ಜಲಾಶಯದ ನಿರ್ಮಾಣವಾದಾಗಿನಿಂದ ಮೊದಲ ಬಾರಿಗೆ ಜೂನ್‌ನಲ್ಲಿ ಇಷ್ಟೊಂದು ನೀರು ಸಂಗ್ರಹವಾಗುವ ಮೂಲಕ ಇತಿಹಾಸ ಸೃಷ್ಟಿಯಾಗಿದೆ. ಸಾಮಾನ್ಯವಾಗಿ ಜುಲೈ ಅಂತ್ಯ ಅಥವಾ ಆಗಸ್ಟ್ನಲ್ಲಿ ಡ್ಯಾಂ ಭರ್ತಿಯಾಗುತ್ತಿತ್ತು. ಆದರೆ ಈ ಬಾರಿ ಕಾವೇರಿ ಜಲಾನಯನ (Cauvery Basin) ಪ್ರದೇಶದಲ್ಲಿ ಭಾರೀ ಮಳೆಯಾದ ಹಿನ್ನೆಲೆ ಕೆಆರ್‌ಎಸ್ ಡ್ಯಾಂ 118.60 ಅಡಿ ಭರ್ತಿಯಾಗಿದೆ. ಇದನ್ನೂ ಓದಿ: ಭಟ್ಕಳದ ಇಸ್ಪೀಟ್ ಕ್ಲಬ್ ಮೇಲೆ ದಾಳಿ – 2,000 ರೂ. ವಶಕ್ಕೆ, 25 ಜನರ ಮೇಲೆ ಕೇಸ್
124.80 ಅಡಿ ಗರಿಷ್ಠ ಮಟ್ಟ ಹೊಂದಿರುವ ಕನ್ನಂಬಾಡಿಯ ಸಂಪೂರ್ಣ ಭರ್ತಿಗೆ ಕೇವಲ 6 ಅಡಿ ಮಾತ್ರ ಬಾಕಿಯಿದೆ. ಸದ್ಯ ಡ್ಯಾಂನಲ್ಲಿ 18,387 ಕ್ಯುಸೆಕ್ ಒಳಹರಿವಿದೆ. ಇದೇ ರೀತಿ ಒಳಹರಿವು ಬಂದ್ರೆ ಒಂದು ವಾರದಲ್ಲೇ ಡ್ಯಾಂ ಭರ್ತಿಯಾಗಲಿದ್ದು, ಡ್ಯಾಂಗೆ 8 ಟಿಎಂಸಿ ನೀರು ಹರಿದು ಬಂದರೆ ಸಂಪೂರ್ಣ ಭರ್ತಿಯಾಗಲಿದೆ. ಕೆಆರ್‌ಎಸ್ ಡ್ಯಾಂ 49.452 ಟಿಎಂಸಿ ನೀರು ಸಂಗ್ರಹದ ಸಾಮರ್ಥ್ಯ ಹೊಂದಿದೆ.
ಮಂಡ್ಯ: ಕಾವೇರಿ ಜಲಾನಯನ (Cauvery Basin) ಪ್ರದೇಶದಲ್ಲಿ ಮಳೆಯಾದ ಹಿನ್ನೆಲೆ ಕನ್ನಂಬಾಡಿ ಕಟ್ಟೆಗೆ 17 ಸಾವಿರಕ್ಕೂ ಅಧಿಕ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಕೆಆರ್‌ಎಸ್ ಡ್ಯಾಂನ (KRS Dam) ನೀರಿನ ಮಟ್ಟ ಮತ್ತಷ್ಟು ಏರಿಕೆಯಾಗಿದೆ.
ಇಂದಿನ ಕೆಆರ್‌ಎಸ್ ಡ್ಯಾಂ ನೀರಿನ ಮಟ್ಟ
ಗರಿಷ್ಠ ಮಟ್ಟ – 124.80 ಅಡಿ.
ಇಂದಿನ ಮಟ್ಟ – 103.70 ಅಡಿ.
ಗರಿಷ್ಠ ಸಾಮರ್ಥ್ಯ – 49.452 ಟಿಎಂಸಿ.
ಇAದಿನ ಸಾಮರ್ಥ್ಯ – 25.851 ಟಿಎಂಸಿ
ಒಳ ಹರಿವು – 17,544 ಕ್ಯೂಸೆಕ್
ಹೊರ ಹರಿವು – 735 ಕ್ಯೂಸೆಕ್
ಮಂಡ್ಯ: ಕಾವೇರಿ ಜಲಾನಯನ (Cavery Basin) ಪ್ರದೇಶದಲ್ಲಿ ಮಳೆ ಅಬ್ಬರ ಮುಂದುವರೆದಿದ್ದು, ಮೂರೇ ದಿನಕ್ಕೆ ಕೆಆರ್‌ಎಸ್ ಡ್ಯಾಂನಲ್ಲಿ (KRS Dam) 9 ಅಡಿ ನೀರು ಏರಿಕೆ ಕಂಡಿದೆ.
ಹಳೆ ಮೈಸೂರು ಭಾಗದ ಜೀವನಾಡಿಯಾಗಿರುವ ಕೆಆರ್‌ಎಸ್ ಡ್ಯಾಂಗೆ ಮತ್ತೇ ಜೀವಕಳೆ ಬಂದಿದೆ. ಡ್ಯಾಂಗೆ 22 ಸಾವಿರ ಕ್ಯೂಸೆಕ್‌ಗೂ ಅಧಿಕ ನೀರು ಹರಿದು ಬರುತ್ತಿದೆ. 3 ದಿನದ ಹಿಂದೆ 89 ಅಡಿಗೆ ಡ್ಯಾಂ ನೀರಿನ ಮಟ್ಟ ಇಳಿದಿತ್ತು. ಕೊಡಗು ಹಾಗೂ ಕಾವೇರಿ ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆ ಹಿನ್ನಲೆ ಇಂದು ಡ್ಯಾಂನಲ್ಲಿ 98 ಅಡಿಗೆ ನೀರು ಏರಿಕೆ ಕಂಡಿದೆ. ಇದನ್ನೂ ಓದಿ: ಭೀಮಾ ನದಿ ತೀರದಲ್ಲಿ ಪ್ರವಾಹದ ಆತಂಕ – ನದಿಗಿಳಿಯದಂತೆ ಜಿಲ್ಲಾಡಳಿತ ಸೂಚನೆ
ನಾಳೆ ವೇಳೆಗೆ ಡ್ಯಾಂ ನೀರಿನ ಮಟ್ಟ 100 ಅಡಿ ತಲುಪುವ ಸಾಧ್ಯತೆಗಳಿವೆ. ಇದೀಗ ಡ್ಯಾಂನಲ್ಲಿ 22,788 ಕ್ಯೂಸೆಕ್ ನೀರಿನ ಒಳಹರಿವಿದ್ದು, ಡ್ಯಾಂನಿಂದ 630 ಕ್ಯೂಸೆಕ್ ನೀರಿನ ಹೊರ ಹರಿವಿದೆ. ಈ ಕೆಆರ್‌ಎಸ್ ಡ್ಯಾಂನಲ್ಲಿ 49.452 ಟಿಎಂಸಿ ನೀರಿನ ಸಾಮರ್ಥ್ಯವಿದ್ದು, ಸದ್ಯ ಡ್ಯಾಂನಲ್ಲಿ 21.282 ಟಿಎಂಸಿ ನೀರು ಸಂಗ್ರಹವಾಗಿದೆ. ಇದನ್ನೂ ಓದಿ: ಹಾಸನದಲ್ಲಿ ತಗ್ಗಿದ ಮಳೆ ಅಬ್ಬರ – ಹೇಮಾವತಿ ಒಳಹರಿವಿನಲ್ಲಿ ಇಳಿಕೆ
ಮಂಡ್ಯ: ಕಾವೇರಿ (Cauvery) ಜಲಾನಯನ ಪ್ರದೇಶದಲ್ಲಿ ಭಾನುವಾರದಿಂದ ಮುಂಗಾರು ಮಳೆ (Mansoon Rain) ಅಬ್ಬರಿಸುತ್ತಿರುವ ಹಿನ್ನೆಲೆ ಹಳೆ ಮೈಸೂರು (Mysuru) ಭಾಗದ ಜೀವನಾಡಿಯಾಗಿರುವ ಮಂಡ್ಯ (Mandya) ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಡ್ಯಾಂನ (KRS Dam) ಒಳಹರಿವಿನ ಪ್ರಮಾಣದಲ್ಲಿ ಏರಿಕೆ ಕಂಡಿದೆ.
ಇದೀಗ ಕೆಆರ್‌ಎಸ್ ಡ್ಯಾಂಗೆ 2,053 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಮಂಗಳವಾರಕ್ಕೆ ನೀರಿನ ಪ್ರಮಾಣವು 5,000 ಕ್ಯೂಸೆಕ್‌ಗೆ ಹೆಚ್ಚುವ ಸಾಧ್ಯತೆ ಇದೆ. 124.80 ಅಡಿ ಗರಿಷ್ಠ ಮಟ್ಟ ಹೊಂದಿರುವ ಕೆಆರ್‌ಎಸ್ ಡ್ಯಾಂನಲ್ಲಿ ಸದ್ಯ 89.35 ಅಡಿ ನೀರು ಇದೆ. ಇನ್ನೂ 49.452 ಟಿಎಂಸಿ ಗರಿಷ್ಠ ಸಾಮರ್ಥ್ಯ ಹೊಂದಿದ್ದು, ಈಗ 15.555 ಟಿಎಂಸಿ ನೀರಿದೆ. ಹೊರ ಹರಿವಿನ ಪ್ರಮಾಣ 347 ಕ್ಯೂಸೆಕ್ ಇದೆ.
ಚಿಕ್ಕಮಗಳೂರು: ರಾಜ್ಯ ಸರ್ಕಾರ (Government Of Karnataka) ತನ್ನೊಳಗಿನ ಗೊಂದಲಗಳಿಂದಾಗಿ ರಾಜ್ಯದ ಜನರನ್ನ ಬಲಿ ಕೊಡುತ್ತಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಆಕ್ರೋಶ ಹೊರಹಾಕಿದ್ದಾರೆ.
ದೇಶದಲ್ಲಿ ಇದ್ದಾರೆಂಬ ಕಾರಣಕ್ಕೆ ಒತ್ತಡದಿಂದ ನೀರು ಬಿಟ್ಟಿದ್ದಾರೆ. ಆದ್ರೆ ರಾಜ್ಯದಲ್ಲಿ ಮಳೆ ಕಡಿಮೆ ಇದ್ದು, ಬಹಳ ಜಿಲ್ಲೆಗಳಲ್ಲಿ ಬರದ ವಾತಾವರಣವಿದೆ. ತಮಿಳುನಾಡು ಸರ್ಕಾರ ಹಾಗೂ ವ್ಯವಸ್ಥೆಗೆ ಈ ಬಗ್ಗೆ ಮನವರಿಕೆ ಮಾಡಬೇಕಿತ್ತು. ನಮ್ಮ ರೈತರು, ಬೆಂಗಳೂರಿನ ಜನಕ್ಕೆ ಕುಡಿಯೋಕು ನೀರಿಲ್ಲದಂತಹ ಸ್ಥಿತಿ ನಿರ್ಮಾಣವಾಗುತ್ತೆ. ಈಗಾಗಲೇ ಬೆಂಗಳೂರು ನಗರಕ್ಕೆ (Bengaluru City) ಅಗತ್ಯಕ್ಕೆ ತಕ್ಕಷ್ಟು ನೀರು ಬಿಡುತ್ತಿಲ್ಲ. ಸರಿಯಾಗಿ ವಿದ್ಯುತ್ ಇಲ್ಲ, ನೀರಿಲ್ಲ, ಮಳೆ ಇಲ್ಲ ಎಲ್ಲಾ ಕಾರಣದಿಂದ ಸಮಸ್ಯೆ ಎದುರಿಸುತ್ತಿದ್ದಾರೆ. ಬೆಂಗಳೂರು, ಮೈಸೂರು, ಮಂಡ್ಯ (Mandya) ಜನರಿಗೆ ಕುಡಿಯುವ ನೀರಿಗೂ ತತ್ವಾರ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಜನರ ಬಗ್ಗೆ ಯೋಚಿಸ್ತಿಲ್ಲ, ಅವರವರ ಒಳ ರಾಜಕೀಯದ ಬಗ್ಗೆ ಯೋಚಿಸ್ತಿದೆ. ಸರ್ಕಾರ ತನ್ನೊಳಗಿನ ಗೊಂದಲಗಳಿಂದಾಗಿ ಕರ್ನಾಟಕದ ಜನರನ್ನ ಬಲಿ ಕೊಡ್ತಿದೆ ಎಂದು ಕಿಡಿ ಕಾರಿದ್ದಾರೆ.
ದೇಶಕ್ಕೆ ಮೋದಿ ಬೇಕು:
ಪಕ್ಷ ಬಿಟ್ಟು ಹೋದವರನ್ನ ಮತ್ತೆ ಸೇರಿಸಿಕೊಂಡು ಬಿಜೆಪಿಯನ್ನ ಗಟ್ಟಿ ಮಾಡಬೇಕು. ಮೋದಿಯನ್ನ ಮತ್ತೆ ಪ್ರಧಾನಿ ಮಾಡುವ ನಿಟ್ಟಿನಲ್ಲಿ ಎಲ್ಲರೂ ಶ್ರಮ ವಹಿಸಬೇಕು. ದೇಶಕ್ಕೆ ಮೋದಿ ಬೇಕಾಗಿದೆ, ವಿಶ್ವಕ್ಕೆ ಮೋದಿ ಬೇಕಾಗಿದೆ. ವಿಶ್ವದ ಹಲವು ದೇಶ ಭಾರತ, ಮೋದಿಯನ್ನ ನೋಡ್ತಿವೆ. ಭಾರತವನ್ನು ಮತ್ತಷ್ಟು ಗಟ್ಟಿ ಮಾಡಲು ಎಲ್ಲರ ಸಹಕಾರ ಬೇಕು ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: KRSನಿಂದ ತಮಿಳುನಾಡಿಗೆ ಗುರುವಾರವೂ ಭಾರೀ ಪ್ರಮಾಣದ ನೀರು – ಇಂದು ರೈತಸಂಘ ಪ್ರತಿಭಟನೆ
ಬಿಜೆಪಿ (BJP) ಸರ್ಕಾರ ರಚನೆ ಮಾಡಲು ಶಾಸಕರು, ಮುಖಂಡರು ಬಿಜೆಪಿ ಸೇರಿದ್ದರು. ಅವರಿಗೆ ಬಿಜೆಪಿ ಅತ್ಯಂತ ಗೌರವದಿಂದ ನಡೆದುಕೊಂಡಿದೆ. ನಮ್ಮ ಸರ್ಕಾರದ ಅವಧಿಯಲ್ಲಿ ಅವರಿಗೆ ದೊಡ್ಡ ಖಾತೆಗಳನ್ನೇ ಕೊಟ್ಟಿದೆ. ಅವರನ್ನ ದೊಡ್ಡ-ದೊಡ್ಡ ಜಿಲ್ಲೆಗೆ ಉಸ್ತುವಾರಿ ಸಚಿವರನ್ನಾಗಿ ಮಾಡಿದೆ. ಪಕ್ಷದ ಎಲ್ಲಾ ಚಟುವಟಿಕೆಯಲ್ಲಿ ಅವರನ್ನ ತೊಡಗಿಸಿಕೊಳ್ಳಲಾಗಿತ್ತು. ಇವತ್ತು ಸರ್ಕಾರ ಇಲ್ಲ, ಬಿಜೆಪಿ ಸೋತಿದೆ. ಆ ಸೋಲಿನಲ್ಲೂ ಎಲ್ಲರ ಪಾಲು ಇದೆ. ಮತ್ತೆ ಬಿಜೆಪಿಯನ್ನ ಕಟ್ಟಬೇಕು ಅನ್ನೋದು ನಮ್ಮ ಅಪೇಕ್ಷೆ. ಅಂದು ನಮ್ಮ ಪಕ್ಷದ ತತ್ವ-ಸಿದ್ಧಾಂತಗಳನ್ನ ಒಪ್ಪಿಕೊಂಡು ಪಕ್ಷ ಸೇರಿದ್ದರು. ಅವರು ಖಂಡಿತವಾಗಿಯೂ ಪಕ್ಷದಲ್ಲೇ ಇರ್ತಾರೆ ಅನ್ನೋ ವಿಶ್ವಾಸವಿದೆ. ಅಧಿಕಾರಕ್ಕಾಗಿ ಬಂದ್ರು, ಅಧಿಕಾರ ಇಲ್ಲದಾಗ ಹೋದ್ರು ಎಂಬ ಕೆಟ್ಟ ಹೆಸರನ್ನ ಯಾರೂ ತೆಗೆದುಕೊಳ್ಳಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಜಗದೀಶ್ ಶೆಟ್ಟರ್, ಲಕ್ಷ್ಮಣ್ ಸವದಿಗೆ ಪರೋಕ್ಷವಾಗಿ ಆಹ್ವಾನ ಕೊಟ್ಟ ಸಚಿವೆ, ಮೋದಿಗಾಗಿ ಪಕ್ಷ ಬಿಟ್ಟು ಹೋದವರಿಗೂ ಆಹ್ವಾನವಿದೆ. ಪಕ್ಷ ಬಿಟ್ಟೋದವರ ಜೊತೆ ಸದ್ಯಕ್ಕೆ ಯಾವುದೇ ಮಾತುಕತೆ ನಡೆದಿಲ್ಲ. ಮೋದಿಯಂತ ನಾಯಕ ಈ ದೇಶಕ್ಕೆ ಮತ್ತೆ ಸಿಗಲ್ಲ. ದೇಶದ ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಮೋದಿಯಂತಹ ನಾಯಕ ಯಾವ ಪಕ್ಷದಲ್ಲೂ ಸಿಗೋದಿಲ್ಲ. ಇಡೀ ವಿಶ್ವವೇ ಅವರನ್ನ ಒಪ್ಪುತ್ತಿದೆ. ಅವರನ್ನ ಪಿಎಂ ಮಾಡಬೇಕು ಅದಕ್ಕಾಗಿ ಯಾರೇ ಪಾರ್ಟಿ ಬಿಟ್ಟಿದರೂ ವಾಪಸ್ ಬರಲು ವಿನಂತಿ. ಮೋದಿಗಾಗಿ, ದೇಶಕ್ಕಾಗಿ, ಮುಂದಿನ ಪೀಳಿಗೆಗಾಗಿ ಬರಬೇಕಿದೆ. ಪಕ್ಷಕ್ಕೆ ವಾಪಸ್ ಬನ್ನಿ. ವಿಶ್ವದ ಶಾಂತಿಗಾಗಿ ನಾವೆಲ್ಲರೂ ಒಗ್ಗೂಡಿ ಕೆಲಸ ಮಾಡೋಣ ಬಿಜೆಪಿಯನ್ನು ದೇಶದಲ್ಲಿ ಇನ್ನಷ್ಟು ಬಲಿಷ್ಠಗೊಳಿಸೋಣ ಎಂದು ಕರೆ ನೀಡಿದ್ದಾರೆ.
ಮಂಡ್ಯ: ಕೆಆರ್‌ಎಸ್ ಡ್ಯಾಂನಿಂದ (KRS Dam) ತಮಿಳುನಾಡಿಗೆ ಬಿಡುಗಡೆಯಾಗುವ ನೀರಿನ ಪ್ರಮಾಣ ದಿನೇ ದಿನೇ ಹೆಚ್ಚಿಸಲಾಗುತ್ತಿದೆ. ಸುಪ್ರೀಂ ಕೋರ್ಟ್ ಆದೇಶಕ್ಕೂ ಮುನ್ನವೇ ಕಾವೇರಿ ನೀರಾವರಿ ನಿಗಮದ (Cauvery Irrigation Corporation) ಅಧಿಕಾರಿಗಳು ತಮಿಳುನಾಡಿಗೆ ಹೆಚ್ಚಿನ ಪ್ರಮಾಣದ ನೀರು ಹರಿಸುತ್ತಿದ್ದಾರೆ.
ಕೆಆರ್‌ಎಸ್ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ ತಮಿಳುನಾಡಿಗೆ ಹೆಚ್ಚಿನ ಪ್ರಮಾಣದ ನೀರು ಬಿಡುಗಡೆ ಮಾಡಲಾಗುತ್ತಿದೆ. ಬುಧವಾರ ಕೆಆರ್‌ಎಸ್‌ನಿಂದ 9,136 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ (TamilNadu) ಹರಿಸಲಾಗಿತ್ತು, ಗುರುವಾರ (ಆ.17) 13,473 ಕ್ಯೂಸೆಕ್ ಹರಿಸಲಾಗುತ್ತಿದೆ. ಒಂದೇ ದಿನಕ್ಕೆ 4,337 ಕ್ಯೂಸೆಕ್ ನೀರು ಹೆಚ್ಚುವರಿ ಹರಿಸಲಾಗಿದೆ. ಇದನ್ನೂ ಓದಿ: KRSನಿಂದ ತಮಿಳುನಾಡಿಗೆ ಹೆಚ್ಚಿನ ನೀರು ಬಿಡುಗಡೆ
ಭಾನುವಾರ ಕೆಆರ್‌ಎಸ್ ಡ್ಯಾಂನಿಂದ ತಮಿಳುನಾಡಿಗೆ 5,238 ಕ್ಯೂಸೆಕ್ ನೀರು ಬಿಡುಗಡೆಯಾದರೆ, ಸೋಮವಾರ 5,243 ಕ್ಯೂಸೆಕ್ ನೀರು ಬಿಡುಗಡೆಯಾಗಿದೆ. ಮಂಗಳವಾರ 8,590 ಕ್ಯೂಸೆಕ್ ನೀರು, ಬುಧವಾರ ಕೆಆರ್‌ಎಸ್ ಡ್ಯಾಂನಿಂದ ತಮಿಳುನಾಡಿಗೆ 9,136 ಕ್ಯೂಸೆಕ್ ನೀರು ಬಿಡುಗಡೆಯಾಗಿತ್ತು . ಗುರುವಾರವಾದ ಇಂದು 13,473 ಕ್ಯೂಸೆಕ್ ನೀರು ಹರಿಸಲಾಗುತ್ತಿದೆ. ಇದನ್ನೂ ಓದಿ: ಸಿನಿಮೀಯ ಸ್ಟೈಲ್‌ನಲ್ಲಿ ದೇವಸ್ಥಾನದಲ್ಲಿ ಜೆಡಿಎಸ್ ಮುಖಂಡನ ಹತ್ಯೆಗೆ ಯತ್ನ – ಕೊಲೆಗೆ ಸ್ನೇಹಿತನಿಂದಲೇ ಸ್ಕೆಚ್
ಕೆಆರ್‌ಎಸ್‌ನಿಂದ ರಾಜ್ಯಕ್ಕೆ ನೀರು ಬಿಡುಗಡೆಗಾಗಿ ತಮಿಳುನಾಡು ಸುಪ್ರೀಂ ಕೋರ್ಟ್ ಮೊರೆ ಹೋಗಿದೆ. ಆದರೆ ಸುಪ್ರೀಂ ಕೋರ್ಟ್ ಆದೇಶಕ್ಕೂ ಮುನ್ನವೇ ಕೆಆರ್‌ಎಸ್ ಡ್ಯಾಂನಿಂದ ತಮಿಳುನಾಡಿಗೆ ದಿನೇ ದಿನೇ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಲಾಗುತ್ತಿದೆ. ತಮಿಳುನಾಡಿಗೆ ಹೆಚ್ಚಿನ ನೀರು ಹರಿಸುತ್ತಿರುವ ಹಿನ್ನೆಲೆಯಲ್ಲಿ ಗುರುವಾರ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ನಿರ್ಧಾರದ ವಿರುದ್ಧ ರೈತ ಸಂಘ ಪ್ರತಿಭಟನೆಗೆ ಮುಂದಾಗಿದೆ. ಕೆಆರ್‌ಎಸ್ ಮುಖ್ಯದ್ವಾರದ ಬಳಿಯೇ ಪ್ರತಿಭಟನೆ ಹಮ್ಮಿಕೊಂಡಿದ್ದು, ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಟಿಕ್‌ಟಾಕ್ ಸುಂದರಿಗೆ ಕಂಟಕವಾಯ್ತು ಮೊಬೈಲ್ ಗೀಳು – ಪ್ರೀತಿಸಿ ಮದ್ವೆಯಾಗಿದ್ದ ಮಡದಿಯನ್ನೇ ಕೊಂದ ಪತಿ
ಮಂಡ್ಯ: ಹಳೆ ಮೈಸೂರು (Old Mysuru) ಭಾಗದ ಜೀವನಾಡಿಯಾಗಿರುವ ಮಂಡ್ಯ (Mandya) ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ KRS ಜಲಾಶಯದ ನೀರಿನ ಮಟ್ಟ ಪ್ರತಿ ದಿನ ಒಂದು ಅಡಿ ಕುಸಿಯುತ್ತಿದೆ. ಇದರಿಂದ ಕೆಲವೇ ದಿನಗಳಲ್ಲಿ ಭಾರೀ ಪ್ರಮಾಣದಲ್ಲಿ ನೀರಿನ ಮಟ್ಟ ಇಳಿಕೆಯಾಗಿದೆ.
ಶುಕ್ರವಾರ 78 ಅಡಿ ಇದ್ದ ಕೆಆರ್‌ಎಸ್ ಜಲಾಶಯದ (KRS Dam) ನೀರಿನ ಮಟ್ಟ ಶನಿವಾರ 77 ಅಡಿಗೆ ಕುಸಿದಿದೆ. ದಿನೇ-ದಿನೇ ಭಾರೀ ಪ್ರಮಾಣದಲ್ಲಿ ಡ್ಯಾಂ ನೀರಿನ ಮಟ್ಟ ಕುಸಿಯುತ್ತಿದೆ. ಈ ಹಿನ್ನೆಲೆಯಲ್ಲಿ ರೈತರ (Farmers) ಬೆಳೆಗಳಿಗೆ ಬಿಟ್ಟಿದ್ದ ನೀರನ್ನ ನಿಲ್ಲಿಸಲಾಗಿದೆ. ಮುಂದೆ ಮಳೆ ಬಿದ್ದು ಡ್ಯಾಂ ಕೊಂಚ ಪ್ರಮಾಣದಲ್ಲಿ ಭರ್ತಿಯಾಗುವವರೆಗೆ ಬೆಳೆಗಳಿಗೆ ನೀರು ಬಿಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನೂ ಓದಿ: ರಾಜ್ಯ ಸರ್ಕಾರ ಎಲ್ಲಾ ಸಮಸ್ಯೆಗಳನ್ನು ಎದುರಿಸುವಷ್ಟು ಶಕ್ತವಾಗಿದೆ: ಸಿದ್ದರಾಮಯ್ಯ
ಅಲ್ಲದೇ ಜಲಾಶಯದಲ್ಲಿರುವ ನೀರು ಜುಲೈ 2ನೇ ವಾರದವರೆಗೆ ಕುಡಿಯಲು ಬಳಕೆಯಾಗುತ್ತದೆ. ಒಂದು ವೇಳೆ ಉತ್ತಮ ಮಳೆಯಾಗದಿದ್ದಲ್ಲಿ ಕಾವೇರಿ ನೀರು ಅವಲಂಬಿತ ಜನರಿಗೆ ಕುಡಿಯುವ ನೀರಿಗೂ (Drinking Water) ಸಮಸ್ಯೆ ಎದುರಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: 80 ಅಡಿಗೆ ತಲುಪಿದ ಕೆಆರ್‌ಎಸ್ ನೀರಿನ ಮಟ್ಟ – ಕುಡಿಯುವ ನೀರಿಗೆ ಶುರುವಾಗಿದೆ ಆತಂಕ
124.80 ಗರಿಷ್ಠ ಮಟ್ಟದ ಡ್ಯಾಂನಲ್ಲಿ 77.005 ಅಡಿಯಷ್ಟೇ ನೀರಿದೆ. ಕೆಆರ್‌ಎಸ್ ಡ್ಯಾಂ 49.452 ಟಿಎಂಸಿ ಗರಿಷ್ಠ ಸಾಮರ್ಥ್ಯ ಹೊಂದಿದ್ದರೂ ಈಗ ಇರೋದು 9.808 ಟಿಎಂಸಿ ನೀರು ಮಾತ್ರ. ಈ ಪೈಕಿ 2.808 ಟಿಎಂಸಿ ಮಾತ್ರ ಬಳಕೆಗೆ ಯೋಗ್ಯವಾಗಿದೆ. ಉಳಿದ 7 ಟಿಎಂಸಿ ನೀರು ಡೆಡ್ ಸ್ಟೋರೇಜ್ ಆಗಿದೆ. ಸದ್ಯ ಜಲಾಶಯಕ್ಕೆ 514 ಕ್ಯೂಸೆಕ್ ನೀರು ಒಳಹರಿವು ಇದ್ದು, 834 ಕ್ಯೂಸೆಕ್ ನೀರು ಡ್ಯಾಂನಿಂದ ಹೊರ ಹೋಗುತ್ತಿದೆ.
ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ (Cauvery Basin) ಇನ್ನೂ ಮುಂಗಾರು ಮಳೆಯ ಸೂಚನೆಯೇ ಇಲ್ಲದ ಕಾರಣ ಮಂಗಳವಾರ (ಜೂನ್ 13) ಕೆಆರ್‌ಎಸ್ ಜಲಾಶಯ (KRS Dam) ಬಳಿಯ ಕಾವೇರಿ ಮಾತೆಯ ಪ್ರತಿಮೆ ಮುಂದೆ ವರುಣನಿಗಾಗಿ ಹೋಮ ಹಾಗೂ ವಿಶೇಷ ಪೂಜೆ (Speical Pooja) ನೆರವೇರಿಸಲಾಗುತ್ತದೆ.
ಕಾವೇರಿ ಒಡಲು ಭರ್ತಿಗಾಗಿ ಕಾವೇರಿ ನೀರಾವರಿ ನಿಗಮ ವಿಶೇಷ ಪೂಜೆಯ ಮೊರೆ ಹೋಗಿದೆ. ಮಂಗಳವಾರ ಬೆಳಗ್ಗೆ ಪ್ರಸಿದ್ಧ ವೈದಿಕ ಭಾನುಪ್ರಕಾಶ್ ಶರ್ಮಾ ಅವರ ನೇತೃತ್ವದಲ್ಲಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ KRS ಜಲಾಶಯ ಭರ್ತಿಗೆ 12 ಮಂದಿ ವೈದಿಕ ತಂಡದಿಂದ ವಿಶೇಷ ಪೂಜೆ ನಡೆಯಲಿದೆ. ಇದನ್ನೂ ಓದಿ: ʼಶಕ್ತಿʼ ಯೋಜನೆ ಘೋಷಣೆಯಾದ 2ನೇ ದಿನವೇ ಮಹಿಳೆಯರ ಪರದಾಟ – ಬಸ್ ಫುಲ್ ರಶ್
ವರುಣನಿಗಾಗಿ ಹೋಮ-ಹವನ, ಗಂಗಾಪೂಜೆ ಸೇರಿದಂತೆ ಹಲವು ವಿಶೇಷ ಪೂಜಾ ಕೈಂಕರ್ಯಗಳು ನೆರವೇರಲಿವೆ. ಎರಡು ವರ್ಷಗಳ ಹಿಂದೆಯೂ ಮಳೆ ಕೈಕೊಟ್ಟಿದ್ದ ಕಾರಣ ಭಾನುಪ್ರಕಾಶ ಶರ್ಮಾ ಅವರ ನೇತೃತ್ವದಲ್ಲಿ ಅಂದು ಸಿಎಂ ಆಗಿದ್ದ ಬಸವರಾಜ ಬೊಮ್ಮಾಯಿ (Basavaraj Bommai) ಅವರು ವಿಶೇಷ ಪೂಜೆ ಸಲ್ಲಿಸಿದ್ದರು. ಆ ನಂತರ ಉತ್ತಮ ಮಳೆಯಾಗಿ ಕಾವೇರಿ ಒಡಲು ಭರ್ತಿಯಾಗಿತ್ತು. ಅಕ್ಟೋಬರ್ ನಲ್ಲಿ ಜಲಾಶಯ ಭರ್ತಿಯಾಗಿ ನವೆಂಬರ್‌ನಲ್ಲಿ ಭಾಗಿನ ಅರ್ಪಿಸಲಾಗಿತ್ತು. ಇದನ್ನೂ ಓದಿ: ʼಶಕ್ತಿʼ ಯೋಜನೆ ಉದ್ಘಾಟನೆ ಜೋಶ್‌ನಲ್ಲಿ ಸರ್ಕಾರಿ ಬಸ್ ಚಲಾಯಿಸಿ ಸ್ವಾಮೀಜಿ ಅಚಾತುರ್ಯ
ಈ ಬಾರಿ ಆರಂಭದಲ್ಲೇ ಮಳೆ ಕೈಕೊಟ್ಟಿದ್ದು, 5 ವರ್ಷದ ಬಳಿಕ ಅತಿ ಕಡಿಮೆ ನೀರಿನ ಮಟ್ಟವನ್ನು ಕೆಆರ್‌ಎಸ್ ಜಲಾಶಯ ತಲುಪಿದೆ. ಇದರಿಂದ ಬೆಂಗಳೂರು, ಮೈಸೂರು ಸೇರಿದಂತೆ ಹಲವು ನಗರಗಳಿಗೆ ಕುಡಿಯುವ ನೀರಿಗೆ ಅಭಾವ ಶುರುವಾಗುವ ಸಾಧ್ಯತೆಯಿದೆ. ಅಲ್ಲದೇ ಕಾವೇರಿ ಅಚ್ಚುಕಟ್ಟು ಪ್ರದೇಶದ ರೈತರಲ್ಲೂ ಆತಂಕ ಎದುರರಾಗಿದೆ. 124.80 ಅಡಿ ಗರಿಷ್ಠ ಮಟ್ಟದ ಕೆಆರ್‌ಎಸ್ ಜಲಾಶಯದಲ್ಲಿ ಸದ್ಯ 83 ಅಡಿ ನೀರು ಮಾತ್ರ ಸಂಗ್ರಹವಾಗಿದ್ದು, 12.152 ಟಿಎಂಸಿ ನೀರು ಮಾತ್ರ ಸಂಗ್ರಹವಾಗಿದೆ.
ಕಳೆದ ವಾರ 79 ಅಡಿಗೆ ನೀರಿನ ಮಟ್ಟ ಕುಸಿದಿತ್ತು, ಹೇಮಾವತಿ ಜಲಾಶಯದಿಂದ ನೀರು ಬಿಟ್ಟಿದ್ದ ಹಿನ್ನೆಲೆಯಲ್ಲಿ 83 ಅಡಿಗೆ ನೀರಿನ ಮಟ್ಟ ಏರಿಕೆಯಾಯಿತು. ಹೀಗಾಗಿ ಮಂಗಳವಾರ ಕಾವೇರಿ ಮಾತೆಯ ಎದುರು ವರುಣನಿಗಾಗಿ ವಿಶೇಷ ಹೋಮ ಹಾಗೂ ಪೂಜೆಯನ್ನು ನೆರವೇರಿಸಲಾಗುತ್ತದೆ.