Tag: Casting Couch

  • ತಮ್ಮ ಜೊತೆ ಸಮಯ ಕಳೆಯುವಂತೆ ನಿರ್ದೇಶಕರೊಬ್ಬರು ಹೇಳಿದ್ದರು- ಕಾಸ್ಟಿಂಗ್ ಕೌಚ್ ಬಗ್ಗೆ ದಿವ್ಯಾಂಕ ಮಾತು

    ತಮ್ಮ ಜೊತೆ ಸಮಯ ಕಳೆಯುವಂತೆ ನಿರ್ದೇಶಕರೊಬ್ಬರು ಹೇಳಿದ್ದರು- ಕಾಸ್ಟಿಂಗ್ ಕೌಚ್ ಬಗ್ಗೆ ದಿವ್ಯಾಂಕ ಮಾತು

    ಮುಂಬೈ: ಹಿಂದಿ ಕಿರುತೆರೆ ನಟಿ ದಿವ್ಯಾಂಕ ತ್ರಿಪಾಠಿ ಅವರು ತಮ್ಮ ವೃತ್ತಿಜೀವನದ ಆರಂಭದಲ್ಲಿ ಕಾಸ್ಟಿಂಗ್ ಕೌಚ್‍ನಿಂದ ತಾವು ಎದುರಿಸಿದ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ.

    ಖತ್ರೋನ್ ಕೆ ಕಿಲಾಡಿಯಲ್ಲಿ ಕಾಣಿಸಿಕೊಳ್ಳುತ್ತಿರುವ ದಿವ್ಯಾಂಕಾ ಹಿಂದಿ ಕಿರುತೆರೆಯ ಜನಪ್ರಿಯ ನಟಿಯರಲ್ಲಿ ಒಬ್ಬರು. ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ತಮ್ಮ ವೃತ್ತಿ ಜೀವನ ಆರಂಭಿಸಿದಾಗ ಕೆಲವು ನಿರ್ದೇಶಕರು ತಮ್ಮ ಜೊತೆ ಸಮಯ ಕಳೆಯುವಂತೆ ಕೇಳಿರುವುದಾಗಿ ಬಹಿರಂಗಪಡಿಸಿದ್ದಾರೆ. ಇದನ್ನೂ ಓದಿ: ಯಾತ್ರಾರ್ಥಿಗಳಿಗಾಗಿ ಪಾಕಿಸ್ತಾನದ ಪ್ರಸ್ತಾವನೆ ಬಗ್ಗೆ ಚರ್ಚೆ ನಡೆಸಲು ಭಾರತ ಸಿದ್ಧ

    ಇಂತಹವರು ಕಾಸ್ಟಿಂಗ್ ಕೌಚ್ ಸರ್ವೇಸಾಮಾನ್ಯ ಹಾಗೂ ಇಂಡಸ್ಟ್ರಿಯಲ್ಲಿ ಎಲ್ಲರೂ ಅದನ್ನು ಮಾಡುತ್ತಾರೆ ಎಂದು ನಿಮ್ಮನ್ನು ನಂಬಿಸಲು ಪ್ರಯತ್ನಿಸುತ್ತಾರೆ. ಕೆಲಸ ಮುಗಿದ ನಂತರ ಮತ್ತೆ ನಿಮಗೆ ಸಮಸ್ಯೆಗಳು ಆರಂಭವಾಗುತ್ತದೆ. ನನ್ನ ಬಳಿ ಹಣವೇ ಇಲ್ಲದ ಕಾಲವೊಂದಿತ್ತು. ಆದರೂ ನನ್ನ ಬಿಲ್‍ಗಳು, ಇಎಂಐಗಳನ್ನು ಇತ್ಯಾದಿಗಳನ್ನು ಪಾವತಿಸಬೇಕಾಗಿತ್ತು. ನನಗೆ ಸಾಕಷ್ಟು ಒತ್ತಡವಿತ್ತು. ಆಗ ನನಗೊಂದು ಬಿಗ್ ಆಫರ್ ಬಂತು. ನೀವು ಈ ನಿರ್ದೇಶಕರ ಜೊತೆ ಇದ್ದರೆ, ನಿಮಗೆ ದೊಡ್ಡ ಬ್ರೇಕ್ ಸಿಗುತ್ತದೆ ಎಂದರು. ಆದರೆ ನಾನು ಯಾಕೆ ಇರಬೇಕು? ಎಂದು ಪ್ರಶ್ನಿಸಿಕೊಂಡೆ. ಇದರಿಂದ ನನ್ನ ಜೀವನ ಆಗುತ್ತದೆ ಎಂಬುವುದು ಸುಳ್ಳು, ಹಾಗೆ ನಾನು ಮಾಡಿದರೆ ನನ್ನ ಜೀವನವನ್ನು ಮಾರಾಟ ಮಾಡಿಕೊಂಡಂತೆ. ನಾನು ಯಾವಾಗಲೂ ತನ್ನ ಪ್ರತಿಭೆಯನ್ನು ನಂಬುತ್ತೇನೆ ಮತ್ತು ನನ್ನ ಸಾಮರ್ಥ್ಯದ ಆಧಾರದ ಮೇಲೆ ಹೊಸ ಪ್ರಾಜೆಕ್ಟ್‌ಗಳನ್ನು ಮಾಡುತ್ತೇನೆ ಹೊರತು ನಿರ್ದೇಶಕನೊಂದಿಗೆ ಅಲ್ಲ ಎಂದು ಅರಿತುಕೊಂಡಿರುವುದಾಗಿ ತಿಳಿಸಿದ್ದಾರೆ.

    ಮೀಟೂ ಚಳುವಳಿಯಿಂದ ಇಂತಹ ಆಫರ್ ನೀಡುವ ಜನರು ಮತ್ತು ಉದ್ಯಮದಲ್ಲಿರುವ ಪ್ರತಿಯೊಬ್ಬರಿಗೂ ಈ ಕುರಿತಂತೆ ಮನವರಿಕೆಯಾಯಿತು. ನೀವು ಈ ರೀತಿ ಇಂಡಸ್ಟ್ರಿಯಲ್ಲಿ ಮಾಡುವುದರಿಂದ ನಿಮ್ಮ ವೃತ್ತಿ ಜೀವನದಲ್ಲಿ ಏನು ಆಗುವುದಿಲ್ಲ. ಬದಲಾಗಿ ನೀವು ಅದನ್ನು ಮಾಡಿದರೆ, ಮುಂದೆ ಹೀಗೆ ಮಾಡದಿದ್ದರೆ ನಿಮ್ಮ ವೃತ್ತಿ ಜೀವನ ಹಾಳು ಮಾಡುತ್ತೇವೆ ಎಂಬ ಮಟ್ಟಕ್ಕೆ ಹೋಗುತ್ತಾರೆ ಎಂದಿದ್ದಾರೆ.

    ಇದೆಲ್ಲಾ ನೋಡುತ್ತಿದ್ದರೆ ಆರಂಭದಲ್ಲಿ ನನಗೆ ಕಾಮಿಡಿಯಾಗಿ ಕಾಣಿಸುತ್ತಿತ್ತು. ನನಗೆ ನನ್ನ ಪ್ರತಿಭೆ ಆಧಾರದ ಮೇಲೆ ಮೊದಲ ಬಾರಿಗೆ ಕೆಲಸ ಸಿಕ್ಕಿತು. ಸದ್ಯ ಹಾಗೆಯೇ ಮುಂದುವರಿಯುತ್ತಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ:  ಪುಷ್ಪ ಮಾಸ್ ಡೈಲಾಗ್ ಹೇಳಿದ ಡೇವಿಡ್ ವಾರ್ನರ್- Viral Video

  • ಜೀವನದ ಜರ್ನಿ ಮೇಲೆ ಕಾಸ್ಟಿಂಗ್ ಕೌಚ್ ಡಿಪೆಂಡ್ ಆಗಿರುತ್ತೆ: ರಾಗಿಣಿ

    ಜೀವನದ ಜರ್ನಿ ಮೇಲೆ ಕಾಸ್ಟಿಂಗ್ ಕೌಚ್ ಡಿಪೆಂಡ್ ಆಗಿರುತ್ತೆ: ರಾಗಿಣಿ

    ವಿಜಯಪುರ: ಕಾಸ್ಟಿಂಗ್ ಕೌಚ್ ಅನ್ನೋದು ನನ್ನ ಪ್ರಕಾರ ಒಂದು ಸಖತ್ ಸ್ಟುಪಿಡ್ ವರ್ಡ್. ನೀವು ನಡೆಸುವ ಜೀವನದ ಜರ್ನಿ ಮೇಲೆ ಅದು ಡಿಪೆಂಡ್ ಆಗಿರುತ್ತೆ ಎಂದು ಸ್ಯಾಂಡಲ್‍ವುಡ್ ನಟಿ ರಾಗಿಣಿ ದ್ವಿವೇದಿ ಹೇಳಿದರು.

    ನಗರದಲ್ಲಿ ಫುಡ್ ಕಿಟ್ ವಿತರಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವತ್ತೂ ಒಂದೇ ಕೈಯಲ್ಲಿ ಚಪ್ಪಾಳೆ ಆಗೋದಿಲ್ಲ. ಕಾಸ್ಟಿಂಗ್ ಕೌಚ್ ಬಗ್ಗೆ ನನ್ನ ಲೈಫ್‍ನಲ್ಲಿ ನನಗೆ ಅನುಭವ ಆಗಿಲ್ಲ. ಜೀವನಲ್ಲಿ ಎರಡು ರೀತಿಗಳಿವೆ. ಒಂದು ಶಾರ್ಟ್ ಕಟ್ ಮತ್ತೊಂದು ಲಾಂಗ್ ಲೈಫ್. ಕಷ್ಟಪಟ್ಟರೆ ನಾವು ಬೆಳೀತಿವಿ, ಪ್ರತಿಯೊಂದು ಸ್ಟೆಪ್ ಬೈ ಸ್ಟೆಪ್ ಆಗುತ್ತೆ. ಶಾರ್ಟ್ ಕಟ್ ತಗೊಂಡ್ರೆ ಕೆಲವೊಮ್ಮೆ ರಾಂಗ್ ಪರ್ಸನ್ ಮೀಟ್ ಮಾಡಬೇಕಾಗುತ್ತೆ ಎಂದರು.

    ಅತೀ ಶೀಘ್ರದಲ್ಲಿ ನೇಮು, ಫೇಮು, ದುಡ್ಡು ಗಳಿಸೋದನ್ನ ಬಿಟ್ಟು, ನಮ್ಮ ಕೆಲಸದ ಮೇಲೆ ನಾವು ಏನು ಮಾಡುತ್ತೇವೆ ಅನ್ನೋದರ ಮೇಲೆ ಗಮನಹರಿಸಬೇಕು. ಹನ್ನೆರಡು ವರ್ಷದಿಂದ ಇಂಡಸ್ಟ್ರಿಯಲ್ಲಿದ್ದೇನೆ, ನಾನು ಕಾಸ್ಟಿಂಗ್ ಕೌಚ್ ಬಗ್ಗೆ ನೋಡಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ನನ್ನ ಮೇಲೆ ಜನರ ಪ್ರೀತಿ, ವಿಶ್ವಾಸ ಇದೆ – ಡ್ರಗ್ಸ್ ಕೇಸ್ ಬಗ್ಗೆ ರಾಗಿಣಿ ಮಾತು

    ಯಾರಾದ್ರೂ ಕಾಸ್ಟಿಂಗ್ ಕೌಚ್ ಬಗ್ಗೆ ಹೇಳಿದ್ರೆ ಬಹುಷ ಅವರು ಅಂತಹ ಸಂದರ್ಭ ಅನುಭವಿಸಿರಬಹುದು. ಅವರಿಗೆ ಆ ರೀತಿಯ ಅನುಭವ ಆಗಿರಬೇಕು, ಅದರ ಹಿಂದೆ ಸಾಕಷ್ಟು ಕಾರಣಗಳು ಇರುತ್ತವೆ ಎಂದರು.

  • ಹೀರೋ ಜೊತೆ ಮಲಗಲು ಡೈರೆಕ್ಟರ್ ಹೇಳಿದ್ರು: ನಟಿ ಕಿಶ್ವೆರ್

    ಹೀರೋ ಜೊತೆ ಮಲಗಲು ಡೈರೆಕ್ಟರ್ ಹೇಳಿದ್ರು: ನಟಿ ಕಿಶ್ವೆರ್

    ಮುಂಬೈ: ಕಿರುತೆರೆ ನಟಿ ಕಿಶ್ವೆರ್ ಮರ್ಚೆಂಟ್ ತಮಗಾದ ಕಾಸ್ಟಿಂಗ್ ಕೌಚ್ ಬಗ್ಗೆ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಓರ್ವ ಖ್ಯಾತ ನಿರ್ದೇಶಕ, ಒಬ್ಬ ಹೀರೋ ಜೊತೆ ಮಲಗುವಂತೆ ಹೇಳಿದ್ದರು ಎಂದು ಹೇಳಿಕೊಂಡಿದ್ದಾರೆ. ಆದ್ರೆ ನಿರ್ದೇಶಕ ಮತ್ತು ನಟನ ಹೆಸರನ್ನ ಬಹಿರಂಗಪಡಿಸಿಲ್ಲ.

    ಸಿನಿಮಾ ಅವಕಾಶ ಕೇಳಿ ಒಬ್ಬಳೇ ನಿರ್ದೇಶಕರ ಬಳಿ ಹೋದಾಗ ಈ ಅನುಭವ ಆಯ್ತು. ಪ್ರತಿಬಾರಿಯೂ ನನ್ನ ಜೊತೆಯಲ್ಲಿ ಅಮ್ಮ ಇರುತ್ತಿದ್ದರು. ಅಂದು ಒಬ್ಬಳೇ ಹೋದಾಗ ನಿರ್ದೇಶಕರು ಈ ಮಾತುಗಳನ್ನಾಡಿದರು. ನಾನು ನಯವಾಗಿಯೇ ಅವರ ಮಾತುಗಳನ್ನ ತಿರಸ್ಕರಿಸಿ ಅಲ್ಲಿಂದ ಹೊರ ಬಂದೆ. ನಿರ್ದೇಶಕ ಮತ್ತು ನಟ ಇಬ್ಬರು ಖ್ಯಾತನಾಮರು ಅಂತ ಮಾತ್ರ ಕಿಶ್ವೆರ್ ಹೇಳಿದ್ದಾರೆ.

    ಚಿತ್ರರಂಗದ ದುನಿಯಾದಲ್ಲಿ ಈ ರೀತಿಯ ಹೆಚ್ಚು ಪ್ರಕರಣಗಳು ನಡೆಯುತ್ತವೆ ಎಂದು ನಾನು ಹೇಳಲ್ಲ. ಆದರೆ ಎಲ್ಲ ಸಿನಿಮಾ ಉದ್ಯಮದಲ್ಲೂ ಈ ರೀತಿಯ ಕೆಲವರು ಇರುತ್ತಾರೆ ಎಂದು ಕಿಶ್ವೆರ ಹೇಳುತ್ತಾರೆ. ಇದನ್ನೂ ಓದಿ: ನಿರ್ಮಾಪಕರ ಪತ್ನಿ ತಮ್ಮ ಪತಿಯೊಂದಿಗೆ ಮಲಗಲು ಹೇಳಿದ್ರು : ಕಾಸ್ಟಿಂಗ್ ಕೌಚ್ ಬಗ್ಗೆ ಗೀತ ಸಾಹಿತಿ ಮಾತು

    ಕಿಶ್ವೆರ್ ಏಕ್ ಹಸೀನಾ ಥಿ, ಕಹಾಂ ಹಮ್ ಕಹಾಂ ತುಮ್, ದೇಸ್ ಮೇ ನಿಕಾಲಾ ಹೋಗಾ ಚಾಂದ್, ಕಾವ್ಯಾಂಜಲಿ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ. ಗಾಯಕ ಸುಯಾಶ್ ರಾಯ್ ಜೊತೆ ಮದುವೆಯಾಗಿದ್ದು, ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಹಿಂದಿ ಬಿಗ್‍ಬಾಸ್ ಸೀಸನ್-9ರಲ್ಲಿಯೂ ಕಿಶ್ವೆರ್ ಭಾಗವಹಿಸಿದ್ದರು. ಇದನ್ನೂ ಓದಿ: ಚಪ್ಪಲಿಯಲ್ಲಿ ಹೊಡೆದ್ರೆ ಕರ್ನಾಟಕ ಬಿಟ್ಟು ತಮಿಳುನಾಡು ಸೇರಬೇಕು: ಕಾಸ್ಟಿಂಗ್ ಕೌಚ್ ಸತ್ಯವನ್ನು ಬಿಚ್ಚಿಟ್ಟ ನಟಿ ಖುಷಿ ಶೆಟ್ಟಿ!

  • ಸೆಟ್‍ನಲ್ಲಿ ನಟ, ನಿರ್ದೇಶಕರಿಗೆ ನಾವು ಹೆಂಡ್ತೀರ ರೀತಿ ವರ್ತಿಸಬೇಕು: ಕಂಗನಾ

    ಸೆಟ್‍ನಲ್ಲಿ ನಟ, ನಿರ್ದೇಶಕರಿಗೆ ನಾವು ಹೆಂಡ್ತೀರ ರೀತಿ ವರ್ತಿಸಬೇಕು: ಕಂಗನಾ

    – ನಾವು ಯಶಸ್ವಿ ಆಗಬೇಕಾದ್ರೆ ಅವರನ್ನ ಸಂತೋಷ ಪಡಿಸಬೇಕು

    ಮುಂಬೈ: ಬಾಲಿವುಡ್ ಬೆಡಗಿ ನಟಿ ಕಂಗನಾ ಒಂದಿಲ್ಲೊಂದು ವಿಚಾರಕ್ಕೆ ಸದಾ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗಷ್ಟೆ ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗಳು ಕಂಗನಾ ಕಚೇರಿಯನ್ನು ಭಾಗಶಃ ಧ್ವಂಸ ಮಾಡಿದ್ದು, ಇದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೀಗ ನಟಿ ಕಂಗನಾ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ. ಇದನ್ನೂ ಓದಿ: ನನ್ನ ಕನಸಿನ ಮೇಲೆ ನಡೆಸಿದ ಅತ್ಯಾಚಾರವಿದು- ಫೋಟೋ ಶೇರ್ ಮಾಡಿದ ಕಂಗನಾ

    ಇತ್ತೀಚೆಗೆ ನಟಿ ಕಂಗನಾ ಸಂದರ್ಶನವೊಂದರಲ್ಲಿ ಬಾಲಿವುಡ್‍ನಲ್ಲಿ ಕಾಸ್ಟಿಂಗ್ ಕೌಚ್ ಮತ್ತು ಮಹಿಳೆಯರ ಮೇಲಿನ ಒತ್ತಡದ ಬಗ್ಗೆ ಮಾತನಾಡಿದ್ದಾರೆ. “ನಟಿಯಾದವರು ಸಿನಿಮಾದಲ್ಲಿ ಯಶಸ್ವಿಯಾಗಬೇಕೆಂದರೆ ಅಥವಾ ಗುರುತಿಸಿಕೊಳ್ಳಬೇಕು ಎಂದು ಬಯಸಿದರೆ ಅವರು ನಟ ಅಥವಾ ನಿರ್ದೇಶಕರನ್ನು ಸಂತೋಷಪಡಿಸಬೇಕಾಗುತ್ತದೆ” ಎಂದು ಕಂಗನಾ ಹೇಳಿದ್ದಾರೆ. ಇದನ್ನೂ ಓದಿ: ಕಚೇರಿ ಹಾನಿ: 2 ಕೋಟಿ ರೂ. ಪರಿಹಾರ ಕೇಳಿದ ಕಂಗನಾ

    ಅಷ್ಟೇ ಅಲ್ಲದೇ, “ಅನೇಕ ನಟರು, ಸೂಪರ್‌ಸ್ಟಾರ್‌ಗಳು, ಎ ಲಿಸ್ಟ್ ನಟರು, ಬಿಗ್ ಸೂಪರ್‌ಸ್ಟಾರ್‌ಗಳು ಮತ್ತು ನಿರ್ದೇಶಕರು ಚಿತ್ರದ ಸೆಟ್‍ಗಳಲ್ಲಿ ನಟಿಯರನ್ನು ಹೆಂಡತಿಯಂತೆ ನೋಡಲು ಬಯಸುತ್ತಾರೆ. ಆದ್ದರಿಂದ ನಾವು ಅವರ ಪತ್ನಿಯರಂತೆ ಸೆಟ್‍ನಲ್ಲಿ ವರ್ತಿಸಬೇಕು. ಆಗ ಮುಂದಿನ ಸಿನಿಮಾದಲ್ಲಿ ಅವಕಾಶ ಸಿಗುತ್ತದೆ. ಇದು ಉದ್ಯಮದ ಸತ್ಯ ಎಂದು ನಟಿ ಕಂಗನಾ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ.

    ಕಳೆದ ಸೆಪ್ಟೆಂಬರ್ 9 ರಂದು ಮುಂಬೈ ಮುನ್ಸಿಪಲ್ ಕಾರ್ಪೊರೇಷನ್(ಬಿಎಂಸಿ) ಕಂಗನಾ ಅವರ ಮುಂಬೈನ ಬಾಂದ್ರಾದಲ್ಲಿರುವ ಪಾಲಿ ಹಿಲ್ ಬಂಗಲೆಯನ್ನು ಅಕ್ರಮ ಕಟ್ಟಡ ಎಂದು ಪರಿಗಣಿಸಿ ತೆರವು ಕಾರ್ಯಾಚರಣೆ ಮಾಡಿತ್ತು. ಬಿಎಂಸಿ ಅಧಿಕಾರಿಗಳ ಕ್ರಮದ ವಿರುದ್ಧ ಕೋರ್ಟ್ ಮೆಟ್ಟಿಲೇರಿರುವ ಕಂಗನಾ ಅವರು, ಬಿಎಂಸಿ ಈಗಾಗಲೇ ಬಂಗಲೆಗೆ ಶೇ.40ರಷ್ಟು ಹಾನಿ ಮಾಡಿದೆ. ಅಲ್ಲದೆ ಬಂಗಲೆಯ ಒಳಗಡೆ ಇದ್ದ ಕೆಲವೊಂದು ಅಪರೂಪದ ಕಲಾತ್ಮಕ ವಸ್ತುಗಳನ್ನು ಕೂಡ ನಾಶಪಡಿಸಿದೆ. ಹೀಗಾಗಿ ಬಿಎಂಸಿ ತನಗೆ 2 ಕೋಟಿ ರೂ. ಪರಿಹಾರ ನೀಡಬೇಕು ಎಂದು ಮುಂಬೈ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿ ಮನವಿ ಮಾಡಿದ್ದಾರೆ.

    ಇದಾದ ನಂತರ ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗಳು ತಮ್ಮ ಕಚೇರಿಯನ್ನು ಭಾಗಶಃ ಧ್ವಂಸ ಮಾಡಿದ್ದು, ಸದ್ಯ ಕಚೇರಿಯ ಸ್ಥಿತಿ ಹೇಗಿದೆ ಎಂಬ ಫೋಟೋಗಳನ್ನು ನಟಿ ಕಂಗನಾ ರಣಾವತ್ ಹಂಚಿಕೊಂಡಿದ್ದರು. “ಇದು ನನ್ನ ಕನಸು, ಆತ್ಮಗೌರವ ಹಾಗೂ ಭವಿಷ್ಯದ ಮೇಲೆ ನಡೆಸಿರುವ ಅತ್ಯಾಚಾರ ಎಂದು ಟ್ವೀಟ್ ಮಾಡುವ ಮೂಲಕ ಕಂಗನಾ, ಕಚೇರಿಯ ವಸ್ತುಸ್ಥಿತಿಯನ್ನು ತೆರೆದಿಡುವ ಫೋಟೋಗಳನ್ನು ಹಂಚಿಕೊಂಡಿದ್ದರು.

  • ಗುಪ್ತಾಂಗ ತೋರಿಸಿದ್ರೆ ಚಾನ್ಸ್ ಕೊಡ್ತೀನಿ- ನಿರ್ಮಾಪಕನ ಕಥೆ ಬಿಚ್ಚಿಟ್ಟ ಆಯುಷ್ಮಾನ್

    ಗುಪ್ತಾಂಗ ತೋರಿಸಿದ್ರೆ ಚಾನ್ಸ್ ಕೊಡ್ತೀನಿ- ನಿರ್ಮಾಪಕನ ಕಥೆ ಬಿಚ್ಚಿಟ್ಟ ಆಯುಷ್ಮಾನ್

    ಮುಂಬೈ: ಬಣ್ಣದ ಲೋಕದಲ್ಲಿ ಕಾಸ್ಟಿಂಗ್ ಕೌಚ್ ಬಹುತೇಕರನ್ನು ಕಾಡಿದೆ. ಕೆಲವರು ಬಹಿರಂಗವಾಗಿ ಹೇಳಿಕೊಂಡ್ರೆ ಹಲವರು ವಿವಾದಕ್ಕೆ ಗುರಿಯಾಗೋದ ಬೇಡ ಅಂತ ಸುಮ್ಮನಾಗುತ್ತಾರೆ. ಇದೀಗ ಬಾಲಿವುಡ್ ನಟ ಆಯುಷ್ಮಾನ್ ಖುರಾನ ಆರಂಭದಲ್ಲಿ ತಮಗಾದ ಕಾಸ್ಟಿಂಗ್ ಕೌಚ್ ಅನುಭವವನ್ನು ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಇದೀಗ ಸಂದರ್ಶನದ ಕೆಲ ಲೇಖನಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

    ನಿರೂಪಕನಾಗಿ ವೃತ್ತಿ ಜೀವನ ಆರಂಭಿಸಿದ ಆಯುಷ್ಮಾನ್, ರೇಡಿಯೋ ಜಾಕಿಯಾಗಿಯೂ ಕೆಲಸ ಮಾಡಿದ್ದಾರೆ. ತದನಂತರ ಐಪಿಎಲ್ ಕಾರ್ಯಕ್ರಮದ ನಿರೂಪಕರಾಗಿ ಚಿರಪರಿಚಿತರಾದ ಆಯುಷ್ಮಾನ್ ಅವರನ್ನು ಬಣ್ಣದ ಲೋಕ ಸೆಳೆದಿತ್ತು. ಕಿರುತೆರೆಯಲ್ಲಿ ಹೆಸರು ಮಾಡಿದ್ದ ಆಯುಷ್ಮಾನ್ ಕೆಲಸದ ನಡುವೆಯೂ ಸಿನಿಮಾ ಆಡಿಷನ್ ಗಳಿಗೆ ಹಾಜರಾಗುತ್ತಿದ್ದರು. ಒಂದು ಬಾರಿ ಆಡಿಷನ್ ಗೆ ತೆರಳಿದ್ದಾಗ ನಿರ್ಮಾಪಕರೊಬ್ಬರು ಸಿನಿಮಾದಲ್ಲಿ ಅವಕಾಶ ನೀಡುವ ಕುರಿತು ಭರವಸೆ ನೀಡಿದ್ದರು.

    ನನಗೆ ನಿನ್ನ ಗುಪ್ತಾಂಗ ತೋರಿಸಿದ್ರೆ ಸಿನಿಮಾದಲ್ಲಿ ಪ್ರಮುಖ ಪಾತ್ರ ನಿನ್ನದಾಗಲಿದೆ ಅಂತ ಹೇಳಿದ್ರು. ಕೂಡಲೇ ನಾನು, ಏನು ಮಾತನಾಡುತ್ತಿದ್ದೀರಿ ಎಂದು ನಿಮಗೆ ಗೊತ್ತಿದೆಯಾ? ನಾನು ಸಲಿಂಗಿ ಅಲ್ಲ ಎಂದು ಹೇಳಿ ಹೊರಬಂದೆ ಅಂತ ಆಯುಷ್ಮಾನ್ ಸಂದರ್ಶನದಲ್ಲಿ ಹೇಳಿದ್ದರು. ಆದ್ರೆ ಸಂದರ್ಶನದಲ್ಲಿ ನಿರ್ಮಾಪಕನ ಹೆಸರನ್ನು ಆಯುಷ್ಮಾನ್ ಬಹಿರಂಗಗೊಳಿಸಲು ಇಷ್ಟಪಡಲಿಲ್ಲ.

    ಆಡಿಷನ್‍ಗೆ ಹೋದಾಗ ಸೋಲೋ ಟೆಸ್ಟ್ ಮಾಡಬೇಕೆಂದು ಹೇಳುವವರು. ದಿಢೀರ್ ಅಂತ ನನ್ನ ನಂಬರ್ 50ಕ್ಕೆ ಬರುತ್ತಿತ್ತು. ಯಾಕೆ ಹೀಗೆ ಅಂತ ಪ್ರಶ್ನಿಸಿದ್ರೆ ನನ್ನನ್ನು ಹೊರಗೆ ಕಳುಹಿಸಲಾಗುತ್ತಿತ್ತು. ಇಂತಹ ತಿರಸ್ಕಾರಗಳನ್ನು ನನ್ನ ತಾಳ್ಮೆಯನ್ನ ಹೆಚ್ಚಿಸಿತು ಎಂದು ಹೇಳಿದ್ದಾರೆ.

  • ಅಡ್ಜಸ್ಟ್ ಮಾಡ್ಕೊಳ್ಳಿ: ಕಾಸ್ಟಿಂಗ್ ಕೌಚ್ ಕಹಿ ಅನುಭವ ಬಿಚ್ಚಿಟ್ಟ ನಟಿ

    ಅಡ್ಜಸ್ಟ್ ಮಾಡ್ಕೊಳ್ಳಿ: ಕಾಸ್ಟಿಂಗ್ ಕೌಚ್ ಕಹಿ ಅನುಭವ ಬಿಚ್ಚಿಟ್ಟ ನಟಿ

    ಹೈದರಾಬಾದ್: ಬಹುತೇಕ ಬಾಲಿವುಡ್ ನಟಿಯರು ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ. ಸಿನಿಮಾ ಉದ್ಯಮದಲ್ಲಿ ತಮಗಾದ ಕರಾಳ ಅನುಭವಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಇದೀಗ ತಮಿಳು ಮತ್ತು ತೆಲಗು ನಟಿ ವಾಣಿ ಭಜನ್ ಆರಂಭದಲ್ಲಿ ತಾವು ಎದುರಿಸಿದ್ದ ದಿನಗಳನ್ನ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

    ಕೆಲವರು ಅಡ್ಜಸ್ಟ್ ಬಗ್ಗೆ ಮಾತನಾಡುತ್ತಿದ್ದರು. ಆದರೆ ಯಾರು ನನ್ನ ಜೊತೆ ಈ ಕುರಿತು ನೇರವಾಗಿ ಮಾತನಾಡಿಲ್ಲ. ಮ್ಯಾನೇಜರ್ ಮತ್ತು ನಿರ್ದೇಶಕರ ಮೂಲಕ ಮಾತುಗಳನ್ನಾಡಿದ್ದಾರೆ. ಬಹುತೇಕರು ಮ್ಯಾನೇಜರ್ ಮೂಲಕ ನನ್ನನ್ನು ಸಂಪರ್ಕಿಸುವ ಪ್ರಯತ್ನ ಸಹ ನಡೆಸಿದ್ದರು. ಫೋನ್ ಕರೆಗಳ ಬಗ್ಗೆ ನಾನು ಧ್ಯಾನ ನೀಡಲಿಲ್ಲ ಎಂದು ಹೇಳಿದ್ದಾರೆ.

    ಈ ರೀತಿಯ ಕೆಟ್ಟ ಅನುಭವಗಳಿಂದಾಗಿ ಸಿನಿಮಾಗಳಲ್ಲಿ ನಟಿಸಲಿಲ್ಲ. ಕಿರುತೆರೆಯಲ್ಲಿ ನನಗೆ ಸ್ಥಾನವಿದ್ದರಿಂದ ದೊಡ್ಡ ನಟಿಯಾಗಬೇಕೆಂಬ ಆಸೆ ನನಗಿರಲಿಲ್ಲ. ಇಂತಹ ಅಡ್ಜಸ್ಟ್ ಗಳಿಂದ ದೊಡ್ಡ ನಟಿಯಾಗಲು ಸಾಧ್ಯ. ಆದ್ರೆ ನಾನು ಆ ದಾರಿಯನ್ನು ಆಯ್ಕೆ ಮಾಡಿಕೊಳ್ಳಲಿಲ್ಲ. ಇನ್ನು ದೊಡ್ಡ ಸ್ಟಾರ್ ನಟಿಯರೆಲ್ಲ ಇದೇ ರೀತಿಯಲ್ಲಿ ಉನ್ನತ ಸ್ಥಾನ ತಲುಪಿದ್ದಾರೆ ಎಂದು ನಾನು ಹೇಳುತ್ತಿಲ್ಲ. ಇಂತಹ ಜನರ ಜೊತೆ ಸಂಘರ್ಷ ನಡೆಸಿ, ಸತತ ಪರಿಶ್ರಮದಿಂದಾಗಿ ಟಾಪ್ ಸ್ಥಾನಲ್ಲಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಿದರು.

    ‘ಓ ಮೈ ಕಡವುಲೆ’ ತಮಿಳು ಸಿನಿಮಾದಲ್ಲಿ ವಾಣಿ ಭಜನ್ ಕೆಲಸ ಮಾಡಿದ್ದಾರೆ. ‘ದೇವಕಮಲ್’ ಧಾರಾವಾಹಿಯಲ್ಲಿಯೂ ಕಾಣಿಸಿಕೊಂಡಿರುವ ವಾಣಿ, ಸದ್ಯ ಫ್ಯಾಶನ್ ಇಂಡಸ್ಟ್ರಿಯಲ್ಲಿ ಬ್ಯುಸಿಯಾಗಿದ್ದಾರೆ.

  • ಆಡಿಶನ್‍ಗೆ ಕರೆದು ಅತ್ಯಾಚಾರಕ್ಕೆ ಯತ್ನಿಸಿದ್ದ- ಕಹಿ ಅನುಭವ ಬಿಚ್ಚಿಟ್ಟ ನಟಿ

    ಆಡಿಶನ್‍ಗೆ ಕರೆದು ಅತ್ಯಾಚಾರಕ್ಕೆ ಯತ್ನಿಸಿದ್ದ- ಕಹಿ ಅನುಭವ ಬಿಚ್ಚಿಟ್ಟ ನಟಿ

    – ಭೇಟಿಯಾದ ದಿನವೇ ಅಳತೆ ಕೇಳಿದ್ದ

    ಹೈದರಾಬಾದ್: ಮೀಟೂ ಅಭಿಯಾನ ಸಿನಿಮಾ ರಂಗದಲ್ಲಿ ಭಾರೀ ಸದ್ದು ಮಾಡಿತ್ತು. ಈ ಮೂಲಕ ಅನೇಕ ನಟಿಯರು ತಮಗಾದ ಕಹಿ ಅನುಭವಗಳನ್ನು ಹೇಳಿಕೊಂಡಿದ್ದರು. ಇದೀಗ ಖ್ಯಾತ ನಟಿಯೊಬ್ಬಳು ತಮಗಾದ ಕಾಸ್ಟಿಂಗ್ ಕೌಚ್ ಬಗ್ಗೆ ಮೊದಲ ಬಾರಿಗೆ ಮಾತನಾಡಿದ್ದಾರೆ.

    ನಟಿ ರಶ್ಮಿ ದೇಸಾಯಿ ಇತ್ತೀಚೆಗಷ್ಟೆ ಸಂದರ್ಶನವೊಂದರಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ. ರಶ್ಮಿಗೆ ಸಿನಿಮಾದಲ್ಲಿ ಅಭಿನಯಿಸಬೇಕೆಂದು ಬಾಲ್ಯದಲ್ಲಿಯೇ ಕನಸುಕಂಡಿದ್ದರು. ಆ ಕನಸನ್ನು ನನಸು ಮಾಡಿಕೊಳ್ಳಲು ತಮ್ಮ 16ನೇ ವಯಸ್ಸಿಯಲ್ಲೇ ಸಿನಿಮಾದಲ್ಲಿ ನಟಿಸುವ ಅವಕಾಶಕ್ಕಾಗಿ ತಮ್ಮ ಪ್ರಯತ್ನ ಶುರು ಮಾಡಿದ್ದರು. ಈ ವೇಳೆ ನಡೆದ ಘಟನೆಯೊಂದನ್ನು ಹೇಳಿಕೊಂಡಿದ್ದಾರೆ.

    ನಾನು ಚಿತ್ರಗಳಲ್ಲಿ ನಟಿಸಲು ಅವಕಾಶಕ್ಕಾಗಿ ಹುಡುಕಾಡುತ್ತಿದ್ದೆ. ಆಗ ನನಗೆ ಸೂರಜ್ ಎಂಬಾತನ ಪರಿಚಯವಾಗಿತ್ತು. ಆತ ತನಗೆ ಯಶ್ ರಾಜ್ ಫಿಲ್ಮ್, ಬಾಲಾಜಿ ಫಿಲ್ಮ್ ನವರು ಗೊತ್ತು, ನಿನಗೆ ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ಹೇಳಿದ್ದ. ಹೀಗಾಗಿ ನಾನು ಆತನನ್ನು ನಂಬಿ ಪ್ರತಿ ದಿನ ಭೇಟಿ ಮಾಡುತ್ತಿದ್ದೆ. ಅಲ್ಲದೇ ನಾನು ಆತನನ್ನು ಭೇಟಿ ಆದ ದಿನವೇ ನನ್ನ ದೇಹದ ಅಳತೆ ಕೇಳಿದ್ದನು. ನಾನು ಗೊತ್ತಿಲ್ಲ ಅಂತ ಹೇಳಿದ್ದೆ ಎಂದು ತಿಳಿಸಿದರು.

    ಒಂದು ದಿನ ಆಡಿಶನ್‍ಗೆ ಬಾ ಎಂದು ಹೋಟೆಲ್‍ಗೆ ಕರೆಸಿದ್ದನು. ನಾನು ಖುಷಿಯಿಂದ ಆಡಿಶನ್ ಕೊಡಲು ಹೋದೆ. ಆದರೆ ಅಲ್ಲಿ ಆತ ಹೋಟೆಲ್ ರೂಮಿನಲ್ಲಿ ನನಗೆ ಮದ್ಯಪಾನ ಮಾಡಿಲು ಪ್ರಯತ್ನಿಸಿದ್ದು, ನಾನು ಕುಡಿಯಲು ನಿರಾಕರಿಸಿದೆ. ನಂತರ ಆತ ನನ್ನ ಜೊತೆ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದ. ಆಗ ನನಗೆ ಮದ್ಯಪಾನ ಮಾಡಿಸಿ ನನ್ನ ಮೇಲೆ ಅತ್ಯಾಚಾರ ಮಾಡುವ ಉದ್ದೇಶ ಹೊಂದಿದ್ದನು ಎಂದು ತಿಳಿಯಿತು. ತಕ್ಷಣ ನಾನು ಅಲ್ಲಿಂದ ಹೊರಗೆ ಬಂದು ನಡೆದ ಘಟನೆಯ ಬಗ್ಗೆ ತಾಯಿಗೆ ತಿಳಿಸಿದೆ ಎಂದರು.

    ಮಾರನೇ ದಿನ ಅಮ್ಮ ಆತನಿಗೆ ಕಪಾಳಕ್ಕೆ ಹೊಡೆದು ಎಚ್ಚರಿಕೆ ನೀಡಿದ್ದರು. ಅಂದಿನಿಂದ ನಾನು ಆತನನ್ನು ನೋಡಿಯೇ ಇಲ್ಲ ಎಂದು ಸಂದರ್ಶನದಲ್ಲಿ ತಮ್ಮ ಕಹಿ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ರಶ್ಮಿ ದೇಸಾಯಿ ಬಾಲಿವುಡ್‍ನ ಕೆಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಜೊತೆಗೆ ಕಿರುತೆರೆ ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಅಷ್ಟೇ ಅಲ್ಲದೇ ಬಿಗ್‍ಬಾಸ್ ಶೋನಲ್ಲಿಯೂ ಸಹ ಕಾಣಿಸಿಕೊಂಡಿದ್ದಾರೆ.

  • ನಿರ್ದೇಶಕರು ನನ್ನನ್ನು ರೂಮಿಗೆ ಕರೆದು ಬಾಗಿಲು ಹಾಕ್ತಿದ್ರು: ರಾಖಿ ಸಾವಂತ್

    ನಿರ್ದೇಶಕರು ನನ್ನನ್ನು ರೂಮಿಗೆ ಕರೆದು ಬಾಗಿಲು ಹಾಕ್ತಿದ್ರು: ರಾಖಿ ಸಾವಂತ್

    ಮುಂಬೈ: ಬಾಲಿವುಡ್ ಡ್ರಾಮಾ ಕ್ವೀನ್ ರಾಖಿ ಸಾವಂತ್ ಇತ್ತೀಚೆಗೆ ತನ್ನ 41ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾಳೆ. ಈ ವೇಳೆ ಆಕೆ ತನಗಾದ ಕಾಸ್ಟಿಂಗ್ ಕೌಚ್ ಅನುಭವನ್ನು ಹಂಚಿಕೊಂಡಿದ್ದಾಳೆ.

    ರಾಖಿ ವೆಬ್‍ಸೈಟ್‍ಗೆ ಸಂದರ್ಶನ ನೀಡಿದ್ದು, ಈ ವೇಳೆ ಆಕೆ, ಚಿತ್ರದ ನಿರ್ದೇಶಕರು, ನಿರ್ಮಾಪಕರು ಕೆಟ್ಟ ಉದ್ದೇಶದಿಂದ ನನಗೆ ಕರೆ ಮಾಡುತ್ತಿದ್ದರು. ನಾನು ಇಲ್ಲಿಗೆ ಬಂದ ನಂತರ ಎಲ್ಲವನ್ನು ಸಹಿಸಿಕೊಳ್ಳುತ್ತಿದೆ. ಮೊದಲು ನನ್ನ ಹೆಸರು ನೀರೂ ಭೇದಾ ಆಗಿತ್ತು. ನಾನು ಆಡಿಶನ್‍ಗೆ ಹೋಗುವಾಗ ನಿರ್ದೇಶಕರು ಹಾಗೂ ನಿರ್ಮಾಪಕರು ನನಗೆ ಟ್ಯಾಲೆಂಟ್ ತೋರಿಸಿ ಎಂದು ಹೇಳುತ್ತಿದ್ದರು. ಆಗ ನನಗೆ ಅವರು ಯಾವ ಟ್ಯಾಲೆಂಟ್ ಬಗ್ಗೆ ಮಾತನಾಡುತ್ತಿದ್ದಾರೆ ಎಂಬುದು ತಿಳಿದಿರಲಿಲ್ಲ ಎಂದು ಹೇಳಿದ್ದಾಳೆ.

    ಆಡಿಶನ್‍ಗೆ ನಾನು ನನ್ನ ಫೋಟೋ ತೆಗೆದುಕೊಂಡು ಹೋಗುತ್ತಿದೆ. ಆಗ ಅವರು ನನಗೆ ರೂಮಿನೊಳಗೆ ಕರೆದು ಬಾಗಿಲು ಮುಚ್ಚುತ್ತಿದ್ದರು. ನಾನು ಕಷ್ಟಪಟ್ಟು ಅಲ್ಲಿಂದ ಹೊರಗೆ ಬರುತ್ತಿದೆ. ನಾನು ತುಂಬಾ ಬಡತನವನ್ನು ಅನುಭವಿಸಿದ್ದೇನೆ. ನನ್ನ ತಾಯಿ ಆಸ್ಪತ್ರೆಯಲ್ಲಿ ಕಸ ಎತ್ತುವ ಕೆಲಸ ಮಾಡುತ್ತಿದ್ದರು. ಆಗ ನಮ್ಮ ಬಳಿ ಊಟ ಮಾಡಲು ಹಣ ಸಹ ಇರುತ್ತಿರಲಿಲ್ಲ. ನಾನು ಹಾಗೂ ನನ್ನ ತಾಯಿ ಉಳಿದ ಊಟವನ್ನು ಮಾಡುತ್ತಿದ್ದೇವು ಎಂದು ರಾಖಿ ತನ್ನ ಹಳೆಯ ದಿನಗಳನ್ನು ನೆನಪಿಸಿಕೊಂಡಳು.

    ಜುಲೈ 28ರಂದು ರಾಖಿ ಮುಂಬೈನ ಜೆ.ಡಬ್ಲೂ ಮ್ಯಾರಿಯಟ್ ಹೋಟೆಲ್‍ನಲ್ಲಿ ಗೌಪ್ಯವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಳು. ರಾಖಿ ಇನ್‍ಸ್ಟಾಗ್ರಾಂನಲ್ಲಿ ಸಕ್ರಿಯಳಾಗಿದ್ದು, ಯಾವಾಗಲೂ ತನ್ನ ಪತಿ ರಿತೇಶ್ ಬಗ್ಗೆ ಮಾತನಾಡುತ್ತಿರುತ್ತಾಳೆ. ಆದರೆ ಈವರೆಗೂ ರಾಖಿ ತನ್ನ ಪತಿಯ ಫೋಟೋವನ್ನು ರಿವೀಲ್ ಮಾಡಿಲ್ಲ.

  • ‘ನೀನು ಒಬ್ಬಳೇ ಬಾ’ – ನಟನ ವಿರುದ್ಧ ಸೂರ್ಯವಂಶ ನಟಿಯಿಂದ ಮೀಟೂ ಬಾಂಬ್

    ‘ನೀನು ಒಬ್ಬಳೇ ಬಾ’ – ನಟನ ವಿರುದ್ಧ ಸೂರ್ಯವಂಶ ನಟಿಯಿಂದ ಮೀಟೂ ಬಾಂಬ್

    ಮುಂಬೈ: ಕನ್ನಡ ಕವಚ ಚಿತ್ರದಲ್ಲಿ ಪೊಲೀಸ್ ಆಫೀಸರ್ ಪಾತ್ರದಲ್ಲಿ ಅಭಿನಯಿಸಿರುವ ಬಾಲಿವುಡ್ ನಟಿ ಇಶಾ ಕೊಪ್ಪಿಕರ್ ಅವರು ತಮಗಾದ ಕಾಸ್ಟಿಂಗ್ ಕೌಚ್ ಅನುಭವವನ್ನು ಹಂಚಿಕೊಂಡಿದ್ದಾರೆ.

    ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ, ನನಗೂ ಬಾಲಿವುಡ್‌ನಲ್ಲಿ ಕಾಸ್ಟಿಂಗ್ ಕೌಚ್ ಅನುಭವವಾಗಿದೆ. ನಾನು ಒಬ್ಬರು ನಿರ್ಮಾಪಕರು ಹೇಳಿದರು ಎಂದು ಒಬ್ಬ ನಟನನ್ನು ಭೇಟಿಯಾಗಲು ಹೋಗಿದ್ದೆ. ಅಲ್ಲಿ ಆತ ನೀನು ಒಬ್ಬಳೇ ಬಾ ಎಂದು ಕರೆದಿದ್ದರು ಎಂದು ಹೇಳಿದ್ದಾರೆ.

    ಈ ಹಿಂದೆ ನಿರ್ಮಾಪಕರೊಬ್ಬರು ನಿನಗೆ ಒಂದು ಚಿತ್ರದಲ್ಲೇ ಅವಕಾಶ ನೀಡುತ್ತೇನೆ ಎಂದು ಹೇಳಿದ್ದರು. ನಾನು ಒಪ್ಪಿದ್ದೆ ಅವರು ಹೇಳಿದಂತೆ ಒಬ್ಬ ನಟನನ್ನು ಭೇಟಿಯಾಗಲು ಹೋಗಿದ್ದೆ. ಆಗ ಆ ನಟ ನೀನು ಯಾರ ಜೊತೆ ಬಂದಿದ್ದೀಯಾ ಎಂದು ಕೇಳಿದರು. ನಾನು ನನ್ನ ಡ್ರೈವರ್ ಜೊತೆ ಬಂದಿದ್ದೇನೆ ಎಂದು ಹೇಳಿದೆ. ಅದಕ್ಕೆ ಆತ ನಾನು 15, 16 ವರ್ಷದವನಲ್ಲ. ನಾಳೆ ಬರುವಾಗ ಒಬ್ಬಳೇ ಬಾ ಎಂದು ಕರೆದಿದ್ದರು. ಆದರೆ ನಾನು ನಾಳೆ ಫ್ರೀ ಇಲ್ಲ ಎಂದು ಹೇಳಿ ಬಂದೆ ಎಂದು ಹೇಳಿದ್ದಾರೆ.

    ವಾಪಸ್ ಬಂದ ನಂತರ ನಾನು ನಿರ್ಮಾಪಕರಿಗೆ ಕರೆ ಮಾಡಿ ನೀವು ನನ್ನ ಪ್ರತಿಭೆ ನೋಡಿ ಸಿನಿಮಾದಲ್ಲಿ ಅವಕಾಶ ಕೊಡಿ. ಅದನ್ನು ಬಿಟ್ಟು ಬೇರೆ ರೀತಿಯಲ್ಲಿ ನನಗೆ ಅವಕಾಶ ನೀಡುವುದು ಬೇಡ ಎಂದು ಹೇಳಿದೆ. ಆ ನಂತರ ನಾನು ಅ ಚಿತ್ರದಲ್ಲಿ ಅಭಿನಯ ಮಾಡಲಿಲ್ಲ. ಆ ನಟನ ಜೊತೆಯೂ ಮುಂದೆ ಯಾವ ಚಿತ್ರದಲ್ಲೂ ನಟಿಸಲಿಲ್ಲ ಎಂದು ಹೇಳಿದ್ದಾರೆ.

    ಬಹುಭಾಷಾ ನಟಿಯಾಗಿರುವ ಇಶಾ ಕೊಪ್ಪಿಕರ್ ಕನ್ನಡದಲ್ಲೂ ಹಲವಾರು ಚಿತ್ರಗಳನ್ನು ಮಾಡಿದ್ದಾರೆ. ಡಾ ವಿಷ್ಣುವರ್ದನ್ ಅಭಿನಯದ ಸೂಪರ್ ಹಿಟ್ ಚಿತ್ರ ಸೂರ್ಯವಂಶ, ಡಾ. ರವಿಚಂದ್ರನ್ ಅಭಿನಯದ ಬ್ಲಾಕ್ ಬಾಸ್ಟರ್ ಚಿತ್ರ ಒ ನನ್ನ ನಲ್ಲೇ ಚಿತ್ರದಲ್ಲಿ ನಟಿಸಿದ್ದಾರೆ. ಈಗ ಇತ್ತೀಚಿಗೆ ಬಿಡುಗಡೆಯಾದ ಡಾ ಶಿವರಾಜ್ ಕುಮಾರ್ ಅಭಿನಯದ ಕವಚ ಸಿನಿಮಾದಲ್ಲಿ ಪೊಲೀಸ್ ಆಫೀಸರ್ ಪಾತ್ರದಲ್ಲಿ ನಟಿಸಿದ್ದಾರೆ.

    2000 ರ ಫಿಜಾ ಚಿತ್ರದೊಂದಿಗೆ ಬಾಲಿವುಡ್‌ನಲ್ಲಿ ಪಾದಾರ್ಪಣೆ ಮಾಡುವ ಮೊದಲು ಇಶಾ ಕೊಪ್ಪಿಕರ್ ಹಲವಾರು ಪ್ರಾದೇಶಿಕ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ದರ್ನಾ ಮನ ಹೈ, ಹಮ್ ತುಮ್ ಮತ್ತು 36 ಚೀನಾ ಟೌನ್ ನಂತಹ ಚಲನಚಿತ್ರಗಳಲ್ಲಿ ಸಣ್ಣ ಪಾತ್ರಗಳನ್ನು ಮಾಡಿದ್ದಾರೆ. ಏಕ್ ವಿವಾಹ್ ಐಸಾ ಭೀ, ಗರ್ಲ್ ಫ್ರೆಂಡ್ ಮತ್ತು ಕೃಷ್ಣ ಕಾಟೇಜ್ ಮುಂತಾದ ಚಿತ್ರಗಳಲ್ಲಿ ಮಹಿಳಾ ನಾಯಕಿಯಾಗಿ ನಟಿಸಿದ್ದಾರೆ.

  • ನಿರ್ದೇಶಕ ನನ್ನ ಎದೆಯ ಭಾಗ, ತೊಡೆ ನೋಡಬೇಕು ಎಂದಿದ್ದ: ನಟಿ ಸುರ್ವೀನ್

    ನಿರ್ದೇಶಕ ನನ್ನ ಎದೆಯ ಭಾಗ, ತೊಡೆ ನೋಡಬೇಕು ಎಂದಿದ್ದ: ನಟಿ ಸುರ್ವೀನ್

    ಮುಂಬೈ: ನಿರ್ದೇಶಕನೊಬ್ಬ ನನ್ನ ಎದೆಯ ಭಾಗ ಹಾಗೂ ತೊಡೆ ನೋಡಬೇಕೆಂದು ಹೇಳಿದ್ದನು ಅಂತ ಬಾಲಿವುಡ್ ನಟಿ ಸುರ್ವೀನ್ ಚಾವ್ಲಾ ಅವರು ತಮಗಾದ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ.

    ನಾನು 5 ಬಾರಿ ಕಾಸ್ಟಿಂಗ್ ಕೌಚ್‍ಗೆ ಒಳಗಾಗಿದ್ದೇನೆ. ಮೂರು ಬಾರಿ ಸೌತ್ ಫಿಲಂ ಇಂಡಸ್ಟ್ರಿಯಲ್ಲಿ ಹಾಗೂ ಎರಡು ಬಾರಿ ಬಾಲಿವುಡ್‍ನಲ್ಲಿ ನನಗೆ ಕಾಸ್ಟಿಂಗ್ ಕೌಚ್ ಅನುಭವವಾಗಿದೆ. ನಿರ್ದೇಶಕನೊಬ್ಬ ನನ್ನ ಎದೆಯ ಭಾಗವನ್ನು ನೋಡಬೇಕು ಎಂದು ಹೇಳಿದ್ದನು. ಇನ್ನುಳಿದ ನಿರ್ದೇಶಕರು ನಿಮ್ಮ ತೊಡೆಯನ್ನು ನೋಡಬೇಕು ಎಂದು ಹೇಳಿದ್ದರು ಎಂದು ನಟಿ ಸುರ್ವೀನ್ ತಮಗಾದ ಅನುಭವವನ್ನು ಹಂಚಿಕೊಂಡಿದ್ದಾರೆ.

    ಮೊದಲು ನಾನು ಆಡಿಶನ್‍ಗೆ ಹೋಗಿದ್ದಾಗ ವ್ಯಕ್ತಿಯೊಬ್ಬರು ನೀನು ತುಂಬಾ ದಪ್ಪ ಇದ್ದೀಯಾ ಎಂದು ಹೇಳಿದ್ದರು. ಆದರೆ ನಾನು ಆಗ ಕೇವಲ 56 ಕೆಜಿ ತೂಕ ಇದ್ದೆ. ಆ ವ್ಯಕ್ತಿ ದಪ್ಪ ಎಂದು ಹೇಳಿದಾಗ ಆತನಿಗೆ ಕನ್ನಡಕದ ಅವಶ್ಯಕತೆ ಇದೆ ಎಂದು ನನಗೆ ಎನಿಸಿತ್ತು ಎಂದು ಸುರ್ವೀನ್ ಹೇಳಿದ್ದಾರೆ.

    ಸುರ್ವೀನ್ ‘ಕಹಿ ತೋ ಹೋಗಾ’ ಟಿವಿ ಶೋ ಮೂಲಕ ನಟನೆಯನ್ನು ಶುರು ಮಾಡಿದ್ದರು. ಇದಾದ ಬಳಿಕ ಅವರು ಕನ್ನಡದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಅವರ ಜೊತೆ ‘ಪರಮೇಶ ಪಾನ್‍ವಾಲಾ’ ಚಿತ್ರದಲ್ಲಿ ನಟಿಸಿದ್ದರು. ಅಲ್ಲದೆ ತಮಿಳು ಹಾಗೂ ತೆಲುಗು ಚಿತ್ರದಲ್ಲಿ ನಟಿಸಿದ ಬಳಿಕ ಬಾಲಿವುಡ್‍ಗೆ ಎಂಟ್ರಿ ಕೊಟ್ಟಿದ್ದರು.