Tag: Catwalk

  • ವೈರಲ್ ಆಯ್ತು ಹಸುವಿನ ಕ್ಯೂಟ್ ಕ್ಯಾಟ್ ವಾಕ್ ವೀಡಿಯೋ

    ವೈರಲ್ ಆಯ್ತು ಹಸುವಿನ ಕ್ಯೂಟ್ ಕ್ಯಾಟ್ ವಾಕ್ ವೀಡಿಯೋ

    ನೂರಾರು ಮಾಡೆಲ್‍ಗಳು ವೇದಿಕೆ ಮೇಲೆ ಕ್ಯಾಟ್ ವಾಕ್ ಮಾಡಿರುವುದನ್ನು ನಾವು ನೋಡಿದ್ದೇವೆ. ಆದರೆ ಹಸು ಕ್ಯಾಟ್ ವಾಕ್ ಮಾಡಿರುವುದನ್ನು ಎಲ್ಲೂ ಕೂಡ ನೋಡಿರಲು ಸಾಧ್ಯವಿಲ್ಲ. ಆದರೆ ಇತ್ತೀಚೆಗೆ ಹಸುವೊಂದು ರಸ್ತೆ ಮಧ್ಯೆ ಮಾಡೆಲ್‍ಗಳಂತೆ ಸ್ಟೈಲ್ ಆಗಿ ಕ್ಯಾಟ್‍ವಾಕ್ ಮಾಡಿದೆ. ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

    ವೀಡಿಯೋದಲ್ಲಿ ಕಂದು ಮತ್ತು ಬಿಳಿ ಮೈ ಬಣ್ಣ ಹೊಂದಿರುವ ಹಸುವೊಂದು ರಸ್ತೆ ಮಧ್ಯೆ ತಲೆ ಅಲ್ಲಡಿಸುತ್ತಾ, ಹೆಜ್ಜೆ ಮೇಲೆ ಹೆಜ್ಜೆ ಹಾಕುತ್ತಾ ಕ್ಯಾಟ್ ವಾಕ್ ಮಾಡಿದೆ. ಈ ಹಸುವಿನ ಹಿಂದೆ ಹಲವಾರು ಹಸುಗಳು ನಡೆದುಕೊಂಡು ಬರುತ್ತಿರುತ್ತದೆ. ಹಸು ಮುಂದೆ ಕ್ಯಾಟ್‍ವಾಕ್ ಮಾಡಿ ನಡೆಯುತ್ತಿದ್ದರೆ, ಉಳಿದ ಹಸುಗಳು ಹಿಂದೆ ಬರುತ್ತಿರುವುದು, ಸೆಲೆಬ್ರೆಟಿಗಳ ಹಿಂದೆ ಬಾಡಿಗಾರ್ಡ್‍ಗಳು ಬರುವಂತೆ ಕಾಣಿಸುತ್ತದೆ. ಸದ್ಯ ಈ ಅಪರೂಪದ ಹಸುವಿನ ಬೆಕ್ಕಿನ ನಡುಗೆ ವೀಡಿಯೋ ನೆಟ್ಟಿಗರ ಗಮನ ಸೆಳೆಯುತ್ತಿದೆ. ಇದನ್ನೂ ಓದಿ: ಕರುವಿನ ಮೇಲೆ ಕುಳಿತು ಕಿಕಿ ಡ್ಯಾನ್ಸ್ ಮಾಡಿದ ಹಳ್ಳಿ ಪೋರರು!

    ಈವರೆಗೂ ನಾಯಿ, ಬೆಕ್ಕು, ಪುಟ್ಟ ಆನೆಮರಿ ಹೀಗೆ ಹಲವು ಮುದ್ದಾದ ಪ್ರಾಣಿಗಳ ವೀಡಿಯೋ ನೋಡಿ ತಮ್ಮ ಒತ್ತಡವನ್ನು ಜನ ಕಡಿಮೆ ಮಾಡಿಕೊಳ್ಳುತ್ತಿದ್ದರು. ಆದರೆ ಹಸುವಿನ ಕ್ಯಾಟ್ ವಾಕ್ ವೀಡಿಯೋ ನೋಡಿ ಎಲ್ಲರ ಮುಖದಲ್ಲಿಯೂ ನಗು ಬೀರಿದೆ ಹಾಗೂ ಎಲ್ಲರ ಮನ ಗೆಲ್ಲುತ್ತಿದೆ. ಇದನ್ನೂ ಓದಿ: ಮನೆಯೊಡತಿ ಜೊತೆ ಜೋಶ್‍ನಲ್ಲಿ ಕುಣಿದ ಎಮ್ಮೆಯ ವೀಡಿಯೋ ವೈರಲ್

  • ಬ್ಯೂಟಿಸ್ ಜೊತೆ ಡಾಗಿಸ್ ಕ್ಯೂಟ್ ಕ್ಯಾಟ್ ವಾಕ್

    ಬ್ಯೂಟಿಸ್ ಜೊತೆ ಡಾಗಿಸ್ ಕ್ಯೂಟ್ ಕ್ಯಾಟ್ ವಾಕ್

    ಬೆಂಗಳೂರು: ಬೆಂಗಳೂರಿನ ಜನಕ್ಕೆ ಡಾಗ್ಸ್ ಅಂದ್ರೇ ಪಂಚಪ್ರಾಣ. ತಮ್ಮ ಸಾಕು ನಾಯಿಗಳನ್ನು ಮಕ್ಕಳಂತೆಯೇ ಸಾಕುತ್ತಾರೆ. ಪೆಟ್ಸ್ ಪ್ರಿಯರಿಗಾಗಿಯೇ ಫ್ಯಾಷನ್ ಶೋವೊಂದನ್ನ ಆಯೋಜಿಸಲಾಗಿತ್ತು.

    ನಗರದ ಶ್ವಾನಗಳಿಗಾಗಿ ಕಬ್ಬನ್ ಪಾರ್ಕ್‍ನಲ್ಲಿ ಸಂತ ಬೌ ವಾವ್ ಅನ್ನೋ ವಿಶೇಷ ಫ್ಯಾಷನ್ ಶೋ ಆಯೋಜಿಸಲಾಗಿತ್ತು. ದಿ ಸಿಜೆ ಮೆಮೋರಿಯಲ್ ಟ್ರಸ್ಟ್, ಹಿಮಾಲಯ, ಫ್ಯಾಷನ್ ಗುರು ಪ್ರಸಾದ್ ಬಿದ್ದಪ್ಪ ಮತ್ತು ಟೀಂ ಸಹಭಾಗಿತ್ವದಲ್ಲಿ ಡಿಫೆರೆಂಟ್ ಆಗಿ ಕ್ರಿಸ್ಮಸ್ ಆಚರಿಸಲಾಯಿತು.

    ಇಲ್ಲಿ ಮಾಡೆಲ್‍ಗಳಿಗೆ ಸೆಡ್ಡು ಹೊಡೆಯುವ ರೀತಿಯ ಡಾಗ್‍ಗಳು ರೆಡಿಯಾಗಿದ್ದವು. ಜೊತೆಗೆ ತಾವು ಯಾರಿಗೂ ಕಮ್ಮಿ ಇಲ್ಲ ಎಂಬಂತೆ ಗತ್ತು-ಗಮ್ಮತ್ತಿನಲ್ಲಿದ್ದವು. ವಿಶೇಷವೆಂದರೆ ಸೂಪರ್ ಮಾಡೆಲ್ ಗಳು ಶ್ವಾನಗಳ ಜೊತೆ ರ‍್ಯಾಂಪ್‌ ವಾಕ್ ಮಾಡಿ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರಗು ನೀಡಿದರು.

  • ರ‍್ಯಾಂಪ್‌  ಮೇಲೆ ಮಾಡೆಲ್ ಜೊತೆ ‘ಕ್ಯಾಟ್’ವಾಕ್ ಮಾಡಿ ಮೂತ್ರವಿಸರ್ಜನೆ – ವಿಡಿಯೋ

    ರ‍್ಯಾಂಪ್‌  ಮೇಲೆ ಮಾಡೆಲ್ ಜೊತೆ ‘ಕ್ಯಾಟ್’ವಾಕ್ ಮಾಡಿ ಮೂತ್ರವಿಸರ್ಜನೆ – ವಿಡಿಯೋ

    ರಾಬಟ್: ಮೊರಕ್ಕೋದಲ್ಲಿ ನಡೆದ ಫ್ಯಾಷನ್ ಶೋ ಒಂದರಲ್ಲಿ ಬೆಕ್ಕೊಂದು ವಾಕ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗಿದೆ.

    ಮರಾಕೇಶ್‍ನಲ್ಲಿ ನಡೆದ ಕ್ರಿಶ್ಚಿಯನ್ ಡಿಯರ್ ಫ್ಯಾಷನ್ ಶೋ ನಡೆಯುವ ವೇಳೆ ಅಲ್ಲಿ ಬೆಕ್ಕೊಂದು ಮಾಡೆಲ್‍ಗಳ ಕ್ಯಾಟ್ ವಾಕ್ ವಿರುದ್ಧವಾಗಿ ನಡೆದುಕೊಂಡು ಹೋಗಿರುವುದು ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದೆ.

    ಶೋಗೆ ಬಂದಿದ್ದ ಪ್ರೇಕ್ಷಕರ ಜೋರಾಗಿ ಕಿರುಚುವ ಶಬ್ದದ ನಡುವೆಯು ಸ್ಥಳಕ್ಕೆ ಎಂಟ್ರಿ ಕೊಟ್ಟಿದೆ. ನಡೆದುಕೊಂಡು ಮುಂದೆ ಪ್ರೇಕ್ಷಕರ ಗುಂಪಿನೊಳಗೆ ಹೋಗಿ ಮೂತ್ರವಿಸರ್ಜನೆ ಮಾಡಿ ಅಲ್ಲಿಂದ ಜನರೊಳಗೆ ಕಣ್ಮರೆಯಾಗಿದೆ.

    ಫ್ಯಾಷನ್ ಶೋಗಳಲ್ಲಿ ಪ್ರಾಣಿಗಳು ಕಾಣಿಸಿಕೊಂಡಿರುವುದು ಇದೇ ಮೊದಲೆನಲ್ಲ. ಜನವರಿ ತಿಂಗಳಲ್ಲಿ ನಡೆದ ಫ್ಯಾಷನ್ ಶೋ ಒಂದರಲ್ಲಿ ಬಾಲಿವುಡ್ ನಟ ಸಿದ್ಧರ್ಥ್ ಮೊಲ್ಹೋತ್ರಾ ಪಾಲ್ಗೊಂಡಿದ್ದ ಫ್ಯಾಶನ್ ಶೋದಲ್ಲಿ ನಾಯಿಯೊಂದು ಭಾಗವಹಿಸಿತ್ತು.

  • ಕ್ಯಾಟ್‍ವಾಕ್ ಮಾಡುತ್ತಾ ವೇದಿಕೆಯಲ್ಲೇ ಪ್ರಾಣಬಿಟ್ಟ ಮಾಡೆಲ್!

    ಕ್ಯಾಟ್‍ವಾಕ್ ಮಾಡುತ್ತಾ ವೇದಿಕೆಯಲ್ಲೇ ಪ್ರಾಣಬಿಟ್ಟ ಮಾಡೆಲ್!

    ಬ್ರೆಜಿಲ್: ಕ್ಯಾಟ್‍ವಾಕ್ ಮಾಡುತ್ತಾ ರ‌್ಯಾಂಪ್‌ ಚಾಕ್ ವೇದಿಕೆ ಮೇಲೆಯೇ ಕುಸಿದು ಬಿದ್ದು ಮಾಡೆಲ್ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಸೌಪೌಲೊ ಫ್ಯಾಷನ್ ವಿಕ್‍ನಲ್ಲಿ ನಡೆದಿದೆ.

    ಮಾಡೆಲ್ ಟೇಲ್ಸ್ ಸೋರ್ಸ್, ಫ್ಯಾಷನ್ ವಿಕ್ ಅಂತಿಮ ದಿನದಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ವೇದಿಕೆ ಮೇಲೆ ಕ್ಯಾಟ್‍ವಾಕ್ ಮಾಡುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಕುಸಿದು ಬಿದ್ದರು. ಕೂಡಲೇ ಸ್ಥಳದಲ್ಲಿದ್ದ ಕಾರ್ಯಕ್ರಮದ ಆಯೋಜಕರು ಟೇಲ್ಸ್ ಅವರಿಗೆ ಸ್ಥಳದಲ್ಲೇ ಪ್ರಾಥಮಿಕ ಚಿಕಿತ್ಸೆ ನೀಡಿ ಆಸ್ಪತ್ರೆ ಸಾಗಿಸುವ ಪ್ರಯತ್ನ ನಡೆಸಿದರು. ಆದರೆ ಆಸ್ಪತ್ರೆಗೆ ತಲುಪುವ ವೇಳೆಗೆ ಟೇಲ್ಸ್ ಕೊನೆಯುಸಿರೆಳೆದಿದ್ದರು.

    26 ವರ್ಷದ ಟೇಲ್ಸ್ ವೇದಿಕೆ ಮೇಲೆಯೇ ಸಾವನ್ನಪ್ಪಿದ್ದು ತಮಗೆ ಶಾಕ್ ಆಗಿದೆ ಎಂದು ಕಾರ್ಯಕ್ರಮದ ಆಯೋಜಕರು ಪ್ರತಿಕ್ರಿಯೆ ನೀಡಿದ್ದು, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.

  • ಮಗುವಿಗೆ ಸ್ತನಪಾನ ಮಾಡಿಸುತ್ತಲೇ ರ‍್ಯಾಂಪ್ ಮೇಲೆ ರೂಪದರ್ಶಿ ಕ್ಯಾಟ್‍ವಾಕ್: ವಿಡಿಯೋ ನೋಡಿ

    ಮಗುವಿಗೆ ಸ್ತನಪಾನ ಮಾಡಿಸುತ್ತಲೇ ರ‍್ಯಾಂಪ್ ಮೇಲೆ ರೂಪದರ್ಶಿ ಕ್ಯಾಟ್‍ವಾಕ್: ವಿಡಿಯೋ ನೋಡಿ

    ವಾಷಿಂಗ್ಟನ್: ಅಮೆರಿಕಾದ ರೂಪದರ್ಶಿಯೊಬ್ಬರು ಮಗುವಿಗೆ ಸ್ತನಪಾನ ಮಾಡಿಸುತ್ತ, ರ‍್ಯಾಂಪ್ ಮೇಲೆ ಕ್ಯಾಟ್‍ವಾಕ್ ಮಾಡುವ ಮೂಲಕ ಭಾರೀ ಚರ್ಚೆಗೆ ಕಾರಣವಾಗಿದ್ದಾರೆ.

    ಮಾರಾ ಮಾರ್ಟಿನ್ ಕ್ಯಾಟ್‍ವಾಕ್ ಮಾಡುತ್ತಲೇ ತನ್ನ ಮಗಳಿಗೆ ಸ್ತನಪಾನ ಮಾಡಿಸಿದ ಸ್ವಿಮ್ ಸೂಟ್ ಮಾಡೆಲ್. ಇತ್ತೀಚೆಗೆ ಮಿಯಾಮಿ ಸ್ವಿಮ್ ವೀಕ್ ರ‍್ಯಾಂಪ್ ವಾಕ್ ಕಾರ್ಯಕ್ರಮದಲ್ಲಿ ಮಾರಾ ಮಾರ್ಟಿನ್ ತನ್ನ ಐದು ತಿಂಗಳ ಮಗಳಿಗೆ ಸ್ತನಪಾನ ಮಾಡುತ್ತಲೇ ಹೆಜ್ಜೆ ಹಾಕಿ ಭಾರೀ ಸದ್ದು ಮಾಡಿದ್ದರು.

    ಮಾರಾ ಮಾರ್ಟಿನ್ ಮಗುವಿಗೆ ಸ್ತನಪಾನ ಮಾಡಿಸುತ್ತ ಹೆಜ್ಜೆ ಹಾಕುವಾಗ, ಅಲ್ಲಿನ ಶಬ್ಧದಿಂದ ಮಗಳು ಗಾಬರಿಯಾಗದಿರಲಿ ಅಂತಾ ಮಗುವಿನ ಕಿವಿಗೆ ಹೆಡ್‍ಫೋನ್ ಹಾಕಿದ್ದರು. ಮಾರಾ ಮಾರ್ಟಿನ್ ಪುಳಕ ನೀಡುವ ಕ್ಯಾಟ್‍ವಾಕ್ ಹಾಗೂ ಆಕೆ ಮಗುವಿಗೆ ಸ್ತನಪಾನ ಮಾಡಿಸುತ್ತಲೇ ಧೈರ್ಯದಿಂದ ರ್ಯಾಂಪ್‍ವಾಕ್ ಮಾಡಿದ್ದನ್ನು ಕಂಡು ಪ್ರೇಕ್ಷಕರು ಬೆರಗಾಗಿದ್ದರು.

    ನಾನು ನಿತ್ಯವೂ ಹೀಗೆ ನನ್ನ ಮಗುವಿಗೆ ನಡೆದಾಡುತ್ತಲೇ ಸ್ತನಪಾನ ಮಾಡಿಸುತ್ತೇನೆ. ಮಹಿಳೆ ಹೀಗೂ ಮಾಡುತ್ತ ಮಗುವಿಗೆ ಸ್ತನಪಾನ ಮಾಡಿಸಬಹುದು ಎನ್ನುವುದನ್ನು ಮಹಿಳೆಯರಿಗೆ ಹೇಳಿಕೊಡಲು ಹೀಗೆ ಮಾಡಿದ್ದಾಗಿ ಮಾರಾ ಹೇಳಿಕೊಂಡಿದ್ದಾರೆ.

    ರ‍್ಯಾಂಪ್ ವಾಕ್ ಕಾರ್ಯಕ್ರಮದಲ್ಲಿ ಇನ್ನೇನು ಹೆಜ್ಜೆ ಹಾಕಬೇಕು ಎನ್ನುವಷ್ಟರಲ್ಲಿ ಮಗಳು ಹಸಿವಿನಿಂದ ಅಳಲಾರಂಭಿಸಿದಳು. ಆಗ ಅಲ್ಲಿದ್ದವರು ಮಗುವಿನೊಂದಿಗೆ ಕ್ಯಾಟ್‍ವಾಕ್ ಮಾಡಲು ಸಲಹೆ ನೀಡಿದ್ದರು ಎಂದು ಮಾರಾ ಹೇಳುವ ಮೂಲಕ ನಿಜವಾದ ಕಾರಣವನ್ನು ತೆರೆದಿಟ್ಟಿದ್ದಾರೆ.

    ಮಗುವಿಗೆ ಹಾಲುಣಿಸುತ್ತಾ ಕ್ಯಾಟ್‍ವಾಕ್ ಮಾಡಲು ಅವಕಾಶ ನೀಡಿದ ನಿಮಗೆ ಧನ್ಯವಾದಗಳು, ನಿಮ್ಮಂಥವರಿಂದಾಗಿ ನನ್ನ ಮಗಳು ಒಂದು ಉತ್ತಮ ಪ್ರಪಂಚದಲ್ಲಿ ಬೆಳೆಯುತ್ತಾಳೆ ಎಂದು ಮಾರಾ ಮಾರ್ಟಿನ್ ಸಾಮಾಜಿಕ ತಾಣದಲ್ಲಿ ಕಾರ್ಯಕ್ರಮ ಆಯೋಜಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

    https://www.instagram.com/p/BlVtY2Xhyj3/?utm_source=ig_embed