Tag: Cauvery Residence

  • ಮಾಜಿ ಸಿಎಂ ಔತಣಕೂಟದಲ್ಲಿ ಅಸಮಾಧಾನ ಸ್ಫೋಟ- ಕ್ಯಾಬಿನೆಟ್‍ನಲ್ಲಿ ಪರಂ ಮೌನಕ್ಕೆ ಸಿಟ್ಟು

    ಮಾಜಿ ಸಿಎಂ ಔತಣಕೂಟದಲ್ಲಿ ಅಸಮಾಧಾನ ಸ್ಫೋಟ- ಕ್ಯಾಬಿನೆಟ್‍ನಲ್ಲಿ ಪರಂ ಮೌನಕ್ಕೆ ಸಿಟ್ಟು

    ಬೆಂಗಳೂರು: ಬುಧವಾರ ರಾತ್ರಿ ನಡೆದ ಮಾಜಿ ಸಿಎಂ ಸಿದ್ದರಾಮಯ್ಯ ಔತಣಕೂಟದಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಮುಂದೆಯೇ ಸಚಿವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಕ್ಯಾಬಿನೆಟ್‍ನಲ್ಲಿ ಡಿಸಿಎಂ ಪರಮೇಶ್ವರ್ ಏನೂ ಮಾತನಾಡಲ್ಲ. ಸಂಪುಟ ಸಭೆಯಲ್ಲಿ ಎಲ್ಲಾ ರೇವಣ್ಣ ಹೇಳಿದಂತೆಯೇ ನಡೆಯುತ್ತಿದೆ. ಅವರ ಪಕ್ಷ ಅವರು ಏನ್ ಬೇಕಾದ್ರೂ ಮಾತನಾಡಲಿ. ಆದ್ರೆ ನಮ್ಮ ಕಡೆಯಿಂದ ಪರಮೇಶ್ವರ್ ಸ್ಟ್ರಾಂಗ್ ಆಗಿ ಮಾತನಾಡ್ಬೇಕು. ಆದ್ರೆ ಪರಮೇಶ್ವರ್ ಸಭೆಯಲ್ಲಿ ಸೈಲೆಂಟ್ ಆಗಿರ್ತಾರೆ ಅಂತ ಅಳಲು ತೋಡಿಕೊಂಡಿದ್ದಾರೆ.

    ಅಲ್ಲದೆ ಹಾವೇರಿ ಜಿಲ್ಲಾ ಉಸ್ತುವಾರಿ ನನಗೆ ಬೇಕೆಂದು ಆರ್. ಶಂಕರ್, ವಿಜಯಪುರ ನನಗೆ ಬೇಕೆಂದು ಶಿವಾನಂದ ಪಾಟೀಲ್, ಬೀದರ್ ಕೊಡಿಸಿ ಎಂದು ರಾಜಶೇಖರ್ ಪಾಟೀಲ್ ಪಟ್ಟು ಹಿಡಿದಿದ್ದಾರೆ. ಅಲ್ಲದೆ ನೀವು ಮನಸ್ಸು ಮಾಡಿದ್ರೆ ಆಗುತ್ತೆ ದಯವಿಟ್ಟು ಕೊಡಿಸಿ ಎಂದು ಸಿದ್ದರಾಮಯ್ಯಗೆ ದುಂಬಾಲು ಬಿದ್ದಿದ್ದಾರೆ.

    ಸಚಿವರುಗಳಾದ ಜಿ. ಪರಮೇಶ್ವರ್, ಡಿ.ಕೆ. ಶಿವಕುಮಾರ್, ಕೆ.ಜೆ. ಜಾರ್ಜ್, ಪ್ರಿಯಾಂಕ್ ಖರ್ಗೆ, ರಾಜಶೇಖರ್ ಪಾಟೀಲ್, ವೆಂಕಟರಮಣಪ್ಪ, ರಮೇಶ್ ಜಾರಕಿಹೊಳಿ, ಜಮೀರ್ ಅಹಮದ್, ಶಂಕರ್, ಜಯಮಾಲಾ, ಕೃಷ್ಣಭೈರೇಗೌಡ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮತ್ತಿತರರು ಭಾಗಿಯಾಗಿದ್ದರು.

  • ಕಾಂಗ್ರೆಸ್ ಸಚಿವರಿಗೆ ಮಾಜಿ ಸಿಎಂರಿಂದ ಔತಣಕೂಟ

    ಕಾಂಗ್ರೆಸ್ ಸಚಿವರಿಗೆ ಮಾಜಿ ಸಿಎಂರಿಂದ ಔತಣಕೂಟ

    ಬೆಂಗಳೂರು: ಉಸ್ತುವಾರಿ ಸಚಿವರ ನೇಮಕದಲ್ಲಿ ಅಸಮಧಾನದ ಬೆನ್ನಲ್ಲೇ ಮಾಜಿ ಸಿಎಂ  ಕಾಂಗ್ರೆಸ್ ಸಚಿವರಿಗೆ ಔತಣಕೂಟ ಏರ್ಪಡಿಸಿರುವುದು ಭಾರೀ ಕೂತುಹಲ ಮೂಡಿಸಿದೆ.

    ಹೌದು. ಸಿಎಂ ಕುಮಾರಸ್ವಾಮಿ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯನವರ ನಡುವೆ ಉಸ್ತುವಾರಿ ಸಚಿವರ ನೇಮಕ ವಿಚಾರದಲ್ಲಿ ಅಸಮಾಧಾನದ ಬೆನ್ನಲ್ಲೇ ಕೈ ಸಚಿವರ ಔತಣಕೂಟ ಭಾರೀ ಕುತೂಹಲ ಕೆರಳಿಸಿದೆ.

    ಸಿದ್ದರಾಮಯ್ಯನವರು ನಗರದ ಕಾವೇರಿ ನಿವಾಸದಲ್ಲಿ ಔತಣಕೂಟವನ್ನು ಏರ್ಪಡಿಸಿದ್ದು, ಈ ಭೋಜನಕೂಟದಲ್ಲಿಯೇ ಉಸ್ತುವಾರಿ ನೇಮಕದಲ್ಲಿನ ಅಸಮಾಧಾನ, ಉತ್ತರ ಕರ್ನಾಟಕ ವಿವಾದ ಹಾಗೂ ವರ್ಗಾವಣೆಯಲ್ಲಿನ ಗೊಂದಲಗಳ ಬಗ್ಗೆ ಚರ್ಚೆಯಾಗುವ ಸಾಧ್ಯತೆ ಎಂದು ಹೇಳಲಾಗಿದೆ.

     

    ಈಗಾಗಲೇ ಕಾವೇರಿ ನಿವಾಸಕ್ಕೆ ಸಚಿವರುಗಳಾದ ಜಿ. ಪರಮೇಶ್ವರ್, ಡಿ.ಕೆ. ಶಿವಕುಮಾರ್, ಕೆ.ಜೆ. ಜಾರ್ಜ್, ಪ್ರಿಯಾಂಕ್ ಖರ್ಗೆ, ರಾಜಶೇಖರ್ ಪಾಟೀಲ್, ವೆಂಕಟರಮಣಪ್ಪ, ರಮೇಶ್ ಜಾರಕಿಹೊಳಿ, ಜಮೀರ್ ಅಹಮದ್, ಶಂಕರ್, ಜಯಮಾಲಾ, ಕೃಷ್ಣಭೈರೇಗೌಡ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಆಗಮಿಸಿದ್ದಾರೆ ಎಂದು ತಿಳಿದು ಬಂದಿದೆ.