮಿಳುನಾಡಿಗೆ (Tamil Nadu) ಕೊಡಬೇಕಾದ ಕೋಟಾದ ನೀರನ್ನು ಕೂಡ ಕೊಟ್ಟಾಗಿದೆ. ಜೊತೆಗೆ ಈಗಲೂ ಸಹ ತಮಿಳುನಾಡಿಗೆ ನೀರು ಹೋಗುತ್ತಿದೆ. ಯಾವುದೇ ತೊಂದರೆ ಇಲ್ಲದೇ ಬೆಳೆ ಬೆಳೆಯಬಹುದು ಎಂದು ಕನಸು ಕಟ್ಟಿಕೊಂಡಿದ್ದ ರೈತರಿಗೆ ಮತ್ತೆ ಕಾವೇರಿ ಶಾಕ್ ಎದುರಾಗಿದೆ.

    ಕಳೆದ 20 ದಿನಗಳಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ವರುಣನ ಅಬ್ಬರ ಹೆಚ್ಚಾಗಿದೆ. ಇದರಿಂದ ಹಳೆ ಮೈಸೂರು ಭಾಗದ ಜೀವನಾಡಿ ಮಂಡ್ಯ (Mandya) ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಅಣೆಕಟ್ಟೆ ಸಂಪೂರ್ಣವಾಗಿ ಭರ್ತಿಯಾಗಿದೆ. ಜೊತೆಗೆ ಕೆಆರ್‌ಎಸ್ ಡ್ಯಾಂನಿಂದ ಅಪಾರ ಪ್ರಮಾಣದ ನೀರು ಬಿಟ್ಟಿರುವ ಕಾರಣ ಕಾವೇರಿ ಮೈದುಂಬಿ ಹರಿದು ತಮಿಳುನಾಡಿನ ಮೆಟ್ಟೂರು ಡ್ಯಾಂನ ಒಡಲು ಸೇರಿದ್ದಾಳೆ. ಹೀಗಿರುವಾಗ ಕೆಆರ್‌ಎಸ್ ಡ್ಯಾಂನ ನಂಬಿರುವ ಕಾರಣ ಕಳೆದ ವರ್ಷ ಬೆಳೆ ಇಲ್ಲದೆ ಕಂಗಾಲಾಗಿದ್ದ ರೈತರು (Farmers) ಈ ಬಾರಿ ಯಾವುದೇ ಅಡ್ಡಿ ಆತಂಕಗಳು ಇಲ್ಲದೆ ಬೆಳೆ ಬೆಳೆಯಬಹುದು ಎಂಬ ಸಂತಸದಲ್ಲಿದ್ದರು. ಆದರೆ ಆ ಖುಷಿಗೆ ಸರ್ಕಾರ ಬ್ರೇಕ್ ಹಾಕಿದೆ. ಇದನ್ನೂ ಓದಿ: ಇಷ್ಟೆಲ್ಲಾ ಬೆಳವಣಿಗೆ ಆಗ್ತಿದ್ರು ಸುಮ್ಮನಿರೋದ್ಯಾಕೆ? ‍ಭ್ರಷ್ಟ ಬಿಜೆಪಿ ನಾಯಕರನ್ನು ಜೈಲಿಗೆ ಹಾಕಿ – ಎಐಸಿಸಿಯಿಂದ ಸಿಎಂ, ಡಿಸಿಎಂಗೆ ಕ್ಲಾಸ್

    ಕಳೆದ ವರ್ಷ ಸರಿಯಾದ ಪ್ರಮಾಣದ ಮಳೆ ಬೀಳದ ಕಾರಣ ಕಾವೇರಿ ಕೊಳ್ಳದ ರೈತರು ಬೆಳೆ ಬೆಳೆಯಲು ಸಾಧ್ಯವಾಗಿರಲಿಲ್ಲ. ಈ ಬಾರಿ ಕನ್ನಂಬಾಡಿ ಕಟ್ಟೆ ಅವಧಿಗೂ ಮುನ್ನವೇ ಭರ್ತಿಯಾಗಿದೆ. ಹೀಗಾಗಿ ರೈತರು ಉತ್ತಮ ಬೆಳೆ ಬೆಳೆಯಬಹುದು ಎಂಬ ನಿರೀಕ್ಷೆಯಲ್ಲಿದ್ದರು. ಇದೀಗ ಸರ್ಕಾರ ಕೆಆರ್‌ಎಸ್ ಡ್ಯಾಂನಿಂದ ಕಟ್ಟು ಪದ್ಧತಿಯಲ್ಲಿ ನಾಲೆಗಳಿಗೆ ನೀರು ಬಿಡುವ ತೀರ್ಮಾನಕ್ಕೆ ಬಂದಿದೆ. ಸಚಿವ ಚಲುವರಾಯಸ್ವಾಮಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಆಗಸ್ಟ್ 8 ರಿಂದ ಪದ್ಧತಿಯಂತೆ ನೀರು ಹರಿಸಲು ತೀರ್ಮಾನ ಮಾಡಲಿದೆ. ನಾಲ್ಕು ತಿಂಗಳ ಕಾಲ ತಿಂಗಳಲ್ಲಿ 18 ದಿನಗಳು ಮಾತ್ರ ನೀರು ಹರಿಸಲಾಗುತ್ತಿದೆ ಎಂದು ಕಾವೇರಿ ನಿಗಮ ಆದೇಶ ಹೊರಡಿಸಿದೆ. ಇದನ್ನೂ ಓದಿ: 45 ದಿನದಿಂದ ಕರೆಂಟ್ ಇಲ್ಲದೆ ಕತ್ತಲಲ್ಲಿ ಕಾಫಿನಾಡ ಅತ್ತಿಗುಂಡಿ ಗ್ರಾಮ

    ಇತ್ತ ಸಚಿವ ಚಲುವರಾಯಸ್ವಾಮಿ ನೇತೃತ್ವದ ಸಭೆಯಲ್ಲಿ ಇಂತಹದೊಂದು ನಿರ್ಧಾರ ತೆಗೆದುಕೊಂಡು, ಈಗಾಗಲೇ ಘೋಷಣೆ ಮಾಡಲಾಗಿದೆ. ಅತ್ತ ಕಾಂಗ್ರೆಸ್ ಪಕ್ಷದ ಶಾಸಕ ಗಣಿಗ ರವಿಕುಮಾರ್ ಇದಕ್ಕೆ ವಿರೋಧ ವ್ಯಕ್ತಪಡಿಸಿ ರೈತರ ಪರ ನಿಂತಿದ್ದಾರೆ. ಈ ವರ್ಷ ಕೆಆರ್‌ಎಸ್ ಡ್ಯಾಂನಲ್ಲಿ ನೀರಿದ್ದರೂ ರೈತರು ಬಾಯಿಗೆ ಮಣ್ಣು ಹಾಕಿಕೊಳ್ಳಬೇಕಾ? ಕಟ್ಟು ಪದ್ಧತಿಯಲ್ಲಿ ನೀರು ಬಿಡಲು ನಿರ್ಧಾರ ಮಾಡಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸಚಿವರ ಕಾರ್ಯವೈಖರಿಗೆ ಹೈಕಮಾಂಡ್ ಗರಂ – ದಸರಾ ಬಳಿಕ ಸಂಪುಟ ಪುನಾರಚನೆ ಆಗುತ್ತಾ?

    ಒಟ್ಟಾರೆ ವರುಣನ ಕೃಪೆಯಿಂದ ಅವಧಿಗೂ ಮುನ್ನವೇ ಕೆಆರ್‌ಎಸ್ ಡ್ಯಾಂ ಭರ್ತಿಯಾಗಿದೆ. ಇದೀಗ ಸರ್ಕಾರ ಯಾವ ಪೂರ್ವಗ್ರಹ ಪೀಡಿತವಾಗಿ ಕಟ್ಟು ಪದ್ಧತಿಯಲ್ಲಿ ನಾಲೆಗಳಿಗೆ ನೀರು ಹರಿಸುತ್ತೇವೆ ಎಂದು ಹೇಳಿದೆ ಗೊತ್ತಿಲ್ಲ. ಸರ್ಕಾರದ ಈ ನಿರ್ಧಾರದ ವಿರುದ್ಧ ರೈತಾಪಿ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಇದನ್ನೂ ಓದಿ: ರಾಜಭವನವನ್ನು ಅತಿಹೆಚ್ಚು ದುರುಪಯೋಗ ಪಡೆಸಿಕೊಂಡ ಶ್ರೇಯಸ್ಸು ಕಾಂಗ್ರೆಸ್ಸಿಗಿದೆ: ಬೊಮ್ಮಾಯಿ

  • ಜುಲೈ ತಿಂಗಳು ಸಂತೃಪ್ತಿಯಾಗಿದೆ – ಆಗಸ್ಟ್‌ನಲ್ಲಿ 45 ಟಿಎಂಸಿ ನೀರು ಹರಿಸುವಂತೆ ತಮಿಳುನಾಡು ಒತ್ತಾಯ

    ಜುಲೈ ತಿಂಗಳು ಸಂತೃಪ್ತಿಯಾಗಿದೆ – ಆಗಸ್ಟ್‌ನಲ್ಲಿ 45 ಟಿಎಂಸಿ ನೀರು ಹರಿಸುವಂತೆ ತಮಿಳುನಾಡು ಒತ್ತಾಯ

    ನವದೆಹಲಿ: ಕಾವೇರಿ ಅಚ್ಚುಕಟ್ಟು ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು ತಮಿಳುನಾಡಿಗೆ (TamilNadu) ಸಮರ್ಪಕ ನೀರು ಹರಿದು ಹೋಗುತ್ತಿರುವ ಹಿನ್ನೆಲೆಯಲ್ಲಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಯಾವುದೇ ಆದೇಶ ನೀಡದೇ ಸಭೆಯನ್ನು ಮುಂದೂಡಿದೆ.

    ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಸಂಬಂಧ ಜುಲೈ 14ರಂದು ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ವಪಕ್ಷಗಳ ಸಭೆ ನಡೆದಿತ್ತು.

    ಬುಧವಾರ ದೆಹಲಿಯಲ್ಲಿ ಸಭೆ ನಡೆಸಿದ ಪ್ರಾಧಿಕಾರ, ಎರಡು ರಾಜ್ಯಗಳಿಂದ ಮಾಹಿತಿ ಕಲೆ ಹಾಕಿತು. ಸುಪ್ರೀಂ ಕೋರ್ಟ್ (Supreme Court) ಆದೇಶದಂತೆ ಜುಲೈ ಮತ್ತು ಆಗಸ್ಟ್‌ನಲ್ಲಿ ನೀರು ಹರಿಸಬೇಕು, ಜುಲೈ ತಿಂಗಳ ನೀರಿನ ಪಾಲು ಸಂತೃಪ್ತಿಯಾಗಿದೆ ಎಂದು ಹೇಳಿ ಆಗಸ್ಟ್ ತಿಂಗಳ 45 ಟಿಎಂಸಿ ನೀರು ಹರಿಸಲು ತಮಿಳುನಾಡು ಒತ್ತಾಯಿಸಿದೆ. ಇದನ್ನೂ ಓದಿ: ಕೆಆರ್‌ಎಸ್ ಜಲಾಶಯ ಸಂಪೂರ್ಣ ಭರ್ತಿ – ಕಾವೇರಿ ಕೊಳ್ಳದ ಜನರಿಗೆ ಪ್ರವಾಹದ ಆತಂಕ

    ಜೂನ್ 1 ರಿಂದ ಜುಲೈ 22 ವರೆಗೂ ಕರ್ನಾಟಕದ 4 ಜಲಾಶಯಗಳ ಒಳಹರಿವು 118.245 ಟಿಎಂಸಿಯಷ್ಟಿದೆ. ಆದರೆ, ಇದೇ ಅವಧಿಯಲ್ಲಿ 30 ವರ್ಷಗಳ ಸರಾಸರಿ (1989-90 ರಿಂದ 2018-19) ಒಳಹರಿವು 98.679 ಟಿಎಂಸಿ ಇದೆ. ಕಾವೇರಿ ನೀರು ನಿಯಂತ್ರಣ ಸಮಿತಿ ತನ್ನ 99ನೇ ಸಭೆಯಲ್ಲಿ ಬಿಳಿಗುಂಡ್ಲುವಿನಲ್ಲಿ ಕರ್ನಾಟಕವು ಜುಲೈ 31ರ ವರೆಗೆ ಪ್ರತಿದಿನ 1 ಟಿಎಂಸಿಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ನಿರ್ಧರಿಸಿತು. ಅಂತೆಯೇ ನೀರು ಹರಿಸಿದೆ. ಬಿಳಿಗುಂಡ್ಲುವಿನಲ್ಲಿ ಖಾತ್ರಿಪಡಿಸಬೇಕಾದ ಹರಿವನ್ನು ನಿರ್ಧರಿಸುವಾಗ ತಮಿಳುನಾಡಿನ ಮೂರು ಜಲಾಶಯಗಳಲ್ಲಿನ ಕ್ಯಾರಿಓವರ್ ಶೇಖರಣೆ ಮತ್ತು ಇಡೀ ಕಾವೇರಿ ಜಲಾನಯನ ಪ್ರದೇಶದಲ್ಲಿನ ಜಲವಿಜ್ಞಾನದ ಸ್ಥಿತಿಯನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ ಎಂದು ಕರ್ನಾಟಕ ಹೇಳಿತು.

    ಸದ್ಯ ನೀರಿನ ಹರಿವು ಸುಗಮವಾಗಿರುವ ಹಿನ್ನೆಲೆಯಲ್ಲಿ ಯಾವುದೇ ಆದೇಶ ನೀಡುವುದಿಲ್ಲ, ಸುಪ್ರೀಂ ಕೋರ್ಟ್ ಆದೇಶದ ಅನ್ವಯ ನೀರು ಬಿಡಿ. ಜುಲೈ 30 ರಂದು ಕಾವೇರಿ ನೀರು ನಿರ್ವಹಣಾ ಸಮಿತಿ ಸಭೆ ನಡೆಸಿ, ತಮಿಳುನಾಡಿಗೆ ನೀಡಬೇಕಾದ ನೀರಿನ ಪ್ರಮಾಣದ ಬಗ್ಗೆ ಮತ್ತೊಮ್ಮೆ ಸಮಾಲೋಚನೆ ನಡೆಸಲಾಗುವುದು ಎಂದು ಸಿಡಬ್ಲ್ಯೂಆರ್‌ಸಿ ಹೇಳಿದೆ. ಇದನ್ನೂ ಓದಿ: ಯಾವ ರಾಜ್ಯವನ್ನೂ ಕಡೆಗಣಿಸಿಲ್ಲ, ಪ್ರತಿಪಕ್ಷಗಳ ಪ್ರತಿಭಟನೆ ದುರುದ್ದೇಶಪೂರ್ವಕ: ನಿರ್ಮಲಾ ಸೀತಾರಾಮನ್

    ಜುಲೈ 14ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ವಿಧಾನಸೌಧದಲ್ಲಿ ನಡೆದ ಸರ್ವಪಕ್ಷಗಳ ಸಭೆಯಲ್ಲಿ ತಮಿಳುನಾಡಿಗೆ ಪ್ರತಿನಿತ್ಯ 1 ಟಿಎಂಸಿ ನೀರಿಗೆ ಬದಲಾಗಿ, ಜುಲೈ 31ರ ವರೆಗೆ 8 ಸಾವಿರ ಕ್ಯುಸೆಕ್‌ ನೀರು ಹರಿಸಲು ತೀರ್ಮಾನ ಕೈಗೊಳ್ಳಲಾಗಿತ್ತು. ಇದನ್ನೂ ಓದಿ: ತಮಿಳುನಾಡಿಗೆ ಕಾವೇರಿ – ನಿತ್ಯ 8 ಸಾವಿರ ಕ್ಯುಸೆಕ್‌ ನೀರು ಹರಿಸಲು ಸರ್ಕಾರ ನಿರ್ಧಾರ: ಸಿಎಂ

  • ಕೆಆರ್‌ಎಸ್ ಜಲಾಶಯ ಸಂಪೂರ್ಣ ಭರ್ತಿ – ಕಾವೇರಿ ಕೊಳ್ಳದ ಜನರಿಗೆ ಪ್ರವಾಹದ ಆತಂಕ

    ಕೆಆರ್‌ಎಸ್ ಜಲಾಶಯ ಸಂಪೂರ್ಣ ಭರ್ತಿ – ಕಾವೇರಿ ಕೊಳ್ಳದ ಜನರಿಗೆ ಪ್ರವಾಹದ ಆತಂಕ

    ಮಂಡ್ಯ: ಕಳೆದ 2 ದಿನಗಳಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ಬಿಡುವು ಕೊಟ್ಟಿದ್ದ ವರುಣದೇವ ಮತ್ತೆ ಅಬ್ಬರಿಸಲು ಶುರು ಮಾಡಿದ್ದಾನೆ. ಪರಿಣಾಮ ಕಾವೇರಿ ಒಡಲಾದ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಅಣೆಕಟ್ಟೆ (KRS Dam) ಸಂಪೂರ್ಣ ಭರ್ತಿಯಾಗಿದೆ. ಇದರಿಂದ ಹಳೇ ಮೈಸೂರು ಭಾಗದ ಜನರಿಗೆ ಮತ್ತು ಕಾವೇರಿ ಕೊಳ್ಳದ ರೈತರಲ್ಲಿ (Farmers) ಮಂದಹಾಸ ಮನೆ ಮಾಡಿದೆ.

    124.80 ಗರಿಷ್ಠ ಸಾಮರ್ಥ್ಯದ ಕೆಆರ್‌ಎಸ್ ಜಲಾಶಯ ಎರಡು ವರ್ಷಗಳ ಬಳಿಕ ಸಂಪೂರ್ಣವಾಗಿ ಭರ್ತಿಯಾಗಿದೆ. 1 ಕಡೆ ಕಾವೇರಿ ಒಡಲು ಭರ್ತಿಯಾಗಿರೋದು ಸಂತಸದ ವಿಚಾರವಾದ್ರೆ, ಇನ್ನೊಂದೆಡೆ ಕಾವೇರಿ ಕೊಳ್ಳದ ಜನರಿಗೆ ಪ್ರವಾಹದ ಭೀತಿ (flood concern) ಎದುರಾಗಿದೆ. ಇದನ್ನೂ ಓದಿ: ಮುಡಾ ಸೈಟ್ ಕೋಲಾಹಲ – ವಿಧಾನಸೌಧಲ್ಲಿ ಬಿಜೆಪಿ, ಜೆಡಿಎಸ್‌ ಅಹೋರಾತ್ರಿ ಧರಣಿ

    ಸದ್ಯ ಕೆಆರ್‌ಎಸ್ ಡ್ಯಾಂಗೆ 41,099 ಕ್ಯುಸೆಕ್‌ ಒಳಹರಿವು ಬರುತ್ತಿದ್ದು, ಅಷ್ಟೇ ಪ್ರಮಾಣದ ನೀರನ್ನು ನದಿಗೆ ಹರಿಸಲಾಗುತ್ತಿದೆ. ಇನ್ನೂ ಎರಡು ತಿಂಗಳು ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಚೆನ್ನಾಗಿ ಬೀಳುವ ಸಾಧ್ಯತೆ ಇದೆ.‌ ಈ ಕಾರಣ ಡ್ಯಾಂಗೆ ಮತ್ತಷ್ಟು ಒಳಹರಿವು ಹೆಚ್ಚಾಗಲಿದ್ದು, ಅಷ್ಟೇ ಪ್ರಮಾಣದಲ್ಲಿ ಹೊರಹರಿವು ಬಿಡಲಾಗುತ್ತದೆ. ಹೀಗಾಗಿಯೇ ಮಂಡ್ಯ ಜಿಲ್ಲಾಡಳಿತ ಕಾವೇರಿ ನದಿ ಪಾತ್ರದ ಜನರಿಗೆ ಅಲರ್ಟ್ ಘೋಷಣೆ ಮಾಡಲಾಗಿದೆ. ಯಾವ ಸಮಯದಲ್ಲಾದರೂ ಅಧಿಕ ಪ್ರಮಾಣದಲ್ಲಿ ನದಿಗೆ ಹರಿಸಲಾಗುತ್ತದೆ. ಹೀಗಾಗಿ ಜನರು ತಮ್ಮ ಆಸ್ತಿಪಾಸ್ತಿ ಹಾಗೂ ಜಾನುವಾರುಗಳ ರಕ್ಷಣೆಗೆ ಮುಂದಾಗಬೇಕು. ಅಲ್ಲದೇ ನದಿ ದಡಕ್ಕೆ ಯಾರು ಸಹ ಹೋಗಬಾರದು ಎಂದು ಮಂಡ್ಯ ಡಿಸಿ ಡಾ.ಕುಮಾರ್‌ ಆದೇಶಿಸಿದ್ದಾರೆ. ಇದನ್ನೂ ಓದಿ: ಗ್ಯಾರಂಟಿಗಳಿಗೆ ಎಸ್ಸಿ-ಎಸ್ಟಿ ಹಣ ಬಳಕೆ ಆರೋಪ – ಸರ್ಕಾರದ ವಿರುದ್ಧ ದಲಿತ ಸಂಘ ಪ್ರತಿಭಟನೆ

    ಕಾವೇರಿ ಮಾತೆಯ ಒಡಲು ತುಂಬಿರೋದು ಕಾವೇರಿ ಮಕ್ಕಳಲ್ಲಿ ಸಂತಸ ತಂದಿದೆ. ಇನ್ನೊಂದೆಡೆ ಪ್ರವಾಹದ ಆತಂಕ ಸಹ ಎದುರಾಗಿದೆ. ಜನರು ಮಳೆಯ ಆರ್ಭಟ ಕಡೆಮೆ ಆಗುವವರೆಗೆ ನದಿಯಿಂದ ದೂರ ಇದ್ದು ಸುರಕ್ಷಿತವಾಗಿ ಇರಬೇಕು ಅಂತ ಅಧಿಕಾರಿಗಳು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಶಕ್ತಿ ಯೋಜನೆ ಅಡಿ ಸರ್ಕಾರದಿಂದ ಸಾರಿಗೆ ಇಲಾಖೆಗೆ 1,413 ಕೋಟಿ ರೂ. ಬಾಕಿ – ರಾಮಲಿಂಗಾರೆಡ್ಡಿ

  • ಕಾವೇರಿ ನೀರು ಬಿಟ್ಟಿದ್ದಕ್ಕೆ ಶಹಬ್ಬಾಶ್‍ಗಿರಿ ಕೊಡಲು ಸಭೆಗೆ ಹೋಗ್ಬೇಕಿತ್ತಾ?: ಹೆಚ್‍ಡಿಕೆ ಕಿಡಿ

    ಕಾವೇರಿ ನೀರು ಬಿಟ್ಟಿದ್ದಕ್ಕೆ ಶಹಬ್ಬಾಶ್‍ಗಿರಿ ಕೊಡಲು ಸಭೆಗೆ ಹೋಗ್ಬೇಕಿತ್ತಾ?: ಹೆಚ್‍ಡಿಕೆ ಕಿಡಿ

    – ಸಭೆಯಲ್ಲಿ ಕೊಡುವ ಗೊಡಂಬಿ, ಬಾದಾಮಿ ತಿನ್ನೋಕೆ ಹೋಗಬೇಕಿತ್ತಾ?

    ಬೆಂಗಳೂರು: ಕೆಆರ್‌ಎಸ್ ಡ್ಯಾಂನಿಂದ (KRS Dam) ರೈತರ ಹೆಸರಿನಲ್ಲಿ ತಮಿಳುನಾಡಿಗೆ (Tamil Nadu) ನೀರು ಹರಿಸಲಾಗಿದೆ. ನೀರು ಬಿಟ್ಟು ಕಾಟಾಚಾರಕ್ಕೆ ಸಭೆ ಕರೆದಿದ್ದಾರೆ. ನೀರು ಬಿಟ್ಟಿದ್ದಕ್ಕೆ ಶಹಬ್ಬಾಶ್‍ಗಿರಿ ಕೊಡಲು ಹೋಗಬೇಕಿತ್ತಾ? ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ (H.D Kumaraswamy) ಪ್ರಶ್ನೆ ಮಾಡಿದ್ದಾರೆ.

    ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಿಳುನಾಡಿಗೆ ಕಾವೇರಿ ನೀರು (Cauvery Water) ಹರಿಸುವ ವಿಚಾರವಾಗಿ ನಡೆದ ಸರ್ವಪಕ್ಷಗಳ ಸಭೆಗೆ ಗೈರಾದ ವಿಚಾರಕ್ಕೆ ಅವರು ಪ್ರತಿಕ್ರಿಯಿಸಿದ್ದಾರೆ. ಈ ವೇಳೆ ಸಿಡಬ್ಲ್ಯೂಆರ್‌ಸಿ ಶಿಫಾರಸು ಹಿನ್ನೆಲೆ ಸಭೆ ಕರೆದಿದ್ದರು. ಯಾವ ವಿಚಾರ ಚರ್ಚಿಸಲು ಅವರು ಸಭೆ ಕರೆದಿದ್ದರು? ಚರ್ಚೆಗೂ ಮುನ್ನವೇ ತಮಿಳುನಾಡಿಗೆ ನೀರು ಹರಿದು ಹೋಗಿದೆ. ಕಬಿನಿಯಿಂದ ನೀರು ಹರಿದಿದೆ. ಸಭೆಯಲ್ಲಿ ಕೊಡುವ ಗೊಡಂಬಿ, ಬಾದಾಮಿ ತಿನ್ನೋಕೆ ಹೋಗಬೇಕಿತ್ತಾ? ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: 24 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ಹಾಳಾಗಿದೆ, ರಾಜ್ಯದಲ್ಲಿ NEET ಪರೀಕ್ಷೆ ರದ್ದು ಮಾಡಿ: ಐವಾನ್ ಡಿಸೋಜಾ

    ಯಾಕೆ ಸಭೆ ಮಾಡಿದ್ದೀರಿ? ಏನು ನಿರ್ಧಾರ ಮಾಡಿದ್ದೀರಿ? ಸಭೆ ಮಾಡಿದ ಮೇಲೂ ಕಡಿಮೆ ಪ್ರಮಾಣದ ನೀರು ಬಿಡಲು ಒಪ್ಪಿಗೆ ಸೂಚಿಸಿದೆ. ತೆಲಂಗಾಣಕ್ಕೆ ಹೋದರೆ ಅಲ್ಲಿ ಸಿಎಂ ಫೋನ್ ಮಾಡಿ ಸಹಕಾರ ಕೇಳ್ತಾರೆ. ಆದರೆ ನಾನು ರಾಜ್ಯದ ಯೋಜನೆಗಳಿಗೆ ಸಹಿ ಹಾಕಿದರೆ ಅದನ್ನು ನಿಲ್ಲಿಸುತ್ತಾರೆ ಎಂದು ಅವರು ಕಿಡಿಕಾರಿದ್ದಾರೆ.

    ಮಂಡ್ಯದಲ್ಲಿ ಜನತಾ ದರ್ಶನ ಮಾಡಿದರೆ, ಅಧಿಕಾರಿಗಳು ಭಾಗಿಯಾಗಬಾರದು ಎಂದು ಆದೇಶ ಮಾಡಿದ್ದಾರೆ. ಅಧಿಕಾರಿಗಳ ಸಭೆ ನಡೆಸಬಾರದು ಎಂದು ಆದೇಶ ಮಾಡಿದ ಮೇಲೆ ನಮ್ಮಿಂದ ಏನು ಬಯಸುತ್ತೀರಾ? ಪಾಂಡವಪುರದಲ್ಲಿ ಮತ ಕೊಟ್ಟ ಜನರಿಗೆ ಧನ್ಯವಾದ ಹೇಳಬೇಕಿತ್ತು ಹೋಗಿದ್ದೆ. ಯಾವ ಸಂದರ್ಭದಲ್ಲಿ ಯಾವ ಕಾರ್ಯಕ್ರಮಕ್ಕೆ ಹೋಗಬೇಕು ಎಂದು ನನಗೆ ಗೊತ್ತಿದೆ. ನಾನು ಇವರ ಅನುಮತಿ ಪಡೆಯಬೇಕಾ? ಎಂದು ಕಿಡಿಕಾರಿದ್ದಾರೆ.

    ಯಾವುದೇ ಕಾರ್ಯಕ್ರಮ ಮಾಡಿದರೂ ನಾವು ಪ್ರಾಮಾಣಿಕವಾಗಿ ಮಾಡುತ್ತೇವೆ. ಇವರಂತೆ ಕಾನೂನು ಬಾಹಿರ ಕೆಲಸ ಮಾಡಿಲ್ಲ. ಮುಖ್ಯಮಂತ್ರಿ ಮಾಡಲು ಯಾರು ಇವರ ಹಿಂದೆ ನಿಂತರೊ ಅವರ ಬದುಕಲ್ಲೇ ಚೆಲ್ಲಾಟ ಆಡುತ್ತಿದ್ದಾರೆ. ಅವರು ಎಷ್ಟು ಶಾಪ ಹಾಕ್ತಿದ್ದಾರೆ ಗೊತ್ತಿದೆ. ನೀವ ಸಿಎಂ ಆಗಲೆಂದು ಬಯಸಿದವರಿಗೆ ನಿಮ್ಮ ಆಡಳಿತದಲ್ಲಿ ಏನಾಗಿದೆ ಎಂದು ಗೊತ್ತಿದೆ ಎಂದು ಹೇಳಿದ್ದಾರೆ.

    ಕಾರ್ಪೋರೆಷನ್‌ ಕಸ ಎತ್ತಿದ್ದೇನೆ:
    ನಾನು ಕಾರ್ಪೋರೆಷನ್‌ ಕಸ ಎತ್ತಿದ್ದೇನೆ. ಸಿನಿಮಾ ಡಬ್ಬಾ ಹೊತ್ತಿದ್ದೇನೆ, ನಮ್ಮ ಕಾಲದಲ್ಲಿ ಸಿಡಿ ಇರಲಿಲ್ಲ. ಕಂಡಕಂಡಲ್ಲಿ ಕೊಳ್ಳೆ ಹೊಡೆದು ಜೀವನ ಮಾಡಿಲ್ಲ. ಭಾನುವಾರವೂ ಸಭೆ ನಡೆಸಿ ನನ್ನ ವಿರುದ್ಧ ದಾಖಲೆ ಹುಡುಕುತ್ತಿದ್ದಾರೆ. ಸಣ್ಣ ಪುಟ್ಟ ಸಮಸ್ಯೆ ಇವೆಯೇ ಎಂದು ಹುಡುಕುತ್ತಿದ್ದಾರೆ. 41 ವರ್ಷದಿಂದ ಕಷ್ಟಪಟ್ಟಿರುವ ಆಸ್ತಿ ನಮ್ಮದು ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ. ಇದನ್ನೂ ಓದಿ: 10 ಸಾವಿರ ಶಿಕ್ಷಕರ ನೇಮಕ ಪ್ರಕ್ರಿಯೆಗೆ ಸಿದ್ದತೆ : ಮಧು ಬಂಗಾರಪ್ಪ