Tag: Caste Census Report

  • ಜಾತಿ‌ ಜನಗಣತಿ ವರದಿ ಚರ್ಚೆಗೆ ವಿಶೇಷ ಅಧಿವೇಶನ ಕರೆಯಲಿ: ಸಿ.ಟಿ ರವಿ ಆಗ್ರಹ

    ಜಾತಿ‌ ಜನಗಣತಿ ವರದಿ ಚರ್ಚೆಗೆ ವಿಶೇಷ ಅಧಿವೇಶನ ಕರೆಯಲಿ: ಸಿ.ಟಿ ರವಿ ಆಗ್ರಹ

    ಬೆಂಗಳೂರು: ಜಾತಿ ಜನಗಣತಿ ವರದಿ (Caste Census Report) ಕುರಿತು ಸಮಗ್ರ ಚರ್ಚೆಗೆ ಸರ್ಕಾರ ವಿಧಾನಮಂಡಲ ಅಧಿವೇಶನ ಕರೆಯಲಿ ಎಂದು ಪರಿಷತ್ ಸದಸ್ಯ ಸಿ ಟಿ ರವಿ (C.T. Ravi) ಆಗ್ರಹಿಸಿದ್ದಾರೆ.

    ನಗರದಲ್ಲಿ ಮಾಧ್ಯಮಗಳ ಜೊತೆ ಮಾತಾಡಿದ ಅವರು, ಮುಖ್ಯಮಂತ್ರಿಗಳು ಅವರ ಸಂಪುಟದ ಸದಸ್ಯರಿಗೇ ಸಮಾಧಾನ ಪಡಿಸಲು ಆಗಿಲ್ಲ. ನಿಮ್ಮ ಶಾಸಕರಿಗೇ ವರದಿ ಬಗ್ಗೆ ಒಪ್ಪಿಸಲು ಆಗಿಲ್ಲ. ಇನ್ನೂ ರಾಜ್ಯದ ಜನರಿಗೆ ಹೇಗೆ ಒಪ್ಪಿಸ್ತೀರಾ ಎಂದು ಪ್ರಶ್ನಿಸಿದರು. ಮೂಲ ವರದಿಯೇ ಇಲ್ಲ, ಸದಸ್ಯ ಕಾರ್ಯದರ್ಶಿ ಅವರೇ ಆ ಸಮೀಕ್ಷೆಗೆ ಸಹಿ ಹಾಕಿಲ್ಲ. ಅದಕ್ಕೆ ಹೇಗೆ ಮಾನ್ಯತೆ ಸಿಗುತ್ತೆ? ವರದಿಯಲ್ಲಿ ವ್ಯತ್ಯಾಸಗಳು ಬಹಳ ಇವೆ. ಕೆಲವು ಸಮುದಾಯಗಳ ಸಂಖ್ಯೆ ಹೆಚ್ಚಾಗಿದೆ, ಕೆಲವರದ್ದು ಕಡಿಮೆ ಆಗಿದೆ. ಇದನ್ನು ಹೇಗೆ ಸರಿಪಡಿಸ್ತೀರಿ? ಸಮೀಕ್ಷೆ ಸರಿಯಾಗಿ ಆಗಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ಸಿಗರಿಂದ ಜನರ ಕಣ್ಣಿಗೆ ಮಣ್ಣೆರಚುವ ಕೆಲಸ, ಇದು ಜಾಹೀರಾತಿನ ಸರ್ಕಾರ: ಬಿವೈವಿ

    ರಾಜ್ಯದ ನಂಬರ್ ಒನ್ ಜನಸಂಖ್ಯೆ ಮುಸ್ಲಿಂ ಅಂತ ಹೇಳಿದ್ದಾರೆ. ಹಾಗಾದರೆ ಅವ್ರು ಹೇಗೆ ಮೈನಾರಿಟಿ ಆಗ್ತಾರೆ? ಅವರು ಬಹುಸಂಖ್ಯಾತರು, ಅವರನ್ನು ಅಲ್ಪಸಂಖ್ಯಾತ ಮಾನ್ಯತೆಯಿಂದ ತೆಗೆಯಿರಿ. ನಿಮ್ಮ ವರದಿಯನ್ನು ಅಧಿವೇಶನದಲ್ಲಿ ಮಂಡಿಸಿ. ಎಲ್ಲೆಲ್ಲಿ ಸಮೀಕ್ಷೆ ಹೋಗಿದ್ರು? ವರದಿ ಎಷ್ಟು ವೈಜ್ಞಾನಿಕ ಎಂದು ಚರ್ಚೆಯಾಗಲಿ ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: Pahalgam Attack | ದೆಹಲಿ, ಮುಂಬೈ ಪ್ರವಾಸಿ ತಾಣಗಳ ಮೇಲೂ ನಿಗಾ, ಬುಧವಾರ ಜಮ್ಮು ಬಂದ್‌ಗೆ ಕರೆ

  • ಅಸಲಿ ಜಾತಿಗಣತಿ ವರದಿ ಸಿಎಂ ಮನೆಯಲ್ಲಿದೆ, ಮೂಲ ಪ್ರತಿ ನಾಪತ್ತೆ ಬಗ್ಗೆ ನ್ಯಾಯಾಂಗ ತನಿಖೆಯಾಗಲಿ: ಆರ್.ಅಶೋಕ್

    ಅಸಲಿ ಜಾತಿಗಣತಿ ವರದಿ ಸಿಎಂ ಮನೆಯಲ್ಲಿದೆ, ಮೂಲ ಪ್ರತಿ ನಾಪತ್ತೆ ಬಗ್ಗೆ ನ್ಯಾಯಾಂಗ ತನಿಖೆಯಾಗಲಿ: ಆರ್.ಅಶೋಕ್

    -ಡೂಪ್ಲಿಕೇಟ್ ಜಾತಿಗಣತಿ ವರದಿ ಕೊಟ್ಟು, ರಕ್ತ ಕಣ್ಣೀರು ಪಿಕ್ಚರ್ ತೋರಿಸಿದ್ದಾರೆ ಎಂದ ವಿಪಕ್ಷ ನಾಯಕ

    ಬೆಂಗಳೂರು: ಅಸಲಿ ಜಾತಿಗಣತಿ ವರದಿ (Caste Census Report) ಸಿಎಂ ಸಿದ್ದರಾಮಯ್ಯನವರ (CM Siddaramaiah) ಮನೆಯಲ್ಲಿದೆ, ಮೂಲ ಪ್ರತಿ ಕಳೆದುಹೋಗಿರುವ ಬಗ್ಗೆ ಸರ್ಕಾರ ನ್ಯಾಯಾಂಗ ತನಿಖೆ ನಡೆಸಬೇಕೆಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ (R Ashok) ಆಗ್ರಹಿಸಿದರು.ಇದನ್ನೂ ಓದಿ: ರಾಜ್ಯದ 38ನೇ ಡಿಜಿ & ಐಜಿಪಿ ಆಗಿದ್ದ ಓಂ ಪ್ರಕಾಶ್‌ ಹತ್ಯೆ – ಪತ್ನಿಯಿಂದಲೇ ಕೊಲೆ

    ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ಅಸಲಿ ವರದಿ ಸಿದ್ದರಾಮಯ್ಯನವರ ಮನೆಯಲ್ಲಿದೆ. ಡೂಪ್ಲಿಕೇಟ್ ವರದಿ ವಿಧಾನಸೌಧದಲ್ಲಿದೆ. 2021ರಲ್ಲಿ ಜಯಪ್ರಕಾಶ್ ಹೆಗ್ಡೆಯವರೇ ಜಾತಿ ಜನಗಣತಿ ಮೂಲ ವರದಿ ಕಾಣೆಯಾಗಿದೆ ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದರು. ಆದರೆ ಈಗ ಕೊಟ್ಟಿರುವುದು ಯಾವುದು? ಅಸಲಿನಾ? ನಕಲಿನಾ? ಡೂಪ್ಲಿಕೇಟ್ ಜಾತಿ ಜನಗಣತಿ ವರದಿ ಕೊಟ್ಟು, ರಕ್ತ ಕಣ್ಣೀರು ಪಿಕ್ಚರ್ ತೋರಿಸಲಾಗಿದೆ. ಜಾತಿ ಜನಗಣತಿಯ ಒರಿಜಿನಲ್ ಪ್ರತಿ ಸಿದ್ದರಾಮಯ್ಯ ಮನೆಯಲ್ಲಿದೆ. ಈಗ ಮಂಡಿಸಿರೋದು ಡೂಪ್ಲಿಕೇಟ್ ವರದಿ. ಈಗ ಮೂಲ ಪ್ರತಿ ಸಿಕ್ಕಿಲ್ಲ ಎಂದು ಸರ್ಕಾರ ಅದರ ಬಗ್ಗೆ ತನಿಖೆ ಮಾಡಿಸಲಿ. ಲೋಕಾಯುಕ್ತ ಅವರಿಗೆ ಕೊಟ್ಟರೆ ಮುಚ್ಚಿ ಹಾಕುತ್ತಾರೆ. ಮೂಲ ಹಸ್ತ ಪ್ರತಿ ನಾಪತ್ತೆ ಪ್ರಕರಣ ನ್ಯಾಯಾಂಗ ತನಿಖೆಗೆ ಕೊಡಬೇಕು ಎಂದರು.

    ಇದು ತಾವೇ ಕೂತು ಮಾಡಿರುವ ಸಮೀಕ್ಷೆ. ಸಮೀಕ್ಷೆ ಯರ‍್ಯಾರು ಮಾಡಿದ್ದಾರೆ ಹಾಗೂ ಯಾವ ಶಿಕ್ಷಕರು ಸಮೀಕ್ಷೆಗೆ ಹೋಗಿದ್ದರು ಎಂದು ಅವರ ಹೆಸರು ಕೊಡಲಿ ಎಂದು ಒತ್ತಾಯಿಸಿದರು. ಇನ್ನೂ ಇದು ಡೂಪ್ಲಿಕೇಟ್ ವರದಿಯಾಗಿದ್ದು, ಇದು 169 ಕೋಟಿ ರೂ. ಗುಳುಂ ಮಾಡಿರುವ ದೊಡ್ಡ ಹಗರಣವಾಗಿದೆ. ನಮ್ಮ ಸರ್ಕಾರ ಬಂದಾಗ ಈ ಹಗರಣದ ತನಿಖೆ ಮಾಡಿಸುತ್ತೇವೆ ಎಂದು ತಿಳಿಸಿದರು.ಇದನ್ನೂ ಓದಿ: ಜಾತಿಗಣತಿಯಿಂದ ಸಬ್ ಕಾ ವಿಭಜನ್, ಸಬ್ ಕಾ ಶೋಷಣ್ – ವಿಶೇಷ ಅಧಿವೇಶನ ಕರೆದು ಸರ್ಕಾರ ಚರ್ಚಿಸಲಿ: ಸುನಿಲ್ ಕುಮಾರ್

  • ಜನಿವಾರ ತೆಗೆಸಿರುವುದು ಜನರ ನಂಬಿಕೆ ಮೇಲೆ ಪ್ರಹಾರ: ಪ್ರಹ್ಲಾದ್ ಜೋಶಿ

    ಜನಿವಾರ ತೆಗೆಸಿರುವುದು ಜನರ ನಂಬಿಕೆ ಮೇಲೆ ಪ್ರಹಾರ: ಪ್ರಹ್ಲಾದ್ ಜೋಶಿ

    – ಸರ್ಕಾರ ಸ್ಪಷ್ಟ ಮಾರ್ಗಸೂಚಿ ತರಲಿ; ಕೇಂದ್ರ ಸಚಿವ ಆಗ್ರಹ

    ಹುಬ್ಬಳ್ಳಿ: ಸಿಇಟಿ ಪರೀಕ್ಷೆ ಬರೆಯಲು ಹೋದ ವಿದ್ಯಾರ್ಥಿ ಜನಿವಾರ ತೆಗೆಸಿರುವುದು ಜನರ ನಂಬಿಕೆ ಮೇಲೆ ಪ್ರಹಾರ ನಡೆಸಿದಂತೆ ಆಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ (Prahlad Joshi) ಖಂಡಿಸಿದ್ದಾರೆ.

    ಹುಬ್ಬಳ್ಳಿಯಲ್ಲಿ (Hubballi) ಮಾಧ್ಯಮದೊಂದಿಗೆ ಮಾತನಾಡಿ, ಪ್ರಕರಣಕ್ಕೆ ಸಂಬಂಧಪಟ್ಟಂತೆ ಸರ್ಕಾರ ಹೋಂಗಾರ್ಡ್ನನ್ನು ಅಮಾನತ್ತು ಮಾಡಿ ಕೈ ತೊಳೆದುಕೊಂಡಿದ್ದು, ಇದು ಸರಿಯಲ್ಲ. ಕೇವಲ ಬ್ರಾಹ್ಮಣರಷ್ಟೇ ಜನಿವಾರ ಹಾಕುವುದಿಲ್ಲ. ಇದೊಂದು ಧಾರ್ಮಿಕ ನಂಬಿಕೆಯಾಗಿದ್ದು, ಇದರ ಮೇಲೆ ಪ್ರಹಾರ ನಡೆಸಿದೆ. ಇದನ್ನ ಗಂಭೀರವಾಗಿ ಪರಿಗಣಿಸಿ ಸರ್ಕಾರ ಇದಕ್ಕೊಂದು ಸ್ಪಷ್ಟ ಮಾರ್ಗಸೂಚಿ ಹೊರಡಿಸಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಮರಾಠಿ ಜನರ ಹಿತಾಸಕ್ತಿಗಾಗಿ ಭಿನ್ನಾಭಿಪ್ರಾಯ ಬದಿಗಿಡಲು ಸಿದ್ಧ – ಮೈತ್ರಿ ಸುಳಿವು ನೀಡಿದ ಉದ್ಧವ್, ರಾಜ್ ಠಾಕ್ರೆ ಸಹೋದರರು

    ವಿವಾದ ಮರೆಮಾಚಲು ಯತ್ನ:
    ರಾಜ್ಯದಲ್ಲಿ ಶುರುವಾದ ಜಾತಿಗಣತಿ ವಿವಾದ, ಆಡಳಿತ ವೈಫಲ್ಯ ಮರೆಮಾಚಲು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ನೇತೃತ್ವದ ಕಾಂಗ್ರೆಸ್ ಸರ್ಕಾರ ಏನಾದರೊಂದು ವಿಷಯಾಂತರ ಮಾಡುತ್ತಲೇ ಇರುತ್ತದೆ ಎಂದು ಟೀಕಿಸಿದರು. ಇದನ್ನೂ ಓದಿ: ಇಬ್ರು ಹುಡ್ಗೀರು ನನ್ನ ಮಗಳ ಜೀವನ ಸರಿ ಮಾಡಿದ್ದಾರೆ: ವೈಷ್ಣವಿ ಗೌಡ ತಾಯಿ

    `ರೋಹಿತ್ ವೇಮುಲಾ ಕಾಯ್ದೆ ಜಾರಿ’ ಕುರಿತು ಪ್ರತಿಕ್ರಿಯಿಸಿ ಕಾಂಗ್ರೆಸ್ ವಿವಾದ ಮೈಮೇಲೆ ಎಳೆದುಕೊಂಡಾಗ ಹೀಗೆ ಜನರ ಗಮನ ಬೇರೆಡೆ ಸೆಳೆಯುವುದು ಹೊಸದೇನಲ್ಲ ಎಂದು ಹೇಳಿದರು.

    ಯಾರ ಮನೆಗೆ ಭೇಟಿ ನೀಡಿದ್ದಾರೆ?
    ಜಾತಿಗಣತಿ ಎಂದು ಯಾರ ಮನೆಗೆ ಭೇಟಿ ನೀಡಿ ಸಮೀಕ್ಷೆ ಮಾಡಿದ್ದಾರೆ?. ವಿವಾದ, ವಿರೋಧ ವ್ಯಕ್ತವಾಗುತ್ತಲೇ `ಇದು ಜಾತಿ ಗಣತಿಯಲ್ಲ ಆರ್ಥಿಕ ಸಮೀಕ್ಷೆ’ ಎಂದರು. ಇದೆಂಥಾ ಹುಡುಗಾಟ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಇದನ್ನೂ ಓದಿ: ಸಿದ್ದರಾಮಯ್ಯ ಅವಧಿಯಲ್ಲಿ ಬ್ರಾಹ್ಮಣರು ಸಾಫ್ಟ್‌ ಟಾರ್ಗೆಟ್‌: ಪ್ರತಾಪ್‌ ಸಿಂಹ

    ನೈಜ ಕಾಳಜಿಯಿಲ್ಲ:
    ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ (Congress) ನಾಯಕರಿಗೆ ದೇಶದ ಬಗ್ಗೆ ನೈಜ ಕಾಳಜಿಯಿಲ್ಲ. ರಾಷ್ಟ್ರದ ಸಮಗ್ರತೆ, ನಾಗರಿಕರ ಕ್ಷೇಮ ಯಾವುದರ ಬಗ್ಗೆಯೂ ಒಂದು ಪ್ರಾಮಾಣಿಕ ಮತ್ತು ಪಾರದರ್ಶಕ ನಿಲುವುಗಳಿಲ್ಲ. ಕೇವಲ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಾರಷ್ಟೇ ಎಂದು ಆರೋಪಿಸಿದರು. ಇದನ್ನೂ ಓದಿ: ಸಾಮಾನ್ಯ ಸಿಬ್ಬಂದಿ ಈ ರೀತಿ ಮಾಡಲು ಸಾಧ್ಯವೇ?: ಜನಿವಾರ ವಿವಾದಕ್ಕೆ ಸರ್ಕಾರದ ವಿರುದ್ಧ ಕೋಟ ಕಿಡಿ

    24/7 ವೋಟ್ ಬ್ಯಾಂಕ್ ರಾಜಕಾರಣ:
    ರಾಹುಲ್ ಗಾಂಧಿ ದೇಶದೊಳಿತಿಗೆ ರಾಜಕೀಯ ಮಾಡುತ್ತಿಲ್ಲ. 24/7 ವೋಟ್ ಬ್ಯಾಂಕ್ ರಾಜಕೀಯದ ಮೇಲೆ ಮಾತ್ರ ಗಮನಹರಿಸಿದ್ದಾರೆ. ರಾಜ್ಯದಲ್ಲಿ `ರೋಹಿತ್ ವೇಮುಲಾ ಕಾಯ್ದೆ’ ಜಾರಿಗೆ ತರುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವುದೂ ಇದರ ಒಂದು ಭಾಗ ಎಂದು ಟೀಕಿಸಿದರು.

  • 136 ಸೀಟು ಬಂದ ಮೇಲೆ `ಕೈ’ ಸರ್ಕಾರಕ್ಕೆ ಕಾಮಾಲೆ ಕಣ್ಣು ಹಳದಿ ಎನ್ನುವಂತಾಗಿದೆ: ಬಿ.ಸಿ.ಪಾಟೀಲ್ ಕಿಡಿ

    136 ಸೀಟು ಬಂದ ಮೇಲೆ `ಕೈ’ ಸರ್ಕಾರಕ್ಕೆ ಕಾಮಾಲೆ ಕಣ್ಣು ಹಳದಿ ಎನ್ನುವಂತಾಗಿದೆ: ಬಿ.ಸಿ.ಪಾಟೀಲ್ ಕಿಡಿ

    – ಹಳಸಿದ ವರದಿ ಹಿಡಿದುಕೊಂಡು ಬಂದು ಜಾತಿಗಣತಿ ಎನ್ನುತ್ತಾರೆ; ವಾಗ್ದಾಳಿ
    – ಇದ್ದಷ್ಟು ದಿನ ದೋಚಿಕೊಂಡು ಹೋಗುವ ಮನಸ್ಥಿತಿ ಈ ಸರ್ಕಾರದ್ದು

    ಹಾವೇರಿ: 136 ಸೀಟು ಬಂದ ಮೇಲೆ ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರಕ್ಕೆ ಕಾಮಾಲೆ ಕಣ್ಣು ಹಳದಿ ಎನ್ನುವಂತಾಗಿದೆ. ಈಗ ಅವರಿಗೆ ಏನೂ ಕಾಣುವುದಿಲ್ಲ ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ್ (B C Patil) ಕಿಡಿಕಾರಿದ್ದಾರೆ.

    ಹಾವೇರಿಯಲ್ಲಿ (Haveri) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕೇವಲ 65 ಲಕ್ಷ ಲಿಂಗಾಯತರು ಇರಲು ಸಾಧ್ಯನಾ? ಕೇವಲ 67 ಸಾವಿರ ಸಾದರು ಇದ್ದಾರೆ ಎಂದು ಹೇಳುತ್ತಾರೆ. ಹಿರೇಕೆರೂರು ತಾಲೂಕು ಒಂದರಲ್ಲೇ 50 ಸಾವಿರ ಜನ ಸಾದರಿದ್ದಾರೆ. ಹೀಗಾಗಿ ಹಳಸಿದ ವರದಿ ಹಿಡಿದುಕೊಂಡು ಬಂದು ಜಾತಿಗಣತಿ ಎನ್ನುತ್ತಾರೆ. ಸಿದ್ದರಾಮಯ್ಯನವರ ಕುರ್ಚಿ ಅಲುಗಾಡಿದಾಗೊಮ್ಮೆ ಜಾತಿಗಣತಿ ಎನ್ನುತ್ತಾರೆ. ಕಾಂಗ್ರೆಸ್ ಶಾಸಕರಿಗೆ ಸಮಪಾಲು, ಸಮಬಾಳು ಎನ್ನುವುದು ಬಂದಿದ್ದನ್ನು ಹಂಚಿಕೊಳ್ಳುವುದರಲ್ಲಿ ಮಾತ್ರ ಇರಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ನಿನ್ ಜೊತೆ ಮಲ್ಕೋಬೇಕು ಬಾ – ಟೀಂ ಇಂಡಿಯಾ ಮಾಜಿ ಆಟಗಾರ ಬಂಗಾರ್‌ ಪುತ್ರಿಗೆ ಕ್ರಿಕೆಟಿಗರಿಂದ ಲೈಂಗಿಕ ಕಿರುಕುಳ

    ಬಿಜೆಪಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ (Congress Government) ಹೇಳಿದೊಂದು, ಮಾಡುವುದೊಂದು ಆಗಿದೆ. ಆಡು ಮುಟ್ಟದ ಸೊಪ್ಪಿಲ್ಲ, ಸರ್ವಜ್ಞ ಹೇಳದ ವಚನಗಳಿಲ್ಲ ಎಂಬಂತೆ ರಾಜ್ಯ ಕಾಂಗ್ರೆಸ್ ಸರ್ಕಾರ ಎಲ್ಲದರ ಬೆಲೆಗಳನ್ನು ಏರಿಸಿದ್ದಾರೆ. ಕಾಂಗ್ರೆಸ್ ಯಾವಾಗ ತೊಲಗುತ್ತದೆ ಎಂದು ಜನರು ಕಾಯುತ್ತಿದ್ದಾರೆ. ಹೆಣ್ಮಕ್ಕಳು ಮಾಂಗಲ್ಯ ಉಳಿಸಿ ಎಂದು ಬೀದಿಗೆ ಬರುವ ಪರಿಸ್ಥಿತಿ ನಿರ್ಮಾಣ ಆಗಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಮಗನನ್ನ ಸಿಎಂ ಮಾಡೋಕೆ ಖರ್ಗೆಯವರೇ ಸರ್ಕಾರ ಬೀಳಿಸುತ್ತಾರೆ: ಶ್ರೀರಾಮುಲು

    ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ (Corruption) ಮುಳುಗಿದ್ದು, ರಾಜ್ಯ, ಜಿಲ್ಲೆಯಲ್ಲಿ ಸಂಪೂರ್ಣ ಆಡಳಿತ ಭ್ರಷ್ಟವಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ, ಜಿಲ್ಲಾಧಿಕಾರಿಗಳ ಕಚೇರಿಗಳು ಕಾಂಗ್ರೆಸ್ ಕಚೇರಿಗಳಾಗಿವೆ. ಒಬ್ಬ ರೈತ ತನ್ನ ಜಮೀನಿಗೆ ಮಣ್ಣು ಹಾಕಿಸಿಕೊಂಡರೆ ಜಿಲ್ಲಾಧಿಕಾರಿಗಳು ಆತನಿಗೆ 30 ಸಾವಿರ ದಂಡ ಹಾಕಿಸಿದ್ದಾರೆ. ಮರಳು ಕಳ್ಳ ಸಾಗಾಣಿಕೆ ನಡೀತಿದೆ. ಪೊಲೀಸ್ ಠಾಣೆಗಳು ಅಕ್ರಮ ದಂಧೆಗಳಿಗೆ ಆಶ್ರಯ ನೀಡುವ ತಾಣಗಳಾಗಿವೆ ಎಂದು ಗುಡುಗಿದರು. ಇದನ್ನೂ ಓದಿ: ಜನಿವಾರದಿಂದ ನೇಣು ಹಾಕೊಂಡ್ರೆ ಏನ್ ಮಾಡೋದು – ವಿದ್ಯಾರ್ಥಿಗೆ ಉಡಾಫೆಯಾಗಿ ಪ್ರಶ್ನಿಸಿದ್ದ ಕಾಲೇಜು ಸಿಬ್ಬಂದಿ

    ಭ್ರಷ್ಟ ಸರ್ಕಾರದ ವಿರುದ್ಧ ಜನರು ಆಕ್ರೋಶಗೊಂಡಿದ್ದಾರೆ. ಸರ್ಕಾರಕ್ಕೆ ರೈತ ಮೇಲೆ ಕಾಳಜಿ ಇಲ್ಲ. ಹಿಂದುಳಿದವರು, ದೀನದಲಿತರ ಬಗ್ಗೆಯೂ ಕಾಳಜಿ ಇಲ್ಲ. ಹೀಗಾಗಿ ಕಾಂಗ್ರೆಸ್ ಸರ್ಕಾರದಿಂದ ನೊಂದ ಪ್ರತಿಯೊಬ್ಬರು ಬಿಜೆಪಿ ಜನಾಕ್ರೋಶ ಯಾತ್ರೆಯಲ್ಲಿ ಭಾಗವಹಿಸಬೇಕು ಎಂದರು. ಇದನ್ನೂ ಓದಿ: PublicTV Explainer: ರೈಲಿಗೂ ಬಂತು ATM; ಇನ್ಮುಂದೆ ರೈಲಲ್ಲೇ ಹಣ ಡ್ರಾ ಸಾಧ್ಯ – ಕರ್ನಾಟಕಕ್ಕೂ ಬರುತ್ತಾ?

    ರಾಜ್ಯದಲ್ಲಿ ಅತ್ಯಾಚಾರ, ದರೋಡೆ, ಕಳ್ಳತನ ಮಾಮೂಲಾಗಿವೆ. ಅತ್ಯಾಚಾರಗಳು ಇಂತಹ ದೊಡ್ಡ ಪಟ್ಟಣದಲ್ಲಿ ನಡೆಯುವುದು ಸಹಜ ಎಂದು ಗೃಹಮಂತ್ರಿಗಳು ಹೇಳಿದ್ದಾರೆ. ಯಾವ ಗೃಹಮಂತ್ರಿ ಇವೆಲ್ಲವನ್ನೂ ನಿಯಂತ್ರಣ ಮಾಡಬೇಕೋ, ಅವರೇ ಹೀಗೆ ಹೇಳಿದರೇ ರಕ್ಷಣೆ ಮಾಡುವವರು ಯಾರು? ಇದ್ದಷ್ಟು ದಿನ ದೋಚಿಕೊಂಡು ಹೋಗಬೇಕು ಎನ್ನುವ ಮನಸ್ಥಿತಿಯಲ್ಲಿ ರಾಜ್ಯ ಸರ್ಕಾರವಿದೆ ಎಂದು ಕಿಡಿಕಾರಿದರು.

  • ನನ್ನ ಜಾತಿ ಯಾವುದು ಅಂದ್ರೆ ಕನ್ನಡ ಅಂತೀನಿ: ವಾಟಾಳ್ ನಾಗರಾಜ್

    ನನ್ನ ಜಾತಿ ಯಾವುದು ಅಂದ್ರೆ ಕನ್ನಡ ಅಂತೀನಿ: ವಾಟಾಳ್ ನಾಗರಾಜ್

    ರಾಮನಗರ: ನನಗೆ ಜಾತಿಗಳ ಬಗ್ಗೆ ನಂಬಿಕೆ ಇಲ್ಲ, ಜಾತಿ ವಿಚಾರಕ್ಕೆ ನಾನು ಮಹತ್ವವನ್ನೂ ಕೊಡಲ್ಲ. ನನ್ನ ಮನೆಗೆ ಬಂದು ಯಾರಾದ್ರೂ ನೀನು ಯಾವಜಾತಿ ಅಂದ್ರೆ ನಾನು ಕನ್ನಡ ಜಾತಿ ಅಂತೀನಿ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ (Vatal Nagaraj) ಹೇಳಿದರು.

    ರಾಜ್ಯದಲ್ಲಿ ಜಾತಿಗಣತಿ (Caste Census) ಬಗ್ಗೆ ದೊಡ್ಡಮಟ್ಟದ ಚರ್ಚೆ ನಡೆಯುತ್ತಿರುವ ವಿಚಾರ ಕುರಿತು ರಾಮನಗರದಲ್ಲಿ (Ramanagara) ಮಾಧ್ಯಮದವರೊಂದಿಗೆ ಮಾತನಾಡಿದರು. ನಮ್ಮ ರಾಜ್ಯ ಭಾಷಾವಾರು ಮೇಲೆ ರಚನೆ ಆಗಿರುವ ರಾಜ್ಯ. ಇಲ್ಲಿ ಜಾತಿಯ ವಿಚಾರ ಪ್ರಸ್ತಾಪ ಒಳ್ಳೆಯ ಬೆಳವಣಿಗೆ ಅಲ್ಲ. ಜಾತಿಗಣತಿ ಬಗ್ಗೆ ಆಡಳಿತ ಪಕ್ಷ ಹಾಗೂ ವಿಪಕ್ಷ ನಾಯಕರ ಮಾತಿನ ದಾಟಿ ನೋಡಿದ್ದೇನೆ. ರಾಜಕೀಯ ನಾಯಕರು ನಾಲಿಗೆಗೆ ಲಗಾಮು ಇಲ್ಲದೇ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಜಾತಿಗಣತಿ ವರದಿ ವಿರುದ್ಧ ಸಂಪುಟದಲ್ಲಿ ಕೋಲಾಹಲ – ಏರುಧ್ವನಿಯಲ್ಲಿ ಲಿಂಗಾಯತ, ಒಕ್ಕಲಿಗ ಸಚಿವರಿಂದ ಆಕ್ಷೇಪ

    ನಾನಂತೂ ಜಾತಿಗಣತಿ ವರದಿ ಓದಿಲ್ಲ. ಹಾಗಾಗಿ ಅದು ಸರಿಯೋ, ತಪ್ಪೋ ಅನ್ನುವ ಚರ್ಚೆ ಮಾಡಲ್ಲ. ಈ ಬಗ್ಗೆ ಶಾಸನಸಭೆಯಲ್ಲಿ ಸುದೀರ್ಘ ಚರ್ಚೆ ಮಾಡಿ, ತೀರ್ಮಾನ ಮಾಡಿಕೊಳ್ಳಿ. ಆದನ್ನ ಬಿಟ್ಟು ರಸ್ತೆಯಲ್ಲಿ ನಿಂತು ಬೇಕಾಬಿಟ್ಟಿ ಮಾತನಾಡುವ ಕೆಲಸ ಬಿಡಿ ಎಂದು ರಾಜಕೀಯ ನಾಯಕರಿಗೆ ಚಾಟಿ ಬೀಸಿದರು. ಇದನ್ನೂ ಓದಿ: Waqf Act| ಹಿಂದೂಗಳು ಸಲ್ಲಿಸಿದಾಗ ಹೈಕೋರ್ಟ್‌ಗೆ ಹೋಗಿ ಎಂದಿತ್ತು – ಸುಪ್ರೀಂ ವಿಚಾರಣೆಗೆ ಮಾನದಂಡ ಏನು?- ವಕೀಲ ವಿಷ್ಣು ಶಂಕರ್‌ ಜೈನ್‌

  • ಜಾತಿ ಜನಗಣತಿ ಮಂಡನೆ ಹಿಂದೆ ಸಿದ್ದರಾಮಯ್ಯ ಷಡ್ಯಂತ್ರ: ಜಗದೀಶ್ ಶೆಟ್ಟರ್ ಆರೋಪ

    ಜಾತಿ ಜನಗಣತಿ ಮಂಡನೆ ಹಿಂದೆ ಸಿದ್ದರಾಮಯ್ಯ ಷಡ್ಯಂತ್ರ: ಜಗದೀಶ್ ಶೆಟ್ಟರ್ ಆರೋಪ

    – ಸಿಎಂ ಮೇಲೆ ಆರೋಪ ಬಂದಾಗಲೆಲ್ಲಾ ಜಾತಿಗಣತಿ ತರ್ತಾರೆ

    ವಿಜಯಪುರ: ಜಾತಿ ಜನಗಣತಿ (Caste Census Report) ಮಂಡನೆ ಹಿಂದೆ ಸಿದ್ದರಾಮಯ್ಯ (Siddaramaiah) ಷಡ್ಯಂತ್ರ ಇದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ (Jagadish Shettar) ಗಂಭೀರ ಆರೋಪ ಮಾಡಿದ್ದಾರೆ.

    ಜಾತಿಗಣತಿ ವರದಿ ಕುರಿತು ವಿಜಯಪುರದಲ್ಲಿ ಮಾತನಾಡಿದ ಅವರು, ಷಡ್ಯಂತ್ರ, ಹುನ್ನಾರ ಹಿನ್ನೆಲೆ ಸಿದ್ದರಾಮಯ್ಯ ಜಾತಿ ಜನಗಣತಿ ಮೂಲಕ ವಿವಾದ ಸೃಷ್ಟಿಸಿದ್ದಾರೆ. ಸಿದ್ದರಾಮಯ್ಯ ಮೇಲೆ ಆರೋಪ ಬಂದಾಗಲೆಲ್ಲಾ ಜಾತಿ ಜನಗಣತಿ ತರುತ್ತಾರೆ. ಅಧಿಕಾರದಿಂದ ಇಳಿಯುವ ಸಮಯ ಬಂದಾಗಲೆಲ್ಲ ಹೀಗೆ ಮಾಡುತ್ತಾರೆ ಎಂದರು. ಇದನ್ನೂ ಓದಿ: 3 ದಿನಗಳಿಂದ ನಡೆಯುತ್ತಿದ್ದ ಲಾರಿ ಮುಷ್ಕರ ಅಂತ್ಯ

    ಲಿಂಗಾಯತ, ಒಕ್ಕಲಿಗರು, ದಲಿತರನ್ನು ಒಡೆಯುವ ಹುನ್ನಾರ ಇದು. ಮುಸ್ಲಿಮರನ್ನು ಪ್ರೊಜೆಕ್ಟ್ ಮಾಡಲು ಜಾತಿ ಗಣತಿ ಮಂಡನೆ ಮಾಡಿದ್ದಾರೆ. ಕಾಂಗ್ರೆಸ್‌ನಲ್ಲಿ ಆಂತರಿಕ ಯುದ್ಧ ನಡೆಯುತ್ತದೆ. ಸಿದ್ದರಾಮಯ್ಯ ಬಳಿಕ ಡಿಕೆಶಿ ಪಟ್ಟ ಏರಲು ಕಾಯುತ್ತಿದ್ದಾರೆ. ನವೆಂಬರ್, ಡಿಸೆಂಬರ್‌ನಲ್ಲಿ ಕಾಂಗ್ರೆಸ್‌ನಲ್ಲಿ ಮಹಾ ಸ್ಫೋಟವಾಗಲಿದೆ. ಟೈಂ ಬಾಂಬ್ ಸ್ಫೋಟವಾಗಲಿದೆ. ಅಧಿಕಾರದಲ್ಲಿ ಮುಂದುವರೆಯಲು ಗೊಂದಲ ಸೃಷ್ಟಿಸಿದ್ದಾರೆ. ಡಿಕೆಶಿ ನವೆಂಬರ್, ಡಿಸೆಂಬರ್‌ಗೆ ಟೈಂ ಬಾಂಬ್ ಫಿಕ್ಸ್ ಮಾಡಿದ್ದಾರೆ. ಅದು ಸ್ಫೋಟವಾಗುವ ಸಾಧ್ಯತೆ ಇದೆ ಎಂದು ತಿಳಿಸಿದರು. ಇದನ್ನೂ ಓದಿ: Waqf Act| ಹಿಂದೂಗಳು ಸಲ್ಲಿಸಿದಾಗ ಹೈಕೋರ್ಟ್‌ಗೆ ಹೋಗಿ ಎಂದಿತ್ತು – ಸುಪ್ರೀಂ ವಿಚಾರಣೆಗೆ ಮಾನದಂಡ ಏನು?- ವಕೀಲ ವಿಷ್ಣು ಶಂಕರ್‌ ಜೈನ್‌

    ಈ ಹಿಂದೆಯೆ ಜಾತಿ ಜನಗಣತಿ ಮಂಡನೆ ಮಾಡಬೇಕಿತ್ತು. ಅಂದಿನಿಂದಲೂ ವಿವಾದಾಸ್ಪದ ವರದಿ ಇದು. ಆಯೋಗ ಮಾಡಿದ್ದೇ ಸಿದ್ದರಾಮಯ್ಯ. ಅಂದು ಯಾಕೆ ಸ್ವೀಕಾರ ಮಾಡಲಿಲ್ಲ? ಅಂದೆ ಕ್ಯಾಬಿನೆಟ್‌ನಲ್ಲಿ ಇಡಬೇಕಿತ್ತು ಎಂದು ಹೇಳಿದರು. ಇದನ್ನೂ ಓದಿ: ವಕ್ಫ್ ಮಂಡಳಿಗೆ ಸದಸ್ಯರ ನೇಮಕ ಮಾಡುವಂತಿಲ್ಲ, ಆಸ್ತಿಗಳ ವಿಚಾರದಲ್ಲೂ ಯಥಾಸ್ಥಿತಿ ಕಾಪಾಡಿ: ಸುಪ್ರೀಂ

  • ಜಾತಿಗಣತಿ ರಾಜ್ಯ ಸರ್ಕಾರಕ್ಕೆ ಬಿಟ್ಟಿದ್ದು: ಮಲ್ಲಿಕಾರ್ಜುನ ಖರ್ಗೆ

    ಜಾತಿಗಣತಿ ರಾಜ್ಯ ಸರ್ಕಾರಕ್ಕೆ ಬಿಟ್ಟಿದ್ದು: ಮಲ್ಲಿಕಾರ್ಜುನ ಖರ್ಗೆ

    ಕಲಬುರಗಿ: ಆಯಾ ರಾಜ್ಯ ಸರ್ಕಾರಗಳು ಸಾಮಾನ್ಯವಾಗಿ ಜಾತಿಗಣತಿ ನಡೆಸುವುದು ವಾಡಿಕೆ. ಹಾಗಾಗಿ, ಈಗ ನಡೆಸಲಾಗಿರುವ ಜಾತಿಗಣತಿ ರಾಜ್ಯ ಸರ್ಕಾರಕ್ಕೆ ಬಿಟ್ಟಿದ್ದು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjuna Kharge) ಹೇಳಿದರು.

    ಕಲಬುರಗಿಯಲ್ಲಿ (Kalaburagi) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರತಿಯೊಂದು ರಾಜ್ಯದಲ್ಲಿ ಸರ್ಕಾರಗಳು ಜಾತಿಗಣತಿ ಮಾಡಿಕೊಳ್ಳುತ್ತವೆ. ಇದು ಕೇಂದ್ರ ಸರ್ಕಾರದಿಂದ ಮಾಡಿರುವಂಥದ್ದಲ್ಲ. ಹಾಗಾಗಿ ರಾಜ್ಯದ ಸಚಿವ ಸಂಪುಟದಲ್ಲಿ ಏನು ಹೊರಗೆ ಬರುತ್ತದೋ ಎಂಬುದನ್ನು ನೋಡಬೇಕಿದೆ ಎಂದರು. ಇದನ್ನೂ ಓದಿ: ಜಾತಿಗಣತಿ ‘ಪಬ್ಲಿಕ್ ಟಿವಿ’ ರಿಯಾಲಿಟಿ ಚೆಕ್ – ಮನೆ ಮನೆಗೆ ಹೋಗಿ ಸರ್ವೆ ಮಾಡಿದ್ರಾ?- ಜನರು ಹೇಳಿದ್ದೇನು?

    ಇಷ್ಟಕ್ಕೂ ರಾಜ್ಯದ ಜಾತಿಗಣತಿ ವರದಿಯಲ್ಲಿ (Caste Census Report) ಏನೆಲ್ಲಾ ಅಂಶಗಳಿವೆ ಎಂಬುದು ಇನ್ನೂ ನಿಖರವಾಗಿ ನನಗೆ ಗೊತ್ತಿಲ್ಲ. ನಾನೂ ಸಹ ವರದಿ ನೋಡಿಲ್ಲ. ಜಾತಿಗಣತಿ ವರದಿ ಬಗ್ಗೆ ವಿರೋಧ ವ್ಯಕ್ತವಾಗುತ್ತಿದೆ. ಆದರೆ ಇದು ನನ್ನ ಅಭಿಪ್ರಾಯ ಅಷ್ಟೇ ಎಂದು ಸಮಜಾಯಿಷಿ ನೀಡಿದರು. ಇದನ್ನೂ ಓದಿ: ಪೀಣ್ಯ ಫ್ಲೈಓವರ್ ಮೇಲೆ ಹೊತ್ತಿ ಉರಿದ ಲಾರಿ – ಚಾಲಕ ಪಾರು

  • ಜಾತಿಗಣತಿ ವರದಿ ಯಾರನ್ನೋ ಕೂರಿಸಿ ಬರೆಸಿದಂತೆ ಇದೆ: ಸೂರಜ್ ರೇವಣ್ಣ ಕಿಡಿ

    ಜಾತಿಗಣತಿ ವರದಿ ಯಾರನ್ನೋ ಕೂರಿಸಿ ಬರೆಸಿದಂತೆ ಇದೆ: ಸೂರಜ್ ರೇವಣ್ಣ ಕಿಡಿ

    ಹಾಸನ: ಜಾತಿಗಣತಿ ವರದಿ (Caste Census Report) ಯಾರನ್ನೋ ಕೂರಿಸಿ ಬರೆಸಿದಂತೆ ಇದೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ (Suraj Revanna) ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಜಾತಿಗಣತಿ ವರದಿ ವಿಚಾರದ ಕುರಿತು ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿ ಗಣತಿ ವರದಿಯಲ್ಲಿ ವೈಜ್ಞಾನಿಕ ದತ್ತಾಂಶವಿಲ್ಲ, ಸಾಕ್ಷ್ಯವಿಲ್ಲ. ನಿವೃತ್ತ ಐಎಎಸ್, ಕೆಎಎಸ್ ಅಧಿಕಾರಿಗಳನ್ನು ಕೂರಿಸಿಕೊಂಡು ಬರೆಸಿರುವಂತಿದೆ ಎಂದು ಆರೋಪಿಸಿದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಮಳೆ – ಕೆಲವು ಭಾಗಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ

    ಜಾತಿಗಣತಿ ಉದ್ದೇಶ ಒಂದು ಸಮಾಜದ ಏಳಿಗೆಗೆ ಇರಬೇಕು. ಆದರೆ, ಇದು ಜಾತಿಗಳನ್ನು ಒಡೆದು, ರಾಜಕೀಯ ಸ್ವಾರ್ಥಕ್ಕಾಗಿ ಬಳಕೆಯಾಗುತ್ತಿದೆ. ಇದರಿಂದ ಪಕ್ಷಕ್ಕೆ ಹೆಚ್ಚಿನ ಸೀಟುಗಳು ಬರಬೇಕೆಂಬ ಉದ್ದೇಶವಷ್ಟೇ ಕಾಣುತ್ತದೆ. ಇದು ರಾಜ್ಯಕ್ಕೆ ಒಳ್ಳೆಯ ಬೆಳವಣಿಗೆಯಲ್ಲ ಎಂದರು. ಇದನ್ನೂ ಓದಿ: ಕ್ಲೈಮ್ಯಾಕ್ಸ್ ಹಂತಕ್ಕೆ ಬಂದ ಜಾತಿ ಜಿದ್ದಾಜಿದ್ದಿ – ಸಿಎಂ ಮುಂದಿರುವ ಆಯ್ಕೆ ಏನು?

    ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಅವರ ಜಮೀನು ತೆರವು ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಈ ವಿಷಯ ಕೋರ್ಟ್‌ನಲ್ಲಿ ಸ್ಟೇ ಆಗಿದೆ. ಮುಂದಿನ ಕಾನೂನು ಪ್ರಕ್ರಿಯೆ ನಡೆಯುತ್ತದೆ. ಕುಮಾರಸ್ವಾಮಿ ಒಬ್ಬರನ್ನಷ್ಟೇ ಅಲ್ಲ, ನಮ್ಮ ಇಡೀ ಕುಟುಂಬವನ್ನೇ ಗುರಿಯಾಗಿಸಲಾಗಿದೆ. ಜೆಡಿಎಸ್‌ನ ಪ್ರತಿಯೊಬ್ಬ ಶಾಸಕರನ್ನೂ ಟಾರ್ಗೆಟ್ ಮಾಡಲಾಗುತ್ತಿದೆ. ರಾಜ್ಯದ ಜನ ಎಲ್ಲವನ್ನೂ ನೋಡುತ್ತಿದ್ದಾರೆ. ಜಾತಿ ಓಲೈಕೆ ರಾಜಕಾರಣ ಮತ್ತು ಸಮಾಜವನ್ನು ಒಡೆಯುವ ರಾಜಕೀಯಕ್ಕೆ ಸರ್ಕಾರ ಕೈಹಾಕಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ನಮ್ಮ ಸರ್ಕಾರ ತೆಗೆಯಲು ಪ್ಲ್ಯಾನ್‌ ನಡೆದಿದೆ ಒಗ್ಗಟ್ಟಾಗಿ ಇರಿ: ಖರ್ಗೆ ಶಾಕಿಂಗ್ ಹೇಳಿಕೆ

  • ಜಾತಿಗಣತಿ ಸುನಾಮಿಯಲ್ಲಿ ಸಿದ್ದರಾಮಯ್ಯ ಕೊಚ್ಚಿ ಹೋಗ್ತಾರೆ: ಕುಮಾರಸ್ವಾಮಿ ಆಕ್ರೋಶ

    ಜಾತಿಗಣತಿ ಸುನಾಮಿಯಲ್ಲಿ ಸಿದ್ದರಾಮಯ್ಯ ಕೊಚ್ಚಿ ಹೋಗ್ತಾರೆ: ಕುಮಾರಸ್ವಾಮಿ ಆಕ್ರೋಶ

    ಬೆಂಗಳೂರು: ಜಾತಿಗಣತಿ ಸುನಾಮಿಯಲ್ಲಿ ಸಿದ್ದರಾಮಯ್ಯ (Siddaramaiah) ಕೊಚ್ಚಿ ಹೋಗ್ತಾರೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (H D Kumaraswamy) ಮತ್ತೆ ಕಿಡಿಕಾರಿದ್ದಾರೆ.

    ಸಿಎಂ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ಹೊರ ಹಾಕಿರುವ ಕುಮಾರಸ್ವಾಮಿ ಮಾಜಿ ಸಿಎಂ ವೀರೇಂದ್ರ ಪಾಟೀಲ್ ಅವರ ಇತಿಹಾಸ ನೆನಪು ಮಾಡಿಕೊಂಡು ಎಕ್ಸ್‌ನಲ್ಲಿ ಪೋಸ್ಟ್ ಪ್ರಕಟಿಸಿ ಸಿಟ್ಟು ಹೊರಹಾಕಿದ್ದಾರೆ. ಇದನ್ನೂ ಓದಿ: ಏ.25 ರಂದು ಬೆಂಗಳೂರಿನಲ್ಲಿ ವಿವೇಕಾನಂದರ ಜೀವನಾಧಾರಿತ ‘ವೀರ ಸಂನ್ಯಾಸಿಯ ಆತ್ಮ ಗೀತೆ’ ಪ್ರದರ್ಶನ

    ಎಕ್ಸ್‌ನಲ್ಲಿ ಏನಿದೆ?
    ಅಕ್ರಮಬದ್ಧ ಜಾತಿ ಗಣತಿ ಬಗ್ಗೆ ಜನರ ಆಕ್ರೋಶ ಸರಿ ಇದೆ. ಸುಳ್ಳು ಲೆಕ್ಕ ಗೊತ್ತಿದೆ. ಕಳ್ಳ ಬೆಕ್ಕು ಕಣ್ಮುಚ್ಚಿ ಕದ್ದು ಹಾಲು ಕುಡಿದರೆ ಲೋಕಕ್ಕೆ ಕಾಣದೇ? ಜಾತಿಗಣತಿ ಹೆಸರಿನಲ್ಲಿ ಜನರನ್ನು ಛಿದ್ರಗೊಳಿಸಿ ರಾಜ್ಯದ ನೆಮ್ಮದಿಗೆ ಕೊಳ್ಳಿ ಇಟ್ಟು, ಆ ಬೆಂಕಿಯಲ್ಲಿ ಚಳಿ ಕಾಯಿಸಿಕೊಳ್ಳುವುದು ಕಾಂಗ್ರೆಸ್ ಸರ್ಕಾರದ ಹಿಡನ್ ಅಜೆಂಡಾ. ಇದನ್ನೂ ಓದಿ: ಪರಿಶಿಷ್ಟ ಜಾತಿಯಲ್ಲಿ 101 ಜಾತಿಗಳು ಇದ್ವು, ಆದ್ರೆ 180 ಜಾತಿ ಸೇರಿಸಿದ್ದಾರೆ: ಮಾದಾರ ಚೆನ್ನಯ್ಯ ಸ್ವಾಮೀಜಿ

    ಎಲ್ಲಾ ರಾಜ್ಯಗಳಲ್ಲಿ ಚುನಾವಣೆ ಗೆಲ್ಲಲು ಕಾಂಗ್ರೆಸ್ (Congress) ಜಾತಿಗಣತಿಯನ್ನೇ ಗುರಾಣಿ ಮಾಡಿಕೊಂಡಿದೆ. ಕುಲ, ಕುಲ, ಕುಲವೆಂದು ಹೊಡೆದಾಡದಿರಿ. ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ ಬಲ್ಲಿರಾ? ಹೀಗೆಂದರೇನು ಸನ್ಮಾನ್ಯ ಮುಖ್ಯಮಂತ್ರಿಗಳೇ. ಕನಕದಾಸರ ಆಶಯ ಅರ್ಥಪೂರ್ಣ. ನಿಮ್ಮ ಪ್ರಾಯೋಜಿತ ಜಾತಿಗಣತಿ ವರದಿಯ ದುರಾಶಯ ಪ್ರಶ್ನಾರ್ಹ. ಹೇಳುವುದು ಒಂದು, ಮಾಡಿದ್ದು ಇನ್ನೊಂದು. ಇದನ್ನೂ ಓದಿ: ಸುಪ್ರೀಂ ಕೋರ್ಟ್‌ನಿಂದ ಐತಿಹಾಸಿಕ ತೀರ್ಪು – ಉರ್ದು ಭಾರತದ ಭಾಷೆ, ಒಂದು ಧರ್ಮಕ್ಕೆ ಸೀಮಿತವಲ್ಲ

    ಇವನಾರವ, ಇವನಾರವ,
    ಇವನಾರವನೆಂದೆನಿಸದಿರಯ್ಯಾಇವ ನಮ್ಮವ, ಇವ ನಮ್ಮವ,
    ಇವನಮ್ಮವನೆಂದೆನಿಸಯ್ಯಾ.
    ಕೂಡಲಸಂಗಮದೇವಾ
    ನಿಮ್ಮ ಮನೆಯ ಮಗನೆಂದೆನಿಸಯ್ಯಾ. ಎಲ್ಲರನ್ನೂ ಒಳಗೊಳ್ಳುವ ಬಸವಣ್ಣನವರ ವಚನವನ್ನು ಬರೆದುಕೊಂದ್ದೀರಿ. ಇವರು ನಮ್ಮವರಲ್ಲ, ಇವ ನಮ್ಮನಲ್ಲ ಎಂದು ಕೃತಿಯಲ್ಲಿಯೇ ತೋರುತ್ತೀರಿ.

    ಬೂಟಾಟಿಕೆಗೂ ಇತಿಮಿತಿ ಬೇಡವೇ ಸಿದ್ದರಾಮಣ್ಣ? ಸಾಮಾಜಿಕ ನ್ಯಾಯ ಎಂದರೆ ನಿಮಗೆ ಬೇಡವಾದ ಸಮಾಜಗಳ ತುಚ್ಛೀಕರಣ. ಸಾಮಾಜಿಕ ನ್ಯಾಯವೆಂದರೆ ಒಂದು ನಿರ್ದಿಷ್ಟ ಸಮಾಜದ ತುಷ್ಟೀಕರಣ. ಜಾತಿ ಸಮೀಕರಣವಲ್ಲ, ರಾಜಕೀಯ ಲಾಭಕ್ಕೆ ಜಾತಿಗಳ ಏಕೀಕರಣಕ್ಕೆ ಕೈ ಹಾಕಿದ್ದೀರಿ. ಜಾತಿಗಣತಿಯ ಲಾಭ ನಿಮಗೋ? ನಿಮಗೆ ರಾಜಕೀಯ ಆಶ್ರಯ ಕೊಟ್ಟ ಕಾಂಗ್ರೆಸ್ ಪಕ್ಷಕ್ಕೋ? ನಿಮ್ಮ ಒಳಮರ್ಮ ರಾಹುಲ್ ಗಾಂಧಿ ಅರ್ಥವಾದಂತೆ ಇಲ್ಲ, ಪಾಪ. ಇದನ್ನೂ ಓದಿ: ಸಿದ್ದರಾಮಯ್ಯನವರೇ ನಿಮ್ಮನೆಗೆ ಜಾತಿಗಣತಿ ಸಮೀಕ್ಷೆ ಮಾಡಲು ಯಾರು ಬಂದಿದ್ರು? – ಶೋಭಾ ಕರಂದ್ಲಾಜೆ

    ಹಿಂದೆ ಶ್ರೀ ವೀರೇಂದ್ರ ಪಾಟೀಲ್ ಅವರಿಗೆ ಎಸಗಿದ ಅನ್ಯಾಯಕ್ಕೆ ನಿಮ್ಮ ಪಕ್ಷ ಬೆಲೆ ತೆತ್ತಿದೆ. ನೆನಪಿಲ್ಲವೇ? ನೀವೂ, ನಿಮ್ಮ ಪಕ್ಷದ ಇತಿಹಾಸದಿಂದ ಪಾಠ ಕಲಿಯುವುದಿಲ್ಲ. ತಪ್ಪು ತಿದ್ದಿ ನಡೆಯುವ ಗುಣಲಕ್ಷಣ ನಿಮಗೂ ಇಲ್ಲ. ನಿಮ್ಮ ಪಕ್ಷಕ್ಕೂ ಇಲ್ಲ. ನೆಮ್ಮದಿಯಾಗಿದ್ದ ಕರ್ನಾಟಕವನ್ನು ಕೆಣಕಿದ್ದೀರಿ. ಗಣತಿ ಸುನಾಮಿಯಲ್ಲಿ ಕೊಚ್ಚಿ ಹೋಗುತ್ತೀರಿ. ಜನರಿಗೆ ನಿಮ್ಮ ಅಸಲಿಯತ್ತು ಗೊತ್ತಾಗಿದೆ. ಅಕ್ರಮಬದ್ಧ ಗಣತಿ, ಜಾತಿಗಣತಿಯಲ್ಲ ದ್ವೇಷಗಣತಿ ಎಂದು ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದ್ದಾರೆ.

  • ಪರಿಶಿಷ್ಟ ಜಾತಿಯಲ್ಲಿ 101 ಜಾತಿಗಳು ಇದ್ವು, ಆದ್ರೆ 180 ಜಾತಿ ಸೇರಿಸಿದ್ದಾರೆ: ಮಾದಾರ ಚೆನ್ನಯ್ಯ ಸ್ವಾಮೀಜಿ

    ಪರಿಶಿಷ್ಟ ಜಾತಿಯಲ್ಲಿ 101 ಜಾತಿಗಳು ಇದ್ವು, ಆದ್ರೆ 180 ಜಾತಿ ಸೇರಿಸಿದ್ದಾರೆ: ಮಾದಾರ ಚೆನ್ನಯ್ಯ ಸ್ವಾಮೀಜಿ

    ಬೆಂಗಳೂರು: ಜಾತಿಗಣತಿಯಲ್ಲಿ ಗೊಂದಲ ಇದೆ. ಪರಿಶಿಷ್ಟ ಜಾತಿಯಲ್ಲಿ 101 ಜಾತಿಗಳು ಇದ್ವು. ಆದರೆ ಈಗ 180 ಜಾತಿ ಸೇರಿಸಿದ್ದಾರೆ ಎಂದು ವರದಿ ಆಗಿದೆ ಎಂದು ಚಿತ್ರದುರ್ಗ (Chitradurga) ಪೀಠದ ಮಾದಾರ ಚೆನ್ನಯ್ಯ ಸ್ವಾಮೀಜಿ (Madara Chennaiah Swamiji) ಹೇಳಿದರು.

    ಬೆಂಗಳೂರಿನಲ್ಲಿ (Bengaluru) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಾಗಾದರೆ ಜಾತಿಗಣತಿಯಲ್ಲಿ ಸೇರ್ಪಡೆಗೊಂಡ ಜಾತಿಗಳು ಯಾವುದು, ಯಾರು ಅವರು? ಈ ಗೊಂದಲಗಳನ್ನ ಸರ್ಕಾರ ಸರಿಪಡಿಸಬೇಕು. ಜಾತಿಗಣತಿ ವರದಿಯನ್ನ (Caste Census Report) ಸರ್ಕಾರ ಪರಿಶೀಲನೆ ಮಾಡಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ರೀಲ್ಸ್ ಕೇಸ್ – ರಜತ್ ಜೈಲಿಗೆ, ವಿನಯ್‌ಗೆ 500 ರೂ. ದಂಡ

    ಕೆಲ ಸಮುದಾಯದವರು ಪರ-ವಿರೋಧ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಯಾರಿಗೂ ಅನ್ಯಾಯ ಆಗದಂತೆ ಸಾಮಾಜಿಕ ನ್ಯಾಯ ಸಿಗಬೇಕು. ಇನ್ನೂ ಎಡ-ಬಲದ ಬಗ್ಗೆ ಕೆಲ ಜಿಲ್ಲೆಗಳಲ್ಲಿ ಗೊಂದಲ ಇದೆ. ಆದಿ ಕರ್ನಾಟಕ ಅಂತಾ ಕೆಲ ಜಿಲ್ಲೆಗಳಲ್ಲಿ ಇಬ್ಬರು ಬರೆಸಿದ್ದಾರೆ ಎಂದರು. ಇದನ್ನೂ ಓದಿ: ಮುಂಬೈ ಬಳಿ 9.85 ಕೋಟಿಗೆ ಭೂಮಿ ಖರೀದಿಸಿದ ಅಳಿಯ ಕೆಎಲ್‌ ರಾಹುಲ್‌, ಮಾವ ಸುನೀಲ್‌ ಶೆಟ್ಟಿ

    ಸಿದ್ದರಾಮಯ್ಯ ಸರ್ಕಾರ ನಾಗಮೋಹನ್ ದಾಸ್ ವರದಿ ಸಲ್ಲಿಕೆ ವೇಳೆ ಗೊಂದಲ ಪರಿಹರಿಸಿ, ಒಳ ಮೀಸಲಾತಿ ಕಲ್ಪಿಸುವುದಾಗಿ ಹೇಳಿದೆ. 2 ತಿಂಗಳ ಕಾಲಾವಕಾಶ ಕೇಳಿದೆ. ಎಡ-ಬಲ ಸಹೋದರ ಸಮಾನರು, ಹಾಗಾಗಿ ಮೀಸಲಾತಿ ಹಂಚಿಕೆ ವೇಳೆ ಗೊಂದಲ ಬೇಡ ಎಂದು ಮನವಿ ಮಾಡಿದರು.