ಹೇಮಾ ಸಮಿತಿ ವರದಿ ಹೊರಬಿದ್ದ ಬಳಿಕ ಮಾಲಿವುಡ್ ಇಂಡಸ್ಟ್ರಿಯಲ್ಲಿ ಅಲ್ಲೋಲ ಕಲ್ಲೋಲ ಆಗಿದೆ. ಇದೇ ತರಹ ಸಮಿತಿ ಮಹಿಳೆಯರ ಸುರಕ್ಷತೆಗಾಗಿ ಎಲ್ಲಾ ಭಾಷೆಯ ಚಿತ್ರರಂಗದಲ್ಲೂ ಇರಬೇಕು ಎಂದು ಅನೇಕರು ಪಟ್ಟು ಹಿಡಿದಿದ್ದಾರೆ. ಇದರ ನಡುವೆ ಕಾಸ್ಟಿಂಗ್ ಕೌಚ್ ಬಗ್ಗೆ ಬಾಲಿವುಡ್ ನಟ ಅನನ್ಯಾ ಪಾಂಡೆ (Ananya Panday) ಮಾತನಾಡಿದ್ದಾರೆ. ನಟಿಯರಿಗೆ ಸೆಫ್ಟಿ ಬೇಕು ಎಂದಿದ್ದಾರೆ. ಇದನ್ನು ಓದಿ:ಹಾಲಿವುಡ್ ಅಂಗಳದಲ್ಲಿ ಕಾಂತಾರ ಬೆಡಗಿ ಸಖತ್ ಜಾಲಿ

ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಿರುವ ನಟಿ ಕಾಸ್ಟಿಂಗ್ ಕೌಚ್ ಕುರಿತು ಸಮಾರಂಭವೊಂದರಲ್ಲಿ ಮಾತನಾಡಿ, ಸಿನಿಮಾರಂಗದಲ್ಲಿ ಕೆಲಸ ಮಾಡುವ ಮಹಿಳೆಯರಿಗಾಗಿಯೇ ಹೇಮಾ ಸಮಿತಿಯಂತಹ ಸಂಸ್ಥೆಗಳು ಬರಬೇಕು ಎಂದಿದ್ದಾರೆ. ಪ್ರತಿ ಉದ್ಯಮದಲ್ಲೂ ಹೇಮಾ ಸಮಿತಿಯಂತಹ ಸಮಿತಿ ಇರುವುದು ಬಹಳ ಮುಖ್ಯ ಎಂದರು. ಅಲ್ಲಿ ಮಹಿಳೆಯರು ಸೇರುತ್ತಾರೆ. ಸುರಕ್ಷತೆಗಾಗಿ ಏನೆಲ್ಲಾ ಅವಶ್ಯಕತೆ ಇದೆ ಎನ್ನುವ ಚರ್ಚೆಗಳು ನಡೆಯುತ್ತವೆ ಎಂದು ನಟಿ ಮಾತನಾಡಿದರು.

ಈ ಸಮಿತಿಯು ಬಂದ ನಂತರ ಅನೇಕ ಬದಲಾವಣೆಗಳಿವೆ ಎಂದು ನಾನು ಅಂದುಕೊಂಡಿದ್ದೇನೆ. ನೀವೇ ನೋಡುತ್ತಿರುವಂತೆ ಧೈರ್ಯವಾಗಿ ಕಿರುಕುಳದ ವಿರುದ್ಧ ಧ್ವನಿ ಎತ್ತಿದ್ದಾರೆ. ತಮ್ಮ ಸಮಸ್ಯೆಗಳ ಬಗ್ಗೆ ಮಾತನಾಡುತ್ತಿದ್ದಾರೆ. ಈ ವಿಷಯವು ಚಿತ್ರರಂಗಕ್ಕೆ ಮಾತ್ರ ಮೀಸಲಾದ ವಿಷಯವಲ್ಲ. ಇಂದು ಅನೇಕ ಸಹಾಯವಾಣಿ ಸಂಖ್ಯೆ, ಯೋಜನೆಗಳು ಮಹಿಳೆಯರಿಗಾಗಿ ಶುರುವಾಗಿದೆ. ಕೆಲವು ವಿಭಾಗಗಳು ಮಹಿಳೆಯರ ಸುರಕ್ಷತೆಗಾಗಿ ಮಾಡಿದ್ದಾರೆ. ನಮ್ಮ ಕಾಲ್‌ಶೀಟ್‌ನಲ್ಲಿಯೂ ಸಹಾಯವಾಣಿ ಸಂಖ್ಯೆಗಳಿವೆ. ನೀವು ಅವರಿಗೆ ಕರೆ ಮಾಡಿ ದೂರು ನೀಡಬಹುದು. ನೀವು ಅನಾಮಧೇಯವಾಗಿ ದೂರು ನೀಡಬಹುದು ಎಂದಿದ್ದಾರೆ ಅನನ್ಯಾ ಪಾಂಡೆ.
ಸದ್ಯ ಅವರು ‘ಕಾಲ್ ಮಿ ಬೇ’ ಸಿನಿಮಾ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಇದರ ಜೊತೆಗೆ ಅಕ್ಷಯ್ ಕುಮಾರ್ ಜೊತೆಗಿನ ಹೊಸ ಚಿತ್ರಕ್ಕೆ ನಟಿ ಕಾಣಿಸಿಕೊಳ್ಳಲಿದ್ದಾರೆ.

































