Tag: Catholic

  • ಮತಾಂತರ ನಿಷೇಧ ಕಾಯ್ದೆ ಜಾರಿಗೆ ಕ್ರೈಸ್ತ ಪಾದ್ರಿಗಳ ವಿರೋಧ

    ಮತಾಂತರ ನಿಷೇಧ ಕಾಯ್ದೆ ಜಾರಿಗೆ ಕ್ರೈಸ್ತ ಪಾದ್ರಿಗಳ ವಿರೋಧ

    ತುಮಕೂರು: ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಲು ಸರ್ಕಾರ ಮುಂದಾಗಿರುವುದಕ್ಕೆ ಕ್ರೈಸ್ತ ಸಮುದಾಯದ ಮುಖಂಡರು, ಕ್ರೈಸ್ತ ದೇವಾಲಯಗಳ ಪಾದ್ರಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.

    ಸಿಎಸ್‍ಐವಿಸಿ ಪ್ರಾರ್ಥನಾಲಯದಲ್ಲಿ ಸಂಜೆ ನಡೆದ ಕ್ರೈಸ್ತ ದೇವಾಲಯಗಳ ಎಲ್ಲ ಪಾದ್ರಿಗಳು ಹಾಗೂ ಕ್ರೈಸ್ತ ಮುಖಂಡರ ಸಭೆಯಲ್ಲಿ ಈ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಯಿತು. ಸಿಎಸ್‍ಐ, ರೋಮನ್ ಕ್ಯಾಥೋಲಿಕ್, ಸ್ವತಂತ್ರ ಸಭೆಗಳ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.

    ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತಂದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವ್ಯಕ್ತಿಯ ಹಕ್ಕುಗಳು ಹಾಗೂ ವಾಕ್ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಲಿದೆ. ತಮಗೆ ಬೇಕಾದ ಧರ್ಮವನ್ನು ಸ್ವೀಕರಿಸಲು ಸಂವಿಧಾನದಲ್ಲೇ ಬಿ.ಆರ್.ಅಂಬೇಡ್ಕರ್ ಅವಕಾಶ ಮಾಡಿಕೊಟ್ಟಿದ್ದಾರೆ. ಈಗ ಸಂವಿಧಾನಕ್ಕೆ ವಿರುದ್ಧವಾಗಿ ಕಾನೂನು ರೂಪಿಸಲು ಸರ್ಕಾರ ಮುಂದಾಗಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಕಾನೂನಾತ್ಮಕವಾಗಿ ಹೋರಾಟ ಮಾಡಲು ಸಭೆಯಲ್ಲಿ ನಿರ್ಧರಿಸಲಾಯಿತು. ಇದನ್ನೂ ಓದಿ: ಉದ್ಯಮಿಗೆ ಹಣಕ್ಕೆ ಜೈಲಿನಿಂದಲೇ ಬೇಡಿಕೆಯಿಟ್ಟ ಕೈದಿ

    ಮತಾಂತರ ನಿಷೇಧ ಕಾಯ್ದೆ ಜಾರಿ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ವ್ಯಕ್ತಿಯ ಸ್ವಾತಂತ್ರ್ಯವನ್ನು ಕಿತ್ತುಕೊಂಡಂತಾಗುತ್ತದೆ. ಇಂತಹ ಪ್ರಯತ್ನಕ್ಕೆ ಸರ್ಕಾರ ಮುಂದಾಗಬಾರದು. ವ್ಯಕ್ತಿಯ ಹಕ್ಕು ರಕ್ಷಿಸಬೇಕು ಎಂದು ಒತ್ತಾಯಿಸಿದರು.

    ಇತ್ತೀಚಿನ ದಿನಗಳಲ್ಲಿ ಕ್ರೈಸ್ತರ ಮೇಲೆ ದೌರ್ಜನ್ಯ, ಹಲ್ಲೆ, ದಬ್ಬಾಳಿಕೆಗಳು ಹೆಚ್ಚಾಗಿವೆ. ಈ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು. ನಮ್ಮ ಸಮಸ್ಯೆಗಳನ್ನು ಸರ್ಕಾರದ ಮುಂದೆ ಮಂಡಿಸಿ ನೆರವು ಪಡೆಯುವುದು. ಜತೆಗೆ ಕಾನೂನು ಮೂಲಕ ಹೋರಾಟ ನಡೆಸುವುದು. ದೌರ್ಜನ್ಯ ಖಂಡಿಸಿ ಇತರೆಡೆಗಳಲ್ಲಿ ರ‍್ಯಾಲಿ ನಡೆಸಲಾಗಿದೆ. ಅದೇ ರೀತಿಯಲ್ಲಿ ಜಿಲ್ಲೆಯಲ್ಲೂ ಹೋರಾಟ ರೂಪಿಸಿ, ಸಮಾವೇಶ ಸಂಘಟಿಸುವುದು, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲು ಒಮ್ಮತಕ್ಕೆ ಬರಲಾಯಿತು.

    ‘ಸಮುದಾಯದ ಎಲ್ಲ ಪಂಗಡಗಳ ಮುಖಂಡರು ಒಟ್ಟಾಗಿ ಸಭೆ ನಡೆಸಿದ್ದೇವೆ. ಈಗ ಪೂರ್ವಭಾವಿ ಸಭೆಮಾಡಿ ಚರ್ಚಿಸಿದ್ದೇವೆ. ಮುಂದೆ ಹೋರಾಟ ರೂಪಿಸಲಾಗುವುದು. ಸಮುದಾಯದ ಎಲ್ಲ ಪಂಗಡಗಳು ಒಟ್ಟಾಗಿ ಹೋರಾಟ ನಡೆಸುತ್ತೇವೆ’ ಎಂದು ಸಭೆ ಅಧ್ಯಕ್ಷತೆ ವಹಿಸಿದ್ದ ಸಿಎಸ್‍ಐ ತುಮಕೂರು ಕ್ಷೇತ್ರಾಧ್ಯಕ್ಷ ಮನೋಜ್ ಕುಮಾರ್ ತಿಳಿಸಿದರು. ಇದನ್ನೂ ಓದಿ: ಪಬ್ಲಿಕ್ ಹೀರೋ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಅನಕ್ಷರಸ್ಥ ಪುರಾಣ ಕವಿ ರಾಮಣ್ಣ ಇನ್ನಿಲ್ಲ

    ಲೂರ್ದ್ ಮಾತೆ ಕ್ಯಾಥೋಲಿಕ್ ದೇವಾಲಯದ ಫಾದರ್ ಜೇಮ್ಸ್ ಪ್ರಭು, ಯುಸಿಡಬ್ಲ್ಯೂಎ ಅಧ್ಯಕ್ಷ ಜಾಯ್ ಕುಟ್ಟಿ, ಪ್ರಧಾನಮಂತ್ರಿಗಳ 15 ಅಂಶಗಳ ವಿಷನ್ ಕಾರ್ಯಕ್ರಮದ ಸ್ಥಾಯಿ ಸಮಿತಿ ಸದಸ್ಯ ಜೆಫಿನ್ ಜಾಯ್ ಭಾಗವಹಿಸಿದ್ದರು.

  • ದೇವಾಲಯಗಳ ನಗರಿಯಲ್ಲಿ ಮಾತೆ ಮೇರಿಯ ಜನ್ಮದಿನ ಸಂಭ್ರಮ

    ದೇವಾಲಯಗಳ ನಗರಿಯಲ್ಲಿ ಮಾತೆ ಮೇರಿಯ ಜನ್ಮದಿನ ಸಂಭ್ರಮ

    ಉಡುಪಿ: ದೇವಾಲಯಗಳ ನಗರಿ ಉಡುಪಿಯಲ್ಲಿ ಇಂದು ಮಾತೆ ಮೇರಿಯಮ್ಮನ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಲಾಯಿತು.

    ಏಸುಕ್ರಿಸ್ತನ ತಾಯಿ ಮೇರಿಯನ್ನು ತೊಟ್ಟಿಲಿನಲ್ಲಿ ತೂಗಿ, ಬಣ್ಣ ಬಣ್ಣದ ಹೂವು ಎಸೆದು ಭೂಮಿಗೆ ಸ್ವಾಗತಿಸಲಾಯಿತು. ಮಾತೆ ಮೇರಿಯ ಜನ್ಮದಿನದ ಶುಭದಿನವನ್ನು ಕರಾವಳಿಯಲ್ಲಿ ತೆನೆ ಹಬ್ಬ ಅಂತಾನೂ ಕರೆಯುತ್ತಾರೆ.

    ಉಡುಪಿಯ ಮದರ್ ಆಫ್ ಸಾರೋಸ್ ಚರ್ಚ್‍ನಲ್ಲಿ ಅದ್ಧೂರಿಯಾಗಿ ಮೋತಿ ಫೆಸ್ಟ್ ನಡೆಯಿತು. ಉಡುಪಿ ಧರ್ಮಗುರುಗಳು ಮಾತೆ ಮೇರಿಯನ್ನು ತೊಟ್ಟಿಲಿನಲ್ಲಿ ಹೊತ್ತು ತರುವ ಮೆರವಣಿಗೆಯ ನೇತೃತ್ವವನ್ನ ವಹಿಸಿದ್ದರು. ಶಿಸ್ತುಬದ್ಧ ವಾದ್ಯಗೋಷ್ಠಿಯ ಹಿನ್ನೆಲೆಯಲ್ಲಿ ಪೂಜಾವಿಧಿ ನಡೆಯಿತು.

    ಚರ್ಚ್‍ಗೆ ಬರುವ ಭಕ್ತರು ಮನೆಯಲ್ಲೇ ಬೆಳೆದ ಹೂವನ್ನು ತರುತ್ತಾರೆ. ಪೂಜಾವಿಧಿ ಸಂದರ್ಭ ಭಕ್ತರು ಮಾತೆ ಮೇರಿಯನ್ನು ಮಲಗಿಸಿದ ತೊಟ್ಟಿಲಿನತ್ತ ಬಣ್ಣಬಣ್ಣದ ಹೂವು ಎಸೆಯುತ್ತಾರೆ. ವಿವಿಧ ಬಣ್ಣದ ಹೂವುಗಳು ತೊಟ್ಟಿಲಿನತ್ತ ತೂರಿಬರುವ ಸುಂದರ ದೃಶ್ಯವನ್ನು ಕಣ್ತುಂಬಿಕೊಳ್ಳುವುದೇ ಚೆಂದ.

    ಮಾಂಸಪ್ರಿಯ ಕ್ರೈಸ್ತ ಸಮುದಾಯದವರು ಇಂದು ಶುದ್ಧ ಸಸ್ಯಾಹಾರಿಗಳು. ಮನೆಯಲ್ಲೇ ಬೆಳೆದ ಹೂವುಗಳನ್ನು, ತರಕಾರಿಗಳನ್ನು ಚರ್ಚ್‍ಗೆ ತಂದು ಪೂಜಿಸುತ್ತಾರೆ. ಧರ್ಮಗುರುಗಳು ಚರ್ಚ್‍ಗೆ ಬಂದ ಭಕ್ತರಿಗೆ ತೆನೆಗಳನ್ನು ವಿತರಿಸುತ್ತಾರೆ.