Tag: cash prize

  • IPL Final: ಆರ್‌ಸಿಬಿ ಚಾಂಪಿಯನ್‌ ಆದ್ರೆ ಸಿಗಲಿದೆ 20 ಕೋಟಿ!

    IPL Final: ಆರ್‌ಸಿಬಿ ಚಾಂಪಿಯನ್‌ ಆದ್ರೆ ಸಿಗಲಿದೆ 20 ಕೋಟಿ!

    ಅಹಮದಾಬಾದ್‌: ಐಪಿಎಲ್‌ ಫೈನಲ್‌ನಲ್ಲಿ (IPL Fainl) ಆರ್‌ಸಿಬಿ ಚಾಂಪಿಯನ್‌ ಪಟ್ಟ ಅಲಂಕರಿಸಿದರೆ 20 ಕೋಟಿ ರೂ. ನಗದು ಬಹುಮಾನವನ್ನು ಪಡೆಯಲಿದೆ.

    ಐಪಿಎಲ್‌ ಆಡಳಿತ ಸಮಿತಿ ಈ ವರ್ಷ ಎಷ್ಟು ನಗದು ಬಹುಮಾನವನ್ನು (Cah Prize) ನೀಡಲಾಗುತ್ತದೆ ಎಂಬುದನ್ನು ಅಧಿಕೃತವಾಗಿ ಪ್ರಕಟಿಸಿಲ್ಲ. ಆದರೆ 2022 ರಲ್ಲಿ ಘೋಷಣೆಯಾದ ನಗದು ಬಹುಮಾನವನ್ನೇ 2023, 2024 ರಲ್ಲಿ ನೀಡಲಾಗಿತ್ತು. ಇದನ್ನೂ ಓದಿ: IPL Final – ಮೀಸಲು ದಿನವೂ ಮಳೆಯಿಂದ ಪಂದ್ಯ ರದ್ದಾದ್ರೆ ಚಾಂಪಿಯನ್‌ ಯಾರು?

    ಯಾವ ತಂಡಕ್ಕೆ ಎಷ್ಟು ಕೋಟಿ?
    ಚಾಂಪಿಯನ್ ತಂಡ 20 ಕೋಟಿ ರೂ., ರನ್ನರ್ ಅಪ್ 13 ಕೋಟಿ ರೂ., ಕ್ವಾಲಿಫೈಯರ್‌ನಲ್ಲಿ 3ನೇ ಸ್ಥಾನ ಪಡೆದ ಮುಂಬೈಗೆ 7 ಕೋಟಿ ರೂ. ಎಲಿಮಿನೇಟರ್‌ನಲ್ಲಿ ಔಟ್‌ಗಿ ನಾಲ್ಕನೇ ಸ್ಥಾನ ಪಡೆದ ಗುಜರಾತ್‌ ಟೈಟಾನ್ಸ್‌ಗೆ 6.5 ಕೋಟಿ ರೂ. ಸಿಗಲಿದೆ. ತಂಡಗಳಿಗೆ ಮಾತ್ರ ಅಲ್ಲದೇ ವೈಯಕ್ತಿಕ ಪ್ರಶಸ್ತಿಗಳಿಗೂ ನಗದು ಬಹುಮಾನಗಳಿವೆ.

    ವೈಯಕ್ತಿಕ ಬಹುಮಾನ ಎಷ್ಟು?
    ಒಂದು ಸೀಸನ್‌ನಲ್ಲಿ ಅತಿ ಹೆಚ್ಚು ರನ್‌ ಹೊಡೆದ ಬ್ಯಾಟ್ಸ್‌ಮನ್‌, ಅತಿ ಹೆಚ್ಚು ವಿಕೆಟ್‌ ಪಡೆದ ಬೌಲರ್‌, ಸೂಪರ್ ಸ್ಟ್ರೈಕರ್‌, ಪವರ್ ಪ್ಲೇಯರ್‌, ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ, ಗೇಮ್ ಚೇಂಜರ್ ಪ್ರಶಸ್ತಿಗೆ 10 ಲಕ್ಷ ರೂ. ಸಿಗುತ್ತದೆ. ಇದನ್ನೂ ಓದಿ: IPL Final | ಚೊಚ್ಚಲ ಐಪಿಎಲ್‌ ಟ್ರೋಫಿಗಾಗಿ ಮದಗಜಗಳ ಗುದ್ದಾಟ – ಆರ್‌ಸಿಬಿಯೇ ಗೆಲ್ಲುವ ಫೆವರೆಟ್‌

    2008 ರಲ್ಲಿ ಐಪಿಎಲ್‌ ಆರಂಭವಾದಾಗ ಗೆದ್ದ ತಂಡಕ್ಕೆ 4.8 ಕೋಟಿ ರೂ. ಸಿಗುತ್ತಿತ್ತು. ರನ್ನರ್ ಅಪ್ ತಂಡಕ್ಕೆ ಅದರ ಅರ್ಧದಷ್ಟು ಹಣ ಸಿಗುತ್ತಿತ್ತು. ಈಗ ಬಹುಮಾನದ ಮೊತ್ತವು ಸುಮಾರು ನಾಲ್ಕು ಪಟ್ಟು ಹೆಚ್ಚಾಗಿದೆ.

  • ಧರ್ಮಸ್ಥಳಕ್ಕೆ ಪಾದಯಾತ್ರೆ ಹೊರಟಿದ್ದ ಯುವಕ ನಾಪತ್ತೆ – ಹುಡುಕಿಕೊಟ್ಟವರಿಗೆ ನಗದು ಬಹುಮಾನ

    ಧರ್ಮಸ್ಥಳಕ್ಕೆ ಪಾದಯಾತ್ರೆ ಹೊರಟಿದ್ದ ಯುವಕ ನಾಪತ್ತೆ – ಹುಡುಕಿಕೊಟ್ಟವರಿಗೆ ನಗದು ಬಹುಮಾನ

    ಚಿಕ್ಕಮಗಳೂರು: ಧರ್ಮಸ್ಥಳಕ್ಕೆ ಪಾದಯಾತ್ರೆ ಹೊರಟಿದ್ದ ಯುವಕನೊಬ್ಬ (Youth) ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ನಾಪತ್ತೆಯಾಗಿದ್ದು (Missing), ಆತನನ್ನು ಹುಡುಕಿಕೊಟ್ಟವರಿಗೆ 5,000 ರೂ. ಬಹುಮಾನ ನೀಡುತ್ತೇವೆ ಎಂದು ಆತನ ಪೋಷಕರು ಹೇಳಿದ್ದಾರೆ.

    ನಾಪತ್ತೆಯಾದ ಯುವಕನ ಪೋಷಕರು ಮಗನಿಗಾಗಿ ಚಾರ್ಮಾಡಿಘಾಟ್, ಕೊಟ್ಟಿಗೆಹಾರ, ಬಣಕಲ್ ಸೇರಿದಂತೆ ಹಲವೆಡೆ ತೀವ್ರ ಹುಡುಕಾಟ ನಡೆಸಿದ್ದಾರೆ. ಆ ದಾರಿಯಾಗಿ ಸಂಚರಿಸುವ ವಾಹನಗಳನ್ನು ತಪಾಸಣೆ ಮಾಡಿದ್ದಾರೆ. ಸರ್ಕಾರಿ ಬಸ್‌ಗಳಲ್ಲೂ ಹುಡುಕಾಟ ನಡೆಸಿದ್ದಾರೆ. ಆದರೆ ಯುವಕ ಮಾತ್ರ ಪತ್ತೆಯಾಗಿಲ್ಲ.

    ನಾಪತ್ತೆಯಾಗಿರುವ ಯುವಕನನ್ನು ಹಾಸನ ಜಿಲ್ಲೆ (Hassan) ಅರಸೀಕೆರೆ ತಾಲೂಕಿನ ಗಂಡಸಿ ಸಮೀಪದ ತಿಮ್ಲಾಪುರ ಗ್ರಾಮದ ಲವ (22) ಎಂದು ಗುರುತಿಸಲಾಗಿದೆ. ಯುವಕ ಲವ ಸ್ವಲ್ಪ ಬುದ್ಧಿಮಾಂದ್ಯನಾಗಿದ್ದಾನೆ. ಆದರೂ ಆತನಿಗೆ ಒಂದಷ್ಟು ಜ್ಞಾನವಿದೆ, ಒಳ್ಳೆಯದು-ಕೆಟ್ಟದರ ಬಗ್ಗೆ ಅರಿವಿದೆ ಎಂದು ಪೋಷಕರು ತಿಳಿಸಿದ್ದಾರೆ. ಇದನ್ನೂ ಓದಿ:ಕ್ಯಾನ್ಸರ್ ನಿಂದ ಬಳಲುತ್ತಿರುವ ನಟಿಗಾಗಿ ಹಾಡಲಿದ್ದಾರೆ ಚಿನ್ಮಯಿ

    ಹಾಸನದಿಂದ ಪೋಷಕರ ಜೊತೆಯೇ ನಡೆದುಕೊಂಡು ಬಂದವನು ಕೊಟ್ಟಿಗೆಹಾರದಲ್ಲಿ ನಾಪತ್ತೆಯಾಗಿದ್ದಾನೆ. ತಕ್ಷಣ ಜೊತೆಯಲ್ಲಿದ್ದವರು ಅಂಗಡಿ-ಮುಂಗಟ್ಟು, ಬಸ್, ಸುತ್ತಮುತ್ತ ಎಲ್ಲಾ ಕಡೆ ಹುಡುಕಾಡಿದ್ದಾರೆ. ಆದರೆ ಆತನ ಸುಳಿವು ಸಿಕ್ಕಿಲ್ಲ. ಕೂಡಲೇ ಪೋಷಕರು ಇಲ್ಲೇ ಎಲ್ಲೋ ಸುತ್ತಮುತ್ತ ಇರುತ್ತಾನೆ ಎಂದು ಸ್ಥಳಿಯರ ಸಹಾಯ ಪಡೆದು ಹುಡುಕಾಟ ನಡೆಸಿದ್ದಾರೆ. ಆದರೂ ಆತ ಸಿಕ್ಕಿಲ್ಲ.

    ಪೋಷಕರು ಆತನನ್ನು ಹುಡುಕಿಕೊಟ್ಟವರಿಗೆ 5,000 ರೂ. ಹಣ ನೀಡುತ್ತೇವೆ (Cash Prize) ಎಂದಿದ್ದಾರೆ. ಆದರೆ ಕೊಟ್ಟಿಗೆಹಾರದ ಸ್ಥಳೀಯ ಯುವಕರಾದ ಸಂತೋಷ್, ತನ್ವೀರ್, ಸಂಜಯ್, ನಂದೀಶ್ ಸೇರಿದಂತೆ ಹಲವರು ನಿಮ್ಮ ಹಣ ಬೇಡ, ನಿಮ್ಮ ಮಗ ಸಿಕ್ಕರೆ ಸಾಕೆಂದಿದ್ದಾರೆ. ಆತನ ಫೋಟೋವನ್ನು ಮೊಬೈಲ್‌ನಲ್ಲಿ ಬೇರೆಯವರಿಗೂ ಶೇರ್ ಮಾಡಿದ್ದು, ಪತ್ತೆಯಾದಲ್ಲಿ ತಿಳಿಸುವಂತೆ ಕೋರಿಕೊಂಡಿದ್ದಾರೆ. ಇದೀಗ ಆತನ ಪೋಷಕರು ಈ ಬಗ್ಗೆ ಬಣಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ಹಾಸನದಲ್ಲಿ ಟಿಕೆಟ್ ಗೊಂದಲ – ದೇವರ ಮೊರೆ‌ ಹೋದ ರೇವಣ್ಣ ಕುಟುಂಬ

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ- ಮತ್ತಿಬ್ಬರ ಪತ್ತೆಗೆ 10 ಲಕ್ಷ ಬಹುಮಾನ ಘೋಷಣೆ

    ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ- ಮತ್ತಿಬ್ಬರ ಪತ್ತೆಗೆ 10 ಲಕ್ಷ ಬಹುಮಾನ ಘೋಷಣೆ

    ಮಂಗಳೂರು: ಬಿಜೆಪಿ (BJP) ಮುಖಂಡ ಪ್ರವೀಣ್ ನೆಟ್ಟಾರು (Praveen Nettaru) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರು ಅರೋಪಿಗಳ ಪತ್ತೆಗೆ ಬಹುಮಾನ ಘೋಷಣೆ ಮಾಡಲಾಗಿದೆ.

    ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಕೊಡಾಜೆಯ ಕೊಡಾಜೆ ಅದ್ದ ಎಂಬವರ ಮಗ ಮೊಹಮ್ಮದ್ ಷರೀಫ್(53)- 5 ಲಕ್ಷ ಹಾಗೂ ನೆಕ್ಕಿಲಾಡಿಯ ಅಗ್ನಾಡಿ ಹೌಸ್ ನ ಅಬೂಬಕರ್ ಮಗ ಮಸೂದ್ ಕೆ.ಎ (40)-5 ಲಕ್ಷ ಒಟ್ಟು 10 ಲಕ್ಷ ಬಹುಮಾನವನ್ನು ಎನ್‍ಐಎ ಘೋಷಿಸಿದೆ.

    ಆರೋಪಿಗಳ ಸುಳಿವು ಪತ್ತೆಯಾದರೆ ಬೆಂಗಳೂರಿನ ದೊಮ್ಮಲೂರು ಬಳಿ ಇರುವ ಎನ್‍ಐಎ ಎಸ್‍ಪಿಗೆ ಮಾಹಿತಿ ನೀಡಲು ಮನವಿ ಮಾಡಲಾಗಿದೆ. ಇದನ್ನೂ ಓದಿ: ಪ್ರವೀಣ್‌ ನೆಟ್ಟಾರು ಹತ್ಯೆ ಕೇಸ್‌ – NIAಯಿಂದ ಮತ್ತೊಬ್ಬ ಆರೋಪಿ ಬಂಧನ

    ಹತ್ಯೆ ಪ್ರಕರಣ: ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಸುಳ್ಯ (Sullia) ತಾಲೂಕಿನ ಬೆಳ್ಳಾರೆ ಸಮೀಪದ ಪೆರುವಾಜೆ ಕ್ರಾಸ್ ಬಳಿ ಅಕ್ಷಯ್ ಹೆಸರಿನ ಕೋಳಿ ಮಾಂಸದ ಅಂಗಡಿ ಹೊಂದಿದ್ದ ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ಕುಮಾರ್ ನೆಟ್ಟಾರು (31), ಜುಲೈ 26ರ ರಾತ್ರಿ 8 ಗಂಟೆಗೆ ಅಂಗಡಿ ಮುಚ್ಚಿ ಮನೆ ಕಡೆ ಹೊರಟಿದ್ದರು. ಈ ವೇಳೆ ಬೈಕಿನಲ್ಲಿ ಬಂದಿದ್ದ ಮೂವರು ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದರು.

    ತಕ್ಷಣವೇ ಪುತ್ತೂರು ಆಸ್ಪತ್ರೆಗೆ ದಾಖಲಿಸಿದರೂ ಕುತ್ತಿಗೆಯ ಭಾಗಕ್ಕೆ ತೀವ್ರ ಏಟು ಬಿದ್ದಿದ್ದ ಕಾರಣ ಪ್ರವೀಣ್ ಮೃತಪಟ್ಟಿದ್ದರು. ಪ್ರಕರಣ ಸಂಬಂಧ ಈವರೆಗೂ ಹಲವಾರು ಮಂದಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ಇದನ್ನೂ ಓದಿ: ಉಗ್ರರ ಜೊತೆ ಸಂಪರ್ಕ, ಭಾರತದಲ್ಲಿ ಶಾಂತಿ ಕದಡಲು ಸಂಚು- ಬೆಂಗಳೂರಿನ ಇಬ್ಬರ ವಿರುದ್ಧ NIA ಚಾರ್ಜ್‌ಶೀಟ್‌ ಸಲ್ಲಿಕೆ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ವಿದ್ಯಾರ್ಥಿಗಳಲ್ಲಿ ಗಣಿತ ಕಲಿಕೆ ಉತ್ತೇಜಿಸಲು ಬಹುಮಾನ ಘೋಷಿಸಿದ ಜೋಶಿ

    ವಿದ್ಯಾರ್ಥಿಗಳಲ್ಲಿ ಗಣಿತ ಕಲಿಕೆ ಉತ್ತೇಜಿಸಲು ಬಹುಮಾನ ಘೋಷಿಸಿದ ಜೋಶಿ

    ಧಾರವಾಡ: ಮಕ್ಕಳಲ್ಲಿ ಗಣಿತ(Mathematics) ಕುರಿತು ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಆಯೋಜಿಸಿರುವ ಗಣಿತ ಮೇಳ ವಿಭಿನ್ನ, ವಿಶಿಷ್ಠವಾದದ್ದು. ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ಸ್ಪರ್ಧೆ ಕೂಡಾ ಆಯೋಜಿಸಬೇಕು. ಪ್ರಥಮ ಸ್ಥಾನ ಪಡೆಯುವ ವಿದ್ಯಾರ್ಥಿಗೆ 25 ಸಾವಿರ ರೂಪಾಯಿ, ದ್ವಿತೀಯ ಸ್ಥಾನ 15 ಸಾವಿರ ಮತ್ತು ತೃತೀಯ ಸ್ಥಾನ ಪಡೆಯುವ ವಿದ್ಯಾರ್ಥಿಗೆ ವೈಯಕ್ತಿಕವಾಗಿ ಬಹುಮಾನ ನೀಡುತ್ತೇನೆ ಎಂದು ಸಚಿವ ಪ್ರಹ್ಲಾದ್‌ ಜೋಶಿ(Pralhad Joshi) ಘೋಷಿಸಿದರು.

    ಪ್ರಧಾನಿ ನರೇಂದ್ರ ಮೋದಿ(Narendra Modi) ಅವರ 72ನೇ ಜನ್ಮದಿನದ ಅಂಗವಾಗಿ ನಗರದ ಕರ್ಷ ಜ್ಞಾನ ಫೌಂಡೇಶನ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಕೆ.ಇ. ಬೋರ್ಡ್ ಸಂಸ್ಥೆ ಜಂಟಿಯಾಗಿ ಇಲ್ಲಿನ ಕರ್ನಾಟಕ ಪ್ರೌಢಶಾಲೆಯಲ್ಲಿ ಆಯೋಜಿಸಿರುವ ಎರಡು ದಿನಗಳ ಮೋಜಿನೊಂದಿಗೆ ಗಣಿತ ಕಲಿಕೆ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು. ಇದನ್ನೂ ಓದಿ: ಮೋದಿ ಹುಟ್ಟುಹಬ್ಬದ ಪ್ರಯುಕ್ತ ರಕ್ತದಾನ – 2,500 ಯೂನಿಟ್ ರಕ್ತ ಸಂಗ್ರಹ

    ನಿತ್ಯ ಬದುಕಿನ ಭಾಗವಾಗಿರುವ ಗಣಿತದ ಕುರಿತು ಆಸಕ್ತಿ ಮೂಡಿಸುವ ಅಗತ್ಯವಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅಭಿಪ್ರಾಯಪಟ್ಟರು. ಭಾರತೀಯ ವೇದ, ಪುರಾಣಗಳಲ್ಲಿ ಗಣಿತದ ಉಲ್ಲೇಖವಿದ್ದು, ಗಣಿತ ಶಾಸ್ತ್ರಕ್ಕೆ ಮೂರು ಸಾವಿರ ವರ್ಷಗಳ ಇತಿಹಾಸವಿದೆ. ಜಗತ್ತಿಗೆ ಸೊನ್ನೆ ಪರಿಚಯಿಸಿದ ಕೀರ್ತಿ ಭಾರತೀಯರಿಗೆ ಸಲ್ಲುತ್ತದೆ. ಭಾಸ್ಕರಾಚಾರ್ಯರಿಂದ ಹಿಡಿದು ಇತ್ತೀಚಿಗಿನ ಶ್ರೀನಿವಾಸ ರಾಮಾನುಜನ್ ಸೇರಿದಂತೆ ಅನೇಕ ಗಣಿತ ಶಾಸ್ತ್ರಜ್ಞರು ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಆದರೆ ಬದಲಾದ ಸಂದರ್ಭದಲ್ಲಿ ಗಣಿತ ಕಬ್ಬಿಣದ ಕಡಲೆ ಎಂದು ವಿದ್ಯಾರ್ಥಿಗಳು ಭಾವಿಸುತ್ತಿದ್ದು, ಆ ಭಯ ತೊಡೆದು ಗಣಿತದಲ್ಲಿ ಆಸಕ್ತಿ ಮೂಡಿಸಲು ಈ ಮೇಳ ಆಯೋಜಿಸಿರುವುದು ಅಭಿನಂದನೀಯ ಕಾರ್ಯ ಎಂದರು.

    ರಾಜಕೀಯ ಎಂದರೆ ತಿರಸ್ಕೃತ ಎನ್ನುವ ಭಾವನೆ ಬಲವಾಗುತ್ತಿರುವ ಸಂದರ್ಭದಲ್ಲಿ, ಆ ವ್ಯವಸ್ಥೆಯಲ್ಲಿ ಪುನರಪಿ ವಿಶ್ವಾಸ ಮೂಡುವಂತೆ ಮಾಡಿದ, ಪ್ರತಿಯೊಂದರಲ್ಲೂ ಭಾರತೀಯ ಭಾವನೆಯನ್ನು ಉದ್ದೀಪಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವನ್ನು ಹಲವು ರೀತಿಯ ಸಾಮಾಜಿಕ ಕಾರ್ಯಗಳ ಮೂಲಕ ದೇಶಾದ್ಯಂತ ಆಚರಿಸಲಾಗುತ್ತಿದೆ. ಆದರೆ ಇಲ್ಲಿ ಗಣಿತವನ್ನು ಮಕ್ಕಳಿಗೆ ಸುಲಭವಾಗಿಸುವ ಮತ್ತು ಅರ್ಥೈಸುವ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಶಾಸಕರಾದ ಅರವಿಂದ ಬೆಲ್ಲದ, ಅಮೃತ ದೇಸಾಯಿ, ಮೇಯರ್ ಈರೇಶ ಅಂಚಟಗೇರಿ, ಪಾಲಿಕೆ ಸದಸ್ಯ ಸುರೇಶ ಬೇದರೆ, ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ ಕಪಟಕರ, ವಕೀಲ ಅರುಣ ಜೋಶಿ, ವಿನಾಯಕ ಜೋಶಿ, ಸಂಯೋಜಕಿ ಸುಮಂಗಲಾ ದಾಂಡೇವಾಲೆ, ಮಯೂರ ದಾಂಡೇವಾಲೆ ಸೇರಿದಂತೆ ಧಾರವಾಡ ಶಹರ ಮತ್ತು ಗ್ರಾಮೀಣ ಭಾಗದ ಸಾವಿರಾರು ವಿದ್ಯಾರ್ಥಿಗಳು, ಶಿಕ್ಷಕರು, ಸಾರ್ವಜನಿಕರು ಭಾಗವಹಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • ವಿಶಾಲ ಗಾಣಿಗ ಮರ್ಡರ್ ಪ್ರಕರಣ ಭೇದಿಸಿದ ಪೊಲೀಸರಿಗೆ 50 ಸಾವಿರ ಬಹುಮಾನ

    ವಿಶಾಲ ಗಾಣಿಗ ಮರ್ಡರ್ ಪ್ರಕರಣ ಭೇದಿಸಿದ ಪೊಲೀಸರಿಗೆ 50 ಸಾವಿರ ಬಹುಮಾನ

    ಉಡುಪಿ: ಜಿಲ್ಲೆಯ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ವರದಿಯಾದ ವಿಶಾಲ ಗಾಣಿಗ ಕೊಲೆ ಪ್ರಕರಣದ ತನಿಖೆಯಲ್ಲಿ ಭಾಗವಹಿಸಿದ ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿಗೆ ನಗದು ಪುರಸ್ಕಾರವನ್ನು ನೀಡಿ ಅಭಿನಂದಿಸಲಾಯಿತು.

    ಪ್ರಕರಣವನ್ನು ಭೇದಿಸಿದ ಅಧಿಕಾರಿ, ಸಿಬ್ಬಂದಿ ತಂಡಕ್ಕೆ ರಾಜ್ಯದ ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್ ಅವರು 50 ಸಾವಿರ ನಗದು ಪುರಸ್ಕಾರ ಘೋಷಿಸಿದ್ದರು. ಅದರಂತೆ ಇಂದು ಪಶ್ಚಿಮ ವಲಯದ ಐಜಿಪಿ ದೇವಜ್ಯೋತಿ ರೇ ತಂಡದ ಸದಸ್ಯರಿಗೆ ನಗದು ಪುರಸ್ಕಾರ ನೀಡಲಾಯಿತು.

    ಎಸ್‍ಪಿ ವಿಷ್ಣುವರ್ಧನ್, ಎಎಸ್‍ಪಿ ಕುಮಾರ ಚಂದ್ರ, ಡಿವೈಎಸ್‍ಪಿ ಸುಧಾಕರ ನಾಯಕ್, ಬ್ರಹ್ಮಾವರ ಸಿಪಿಐ ಅನಂತ ಪದ್ಮನಾಭ, ಮಣಿಪಾಲ ಪಿಐ ಮಂಜುನಾಥ ಗೌಡ, ಮಲ್ಪೆ ಸಿಪಿಐ ಶರಣ್ ಗೌಡ, ಕಾರ್ಕಳ ಸಿಪಿಐ ಸಂಪತ್ ಕುಮಾರ್, ಪಿಎಸ್‍ಐ ಗಳಾದ ರಾಜಶೇಖರ ವಂದಲಿ, ಗುರುನಾಥ ಹಾದಿಮನಿ, ಮಧು, ಶ್ರೀಧರ ನಾಯಕ್, ರಾಘವೇಂದ್ರ, ಸಿ.ಡಿ.ಅರ್ ವಿಭಾಗದ ಸಿಬ್ಬಂದಿ ಶಿವಾನಂದ, ದಿನೇಶ್, ನಿತಿನ್ ಅವರನ್ನು ಅಭಿನಂದಿಸಲಾಯಿತು. ಇದನ್ನೂ ಓದಿ: ಯತ್ನಾಳ್, ಬೆಲ್ಲದ್‍ಗೆ ಅಭಿನಂದನೆ ಸಲ್ಲಿಸಿದ ಜಯಮೃತ್ಯುಂಜಯ ಸ್ವಾಮೀಜಿ

    ಏನಿದು ಪ್ರಕರಣ?
    ಜುಲೈ 12ರಂದು ವಿಶಾಲ ಗಾಣಿಗ ಅವರನ್ನು ಉಪ್ಪಿನಕೋಟೆಯ ಮಿಲನ್ ರೆಸಿಡೆನ್ಸಿ ಅಪಾರ್ಟ್‍ಮೆಂಟ್‍ನಲ್ಲಿ ವಾಸವಿದ್ದ ಫ್ಲ್ಯಾಟ್‍ನಲ್ಲಿಯೇ ಸುಪಾರಿ ಕಿಲ್ಲರ್ ಗಳು ಹತ್ಯೆ ಮಾಡಿದ್ದರು. ಪ್ರಕರಣದ ಆರೋಪಿಗಳು ತುಂಬಾ ಚಾಕಚತ್ಯೆಯನ್ನು ಉಪಯೋಗಿಸಿ ಕೊಲೆ ಮಾಡಿದ್ದರಿಂದ ಪ್ರಕರಣವನ್ನು ಭೇದಿಸುವುದು ಕ್ಲಿಷ್ಟಕರವಾಗಿತ್ತು. ಘಟನೆ ಸಾರ್ವಜನಿಕರ ವಲಯದಲ್ಲಿ ಭಾರೀ ಚರ್ಚೆ ಹುಟ್ಟು ಹಾಕಿತ್ತು. ಇದನ್ನೂ ಓದಿ: ಕೊರೊನಾಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ಕುಟುಂಬಕ್ಕೂ ಪರಿಹಾರ -ಕೇಂದ್ರ ಸರ್ಕಾರ

    ಉಡುಪಿ ಜಿಲ್ಲಾ ಎಸ್.ಪಿ ವಿಷ್ಣುವರ್ಧನ್ ಪ್ರಕರಣದ ತನಿಖೆಗೆ ನಾಲ್ಕು ತಂಡ ರಚಿಸಿದ್ದರು. ತನಿಖಾ ತಂಡದ ಸದಸ್ಯರು ಉತ್ತರ ಪ್ರದೇಶದ ಗೋರಖ್‍ಪುರದಲ್ಲಿ ಸ್ವಾಮಿನಾಥನ್ ನಿಶಾದ್ ನನ್ನು ಬಂಧಿಸಿದ ನಂತರ ವಿಶಾಲ ಗಾಣಿಗ ಅವರ ಪತಿ ರಾಮಕೃಷ್ಣ ಗಾಣಿಗ ಅವರೇ ಈ ಕೊಲೆ ಮಾಡಲು ಸುಪಾರಿ ನೀಡಿದ್ದರೆಂದು ತಿಳಿದು ಬಂತು.

  • ನಗದು ಬಹುಮಾನ ನೀಡದ್ದಕ್ಕೆ ವಿಂಬಲ್ಡನ್ ಉದಾಹರಣೆ ಕೊಟ್ಟು ಕಿಡಿಕಾರಿದ ಗವಾಸ್ಕರ್

    ನಗದು ಬಹುಮಾನ ನೀಡದ್ದಕ್ಕೆ ವಿಂಬಲ್ಡನ್ ಉದಾಹರಣೆ ಕೊಟ್ಟು ಕಿಡಿಕಾರಿದ ಗವಾಸ್ಕರ್

    ಮೆಲ್ಬರ್ನ್: ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ ಗೆದ್ದ ಭಾರತ ತಂಡಕ್ಕೆ ನಗದು ಬಹುಮಾನ ನೀಡದ್ದಕ್ಕೆ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಕ್ರಿಕೆಟ್ ಆಸ್ಟ್ರೇಲಿಯಾ ವಿರುದ್ಧ ಕಿಡಿಕಾರಿದ್ದಾರೆ.

    ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಯಜುವೇಂದ್ರ ಚಹಲ್ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಧೋನಿಗೆ 500 ಡಾಲರ್(35,600 ರೂ.) ನಗದು ಬಹುಮಾನವಾಗಿ ನೀಡಿದ್ದಾರೆ. ತಂಡದ ಆಟಗಾರರಿಗೆ ಒಂದು ಟ್ರೋಫಿ ಬಿಟ್ಟರೆ ಬೇರೆ ಏನೂ ಸಿಕ್ಕಿಲ್ಲ. ಸಂಘಟಕರು ಪ್ರಸಾರದ ಹಕ್ಕಿನಿಂದ ಸಾಕಷ್ಟು ಹಣವನ್ನು ಸಂಪಾದಿಸಿದ್ದರೂ ಆಟಗಾರರಿಗೆ ನಗದು ಬಹುಮಾನ ನೀಡಿಲ್ಲ ಯಾಕೆ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

    ವಿಂಬಲ್ಡನ್ ಟೆನ್ನಿಸ್ ಟೂರ್ನಿ ನೋಡಿ ಕಲಿತುಕೊಳ್ಳಲಿ. ಹಣ ಉತ್ಪಾದನೆಯಾಗುವುದೇ ಆಟಗಾರರಿಂದ. ಹೀಗಿರುವಾಗ ಆಟಗಾರರಿಗೆ ಗೌರವ ನೀಡುವುದನ್ನು ಕಲಿಯಬೇಕು ಎಂದು ತಮ್ಮ ವಾದವನ್ನು ಸಮರ್ಥಿಸಿಕೊಂಡಿದ್ದಾರೆ.

    500 ಡಾಲರ್ ನಗದು ಬಹುಮಾನ ಸಿಕ್ಕಿದರೂ ಚಹಲ್ ಮತ್ತು ಧೋನಿ ಆ ಹಣವನ್ನು ದಾನ ನೀಡಿದ್ದಾರೆ. ವಿಂಬಲ್ಡನ್ ಟೆನ್ನಿಸ್ ನಲ್ಲಿ ಮೊದಲ ಹಂತದಲ್ಲಿ ಸೋತ ಸ್ಪರ್ಧಿಗೆ 36 ಲಕ್ಷ ರೂ. ಹಣ ಸಿಕ್ಕಿದರೆ, ಸಿಂಗಲ್ಸ್ ವಿಜೇತರು ಅಂದಾಜು 21 ಕೋಟಿ ರೂ. ನಗದು ಬಹುಮಾನವನ್ನು ಪಡೆಯುತ್ತಾರೆ.

    ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಟಿ 20 ಪಂದ್ಯ 1-1 ರಲ್ಲಿ ಸಮಬಲಗೊಂಡಿತ್ತು. ಎರಡನೇ ಪಂದ್ಯ ಮಳೆಯಿಂದಾಗಿ ರದ್ದುಗೊಂಡಿತ್ತು. ಟೆಸ್ಟ್ ಸರಣಿ 2-1 ರಿಂದ ಗೆದ್ದಿದ್ದ ಭಾರತ ಈಗ ಏಕದಿನ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿದೆ. ಮೊದಲ ಟಿ-20 ಪಂದ್ಯದಲ್ಲಿ ಮಳೆಯಿಂದಾಗಿ ಡಕ್‍ವರ್ಥ್ ಲೂಯಿಸ್ ನಿಯಮದಿಂದ ಪರಿಷ್ಕೃತ ರನ್ ನೀಡಿದ ಪರಿಣಾಮ ಭಾರತ ಗೆಲುವಿನ ಸಮೀಪ ಬಂದು ಸೋತಿತ್ತು. ಆಸ್ಟ್ರೇಲಿಯಾ 4 ರನ್ ಗಳಿಂದ ಈ ಪಂದ್ಯವನ್ನು ಗೆದ್ದುಕೊಂಡಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬೇನಾಮಿದಾರರ ಮಾಹಿತಿ ಕೊಟ್ರೆ 1 ಕೋಟಿ ರೂ. ಬಹುಮಾನ!

    ಬೇನಾಮಿದಾರರ ಮಾಹಿತಿ ಕೊಟ್ರೆ 1 ಕೋಟಿ ರೂ. ಬಹುಮಾನ!

    ನವದೆಹಲಿ: ಕೇಂದ್ರ ಸರ್ಕಾರ ಕಾಳಧನಿಕರ ವಿರುದ್ಧ ತನ್ನ ಹೋರಾಟವನ್ನು ಮುಂದುವರೆಸುವ ಸೂಚನೆಯನ್ನು ನೀಡಿದೆ. ಸರ್ಕಾರವು ಈಗಾಗಲೇ ಕಾಳಧನಿಕರ ವಿರುದ್ಧ ಹಲವು ಕಠಿಣ ಕ್ರಮಗಳನ್ನು ಕೈಗೊಂಡಿದ್ದರು ಪೂರ್ಣ ಪ್ರಮಾಣದಲ್ಲಿ ಬೇನಾಮಿ ಅಸ್ತಿಯ ಮಾಹಿತಿಯನ್ನು ಪಡೆಯಲು ಸಾಧ್ಯವಾಗಿಲ್ಲ. ಸರ್ಕಾರ ಹೊಸ ಹೊಸ ಮಾರ್ಗಗಳ ಮೂಲಕ ಬೇನಾಮಿ ಅಸ್ತಿಯ ಮಾಹಿತಿಯನ್ನು ಸಂಗ್ರಹಿಸುವ ಯೋಜನೆಗಳನ್ನು ಸಿದ್ಧಪಡುಸುತ್ತಿದೆ. ಅದರಂತೆ ಬೇನಾಮಿ ಅಸ್ತಿ ಕುರಿತು ಮಾಹಿತಿ ನೀಡಿದವರಿಗೆ ನಗದು ರೂಪದ ಬಹುಮಾನವನ್ನು ನೀಡಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂಬ ಮಾಹಿತಿ ಬಲ್ಲ ಮೂಲಗಳಿಂದ ಲಭಿಸಿದೆ.

    ಈ ನಗದು ಬಹುಮಾನ ಯೋಜನೆಯನ್ನು ಮುಂದಿನ ತಿಂಗಳು ಜಾರಿಗೆ ತರುವ ಸಾಧ್ಯತೆಗಳಿವೆ. ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್(ಸಿಬಿಡಿಟಿ)ನ ಹಿರಿಯ ಅಧಿಕಾರಿಯೊಬ್ಬರು ನೀಡಿರುವ ಮಾಹಿತಿ ಪ್ರಕಾರ, ಬೇನಾಮಿ ಅಸ್ತಿ ಕುರಿತ ಮಾಹಿತಿಯನ್ನು ನೀಡಿದ ವ್ಯಕ್ತಿಗೆ ಕನಿಷ್ಟ 15 ಲಕ್ಷ ರೂ. ನಿಂದ 1 ಕೋಟಿ ರೂ. ಗಳವರೆಗೆ ಬಹುಮಾನ ಸಿಗುತ್ತದೆ. ಅಲ್ಲದೇ ಬೇನಾಮಿ ಅಸ್ತಿಯ ಕುರಿತು ಮಾಹಿತಿ ನೀಡಿದ ವ್ಯಕ್ತಿಯ ಗುರುತನ್ನು ಇಲಾಖೆಯು ಗೌಪ್ಯವಾಗಿಡುತ್ತದೆ. ಆ ವ್ಯಕ್ತಿಗೆ ತೊಂದರೆಯಾಗುತ್ತದೆ ಎಂಬ ಕಾರಣದಿಂದ ಮಾಹಿತಿ ನೀಡಿದ ವ್ಯಕ್ತಿಯ ಗುರುತು ಹೊರಬರುವುದಿಲ್ಲ ಎಂಬ ಆಶ್ವಾಸನೆಯನ್ನು ನೀಡಿದೆ.

    2016ರಲ್ಲಿ ಪರಿಚಯಿಸಲಾದ ಬೇನಾಮಿ ಅಸ್ತಿ ಕಾಯ್ದೆ ಅಡಿಯಲ್ಲಿ ಈ ಅವಕಾಶ ಇರಲಿಲ್ಲ. ಆದರೂ ಬೇನಾಮಿ ಅಸ್ತಿ ಕುರಿತು ಮಾಹಿತಿ ನೀಡಿದವರಿಗೆ ಬಹುಮಾನ ನೀಡುವ ರೂಢಿಯನ್ನು ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆ ಮತ್ತು ಕಂದಾಯ ಗುಪ್ತಚರ ನಿರ್ದೇಶನಾಲಯ ಪಾಲಿಸಿಕೊಂಡು ಬಂದಿದೆ. ಆದರೂ ಇದರಿಂದ ಅಷ್ಟೇನೂ ಲಾಭವಾಗಿಲ್ಲ.

    ಆದಾಯ ತೆರಿಕೆ ಇಲಾಖೆಗೆ ಬೇನಾಮಿ ಆಸ್ತಿಯನ್ನು ಹೊಂದಿರುವವರ ಮಾಹಿತಿ ಸಂಗ್ರಹಿಸುವುದೇ ಬಹುದೊಡ್ಡ ಕಷ್ಟದ ಕೆಲಸವಾಗಿದೆ. ಹೀಗಾಗಿ ಮಾಹಿತಿದಾರರ ಸಹಾಯ ಪಡೆದರೆ ಮತ್ತಷ್ಟು ವೇಗವಾಗಿ, ಸುಲಭವಾಗಿ ಹಾಗೂ ಪರಿಣಾಮಕಾರಿಯಾಗಿ ಬೇನಾಮಿದಾರರನ್ನು ಪತ್ತೆ ಮಾಡಬಹುದು ಎಂದು ಸಿಬಿಡಿಟಿ ಅಧಿಕಾರಿ ಹೇಳಿದ್ದಾರೆ.

    ಈ ಯೋಜನೆಗೆ ಹಣಕಾಸು ಸಚಿವಾಲಯದದಿಂದ ಅನುಮತಿ ಸಿಗಬೇಕಿದೆ. ಹಣಕಾಸು ಸಚಿವರು ಒಪ್ಪಿಗೆ ಸೂಚಿಸಿದ ಕೂಡಲೇ ಸಿಬಿಡಿಟಿ ಇದನ್ನು ಘೋಷಸಿದಲಿದೆ. ಅಕ್ಟೋಬರ್ ಕೊನೆಗೆ ಅಥವಾ ನವೆಂಬರ್ ಮೊದಲ ವಾರದಲ್ಲಿ ಘೋಷಣೆ ಮಾಡುವ ನಿರೀಕ್ಷೆಯಿದೆ.

  • ಐಪಿಎಲ್‍ನ ಜಸ್ಟ್ 10 ಸೆಕೆಂಡ್ ಜಾಹಿರಾತಿಗೆ ಎಷ್ಟು ಹಣ? ನಗದು ಬಹುಮಾನ ಎಷ್ಟು?

    ಐಪಿಎಲ್‍ನ ಜಸ್ಟ್ 10 ಸೆಕೆಂಡ್ ಜಾಹಿರಾತಿಗೆ ಎಷ್ಟು ಹಣ? ನಗದು ಬಹುಮಾನ ಎಷ್ಟು?

    ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್‍ನ 10ನೇ ಆವೃತ್ತಿಯ ಪಂದ್ಯಾಟಗಳು ಏಪ್ರಿಲ್ 5ರಿಂದ ಆರಂಭವಾಗಲಿದೆ. ಸನ್‍ರೈಸರ್ಸ್ ಹೈದರಾಬಾದ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಮೊದಲ ಪಂದ್ಯ ಬುಧವಾರ ಹೈದರಾಬಾದ್‍ನಲ್ಲಿ ನಡೆಯಲಿದೆ. ಹೀಗಾಗಿ ಈ ಬಾರಿಯ ಐಪಿಎಲ್‍ನಲ್ಲಿ ಜಯಗಳಿಸುವ ತಂಡಕ್ಕೆ ಎಷ್ಟು ಹಣ ಸಿಗುತ್ತದೆ? ಫ್ರಾಂಚೈಸಿಗಳಿಗೆ ಏನು ಲಾಭ? 10 ಸೆಕೆಂಡ್ ಜಾಹಿರಾತಿಗೆ ಎಷ್ಟು ರೂ.? ಇತ್ಯಾದಿ ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ.

    ನಗದು ಬಹುಮಾನ ಎಷ್ಟು?
    ಪ್ರತಿಬಾರಿಯೂ ಐಪಿಎಲ್‍ನಲ್ಲಿ ನಗದು ಬಹುಮಾನದ ಮೊತ್ತವನ್ನು ಹೆಚ್ಚಿಸಲಾಗುತ್ತಿದೆ. ಈ ಬಾರಿ ಚಾಂಪಿಯನ್ ತಂಡಕ್ಕೆ 21 ಕೋಟಿ ರೂ. ನಿಗದಿ ಪಡಿಸಿದರೆ, ರನ್ನರ್ ಅಪ್ ತಂಡಕ್ಕೆ 12 ಕೋಟಿ ಸಿಗಲಿದೆ. ಮೂರನೇ ಮತ್ತು ನಾಲ್ಕನೇಯ ಸ್ಥಾನವನ್ನು ಪಡೆದ ತಂಡಗಳಿಗೆ 8 ಕೋಟಿ ರೂ. ಸಿಗಲಿದೆ.

    2016ರಲ್ಲಿ ಬಹುಮಾನ ಎಷ್ಟಿತ್ತು?
    ಚಾಂಪಿಯನ್ ಆಗಿದ್ದ ಹೈದರಾಬಾದ್ ತಂಡಕ್ಕೆ 20 ಕೋಟಿ ಸಿಕ್ಕಿದ್ದರೆ, ಆರ್‍ಸಿಬಿಗೆ 11 ಕೋಟಿ ಸಿಕ್ಕಿತ್ತು. ಗುಜರಾತ್ ಲಯನ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳಿಗೆ ತಲಾ 7.5 ಕೋಟಿ ರೂ. ಹಣ ಸಿಕ್ಕಿತ್ತು.

    ಬಿಸಿಸಿಐಗೆ ಎಷ್ಟು ಹಣ ಸಿಗುತ್ತೆ?
    ಪ್ರತಿವರ್ಷ 1200 ಕೋಟಿ ರೂ ಆದಾಯ ಐಪಿಎಲ್‍ನಿಂದ ಬರುತ್ತದೆ. ಈ ಆದಾಯದಲ್ಲಿ ಬಿಸಿಸಿಐಗೆ ಶೇ. 40 ರಷ್ಟು ಲಾಭ ಸಿಗಲಿದೆ. 2007ರಲ್ಲಿ ಬಿಸಿಸಿಐಗೆ 235 ಕೋಟಿ ರೂ. ಲಾಭ ಸಿಕ್ಕಿತ್ತು. 2016 ರಲ್ಲಿ ಬಿಸಿಸಿಐ ಬೌಂಡರಿ ಲೈನಿನಲ್ಲಿನ ಜಾಹಿರಾತಿನಿಂದ ಒಟ್ಟು 250 ಕೋಟಿ ರೂ. ಹಣವನ್ನು ಗಳಿಸಿತ್ತು.

    ಚಾನೆಲ್‍ಗೆ ಎಷ್ಟು ಹಣ ಸಿಗುತ್ತೆ?
    ಐಪಿಎಲ್ ಪಂದ್ಯಾಟಗಳು ಪ್ರೈಮ್ ಟೈಂನಲ್ಲಿ ನಡೆಯಲಿರುವುದರಿಂದ ಹೆಚ್ಚಿನ ಪ್ರಮಾಣದ ವೀಕ್ಷಕರು ಕ್ರಿಕೆಟ್ ವೀಕ್ಷಿಸುತ್ತಾರೆ. 2008 ರಿಂದ 2017ರವರೆಗಿನ ಅವಧಿ ವರೆಗಿನ ನೇರ ಸಾರದ ಹಕ್ಕನ್ನು ಸೋನಿ, ಇಎಸ್‍ಪಿಎನ್ ಚಾನೆಲ್ ಖರೀದಿಸಿದೆ. ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳ ಪ್ರಕಾರ ಐಪಿಎಲ್ ಅವಧಿಯಲ್ಲಿ ಮಾರುಕಟ್ಟೆಯಲ್ಲಿ ಆದಾಯಗಳಿಸುವ ಪ್ರಮಾಣ ಶೇ.5.7 ರಿಂದ ಶೇ.28.8ಕ್ಕೆ ಏರಿಕೆ ಆಗುತ್ತದೆ. ಸೋನಿಯ ವಾರ್ಷಿಕ ಆದಾಯ 9 ಸಾವಿರ ಕೋಟಿ ರೂ. ಇದ್ದರೆ, ಈ ಆದಾಯದ ಶೇ.7ರಷ್ಟನ್ನು ಐಪಿಎಲ್‍ನ 45 ದಿನಗಳಲ್ಲಿ ಗಳಿಸುತ್ತದೆ.

    ಇದನ್ನೂ ಓದಿ: ಟೀಂ ಇಂಡಿಯಾದ ಆಟಗಾರರಿಗೆ ಮತ್ತು ಕೋಚ್‍ ಗಳಿಗೆ ಎಷ್ಟು ಹಣ ಸಿಗುತ್ತೆ?

    10 ಸೆಕೆಂಡ್ ಜಾಹಿರಾತಿಗೆ ಎಷ್ಟು ರೂ.?
    ಟೂರ್ನಿಯ ಆರಂಭಿಕ ದಿನಗಳಲ್ಲಿ 10 ಸೆಕೆಂಡ್‍ನ ಜಾಹಿರಾತಿಗೆ ಅಂದಾಜು 5 ಲಕ್ಷ ರೂ. ಇದ್ದರೆ, ಫೈನಲ್ ವೇಳೆಗೆ ಈ ಮೊತ್ತ 10 ಲಕ್ಷ ರೂ. ಏರಿಕೆಯಾಗುತ್ತದೆ. ಟಿ20 ವಿಶ್ವಕಪ್‍ನ ಫೈನಲ್ ಪಂದ್ಯದ ವೇಳೆ 10 ಸೆಕೆಂಡ್ ಜಾಹಿರಾತಿಗೆ 8 ಲಕ್ಷ ರೂ. ಇತ್ತು.

    10 ಸೆಕೆಂಡಿನ ಜಾಹೀರಾತಿನಲ್ಲೂ ವಿಭಾಗಗಳಿವೆ. ಒಂದು ಕಂಪೆನಿ ಒಂದು ಪಂದ್ಯದ 300 ಸೆಕಂಡ್‍ಗಳನ್ನು ಖರೀದಿ ಮಾಡಿದರೆ ಪ್ರತಿ 10 ಸೆಕೆಂಡಿಗೆ 5.2 ಲಕ್ಷ ರೂ. ನೀಡಬೇಕಾಗುತ್ತದೆ. ಇದಕ್ಕಿಂತಲೂ ಕಡಿಮೆ ಅವಧಿಯನ್ನು ಖರೀದಿಸಿದರೆ ಅವರಿಗೆ 10 ಸೆಕೆಂಡ್‍ಗೆ 5.75 ಲಕ್ಷ ರೂ. ಇದರುತ್ತದೆ. ಇನ್ನು ಸ್ಪಾಟ್ ಜಾಹಿರಾತು ಖರೀದಿ ಮಾಡಿದರೆ ಅವರು 6 ಲಕ್ಷ ರೂ. ನೀಡಬೇಕಾಗುತ್ತದೆ.

    ಒಟ್ಟಿನಲ್ಲಿ 30 ಸೆಕಂಡ್ ಜಾಹಿರಾತಿನಲ್ಲಿ ವಾಹಿನಿ ಅಂದಾಜು 18 ಲಕ್ಷ ರೂ. ಹಣವನ್ನು ಒಂದು ಪಂದ್ಯದಿಂದ ಗಳಿಸುತ್ತದೆ. ಒಂದು ಪಂದ್ಯದಿಂದ ಅಂದಾಜು 12 ಕೋಟಿ ಹಣ ಬಂದರೆ ಎಲ್ಲ ಐಪಿಎಲ್ ಪಂದ್ಯಗಳಿಂದ ಒಟ್ಟು 720 ಕೋಟಿ ರೂ. ಹಣ ಜಾಹಿರಾತಿನಿಂದಲೇ ಬರುತ್ತದೆ.

    ಇದನ್ನೂ ಓದಿ: ಐಪಿಎಲ್ ಮ್ಯಾಚ್‍ಗಳಲ್ಲಿ ಅಂಪೈರ್‍ಗಳಿಗೆ ಎಷ್ಟು ಸಂಬಳ ಸಿಗುತ್ತೆ? ಇಲ್ಲಿದೆ ಮಾಹಿತಿ

    ಫ್ರಾಂಚೈಸಿಗಳಿಗೆ ಎಷ್ಟು ಲಾಭ ಸಿಗುತ್ತೆ?
    ಬಿಸಿಸಿಐ ನೇರಪ್ರಸಾರದಿಂದ ಸಿಗುವ ಲಾಭವನ್ನು ಫ್ರಾಂಚೈಸಿಗಳಿಗೆ ಹಂಚುತ್ತದೆ. ಇದರ ಜೊತೆಗೆ ಟಿಕೆಟ್ ಮಾರಾಟದಲ್ಲೂ ಫ್ರಾಂಚೈಸಿಗಳಿಗೆ ಹೆಚ್ಚಿನ ಪಾಲು ಸಿಗುತ್ತದೆ. ಅತಿಥೇಯ ಮೈದಾನದಲ್ಲಿ ಪಂದ್ಯ ನಡೆದರೆ ಶೇ.80 ಎಷ್ಟು ಹಣ ಫ್ರಾಂಚೈಸಿಗೆ ಸಿಗಲಿದೆ.

    ಪ್ರಾಯೋಜಕರಿಗೂ ಏನು ಲಾಭ?
    ಬೌಂಡರಿ, ಸಿಕ್ಸರ್, ಗರಿಷ್ಠ ಸಿಕ್ಸರ್ ಹೊಡೆದವರಿಗೆ ಪ್ರಶಸ್ತಿಯನ್ನು ಪ್ರಯೋಜಕರು ನೀಡುತ್ತಾರೆ. ಮೂರನೇ ಅಂಪೈರ್ ತೀರ್ಪಿನಲ್ಲೂ ಪ್ರಾಯೋಜಕರ ಲೋಗೋ ಇರುತ್ತದೆ. ಐಪಿಎಲ್ ಅನ್ನು ಹೆಚ್ಚು ಜನ ವೀಕ್ಷಿಸುವ ಕಾರಣ ಕಂಪೆನಿಗಳಿಗೂ ಚೆನ್ನಾಗಿ ಪ್ರಚಾರ ಸಿಗುತ್ತದೆ.

    ಇದನ್ನೂ ಓದಿ: ಆರ್‍ಸಿಬಿ 12 ಕೋಟಿ ನೀಡಿ ಟೈಮಲ್ ಮಿಲ್ಸ್ ಅವರನ್ನೇ ಖರೀದಿಸಿದ್ದು ಯಾಕೆ?