Tag: Cash Seized

  • ಕರೆ ಬಂದ ಮೂರೇ ನಿಮಿಷಕ್ಕೆ ಹಣವಿದ್ದ ಬೆಂಜ್ ಕಾರು ಬಳಿಗೆ ಬಂದ್ವಿ: ಮುನೀಶ್ ಮೌದ್ಗಿಲ್

    ಕರೆ ಬಂದ ಮೂರೇ ನಿಮಿಷಕ್ಕೆ ಹಣವಿದ್ದ ಬೆಂಜ್ ಕಾರು ಬಳಿಗೆ ಬಂದ್ವಿ: ಮುನೀಶ್ ಮೌದ್ಗಿಲ್

    – 1.40 ಕೋಟಿ ರೂ. ಹಣ ಪತ್ತೆ

    ಬೆಂಗಳೂರು: ನಮಗೆ ಬಂದ ಕರೆಯ ಆಧಾರದ ಮೇಲೆ ಜಯನಗರದಲ್ಲಿ ಕಾರಿನಲ್ಲಿದ್ದ ಹಣವನ್ನು ವಶಕ್ಕೆ ಪಡೆಯಲಾಗಿದೆ (Cash Seized) ಎಂದು ಚುನಾವಣಾಧಿಕಾರಿ ಮುನೀಶ್ ಮೌದ್ಗಿಲ್ (Munish Moudgil) ಹೇಳಿದ್ದಾರೆ.

    ನಮಗೆ ಬೆಳಗ್ಗೆ ವಾಹನದಲ್ಲಿ ಹಣ ಇರುವ ಬಗ್ಗೆ ಕರೆ ಬಂದಿತ್ತು. ಅದರ ಆಧಾರದ ಮೇಲೆ ನಮ್ಮ ಅಧಿಕಾರಿ ನಿಖಿತ ಅವರು ಸ್ಥಳಕ್ಕೆ ಭೇಟಿ ಕೊಟ್ಟಿದ್ದಾರೆ. ತಕ್ಷಣ ಅಧಿಕಾರಿಗಳ ಜೊತೆ ನಾನು ಸಹ ಸ್ಥಳಕ್ಕೆ ಬಂದೆ. ಕರೆ ಬಂದ ಮೂರು ನಿಮಿಷಗಳಲ್ಲೇ ಸ್ಥಳಕ್ಕೆ ಭೇಟಿ ಕೊಟ್ಟಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ಹೊಸ ಬೆಂಜ್ ಕಾರಿನ ಗ್ಲಾಸ್ ಒಡೆದು ಕಂತೆ ಕಂತೆ ಹಣ ಸೀಜ್ ಮಾಡಿದ ಮಹಿಳಾ ಅಧಿಕಾರಿ

    ನಾವು ಸ್ಥಳಕ್ಕೆ ಭೇಟಿ ನೀಡಿದ ವೇಳೆ ಸ್ಕೂಟರ್‌ನಿಂದ ಫಾರ್ಚೂನರ್ ಕಾರಿಗೆ ಹಣ ಶಿಫ್ಟ್ ಮಾಡುತ್ತಿದ್ದರು. ಕಾರಿನಲ್ಲಿ ಒಟ್ಟು ಐದು ಜನ ಇದ್ದರು. ಈ ವೇಳೆ ನಿಖಿತ ಅವರು ಒಬ್ಬರೇ ತೆರಳಿ, ಚೀಲದಲ್ಲಿರುವುದು ಏನು ಎಂದು ಪ್ರಶ್ನಿಸಿದ್ದಾರೆ. ಬಳಿಕ ದ್ವಿಚಕ್ರ ವಾಹನದಲ್ಲಿದ್ದ ಹಣವನ್ನು ಜಪ್ತಿ ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

    ಕಾರಿನಲ್ಲಿದ್ದ ಐವರು ನಾಪತ್ತೆಯಾಗಿದ್ದು, ಫಾರ್ಚೂನರ್ ನಂಬರ್‌ನ್ನು ದಾಖಲಿಸಿಕೊಳ್ಳಲಾಗಿದೆ. ಸ್ಥಳದಲ್ಲಿ ಸಿಕ್ಕ ಬೆಂಜ್ ಕಾರು ಗುರುವಾರ ಕೊಂಡುಕೊಳ್ಳಲಾಗಿದೆ. ಈಗ ಹಣದ ಲೆಕ್ಕ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

    ಪತ್ತೆಯಾದ ಬ್ಯಾಗ್‌ಗಳಲ್ಲಿ 1.40 ಕೋಟಿ ರೂ. ಹಣ ಇರುವ ಬಗ್ಗೆ ಪೊಲೀಸ್ ಮೂಲಗಳು `ಪಬ್ಲಿಕ್ ಟಿವಿ’ಗೆ ತಿಳಿಸಿವೆ. ಇದನ್ನೂ ಓದಿ: ಇಡಿ ಬಂಧನ ಪ್ರಶ್ನಿಸಿ ಅರವಿಂದ್ ಕೇಜ್ರಿವಾಲ್ ಅರ್ಜಿ – ಸೋಮವಾರ ವಿಚಾರಣೆ ನಡೆಸಲಿರುವ ಸುಪ್ರೀಂ ಕೋರ್ಟ್

  • ಹೊಸ ಬೆಂಜ್ ಕಾರಿನ ಗ್ಲಾಸ್ ಒಡೆದು ಕಂತೆ ಕಂತೆ ಹಣ ಸೀಜ್ ಮಾಡಿದ ಮಹಿಳಾ ಅಧಿಕಾರಿ

    ಹೊಸ ಬೆಂಜ್ ಕಾರಿನ ಗ್ಲಾಸ್ ಒಡೆದು ಕಂತೆ ಕಂತೆ ಹಣ ಸೀಜ್ ಮಾಡಿದ ಮಹಿಳಾ ಅಧಿಕಾರಿ

    – ಬ್ಯಾಗಲ್ಲಿರೋದು ಮಾವಿನ ಹಣ್ಣು ಎಂದ್ರು; ಪರಿಶೀಲನೆ ವೇಳೆ ಪತ್ತೆಯಾಗಿದ್ದು ಹಣ!

    ಬೆಂಗಳೂರು: ಎರಡು ಕಾರುಗಳಲ್ಲಿದ್ದ ಕಂತೆ ಕಂತೆ ಹಣವನ್ನು ಚುನಾವಣಾಧಿಕಾರಿಗಳು ವಶಕ್ಕೆ ಪಡೆದ ಪ್ರಕರಣ ಜಯನಗರದಲ್ಲಿ (Jayanagar) ನಡೆದಿದೆ. ಅನುಮಾನಾಸ್ಪದ ಕಾರಿನ ಗ್ಲಾಸ್ ಒಡೆದು ಮಹಿಳಾ ಅಧಿಕಾರಿ ಹಣ ಸೀಜ್ (Cash Seized) ಮಾಡಿ ದಿಟ್ಟತನ ಮೆರೆದಿದ್ದಾರೆ.

    ಅಧಿಕಾರಿಗಳು ಬರುತ್ತಿದ್ದಂತೆ ಕಾರಿನಲ್ಲಿದ್ದ ಐವರು, ಚೀಲದಲ್ಲಿರುವುದು ಮಾವಿನ ಹಣ್ಣು ಎಂದಿದ್ದಾರೆ. ಬಳಿಕ ಅಧಿಕಾರಿಗಳು ಪರಿಶೀಲನೆಗೆ ಮುಂದಾದಾಗ ಒಂದು ಕಾರಿನಲ್ಲಿದ್ದ ಐವರು ಪರಾರಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣ – ಶಂಕಿತರು ಎನ್‍ಐಎ ಕಸ್ಟಡಿಗೆ

    ಬೆಳಗ್ಗೆ 9 ಗಂಟೆಯಿಂದ ಫೋಲೋ, ಬೆಂಜ್ ಮತ್ತು ಫಾರ್ಚೂನರ್ ಕಾರುಗಳು ಬಂದು ನಿಂತಿದ್ದವು. ಫೋಲೋ ಕಾರಿನಿಂದ ಬೈಕ್‍ಗೆ ಹಣ ತುಂಬಿಸುತ್ತಿದ್ದ ವೇಳೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಕೂಡಲೇ ಫಾರ್ಚೂನರ್ ಕಾರಿನಲ್ಲಿ ಐವರು ಪರಾರಿಯಾಗಿದ್ದಾರೆ. ಸದ್ಯ ಎರಡು ಕಾರು ಮಾತ್ರ ಉಳಿದಿವೆ. ಒಂದು ಬೈಕ್ ಹಾಗೂ ಎರಡು ಕಾರುಗಳಲ್ಲಿ ಮೂರು ಬ್ಯಾಗ್‍ನಲ್ಲಿ ಹಣ ಸಿಕ್ಕಿದೆ ಎಂದು ಎಂಸಿಸಿ ನೋಡಲ್ ಆಫೀಸರ್ ಮನೀಷ್ ಮೌದ್ಗಿಲ್ ಮಾಹಿತಿ ನೀಡಿದ್ದಾರೆ.

    ಅಧಿಕಾರಿಗಳು ಬೆಂಜ್ ಕಾರಿನ ಗ್ಲಾಸ್ ಒಡೆದು ಹಣ ಇರುವ ಬ್ಯಾಗ್‍ನ್ನು ಹೊರಗೆ ತೆಗೆದಿದ್ದು, ಕಾರಿನ ಒಳಗಡೆ ಇದ್ದ ದಾಖಲಾತಿಗಳನ್ನ ವಶಕ್ಕೆ ಪಡೆದಿದ್ದಾರೆ. ಕಾರಿನ ಒಳಗಡೆ ಒಂದು ಮೊಬೈಲ್ ಕೂಡ ಪತ್ತೆಯಾಗಿದೆ. ಇದೀಗ ಎರಡು ಕೌಂಟಿಂಗ್ ಮಷಿನ್‍ಗಳನ್ನು ತರಿಸಿಕೊಂಡು ಅಧಿಕಾರಿಗಳು ಹಣ ಎಣಿಸುವ ಕಾರ್ಯದಲ್ಲಿ ತೊಡಗಿದ್ದಾರೆ.‌

    ಜಯನಗರ ಪೊಲೀಸ್ ಠಾಣೆಗೆ (Jayanagar Police) ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನಾಗರಾಜ್, ಮತ್ತು ಮಾಜಿ ಕಾರ್ಪೋರೇಟರ್ ನಾಗರಾಜ್ ಭೇಟಿ ನೀಡಿ ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಚುನಾವಣಾ ಪ್ರಚಾರದ ವೇಳೆ ಬೇಕರಿಯಲ್ಲಿ ಗುಲಾಬ್ ಜಾಮೂನು ಖರೀದಿಸಿದ ರಾಹುಲ್ ಗಾಂಧಿ