Tag: Casting Couch

  • ಎರಡು ಕೈ ಸೇರಿದ್ರೆ ಚಪ್ಪಾಳೆ ಆಗೋದು- ಕಾಸ್ಟಿಂಗ್ ಕೌಚ್ ಬಗ್ಗೆ ರಾಗಿಣಿ

    ಎರಡು ಕೈ ಸೇರಿದ್ರೆ ಚಪ್ಪಾಳೆ ಆಗೋದು- ಕಾಸ್ಟಿಂಗ್ ಕೌಚ್ ಬಗ್ಗೆ ರಾಗಿಣಿ

    ಬೆಂಗಳೂರು: ಇತ್ತೀಚೆಗೆ ಭಾರತದ ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ. ಹೀಗಿರುವಾಗ ನಟಿ ರಾಗಿಣಿ ದ್ವಿವೇದಿ ಕಾಸ್ಟಿಂಗ್ ಕೌಚ್ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

    ಕಿಚ್ಚು ಸಿನಿಮಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಟಿ ರಾಗಿಣಿ, ಕಾಸ್ಟಿಂಗ್ ಕೌಚ್ ನಟಿಯರ ವಿಚಾರಕ್ಕೆ ಬಿಟ್ಟಿದ್ದು ಅವರ ವಯಕ್ತಿಕ ವಿಚಾರ. ಆದರೆ ನನಗೆ ಯಾವುದೇ ಅನುಭವವಾಗಿಲ್ಲ. ಒಂದು ಕೈಯಿಂದ ಚಪ್ಪಾಳೆ ಆಗಲ್ಲ. ಎರಡು ಕೈ ಸೇರಿದರೆ ಚಪ್ಪಾಳೆ ಆಗೊದು ಎಂದು ಹೇಳಿದ್ದಾರೆ.

    ಆದರೆ ನಟಿಯರನ್ನು ಮಂಚಕ್ಕೆ ಕರೆಯೊದು ಕೆಟ್ಟ ಸಂಸ್ಕೃತಿ ಎಂದು ನಟಿ ರಾಗಿಣಿ ತಿಳಿಸಿದರು.

    ಇತ್ತೀಚೆಗೆ ನಡೆದ ಚಿಟ್ಟೆ ಸಿನಿಮಾದ ಸಾಂಗ್ ಲಾಂಚ್‍ನಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆ ಹರ್ಷಿಕಾ ಪೂಣಚ್ಚ ಮಾತನಾಡಿದ್ದರು. ಬಾಲಿವುಡ್ ನಲ್ಲಿ ನನಗೆ ಕಾಸ್ಟಿಂಗ್ ಕೌಚ್ ಅನುಭವ ಆಗಿದೆ ಎಂದು ಹೇಳಿದ್ದರು. ಅಲ್ಲದೇ ಬಾಲಿವುಡ್‍ನಲ್ಲಿ ನಾನು ಎರಡು ದೊಡ್ಡ ಸಿನಿಮಾಗಳನ್ನು ಮಾಡಬೇಕಿತ್ತು. ಕಾಸ್ಟಿಂಗ್ ಕೌಚ್ ಕಾರಣದಿಂದಾಗಿ ಸಿನಿಮಾ ಬಾಲಿವುಡ್ ಸಿನಿಮಾ ಬಿಟ್ಟು ಹೊರ ಬಂದಿದ್ದೇನೆ ಎಂದು ನಟಿ ಹರ್ಷಿಕಾ ಪೂಣಚ್ಚ ಚಿಟ್ಟೆ ಸಿನಿಮಾದ ಸಾಂಗ್ ಲಾಂಚ್ ವೇಳೆ ಅನುಭವವನ್ನು ಹಂಚಿಕೊಂಡಿದ್ದರು.

  • ಕಾಸ್ಟಿಂಗ್ ಕೌಚ್‍ನಿಂದಾಗಿ ಎರಡು ಬಾಲಿವುಡ್ ಸಿನಿಮಾ ಕೈ ಬಿಟ್ಟೆ: ಹರ್ಷಿಕಾ ಪೂಣಚ್ಚ

    ಕಾಸ್ಟಿಂಗ್ ಕೌಚ್‍ನಿಂದಾಗಿ ಎರಡು ಬಾಲಿವುಡ್ ಸಿನಿಮಾ ಕೈ ಬಿಟ್ಟೆ: ಹರ್ಷಿಕಾ ಪೂಣಚ್ಚ

    ಬೆಂಗಳೂರು: ಕಾಸ್ಟಿಂಗ್ ಕೌಚ್ ಬಗ್ಗೆ ಮತ್ತೊಬ್ಬ ಕನ್ನಡದ ನಟಿ ಮಾತನಾಡಿದ್ದಾರೆ. ಬಾಲಿವುಡ್ ನಲ್ಲಿ ನನಗೆ ಕಾಸ್ಟಿಂಗ್ ಕೌಚ್ ಅನುಭವ ಆಗಿದೆ ಎಂದು ನಟಿ ಹರ್ಷಿಕಾ ಪೂಣಚ್ಚ ಹೇಳಿಕೊಂಡಿದ್ದಾರೆ.

    ಬಾಲಿವುಡ್‍ನಲ್ಲಿ ನಾನು ಎರಡು ದೊಡ್ಡ ಸಿನಿಮಾಗಳನ್ನು ಮಾಡಬೇಕಿತ್ತು. ಕಾಸ್ಟಿಂಗ್ ಕೌಚ್ ಕಾರಣದಿಂದಾಗಿ ಸಿನಿಮಾ ಬಾಲಿವುಡ್ ಸಿನಿಮಾ ಬಿಟ್ಟು ಹೊರ ಬಂದಿದ್ದೇನೆ ಎಂದು ನಟಿ ಹರ್ಷಿಕಾ ಪೂಣಚ್ಚ ಚಿಟ್ಟೆ ಸಿನಿಮಾದ ಸಾಂಗ್ ಲಾಂಚ್ ವೇಳೆ ಅನುಭವವನ್ನು ಹಂಚಿಕೊಂಡಿದ್ದಾರೆ.

    ಹರ್ಷಿಕಾ ಪೂಣಚ್ಚ ಹೇಳಿದ್ದು ಹೀಗೆ:
    ಅವಕಾಶ ಇದೆ ಎನ್ನುವ ಕಾರಣಕ್ಕೆ ನಾನು ಬಾಲಿವುಡ್‍ಗೆ ಹೋಗಿದ್ದೆ. ಆದರೆ ಸಿನಿಮಾ ಶುರುವಾಗಿರಲಿಲ್ಲ. ಸಿನಿಮಾ ಶೂಟಿಂಗ್‍ಗಾಗಿ ಫೋಟೋಶೂಟ್‍ ಕೂಡ ಮಾಡಿಸಿ ಎಲ್ಲ ತಯಾರಿ ನಡೆಸಿಕೊಳ್ಳಲಾಗಿತ್ತು. ಸಿನಿಮಾ ಶೂಟಿಂಗ್‍ಗೆ ಒಂದು ವಾರ ಇದ್ದಾಗ ಮ್ಯಾನೇಜರ್ ಕರೆ ಮಾಡಿ, ನಮ್ಮ ಪ್ರೊಡಕ್ಷನ್ ನಿಮ್ಮ ಜೊತೆ ಕಮಿಟ್‍ಮೆಂಟ್ ಮಾಡಲು ಇಚ್ಛಿಸುತ್ತಿದೆ ಎಂದು ಹೇಳಿದ್ದರು.

    ಈ ಕರೆಗೆ ಸಿಟ್ಟಾಗಿ ನಾನು, ಸರಿ ಎಂದು ಹೇಳಿ ಮೊದಲ ಫ್ಲೈಟ್‍ನಲ್ಲೇ ಮುಂಬೈನಿಂದ ಬೆಂಗಳೂರಿಗೆ ಬಂದೆ. ನಾನು ಅವರಿಗೆ ಒಂದು ಮಾತನ್ನು ಹೇಳಲಿಲ್ಲ. ಅವರಿಗೆ ನಾನು ಎಲ್ಲಿ ಹೋದೆ ಎಂಬುದು ತಿಳಿಯಲಿಲ್ಲ. ನನ್ನ ಫೋನ್ ಕೂಡ ಸ್ವಿಚ್ ಆಫ್ ಮಾಡಿ ನಾನು ಅಲ್ಲಿಂದ ಹೊರಡಿದ್ದೆ ಮತ್ತೆ ಅವರನ್ನು ನಾನು ಸಂಪರ್ಕಿಸಲು ಇಷ್ಟಪಡಲಿಲ್ಲ. ಏಕೆಂದರೆ ಇದು ನನ್ನ ನಿರ್ಧಾರ. ನನಗೆ ಒಂದು ಇಷ್ಟವಿಲ್ಲ ಎಂದರೆ ಅದು ನನಗೆ ಇಷ್ಟವಿಲ್ಲ ಎಂದೇ ಅರ್ಥ.

    ಈ ವಿಷಯದಲ್ಲಿ ನಾನು ಯಾರನ್ನೂ ಆರೋಪಿಸುವುದಿಲ್ಲ. ಏಕೆಂದರೆ ನಮ್ಮ ಸ್ಯಾಂಡಲ್‍ವುಡ್ ನಲ್ಲಿ ಈ ರೀತಿ ಎಂದಿಗೂ ನಡೆಯಲಿಲ್ಲ. ಹಾಗಾಗಿ ನಾನು ಆರಾಮಾಗಿ ಆಟವಾಡಿಕೊಂಡು ಸಿನಿಮಾ ಮಾಡುತ್ತಿದ್ದೆ. ಒಂದೇ ಬಾರಿಗೆ ಒಂದು ದೊಡ್ಡ ಹೆಜ್ಜೆ ಇಟ್ಟು ದೊಡ್ಡ ಮೀನು ಹಿಡಿಯುವುದಕ್ಕೆ ಬಾಲಿವುಡ್‍ಗೆ ಕಾಲಿಟ್ಟೆ. ಆದರೆ ಈ ವಿಚಾರ ಗೊತ್ತಾಗಿ ನನಗೆ ಬೇಸರವಾಯಿತು. ಇದನ್ನೂ ಓದಿ: ಸ್ಕರ್ಟ್ ಎಳೆದು, ಇದರ ಕೆಳಗೆ ಏನಿದೆ ತೋರಿಸು: ಮಾಡೆಲ್‍ಗೆ ಕಾಮುಕರ ಕಿರುಕುಳ

    ನಾನು 15 ವರ್ಷವಿರುವಾಗ ಚಿತ್ರರಂಗಕ್ಕೆ ಕಾಲಿಟ್ಟಿದೆ. ಆಗ ಸ್ಯಾಂಡಲ್‍ವುಡ್‍ನಲ್ಲಿ ನನಗೆ ತುಂಬಾ ಚೆನ್ನಾಗಿ ನೋಡಿಕೊಂಡರು. ಹಾಗಾಗಿ ಆಟವಾಡಿಕೊಂಡು ಸಿನಿಮಾಗಳನ್ನು ಮಾಡುತ್ತಿದೆ. ಹಾಗಾಗಿ ನನಗೆ ಕಾಸ್ಟಿಂಗ್ ಕೌಚ್ ಬಗ್ಗೆ ತಿಳಿದಿರಲಿಲ್ಲ. ಮೊದಲ ಬಾರಿಗೆ ಬಾಲಿವುಡ್‍ಗೆ ಹೋದಾಗ ನನಗೆ ಈ ರೀತಿಯ ಅನುಭವ ಆಯ್ತು. ಅವರು ಆ ರೀತಿ ಹೇಳಿದ್ದಾಗ ನಾನು ಅವರ ಚಿತ್ರಕ್ಕೆ ಸೂಕ್ತ ವ್ಯಕ್ತಿ ಅಲ್ಲ ಎಂದು ಅಲ್ಲಿಂದ ನನ್ನ ತಂದೆ ಜೊತೆ ಹೊರಟು ಬೆಂಗಳೂರಿಗೆ ಬಂದೆ. ಇದನ್ನೂ ಓದಿ: ಫಿಲ್ಮ್ ಇಂಡಸ್ಟ್ರಿ ರೇಪ್‍ಗೆ ಬದಲಾಗಿ ತುತ್ತು ಅನ್ನ ನೀಡುತ್ತೆ: ಸರೋಜ್ ಖಾನ್

    ಬೆಂಗಳೂರಿಗೆ ಬಂದಾಗ ಪ್ರತಿಯೊಬ್ಬರು ನಾನು ಬಾಲಿವುಡ್‍ಗೆ ಹೋಗುತ್ತಿದ್ದೇನೆ ಎಂದು ಸುಳ್ಳು ಹೇಳಿದೆ ಎಂದು ಹೇಳುತ್ತಿದ್ದರು. ಆದರೆ ನನಗೆ ಆ ಸಮಯ ಏನು ಹೇಳಬೇಕೆಂಬುದು ತಿಳಿದಿರಲಿಲ್ಲ. ಬಾಲಿವುಡ್ ಸಿನಿಮಾ ಅವಕಾಶ ಸಿಕ್ಕ ಖುಷಿಗೆ ನಾನು ಟ್ವಿಟ್ಟರಿನಲ್ಲಿ ಟ್ವೀಟ್ ಮಾಡಿದ್ದೆ. ಆ ಸಮಯದಲೇ ನನಗೆ ಆ ವಿಷಯದ ಬಗ್ಗೆ ಹೇಳಿಕೊಳ್ಳಲು ಆಗುತ್ತಿರಲಿಲ್ಲ. ನಾನು ಅದರ ಬಗ್ಗೆ ಯೋಚಿಸುತ್ತಿರಲಿಲ್ಲ. ಆಗ ನಾನು ಅಲ್ಲಿ ನನಗೆ ತೊಂದರೆ ಆಗಿದೆ ಎಂದು ಎಲ್ಲರಿಗೂ ಹೇಳುತ್ತಿದ್ದೇನೆ ಎಂದರು.

    https://www.youtube.com/watch?v=5JRSNBMt95Q

  • ಫಿಲ್ಮ್ ಇಂಡಸ್ಟ್ರಿ ರೇಪ್‍ಗೆ ಬದಲಾಗಿ ತುತ್ತು ಅನ್ನ ನೀಡುತ್ತೆ: ಸರೋಜ್ ಖಾನ್

    ಫಿಲ್ಮ್ ಇಂಡಸ್ಟ್ರಿ ರೇಪ್‍ಗೆ ಬದಲಾಗಿ ತುತ್ತು ಅನ್ನ ನೀಡುತ್ತೆ: ಸರೋಜ್ ಖಾನ್

    ಮುಂಬೈ: ಸಿನಿಮಾ ಉದ್ಯಮದಲ್ಲಿ ಕೆಲವು ದಿನಗಳಿಂದ ‘ಕಾಸ್ಟಿಂಗ್ ಕೌಚ್’ ಕುರಿತಾಗಿ ಭಾರೀ ಚರ್ಚೆಗಳು ನಡೆಯುತ್ತಿವೆ. ಬಾಲಿವುಡ್ ಖ್ಯಾತ ನೃತ್ಯ ಸಂಯೋಜಕಿ ಸರೋಜ್ ಖಾನ್ ಕಾಸ್ಟಿಂಗ್ ಕೌಚ್ ಪರ ಹೇಳಿಕೆ ನೀಡುವ ಮೂಲಕ ಅಚ್ಚರಿಯನ್ನುಂಟು ಮಾಡಿದ್ದಾರೆ.

    ಬಾಲಿವುಡ್ ಕಾಸ್ಟಿಂಗ್ ಕೌಚ್ ನೆಪದಲ್ಲಿ ನಡೆಸುವ ರೇಪ್‍ಗೆ ಬದಲಾಗಿ ನಟಿಗೆ ಅನ್ನವನ್ನು ನೀಡುತ್ತದೆ ಅಂತಾ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ ವೇಳೆ ಮಾಧ್ಯಮಗಳಿಗೆ ತಿಳಿಸಿದ್ದಾರೆ.

    ಕಾಸ್ಟಿಂಗ್ ಕೌಚ್ ಕಿರುಕುಳ ಬಾಬಾ ಅಝಮ್ ಕಾಲದಿಂದಲೂ ನಡೆದುಕೊಂಡು ಬಂದಿದೆ. ಸಿನಿಮಾ ಅಂಗಳದಲ್ಲಿರುವ ಪ್ರತಿಯೊಬ್ಬ ಹುಡುಗಿಯ ಮೇಲೆ ಒಬ್ಬರಾದ್ರೂ ಕೈ ಹಾಕುವ ಪ್ರಯತ್ನ ಮಾಡ್ತಾರೆ. ಇಂತಹ ಪ್ರಕರಣದಲ್ಲಿ ಸರ್ಕಾರದ ಪ್ರತಿನಿಧಿಗಳು ಸಹ ಇರ್ತಾರೆ. ಸರ್ಕಾರದ ಪ್ರತಿನಿಧಿಗಳು ಫಿಲ್ಮ್ ಇಂಡಸ್ಟ್ರಿಯ ಹಿಂದೆ ಯಾಕೆ ಬೀಳುತ್ತಾರೋ ಗೊತ್ತಾಗುತ್ತಿಲ್ಲ. ಕೊನೆ ಪಕ್ಷದಲ್ಲಿ ಸಿನಿಮಾದವರು ರೇಪ್ ಬದಲಾಗಿ ನಟಿಗೆ ತುತ್ತು ಅನ್ನವಾದ್ರೂ ನೀಡ್ತಾರೆ ಅಂತಾ ಹೇಳಿದ್ದಾರೆ.

    ಈ ಎಲ್ಲ ವಿಷಯಗಳು ನಟಿಯ ಮೇಲೆ ನಿರ್ಧರಿಸಲ್ಪಡುತ್ತವೆ. ನಟಿ ಲೈಂಗಿಕ ಕಿರುಕುಳಕ್ಕೆ ಒಳಗಾಗಲು ಇಷ್ಟ ಪಡದೇ ಇದ್ದರೆ ದೂರ ಉಳಿಯುವ ಸ್ವಾತಂತ್ರ್ಯ ಆಕೆಗಿದೆ. ಅವಳಲ್ಲಿ ನಟನೆಯ ಕಲೆ ಇದ್ರೆ, ಆಕೆ ಎಲ್ಲಿಯಾದ್ರೂ ಬದುಕಬಹುದು. ಆದ್ರೆ ಫಿಲ್ಮ್ ಇಂಡಸ್ಟ್ರಿಗೆ ಅವಮಾನಿಸುವಂತಹ ಹೇಳಿಕೆಗಳನ್ನು ನೀಡಬಾರದು. ಫಿಲ್ಮ್ ಇಂಡಸ್ಟ್ರಿ ನಮಗೆ ತಂದೆ-ತಾಯಿ. ಹೀಗಾಗಿ ಅನಾವಶ್ಯಕ ಹೇಳಿಕೆಗಳನ್ನು ನೀಡಬಾರದು ಅಂತಾ ಸರೋಜ್ ಖಾನ್ ತಿಳಿಸಿದ್ದಾರೆ. ಇದನ್ನೂ ಓದಿ: ಪೊಲೀಸ್ ಠಾಣೆ ಮೆಟ್ಟಿಲೇರಿದ್ರು ಬಟ್ಟೆ ಬಿಚ್ಚಿ ಶ್ರೀರೆಡ್ಡಿಗೆ ತಿರುಗೇಟು ಕೊಟ್ಟ ಸ್ಯಾಂಡಲ್ ವುಡ್ ನಟಿ

    ಸರೋಜ್ ಖಾನ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಟಾಲಿವುಡ್ ನಟಿ ಶ್ರೀರೆಡ್ಡಿ, ಇದೂವರೆಗೂ ಸರೋಜ್ ಖಾನ್ ಮೇಡಂ ಮೇಲಿದ್ದ ಗೌರವವೆಲ್ಲಾ ಕಡಿಮೆಯಾಗಿದೆ. ಸಿನಿಮಾ ರಂಗದಲ್ಲಿರುವ ಒಬ್ಬ ಹಿರಿಯ ಕಲಾವಿದೆಯಾಗಿ, ಯುವ ನಟಿಯರಿಗೆ ಒಳ್ಳೆಯ ದಾರಿಯನ್ನು ತೋರಿಸಬೇಕು. ಅದರ ಬದಲಾಗಿ ನಟಿಯರು ನಿರ್ಮಾಪಕರ ಗುಲಾಮರು ಇದ್ದಂತೆ ನಿಮ್ಮ ಹೇಳಿಕೆ ಇದೆ ಅಂತಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬಟ್ಟೆ ಬಿಚ್ಚಿ ಶ್ರೀರೆಡ್ಡಿಗೆ ತಿರುಗೇಟು ಕೊಟ್ಟ ಕನ್ನಡದ ನಟಿ ಕವಿತಾ!

  • ಚಪ್ಪಲಿಯಲ್ಲಿ ಹೊಡೆದ್ರೆ ಕರ್ನಾಟಕ ಬಿಟ್ಟು ತಮಿಳುನಾಡು ಸೇರಬೇಕು: ಕಾಸ್ಟಿಂಗ್ ಕೌಚ್ ಸತ್ಯವನ್ನು ಬಿಚ್ಚಿಟ್ಟ ನಟಿ ಖುಷಿ ಶೆಟ್ಟಿ!

    ಚಪ್ಪಲಿಯಲ್ಲಿ ಹೊಡೆದ್ರೆ ಕರ್ನಾಟಕ ಬಿಟ್ಟು ತಮಿಳುನಾಡು ಸೇರಬೇಕು: ಕಾಸ್ಟಿಂಗ್ ಕೌಚ್ ಸತ್ಯವನ್ನು ಬಿಚ್ಚಿಟ್ಟ ನಟಿ ಖುಷಿ ಶೆಟ್ಟಿ!

    ಬೆಂಗಳೂರು: ಸಿನಿ ಅಂಗಳದಲ್ಲಿ ಕಾಸ್ಟಿಂಗ್ ಕೌಚ್ ಅನ್ನೋದು ಯುವ ನಟಿಯರಿಗೆ ಕಾಡುತ್ತಿದೆ ಅನ್ಸುತ್ತೆ. ಇಷ್ಟು ದಿನ ಸೈಲೆಂಟಾಗಿದ್ದ ನಟಿಮಣಿಯರು ಇದೀಗ ಸೆಕ್ಸ್ ಫಾರ್ ಚಾನ್ಸ್ ವಿಷಯವನ್ನು ಓಪನ್ ಆಗಿ ಹೇಳಿಕೊಳ್ಳುತ್ತಿದ್ದಾರೆ.

    ಇತ್ತೀಚೆಗಷ್ಟೇ ಸ್ಯಾಂಡಲ್‍ವುಡ್‍ನ ನಟಿ ಕೃಷಿ ತಾಪಂಡ ಲೈಂಗಿಕ ಕಿರುಕುಳದ ಬಗ್ಗೆ ಮಾತನಾಡಿದ್ದರು. ಪರಭಾಷೆಯಲ್ಲಿ ಮಾತ್ರವಲ್ಲ ಸ್ಯಾಂಡಲ್‍ವುಡ್‍ನಲ್ಲೂ ಕೂಡ ಕಾಸ್ಟಿಂಗ್ ಕೌಚ್ ಇದೆ ಅನ್ನೋ ಸತ್ಯವನ್ನ ಬಿಚ್ಚಿಟ್ಟಿದ್ದರು.

    ಇದೀಗ ಕನ್ನಡದ ನಟಿ ಖುಷಿ ಶೆಟ್ಟಿ ಕಾಲಿವುಡ್ ಅಂಗಳದ ಮಂಚದ ಸತ್ಯವನ್ನ ಬಟಾಬಯಲು ಮಾಡಿದ್ದಾರೆ. ಅವಕಾಶ ಬೇಕೆಂದರೆ ನಿರ್ಮಾಪಕರ ಜತೆ ಸಹಕಾರ ಮಾಡಿಕೊಳ್ಳುವ ಸಂಸ್ಕೃತಿ ತಮಿಳು ಚಿತ್ರರಂಗದಲ್ಲಿದೆ. ಅಂತಹ ಸಂದರ್ಭವೊಂದು ತಮಗೂ ಎದುರಾಗಿತ್ತು ಅನ್ನೋದನ್ನ ನಟಿ ಖುಷಿ ತಮ್ಮ ಫೇಸ್‍ಬುಕ್ ಪೇಜ್‍ನಲ್ಲಿ ಹಂಚಿಕೊಂಡಿದ್ದರು. ನಂತರ ಆ ಪೋಸ್ಟ್ ಅನ್ನು ಅವರು ಡಿಲೀಟ್ ಮಾಡಿದ್ದಾರೆ.

    ಪೋಸ್ಟ್ ನಲ್ಲಿ ಏನಿತ್ತು: ತಮಿಳು ಚಿತ್ರದಲ್ಲಿ ನಟಿಸಲು ನೀನು ನಿರ್ಮಾಪಕರ ಜೊತೆ ಸಹಕಾರ ಮಾಡಬೇಕೆಂದು ವ್ಯಕ್ತಿಯೊಬ್ಬರು ಹೇಳಿದ್ದರು. ಅದಕ್ಕೆ ನಾನು, ಇನ್ನೊಂದು ಸಲ ಅಜೆಸ್ಟ್ ಮೆಂಟ್, ಕಮಿಟ್‍ಮೆಂಟ್ ಹಾಗೂ ನಿರ್ಮಾಪಕರು ಕೇಳ್ತಾರೆ ಇನ್ನೊಬ್ಬರು ಕೇಳ್ತಾರೆ ಎಂದು ಏನಾದರೂ ಮೆಸೇಜ್ ಮಾಡಿದ್ರೆ ಚಪ್ಪಲಿಯಲ್ಲಿ ಹೊಡೆದರೆ ಕರ್ನಾಟಕ ಬಿಟ್ಟು ತಮಿಳುನಾಡು ಸೇರಬೇಕು ಹಾಗೆ ಬಾರಿಸುತ್ತೇನೆ. ನಿಮ್ಮ ಅಕ್ಕ-ತಂಗಿಗೂ ಹೀಗೆ ಕೇಳ್ತಿರಾ? ನಿಮ್ಮಂತವರು ಇರೋದ್ರಿಂದಲೇ ನಮ್ಮ ಚಿತ್ರರಂಗ ಹೆಸರು ಹಾಳಾಗ್ತಿರೋದು. ಅವಕಾಶ ಸಿಗದೆ ಹೋದ್ರು ಹೇಗೆ ಬದುಕಬೇಕೆಂಬುದು ನನ್ನ ಪೋಷಕರು ನನಗೆ ಹೇಳಿಕೊಟ್ಟಿದ್ದಾರೆ. ಕಣ್ಣಿಗೆ ಕಾಣಿಸದಂತೆ ಕರ್ನಾಟಕ ಬಿಟ್ಟು ತೊಲಗಿ ಎಂದು ವ್ಯಕ್ತಿಯೊಬ್ಬರಿಗೆ ಬೈದಿರುವ ವಾಟ್ಸಪ್ ಮೆಸೇಜ್‍ನ ಸ್ಕ್ರೀನ್‍ಶಾಟ್ ತೆಗೆದು, ತಮ್ಮ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದರು.

    ಈಗ ಖುಷಿ ತಮ್ಮ ಫೇಸ್‍ಬುಕ್ ಪೋಸ್ಟ್ ಡಿಲಿಟ್ ಮಾಡಿದ್ದಾರೆ. ಚಂದ್ರಮುಖಿ ಹಾಗೂ ಮಹಾನದಿ ಸೀರಿಯಲ್‍ಗಳಲ್ಲಿ ಅಭಿನಯಿಸಿರುವ ಖುಷಿ, `ಇದೀಗ ಬಂದ ಸುದ್ದಿ’ ಸಿನಿಮಾ ಮೂಲಕ ಸ್ಯಾಂಡಲ್‍ವುಡ್ ಬೆಳ್ಳಿತೆರೆ ಪ್ರವೇಶಿಸಿದ್ದರು. ಇದೀಗ ರಾಂಗ್ ಟರ್ನ್ ಸಿನಿಮಾವೊಂದರಲ್ಲಿ ಬ್ಯುಸಿಯಾಗಿದ್ದಾರೆ.