Tag: Caste Census Report

  • ವರದಿಯೇ ಹೊರಗೆ ಬಾರದೇ ಜಾತಿಗಣತಿ ವಿರೋಧ ಮಾಡೋದು ಸರಿಯಲ್ಲ: ಸಂತೋಷ್ ಲಾಡ್

    ವರದಿಯೇ ಹೊರಗೆ ಬಾರದೇ ಜಾತಿಗಣತಿ ವಿರೋಧ ಮಾಡೋದು ಸರಿಯಲ್ಲ: ಸಂತೋಷ್ ಲಾಡ್

    ಬೆಂಗಳೂರು: ಜಾತಿಗಣತಿ ವರದಿಯನ್ನು (Caste Census Report) ಸಂಪೂರ್ಣವಾಗಿ ನೋಡದೇ ಸಮೀಕ್ಷೆ ಸರಿಯಿಲ್ಲ ಎಂದು ಹೇಳೋದು ಸರಿಯಲ್ಲ. ವರದಿ ಹೊರಗೆ ಬರಲಿ, ಅದರ ಅಂಕಿಅಂಶಗಳನ್ನ ಚರ್ಚೆ ಮಾಡೋಣ ಎಂದು ಸಚಿವ ಸಂತೋಷ್ ಲಾಡ್ (Santosh Lad) ತಿಳಿಸಿದ್ದಾರೆ.

    ಜಾತಿಗಣತಿಗೆ ಹಲವರು ವಿರೋಧ ಮಾಡುತ್ತಿರುವ ಬಗ್ಗೆ ವಿಕಾಸಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಯಾವುದೇ ದೇಶಗಳಲ್ಲಿ ರಾಜಕೀಯವಾಗಿ ನ್ಯಾಯ ಕೊಡಬೇಕಾದರೆ ಒಂದು ಜಾತಿಗಣತಿ ಬೇಕು. ಸರ್ಕಾರ ಜಾತಿಗಣತಿ ಮಾಡಿದೆ. ಜಾಸ್ತಿ ಇದೆ, ಕಡಿಮೆ ತೋರಿಸಿದ್ದಾರೆ ಎಂದು ಎಲ್ಲಾ ಸಮುದಾಯಗಳಿಗೆ ಭಿನ್ನಾಭಿಪ್ರಾಯ ಇದೆ. ಸರ್ಕಾರ ಇದರ ಬಗ್ಗೆ ಪರಿಶೀಲನೆ ಮಾಡುತ್ತದೆ. ನನಗೆ ಇರೋ ಮಾಹಿತಿ ಪ್ರಕಾರ ಜಾತಿಗಣತಿ ವರದಿ ಬಗ್ಗೆ ಸಿಡಿ ಕೊಡುತ್ತಾರೆ ಎಂಬ ಮಾಹಿತಿ ಇದೆ. ವಿಧಾನಸಭೆವಾರು ಸಿಡಿ ಕೊಡುವ ಸಾಧ್ಯತೆ ಇದೆ. ಸಿಡಿಯನ್ನು ನಿಮ್ಮ ಕೈಗೆ ಕೊಟ್ಟಾಗ ನಿಮ್ಮ ತಾಲೂಕಿನಲ್ಲಿ, ಸಮುದಾಯಗಳು ಕಡಿಮೆ ಜಾಸ್ತಿ ಇದ್ದರೆ ಅಲ್ಲಿ ನ್ಯಾಯ ಕೊಡಲು ಅವಕಾಶ ಇದೆ. ವರದಿಯೇ ಜಾರಿ ಆಗಿಲ್ಲ. ಯಾರೇ ಸರ್ವೆ ಮಾಡಿದರೂ ಇಂತಹ ಅಸಮಾಧಾನ ಬರುತ್ತದೆ. ವರದಿ ನೋಡದೇ ವಿರೋಧ ಮಾಡೋದು ಬೇಡ ಎಂದರು. ಇದನ್ನೂ ಓದಿ: Chitradurga | ಗಂಜಲಗುಂಟೆ ಗ್ರಾಮದಲ್ಲಿ 3 ತಿಂಗಳಿಂದ ನೀಗದ ನೀರಿನ ಬವಣೆ – ಗ್ರಾಮಸ್ಥರು ಕಂಗಾಲು

    ವಿಧಾನಸಭೆ ಚುನಾವಣೆಗೂ ಲೋಕಸಭೆ ಚುನಾವಣೆಗೂ 40 ಲಕ್ಷ ವೋಟ್ ವ್ಯತ್ಯಾಸ ಬರುತ್ತದೆ. ವ್ಯತ್ಯಾಸ ಕಂಡುಹಿಡಿಯಬೇಕಾದರೆ ಸಮರ್ಪಕವಾಗಿ ಚರ್ಚೆ ಆಗಬೇಕು. ಆದರೆ ನೆಗೆಟಿವ್ ಚರ್ಚೆ ಆಗಬಾರದು. ಮೊದಲೇ ಅಪಸ್ವರ ಎತ್ತೋದು ಸರಿಯಲ್ಲ. ವರದಿ ಮೊದಲು ಚರ್ಚೆ ಆಗಲಿ. ಅಮೇಲೆ ನೋಡೋಣ. ಮೊದಲೇ ವಿರೋಧ ಬೇಡ ಎಂದು ಮನವಿ ಮಾಡಿದರು. ಇದನ್ನೂ ಓದಿ: ಗಲಭೆಕೋರರಿಗೆ ದಂಡವೇ ಒಳ್ಳೆ ಚಿಕಿತ್ಸೆ: ಬಂಗಾಳ ಹಿಂಸಾಚಾರಕ್ಕೆ ಯೋಗಿ ಆದಿತ್ಯನಾಥ್‌ ಕಿಡಿ

    ಮನೆ ಮನೆಗೆ ಸಮೀಕ್ಷೆ ಮಾಡಿಲ್ಲ ಅಂದರೆ ಸಿಡಿ ಬರುತ್ತದೆ ಅಲ್ಲವಾ? ಸಮೀಕ್ಷೆ ಮಾಡಿರೋರು ಶಿಕ್ಷಕರು. ನಾವೇನು ಟೀಚರ್‌ಗೆ ಅಲ್ಲಿ ಹೋಗಬೇಡಿ ಅಂತ ಹೇಳೋಕೆ ಆಗಲ್ಲ. ನಿಮ್ಮ ಮನೆ ಯಾವುದು ಎಂದು ಸರ್ಕಾರಕ್ಕೆ ಗೊತ್ತಿರುತ್ತಾ?ಇಂತಹವರ ಮನೆಗೆ ಹೋಗಿ ಅಂತ ನಿರ್ದೇಶನ ಕೊಡೋಕೆ ಆಗಲ್ಲ. ಸರ್ವೆ ಅಂಕಿ ಅಂಶಗಳು ಬರಲಿ. ನಿಮ್ಮ ಊರು, ತಾಲೂಕಿನಲ್ಲಿ ಎಷ್ಟಾಗಿದೆ ಎಂದು ಅಂಕಿಅಂಶಗಳು ಕೊಟ್ಟರೆ ಆಗ ತಪ್ಪಾಗಿದೆ ಎಂದು ಹೇಳಬಹುದು. ಅದಕ್ಕೂ ಮುಂಚೆ ವಿರೋಧ ಮಾಡೋದು ಬೇಡ ಎಂದು ಹೇಳಿದರು. ಇದನ್ನೂ ಓದಿ: ಮಹಾರಾಷ್ಟ್ರದಿಂದ ಬಂದು ಜಡ್ಜ್ ಮನೆಯಲ್ಲಿ ಕಳ್ಳತನ – 8 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದಿದ್ದ ಆರೋಪಿಗಳು ಅರೆಸ್ಟ್

    ರಾಜಕೀಯ ದೃಷ್ಟಿಯಿಂದ ಹೇಳೋದನ್ನು ಸ್ವಾಗತ ಮಾಡೋಣ. ಸ್ವಲ್ಪ ಕಾಯೋಣ. ದಾಖಲಾತಿ ತೆಗೆದುಕೊಳ್ಳಿ. ದಾಖಲಾತಿ ಚೆಕ್ ಮಾಡಿದ ಮೇಲೆ ಲೋಪದೋಷ ಕಂಡು ಬಂದರೆ ಆಗ ಒಪ್ಪೋಣ. ಸಂಪೂರ್ಣವಾಗಿ ತಪ್ಪು ಅನ್ನೋದು ಸರಿಯಲ್ಲ.ನಮ್ಮ ಮನೆಗೆ ಬಂದಿದ್ದು ನನಗೆ ನೆನಪೇ ಇಲ್ಲ. ಎಲ್ಲರು ನಮ್ಮನೆಗೆ ಬಂದಿಲ್ಲ ಅಂದರೆ ಸರಿ ಇರಲ್ಲ. 95% ಮನೆಗೆ ಹೋಗಿದ್ದಾರೆ ಅಂತ ಹೇಳಿದ್ದಾರೆ. ಸಿಡಿ ಬರುತ್ತೆ, ಅದಾದ ಮೇಲೆ ನೋಡಿಕೊಳ್ಳಿ. ಅದರಲ್ಲಿ ಸಮಸ್ಯೆ ಇದ್ದರೆ ಸರಿ ಮಾಡಬಹುದು. ಸಂಪೂರ್ಣವಾಗಿ ವಿರೋಧ ಮಾಡೋದು ಸರಿಯಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಜಾತಿಗಣತಿ | ಮನೆ ಮನೆಗೆ ಹೋಗಿ ಮತ್ತೆ ಸಮೀಕ್ಷೆ ಮಾಡ್ಬೇಕು – ಶಾಸಕ ಬಾಲಕೃಷ್ಣ ಆಗ್ರಹ

    ಡಿಸಿಎಂ ಡಿಕೆಶಿವಕುಮಾರ್ ಸಭೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಆತಂಕ ಇರುತ್ತದೆ ಎಲ್ಲರಿಗೂ. ನಾನು ಅದನ್ನ ವಿರೋಧ ಮಾಡಲ್ಲ. ವರದಿ ಮೊದಲು ಹೊರಗೆ ಬರಲಿ. ಸರ್ಕಾರದ ದಾಖಲೆ ಮೊದಲು ನೋಡಿ ಆಮೇಲೆ ತಮ್ಮ ತಾಲೂಕಿನಲ್ಲಿ ಕಡಿಮೆ ಇದೆ ಅಂದರೆ ಮಾಹಿತಿ ಕೊಡಿ. ಸುಮ್ಮನೆ ಕಡಿಮೆ ಇದೆ, ಜಾಸ್ತಿ ಇದೆ ಅಂದರೆ ಸರಿಯಲ್ಲ. ದಾಖಲೆಗಳೇ ಯಾರಿಗೂ ಸಿಕ್ಕಿಲ್ಲ. ಹೀಗಿರುವಾಗ ಅದು ತಪ್ಪು ಅಂತ ಹೇಗೆ ಹೇಳ್ತೀರಾ? ತಪ್ಪು ಅನ್ನೋಕೆ ಯಾವುದೇ ದಾಖಲಾತಿ ಇಲ್ಲ.ನಿಮ್ಮ ಮನೆಗೆ ಬಂದಿಲ್ಲ ಅಂದರೆ ಅದು ಸರಿ ಇಲ್ಲ ಅಂತ ಅರ್ಥನಾ? ಸಮುದಾಯಗಳ ಲೆಕ್ಕ ಕೇಳಿದರೆ ಕರ್ನಾಟಕದಲ್ಲಿ 12 ಕೋಟಿ, 18 ಕೋಟಿ ಜನಸಂಖ್ಯೆ ಆಗುತ್ತದೆ. ಸರ್ಕಾರ ಸರ್ವೆ ಮಾಡಿದೆ. ಸರ್ವೆ ಸಿಡಿ ಮೂಲಕ ಕೊಡುತ್ತಾರೆ. ಅದನ್ನ ಮೊದಲು ನೋಡಿ. ವರದಿ ಬಿಡುಗಡೆ ಆಗಬೇಕು. ಚರ್ಚೆ ಆಗಬೇಕು. ಮೊದಲೇ ತಪ್ಪು ಇದೆ ಅಂತ ಹೇಳಬೇಡಿ ಎಂದರು. ಇದನ್ನೂ ಓದಿ: ಮುಸ್ಲಿಂ ಸಮುದಾಯದ ಜಾತಿಗಳನ್ನು ಒಂದು ಮಾಡಿ ಮುಸ್ಲಿಮರೇ ಹೆಚ್ಚು ಅಂತ ಬಿಂಬಿಸಿದ್ದಾರೆ: ಛಲವಾದಿ ನಾರಾಯಣಸ್ವಾಮಿ

  • ಜಾತಿ ಜನಗಣತಿ ಯಾವುದೇ ಸಮಾಜದ ಪರ, ವಿರೋಧ ನಿರ್ಣಯ ಮಾಡೋದಲ್ಲ: ಶಿವಾನಂದ ಪಾಟೀಲ್

    ಜಾತಿ ಜನಗಣತಿ ಯಾವುದೇ ಸಮಾಜದ ಪರ, ವಿರೋಧ ನಿರ್ಣಯ ಮಾಡೋದಲ್ಲ: ಶಿವಾನಂದ ಪಾಟೀಲ್

    ಹಾವೇರಿ: ಜಾತಿ ಜನಗಣತಿಯು (Caste Census) ಯಾವುದೇ ಒಂದು ಸಮಾಜದ ಪರ ಅಥವಾ ವಿರೋಧ ನಿರ್ಣಯ ಮಾಡುವುದಲ್ಲ. ಎಲ್ಲರ ವಿಚಾರಗಳ ಒಳಗೊಂಡು ದೇಶ ನಡೆಸಬೇಕಾಗುತ್ತದೆ ಎಂದು ಸಚಿವ ಶಿವಾನಂದ ಪಾಟೀಲ್ (Shivanand Patil) ಹೇಳಿದರು.

    ಹಾವೇರಿಯಲ್ಲಿ (Haveri) ಮಾಧ್ಯಮದವರೊಂದಿಗೆ ಜಾತಿ ಜನಗಣತಿ ವರದಿಯಲ್ಲಿ ಮುಸ್ಲಿಂ ಪ್ರಾಬಲ್ಯ ಹೆಚ್ಚಿಸುವ ಷಡ್ಯಂತ್ರ ನಡೆದಿದೆ ಎಂಬ ಆರೋಪದ ಕುರಿತು ಮಾತನಾಡಿದರು. ಎಲ್ಲರ ವಿಚಾರ ಒಳಗೊಂಡು ದೇಶ ನಡೆಸಬೇಕಾಗುತ್ತದೆ. ಇದರ ಜವಾಬ್ದಾರಿಯು ಸಿಎಂ ಹಾಗೂ ಪ್ರಧಾನಿಯವರ ಮೇಲೂ ಇದೆ ಎಂದು ತಿಳಿಸಿದರು. ಇದನ್ನೂ ಓದಿ: ಮೋದಿ ಇನ್ನೊಂದು ವರ್ಷವಷ್ಟೇ ಪ್ರಧಾನಿಯಾಗಿರುತ್ತಾರೆ: ಸಂತೋಷ್ ಲಾಡ್

    75 ವರ್ಷ ಆಯ್ತು, ಜಾತಿ ವಿಚಾರವಾಗಿ ರಾಜಕಾರಣ ಮಾಡುವುದರಲ್ಲಿ ಅರ್ಥ ಇಲ್ಲ. ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಯಾರು ಹಿಂದುಳಿದಿದ್ದಾರೋ ಅವರಿಗೆ ಆದ್ಯತೆ ಕೊಡಲೇಬೇಕು. ಅದು ಯಾವುದೇ ಜಾತಿ ಇರಲಿ. ಇಂದಿನ ಮಟ್ಟಿಗೆ ಆ ವಿಚಾರ ಕೂಡಾ ಪ್ರಸ್ತುತವಾಗಿದೆ ಎಂದರು. ಇದನ್ನೂ ಓದಿ: ಮೋದಿ ಪ್ರಧಾನಿಯಾಗಬೇಕೆಂದು ಬರಿಗಾಲಲ್ಲಿ ನಡೆದಾಡುವ ಪ್ರತಿಜ್ಞೆ – 14 ವರ್ಷದ ಕನಸು ಕೊನೆಗೂ ನನಸು

    ಜಾತಿ ಗಣತಿ ವರದಿ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ಆಗಲಿದೆ. ಅಂಗೀಕಾರ ಮಾಡುವ ಬಗ್ಗೆ ಸಂಪುಟದಲ್ಲಿ ನಿರ್ಣಯ ತೆಗೆದುಕೊಳ್ಳಲಾಗುತ್ತದೆ. ಎಲ್ಲರ ಅಭಿಪ್ರಾಯ ಆಧರಿಸಿಯೇ ನಿರ್ಣಯ ತೆಗೆದುಕೊಳ್ಳಲಾಗುವುದು. ವರದಿ ಬಗ್ಗೆ ಪುನರ್ ವಿಮರ್ಶೆ ಮಾಡಬಹುದು. ಸಾಧಕ ಬಾಧಕಗಳ ಕುರಿತು ಚರ್ಚೆ ಆಗುತ್ತವೆ ಎಂದು ಹೇಳಿದರು.

  • ಜಾತಿಗಣತಿ ವರದಿ ಅವೈಜ್ಞಾನಿಕ, ತಪ್ಪು ಎಂಬುದೆಲ್ಲಾ ಸಮಾಜ ದ್ರೋಹಿ ಮಾತುಗಳು: ಹೆಚ್.ಕೆ.ಪಾಟೀಲ್

    ಜಾತಿಗಣತಿ ವರದಿ ಅವೈಜ್ಞಾನಿಕ, ತಪ್ಪು ಎಂಬುದೆಲ್ಲಾ ಸಮಾಜ ದ್ರೋಹಿ ಮಾತುಗಳು: ಹೆಚ್.ಕೆ.ಪಾಟೀಲ್

    – ವರದಿ ಓದದೇ ಅವೈಜ್ಞಾನಿಕ ಅಂದ್ರೆ ಹೇಗೆ? ಎಂದು ಸಚಿವರ ಪ್ರಶ್ನೆ
    – ಮುಸ್ಲಿಮರು ಮುಸ್ಲಿಂ ಅಂತ ಬರೆದುಕೊಟ್ಟಿದ್ದಾರೆ

    ಗದಗ: ಜಾತಿ ಜನಗಣತಿ ಅವೈಜ್ಞಾನಿಕ ಹೇಗೆ ಆಗುತ್ತದೆ. ಅವೈಜ್ಞಾನಿಕ, ತಪ್ಪು ವರದಿ, ಯಾರೋ ಹೇಳಿ ಬರೆಸಿದ್ದಾರೆ ಎಂಬ ಮಾತುಗಳು ಸಮಾಜವನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ. ಇವೆಲ್ಲಾ ಸಮಾಜ ದ್ರೋಹಿ ಮಾತುಗಳು ಎಂದು ಕಾನೂನು ಸಚಿವ ಹೆಚ್.ಕೆ.ಪಾಟೀಲ್ (H K Patil) ಹೇಳಿದರು.

    ಗದಗದಲ್ಲಿ (Gadag) ಮಾಧ್ಯಮಗಳೊಂದಿಗೆ ಜಾತಿ ಜನಗಣತಿ ವಿಚಾರದಲ್ಲಿ ಬಿಜೆಪಿ, ಜೆಡಿಎಸ್ ನಾಯಕರ ಹೇಳಿಕೆ ಕುರಿತು ಅವರು ಮಾತನಾಡಿದರು. ಜಾತಿಗಣತಿ (Caste Census) ವಿವರಗಳು ಬಹುತೇಕ ಬಹಿರಂಗಗೊಂಡಿವೆ. ನಮಗೂ ಅದರ ಪ್ರತಿಗಳು ದೊರೆತಿವೆ. ಏ.17ರಂದು ವಿಶೇಷ ಕ್ಯಾಬಿನೆಟ್ ಸಭೆ ಕರೆಯಲಾಗಿದೆ. ಇದರಲ್ಲಿ ರಾಜಕಾರಣ ಮಾಡಲು ಹೋಗಬಾರದು. ಸಮೀಕ್ಷೆಗಳು ಏನಿವೆ ಎಂಬುದು ಗೊತ್ತಿಲ್ಲದೆ ತಮ್ಮ ಅಭಿಪ್ರಾಯಗಳನ್ನು ಕೊಡುತ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಇದು ಜಾತ್ಯಾತೀತ ರಾಷ್ಟ್ರ, ಜಾತಿಗಣತಿಗೆ ಯಾವುದೇ ಮಹತ್ವ ಇಲ್ಲ: ಡಾ.ಮಂಜುನಾಥ್

    ಸರ್ಕಾರ ಇನ್ನೂ ಏನು ನಿರ್ಣಯ ಮಾಡಿಲ್ಲ. ಏನು ಸಮೀಕ್ಷೆ ಆಗಿದೆ ಅದನ್ನು ನಾವು ಮಂಡನೆ ಮಾಡಿದ್ದೇವೆ. ಸಿದ್ದರಾಮಯ್ಯ (Siddaramaiah) ಅವರ ಮನೆಯಲ್ಲಿ ಜಾತಿ ಗಣತಿ ಬರೆದಿದ್ದಾರೆ ಎಂದು ಆರ್. ಅಶೋಕ್ (R Ashok) ಹೇಳಿದ್ದಾರೆ. ಯಾವುದಾದರೂ ವರದಿ ಮುಖ್ಯಮಂತ್ರಿ ಮನೆಯಲ್ಲಿ ಬರೆಯಲು ಸಾಧ್ಯನಾ. ಅದರಲ್ಲಿ ತಕರಾರು ಇದ್ದರೆ, ಹೀಗೆ ಮಾಡಿಲ್ಲ. ಹೀಗೆ ಮಾಡಿ ಎಂಬ ಅಭಿಪ್ರಾಯ ಸೂಚಿಸಿರಿ. ಅದನ್ನು ಸರಿಪಡಿಸುವುದು ಇದ್ದರೆ ಮಾಡುತ್ತೇವೆ ಎಂದರು. ಇದನ್ನೂ ಓದಿ: SRH ತಂಡ ಉಳಿದುಕೊಂಡಿದ್ದ ಹೈದರಾಬಾದ್‌ ಹೋಟೆಲ್‌ನಲ್ಲಿ ಅಗ್ನಿ ಅವಘಡ

    ಸರ್ಕಾರ ಇಷ್ಟೆಲ್ಲಾ ಅವಕಾಶ ಕೊಟ್ಟಾಗಲೂ ರಾಜಕೀಯ ಮಾಡುವುದು ಸರಿಯಾದ ಕ್ರಮವಲ್ಲ. ಅವೈಜ್ಞಾನಿಕ ಯಾವುದು ಇದೆ. ವರದಿ ಓದದೇ ಅವೈಜ್ಞಾನಿಕ ಅಂದ್ರೆ ಹೇಗೆ? ನಿಮ್ಮ ಮನೆಗಳಲ್ಲಿ ಗಣತಿ ಮಾಡಿದ್ದರೆ ನಮ್ಮದು ಈ ಜಾತಿ ಅಂತ ಅದಕ್ಕೆ ನಿಮ್ಮ ಸಹಿ ಇದೆ. ಹೀಗಾಗಿ ಅದು ಹೇಗೆ ಅವೈಜ್ಞಾನಿಕ ಆಗುತ್ತದೆ ಎಂದು ಪ್ರಶ್ನಿಸಿದರು.  ಇದನ್ನೂ ಓದಿ: ಜಾತಿಗಣತಿ ಹೊರಗಡೆ ತರಲು ಕಷ್ಟ, ಆದ್ರೂ ಸಿಎಂ ತಂದಿದ್ದಾರೆ: ಪರಮೇಶ್ವರ್

    ಇನ್ನೂ ಜಾತಿಗಣತಿ ಬಗ್ಗೆ ಕೇಂದ್ರ ಸಚಿವ ವಿ.ಸೋಮಣ್ಣ (V Somanna) ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಸಿಎಂ ಸಿದ್ದರಾಮಯ್ಯ ಅವರು ಜಾತಿಗಣತಿ ವಿಚಾರದಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಏನು ಬದ್ಧತೆ ಇದೆ. ಆ ಬದ್ಧತೆಯನ್ನು ಸಿಎಂ ಅಭಿವ್ಯಕ್ತ ಮಾಡಿದ್ದಾರೆ. ಸಿಎಂ ರಾಜಕೀಯ ಲಾಭ-ನಷ್ಟ ಲೆಕ್ಕ ಹಾಕಿಲ್ಲ ಎಂದರು. ಇದನ್ನೂ ಓದಿ: ಮುಸ್ಲಿಮರು ಜಾಸ್ತಿಯಿದ್ದರೆ ಅಲ್ಪಸಂಖ್ಯಾತರಲ್ಲ ಎಂದು ಘೋಷಿಸಿ: ಛಲವಾದಿ ನಾರಾಯಣಸ್ವಾಮಿ ಸವಾಲ್

    ಜಾತಿ-ಉಪಜಾತಿಗಳ ವಿಂಗಡನೆ ಮಾಡಿದ್ದು, ಮುಸ್ಲಿಂ ವಿಂಗಡನೆ ಯಾಕಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಮುಸ್ಲಿಮರು ಮುಸ್ಲಿಂ ಅಂತ ಬರೆದುಕೊಟ್ಟಿದ್ದಾರೆ. ನಿಮ್ಮ ಜಾತಿ ಯಾವುದು ಎಂಬುದನ್ನು ನೀವೇ ಬರೆದು ಕೊಟ್ಟಿದ್ದಿರಲ್ಲ. ನೀವೇ ಜಾತಿ-ಉಪಜಾತಿಗಳನ್ನು ವಿಂಗಡನೆ ಮಾಡಿಕೊಂಡರೇ ಯಾರು ಏನು ಮಾಡಬೇಕು. ನೀವೇ ಹೇಳಿದ್ದನ್ನು ತೆಗೆದುಕೊಂಡರೇ ಅದು ಅವೈಜ್ಞಾನಿಕನಾ ಎಂದು ಬಿಜೆಪಿ ನಾಯಕರ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ವಕ್ಫ್ ಹೆಸ್ರಲ್ಲಿ ಬಡವರ ಭೂಮಿ ಕಿತ್ತುಕೊಳ್ಳಲು ಸಾಧ್ಯವಿಲ್ಲ, ಲೂಟಿ ನಿಲ್ಲಲಿದೆ – ನರೇಂದ್ರ ಮೋದಿ

    ಪೊಲೀಸರು ಆತ್ಮರಕ್ಷಣೆಗಾಗಿ ಒಳ್ಳೇ ಹೆಜ್ಜೆ ಇಟ್ಟಿದ್ದಾರೆ
    ಹುಬ್ಬಳ್ಳಿ (Hubballi) ಬಾಲಕಿ ಸಾವು ಪ್ರಕರಣದ ಕುರಿತು ಮಾತನಾಡಿದ ಅವರು, ಹುಬ್ಬಳ್ಳಿ ಬಾಲಕಿಯದ್ದು ಅತ್ಯಂತ ದುರ್ದೈವದ ಘಟನೆಯಾಗಿದೆ. ಮನುಷ್ಯನಂತೆ ವರ್ತನೆ ಮಾಡದೇ ಇದ್ದ ವ್ಯಕ್ತಿ, ಪೊಲೀಸರ ಮೇಲೆಯೂ ಹಲ್ಲೆ ಮಾಡಲು ಹೋಗಿದ್ದ. ಪೊಲೀಸರು ತಮ್ಮ ಆತ್ಮ ರಕ್ಷಣೆಗಾಗಿ ಒಂದು ಒಳ್ಳೇ ಹೆಜ್ಜೆ ಇಟ್ಟಿದ್ದಾರೆ. ಸಮಾಜದಲ್ಲಿ ಇಂತಹ ಘಟನೆಗಳು ಆಗುವುದು ನಿಲ್ಲಬೇಕು. ಅಂತಹ ಸಮಾಜವನ್ನು ನಾವು ಕಟ್ಟಬೇಕಿದೆ ಎಂದು ಹೇಳಿದರು.

  • ಜಾತಿಗಣತಿ ವರದಿ ಯಾರ ಪರವೂ ಅಲ್ಲ, ವಿರುದ್ಧವೂ ಅಲ್ಲ: ಹೆಚ್.ಸಿ.ಮಹದೇವಪ್ಪ

    ಜಾತಿಗಣತಿ ವರದಿ ಯಾರ ಪರವೂ ಅಲ್ಲ, ವಿರುದ್ಧವೂ ಅಲ್ಲ: ಹೆಚ್.ಸಿ.ಮಹದೇವಪ್ಪ

    – ಮೀಸಲಾತಿ ಹೆಚ್ಚಳಕ್ಕೆ ಆಯೋಗದ ಶಿಪಾರಸುಗಳನ್ನ ಅಧ್ಯಯನ ಮಾಡುತ್ತೇವೆ ಎಂದ ಸಚಿವ

    ಬೆಂಗಳೂರು: ಜಾತಿಗಣತಿ ವರದಿ (Caste Census Report) ಯಾರ ಪರವಾಗಿಯೂ ಇಲ್ಲ. ವಿರೋಧವೂ ಇಲ್ಲ. ಸಂವಿಧಾನದ ಆಶಯದ ಪ್ರಕಾರ ಎಲ್ಲರಿಗೂ ಸಮಾನ ಅವಕಾಶ ದೊರೆಯಬೇಕು. ಏ.17 ರಂದು ಮತ್ತೆ ಸಂಪುಟ ಸಭೆಯಲ್ಲಿ ಚರ್ಚೆ ಮಾಡುತ್ತೇವೆ ಎಂದು ಸಚಿವ ಹೆಚ್‌.ಸಿ.ಮಹದೇವಪ್ಪ ( H C Mahadevappa) ಹೇಳಿದರು.

    ಬೆಂಗಳೂರಿನಲ್ಲಿ (Bengaluru) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಾಮಾಜಿಕ ಶೈಕ್ಷಣಿಕ ಆರ್ಥಿಕ ಗಣತಿ ವರದಿ ಇದು. ಸಿಎಂ ಸಿದ್ದರಾಮಯ್ಯ ಅವರು ಸಮಿತಿ ರಚನೆ ಮಾಡಿದ್ದರು. ಸುಮಾರು 200 ಕೋಟಿ ರೂ. ಕೊಟ್ಟು ವರದಿ ಮಾಡಿಸಿದ್ದರು. ಪ್ರಣಾಳಿಕೆಯಲ್ಲೂ ಜಾತಿಗಣತಿಗೆ ಪಕ್ಷ ಬದ್ಧವಾಗಿತ್ತು. ಭಾರತ ದೇಶದಲ್ಲಿ ಜಾತಿಗಣತಿ ಮಾಡಲು ಕೆಲ ಪ್ರಯತ್ನ ಆಗಿತ್ತು. ಎಲ್ಲವನ್ನೂ ಕೂಲಂಕಶವಾಗಿ ಪರಿಗಣಿಸಿ ವರದಿ ಮಾಡಿದ್ದಾರೆ ಎಂದು ಸಮರ್ಥನೆ ಮಾಡಿಕೊಂಡರು. ಇದನ್ನೂ ಓದಿ: ನನ್ನ ಮೇಲಿನ ಗುತ್ತಿಗೆದಾರರ ಎರಡೂ ಆರೋಪಗಳು ನಿರಾಧಾರ – ರವಿ ಬೋಸರಾಜು

    ಸ್ವಾತಂತ್ರ್ಯ ಬಂದಾಗ 35 ಕೋಟಿ ಜನಸಂಖ್ಯೆ ಇತ್ತು. ಈಗ 140 ಕೋಟಿ ಜನಸಂಖ್ಯೆ ಆಗಿದೆ. ಅದರ ಆಧಾರದ ಮೇಲೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಯೋಜನೆಗಳನ್ನ ನೀಡಬೇಕು. ಯಾವ ಯಾವ ಸಮಾಜಕ್ಕೆ ಏನು ಸಿಗಬೇಕು ಅದನ್ನ ಕೊಡಬೇಕು ಎಂದು ಹೇಳಿದರು. ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಯಾವ ಒತ್ತಡಕ್ಕೂ ಮಣಿಯದೆ ಜಾತಿಗಣತಿ ಜಾರಿ ಮಾಡಬೇಕು: ಪ್ರಣವಾನಂದ ಸ್ವಾಮೀಜಿ

    ಮೀಸಲಾತಿ ಹೆಚ್ಚಳದ ಕುರಿತು ಪ್ರತಿಕ್ರಿಯಿಸಿ, ಮೀಸಲಾತಿ ಹೆಚ್ಚಳಕ್ಕೆ ಆಯೋಗದ ಶಿಪಾರಸುಗಳನ್ನ ಅಧ್ಯಯನ ಮಾಡುತ್ತೇವೆ. ಇದೊಂದು ಪ್ರಗತಿಪರ ಅಧ್ಯಯನವಾಗಿದೆ. ಜನಸಂಖ್ಯೆ ಸ್ಫೋಟ ಆಗ್ತಿದೆ. ಹೀಗಾಗಿ ಎಲ್ಲ ಸಮುದಾಯಕ್ಕೆ ಅವಕಾಶ ಸಿಗಬೇಕು. ವೈಜ್ಞಾನಿಕವಾಗಿ ವರದಿ ಆಗಿದೆ. ಕಾಂಗ್ರೆಸ್ ಪಕ್ಷ ಸಂವಿಧಾನದ ಆಶಯಗಳ ಪರ ಹಾಗೂ ಪೂರಕವಾಗಿದೆ ಎಂದರು. ಇದನ್ನೂ ಓದಿ: ಕಾಂತರಾಜುರನ್ನ ಮನೆಗೆ ಕರೆಸಿ ಸಿಎಂ ಡಿಕ್ಟೇಟ್ ಮಾಡಿ ಜಾತಿಜನಗಣತಿ ವರದಿ ಬರೆಸಿದ್ದಾರೆ – ಆರ್.ಅಶೋಕ್

    ನಮ್ಮ ಕಾರ್ಯಕಾರಿ ಸಮಿತಿಯಲ್ಲೇ ಜೈ ಬಾಪು. ಜೈ ಭೀಮ್. ಜೈ ಸಂವಿಧಾನ ಅಂತಾ ಹೇಳಿದೆ. ಸಾಮಾಜಿಕ ನ್ಯಾಯದ ಪರವಾಗಿ ಕಾಂಗ್ರೆಸ್ ಪಕ್ಷವಿದೆ. ಸಂಪುಟ ಸಭೆಯಲ್ಲಿ ಆ ನಿಟ್ಟಿನಲ್ಲಿ ಪ್ರಯತ್ನ ಮಾಡ್ತೇವಿ ಅಂದ್ರು. ಎಲ್ಲ ಸಂಗತಿಗಳನ್ನ ಸಂಪುಟದಲ್ಲಿ ಚರ್ಚೆ ಮಾಡುತ್ತೇವೆ. ಅಭಿಪ್ರಾಯ ಹಾಗೂ ಸಲಹೆಗಳನ್ನು ಕೊಡಲು ಎಲ್ಲರಿಗೂ ಮುಕ್ತ ಅವಕಾಶವಿದೆ ಎಂದು ಹೇಳಿದರು. ಇದನ್ನೂ ಓದಿ: ರಾಜ್ಯದಲ್ಲಿ 2ನೇ ದೊಡ್ಡ ಸಂಖ್ಯೆಯಲ್ಲಿರುವವರು ಅಲ್ಪಸಂಖ್ಯಾತರಾಗುತ್ತಾರಾ: ಸಿ.ಟಿ.ರವಿ ಪ್ರಶ್ನೆ

    ಬಿಜೆಪಿಯವರು ದುರಾದೃಷ್ಟ ಅಂದಿರುವುದು. ಅದನ್ನ ಬಿಟ್ಟು ಬೇರೆ ಏನೂ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಮಂಡಲ ಕಮಿಷನ್ ವರದಿ ಜಾರಿ ಆದಾಗ ಕಮಂಡಲ ಹಿಡಿದುಕೊಂಡು ಯಾತ್ರೆ ಮಾಡಿದ್ದರು. ಬಿಜೆಪಿಗೆ ಸಾಮಾಜಿಕ ನ್ಯಾಯದ ಮೇಲೆ ನಂಬಿಕೆ ಇಲ್ಲ. ರಾಜಕೀಯ ಪ್ರಾತಿನಿಧ್ಯಕ್ಕೆ ಈ ವರದಿಗೂ ಸಂಬಂಧವಿಲ್ಲ. ಒಂದು ಸಮುದಾಯದಿಂದ ಕಿತ್ತುಕೊಂಡು ಇನ್ನೊಂದು ಸಮುದಾಯಕ್ಕೆ ಕೊಡುವ ಉದ್ದೇಶ ಇದಲ್ಲ. ವರದಿಯಲ್ಲಿ ಏನಿದೆ ಎಂದು ಇನ್ನೂ ನೋಡದೇ ಮಾತನಾಡಬಾರದು. ಒಬ್ಬರನ್ನ ಹಿಂದಕ್ಕೆ ಹಾಕಿ ಇನ್ನೊಬ್ಬರಿಗೆ ಅನ್ಯಾಯ ಮಾಡುವ ಪ್ರಶ್ನೆಯಿಲ್ಲ ಎಂದು ಸ್ಪಷ್ಟನೆ ನೀಡಿದರು.

  • ರಾಜ್ಯದಲ್ಲಿ 2ನೇ ದೊಡ್ಡ ಸಂಖ್ಯೆಯಲ್ಲಿರುವವರು ಅಲ್ಪಸಂಖ್ಯಾತರಾಗುತ್ತಾರಾ: ಸಿ.ಟಿ.ರವಿ ಪ್ರಶ್ನೆ

    ರಾಜ್ಯದಲ್ಲಿ 2ನೇ ದೊಡ್ಡ ಸಂಖ್ಯೆಯಲ್ಲಿರುವವರು ಅಲ್ಪಸಂಖ್ಯಾತರಾಗುತ್ತಾರಾ: ಸಿ.ಟಿ.ರವಿ ಪ್ರಶ್ನೆ

    – ಮುಸ್ಲಿಮರನ್ನ ಇಡಿಯಾಗಿ, ಹಿಂದೂಗಳನ್ನ ಒಡೆದು ಆಳುವ ನೀತಿಗೆ ನಮ್ಮ ಬೆಂಬಲವಿಲ್ಲ
    – ಭಯೋತ್ಪಾದನೆ ಜಾಲದ ವಿಸ್ತರಣೆಯ ಸಂಚು ಮಾಡುತ್ತಿದೆ

    ಚಿಕ್ಕಮಗಳೂರು: ರಾಜ್ಯದ ಜನಸಂಖ್ಯೆಯಲ್ಲಿ 2ನೇ ದೊಡ್ಡ ಸಂಖ್ಯೆಯಲ್ಲಿರುವವರು ಅಲ್ಪಸಂಖ್ಯಾತರಾಗುತ್ತಾರಾ ಎಂದು ಮಾಜಿ ಸಚಿವ ಸಿ.ಟಿ ರವಿ (C T Ravi) ಪ್ರಶ್ನಿಸಿದರು.

    ಚಿಕ್ಕಮಗಳೂರಿನಲ್ಲಿ (Chikkamagaluru) ಜಾತಿ ಜನಗಣತಿ ವರದಿ (Caste Census Report) ಮಾತನಾಡಿದ ಅವರು, ಸಂವಿಧಾನ ಬದ್ಧವಾಗಿ ಜಾತಿ ಜನಗಣತಿ ಮಾಡುವ ಅಧಿಕಾರ ಕೇಂದ್ರಕ್ಕೆ ಇರುವುದು. ಇವರು ಸಾಮಾಜಿಕ, ಆರ್ಥಿಕ ಸಮೀಕ್ಷೆ ಎಂದು ಹೇಳಿದ್ದಾರೆ. ಅಧಿಕೃತವಾಗಿ ಬಿಡುಗಡೆಯಾಗಿಲ್ಲ. ಈಗಲೇ ಸತ್ಯ-ಸುಳ್ಳು ಎಂದು ಪ್ರತಿಕ್ರಿಯಿಸುವುದು ಕಷ್ಟ. ಅನಧಿಕೃತವಾಗಿ ಸೋರಿಕೆ ಆಗಿರುವುದನ್ನು ಸತ್ಯ ಎಂದು ಭಾವಿಸಿದ್ರೆ ಚರ್ಚೆ ಹುಟ್ಟು ಹಾಕುತ್ತದೆ ಎಂದರು. ಇದನ್ನೂ ಓದಿ: ಜಾತಿ ಜನಗಣತಿ ವರದಿಯೇ ಸಿದ್ದರಾಮಯ್ಯಗೆ ಮರಣ ಶಾಸನ ಆಗಬಹುದು: ವಿ. ಸೋಮಣ್ಣ

    ಅಲ್ಪಸಂಖ್ಯಾತರು ಯಾರು? ರಾಜ್ಯದ ಜನಸಂಖ್ಯೆಯಲ್ಲಿ 2ನೇ ದೊಡ್ಡ ಸಂಖ್ಯೆಯಲ್ಲಿರುವವರು ಅಲ್ಪಸಂಖ್ಯಾತರಾಗುತ್ತಾರಾ? ಮೀಸಲಾತಿ ಸಂಬಂಧ ಕೋರ್ಟ್‌ನಲ್ಲಿ ಮೊಕದ್ದಮೆ ಇದ್ದಾಗ ಕೇಂದ್ರ ಮೀಸಲಾತಿ ಪರ ಪ್ರಮಾಣಪತ್ರ ಸಲ್ಲಿಸಿತ್ತು. ಬಡ್ತಿ ಮೀಸಲಾತಿ ಪರ ಪ್ರಮಾಣಪತ್ರ ಸಲ್ಲಿಸಿತ್ತು. ಇದು ಮೀಸಲಾತಿ ಬಗ್ಗೆ ಬಿಜೆಪಿಗೆ ಇರುವ ಬದ್ಧತೆ. ಸಮಾಜ ಒಡೆಯುವ ದುರುದ್ದೇಶವನ್ನ ನಾವು ಬೆಂಬಲಿಸುವುದಿಲ್ಲ. ಕೆಲ ವ್ಯಕ್ತಿ, ಸಂಘಟನೆ, ರಾಜಕೀಯ ಪಕ್ಷಗಳು ಹಿಂದೂ ಸಮಾಜವನ್ನ ಜಾತಿವಾರು ಒಡೆಯುತ್ತಿವೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಮತಾಂತರಕ್ಕೆ ಒಪ್ಪದ ಪತ್ನಿ, ಅತ್ತೆ ಮೇಲೆ ಮಾರಣಾಂತಿಕ ಹಲ್ಲೆ – 9 ಜನರ ವಿರುದ್ಧ ಎಫ್‍ಐಆರ್

    ಮುಸ್ಲಿಮರಲ್ಲೂ 56 ಜಾತಿಗಳಿವೆ, ಮುಟ್ಟಿಸಿಕೊಳ್ಳದ ಜಾತಿ ಕೂಡ ಇದ್ದಾರೆ. ಪಸ್ಮಾಂಡ ಮುಸ್ಲಿಂ ಇದ್ದಾರೆ. ಯಾರು ಪ್ರವಾದಿ ವಂಶಸ್ಥರು ಅಂತ ಭಾವಿಸುತ್ತಾರೆ ಅವರು ಹೆಣ್ಣು ಕೊಡಲ್ಲ, ಹೆಣ್ಣು ತರಲ್ಲ. ಮುಸ್ಲಿಮರನ್ನ ಹಿಡಿಯಾಗಿ, ಹಿಂದೂಗಳನ್ನ ಒಡೆದು ಆಳುವ ನೀತಿಗೆ ನಮ್ಮ ಬೆಂಬಲವಿಲ್ಲ. ಸಾಮಾಜಿಕ ನ್ಯಾಯ ಬಿಜೆಪಿ ಬದ್ಧತೆಯಾಗಿದೆ. ಅದಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಜಾತಿಗಣತಿಯಲ್ಲಿ ಲಿಂಗಾಯತರ ಸಂಖ್ಯೆ ಕಡಿಮೆ ಆಗಲು ನಾವೇ ಕಾರಣ: ಎಂ.ಬಿ.ಪಾಟೀಲ್

    ವಕ್ಫ್ ಬೋರ್ಡ್ ಕಾಯ್ದೆ (Waqf Board Act) ವಿರುದ್ಧ ಕಾಂಗ್ರೆಸ್ ಅಪಪ್ರಚಾರ ಮಾಡ್ತಿದೆ. ಹಿಂದೆ ಸಿಎಎ ವಿರುದ್ಧವೂ ಕಾಂಗ್ರೆಸ್ ಇದೇ ಅಪಪ್ರಚಾರ ಮಾಡಿತ್ತು. ಕಾಂಗ್ರೆಸ್ ನಿಲುವು ರಾಷ್ಟ್ರಘಾತುಕ ನಿಲುವು, ಈಗ ವಕ್ಫ್ ಬಿಲ್‌ನಲ್ಲೂ ಅಪಪ್ರಚಾರ ಮಾಡುತ್ತಿದ್ದಾರೆ. ನ್ಯಾಯಬದ್ಧವಾದ ಜಮೀನನ್ನ ಯಾರೂ ಕಿತ್ತುಕೊಳ್ಳಲ್ಲ. ಅಕ್ರಮವಾಗಿ ಕಬಳಿಸಿದ ಜಮೀನನ್ನು ಬಿಡಲೇಬೇಕು. ರೈತರ ಜಮೀನು, ಸಾವಿರಾರು ವರ್ಷಗಳ ದೇವಸ್ಥಾನದ ಜಮೀನು ನಮ್ಮದು ಎಂದರೆ ಬಿಡಲೇಬೇಕು. ವಿಧಾನಸೌಧ, ಸುಪ್ರೀಂ ಕೋರ್ಟ್, ಹೈಕೋರ್ಟ್, ಪಾರ್ಲಿಮೆಂಟ್ ನಮ್ಮದು ಎಂದು ಹೇಳಲು ಅವಕಾಶ ಕೊಡಬೇಕಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ವಕೀಲೆ ಜೀವಾ ಆತ್ಮಹತ್ಯೆ ಪ್ರಕರಣ – ಹೈಕೋರ್ಟ್‌ಗೆ 2,300 ಪುಟಗಳ ಅಂತಿಮ ವರದಿ ಸಲ್ಲಿಕೆ

    ಅಕ್ರಮಕ್ಕೆ ಅವಕಾಶವಿಲ್ಲ. ನ್ಯಾಯಬದ್ಧವಾಗಿದ್ದರೆ ದಾಖಲೆ ನೋಡುತ್ತಾರೆ. ಗ್ರ‍್ಯಾಂಟ್ ಆಗಿದ್ಯಾ, ದಾನ ಕೊಟ್ಟಿದ್ದಾರಾ, ಕೊಂಡುಕೊಂಡಿದ್ದಾರಾ ನೋಡಬೇಕು. ಅದರಲ್ಲಿ ತಪ್ಪೇನಿದೆ. ಮಸೀದಿ ಕಿತ್ತುಕೊಳ್ತಾರೆ ಎಂದು ಅಪಪ್ರಚಾರ ಮಾಡ್ತಿದ್ದಾರೆ. ಆ ರೀತಿ ಏನು ಆಗಲ್ಲ. ಅಪಪ್ರಚಾರದ ಜೊತೆ ಕಾಂಗ್ರೆಸ್ ಬೆಂಬಲ ನೀಡುತ್ತಿರುವುದು ರಾಷ್ಟ್ರಘಾತುಕ. ಭಯೋತ್ಪಾದಕ ಸಂಘಟನೆ, ಎಸ್‌ಡಿಪಿಐ, ಪಿಎಫ್‌ಐ ಸಂಘಟನೆಗಳು ಸಂದರ್ಭದ ಲಾಭ ಪಡೆದು ಭಯೋತ್ಪಾದನೆ ಜಾಲದ ವಿಸ್ತರಣೆಯ ಸಂಚು ಮಾಡುತ್ತಿರುವ ಮಾಹಿತಿ ಬಂದಿದೆ ಎಂದು ಗುಡುಗಿದರು. ಇದನ್ನೂ ಓದಿ: ಪತ್ನಿ ಆತ್ಮಹತ್ಯೆ; ಹಳೇ ಲವರ್ ಜೊತೆಗಿದ್ದ ಅಕ್ರಮ ಸಂಬಂಧದ ಬಗ್ಗೆ ಒಪ್ಪಿಕೊಂಡ ಟೆಕ್ಕಿ ಪತಿ

    ಸಂವಿಧಾನ ಬಾಹಿರವಾಗಿ ನಡೆದುಕೊಳ್ಳಬೇಕೆಂದು ಕಾಂಗ್ರೆಸ್ ಸಂಚು
    ಮನವಿ ಕೊಟ್ಟರೆ ಆಗಲ್ಲ. ಒಂದೊಂದು ಊರಲ್ಲಿ 10 ಹೆಣ ಬೀಳಬೇಕು ಎಂದು ಕಾಂಗ್ರೆಸ್ ಕಾರ್ಪೋರೇಟರ್ ಕಬೀರ್ ಖಾನ್ ಹೇಳುತ್ತಾನೆ. ರೈಲು, ಬಸ್‌ಗಳನ್ನು ಸುಡಬೇಕು. ದೊಂಬಿ ನಡೆಯಬೇಕು ಆಗ ಮಾತ್ರ ಬಗ್ಗಿಸಬಹುದು ಎಂದು ಹೇಳುತ್ತಾನೆ. ಪ್ರಜಾಪ್ರಭುತ್ವ ವಿರೋಧಿಯಾಗಿ ಭಯೋತ್ಪಾದನೆ ನಡೆಸಬೇಕು ಎಂದು ಎಂದು ಹೇಳುವವನು ಕಾಂಗ್ರೆಸ್ ಪಕ್ಷ ಕಾರ್ಪೋರೇಟರ್. ಈವರೆಗೂ ಪಕ್ಷ ಅವನನ್ನ ಕಿತ್ತು ಹಾಕಿಲ್ಲ. ಫತ್ವಾ ಹೊರಡಿಸಿಲ್ಲ, ಮುಸ್ಲಿಂ ಸಂಘಟನೆಯೂ ಅದನ್ನ ತಪ್ಪು ಅಂತ ಹೇಳಿಲ್ಲ. ಸಂವಿಧಾನ ಬಾಹಿರವಾಗಿ ನಡೆದುಕೊಳ್ಳಬೇಕೆಂದು ಸಂಚು ನಡೆಸಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತಿದೆ ಎಂದು ಆರೋಪಿಸಿದರು.

  • ಕಾಂತರಾಜುರನ್ನ ಮನೆಗೆ ಕರೆಸಿ ಸಿಎಂ ಡಿಕ್ಟೇಟ್ ಮಾಡಿ ಜಾತಿಜನಗಣತಿ ವರದಿ ಬರೆಸಿದ್ದಾರೆ – ಆರ್.ಅಶೋಕ್

    ಕಾಂತರಾಜುರನ್ನ ಮನೆಗೆ ಕರೆಸಿ ಸಿಎಂ ಡಿಕ್ಟೇಟ್ ಮಾಡಿ ಜಾತಿಜನಗಣತಿ ವರದಿ ಬರೆಸಿದ್ದಾರೆ – ಆರ್.ಅಶೋಕ್

    -ಜಾತಿಗಣತಿ ವರದಿಗೆ ಸಿದ್ದರಾಮಯ್ಯನವರೇ ಡೈರೆಕ್ಟರ್, ಸ್ಕ್ರೀನ್‌ಪ್ಲೇಯರ್, ಪ್ರೊಡ್ಯೂಸರ್ ಎಂದ ವಿಪಕ್ಷ ನಾಯಕ

    ಬೆಂಗಳೂರು: ಕಾಂತರಾಜು ಅವರನ್ನು ಮನೆಗೆ ಕರೆಸಿ ಸಿಎಂ ಸಿದ್ದರಾಮಯ್ಯ (CM Siddaramaiah) ಡಿಕ್ಟೇಟ್ ಮಾಡಿ ಜಾತಿಜನಗಣತಿ ವರದಿ (Caste Census) ಬರೆಸಿದ್ದಾರೆ. ಈ ವರದಿಯಲ್ಲಿ ರಹಸ್ಯ ಏನೂ ಇಲ್ಲ, ಎಲ್ಲ ಜಗಜ್ಜಾಹೀರು ಆಗಿದೆ ಎಂದು ವಿಪಕ್ಷ ನಾಯಕ ಆರ್.ಆಶೋಕ್ (R Ashok) ಕಿಡಿಕಾರಿದ್ದಾರೆ.

    ನಗರದಲ್ಲಿ ಜಾತಿಜನಗಣತಿ ವರದಿ ವಿಚಾರವಾಗಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂತರಾಜು ಅವರನ್ನು ಮನೆಗೆ ಕರೆಸಿಕೊಂಡು ಸಿದ್ದರಾಮಯ್ಯ ಡಿಕ್ಟೇಟ್ ಮಾಡಿ ವರದಿ ಬರೆಸಿದ್ದಾರೆ. ಈ ವರದಿಯಲ್ಲಿ ಸೀಕ್ರೆಟ್ ಏನೂ ಇಲ್ಲ, ಎಲ್ಲ ಜಗಜ್ಜಾಹೀರು ಆಗಿದೆ. ಇಲ್ಲದಿದ್ದರೆ ಮುಸ್ಲಿಮರ ಜನಸಂಖ್ಯೆ ಇಷ್ಟೊಂದು ಸಂಖ್ಯೆಯಲ್ಲಿ ಹೇಗೆ ಏರುತ್ತಿತ್ತು? ಇದು ಜಾತಿ ಜಾತಿಗಳನ್ನು, ಧರ್ಮ ಧರ್ಮಗಳನ್ನು ಒಡೆಯುವ ವರದಿ. ಜಾತಿಜನಗಣತಿ ವರದಿಯ ಮೂಲಕ ಲಿಂಗಾಯತರು, ಒಕ್ಕಲಿಗರು, ದಲಿತರಿಗೆ ಪಂಗನಾಮ ಹಾಕಿದ್ದಾರೆ. ಮುಸ್ಲಿಮರನ್ನು ಯಾಕೆ ವಿಭಜಿಸಿಲ್ಲ, ಲಿಂಗಾಯತರು, ಒಕ್ಕಲಿಗರನ್ನ ಮಾತ್ರ ವಿಭಜಿಸಿದ್ದೀರಿ. ನಿಮಗೆ ಬೇಕಿರುವ ಮುಸ್ಲಿಂ ಸಮುದಾಯವನ್ನು ವಿಭಜಿಸಲಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.ಇದನ್ನೂ ಓದಿ: ಮತಾಂತರಕ್ಕೆ ಒಪ್ಪದ ಪತ್ನಿ, ಅತ್ತೆ ಮೇಲೆ ಮಾರಣಾಂತಿಕ ಹಲ್ಲೆ – 9 ಜನರ ವಿರುದ್ಧ ಎಫ್‍ಐಆರ್

    ವೀರಶೈವ ಲಿಂಗಾಯತರನ್ನು ಭಾಗ ಮಾಡಿದ್ದೀರಿ, ಒಕ್ಕಲಿಗರಿಗೆ ಇರೋದು ಒಂದೇ ಮಠ, ಆದಿಚುಂಚನಗಿರಿ ಮಠ. ಮುಸ್ಲಿಮರನ್ನು ಫೋಕಸ್ ಮಾಡಲಾಗಿದೆ, ಇದರಿಂದ ಏನು ಸಂದೇಶ ಕೊಡ್ತೀರಿ? ನೆಹರೂ ಅವರೂ ಇದೇ ತಪ್ಪು ಮಾಡಿದ್ದರು. ಅಂಬೇಡ್ಕರ್ ಸ್ಪರ್ಧಿಸಿದ್ದ ಕ್ಷೇತ್ರವನ್ನು ಪಾಕಿಸ್ತಾನಕ್ಕೆ ಸೇರಿಸಿದರು. ಸಿದ್ದರಾಮಯ್ಯ ಮುಸ್ಲಿಂ ಧರ್ಮ ಓಲೈಕೆ ಮಾಡುತ್ತಿದ್ದಾರೆ. ಜನರನ್ನ ಕೂಡಿಸುವುದು ಕಷ್ಟ, ಆದರೆ ಒಡೆಯುವುದು ಸುಲಭ. ಸಿದ್ದರಾಮಯ್ಯ ಒಡೆಯುವುದರಲ್ಲಿ ಎಕ್ಸ್‌ಪರ್ಟ್‌. ಜಾತಿ, ಧರ್ಮಗಳ ಮಧ್ಯೆ ಒಡಕು ತರುತ್ತಿದ್ದಾರೆ. ಇದು ಸಿದ್ದರಾಮಯ್ಯ ಪ್ರಾಯೋಜಕತ್ವದ ಅವೈಜ್ಞಾನಿಕ ವರದಿ. ಲಕ್ಷಾಂತರ, ಕೋಟ್ಯಂತರ ಮನೆಗಳಿಗೆ ಭೇಟಿ ಮಾಡದೇ ವರದಿ ಕೊಟ್ಟಿದ್ದಾರೆ. ಮನೆಗಳ ಸಮೀಕ್ಷೆ ಮಾಡದೇ ಹೇಗೆ ವರದಿ ಮಾಡಿದರು ಎಂದು ಆಗ್ರಹಿಸಿದ್ದಾರೆ.

    ನಾವೇನೂ ಜಾತಿ ಜನಗಣತಿ ವಿರೋಧಿಗಳಲ್ಲ. ಆದರೆ ಯಾರನ್ನೋ ಓಲೈಕೆ ಮಾಡಲು, ವೋಟಿಗಾಗಿ ಸಿದ್ದರಾಮಯ್ಯ ಇಷ್ಟು ಕೀಳು ಮಟ್ಟಕ್ಕೆ ಇಳಿಯುತ್ತಾರೆ ಅಂದರೆ ಅವರ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು. ಕಾಂಗ್ರೆಸ್‌ನಲ್ಲಿ ಬ್ರಿಟಿಷ್ DNA ಬಂದಿದೆ ಅದಕ್ಕೆ ಒಡಕು ಮಾಡುವ ಬುದ್ಧಿ ಕಲಿತಿದ್ದಾರೆ. ಈ ಜಾತಿಗಣತಿ ಒಕ್ಕಲಿಗರು, ಲಿಂಗಾಯತರಲ್ಲಿ ಬೆಂಕಿ ಹಚ್ಚುವ ವರದಿ. ಇದು ಯಾರೂ ಒಪ್ಪುವ ವರದಿ ಅಲ್ಲ. ಈಗಲೂ ಸರ್ಕಾರಕ್ಕೆ ಬುದ್ದಿ ಏನಾದರೂ ಇದ್ದರೆ ವೈಜ್ಞಾನಿಕವಾಗಿ ಸಮೀಕ್ಷೆ ಮಾಡಲಿ. ಪ್ರತೀ ಮನೆಗೆ ಹೋಗಿ ವರದಿ ಕೊಡಲಿ ಎಂದು ಸವಾಲು ಹಾಕಿದರು.ಇದನ್ನೂ ಓದಿ: ಜಾತಿಗಣತಿಯಲ್ಲಿ ಲಿಂಗಾಯತರ ಸಂಖ್ಯೆ ಕಡಿಮೆ ಆಗಲು ನಾವೇ ಕಾರಣ: ಎಂ.ಬಿ.ಪಾಟೀಲ್

    ಜಾತಿ ಜನಗಣತಿ ವರದಿಗೆ 150 ಕೋಟಿ ರೂ. ಖರ್ಚು ಮಾಡಿದೀವಿ ಅಂತಿದ್ದಾರೆ, ಇದೇ ಬೋಗಸ್. ಶಾಮನೂರು ಅವರೇ ನಮ್ಮನೆಗೆ ಬಂದು ಸಮೀಕ್ಷೆ ಮಾಡಿಲ್ಲ ಎಂದಿದ್ದಾರೆ. ಹಾಗಾದರೆ 150 ಕೋಟಿ ರೂ. ಹೊಡೆದವರು ಯಾರು? 150 ಕೋಟಿ ರೂ. ಲೂಟಿ ಆಗಿದೆ, ಇದು ಯಾರ ಜೇಬಿಗೆ ಹೋಯ್ತು? ಆ ಕಾಂತರಾಜು ಸೈನ್ ಹಾಕದೇ ತಪ್ಪಿಸಿಕೊಂಡು ಓಡಿ ಹೋಗಿದ್ದೇಕೆ? ಇದು ಗೊಂದಲದ ಗೂಡಾಗಿದೆ, ಯಾರಿಗೂ ನಂಬಿಕೆ ಇಲ್ಲ. ಮುಸ್ಲಿಮರನ್ನು ಓಲೈಕೆ ಮಾಡಲು, ಅವರನ್ನು ಶಾಶ್ವತವಾಗಿ ವೋಟ್ ಬ್ಯಾಂಕ್ ಮಾಡಿಕೊಳ್ಳುವ ವರದಿ ಇದು. ಸಿದ್ದರಾಮಯ್ಯ ಕೈಚಳಕದಿಂದ ಮಾಡಿರುವ ವರದಿ ಇದು. ಈಗಿನ ವರದಿಗೆ ಸಿದ್ದರಾಮಯ್ಯ ಅವರೇ ಎಲ್ಲ, ಸಿದ್ದರಾಮಯ್ಯ ಅವರೇ ಡೈರೆಕ್ಟರ್, ಸ್ಕ್ರೀನ್ ಪ್ಲೇಯರ್, ಪ್ರೊಡ್ಯೂಸರ್. ಮುಸ್ಲಿಮರನ್ನು ಟಾಪ್‌ನಲ್ಲಿ ಇಡಲು ಸಿದ್ದರಾಮಯ್ಯ ಹೊರಟಿದ್ದಾರೆ, ಅವರಿಗೆ ನಾಚಿಕೆ ಆಗಬೇಕು. ಇದು ಪಕ್ಕಾ ರಾಜಕೀಯದ ಸಮೀಕ್ಷೆ ಎಂದರು.

    ಕಾಂಗ್ರೆಸ್‌ನವರು (Congress) ಅವರ ಹೈಕಮಾಂಡ್ (High Command) ಮಾತು ಕೇಳುತ್ತಿದ್ದಾರೆ. ನೀವು ನಿಮ್ಮ ಹೈಕಮಾಂಡ್ ಮಾತು ಕೇಳಿದರೆ, ಜನ ನಿಮ್ಮನ್ನು ದೂರ ಇಡುತ್ತಾರೆ. ಕಾಂಗ್ರೆಸ್‌ನಲ್ಲೇ ಈ ವರದಿಯಿಂದ ದೊಡ್ಡ ದಂಗೆ ಆಗಬಹುದು. ಹನಿಟ್ರ‍್ಯಾಪ್, 500 ಕೋಟಿ ರೂ. ಕಿಕ್‌ಬ್ಯಾಕ್, ಗುತ್ತಿಗೆದಾರರ ಆರೋಪ ವಿಚಾರ ಡೈವರ್ಟ್ ಮಾಡಲು, ಅವರ ಎಲ್ಲ ಹುಳುಕು ಸೈಡ್‌ಲೈನ್ ಮಾಡುವ ಉದ್ದೇಶದಿಂದ ಈಗ ವರದಿ ಮುನ್ನೆಲೆಗೆ ತಂದಿದ್ದಾರೆ. ಸಿದ್ದರಾಮಯ್ಯ (Siddaramaiah) ಒಬ್ಬ ಕುತಂತ್ರಗಾರ, ಅವರು ತಂತ್ರಗಾರ ಅಲ್ಲ. ಕುತಂತ್ರ ಮಾಡಿಯೇ ಜೆಡಿಎಸ್ ಒಡೆದರು. ಅದಕ್ಕೆ ಅವರನ್ನು ಹೊರಗೆ ಹಾಕಿದರು. ಈಗ ಕಾಂಗ್ರೆಸ್‌ನಿಂದಲೂ ಯಾವಾಗ ಹೊರಗೆ ಹಾಕುತ್ತಾರೋ ಗೊತ್ತಿಲ್ಲ. ಈ ಸರ್ಕಾರ ಬಹಳ ದಿನ ಇರಲ್ಲ. ಸರ್ವನಾಶ ಆಗಿಹೋಗುತ್ತದೆ. ಇದು ಮುಸ್ಲಿಮರ ಓಲೈಕೆ ಮಾಡುವ ಸರ್ಕಾರ. ಈಗಾಗಲೇ ಈ ಸರ್ಕಾರಕ್ಕೆ ರಾಜ್ಯದ ಜನರ, ಬೆಂಗಳೂರು ಜನರ ಶಾಪ ತಟ್ಟಿದೆ ಎಂದು ಭವಿಷ್ಯ ನುಡಿದರು.

    ಇಡಿಯಿಂದ ನ್ಯಾಷನಲ್ ಹೆರಾಲ್ಡ್ ಆಸ್ತಿ ಮುಟ್ಟುಗೋಲು ಕ್ರಮ ಸ್ವಾಗತಾರ್ಹ. ಈ ಆಸ್ತಿ ದೇಶದ ಆಸ್ತಿಯಾಗಬೇಕು, ಇದು ದೇಶದ ಸ್ವಾತಂತ್ರ‍್ಯ ಹೋರಾಗಾರರ ಆಸ್ತಿ. ಅದನ್ನು ಯಾವುದೇ ಕಾರಣಕ್ಕೂ ಇಟಲಿ ಆಸ್ತಿ ಮಾಡಲು ಬಿಡಲ್ಲ. ಇನ್ನೂ ವರದಿಯಲ್ಲಿ ಒಕ್ಕಲಿಗರ ಮೀಸಲು ಹೆಚ್ಚಳಕ್ಕೆ ಶಿಫಾರಸು ವಿಚಾರವಾಗಿ ಮಾತನಾಡಿ, ಒಕ್ಕಲಿಗರ ಮೀಸಲು ಹೆಚ್ಚಳ ಸಾಧ್ಯವಿಲ್ಲ. ಈ ವರದಿ ಮೂಲಕ ಒಕ್ಕಲಿಗರ ಮೂಗಿಗೆ ತುಪ್ಪ ಸವರಲಾಗಿದೆ. ಈಗಾಗಲೇ 50% ಮೀಸಲಾತಿ ಮಿತಿ ಇರಬೇಕು ಅಂತ ಇದೆ. ಸರ್ಕಾರ ಸುಳ್ಳು ಹೇಳ್ತಿದೆ, ಹಾಗಾದ್ರೆ ಆದೇಶ ಹೊರಡಿಸಲಿ. ಹಾಗೆ ಸುಲಭವಾಗಿ ಮೀಸಲಾತಿ ಜಾಸ್ತಿ ಮಾಡುವ ಹಾಗಿದ್ದಿದ್ದರೆ ನಾವು ಇದ್ದಾಗಲೇ ಕೊಡುತ್ತಿರಲಿಲ್ಲವಾ? ಮೀಸಲಾತಿ ಹೆಚ್ಚಳ ರಾಜ್ಯಕ್ಕೆ ಅಧಿಕಾರ ಇಲ್ಲ ಎಂದು ಹೇಳಿದರು.ಇದನ್ನೂ ಓದಿ: ಜಾತಿ ಜನಗಣತಿ ವರದಿಯೇ ಸಿದ್ದರಾಮಯ್ಯಗೆ ಮರಣ ಶಾಸನ ಆಗಬಹುದು: ವಿ. ಸೋಮಣ್ಣ

  • ಜಾತಿಗಣತಿಯಲ್ಲಿ ಲಿಂಗಾಯತರ ಸಂಖ್ಯೆ ಕಡಿಮೆ ಆಗಲು ನಾವೇ ಕಾರಣ: ಎಂ.ಬಿ.ಪಾಟೀಲ್

    ಜಾತಿಗಣತಿಯಲ್ಲಿ ಲಿಂಗಾಯತರ ಸಂಖ್ಯೆ ಕಡಿಮೆ ಆಗಲು ನಾವೇ ಕಾರಣ: ಎಂ.ಬಿ.ಪಾಟೀಲ್

    ವಿಜಯಪುರ: ಜಾತಿಗಣತಿಯಲ್ಲಿ (Caste Census) ಲಿಂಗಾಯತರ ಸಂಖ್ಯೆ ಕಡಿಮೆ ಆಗಲು ನಾವೇ ಕಾರಣ. ನಮ್ಮವರು ಮೀಸಲಾತಿಗಾಗಿ ಹಿಂದೂ ರೆಡ್ಡಿ, ಹಿಂದೂ ಬಣಜಿಗ ಈ ತರಹ ಬರೆಸಿದ್ದಾರೆ. ಎಲ್ಲರನ್ನೂ ಒಗ್ಗೂಡಿಸಿದರೇ ಲಿಂಗಾಯತರು 1 ಕೋಟಿಗೂ ಅಧಿಕ ಆಗುತ್ತಾರೆ ಎಂದು ಸಚಿವ ಎಂ.ಬಿ.ಪಾಟೀಲ್ (M B Patil)  ಹೇಳಿದರು.

    ವಿಜಯಪುರದಲ್ಲಿ (Vijayapura) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಾತಿಗಣತಿ ಅಧ್ಯಯನ ಮಾಡಲು ಇಂದು ವರದಿ ಪ್ರತಿ ಬಂದಿದೆ. ನಾನು ಇದುವರೆಗೂ ಅಧ್ಯಯನ ಮಾಡಿಲ್ಲ. ಅದನ್ನ ತಗೆದು ನೋಡುತ್ತೇನೆ. ಇವತ್ತು ಜಾತಿಗಣತಿಯಲ್ಲಿ ಲಿಂಗಾಯತರ ಸಂಖ್ಯೆ ಕಡಿಮೆ ಆಗಿದೆ. ಮಾಧ್ಯಮಗಳ ವರದಿಯಲ್ಲಿ ನೋಡಿದ್ದೇನೆ. ಲಿಂಗಾಯತ ಕೆಲ ಸಮಾಜದವರು ಮೀಸಲಾತಿಗಾಗಿ ದಾಖಲಾತಿಗಳಲ್ಲಿ ಬೇರೆ ನಮೂದಿಸಿದ್ದಾರೆ ಎಂದರು. ಇದನ್ನೂ ಓದಿ: ಜಾತಿ ಜನಗಣತಿ ವರದಿಯೇ ಸಿದ್ದರಾಮಯ್ಯಗೆ ಮರಣ ಶಾಸನ ಆಗಬಹುದು: ವಿ. ಸೋಮಣ್ಣ

    ಜಾತಿಗಣತಿಯಲ್ಲಿ ಲಿಂಗಾಯತರ ಸಂಖ್ಯೆ ಕಡಿಮೆ ಆಗಲು ನಾವೇ ಕಾರಣ. ನಮ್ಮವರು ಮೀಸಲಾತಿಗಾಗಿ ಹಿಂದೂ ರೆಡ್ಡಿ, ಹಿಂದೂ ಬಣಜಿಗ ಈ ತರಹ ಬರೆಸಿದ್ದಾರೆ. ಇದರಿಂದ ಲಿಂಗಾಯತರ ಸಂಖ್ಯೆ ಕಡಿಮೆಯಾಗಿದೆ. ಎಲ್ಲರನ್ನೂ ಒಗ್ಗೂಡಿಸಿದರೆ ಲಿಂಗಾಯತರು 1 ಕೋಟಿಗೂ ಅಧಿಕ ಆಗುತ್ತಾರೆ. ಮೊದಲು ವರದಿಯನ್ನ ಅಧ್ಯಯನ ಮಾಡಿದ ನಂತರ ನಮ್ಮ ಸಂಶಯಗಳೇನಿವೆ ಅದನ್ನ ಚರ್ಚಿಸುತ್ತೇವೆ. ವರದಿಯ ಒಳಗಡೆ ಏನಿದೆ ಎಂದು ನೋಡಿ ನಂತರ ಅದರ ಬಗ್ಗೆ ಚರ್ಚೆ ಮಾಡುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಪತ್ನಿ ಆತ್ಮಹತ್ಯೆ; ಹಳೇ ಲವರ್ ಜೊತೆಗಿದ್ದ ಅಕ್ರಮ ಸಂಬಂಧದ ಬಗ್ಗೆ ಒಪ್ಪಿಕೊಂಡ ಟೆಕ್ಕಿ ಪತಿ

    ಬಿಜೆಪಿಯವರು ಕೇಂದ್ರದ ವಿರುದ್ಧ ಹೋರಾಟ ಮಾಡಲಿ
    ಬಿಜೆಪಿ (BJP) ಜನಾಕ್ರೋಶ ಯಾತ್ರೆ ವಿಚಾರವಾಗಿ ಪ್ರತಿಕ್ರಿಯಿಸಿ, ಯಾವ ಮುಖ ಇಟ್ಟುಕೊಂಡು ಯಾತ್ರೆ ಮಾಡುತ್ತಾರೆ. ಕನ್ನಡಿಯಲ್ಲಿ ಮುಖ ನೋಡೋಕೆ ಹೇಳಿ ಅವರಿಗೆ. ಇಲ್ಲ ಮೋದಿ ಮುಖ ನೋಡಿ ಮೋದಿಗೆ ನಮಸ್ಕಾರ ಮಾಡಲು ಹೇಳಿ. 50 ರೂ. ಸಿಲಿಂಡರ್ ದರ ಜಾಸ್ತಿ ಆಗಿದೆ. ಡಿಸೇಲ್, ಪೆಟ್ರೋಲ್ ದರ ಜಾಸ್ತಿ ಮಾಡಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಖಳನಟ ಶೇಷಗಿರಿ ಬಸವರಾಜು ವಿರುದ್ಧ ರೇಪ್ ಆರೋಪ ಪ್ರಕರಣ‌; ಬಿ-ರಿಪೋರ್ಟ್ ಸಲ್ಲಿಕೆ

    ಬಿಜೆಪಿ ಅವರು ಹೋರಾಟ ಮಾಡುವುದು ಸರಿಯಾಗಿದೆ. ಆದರೆ ಕಾಂಗ್ರೆಸ್ ವಿರುದ್ಧದ ಹೋರಾಟ ಬೇಡ. ಕೇಂದ್ರ ಸರ್ಕಾರ, ನರೇಂದ್ರ ಮೋದಿ ವಿರುದ್ಧ ಮಾಡಲಿ ಎಂದು ಸಲಹೆ ಕೊಡುತ್ತೇನೆ ಟೀಕಿಸಿದರು. ಇದನ್ನೂ ಓದಿ: ಜಾತಿಗಣತಿ ವರದಿ ತಯಾರಿಕೆಯ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ: ರಂಭಾಪುರಿ ಶ್ರೀ

    ಯತ್ನಾಳ್ ಹತ್ಯೆಗೆ ಸಂಚು ವಿಚಾರವಾಗಿ ಮಾತನಾಡಿ, ಕಾನೂನು ಎಲ್ಲರಿಗೂ ಅನ್ವಯ ಆಗುತ್ತದೆ. ಯತ್ನಾಳ್ ಅವರು ಇವತ್ತು ಮುಸ್ಲಿಂಮರ ಪೈಗಂಬರ್ ಬಗ್ಗೆ ಮಾತನಾಡಿರುವುದು ಸರಿಯಲ್ಲ. ಯತ್ನಾಳ್ ಮೇಲೆ ಬೆದರಿಕೆ ಹಾಕಿದ್ದು ಅದು ಕೂಡ ತಪ್ಪು. ಈ ಎರಡು ಘಟನೆಗಳ ಪ್ರಕರಣ ದಾಖಲಾಗುತ್ತದೆ ಹಾಗೂ ತನಿಖೆಯೂ ಆಗುತ್ತದೆ. ಆದರೆ ಯತ್ನಾಳ್ ಅವರೇ ಇದನೆಲ್ಲಾ ಅಹ್ವಾನಿಸಿಕೊಂಡಿದ್ದಾರೆ. ಯತ್ನಾಳ್ ಅವರಿಗೆ ಸೂಕ್ತ ಭದ್ರತೆ ಕೊಡುತ್ತೇವೆ ಆತಂಕ ಬೇಡ ಎಂದರು.

  • ಜಾತಿಗಣತಿ ವರದಿ ತಯಾರಿಕೆಯ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ: ರಂಭಾಪುರಿ ಶ್ರೀ

    ಜಾತಿಗಣತಿ ವರದಿ ತಯಾರಿಕೆಯ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ: ರಂಭಾಪುರಿ ಶ್ರೀ

    – ಜಾತಿಗಣತಿ ವರದಿ ಪುನರ್‌ವಿಮರ್ಶೆ ಆಗ್ಬೇಕು, ಅಧಿಕಾರಿಗಳು ಮನೆಮನೆಗೆ ಭೇಟಿ ಕೊಡಬೇಕು

    ಚಿಕ್ಕಮಗಳೂರು: ಜಾತಿಗಣತಿ ವರದಿ (Caste Census Report) ತಯಾರು ಮಾಡುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ. ಕೇಂದ್ರ ಸರ್ಕಾರಕ್ಕೆ ಮಾತ್ರ ಈ ಅಧಿಕಾರ ಇರುವುದು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ಸರಿಯಾದ ಮಾಹಿತಿ ಕೆಲವೊಂದು ಸೂಚನೆಗಳನ್ನು ನೀಡಬೇಕು ಎಂದು ಬಾಳೆಹೊನ್ನೂರಿನ (Balehonnur) ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯ ಜಗದ್ಗುರುಗಳು ಹೇಳಿದರು.

    ತರಾತುರಿ ಜಾತಿಗಣತಿ, ವರದಿ ಮಂಡನೆಯ ಕುರಿತು ಚಿಕ್ಕಮಗಳೂರು (Chikkamagaluru) ಜಿಲ್ಲೆಯ ರಂಭಾಪುರೀ ಪೀಠದಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಸರ್ಕಾರ ಯಾವುದೋ ಒಂದು ಜಾತಿಯನ್ನು ತುಷ್ಟೀಕರಣ ಮಾಡಲು ಜಾತಿಗಣತಿಗೆ ಮುಂದಾಗಿದೆ. ಹತ್ತಾರು ವರ್ಷಗಳಿಂದ ಜಾತಿಗಣತಿ ವರದಿ ನೆನೆಗುದಿಗೆ ಬಿದ್ದಿತ್ತು. ಜಾತಿಗಣತಿಗೆ ಅಖಿಲ ಭಾರತ ವೀರಶೈವ ಮಹಾಸಭಾ ಸಂಘ ವಿರೋಧಿಸಿದೆ. ಸರ್ಕಾರ ಜಾತಿಗಣತಿ ವರದಿಯನ್ನು ಪಾರದರ್ಶಕವಾಗಿ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ನನ್ನ ಪ್ರಾರ್ಥನೆಗೆ ಫಲ ಸಿಕ್ಕಿದ್ದಕ್ಕೆ ಘಾಟಿ ಸುಬ್ರಮಣ್ಯ ಸ್ವಾಮಿ ದರ್ಶನ: ಡಿ.ಕೆ ಶಿವಕುಮಾರ್

    ಸರ್ಕಾರದ ಮೂಗಿನ ನೇರಕ್ಕೆ ಜಾತಿಗಣತಿ ವರದಿ ತಯಾರಾಗಿದೆ. ಜಾತಿಗಣತಿ ವರದಿ ಪುನರ್‌ವಿಮರ್ಶೆ ಆಗಬೇಕು. ಅಧಿಕಾರಿಗಳು ಮನೆಮನೆಗೆ ಭೇಟಿ ಕೊಡಬೇಕು. ಜಾತಿಗಣತಿ ವರದಿ ಬಗ್ಗೆ ಈಗಾಗಲೇ ಹಲವರು ಆತಂಕ ಹೊರಹಾಕಿದ್ದಾರೆ. ಜನರ ಭಾವನೆಯನ್ನು ಅರಿತು ಪಾರದರ್ಶಕತೆಯಿಂದ, ಮನೆಮನೆಗೆ ಭೇಟಿ ಕೊಟ್ಟು ಅಧಿಕಾರಿಗಳು ವರದಿ ತಯಾರಿಸಬೇಕು ಎಂದರು. ಇದನ್ನೂ ಓದಿ: ವಕ್ಫ್‌ ಕಾಯ್ದೆಗೆ ವಿರೋಧ, ಬಂಗಾಳ ಧಗಧಗ – 150ಕ್ಕೂ ಹೆಚ್ಚು ಮಂದಿ ಬಂಧನ

    ಆಡಳಿತ ಪಕ್ಷದ ಅನೇಕ ಶಾಸಕರು ಈ ಜಾತಿಗಣತಿ ವರದಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ವಿರೋಧ ಪಕ್ಷದವರು ಜಾತಿಗಣತಿ ವರದಿಯನ್ನು ಬಹಿಷ್ಕಾರ ಮಾಡಿದ್ದಾರೆ. ಮುಖ್ಯಮಂತ್ರಿಗಳು ಪುನರ್ ಪರಿಶೀಲನೆ ನಡೆಸಿ, ಜಾತಿಗಣತಿ ವರದಿಗೆ ಮುಂದಾದರೆ ಜನರಿಗೆ ಒಳಿತಾಗಲಿದೆ. ಇಲ್ಲವಾದರೆ ಜಾತಿ ಸಂಕಷ್ಟಕ್ಕೆ ಕಾರಣವಾಗಲಿದೆ ಎಂದು ಹೇಳಿದರು. ಇದನ್ನೂ ಓದಿ: ಇತ್ಯರ್ಥ ಆಗಿರೋ ಅತ್ಯಾಚಾರ ಪ್ರಕರಣದ ಲಿಸ್ಟ್ ಕೇಳಿದ ವಿದ್ಯಾರ್ಥಿನಿ – ತಡಬಡಾಯಿಸಿದ ಮಹಿಳಾ ಆಯೋಗದ ಅಧ್ಯಕ್ಷೆ

    ಈ ಜಾತಿಗಣತಿ ವರದಿಯನ್ನು ಸಾರಾಸಗಟಾಗಿ ಬಹಿಷ್ಕರಿಸಿ, ತಿರಸ್ಕಾರ ಮಾಡುತ್ತಿದ್ದೇವೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಕೆಲವೊಂದು ಜಾತಿಗೆ ಮೀಸಲು ನೀಡಬೇಕೆನ್ನುವುದು ಸರ್ಕಾರಕ್ಕೆ ಇದೆ. ಆದರೆ ಸಂವಿಧಾನದ ಆಶಯದಂತೆ ಜಾತಿಗಣತಿ ವರದಿ ವಿಚಾರದಲ್ಲಿ ಹೆಜ್ಜೆ ಇಡಬೇಕು. ಸಂವಿಧಾನದಲ್ಲಿ ಯಾವ ಜಾತಿಗೆ ಎಷ್ಟು ಮೀಸಲಾತಿ ನೀಡಬೇಕೆನ್ನುವುದನ್ನು ಉಲ್ಲೇಖವಿದೆ ಎನ್ನುವುದರ ಮೂಲಕ ರಾಜ್ಯ ಸರ್ಕಾರದ ಜಾತಿಗಣತಿ ವರದಿಗೆ ವಿರೋಧ ವ್ಯಕ್ತಪಡಿಸಿದರು.

  • ಸಿಎಂ ಕುರ್ಚಿ ಉಳಿಸಿಕೊಳ್ಳಲು ಜಾತಿಗಣತಿ ಡ್ರಾಮಾ: ಹೆಚ್.ಡಿ.ಕುಮಾರಸ್ವಾಮಿ ಕಿಡಿ

    ಸಿಎಂ ಕುರ್ಚಿ ಉಳಿಸಿಕೊಳ್ಳಲು ಜಾತಿಗಣತಿ ಡ್ರಾಮಾ: ಹೆಚ್.ಡಿ.ಕುಮಾರಸ್ವಾಮಿ ಕಿಡಿ

    ಬೆಂಗಳೂರು: ತಮ್ಮ ಕುರ್ಚಿ ಉಳಿಸಿಕೊಳ್ಳಲು ಸಿದ್ದರಾಮಯ್ಯ ಜಾತಿಗಣತಿ ನಾಟಕ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (H D Kumaraswamy) ಆರೋಪ ಮಾಡಿದ್ದಾರೆ.

    ಬೆಂಗಳೂರಿನಲ್ಲಿ (Bengaluru) ಮಾಧ್ಯಮವರೊಂದಿಗೆ ಮಾತನಾಡಿದ ಅವರು, ಜಾತಿಗಣತಿ ವರದಿಗೆ (Caste Census Report) ಅರ್ಥವೇ ಇಲ್ಲ. ಕಾಂತರಾಜು ಆಯೋಗದ ವರದಿ ಸಿದ್ಧ ಮಾಡಿ 10 ವರ್ಷಗಳೇ ಕಳೆದಿವೆ. ಜನರಲ್ಲಿ ಗ್ಯಾರಂಟಿ ವೈಫಲ್ಯ, ಭ್ರಷ್ಟಾಚಾರ, ದರ ಏರಿಕೆ ವಿರುದ್ಧ ಆಕ್ರೋಶ ಸ್ಫೋಟವಾಗುವ ಹಂತದಲ್ಲಿದೆ. ಹೀಗಾಗಿ ಜನರ ಗಮನ ಬೇರೆಡೆಗೆ ಸೆಳೆಯಲು ಜಾತಿಗಣತಿ ಡ್ರಾಮಾ ನಡೆಸಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಗೋಲ್ಡ್ ಪ್ರಿಯರಿಗೆ ಶಾಕ್‌ – ಚಿನ್ನದ ಬೆಲೆ ಒಂದೇ ದಿನ 6,000 ರೂ. ಏರಿಕೆ

    ಇವರು ಜಾತಿಗಣತಿ ಮಾಡಬೇಕಾದರೆ ಹೊಸದಾಗಿ ಸಮೀಕ್ಷೆ ಮಾಡಬೇಕು. ಹೊಸದಾಗಿ ವರದಿ ಕೊಡಬೇಕಾಗುತ್ತದೆ. 10 ವರ್ಷದಲ್ಲಿ ಬಹಳ ಬದಲಾವಣೆ ಆಗಿದೆ. ಈಗ ನೋಡಿದರೆ ಇವರು ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಜಾತಿ-ಜಾತಿ ಮಧ್ಯ ಸಂಘರ್ಷ ತರುವ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಜಾತಿಗಣತಿ ಶಿಫಾರಸು: ಓಬಿಸಿ, ಮುಸ್ಲಿಂ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡುತ್ತಾ ಸರ್ಕಾರ?

    ಸಿದ್ದರಾಮಯ್ಯ (Siddaramaiah) ರಾಜ್ಯವನ್ನು ಸರ್ವನಾಶ ಮಾಡಲು ಹೊರಟಿದ್ದಾರೆ. ಜಾತಿ ಸಂಘರ್ಷಕ್ಕೆ ಏನೇನು ಮಾಡಬೇಕೋ ಅದಕ್ಕೆ ವೇದಿಕೆ ಸಿದ್ಧ ಮಾಡಲು ಸಿದ್ದರಾಮಯ್ಯ ಹೊರಟಿದ್ದಾರೆ. ಇವರು ಬಂದು 2 ವರ್ಷವಾಯಿತು. ಆವಾಗಿನಿಂದ ಯಾಕೆ ವರದಿ ಜಾರಿ ಮಾಡಲಿಲ್ಲ. ಕುರ್ಚಿ ಉಳಿಸಿಕೊಳ್ಳಬೇಕೆಂದು ಈ ಡ್ರಾಮಾ ಆರಂಭ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

  • ಕಾಂಗ್ರೆಸ್‌ನಲ್ಲಿ ಕೆಲವರು ಪಂಚಾಂಗ ನೋಡ್ತಾರೆ, ಇನ್ನುಳಿದವರು ಗಿಳಿಶಾಸ್ತ್ರ ಕೇಳ್ತಾರೆ: ಬಿ.ಕೆ.ಹರಿಪ್ರಸಾದ್

    ಕಾಂಗ್ರೆಸ್‌ನಲ್ಲಿ ಕೆಲವರು ಪಂಚಾಂಗ ನೋಡ್ತಾರೆ, ಇನ್ನುಳಿದವರು ಗಿಳಿಶಾಸ್ತ್ರ ಕೇಳ್ತಾರೆ: ಬಿ.ಕೆ.ಹರಿಪ್ರಸಾದ್

    ಬೆಂಗಳೂರು: ಏನು ಮಾಡೋದು ಕಾಂಗ್ರೆಸ್ ಪಕ್ಷದಲ್ಲಿ ಕೆಲವರು ಪಂಚಾಂಗ ನೋಡ್ತಾರೆ. ಕೆಲವರು ಗಿಳಿಶಾಸ್ತ್ರ ಕೇಳ್ತಾರೆ. ನಾವು ಸಂವಿಧಾನ ನೋಡುತ್ತೇವೆ. ಸಂವಿಧಾನದಲ್ಲಿ ಎಲ್ಲದಕ್ಕೂ ಅವಕಾಶ ಇದೆ ಎಂದು ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದರು.

    ಜಾತಿಗಣತಿ ಜಾರಿಗೆ ವಿಳಂಬ ವಿಚಾರವಾಗಿ ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೂಗಿಗೆ ತುಪ್ಪ ಸವರುವುದಕ್ಕೆ ನಾವು ಗಂಜಲ ರಾಜ್ಯದವರು ಅಲ್ಲ. ನಾವು ನಂದಿನ ಹಾಲಿನ ರಾಜ್ಯದವರು. ಏಪ್ರಿಲ್ 17ಕ್ಕೆ ಜಾತಿಗಣತಿ ಬಗ್ಗೆ ತೀರ್ಮಾನ ಆಗುತ್ತದೆ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಸಂಬಂಧಗಳು ಇಂದು ಗಟ್ಟಿಯಾಗಿ ಉಳಿದಿದೆ ಅಂದ್ರೆ ಅಪ್ಪಾಜಿ ಸಿನಿಮಾಗಳೇ ಕಾರಣ: ಶಿವಣ್ಣ

    ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪ್ರಮಾಣ ಏರಿಕೆ ಆಗಬೇಕು. ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲೇ ಇದೆ. ದತ್ತಾಂಶ ಇಲ್ಲ ಎಂದು ಹೇಳಿ ಆಗ ಸುಪ್ರೀಂ ಕೋರ್ಟ್ ಸೂಚನೆ ಕೊಟ್ಟಿತ್ತು. ಜಡ್ಜ್ಮೆಂಟ್ ಕೊಟ್ಟಿಲ್ಲ. 50% ಮೀಸಲಾತಿ ದಾಟುವಂತಿಲ್ಲ ಅನ್ನೋದು ಡೈರೆಕ್ಷನ್ ಅಷ್ಟೇ ಎಂದು ಹೇಳಿದರು. ಇದನ್ನೂ ಓದಿ: ಅಯೋಧ್ಯೆಯ ಗೆಸ್ಟ್‌ ಹೌಸ್‌ನಲ್ಲಿ ಮಹಿಳೆ ಸ್ನಾನ ಮಾಡುವ ವೀಡಿಯೋ ಸೆರೆ ಹಿಡಿದವ ಅರೆಸ್ಟ್‌

    ಈಗ ನಮ್ಮ ಬಳಿ ಜಾತಿಗಣತಿ ಡೇಟಾ ಇದೆ. ಅದರ ಪ್ರಕಾರ ಮೀಸಲಾತಿ ಹೆಚ್ಚಿಸಬಹುದು. ರಾಹುಲ್ ಗಾಂಧಿ ಅವರು 75% ಮೀಸಲಾತಿ ಕೊಡುತ್ತೇವೆ ಎಂದು ಹೇಳಿದ್ದಾರೆ. ತೆಲಂಗಾಣದಲ್ಲಿ ಆಗಿದೆ. ಎರಡನೇ ಹೆಜ್ಜೆ ಕರ್ನಾಟಕದ್ದು, ನಂತರ ಜಾರ್ಖಂಡ್, ಬಳಿಕ ದೇಶದೆಲ್ಲೆಡೆ ಜಾರಿಗೆ ತರುತ್ತೇವೆ ಎಂದರು. ಇದನ್ನೂ ಓದಿ: ಜಾತಿಗಣತಿ ಶಿಫಾರಸು: ಓಬಿಸಿ, ಮುಸ್ಲಿಂ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡುತ್ತಾ ಸರ್ಕಾರ?

    ಇದೇ ವೇಳೆ ಜಾತಿ ಜನಗಣತಿ ವರದಿ ಅನುಷ್ಠಾನಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ಶಾಮನೂರು ಶಿವಶಂಕರಪ್ಪ ವಿರುದ್ಧ ಬಿ.ಕೆ.ಹರಿಪ್ರಸಾದ್ ಆಕ್ರೋಶ ಹೊರಹಾಕಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಯಾರೂ ಧಮ್ಮಿ ಹಾಕಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವದಲ್ಲಿ ಯಾರು ಬೇಕಾದರೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಬಹುದು. ಆದರೆ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ತಂದಾಗ ಏಕೆ ವಿರೋಧಿಸಲಿಲ್ಲ ಎಂದು ಖಾರವಾಗಿ ಪ್ರಶ್ನಿಸಿದರು.