Tag: Cattle Theft

  • ಗೋ ಕಳ್ಳತನದಲ್ಲಿ ಬಂಧಿತನಾದವನಿಗೆ ಕಸ್ಟಡಿಯಲ್ಲಿ ಕರೆಂಟ್ ಶಾಕ್, ಚಿತ್ರಹಿಂಸೆ – ಐವರು ಪೊಲೀಸರ ಅಮಾನತು

    ಗೋ ಕಳ್ಳತನದಲ್ಲಿ ಬಂಧಿತನಾದವನಿಗೆ ಕಸ್ಟಡಿಯಲ್ಲಿ ಕರೆಂಟ್ ಶಾಕ್, ಚಿತ್ರಹಿಂಸೆ – ಐವರು ಪೊಲೀಸರ ಅಮಾನತು

    ಲಕ್ನೋ: ಗೋ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿದ್ದ ವ್ಯಕ್ತಿಯೊಬ್ಬನಿಗೆ ಪೊಲೀಸರು ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ ಠಾಣಾ ಉಸ್ತುವಾರಿ ಸೇರಿದಂತೆ ಏಳು ಮಂದಿ ಪೊಲೀಸರ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    20 ವರ್ಷದ ರೆಹಾನ್ ದಿನಗೂಲಿ ಕೆಲಸಗಾರನಾಗಿದ್ದು, ಮೇ 2 ರಂದು ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದಾಗ ಪೊಲೀಸರು ಆತನನ್ನು ಪೊಲೀಸ್ ಠಾಣೆಗೆ ಕರೆದೊಯ್ದು ಬಂಧಿಸಿದ್ದಾರೆ. ಜಾನುವಾರು ಕಳ್ಳಸಾಗಣೆದಾರರ ಗುಂಪಿಗೆ ನೆರವು ನೀಡುತ್ತಿದ್ದ ಎಂದು ಪೊಲೀಸರು ಆರೋಪಿಸಿದ್ದಾರೆ. ನಂತರ ಆತನ ಮೇಲೆ ಲಾಠಿಯಿಂದ ಹಲ್ಲೆ ನಡೆಸಲಾಗಿದ್ದು, ವಿದ್ಯುತ್ ಶಾಕ್ ನೀಡಿದ್ದಾರೆ. ಆತನ ಖಾಸಗಿ ಭಾಗಗಳಿಗೆ ಗಾಯಗಳಾಗಿವೆ. ಆತನನ್ನು ಕಸ್ಟಡಿಯಲ್ಲಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಇದೀಗ ತೀವ್ರವಾಗಿ ಗಾಯಗೊಂಡಿರುವ ರೆಹಾನ್‍ಗೆ ನಡೆಯಲು ಮತ್ತು ಮಾತನಾಡುವುದಕ್ಕೂ ಸಾಧ್ಯವಾಗುತ್ತಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.  ದನ್ನೂ ಓದಿ: ಚರ್ಚ್‍ನಲ್ಲಿ ಹತ್ಯಾಕಾಂಡ – 50 ಮಂದಿಯನ್ನು ಗುಂಡಿಟ್ಟು ಕೊಂದ

    ನಂತರ ಆತನನ್ನು ಬಿಡುಗಡೆಗೊಳಿಸಬೇಕಾದರೆ 5 ಸಾವಿರ ಲಂಚ ನೀಡುವಂತೆ ಪೊಲೀಸರು ಬೇಡಿಕೆ ಇಟ್ಟಿದ್ದರು. ಕೊನೆಗೆ 5,000 ರೂ. ದಂಡ ನೀಡಿದ ಬಳಿಕ ಪೊಲೀಸರು ಆತನನ್ನು ಬಿಡುಗಡೆ ಮಾಡಿದ್ದಾರೆ. ಆದರೆ ಆತನ ಚಿಕಿತ್ಸೆಗಾಗಿ ಪೊಲೀಸರು 100 ರೂ. ನೀಡಿದ್ದಾರೆ ಎಂದು ಕಿಡಿಕಾರಿದ್ದಾರೆ.

    ಇದೀಗ ಏಳು ಮಂದಿ ಪೊಲೀಸರ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದ್ದು, ಅವರಲ್ಲಿ ಐವರನ್ನು ಅಮಾನತುಗೊಳಿಸಲಾಗಿದೆ. ಘಟನೆ ಸಂಬಂಧ ತನಿಖೆ ನಡೆಸಲಾಗುತ್ತಿದ್ದು, ತೀವ್ರ ಗಾಯ ಮಾಡಿರುವುದು ಮತ್ತು ಅಪರಾಧ ಬೆದರಿಕೆ ಹಾಗೂ ಇತರೆ ಪ್ರಕರಣಗಳನ್ನು ದಾಖಲು ಮಾಡಲಾಗಿದೆ ಎಂದು ನಗರ ಪೊಲೀಸ್ ಹಿರಿಯ ಅಧಿಕಾರಿ ಪ್ರವೀಣ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ. ಇದನ್ನೂ ಓದಿ:  ಬೆಂಗಳೂರಿನಲ್ಲಿ 16 ದಿನಗಳ ಬಳಿಕ ಕೊರೊನಾಗೆ ಮಹಿಳೆ ಬಲಿ

  • ಜಾನುವಾರು ಕಳ್ಳರೆಂದು ಶಂಕಿಸಿ ಮೂವರನ್ನು ಹೊಡೆದು ಕೊಂದ ಗ್ರಾಮಸ್ಥರು

    ಜಾನುವಾರು ಕಳ್ಳರೆಂದು ಶಂಕಿಸಿ ಮೂವರನ್ನು ಹೊಡೆದು ಕೊಂದ ಗ್ರಾಮಸ್ಥರು

    ಪಾಟ್ನಾ: ಜಾನುವಾರ ಕಳ್ಳರೆಂದು ಅನುಮಾನ ವ್ಯಕ್ತಪಡಿಸಿ ಗ್ರಾಮಸ್ಥರು ಮೂವರನ್ನು ಹೊಡೆದು ಕೊಲೆ ಮಾಡಿದ ಅಮಾನವೀಯ ಘಟನೆ ಬಿಹಾರದಲ್ಲಿ ನಡೆದಿದೆ.

    ಪಾಟ್ನಾದ ಚಪ್ರಾ ಜಿಲ್ಲೆಯ ಬನಿಯಾಪುರಕ್ಕೆ ಮೂವರು ಪಿಕ್ ಅಪ್ ಟ್ರಕ್‍ನಲ್ಲಿ ಇಂದು ಮುಂಜಾನೆ 4.30 ಗಂಟೆಗೆ ಬಂದಿದ್ದರು. ಆದರೆ ಅವರನ್ನು ಕಳ್ಳರೆಂದು ತಿಳಿದ ಗ್ರಾಮಸ್ಥರು ದೊಣ್ಣೆ ಹಾಗೂ ಕೋಲುಗಳಿಂದ ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಓರ್ವ ಸ್ಥಳದಲ್ಲಿಯೇ ಮೃತಪಟ್ಟರೆ, ಉಳಿದ ಇಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

    ಮೃತ ಮೂವರು ಜಾನುವಾರು ಕಳ್ಳತನಕ್ಕೆ ಬಂದಿರಲಿಲ್ಲ. ಅವರು ಜಾನುವಾರು ಖರೀದಿಗೆ ಬಂದಿದ್ದರು ಎಂದು ಮೂಲಗಳಿಂದ ತಿಳಿದು ಬಂದಿದೆ. ಆದರೆ ಒಂದು ವಾರದ ಹಿಂದೆ ಗ್ರಾಮದಲ್ಲಿ ಕಳ್ಳರು ಜಾನುವಾರು ಕಳ್ಳತ ಮಾಡಿದ್ದರು. ಈ ಹಿನ್ನೆಲೆ ಪಿಕ್ ಅಪ್ ಟ್ರಕ್‍ನಲ್ಲಿ ಬಂದಿದ್ದರುವವರು ಕಳ್ಳರೆಂದು ಶಂಕೆ ವ್ಯಕ್ತಪಡಿಸಿ ಮನಬಂದಂತೆ ಥಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮೃತ ಆಕ್ರಂದನ ಮುಗಿಲು ಮುಟ್ಟಿದ್ದು ನ್ಯಾಯ ಕೊಡಿಸುವಂತೆ ಪೊಲೀಸರ ಕಾಲಿಗೆ ಬಿದ್ದು ಬೇಡಿಕೊಳ್ಳುತ್ತಿರುವ ಫೋಟೋ, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಮೃತರ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

    ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಹಲ್ಲೆ ಮಾಡಿದ್ದ ಪ್ರಮುಖರನ್ನು ಬಂಧಿಸಿದ್ದಾರೆ. ಪ್ರಕರಣದ ಕುರಿತು ವಿಚಾರಣೆ ನಡೆಸುತ್ತಿದ್ದಾರೆ. ಘಟನೆಯ ಕುರಿತು ವ್ಯಾಪಕ ಟೀಕೆ ವ್ಯಕ್ತವಾಗಿದೆ.

    ತ್ರಿಪುರದ ಧಲೈ ಜಿಲ್ಲೆಯಲ್ಲಿ ಜುಲೈ 2ರಂದು ಇಂತಹದ್ದೇ ಘಟನೆ ನಡೆದಿತ್ತು. ಈ ವೇಳೆ ಬುದ್ಧಿ ಕುಮಾರ್ (36) ಎಂಬವರನ್ನು ಜಾನುವಾರ ಕಳ್ಳನೆಂದು ತಿಳಿದು ಗ್ರಾಮಸ್ಥರು ಹೊಡೆದು ಕೊಲೆ ಮಾಡಿದ್ದರು.

  • ಹಸು ಕಳ್ಳತನದ ಶಂಕೆ – ವ್ಯಕ್ತಿಯನ್ನ ಥಳಿಸಿ ಕೊಂದೇ ಬಿಟ್ರು

    ಹಸು ಕಳ್ಳತನದ ಶಂಕೆ – ವ್ಯಕ್ತಿಯನ್ನ ಥಳಿಸಿ ಕೊಂದೇ ಬಿಟ್ರು

    ಪಾಟ್ನಾ: ಹಸು ಕಳ್ಳತನದ ಶಂಕೆ ವ್ಯಕ್ತವಾಗಿದ್ದರಿಂದ ವ್ಯಕ್ತಿಯೊಬ್ಬನನ್ನು ಹಿಗ್ಗಾಮುಗ್ಗಾ ಥಳಿಸಿ ಕೊಲೆಗೈದ ಅಮಾನವೀಯ ಘಟನೆ ಬಿಹಾರದ ಅರಾರಿಯಾ ಜಿಲ್ಲೆಯಲ್ಲಿ ನಡೆದಿದೆ.

    ಮಹೇಶ್ ಯಾದವ್ (44) ಕೊಲೆಯಾದ ವ್ಯಕ್ತಿ. ಅರಾರಿಯಾ ಜಿಲ್ಲೆಯ ಹರಿಪುರ್ ಗ್ರಾಮದಲ್ಲಿ ಗುರುವಾರ ಘಟನೆ ನಡೆದಿದೆ.

    ಮಹೇಶ್ ಯಾದವ್ ಸೇರಿದಂತೆ ಮೂವರು ಹಸುಗಳನ್ನು ಕಳವು ಮಾಡಲು ಹರಿಪುರ್ ಗ್ರಾಮಕ್ಕೆ ಹೋಗಿದ್ದರು. ಈ ವೇಳೆ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದಾರೆ. ಮಹೇಶ್ ಹಿಡಿದ ಜನರು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಪರಿಣಾಮ ಆತ ಮೃತಪಟ್ಟಿದ್ದಾನೆ ಎಂದು ರಾಬರ್ಟ್ ಗಂಜ್ ಪೊಲೀಸರು ತಿಳಿಸಿದ್ದಾರೆ.

    ಕೊಲೆಯಾದ ಮಹೇಶ್ ಈ ಹಿಂದೆ ಹಸು ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ. ಮಹೇಶ್ ಕೊಲೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ರಾಬರ್ಟ್ ಗಂಜ್ ಪೊಲೀಸರು, ತನಿಖೆ ಆರಂಭಿಸಿದ್ದಾರೆ.